Tag: belagavi

  • ಸಿಇಒ ಆತ್ಮಹತ್ಯೆ ಪ್ರಕರಣ- ಖುಷಿಯಿಂದ ಸಾಯೋದು ಹೇಗೆಂದು ವೀಡಿಯೋ ನೋಡಿದ್ದ ಅಧಿಕಾರಿ!

    ಸಿಇಒ ಆತ್ಮಹತ್ಯೆ ಪ್ರಕರಣ- ಖುಷಿಯಿಂದ ಸಾಯೋದು ಹೇಗೆಂದು ವೀಡಿಯೋ ನೋಡಿದ್ದ ಅಧಿಕಾರಿ!

    ಬೆಳಗಾವಿ: ದಂಡು ಮಂಡಳಿ ಸಿಇಒ (Dandu Board CEO) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ (Police) ಪ್ರಾಥಮಿಕ ತನಿಖೆ ವೇಳೆ ಆಘಾತಕಾರಿ ವಿಷಯವೊಂದು ಬಯಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಆನಂದದಿಂದ ಸಾಯುವುದು ಹೇಗೆಂದು ವೀಡಿಯೋ ವೀಕ್ಷಣೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ತಮಿಳುನಾಡು ಮೂಲದ ಸಿಇಒ ಕೆ.ಆನಂದ್ (40) ಬೆಳಗ್ಗೆ ಬಾಗಿಲು ತೆರೆಯದೇ ಇದ್ದಾಗ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆರೆದಾಗ ಬೆಡ್ ರೂಮ್‍ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಇದನ್ನೂ ಓದಿ: ಬೆಳಗಾವಿಯ ದಂಡು ಮಂಡಳಿ CEO ನಿಗೂಢ ಸಾವು – ಮನೆಯಲ್ಲಿ ಡೆತ್‌ ನೋಟ್‌, ವಿಷದ ಬಾಟಲಿ ಪತ್ತೆ

    ಬೆಡ್ ರೂಮ್‍ನಲ್ಲಿ ಅವರು ಆನ್ ಮಾಡಿದ್ದ ಮ್ಯೂಸಿಕ್ ಸಹ ಹಾಗೆಯೇ ಇತ್ತು. ಸಾಯುವ ಮುನ್ನ ಅವರು ತಮ್ಮ ಕೋಣೆಯಲ್ಲಿ ಖುಷಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ಲ್ಯಾಪ್‍ಟಾಪ್‍ನಲ್ಲಿ ಬಹಳ ಹೊತ್ತಿನವರೆಗೂ ವೀಡಿಯೋಗಳನ್ನು ಸರ್ಚ್ ಮಾಡಿ ನೋಡಿದ್ದರು. ಒಬ್ಬ ವ್ಯಕ್ತಿ ನಗುನಗುತಾ ಡ್ಯಾನ್ಸ್ ಮಾಡುತ್ತಾ ಪ್ರಾಣ ಬಿಡುವ ವೀಡಿಯೋ ಸರ್ಚ್ ಮಾಡಿದ್ದಾರೆ. ಹೇಗೆ ಆನಂದದಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವುದನ್ನು ಸರ್ಚ್ ಮಾಡಿದ್ದಾರೆ.

    ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡುತ್ತಾ ಆತ್ಮಹತ್ಯೆಗೆ ಶರಣಾದ್ರಾ? ಎನ್ನುವ ಅನುಮಾನ ಕೂಡ ಪೊಲೀಸರಿಗೆ ಎದುರಾಗಿದೆ ಎಂಬುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗಂಡನನ್ನು ಕಳೆದುಕೊಂಡಿದ್ದ ಡಿಸಿ ಕಚೇರಿ ಎಸ್‍ಡಿಎ ಆತ್ಮಹತ್ಯೆ!

  • ಬೆಳಗಾವಿಯ ದಂಡು ಮಂಡಳಿ CEO ನಿಗೂಢ ಸಾವು – ಮನೆಯಲ್ಲಿ ಡೆತ್‌ ನೋಟ್‌, ವಿಷದ ಬಾಟಲಿ ಪತ್ತೆ

    ಬೆಳಗಾವಿಯ ದಂಡು ಮಂಡಳಿ CEO ನಿಗೂಢ ಸಾವು – ಮನೆಯಲ್ಲಿ ಡೆತ್‌ ನೋಟ್‌, ವಿಷದ ಬಾಟಲಿ ಪತ್ತೆ

    ಬೆಳಗಾವಿ: ಬೆಳಗಾವಿಯ ದಂಡು ಮಂಡಳಿ (Belagavi Dandu Board) ಸಿಇಒ ಕರ್ನಲ್ ಆನಂದ್‌ (40) ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ (ನ.25) ಬೆಳಗ್ಗೆ ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ (Belgaum camp Area) ಕೆ. ಆನಂದ್‌ ಅವರ ಸರ್ಕಾರಿ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆನಂದ್‌ ಅವರು ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್‌ಗೆ ಸೇರಿದ್ದರು. ಇದನ್ನೂ ಓದಿ: ರಾಯಚೂರು ವಿದ್ಯುತ್ ಕೇಂದ್ರಗಳ ಕಲ್ಲಿದ್ದಲು ಕಳ್ಳಾಟ ಪ್ರಕರಣ- ಇಬ್ಬರ ವಿರುದ್ಧ ಎಫ್‌ಐಆರ್

