Tag: belagavi

  • ಕಿಚ್ಚನ ಅಭಿಮಾನಿಯಿಂದ ಬಡ ಮಹಿಳೆಗೆ ಸೂರು ಉಡುಗೊರೆ!

    ಕಿಚ್ಚನ ಅಭಿಮಾನಿಯಿಂದ ಬಡ ಮಹಿಳೆಗೆ ಸೂರು ಉಡುಗೊರೆ!

    ಬೆಳಗಾವಿ: ಕರ್ನಾಟಕದ ರನ್ನ ಕಿಚ್ಚ ಸುದೀಪ್ (Sudeep) ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕಿಚ್ಚನ ಹುಟ್ಟು ಹಬ್ಬಕ್ಕೆ (Birth Day) ಅವರ ಅಭಿಮಾನಿಯೊಬ್ಬರು ಅನಾಥ ಕುಟುಂಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

     

    ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದಲ್ಲಿ ಒಂದು ಗುಂಟೆ ಜಾಗದಲ್ಲಿ ಬಡ ಮಹಿಳೆ ರತ್ನವ್ವ ಅವರಿಗೆ ಕಿಚ್ಚನ ಅಭಿಮಾನಿ ಆದಿಶೇಷ ಮನೆ (House) ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬಡ ಮಹಿಳೆಗೆ ಸೂರು ಒದಗಿಸುವುದರ ಮೂಲಕ ಕಿಚ್ಚನ ಬರ್ತಡೇಯನ್ನು ವಿಭಿನ್ನವಾಗಿ ಆಚರಿಸಲಾಗಿದೆ.  ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌

    ಸುದೀಪ್ ಹುಟ್ಟುಹಬ್ಬವನ್ನು ಮನೆಯ ಮುಂದೆ ಕೇಕ್ ಕಟ್ ಮಾಡಿ ರಿಬ್ಬನ್ ಟೇಪ್ ಕತ್ತರಿಸಿ ಗೃಹ ಪ್ರವೇಶ ಕಾರ್ಯಕ್ರಮ ಮಾಡಲಾಯಿತು. ತಂದೆ ತಾಯಿ ಇಲ್ಲದ ಒಂಭತ್ತು ಜನ ಮೊಮ್ಮಕ್ಕಳೊಂದಿಗೆ ರತ್ನವ್ವ ಬದುಕು ಸಾಗಿಸುತ್ತಿದ್ದಾರೆ.

    ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಸದ್ಯ ರತ್ನವ್ವ ಒಬ್ಬರೇ ಆಸರೆಯಾಗಿದ್ದು ಮನೆಯ ಸಂಕಷ್ಟವನ್ನು ಗಮನಿಸಿ ಆದಿಶೇಷ ನಾಯಕ ಮನೆ ನಿರ್ಮಿಸಿಕೊಟ್ಟಿದ್ದಾರೆ.

  • ಬೆಳಗಾವಿ| ದೇವಸ್ಥಾನದ ಜಾಗಕ್ಕಾಗಿ ಕೊಲೆ – ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಬೆಳಗಾವಿ| ದೇವಸ್ಥಾನದ ಜಾಗಕ್ಕಾಗಿ ಕೊಲೆ – ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟ

    ಬೆಳಗಾವಿ: ಗೌಂಡವಾಡದ ಯುವಕನ ಕೊಲೆ ಪ್ರಕರಣದ ಐವರು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ ‌ಮತ್ತು ಸತ್ರ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

    ಗೌಂಡವಾಡ ಗ್ರಾಮದ ಭೈರವನಾಥ ದೇವಸ್ಥಾನ ಜಾಗ ಸಂಬಂಧ ಎರಡು ಗುಂಪುಗಳ ಮಧ್ಯೆ ಗಲಾಟೆಗಳು ನಡೆಯುತ್ತಿತ್ತು. ಭೈರವನಾಥ ದೇವಸ್ಥಾನ ಜಾಗದ ಪರ ಹೋರಾಟ ನಡೆಸುತ್ತಿದ್ದ ಸತೀಶ್ ಪಾಟೀಲನನ್ನು 18 ಸೆಪ್ಟೆಂಬರ್ 2022 ರಂದು ರಾತ್ರಿ ಮನೆ ಮುಂದೆ ಕೊಲೆ ಮಾಡಿದ್ದರು.

     

    ಈ ಸಂಬಂಧ ಐವರಿಗೆ ಕಠಿಣ ಜೀವಾವಧಿ ಶಿಕ್ಷೆ, ಹಾಗೂ ತಲಾ ಎರಡು ಲಕ್ಷ ದಂಡವನ್ನು ಕೋರ್ಟ್ ವಿಧಿಸಿದ್ದು ಪ್ರಕರಣದ ನಾಲ್ವರು ಅಪರಾಧಿಗಳಿಗೆ ಸಾಮಾನ್ಯ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ. ಮೂರು ವರ್ಷಗಳ ಕಾಲ ವಾದ ಪ್ರತಿವಾದ ಆಲಿಸಿ ಅಂತಿಮ ತೀರ್ಪುನ್ನು ಕೋರ್ಟ್ ಪ್ರಕಟಿಸಿದೆ.  ಇದನ್ನೂ ಓದಿ: ಧರ್ಮಸ್ಥಳದ ಅಪಪ್ರಚಾರಕ್ಕೆ ಫಂಡಿಂಗ್ ಸಮೀರ್ ವಿರುದ್ಧ ಐಟಿಗೆ ದೂರು ನೀಡಲು ಚಿಂತನೆ

