Tag: belagavi

  • ಜಮ್ಮು-ಕಾಶ್ಮೀರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ನಮ್ಮನ್ನು ಬೆಂಬಲಿಸಿದ್ದಾರೆ: ಈರಣ್ಣ ಕಡಾಡಿ

    ಜಮ್ಮು-ಕಾಶ್ಮೀರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ನಮ್ಮನ್ನು ಬೆಂಬಲಿಸಿದ್ದಾರೆ: ಈರಣ್ಣ ಕಡಾಡಿ

    ಬೆಳಗಾವಿ: ಜಮ್ಮು-ಕಾಶ್ಮೀರದಲ್ಲಿ (Jammu-Kashmir) ದೊಡ್ಡ ಸಂಖ್ಯೆಯಲ್ಲಿ ಜನ ನಮ್ಮನ್ನು ಬೆಂಬಲಿಸಿದ್ದಾರೆ. ನಮ್ಮ ಅಸ್ತಿತ್ವ ಇಲ್ಲದ ರಾಜ್ಯದಲ್ಲಿ ನಮಗೆ ಈ ಸಲ ಹೆಚ್ಚಿನ ಸ್ಥಾನಗಳು ಬಂದಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ (Iranna Kadadi) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಬಗ್ಗೆ ದೊಡ್ಡ ಪ್ರಮಾಣದ ಅಪಪ್ರಚಾರ ಇರುವ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಬೆಂಬಲ ಸಿಕ್ಕಿದೆ. ಬರುವ ದಿನಗಳಲ್ಲಿ ಪಕ್ಷವನ್ನು ಜಮ್ಮು-ಕಾಶ್ಮೀರದಲ್ಲಿ ಗಟ್ಟಿ ಮಾಡುತ್ತೇವೆ. ವಿರೋಧ ಪಕ್ಷವಾಗಿ ಆ ರಾಜ್ಯಕ್ಕೆ ಹೇಗೆ ನ್ಯಾಯ ಕೊಡಿಸಬೇಕೋ? ಕೊಡಿಸುತ್ತೇವೆ ಎಂದರು. ಇದನ್ನೂ ಓದಿ: ಟಿಕೆಟ್‌ಗಾಗಿ ದೆಹಲಿಯಲ್ಲೇ ಬೀಡುಬಿಟ್ಟ ಸಿಪಿವೈ – ಪಕ್ಷೇತರ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ

    ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ (BJP) ಹಿನ್ನಡೆ ಆಗಲಿದೆ ಎಂದು ಸರ್ವೆ ವರದಿಗಳು ಹೇಳಿದ್ದವು. ಎರಡು ಸಲ ಅಧಿಕಾರ ನಡೆಸಿದ ಕಾರಣಕ್ಕೆ ಆಡಳಿತ ವಿರೋಧಿ ಅಲೆ ಇತ್ತು. ಆದರೆ ಹರಿಯಾಣ ಜನ ನಮ್ಮನ್ನು ಒಪ್ಪಿಕೊಂಡು, ಬಹುಮತ ಕೊಟ್ಟಿದ್ದಾರೆ. ಅಲ್ಲಿನ ಜನರಿಗೆ ನಾನು ಅಭಿನಂದಿಸುವೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಕಾನ್ವೆ ರೂಲ್ಸ್ ಬ್ರೇಕ್ – ಜನಾರ್ದನ ರೆಡ್ಡಿ ಕಾರನ್ನು ಸೀಜ್ ಮಾಡಿದ ಪೊಲೀಸರು

    ಹರಿಯಾಣದ ಜನ ಕಾಂಗ್ರೆಸ್ (Congress) ಗ್ಯಾರಂಟಿ ನೋಡದೇ ಬಿಜೆಪಿಗೆ ಬಂಬಲಿಸಿರುವ ವಿಚಾರಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಹೇಗೆ ನಗೆಪಾಟಲಿಗೆ ಈಡಾಗಿದೆ ಎಂದು ಎಲ್ಲರಿಗೂ ಗೊತ್ತು. ಗ್ಯಾರಂಟಿ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಗುತ್ತಿಲ್ಲ. ಮಂತ್ರಿಗಳು ಗುದ್ದಲಿ ಪೂಜೆ ಮಾಡಿಲ್ಲ. ಆಡಳಿತ ವ್ಯವಸ್ಥೆ ಹಣಕಾಸಿನ ಕೊರತೆಯಿಂದ ಕುಸಿದು ಬಿದ್ದಿದೆ. ಜನರ ಎದುರು ಹೋಗಲು ಶಾಸಕರೇ ತಯಾರಿಲ್ಲ. ಗ್ಯಾರಂಟಿ ಮುಂದುವರೆಸಿದರೆ ಕಷ್ಟ ಇದೆ ಎಂದು ತಿಳಿಸಿದರು. ಇದನ್ನೂ ಓದಿ: Haryana Election Results| ಜಿಲೇಬಿ ಟ್ರೆಂಡ್‌ ಆಗಿದ್ದು ಯಾಕೆ?

  • ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಯೇ ನಡೆದಿಲ್ಲ: ಸಚಿವ ಕೃಷ್ಣಭೈರೇಗೌಡ

    ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಯೇ ನಡೆದಿಲ್ಲ: ಸಚಿವ ಕೃಷ್ಣಭೈರೇಗೌಡ

    ಬೆಳಗಾವಿ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಯಾರ್ಯಾರು ಪ್ರಯತ್ನಿಸುತ್ತಿದ್ದಾರೋ ಅದು ಅವರ ವೈಯಕ್ತಿಕ ವಿಚಾರ ಬಿಟ್ಟರೆ. ಪಕ್ಷದ ಹಂತದಲ್ಲಿ ಯಾವುದೇ ರೀತಿ ಮುಖ್ಯಮಂತ್ರಿ ಬದಲಾವಣೆ ಇಲ್ಲವೇ ಇಲ್ಲ. ಹೈಕಮಾಂಡ್‌ನಿಂದ ಹಿಡಿದು ಎಲ್ಲರೂ ಸಿದ್ದರಾಮಯ್ಯ (CM Siddaramaiah) ಅವರ ಬೆನ್ನಿಗೆ ನಿಂತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಅಭಿಪ್ರಾಯ ಪಟ್ಟರು.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೈ ನಾಯಕರು ಭೇಟಿ ಆಗುತ್ತಿರುವ ವಿಚಾರಕ್ಕೆ ಕಿತ್ತೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅವರವರ ಪ್ರಯತ್ನ, ಆಸೆ. ಅದು ಅವರಿಗೆ ಬಿಟ್ಟಿದ್ದು. ಅದು ತಪ್ಪು ಏನೂ ಅಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ ಅವರು ಪಕ್ಷದ ಉನ್ನತ ಮಟ್ಟದಲ್ಲಿದ್ದಾರೆ. ಇವರೆಲ್ಲಾ ನಾವು ಸಿಎಂ ಬೆನ್ನಿಗೆ ನಿಂತಿದ್ದೇವೆ ಎಂದು ನಮಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ, ಸಿಎಂ ಬದಲಾವಣೆ ಎನ್ನುವುದು ಕೇವಲ ಊಹೆ ಮತ್ತು ಕಲ್ಪನೆ. ಕಾಂಗ್ರೆಸ್ ಹೈಕಮಾಂಡ್ ಸಿಎಂ ಜೊತೆಗಿದೆ. ಇದರಲ್ಲಿ ವ್ಯಯಕ್ತಿಕವಾಗಿ ನನಗೆ ನೂರಕ್ಕೆ ನೂರು ಭರವಸೆ ಇದೆ ಎಂದರು. ಇದನ್ನೂ ಓದಿ: ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತೆ ಅಂತ ವಿಪಕ್ಷಗಳು ಬೊಬ್ಬೆ ಹಾಕ್ತಿದ್ವು – ವಿಜಯೇಂದ್ರ

    ಒಳ್ಳೆಯ ಕೆಲಸಗಾರ ಎಂದು ಗುರುತಿಸಿಕೊಂಡಿರುವ ತಮ್ಮ ಹೆಸರು ಸಿಎಂ ರೇಸ್‌ನಲ್ಲಿ ಬರಬಹುದಾ ಎಂಬ ಪ್ರಶ್ನೆಗೆ ಜನ ನನ್ನ ಆರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ (Congress) ಪಕ್ಷ ಮೂರು ಬಾರಿ ಮಂತ್ರಿ ಮಾಡಿದೆ. ನನ್ನ ತಂದೆ ತಾಯಿ ಪುಣ್ಯ ನನಗೆ ಸಿಕ್ಕಿದೆ. ಇದಕ್ಕಿಂತ ಇನ್ನೇನು ನನಗೆ ಬೇಕು. ಐದು ವರ್ಷ ಕೃಷಿ ಮಂತ್ರಿಯಾಗಿದ್ದೆ.ಪಂಚಾಯತರಾಜ್ ಇಲಾಖೆ ನಿರ್ವಹಿಸಿದ್ದೇನೆ. ಈಗ ಕಂದಾಯ ಸಚಿವನಾಗಿದ್ದೇನೆ. ಕೈ ತುಂಬಾ ಕೆಲಸ ಇದೆ. ದಿನದ 24 ಗಂಟೆ ಅಲ್ಲ, 48 ಗಂಟೆ ಇದ್ದರೂ ಸಾಕಾಗುವುದಿಲ್ಲ. ಇರುವುದರಲ್ಲಿ ಜನರಿಗೆ ಒಳ್ಳೆಯ ಕೆಲಸ ಮಾಡಿದರೆ ಅದೇ ನನಗೆ ಸೌಭಾಗ್ಯ. ಎಐಸಿಸಿ ಅಧ್ಯಕ್ಷರು, ಸಿಎಂ ಸೇರಿ ಎಲ್ಲರಿಂದ ಒಳ್ಳೆಯ ಗೌರವ ಸಿಕ್ಕಿದೆ. ಏನೆಲ್ಲಾ ಸಿಗಬೇಕೋ ಅದೆಲ್ಲವೂ ಸಿಕ್ಕಿದೆ. ಹಾಗಾಗಿ, ಏನೋ ಗೊಂದಲ ಎನ್ನುತ್ತಿದ್ದಿರಿ. ಆದರೆ, ನಾನು ಎಲ್ಲಾ ಕಡೆ ಓಡಾಡಿ ಕೆಲಸ ಮಾಡುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: Haryana Results| ಚುನಾವಣಾ ಕುಸ್ತಿಯಲ್ಲಿ ಗೆದ್ದ ವಿನೇಶ್‌ ಫೋಗಟ್‌

     

    ಹರಿಯಾಣ (Haryana) ಮತ್ತು ಜಮ್ಮುವಿನಲ್ಲಿ (Jammu) ಕಾಂಗ್ರೆಸ್ ನೇತೃತ್ವದ ಘಟಬಂಧನ್‌ಗೆ ಬಹುಮತ ಸಿಕ್ಕಿರೋದು ಸಂತೋಷದ ವಿಷಯ. ರಾಹುಲ್ ಗಾಂಧಿ (Rahul Gandhi) ಹಾಗೂ ಖರ್ಗೆಯವರಿಗೆ ಅಭಿನಂದನೆಗಳು. ಅವರ ನೇತೃತ್ವದಲ್ಲಿ ಹೋರಾಟ ನಡೆದು ಬಂದಿದೆ. ದೇಶದಲ್ಲಿ ಕೆಲವೇ ಕೆಲವು ಶ್ರೀಮಂತರಿಗೆ ಅನುಕೂಲ ಆದರೆ ಸಾಲದು. ಜನಸಾಮಾನ್ಯರಿಗೆ ಅನುಕೂಲ ಆಗಬೇಕು. ದೇಶದಲ್ಲಿ ಉದ್ಯೋಗ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಇದರ ವಿರುದ್ಧ ರಾಹುಲ್ ಗಾಂಧಿ ಹೋರಾಟ ನಡೆಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಮಿತ್ರ ಪಕ್ಷಗಳಿಗೆ ನೀಡಿವೆ. ಅದಕ್ಕಿಂತಲೂ ಹೆಚ್ಚಿನ ಬೆಂಬಲ ಈ ಚುನಾಚಣೆಯಲ್ಲಿ ದೊರೆತಿದೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸ್ತಿರೋದು ಬಲ ಆಗ್ತಿರೋದಕ್ಕೆ ಇದು ಸಾಕ್ಷಿ ಎಂದರು. ಇದನ್ನೂ ಓದಿ: Jammu Kashmir Results | ಅಧಿಕಾರದತ್ತ ಎನ್‌ಸಿ, ಕಾಂಗ್ರೆಸ್‌ ಮೈತ್ರಿ – ಬಿಜೆಪಿಗೆ ಹಿನ್ನಡೆ

    ಮಹಾರಾಷ್ಟ್ರ ಚುನಾವಣೆ ಬರುತ್ತಿದೆ, ಅಲ್ಲೂ ಸಹ ನಮಗೆ ಬಹುಮತ ಸಿಗುವ ನಿರೀಕ್ಷೆ ಇದೆ. ಒಟ್ಟಾರೆ ದೇಶದಲ್ಲಿ ಬಡವರ ವಿರೋಧಿ ಸರ್ಕಾರದ ಇದೆ. ಬಡವರು, ಯುವಕರಿಗೆ ಉದ್ಯೋಗ ಕೊಡುತ್ತಿಲ್ಲ. ಕೆಲವೇ ಕೆಲವು ಅಂಬಾನಿ ಅದಾನಿತಂತವರಿಗೆ ಬಿಜೆಪಿ ಕೆಲಸ ಮಾಡ್ತಿದೆ. ಹೀಗಾಗಿಯೇ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ಇವತ್ತು ದೇಶದಲ್ಲಿ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಚುನಾವಣಾ ಫಲಿತಾಂಶದಲ್ಲಿ ಹಿನ್ನಡೆ – ಆಯೋಗದ ವೆಬ್‌ಸೈಟ್‌ ದೂರಿದ ಕಾಂಗ್ರೆಸ್‌

    ಬದಲಾವಣೆಗೆ ಕರ್ನಾಕಟವೇ ಮುನ್ನುಡಿ ಆಯಿತಾ ಎಂಬ ಪ್ರಶ್ನೆಗೆ, ಇದು ಕಾಲದ ಚಕ್ರ ಬದಲಾವಣೆ ಜಗದ ನಿಯಮ. ಯಾರಿಗೂ ಅವನತಿ ಅಂತ ಹೇಳೋದಿಲ್ಲ. ಶ್ರೀಮಂತರ ಪರವಾಗಿ ಬಿಜೆಪಿ (BJP) ಕೆಲಸ ಮಾಡ್ತಿದೆ. ಸಾಮಾನ್ಯ ಭಾರತೀಯರ ಹಿತವನ್ನು ಕೈಬಿಟ್ಟಿದೆ. ಅದರ ವಿರುದ್ಧವಾಗಿ ಜನ ಇವತ್ತು ಒಂದಾಗಿದ್ದಾರೆ. ಹೊಟ್ಟೆಪಾಡಿನ ವಿಷಯಗಳನ್ನು ಬಿಜೆಪಿಯವರು ಮುಚ್ಚಿ ಹಾಕಿದ್ದಾರೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡ್ತಾರೆ. ಅದಕ್ಕೂ ಒಂದು ಕಾಲ ಇತ್ತು ಆದರೆ ಈಗ ಜನ ಜಾಗೃತರಾಗಿದ್ದಾರೆ. ಹೊಟ್ಟೆ ಪಾಡಿನ ವಿಷಯಗಳು ಮತ್ತೆ ಮುನ್ನೆಲೆಗೆ ಬಂದಿವೆ. ನಿಜವಾದ ಜೀವನದ ಅಂಶಗಳು ಮತ್ತು ಹೊಟ್ಟೆ ಪಾಡಿನ ವಿಷಯಗಳ ಮೇಲೆ ರಾಜಕೀಯ ನಡೆಯುತ್ತದೆ. ಅಲ್ಲಿವರೆಗೆ ಪ್ರಜಾಪ್ರಭುತ್ವ ಚೆನ್ನಾಗಿರುತ್ತದೆ. ಅದು ಬಿಟ್ಟು ಹೊಟ್ಟೆ ಪಾಡಿಗೆ ಅನ್ಯಾಯ ಮಾಡಿ ಮನಸ್ಸನ್ನು ಡೈವರ್ಟ್ ಮಾಡಿದರೆ ಜನರಿಗೆ ಅನ್ಯಾಯ ಆಗುತ್ತದೆ. ಇವತ್ತು ಅದರ ವಿರುದ್ಧವಾಗಿ ಬದಲಾವಣೆ ಆಗುತ್ತಿವೆ. ಮುಂದೆ ಎಲ್ಲಿ ಹೋಗುತ್ತದೆ ನೋಡಬೇಕು ಎಂದು ಹೇಳಿದರು. ಇದನ್ನೂ ಓದಿ: ಹರಿಯಾಣದ ಜನ ಕಾಂಗ್ರೆಸ್‌ನ ಜಾತಿ ರಾಜಕಾರಣ ತಿರಸ್ಕರಿಸಿದ್ದಾರೆ: ಬಸವರಾಜ ಬೊಮ್ಮಾಯಿ

  • ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭಿನ್ನಮತ ಸ್ಫೋಟ – ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ

    ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭಿನ್ನಮತ ಸ್ಫೋಟ – ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ

    – ಅಕ್ಟೋಬರ್ 8ರ ಒಳಗೆ ಹೊಸ ಅಧ್ಯಕ್ಷರ ಆಯ್ಕೆ; ಬಾಲಚಂದ್ರ ಜಾರಕಿಹೊಳಿ

    ಬಳ್ಳಾರಿ/ಬೆಳಗಾವಿ: ಬೆಳಗಾವಿ ವಿಭಾಗದ ಡಿಸಿಸಿ ಬ್ಯಾಂಕ್‌ನಲ್ಲಿ (DCC Bank) ಭಿನ್ನಮತ ಸ್ಫೋಟಗೊಂಡಿದ್ದು, ಈ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ (Ramesh Katti) ಶುಕ್ರವಾರ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

    ರಮೇಶ್‌ ಕತ್ತಿ ರಾಜೀನಾಮೆ ನೀಡಿದ ಕೆಲ ಹೊತ್ತಿನಲ್ಲೇ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಸುದ್ದಿಗೋಷ್ಠಿ ನಡೆಸಿದ್ದಾರೆ. ಜಾರಕಿಹೊಳಿಗೆ 14 ಜನ ಡಿಸಿಸಿ ಬ್ಯಾಂಕ್ ನಿರ್ದೇಶಕರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದ ರಾಜಕೀಯ ಬೆಳವಣಿಗೆಗಳು ಸರಿಯಲ್ಲ, ಹೀಗೆ ಮುಂದುವರಿದ್ರೆ ಜನ ಕಲ್ಲಲ್ಲಿ ಹೊಡೀತಾರೆ: ಡಿ.ಕೆ.ಸುರೇಶ್

    ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ ಕೊಟ್ಟಿದ್ದಾರೆ. ಡಿಸಿಸಿ ಬ್ಯಾಂಕ್‌ಗೆ 2020ರಲ್ಲಿ ಎಲ್ಲರನ್ನ ಅವಿರೋಧವಾಗಿ ಆಯ್ಕೆ ಮಾಡಿದ್ವಿ. 4 ವರ್ಷಗಳ ಕಾಲ ರಮೇಶ್ ಕತ್ತಿ ಅಧ್ಯಕ್ಷರಾಗಿದ್ದಾರೆ. ಕಳೆದ 1 ವರ್ಷದಿಂದ ಸಾಕಷ್ಟು ಭಿನ್ನಾಭಿಪ್ರಾಯ ಇತ್ತು. ಒಂದು ವರ್ಷ ಉಳಿದಿದ್ದು ಹೀಗಾಗಿ ರಮೇಶ್ ಕತ್ತಿಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹೇಳಿದ್ವಿ. ಹೀಗಾಗಿ ರಮೇಶ್ ಕತ್ತಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಈ ತಿಂಗಳ ಒಳಗಾಗಿ ಹೊಸ ಅಧ್ಯಕ್ಷರ ಆಯ್ಕೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಪ್ರಭಾಕರ್ ಕೋರೆ, ರಮೇಶ್ ಕತ್ತಿ ಎಲ್ಲರೂ ಸೇರಿ ಅಧ್ಯಕ್ಷ ಆಯ್ಕೆ ಮಾಡ್ತಾರೆ. ಯಾರ ಒತ್ತಾಯ ಮಾಡದೇ, ಹೆದರಿ ರಾಜೀನಾಮೆ ಕೊಟ್ಟಿಲ್ಲ. ಅಕ್ಟೋಬರ್ 8ರ ಒಳಗಾಗಿ ಹೊಸ ಅಧ್ಯಕ್ಷರ ಆಯ್ಕೆ ಮಾಡ್ತೀವಿ. 17 ಜನ ಸದಸ್ಯರು ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೇವೆ. ರಮೇಶ್ ಕತ್ತಿಯವರೂ ಹೊಸ ಅಧ್ಯಕ್ಷ ಆಯ್ಕೆಗೆ ಬರ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೇಣುಕಾ ಮುಖ ನಾಯಿ ಕಚ್ಚಿ ತಿಂದಿದೆ, ದರ್ಶನ್ ಹೊಡೆದಿಲ್ಲ: ಕೋರ್ಟ್‌ನಲ್ಲಿ ವಕೀಲ ಸಿ.ವಿ ನಾಗೇಶ್ ವಾದ ಹೇಗಿತ್ತು?

    ಕಳೆದ ವರ್ಷ 30 ಕೋಟಿ ರೂ. ಲಾಭ ಮಾಡಿದ್ದಾರೆ. ಹೊಸ ಅಧ್ಯಕ್ಷರನ್ನ ಆಯ್ಕೆ ಮಾಡೋಣ ಅಂದಿದ್ದಕ್ಕೆ ಬಿಟ್ಟು ಕೊಟ್ಟಿದ್ದಾರೆ. ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಯಾವ ಬಣ ಇಲ್ಲ. ಬಿಜೆಪಿ, ಕಾಂಗ್ರೆಸ್ ಎಲ್ಲಾ ಪಕ್ಷದವರು ಇದ್ದಾರೆ. ಈ ಬಾರಿ ನಬಾರ್ಡ್ ದಿಂದ ಹಣ ಬರಲು ತಡವಾಯಿತು. ಬಿರೇಶ್ವರ ಸಂಸ್ಥೆಯಿಂದ 250 ಕೋಟಿ ರೂ. ಜೊಲ್ಲೆಯವರು ಡೆಪಾಸಿಟ್ ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 9 ವರ್ಷಗಳ ನಂತ್ರ ಇದೇ ಮೊದಲು – ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

  • ಕಳಂಕಿತ ಸಿಎಂ ದಸರಾ ಚಾಲನೆ ನೀಡಿದ್ದು ಸರಿಯಲ್ಲ: ಪಿ ರಾಜೀವ್ ವಾಗ್ದಾಳಿ

    ಕಳಂಕಿತ ಸಿಎಂ ದಸರಾ ಚಾಲನೆ ನೀಡಿದ್ದು ಸರಿಯಲ್ಲ: ಪಿ ರಾಜೀವ್ ವಾಗ್ದಾಳಿ

    ಬೆಳಗಾವಿ: ದಸರಾ (Mysuru Dasara) ಮೆರವಣಿಗೆಯಲ್ಲಿ ರಾಜ್ಯದ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಾಗಿಯಾಗಿದ್ದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ (P Rajeev) ವಾಗ್ದಾಳಿ ನಡೆಸಿದ್ದಾರೆ.

    ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ (MUDA Scam) ಮೇಲೆ ಆರೋಪ ಬಂದಾಗ ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದರು. ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ ಮೇಲೆ ಕಾಂಗ್ರೆಸ್‌ನ ಎಲ್ಲಾ ಮುಖಂಡರು ಅವಹೇಳನಕಾರಿಯಾಗಿ ಮಾತನಾಡಿದ್ದರು. ನ್ಯಾಯಾಲಯಕ್ಕೆ ಮೇಲ್ನೋಟಕ್ಕೆ ಹಗರಣ ಆಗಿದೆ ಎಂದು ಗೊತ್ತಾದ ಮೇಲೆ ತನಿಖೆಗೆ ಅನುಮತಿ ನೀಡಿದೆ. ಸಿದ್ದರಾಮಯ್ಯನವರು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಳಂಕಿತ ಮುಖ್ಯಮಂತ್ರಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹುಕ್ಕೇರಿ ಹಿರೇಮಠದಿಂದ ಈ ಬಾರಿ ಹೋಳಿಗೆ ದಸರಾ

    ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ವಿರುದ್ಧ 60ಕ್ಕೂ ಹೆಚ್ಚು ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿವೆ. ಕೇಸ್ ದಾಖಲಾಗಿದ್ದಕ್ಕೆ ಲೋಕಾಯುಕ್ತ ತನಿಖಾ ಸಂಸ್ಥೆ ಬಂದ್ ಮಾಡಿಸಿದ್ದರು. ರಾಜ್ಯ ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿ ಕುಂಠಿತವಾಗಿದೆ. ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಗೃಹಲಕ್ಷ್ಮಿ ಹಣ ಬರೋದು ತಪ್ಪಿದೆ. ಮತ್ತೆ ಲೂಟಿ ಮಾಡುವ ಕೆಲಸ ಶುರುವಾಗಿದೆ. ವಾಲ್ಮೀಕಿ ಹಗರಣದ ಹಣ ಚುನಾವಣೆಗೆ ಬಳಸಿಕೊಂಡಿದ್ದಾರೆಂದು ಇಡಿ ಸ್ಪಷ್ಟವಾಗಿ ಉಲ್ಲೇಖ ಮಾಡಿದೆ. ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಹರಿಹಾಯ್ದರು. ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ – ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ

  • ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್

    ಪುರುಷತ್ವ ಹೆಚ್ಚಿಸುವ ಔಷಧಕ್ಕಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಳಗಾವಿ: ಅಕ್ರಮವಾಗಿ ಚೀನಾಗೆ (China) ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಖೆಡ್ಡಾಗೆ ಬೀಳಿಸಿರುವ ಭರ್ಜರಿ ಕಾರ್ಯಾಚರಣೆ ಜಿಲ್ಲೆಯ ಖಾನಾಪುರ (Khanapur) ಅರಣ್ಯದಲ್ಲಿ ನಡೆದಿದೆ.

    ಭರ್ಜರಿ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ಜೀವಂತ ಒಂದು ಚಿಪ್ಪು ಹಂದಿ, ಇಬ್ಬರು ಆರೋಪಿಗಳು ಅರೆಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌

    ನಾಲ್ಕು ಜನ ಆರೋಪಿಗಳು ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವಾಗ ಕಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರು ವರ್ಷದ ನಾಲ್ಕೂವರೆ ಕೆಜಿ ತೂಕದ ಜೀವಂತ ಚಿಪ್ಪು ಹಂದಿಯನ್ನು ಅಧಿಕಾರಗಳು ವಶಕ್ಕೆ ಪಡೆದಿದ್ದಾರೆ.

    ಖಾನಾಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಮಾತನಾಡಿ, ಚಿಪ್ಪು ಹಂದಿಯನ್ನು ಪುರುಷತ್ವ ಹೆಚ್ಚಿಸುವ ಔಷಧ ತಯಾರಿಕೆಗಾಗಿ ಬಳಸಲಾಗುತ್ತದೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲು ಬೇಡಿಕೆ ಇದೆ. ಖಾನಾಪುರದಿಂದ ಚೀನಾವರೆಗೂ ಚಿಪ್ಪು ಹಂದಿಯನ್ನು ಸಾಗಾಟ ಮಾಡುತ್ತಿದ್ದು, ಸಾಗಾಟ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದರು.

    ಖಾನಾಪುರದಿಂದ ಕಾರವಾರಕ್ಕೆ (Karwar) ಕಳಿಸಿ ಅಲ್ಲಿಂದ ಬೋಟ್ ಮೂಲಕ ಕೋಲ್ಕತ್ತಾಗೆ (Kolkatta) ಸಾಗಿಸುತ್ತಾರೆ. ಬಳಿಕ ಹಡಗಿನಲ್ಲಿ ಚೀನಾಕ್ಕೆ ಸಾಗಾಟ ಮಾಡುತ್ತಿದ್ದರು. ಸದ್ಯ ಚಿಪ್ಪು ಹಂದಿ ಸಾಗಾಟ ತಂಡದ ಶೋಧಕ್ಕಾಗಿ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ. ಒಂದು ಪ್ರತ್ಯೇಕ ತಂಡ ರಚಸಿ ಕಳ್ಳಸಾಕಾಣೆ ತಂಡದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನವರಾತ್ರಿ ವಿಶೇಷ – 1 | ಕೋಲ್ಕತ್ತಾದ ಕುರ್ಮಾತುಲಿ ಪಾರ್ಕ್‌ ದುರ್ಗಾ ಪೆಂಡಾಲ್‌ ಮಹತ್ವದ ನಿಮಗೆ ಗೊತ್ತೆ?

  • ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ – ಸಿಎಂ

    ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ – ಸಿಎಂ

    ಬೆಂಗಳೂರು: ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ (Kitturu Chennamma) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

    ಇಂದು (ಅ,2) ಬೆಳಗಾವಿ (Belagavi) ಜಿಲ್ಲಾ ಆಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ (Kitturu Development Authority) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (Kannada And Culture Department) ವತಿಯಿಂದ ವಿಧಾನಸೌಧ ಭವ್ಯ ಮೆಟ್ಟಿಲುಗಳ ಬಳಿ ಹಮ್ಮಿಕೊಳ್ಳಲಾದ “ಕಿತ್ತೂರು ವಿಜಯೋತ್ಸವದ ಜ್ಯೋತಿ”ಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.ಇದನ್ನೂ ಓದಿ: HMT ಕ್ಯಾಂಪಸ್‌ನಲ್ಲಿ ಪೌರ ಕಾರ್ಮಿಕರೊಂದಿಗೆ ಕಸ ಗುಡಿಸಿದ ಎಚ್‌ಡಿಕೆ

    ಚಾಲನೆ ನೀಡಿ ಮಾತನಾಡಿದ ಅವರು, 2024ರ ಕಿತ್ತೂರು ಚೆನ್ನಮ್ಮ ಉತ್ಸವ ಇದೇ ತಿಂಗಳ 23, 24 ಹಾಗೂ 25 ರಂದು ಕಿತ್ತೂರಿನಲ್ಲಿ ನಡೆಯಲಿದ್ದು, ಕಿತ್ತೂರು ವಿಜಯವಾಗಿ 200 ವರ್ಷಗಳಾಗುತ್ತವೆ. ಇದರ ಅಂಗವಾಗಿ ಇಂದು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಿತ್ತೂರು ವಿಜಯೋತ್ಸವದ ಜ್ಯೋತಿಯು ಇಲ್ಲಿಂದ ಹೊರಟು ಎಲ್ಲಾ ಜಿಲ್ಲೆಗಳ ಮೂಲಕ ಹಾದು ಕಿತ್ತೂರನ್ನು ತಲುಪಲಿದೆ ಎಂದರು.

    ನಾಡಪ್ರೇಮ, ದೇಶಪ್ರೇಮ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರೆಂದರೆ ಅದು ಕಿತ್ತೂರು ರಾಣಿ ಚನ್ನಮ್ಮ. ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ. ಸಂಗೊಳ್ಳಿ ರಾಯಣ್ಣ (Sangolli Rayanna) ಕೂಡ ರಾಣಿ ಚನ್ನಮ್ಮನ ಸೈನ್ಯದಲ್ಲಿದ್ದರು. ಬ್ರಿಟಿಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿಗಳು ಇವರು ಎಂದು ತಿಳಿಸಿದರು.ಇದನ್ನೂ ಓದಿ: ಸತತ ಪ್ರಯತ್ನದಿಂದ ಮಾತ್ರ ಭಾರತವನ್ನು ಸ್ವಚ್ಛಗೊಳಿಸಲು ಸಾಧ್ಯ: ಮೋದಿ

    ಕಿತ್ತೂರಿನಲ್ಲಿ ಆಚರಿಸಲ್ಪಡುವ ಕಿತ್ತೂರು ಉತ್ಸವಕ್ಕೆ (Kitturu Utsava) ಮತ್ತು ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರ ಸಕಲ ನೆರವು ಮತ್ತು ಅಗತ್ಯ ಅನುದಾನವನ್ನು ನೀಡುತ್ತಿದೆ. ಇಂದು ಮಹಾತ್ಮ ಗಾಂಧಿಯವರ ಜಯಂತಿ ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಹೌದು. ಗಾಂಧಿ ನಡಿಗೆ ಮೂಲಕ ಗಾಂಧಿ ತತ್ವಾದರ್ಶಗಳು ಇವತ್ತಿನ ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

    ಗಾಂಧೀಜಿಯವರು ದೇಶದ ಸ್ವಾತಂತ್ರ‍್ಯ ಹೋರಾಟಕ್ಕೆ ನೇತೃತ್ವ ವಹಿಸಿ ಶಾಂತಿಯುತವಾಗಿ ಸ್ವಾತಂತ್ರ‍್ಯ ದೊರಕಿಸಿಕೊಟ್ಟರು. 1920 ರಿಂದ 1947ರ ವರೆಗಿನ ಸ್ವಾತಂತ್ರ‍್ಯ ಹೋರಾಟದ ನೇತೃತ್ವ ವಹಿಸಿದ್ದರು ಎಂದರು.

    ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ, ಬೆಳಗಾವಿ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕಿತ್ತೂರು ಶಾಸಕ ಬಾಬಾ ಸಾಹೇಬ ಪಾಟೀಲ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಇದನ್ನೂ ಓದಿ: ಹೆಣ್ಣು ಮಗು ಎಂದು ತಿಳಿಸಿ, ಸತ್ತ ಗಂಡು ಮಗು ನೀಡಿದ್ದಾರೆ : ಆಸ್ಪತ್ರೆಯ ವಿರುದ್ಧ ತಾಯಿ ಆಕ್ರೋಶ

  • ಬೆಳಗಾವಿ ಜಿಲ್ಲೆಯನ್ನು ಇಬ್ಭಾಗ ಮಾಡಿ ಪ್ರತ್ಯೇಕ ಜಿಲ್ಲೆಗಳನ್ನು ಮಾಡಬೇಕು, ಇದಕ್ಕೆ ನಮ್ಮ ಅಭ್ಯಂತರವಿಲ್ಲ: ಶೆಟ್ಟರ್

    ಬೆಳಗಾವಿ ಜಿಲ್ಲೆಯನ್ನು ಇಬ್ಭಾಗ ಮಾಡಿ ಪ್ರತ್ಯೇಕ ಜಿಲ್ಲೆಗಳನ್ನು ಮಾಡಬೇಕು, ಇದಕ್ಕೆ ನಮ್ಮ ಅಭ್ಯಂತರವಿಲ್ಲ: ಶೆಟ್ಟರ್

    – ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು

    ಹುಬ್ಬಳ್ಳಿ: ಬೆಳಗಾವಿ (Belagavi) ಜಿಲ್ಲೆಯ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯನ್ನು ವಿಭಾಗಿಸುವುದು ಒಳ್ಳೆಯದು. ಆದರೆ ಅದನ್ನು ವೈಜ್ಞಾನಿಕವಾಗಿ ವಿಭಾಗಿಸಬೇಕು ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಆಡಳಿತಯಂತ್ರ ಸರಿಯಾಗಿ ಇರಬೇಕೆಂದರೆ ಜಿಲ್ಲೆಗಳು, ತಾಲೂಕು ಚಿಕ್ಕ ಚಿಕ್ಕದಾಗಿರಬೇಕು. ಬೆಳಗಾವಿಯು ಇಬ್ಭಾಗವಾಗಿ ಪ್ರತ್ಯೇಕ ಜಿಲ್ಲೆಯಾಗಬೇಕು. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದರು. ಇದನ್ನೂ ಓದಿ: ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ – ನಾಲ್ವರು ಸಾವು

    ಯತ್ನಾಳ್‌ರ ವೈಯಕ್ತಿಕ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ಸಿಎಂ ಆಗಲು ಮಹಾನ್ ನಾಯಕ ಸಾವಿರ ಕೋಟಿ ತೆಗೆದಿಟ್ಟಿದ್ದಾರೆ ಅನ್ನೋದು ಯತ್ನಾಳ್ ವೈಯಕ್ತಿಕ ಹೇಳಿಕೆ. ಯತ್ನಾಳ್ ಹೇಳಿಕೆಗೆ ನಾನು ಕಾಮೆಂಟ್ ಮಾಡುವುದಿಲ್ಲ. ಅವರು ಪ್ರತ್ಯೇಕ ಸಭೆ ಮಾಡಿದ್ದರ ಬಗ್ಗೆಯೂ ಮಾತನಾಡುವುದಿಲ್ಲ. ನಾನು ಯಾಕೆ ಅದರ ಬಗ್ಗೆ ಮಾತನಾಡಲಿ. ಈ ನಿಟ್ಟಿನಲ್ಲಿ ಪಕ್ಷ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಅವರ ಹೇಳಿಕೆ ಅವರಿಗೇ ಸೀಮಿತ ಎಂದು ಹೇಳಿದರು. ಇದನ್ನೂ ಓದಿ: MUDA Case: ಸಿಎಂಗೆ ಮತ್ತೊಂದು ಸಂಕಷ್ಟ – ಸಿದ್ದರಾಮಯ್ಯ ವಿರುದ್ಧ ED ಎಫ್‌ಐಆರ್‌ ಸಾಧ್ಯತೆ

    ಸಿಎಂ (CM Siddaramaiah) ರಾಜೀನಾಮೆ ವಿಚಾರವಾಗಿ ಮಾತನಾಡಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು. ಆದರೆ ಭಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ? ಅವರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಎಲ್ಲರ ಮೇಲೆ ಎಫ್‌ಐಆರ್ ಹಾಕಿಸಿ ತೊಂದರೆ ಕೊಡುವುದು ಆರಂಭ ಆಗಿದೆ. ಮುಡಾ ಹಗರಣದಲ್ಲಿ ಜನರ ಆಲೋಚನೆಯನ್ನು ಬದಲಾಯಿಸಿವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್‌, ಕಟೀಲ್‌ ವಿರುದ್ಧ FIR – ಮಧ್ಯಂತರ ತಡೆ ನೀಡಿದ ಹೈಕೋರ್ಟ್‌

    ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರ ಸಚಿವರ ಮೇಲೆ ಎಫ್‌ಐಆರ್ ಇದ್ದರೆ ಪ್ರಾಮಾಣಿಕವಾಗಿ ತನಿಖೆ ಮಾಡಲಿ. ಕೇಂದ್ರ ಮಂತ್ರಿಗಳ ಮೇಲೆ ಅಧಿಕಾರಿ ಕೆಟ್ಟದಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದ ಮಾರ್ಗದರ್ಶನದಲ್ಲಿ ಇದೆಲ್ಲ ನಡೆಯುತ್ತಿದೆ. ಕುಮಾರಸ್ವಾಮಿ ( H D Kumaraswamy)  ಅವರು ಕೇಂದ್ರಕ್ಕೆ ಈ ಬಗ್ಗೆ ದೂರು ನೀಡಿದ್ದಾರೆ. ಪೊಲೀಸ್ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳೋದು ಅನಿವಾರ್ಯ ಆಗುತ್ತದೆ ಎಂದರು.

