Tag: belagavi

  • ಟಿಪ್ಪರ್, ಕಾರಿನ ನಡುವೆ ಭೀಕರ ಅಪಘಾತ ಬಾಲಕಿ ಸೇರಿ ಇಬ್ಬರ ಸಜೀವ ದಹನ

    ಟಿಪ್ಪರ್, ಕಾರಿನ ನಡುವೆ ಭೀಕರ ಅಪಘಾತ ಬಾಲಕಿ ಸೇರಿ ಇಬ್ಬರ ಸಜೀವ ದಹನ

    ಬೆಳಗಾವಿ: ಟಿಪ್ಪರ್ ಹಾಗೂ ಕಾರಿನ (Car) ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಇಬ್ಬರು ಸಜೀವ ದಹನಗೊಂಡ ಘಟನೆ ದೇವಗಿರಿ ಬಂಬರಗಾ ಕ್ರಾಸ್ ಬಳಿ ನಡೆದಿದೆ.

    ಮೃತರನ್ನು ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ್ (24), ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್ (12) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮಹೇಶ್ ಬೆಳ್ಗಾಂವಕರ್ ಮತ್ತು ಸ್ನೇಹಾ ಬೆಳ್ಗಾಂವಕರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಗಾಯಗೊಂಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ತಡರಾತ್ರಿ ಸಂಬಂಧಿಕರ ಮದುವೆ ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸದನದಲ್ಲಿ ವಿಪಕ್ಷಗಳನ್ನು ಕಟ್ಟಿ ಹಾಕಲು ಚರ್ಚೆ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

    ಬಂಬರಗಾ ಕ್ರಾಸ್ ಬಳಿ ಟಿಪ್ಪರ್ ಅಡ್ಡ ಬಂದಿದ್ದು ಕಾರು ಡಿಕ್ಕಿಯಾಗಿದೆ. ಈ ವೇಳೆ ಟಿಪ್ಪರ್‌ನ ಡೀಸೆಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಸ್ನೇಹಾ ಹಾಗೂ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅಪಘಾತ ನಡೆದ ಬಳಿಕ ಟಿಪ್ಪರ್ ಚಾಲಕ ಪೊಲೀಸ್ (Police) ಠಾಣೆಗೆ ಶರಣಾಗಿದ್ದಾನೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರ ಶವವನ್ನ ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಚಾಲಕರ ನಿರ್ಲಕ್ಷ್ಯದಿಂದ 1 ವರ್ಷದಲ್ಲಿ 34 ಮಂದಿ ಸಾವು- ರೂಲ್ಸ್ ಬ್ರೇಕ್‍ನಲ್ಲೂ BMTC ಮೇಲುಗೈ

  • ಸದನದಲ್ಲಿ ವಿಪಕ್ಷಗಳನ್ನು ಕಟ್ಟಿ ಹಾಕಲು ಚರ್ಚೆ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

    ಸದನದಲ್ಲಿ ವಿಪಕ್ಷಗಳನ್ನು ಕಟ್ಟಿ ಹಾಕಲು ಚರ್ಚೆ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

    ಬೆಳಗಾವಿ:  ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ (CLP Meeting) ಬೆಳಗಾವಿ ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ನಡೆಯಿತು.

    ಈ ಸಭೆಯಲ್ಲಿ ಸಭೆಯಲ್ಲಿ ಸದನದಲ್ಲಿ ವಿಪಕ್ಷಗಳನ್ನು ಕಟ್ಟಿಹಾಕುವ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಒಂದೇ ಪೋಸ್ಟ್‌ಗೆ ಇಬ್ಬರ ನೇಮಕ- ಅಧಿಕಾರಿಗಳ ವರ್ಗಾವಣೆ ವೇಳೆ BMTC ಎಡವಟ್ಟು

    ಏನೇನು ಚರ್ಚೆ ನಡೆದಿದೆ?
    ಡಿಕೆಶಿ ಸಿಬಿಐ ಕೇಸ್‌ (DK Shivakumar CBI Case) ವಾಪಸ್‌, ಸಿದ್ದರಾಮಯ್ಯ ಮುಸ್ಲಿಂ ಸಮಾವೇಶದ ಹೇಳಿಕೆ ವಿಚಾರ ಸೇರಿದಂತೆ 4-5 ವಿಚಾರಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಪ್ರಯತ್ನಿಸಬಹುದು. ಅದಕ್ಕೆ ತಕ್ಕಂತೆ ನಮ್ಮ ಕಡೆಯಿಂದಲು ಸಿದ್ದತೆ ಮಾಡಿಕೊಳ್ಳಬೇಕು. ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸದನದಲ್ಲಿ ಇದ್ದು ಬೆಂಬಲಿಸಬೇಕು. ಸೋಮವಾರದಿಂದ ಜಟಾಪಟಿ ಜೋರಾಗಬಹುದು ಎಲ್ಲರೂ ಕಡ್ಡಾಯವಾಗಿ ಹಾಜರಿರುವಂತೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಮಾವುತನೇ ಅನುಮಾನ ವ್ಯಕ್ತಪಡಿಸಿದರೂ ವಿಸ್ತೃತ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ ಯಾಕೆ? – ಅರ್ಜುನ ಸಾವಿನ ಸುತ್ತ ಎದ್ದಿವೆ ಹಲವು ಪ್ರಶ್ನೆಗಳು

    ಸಭೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ವರ್ತನೆ ಬಗ್ಗೆ ಕೆಲವು ಶಾಸಕರ ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ಶಾಸಕರಾದರೂ ಸರ್ಕಾರಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಈ ವರ್ತನೆ ಸರಿಯಲ್ಲ ಎಂದು ಹೇಳಿದ್ದಾರೆ. ಇದಕ್ಕೆ ರಾಯರೆಡ್ಡಿ ಹತ್ತಿರ ನಾನು ಮಾತನಾಡುತ್ತೇನೆ ಎಂದು ಸಿಎಂ ಸಮಾಧಾನ ಮಾಡಿದ್ದಾರೆ. ಶಾಸಕ ಬಿ.ಆರ್.ಪಾಟೀಲ್ (BR Patel) ರಾಜೀನಾಮೆ ನೀಡುವ ಪತ್ರದ ಬಗ್ಗೆಯೂ ಚರ್ಚೆ ನಡೆದಿದೆ.

