Tag: belagavi

  • ಶಕ್ತಿ ಪ್ರದರ್ಶನದ ಮೂಲಕ ಶೆಟ್ಟರ್ ನಾಮಪತ್ರ ಸಲ್ಲಿಕೆ

    ಶಕ್ತಿ ಪ್ರದರ್ಶನದ ಮೂಲಕ ಶೆಟ್ಟರ್ ನಾಮಪತ್ರ ಸಲ್ಲಿಕೆ

    ಬೆಳಗಾವಿ: ಬೆಳಗಾವಿ (Belagavi) ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಅವರು ಬೃಹತ್ ಮೆರವಣಿಗೆ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ (Nomination) ಸಲ್ಲಿಸುವ ಮುಂಚೆ ಬೃಹತ್ ಮೆರವಣಿಗೆ ಮೂಲಕ ಶೆಟ್ಟರ್ ಶಕ್ತಿ ಪ್ರದರ್ಶನ ಮಾಡಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ಜಗದೀಶ್ ಶೆಟ್ಟರ್ ಬೆಳಗಾವಿಯ ಸಮಾದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಸಮಾದೇವಿಗಲ್ಲಿಯಿಂದ ಆರಂಭವಾದ ಮೆರವಣಿಗೆಯ ಖಡೆಬಜಾರ ರೋಡ್, ಗಣಪತಿ ಗಲ್ಲಿ, ಕಾಕತಿವೇಸ್, ಶನಿವಾರ ಕೂಟ್, ಚನ್ನಮ್ಮ ವೃತ್ತ ಹಾಗೂ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮೆರವಣಿಗೆ ವಾಹನ ಏರಿದಾಗ ಅಭಿಮಾನಿಗಳು ಘೋಷಣೆ ಹಾಕಿದರು. ವಿವಿಧ ಭಾಗದಿಂದ ಬಂದಿದ್ದ ಕಾರ್ಯಕರ್ತರು ಮೋದಿ.. ಮೋದಿ ಎಂಬ ಘೋಷಣೆಯೊಂದಿಗೆ ಉತ್ಸಾಹದಿಂದ ಮೆರವಣಿಗೆಯಲ್ಲಿ ಸಾಗಿದರು. ಇದನ್ನೂ ಓದಿ: ಚಿತ್ರದುರ್ಗ ಆಶ್ರಮದ ತೊಟ್ಟಿಯಲ್ಲಿ ತಾಯಿ-ಮಗಳ ನಿಗೂಢ ಸಾವು – ಪ್ರರಣದ ಸುತ್ತ ಅನುಮಾನದ ಹುತ್ತ!

    ಜಗದೀಶ್ ಶೆಟ್ಟರ್ ಅವರು ನಾಮಪತ್ರ ಸಲ್ಲಿಸುವ ಮುಂಚೆ ಢೋಲ್ ತಾಶ್, ಡೊಳ್ಳು ಕುಣಿತ ವಾದ್ಯಗಳು ಎಲ್ಲರ ಗಮನ ಸೆಳೆದವು. ವಿವಿಧ ಭಾಗದಿಂದ ಬಂದಿದ್ದ ಜನರು ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿದರು. ಕೇಸರಿ ಪೇಟ ಧರಿಸಿದ ಸಾವಿರಾರು ಮಹಿಳೆಯರು ಮೆರವಣಿಗೆಯಲ್ಲಿ ಗಮನ ಸೆಳೆದರು. ಇದನ್ನೂ ಓದಿ: ಗುರುವಾರದಿಂದ ಸಿಇಟಿ ಪರೀಕ್ಷೆ ಆರಂಭ- ವಿದ್ಯಾರ್ಥಿಗಳಿಗೆ ಕಡ್ಡಾಯ ಮಾರ್ಗಸೂಚಿ

    ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಗೋವಾ ಸಿಎಂ ಪ್ರಮೋದ್ ಸಾವಂತ್, ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಬಾಲಚಂದ್ರ ಜಾರಕಿಹೊಳಿ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಹನುಮಂತ್ ನಿರಾಣಿ, ಮಾಜಿ ಶಾಸಕರಾದ ಅನಿಲ್ ಬೆನಕೆ, ಮಾಜಿ ಸಚಿವ ಮುರಗೇಶ್ ನಿರಾಣಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಧಾರವಾಡದಲ್ಲಿ 18 ಕೋಟಿ ಪತ್ತೆ – ಎಸ್‌ಬಿಐಗೆ ಹಣ ರವಾನೆ

