Tag: belagavi

  • ನಾವೆಲ್ಲ ಕುರ್ಚಿಗಾಗಿ ಹೊಡೆದಾಡ್ತೀವಿ, ನೀವು ಕುರ್ಚಿ ಇದ್ರೂ ಯಾಕೆ ಕೂರಲ್ಲ: ಡಿಕೆಶಿ ಪ್ರಶ್ನೆ

    ನಾವೆಲ್ಲ ಕುರ್ಚಿಗಾಗಿ ಹೊಡೆದಾಡ್ತೀವಿ, ನೀವು ಕುರ್ಚಿ ಇದ್ರೂ ಯಾಕೆ ಕೂರಲ್ಲ: ಡಿಕೆಶಿ ಪ್ರಶ್ನೆ

    ಬೆಳಗಾವಿ: ತಾಲೂಕಿನ ಸುವರ್ಣ ಸೌಧದ ಎದುರಿಗೆ ರೈತರಿಗೆ ಕೃಷಿ ಯಂತ್ರೋಪಕರಣ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಕುರ್ಚಿಗಳ ಮೇಲೆ ಕುಳಿತುಕೊಳ್ಳಲು ಹೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar), ನಾವೆಲ್ಲ ಕುರ್ಚಿಗಾಗಿ ಹೊಡೆದಾಡುತ್ತೇವೆ. ನೀವು ಕುರ್ಚಿ ಇದ್ರೂ ಯಾಕೆ ಕುಳಿತುಕೊಳ್ಳಲ್ಲ ಎಂದು ಕೇಳಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ನಿಮ್ಮನ್ನ ಗುರುತಿಸಿ ಸುವರ್ಣ ಸೌಧದ ಮುಂದೆ ಕರೆಯಿಸಿ ರೈತರಿಗೆ ಸಹಾಯ ಮಾಡ್ತಿದೆ‌. ಇದು ನಿಮ್ಮ ಭಾಗ್ಯ. ನಿಮ್ಮನ್ನ ನೋಡುವುದೂ ನಮ್ಮ ಭಾಗ್ಯ ಆಗಿದೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ- ಸರ್ಕಾರಕ್ಕೆ ತೇಜಸ್ವಿ ಸೂರ್ಯ ಎಚ್ಚರಿಕೆ

    ಪ್ರಜಾಪ್ರಭುತ್ವದಲ್ಲಿ ನಾಲ್ಕು ಆಧಾರ ಸ್ತಂಭ ಮುಖ್ಯವಾಗಿದೆ. ಸಮಾಜದಲ್ಲಿ ಕೃಷಿಕ, ಸೈನಿಕ, ಶಿಕ್ಷಕ, ಕಾರ್ಮಿಕ ಮುಖ್ಯ. ಚಲುವರಾಯಸ್ವಾಮಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ‌. ಅವರಿಗೆ ಅಭಿನಂದನೆಗಳು. ಅವರ ತಂದೆ ಈಗಲೂ ಕೃಷಿಕರಿದ್ದಾರೆ. ರೈತರಿಗೋಸ್ಕರ ಈ ದೇಶದಲ್ಲಿ ದೊಡ್ಡ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಮೂರು ಇಲ್ಲ ಎಂದು ಟೀಕಿಸಿದರು.

    ಎಪಿಎಂಸಿ ಕಾಯ್ದೆ ಮಂಜೂರು ಮಾಡಿದ್ದರು. ಅದನ್ನ ಮೊನ್ನೆ ಹಿಂಪಡೆದಿದ್ದೇವೆ. ನಾವು ರೇಷ್ಮೆ ಬೆಳೆಯುತ್ತೇವೆ. ನಮ್ಮಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುತ್ತೇವೆ. ಉತ್ತರ ಕರ್ನಾಟಕ ಭಾಗದಿಂದಲೂ ರೇಷ್ಮೆ ನಮ್ಮ ಭಾಗಕ್ಕೆ ಬರ್ತಿದೆ. ರೈತರಿಗೆ ಶಕ್ತಿ ಕೊಟ್ಟು ನಮ್ಮ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ ಅಂತಾ ಇಲ್ಲಿಗೆ ಬಂದಿದ್ದೇವೆ. ಪ್ರಜಾಧ್ವನಿ ಯಾತ್ರೆ ಇಲ್ಲಿಂದ ಆರಂಭ ಮಾಡಿದೆವು. 36 ಸಾವಿರ ಕೋಟಿ ಹಣವನ್ನ ಗೃಹ ಲಕ್ಷ್ಮಿಯವರಿಗೆ ನೀಡುತ್ತಿದ್ದೇವೆ. ಐದು ಗ್ಯಾರಂಟಿ ನಮ್ಮ ಐದು ಬೆರಳು, ಒಂದು ಮುಷ್ಠಿ ಇದ್ದ ಹಾಗೆ. ನೀವೆಲ್ಲರೂ ನಮ್ಮ ಕೈ ಹಿಡಿಯಿರಿ ಎಂದು ಕೇಳಿಕೊಂಡರು. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಶೋಕ್, ಅಶ್ವಥ್ ನಾರಾಯಣ್ ಸಮರ್ಥರು – ಸಿಪಿವೈ ಅಚ್ಚರಿ ಹೇಳಿಕೆ