    ಮೃತ ಆನಂದ ತಮಿಳುನಾಡು (TamilNadu) ಮೂಲದವರಾಗಿದ್ದು, ವಿವಾಹ ಆಗಿಲ್ಲ ತಂದೆ-ತಾಯಿ ತಮಿಳುನಾಡಿನಲ್ಲಿದ್ದಾರೆ. ಬೆಳಗಾವಿಯ ಸರ್ಕಾರಿ‌ ನಿವಾಸದಲ್ಲಿ ಒಬ್ಬರೇ ವಾಸವಾಗಿದ್ದರು. ಶನಿವಾರ ಬೆಳಗ್ಗೆ ಮನೆ ಬಾಗಿಲು ತೆರೆಯದೇ ಇದ್ದಾಗ ಅನುಮಾನಗೊಂಡ ಮನೆ ಸಿಬ್ಬಂದಿ ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳ ನುಗ್ಗಿದಾಗ ಶವವಾಗಿ ಪತ್ತೆಯಾಗಿದ್ದಾರೆ.

    ಇತ್ತಿಚೆಗೆ ದಂಡುಮಂಡಳಿಯ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಎಂಎಲ್ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜೋಯದೀಪ ಮುಖರ್ಜಿ, ಡಿಸಿಪಿ ರೋಹನ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮುಂದುವರಿದ ರೆಡ್ಡಿ ಸಹೋದರರ ಮುನಿಸು – ಸಹೋದರನ ಪುತ್ರನ ಮದುವೆಗೆ ಜನಾರ್ದನ ರೆಡ್ಡಿ ಗೈರು

    ಡೆತ್‌ ನೋಟ್‌, ವಿಷದ ಬಾಟಲಿ ಪತ್ತೆ:
    ಕರ್ನಲ್‌ ಆನಂದ್‌ ಅವರ ಕೊಠಡಿ ತಪಾಸಣೆ ವೇಳೆ ಡೆತ್‌ ನೋಟ್‌ ಮತ್ತು ವಿಷದ ಬಾಟಲಿ ಪತ್ತೆಯಾಗಿದೆ. ಅದರಲ್ಲಿ ಯಾವೆಲ್ಲಾ ಅಂಶ ಇದೆ ಅನ್ನೋದನ್ನ ಪರಿಶೀಲನೆ ಮಾಡುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ತಿಳಿದಿದ್ದಾರೆ.

    \

    ಕ್ಯಾಂಪ್ ನಲ್ಲಿರುವ ಸಿಇಒ ಕೆ.ಆನಂದ್‌ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 2021ರಿಂದ ಬೆಳಗಾವಿಯ ದಂಡು ಮಂಡಳಿ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 2 ದಿನಗಳಿಂದ ಅವರ ಮನೆ ಬಾಗಿಲು ತೆರೆದಿರಲಿಲ್ಲ. ಇದರಿಂದ ನಮ್ಮ ಪೊಲೀಸರು ಅನುಮಾನಗೊಂಡು ಮದ್ರಾಸ್ ನಲ್ಲಿರುವ ಆನಂದ್‌ ಅವರ ತಂದೆಯನ್ನ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ತೆರೆದು ನೋಡಿದಾಗ ಆನಂದ್‌ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಮೂಗಿನಿಂದ ರಕ್ತ ಸೋರಿ ಕೆಳಗೆ ಬಿದ್ದಿತ್ತು, ಹಾಸಿಗೆ ಪಕ್ಕದಲ್ಲಿ ಒಂದು ವಿಷಯ ಬಾಟಿಲು ಸಿಕ್ಕಿದೆ. ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

    ಬೆರಳಚ್ಚು ತಜ್ಞರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎಲ್ಲ ಪರೀಕ್ಷೆ ಮಾಡಿದ್ದಾರೆ. 174 ವಿಧಿಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಎಫ್ಎಸ್‌ಎಲ್ ವರದಿ ಬಂದ ಬಳಿಕ ನಿಖರ ಮಾಹಿತಿ ತಿಳಿಯಲಿದೆ. ಡೆತ್ ನೋಟ್ ಸಿಕ್ಕಿದೆ. ಆದ್ರೆ ಏನು ಬರೆದಿದ್ದಾರೆ ಅನ್ನೋದು ತನಿಖೆ ಬಳಿಕ ಬಯಲಾಗಲಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

  • ವಿಶ್ವಕಪ್ 2023- ಜೀತೆಗಾ ಹಿಂದೂಸ್ತಾನ್ ಜೀತೆಗಾ ಎಂದ ಜಿಲ್ಲೆಯ ಕ್ರೀಡಾಭಿಮಾನಿಗಳು

    ವಿಶ್ವಕಪ್ 2023- ಜೀತೆಗಾ ಹಿಂದೂಸ್ತಾನ್ ಜೀತೆಗಾ ಎಂದ ಜಿಲ್ಲೆಯ ಕ್ರೀಡಾಭಿಮಾನಿಗಳು

    ಬೆಂಗಳೂರು: ವಿಶ್ವಕಪ್ ಮಹಾಸಮರಕ್ಕೆ ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಸಾಕ್ಷಿಯಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಇಂಡಿಯಾ ಹಾಗೂ ಆಸ್ಟ್ರೇಲಿಯಾ (IND Vs AUS) ನಡುವೆ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉಡುಪಿ, ಮೈಸೂರು, ರಾಯಚೂರು ಹಾಗೂ ಬೆಳಗಾವಿ ಜಿಲ್ಲೆಯ ಅಭಿಮಾನಿಗಳು ವಿಶ್ ಮಾಡುವುದರ ಜೊತೆಗೆ ಆಯಾ ದೇಗುಲಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.

