Tag: belagavi

  • ರಾಜ್ಯದಲ್ಲಿ ನಿಲ್ಲದ ವಕ್ಫ್ ಅವಾಂತರ – ಹಿಂದೂ ಅಷ್ಟೇ ಅಲ್ಲ, ಮುಸ್ಲಿಮರ ಪಹಣಿಯಲ್ಲೂ ವಕ್ಫ್!

    ರಾಜ್ಯದಲ್ಲಿ ನಿಲ್ಲದ ವಕ್ಫ್ ಅವಾಂತರ – ಹಿಂದೂ ಅಷ್ಟೇ ಅಲ್ಲ, ಮುಸ್ಲಿಮರ ಪಹಣಿಯಲ್ಲೂ ವಕ್ಫ್!

    ಬೆಂಗಳೂರು: ಸದ್ಯ ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ (Waqf Board) ಹೆಸರು ದಾಖಲಾಗಿರುವುದೇ ಸುದ್ದಿ. ಇಲ್ಲಿಯವರೆಗೂ ಇದು ಕೇವಲ ಹಿಂದೂಗಳ ಜಮೀನಿನ ಸಮಸ್ಯೆ ಅಂದುಕೊಳ್ಳಲಾಗಿತ್ತು. ಆದರೆ ಈ ವಕ್ಫ್ ಮುಸ್ಲಿಂರ ಪಹಣಿಯಲ್ಲೂ ಸದ್ದು ಮಾಡುತ್ತಿದೆ.

    ಧಾರವಾಡ (Dharwad) ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಎನ್ನದೇ ಸಣ್ಣಪುಟ್ಟ ರೈತರ ಜಮೀನುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನೂ ಹಾವೇರಿ (Haveri) ಜಿಲ್ಲೆಯ ಕಡಕೋಳ ಗ್ರಾಮದ ವಕ್ಫ್ ಗಲಾಟೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕುಂದಾನಗರಿಗೂ ವಕ್ಫ್ ಕಾಲಿಟ್ಟಿದೆ.

    ಧಾರವಾಡ ಜಿಲ್ಲೆಯ ನವಲಗುಂದ (Navalagund) ಪಟ್ಟಣದ ಮುಸ್ಲಿಂ ಸಮುದಾಯದ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದಕ್ಕೂ ಮೊದಲು ಉಪ್ಪಿನಬೆಟಗೇರಿ (UppinBetageri) ಹಾಗೂ ಗರಗ (Garaga) ಗ್ರಾಮಗಳಲ್ಲಿನ 20ಕ್ಕೂ ಹೆಚ್ಚು ರೈತರ ಜಮೀನುಗಳಲ್ಲಿನ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಾಗಿರುವುದು ಬಯಲಿಗೆ ಬಂದಿತ್ತು. ಈ ಸಂಬಂಧ ರೈತರು ಪ್ರತಿಭಟನೆ ಮಾಡಿದ ಪರಿಣಾಮ ನ.5ರಂದು ಜಿಲ್ಲೆಯ ತಹಶೀಲ್ದಾರ, ವಕ್ಫ್ ಅಧಿಕಾರಿಗಳು ಮತ್ತು ರೈತರು ಒಟ್ಟಾಗಿ ಸಭೆ ನಡೆಸಲು ಮುಂದಾಗಿದ್ದಾರೆ.ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನ ಹಳೆಯ ಕ್ರಸ್ಟ್‌ಗೇಟ್‌ ಮಾರಾಟ ಮಾಡಲು ಹುನ್ನಾರ

    ಇನ್ನೂ ನವಲಗುಂದ ತಾಲೂಕಿನ ಮುಸ್ಲಿಂ ಸಮುದಾಯದ ಹುನಗುಂದ ಎಂಬ ಕುಟುಂಬವು 1961ರಲ್ಲಿಯೇ ಖರೀದಿ ಮಾಡಿದ ಜಮೀನಿನ ವಿಚಾರವಾಗಿ ಸಹೋದರರ ಮಧ್ಯೆ ಇತ್ತೀಚೆಗೆ ವ್ಯಾಜ್ಯ ಉಂಟಾಗಿತ್ತು. ಅದರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಮಾಲೀಕರಿಗೆ ತಿಳಿದು ಬಂದಿದೆ. ಇದರಿಂದಾಗಿ ಆಘಾತಗೊಂಡಿರುವ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಲು ನಿರ್ಧರಿಸಿದ್ದಾರೆ.