    200 ತಾಲೂಕು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಕುಡಿಯುವ ನೀರಿಗೆ ತೊಂದರೆ ಇದೆ. ಅದನ್ನ ಹೇಗೊ ಮ್ಯಾನೇಜ್ ಮಾಡ್ತಿದ್ದೇವೆ. ನರೇಗಾ ಯೋಜನೆಯಲ್ಲಿ ಐವತ್ತು ದಿನ ಬಂದ್ ಮಾಡಿ ನಿಮಗೆ ಮೋಸ ಮಾಡ್ತಿದ್ದಾರೆ. ಕಳಸಾ ಬಂಡೂರಿ ಯೋಜನೆ ಆಯ್ತು ಅಂತಾ ಅಂದು ಸಂಭ್ರಮಾಚರಣೆ ಮಾಡಿದ್ರೂ. ಆದ್ರೇ ಪರಿಸರ ಇಲಾಖೆಯಿಂದ ಒಂದು ಕ್ಲಿಯರೆನ್ಸ್ ಕೊಡಸ್ತಿಲ್ಲ. ಅದೇನೆ ಆಗಲಿ ಅಂತಾ ಯೋಜನೆಗೆ ನಾವು ಟೆಂಡರ್ ಕರೆದಿದ್ದೇವೆ ಎಂದು ತಿಳಿಸಿದರು.

    ಜಗದೀಶ್ ಶೆಟ್ಟರ್ ಬೈಯ್ಯುವವರು. ಆದರೆ ಈಗ ಎನೂ ಅಂತಿಲ್ಲ. ಇತ್ತ ಪ್ರಹ್ಲಾದ್ ಜೋಶಿ ಅವರು ಅರ್ಧ ಗಂಟೆ ಟೈಮ್ ತಗೊಂಡ್ರೆ ಆಗುತ್ತದೆ. ಆದರೆ ಬಾಯಿ ಬಿಡ್ತಿಲ್ಲ. ನಾವು ನಿಮ್ಮನ್ನ ಕೈ ಹಿಡಿದಿದ್ದೇವೆ. ನೀವು ನಮ್ಮನ್ನ ಕೈ ಹಿಡಿಯಿರಿ ಎಂದರು. ಇದನ್ನೂ ಓದಿ: ದಲಿತ ಸಿಎಂ ಹೇಳಿಕೆ ವಿಚಾರದಲ್ಲಿ ಸಚಿವ ಮಹದೇವಪ್ಪ ಯೂಟರ್ನ್

  • ನಾಸೀರ್ ಹುಸೇನ್‍ರನ್ನು ಆರೋಪಿ ನಂ.4 ಎಂದು ಪರಿಗಣಿಸಿ ಕ್ರಮ ಕೈಗೊಳ್ಳಿ: ವಿಜಯೇಂದ್ರ

    ನಾಸೀರ್ ಹುಸೇನ್‍ರನ್ನು ಆರೋಪಿ ನಂ.4 ಎಂದು ಪರಿಗಣಿಸಿ ಕ್ರಮ ಕೈಗೊಳ್ಳಿ: ವಿಜಯೇಂದ್ರ

    ಬೆಳಗಾವಿ: ಪಾಕ್ ಪರ ಘೋಷಣೆ ಪ್ರಕರಣದಲ್ಲಿ ನಾಸೀರ್ ಹುಸೇನ್ (Syed Naseer Hussain) ಹೆಸರನ್ನು ಪೊಲೀಸರೇ (Police) ಕೈಬಿಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅವರನ್ನು ಆರೋಪಿ ನಂಬರ್ 4 ಎಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಆಗ್ರಹಿಸಿದ್ದಾರೆ.

    ಬೆಳಗಾವಿಯ (Belagavi) ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಿಧಾನಸೌಧದ ಒಳಗೆ ಕೆಲ ದೇಶದ್ರೋಹಿಗಳು ಪಾಕ್ ಪರ ಘೋಷಣೆ ಕೂಗಿದ್ದರು. ಬಿಜೆಪಿಯ ನಿರಂತರ ಹೋರಾಟದ ಪ್ರತಿಫಲವಾಗಿ ಮೂವರು ದೇಶದ್ರೋಹಿಗಳ ಬಂಧನವಾಗಿದೆ. ಈ ಕ್ಷಣಕ್ಕೂ ರಾಜ್ಯ ಸರ್ಕಾರ ಎಫ್‍ಎಸ್‍ಎಲ್ ವರದಿ ಬಿಡುಗಡೆಗೊಳಿಸಿಲ್ಲ. ದೇಶದ್ರೋಹಿಗಳ ಬಂಧನಕ್ಕೆ ಸರ್ಕಾರ ಮೀನಾಮೇಷ ಎಣಿಸುತ್ತಿತ್ತು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ

    ಯಾವ ಕಾರಣಕ್ಕಾಗಿ ಎಫ್‍ಎಸ್‍ಎಲ್ ವರದಿ ಬಹಿರಂಗ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಸರ್ಕಾರ ಉತ್ತರ ನೀಡಬೇಕು. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಬಿಜೆಪಿಯಿಂದ ದೂರು ನೀಡಿದ್ದೇವೆ. ಈ ಪ್ರಕರಣದ ಪಾತ್ರಧಾರಿ, ಸೂತ್ರಧಾರಿಗಳು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