  • ಚಿಕ್ಕೋಡಿಯಲ್ಲಿ 16 ಲಕ್ಷ ನಗದು ಸೀಜ್- ಇಬ್ಬರನ್ನು ವಶಕ್ಕೆ ಪಡೆದ ಪೊಲೀಸ್ರು

    ಚಿಕ್ಕೋಡಿಯಲ್ಲಿ 16 ಲಕ್ಷ ನಗದು ಸೀಜ್- ಇಬ್ಬರನ್ನು ವಶಕ್ಕೆ ಪಡೆದ ಪೊಲೀಸ್ರು

    ಚಿಕ್ಕೋಡಿ: ಲೋಕಸಭಾ ಚುನಾವಣೆಯ (Loksabha Elections 2024) ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ (Code Of Conduct) ಕೂಡ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕ್ಟೀವ್ ಆಗಿದ್ದಾರೆ. ಅಂತೆಯೇ ಚಿಕ್ಕೋಡಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಬಸ್ ಮೂಲಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ 31 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ.

    ತಡರಾತ್ರಿ ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ಪೊಲೀಸರ ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಚಿಕ್ಕೋಡಿಯಿಂದ ಮಹಾರಾಷ್ಟ್ರದ ಇಚಲಕರಂಜಿ ನಗರಕ್ಕೆ ತೆರಳುತ್ತಿದ್ದ ಬಸ್ ತಪಾಸಣೆ ವೇಳೆ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಅಕ್ರಮ ಹಣದ ಜೊತೆಗೆ ಇಬ್ಬರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಹಣ ಸಾಗಾಟ ಮಾಡುವರು ಮಹಾರಾಷ್ಟ್ರದ ಇಚಲಕರಂಜಿ ನಗರದ ನಿವಾಸಿಗಳಾಗಿದ್ದಾರೆ. ಪ್ರಕರಣವನ್ನ ಆದಾಯ ತೆರಿಗೆ ಇಲಾಖೆಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಎಳನೀರು ಕುಡಿದು 15 ಮಂದಿ ಅಸ್ವಸ್ಥ!

  • ಮಗಳ ನಾಮಿನೇಷನ್‌ಗೆ ಯಾರೂ ಬರಬೇಡಿ: ಸತೀಶ್ ಜಾರಕಿಹೊಳಿ

    ಮಗಳ ನಾಮಿನೇಷನ್‌ಗೆ ಯಾರೂ ಬರಬೇಡಿ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಮಗಳ ನಾಮಿನೇಷನ್ ಸಿಂಪಲ್ ಆಗಿ ಮಾಡ್ತೀನಿ. ಯಾರೂ ಬರಬೇಡಿ‌. ಜನ ಸೇರುವುದು ಬೇಡ, ಕಾರ್ಯಕರ್ತರು ಬರೋದು ಬೇಡ ಎಂದು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ (Satish Jarakiholi) ಹೇಳಿದರು.

    ಈ ಕುರಿತು ವೀಡಿಯೋ ಮೂಲಕ ಕಾರ್ಯಕರ್ತರಲ್ಲಿ ಮನವಿ ಮಾಡಿದ ಸತೀಶ್‌, ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ವೈಯಕ್ತಿಕ ಟೀಕೆ ಮಾಡಬೇಡಿ. ಪ್ರವಾಹದ ಸಂದರ್ಭದಲ್ಲಿ ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ವಿದೇಶದಲ್ಲಿದ್ದರು ಎಂದು ಟ್ರೋಲ್ ಮಾಡಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳಿದ್ದಾರೆ.

