– ಇಲ್ಲಿ ಕಾಂಗ್ರೆಸ್ ಬೇಕು, ಕೇಂದ್ರದಲ್ಲಿ ಮೋದಿನೇ ಬೇಕು ಅಂತಾರೆ ಎಂದ ಶಾಸಕ
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ (PM Modi) ತೀರಿಕೊಂಡರೆ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ರಾಜು ಕಾಗೆ (Raju Kage) ನಾಲಿಗೆ ಹರಿಬಿಟ್ಟಿದ್ದಾರೆ.
ಬೆಳಗಾವಿಯ (Belagavi) ಕಾಗವಾಡ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ (Election Campaign) ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಮೋದಿ ತೀರಿಕೊಂಡರೆ ಈ ದೇಶದಲ್ಲಿ ಮುಂದೆ ಪ್ರಧಾನಿ ಆಗೋದೇ ಇಲ್ಲವಾ? ಮೊದಿ ತೀರಿಕೊಂಡರೆ 140 ಕೊಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಫ್ರೀ ಫ್ರೀ ಫ್ರೀ; ಟಿಡಿಪಿ ಗೆದ್ದರೇ ಫ್ರೀ ಸೈಟ್, ಮಹಿಳೆಯರಿಗೆ ಫ್ರೀ ಬಸ್, 3 ಎಲ್‌ಪಿಜಿ ಸಿಲಿಂಡರ್ ಫ್ರೀ – NDA ಗ್ಯಾರಂಟಿ
ಈಗಿನ ಯುವಕರು ಮೋದಿ ಮೋದಿ ಅನ್ನುತ್ತಾರೆ, ಮೋದಿನ ತೆಗೆದುಕೊಂಡು ನೆಕ್ಕುತ್ತೀರಾ? ರಾಜ್ಯದಲ್ಲಿ ಮತದಾರುರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ, ಆದ್ರೆ ಕೇಂದ್ರದಲ್ಲಿ ಮೋದಿನೇ ಬರಬೇಕು ಅಂತಾರೆ. ಮೋದಿ ಇಲ್ಲಿ ಬಂದು ನೋಡುತ್ತಾರಾ? ಇಲ್ಲಿ ಏನಾದರೂ ಸಮಸ್ಯೆ ಆದರೆ ಮೋದಿ ಬರುವುದಿಲ್ಲ. ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ನರೇಂದ್ರ ಮೋದಿ ಅವರು 3,000 ಕೋಟಿ ವಿಮಾನದಲ್ಲಿ ಓಡಾಡ್ತಾರೆ, 4 ಲಕ್ಷ ರೂಪಾಯಿ ಸೂಟ್ ಹಾಕಿಕೊಳ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಪ್ರಧಾನಿ (Narendra Modi) ಆರೋಪಕ್ಕೆ ಯಾವ ಕಾನೂನು ಹದಗೆಟ್ಟಿದೆ ಎಂದು ಅವರೇ ಹೇಳಬೇಕು. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಅತ್ಯಂತ ಸುರಕ್ಷಿತವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಬೆಂಗಳೂರು (Bengaluru) ಬಗ್ಗೆ ಹೇಳಿದರು. ವಿಶ್ವದ ನಾಯಕರು ಬೆಂಗಳೂರಿಗೆ ಬಂದು ದೆಹಲಿಗೆ ಹೋಗುತ್ತಾರೆ. ಅವರಿಗೆ ನಮ್ಮ ರಾಜ್ಯದಲ್ಲಿ ಮತ ಬರಲಿಲ್ಲ ಎಂದು ಈ ರೀತಿ ಮಾತನಾಡಿದ್ದಾರೆ. ಪ್ರಧಾನಿ ಆರೋಪ ಸರಿಯಿಲ್ಲ. ಉತ್ತಮ ಆಡಳಿತ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಯುವಕರಿಗೆ ಆದರ್ಶ: ರೇವಂತ್ ರೆಡ್ಡಿ
ಪ್ರಜ್ವಲ್ ಪೆನ್‌ಡ್ರೈವ್ ತನಿಖೆ ಬಗ್ಗೆ ಹೆಚ್‌ಡಿಕೆ ಸ್ವಾಗತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ನನ್ನ ವಶದಲ್ಲಿ ಇಲ್ಲ. ಈಗೇನಿದ್ದರೂ ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಅಶೋಕ್, ವಿಜಯೇಂದ್ರ ನುಣುಚಿಕೊಳ್ಳುವ ಕೆಲಸ ಮಾಡಿದ್ದಾರೆ. ಬಿಜೆಪಿಯ (BJP) ನಿಲುವು ಏನು ಎಂಬುದು ನನ್ನ ಪ್ರಶ್ನೆಯಾಗಿದೆ. ಕುಮಾರಸ್ವಾಮಿ ಕುಟುಂಬ, ಪಕ್ಷದ ಬಗ್ಗೆ ಏನು ಬೇಕಾದರೂ ಹೇಳಲಿ. ಬಿಜೆಪಿಯ ನಿಲುವು ಏನು ಎಂಬುದು ನಮ್ಮ ಪ್ರಶ್ನೆಯಾಗಿದೆ. ಶೆಟ್ಟರ್, ಮಂಗಳಾ ಅಂಗಡಿ ಬಗ್ಗೆ ಬಿಜೆಪಿ ನಾಯಕರಿಗೆ ಕೇಳಿ. ನಿಮ್ಮ ನಿಲುವು ಏನು ಎಂದು ಪ್ರಶ್ನೆ ಮಾಡಬೇಕು. ಜೆಡಿಎಸ್ ಶಾಸಕ ಪತ್ರದ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಬಿಜೆಪಿ ಮೈತ್ರಿಯ ನಿಲುವು ಏನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನಕ್ಕೆ ನೀರಸ ಪ್ರತಿಕ್ರಿಯೆ- ಗ್ರಾಮ ಖಾಲಿ ಖಾಲಿ