    ಹಾವೇರಿ ಜಿಲ್ಲೆ ಸವಣೂರು ತಾಲೂಕು ಕಡಕೋಳ ಗ್ರಾಮ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಬುಧವಾರ ರಾತ್ರಿ ಕಡಕೋಳ ಗ್ರಾಮದಲ್ಲಾದ ಗಲಾಟೆಗೆ ಗ್ರಾಮಸ್ಥರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಕಡಕೋಳದಲ್ಲಿರುವ ಆಂಜನೇಯ ದೇವಸ್ಥಾನವೂ ಸಹ ಮಸೀದಿ ಜಾಗದಲ್ಲಿದೆ ಎಂದು ಮುಸಲ್ಮಾನ ಮುಖಂಡರು ಗ್ರಾಮಸ್ಥರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಗಲಾಟೆಗೆ ಆಗಿದ್ದು, ಗ್ರಾಮಸ್ಥರು ರೊಚ್ಚಿಗೆದ್ದು ಮುಖಂಡರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.

    ಇನ್ನು ಮಸೀದಿಗೂ ಮೊದಲು ಅಲ್ಲಿ ದೇವಸ್ಥಾನ ಇತ್ತು. ಅದಕ್ಕೆ ಪುರಾವೆಯಾಗಿ ಚತುರ್ಮುಖ ಬ್ರಹ್ಮನ ವಿಗ್ರಹ ಸಿಕ್ಕಿದೆ ಎಂದು ಮುಖಂಡರು ಪ್ರತಿಪಾದಿಸಿದರು. ಇತ್ತ ಶಾಸಕ ರುದ್ರಪ್ಪ ಲಮಾಣಿ ಕಡಕೋಳಕ್ಕೆ ಭೇಟಿ ನೀಡಿದ್ದು, ಪೊಲೀಸರು 32 ಜನರನ್ನು ಬಂಧಿಸುವಾಗ ಎಲ್ಲಿ ಹೋಗಿದ್ರಿ? ಎಂದು ಶಾಸಕನನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

    ಬೆಳಗಾವಿ ಜಿಲ್ಲೆಯ ರೈತರಿಗೂ ವಕ್ಫ್ ಬೋರ್ಡ್ ಶಾಕ್ ತಗುಲಿದೆ. 30 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ವಕ್ಫ್ ಬೋರ್ಡ್ ಹೊಡೆತಕ್ಕೆ ದಂಗಾದ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ 10 ರೈತ ಕುಟುಂಬಗಳು ಹಾಗೂ ಮೂಡಲಗಿ ತಾಲೂಕಿನ 20 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ.

    ಒಟ್ಟಿನಲ್ಲಿ ವಕ್ಫ್ ವಿವಾದ ದಿನೇ ದಿನೇ ರಾಜ್ಯದ ಜಿಲ್ಲೆಗಳಿಗೆ ವ್ಯಾಪಿಸುತ್ತಿದ್ದು, ಇನ್ನಾದರೂ ಸರ್ಕಾರ ಗಮನಹರಿಸಿ ರೈತರ ಸಮಸ್ಯೆಗೆ ಪರಿಹಾರ ಸೂಚಿಸಬೇಕಿದೆ.ಇದನ್ನೂ ಓದಿ: ದೀಪಾವಳಿ ಬಳಿಕ ಜೋರಾಗಲಿದೆ ಶಿಗ್ಗಾಂವಿ ಉಪಸಂಗ್ರಾಮ – ನ.5ಕ್ಕೆ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ

  • ಬೆಳಗಾವಿಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ – 30 ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು!

    ಬೆಳಗಾವಿಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ – 30 ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು!

    ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿರುವ ಕುಂದಾನಗರಿಯ ರೈತರಿಗೆ ವಕ್ಫ್ ಬೋರ್ಡ್ ಶಾಕ್ ಕೊಟ್ಟಿದ್ದು, 30 ರೈತರ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ.

    ವಕ್ಫ್ ಬೋರ್ಡ್ ಹೊಡೆತಕ್ಕೆ ದಂಗಾದ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ 10 ರೈತ ಕುಟುಂಬಗಳು ಹಾಗೂ ಮೂಡಲಗಿ ತಾಲೂಕಿನ 20 ರೈತರ ಪಹಣಿ ಪತ್ರದಲ್ಲಿ ವಕ್ಫ್ ಎಂದು ಉಲ್ಲೇಖಿಸಲಾಗಿದೆ.ಇದನ್ನೂ ಓದಿ: 69ನೇ ಕನ್ನಡ ರಾಜ್ಯೋತ್ಸವ – ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿದ ಸಿಎಂ

    ರಾಕೇಶ ಕೋಳಿಗೆ ಸೇರಿದ 1 ಎಕರೆ 5 ಗುಂಟೆ ಜಮೀನು, ಮಹಾವೀರ ಬಡಿಗೇರ ಕುಟುಂಬಕ್ಕೆ ಸೇರಿದ 2 ಎಕರೆ, ಸುನೀಲ ಮುಜಾವರಗೆ ಸೇರಿದ 1 ಎಕರೆ 31 ಗುಂಟೆ ಜಮೀನು, ಸುಮಿತ್ರಾ ಮುಜಾವರ್‌ಗೆ ಸೇರಿದ 1.36 ಎಕರೆ, ಸುಭಾಷ ಭೀಮರಾಯಿಗೆ ಸೇರಿದ 5 ಗುಂಟೆ, ಬಾಬು ಮಾಲಗಾರಗೆ 30 ಗುಂಟೆ,ಬಾಬು ಮುಜಾವರ್‌ಗೆ ಸೇರಿದ 2 ಎಕರೆ, ದ್ವಾರಪಾಲ್ ಗೌರಾಜ್ 2.2 ಎಕರೆ ಸಾತಪ್ಪ ಮಾಳಿಗೆ ಸೇರಿದ 2.15 ಎಕರೆ, ರಾಜು ಮುಜಾವರಗೆ ಸೇರಿದ 2.10 ಎಕರೆ ಜಮೀನಿಗೆ ವಕ್ಫ್ ಬೋರ್ಡ್ ಕನ್ನಹಾಕಿದೆ.

    ಹಲವು ವರ್ಷಗಳಿಂದ ಇದೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ರೈತರು ಜೀವನ ಸಾಗಿಸುತ್ತಿದ್ದರು. ಆದರೆ ವಕ್ಫ್ ಬೋರ್ಡ್ ವಕ್ರದೃಷ್ಠಿಗೆ ಬೆಳಗಾವಿ ಜಿಲ್ಲೆಯ ರೈತರು ದಂಗಾಗಿದ್ದಾರೆ. ಹೀಗಾಗಿ ಆದಷ್ಟು ಬೇಗ ವಕ್ಫ್ ಎಂದು ನಮೂಸಿದಲಾಗಿರುವ ಹೆಸರನ್ನು ವಾಪಸ್ ಪಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: 130 ಇದ್ದ ಬಿಯರ್‌ ಬಾಟಲ್‌ ಬೆಲೆ 270 ರೂ. ಆಗಿದೆ – ಹೆಚ್‌. ವಿಶ್ವನಾಥ್‌

  • ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: 2200ಕ್ಕೂ ಅಧಿಕ ಪೊಲೀಸರ ನಿಯೋಜನೆ!

    ಕುಂದಾನಗರಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: 2200ಕ್ಕೂ ಅಧಿಕ ಪೊಲೀಸರ ನಿಯೋಜನೆ!