     

    ಕರ್ನಾಟಕದಿಂದ ರಾಜ್ಯಸಭೆಗೆ (Rajya Sabha) ಸೋನಿಯಾ ಗಾಂಧಿ (Sonia Gandhi) ಅವರನ್ನು ಕರೆತರುವ ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸೋನಿಯಾರನ್ನು ಕರ್ನಾಟಕದಿಂದಲೇ (Karnataka) ರಾಜ್ಯ ಸಭೆಗೆ ಕಳುಹಿಸೋಣ. ಇದರಿಂದ ಪಕ್ಷಕ್ಕೂ ಅನುಕೂಲ ಎಂದು ಶಾಸಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ಬಿಜೆಪಿಯವರಿಗೆ ನನ್ನ ಮೇಲೆ ಅಷ್ಟೊಂದು ದ್ವೇಷವೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಬಿಜೆಪಿಯವರಿಗೆ ನನ್ನ ಮೇಲೆ ಅಷ್ಟೊಂದು ದ್ವೇಷವೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಬೆಳಗಾವಿ: ಬಿಜೆಪಿಯವರಿಗೆ ನನ್ನ ಮೇಲೆ ಅಷ್ಟೊಂದು ದ್ವೇಷವೇ. ದ್ವೇಷ ಇದ್ದರೆ ಚುನಾವಣೆಯಲ್ಲಿ ತೋರಿಸಿ ಎಂದು ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸವಾಲ್ ಹಾಕಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದಲ್ಲಿ ಮಣಿಕಂಠ ರಾಥೋಡ್ ಒಂದು ದೂರು ಕೊಟ್ಟಿದ್ದ. ಆತ ಬಿಜೆಪಿ ಅಭ್ಯರ್ಥಿ. ಚಿತ್ತಾಪುರದಿಂದ ಮಾಲಗತ್ತಿಗೆ ರಾತ್ರಿ 1:30 ಕ್ಕೆ ಹೋಗುವಗ ಹಲ್ಲೆ ಮಾಡಿದ್ರು, ನನ್ನ ಜೊತೆ ಶ್ರೀಕಾಂತ್ ಸುಲೇಗಾವ್, ಮಹೇಶ್ ಗೌಳಿ ಇದ್ರು. ಆಲ್ಟ್ರೋಜ್ ಕಾರಿನ ಮೇಲೆ 8 ರಿಂದ 10 ಜನ ಹಲ್ಲೆ ಮಾಡ್ತಾರೆ ಎಂದು ದೂರು ಕೊಟ್ಟಿದ್ದ. ಅಧಿಕಾರಿಗಳು ಮತ್ತು ರಾಜಕೀಯ ವಿರೋಧಿಗಳು ಹಲ್ಲೆ ಮಾಡ್ತಾರೆ ಎಂದು ದೂರಿದ್ದ. ರಾಥೋಡ್ ಮೇಲೆ ಸಾಕಷ್ಟು ಆರೋಪಗಳಿದ್ವು. ಅಕ್ಕಿ ಕಳ್ಳತನದಲ್ಲಿ 22 ಕೇಸ್ ಇದೆ. ಹಾಲಿನ ಪೌಡರ್ ಕಳ್ಳತನದಲ್ಲಿ 1 ಕೇಸ್ ಇತ್ತು. ಮೂರು ಪ್ರಕರಣಗಳಲ್ಲಿ ಈಗಾಗಲೇ ಆರೋಪ ಸಾಬೀತಾಗಿದೆ. ಅದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಆಗಿರೋದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಇದನ್ನೂ ಓದಿ: ಬೆಳಗ್ಗೆಯಿಂದ ಟೇಕಾಫ್ ಆಗದ ವಿಮಾನ- ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ

    ಇಷ್ಟೆಲ್ಲ ಇವನ ಮೇಲೆ ಕೇಸ್ ಇದ್ರೂ ಬಿಜೆಪಿ ಇವನಿಗೆ ಟಿಕೆಟ್ ನೀಡಿತ್ತು. ಇವನು ದೂರು ಕೊಟ್ಟಾಗ ಇಡೀ ಬಿಜೆಪಿ ಇವನ ಹಿಂದೆ ಇತ್ತು. ಕಲಬುರಗಿಯಲ್ಲಿ ಯಾರೂ ಬಿಜೆಪಿ ಮುಖಂಡರು ಉಳಿದಿಲ್ಲ. ಅಲ್ಲಿಗೆ ಎನ್.ರವಿಕುಮಾರ್ ಒಬ್ಬರು ಮಾತ್ರ ಇದ್ದಾರೆ. ಅವರು ಸಹ ಅವತ್ತು ಅವನಿಗೆ ಏನಾದರೂ ಆದ್ರೆ ಪ್ರಿಯಾಂಕಾ ಖರ್ಗೆ ಹೊಣೆ ಅಂತೆಲ್ಲ ಹೇಳಿದ್ರು. ಬರ ವೀಕ್ಷಣೆಗೆ ಬಂದ ವಿಪಕ್ಷ ನಾಯಕ ಅಶೋಕ್ ಸಹ ಮಾತನಾಡ್ತಾರೆ. ಖರ್ಗೆಯವರನ್ನ ಸಂಪುಟದಿಂದ ವಜಾ ಮಾಡಬೇಕು ಅಂತಾರೆ. ಯಂಗ್ ಅಂಡ್ ಡೈನಾಮಿಕ್ ವಿಜಯೇಂದ್ರ ಪ್ರಿಯಾಂಕಾ ಖರ್ಗೆನೇ ಹಲ್ಲೆ ಮಾಡಿದ್ದು ಎಂದು ಹೇಳಿದ್ದಾರೆ. ಅವರು ಮಾಡಿಸಿದ್ದಾರೆ ಅಂತ ಹೇಳುತ್ತಿಲ್ಲ. ಮಾಡಿದ್ದಾರೆ ಅಂತನೇ ಮೈಸೂರಿನಲ್ಲಿ ಹೇಳಿಕೆ ಕೊಡ್ತಾರೆ. ಅವರು 33 ಕೇಸ್ ಇರುವ ಮಣಿಕಂಠ ಪರ ಮಾತನಾಡ್ತಾರೆ. ಇವತ್ತು ಪೊಲೀಸ್ ರಿಪೋರ್ಟ್ ಕೊಡ್ತಾರೆ. ಚಿತ್ತಾಪುರದಲ್ಲಿ ಅವತ್ತು ಇರಲಿಲ್ಲ ಅವರು. ಇದ್ದದ್ದು ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ನಲ್ಲಿ. ಅಲ್ಲಿ ಎಲ್ಲೋ ಕುಡಿದುಕೊಂಡು ಬಿದ್ದಿರ್ತಾನೆ. ಗುರುಮಿಟ್ಕಲ್‌ನಿಂದ ಕಲಬುರಗಿಗೆ ಬರುವಾಗ ಚಪೇಟ್ಲದಲ್ಲಿ ಮರಕ್ಕೆ ಗುದ್ದಿದ್ದಾರೆ. ಕಾರಿನಲ್ಲಿ ಬರುವಾಗ ಅಪಘಾತವಾಗಿದೆ ಎಂದು ಅಪಘಾತದ ಫೋಟೋ ಪ್ರದರ್ಶನ ಮಾಡಿದರು.