    ದೇಶದಲ್ಲೆಲ್ಲಾ ವರ್ಲ್ಡ್ ಕಪ್ ನ (World Cup 2023) ಫೈನಲ್ ಫೀವರ್ ಹಬ್ಬಿದೆ. ಈ ಬಾರಿ ಟೀಂ ಇಂಡಿಯಾ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಕ್ರಿಕೆಟ್ ಅಭಿಮಾನಿಗಳದ್ದಾಗಿದೆ. ಉಡುಪಿಯ ಎಂಜಿಎಂ ಕಾಲೇಜಿನ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಲ್ ದ ಬೆಸ್ಟ್ ಇಂಡಿಯಾ.. ಇಂಡಿಯಾ… ಎಂದು ಚೀಯರ್ ಅಫ್ ಮಾಡಿದ್ದಾರೆ. ಇನ್ನು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಕ್ರಿಕೆಟ್ ಪ್ರೇಮಿಗಳು ಶುಭಾಶಯ ಕೋರಿದ್ದಾರೆ. ಧಾನ್ಯಗಳ ಮೂಲಕ ಭಾರತದ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.‌ ಇದನ್ನೂ ಓದಿ: World Cup 2023 – ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ ಬೆಂಗಳೂರಿನ ಅಕ್ಕಸಾಲಿಗ

    ವಿಶ್ವಕಪ್ ಕ್ರಿಕೆಟ್‍ನ ಹೈ ವೋಲ್ಟೇಜ್ ಮ್ಯಾಚ್ ನೋಡಲು ಜನ ಹೈ ಅಲರ್ಟ್ ಆಗಿದ್ದಾರೆ. ಎಲ್ಲಿ ನೋಡಿದರಲ್ಲಿ ಜಿತೇಗಾ ಬೈ ಜೀತೆಗಾ ಹಿಂದೂಸ್ತಾನ್ ಜೀತೆಗಾ ಈ ಸಲ ಕಪ್ ನಮ್ಮದೇ ಭಾರತ ತಂಡಕ್ಕೆ ಗೆಲುವಾಗಲಿ ಎಂಬ ಘೋಷಣೆಗಳು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿಯೂ ಕ್ರಿಕೆಟ್ ಪ್ರೇಮಿಗಳು, ಗಲ್ಲಿ ಕ್ರಿಕೆಟಿಗರು ಟೀಂ ಇಂಡಿಯಾಗೆ ವಿಶ್ ಮಾಡಿದ್ದಾರೆ.

    ಇತ್ತ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ಗೆಲ್ಲಲಿ ಅಂತ ರಾಯಚೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಗರದ ನಂದೀಶ್ವರ ದೇವಾಲಯದಲ್ಲಿ ಮಹಿಳೆಯರು ಪ್ರಾರ್ಥನೆ ಸಲ್ಲಿಸಿ ಟೀಂ ಇಂಡಿಯಾಗೆ ಶುಭ ಹಾರೈಸಿದ್ದಾರೆ. ಈ ಬಾರಿಯ ವರ್ಲ್ಡ್ ಕಪ್ ನಮ್ಮದೇ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ರೀಡಾಪ್ರೇಮಿಗಳು ಟೀಂ ಇಂಡಿಯಾಗೆ ಶುಭಹಾರೈಸಿದ್ದಾರೆ. ಇನ್ನು ಟೀಂ ಇಂಡಿಯಾ ಗೆಲುವಿಗಾಗಿ ಯಾದಗಿರಿಯ ಶಾಂತಿನಗರದಲ್ಲಿ ಇನ್ನರ್ ವೀಲ್ ಕ್ಲಬ್‍ನಿಂದ ಮಹಿಳೆಯರು ಹೋಮ-ಹವನ ನಡೆಸಿದ್ದಾರೆ.

    ಅಹಮದಾಬಾದ್‍ನಲ್ಲಿ ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ, ಬಾಲಿವುಡ್ ತಾರೆಯರು, ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ. ಇದಲ್ಲದೆ ಏರ್‍ಶೋ, ಲೇಸರ್ ಶೋ, ಸಂಗೀತ, ನೃತ್ಯ ವೈಭವ ವಿಶ್ವಕಪ್ ಫೈನಲ್ ಮ್ಯಾಚ್‍ನ ಕಿಕ್ಕನ್ನ ಹೆಚ್ಚಿಸಲಿದೆ.