    ಬೆಳಗಾವಿ ಎರಡನೇ ಹೆಚ್ಚುವರಿ ಜಿಲ್ಲಾ ‌ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಕೆ.ಎ‌ನ್‌ ಅವರು ಈ ತೀರ್ಪು ಪ್ರಕಟಿಸಿದ್ದಾರೆ.

    ಗೌಂಡವಾಡ ಗ್ರಾಮದ ಆನಂದ ರಾಮಾ ಕುಟ್ರೆ, ಅನರ್ವ್ ಕುಟ್ರೆ, ಜಾಯಪ್ಪ ನೀಲಜಕರ, ಮಹಾಂತೇಶ ನೀಲಜಕರ ಹಾಗೂ ಶಶಿಕಲಾ ಕುಟ್ರೆಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

  • `ಪರಮಾತ್ಮ ಬರ್ತಾನೆ ಜೀವ ಒಯ್ಯುತ್ತಾನೆ’ – ದೇವರನ್ನ ನೋಡಲು ದೇಹ ತ್ಯಾಗಕ್ಕೆ ನಿರ್ಧರಿಸಿದ್ದ 21 ಭಕ್ತರು!

    `ಪರಮಾತ್ಮ ಬರ್ತಾನೆ ಜೀವ ಒಯ್ಯುತ್ತಾನೆ’ – ದೇವರನ್ನ ನೋಡಲು ದೇಹ ತ್ಯಾಗಕ್ಕೆ ನಿರ್ಧರಿಸಿದ್ದ 21 ಭಕ್ತರು!

    ಚಿಕ್ಕೋಡಿ: `ಪರಮಾತ್ಮ ಬರ್ತಾನೆ ಜೀವ ಒಯ್ಯುತ್ತಾನೆ’ ಅಂತ ಸೆಪ್ಟೆಂಬರ್ 8 ರಂದು ದೇವರನ್ನ ನೋಡಲು 21 ಭಕ್ತರು ದೇಹತ್ಯಾಗ ಮಾಡಲು ಹೊರಟಿದ್ದ ಭಕ್ತಿಯ ಪರಕಾಷ್ಠೆಯ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ನಡೆದಿದೆ.

    ಸೆಪ್ಟೆಂಬರ್ 08 ರಂದು ಪ್ರಾಣತ್ಯಾಗ ಮಾಡೋದಕ್ಕೆ 10ಕ್ಕೂ ಹೆಚ್ಚು ಭಕ್ತರು (Devotees) ಮುಂದಾಗಿದ್ದದ್ದು ಆಧುನಿಕ ಯುಗದಲ್ಲಿ ಮೂಢನಂಬಿಕೆ ಪದ್ಧತಿ ಇನ್ನು ಜೀವಂತವಾಗಿದಿಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಅನಂತಪುರ ಗ್ರಾಮದ ಇರಕರ ಕುಟುಂಬದ 4 ಜನ ಸೇರಿದಂತೆ 10ಕ್ಕೂ ಹೆಚ್ಚು ಭಕ್ತರು ಪ್ರಾಣ ತ್ಯಾಗಕ್ಕೆ ನಿರ್ಧಾರ ಮಾಡಿದ್ದರು. ಹರಿಯಾಣದ ವಿವಾದತ್ಮಕ ಸಂತ ರಾಮಪಾಲ ಅನುಯಾಯಿಗಳು ದೇಹತ್ಯಾಗ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣದಲ್ಲಿ ಅಮಾಯಕ ಮಾಸ್ಕ್ ಮ್ಯಾನ್‌ನನ್ನು ಬಲಿ ಕೊಡ್ತಿದ್ದಾರೆ: ಪಿ.ರಾಜೀವ್

    2014ರ ಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಂತ ರಾಮಪಾಲ ಅವರ ಪುಸ್ತಕ ಓದಿ ಹಾಗೂ ಪ್ರವಚನ ಕೇಳಿ ಅನಂತಪುರ ಗ್ರಾಮದ ಇರಕರ ಕುಟುಂಬದ, ತುಕಾರಾಮ, ಸಾವಿತ್ರಿ, ರಮೇಶ್, ವೈಷ್ಣವಿ ಪ್ರಾಣತ್ಯಾಗಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರಾದ ʻಬುರುಡೆʼ ಸಮೀರ್‌ – ವಿಚಾರಣೆ ಶುರು

    ಇರಕರ ಕುಟುಂಬ ಹಾಗೂ ಉತ್ತರ ಪ್ರದೇಶದ 17 ಭಕ್ತರು ಪ್ರಾಣ ತ್ಯಾಗಕ್ಕೆ ನಿರ್ಧಾರ ಮಾಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚಿಕ್ಕೋಡಿ ಉಪ ವಿಬಾಗಾಧಿಕಾರಿ ಸುಭಾಷ ಸಂಪಗಾಂವಿ ಹಾಗೂ ಪೊಲೀಸರು ಮತ್ತು ಮಠಾಧೀಶರಿಂದ ಭಕ್ತರ ಮನವೊಲಿಕೆ ಮಾಡಿದ ಬಳಿಕ ಸಧ್ಯ ದೇಹತ್ಯಾಗ ‌ನಿರ್ಧಾರದಿಂದ ಭಕ್ತರು ಹಿಂದೆ ಸರಿದಿದ್ದಾರೆ.