ಶ್ರೀನಿವಾಸ್ ಪ್ರಸಾದ್ ಭಿನ್ನಾಭಿಪ್ರಾಯದಿಂದ ಬೇರೆ ಪಕ್ಷಕ್ಕೂ ಹೋಗಿದ್ದರು. ಬಳಿಕ ಜೊತೆಗೆ ಸಂಪುಟದಲ್ಲಿ ಕೆಲಸ ಮಾಡಿದ್ದೇವೆ. ಓರ್ವ ಧೀಮಂತ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ನಮ್ಮ ಕಷ್ಟ ಕಾಲದಲ್ಲಿ ಜೊತೆಗೆ ಇದ್ದ ವ್ಯಕ್ತಿಯಾಗಿದ್ದರು. ಮೈಸೂರು ಭಾಗದಲ್ಲಿ ಪ್ರಭಾವಿ ಆಗಿದ್ದರು. ಬಳ್ಳಾರಿ ಸಮಾವೇಶದ ಬಳಿಕ ನಾನು ಅಂತ್ಯಕ್ರಿಯೆಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ: ಮೋದಿ
ಬೆಳಗಾವಿ: ಲೋಕಸಭಾ ಕ್ಷೇತ್ರದಿಂದ (Lok Sabha Election) ನಾನೇ ಸ್ಪರ್ಧಿಸಿದ್ದೇನೆ ಎಂದು ತಿಳಿದುಕೊಳ್ಳಿ. ಕಾಂಗ್ರೆಸ್ (Congress) ಅಭ್ಯರ್ಥಿಗೆ ಮತಹಾಕಿದರೆ ನನಗೆ ಮತ ಹಾಕಿದಂತೆ. ಈ ಮೂಲಕ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರೆ ನೀಡಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. 2014ರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಲೋಕಸಭೆಗೆ ನಿಂತು ಸ್ವಲ್ಪ ಮತಗಳಿಂದ ಸೋತಿದ್ದರು. ಈ ಬಾರಿ ಅವರ ಮಗನನ್ನು ಆರಿಸಿ ಲೋಕಸಭೆಗೆ ಕಳುಹಿಸಿಕೊಡಬೇಕು ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ 7ನೇ ಆವೃತ್ತಿಗೆ ಅದ್ದೂರಿ ತೆರೆ
ಕಳೆದ ಚುನಾವಣೆಯಲ್ಲಿ ಕರ್ನಾಟಕದಿಂದ 25 ಜನ ಬಿಜೆಪಿಯಿಂದ ಗೆದ್ದಿದ್ದರು. ಸುರೇಶ್ ಅಂಗಡಿ ಮಂತ್ರಿ ಆಗಿದ್ದರು. ಬಳಿಕ ಅವರ ಪತ್ನಿ ಕೂಡ ಗೆದ್ದಿದ್ದರು. ಬಿಜೆಪಿಯ 25 ಜನ ಎಂಪಿಗಳು ಮಾತಾಡಿಲ್ಲ. ಹೀಗಿರುವಾಗ ಜಗದೀಶ್ ಶೆಟ್ಟರ್ ಅವರಿಗೆ ಮೋದಿ ಎದುರು ಮಾತಾಡುವ ಧೈರ್ಯ ಇದ್ಯಾ? ಮೋದಿ ಕಂಡರೆ ಅವರಿಗೆ ಭಯ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಎ1, ಪ್ರಜ್ವಲ್ ರೇವಣ್ಣ ಎ2 ಆರೋಪಿ – ಮನೆ ಕೆಲಸದಾಕೆಯಿಂದ ದೂರು
ಮಂಗಳಾ ಅಂಗಡಿಗೆ ಟಿಕೆಟ್ ಕೊಟ್ಟರೆ ಗೆಲ್ಲೋದಿಲ್ಲ ಅಂತ ಈ ಬಾರಿ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿಯಿಂದ ನಿಲ್ಲಿಸಿದ್ದಾರೆ. ಜಗದೀಶ್ ಶೆಟ್ಟರ್ ಚಂಚಲ ಮನಸಿನ ವ್ಯಕ್ತಿ, ಬದ್ಧತೆ ಇಲ್ಲದ ಮನುಷ್ಯ. ಕಳೆದ ಬಾರಿ ಬಿಜೆಪಿಯವರು ಟಿಕೆಟ್ ಕೊಡದಿದ್ದಕ್ಕೆ ಕಾಂಗ್ರೆಸ್‌ಗೆ ಬಂದರು. ಕಾಂಗ್ರೆಸ್ ಟಿಕೆಟ್ ಕೊಟ್ಟರೂ ಶೆಟ್ಟರ್ ಸೋತರು. ಇದೀಗ ಬೆಳಗಾವಿಯಲ್ಲಿ ಮಂಗಳಾ ಅಂಗಡಿ ಬದಲಿಗೆ ಶೆಟ್ಟರ್ ಅವರನ್ನು ನಿಲ್ಲಿಸಲಾಗಿದೆ. ಕರ್ನಾಟಕದಲ್ಲಿ 12, ದೇಶಾದ್ಯಂತ 100 ಹಾಲಿ ಎಂಪಿಗಳಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಇನ್ನು ಹುಬ್ಬಳ್ಳಿಯಲ್ಲಿ ಗೆಲ್ಲದ ಶೆಟ್ಟರ್ ಇಲ್ಲಿ ನಿಜವಾಗಿಯೂ ಗೆಲ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮೋದಿ ಕಾರ್ಯಕ್ರಮ ಸ್ಥಳಕ್ಕೆ NSUI ಸಂಘಟನೆ ಮುತ್ತಿಗೆ ಯತ್ನ
ಪ್ರಧಾನಿ ಮೋದಿ ಮಾತನಾಡಿದರೆ ಹಸಿ ಸುಳ್ಳು. ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮಗೆ ಕಾಂಗ್ರೆಸ್ ಅವಮಾನಿಸಿದೆ ಎಂದು ಮೋದಿ ಸುಳ್ಳು ಹೇಳಿದ್ದಾರೆ. ಈ ಮಹನೀಯರನ್ನು ಅತ್ಯಂತ ಗೌರವಯುತವಾಗಿ ಕಾಂಗ್ರೆಸ್ ನೋಡಿಕೊಂಡಿದೆ. ಭಕ್ತರ ಅನುಕೂಲಕ್ಕೆ ಯಲ್ಲಮ್ಮನ ಪ್ರಾಧಿಕಾರ ಮಾಡುತ್ತೇವೆ ಎಂದರು. ಇದನ್ನೂ ಓದಿ: ನೇಹಾ ಬದಲು ಮುಸ್ಲಿಂ ಸಾವಾಗಿದ್ರೆ ಸಿಎಂ ಹೆಲಿಕಾಪ್ಟರ್ ಇಳಿಸ್ತಿದ್ರು: ಯತ್ನಾಳ್
