Tag: belagavi

  • ಬೆಳಗಾವಿಯಲ್ಲಿ ರಾಜಕಾರಣವೇ ಇಲ್ಲ: ಜಾರ್ಜ್

    ಬೆಳಗಾವಿಯಲ್ಲಿ ರಾಜಕಾರಣವೇ ಇಲ್ಲ: ಜಾರ್ಜ್

    ಚಿಕ್ಕಮಗಳೂರು: ಬೆಳಗಾವಿಯಲ್ಲಿ (Belagavi) ರಾಜಕಾರಣವೇ ಇಲ್ಲ. ಎಲ್ಲಿದೆ? ಅಲ್ಲಿ ರಾಜಕಾರಣವೇ ಇಲ್ಲ. ಯಾರೋ ಏನೋ ಹೇಳಿದರೆ ಅದಲ್ಲ ರಾಜಕಾರಣ. ಚುನಾವಣೆ ಫಲಿತಾಂಶ ಏನಿದೆ, ಅದು ರಾಜಕಾರಣ (Politics) ಎಂದು ಚಿಕ್ಕಮಗಳೂರು (Chikkamagaluru) ಜಿಲ್ಲಾ ಉಸ್ತುವಾರಿ ಸಚಿವ ಕೆಜೆ ಜಾರ್ಜ್ (KJ George) ಹೇಳಿದ್ದಾರೆ.

    ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಸುರ್ಜೇವಾಲ ಹಾಗೂ ವೇಣುಗೋಪಾಲ್ ಸಭೆ ನಡೆಸುತ್ತಿದ್ದು, ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸಭೆ ಮಾಡುವುದು ಸರ್ವೇ ಸಾಮಾನ್ಯ. ಅದು ನಿರಂತರ ಪ್ರಕ್ರಿಯೆ. ಕಾಂಗ್ರೆಸ್ (Congress) ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಇದನ್ನೂ ಓದಿ: ನಮ್ಮ ಬಸ್‌ಗೆ ಹಾನಿ ಮಾಡಿದವರ ಮೇಲೆ ಕ್ರಮ, ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇವೆ: ರಾಮಲಿಂಗಾರೆಡ್ಡಿ

    ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ಹೇಳಲು ಅವಕಾಶವಿದೆ. ಮುಕ್ತವಾಗಿ ಹೇಳಬಹುದು. ತೀರ್ಮಾನವನ್ನು ಸಿಎಂ, ಡಿಸಿಎಂ, ಹೈಕಮಾಂಡ್ ನೋಡಿಕೊಳ್ಳುತ್ತದೆ. ಬೆಳಗಾವಿಯಲ್ಲಿ ರಾಜಕಾರಣವೇ ಇಲ್ಲ. ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಏನಾಯಿತೋ ಅದೇ ರಾಜಕಾರಣ ಎಂದು ಬೆಳಗಾವಿ ರಾಜಕೀಯಕ್ಕೆ ಟಾಂಗ್ ಕೊಟ್ಟರು. ಇದನ್ನೂ ಓದಿ: Operation Leopard: ಬೆಂಗಳೂರಿನಲ್ಲಿ ಚಿರತೆ ಕಾರ್ಯಾಚರಣೆ ಯಶಸ್ವಿ – ಕೊನೆಗೂ ಸೆರೆಹಿಡಿದ ಸಿಬ್ಬಂದಿ

    ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ. ಕಾಂಗ್ರೆಸ್ಸಿನ ನಾವೆಲ್ಲಾ ಒಗ್ಗಟ್ಟಿನಿಂದ ಇದ್ದೇವೆ. ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಇಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳಲು ಅವಕಾಶವಿದೆ. ತೀರ್ಮಾನ ದೊಡ್ಡವರಿಗೆ ಬಿಟ್ಟದ್ದು. ಇನ್ನು ರಾಜ್ಯದಲ್ಲಿ ಎಂ.ಇ.ಎಸ್. ಪುಂಡಾಟಿಕೆ ಏನೂ ನಡೆಯಲ್ಲ. ಕಾನೂನಿಗೆ ಎಲ್ಲರೂ ಒಂದೇ. ಯಾರೇ ಯಾವುದೇ ರೀತಿಯ ತೊಂದರೆ ಮಾಡಿದರೂ ಕಾನೂನಾತ್ಮಕವಾಗಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ವನ್ಯಜೀವಿಗಳ ವಸ್ತುಗಳನ್ನಿಟ್ಟುಕೊಂಡವರು 2-3 ತಿಂಗಳಲ್ಲಿ ವಾಪಸ್ ಮಾಡಬೇಕು: ಡೆಡ್‌ಲೈನ್ ನೀಡಿದ ಖಂಡ್ರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ MESನಿಂದ ಕರಾಳ ದಿನ ಆಚರಣೆ

    ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ MESನಿಂದ ಕರಾಳ ದಿನ ಆಚರಣೆ

    ಚಿಕ್ಕೋಡಿ: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ (Kannada Rajyotsava) ವಿರುದ್ಧವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ (MES) ಕರಾಳ ದಿನ ಆಚರಿಸಲಾಗುತ್ತಿದೆ.