    ಯಾವುದೇ ಕಾರಣಕ್ಕೂ ವೈಯಕ್ತಿಕ ಟೀಕೆ ಮಾಡಬೇಡಿ. ಕೇವಲ ರಾಜಕೀಯ ಆರೋಪಗಳಿಗೆ ಮಾತ್ರ ಸೀಮಿತವಾಗಿರಲಿ ಅವರ ವೈಫಲ್ಯ ಹೇಳುವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳನ್ನು ಪೋಸ್ಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಪ್ರಧಾನಿಯಾಗ್ಬೇಕೆಂದು ಕಾಳಿ ಮಾತೆಗೆ ತನ್ನ ಬೆರಳನ್ನೇ ಅರ್ಪಿಸಿದ ಅಭಿಮಾನಿ

  • ಬರಗಾಲದಲ್ಲೂ ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ಘಟಪ್ರಭಾ – ಮೂರು ದಿನ ಸಂಚಾರ ನಿಷೇಧ

    ಬರಗಾಲದಲ್ಲೂ ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ಘಟಪ್ರಭಾ – ಮೂರು ದಿನ ಸಂಚಾರ ನಿಷೇಧ

    ಬೆಳಗಾವಿ: ಅಧಿಕಾರಿಗಳ ನಿರ್ಲಕ್ಷದಿಂದಾಗಿ ಘಟಪ್ರಭಾ ನದಿಗೆ (Ghataprabha River) ಮೂಡಲಗಿಯ ಸುಣಧೋಳಿ ಗ್ರಾಮದ ಬಳಿ ನಿರ್ಮಿಸಲಾದ ಸೇತುವೆ ಹಾಗೂ ಬ್ಯಾರೇಜ್ ಗೇಟ್ ಉಕ್ಕಿಹರಿಯುತ್ತಿದ್ದು, ಮೂರು ದಿನಗಳ ಕಾಲ ಸೇತುವೆ ಮೇಲೆ ಸಂಚಾರ ನಿಷೇಧಿಸಿ ತಹಶಿಲ್ದಾರ್ ಬಿ.ಎಸ್ ಕಡಕಬಾವಿ ಆದೇಶ ಹೊರಡಿಸಿದ್ದಾರೆ.

    ಹಿಡಕಲ್ ಜಲಾಶಯದಿಂದ (Hidkal Dam) ಘಟಪ್ರಭಾ ನದಿಗೆ 2.20 ಟಿಎಂಸಿ ನೀರು ಬಿಡಲು ನಿರ್ಧಾರ ಮಾಡಿ, ದಿನಕ್ಕೆ 4800 ಕ್ಯುಸೆಕ್ ನೀರು ಬಿಡಲಾಗಿದೆ. ನದಿಗೆ ನೀರು ಬಂದರೂ ಸೇತುವೆ ಕಮ್ ಬ್ಯಾರೇಜ್ ಗೇಟ್ ತೆರೆಯದ ಪರಿಣಾಮ ಈಗ ಸೇತುವೆ ಮೇಲೆ ನೀರು ಹರಿಯುತ್ತಿದೆ. ಈ ವಿಚಾರ ಅಧಿಕಾರಿಗಳಿಗೆ ತಿಳಿದಿದ್ದರೂ ಬ್ರಿಡ್ಜ್ ಗೇಟ್ ತೆರೆಯದೇ ನಿರ್ಲಕ್ಷವಹಿಸಿದ್ದಕ್ಕೆ ಜನ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಟ್ವಿಸ್ಟ್‌ – ಈಗಾಗಲೇ A1 ಆರೋಪಿ ಅರೆಸ್ಟ್‌!

    ಸೇತುವೆ ಮೇಲಿಂದ ನೀರು ಹರಿಯುತ್ತಿರುವ ಕಾರಣ ಸೇತುವೆ ದಾಟಲು ವಾಹನ ಸವಾರರು ಹಾಗೂ ಜನ ಪರದಾಡುತ್ತಿದ್ದಾರೆ. ಸದ್ಯ ಸೇತುವೆ ಮೇಲೆ ಯಾರೂ ಓಡಾಡಬಾರದೆಂದು ತಹಶಿಲ್ದಾರ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಚೆಕ್ ಪೋಸ್ಟ್‌ಗೆ ಲಾರಿ ಡಿಕ್ಕಿ – ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಪಾರು

  • ಚಿಕ್ಕೋಡಿಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ

    ಚಿಕ್ಕೋಡಿಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ವಿವಿಧೆಡೆ ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.

    ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ಮಳೆರಾಯ (Rain) ತಂಪೆರಿದ್ದಾನೆ. ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ಆಕಳು ಸಾವನ್ನಪ್ಪಿದೆ. ಇದನ್ನೂ ಓದಿ: 2011ರಿಂದ ನಾವು ವೋಟ್‌ ಮಾಡಿಲ್ಲ: ಸಂದೇಶ್‌ಖಾಲಿ ಸಂತ್ರಸ್ತೆ, ಬಿಜೆಪಿ ಅಭ್ಯರ್ಥಿಗೆ ಮೋದಿ ಕರೆ

     

    ಕೆಂಪಟ್ಟಿ ಗ್ರಾಮದ ಜ್ಞಾನೇಶ್ವರ ವಾಲೀಕಾರ ಎಂಬುವರಿಗೆ ಸೇರಿದ ಆಕಳು ಸಿಡಿಲಿಗೆ ಬಲಿಯಾಗಿದೆ. ಮಳೆಯಿಂದ ವಾತಾವರಣದ ತಂಪಾಗಿದ್ದು ಮೊದಲನೇ ವರ್ಷಧಾರೆಗೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

  • ನನಗೆ ಟಿಕೆಟ್ ನೀಡಿದರೆ ಹೈಕಮಾಂಡ್‌ಗೆ ತಲೆಬಾಗಿ ಸ್ಪರ್ಧೆ: ಮೃಣಾಲ್ ಹೆಬ್ಬಾಳ್ಕರ್

    ನನಗೆ ಟಿಕೆಟ್ ನೀಡಿದರೆ ಹೈಕಮಾಂಡ್‌ಗೆ ತಲೆಬಾಗಿ ಸ್ಪರ್ಧೆ: ಮೃಣಾಲ್ ಹೆಬ್ಬಾಳ್ಕರ್

    ಬೆಳಗಾವಿ: ನನಗೆ ಟಿಕೆಟ್ ನೀಡಿದರೆ ಹೈಕಮಾಂಡ್‌ಗೆ ತಲೆಬಾಗಿ, ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮನಸ್ಸು ಗೆದ್ದು ಜನರ ಬಳಿ ಹೋಗುತ್ತೇನೆ ಎಂದು ಬೆಳಗಾವಿ (Belagavi) ಲೋಕಸಭೆ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ಮೃಣಾಲ್ ಹೆಬ್ಬಾಳ್ಕರ್ (Mrinal Hebbalkar) ಹೇಳಿದರು.

    ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸಭೆಗೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಓಡಾಡುತ್ತಿದ್ದೇನೆ. ಪಕ್ಷ ಸಂಘಟನೆಗಾಗಿ ಹಳ್ಳಿ ಹಳ್ಳಿಗೆ ಭೇಟಿ ಕೊಡುತ್ತಿದ್ದೇನೆ. ಈಗ ಒಳ್ಳೆಯ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಟಿಕೆಟ್ ವಿಚಾರದಲ್ಲಿ ನಮ್ಮ ಪಕ್ಷ ಅಥವಾ ವಿರೋಧ ಪಕ್ಷ ಅಧಿಕೃತ ನಿರ್ಧಾರ ಬರುವವರೆಗೂ ಏನೂ ಹೇಳಲ್ಲ. ಅಲ್ಲಿಯವರೆಗೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಎದುರಾಳಿ ಯಾರೇ ಆದರೂ ನಾವು ಮಾಡಿದ ಕೆಲಸ, ಸತೀಶ್ ಜಾರಕಿಹೊಳಿ ಮತ್ತು ಸರ್ಕಾರ ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಿ ಮತ ಕೇಳುತ್ತೇವೆ ಎಂದು ತಿಳಿಸಿದರು.