10 ವರ್ಷಗಳಿಂದ ಮೋದಿ ಪ್ರಧಾನಿ ಆಗಿದ್ದರೂ ಜನಸಾಮಾನ್ಯರಿಗೆ ಏನು ಪ್ರಯೋಜನ ಆಗಿಲ್ಲ. ಅಗತ್ಯ ಬೆಲೆ ಇಳಿಯಲಿಲ್ಲ. ಎಲ್ಲಿ ಹೋಯಿತು ಮೋದಿ ಹೇಳಿದ ಅಚ್ಛೆ ದಿನ್? 2014ರಲ್ಲಿ ಡಿಸೇಲ್ 48, ಇವತ್ತು 95 ರೂಪಾಯಿ ಆಗಿದೆ. ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟು ಆಗಿದೆ. ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ. ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ. ಸುಳ್ಳೇ ಅವರ ಮನೆ ದೇವರು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸ್ – ನೊಂದ ಮಹಿಳೆಯಿಂದ ಮಹಿಳಾ ಆಯೋಗಕ್ಕೆ ದೂರು
ನಾವು ನುಡಿದಂತೆ ನಡೆದಿದ್ದೇವೆ. ಚುನಾವಣೆಗೂ ಮುನ್ನ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದುವರೆಗೂ 200 ಕೋಟಿ ಮಹಿಳೆಯರು ಫ್ರೀ ಆಗಿ ಪ್ರಯಾಣ ಮಾಡಿದ್ದಾರೆ. ಈ ಹಿಂದಿನ ನಮ್ಮ ಸರ್ಕಾರ ಅನ್ನಭಾಗ್ಯ ಕಾರ್ಯಕ್ರಮದಡಿ 7 ಕೆಜಿ ನೀಡುತ್ತಿದ್ದೆವು. ಬಿಎಸ್ ಯಡಿಯೂರಪ್ಪ 5 ಕೆಜಿಗೆ ಇಳಿಸಿದರು. 2023ರಲ್ಲಿ 10ಕೆಜಿ ಅಕ್ಕಿಯನ್ನು ಫ್ರೀ ಆಗಿ ಕೊಡುತ್ತೇವೆ ಎಂದು ಹೇಳಿದರು. ನಾವು ದುಡ್ಡು ಕೊಟ್ಟರು ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಅಕ್ಕಿ ಬದಲಿಗೆ ತಿಂಗಳಿಗೆ 170 ರೂಪಾಯಿ ಕೊಡ್ತಾ ಇದ್ದೀವಿ. ಗೃಹ ಜ್ಯೋತಿ 200 ಯೂನಿಟ್‌ರವರೆಗೆ ಎಲ್ಲರಿಗೂ ಫ್ರೀ, ಗೃಹಲಕ್ಷ್ಮಿ ಯೋಜನೆಯಡಿ 1.20 ಕೋಟಿ ಮನೆಯ ಒಡತಿಯರಿಗೆ ತಿಂಗಳಿಗೆ 2,000 ರೂ. ನೀಡಲಾಗುತ್ತಿದೆ. ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಪ್ರತಿ ಕುಟುಂಬಕ್ಕೆ 5 ರಿಂದ 6 ಸಾವಿರ ರೂ. ಸಿಗುತ್ತಿದೆ ಎಂದರು. ಇದನ್ನೂ ಓದಿ: ರಾಮ ಮಂದಿರ ನಿರ್ಮಾಣ ಮಾಡದಂತೆ ಕಾಂಗ್ರೆಸ್, ಹಿಂಬಾಲಕರಿಂದ ಕುತಂತ್ರ: ಮೋದಿ
ಲೋಕಸಭಾ ಚುನಾವಣಾ ನಂತರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ. ಇದಕ್ಕಾಗಿ 50 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ಮೀಸಲು ಇಡಲಾಗಿದೆ. ನಮ್ಮ ಖಜಾನೆ ಖಾಲಿ ಆಗಿಲ್ಲ, ಆಗೋದು ಇಲ್ಲ ಎಂದು ಹೇಳಿದರು. ಬರ ಪರಿಹಾರ ನೀಡಲು ವಿಳಂಬ ಮಾಡಿದ ಕೇಂದ್ರ ಸರ್ಕಾರ 100 ರೂಪಾಯಿ ಕೇಳಿದರೆ ಕೇವಲ 19 ರೂಪಾಯಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ – ಸಮಗ್ರ ತನಿಖೆಗೆ ಎಸ್‌ಐಟಿ ರಚನೆ
ಬೆಳಗಾವಿ: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ತುಷ್ಟೀಕರಣ ರಾಜಕೀಯದ ಪರಿಣಾಮ ಬೆಳಗಾವಿ (Belagavi) ವಂಟಮೂರಿಯಲ್ಲಿ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ಚಿಕ್ಕೋಡಿ ಜೈನ ಮುನಿ ಹತ್ಯೆ ಮತ್ತು ಹುಬ್ಬಳ್ಳಿ ನೇಹಾ ಹತ್ಯೆ ನಡೆಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ಮಾಲಿನಿ ಸಿಟಿ ಮೈದಾನದಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡ ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಮೇಶ್ವರ ಬಾಂಬ್ ಸ್ಫೋಟ ಪ್ರಕರಣವಾಯಿತು. ಭಯೋತ್ಪಾದನೆಗೆ ಪ್ರೋತ್ಸಾಹಿಸುವ, ದೇಶವಿರೋಧಿ ಸಂಘಟನೆಯಾದ ಪಿಎಫ್‌ಐ ಸಂಘಟನೆಯನ್ನು ನಾವು ನಿರ್ಬಂಧ ಮಾಡಿದೆವು. ನಮ್ಮ ಸ್ವಾತಂತ್ರ‍್ಯ ಹೋರಾಟವನ್ನು ಕಾಂಗ್ರೆಸ್‌ನವರು ವೋಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಈಗಲೂ ತುಷ್ಟೀಕರಣದ ಪಾಪವನ್ನು ಮುಂದುವರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕಾಂಗ್ರೆಸ್‌ನವರಿಗೆ ಖಾರವಾಗಿ ಚಾಟಿಬೀಸಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: UPA Vs NDA ಯಾರ ಅವಧಿಯಲ್ಲಿ ಎಷ್ಟು ಬರ ಪರಿಹಾರ ಬಿಡುಗಡೆಯಾಗಿದೆ? – ದಾಖಲೆ ರಿಲೀಸ್ ಮಾಡಿ ಅಶೋಕ್ ಕಿಡಿ