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಅದ್ಧೂರಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಜ್ಯೋತ್ಸವ ಮೆರವಣಿಗೆ ಭದ್ರತೆಗಾಗಿ 2,200ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ್ (DCP Rohan Jagadish) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವದ ಭದ್ರತೆಗಾಗಿ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ನಿಗಾವಹಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳಲಾಗಿದೆ ಎಂದರು‌.ಇದನ್ನೂ ಓದಿ: ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿನ 800 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹೊರ ಜಿಲ್ಲೆಯಿಂದ ಮೂವರು ಎಸಿಪಿ ದರ್ಜೆಯ ಅಧಿಕಾರಿಗಳು 8 ಎಸಿಪಿಗಳು, 25 ಸಿಪಿಐಗಳು, 55 ಪಿಎಸ್ಐಗಳನ್ನು ನಿಯೋಜನೆ ಮಾಡಲಾಗಿದೆ.

    ಅಲ್ಲದೇ 130 ಎಎಸೈಗಳು, 1,300 ಪೊಲೀಸ್ ಕಾನ್‌ಸ್ಟೇಬಲ್‌ಗಳು ಭದ್ರತೆಗೆ ನಿಯೋಜನೆ ಮಾಡಿದ್ದು, ಜನರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಶಾಂತಿಯುತ ಕರ್ನಾಟಕ ರಾಜ್ಯೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬೆನ್ನುನೋವಿನಿಂದ ದಿನವಿಡೀ ವಿಶ್ರಾಂತಿ – ಇಂದು ದರ್ಶನ್ ಆಸ್ಪತ್ರೆಗೆ ದಾಖಲು?

  • ಮಹಾರಾಷ್ಟ್ರದಲ್ಲಿ ಬಿಜೆಪಿಗೆ 160-170 ಸೀಟ್‌ ಖಚಿತ, ಬಹುಮತ ನಿಶ್ಚಿತ – ರಮೇಶ್ ಜಾರಕಿಹೊಳಿ

    ಮಹಾರಾಷ್ಟ್ರದಲ್ಲಿ ಬಿಜೆಪಿಗೆ 160-170 ಸೀಟ್‌ ಖಚಿತ, ಬಹುಮತ ನಿಶ್ಚಿತ – ರಮೇಶ್ ಜಾರಕಿಹೊಳಿ

    ಬೆಳಗಾವಿ: ಮಹಾರಾಷ್ಟ್ರ (Maharashtra) ರಾಜ್ಯದಲ್ಲಿ ದೇವೇಂದ್ರ ಫಡ್ನವೀಸ್ ಅವರ ತ್ಯಾಗದಿಂದ ಬಿಜೆಪಿ (BJP) ಮತ್ತಷ್ಟು ಬಲಿಷ್ಠವಾಗಿದೆ. ಹಾಗಾಗಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 160-170 ಸೀಟ್ ಗೆದ್ದು ಬಿಜೆಪಿ ಬಹುಮತ ಪಡೆಯಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ವಿಶ್ವಾಸ ವ್ಯಕ್ತಪಡಿಸಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರಕ್ಕೆ ಚುನಾವಣಾ ಪ್ರಚಾರಕ್ಕೆ ಹೋಗುವ ವಿಚಾರಕ್ಕೆ ಜತ್ತ, ಅಕ್ಕಲಕೋಟ, ಸೊಲ್ಲಾಪುರ ಸೇರಿ ಕನ್ನಡ ಪ್ರದೇಶಗಳಲ್ಲಿ ಜವಾಬ್ದಾರಿ ಕೊಟ್ಟಿದ್ದರು. ಆದರೆ ನನ್ನ ಹೆಸರು ನೇರವಾಗಿ ಹಾಕಬೇಡಿ ಎಂದು ಹೇಳಿದ್ದೇನೆ. ಅಣ್ಣಾಸಾಹೇಬ ಜೊಲ್ಲೆ ಮತ್ತೆ ನಾವು ಕೆಲಸ ಮಾಡುತ್ತೇವೆ ಎಂದಿದ್ದೇನೆ ಎಂದರು. ಇದನ್ನೂ ಓದಿ: ಜಾನುವಾರು ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದ ಖದೀಮರ ಬಂಧನ

    ನಾನು ನೀರಾವರಿ ಮಂತ್ರಿ ಆಗಿದ್ದಾಗ ಈ ಭಾಗಕ್ಕೆ ನೀರು ಹರಿಸಲು ಪ್ರಯತ್ನಿಸಿದ್ದೇನೆ. ಜಯಂತರಾವ್ ಪಾಟೀಲ ಮತ್ತು ನಾನು ಸೇರಿಕೊಂಡು ಮಹತ್ವದ ಸಭೆ ಮಾಡಿದ್ದೆವು. ಆದರೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅದು ನೆನೆಗುದಿಗೆ ಬಿದ್ದಿದೆ. ಅಕ್ಕಲಕೋಟ, ಸೊಲ್ಲಾಪುರ ಜತ್ತ ಭಾಗಕ್ಕೆ ನಾವು ನೀರು ಕೊಡುವುದು, ಅವರು ನಮ್ಮ ಅಥಣಿಗೆ ಬೇಸಿಗೆ ಸಮಯದಲ್ಲಿ 4 ಟಿಎಂಸಿ ನೀರು ಕೊಡುವ ಬಗ್ಗೆ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಆದರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಮುಂದೆ ಮತ್ತೆ ನಾನೇ ನೀರಾವರಿ ಮಂತ್ರಿಯಾಗಿ ಇದನ್ನು ಸಾಕಾರಗೊಳಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿವಳ್ಳಿ ಸ್ಪಂದನ ಸಂಘದ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಕೇಸ್ ದಾಖಲು

  • ತಾಕತ್ತಿದ್ರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ – ಬೈರತಿ ಸುರೇಶ್‌ಗೆ ಶೋಭಾ ಕರಂದ್ಲಾಜೆ ಸವಾಲ್

    ತಾಕತ್ತಿದ್ರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ – ಬೈರತಿ ಸುರೇಶ್‌ಗೆ ಶೋಭಾ ಕರಂದ್ಲಾಜೆ ಸವಾಲ್

    ಬೆಳಗಾವಿ: ಬೈರತಿ ಸುರೇಶ್ (Byrathi Suresh) ಮುಡಾದ (MUDA) ಸಾವಿರಾರು ಫೈಲ್‌ಗಳನ್ನು ತಂದು ಸುಟ್ಟು ಹಾಕಿದ್ದಾರೆ. ತಾಕತ್ತಿದ್ರೆ ನನ್ನ ಅಕ್ರಮದ ದಾಖಲೆಗಳನ್ನು ಆದಷ್ಟು ಬೇಗ ಬಿಡುಗಡೆಗೊಳಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸವಾಲ್ ಹಾಕಿದ್ದಾರೆ.ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳುವಾಗ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ – 10 ಮಂದಿಗೆ ಗಾಯ

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾದ ಬಗ್ಗೆ ನಾನು ಧ್ವನಿ ಎತ್ತಿದೆ, ಧ್ವನಿ ಎತ್ತಿದ ತಕ್ಷಣ ನನ್ನ ಬಗ್ಗೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸರ್ಕಾರದ ಹಲರು ಆರೋಪ ಮಾಡಿದ್ದಾರೆ. ಶೋಭಾ ಕರಂದ್ಲಾಜೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡೋದು ಇಲ್ಲ. ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಪೊನ್ನಣ್ಣನಿಗೆ ನೇಮಕ ಮಾಡಲಿದೆ. ಪೊನ್ನಣ್ಣನಿಗೆ ವಿದ್ಯುತ್ ಇಲಾಖೆಗೆ ಏನು ಸಂಬಂಧವಿದೆ? ಎಂದು ಪ್ರಶ್ನಿಸಿದರು.