  • ಕುಟುಂಬ ಬಲಿಪಡೆದು ದೀಪಾವಳಿ ಆಚರಿಸಿದ ಆರೋಪಿ ಪ್ರವೀಣ್

    ಕುಟುಂಬ ಬಲಿಪಡೆದು ದೀಪಾವಳಿ ಆಚರಿಸಿದ ಆರೋಪಿ ಪ್ರವೀಣ್

    ಉಡುಪಿ: ಒಂದೇ ಕುಟುಂಬದ (Family) ನಾಲ್ವರ ಬರ್ಬರ ಹತ್ಯೆ ಪ್ರಕರಣ ವಿಚಾರಣೆ ನಡೆಯುತ್ತಿದೆ. ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೆಲ ಆತಂಕಕಾರಿ ವಿಚಾರಗಳು ಬೆಳಕಿಗೆ ಬರುತ್ತಿದೆ. ದೀಪಾವಳಿ (Deepavali) ಹಬ್ಬದ ಮುಂಜಾನೆ ಈ ಕೃತ್ಯ ನಡೆದಿದ್ದು, ಘಟನೆಯ ಬಳಿಕ ಆರೋಪಿ ಪ್ರವೀಣ್ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ದೀಪಾವಳಿ ಆಚರಿಸಿದ್ದಾನೆ.

    ಉಡುಪಿ (Udupi) ಜಿಲ್ಲೆ ಹಿಂದೆಂದೂ ಕಂಡರಿಯದ ಬರ್ಬರ ಕೃತ್ಯಕ್ಕೆ ಕಳೆದ ಭಾನುವಾರ ಸಾಕ್ಷಿಯಾಗಿತ್ತು. ಘಟನೆ ನಡೆದು ಮೂರನೇ ದಿನಕ್ಕೆ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದರು. ನ್ಯಾಯಾಲಯದ ಮೂಲಕ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಸಾಕಷ್ಟು ಮಾಹಿತಿಗಳು ಸಿಗುತ್ತಿದೆ. ಭಾನುವಾರ ಬೆಳಗ್ಗೆ 9:30 ರಿಂದ 10 ಗಂಟೆಯ ನಡುವೆ ದುಷ್ಕೃತ್ಯ ಎಸಗಿದ ಆರೋಪಿ, ಎರಡು ಬೈಕ್, ಆಟೋರಿಕ್ಷಾ, ಬಸ್ ಮೂಲಕ ಉಡುಪಿ ಜಿಲ್ಲೆಯಿಂದ ಕಾಲ್ಕಿತ್ತಿದ್ದಾನೆ. ಇದನ್ನೂ ಓದಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಮಾರಣಾಂತಿಕ ಹಲ್ಲೆ

    ಕುಟುಂಬ ಬಲಿ ಪಡೆದ ಬಳಿಕ ಮಹಾರಾಷ್ಟ್ರ (Maharashtra) ಮೂಲದ ಪ್ರವೀಣ್ ಅರುಣ್ ಚೌಗಲೆ ಮುಖಕ್ಕೆ ಮಾಸ್ಕ್ ಹಾಕಿ, ಬಟ್ಟೆ ಬದಲಿಸಿಕೊಂಡು ಮನೆ ಸೇರಿದ್ದಾನೆ. ಮನೆಯಿಂದ ಒಬ್ಬನೇ ಹೊರಗೆ ಬಂದು ಕೈಗೆ ಆಗಿದ್ದ ಗಾಯಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾನೆ. ನಾಲ್ವರಿಗೆ ಚಾಕು ಇರಿತ ಮಾಡುವ ಸಂದರ್ಭದಲ್ಲಿ ಆರೋಪಿಯ ಕೈ ಬೆರಳುಗಳು ಗಾಯಗೊಂಡಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಪ್ರವೀಣ್ ಚೌಗಲೆ ಕುಟುಂಬದವರನ್ನು ಕರೆದುಕೊಂಡು ಹೊರಗೆ ಹೋಗಿದ್ದಾನೆ. ಮರುದಿನ ಅಂದರೆ ಸೋಮವಾರ ತನ್ನ ಕಾರಿನಲ್ಲಿ ಮಂಗಳೂರಿನಿಂದ ಹೊರಟು ಬೆಳಗಾವಿಗೆ ತಲುಪಿದ್ದಾನೆ. ಮೂರು ದಿನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಆರೋಪಿ ಬೆಳಗಾವಿ ತಲುಪಿದ ನಂತರ ಫೋನನ್ನು ಆನ್ ಮಾಡಿದ್ದಾನೆ. ಆ ಹೊತ್ತಿಗಾಗಲೇ ಪೊಲೀಸರಿಗೆ ಆರೋಪಿಯ ಬಗ್ಗೆ ಸುಳಿವು ಸಿಕ್ಕಿತ್ತು. ಬೆಳಗಾವಿ ಕುಡುಚಿ ಪೊಲೀಸರ ಸಹಾಯ ಪಡೆದು ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಉಪನ್ಯಾಸಕನ ವಿರುದ್ಧ ಕಿರುಕುಳದ ಆರೋಪ- ವಿದ್ಯಾರ್ಥಿ ಆತ್ಮಹತ್ಯೆ

    ಘಟನೆ ನಡೆದ ದಿನ ಮತ್ತು ಮುಂದಿನ ಎರಡು ದಿನ ಆತನ ಚಲನವಲನಗಳ ಬಗ್ಗೆ ಆರೋಪಿ ಮಾಹಿತಿ ನೀಡಿದ್ದಾನೆ. ನಾಲ್ವರ ಹತ್ಯೆಗೈದರೂ ಏನೂ ಸಂಶಯ ಬಾರದ ರೀತಿಯಲ್ಲಿ ಆರೋಪಿ ಪ್ರವೀಣ್ ಕುಟುಂಬ, ಸಂಬಂಧಿಕರು, ಆಪ್ತರ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾನೆ. ಜೊತೆಗಿದ್ದ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ನಡೆದುಕೊಂಡಿದ್ದಾನೆ. ಉಡುಪಿಯಲ್ಲಿ ಮೃಗೀಯ ವರ್ತನೆ ತೋರಿದಾತ ಏನೂ ನಡೆಯದಂತೆ ನಡೆದುಕೊಂಡಿರುವುದಾಗಿ ತಾನೇ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಫ್ಯಾಶನ್ ಬಳೆ ತೊಟ್ಟಿದ್ದಕ್ಕೆ ಪತ್ನಿಗೆ ಬೆಲ್ಟ್‌ನಲ್ಲಿ ಥಳಿಸಿದ ಪತಿ!