  • ಬೆಳಗಾವಿಗೆ ಡ್ರಗ್ಸ್‌ ವಿತರಿಸುತ್ತಿದ್ದ ಗ್ಯಾಂಗ್‌ ಸದಸ್ಯರು ಅರೆಸ್ಟ್‌ – 50  ಕೆಜಿ ಗಾಂಜಾ, 30 ಲಕ್ಷದ ಮಾದಕ ವಸ್ತು ಜಪ್ತಿ

    ಬೆಳಗಾವಿಗೆ ಡ್ರಗ್ಸ್‌ ವಿತರಿಸುತ್ತಿದ್ದ ಗ್ಯಾಂಗ್‌ ಸದಸ್ಯರು ಅರೆಸ್ಟ್‌ – 50 ಕೆಜಿ ಗಾಂಜಾ, 30 ಲಕ್ಷದ ಮಾದಕ ವಸ್ತು ಜಪ್ತಿ

    ಬೆಳಗಾವಿ: ಕುಂದಾನಗರಿಗೆ ಡ್ರಗ್ಸ್‌ (Drugus) ವಿತರಣೆ ಮಾಡುತ್ತಿದ್ದ ಗ್ಯಾಂಗ್‌ ಸದಸ್ಯರನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಮುಂಬೈನಲ್ಲಿದ್ದ ಕಿಂಗ್ ಪಿನ್ ಮಾಸ್ಟರ್ ಮೈಂಡ್ ಇಸ್ಮಾಯಿಲ್ ಸದ್ದಾಂ ಸಯ್ಯದ್, ತಾಜೀರ್ ಬಸ್ತವಾಡೆ, ಪ್ರಥಮೇಶ ಲಾಡ್, ತೇಜಸ್ ವಾಜರೆ, ಶಿವಕುಮಾರ್ ಆಸಬೆ, ರಮಜಾನ್ ಜಮಾದಾರ, ತಾಜೀಬ್ ಮುಲ್ಲಾ, ಅನುರಾಗ ಅರೆಸ್ಟ್‌ ಆಗಿದ್ದಾರೆ.

    ಬೆಳಗಾವಿ (Belagavi) ಸಿಇಎನ್ ಇನ್ಸ್‌ಪೆಕ್ಟರ್‌ ಬಿ.ಆರ್ ಗಡ್ಡೇಕರ್ ತಂಡ ಭರ್ಜರಿ ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದ್ದಾರೆ. ಕುಂದಾನಗರಿ ಕಾಲೇಜುಗಳ ವಿದ್ಯಾರ್ಥಿಗಳೇ ಟಾರ್ಗೆಟ್ ಮಾಡಿದ್ದ ಇವರು ಗಾಂಜಾ, ಪೆನ್ನಿ, ಹೇರಾಯಿನ್‌ ವಿತರಿಸುತ್ತಿತ್ತು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಬ್ಯಾಂಕ್ ಲಾಕರ್‌ನಿಂದ ತಂದಿದ್ದ 1 ಕೆಜಿ ಚಿನ್ನ, 15 ಲಕ್ಷ ನಗದು ಕಳ್ಳರ ಪಾಲು!

     

    50 ಕೆಜಿ ಗಾಂಜಾ, 30 ಲಕ್ಷ ಮೌಲ್ಯದ ಮಾದಕವಸ್ತು, 13 ಮೊಬೈಲ್, ಡಿಜಿಟಲ್ ಹ್ಯಾಂಗರ್ ತಕ್ಕಡಿ, ಎರಡು ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಒಡಿಶಾ, ಮುಂಬೈ, ಪುಣೆ, ಮಧ್ಯಪ್ರದೇಶದಿಂದ ಡ್ರಗ್ಸ್‌ ತೆಗೆದುಕೊಂಡು ಬಂದು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ಗೋವಾ, ಮಹಾರಾಷ್ಟ್ರದಲ್ಲಿ ಈ ಗ್ಯಾಂಗ್‌ ವಿತರಣೆ ಮಾಡುತ್ತಿತ್ತು.

    ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಅವರು ಸಿಇಎನ್ ಪೊಲೀಸ್ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

  • ಮುಧೋಳ-ಯಾದವಾಡ ಸಂಪರ್ಕ ಕಡಿತ – ಘಟಪ್ರಭೆಗೆ ಹರಿದು ಬರುತ್ತಿದೆ 62 ಸಾವಿರ ಕ್ಯೂಸೆಕ್‌ ನೀರು

    ಮುಧೋಳ-ಯಾದವಾಡ ಸಂಪರ್ಕ ಕಡಿತ – ಘಟಪ್ರಭೆಗೆ ಹರಿದು ಬರುತ್ತಿದೆ 62 ಸಾವಿರ ಕ್ಯೂಸೆಕ್‌ ನೀರು

    ಬಾಗಲಕೋಟೆ: ಮಹಾರಾಷ್ಟ್ರ (Maharashtra) ಹಾಗೂ ಬೆಳಗಾವಿಯಲ್ಲಿ (Belagavi) ಭಾರೀ ಮಳೆಯಾಗುತ್ತಿದ್ದು ಮುಧೋಳ-ಯಾದವಾಡ ರಾಜ್ಯ ಹೆದ್ದಾರಿಯ ಸೇತುವೆ ಮೇಲೆ ನೀರು ನುಗ್ಗಿದ್ದರಿಂದ ಉತ್ತೂರ, ಮಿರ್ಜಿ, ಮಾಲಾಪುರ, ಒಂಟಗೋಡಿ, ರಂಜನಗಿ, ರೂಗಿ, ಗುಲಗಾಲ ಜಂಬಗಿ, ಮೆಟಗುಡ್ಡ, ಯಾದವಾಡ ಸೇರಿ ಸುಮಾರು 23 ಅಧಿಕ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಘಟಪ್ರಭೆಗೆ ಹಿರಣ್ಯಕೇಶಿಯಿಂದ 52,000 ಕ್ಯೂಸೆಕ್‌, ಮಾರ್ಕಂಡೆಯದಿಂದ 5,543 ಕ್ಯೂಸೆಕ್‌ ಬಳ್ಳಾರಿ ‌ನಾಲಾ ಜಲಾಶಯಗಳಿಂದ 2,221 ಕ್ಯೂಸೆಕ್‌ ಸೇರಿ ಸಂಜೆ ಸುಮಾರು 63 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವಿದೆ.

    ಮಹಾರಾಷ್ಟ್ರದ ಕೃಷ್ಣಾ (Krishna) ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ನದಿಯಲ್ಲಿ (Ghataprabha River) ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ.

    ಮುಧೋಳದ ಯಾದವಾಡ ಸೇತುವೆ ಮೇಲೆ ಘಟಪ್ರಭಾ ನದಿ ಪ್ರವಾಹ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಅಧಿಕಾರಿಗಳು ಪರಿಶೀಲಿಸಿದರು. ಈಗಾಗಲೇ ತಾಲ್ಲೂಕಿನ 11 ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ಮಿರ್ಜಿ ಗ್ರಾಮದಲ್ಲಿ ನೀರು ಬಂದಿದ್ದು 34 ಕುಟುಂಬಗಳ 178 ಜನರನ್ನು ಕಾಳಜಿ ಕೇಂದ್ರದಲ್ಲಿ ರಕ್ಷಿಸಲಾಗಿದೆ. ಇದನ್ನೂ ಓದಿ: ಬೀದರ್ `ಕೈ’ ನಾಯಕರಿಂದ ಖಂಡ್ರೆ ವಿರುದ್ಧ ಸಿಎಂ, ಡಿಸಿಎಂಗೆ ದೂರು

     

    ತಹಶೀಲ್ದಾರ್‌ ಭೇಟಿ: ಪ್ರವಾಹ ಪೀಡಿತ ಸ್ಥಳಕ್ಕೆ ತಹಶೀಲ್ದಾರ್ ಮಹಾದೇವ ಸನಮುರಿ ಹಾಗೂ ಅಧಿಕಾರಿಗಳ ತಂಡ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದೆ. ಮುಧೋಳದ ಮೂರು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯ ಪರಿಶೀಲಿಸಿದರು. ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಸನ್ನದ್ಧರಾಗಬೇಕು ಎಂದು ಹೇಳಿದರು.

    ಘಟಪ್ರಭಾ ನದಿಯ ಪ್ರವಾಹ ನದಿ ಪಾತ್ರದ ಹೊಲಗಳಿಗೆ ನುಗ್ಗಿದ್ದು ಅಪಾರ ಪ್ರಮಾಣದ ಬೇಳೆ ನಾಶವಾಗಿದೆ. ಕಬ್ಬು, ಈರುಳ್ಳಿ, ಉದ್ದು, ಬೆಳ್ಳುಳ್ಳಿ ಹೆಸರು ಬೇಳೆಗಳು ನೀರಿನ ರಭಸಕ್ಕೆ ಕೊಚ್ವಿ ಹೋಗಿವೆ.

    ಕಳೆದ ವರ್ಷ ಬೆಳೆ ಪರಿಹಾರ ಘೋಷಣೆಯಾಗಿದೆ ಆದರೆ ಮಳಲಿ ಗ್ರಾಮದ ನದಿ ಪಾತ್ರದ ಸಾವಿರಾರು ಎಕರೆ ಜಮೀನುಗಳಿಗೆ ಪರಿಹಾರ ಬಂದಿಲ್ಲ ಎಂದು ಮಳಲಿ ಗ್ರಾಮಸ್ಥರು ದೂರಿದರು.