    ಫೆಕ್ ಫೈಲ್ ಕ್ರಿಯೆಟ್ ಮಾಡಲು ಪೊನ್ನಣ್ಣನಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಪೊನ್ನಣ್ಣ ಇರುವುದು ಸಿಎಂ ಕಾನೂನು ಸಲಹೆಗಾರನಾಗಿ ಅಷ್ಟೇ. ಅದರಲ್ಲಿ ಒಂದು ಭ್ರಷ್ಟಾಚಾರ ಮಾಡಲು ಹೊರಟಿದ್ದೀರಿ. ನಿಮ್ಮ ಬಳಿ ಇರುವ ದಾಖಲೆ ತಕ್ಷಣ ಹೊರಗೆ ಹಾಕಬೇಕು. ನಿಮ್ಮಗೆ ಈಗ ಸಂಕಷ್ಟ ಶುರುವಾಗಿದೆ. ಮೈಸೂರಿ ನಿಂದ ಫೈಲ್ ತಂದಿದ್ದು ಸತ್ಯ, ಸುಟ್ಟು ಹಾಕಿದ್ದು ಸತ್ಯ. ಮುಡಾ ಬಗ್ಗೆ ತನಿಖೆ ಆರಂಭವಾಗಿದೆ. ತನಿಖೆಗೆ ಕೇಂದ್ರ ಸಂಸ್ಥೆಗಳು ಒಳಹೊಕ್ಕಿವೆ. ಈ ಭಯದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಶ್ರೀ ಶ್ರೀ ರವಿಶಂಕರ್ ಗುರೂಜಿಗೆ ಫಿಜಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ

  • ನಾಳೆ ಒಳಗಡೆ ಬಾಕಿ ಹಣ ನೀಡಿ: ಸಕ್ಕರೆ ಕಾರ್ಖಾನೆಗಳಿಗೆ ಬಾಗಲಕೋಟೆ ರೈತರ ಗಡುವು

    ನಾಳೆ ಒಳಗಡೆ ಬಾಕಿ ಹಣ ನೀಡಿ: ಸಕ್ಕರೆ ಕಾರ್ಖಾನೆಗಳಿಗೆ ಬಾಗಲಕೋಟೆ ರೈತರ ಗಡುವು

    ಬಾಗಲಕೋಟೆ: ಅಕ್ಟೋಬರ್ 28ರ ಒಳಗಡೆ 2022ರ ಸಾಲಿನ ಹೆಚ್ಚುವರಿ 62 ರೂ. ಬಾಕಿ ಹಣವನ್ನು ನೀಡಬೇಕು ಎಂದು ರೈತರು ಬಾಗಲಕೋಟೆ (Bagalkote) ಸಕ್ಕರೆ ಕಾರ್ಖಾನೆಗಳಿಗೆ (Sugarcane Mill) ಗಡುವು ನೀಡಿದ್ದಾರೆ.

    ಮುಧೋಳ ನಗರದ (Mudhol) ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಕೆಲ ನಿರ್ಣಯ ಕೈಗೊಂಡ ರೈತರು (Farmers) 2022ರ ಸಾಲಿನ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ ನೀಡಬೇಕಿದ್ದ 62 ರೂ. ಹಣವನ್ನು ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ಪಾವತಿಸಿದ್ದಾರೆ. ಉಳಿದ ಕಾರ್ಖಾನೆಯವರು ಶೀಘ್ರವೇ ಬಾಕಿ ಹಣವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಧೋಳದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ

    ಒಂದು ವೇಳೆ ಬಾಕಿ ಹಣ ನೀಡದೇ ಇದ್ದರೆ ಅ.28 ರ ನಂತರ ಮುಂದಿನ ಹೋರಾಟದ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

    ಸಭೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿ ಮಾಡುವ ಕುರಿತು ಚರ್ಚೆ ನಡೆಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮ್ಮಾರ, ಹನಮಂತ ನಬಾಬ, ಸುರೇಶ ಚಿಂಚಲಿ, ನಾಗೇಶ ಗೊಲಶೇಟ್ಟಿ, ಸುಭಾಶ್ ಶಿರಬೂರ, ಮಹೇಶಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

     

  • ಮತ್ತೊಂದು ಅದ್ವಾನ – ಮೂರು ತಿಂಗಳಿನಲ್ಲಿ 41 ಶಿಶುಗಳ ಸಾವು!