    ಅಪಘಾತವಾಗಿರೋದನ್ನ ತನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ನಾಟಕ ಮಾಡಿದ್ದಾರೆ. ಅಪಘಾತವಾಗಿರುವ ಕಾರನ್ನು ಹೈದರಾಬಾದ್‌ಗೆ ಕಳಿಸುತ್ತಾರೆ. ಹೈದರಾಬಾದ್‌ನ ವರ್ಕ್ಶಾಪ್ ನಲ್ಲಿರುವ ಕಾರಿನ ಫೋಟೋ ಪ್ರದರ್ಶನ ಮಾಡಿದ ಖರ್ಗೆ, ಇದೆಲ್ಲ ನಾನು ಹೇಳುತ್ತಿಲ್ಲ. ಇದು ಫಾರೆನ್ಸಿಕ್ ರಿಪೋರ್ಟ್ ಅವರು ಹೇಳಿದ್ದ ಕಾರಿನಲ್ಲಿ ಒಂದೇ ಒಂದು ತೊಟ್ಟು ರಕ್ತ ಬಿದ್ದಿಲ್ಲ. ಅವರೇ ಕಲ್ಲಿನಲ್ಲಿ ಹೊಡೆದುಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಿಂದ ಸೋನಿಯಾ ಗಾಂಧಿ ಸಂಸತ್ತಿಗೆ! – ಹೈಕಮಾಂಡ್‌ ಮುಂದೆ ಡಿಕೆಶಿ ಪ್ರಸ್ತಾಪ

    ಮಣಿಕಂಠ ಹಾಗೂ ಬಿಜೆಪಿ ನಾಯಕರ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹೊಡುತ್ತೇನೆ. ಇಲ್ಲಿಯವರೆಗೆ ನಾನು ತಾಳಿಕೊಂಡಿದ್ದೇನೆ. ನಮ್ಮ ತಾಳ್ಮೆಯನ್ನ ಪರೀಕ್ಷಿಸಬೇಡಿ. ನಾವು ಸಮಯ ವ್ಯರ್ಥ ಮಾಡುವುದಿಲ್ಲ. ಅಂಬೇಡ್ಕರ್ ಹೋರಾಟ ಕಿಚ್ಚು ನನ್ನಲ್ಲಿದೆ. ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡ್ತೀರಾ? ಇನ್ಮೇಲೆ ಇಂತಹ ಡ್ರಾಮಾಗಳನ್ನ ನಿಲ್ಲಿಸಿ ಎಂದು ಹರಿಹಾಯ್ದರು.

    ಇದೇ ರಾಥೋಡ್ ನನ್ನ ಶೂಟ್ ಮಾಡ್ತೀವಿ ಎಂದಿದ್ದ. ಖರ್ಗೆ ಕುಟುಂಬ ಫಿನಿಶ್ ಮಾಡ್ತೇವೆ ಎಂದಿದ್ದ. ಆಗ ಎಲ್ಲಿ ಹೋಗಿತ್ತು ನಿಮ್ಮ ಮನುಷ್ಯತ್ವ? ಹೇಳಿಕೆ ಕೊಡುವಾಗ ಸರಿಯಾಗಿ ಮಾತನಾಡಿ, ಇಲ್ಲವಾದರೆ ಕೋರ್ಟ್ಗೆ ಹೋಗಬೇಕಾಗುತ್ತೆ. ಬಿಜೆಪಿಯವರಿಗೆ ನನ್ನ ಮೇಲೆ ಅಷ್ಟೊಂದು ದ್ವೇಷವೇ? ದ್ವೇಷ ಇದ್ದರೆ ಚುನಾವಣೆಯಲ್ಲಿ ತೋರಿಸಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸಂತರನ್ನು ಸಮಭಾವದಿಂದ ನೋಡುವವರು ಟೆರರಿಸ್ಟಾ?: ಹೆಚ್‌ಕೆ ಪಾಟೀಲ್

  • ಸಂತರನ್ನು ಸಮಭಾವದಿಂದ ನೋಡುವವರು ಟೆರರಿಸ್ಟಾ?: ಹೆಚ್‌ಕೆ ಪಾಟೀಲ್

    ಸಂತರನ್ನು ಸಮಭಾವದಿಂದ ನೋಡುವವರು ಟೆರರಿಸ್ಟಾ?: ಹೆಚ್‌ಕೆ ಪಾಟೀಲ್

    ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿ ಕಾರ್ಯಕ್ರಮಕ್ಕೆ ಐಸಿಸ್ ನಂಟು ಇದೆ ಎಂದು ಶಾಸಕ ಯತ್ನಾಳ್ (Basangouda Patil Yatnal) ಆರೋಪಕ್ಕೆ ಸಚಿವ ಹೆಚ್‌ಕೆ ಪಾಟೀಲ್ (HK Patil) ಆಕ್ರೋಶ ಹೊರಹಾಕಿದ್ದಾರೆ.