    ಜನಪ್ರತಿನಿಧಿಗಳು ಸಂವಿಧಾನ, ಸಾರ್ವಭೌಮತ್ವ ಎತ್ತಿ ಹಿಡಿಯುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿರುತ್ತಾರೆ. ಪಾಕ್ ಪರ ಘೋಷಣೆ ಪ್ರಕರಣದ ತನಿಖೆ ಮುಗಿಯುವವರೆಗೆ ಪ್ರಮಾಣ ವಚನ ತೆಗೆದುಕೊಳ್ಳಬಾರದು. ಈ ಸಂಬಂಧ ನಾವು ಉಪರಾಷ್ಟ್ರಪತಿಗೆ ಯಾವುದೇ ಕಾರಣಕ್ಕೂ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸದಂತೆ ಪತ್ರ ಬರೆಯುತ್ತೇವೆ. ನೀವು ನಿಜವಾಗಿಯೂ ಪ್ರಾಮಾಣಿಕ, ದೇಶಪ್ರೇಮಿಗಳಾಗಿದ್ದರೆ ಆರೋಪಿಗಳ ಬೆನ್ನಿಗೆ ನಿಲ್ಲಬಾರದು. ಅವರಿಗೆ ಸೂಕ್ತ ಶಿಕ್ಷೆ ಕೊಡಿಸಬೇಕು. ಸರ್ಕಾರವೇ ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ. ಎಫ್‍ಎಸ್‍ಎಲ್ ವರದಿ ಬಹಿರಂಗ ಪಡಿಸಲು ಹಿಂದೇಟು ಹಾಕುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮಂಡ್ಯದ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ ವಿಚಾರವಾಗಿ, ಪಾಕ್ ಪರ ಘೋಷಣೆ ಕೂಗುವ ಯಾರೇ ಆಗಿದ್ದರೂ ಅವರು ದೇಶದ್ರೋಹಿಗಳು. ದೇಶದ್ರೋಹ ವಿಚಾರ ಬಂದಾಗ ಹಿಂದೂ – ಮುಸ್ಲಿಂ, ಪಕ್ಷಗಳು ಅಡ್ಡ ಬರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 24, ಕಾಂಗ್ರೆಸ್‌ ಗೆಲ್ಲಲಿದೆ 4 ಸ್ಥಾನ

  • ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡಲ್ಲ: ಹೆಬ್ಬಾಳ್ಕರ್‌

    ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡಲ್ಲ: ಹೆಬ್ಬಾಳ್ಕರ್‌

    ಬೆಳಗಾವಿ: ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡಲ್ಲ. ನನಗೆ ನಾಸಿರ್‌ ಸಾಬ್‌ ಜಿಂದಾಬಾದ್‌ ಎಂದೇ ನನಗೆ ಕೇಳಿಸಿದೆ ಎಂದು ಹೇಳುವ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತೆ ಸಮರ್ಥಿಸಿಕೊಂಡಿದ್ದಾರೆ.

    ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮೂವರನ್ನು ಬಂಧನ ಮಾಡಿರುವ ಕುರಿತು ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ಮೂವರ ಬಂಧನ ಆಗಿದೆ. ನಾನು ನನ್ನ ಪಿಆರ್ ಕಡೆಯಿಂದ ಮಾಹಿತಿ ಪಡೆದಿದ್ದೇನೆ. ಏನು ಹೇಳಿಕೆ ಕೊಡಬೇಕು ಎಂಬುದರ ಬಗ್ಗೆ ನಾನು ಹೋಮ್ ಮಿನಿಸ್ಟರ್ ಬಳಿ ಮಾತನಾಡುತ್ತೇನೆ ಎಂದರು.

    ಒಂದಂತು ನಿಜ ಯಾರೇ ಆಗಿರಲಿ ನಮ್ಮ ದೇಶ ವಿರುದ್ಧವಾಗಿ ಹೇಳಿದರೆ ಅವರಿಗೆ ಕಠಿಣವಾಗಿ ಕ್ರಮ ಆಗಲೇ ಬೇಕು. ನಾನು ಅದಕ್ಕೆ ಸಹಮತವನ್ನು ವ್ಯಕ್ತಪಡಿಸುತ್ತೇವೆ‌. ಏಕೆಂದರೆ ದೇಶದ್ರೋಹಿಗಳನ್ನು ಅರಗಿಸಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಅನೇಕ ಬಲಿದಾನ ನೀಡಿದ ಪಕ್ಷ ನಮ್ಮದು. ಪಕ್ಷದ ಚೌಕಟ್ಟಿನಲ್ಲಿ ನಾವೆಲ್ಲರೂ ಬದ್ಧರಿದ್ದೇವೆ. ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡುವುದಿಲ್ಲ ಎಂದು ಸಚಿವೆ ಪುಣರುಚ್ಚರಿಸಿದ್ದಾರೆ. ಇದನ್ನೂ ಓದಿ: ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್‌ ಖರ್ಗೆ

    ಆರೋಪಿಗಳ ಪತ್ತೆಗೆ ಭಾರೀ ಕಸರತ್ತು: ಪೊಲೀಸರಿಂದ ವೀಡಿಯೋ ಆಧಾರಗಳನ್ನು ಪಡೆದಿದ್ದ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಆರೋಪಿಗಳ ಪತ್ತೆಗೆ ಭಾರೀ ಕಸರತ್ತು ನಡೆಸಿತ್ತು. 15 ಧ್ವನಿ ಮಾದರಿಗಳನ್ನ ಸಂಗ್ರಹಿಸಿತ್ತು. ಪ್ರತಿಯೊಂದು ಧ್ವನಿಗಳನ್ನು ಆಲಿಸುವ ಮೂಲಕ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿತ್ತು. ಕೊನೆಗೆ 15 ಜನರಲ್ಲಿ ಮೂವರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬುದನ್ನು ವರದಿಯಲ್ಲಿ ದೃಢಪಡಿಸಿತು. ಈ ಬೆನ್ನಲ್ಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

  • ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು – ಐಸಿಯುನಲ್ಲಿ ಚಿಕಿತ್ಸೆ

    ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು – ಐಸಿಯುನಲ್ಲಿ ಚಿಕಿತ್ಸೆ

    ಬೆಳಗಾವಿ: ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಆರೋಗ್ಯ ಏರು ಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮಿದುಳಿನ ರಕ್ತಸ್ರಾವದ ಹಿನ್ನೆಲೆಯಲ್ಲಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ (KLE Hospital) ಮಜಿ ಕೇಂದ್ರ ಸಚಿವ ದಾಖಲಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ – ಪ್ರತೀ ಕ್ಷೇತ್ರಕ್ಕೆ ತಲಾ 10 ಕೋಟಿ ಬಿಡುಗಡೆ: ಡಿಕೆಶಿ