    ಕುಂದಾನಗರಿ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ (ಸಿವಿಲ್) ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಮೃಣಾಲ್ ಏಪ್ರಿಲ್ 6, 1993ರಲ್ಲಿ ಜನಿಸಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದ ನಿವಾಸಿ ಆಗಿರುವ ಮೃಣಾಲ್ ಅವರ ತಂದೆ ರವೀಂದ್ರ, ತಾಯಿ ಲಕ್ಷ್ಮಿ ಹೆಬ್ಬಾಳ್ಕರ್. ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಕೆಲಸ ಮಾಡುತ್ತಿದ್ದಾರೆ. ಮೃಣಾಲ್ 2013ರಿಂದ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಿದ್ದಾರೆ. ಎರಡು ಅವಧಿಗೆ ಕಾಂಗ್ರೆಸ್ ಯುವ ಘಟಕದ ಬೆಳಗಾವಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

    ಮೃಣಾಲ್ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ, ಸವದತ್ತಿಯ ಹರ್ಷಾ ಶುಗರ್ಸ್ ನಿರ್ದೇಶಕರಾಗಿ, ಲಕ್ಷ್ಮಿತಾಯಿ ಸೌಹಾರ್ದ ಸಹಕಾರ ನಿಯಮಿತದ ನಿರ್ದೇಶಕರಾಗಿ, ಹರ್ಷಾ ಬಿಲ್ಡರ್ ಹಾಗೂ ಡೆವೆಲಪರ್‌ನ ಪಾರ್ಟ್ನರ್ ಕೂಡ ಆಗಿದ್ದಾರೆ. ಸದ್ಯ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್ ಅನುಪಸ್ಥಿತಿಯಲ್ಲಿ ಹೆಚ್ಚೆಚ್ಚು ಓಡಾಟ ಮಾಡುತ್ತಿದ್ದಾರೆ.

  • ಬೆಳಗಾವಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸಾವು – ಪಿಎಸ್‌ಐ ಸಸ್ಪೆಂಡ್

    ಬೆಳಗಾವಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸಾವು – ಪಿಎಸ್‌ಐ ಸಸ್ಪೆಂಡ್

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಭೀಕರ ರಸ್ತೆ ಅಪಘಾತದಲ್ಲಿ (Road Accident) ಎಎಸ್‌ಐ (ASI) ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ (PSI) ಸಸ್ಪೆಂಡ್ ಮಾಡಿ ಎಸ್ಪಿ ಡಾ.ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯ ಯರಗಟ್ಟಿ ಪಟ್ಟಣದ ನಿವಾಸಿ ವಿಜಯಕಾಂತ ಮಿಕಲಿ (51) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಬೈಲಹೊಂಗಲ ತಾಲೂಕಿನ ದೊಡವಾಡ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಕಾಂತ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದಕ್ಕೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕರ್ತವ್ಯ ಮುಗಿಸಿ ಯರಗಟ್ಟಿಯಲ್ಲಿರುವ ಮನೆಗೆ ಬರುವಾಗ ರಸ್ತೆ ಅಪಘಾತವಾಗಿತ್ತು. ಇದನ್ನೂ ಓದಿ: ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ

    ಅತಿವೇಗದಿಂದ ಬೈಕ್ ಚಲಾಯಿಸುವಾಗ ಹಂಪ್ ಜಿಗಿಸಿ ರಸ್ತೆ ಅಪಘಾತವಾಗಿದೆ. ಯರಗಟ್ಟಿಯ ಕೃಷ್ಣಾ ಬಡಾವಣೆ ಬಳಿ ತಡರಾತ್ರಿ ಘಟನೆ ನಡೆದಿತ್ತು. ಆದರೆ ಕಳೆದೊಂದು ತಿಂಗಳ ಹಿಂದಷ್ಟೇ ಎಲ್ಲಾ ಪೊಲೀಸರು ಹೆಲ್ಮೆಟ್ ಧರಿಸುವುದನ್ನು ಬೆಳಗಾವಿ ಎಸ್ಪಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರು. ಮೇಲಾಧಿಕಾರಿಗಳ ನಿರ್ದೇಶನ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ನಿರ್ಲಕ್ಷ್ಯ ಆರೋಪದ ಮೇರೆಗೆ ದೊಡವಾಡ ಠಾಣೆ ಪಿಎಸ್‌ಐ ನಂದೀಶ ಎಂಬವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿನಿ ನೇಣಿಗೆ ಶರಣು – ಕಳ್ಳತನ ಆರೋಪ ಹೊರಿಸಿ ಸಮವಸ್ತ್ರ ಬಿಚ್ಚಿಸಿ ಪರಿಶೀಲಿಸಿದ್ದಕ್ಕೆ ಆತ್ಮಹತ್ಯೆ?