ಮೈಸೂರು ರಾಜರನ್ನ ದೇಶ ಗರ್ವದಿಂದ ನೋಡುತ್ತಿದೆ. ಕಾಂಗ್ರೆಸ್ ವೋಟ್‌ಬ್ಯಾಂಕ್ ರಾಜಕೀಯ ಮಾಡುತ್ತಿದೆ. ರಾಜ ಮಹಾರಾಜರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ. ಕಾಂಗ್ರೆಸ್ ಔರಂಗಜೇಬನನ್ನು ಗುಣಗಾನ ಮಾಡುವ ಪಾರ್ಟಿ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಗ್ಗೆ ಕಾಂಗ್ರೆಸ್‌ಗೆ ನೆನಪಾಗಲ್ಲ. ನವಾಬ್, ಸುಲ್ತಾನ್ ವಿರುದ್ಧ ಒಂದೇ ಒಂದು ಅಕ್ಷರ ಕಾಂಗ್ರೆಸ್‌ನವರು ಮಾತನಾಡಲ್ಲ. ಕಾಂಗ್ರೆಸ್‌ನ ತುಷ್ಟೀಕರಣದ ನೀತಿ ಈಗ ಜನರಿಗೆ ಗೊತ್ತಾಗಿದೆ. ದೇಶದಲ್ಲಿ ಕಾಂಗ್ರೆಸ್ ಎಲ್ಲಿ ಗೆದ್ದು ಬರುತ್ತದೆ ಅಲ್ಲಿ ಅಭಿವೃದ್ಧಿ ಮಾಯವಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಭಿವೃದ್ಧಿ ಕೆಲಸಗಳು ನಿಂತಿವೆ. ರಸ್ತೆ, ನೀರಾವರಿ ಕೆಲಸ ಸ್ಥಗಿತವಾಗಿದೆ. ಎಲ್ಲಿ ಕಾಂಗ್ರೆಸ್ ಬಂತು ಅಲ್ಲಿ ಬರ್ಬಾದಿ ಬಂತು ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ – ತನಿಖಾ ವರದಿ ಬಂದ ಮೇಲೆ ಮಾತನಾಡ್ತೀನಿ ಎಂದ ಹೆಚ್‌ಡಿಕೆ
ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ರೈತರಿಗೆ ವಿಶ್ವಾಸಘಾತ ಮಾಡಿದೆ. ರೈತರ ಖಾತೆಗೆ 4,000 ಹಣ ಜಮೆ ಆಗುತ್ತಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ಬಂದ್ ಮಾಡಿದೆ. ಈ ನಿಮ್ಮ ಸೇವಕ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾನೆ. ಅದೇ ಕಾಂಗ್ರೆಸ್‌ನ ಅಣ್ಣ- ತಂಗಿ ಓಡಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಯಿಂದ ಜನ ಬದುಕ್ತಿದ್ದಾರೆ: ಡಿಕೆಶಿ
ಕಾಂಗ್ರೆಸ್‌ನ ಎಕ್ಸ್‌ರೇಯಿಂದ ತಾಯಂದಿರ ಮಂಗಳಸೂತ್ರ ಉಳಿಯಲ್ಲ. ಮೋದಿ ಇರೋವರೆಗೂ ಕಾಂಗ್ರೆಸ್‌ನ ಹುನ್ನಾರ ಫಲಿಸುವುದಿಲ್ಲ. ನಿಮ್ಮ ಕನಸೇ ಮೋದಿ ಸಂಕಲ್ಪ ಆಗಿದೆ. ನಿಮ್ಮ ಕನಸು ಸಾಕಾರ ಮಾಡಲು ನಾನು ನನ್ನ ಕ್ಷಣಗಳನ್ನು ನಿಮಗಾಗಿ ಮೀಸಲಿಟ್ಟಿದ್ದೇನೆ. ದಿನದ 24 ಗಂಟೆಯೂ ನಿಮಗಾಗಿ ಕೆಲಸ ಮಾಡುತ್ತೇನೆ. 2027ರವರೆಗೂ ನಾನು ಇರುವೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್, ಚಿಕ್ಕೋಡಿಯಲ್ಲಿ ಅಣ್ಣಾಸಾಹೆಬ್ ಜೊಲ್ಲೆಯನ್ನು ಗೆಲ್ಲಿಸಬೇಕು. ಕಮಲ ಚಿನ್ಹೆಗೆ ಮತ ಹಾಕಿದರೆ ನೇರವಾಗಿ ಮೋದಿಗೆ ಮತ ಬರಲಿದೆ. ಮೋದಿ ಗೆಲ್ಲಿಸಲು ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ನಾವು ಗ್ಯಾರಂಟಿಗೆ ಹಣ ಕೇಳಿಲ್ಲ, ಕೇಳೋದು ಇಲ್ಲ – ರೈತರಿಗಾಗಿ ಹಣ ಕೇಳಿದ್ವಿ: ಬಿಜೆಪಿ ವಿರುದ್ಧ ಸಿಎಂ ಕಿಡಿ
ಭಾರತದ 25 ಕೋಟಿ ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಕಳೆದ 10 ವರ್ಷದಲ್ಲಿ ಬಡತನ ನಿರ್ಮೂಲನೆ ಆಗಿದೆ. ಇದೇ ಕಾರಣಕ್ಕೆ ಮತ್ತೊಮ್ಮೆ ಮೋದಿ ಸರ್ಕಾರ ಬೇಕು ಎಂದು ದೇಶ ಹೇಳುತ್ತಿದೆ. ಕಾಂಗ್ರೆಸ್‌ನವರು ಸುಳ್ಳು ಹಬ್ಬಿಸಿದರು. ಕೊರೊನಾ ಸಂದರ್ಭದಲ್ಲಿ ವ್ಯಾಕ್ಸಿನ್ ಬಗ್ಗೆ ರಾಜಕೀಯ ಮಾಡಿದರು. ವಾಕ್ಸಿನ್ ಅನ್ನು ಬಿಜೆಪಿ ವ್ಯಾಕ್ಸಿನ್ ಎಂದರು. ಇವಿಎಂ ವಿಚಾರದಲ್ಲಿ ದೇಶದ ಬಗ್ಗೆ ಅಪಪ್ರಚಾರ ಮಾಡಿದರು. ಕಳೆದ 10 ವರ್ಷದಲ್ಲಿ ದೇಶ ಪ್ರಗತಿ ಸಾಧಿಸುತ್ತಿದೆ. ಕಾಂಗ್ರೆಸ್‌ನವರು ಮಾನಸಿಕವಾಗಿ ಬ್ರಿಟಿಷರ ಮನಸ್ಥಿತಿಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಭಯೋತ್ಪಾದನೆಗೆ ಬ್ರೇಕ್ ಹಾಕಲಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತ ಇರುವಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: Prajwal Revanna Case: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಕೆಲವೇ ಹೊತ್ತಲ್ಲಿ ಎಸ್‌ಐಟಿ ರಚನೆ: ಪರಮೇಶ್ವರ್