     

    ಜಿಗಜಿಣಗಿ ಆರೋಗ್ಯ ಚಿಂತಾಜನಕವಾಗಿದ್ದು, ವೈದ್ಯರು ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

  • ಬೆಳಗಾವಿಯಲ್ಲಿ ಮತ್ತೊಂದು ಘಟನೆ- ಮಹಿಳೆಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ಆರೋಪ

    ಬೆಳಗಾವಿಯಲ್ಲಿ ಮತ್ತೊಂದು ಘಟನೆ- ಮಹಿಳೆಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ಆರೋಪ

    ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಮಹಿಳೆಯನ್ನು ವಿವಸ್ತ್ರಗೊಳಿಸುವ ಜೊತೆಗೆ ಆಕೆಯ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಬೆಳಗಾವಿ (Belagavi) ಜಿಲ್ಲೆಯ ಕಾಗವಾಡದ ಐನಾಪುರ ಗ್ರಾಮದಲ್ಲಿ ಒತ್ತುವರಿ ಪ್ರಶ್ನಿಸಿದ ಬಡ ಕುಟುಂಬದ ಮೇಲೆ ದೌರ್ಜನ್ಯ ಎಸಗಲಾಗಿದೆ. ರಾಮಪ್ಪಗೆ ಎಂಬವರಿಗೆ 1991ರಲ್ಲಿ ಸರ್ಕಾರ 3 ಎಕರೆ ಜಮೀನು ನೀಡಿತ್ತು. ಆ ಬಳಿಕದಿಂದ ರಾಮಪ್ಪ ಇದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಕೆಲ ದಿನಗಳ ಬಳಿಕ ರಾಮಪ್ಪಗೆ ಸೇರಿದ ಜಮೀನಿನ 20 ಗುಂಟೆಯನ್ನು ಒತ್ತುವರಿ ಮಾಡಿದ್ದಾರೆ. ಐನಾಪುರದ ಸುಭಾಷ್ ದಾನೊಳ್ಳಿ, ಸುರೇಶ ದಾನೊಳ್ಳಿ, ಮಾಯಪ್ಪ ಹಳ್ಯಾಳ ವಿರುದ್ಧ ಒತ್ತುವರಿ ಆರೋಪ ಕೇಳಿಬಂದಿದೆ.

    ನಮಗೆ ರಾಜಕೀಯ ನಾಯಕರ ಸಂಪರ್ಕ ಇದೆ ಎಂದು ಹೇಳಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಜಮೀನು ಜೊತೆ ರಸ್ತೆಗೆ ಮೀಸಲಿಟ್ಟ ಜಾಗವೂ ಒತ್ತುವರಿ ಮಾಡಿದ್ದಾರೆ. ಈ ಒತ್ತುವರಿ ಪ್ರಶ್ನಿಸಲು ಹೋಗಿದ್ದ ಪತ್ನಿ ಜಯಶ್ರೀ ಜೊತೆಗೆ ಅಸಭ್ಯ ವರ್ತನೆ ತೋರಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸುವ ಜೊತೆಗೆ ವಿವಸ್ತ್ರಗೊಳಿಸಿ ವಿಕೃತಿ ಮೆರೆಯುವುದರ ಜೊತೆಗೆ ಪುತ್ರ ಮುರಾರಿ ಮೇಲೂ ಮಾರಣಾಂತಿಕ ಹಲ್ಲೆಗೈದಿರುವ ಆರೋಪವನ್ನು ರಾಮಪ್ಪ ಮಾಡಿದ್ದಾರೆ. ಇದನ್ನೂ ಓದಿ: ಪಶುಸಂಗೋಪನಾ ಇಲಾಖೆಯ 2 ಎಕರೆ ಜಮೀನು ಅಲ್ಪಸಂಖ್ಯಾತರಿಗೆ – ಸರ್ಕಾರದ ನಡೆಗೆ ವಿರೋಧ

    ಈ ಹಿಂದೆಯೂ ನಡೆದಿತ್ತು ಇಂಥದ್ದೇ ಘಟನೆ: ಎರಡು ತಿಂಗಳ ಹಿಂದೆಯಷ್ಟೇ ಇಂಥದ್ದೇ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿತ್ತು. ಅದುಕೂಡ ಜಮೀನು ವಿಚಾರವಾಗಿತ್ತು. ಜಮೀನು ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಮಹಿಳೆಯ ಮಾವ ಜಮೀನಿನಲ್ಲಿ ಮೇವಿನ ಬಣವಿ ಒಟ್ಟಲು ನೀಡಿದ್ದರು. 6 ಎಕರೆ ಭೂಮಿ ಆಕೆಯ ಮಾವನ ಹೆಸರಿನಲ್ಲಿತ್ತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಈ ಜಮೀನು ಹೊಂದಿದ್ದರು. ಮಹಿಳೆಯನ್ನು ಆರೋಪಿಗಳೆಲ್ಲ ಸೇರಿ ಹೊಡೆದು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು.

  • ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ

    ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ

    – ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಡಿಹೊಗಳಿದ ವಿದೇಶಾಂಗ ಸಚಿವ

    ಚಿಕ್ಕೋಡಿ: ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ (Narendra Modi) ದೇಶಕ್ಕೆ ಬಲಿಷ್ಠ ಬುನಾದಿ ಹಾಕಿದ್ದಾರೆ. ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೂ ರಕ್ಷಣೆ ಸಿಗ್ತಿದೆ ಎಂದು ಭಾರತೀಯ ವಿದೇಶಾಂಗ ಸಚಿವ ಡಾ.ಎಸ್‌ ಜೈಶಂಕರ್ (S Jaishankar) ಶ್ಲಾಘಿಸಿದರು.

    ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಖಾಸಗಿ ಶಾಲೆಯ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆಲವೇ ವರ್ಷಗಳಲ್ಲಿ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶ: 15 ಬಿಜೆಪಿ ಶಾಸಕರ ಅಮಾನತುಗೊಳಿಸಿದ ಸ್ಪೀಕರ್‌ 

    ಭಾರತದ ಪ್ರಜೆಗಳಿಗೆ ಪ್ರಧಾನಿ ಮೋದಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಮುದ್ರಾ, ಉಜ್ವಲಾ ಯೋಜನೆ ವಿತರಣೆ ಸೇರಿದಂತೆ ಅನೇಕ ಯೋಜನೆಗಳನ್ನ ನೀಡಿದ್ದಾರೆ. ಭಾರತದಲ್ಲಿ ಡಿಜಿಟಲ್ ಇಂಡಿಯಾ ಅನ್ನೋದು ಬಹಳ ಪ್ರಭಾವ ಬೀರಿದೆ. ಅಮೆರಿಕಕ್ಕಿಂತಲೂ ಭಾರತದಲ್ಲಿ ಡಿಜಿಟಲ್ ಹೆಚ್ಚು ಉಪಯೋಗವಾಗ್ತಿದೆ. ಕೋವಿಡ್‌ ಬಂದಾಗ ಭಾರತ ನಷ್ಟ ಅನುಭವಿಸಲಿದೆ ಎಂದು ಪಾಶ್ಚಿಮಾತ್ಯ ದೇಶಗಳು ಟೀಕಿಸಿದ್ದವು. ವಾಕ್ಸಿನ್ ಅಂತೂ ಬಹಳ ಕಷ್ಟದ ಮಾತಾಗಿತ್ತು. ಆದ್ರೆ ಭಾರತ ತನ್ನ ಪ್ರತಿಯೊಬ್ಬ ಪ್ರಜೆಗೂ ವ್ಯಾಕ್ಸಿನ್ ನೀಡುವಲ್ಲಿ ಯಶಸ್ವಿಯಾಯ್ತು. ಇಂದು ಭಾರತದ ಪ್ರಗತಿ ಹಾಗೂ ಉನ್ನತಿ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಡಿಹೊಗಳಿದರು.

    ಶಿಕ್ಷಣದಿಂದ ಮಾತ್ರ ಒಂದು ದೇಶ ಬಹಳ ಉನ್ನತಿ ಹೊಂದಲು ಸಾಧ್ಯ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ನೀಡಿದೆ. ಪ್ರತಿದಿನ ಭಾರತದಲ್ಲಿ 30 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತೆ. ವಾರಕ್ಕೊಂದರಂತೆ ಭಾರತದಲ್ಲಿ ಹೊಸ ವಿಶ್ವವಿದ್ಯಾಲಯ ಪ್ರಾರಂಭವಾಗ್ತಿದೆ‌. ಇವೆಲ್ಲವೂ ಸರ್ಕಾರ ಮಾಡಲೇಬೇಕಾದ ಕೆಲಸಗಳು. ಮುಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್‌ ಆಗಲಿದೆ. ಈಗಾಗಲೇ ಕೃತಕ ಬುದ್ಧಿಮತ್ತೆ ತಾಂತ್ರಿಕತೆ, ಎಲೆಕ್ಟ್ರಿಕಲ್‌ ವಾಹನ ಈ ಜನರೇಷನ್‌ನ ನಾಡಿಮಿಡಿತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    ಭಾರತದಲ್ಲಿ ಮೊದಲು 77 ಪಾಸ್‌ಪೋರ್ಟ್ ಕೇಂದ್ರಗಳಿದ್ದವು. ಈಗ 575 ಪಾಸ್‌ಪೋರ್ಟ್ ಕೇಂದ್ರಗಳಿವೆ. ಕೋಟ್ಯಂತರ ಜನರು ವಿದೇಶಗಳಲ್ಲಿ ನೆಲೆಸಿದ್ದಾರೆ‌. ಅವರೆಲ್ಲರನ್ನು ವಂದೇ ಭಾರತ ಎಂಬ ವೇದಿಕೆಯಡಿಯಲ್ಲಿ ಒಗ್ಗೂಡಿಸಲಾಗಿದೆ. ವಿದೇಶಗಳಲ್ಲಿ ಅನೇಕ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದೇಶಗಳಲ್ಲಿ ನೆಲೆಸುವ ಪ್ರತಿಯೊಬ್ಬ ಭಾರತೀಯನನ್ನ ಕಾಪಾಡುವುದು ನಮ್ಮ ಕರ್ತವ್ಯ. ಪ್ರಧಾನಿ ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೂ ರಕ್ಷಣೆ ಸಿಗ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಿಳೆಯರು ಏನನ್ನು ಧರಿಸಬೇಕು ಅನ್ನೋದು ಅವರ ವೈಯಕ್ತಿಕ ವಿಚಾರ – ಹಿಜಬ್‌ ಬಗ್ಗೆ ಕೇಳಿದ್ದಕ್ಕೆ ರಾಹುಲ್‌ ಉತ್ತರ

  • ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕ ಕಡೆ ಅಪಘಾತ; 8 ಮಂದಿ ದುರ್ಮರಣ

    ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕ ಕಡೆ ಅಪಘಾತ; 8 ಮಂದಿ ದುರ್ಮರಣ

    ಬೆಳಗಾವಿ: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಡೆ ಸಂಭವಿಸಿದ ಭೀಕರ ಅಪಘಾತಗಳಲ್ಲಿ 8 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಮೂವರು ಹಾಗೂ ಮುಗಳಖೋಡ ಕಾಲುವೆ ಬಳಿ ಕಾರು-ಬೈಕ್‌ ನಡುವೆ ಅಪಘಾತವಾಗಿ 5 ಮಂದಿ ಮೃತಪಟ್ಟಿದ್ದಾರೆ.