    ಬೆಳಗಾವಿ (Belagavi) ಜಿಲ್ಲಾಡಳಿತ ನಿಷೇಧದ ಮಧ್ಯೆಯೂ ಕರಾಳ ದಿನಾಚರಣೆಗೆ ಎಂಇಎಸ್ ತಯಾರಿ ನಡೆಸಿದ್ದು, ಶಿವಸೇನೆ ಉದ್ಧವ್ ಠಾಕ್ರೆ ಬಣದಿಂದ ಬೆಳಗಾವಿ ಚಲೋಗೆ ಕರೆ ನೀಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿಲ್ಲ ಕನ್ನಡ ಶಾಲೆಗಳಿಗೆ ಬೇಡಿಕೆ- ಕಾಫಿನಾಡಲ್ಲಿ ಒಂದೇ ವರ್ಷಕ್ಕೆ 21 ಶಾಲೆಗಳು ಬಂದ್

    ಶಿವಸೇನೆ ಉದ್ಧವ್ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ, ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಳಗಾವಿ ಚಲೋಗೆ ಕರೆ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಕೊಲ್ಹಾಪುರ ಜಿಲ್ಲೆ ಕಾಗಲ್ ಬಳಿ ಜಮಾವಣೆಯಾಗಲು ಕರೆ ನೀಡಿದ್ದು, ಈಗಾಗಲೇ ಚಲೋ ಯಾತ್ರೆ ಆರಂಭಿಸಿದ್ದಾರೆ. ಇದನ್ನೂ ಓದಿ: ನನ್ನ ಸಿ.ಡಿ ಮಾಡಿಸಿದ್ದೇ ಡಿಕೆಶಿ, ಪ್ರಕರಣ ಸಿಬಿಐಗೆ ವಹಿಸಿ: ಜಾರಕಿಹೊಳಿ ಆಗ್ರಹ

    ಭಗವಾ ಧ್ವಜದೊಂದಿಗೆ ಮಹಾರಾಷ್ಟ್ರದ ಕಾಗಲ್ ಲಕ್ಷ್ಮಿಟೇಕ್ ಬಳಿ ಆಗಮಿಸುವಂತೆ ಶಿವಸೇನೆ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ಕಾಗಲ್‌ನಿಂದ ಕೊಗನೊಳ್ಳಿ ಟೋಲ್‌ಗೇಟ್ ಮಾರ್ಗವಾಗಿ ಬೆಳಗಾವಿಗೆ ಆಗಮಿಸಲು ಶಿವಸೇನೆ ನಿರ್ಧರಿಸಿದ್ದು, ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕೊಗನೊಳ್ಳಿ ಟೋಲ್‌ಗೇಟ್ ಬಳಿಯೇ ಅವರನ್ನ ತಡೆಯಲು ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಲ್ಲ ಕನ್ನಡ ಶಾಲೆಗಳಿಗೆ ಬೇಡಿಕೆ- ಕಾಫಿನಾಡಲ್ಲಿ ಒಂದೇ ವರ್ಷಕ್ಕೆ 21 ಶಾಲೆಗಳು ಬಂದ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಸಿ.ಡಿ ಮಾಡಿಸಿದ್ದೇ ಡಿಕೆಶಿ, ಪ್ರಕರಣ ಸಿಬಿಐಗೆ ವಹಿಸಿ: ಜಾರಕಿಹೊಳಿ ಆಗ್ರಹ

    ನನ್ನ ಸಿ.ಡಿ ಮಾಡಿಸಿದ್ದೇ ಡಿಕೆಶಿ, ಪ್ರಕರಣ ಸಿಬಿಐಗೆ ವಹಿಸಿ: ಜಾರಕಿಹೊಳಿ ಆಗ್ರಹ

    ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಮಧ್ಯೆ ಮತ್ತೆ ಸಿಡಿ ಕದನ ಶುರುವಾಗಿದೆ. ಸಿಡಿ ಕೇಸ್ (CD Case) ಮುನ್ನೆಲೆಗೆ ತರುವ ಮೂಲಕ ಡಿಕೆಶಿ ಹಣಿಯಲು ರಮೇಶ್ ಜಾರಕಿಹೊಳಿ ಹೊಸ ಪ್ಲಾನ್ ಮಾಡಿದ್ದಾರೆ.

    ಸಿಡಿ ಕೇಸ್ ಸಿಬಿಐಗೆ ಕೊಡುವಂತೆ ಹಳೆಯ ಆಗ್ರಹಕ್ಕೆ ಮತ್ತೆ ಮರುಜೀವ ಕೊಟ್ಟಿದ್ದಾರೆ. ಈ ಮೂಲಕ ಡಿಕೆಶಿ ವಿರುದ್ಧ ಮತ್ತೊಂದು ಹಂತದ ಹೋರಾಟಕ್ಕೆ ಸಾಹುಕಾರ್ ಧುಮುಕಿದ್ದಾರೆ. ಸಿಡಿ ಕೇಸನ್ನು ಸಿಬಿಐಗೆ (CBI) ಕೊಡಿಸಿ ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಫ್ಯಾಕ್ಸ್ ಮೂಲಕ ಸಿಎಂಗೆ ಪತ್ರ ಕಳಿಸಿ ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದಾರೆ. ಇಲ್ಲದಿದ್ರೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‍ಗೆ ಹೋಗೋದಾಗಿಯೂ ಜಾರಕಿಹೊಳಿ ವಾನಿರ್ಂಗ್ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಹೆಸರು ಕೆಡಿಸಿದ್ದಕ್ಕೆ ಬರಗಾಲ ಬಂದಿದೆ: ರಮೇಶ್ ಜಾರಕಿಹೊಳಿ