  • `ಮಹಾ’ ಮಳೆಗೆ ಕೃಷ್ಣಾ ನದಿ ಒಳಹರಿವು ಹೆಚ್ಚಳ – ತುಂಬು ಗರ್ಭಿಣಿ ಸೇರಿ ನಡುಗಡ್ಡೆಯಲ್ಲಿ ಸಿಲುಕಿದ 40 ಕುಟುಂಬ

    `ಮಹಾ’ ಮಳೆಗೆ ಕೃಷ್ಣಾ ನದಿ ಒಳಹರಿವು ಹೆಚ್ಚಳ – ತುಂಬು ಗರ್ಭಿಣಿ ಸೇರಿ ನಡುಗಡ್ಡೆಯಲ್ಲಿ ಸಿಲುಕಿದ 40 ಕುಟುಂಬ

    ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ (Maharashtra) ಮಳೆಯಬ್ಬರದಿಂದಾಗಿ ಕೃಷ್ಣಾ ನದಿಯಲ್ಲಿ (Krishna River) ಅಪಾರ ಪ್ರಮಾಣದ ಒಳಹರಿವು ಬರುತ್ತಿದ್ದು, ನದಿಯ ನಡುಗಡ್ಡೆಯಲ್ಲಿ ತುಂಬು ಗರ್ಭಿಣಿ ಸೇರಿ 40 ಕುಟುಂಬಗಳು ಸಿಲುಕಿವೆ.

    ಬೆಳಗಾವಿಯ (Belagavi) ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶವು ಮಹಾ ಮಳೆಗೆ ಸಂಪೂರ್ಣ ಜಲಾವೃತವಾಗಿದೆ. ಇದೀಗ ನೂರಕ್ಕೂ ಹೆಚ್ಚು ಗ್ರಾಮಸ್ಥರು, ಮಕ್ಕಳು, ಜಾನುವಾರುಗಳು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಚಿಕ್ಕೋಡಿ | ಗ್ರಾಮಕ್ಕೆ ನುಗ್ಗಿದ ವೇದಗಂಗಾ ನದಿ ನೀರು- 20ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

    ಶಾಲಾ ಮಕ್ಕಳು, ಜನರ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗದ ಸಂಪರ್ಕವೂ ಕಡಿತವಾಗಿದೆ. ಅಥಣಿ (Athani) ತಾಲೂಕಾಡಳಿತವು ಜನರ ಸ್ಥಳಾಂತರಕ್ಕೆ ಬೋಟ್ ವ್ಯವಸ್ಥೆ ಮಾಡದೆ ನಿದ್ರೆಗೆ ಜಾರಿದೆ. ಸಾಕಷ್ಟು ಸಂಖ್ಯೆಯಲ್ಲಿ ಬೋಟ್ ಇದ್ದರೂ ಸಹ ವ್ಯವಸ್ಥೆ ಮಾಡದೆ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

  • ʻಮಹಾʼ ಮಳೆಗೆ ಮೈದುಂಬಿದ ಕೃಷ್ಣೆ, ಭೀಮಾ, ಘಟಪ್ರಭಾ ನದಿಗಳು – ಮುಳುಗಿದ ಸೇತುವೆ

    ʻಮಹಾʼ ಮಳೆಗೆ ಮೈದುಂಬಿದ ಕೃಷ್ಣೆ, ಭೀಮಾ, ಘಟಪ್ರಭಾ ನದಿಗಳು – ಮುಳುಗಿದ ಸೇತುವೆ

    ಬೆಂಗಳೂರು: ಮಹಾರಾಷ್ಟ್ರದಲ್ಲಿ (Maharashtra) ಸುರಿಯುತ್ತಿರುವ ಭಾರೀ ಮಳೆಗೆ (Mumbai Rain) ಬಾಗಲಕೋಟೆ ಜಿಲ್ಲೆಯ ಕೃಷ್ಣಾ (Krishna River), ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿದೆ.

    ಈ ಹಿನ್ನೆಲೆ ಜಮಖಂಡಿ ಭಾಗದ ಸುಮಾರು ಹತ್ತಾರು ಹಳ್ಳಿಗಳಿಗೆ ಪ್ರವಾಹ ಆತಂಕ ಶುರುವಾಗಿದೆ. ಘಟಪ್ರಭಾ ನದಿಗೆ 53 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಿಲ್ಲೆಯ ಮುಧೋಳ, ರಬಕವಿ ಬನಹಟ್ಟಿ ತಾಲ್ಲೂಕುಗಳಲ್ಲಿ ಪ್ರವಾಹ (Flood) ಭೀತಿ ಶುರುವಾಗಿದೆ. ಇದನ್ನೂ ಓದಿ: ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ ರೂ. ಹೇಳಿಕೆ – ಶಾಸಕ ಯತ್ನಾಳ್‌ ವಿರುದ್ಧ FIR