ಬೆಳಗಾವಿ: ಲೋಕಸಭಾ ಮಹಾಸಮರದ (Lok Sabha Elections 2024) ಎರಡು ದಿನಗಳ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಿದ್ದಾರೆ. ಇಂದು ರಾತ್ರಿ ಬೆಳಗಾವಿಯ (Belagavi) ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shetter) ಹಾಗೂ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಅಲ್ಲಿಂದ ಮೋದಿ ಅವರು ಖಾಸಗಿ ಹೋಟೆಲ್‌ನತ್ತ ಪ್ರಯಾಣ ಬೆಳೆಸಿದರು. ಮೋದಿ ಆಗಮನದ ಹಿನ್ನೆಲೆ ಬೆಳಗಾವಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಇದನ್ನೂ ಓದಿ: ಏ.30 ಕ್ಕೆ ಶಿವಮೊಗ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ
ಪ್ರಪ್ರಥಮವಾಗಿ ಬೆಳಗಾವಿಯಲ್ಲಿ ವಾಸ್ತವ ಹೂಡಲಿರುವ ಪ್ರಧಾನಿ ಮೋದಿ ರಾಜ್ಯದ 11 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮತಯಾಚಿಸಲಿದ್ದಾರೆ.
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಾಗಿರುವ ಲಿಂಗಾಯತ, ಮರಾಠಾ ಹಾಗೂ ಕುರುಬ ಸಮುದಾಯದ ಮತಗಳ ಬೇಟೆಗಾಗಿ ಸೂಪರ್ ಪ್ಲಾನ್ ಮಾಡಿ ಅದಕ್ಕೆ ಬೇಕಾದ ಭಾಷಣ ಮಾಡಲಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ನಾಡದ್ರೋಹಿ: ಡಿಕೆಶಿ ವಾಗ್ದಾಳಿ
ಬೆಳಗಾವಿ: ಸಚಿವ ಜಮೀರ್ ಅಹ್ಮದ್ (Zameer Ahemad Khan) ಅವರು ಇಂದು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಡಯಾಸ್ ಗಾಜನ್ನು ಕೈಯಿಂದ ಗುದ್ದಿ ಒಡೆದು ಹಾಕಿದ ಪ್ರಸಂಗವೊಂದು ಬೆಳಗಾವಿಯಲ್ಲಿ (Belagavi) ನಡೆದಿದೆ.
ಜಮೀರ್ ಅವರು ಇಂದು ಬೆಳಗಾವಿಯ ಗೋಕಾಕ್ ನಗರದ ಕೆ.ಜಿ ಎನ್ ಹಾಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಪರ ಪ್ರಚಾರ ಭಾಷಣದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಸಚಿವರು ರೋಷಾವೇಶ ತೋರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂಬುಲೆನ್ಸ್‌ನಿಂದ ಸರಣಿ ಅಪಘಾತ – ಚಾಲಕನ ಬಂಧನ
ಸಾರೇ ಜಹಾಂಸೇ ಅಚ್ಚಾ ಎಂದು ಹೇಳುತ್ತ ನಾವೆಲ್ಲಾ ಒಂದು. ದೇಶ ಹಮಾರಾ ಹೈ ಹಮಾರಾ ಹೈ ಎನ್ನುತ್ತಾ ಜಮೀರ್ ಅವರು ಕೈಯಿಂದ ಡಯಾಸ್ ಗಾಜಿಗೆ ಗುದ್ದಿದ್ದಾರೆ. ಜಮೀರ್ ಗುದ್ದುತ್ತಿದ್ದಂತೆಯೇ ಡಯಾಸ್ ಗೆ ಅಳವಡಿಸಿದ ಗಾಜು ಒಡೆದು ಚೂರಾಗಿದೆ. ಗಾಜು ಪೀಸ್ ಪೀಸ್ ಆಗುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಕೂಗ ತೊಡಗಿದ್ದಾರೆ.
ಬೆಳಗಾವಿ: ಏ.28ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬೆಳಗಾವಿಗೆ (Belagavi) ಆಗಮಿಸಲಿದ್ದು, ಬೃಹತ್ ಚುನಾವಣಾ ಸಮಾವೇಶ ನಡೆಸಲಿದ್ದಾರೆ. ಬೆಳಗಾವಿ ಲೋಕಸಭಾ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಒಳಗೊಂಡಂತೆ ಬೃಹತ್ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ (Anil Benake) ತಿಳಿಸಿದರು.