    ಕುರಬಗಟ್ಟಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಮುತ್ತು ಸತ್ಯಪ್ಪ ನಾಯ್ಕ (8), ಗೋಪಾಲ ಸತ್ಯಪ್ಪ ನಾಯ್ಕ (45), ಧಾರವಾಡ ಮೂಲದ ಅನ್ನಪೂರ್ಣ ಬಾಳೇಶ ಶಿರೋಳ (53) ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ದುಬೈನಲ್ಲಿ ಏರ್‌ಪೋರ್ಟ್ ಅಧಿಕಾರಿಯಾಗಿದ್ದ ಮಂಗಳೂರು ಯುವತಿ ಅಪಘಾತದಲ್ಲಿ ಸಾವು

    ಸ್ವಿಫ್ಟ್‌ ಮತ್ತು ಅಲ್ಟೋ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಸ್ವಿಫ್ಟ್‌ ಕಾರಿನಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.

    ರಾಯಬಾಗ ತಾಲೂಕಿನ ಮುಗಳಖೋಡ ಕಾಲುವೆ ಬಳಿ ಬೈಕ್‌ ಮತ್ತು ಕಾರಿನ ಮಧ್ಯೆ ಸಂಭವಿಸಿದ ಮತ್ತೊಂದು ಅಪಘಾತಕ್ಕೆ ಐವರು ಬಲಿಯಾಗಿದ್ದಾರೆ. ಕಾರು ಮೊದಲು ಬೈಕ್ ಸವಾರನಿಗೆ ಗುದ್ದಿ ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹಾರೂಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಳೆ ವ್ಯಾಪಾರಿಗಳ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ

    ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಲ್ಲಿಕಾರ್ಜುನ್ ಮರಾಠೆ (16) ,ಲಕ್ಷ್ಮೀ ಮರಾಠೆ (19), ಆಕಾಶ ಮರಾಠೆ (14) ಹಾಗೂ ಕಾರ ಚಾಲಕ ಶ್ರೀಕಾಂತ ಪಡತರಿ (22) ಮೃತಪಟ್ಟಿದ್ದಾರೆ. ಬೈಕ್ ಸವಾರ ನಾಗಪ್ಪ ಯಡವನ್ನವರ್ (48) ಕೂಡ ಅಪಘಾತಕ್ಕೆ ಬಲಿಯಾಗಿದ್ದಾರೆ.

  • 6 ವರ್ಷ ಪ್ರೀತಿಸಿ ಕೈಕೊಟ್ಟ, ಸಪ್ತಪದಿ ತುಳಿದವನೂ ಬೇಡವೆಂದ- ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಕಂಗಾಲು

    6 ವರ್ಷ ಪ್ರೀತಿಸಿ ಕೈಕೊಟ್ಟ, ಸಪ್ತಪದಿ ತುಳಿದವನೂ ಬೇಡವೆಂದ- ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಕಂಗಾಲು

    ಬೆಳಗಾವಿ: ಪ್ರೀತಿಸಿ ಕೈಕೊಡುವುದರ ಜೊತೆಗೆ ಮದುವೆ ಮುರಿದ ಪಾಗಲ್ ಪ್ರೇಮಿ ಈಗ ಎಸ್ಕೇಪ್ ಆಗಿದ್ದಾನೆ. ಯುವಕನ ಹುಚ್ಚಾಟಕ್ಕೆ ಕುಟುಂಬಸ್ಥರು, ಸ್ಥಳೀಯರು ಯುವತಿಯ ಬೆನ್ನಿಗೆ ನಿಂತಿದ್ದು ಯುವತಿ ಪಾಗಲ್ ಪ್ರೇಮಿಯ ಮನೆ ಮುಂದೆ ನ್ಯಾಯಕ್ಕಾಗಿ ಇಡೀ ರಾತ್ರಿ ಪ್ರತಿಭಟನೆಗೆ ಕುಳಿತಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಲವ್ ಸೆಕ್ಸ್ ದೋಖಾ ಪ್ರಕರಣ ನಡೆದಿದೆ. ಕಿತ್ತೂರು ಪಟ್ಟಣದ ನೇಕಾರ ಕಾಲೋನಿ ನಿವಾಸಿ ಮುತ್ತುರಾಜ್ ಇಟಗಿ ಎಂಬಾತ ಯುವತಿ ಬಾಳು ಹಾಳು ಮಾಡಿದವ. ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಯುವಕನೂ ಕೈಕೊಟ್ಟ, ಸಪ್ತಪದಿ ತುಳಿದ ಗಂಡನೂ ನೀ ನನಗೆ ಬೇಡ ಎಂದಿದ್ದು ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿಯ ಕುಟುಂಬ ಬೀದಿಗೆ ಬಂದಿದೆ. ಇದನ್ನೂ ಓದಿ: ರಾಮ ಭಕ್ತರಿದ್ದ ರೈಲಿಗೆ ಬೆದರಿಕೆ – ಬಂಧಿತ ವ್ಯಕ್ತಿ ಸಿ ಗ್ರೂಪ್‌ ನೌಕರ