  • ರಾಷ್ಟ್ರೀಯ ಹೆದ್ದಾರಿ ಪಕ್ಕದ ಶೌಚಾಲಯಕ್ಕೆ ಕಾರು ಡಿಕ್ಕಿ – ಇಬ್ಬರು ಸಾವು, ಮತ್ತೋರ್ವ ಗಂಭೀರ

    ರಾಷ್ಟ್ರೀಯ ಹೆದ್ದಾರಿ ಪಕ್ಕದ ಶೌಚಾಲಯಕ್ಕೆ ಕಾರು ಡಿಕ್ಕಿ – ಇಬ್ಬರು ಸಾವು, ಮತ್ತೋರ್ವ ಗಂಭೀರ

    ಗದಗ: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಶೌಚಾಲಯಕ್ಕೆ (Toilet) ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಗದಗ (Gadag) ನಗರದ ಹೊರವಲಯದಲ್ಲಿ ನಡೆದಿದೆ.

    ಮೃತರು ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನವರು ಎನ್ನಲಾಗುತ್ತಿದೆ. ಘಟನೆಯಿಂದ ಸಿದ್ದಯ್ಯ ಪಾಟೀಲ್ ಹಾಗೂ ಬಾಬು ತಾರಿಹಾಳ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಶಶಿ ಪಾಟೀಲ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವಿಶ್ವಕಪ್ ಫೈನಲ್ಸ್ ಬೆಟ್ಟಿಂಗ್ ಭರಾಟೆ – 15 ದಿನದಲ್ಲಿ 30 ಕೇಸ್, 42 ಮಂದಿ ಅರೆಸ್ಟ್

    ಕಳಸಾಪೂರ ಕ್ರಾಸ್ ಬಳಿಯ ಹುಬ್ಬಳ್ಳಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಶೌಚಾಲಯದ ಗೋಡೆಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರ್‌ನಲ್ಲಿರುವ ಏರ್‌ಬ್ಯಾಗ್ ಓಪನ್ ಆಗಿದ್ದರೂ ಇಬ್ಬರು ಮೃತಪಟ್ಟಿದ್ದಾರೆ. ಚಾಲಕನ ಅಜಾಗರೂಕತೆ ಹಾಗೂ ಅತಿಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮಹಿಳೆಯಿಂದ ಬ್ಲ್ಯಾಕ್‌ಮೇಲ್ – ಎಂಪಿ ದೇವೇಂದ್ರಪ್ಪ ಪುತ್ರನಿಂದ ದೂರು, ಎಫ್‌ಐಆರ್ ದಾಖಲು

  • ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಗಾವಿಗೆ ವಿಸ್ತರಣೆ

    ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಗಾವಿಗೆ ವಿಸ್ತರಣೆ

    ಬೆಳಗಾವಿ: ಜನರ ಬಹು ದಿನಗಳ ಬೇಡಿಕೆಯಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು (Vande Bharat Express Train) ಬೆಂಗಳೂರು- ಧಾರವಾಡದಿಂದ (Bengaluru -Dharwad) ಬೆಳಗಾವಿಯವರೆಗೆ (Belagavi) ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ.

    ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ರೈಲು ಸಂಖ್ಯೆ (20661) ಪ್ರತಿ ದಿನ ಬೆಳಗ್ಗೆ 5:45ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 1.30ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ರೈಲು ಸಂಖ್ಯೆ (20662) ಮಧ್ಯಾಹ್ನ 2ಕ್ಕೆ ಹೊರಟು ರಾತ್ರಿ 10ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ. ಇದನ್ನೂ ಓದಿ: ಉಡುಪಿಯಲ್ಲಿ ನಾಲ್ವರ ಬರ್ಬರ ಹತ್ಯೆ – 10ಕ್ಕೂ ಹೆಚ್ಚು ಮಂದಿ ವಶಕ್ಕೆ, ಸಾಂಗ್ಲಿಯ ಶಂಕಿತನ ಮೇಲೆ ಅನುಮಾನ ಜಾಸ್ತಿ ಯಾಕೆ?

    ಶೀಘ್ರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದ ದಿನಾಂಕ ನಿಗದಿಯಾಗಲಿದೆ. ವಂದೇ ಭಾರತ್ ಬೆಳಗಾವಿ ವರೆಗೂ ವಿಸ್ತರಿಸುವಂತೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಇದನ್ನೂ ಓದಿ: ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

  • ಉಡುಪಿಯಲ್ಲಿ ನಾಲ್ವರ ಬರ್ಬರ ಹತ್ಯೆ – 10ಕ್ಕೂ ಹೆಚ್ಚು ಮಂದಿ ವಶಕ್ಕೆ, ಸಾಂಗ್ಲಿಯ ಶಂಕಿತನ ಮೇಲೆ ಅನುಮಾನ ಜಾಸ್ತಿ ಯಾಕೆ?