    ಬೆಳಗಾವಿಯ (Belagavi) ಕೊಂಡಸಕೊಪ್ಪದಲ್ಲಿ ಸಚಿವ ಹೆಚ್‌ಕೆ ಪಾಟೀಲ್ ಪ್ರತಿಕ್ರಿಯೆ ನೀಡಿ, ಸಂತ ಸೂಫಿಗಳ ಪ್ರಭಾವಕ್ಕೆ ಒಳಗಾದವರು ಉಗ್ರಗಾಮಿ ಆಗ್ತಾರಾ? ಭ್ರಾತೃತ್ವ ಭಾವನೆ ಬೆಳೆಸಲು ಪ್ರಯತ್ನ ಮಾಡುವವರು, ಸಂತರನ್ನು ಸಮ ಭಾವನೆಯಿಂದ ನೋಡುವವರು, ಟೆರರಿಸ್ಟ್ ಮತ್ತು ಉಗ್ರಗಾಮಿ ಅಂತ ಹೇಳುವುದು ಸರಿಯಲ್ಲ. ತಪ್ಪು ಗ್ರಹಿಕೆ ಮತ್ತು ಮಾಹಿತಿ ಕೊರತೆ ಮೂಲಕ ಹಾಗೆ ಹೇಳುವುದು ಸರಿಯಲ್ಲ ಎಂದರು.

    ಇದೇ ವೇಳೆ ಕೊಂಡಸಕೊಪ್ಪದ ಪ್ರತಿಭಟನೆ ಸ್ಥಳದಲ್ಲಿ ಅಕ್ರಮ ಸಾರಾಯಿ ನಿಷೇಧಕ್ಕೆ ಮಹಿಳೆಯ ಒತ್ತಾಯದ ಬಗ್ಗೆ ಮಾತನಾಡಿ, ಅಕ್ರಮ ಮಾರಾಟದ ಬಗ್ಗೆ ತಕರಾರು ಮಾಡಿದ್ರು. ಆಗ ನಾನು ನೀನು ಹೆಣ್ಣು ಮಗಳಮ್ಮ, ನೀನು ಮದ್ಯ ನಿಷೇಧಕ್ಕೆ ಒತ್ತಾಯ ಮಾಡು. ಕೇವಲ ಅಕ್ರಮ ಮಾರಾಟಕ್ಕೆ ಒತ್ತು ಕೊಡಬೇಡ ಅಂತ ಹೇಳಿದೆ ಎಂದರು. ಇದನ್ನೂ ಓದಿ: ಸಿಎಂ ಐಸಿಸ್‌ ಉಗ್ರನ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ: ಯತ್ನಾಳ್‌

    ರಾಜ್ಯದಲ್ಲಿ ಮದ್ಯ ನಿಷೇಧ ಆಗಬೇಕು, ಅದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ ಆರ್ಥಿಕ ಮೂಲ ಎನಿಸುತ್ತದೆ ಆದರೂ ಅದು ಆಗಬೇಕು. ಅಕ್ರಮ ಮದ್ಯ ಮಾರಾಟ ವಿಚಾರಕ್ಕೆ ಧಾರವಾಡ ಎಸ್‌ಪಿ ಜೊತೆ ಚರ್ಚೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಹಣ ಕೊಡಲು ನಮ್ಮ ಅಭ್ಯಂತರ ಇಲ್ಲ, ಓಲೈಕೆ ಮಾಡ್ತಿರೋದು ಸರಿಯಲ್ಲ: ಬಿಎಸ್‌ವೈ

  • ಕಲಾಪಕ್ಕೆ ಬಾರದ ಸಚಿವ ಜಮೀರ್ – ಪರಿಷತ್‌ನಲ್ಲಿ ಗದ್ದಲ

    ಕಲಾಪಕ್ಕೆ ಬಾರದ ಸಚಿವ ಜಮೀರ್ – ಪರಿಷತ್‌ನಲ್ಲಿ ಗದ್ದಲ

    ಬೆಳಗಾವಿ: ಸಚಿವ ಜಮೀರ್ ಅಹಮದ್ (Zameer Ahmed Khan) ಸದನಕ್ಕೆ ಬಾರದ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಇಂದು ವಿಪಕ್ಷ, ಆಡಳಿತ ಪಕ್ಷಗಳ ನಡುವೆ ದೊಡ್ಡ ಗಲಾಟೆ ನಡೆದಿದೆ.

    ಪ್ರಶ್ನೋತ್ತರ ಅವಧಿ ವೇಳೆ ಜಮೀರ್ ಅಹಮದ್ ಇಲಾಖೆ ಪ್ರಶ್ನೆಗೆ ಬೇರೊಬ್ಬರು ಉತ್ತರ ಕೊಡುತ್ತಿದ್ದರು. ಇದಕ್ಕೆ ಸಭಾಪತಿ ಹೊರಟ್ಟಿ, ಜಮೀರ್‌ಗೆ ಸದನಕ್ಕೆ ಬಂದು ಮುಖ ತೋರಿಸೋಕೆ ಹೇಳಿ ಅಂತ ಸಭಾ ನಾಯಕರಿಗೆ ಸೂಚನೆ ಕೊಟ್ಟರು.

    ಈ ವೇಳೆ ಎದ್ದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಮೀರ್‌ಗೆ ಪೀಠದ ಮೇಲೆ ನಂಬಿಕೆ ಇಲ್ಲ. ಸ್ಪೀಕರ್ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಅಪಮಾನ ಮಾಡಿ ಸದನಕ್ಕೆ ಗೈರಾಗಿದ್ದಾರೆ ಎಂದು ಕಿಡಿಕಾರಿದರು. ಈ ವೇಳೆ ಸಚಿವರು ಪತ್ರ ಬರೆದು ಅನುಮತಿ ಪಡೆದಿದ್ದಾರೆ ಎಂದು ಸಭಾಪತಿ ಹೇಳಿದರು.

    ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರು. ಪೂಜಾರಿ ಮಾತು ಮುಂದುವರಿಸಿ, ಜಮೀರ್ ಪೀಠಕ್ಕೆ ಧರ್ಮದ ಲೇಪ ಹಚ್ಚಿದ್ದಾರೆ. ಏನ್ ಬೇಕಾದ್ರು ಮಾತಾಡಬಹುದು ಅಂತ ಅವರು ಮಾತಾಡೋದು ಸರಿಯಲ್ಲ. ಪೀಠಕ್ಕೆ ಧರ್ಮದ ಲೇಪನ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

    ಈ ವೇಳೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಮಲ್ಕಾಪುರೆ ಮಾತಾಡಿ, ಸದನಕ್ಕೆ ತನ್ನದೇ ಆದ ನಿಯಮ ಇದೆ. ಸಚಿವರು ಯಾಕೆ ಗೈರಾಗಿದ್ದಾರೆ ಹೇಳಬೇಕು, ಸೂಕ್ತ ಕಾರಣ ಬೇಕು. ಜಮೀರ್ ಉದ್ದೇಶ ಪೂರ್ವಕವಾಗಿ ಗೈರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಜಮೀರ್ ಪತ್ರ ಓದುವಂತೆ ವಿಪಕ್ಷ ಹಠ ಹಿಡಿಯಿತು. ಈ ವೇಳೆ ಎದ್ದ ಸಚಿವ ಕೃಷ್ಣ ಭೈರೇಗೌಡ ರೂಲ್ ಬುಕ್ ಓದಿ, ಸಾಮಾನ್ಯವಾಗಿ ಸಚಿವರು ಗೈರು ಹಾಜರಾಗಲು ಅನುಮತಿ ಬೇಕಿಲ್ಲ. It is not required. ನಿಯಮಗಳ ಪ್ರಕಾರ ಹೇಳುವ ಅವಶ್ಯಕತೆ ನನಗೂ ಇರಲಿಲ್ಲ. ವಿಷಯ ತಿಳಿದುಕೊಂಡು ಮಾತಾಡಲಿ ಎಂದು ವಿಪಕ್ಷಗಳಿಗೆ ತಿರುಗೇಟು ಕೊಟ್ಟರು.

    ಸಭಾಪತಿ ಮಾತನಾಡಿ, ಸಭಾಪತಿ ಅನುಮತಿ ಪಡೆದುಕೊಳ್ಳಬೇಕು, ಜಮೀರ್ ಪಡೆದುಕೊಂಡಿದ್ದಾರೆ. ಅವರ ಕಾರಣಗಳು ನನಗೆ ಸಂಬಂಧ ಇಲ್ಲ ಎಂದರು. ಇದಕ್ಕೆ ಪೂಜಾರಿ, ಪೀಠ ಯಾವತ್ತೂ ನಮ್ಮ ರಕ್ಷಣೆಗೆ ಬರಬೇಕು. ಕ್ಯಾಬಿನೆಟ್ ದರ್ಜೆಯ ಮಂತ್ರಿ ಪೀಠಕ್ಕೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲು ನಮಗೆ ಅವಕಾಶ ನೀಡಬೇಕು ಎಂದರು. ಇದಕ್ಕೆ ಸಭಾಪತಿ ಒಪ್ಪಿದರು. ಇದನ್ನೂ ಓದಿ: ರೈತರಿಗೆ ಮಧ್ಯಂತರ ಬರ ಪರಿಹಾರವಾಗಿ 2,000 ರೂ. ಪರಿಹಾರ ನೀಡಲಾಗಿದೆ: ಕೃಷ್ಣಭೈರೇಗೌಡ

    ಬಿಜೆಪಿ ಸದಸ್ಯ ಎನ್ ರವಿಕುಮಾರ್ ಮಾತನಾಡಿ, ಸಚಿವರು ಗೈರು ಹಾಜರಾಗಬಹುದು. ಆದರೆ ಅನುಮಾನದ ಪ್ರಶ್ನೆ ಅಂದರೆ ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ ಅಬ್ಸೆಂಟ್ ಆದರೆ ನಾವು ಪ್ರಶ್ನೆಯೇ ಕೇಳಲ್ಲ. ಜಮೀರ್ ಆಗಿರೋದಕ್ಕೆ ಅನುಮಾನ ಅಂದರು. ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಣ್ಣ ವಿಚಾರಕ್ಕೆ ಚಂಡಿ ಹಿಡಿಯೋದು ಬೇಡ. ಸ್ವಾತಂತ್ರ‍್ಯ ಬಂದಾಗಿನಿಂದ ಅನೇಕ ಜನ ಸಚಿವರು ಸದನಕ್ಕೆ ಬಂದಿರಲಿಲ್ಲ. ಸಣ್ಣ ವಿಚಾರ ಯಾಕೆ ದೊಡ್ಡು ಮಾಡ್ತೀರಾ. ಪ್ರಧಾನಿ ಅವರೇ ಸದನಕ್ಕೆ ಬರಲ್ಲ ಅಂತ ಬಿಜೆಪಿ ಸದಸ್ಯರ ಕಾಲೆಳೆದರು. ಬಳಿಕ ಸಭಾಪತಿಗಳು ಮಧ್ಯೆ ಪ್ರವೇಶ ಮಾಡಿ ಪ್ರಶ್ನೋತ್ತರ ಕಲಾಪ ಶುರು ಮಾಡಿದರು.