    ಹಾಗೇ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ.. ಬಾದಾಮಿ ತಾಲೂಕಿನ ನದಿದಡದ ಗೋವುನಕೊಪ್ಪ ಗ್ರಾಮದ ಕಿರು ಸೇತುವೆ ಮುಳುಗಡೆಯಾಗಿದ್ದು, ಪಕ್ಕದ ಗದಗ ಜಿಲ್ಲೆಯ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ನದಿದಡದ ಹೊಲಗದ್ದಗೆಗಳಿಗೆ ನುಗ್ಗಿದ ನೀರು, ಕಬ್ಬು, ಗೋವಿನಜೋಳ, ಜೋಳ, ಹೆಸರು ಬೆಳೆಗಳನ್ನ ಆಹುತಿ ಪಡೆದಿದೆ. ಇದನ್ನೂ ಓದಿ: ಸಾರ್ವಜನಿಕ ಹಿತದೃಷ್ಟಿಗೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪದ ಮೇಲೆ ಹೇಡಿತನದ ಕೃತ್ಯ: ಹಲ್ಲೆ ಬಗ್ಗೆ ದೆಹಲಿ ಸಿಎಂ ರಿಯಾಕ್ಷನ್‌

    ಗೋಕಾಕ್ ಗ್ರಾಮಗಳಲ್ಲಿ ಪ್ರವಾಹ ಭೀತಿ
    ಇನ್ನೂ ಘಟಪ್ರಭಾ ನದಿಯ ಅಬ್ಬರಕ್ಕೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬಹುತೇಕ ಮನೆಗಳಿಗೆ ಘಟಪ್ರಭಾ ನದಿ ನೀರು ನುಗ್ಗಿದ್ದು, ಜನಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ಇಲ್ಲಿನ ಜನರನ್ನು ಸ್ಥಳೀಯ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ನದಿಯ ಪ್ರವಾಹಕ್ಕೆ ಬೇಸತ್ತಿರುವ ಗ್ರಾಮಗಳ ಜನರು ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

    ಇತ್ತ, ಘಟಪ್ರಭಾ ನದಿಯಿಂದ 2 ಕಿ.ಮೀ ದೂರದಲ್ಲಿರುವ. ಉದಗಟ್ಟಿ ಊದ್ದಮ್ಮ ದೇವಿ ದೇವಸ್ಥಾನವೂ ಜಲಾವೃತ್ತಗೊಂಡಿದೆ. ದೇವಸ್ಥಾನ ಮುಳುಗಡೆ ಭೀತಿ ಹಿನ್ನೆಲೆ ಬೆಲೆಬಾಳುವ ವಸ್ತುಗಳನ್ನ ಟ್ರಸ್ಟ್ ಕಮಿಟಿಯವರು ಸ್ಥಳಾಂತರ ಮಾಡಿದ್ದಾರೆ. ಇದನ್ನೂ ಓದಿ: ಮಳೆಯಿಂದ ನಷ್ಟ ಅನುಭವಿಸಿದ 2 ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ ಎಂ.ಬಿ ಪಾಟೀಲ್

  • ಧಾರಾಕಾರ ಮಳೆ – ಆ.20ರಂದು ಯಾವ್ಯಾವ ಜಿಲ್ಲೆಯ ಶಾಲೆಗೆ ರಜೆ?

    ಧಾರಾಕಾರ ಮಳೆ – ಆ.20ರಂದು ಯಾವ್ಯಾವ ಜಿಲ್ಲೆಯ ಶಾಲೆಗೆ ರಜೆ?

    ಉತ್ತರ ಕನ್ನಡ/ಬೆಳಗಾವಿ/ಧಾರವಾಡ: ರಾಜ್ಯದ ಕೆಲವೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಉತ್ತರ ಕನ್ನಡ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ಕೆಲವು ತಾಲೂಕುಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಉತ್ತರ ಕನ್ನಡ:
    ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರೆದ ಹಿನ್ನೆಲೆ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ದಾಂಡೇಲಿ, ಜೋಯಿಡಾ ಹಾಗೂ ಶಿರಸಿ ತಾಲೂಕಿಗೆ ಶಾಲಾ-ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆ ಮೂಲಕ ನಮ್ಮ ಪಾಲಿನ ನೀರು ಬಳಸಲು ರಾಜ್ಯಕ್ಕೆ ಸಂಪೂರ್ಣ ಹಕ್ಕಿದೆ: ಡಿಕೆಶಿ

    ಧಾರವಾಡ:
    ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಆ.20ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ ಹಾಗೂ ಶಾಲಾ-ಕಾಲೇಜು ಜೊತೆಗೆ ಪದವಿ ಮಹಾವಿದ್ಯಾಲಯಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ.

    ಬೆಳಗಾವಿ:
    ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಎಲ್ಲಾ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಬೆಳಗಾವಿ ಜಿಲ್ಲೆಗೆ ಆ.20ರಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.ಇದನ್ನೂ ಓದಿ: ಕೇಂದ್ರದಿಂದ `ಆನ್‌ಲೈನ್ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

  • ಸವದತ್ತಿ ಕಾಡಿನಲ್ಲೊಬ್ಬ ಆಧುನಿಕ ಟಾರ್ಜನ್ – ಸೊಪ್ಪುಸೆದೆಯೇ ಈತನಿಗೆ ಆಹಾರ!