ನಗರದ ಬಿಜೆಪಿ ಮಾಧ್ಯಮ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.28ಕ್ಕೆ ಸಂಜೆ 5 ಗಂಟೆಗೆ ಸಮಾವೇಶ ನಡೆಯಲಿದೆ ಎಂದು ಮಾಹಿತಿ ಇತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ, ಅಂದು ಬೆಳಗ್ಗೆ 11:30ಕ್ಕೆ ಬೆಳಗಾವಿಗೆ ಮೋದಿ ಆಗಮಿಸಿ, 12 ಗಂಟೆಗೆ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎರಡೂ ಲೋಕಸಭೆಯ ಅಭ್ಯರ್ಥಿಗಳಾದ ಅಣ್ಣಾಸಾಬ ಜೊಲ್ಲೆ ಹಾಗೂ ಜಗದೀಶ್ ಶೆಟ್ಟರ್ ಅವರು ವೇದಿಕೆ ಮೇಲೆ ಉಪಸ್ಥಿತರಿರಲಿದ್ದಾರೆ ಎಂದರು. ಇದನ್ನೂ ಓದಿ: ಕರ್ನಾಟಕಕ್ಕೆ ಅನ್ಯಾಯ, ಮೋದಿ ಸರ್ಕಾರ ರೈತರನ್ನು ದ್ವೇಷಿಸುತ್ತಿದೆ: ಸಿಎಂ ಕಿಡಿ
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಚುನಾವಣಾ ಪ್ರಭಾರಿ ರಾಧಾ ಮೋಹನ್ ದಾಸ್, ಬೆಳಗಾವಿ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಶಾಸಕರು ಭಾಗವಹಿಸುತ್ತಾರೆ. ಚಿಕ್ಕೋಡಿ ಲೋಕಸಭಾ ಹಾಗೂ ಬೆಳಗಾವಿ ಲೋಕಸಭಾ ಒಳಗೊಂಡಂತೆ ಕಾರ್ಯಕ್ರಮ ಆಗಲಿದೆ. ಈಗಾಗಲೇ ಬೆಳಗಾವಿ ಹೊರವಲಯದ ಮಾಲಿನಿ ಸಿಟಿಯಲ್ಲಿ ಪೆಂಡಾಲ್ ಹಾಕಲು ಪೂಜೆ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನೇಹಾ ಹಿರೇಮಠ ತಂದೆಯ ಬಳಿ ಕ್ಷಮೆಯಾಚಿಸಿದ ಸಿಎಂ!
ಬಿಜೆಪಿ ಮುಖಂಡ ಎಂ.ಬಿ.ಜಿರಲಿ ಮಾತನಾಡಿ, ಜನಪ್ರಿಯ ನಾಯಕ ಮೋದಿಯವರು ಚುನಾವಣಾ ಪ್ರಚಾರಕ್ಕೆ ರವಿವಾರ ಬರುತ್ತಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸೇರುತ್ತಾರೆ ಎಂದು ತಿಳಿಸಿದರು. ಈ ವೇಳೆ ಎಂಎಲ್‌ಸಿ ಹನಮಂತ ನಿರಾಣಿ, ಮಾಜಿ ಶಾಸಕ ಸಂಜಯ್ ಪಾಟೀಲ್, ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶುಭಾಷ್ ಪಾಟೀಲ್, ಎಫ್‌ಎಸ್ ಸಿದ್ದನಗೌಡ, ಹನಮಂತ ಕೊಂಗಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳೋದು ಅಪರಾಧ: ಬೆಂಗ್ಳೂರಿನ ಹಲ್ಲೆ ಪ್ರಸ್ತಾಪಿಸಿ ಮೋದಿ ಕಿಡಿ
– ನೇಹಾ ಜೊತೆ ಮದುವೆ ಬೇಡವೆಂದು ಕೈ ಮುಗಿದಿದ್ದೆ
– ಹಣಕ್ಕಾಗಿ ಮಾತ್ರ ಫಯಾಜ್ ಕಾಲ್ ಮಾಡ್ತಿದ್ದ
– ಮುನವಳ್ಳಿ ಜನತೆ ನನ್ನ ಪಾಲಿನ ದೇವರು
ಬೆಳಗಾವಿ: ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath Murder Case) ಕೊಲೆ ಪ್ರಕರಣ ಸಂಬಂಧ ಆರೋಪಿ ಫಯಾಜ್ (Accused Fayaz) ತಂದೆ ಬಾಬಾ ಸಾಹೇಬ್ ಸುಬಾನಿಯವರು ಕಣ್ಣೀರು ಹಾಕುತ್ತಲೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ನನ್ನ ಮಗನನ್ನು ಸೈನಿಕನಾಗಿ ನೋಡುವ ಆಸೆ ನನ್ನದಾಗಿತ್ತು. ಆದರೆ ಇಂದು ಆತ ಕ್ಷಮಿಸಲಾರದ ತಪ್ಪು ಮಾಡಿದ್ದಾನೆ. ಅವನಿಗೆ ಯಾವ ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆ. ಮುಂದೆ ಯಾವ ಹೆಣ್ಮಕ್ಕಳ ಮೇಲೆ ಯಾರೂ ಕೈ ಮಾಡಬಾರದು. ಇವನಿಗೆ ಕೊಡುವ ಶಿಕ್ಷೆಯಿಂದ ಅಂತಹ ಭಯ ಜನರಲ್ಲಿ ಮೂಡಬೇಕು. ಆ ರೀತಿಯ ಶಿಕ್ಷೆಯನ್ನು ನೀಡಲಿ ಎಂದು ಹೇಳುತ್ತಾ ನೇಹಾ ತಂದೆ ಹಾಗೂ ರಾಜ್ಯದ ಜನರ ಬಳಿ ಕ್ಷಮೆಯಾಚಿಸಿದ್ದಾರೆ.
ಪಬ್ಲಿಕ್ ಟಿವಿಗೆ ಹೇಳಿದ್ದೇನು..?: 8 ತಿಂಗಳ ಹಿಂದೆ ನೇಹಾ ಅವರ ತಂದೆ ಕರೆ ಮಾಡಿ, ಸರ್ ನಿಮ್ಮ ಮಗನಿಂದ ನಮ್ಮ ಮಗಳಿಗೆ ತೊಂದರೆ ಇದೆ. ದಯವಿಟ್ಟು ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದಿದ್ದರು. ಈ ಕಾರಣಕ್ಕಾಗಿ ನಾನು ಅವನನ್ನು ಬೆಳಗಾವಿಗೆ ಕರೆದುಕೊಂಡು ಬಂದು ಇಲ್ಲಿ ಇಟ್ಟುಕೊಂಡಿದ್ದೆ. ಆದರೆ ಕಳೆದ 2 ವರ್ಷದಿಂದ ಆತ ನನ್ನ ಜೊತೆಗೆ ಇರಲಿಲ್ಲ. ಬದಲಾಗಿ ತಾಯಿ ಜೊತೆ ಇದ್ದ. ನಾನು ನನ್ನ ಪಾಡಿಗೆ ಕೆಲಸ ಮಾಡಿಕೊಳ್ಳುತ್ತಾ ಇದ್ದೆ. ಈ ಘಟನೆ ನಡೆದು 6 ಗಂಟೆಗೆ ನನಗೆ ಗೊತ್ತಾಯಿತು. ಅಲ್ಲಿವರೆಗೆ ನನನಗೆ ಏನೂ ಗೊತ್ತಿಲ್ಲ ಎಂದರು.