    ಬಿಜೆಪಿ ಸರ್ಕಾರ ಇದ್ದಾಗಲೂ ಸಿಡಿ ಕೇಸ್ ಸಿಬಿಐಗೆ ಕೊಡುವಂತೆ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಆದ್ರೆ ಅಂದು ಅದು ಆಗಿಲ್ಲ, ಈಗ ಮತ್ತೆ ಅದೇ ಒತ್ತಾಯ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಕೆಶಿ ಸಿಡಿ ಮಾಸ್ಟರ್ ಮೈಂಡ್ – ಪುಕ್ಕಲ, ಮೋಸಗಾರ: ರಮೇಶ್ ಜಾರಕಿಹೊಳಿ

    ಡಿಕೆಶಿ ಸಿಡಿ ಮಾಸ್ಟರ್ ಮೈಂಡ್ – ಪುಕ್ಕಲ, ಮೋಸಗಾರ: ರಮೇಶ್ ಜಾರಕಿಹೊಳಿ

    – ಬೆಳಗಾವಿ ರಾಜಕಾರಣ, ಡಿಕೆಶಿಯಿಂದ ಸರ್ಕಾರ ಬೀಳಲಿದೆ

    ಬೆಳಗಾವಿ: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಿಡಿ ಮಾಸ್ಟರ್ ಮೈಂಡ್. ಸಿಡಿನೇ ಡಿಕೆಶಿ ಶಕ್ತಿಯಾಗಿದ್ದು ಆತ ಒಬ್ಬ ಪುಕ್ಕಲ, ಮೋಸಗಾರ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಉಪಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲಿ ನಡೆದ ಎಲ್ಲಾ ಚುನಾವಣೆ ಹೊಂದಾಣಿಕೆ ಆಗಿವೆ. ರಾಜ್ಯದಲ್ಲಿ ಆಪರೇಷನ್ ಕಮಲ ಎಲ್ಲವೂ ಸುಳ್ಳು. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿಯ ಯತ್ನ ಮಾಡಲಾಗುತ್ತಿದೆ. ಲಾಟರಿ ಮಂತ್ರಿ, ಶಾಸಕರು ಯಾವಾಗಲೂ ಡೇಂಜರ್ ಎಂದರು.

    ಡಿಸಿಎಂ ಡಿಕೆ ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ನಾಯಕರ ಹೆಸರು ಕೆಡಿಸುತ್ತಿದ್ದಾರೆ. 50, 100 ಕೋಟಿ ಎಂದು ಅಪಪ್ರಚಾರ ಮಾಡಲಾಗಿದೆ. 2019ರಲ್ಲಿ ಡಿಕೆಶಿ ಸೊಕ್ಕು, ದುರಾಡಳಿತದಿಂದ ನಾವೆಲ್ಲ ಪಕ್ಷಾಂತರ ಮಾಡಿದ್ದೇವೆ. ಆಪರೇಷನ್ ಕಮಲ ಎಲ್ಲವೂ ನಡೆಯುತ್ತಿಲ್ಲ ಎಲ್ಲವೂ ಸುಳ್ಳು. ಗ್ಯಾರಂಟಿ ಯೋಜನೆ ಫೇಲ್ ಆಗಿದೆ. ಹೀಗಾಗಿ ಜನರ ದಿಕ್ಕು ಬದಲು ಮಾಡಲು ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಹೇಳಿದರು.

    ಶಿವಕುಮಾರ್ ಅಷ್ಟೇ ಯಾಕೆ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಅನಿವಾರ್ಯವಾಗಿ ನಿನ್ನೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಅತಿ ಶೀಘ್ರದಲ್ಲೇ ಡಿಕೆಶಿ ಮಾಜಿ ಮಂತ್ರಿ ಆಗಲಿದ್ದಾರೆ. ನನಗೆ ಆಗಿರೋ ಕಷ್ಟ ಸತೀಶ್ ಜಾರಕಿಹೊಳಿಗೆ ಆಗಲ್ಲ ಎಂದರು. ಇದನ್ನೂ ಓದಿ: ಬಿಜೆಪಿಯವರು ರಾಜಕೀಯ ವ್ಯವಸ್ಥೆಯನ್ನೇ ಹಾಳು ಮಾಡ್ತಿದ್ದಾರೆ: ದಿನೇಶ್ ಗುಂಡೂರಾವ್

    ಜೆಡಿಎಸ್, ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬೀಳಬಾರದು, ಮುಂದುವರಿಯಬೇಕು. ಈ ಹಿಂದಿನ ಸಿದ್ದರಾಮಯ್ಯ ಈಗ ಇಲ್ಲ. 6 ತಿಂಗಳು ಏನು ಮಾತಾಡಲ್ಲ ಎಂದು ಸಂಕಲ್ಪ ಮಾಡಿದೆ. ನಮ್ಮ ಪಕ್ಷದ ಹೆಸರು ಕೆಡಿಸಿದ್ದರಿಂದ ನಾನು ಅನಿವಾರ್ಯವಾಗಿ ಮಾತನಾಡುತ್ತಿದ್ದೇನೆ. ಹಿರಿಯ ಶಾಸಕನಾಗಿ ಸರ್ಕಾರದ ವಿರುದ್ಧ ಮಾತನಾಡಲ್ಲ ಎಂದರು.

    ಇದೇ ವೇಳೆ ರಾಜ್ಯಕ್ಕೆ ಡಾ. ಬಿಆರ್ ಅಂಬೇಡ್ಕರ್ ಹೆಸರು ಇಡಬೇಕು. ಅಂಬೇಡ್ಕರ್ ಜೀವನ ಸಾಧನೆ ನಮ್ಮ ಕಣ್ಣಮುಂದೆ ಇದೆ. ಅಂಬೇಡ್ಕರ್ ಹೆಸರು ಇಡಬೇಕು ಎಂದು ಆಗ್ರಹಿಸಿದರು.