    ಏನಿದು ಪ್ರಕರಣ?: ಕಳೆದ ಆರು ವರ್ಷಗಳಿಂದ ತಮ್ಮ ಮನೆಯ ಪಕ್ಕದ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ ಮುತ್ತುರಾಜ್ ಮದುವೆ ಆಗುವುದಾಗಿ ನಂಬಿಸಿ ಆಕೆಯ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದನು. ಸಾಲದೆಂಬಂತೆ ಇಬ್ಬರ ಖಾಸಗಿ ವೀಡಿಯೋ, ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದನು. ಆರು ವರ್ಷಗಳ ಕಾಲ ಯುವತಿ ಜೊತೆಗೆ ಸುತ್ತಾಡಿ ಕುಟುಂಬಸ್ಥರು ಮದುವೆಗೆ ಒಪ್ಪುತ್ತಿಲ್ಲ. ನೀನು ಬೇರೆ ಮದುವೆ ಆಗು ಎಂದು ದಿಢೀರ್ ಮದುವೆ ಆಗಲ್ಲವೆಂದು ಕೈ ಎತ್ತಿದ್ದಾನೆ. ಬಳಿಕ ಪೋಷಕರು ತೋರಿಸಿದ್ದ ವರನ ಜೊತೆಗೆ ಕೆಲ ದಿನಗಳ ಹಿಂದಷ್ಟೇ ಖಾನಾಪುರ ತಾಲೂಕಿನ ಯುವಕನ ಜೊತೆಗೆ ಯುವತಿಯ ವಿವಾಹ ಆಗಿತ್ತು.

    ಮದುವೆಯ ಮರುದಿನವೇ ತವರುಮನೆಗೆ: ಸಾಲಸೋಲ ಮಾಡಿದ ಪೋಷಕರು, ಪುತ್ರಿಯ ಮದುವೆ ಮಾಡಿಕೊಟ್ಟಿದ್ದರು.ಮದುವೆ ಆದ ಮೊದಲ ದಿನವೇ ವರನ ಮನೆಯಲ್ಲಿ ಪಾಗಲ್ ಪ್ರೇಮಿಯ ಹೈಡ್ರಾಮಾ ಮಾಡಿದ್ದು, ಗಂಡನ ಮನೆಗೆ ಹೋಗಿ ವರನ ಸಂಬಂಧಿಗೆ ಯುವತಿ ಜೊತೆಗಿನ ಖಾಸಗಿ ವೀಡಿಯೋ ಶೇರ್ ಮಾಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಯುವತಿ ಪೋಷಕರ ಜೊತೆಗೆ ವರನ ಪೋಷಕರು ವಾಗ್ವಾದ ನಡೆಸಿದ್ದಾರೆ. ಮದುವೆ ಆದ ಮೊದಲ ದಿನವೇ ನೀ ನನಗೆ ಬೇಡವೆಂದು ತವರು ಮನೆಗೆ ವಧುವನ್ನ ಕಳುಹಿಸಿದ್ದಾರೆ. ತಮ್ಮದೇ ನೂತನ ಮನೆಯ ಗೃಹ ಪ್ರವೇಶ ಇದ್ದರೂ ಗೈರಾಗಿ ಎಸ್ಕೆಪ್ ಆಗಿದ್ದಾನೆ‌‌. ಇನ್ನು ನ್ಯಾಯ ಕೊಡಿಸುವಂತೆ ಎರಡ್ಮೂರು ಸಲ ಕಿತ್ತೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಕಿತ್ತೂರು ಪಿಎಸ್ ಐ ಸಕಾರಾತ್ಮಕ ಸ್ಪಂದನೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

    ಪ್ರಿಯಕರನ ಮನೆ ಮುಂದೆ ಧರಣಿ: ಜೀವನ ಹಾಳು ಮಾಡಿದ ಪಾಗಲ್ ಪ್ರೇಮಿ ಮುತ್ತುರಾಜ್ ಮನೆ ಎದುರು ಯುವತಿ ಪ್ರತಿಭಟನೆಗೆ ಮುಂದಾಗಿದ್ದು, ಯುವತಿ ಮನೆ ಎದುರು ಬರುತ್ತಿದ್ದಂತೆಯೇ‌ ಮುತ್ತುರಾಜ್‌ನ ಸಹೋದರಿಯರು ಬಾಗಿಲು ಹಾಕಿಕೊಂಡು ಒಳಗೆ ಕುಳಿತುಕೊಂಡಿದ್ದಾರೆ. ಈ ವೇಳೆ ಮುತ್ತುರಾಜ್ ಪೋಷಕರು, ಸಹೋದರಿಯರ ವಿರುದ್ಧ ಯುವತಿ ಪೋಷಕರ ಆಕ್ರೋಶ ವ್ಯಕ್ತಪಡಿಸಿದರು. ಉಭಯ ಕುಟುಂಬಸ್ಥರ ಮಧ್ಯೆ ಕೆಲಹೊತ್ತು ವಾಗ್ವಾದ ನಡೆದಿದ್ದು, ಹೊಸ ಮನೆಯಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಪೋಷಕರು ಮನೆ ಒಳಗಿದ್ದರೆ, ಇತ್ತ ರಾತ್ರಿಯಿಡಿ ಮನೆ ಮುಂದೆಯೇ ಯುವತಿ ಹಾಗೂ ತಾಯಿ ಕುಳಿತು ಪ್ರತಿಭಟಿಸಿದರು. ನಮ್ಮ ಪುತ್ರಿಯನ್ನು ಮದುವೆ ಮಾಡಿಕೊಂಡು ಬಾಳು ಕೊಡುವಂತೆ ಮುತ್ತುರಾಜ್‌ಗೆ ಯುವತಿಯ ಪೋಷಕರು ಆಗ್ರಹಿಸಿದರು.