    ಸವದತ್ತಿ ಕಾಡಿನಲ್ಲೊಬ್ಬ ಆಧುನಿಕ ಟಾರ್ಜನ್ – ಸೊಪ್ಪುಸೆದೆಯೇ ಈತನಿಗೆ ಆಹಾರ!

    – ಕಳೆದ 10 ವರ್ಷದಿಂದ ಕಾಡಿನಲ್ಲೇ ಬದುಕು

    ಧಾರವಾಡ: ನಿಮಗೆಲ್ಲಾ ಟಾರ್ಜನ್ ಕಥೆ ಗೊತ್ತಿರಬೇಕು. ಆತ ಅರಣ್ಯದಲ್ಲೇ ತನ್ನ ಜೀವನ ಕಳೆದಿದ್ದ. ಪ್ರಾಣಿಗಳಂತೆಯೇ ಜೀವನ ಸಾಗಿಸ್ತಿದ್ದ. ಅರಣ್ಯ ಸಿಕ್ಕ ಹಣ್ಣುಹಂಪಲನ್ನೇ ತಿಂದು ಜೀವನ ನಡೆಸ್ತಿದ್ದ. ಇಂತದ್ದೇ ಒಬ್ಬ ಆಧುನಿಕ ಯುಗದ ಟಾರ್ಜನ್ (Tarzan) ಸವದತ್ತಿಯಲ್ಲಿದ್ದಾನೆ. ಈತ ಕಳೆದ 10 ವರ್ಷಗಳಿಂದ ಊಟನೇ ಮಾಡಿಲ್ಲ. ಬದಲಾಗಿ ಕಾಡಿನಲ್ಲಿ ಸಿಗುವ ಸೊಪ್ಪುಸೆದೆಯನ್ನೇ ತಿನ್ನುತ್ತಾ ಬದುಕುತ್ತಿದ್ದಾನೆ.

    ಬೆಳಗಾವಿ (Belagavi) ಜಿಲ್ಲೆಯ ಸವದತ್ತಿಯ (Savadatti) ಗುಡ್ಡಗಾಡು ಪ್ರದೇಶದಲ್ಲಿ ಬುಡನ್‌ಖಾನ್ (34) ಎಂಬ ವ್ಯಕ್ತಿ ಕಳೆದ 10 ವರ್ಷಗಳಿಂದ ಕಾಡಿನಲ್ಲೇ ವಾಸವಿದ್ದಾನೆ. ಮೊದಲು ಸಾಮಾನ್ಯ ಜನರಂತೆ ಇದ್ದ ಈತ, 10 ವರ್ಷದ ಹಿಂದೆ ತನ್ನ ಊರುಗೋಳ ಗ್ರಾಮ ಬಿಟ್ಟು ಅರಣ್ಯ ಸೇರಿದ್ದಾನೆ.

    ಈ ಬುಡನ್‌ಖಾನ್‌ನನ್ನು (BudanKhan) ಆಧುನಿಕ ಯುಗದ ಟಾರ್ಜನ್ ಅಂತಾನೂ ಕರೆಯಬಹುದು. ಯಾಕಂದ್ರೆ ಈತ ಊಟ ಮಾಡೊದನ್ನ ಬಿಟ್ಟು 10 ವರ್ಷ ಆಯ್ತು. ಮಂಗನಿಂದ ಮಾನವ ಅಂತಾರಲ್ಲ ಸದ್ಯ ಹಾಗೆಯೇ ಈತ ವಾಸವಿದ್ದಾನೆ. ಬೆಳಗ್ಗೆ ಎದ್ದರೆ ಸೊಪ್ಪು ತಿಂತಾನೆ. ಈತನಿಗೆ ಮಧ್ಯಾಹ್ನ, ರಾತ್ರಿಯ ಊಟವೂ ಇದೆ. ಮಜಾ ಅಂದರೆ ಈತ ಮಂಗಗಳನ್ನ ನೋಡಿ ಸೊಪ್ಪನ್ನು ತಿನ್ನೊದನ್ನ ಕಲಿತಿದ್ದಾನಂತೆ. ಇನ್ನು ಜನರ ನಡುವೆ ಇದ್ದರೆ ನಿದ್ದೆನೇ ಬರಲ್ಲ ಅಂತೆ. ಹೀಗಾಗಿ ಗುಡ್ಡಗಾಡು ಪ್ರದೇಶದಲ್ಲೇ ಮನೆ ಮಾಡಿಕೊಂಡು ಒಬ್ಬಂಟಿ ಜೀವನ ನಡೆಸುತಿದ್ದಾನೆ.