    ಉಡುಪಿಯಲ್ಲಿ ನಾಲ್ವರ ಬರ್ಬರ ಹತ್ಯೆ – 10ಕ್ಕೂ ಹೆಚ್ಚು ಮಂದಿ ವಶಕ್ಕೆ, ಸಾಂಗ್ಲಿಯ ಶಂಕಿತನ ಮೇಲೆ ಅನುಮಾನ ಜಾಸ್ತಿ ಯಾಕೆ?

    ಉಡುಪಿ: ಮೂವರು ಮಕ್ಕಳು ಸೇರಿದಂತೆ ನಾಲ್ವರ ಬರ್ಬರ ಹತ್ಯೆ ಪ್ರಕರಣದ ತನಿಖೆಯಲ್ಲಿ ಪೊಲೀಸರು (Police) ಮಹತ್ವದ ಘಟ್ಟ ತಲುಪಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಫೋನ್ ಕರೆಗಳ ದಾಖಲೆಗಳ ಆಧಾರದ ಮೇಲೆ ಮಹಾರಾಷ್ಟ್ರದ (Maharashtra) ಸಾಂಗ್ಲಿ ಮೂಲದ ಓರ್ವ ವ್ಯಕ್ತಿ ಮೇಲೆ ಹೆಚ್ಚಿನ ಅನುಮಾನವಿದ್ದು ಆತನನ್ನು ಬೆಳಗಾವಿಯಲ್ಲಿ ವಶಕ್ಕೆ ಪಡೆದು ಉಡುಪಿಗೆ (Udupi) ಕರೆ ತರಲಾಗುತ್ತಿದೆ.

    ವಶಕ್ಕೆ ಪಡೆದ ಶಂಕಿತನನ್ನು ಪ್ರವೀಣ್ ಅರುಣ್ ಚೌಗಲೆ ಎಂದು ಗುರುತಿಸಲಾಗಿದೆ. ಆತನ ಚಹರೆ, ಎತ್ತರ ಮತ್ತು ಫೋನ್ ಲೊಕೇಶನ್ ಹೊಂದಿಕೆಯಾಗಿದೆ. ಇದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದು ಉಡುಪಿಗೆ ಕರೆ ತರುತ್ತಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ – ಒಬ್ಬಳ ಮೇಲಿನ ದ್ವೇಷಕ್ಕೆ ನಾಲ್ವರು ಬಲಿ!

    ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಇಲ್ಲಿಯವರೆಗೂ ಶಂಕಿತನ ಚಹರೆ ಹೋಲುವ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಘಟನೆ ನಡೆದ ದಿನವೇ ಉಡುಪಿ ಎಸ್‍ಪಿ ಡಾ.ಅರುಣ್ ಸೂಚನೆಯಂತೆ ಪ್ರಕರಣದ ತನಿಖೆಗೆ 5 ತಂಡಗಳನ್ನು ರಚನೆ ಮಾಡಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಬೆನ್ನತ್ತಿರುವ ಪೊಲೀಸರು ಉಡುಪಿ, ಮಂಗಳೂರು, ಶಿವಮೊಗ್ಗ, ಕೇರಳದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿದ ವ್ಯಕ್ತಿಯ ಚಹರೆ ಹೋಲುವವರನ್ನು ವಶಕ್ಕೆ ಪಡೆದಿದ್ದಾರೆ.

    ಪೊಲೀಸರ ಒಂದು ತಂಡ ಕೇರಳದ (Kerala) ಕೊಚ್ಚಿಯಲ್ಲಿ ಓರ್ವ ಶಂಕಿತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಿದೆ. ಉಡುಪಿ, ಶಿವಮೊಗ್ಗ, ದಾವಣಗೆರೆಯಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಿ ಚಲನವಲನ ಗಮನಿಸಿ ವಿಚಾರಣೆ ಮಾಡಿದ್ದಾರೆ.

    ವಶಕ್ಕೆ ಪಡೆದ ಎಲ್ಲಾ ಶಂಕಿತರ ಪೈಕಿ ಪ್ರವೀಣ್ ಚೌಗಲೆ ಮೇಲೆ ಅನುಮಾನ ಜಾಸ್ತಿ ಇದೆ. ಮೃತಪಟ್ಟ ಹಸೀನಾ ಅವರ ಎರಡನೇ ಪುತ್ರಿಯಾಗಿರುವ ಆಯ್ನಾಝ್ ಮತ್ತು ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಹಳೆಯ ಪರಿಚಿತರು ಕೂಡ ಹೌದು ಎಂದು ತಿಳಿದು ಬಂದಿದೆ. ಹತ್ಯೆಯಾದ ಬಳಿಕ ಪ್ರವೀಣ್ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದ. ಈ ಕಾರಣಕ್ಕೆ ಆತನ ಮೇಲೆ ಅನುಮಾನ ಜಾಸ್ತಿಯಿದೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!

  • ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

    ಬೆಳಗಾವಿ ಮೂಲದ ಯುವತಿಯಿಂದ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ!