  • ಮಾ.21 ರಿಂದ ರಾಜ್ಯದಲ್ಲಿ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

    ಮಾ.21 ರಿಂದ ರಾಜ್ಯದಲ್ಲಿ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ಮಾ.21 ರಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು (Rain Alert) ಹವಾಮಾನ ಇಲಾಖೆ ಕೊಟ್ಟಿದೆ.

    ಎರಡು ದಿನಗಳ ಕಾಲ 12 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ. ಇದನ್ನೂ ಓದಿ: ತಮಿಳುನಾಡಿನ ಸೇಲಂನಲ್ಲಿ ಇಕ್ಕಟ್ಟಿಗೆ ಸಿಲುಕಿದ ಶಿವಮೊಗ್ಗದ ದಂಪತಿ!

    ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಅಲ್ಲದೇ ಮಾ.21ರ ಬಳಿಕ ಇನ್ನಷ್ಟು ಜಿಲ್ಲೆಗಳಲ್ಲಿ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಇದನ್ನೂ ಓದಿ: ಡಿಕೆ ಸುರೇಶ್‌ನ ಬುಡಸಮೇತ ತೆಗೆಯಬೇಕು ಎಂದು ಡಾ.ಮಂಜುನಾಥ್‌ರನ್ನು ತಂದಿದ್ದೇವೆ: ಸಿ.ಪಿ.ಯೋಗೇಶ್ವರ್

  • ನಿಪ್ಪಾಣಿ ರಾಮಮಂದಿರದ ಒಂದೇ ಒಂದು ಕಲ್ಲನ್ನೂ ಅಲುಗಾಡಿಸಲು ಆಗಲ್ಲ: ಮುತಾಲಿಕ್

    ನಿಪ್ಪಾಣಿ ರಾಮಮಂದಿರದ ಒಂದೇ ಒಂದು ಕಲ್ಲನ್ನೂ ಅಲುಗಾಡಿಸಲು ಆಗಲ್ಲ: ಮುತಾಲಿಕ್

    ಬೆಳಗಾವಿ: ನಿಪ್ಪಾಣಿ (Nippani) ರಾಮಮಂದಿರದ (Ram Mandir) ಒಂದೇ ಒಂದು ಕಲ್ಲನ್ನು ಕೂಡ ಅಲುಗಾಡಿಸಲು ಆಗಲ್ಲ. ನಿಮಗೆ ತಾಕತ್ತಿದ್ದರೆ ಮುಟ್ಟಿ ನೋಡೋಣ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik)  ಸವಾಲ್ ಹಾಕಿದ್ದಾರೆ.

    ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ರಾಮ ಮಂದಿರ ಸ್ಫೋಟ ಮಾಡುತ್ತೇವೆ ಎಂಬ ಬೆದರಿಕೆ ಪತ್ರ (Threat Letter) ಬರೆಯಲಾಗಿದೆ. ಈ ರೀತಿಯ ಬೆದರಿಕೆಯನ್ನು ಹಿಂದೂ ಸಮಾಜ ಸಹಿಸಲ್ಲ, ಹೆದರುವುದೂ ಇಲ್ಲ. ಈಗ ಘಜನಿ, ಘೋರಿ ಬಾಬಾ ಇಲ್ಲ. ಇಲ್ಲಿ ಇರೋದು ಭಾರತೀಯ ಮುಸ್ಲಿಮರು ಅನ್ನೋದು ನೆನಪಿರಲಿ. ಭಾರತದಲ್ಲಿ ಹಿಂದೂ ದೇವಾಲಯಗಳನ್ನು ಪೂಜಿಸಬೇಕು ಅಂತೇನಿಲ್ಲ, ಗೌರವಿಸಬೇಕು ಎಂದರು. ಇದನ್ನೂ ಓದಿ: ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ: ಬಿಎಸ್‍ವೈ