    ನೆಲಮಂಗಲ ಮಾಜಿ ಶಾಸಕ ನಾಗರಾಜ್‌ಗೆ ಇತ್ತೀಚೆಗೆ ಬೇದರಿಕೆ ಹಾಕಿದ್ದಾರೆ. ಮಾಜಿ ಶಾಸಕರೊಬ್ಬರ ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ, ಪರಮೇಶ್ವರ್ ಭೇಟಿಯಾಗಿ ಸಿಡಿ ಪ್ರಕರಣ ಸಿಬಿಐ ವಹಿಸಬೇಕೆಂದು ಮನವಿ ಮಾಡುತ್ತೇನೆ. ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಆಗ್ತಿವಿ ಎಂದರು. ಇದನ್ನೂ ಓದಿ: ಬಿಜೆಪಿ ಆಪರೇಷನ್ ಕಮಲದ ಕನಸು ನನಸಾಗಲ್ಲ: ಜಮೀರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಂತರಿಕ ವಿಚಾರಗಳನ್ನ ಹೊರಗಡೆ ಹೇಳಬೇಡಿ ಅಂತ ಡಿಕೆಶಿ ಹೇಳಿದ್ದಾರೆ: ಸತೀಶ್ ಜಾರಕಿಹೊಳಿ

    ಆಂತರಿಕ ವಿಚಾರಗಳನ್ನ ಹೊರಗಡೆ ಹೇಳಬೇಡಿ ಅಂತ ಡಿಕೆಶಿ ಹೇಳಿದ್ದಾರೆ: ಸತೀಶ್ ಜಾರಕಿಹೊಳಿ

    ಕೊಪ್ಪಳ: ಬೆಳಗಾವಿ (Belagavi) ರಾಜಕಾರಣದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಮ್ಮ ಆಂತರಿಕ ವಿಚಾರಗಳನ್ನು ಹೊರಗಡೆ ಹೇಳಬೇಡಿ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ತಿಳಿಸಿದರು.

    ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಳಗಾವಿ ರಾಜಕಾರಣದಲ್ಲಿ ಯಾವುದೇ ಸಮಸ್ಯೆ ಇಲ್ಲ. ದಲಿತ ಸಿಎಂ ವಿಚಾರದ ಬಗ್ಗೆ ಯಾವುದೇ ಚರ್ಚೆ ಇಲ್ಲ. ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಜ್ಯದಲ್ಲಿ ಸದ್ಯ ಸಿಎಂ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಅಂದ್ರೆ ಅದಕ್ಕೆ ಮಂಜುನಾಥ ಸ್ವಾಮಿ ಕಾರಣ: ಡಾ.ವೀರೇಂದ್ರ ಹೆಗ್ಗಡೆ

    ಪರಮೇಶ್ವರ್ ಮನೆಯಲ್ಲಿ ಡಿನ್ನರ್ ವಿಚಾರವಾಗಿ ಮಾತನಾಡಿ, ಊಟಕ್ಕೆ ಹೋಗೋದು, ಸೇರೋದು ಸಹಜ ಪ್ರಕ್ರಿಯೆ. ನಾನು ಯಾರ ಮೇಲೆ ಸಿಟ್ಟಾಗಬೇಕು ಹೇಳಿ? ನಾನೇ ಹೆಡ್ ಆಪ್ ದಿ ಡಿಪಾರ್ಟ್ಮೆಂಟ್ ಅಲ್ಲಿ. ನಾನು ಯಾಕೆ ಯಾರ ಮೇಲೆ ಸಿಟ್ಟಾಗಲಿ, ನಾನೇ ಎಲ್ಲಾ ಸರಿ ಮಾಡ್ತೀನಿ ಎಂದರು.

    ಸತೀಶ್ ಜಾರಕಿಹೊಳಿ ಕರ್ನಾಟಕದಲ್ಲಿ ಏಕನಾಥ್ ಶಿಂಧೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಆ ರೀತಿ ಯಾವುದೂ ಇಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಇದೆ. ಇಲ್ಲಿ ಒಟ್ಟಾಗಿ ಇದ್ದೀವಿ. ಅಂತಹ ಪ್ರಶ್ನೆ ಉದ್ಭವ ಆಗುವುದಿಲ್ಲ. ನಿಮಗೆ ಹಾಗೆ ಅನ್ನಿಸಿರಬಹುದು, ನಮಗೆ ಹಾಗೆ ಅನಿಸಿಲ್ಲ. ಪರಮೇಶ್ವರ್ ಮನೆಗೆ ಊಟಕ್ಕೆ ಹೋಗಿದ್ದು ಅಷ್ಟೆ. ಅಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ನಮ್ಮ ಆಂತರಿಕ ವಿಚಾರಗಳನ್ನ ಹೊರಗಡೆ ಹೇಳಬೇಡಿ ಅಂತ ಡಿಕೆಶಿ ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪವರ್ ಶೇರಿಂಗ್ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ಕೃಷ್ಣ ಭೈರೇಗೌಡ

    ಈ ವೇಳೆ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಜೆ.ಎನ್. ಗಣೇಶ್ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ

    ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ: ವೀರಪ್ಪ ಮೊಯ್ಲಿ

    ಬೆಳಗಾವಿ: ಬಿಜೆಪಿಯವರಿಗೆ (BJP) ಬೇರೆಯವರ ಕೆರೆಯಲ್ಲಿ ಮೀನು ಹಿಡಿಯುವುದೇ ಕೆಲಸ. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಬೆಳಗಾವಿಯಲ್ಲಿ (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯವರಿಗೆ ಆಪರೇಷನ್ ಕಮಲದ (Operation Kamala) ರುಚಿ ಹಿಡಿದಿದೆ. ಈ ಅಸ್ತ್ರ ಪ್ರಯೋಗಿಸಿ ಏಳೆಂಟು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ಆದರೆ ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದರು. ಇದನ್ನೂ ಓದಿ: ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ: ಸಿಎಂ