  • ಕರ್ನಾಟಕದಲ್ಲಿ ಕನ್ನಡ ಕಡ್ಡಾಯಕ್ಕೂ ಕ್ಯಾತೆ – ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮಹಾರಾಷ್ಟ್ರ ಸರ್ಕಾರ ತೀರ್ಮಾನ

    ಕರ್ನಾಟಕದಲ್ಲಿ ಕನ್ನಡ ಕಡ್ಡಾಯಕ್ಕೂ ಕ್ಯಾತೆ – ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮಹಾರಾಷ್ಟ್ರ ಸರ್ಕಾರ ತೀರ್ಮಾನ

    ಮುಂಬೈ/ಬೆಳಗಾವಿ: ಕನ್ನಡ ನಾಮಫಲಕ (Kannada Nameplate) ವಿಚಾರವಾಗಿ ಕರ್ನಾಟಕದೊಂದಿಗೆ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಕ್ಯಾತೆಗೆ ಮುಂದಾಗಿದೆ.

    ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಪ್ರಶ್ನಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸರ್ಕಾರ ಸಜ್ಜಾಗ್ತಿದೆ. ಇದನ್ನೂ ಓದಿ: Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?

    ವಿಧಾನ ಪರಿಷತ್‌ನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ ಅಂಗೀಕರಿಸಿದ ಮರುದಿನವೇ ಅಂದ್ರೆ ಮುಂಬೈನಲ್ಲಿ ಸಭೆ ನಡೆಸಿದ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ, ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.

    ಇದಕ್ಕೆ ಕನ್ನಡ ಸಂಸ್ಕೃತಿ ಸಚಿವರು ಪ್ರತಿಕ್ರಿಯಿಸಿ, ನಾವೇನು ಮಹಾರಾಷ್ಟ್ರದಲ್ಲಿ (Maharashtra) ಕನ್ನಡ ಬೋರ್ಡ್ ಹಾಕಿ ಅಂತಾ ಹೇಳಿಲ್ವಲ್ಲ ಎಂದಿದ್ದಾರೆ. ಮಹಾರಾಷ್ಟ್ರದವರು ಏನೇ ಕ್ಯಾತೆ ತೆಗೆದರೂ, ನಾಡು ನುಡಿ ಜಲದ ವಿಚಾರದಲ್ಲಿ ರಾಜೀ ಇಲ್ಲ, ನಮ್ಮ ರಾಜ್ಯದ ತಂಟೆಗೆ ಬಂದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: IPL ಸ್ಟಾರ್‌ ಜೊತೆ ಗೆಳೆತನ ಹೊಂದಿದ್ದ ರೂಪದರ್ಶಿ ನಿಗೂಢ ಸಾವು – ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!

    ಇನ್ನೂ, ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ ತಕ್ಷಣವೇ ನಾಮಫಲಕದಲ್ಲಿ ಕನ್ನಡ ಕಡ್ಡಾಯ ನಿಯಮವನ್ನು ಬೆಂಗಳೂರಲ್ಲಿ ಜಾರಿ ಮಾಡುವಂತೆ ಬಿಬಿಎಂಪಿಗೆ ಶಿವರಾಜ್ ತಂಗಡಗಿ ಸೂಚಿಸಿದ್ದಾರೆ. ಇದನ್ನೂ ಓದಿ: 40,000 ರೈಲು ಬೋಗಿಗಳಿಗೆ ಸಿಗಲಿದೆ ವಂದೇ ಭಾರತ್‌ನಂತೆ ಹೈಟೆಕ್‌ ಸ್ಪರ್ಶ – ಏನೆಲ್ಲಾ ವಿಶೇಷತೆ ಇರಲಿದೆ?  

  • ಮದುವೆ ಮುಗಿಸಿ ಬರುತ್ತಿದ್ದ ಕಾರು ಮರಕ್ಕೆ ಡಿಕ್ಕಿ – 6 ಮಂದಿ ದುರ್ಮರಣ

    ಮದುವೆ ಮುಗಿಸಿ ಬರುತ್ತಿದ್ದ ಕಾರು ಮರಕ್ಕೆ ಡಿಕ್ಕಿ – 6 ಮಂದಿ ದುರ್ಮರಣ

    ಬೆಳಗಾವಿ: ಮರಕ್ಕೆ (Tree) ಕಾರು (Car) ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ನಡೆದಿದೆ.

    ಮಹರಾಷ್ಟ್ರ (Maharashtra) ಪಾಸಿಂಗ್ ಇರುವ ಸ್ವಿಫ್ಟ್ (Swift) ಕಾರು ಮದುವೆ ಮುಗಿಸಿ ಮರಳುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಿರಂತರ ಅತ್ಯಾಚಾರದಿಂದ ಅಪ್ರಾಪ್ತೆ ಪ್ರೆಗ್ನೆಂಟ್- ವೃದ್ಧ ಅರೆಸ್ಟ್

    ಒಂದೇ ಕಾರಿನಲ್ಲಿ ಒಂಬತ್ತು ಜನ ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭಿಸಿದೆ. ಮೃತರು ಧಾರವಾಡ (Dharwad) ನಗರ ಮೂಲದವರಾಗಿದ್ದು, ಹೆಸರು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: IPL ಸ್ಟಾರ್‌ ಜೊತೆ ಗೆಳೆತನ ಹೊಂದಿದ್ದ ರೂಪದರ್ಶಿ ನಿಗೂಢ ಸಾವು – ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌!