Tag: belagavi

  • ಗೃಹಲಕ್ಷ್ಮೀ ಯೋಜನೆಯ ಹಣದಿಂದ ಗ್ರಂಥಾಲಯ ಸ್ಥಾಪಿಸಿ, ಯುವಜನತೆಗೆ ನೆರವಾದ ಮಹಿಳೆ

    ಗೃಹಲಕ್ಷ್ಮೀ ಯೋಜನೆಯ ಹಣದಿಂದ ಗ್ರಂಥಾಲಯ ಸ್ಥಾಪಿಸಿ, ಯುವಜನತೆಗೆ ನೆರವಾದ ಮಹಿಳೆ

    ಚಿಕ್ಕೋಡಿ: ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (GruhaLakshmi Scheme) ಹಣದಿಂದ ಬೈಕ್ ಖರೀದಿ, ವ್ಯಾಪಾರ ಆರಂಭ ಸೇರಿದಂತೆ ಅನೇಕರು ಲಾಭ ಪಡೆದಿದ್ದಾರೆ. ಆದರೆ ಇಲ್ಲೋರ್ವ ಮಹಿಳೆ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಜಿಲ್ಲೆಯ ರಾಯಭಾಗ (Rayabhaga) ತಾಲೂಕಿನ ಮಂಟೂರಿನಲ್ಲಿ ಗ್ರಂಥಾಲಯ ಸ್ಥಾಪಿಸಿ ಮಾದರಿಯಾಗಿದ್ದಾರೆ.

    ಮಂಟೂರು (Manturu) ಗ್ರಾಮದ ನಿವಾಸಿಯಾದ ಮಲ್ಲವ್ವ ಮೇಟಿ, ಮಂಟೂರು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, ಗೃಹಲಕ್ಷ್ಮೀ ಯೋಜನೆಯ 13 ಕಂತುಗಳ ಹಣದಿಂದ ಚಿಕ್ಕ ಕೋಣೆಯಲ್ಲಿ ಸುಸಜ್ಜಿತವಾಗಿ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ.ಇದನ್ನೂ ಓದಿ: ದಾಖಲೆ ತೋರಿಸಿದ್ರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ: ಸಿ.ಟಿ ರವಿ

    ಕೇವಲ ಗೃಹಲಕ್ಷ್ಮೀ ಹಣದಿಂದ ಮಾತ್ರವಲ್ಲ, ತಮಗೆ ಬರುವ ಆದಾಯದ ಹಣವನ್ನು ಸೇರಿಸಿ, ಒಂದು ಲಕ್ಷ ರೂ. ಖರ್ಚು ಮಾಡಿ ಗ್ರಂಥಾಲಯ ನಿರ್ಮಿಸಿದ್ದಾರೆ.

    ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಧಾರವಾಡ, ಬೆಂಗಳೂರು ನಗರಗಳಿಗೆ ತೆರಳಿ ಗ್ರಾಮೀಣ ಭಾಗದ ಯುವಜನತೆ ಸಾವಿರಾರು ರೂ. ಹಣವನ್ನು ಖರ್ಚು ಮಾಡುತ್ತಾರೆ. ಗ್ರಂಥಾಲಯದಿಂದ ಯುವಜನತೆಗೆ ಹಣದ ಖರ್ಚು ಕಡಿಮೆಯಾಗುತ್ತದೆ ಎನ್ನುವ ಸದುದ್ದೇಶದಿಂದ ಗ್ರಂಥಾಲಯ ಸ್ಥಾಪಿಸಿ ನೆರವಾಗಿದ್ದಾರೆ. ನೆರವಾಗಲು ಸಹಾಯ ಮಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಂದ ಯಾವುದೇ ಹಣ ಪಡೆಯದೇ ಉಚಿತವಾಗಿ ಪುಸ್ತಕಗಳನ್ನು ಓದಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕೇವಲ ಮಲ್ಲವ್ವ ಅವರು ಮಾತ್ರವಲ್ಲದೇ ಅವರ ಕುಟುಂಬದವರು ಕೂಡ ಇದಕ್ಕೆ ಸಹಕಾರಿಯಾಗಿದ್ದಾರೆ.ಇದನ್ನೂ ಓದಿ: ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್‌ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ

  • ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನ ಯಾರೂ ಅಲ್ಲಾಡಿಸೋಕೆ ಆಗಲ್ಲ: ಸಿದ್ದರಾಮಯ್ಯ

    ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನ ಯಾರೂ ಅಲ್ಲಾಡಿಸೋಕೆ ಆಗಲ್ಲ: ಸಿದ್ದರಾಮಯ್ಯ

    ಬೆಳಗಾವಿ: ಹೇಗಾದರೂ ಮಾಡಿ ನನ್ನನ್ನು ಅಧಿಕಾರದಿಂದ ತೆಗೆಯಬೇಕು ಎಂದು ಈಗಲೂ ಬಿಜೆಪಿಯವರು (BJP) ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನರ ಆಶೀರ್ವಾದ ಇರೋವರೆಗೂ ನನ್ನನ್ನು ಯಾರೂ ಅಲ್ಲಾಡಿಸೋಕೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿಶ್ವಾಸ ವ್ಯಕ್ತಪಡಿಸಿದರು.

    ಸವದತ್ತಿ ಯಲ್ಲಮ್ಮನ (Savadatti Yallamma) ಗುಡ್ಡದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 22.45 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿಗರಿಗೆ ನಿರ್ಮಿಸಲಾಗಿರುವ ಕೊಠಡಿಗಳು, ಡಾರ್ಮಿಟರಿ, ಪಾರ್ಕಿಂಗ್, ಉದ್ಯಾನ ಮತ್ತಿತರ ಮೂಲಸೌಕರ್ಯಗಳು ಮತ್ತು ಮಹಿಳಾ ಅಭಿವೃದ್ಧಿ ನಿಗಮದಿಂದ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳು ಮತ್ತು ಅತಿಥಿಗೃಹವನ್ನು ಉದ್ಘಾಟಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ಓರ್ವ ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ

    ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು 17 ಸ್ಥಾನ ಗೆದ್ದರು. ನಾವು 9 ಸ್ಥಾನ ಗೆದ್ದೆವು. ಜೆಡಿಎಸ್ 2 ಸ್ಥಾನ ಗೆದ್ದಿತು. ಅವರು ಏನೂ ಮಾಡದೇ ನೀವು ಅವರನ್ನು ಗೆಲ್ಲಿಸುತ್ತೀರಿ. ಏನೂ ಮಾಡದೇ ಬಿಜೆಪಿ ಪ್ರಚಾರ ಪಡೆಯುತ್ತದೆ. ಹಿಂದೂಗಳು, ಹಿಂದುತ್ವದ ಹೆಸರಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಈ ನಾಡು ಉಳಿಯಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು. ನಮ್ಮ ಸರ್ಕಾರ ಇನ್ನೂ ಮೂರುವರೆ ವರ್ಷ ಇರುತ್ತದೆ. ಆ ಅವಧಿಯಲ್ಲಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಎನ್‌ಐಎಗೆ ನೀಡಿರುವ ಪ್ರಕರಣ ವಾಪಸ್ ಪಡೆಯಲು ಸರ್ಕಾರಕ್ಕೆ ಅಧಿಕಾರ ಇಲ್ಲ: ಬಸವರಾಜ ಬೊಮ್ಮಾಯಿ

    ಬಿಜೆಪಿಯವರು ಧರ್ಮ, ಆಚಾರ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಇಂತಹ ಕೆಲಸ ಮಾಡಿದ್ದಾರಾ? ಈ ದೇವಸ್ಥಾನಕ್ಕೆ ಕೆಳವರ್ಗದ ಜನರೇ ಜಾಸ್ತಿ ಬರೋದು. ದೇಶ, ವಿದೇಶಗಳಿಂದಲೂ ಸಹ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಯಲ್ಲಮ್ಮ ತಾಯಿ ಬಹಳ ಶಕ್ತಿ ದೇವತೆ ಅಂತ ನಂಬಿದ್ದಾರೆ. ಆದರೆ ದೇವರು ಕೂಡ ಕೆಟ್ಟದ್ದು ಮಾಡಿ ಎಂದು ಬಯಸುವುದಿಲ್ಲ. ದೇವರು ಮತ್ತು ಧರ್ಮ ಮನುಷ್ಯನನ್ನು ಪ್ರೀತಿಸಿ ಎನ್ನುತ್ತವೆ. ಬಿಜೆಪಿಯವರ ರೀತಿ ಧರ್ಮದ ಹೆಸರಲ್ಲಿ ಜಾತಿ ಹೆಸರಲ್ಲಿ ಸಮಾಜ ಒಡೆಯಿರಿ ಎಂದು ಹೇಳುವುದಿಲ್ಲ. ಬಸವಣ್ಣನೂ ಸಹ ಇವನಾರವ ಎಂದೆನಿಸದಿರಯ್ಯ ಅಂತ ಹೇಳಿದ್ದಾರೆ. ಇದನ್ನೂ ಓದಿ: ಎರಡು ದಿನದಿಂದ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಸೇತುವೆ

    ಬಸವಣ್ಣನವರನ್ನು ನಾವು ಸಾಂಸ್ಕೃತಿಕ ನಾಯಕನನ್ನಾಗಿ ಮಾಡಿದ್ದೇವೆ. ಸಮಾಜದಲ್ಲಿ ಅಸಮಾನತೆ ಹೋಗಬೇಕು. ಎಲ್ಲರ ಸರ್ವೋದಯಕ್ಕಾಗಿಯೇ ನಾವು ಶಕ್ತಿ ಯೋಜನೆ ಜಾರಿ ಮಾಡಿದ್ದು, ಗೃಹಲಕ್ಷ್ಮಿ ಹಣದಲ್ಲಿ ಮಹಿಳೆಯರು ಊರಿಗೆ ಹೋಳಿಗೆ ಊಟ ಹಾಕುತ್ತಿದ್ದಾರೆ. ಅತ್ತೆ ಸೊಸೆಗೆ ಜಗಳ ಶುರುವಾಗುತ್ತದೆ ಅಂತಾ ಬಿಜೆಪಿಯವರು ಹೇಳುತ್ತಾರೆ. ಜಗಳ ಆಯ್ತಾ? ಬರೀ ಬುರುಡೆ ಹೊಡೆಯುತ್ತಾರೆ ಎಂದು ವಾಗ್ದಾಳಿ ಮಾಡಿದರು. ಇದನ್ನೂ ಓದಿ: ಟೆಡ್ಡಿಬೇರ್ ವೇಷ ಧರಿಸಿ ದರ್ಶನ್ ನೋಡಲು ಬಂದ ಅಭಿಮಾನಿ

    ಯಲ್ಲಮ್ಮ ಕ್ಷೇತ್ರದಲ್ಲಿ 7ರಿಂದ 8 ಸಾವಿರ ಜನಕ್ಕಾದರೂ ಕುಡಿಯುವ ನೀರು, ವಸತಿ ವ್ಯವಸ್ಥೆ ಮಾಡಬೇಕು. ಇದನ್ನೆಲ್ಲಾ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತೇವೆ. ಅದಕ್ಕೆ ನಿಮ್ಮ ಸಹಕಾರ ಬೇಕು. ಯಾವ ಕಾರಣಕ್ಕೂ ಕಾನೂನು ಬಾಹಿರವಾಗಿ ಮಳಿಗೆಗಳನ್ನು ಮಾಡಿಕೊಳ್ಳಬೇಡಿ. ಇದರಿಂದ ಈ ಕ್ಷೇತ್ರವೇ ಕಾನೂನು ಬಾಹಿರ ಆಗುತ್ತದೆ. ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡುವ ಸಲುವಾಗಿ ಪ್ರಾಧಿಕಾರಿಗಳನ್ನು ಸ್ಥಾಪಿಸಲಾಗಿದೆ. ಕನಿಷ್ಠ 3,000 ಸಾವಿರ ಜನರ ದಾಸೋಹಕ್ಕೆ ದಾಸೋಹ ಕೇಂದ್ರ ಸ್ಥಾಪಿಸುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ. ಈ ರೀತಿ ಯಾವ ಸರ್ಕಾರಗಳು ಮಾಡಿಕೊಟ್ಟಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ವಿಜಯೇಂದ್ರ ಏನು ಪುರೋಹಿತನಾ, ಜ್ಯೋತಿಷಿನಾ?: ಸಿಎಂ ಸಿದ್ದರಾಮಯ್ಯ

    ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರು ದೇವರು, ಧರ್ಮ ಅವರ ಆಸ್ತಿ ಅಂದುಕೊಂಡಿದ್ದಾರೆ. ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡೋಕೆ ಪ್ರಯತ್ನಿಸುತ್ತಾರೆ. ಧರ್ಮ ಯಾರೊಬ್ಬನ ಸ್ವತ್ತಲ್ಲ. ದೇವನೊಬ್ಬ ನಾಮ ಹಲವು. ಧರ್ಮ ಪಾಲನೆ ವೈಯಕ್ತಿಕ ವಿಚಾರ. ಯಾವ ಧರ್ಮವನ್ನು ಬೇಕಾದರೂ ನೀವು ಪಾಲನೆ ಮಾಡಬಹುದು ಎಂದು ಕಿಡಿಕಾರಿದರು. ಇದನ್ನೂ ಓದಿ: ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಸಿಎಂ – ಪತ್ನಿ ಹೆಸರಲ್ಲಿ ವಿಶೇಷ ಪೂಜೆ

    ಇನ್ನು ಗ್ಯಾರಂಟಿ ಯೋಜನೆಯನ್ನು ನಡೆಸಿಕೊಡುವ ಶಕ್ತಿ ಕೊಡು ಎಂದು ಪ್ರಾರ್ಥಿಸಿದ್ದೇವೆ. ಗ್ಯಾರಂಟಿ ಯೋಜನೆ ಜಾರಿಯಾದ ಮೇಲೆ ಧರ್ಮಸ್ಥಳಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗಿದೆ ಅಂತ ಪತ್ರ ಬರೆದಿದ್ದಾರೆ. ರಾಮಲಿಂಗಾ ರೆಡ್ಡಿಯವರು ಅರ್ಚಕರಿಗೆ ವಿಮೆ ಯೋಜನೆಗೆ 5 ಲಕ್ಷ ಜೀವನೋದ್ಧಾರಕ್ಕೆ ಕೊಡುವ ಯೋಜನೆ ಮಾಡಿದ್ದರು. ನಾವು ಮಾಡಿದ ಬಿಲ್ ವಿರೋಧ ಮಾಡಿ ಅದನ್ನು ನಿಲ್ಲಿಸಿದ್ದಾರೆ. ಸಿಎಂ ಹೆಸರು ಅವರ ಪತ್ನಿ ಹೆಸರು, ಸಚಿವರ ಹೆಸರನ್ನು ಹೇಳಿ ಅರ್ಚಕರು ಅರ್ಚನೆ ಮಾಡಿದರು. ಅಂಥ ಅರ್ಚಕರಿಗೆ ಯೋಜನೆ ತಂದರೆ ಇದನ್ನು ವಿರೋಧ ಮಾಡುತ್ತೀರಿ. ಇಂದು ಸಿದ್ದರಾಮಯ್ಯ 30 ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ. ಯಾಕೆ ಯಡಿಯೂರಪ್ಪ, ಬೊಮ್ಮಾಯಿ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ

    ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್‌ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ್ ವೈದ್ಯ, ರಾಜು ಕಾಗೆ, ಬಾಬಾ ಸಾಹೇಬ್ ಪಾಟೀಲ್, ಆಸಿಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸೇರಿ ಮತ್ತಿತರರು ಇದ್ದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗ: ಜೋಶಿ ವಾಗ್ದಾಳಿ

  • ವಿಜಯೇಂದ್ರ ಏನು ಪುರೋಹಿತನಾ, ಜ್ಯೋತಿಷಿನಾ?: ಸಿಎಂ ಸಿದ್ದರಾಮಯ್ಯ

    ವಿಜಯೇಂದ್ರ ಏನು ಪುರೋಹಿತನಾ, ಜ್ಯೋತಿಷಿನಾ?: ಸಿಎಂ ಸಿದ್ದರಾಮಯ್ಯ

    ಬೆಳಗಾವಿ: ವಿಜಯೇಂದ್ರ ಏನು ಪುರೋಹಿತನಾ? ಜ್ಯೋತಿಷಿನಾ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದ್ದಾರೆ.

    ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ (Shri Renuka Yellamma Temple) ಅಭಿವೃದ್ಧಿ ಪ್ರಾಧಿಕಾರ ಮತ್ತು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಪ್ರಥಮ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಧಿವೇಶನಕ್ಕೆ ಹೊಸ ಸಿಎಂ ಇರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ

    ದಸರಾ ಒಳಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದಿದ್ದರು. ದಸರಾ ಮಗಿಯಿತು. ನಾನು ರಾಜೀನಾಮೆ ಕೊಟ್ಟನಾ? ವಿಜಯೇಂದ್ರಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಏನಿದೆ? ಪೋಕ್ಸೋ ಕೇಸ್‌ನಲ್ಲಿ ಅವರ ತಂದೆ ಯಡಿಯೂರಪ್ಪ ಬೇಲ್ ಮೇಲೆ ಹೊರಗೆ ಇದ್ದಾರೆ. ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದರು.

    ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ ವೇಳೆ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ನಮ್ಮ ಬೇಡಿಕೆಗೆ ತಕ್ಕಷ್ಟು ತೆರಿಗೆ ಹಣ ನೀಡಿಲ್ಲ, ಬದಲಾಗಿ ಕಡಿಮೆ ನೀಡಿದೆ. ನ್ಯಾಯಯುತವಾಗಿ ಬರಬೇಕಾದ ಹಣ ಕರ್ನಾಟಕ ರಾಜ್ಯಕ್ಕೆ ಬಂದಿಲ್ಲ. ಈ ಸಂಬಂಧ ಕರ್ನಾಟಕ ಜನರು, ಧ್ವನಿ ಎತ್ತಬೇಕು. ಅನ್ಯಾಯಕ್ಕೆ ಒಳಗಾದ ರಾಜ್ಯಗಳೂ ಕೂಡ ಧ್ವನಿ ಎತ್ತಬೇಕು. ಒಕ್ಕೂಟ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಹೀಗಾಗಿ ನ್ಯಾಯಯುತ ಪಾಲು ಕೊಟ್ಟರೆ ನಮಗೆ ಅನುಕೂಲ ಎಂದರು.

    ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನ್ಯಾಯಯುತ ತೆರಿಗೆ ಪಾಲು ವಿತರಣೆ ಪಾಲಿಸುತ್ತಿಲ್ಲ. ಈ ಬಗ್ಗೆ ರಾಜ್ಯಕ್ಕೆ ಅನ್ಯಾಯ ಆದರೂ ಬಿಜೆಪಿ ಸಂಸದರು ಕೇಂದ್ರ ಸರ್ಕಾರವನ್ನು ಕೇಳುತ್ತಿಲ್ಲ. ಕೋಮುವಾದಿ ವಿಚಾರದಲ್ಲಿ ಮಾತ್ರ ಬಿಜೆಪಿ ಸಂಸದರು ಪ್ರತಿಭಟನೆ ನಡೆಸುತ್ತಾರೆ ಎಂದು ಲೇವಡಿ ಮಾಡಿದರು.ಇದನ್ನೂ ಓದಿ: ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಸಿಎಂ – ಪತ್ನಿ ಹೆಸರಲ್ಲಿ ವಿಶೇಷ ಪೂಜೆ

  • ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಸಿಎಂ – ಪತ್ನಿ ಹೆಸರಲ್ಲಿ ವಿಶೇಷ ಪೂಜೆ

    ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಸಿಎಂ – ಪತ್ನಿ ಹೆಸರಲ್ಲಿ ವಿಶೇಷ ಪೂಜೆ

    ಬೆಳಗಾವಿ: ಸಿಎಂ ಸಿದ್ದರಾಮಯ್ಯ (Siddaramaiah) ಇಂದು (ಭಾನುವಾರ) ಶಕ್ತಿ ಪೀಠಗಳಲ್ಲಿ ಒಂದಾದ ಸವದತ್ತಿ ಯಲ್ಲಮ್ಮ ದೇಗುಲಕ್ಕೆ (Savadatti Yallamma Temple) ಭೇಟಿ ನೀಡಿ ದರ್ಶನ ಪಡೆದರು.

    ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಯಲ್ಲಮ್ಮ ಗುಡ್ಡಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ವಾದ್ಯ ಮೇಳಗಳೊಂದಿಗೆ ಸ್ವಾಗತಿಸಲಾಯಿತು. ಮಂತ್ರ ಘೋಷಗಳೊಂದಿಗೆ ದೇವಿಯ ದರ್ಶನಕ್ಕೆ ಅರ್ಚಕರು ಆಹ್ವಾನಿಸಿದರು. ಇದೇ ವೇಳೆ ದೇವಸ್ಥಾನದ ಅರ್ಚಕ ಕೊಟ್ಟ ಎರಡು ನಿಂಬೆ ಹಣ್ಣುಗಳನ್ನು ಕೈಯಲ್ಲಿ ಹಿಡಿದುಕೊಂಡು ದೇವಸ್ಥಾನ ಪ್ರವೇಶಿಸಿದ ಸಿದ್ದರಾಮಯ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ

    ಈ ವೇಳೆ ಅರ್ಚಕರು ಅವರ ಹೆಸರಲ್ಲಿ ಪೂಜೆ ಸಲ್ಲಿಸಿ, ತಿಲಕ ಇಟ್ಟು, ಮಂಗಳಾರತಿ ನೀಡಿ, ನಾಗಮೂರ್ತಿ ದೇವಿಯ ಬೆಳ್ಳಿ ಕಿರೀಟವನ್ನು ಸಿದ್ದರಾಮಯ್ಯ ಅವರ ತಲೆಗೆ ಮುಟ್ಟಿಸಿ ಆಶೀರ್ವಾದ ಮಾಡಿದರು. ದೇವಿಯ ಆರತಿ ಆಗುವವರೆಗೂ ದೇವಿ ಸನ್ನಿಧಾನದಲ್ಲಿ ನಿಂತು ದರ್ಶನ ಪಡೆದ ಸಿಎಂ, ತಾವೇ ಕುಂಕುಮ ಹಚ್ಚಿಕೊಂಡರು. ಬಳಿಕ 500 ರೂ. ಆರತಿ ತಟ್ಟೆಗೆ ಹಾಕಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗ: ಜೋಶಿ ವಾಗ್ದಾಳಿ

    ದೇವಿ ಮುಂದೆ 10 ನಿಮಿಷ ಕುಳಿತು ಡಿಸಿಎಂ ಡಿ.ಕೆ.ಶಿವಕುಮಾರ ಪ್ರಾರ್ಥಿಸಿದರು. ದೇವಸ್ಥಾನದ ಹೊರಗೆ ಡಿಕೆಶಿ ಬರುವವರೆಗೆ ಸಿಎಂ ಸಿದ್ದರಾಮಯ್ಯ ಕಾದು ನಿಂತಿದ್ದರು. ಈ ವೇಳೆ ಸಚಿವರಾದ ಹೆಚ್.ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ವಿಶ್ವಾಸ್ ವೈದ್ಯ, ಬಾಬಾಸಾಹೇಬ ಪಾಟೀಲ್, ಭರಮಗೌಡ ಕಾಗೆ, ಆಸೀಫ್ ಸೇಠ್, ಎನ್.ಹೆಚ್.ಕೋನರೆಡ್ಡಿ, ಚನ್ನರಾಜ ಹಟ್ಟಿಹೊಳಿ ಸೇರಿ ಮತ್ತಿತರರು ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ಕೊಟ್ಟರು. ಇದನ್ನೂ ಓದಿ: ಒಳಮೀಸಲಾತಿಗೆ ಕಾಂಗ್ರೆಸ್ ಮಾತ್ರ ಮೀನಾಮೇಷ ಎಣಿಸುತ್ತಿದೆ – ಆರ್.ಅಶೋಕ್

    ದೇವಿ ದರ್ಶನ ಪಡೆದು ವಾಪಸ್ ಆಗುವಾಗ ಸಿಎಂ ಸಿದ್ದರಾಮಯ್ಯ ಅವರಿಗೆ ಸವದತ್ತಿ ಯಲ್ಲಮ್ಮ ದೇವಿಯ ಅರ್ಚಕ ರಾಜ್ಯದಲ್ಲಿರುವ ಅರ್ಚಕರ ವೇತನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಸಂಬಂಧಿಸಿದ ಸಚಿವರ ಜೊತೆ ಚರ್ಚಿಸಿ ವೇತನ ಬಿಡುಗಡೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು. ಇದನ್ನೂ ಓದಿ: ಶಾಸಕ ಶಿವಲಿಂಗೇಗೌಡಗೆ ಗ್ರಾಮಸ್ಥರಿಂದ ಘೇರಾವ್

  • ಸಿಎಂ ಭೇಟಿ ಹೊತ್ತಲ್ಲೇ ಬೆಳಗಾವಿಯಲ್ಲಿ ʻಭವಿಷ್ಯದ ಮುಖ್ಯಮಂತ್ರಿʼ ಬ್ಯಾನರ್ – ರಾಜಕೀಯದಲ್ಲಿ ಸಂಚಲನ

    ಸಿಎಂ ಭೇಟಿ ಹೊತ್ತಲ್ಲೇ ಬೆಳಗಾವಿಯಲ್ಲಿ ʻಭವಿಷ್ಯದ ಮುಖ್ಯಮಂತ್ರಿʼ ಬ್ಯಾನರ್ – ರಾಜಕೀಯದಲ್ಲಿ ಸಂಚಲನ

    ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿರುವ ಹೊತ್ತಿನಲ್ಲಿ ಮಹತ್ವದ ವಿಚಾರಗಳು ಬೆಳಕಿಗೆ ಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭೇಟಿ ನೀಡುವ ಹೊತ್ತಿನಲ್ಲೇ ಕುಂದಾನಗರಿ ಬೆಳಗಾವಿಯಲ್ಲಿ (Belagavi) `ವಿಷ್ಯದ ಮುಖ್ಯಮಂತ್ರಿ’ ಬ್ಯಾನರ್ ಭಾರೀ ಕುತೂಹಲ ಮೂಡಿಸಿದೆ.

    ಭಾನುವಾರ ಬೆಳಗಾವಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಆದಿಶಕ್ತಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಹೊತ್ತಿನಲ್ಲೇ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಭಾವಚಿತ್ರ ಇರೋ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: Mysuru Dasara Photo Gallery: ಮೈಸೂರಲ್ಲಿ ಪಂಜಿನ ಕಮಾಯತ್‌ ಕಮಾಲ್..‌ ಬೆಳಕಿನ ಝಲಕ್‌

    ಈ ಬ್ಯಾನರ್‌ನಲ್ಲಿ ಜಾರಕಿಹೊಳಿ ಭಾವಚಿತ್ರದ ಕೆಳಗೆ ʻಭವಿಷ್ಯದ ಮುಂದಿನ ಮುಖ್ಯಮಂತ್ರಿʼ ಎಂದು ಬರೆಯಲಾಗಿದೆ. ಜೊತೆಗೆ ಉಳಿದ ಸಹೋದರರು ಹಾಗೂ ಅವರ ಮಕ್ಕಳ ಭಾವಚಿತ್ರಗಳನ್ನು ಬ್ಯಾನರ್‌ನಲ್ಲಿ ಹಾಕಿಸಲಾಗಿದೆ. ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ, ಎಂಎಲ್‌ಸಿ ಲಖನ್ ಜಾರಕಿಹೊಳಿ, ಸತೀಶ್ ಪುತ್ರಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಅವರ ಭಾವಚಿತ್ರಗಳೂ ಇವೆ.

    ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಮುಖಂಡರಿಂದ ಬ್ಯಾನರ್ ಅಳವಡಿಕೆ ಮಾಡಿದ್ದು, ಬ್ಯಾನರ್‌ನಲ್ಲಿ ಕನ್ನಡ ರಾಜ್ಯೋತ್ಸವ, ದೀಪಾವಳಿ ಹಬ್ಬ ಹಾಗೂ ವಾಲ್ಮೀಕಿ ಜಯಂತಿ ಶುಭಾಶಯಗನ್ನು ಅಭಿಮಾನಿಗಳು ಕೋರಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಸಿದ್ದಿಕಿ ಹತ್ಯೆ ಹಿಂದೆ ಬಿಷ್ಣೋಯ್‌ ಗ್ಯಾಂಗ್‌ ಕೈವಾಡ – ಬೆಚ್ಚಿಬೀಳಿಸುವ ರಹಸ್ಯ ಬಯಲು

    ಕಳೆದ ಕೆಲ ದಿನಗಳಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಭಾರೀ ಚರ್ಚೆಯಲ್ಲಿದೆ. ಬಿಜೆಪಿ ನಾಯಕರೂ ಸಹ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇತ್ತ ಸತೀಶ್‌ ಜಾರಕಿಹೊಳಿ, ಡಿ.ಕೆ ಶಿವಕುಮಾರ್‌ ಅಥವಾ ಹೆಚ್‌.ಸಿ ಮಹದೇವಪ್ಪ ಮೂವರಲ್ಲಿ ಒಬ್ಬರಿಗೆ ಚಾನ್ಸ್‌ ಸಿಗಬಹುದು ಎಂಬ ವದಂತಿಗಳೂ ಹರಿದಾಡುತ್ತಿವೆ. ಈ ನಡುವೆ ಸತೀಶ್‌ ಜಾರಕಿಹೊಳಿ ಅವರ ನಡೆ ದಿನದಿಂದ ದಿನಕ್ಕೆ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ. ಇದನ್ನೂ ಓದಿ: ಸಂಜು, ಸೂರ್ಯ ಬ್ಯಾಟಿಂಗ್‌ ಅಬ್ಬರ – ಬಾಂಗ್ಲಾ ವಿರುದ್ಧ ಭಾರತಕ್ಕೆ 133 ರನ್‌ ಭರ್ಜರಿ ಜಯ; 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ 

  • ಮುಡಾ ಸಂಕಷ್ಟದ ಹೊತ್ತಲ್ಲೇ ಆದಿಶಕ್ತಿ ಮೊರೆ ಹೋದ ಸಿಎಂ – ಇಂದು ಬೆಳಗಾವಿಗೆ ಭೇಟಿ

    ಮುಡಾ ಸಂಕಷ್ಟದ ಹೊತ್ತಲ್ಲೇ ಆದಿಶಕ್ತಿ ಮೊರೆ ಹೋದ ಸಿಎಂ – ಇಂದು ಬೆಳಗಾವಿಗೆ ಭೇಟಿ

    ಬೆಳಗಾವಿ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಉತ್ತರ ಕರ್ನಾಟಕದ ಆದಿಶಕ್ತಿ ಸವದತ್ತಿ ಯಲ್ಲಮ್ಮನ (Saundatti Yellamma Temple) ದರ್ಶನ ಪಡೆಯಲಿದ್ದಾರೆ.

    ಮುಡಾ ಸಂಕಷ್ಟದ ಬೆನ್ನಲ್ಲೇ ಸಂಕಷ್ಟದಿಂದ ಪಾರಾಗಲು ಆದಿಶಕ್ತಿಯ ಮೊರೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

    ಮಧ್ಯಾಹ್ನ 1:30ಕ್ಕೆ ಸವದತ್ತಿಗೆ ಆಗಮಿಸಲಿದ್ದಾರೆ. ಮೈಸೂರಿನಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದು, ಬಳಿಕ ರಸ್ತೆ ಮಾರ್ಗವಾಗಿ ಸವದತ್ತಿಗೆ ಬರಲಿದ್ದಾರೆ.

    ಸಿಎಂ ರೇಸನಲ್ಲಿ ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ ಬಂದ ಹಿನ್ನೆಲೆ ಸಿದ್ದರಾಮಯ್ಯರ ಬೆಳಗಾವಿ ಜಿಲ್ಲೆ ಪ್ರವಾಸ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

  • ಇವತ್ತಿಲ್ಲಾ ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು: ಜಗದೀಶ್ ಶೆಟ್ಟರ್

    ಇವತ್ತಿಲ್ಲಾ ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು: ಜಗದೀಶ್ ಶೆಟ್ಟರ್

    ಬೆಳಗಾವಿ: ರಾಜಕೀಯವಾಗಿ ನಾಲ್ಕು ದಿನ ವಿಳಂಬ ಆಗಬಹುದು. ಇವತ್ತಿಲ್ಲಾ ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಹೊಸ ಸಿಎಂ ಯಾರು ಅನ್ನೋದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ ಎಂದು ಸಂಸದ ಜಗದೀಶ್ ಶೆಟ್ಟರ್ (jagadish Shettar) ಹೇಳಿಕೆ ನೀಡಿದ್ದಾರೆ.

    ಬೆಳಗಾವಿಯ (Belagavi) ತಮ್ಮ ನೂತನ ಕಚೇರಿಯಲ್ಲಿ ಪೂಜೆ ನೆರವೇರಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಸರ್ಕಾರ ಬೀಳಿಸಲು ಬಿಜೆಪಿ ಯಾವುದೇ ರೀತಿಯ ಆಪರೇಷನ್ ಕಮಲ ಮಾಡುತ್ತಿಲ್ಲ. ಅವರ ಸ್ವಯಂಕೃತ ಅಪರಾಧದಿಂದ ಸರ್ಕಾರ ಬಿದ್ದು ಹೋಗಲಿದೆ. ಈಗಾಗಲೇ 8 ಜನ ಸಿಎಂ ಆಗಲೂ ತಯಾರಿದ್ದಾರೆ. ಅವರಲ್ಲಿ ಆಂತರಿಕ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಸಿಎಂ, ಡಿ.ಕೆ.ಶಿವಕುಮಾರ್ ಡಿಸಿಎಂ ಆದ ದಿನದಿಂದಲೇ ಒಳ ಜಗಳ ಇದೆ. ಆ ಒಳಜಗಳದಿಂದಲೇ ಈ ಸರ್ಕಾರ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಉತ್ತರ ಪ್ರದೇಶ| ಮಗಳನ್ನು ಹಗ್ಗದಲ್ಲಿ ತಲೆಕೆಳಗಾಗಿ ನೇತುಹಾಕಿ ಮನಬಂದಂತೆ ಥಳಿಸಿದ ತಂದೆ

    ಚಳಿಗಾಲದ ಅಧಿವೇಶನಕ್ಕೆ ಹೊಸ ಸಿಎಂ ಬರ್ತಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯಾಧ್ಯಕ್ಷರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಅವರಿಗೆ ಬಿಟ್ಟ ವಿಚಾರ. ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ, ಮುಡಾ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ. ತಪ್ಪು ಮಾಡಿರೋದು ಗೊತ್ತಿದೆ. ಲೋಕಾಯುಕ್ತ ತನಿಖೆ ಆಗ್ತಿದೆ. ಇಷ್ಟಾದ್ರು ಸಿಎಂ ಆಗಿ ಮುಂದುವರೆದಿರೋ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಇದು ಬಂಡತನದ ಪರಮಾವಧಿ ಎಂದು ಕಿಡಿಕಾರಿದರು. ಇದನ್ನೂ ಓದಿ: ದಸರಾ ಸಂಭ್ರಮದ ನಡುವೆ ವರುಣ ಎಂಟ್ರಿ – ಮಳೆಯ ನಡುವೆಯೂ ಜನರ ಸಂಭ್ರಮ

    ಮುಡಾ ಹಗರಣದಲ್ಲಿ (MUDA Scam) ರಾಜೀನಾಮೆ ಕೊಡುವಂತೆ ಹೇಳಿದರೆ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ. ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ರಾಜೀನಾಮೆ ವಿಚಾರ ಚರ್ಚೆ ನಡೆಯುತ್ತಿದೆ. ಒಂದೊಂದೇ ವಿಷಯಗಳನ್ನ ತೆಗೆದುಕೊಂಡು ಬರುತ್ತಿದ್ದಾರೆ. ಜಾತಿಗಣತಿಯ ವರದಿ ಕ್ಯಾಬಿನೆಟ್‌ನಲ್ಲಿ ಸಲ್ಲಿಸುತ್ತೇವೆ ಎಂದರು. ಈಗ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಹೋರಾಟದ ಹಿನ್ನೆಲೆ ಇರುವ ಕೇಸ್ ನಾವು ವಾಪಸ್ ಪಡೆದಿದ್ದೇವೆ. ರೈತರ ಮಹದಾಯಿ ಹೋರಾಟ ಕೇಸ್ ಯಾಕೆ ವಾಪಸ್ ತೆಗೆದುಕೊಳ್ಳಲಿಲ್ಲ. ಮಹದಾಯಿ ವಿಚಾರದಲ್ಲಿ ಯಾಕೆ ವಿಳಂಬ ಆಗುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಡಿಕೇರಿ ದಸರಾಕ್ಕೆ ಕ್ಷಣಗಣನೆ – ದಶಮಂಟಪಗಳ ಪ್ರದರ್ಶನದ ವೀಕ್ಷಣೆಗೆ ದೂರದ ಊರುಗಳಿಂದ ಜನರು

  • ಬರೋಬ್ಬರಿ 1.51 ಲಕ್ಷ ರೂ.ಗೆ ಮೂರು ತಿಂಗಳ ಕರು ಮಾರಾಟ

    ಬರೋಬ್ಬರಿ 1.51 ಲಕ್ಷ ರೂ.ಗೆ ಮೂರು ತಿಂಗಳ ಕರು ಮಾರಾಟ

    ಬೆಳಗಾವಿ: ಹಲವಾರು ದೇಶಿ ತಳಿಗಳು ನಶಿಸುತ್ತಿರುವ ಸಂದರ್ಭದಲ್ಲಿ 95 ದಿನ ತುಂಬಿದ ಕಿಲಾರಿ ಜಾತಿಯ ಕರು (Kilari Calf) ಬರೋಬ್ಬರಿ 1.51 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.

    ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ್ ಗ್ರಾಮದ ರೈತ ಅಶೋಕ ನಿಂಗಪ್ಪಾ ಜಂಬಗಿ ಎಂಬವರ ಕರುವನ್ನು ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ರೈತ ಕರಿಯಪ್ಪ ಭರ್ಮಪ್ಪ ಲಾಳಿ ಎಂಬುವರು ಖರೀದಿಸಿ ಎಲ್ಲರಿಗೂ ಬಣ್ಣವನ್ನು ಹಚ್ಚಿ ಖುಷಿಪಟ್ಟಿದ್ದಾರೆ.

    ಒಂದು ವರ್ಷದ ಕರುವಾಗಿದ್ದರೆ ಸರಿಸುಮಾರು ಐದಾರು ಲಕ್ಷ ರೂಪಾಯಿ ಬೆಲೆಬಾಳುತ್ತಿತ್ತು. ಸದ್ಯಕ್ಕೆ ಕೃಷ್ಣಾ ಅವರ ಕುಟುಂಬದಲ್ಲಿ ಜಾನುವಾರಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅದರ ಪೋಷಣೆ ಅಷ್ಟೊಂದು ಸುಲಭವಲ್ಲದ ಕಾರಣ ಕರುವನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರೇರಿತ ಕೇಸ್ ವಾಪಸ್ ಪಡೆದಿದ್ದೇವೆ: ಪ್ರಿಯಾಂಕ್ ಖರ್ಗೆ ಸಮರ್ಥನೆ

    ಕರುವಿನ ವಿಶೇಷ ಏನು ಅಂದರೆ ಇದರ ತಾಯಿ ತಿಕ್ಕುಂಡಿ ಮನೆತನದ (ವಂಶ) ಆಕಳು. ಕರುವಿನ ಮುಖ ತುಂಬಾ ಉದ್ದವಾಗಿದೆ. ಕೊಂಬುಗಳು ಅತಿ ಸಣ್ಣವಾಗಿ ಬರುತ್ತದೆ. ಗಂಗಿ ತೊಗಲು ಇಲ್ಲ. ಬೀಜದ ಹೋರಿಗೆ ಅತಿ ಉತ್ತಮವಾದ ತಳಿಯಾಗಿದ್ದರಿಂದ ನಾವು ಖರೀದಿ ಮಾಡಿದ್ದೇವೆ. ನಮ್ಮ ನೆಲದ ಗೋವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿ ಮನೆಯಲ್ಲೂ ಕೂಡ ದೇಸಿ ಹಸುಗಳನ್ನು ಸಾಕುವಂತೆ ರೈತರು ಮನವಿ ಮಾಡಿದ್ದಾರೆ.

     

  • ರೇಣುಕಾಸ್ವಾಮಿ ಕೊಲೆ ಪ್ರಕರಣ – A14 ಆರೋಪಿ ಪ್ರದೋಶ್ ಬೆಳಗಾವಿಯಿಂದ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ರೇಣುಕಾಸ್ವಾಮಿ ಕೊಲೆ ಪ್ರಕರಣ – A14 ಆರೋಪಿ ಪ್ರದೋಶ್ ಬೆಳಗಾವಿಯಿಂದ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ಬೆಳಗಾವಿ: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) 14ನೇ ಆರೋಪಿ ಪ್ರದೋಶ್‌ನನ್ನು ಪೊಲೀಸರು ಬೆಳಗಾವಿ ಹಿಂಡಲಗಾ ಜೈಲಿನಿಂದ (Hindalaga Jail) ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

    ಹೈಕೋರ್ಟ್ ಆದೇಶ ಹಿನ್ನೆಲೆ ಗುರುವಾರ ಬಿಗಿ ಭದ್ರತೆಯಲ್ಲಿ ಪ್ರದೋಶ್‌ನನ್ನು ಪೊಲೀಸರು ಬೆಂಗಳೂರು ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಆಗಸ್ಟ್ 28ರಂದು ಬೆಳಗಾವಿ ಹಿಂಡಲಗಾ ಜೈಲಿಗೆ ಪೊಲೀಸರು ಆರೋಪಿಯನ್ನು ಕರೆತಂದಿದ್ದರು. 44 ದಿನಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರಕ್ಕೆ (Parappana Agrahara) ಪ್ರದೋಶ್‌ನನ್ನು ರವಾನಿಸಲಾಗಿದೆ. ಇದನ್ನೂ ಓದಿ: ಮಾನಸಿಕ ಅಸ್ವಸ್ಥೆಯ ಹತ್ಯೆಗೈದು ಅತ್ಯಾಚಾರ – ಸೈಕೋ ಕಿಲ್ಲರ್ ಅರೆಸ್ಟ್

    ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜ್ಯಾತಿಥ್ಯ ವಿಚಾರವಾಗಿ ದರ್ಶನ್ ಸೇರಿ ಹಲವರನ್ನು ರಾಜ್ಯದ ವಿವಿಧ ಜೈಲಿಗೆ ಪೊಲೀಸರು ಶಿಫ್ಟ್ ಮಾಡಿದ್ದರು. ಬೆಳಗಾವಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗುವ ವೇಳೆ ಪ್ರದೋಶ್ ಪೊಲೀಸ್ ವಾಹನದಲ್ಲಿ ಕುಳಿತು ನಗೆ ಬೀರಿದ್ದಾನೆ. ಇದನ್ನೂ ಓದಿ: ರತನ್‌ ಟಾಟಾ ಅಂತಿಮ ದರ್ಶನ ಪಡೆದ ಕ್ರಿಕೆಟ್‌ ದೇವರು

  • ಬೆಳಗಾವಿಯಲ್ಲಿ ಗರ್ಭಿಣಿ ಸಾವು – ವೈದ್ಯರ ನಿರ್ಲಕ್ಷ್ಯ ಎಂದು ಕುಟುಂಬಸ್ಥರ ಆರೋಪ

    ಬೆಳಗಾವಿಯಲ್ಲಿ ಗರ್ಭಿಣಿ ಸಾವು – ವೈದ್ಯರ ನಿರ್ಲಕ್ಷ್ಯ ಎಂದು ಕುಟುಂಬಸ್ಥರ ಆರೋಪ

    ಬೆಳಗಾವಿ: ದುಡ್ಡು ಕಟ್ಟಿಲ್ಲ ಎಂದು ಚಿಕಿತ್ಸೆ ನೀಡದ್ದಕ್ಕೆ ಆರು ತಿಂಗಳ ಗರ್ಭಿಣಿ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಜಿಲ್ಲೆಯ ಕಂಗ್ರಾಳ ಗಲ್ಲಿಯ ನಿವಾಸಿ ಆರತಿ ಅನಿಲ್ ಚವ್ಹಾಣ (30) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಫೆಬ್ರವರಿಯಲ್ಲಿ ಕಂಪ್ಲಿ ಕ್ಷೇತ್ರಕ್ಕೆ 10 ಸಾವಿರ ಮನೆ ವಿತರಣೆ: ಜಮೀರ್

    ಮಂಗಳವಾರ ಬೆಳಿಗ್ಗೆ ಹೊಟ್ಟೆನೋವು ಎಂದು ಜಿಲ್ಲೆಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರು ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಬಂದು ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

    ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ 30 ಸಾವಿರ ರೂ. ಹಣ ಕಟ್ಟುವಂತೆ ವೈದ್ಯರು ತಿಳಿಸಿದ್ದು, ಸದ್ಯಕ್ಕೆ 10 ಸಾವಿರ ರೂ. ಹಣವನ್ನು ಕಟ್ಟಿ, ಉಳಿದ ಹಣವನ್ನು ಆಮೇಲೆ ಕಟ್ಟುವುದಾಗಿ ಕುಟುಂಬಸ್ಥರು ಹೇಳಿದ್ದರು. ಬಾಕಿ ಹಣ ಕಟ್ಟದೇ ಇರುವ ಕಾರಣ ಗರ್ಭಿಣಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಆದ್ದರಿಂದ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಠಾಣೆಯಲ್ಲಿ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದ್ದು, ಸದ್ಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ (KhadeBazar Police Station) ದೂರು ದಾಖಲಾಗಿದೆ.ಇದನ್ನೂ ಓದಿ: Valmiki Scam | ಬಳ್ಳಾರಿ ಚುನಾವಣೆಗೆ ಹಣ ಬಳಕೆ – ಹಗರಣದ ಮಾಸ್ಟರ್‌ಮೈಂಡ್‌ ನಾಗೇಂದ್ರ