    ಇದೇ ವೇಳೆ ಎರಡೂವರೆ ವರ್ಷದ ಬಳಿಕ ಸಿಎಂ ಬದಲಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ (Siddaramaiah) ನಮ್ಮ ಮುಖ್ಯಮಂತ್ರಿ. ಈಗ ಸರ್ಕಾರ ಸುಭದ್ರವಾಗಿದೆ. ನಾವು ಯಾವುದೇ ವದಂತಿಗಳಿಗೆ ಕಿವಿಗೊಡುವುದಿಲ್ಲ. ಎರಡೂವರೆ ವರ್ಷ ಬಳಿಕ ಸಿಎಂ ಬದಲಾವಣೆ ಆಗುವ ಕುರಿತು ಯಾವುದೇ ಒಪ್ಪಂದ, ಮಾತುಕತೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಜನವರಿಯಲ್ಲಿ ಜಾತಿಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ

    ಚುನಾವಣೆಯಲ್ಲಿ ಘೋಷಿಸಿದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಮಂತ್ರಿ ಆಗುವ ಆಸೆಯಿಂದ ಒಂದಿಬ್ಬರು ಶಾಸಕರು ಅಸಮಾಧಾನದಿಂದ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿರಬಹುದು. ಅದು ಸರಿಯಲ್ಲ. ಅವರು ಹೇಳಿಕೆ ಕೊಟ್ಟ ಮಾತ್ರಕ್ಕೆ ಮುಖ್ಯಮಂತ್ರಿ ಬದಲಾಗುವುದಿಲ್ಲ. ಶಾಸಕರು ಹೀಗೆ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಕರ್ನಾಟಕಕ್ಕೆ ಗ್ರಹಣ- ಬಿಜೆಪಿ ವ್ಯಂಗ್ಯ

    ಬಿಜೆಪಿ ಮತ್ತು ಜೆಡಿಎಸ್ (JDS) ಬಣ್ಣ ಈಗ ಬಯಲಾಗಿದೆ. ತಾವಿಬ್ಬರೂ ಸೇರದಿದ್ದರೆ ಉಳಿಗಾಲವಿಲ್ಲ ಎಂದು ಹೆದರಿ ಒಂದಾಗಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ (Congress) ಅನುಕೂಲವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: KEA ಪರೀಕ್ಷೆ- ಉದ್ದ ತೋಳಿನ ಶರ್ಟ್ ಧರಿಸಿದ್ದ ಪರೀಕ್ಷಾರ್ಥಿಗಳಿಗೆ ಶಾಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯೋತ್ಸವಕ್ಕೆ ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು

    ರಾಜ್ಯೋತ್ಸವಕ್ಕೆ ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವು

    ಬೆಳಗಾವಿ: ಕನ್ನಡ ರಾಜ್ಯೋತ್ಸವ (Kannada Rajyotsava) ಹಿನ್ನೆಲೆ ಧ್ವಜಸ್ತಂಭ (Flagpole) ನಿಲ್ಲಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ (Electric Shock) ಯುವಕ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ (Bailahongala) ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ವಕ್ಕುಂದ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಪ್ರಜ್ವಲ್ ಚನ್ನಗೌಡ ಮುನೇಪ್ಪನವರ (18) ಮೃತಪಟ್ಟ ಯುವಕ. ಗ್ರಾಮದ ಬಸ್ ನಿಲ್ದಾಣದ ಮುಂದೆ ಧ್ವಜಸ್ತಂಭ ನಿಲ್ಲಿಸಲು ತಯಾರಿ ನಡೆಸುತ್ತಿದ್ದಾಗ ಸರ್ವಿಸ್ ತಂತಿ ತಾಗಿದ್ದರಿಂದ ವಿದ್ಯುತ್ ಪ್ರವಹಿಸಿ ಪ್ರಜ್ವಲ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ವ್ಯಕ್ತಿ ಹತ್ಯೆ- ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್

    ವಿದ್ಯುತ್ ಶಾಕ್ ತಗುಲಿದ ತಕ್ಷಣ ಸ್ಥಳೀಯರು ಯುವಕನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕೆರೆಗೆ ಧುಮುಕಿದ ಕಾರು- ಓರ್ವ ಪಾರು, ಇಬ್ಬರು ನೀರುಪಾಲು

    ಮನೆ ಮಗನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದ್ದ ಒಬ್ಬ ಮಗನನ್ನು ಚೆನ್ನಾಗಿ ಓದಿಸಿ, ನೂರಾರು ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿಗೆ ಈಗ ದಿಕ್ಕೇ ತೋಚದಾಗಿದೆ. ಅಗ್ನಿವೀರ್ ಪರೀಕ್ಷೆ ಪಾಸ್ ಆಗಿದ್ದ ಯುವಕ ಪ್ರಜ್ವಲ್, ದೈಹಿಕ ಪರೀಕ್ಷೆಗೆ ತಯಾರಾಗುತ್ತಿದ್ದ. ಅಷ್ಟರೊಳಗೆ ಈ ರೀತಿ ದುರಂತ ಸಂಭವಿಸಿರೋದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

    ಮರಣೋತ್ತರ ಪರೀಕ್ಷೆಗಾಗಿ ಯುವಕನ ಮೃತದೇಹ ಬೈಲಹೊಂಗಲ ತಾಲ್ಲೂಕಾಸ್ಪತ್ರೆಯ ಶವಾಗಾರದಲ್ಲಿದ್ದು, ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನರ್ಸ್‌ಗಳ ಸೌಂದರ್ಯದ ಕುರಿತು ಹೇಳಿಕೆ- ರಾಜು ಕಾಗೆ ಕ್ಷಮೆಯಾಚನೆ

    ನರ್ಸ್‌ಗಳ ಸೌಂದರ್ಯದ ಕುರಿತು ಹೇಳಿಕೆ- ರಾಜು ಕಾಗೆ ಕ್ಷಮೆಯಾಚನೆ

    ಚಿಕ್ಕೋಡಿ: ತುಂಬಿದ ಸಭೆಯಲ್ಲಿ ನರ್ಸ್‌ಗಳ (Nurse) ಸೌಂದರ್ಯ ಬಗ್ಗೆ ಕಾಂಗ್ರೆಸ್ ಶಾಸಕ ರಾಜು ಕಾಗೆ (Raju Kage) ಮಾತನಾಡಿದ ವಿಚಾರಕ್ಕೆ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ (Apology)  ಕೇಳುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದ್ದಾರೆ.

    ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿ ಕಾಂಗ್ರೆಸ್ (Congress) ಶಾಸಕ ರಾಜು ಕಾಗೆ ಕ್ಷಮೆ ಕೋರಿದ್ದಾರೆ. ಭಾನುವಾರ ಸಮಾರಂಭದಲ್ಲಿ ಮಾತನಾಡಿದ್ದು ಯಾರನ್ನೂ ಉದ್ದೇಶಿಸಿ ಅಲ್ಲ. ನಾನೇನೂ ನಾಲ್ಕು ಗೋಡೆಯಲ್ಲಿ ಮಾತನಾಡಿಲ್ಲ. ಸಾವಿರಾರು ಜನರಿದ್ದ ಸಭೆಯಲ್ಲಿ ಮಾತನಾಡಿದ್ದೇನೆ. ನಾನು ಜವಾಬ್ದಾರಿಯಿಂದ ಮಾತನಾಡಿದ್ದೇನೆ. ನಾನು ಹೇಳಿದ್ದು ವಯಸ್ಸು ಆಯ್ತಲ್ಲ, ಮುದುಕನಾದೆನಲ್ಲ ಅಂತಾ ಮನಸ್ಸಿಗೆ ನೋವಾಯ್ತು ಅಂತಾ ಹೇಳಿದೆ ಎಂದರು. ಇದನ್ನೂ ಓದಿ:‌ ನರ್ಸ್‌ಗಳು, ಚೆಂದ ಚೆಂದ ಹುಡುಗಿಯರು ಇದ್ದಾರೆ.. ನನ್ನನ್ನು ಅಜ್ಜ ಅಂತಾರೆ: ರಾಜು ಕಾಗೆ ಬೇಸರ

    ಶಬ್ಧದ ಅರ್ಥ ಸಾವಿರಾರೂ ರೀತಿಯಲ್ಲಿ ನೀವು ಅರ್ಥ ಮಾಡಿಕೊಳ್ಳಬಹುದು. ನನಗೆ ವಯಸ್ಸಾಯ್ತು ಅಂತಾ ಮಾನಸಿಕ ನೋವಾಯ್ತು. ಏನಾದರೂ ನನ್ನ ಮಾತಿನಿಂದ ನೋವಾಗಿದ್ರೆ ಕ್ಷಮೆ ಕೇಳುತ್ತಿದ್ದೇನೆ. ಯಾವುದೇ ಉದ್ದೇಶದಿಂದ ನಾನು ಮಾತನಾಡಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ರಾಜು ಕಾಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಹುಟ್ಟುಹಬ್ಬ – ಮಾವುತ, ಕಾವಾಡಿಗಳಿಗೆ ಉಪಹಾರಕೂಟ ಏರ್ಪಡಿಸಿ ಆಚರಣೆ

    ತುಂಬಿದ ಸಭೆಯಲ್ಲಿ ನರ್ಸ್‌ಗಳ ಸೌಂದರ್ಯದ ಬಗ್ಗೆ ಶಾಸಕ ರಾಜು ಕಾಗೆ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಬೆಳಗಾವಿ (Belagvi) ಜಿಲ್ಲೆ ಅಥಣಿ ತಾಲೂಕಿನ ಪಿ.ಕೆ.ನಾಗನೂರು ಗ್ರಾಮದಲ್ಲಿ ದಸರಾ ಮಹೋತ್ಸವದಲ್ಲಿ ಭಾಷಣ ಮಾಡಿದ್ದ ಅವರು, ಲಿವರ್ ಟ್ರಾನ್ಸ್‌ಪ್ಲಾಂಟ್ ಆದಾಗ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದೆ. ವೈದ್ಯರು ದಿನವೂ ಬಂದು ಹೇಗಿದ್ದೀರಿ ಅಂತಾ ಕೇಳೋರು. ಆಗ ಆಸ್ಪತ್ರೆಯಲ್ಲಿ ಇದ್ದ ಡಾಕ್ಟರ್‌ಗೆ ನಾನು ಹೇಳಿದ್ದೆ. ನನ್ನ ಆರೋಗ್ಯಕ್ಕೆ ಏನೂ ಆಗಿಲ್ಲ. ನನ್ನ ಆಪರೇಷನ್ ಸಕ್ಸಸ್ ಮಾಡಿದ್ದೀರಿ, ಎಲ್ಲಾ ಆಗಿದೆ. ಆದರೆ ನಿಮ್ಮಲ್ಲಿ ನರ್ಸ್ಗಳು ಚೆಂದ ಚೆಂದ ಹುಡುಗಿಯರು ಇದ್ದಾರೆ. ಅವರು ನನಗೆ ಅಜ್ಜ ಅನ್ನುತ್ತಿದ್ದಾರೆ. ಅದು ನನಗೆ ಮಾನಸಿಕ ಹಿಂಸೆ ಆಗಿದೆ ಎಂದಿದ್ದೆ ಎಂದು ಶಾಸಕ ರಾಜು ಕಾಗೆ ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಕೌಂಟ್‍ಡೌನ್?- ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನರ್ಸ್‌ಗಳು, ಚೆಂದ ಚೆಂದ ಹುಡುಗಿಯರು ಇದ್ದಾರೆ.. ನನ್ನನ್ನು ಅಜ್ಜ ಅಂತಾರೆ: ರಾಜು ಕಾಗೆ ಬೇಸರ

    ನರ್ಸ್‌ಗಳು, ಚೆಂದ ಚೆಂದ ಹುಡುಗಿಯರು ಇದ್ದಾರೆ.. ನನ್ನನ್ನು ಅಜ್ಜ ಅಂತಾರೆ: ರಾಜು ಕಾಗೆ ಬೇಸರ

    ಚಿಕ್ಕೋಡಿ: ತುಂಬಿದ ಸಭೆಯಲ್ಲಿ ನರ್ಸ್‌ಗಳ (Nurse) ಸೌಂದರ್ಯದ ಬಗ್ಗೆ ಮಾತನಾಡಿ ಕೈ ಶಾಸಕ ರಾಜು ಕಾಗೆ (Raju Kage) ಪೇಚಿಗೆ ಸಿಲುಕಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆ ಅಥಣಿ (Athani) ತಾಲೂಕಿನ ಅವರಖೋಡ ಗ್ರಾಮದಲ್ಲಿ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ವರ್ಷ 70 ಆದರೂ ತಮ್ಮ ಮಾನಸಿಕತೆಯನ್ನು ಕಾಂಗ್ರೆಸ್ ಶಾಸಕ ಪ್ರದರ್ಶನ ಮಾಡಿದ್ದಾರೆ. ಶಾಸಕ ರಾಜು ಕಾಗೆ ನರ್ಸ್‌ಗಳ ಸೌಂದರ್ಯದ ಬಗ್ಗೆ ಮಾತನಾಡಿದ್ದು, ಲಿವರ್ ಟ್ರಾನ್ಸ್‌ಪ್ಲಾಂಟ್ (Liver Transplant) ಆದಾಗ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದೆ ಎಂದರು. ಇದನ್ನೂ ಓದಿ: ಜೂನ್ ಒಳಗೆ ಸಚಿವ ಸ್ಥಾನ ಕೊಡ್ತೀನಯ್ಯ ಅಂತ ಸಿಎಂ ಹೇಳಿದ್ದಾರೆ: ಶಾಸಕ ಪುಟ್ಟರಂಗಶೆಟ್ಟಿ

    ಈ ವೇಳೆ ವೈದ್ಯರು ದಿನವೂ ಬಂದು ಹೇಗಿದ್ದೀರಿ ಅಂತಾ ಕೇಳೋರು. ಆಗ ಆಸ್ಪತ್ರೆಯಲ್ಲಿ ಇದ್ದ ಡಾಕ್ಟರ್‌ಗೆ ನಾನು ಹೇಳಿದ್ದೆ. ನನ್ನ ಆರೋಗ್ಯಕ್ಕೆ ಏನು ಆಗಿಲ್ಲ ರೀ. ನನ್ನ ಆಪರೇಷನ್ ಸಕ್ಸಸ್ ಮಾಡಿದ್ದೀರಿ, ಎಲ್ಲಾ ಆಗಿದೆ. ಆದರೆ ನಿಮ್ಮಲ್ಲಿ ನರ್ಸ್‌ಗಳು ಚೆಂದ ಚೆಂದ ಹುಡುಗಿಯರು ಇದ್ದಾರೆ. ಅವರು ನನಗೆ ಅಜ್ಜ ಅನ್ನುತ್ತಿದ್ದಾರೆ. ಅದು ನನಗೆ ಮಾನಸಿಕ ಆಗಿದೆ ಎಂದಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಪರಶುರಾಮನ ಮೂರ್ತಿಯ ಕಂಚಿನ ಲೇಪನ ಹರಿದ ಕಾಂಗ್ರೆಸ್ – ಕಾರ್ಕಳ ನಗರ ಠಾಣೆಗೆ ಬಿಜೆಪಿ ದೂರು

    ರಾಜು ಕಾಗೆ ಭಾಷಣಕ್ಕೆ ಸಭೆಯಲ್ಲಿ ನೆರೆದಿದ್ದ ಜನ ಕೇಕೆ ಹಾಕಿದ್ದಾರೆ. ವೇದಿಕೆಯಲ್ಲಿದ್ದ ಲಕ್ಷ್ಮಣ ಸವದಿ (Laxman Savadi) ಉದ್ದೇಶಿಸಿ ಕಾಂಗ್ರೆಸ್ ಶಾಸಕ ರಾಜು ಕಾಗೆ ಈ ಮಾತುಗಳನ್ನ ಆಡಿದ್ದಾರೆ. ಇದನ್ನೂ ಓದಿ: ಅಧ್ಯಕ್ಷ ಸ್ಥಾನವೇನು ಕೋಳಿ ಮೊಟ್ಟೆನಾ.. ಒಡೆದು ಆಮ್ಲೆಟ್ ಮಾಡೋಕೆ: ಸಿಎಂ ಇಬ್ರಾಹಿಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಯವರು ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿದ್ದಾರೆ: ಸತೀಶ್ ಜಾರಕಿಹೊಳಿ

    ಬಿಜೆಪಿಯವರು ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿದ್ದಾರೆ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಪ್ರಮುಖ ಕಡತಗಳೇ ಕಳುವಾಗಿವೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ (Police Station) ದೂರು ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ. ಇದರಲ್ಲಿ ಬಿಜೆಪಿಯರು (BJP) ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿದ್ದು, ನಮ್ಮವರೂ ಇದ್ದಾರೆಂಬ ಸಂಶಯವಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ (Satish Jarakiholi) ತಿಳಿಸಿದ್ದಾರೆ.

    ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ (Belagavi Municipal Corporation) ಪ್ರಮುಖ ಕಡತ ಕಳವು (File Theft) ವಿಚಾರಕ್ಕೆ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ನೀಡಿದ್ದು, ಮೇಯರ್ ಅವರು ಸಹಿ ಮಾಡಿರುವ ಕಡತಗಳೇ ಕಾಣೆಯಾಗಿವೆ. ಮಿಸ್ಸಿಂಗ್‌ ಮಾಡಿದವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಆಯುಕ್ತರಿಗೆ ಹೇಳಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಸೋಲಿನ ಸಂಪೂರ್ಣ ಹತಾಶೆಯಿಂದ ಬಿಜೆಪಿ ನನ್ನ ರಾಜೀನಾಮೆ ಕೇಳುತ್ತಿದೆ: ಡಾ.ಶರಣಪ್ರಕಾಶ್ ಪಾಟೀಲ್

    ನಮ್ಮವರೂ ಕೃತ್ಯದಲ್ಲಿ ಭಾಗಿಯಾಗಿರಬಹುದು:
    ದೂರು ನೀಡುವ ವಿಚಾರ ಬಗ್ಗೆ ಚರ್ಚೆಯಾಗುತ್ತಿದೆ. ಅದು ಆಯುಕ್ತರ ಜವಾಬ್ದಾರಿಯೂ ಹೌದು. ಕಡತಗಳು ಕಾರ್ಯದರ್ಶಿಗಳ ಬಳಿ ಇರಬೇಕಿತ್ತು. ಆದರೀಗ ಮೇಯರ್ ಸಹಿ ಮಾಡಿರುವ ಒರಿಜಿನಲ್‌ ಪ್ರತಿಗಳೇ ಕಳವು ಆಗಿದೆ. ಅದೇ ವಿಚಾರ ಇಟ್ಟುಕೊಂಡು ಬಿಜೆಪಿಯವರು ಆಯುಕ್ತರ ವಿರುದ್ಧ ಆರೋಪ ಮಾಡ್ತಿದ್ದಾರೆ. ಮೊದಲು ತಾವೇ ಸಹಿ ಮಾಡಿದ್ದ ಮಾಡಿರುವುದಾಗಿ ಹೇಳಿದ್ದ ಆಯುಕ್ತರು ಈಗ ಅವರೇ ನಮ್ಮನ್ನು ದೂರುತ್ತಿದ್ದಾರೆ. ಹಾಗಾಗಿ ನಮ್ಮವರೂ ಸಹ ಕೃತ್ಯದಲ್ಲಿ ಭಾಗಿಯಾಗಿರುವ ಸಂಶಯ ಬರುತ್ತಿದೆ. ಆದ್ದರಿಂದ ದೂರು ನೀಡಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ – ನದಿಗೆ ಎಸೆಯಲು ಪ್ಲಾನ್

    ಪಾಲಿಕೆ ರದ್ದು ಮಾಡಲು ಅವಕಾಶವಿದೆ: ನಗರಪಾಲಿಕೆಯಲ್ಲಿ ಸೂಪರ್ ಸೀಡಿಂಗ್ ಮಾಡುವ ಅವಶ್ಯಕತೆ ಇಲ್ಲ. ಕಾನೂನು ಏನಿದೆ ಅದನ್ನ ತಿಳಿದುಕೊಂಡು ಎಲ್ಲರೂ ಹೋಗಬೇಕು. ಬಿಜೆಪಿಯವರು ನಾವು ಗೆದ್ದು ಬಂದಿದ್ದೇವೆ ಅನೋ ಭ್ರಮಯಲ್ಲಿ ಇದ್ದಾರೆ. ಹೆಜ್ಜೆ ಹೆಜ್ಜೆಗೂ ತಪ್ಪು ಮಾಡಿದ್ದಾರೆ. ಬೆಳಗಾವಿ ಪಾಲಿಕೆ ರದ್ದು ಮಾಡಲು ಸಾಕಷ್ಟು ಅವಕಾಶ ಇದೆ, ಆದ್ರೆ ಅದು ಸೂಕ್ತವಲ್ಲ. ಪೊಲೀಸ್ ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಬ್ಬಾಳ್ಕರ್, ಜಾರಕಿಹೊಳಿ ಮಧ್ಯೆ ಭಿನ್ನಾಭಿಪ್ರಾಯ – ಸ್ಥಳೀಯ ನಿಗಮಗಳ ವಿಚಾರಕ್ಕೇ ಗುದ್ದಾಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]