    ಇನ್ನು, 80 ನಮೂನೆಯ ಸೊಪ್ಪನ್ನು ತಿನ್ನುವ ಈತನಿಗೆ ರೋಗವೇ ಇಲ್ಲ. ಜನರಿಗೆ ಜ್ವರಾನೋ ಅಥವಾ ಏನಾದರು ನೋವು ಇದ್ದೇ ಇರುತ್ತವೆ. ಆದರೆ ಈ ಟಾರ್ಜನ್ ಮ್ಯಾನ್‌ಗೆ ಅದೇನೂ ಇಲ್ಲ. ಈತ ಪ್ಯಾಂಟ್ ಬಿಟ್ಟರೇ ಬೇರೆ ಏನೂ ಹಾಕಲ್ಲ. ಗುಡ್ಡದ ಬಂಡೆಗಳ ಮೇಲೆ ಓಡಾಡುತ್ತ ಜೀವನ ನಡೆಸುತ್ತಿರುವ ಈ ಬುಡನ್‌ಖಾನ್‌ಗೆ ಮದುವೆ ವಿಷಯ ತೆಗೆದರೆ ಸಾಕು, ಅವರ ಜೊತೆ ಮಾತಾಡೊದನ್ನೇ ಬಿಡ್ತಾನಂತೆ. ಇವರ ಸಹೋದರರು ಸಾಕಷ್ಟು ಬಾರಿ ಇವನನ್ನು ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದಾರೆ. ಆದರೆ ಅದು ಯಾವುದೇ ಫಲ ಕೊಟ್ಟಿಲ್ಲ.

    ಒಟ್ಟಾರೆ ಹೇಳುವುದಾದರೆ ಹೊಟ್ಟೆ ಇದ್ದರೆ, ಅದಕ್ಕಾಗಿ ಬಡದಾಡಬೇಕು. ಆದರೆ ಪ್ರಾಣಿಯಂತೆ ಸೊಪ್ಪು ತಿಂದು ಬದುಕುವವನಿಗೆ ಯಾವ ಚಿಂತೆ ಎನ್ನುವಂತೆ ಇದೆ ಈತನ ಕಥೆ. ಏನೇ ಇರಲಿ, ಈ ಆಧುನಿಕ ಯುಗದ ಟಾರ್ಜನ್‌ನನ್ನು ನೋಡೋದೇ ಒಂದು ಮಜಾ.

  • ಮುಸುಕುದಾರಿಯ ಮಂಪರು ಪರೀಕ್ಷೆ ಮಾಡಿ : ಕೈ ಶಾಸಕ ಸವದಿ ಒತ್ತಾಯ

    ಮುಸುಕುದಾರಿಯ ಮಂಪರು ಪರೀಕ್ಷೆ ಮಾಡಿ : ಕೈ ಶಾಸಕ ಸವದಿ ಒತ್ತಾಯ

    ಬೆಳಗಾವಿ: ಧರ್ಮಸ್ಥಳ ಬುರುಡೆ ಕೇಸ್‌ನ (Dharmasthala Mass Burial Case) ಮುಸುಕುದಾರಿಯ ಮಂಪರು ಪರೀಕ್ಷೆಯನ್ನು ಮಾಡಬೇಕು ಎಂದು ಕೈ ಶಾಸಕ ಲಕ್ಷ್ಮಣ ಸವದಿ (Laxman Savadi) ಒತ್ತಾಯಿಸಿದ್ದಾರೆ.

    ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಸುಳ್ಳು ಆರೋಪ ಮಾಡುವವರಿಗೆ ಇದು ಎಚ್ಚರಿಕೆ ಗಂಟೆ ಆಗಬೇಕು. ಮುಸುಕುಧಾರಿಯನ್ನಿಟ್ಟುಕೊಂಡು ಒಳಸಂಚು ಮಾಡ್ತಿದ್ದಾರಾ ನೋಡಬೇಕು. ಕಳಂಕ ತರುವ ಕೆಲಸ ಯಾರೂ ಮಾಡಿದರೂ  ಒಳಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  ಇದನ್ನೂ ಓದಿ: ಬುರುಡೆ ಕೇಸ್‌ ಹಿಂದೆ ಕೈ ಸಂಸದ ಶಶಿಕಾಂತ್‌ ಸೆಂಥಿಲ್ಇದ್ದಾರೆ: ಯಶ್‌ಪಾಲ್ಸುವರ್ಣ

     

    ಮುಸುಕುದಾರಿ ಹಿನ್ನೆಲೆ ಏನು ಎನ್ನುವುದು ಪತ್ತೆಯಾಗಬೇಕು.  ಇಲ್ಲಿಯವರೆಗೂ ಸರ್ಕಾರದ ಹಣ ಎಷ್ಟು ವೆಚ್ಚವಾಗಿದೆಯೋ ಅದನ್ನು ವಸೂಲಿ ಮಾಡಬೇಕು. ಮಂಪರು ಪರೀಕ್ಷೆಯಲ್ಲಿ ಅತನ ಒಪ್ಪಿಗೆ ಬೇಕಾಗುತ್ತದೆ. ಬೇರೆ ದಾರಿಯಲ್ಲಿ ತನಿಖೆ ಮಾಡಿ ಸಂಚು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಸರ್ಕಾರ ಅಥವಾ ಪಕ್ಷದ ನಿಲುವಲ್ಲ ಇದು ನನ್ನ ವೈಯಕ್ತಿಕ ಹೇಳಿಕೆ ಎಂದು ಸವದಿ ಹೇಳಿದ್ದಾರೆ.