    ಕಿಡಿಗೇಡಿಗಳು ಪತ್ರ ಬರೆದಿದ್ದನ್ನ ಖಂಡಿಸುತ್ತೇನೆ, ವಿರೋಧಿಸುತ್ತೇನೆ, ಸವಾಲು ಹಾಕುತ್ತೇನೆ. ರಾಮಮಂದಿರ ಮುಟ್ಟಿದ್ರೆ ಮುಂದಿನ ಸ್ಥಿತಿ ಏನಾಗುತ್ತದೆ, ಹಿಂದೂ ಸಮಾಜ ಹೇಗೆ ತಿರುಗೇಟು ಕೊಡುತ್ತದೆ ಎಂದು ನೋಡಿ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಎಲ್ಲ ರಾಮ ಮಂದಿರಗಳಿಗೂ ಸರ್ಕಾರ ಭದ್ರತೆ ಕೊಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು. ಇದನ್ನೂ ಓದಿ: ಮೋದಿ ಜಪಿಸ್ತಿರೋ ಗಂಡಂದಿರಿಗೆ ಊಟ ಬಡಿಸ್ಬೇಡಿ- ಮಹಿಳೆಯರಿಗೆ ಕೇಜ್ರಿವಾಲ್ ಕರೆ

    ಬೆದರಿಕೆ ಪತ್ರದಲ್ಲಿ ಏನಿತ್ತು?
    ರಾಮಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಪತ್ರ ಬರೆದು ಮಂದಿರದಲ್ಲಿ ಅನಾಮಧೇಯ ವ್ಯಕ್ತಿಗಳು ಬಿಟ್ಟು ಹೋಗಿದ್ದಾರೆ. ಫೆಬ್ರವರಿ 7 ಹಾಗೂ 28ರಂದು ಬಂದ ಬೆದರಿಕೆ ಪತ್ರಗಳು ಈಗ ಬಹಿರಂಗವಾಗಿದ್ದು, ಮಾರ್ಚ್ 20-21ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಪತ್ರದಲ್ಲಿ ಉಲೇಖಿಸಲಾಗಿದೆ. ಇದನ್ನೂ ಓದಿ: ಸಂಸದರಿಗೆ ಟಿಕೆಟ್ ಕೈ ತಪ್ಪೋ ಆತಂಕ-‘ We Want Pratap Simha’ ಎಂದ ಸಾರ್ವಜನಿಕರು

    101 ವರ್ಷಗಳ ಇತಿಹಾಸ ಹೊಂದಿರುವ ನಿಪ್ಪಾಣಿ ಪಟ್ಟಣದ ಶ್ರೀರಾಮ ಮಂದಿರವನ್ನ ಸ್ಫೋಟಿಸುವದಾಗಿ ಆಗಂತುಕರು ಬೆದರಿಕೆ ಹಾಕಿದ್ದಾರೆ. ಮೊದಲ ಪತ್ರ ಫೆಬ್ರವರಿ 7ರಂದು ರಾಮಮಂದಿರ ಆವರಣದ ಹನುಮ ಮಂದಿರದಲ್ಲಿ ಪತ್ತೆಯಾಗಿತ್ತು. 2ನೇ ಪತ್ರ ಫೆಬ್ರವರಿ 28ರಂದು ರಾಮಮಂದಿರದ ಗರ್ಭ ಗುಡಿಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ- ರಾಯಚೂರಿನಲ್ಲೂ ಅಲರ್ಟ್

  • ಕೇಂದ್ರದಲ್ಲಿ ʻಕೈʼ ಹಿಡಿದರೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ – ರೈತರಿಗೆ ಸಿಎಂ ಹೊಸ ಗ್ಯಾರಂಟಿ

    ಕೇಂದ್ರದಲ್ಲಿ ʻಕೈʼ ಹಿಡಿದರೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ – ರೈತರಿಗೆ ಸಿಎಂ ಹೊಸ ಗ್ಯಾರಂಟಿ

    ಬೆಳಗಾವಿ: ದೇಶದ ಆಹಾರ ಸ್ವಾವಲಂಬನೆಗೆ ಶ್ರಮಿಸುತ್ತಿರುವ ರೈತರಿಗೆ ಬೆಂಬಲ ಬೆಲೆ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ದೇಶದಾದ್ಯಂತ ಕನಿಷ್ಠ ಬೆಂಬಲ ಬೆಲೆ (MSP) ಕಾಯ್ದೆ ಜಾರಿಗೆ ರೈತರು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಸ್‌ಪಿಪಿ ಕಾಯ್ದೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆಯ (Agriculture Department) ಆಶ್ರಯದಲ್ಲಿ ಸುವರ್ಣಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಫಲಾನುಭವಿ ರೈತರಿಗೆ ವಿವಿಧ ಕೃಷಿ ಸಲಕರಣೆಗಳು ಮತ್ತು ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು. ಇದನ್ನೂ ಓದಿ: ವಂಚನೆಯಿಂದ ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಹೈದರಾಬಾದ್‌ ಯುವಕ – ಯುದ್ಧದಲ್ಲಿ ದುರಂತ ಸಾವು