    ಬೆಳಗಾವಿ: ಬೆಂಗಳೂರಿನ (Bengaluru) ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ (Electronic City) ಖಾಸಗಿ ಕಂಪನಿಯೊಂದಕ್ಕೆ ಯುವತಿಯೊಬ್ಬಳು ಬಾಂಬ್ ಬೆದರಿಕೆ (Bomb Threat) ಕರೆ (Call) ಮಾಡಿದ್ದು, ಯುವತಿ (Young Woman) ಬೆಳಗಾವಿ (Belagavi) ಮೂಲದವಳು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಬೆಳಗಾವಿಯ ಶಾಹುನಗರ ನಿವಾಸಿ ಶೃತಿ ಶೆಟ್ಟಿ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾಳೆ. ಕರೆ ಮಾಡಿದ್ದ ಶೃತಿ ಬೆಂಗಳೂರಿನಲ್ಲಿ ಈ ಮೊದಲು ಅದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಕೆಲಸ ತೊರೆದು ಶೃತಿ ಬಂದಿದ್ದಳು. ವಿದ್ಯಾಭ್ಯಾಸದ ಬಳಿಕ ಶೃತಿಯನ್ನು ರೀ ಜಾಯಿನ್ ಮಾಡಿಕೊಳ್ಳಲು ಕಂಪನಿ ಹಿಂದೇಟು ಹಾಕಿದೆ. ಇದರಿಂದ ಮಾನಸಿಕವಾಗಿ ಕುಗ್ಗಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಆರೋಪಿ ಅರೆಸ್ಟ್

    ಸದ್ಯ ಶೃತಿಯನ್ನು ವಶಕ್ಕೆ ಪಡೆಯಲು ಬೆಂಗಳೂರಿನ ಪೊಲೀಸ್ ತಂಡ ಬೆಳಗಾವಿಗೆ ಆಗಮಿಸಿತ್ತು. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪಿಎಸ್‌ಐ ಮೆಹಬೂಬ್ ಹಾಗೂ ಮಹಿಳಾ ಪೊಲೀಸ್ ಪೇದೆ, ಶೃತಿ ಮನೆಗೆ ಆಗಮಿಸಿದ್ದು, ಇವರಿಗೆ ಬೆಳಗಾವಿ ಎಪಿಎಂಸಿ ಠಾಣೆ ಸಿಪಿಐ, ಪಿಎಸ್‌ಐ ಸೇರಿ ಪೊಲೀಸ್ ಸಿಬ್ಬಂದಿ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಪಟಾಕಿ ಕಿಡಿಯಿಂದ ಹೊತ್ತಿ ಉರಿದ ಗುಜರಿ ಅಂಗಡಿ

    ಯುವತಿ ಶೃತಿ ಶೆಟ್ಟಿಯನ್ನು ವಿಚಾರಣೆ ನಡೆಸಿದ ಪರಪ್ಪನ ಅಗ್ರಹಾರ ಪೊಲೀಸರು ಹುಸಿ ಬಾಂಬ್ ಕರೆ ಮಾಡಿರುವ ಕುರಿತು ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. ಈ ವೇಳೆ ಎರಡನೇ ಬಾರಿಗೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳದಿದ್ದಕ್ಕೆ ಕರೆ ಮಾಡಿರುವುದಾಗಿ ಯುವತಿ ಹೇಳಿದ್ದಾಳೆ. ತಾಯಿಯ ಮೊಬೈಲ್‌ನಿಂದ ಇಂದು ಬೆಳಗ್ಗೆ ಕರೆ ಮಾಡಿರುವುದಾಗಿ ಶೃತಿ ಹೇಳಿಕೆ ನೀಡಿದ್ದಾಳೆ. ಬಳಿಕ ಬುಧವಾರ ಪರಪ್ಪನ ಅಗ್ರಹಾರ ಠಾಣೆಗೆ ವಿಚಾರಣೆಗೆ ಆಗಮಿಸುವಂತೆ ಶೃತಿಗೆ ನೋಟಿಸ್ ನೀಡಲಾಗಿದೆ. ಯುವತಿ ಶೃತಿ, ಆಕೆಯ ತಂದೆ-ತಾಯಿಗೆ ಠಾಣೆಗೆ ಬರುವಂತೆ ಪೊಲೀಸರು ನೋಟಿಸ್ ನೀಡಿ ತೆರಳಿದ್ದಾರೆ. ಇದನ್ನೂ ಓದಿ: 1,20,000 ರೂ.ಗೆ ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಟಿಕೆಟ್ ಮಾರಾಟ – ಓರ್ವ ಅರೆಸ್ಟ್

  • ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ –  ಓರ್ವ ವಶಕ್ಕೆ

    ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಓರ್ವ ವಶಕ್ಕೆ

    ಚಿಕ್ಕೋಡಿ: ಉಡುಪಿಯಲ್ಲಿ (Udupi) ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ-ಬೆಳಗಾವಿ ಪೊಲೀಸರು ಮಿಂಚಿನ ಕಾರ್ಯಚರಣೆ ಮಾಡಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ

    ಬೆಳಗಾವಿ (Belagavi) ರಾಯಭಾಗ ತಾಲೂಕಿನ ಕುಡಚಿಯಲ್ಲಿ (Kudachi) ಆರೋಪಿ ಪ್ರವೀಣ್ ಅರುಣ್ ಚೌಗಲೇಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಮೂಲತಃ ಮಹಾರಾಷ್ಟ್ರದ (Maharashtra) ಸಾಂಗ್ಲಿಯವನಾಗಿದ್ದು, ಭಾನುವಾರ ಘಟನೆಯ ಬಳಿಕ ಕುಡಚಿಯ ನೀರಾವರಿ ಇಲಾಖೆ ಅಧಿಕಾರಿ ಸಂಬಂಧಿ ಮನೆಯಲ್ಲಿ ತಲೆಮರೆಸಿಕೊಂಡಿದ್ದ. ಇಂದು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಲು ಮುಂದಾಗಿದ್ದ ವೇಳೆ ಕುಡಚಿ ಪೊಲೀಸರ ಸಹಾಯದಿಂದ ಮಿಂಚಿನ ಕಾರ್ಯಚರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರವೀಣ್ ಮಂಗಳೂರಿನ (Mangaluru) ವಿಮಾನ ನಿಲ್ದಾಣದ ಸಿಆರ್‌ಪಿಎಸ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ – ಒಬ್ಬಳ ಮೇಲಿನ ದ್ವೇಷಕ್ಕೆ ನಾಲ್ವರು ಬಲಿ!

    ಭಾನುವಾರ ಮುಂಜಾನೆ ವ್ಯಕ್ತಿಯೊಬ್ಬ ಉಡುಪಿಯ ನೇಜಾರು ಎಂಬಲ್ಲಿ ಒಂದೇ ಕುಟುಂಬದವರಾದ ತಾಯಿ ಹಸೀನಾ (46), ಮಕ್ಕಳಾದ ಅಫ್ನಾನ್ (23), ಅಯ್ನಝ್ (21), ಆಸಿಂ (12) ಎಂಬವರನ್ನು ಕೊಲೆಗೈದಿದ್ದ. ಹರಿತವಾದ ಆಯುಧಗಳಿಂದ ಇರಿದು ನಾಲ್ವರನ್ನು ಕೊಲೆ ಮಾಡಿದ ಈತ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!

    ಇದನ್ನೂ ಓದಿ: ಪಟಾಕಿ ಕಿಡಿಯಿಂದ ಹೊತ್ತಿ ಉರಿದ ಗುಜರಿ ಅಂಗಡಿ

    ಇದಾದ ಬಳಿಕ ಗಲಾಟೆ ಸದ್ದು ಕೇಳಿ ಪಕ್ಕದ ಮನೆಯ ಯುವತಿ ತನ್ನ ಮನೆಯಿಂದ ಹೊರ ಬಂದಿದ್ದಾಳೆ. ಆಕೆಯನ್ನೂ ಬೆದರಿಸಿ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮನೆಯೊಳಗಿದ್ದ ಹಸೀನಾ ಅತ್ತೆಗೂ ತೀವ್ರವಾದ ಗಾಯಗಳಾಗಿವೆ. ಹಸೀನಾ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದಿದೆ. ಮೊಬೈಲ್‌ ಟವರ್‌ ಲೊಕೇಶನ್‌ ಆಧರಿಸಿ ಪ್ರವೀಣ್‌ನನ್ನು ವಶಕ್ಕೆ ಪಡೆಯಲಾಗಿದೆ.  ಇದನ್ನೂ ಓದಿ: ಬೆಂಕಿ ಹಚ್ಚಿ ಲ್ಯಾಬ್ ಟೆಕ್ನಿಷಿಯನ್ ಹತ್ಯೆ ಪ್ರಕರಣ – ಇಬ್ಬರ ಬಂಧನ

  • ಓದು ಎಂದು ತಾಯಿ ಬುದ್ಧಿ ಹೇಳಿದ್ದಕ್ಕೆ ಮನನೊಂದು ಪುತ್ರ ನೇಣಿಗೆ ಶರಣು

    ಓದು ಎಂದು ತಾಯಿ ಬುದ್ಧಿ ಹೇಳಿದ್ದಕ್ಕೆ ಮನನೊಂದು ಪುತ್ರ ನೇಣಿಗೆ ಶರಣು

    ಬೆಳಗಾವಿ: ಓದಿಕೋ ಎಂದು ತಾಯಿ (Mother) ಬುದ್ಧಿ ಹೇಳಿದಕ್ಕೆ ಮನನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ಪಟ್ಟಣದ ದೇಶಪಾಂಡೆ ಫ್ಲ್ಯಾಟ್‌ನಲ್ಲಿ ನಡೆದಿದೆ.

    ಸಮರ್ಥ ಸುರೇಶ ಭಜಂತ್ರಿ (14) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾದ ಬಾಲಕ. ದೀಪಾವಳಿ ರಜೆ (Deepavali) ಇದೆ ಅಂತ ತಿರುಗಬೇಡ, ಓದಿಕೋ ಎಂದು ತಾಯಿ ಬುದ್ಧಿ ಹೇಳಿದ್ದರು.  ಇದನ್ನೂ ಓದಿ: ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು

     

    ತಾಯಿಯ ಈ ಮಾತಿಗೆ ಮನನೊಂದು ತಮ್ಮ ಮನೆಯ ಬೆಡ್‌ರೂಂನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸಮರ್ಥ ಮೂಡಲಗಿ ಪಟ್ಟಣದ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ. ಈ ಸಂಬಂಧ ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.