  • ಬಿಜೆಪಿ ಅಧಿಕಾರದಲ್ಲಿದ್ದಾಗ ಗುಂಡಿ ಮುಚ್ಚಿ ಅಂತಾ ಹೈಕೋರ್ಟ್‌ ಉಗಿಯುತ್ತಿತ್ತು: ಸಿದ್ದರಾಮಯ್ಯ

    ಬಿಜೆಪಿ ಅಧಿಕಾರದಲ್ಲಿದ್ದಾಗ ಗುಂಡಿ ಮುಚ್ಚಿ ಅಂತಾ ಹೈಕೋರ್ಟ್‌ ಉಗಿಯುತ್ತಿತ್ತು: ಸಿದ್ದರಾಮಯ್ಯ

    ಬೆಳಗಾವಿ: ಬಿಜೆಪಿ (BJP) ಅಧಿಕಾರದಲ್ಲಿದ್ದಾಗ ಗುಂಡಿ ಮುಚ್ಚುವಂತೆ ಹೈಕೋರ್ಟ್‌ ಉಗಿಯುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ಕಿಡಿಕಾರಿದರು.

    ಬೆಳಗಾವಿ (Belagavi) ವಿಮಾನ ನಿಲ್ದಾಣದಲ್ಲಿ ಬ್ರ್ಯಾಂಡ್‌ ಬೆಂಗಳೂರು ವಿಚಾರಕ್ಕೆ ಬಿಜೆಪಿ ವಿರುದ್ದ ಹರಿಹಾಯ್ದ ಸಿಎಂ, ಬಿಜೆಪಿ ಕಾಲದಲ್ಲಿ ಗುಂಡಿ ಮುಚ್ಚುವುದಕ್ಕೆ ಹೈಕೋರ್ಟ್‌ ಛೀಮಾರಿ ಹಾಕಿತ್ತು. ಬಿಜೆಪಿ ಅವರು ಬೆಂಗಳೂರಿಗೆ ಏನು ಮಾಡಿದ್ದಾರೆ? ಗುಂಡಿ ಮುಚ್ಚಲಿಕ್ಕೆ ಆಗಿಲ್ಲ ಅವರಿಗೆ. ಹೈಕೋರ್ಟ್‌ ಅವರ ವಿರುದ್ಧ ಟೀಕೆ ಮಾಡಿತ್ತು. ಬ್ರ್ಯಾಂಡ್‌ ಬೆಂಗಳೂರು (Brand Bengaluru) ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿ ಅವರಿಗಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿಎಂ ಐಸಿಸ್ ಸಂಪರ್ಕಿತ ಮೌಲ್ವಿಗಳ ಸಭೆಗೆ ಹೋಗಿದ್ರೆ ಮಿಲಿಟರಿಗೆ ಮಾಹಿತಿ ಕೊಡಲಿ – ಪ್ರಿಯಾಂಕ್ ಖರ್ಗೆ

    ಸದನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ‌, ಎಲ್ಲರೂ ಹೋಗಿ ತೆಲಂಗಾಣದಲ್ಲಿ ಕೂತಿಲ್ಲ. ಇಬ್ಬರೂ ಮಾತ್ರ ಹೋಗಿದ್ದಾರೆ. ಮುನಿಯಪ್ಪ, ಜಾರ್ಜ್ ಸೇರಿ ಎಲ್ಲ ವಾಪಸ್‌ ಬಂದಿದ್ದಾರೆ. ಸರ್ಕಾರದ ಜೊತೆಗೆ ರಾಜಕೀಯನೂ ಮಾಡಬೇಕಲ್ಲ ಎಂದರು.

    ಒಲೈಕೆ ಭಾಷಣ ಎಂದು ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿ, ನಾನು ಎಲ್ಲ ಸಮುದಾಯಕ್ಕೆ ಕೊಡುತ್ತೇನೆ ಎಂದು ಹೇಳಿದ್ದೆ. ಕುಮಾರಸ್ವಾಮಿ ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಇಬ್ಬರು ಸಿಂಗ್‍ಗಳಿಂದ ರಾಜ್ಯ ಹಾಳು, ದೆಹಲಿಗೆ ಹೋಗೋದು ನಿಶ್ಚಿತ: ಯತ್ನಾಳ್

  • ಹೆಬ್ಬಾಳ್ಕರ್ ಜೊತೆಗಿನ ಹಣಕಾಸು ವಿಚಾರ ಬಹಿರಂಗಗೊಳಿಸ್ತಾರಾ ರಮೇಶ್ ಜಾರಕಿಹೊಳಿ?

    ಹೆಬ್ಬಾಳ್ಕರ್ ಜೊತೆಗಿನ ಹಣಕಾಸು ವಿಚಾರ ಬಹಿರಂಗಗೊಳಿಸ್ತಾರಾ ರಮೇಶ್ ಜಾರಕಿಹೊಳಿ?

    ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಜಾರಕಿಹೊಳಿ ವರ್ಸಸ್ ಹೆಬ್ಬಾಳ್ಕರ್ ಫೈಟ್ ಶುರುವಾದಂತಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ಹಣಕಾಸಿನ ವಿಚಾರವನ್ನು ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi) ಬಹಿರಂಗಪಡಿಸುತ್ತಾರಾ ಎಂಬ ಪ್ರಶ್ನೆಯೊಂದು ಎದ್ದಿದೆ.

    ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಮೇಲೆ ಚನ್ನರಾಜ್ ಹಟ್ಟಿಹೊಳಿ (Channaraja hattiholi) ಹಲ್ಲೆ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಎಫ್‍ಐಆರ್ ಕೂಡ ದಾಖಲಾಗಿದೆ. ಒಂದು ಕಾಲದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಒಂದೇ ಪಕ್ಷದಲ್ಲಿದ್ದ ವೇಳೆ ಪೃಥ್ವಿ ಸಿಂಗ್ ಹಾಗೂ ಎಂಎಲ್‍ಸಿ ಚನ್ನರಾಜ್ ಹಟ್ಟಿಹೊಳಿ ಒಂದಾಗಿ ಎಲ್ಲಾ ಕೆಲಸ ಮಾಡುತ್ತಿದ್ದರು.  ಪೃಥ್ವಿ ಸಿಂಗ್ ಮನೆಯನ್ನು ಲೀಜ್‍ಗೆ ಹಾಕಿಕೊಂಡಿದ್ರು.

    ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದು ಬಿಜೆಪಿ ಸೇರುತ್ತಿದಂತೆ ಇತ್ತ ಆಪ್ತರು ಸಹ ದೂರವಾದರು. ಈ ವೇಳೆ ಲೀಜ್ ಪಡೆದ ಪೃಥ್ವಿ ಸಿಂಗ್‍ನಿಂದ ಹೊರ ಬಂದು ಹಣ ವಾಪಸ್ ನೀಡಲು ಬೇಡಿಕೆಯಿಟ್ಟಿದ್ದರು. ಮನೆ ಒಪ್ಪಂದ ಪತ್ರ ಕೇಳಿದ್ದು ನಿಜವೆಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಹೇಳಿದ್ದಾರೆ. ಹೀಗಾಗಿ ಈ ರೀತಿಯ ಒಪ್ಪಂದಗಳು ಆಪ್ತರ ನಡುವೆ ಎಷ್ಟಾಗಿವೆಂಬ ಚರ್ಚೆ ಸಹ ಅರಂಭವಾಗಿದೆ. ಆದರೆ ರಮೇಶ್ ಜಾರಕಿಹೊಳಿ ಮಾತ್ರ ಈ ಘಟನೆಯಲ್ಲಿ ಲ್ಯಾಂಡ್ ಮಾಫಿಯಾ ಕೆಲಸ ಮಾಡ್ತಿದೆ ಅಂತ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ

    ಬೆಳಗಾವಿ ಪಾರಿಶ್ವಾಡ ಗ್ರಾಮದಲ್ಲಿ ಹೆಂಗಸರು ಗೂಂಡಾಗಿರಿ ಮಾಡುತ್ತಿದ್ದಾರೆ. ಬೆಳಗಾವಿ ಕನಕಪುರ ಆಗ್ತಿದೆಯೆಂದು ಚುನಾವಣೆ ವೇಳೆ ಹೇಳಿದ್ದೆ ಇದೀಗ ಅದು ಸಹ ನಿಜವಾಗಿದೆ. ಹೀಗಾಗಿ ಪೃಥ್ವಿ ಸಿಂಗ್‍ಗೆ ನಿಜ ಸಂಗತಿ ಹೇಳು ಎಂದು ಸೂಚನೆ ಕೊಟ್ಟಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು ನ್ಯಾಯವಾಗಿದ್ದರೆ ನಾವು ಬಂದು ನಿಲ್ಲುತ್ತೇವೆಂದು ರಮೇಶ್ ಜಾರಕಿಹೊಳಿ ಈ ಹೇಳಿಕೆ ಕೊಟ್ಟಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಅಗಲಿದ ಆನೆ ಅರ್ಜುನನಿಗೆ ಹಾಸನ, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಈಶ್ವರ್ ಖಂಡ್ರೆ

    ಅಗಲಿದ ಆನೆ ಅರ್ಜುನನಿಗೆ ಹಾಸನ, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಈಶ್ವರ್ ಖಂಡ್ರೆ

    ಬೆಳಗಾವಿ: ಮದಗಜಗಳ ಕಾದಾಟದಲ್ಲಿ ವೀರಮರಣ ಹೊಂದಿದ ಅರ್ಜುನ (Arjuna) ಆನೆಗೆ (Elephant) ಹಾಸನ (Hassan) ಹಾಗೂ ಮೈಸೂರಿನಲ್ಲಿ (Mysuru) ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.

    ಬೆಳಗಾವಿ (Belagavi) ಸುವರ್ಣ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿಎಂ ಜೊತೆ ಚರ್ಚ ಮಾಡಿದ್ದೇನೆ. ರಾಜ್ಯ, ರಾಷ್ಟ್ರಕ್ಕೆ ಹೆಮ್ಮೆ ತಂದಂತಹ 8 ಬಾರಿ ದಸರಾ ಹಬ್ಬ ಯಶಸ್ಸಿಗೆ ಕಾರಣವಾದಂತಹ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು: ಅಶ್ವಥ್ ನಾರಾಯಣ್

    ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಈಗಲೇ ಹೇಳಲು ಆಗುವುದಿಲ್ಲ. ಇಂತಹ ಕಾರ್ಯಾಚರಣೆಗಳಲ್ಲಿ ಸುಮಾರು ಅರಣ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಪಾಯ ಇದೆ ಎಂದು ತಿಳಿದು ಸಾರ್ವಜನಿಕರ ಆಸ್ತಿ, ಜೀವ ರಕ್ಷಣೆಗೆ ಸೇವೆ ಮಾಡುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಹೀಗೆ ಆಗಿದೆ ಎನ್ನುವುದಕ್ಕಿಂತ ಹೇಗೆ ಆಗಿದೆ ಎಂದು ಪರಿಶೀಲಿಸಲಾಗುವುದು ಈಗಲೇ ಈ ಬಗ್ಗೆ ಹೇಳಲು ಆಗುವುದಿಲ್ಲ. ತನಿಖಾ ವರದಿ ಬಂದ ಮೇಲೆ ಲೋಪದೋಷಗಳಿದ್ದರೆ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ವಿಷಯಗಳ ಬಗ್ಗೆ ತನಿಖಾ ವರದಿ ಬರುತ್ತದೆ ಎಂದರು. ಇದನ್ನೂ ಓದಿ: ನೈಸ್‌ಗೆ ಕೊಟ್ಟಿರುವ ಹೆಚ್ಚುವರಿ 554 ಎಕ್ರೆ ಜಾಗ ವಾಪಸ್‌

    ಪ್ರಜಾಪ್ರಭುತ್ವದಲ್ಲಿ ಲಾಠಿ ಚಾರ್ಜ್ ಆಗಬಾರದು. ಜನರು ಸಂಯಮ ಶಾಂತಿಯಿಂದ ಇರಬೇಕು. ಜನರು ಶಾಂತಿ ಕಾಪಾಡಬೇಕು. ಅರ್ಜುನನ ಅಗಲಿಕೆ ರಾಜ್ಯಕ್ಕೆ ದುಃಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ – ಪೊಲೀಸರಿಂದ ಲಾಠಿ ಪ್ರಹಾರ, ದಿಕ್ಕಾಪಾಲಾಗಿ ಓಡಿದ ಜನ

  • ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ವಿಷಯಗಳು ಚರ್ಚೆಯಾಗಬೇಕು: ಹೆಚ್‌ಡಿಕೆ

    ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ವಿಷಯಗಳು ಚರ್ಚೆಯಾಗಬೇಕು: ಹೆಚ್‌ಡಿಕೆ

    ಬೆಳಗಾವಿ: ಅಧಿವೇಶನದಲ್ಲಿ (Session) ಉತ್ತರ ಕರ್ನಾಟಕ ಭಾಗದ ವಿಷಯಗಳು ಚರ್ಚೆ ಆಗಬೇಕು. ಈ ಭಾಗದ ಸಮಸ್ಯೆಗಳ ಪರಿಹಾರ ಹುಡುಕಲು ಸದನದ ಕಲಾಪ ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಈ ಕುರಿತು ಬೆಳಗಾವಿ (Belagavi) ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ 8 ದಿನಗಳ ಕಾಲ ರಾಜ್ಯದ ಸಮಸ್ಯೆಗಳ ಬಗ್ಗೆ ಗುಣಾತ್ಮಕ ಚರ್ಚೆ ಆಗಬೇಕು ಎಂದರು. ಇನ್ನು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅಧಿವೇಶನಕ್ಕೆ ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರಿಗೆ ರಾಷ್ಟ್ರೀಯ ನಾಯಕರು ಅಲ್ಲಿ ಪ್ರಮುಖ ಜವಾಬ್ದಾರಿಯನ್ನು ನೀಡಿದ್ದಾರೆ. ಜನತೆಯ ಸಂಕಷ್ಟದಲ್ಲಿ ಭಾಗವಹಿಸುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ಕೊಟ್ಟಿದ್ದಾರೆ. ಹೀಗಾಗಿ ಗೈರಾಗಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಬುಧವಾರ ನಡೆಯಬೇಕಿದ್ದ INDIA ಒಕ್ಕೂಟದ ಸಭೆ ಮುಂದೂಡಿಕೆ

    ಸಿಎಂ ಸಿದ್ದರಾಮಯ್ಯ (Siddaramaiah) ಮುಸ್ಲಿಂ ಓಲೈಕೆ ಮಾಡುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಭಾಷಣಗಳೇ ಒಲೈಕೆ ಮಾಡುವ ಭಾಷಣ. ಅದು ಅಭಿವೃದ್ಧಿ ಕಾರ್ಯಕ್ರಮದ ಭಾಷಣ ಅಲ್ಲ. ಒಲೈಕೆ ಭಾಷಣ. ಒಲೈಕೆ ಭಾಷಣದ ಮತ್ತೊಂದು ಸೀರೀಸ್ ರಿಪೀಟ್ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು: ಅಶ್ವಥ್ ನಾರಾಯಣ್

  • ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು: ಅಶ್ವಥ್ ನಾರಾಯಣ್

    ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು: ಅಶ್ವಥ್ ನಾರಾಯಣ್

    ಬೆಳಗಾವಿ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಒಂದೇ ಆಡಳಿತ ಕೊಡಬೇಕು. ಅವರು ಎಲ್ಲಾ ಸಮುದಾಯವನ್ನೂ ಸಮನಾಗಿ ನೋಡಿಕೊಳ್ಳಬೇಕು. ಆದರೆ ರಾಜಕೀಯ ಪ್ರೇರಿತವಾಗಿ ಮುಸ್ಲಿಂ ಸಮುದಾಯಕ್ಕೆ (Muslim  Community) ತುಷ್ಟೀಕರಣ ಮಾಡುತ್ತಾರೆ. ಕಾಂಗ್ರೆಸ್ (Congress) ಪಕ್ಷದವರು ಕೋಮುವಾದಿಗಳು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ (CN Ashwath Narayan) ಹೇಳಿದ್ದಾರೆ.

    ಮುಸ್ಲಿಂ ಸಮುದಾಯಕ್ಕೆ 10,000 ಕೋಟಿ ರೂ. ಖರ್ಚು ಮಾಡಲು ಸಿದ್ಧ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ಸಿಎಂ ಸಮಾನವಾಗಿ ಎಲ್ಲರನ್ನೂ ನೋಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಕೋಮುವಾದಿಗಳಿಂದ ರಾಜ್ಯದಲ್ಲಿ ಅಸ್ವಾಸ್ತ್ಯ ಇದೆ. ಬರಗಾಲ, ರೈತರ ಆತ್ಮಹತ್ಯೆಗೆ ಪರಿಹಾರ ಕೊಡಲು ಆಗುತ್ತಿಲ್ಲ. ಆದರೆ ಈ ರೀತಿಯಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲರಿಗೂ ಕಿವಿಗೆ ಹೂ ಇಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮುಸ್ಲಿಮರನ್ನಷ್ಟೇ ಓಲೈಕೆ ಮಾಡುವುದು ಸರಿಯಲ್ಲ: ಆರ್‌.ಅಶೋಕ್‌

    ಇನ್ನೂ ಆರ್ ಅಶೋಕ್‌ಗಿಂತ (R Ashok) ಬಸನಗೌಡ ಪಾಟೀಲ್‌ಗೆ (Basanagouda Patil Yatnal) ಶಾಸಕರು ಸಾಥ್ ವಿಚಾರವಾಗಿ ಮಾತನಾಡಿದ ಅವರು, ಸಮಸ್ಯೆ ಹೇಳಿಕೊಂಡರೆ ಏನು ತಪ್ಪು? ಅಶೋಕ್‌ಗಿಂತ ಬಸನಗೌಡ ಪಾಟೀಲ್‌ಗೆ ಶಾಸಕರ ಬೆಂಬಲ ಹೆಚ್ಚಿದೆ. ಆದರೆ ಯತ್ನಾಳ್ ಯತ್ನಾಳನೇ, ಆರ್ ಅಶೋಕ್ ಆರ್ ಅಶೋಕನೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡಿಗರಿಗೆ ಫ್ರಂಟ್ ಡೆಸ್ಕ್ ಉದ್ಯೋಗ ಕೊಡಿ: ಜಗ್ಗೇಶ್ ಒತ್ತಾಯ