ನಾನು ಒಬ್ಬನೇ ಬೇರೆ ಇದ್ದೀನಿ: ನನ್ನ ಮಗನನ್ನು ದೇಶ ಸೈನಿಕನನ್ನಾಗಿ ಮಾಡಬೇಕು ಎಂದು ಆಸೆ ಪಟ್ಟಿದ್ದೆ. ಅದಕ್ಕಾಗಿ ಅವನನ್ನು ಬಾಡಿಬಿಲ್ಡರ್ ಅನ್ನಾಗಿ ಮಾಡುತ್ತಿದ್ದೆ. 2 ವರ್ಷದಿಂದ ಅವನು ನನ್ನ ಜೊತೆ ಮಾತಾಡ್ತಿರಲಿಲ್ಲ. ಶಿಕ್ಷಣಕ್ಕಾಗಿ ಹಣ ಕೊಡುತ್ತಿದ್ದೆ ಅಷ್ಟೇ. ಮಗ ಹಾಗೂ ಮಗಳು ನನ್ನ ಪತ್ನಿಯ ಜೊತೆ ವಾಸವಾಗಿದ್ದಾರೆ. ನಾನು ಒಬ್ಬನೇ ಬೇರೆ ಇದ್ದೀನಿ. 6 ವರ್ಷದಿಂದ ನಾವಿಬ್ಬರು ಗಂಡ-ಹೆಂಡತಿ ಕೌಟುಂಬಿಕ ಕಲಹದಿಂದ ಬೇರೆಯಾಗಿದ್ದೇವೆ. ಮಗ ನನ್ನ ಜೊತೆ ಮಾತಾಡದೇ 3 ತಿಂಗಳು ಆಯ್ತು. ಹಣ ಬೇಕಾದರೆ ಮಾತ್ರ ಆತ ನನಗೆ ಫೋನ್ ಮಾಡುತ್ತಾನೆ. ಇಲ್ಲವೆಂದರಲ್ಲಿ ಫೋನ್ ಮಾಡಲ್ಲ ಎಂದು ತಿಳಿಸಿದರು.
ಮುನವಳ್ಳಿ ಜನತೆಗೆ ಕೃತಜ್ಞ: ಮುನವಳ್ಳಿ ಜನತೆ ನನ್ನ ಪಾಲಿನ ದೇವರು. ಇವತ್ತು ಭವಾನಿ ಸರ್ (ನನ್ನ) ಉಳಿಸಿದ್ದಾರೆ, ಬೆಳೆಸಿದ್ದಾರೆ ಅಂದ್ರೆ ಅದು ಮುನವಳ್ಳಿ ಜನತೆ ನನಗೆ ಕೊಟ್ಟ ಭಿಕ್ಷೆ. ನಾನು ಈ ಋಣ ತೀರಿಸಲು ಆಗಲ್ಲ. ಅವರು ನನ್ನ ಮೇಲೆ ತುಂಬಾ ಅಭಿಮಾನ ಇಟ್ಟಿದ್ದಾರೆ. ಅವರ ಅಭಿಮಾನಕ್ಕೆ ನಾನು ಕೃತಜ್ಞನನಾಗಿದ್ದೇನೆ. ಎಲ್ಲಿ ಅನ್ಯಾಯ ಆಗುತ್ತೋ ಅಲ್ಲಿ ಪ್ರತಿಭಟನೆ ಆಗುತ್ತೆ. ಈ ಪ್ರಕರಣದಲ್ಲಿ ಜನ ಪ್ರತಿಭಟನೆ ಮಾಡುವುದರಲ್ಲಿ ತಪ್ಪಿಲ್ಲ. ಹೀಗಾಗಿ ಪ್ರತಿಭಟನೆ ಮಾಡುವವರಿಗೆ ದೊಡ್ಡ ಸಲಾಂ. ಇದರ ಉದ್ದೇಶ ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎಂಬುದಾಗಿದೆ ಎಂದರು. ಇದನ್ನೂ ಓದಿ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೀನಿ- ನೇಹಾ ಹಂತಕ ಫಯಾಜ್ ತಂದೆ ಕಣ್ಣೀರು
ಮದುವೆ ಬೇಡವೆಂದು ಕೈ ಮುಗಿದಿದ್ದೆ: ನನ್ನ ಮಗ ತಪ್ಪು ಮಾಡಿದ್ದಾನೆ ಒಪ್ಪಿಕೊಳ್ಳುತ್ತೇನೆ. ಆದರೆ ಅವರಿಬ್ಬರ ನಡುವೆ ಅಫೇರ್ ಇತ್ತು. ಮಗ ಅವಳನ್ನು ಮದುವೆ ಆಗುತ್ತೇನೆ ಎಂದಿದ್ದ. ಆಗ ನಾನು ಬೇಡಪ್ಪ.. ಅವರು ಗುರುಗಳು ಅಂಥವರ ಮಗಳನ್ನು ಮದುವೆ ಆಗುವುದು ನಮಗೆ ಗೌರವ ಅಲ್ಲ.. ಬೇಡ. ಮೊದಲೇ ದೇಶ ಹಾಗೂ ರಾಜ್ಯದಲ್ಲಿ ಲವ್ ಜಿಹಾದ್ ಅನ್ನೋದು ಹುಟ್ಟಿಕೊಂಡಿದೆ. ಇದಕ್ಕೆ ಬಣ್ಣ ಕಟ್ಟಿ ನಿನಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಬೇಡ ಅಂತಾ ಅವನ ಮುಂದೆಯೇ ಕೈಮುಗಿದು ಕೇಳಿಕೊಂಡಿದ್ದೆ. ಇವತ್ತು ಇಂತಹ ಘಟನೆ ನಡೆದರೂ ನಾನು ಅವನ ಪರವಾಗಿಲ್ಲ. ಯಾಕೆಂದರೆ ಯಾರ ಮಕ್ಕಳಾದರೂ ನಮ್ಮ ಮಕ್ಕಳ ಥರನೇ. ಹೆಣ್ಮಕ್ಕಳು ಕಣ್ಣೀರು ಹಾಕಿದರೆ ಯಾರಿಗೂ ಒಳ್ಳೆಯದಾಗಲ್ಲ ಎಂದು ಸುಬಾನಿ ಹೇಳಿದರು.