    ನಿರ್ಮಲಾ ಸೀತಾರಾಮನ್ ಮೇಲೆ ನ್ಯಾಯಾಧೀಶರ ಸೂಚನೆ ಮೇಲೆ ಎಫ್‌ಐಆರ್ ಮಾಡಿದ್ದಾರೆ. ನ್ಯಾಯಾಧೀಶರ ಸೂಚನೆಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ಆದರೆ ಪೊಲೀಸರು ಸತ್ಯ ಪರಿಶೀಲನೆ ಮಾಡದೆ ಎಫ್‌ಐಆರ್ ದಾಖಲು ಮಾಡಿದ್ದಾರೆ. ಕೇಂದ್ರ ಮಂತ್ರಿ ಮೇಲೆ ಕ್ರಮ ಕೈಗೊಳ್ಳಬೇಕಾದರೆ ಪ್ರಾಸಿಕ್ಯೂಷನ್ ಅಗತ್ಯವಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿಎಂ ಮುಡಾ ಸಂಕಷ್ಟದಿಂದ ಪಾರಾಗಲಿ ಎಂದು ದರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಾರ್ಥನೆ

    ಚುನಾವಣಾ ಬಾಂಡ್‌ಗೆ ದುಡ್ಡು ಕೊಟ್ಟವರು ಯಾರೂ ದೂರು ಕೊಟ್ಟಿಲ್ಲ. ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ದೂರು ನೀಡಿದ್ದಾರಾ? ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನೋದು ಇದರಿಂದ ಸ್ಪಷ್ಟವಾಯಿತು. ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಹೇಳಿದರು ಎಂದು ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ನಿರ್ಮಲಾ ಸೀತಾರಾಮನ್ ಇದರಿಂದ ಲಾಭ ಮಾಡಿಕೊಂಡಿದ್ದಾರಾ? ಚುನಾವಣಾ ಬಾಂಡ್ ಮೂಲಕ ಕಾಂಗ್ರೆಸ್ (Congress) ಪಕ್ಷಕ್ಕೂ ಹಣ ಹೋಗಿದೆ. ಬೇರೆ ಬೇರೆ ಪಕ್ಷಗಳಿಗೂ ಹಣ ಹೋಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 18 ವರ್ಷಗಳ ಬಳಿಕ ವಿರಾಜಪೇಟೆ ಪುರಸಭೆ ಅಧಿಕಾರ ಹಿಡಿದ ಕಾಂಗ್ರೆಸ್

  • ಬೆಳಗಾವಿಯಲ್ಲಿ ಕಾನೂನು ಅರಿವು ಕಾರ್ಯಾಗಾರ

    ಬೆಳಗಾವಿಯಲ್ಲಿ ಕಾನೂನು ಅರಿವು ಕಾರ್ಯಾಗಾರ

    ಬೆಳಗಾವಿ: ಕಾರ್ಯಾಗಾರ ಕೇವಲ ಶೋಷಿತರಿಗೆ ಕಾನೂನಿನ ಅರಿವು ಮೂಡಿಸಲು ಮಾತ್ರ ಸೀಮಿತವಾಗದೇ ಅವರನ್ನು ಶೋಷಿಸುವ ಹಾಗೂ ಪ್ರೇರೇಪಿಸುವ ವರ್ಗಗಳಿಗೂ ಕಾನೂನಿನ ಅರಿವು ಮೂಡಿಸುವ ಸಾಮಾನ್ಯ ಸಭೆಯಾಗಿ ಹೊರ ಹೊಮ್ಮಬೇಕು ಎಂದು ಎಸ್.ಪಿ ಭೀಮಾ ಶಂಕರ್ ಗುಳೇದ (Bhimashankar Guled) ಹೇಳಿದ್ದಾರೆ.

    ಬೆಳಗಾವಿ (Belagavi) ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಕುರಿತು ಅನುಷ್ಠಾನ ಅಧಿಕಾರಿಗಳಿಗೆ ಅರಿವು ಮೂಡಿಸಲು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕಾರ್ಯಾಗಾರ ಜರುಗಿತು. ಇದನ್ನೂ ಓದಿ: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಅ.4 ಕ್ಕೆ ಮುಂದೂಡಿಕೆ

    ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಸಲಹೆಗಾರರಾದ ನಿವೃತ್ತ ಐಎಎಸ್‌ಅಧಿಕಾರಿ ಇ.ವೆಂಕಟಯ್ಯ, ಎಸ್.ಪಿ ಭೀಮಾ ಶಂಕರ್ ಗುಳೇದ್, ಪೊಲೀಸ್ ಆಯುಕ ಯಡಾ ಮಾರ್ಟಿನ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ವಾಯುಪಡೆ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಏರ್ ಮಾರ್ಷಲ್ ಎಪಿ ಸಿಂಗ್

    ಭೀಮಾ ಶಂಕ‌ರ್ ಗುಳೇದ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ 2022 ರಿಂದ 24ರ ವರಗೆ ಮೂರು ವರ್ಷಗಳಲ್ಲಿ ದೌರ್ಜನ್ಯ ತಡೆ ಕಾಯಿದೆಯ ಪ್ರಕರಣಗಳು ಹೆಚ್ಚುತ್ತಿವೆ ಹಾಗೂ ಅಪರಾಧಿಗಳ ವಿರುದ್ಧ ಶಿಕ್ಷೆ ಆಗುತ್ತಿಲ್ಲ ಇದೂ ಬೇಸರದ ಸಂಗತಿಯಾಗಿದೆ. ತನಿಖಾಧಿಕಾರಿಗಳ ತೆಗದುಕೊಳ್ಳುವ ಕ್ರಮದಲ್ಲಿ ವ್ಯತ್ಯಾಸ ಕಂಡು ಬಂದರೆ ಸಹಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.

    ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಪಂ ಸಿಇಓ ರಾಹುಲ್ ಶಿಂಧೆ, ಎಸ್.ಪಿ ಡಾ.ಭೀಮಾಶಂಕರ ಗುಳೇದ, ಪಾಲಿಕೆ ಆಯುಕ್ತ, ಅಶೋಕ ದುಡಗುಂಟಿ ಸೇರಿ ಹಲವು ಅಧಿಕಾರಿಗಳು ಇದ್ದರು.

  • ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ- ಸಾವಿನ ಸುತ್ತ ಅನುಮಾನದ ಹುತ್ತ

    ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ- ಸಾವಿನ ಸುತ್ತ ಅನುಮಾನದ ಹುತ್ತ

    ಚಿಕ್ಕೋಡಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು ಇದು ಆತ್ಮಹತ್ಯೆಯಲ್ಲ (Suicide) ಕೊಲೆ (Murder) ಎಂಬ ಆರೋಪ ಕೇಳಿ ಬಂದಿದೆ.