    ರಾಜ್ಯದಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇದರಲ್ಲಿ 196 ತಾಲ್ಲೂಕುಗಳು ತೀವ್ರ ಬರಪೀಡಿತವಾಗಿವೆ. ಒಟ್ಟಾರೆ 18,171 ಕೋಟಿ ಬೆಳೆ ಹಾನಿಯಾಗಿದ್ದು, ಪರಿಹಾರ ಒದಗಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದ್ರೆ ಯಾವುದೇ ರೀತಿಯ ನೆರವು ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ರೈತರಿಗೆ (Farmers) ತಲಾ 2 ಸಾವಿರ ರೂ.ಗಳಂತೆ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ 631 ಕೋಟಿ ರೂ. ನೆರವು ನೀಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಕೃಷಿಹೊಂಡ ಯೋಜನೆಯನ್ನು ಕೂಡ ಇದಕ್ಕೂ ಮುಂಚಿನ ಸರ್ಕಾರ ಸ್ಥಗಿತಗೊಳಿಸಿತ್ತು. ಈ ಬಾರಿ 200 ಕೋಟಿ ರೂ. ಒದಗಿಸುವ ಮೂಲಕ ಕೃಷಿಭಾಗ್ಯ ಯೋಜನೆಗೆ (Krushi Bhagya Scheme) ಮರುಚಾಲನೆ ನೀಡಲಾಗಿದೆ.

    900 ಕೋಟಿ ಮೊತ್ತದ ಕೃಷಿ ಸಲಕರಣೆ ವಿತರಣೆ:
    ಬೆಳಗಾವಿ ವಿಭಾಗೀಯ ಮಟ್ಟದಲ್ಲಿ 2,700 ರೈತರಿಗೆ 13.12 ಕೋಟಿ ರೂ. ಮೊತ್ತದ ವಿವಿಧ ಬಗೆಯ ಕೃಷಿ ಸಲಕರಣೆಗಳನ್ನು ನೀಡಲಾಗುತ್ತಿದೆ. ಇದೇ ರೀತಿ ರಾಜ್ಯದಾದ್ಯಂತ ಒಟ್ಟಾರೆ 900 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ತಾಜ್ ಮಹಲ್‌ಗೆ ಈಗ ಮೆಟ್ರೋ ಸವಾರಿ; ಆಗ್ರಾ ಮೆಟ್ರೋ ಕಾರಿಡಾರ್ ಉದ್ಘಾಟಿಸಿದ ಮೋದಿ

    ಆಧುನಿಕ ಯಂತ್ರೋಪಕರಣಗಳ ಮೂಲಕ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಸಹಾಯಧನದ ಮೂಲಕ ಸಲಕರಣೆಗಳನ್ನು ನೀಡಲಾಗುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ರೈತರಿಗೆ ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವೆಲ್ಲ ಕುರ್ಚಿಗಾಗಿ ಹೊಡೆದಾಡ್ತೀವಿ, ನೀವು ಕುರ್ಚಿ ಇದ್ರೂ ಯಾಕೆ ಕೂರಲ್ಲ: ಡಿಕೆಶಿ ಪ್ರಶ್ನೆ

    ಸೂಕ್ಷ್ಮ ನೀರಾವರಿ ಅಳವಡಿಸಿಕೊಂಡಿರುವ ರೈತರಿಗೂ ಸಹಾಯಧನ ಆಧಾರಿತ ಯಂತ್ರೋಪಕರಣ ನೀಡಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ನೀರಾವರಿ, ಕೃಷಿ ಪದ್ಧತಿ, ಬೆಳೆಗೆ ನ್ಯಾಯಯುತ ಬೆಲೆ ಒದಗಿಸುವುದು ಸೇರಿದಂತೆ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.