ಅವನಿಗೆ ಯಾವ ಶಿಕ್ಷೆ ಕೊಟ್ಟರೂ ನನಗೆ ಓಕೆ. ಮುಂದೆಯಾದರು ಇಂತಹ ಶಿಕ್ಷೆಯಿಂದ ಹೆಣ್ಮಕ್ಕಳು ಸುರಕ್ಷಿತವಾಗಿರಲಿ. ಆ ಭಯಕ್ಕಾದರೂ ಜನಗಳು ತಪ್ಪು ಮಾಡುವುದು ಬಿಡುತ್ತಾರೆ ಎಂಬುದು ನನ್ನ ನಂಬಿಕೆ ಆಗಿದೆ ಎಂದರು.
ಪ್ರಕರಣ ವಿವರ: ಗುರುವಾರ ಸಂಜೆ 4.45ರ ಸುಮಾರಿಗೆ ಆರೋಪಿ ಫಯಾಜ್ ತನ್ನ ಕೈಯಲ್ಲಿ ಚಾಕು ಹಿಡಿದು, ಮಾಸ್ಕ್ ಧರಿಸಿಕೊಂಡು ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್ ಒಳಗೆ ಎಂಟ್ರಿ ಕೊಟ್ಟಿದ್ದನು. ಇತ್ತ ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆ. ನೇಹಾಳನ್ನು ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿನಿಯರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ನೇಹಾ ಮೃತಪಟ್ಟಿದ್ದಾಳೆ.
ಇತ್ತ ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿ ಕಿಮ್ಸ್ ಆಸ್ಪತ್ರೆಯ ಹಿಂಬಂದಿ ಅವಿತಿದ್ದ ಫಯಾಜ್‍ನನ್ನು ಬಂಧಿಸಲಾಗಿದೆ. ಸುದ್ದಿ ಹಬ್ಬುತ್ತಿದ್ದಂತೆಯೇ ಹುಬ್ಬಳ್ಳಿಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಇಳಿದವು. ಆರೋಪಿಯನ್ನು ಎನ್ ಕೌಂಟರ್ ಮಾಡಿ ಇಲ್ಲವೇ ಗಲ್ಲಿಗೇರಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇಂದು ಕೂಡ ಪ್ರತಿಭಟನೆ ಮುಂದುವರಿದಿದೆ.
ಹುಬ್ಬಳ್ಳಿ: ನನ್ನ ಮಗನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ, ಮುಂದೆ ಇಂಥ ಕ್ರೂರ ಕೆಲಸಕ್ಕೆ ಯಾರೂ ಕೈ ಹಾಕಬಾರದು ಅಂಥ ಶಿಕ್ಷೆ ನನ್ನ ಮಗನಿಗೆ ಆಗಲಿ ಎಂದು ನೇಹಾ ಹಿರೇಮಠ (Neha Hiremath Murder Case) ಕೊಲೆ ಪ್ರಕರಣದ ಆರೋಪಿ ಫಯಾಜ್ (Fayaz) ತಂದೆ ಬಾಬಾ ಸಾಹೇಬ್ ಸುಬಾನಿ ಕಣ್ಣೀರು ಹಾಕಿದ್ದಾರೆ.
ರಾಜ್ಯದ ಜನತೆಯಲ್ಲಿ ಕ್ಷಮೆ: ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ. ಹೆಣ್ಣು ಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದು, ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಾರೆ. ಅವರ ಹೋರಾಟಕ್ಕೆ ಜಯವಾಗಲಿ. ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡುವಂತೆ ಕಣ್ಣೀರಾಕುತ್ತಲೇ ಭವಾನಿ ಮನವಿ ಮಾಡಿದ್ದಾರೆ.
ಪ್ರತಿಭಟನಾಕಾರರಿಗೆ ಸಲಾಂ : ಯಾವ ಹೆಣ್ಣು ಮಕ್ಕಳ ಮೇಲೆ ಯಾರೂ ಕಣ್ಣು ಹಾಕಬಾರದು. ಅವಳು ನನ್ನ ಮಗಳಿದ್ದ ಹಾಗೆ. ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು. ಪ್ರತಿಭಟನೆ ಮಾಡುವವರಿಗೆ ದೊಡ್ಡ ಸಲಾಂ ಎಂದು ಭವಾನಿ ಹೇಳಿದರು.
ಇದೇ ವೇಳೆ ನೇಹಾ- ಫಯಾಜ್ ರೀಲ್ಸ್ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಬ್ಬರ ನಡುವೆ ಅಫೇರ್ ಇತ್ತು. ಅವರು ಗುರುಗಳು ಈ ನಿಮ್ಮ ಪ್ರೀತಿಗೆ ಲವ್ ಜಿಹಾದ್ ಬಣ್ಣ ಕಟ್ಟಿ ನಿನ್ನ ಟಾರ್ಗೆಟ್ ಮಾಡ್ತಾರೆ ಎಂದು ನನ್ನ ಮಗನಿಗೆ ಬುದ್ದಿ ಹೇಳಿದ್ದೇ ಎಂದು ಭವಾನಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಬೆಳಗಾವಿ: ಹುಬ್ಬಳ್ಳಿ ಯುವತಿ (Hubballi Murder Case) ಕೊಲೆ ಪ್ರಕರಣದ ಆರೋಪಿ ಫಯಾಜ್ (Fayaz) ಮನೆಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆರೋಪಿ ಕುಟುಂಬಸ್ಥರು ಬೆಳಗಾವಿ (Belagavi) ಪೊಲೀಸರ ಸುಪರ್ದಿಯಲ್ಲಿದ್ದಾರೆ.