    ಬೆಳಗಾವಿ (Belagavi) ಜಿಲ್ಲೆಯ ರಾಯಭಾಗ ತಾಲೂಕಿನ ಯಬರಟ್ಟಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು ಗ್ರಾಮದ 25 ವರ್ಷದ ಯುವಕ ಪ್ರವೀಣ್ ಒಡೆಯರ ಮಂಗಳವಾರ ರಾತ್ರಿ ಮನೆಯಿಂದ ಗೆಳೆಯರೊಂದಿಗೆ ಹೋಗಿದ್ದು ಶವವಾಗಿ ಪತ್ತೆಯಾಗಿದ್ದಾನೆ.

     

    ಮನೆಯಲ್ಲಿ ಯಾವುದೇ ಮನಸ್ತಾಪ ಇಲ್ಲದೇ ಸಂತೋಷದಲ್ಲಿದ್ದ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇತನನ್ನು ಯಾರೋ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಗೋಲ್ಮಾಲ್ ಆರೋಪ – ಲೋಕಾಯುಕ್ತಕ್ಕೆ ದೂರು

    ಸ್ಥಳಕ್ಕೆ ಹಾರೋಗೇರಿ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದು ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಶೆಡ್‌ಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – 6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ

    ಶೆಡ್‌ಗೆ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – 6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ

    ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುತ್ತೇನೆ ಎಂದು ಪುಸಲಾಯಿಸಿ ಅತ್ಯಾಚಾರ ಎಸಗಿದ ಹಾಗೂ ಪ್ರಚೋದನೆ ನೀಡಿದ 6 ಮಂದಿ ದೋಷಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 10 ಸಾವಿರ ದಂಡ ವಿಧಿಸಿ ಜಿಲ್ಲಾ ಪೋಕ್ಸೊ (POCSO) ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ.

    ರಾಯಬಾಗ ತಾಲ್ಲೂಕಿನ ನಸಲಾಪುರದ ಸಚಿನ್ ಬಾಬಾಸಾಹೇಬ ರಾಯಮಾನೆ, ರೂಪಾ ಬಾಬಾಸಾಹೇಬ ಮಾನೆ, ರಾಕೇಸ್ ಬಾಬಾಸಾಹೇಬ ರಾಯಮಾನೆ, ಚಿಕ್ಕೋಡಿ ತಾಲ್ಲೂಕಿನ ಗಳತಗಾದ ರೋಹಿಣಿ ಶ್ರೀಮಂತ ದೀಕ್ಷಿತ್, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲ್ಲೂಕಿನ ಕುಪ್ಪವಾಡದ ವಿನೋದ್ ಸುರೇಶ್ ರಾಯಮಾನೆ, ವಿಜಯ ತಾನಾಜಿ ಸಾಳುಂಕೆ ಶಿಕ್ಷೆಗೆ ಗುರಿಯಾದವರು. ಇದನ್ನೂ ಓದಿ: ಬೆಳ್ತಂಗಡಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

    2015 ಜೂ.21ರಂದು ಆರೋಪಿ ಸಚಿನ್ ರಾಯಮಾನೆ ಬಾಲಕಿಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ಮಹಾರಾಷ್ಟ್ರದ (Maharashtra) ಕೊಲ್ಹಾಪುರ ಜಿಲ್ಲೆಯ ಗಗನಬಾವಡಾ ತಾಲ್ಲೂಕಿನ ನಿಗದಿವಾಡಿ ಗ್ರಾಮದ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಕೂಲಿ ಕೆಲಸಕ್ಕೆ ಬಂದಿದ್ದೇವೆ ಎಂದು ಹೇಳಿ ಅಲ್ಲಿ ಮನೆಯೊಂದರ ಶೆಡ್ ಪಡೆದುಕೊಂಡಿರುತ್ತಾರೆ. ಶೆಡ್‌ನಲ್ಲಿ ಬಾಲಕಿ ಮೇಲೆ ಆರೋಪಿ ಸಚಿನ್ ಅತ್ಯಾಚಾರ ಎಸಗಿದ್ದನು. ಇನ್ನುಳಿದವರು ಆತನಿಗೆ ಪ್ರಚೋದನೆ ನೀಡಿದ್ದರು. ಇದನ್ನೂ ಓದಿ: Tirupati Laddu Row | ಟಿಟಿಡಿ ಲಡ್ಡು ತಯಾರಿಕೆಗೆ ಪ್ರಮಾಣಿಕೃತ ತುಪ್ಪವನ್ನೇ ಬಳಸಲಾಗಿದೆ: ಜಗನ್ ಸ್ಪಷ್ಟನೆ

    ಅಪ್ರಾಪ್ತ ಬಾಲಕಿ ಶೆಡ್‌ನಿಂದ ಹೊರಗೆ ಬರದಂತೆ ಕೂಡಿಟ್ಟಿದ್ದರು. ಅಲ್ಲದೇ 3 ಲಕ್ಷ ಹಣ ಕೊಟ್ಟರೆ ಮಾತ್ರ ನಿಮ್ಮ ಮಗಳನ್ನು ಇಲ್ಲಿಂದ ವಾಪಸ್ ಕಳಿಸುವುದಾಗಿ ಬಾಲಕಿ ತಂದೆಗೆ ಬೆದರಿಕೆಯೊಡ್ಡಿದ್ದರು. ಈ ಸಂಬಂಧ ಬಾಲಕಿ ತಂದೆ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಚಿಕ್ಕೋಡಿಯ ತನಿಖಾಧಿಕಾರಿ ಎಂ.ಎಸ್.ನಾಯ್ಕ ಜಿಲ್ಲಾ ಪೋಕ್ಸೋ ನ್ಯಾಯಾಲಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಿಸಲ್ಲ, ಇದು 7ನೇ ಹಂತದ ಪಂಚಮಸಾಲಿ ಹೋರಾಟ – ಜಯಮೃತ್ಯುಂಜಯ ಸ್ವಾಮೀಜಿ

    ಸುದೀರ್ಘವಾಗಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಅವರು, ಆರೋಪಿತರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಅದೇ ರೀತಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಪರಿಹಾರಧನ ಪಡೆಯುವಂತೆ ಸಂತ್ರಸ್ತೆಯ ತಂದೆಗೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು. ಇದನ್ನೂ ಓದಿ: Jammu & Kashmir | 40 ಅಡಿ ಆಳದ ಕಂದಕಕ್ಕೆ ಉರುಳಿದ ಸೇನೆಯ ಬಸ್‌ – ಮೂವರು ಯೋಧರು ದುರ್ಮರಣ