    ಮತ್ತೊಂದು ಅದ್ವಾನ – ಮೂರು ತಿಂಗಳಿನಲ್ಲಿ 41 ಶಿಶುಗಳ ಸಾವು!

    ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ (BIMS Hospital) ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 41 ಶಿಶುಗಳು ಮರಣ ಹೊಂದಿರುವುದು ಬೆಳಕಿಗೆ ಬಂದಿದೆ. ಏರ್ ಕಂಪ್ರೆಸರ್ ಕೆಟ್ಟು ಹೋಗಿ ಸಾಕಷ್ಟು ಮಕ್ಕಳು ಮೃತಪಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ ಹಲವು ಕಾರಣಗಳಿಂದ ಶಿಶು ಮರಣವಾಗಿದೆ ಎಂದು ಅಂತಾ ವೈದ್ಯರು ಸಬೂಬು ಹೇಳುತ್ತಿದ್ದಾರೆ.

    ಎರಡು ರಾಜ್ಯಗಳ ಗಡಿ ಹಂಚಿಕೊಂಡಿರುವ ಬೆಳಗಾವಿ (Belagavi) ಜಿಲ್ಲಾಸ್ಪತ್ರೆ ಬಿಮ್ಸ್ ಎಂದೇ ಕರೆಯಲ್ಪಡುವ ಈ ಆಸ್ಪತ್ರೆಯಲ್ಲಿ ಇದೀಗ ಮತ್ತೊಂದು ಅದ್ವಾನ ನಡೆದು ಹೋಗಿದೆ. ಮಹಾರಾಷ್ಟ್ರದ ಕೆಲ ತಾಲೂಕುಗಳಿಂದ ಹಾಗೂ ಗೋವಾದ ಕೆಲ ಭಾಗದಿಂದ ಸಾಕಷ್ಟು ರೋಗಿಗಳು ಈ ಬಿಮ್ಸ್ ಆಸ್ಪತ್ರೆಗೆ ಬರುತ್ತಾರೆ. ಅಪಘಾತ, ಹೆರಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಚಿಕಿತ್ಸೆಗೆ ಜನ ದಾಖಲಾಗುತ್ತಾರೆ.

    ನಿತ್ಯ ಸಾವಿರಾರು ರೋಗಿಗಳು ಬಂದು ಹೋಗುವ ಈ ಆಸ್ಪತ್ರೆಯಲ್ಲಿ ಕಂದಮ್ಮಗಳು ಸಾವನ್ನಪ್ಪುತ್ತಿರುವ ವಿಷಯ ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿದೆ. ಅಧಿಕಾರಿಗಳು ಹಾಗೂ ಕೆಲ ವೈದ್ಯರ ಬೇಜವಾಬ್ದಾರಿಯಿಂದ ಬದುಕಿ ಬಾಳಬೇಕಿದ್ದ ಕಂದಮ್ಮಗಳು ಈಗ ಉಸಿರು ಚೆಲ್ಲುತ್ತಿವೆ. ಇದನ್ನೂ ಓದಿ: ಬಸ್‌ ಸೀಟಿಗಾಗಿ ಚಪ್ಪಲಿಯಲ್ಲಿ ಬಡಿದಾಡಿದ ಮಹಿಳೆಯರು

     

    ಬಿಮ್ಸ್ ಆಸ್ಪತ್ರೆಯಲ್ಲಿ ನಿತ್ಯ ಸುಮಾರು ಇಪ್ಪತ್ತರಿಂದ ಮೂವತ್ತು ಹೆರಿಗೆಗಳು ತಿಂಗಳಿಗೆ 800 ಹೆರಿಗೆಗಳು ಇಲ್ಲಿ ಆಗುತ್ತಿವೆ. ಆದರೆ ಕಳೆದ 3 ತಿಂಗಳಿನಲ್ಲಿ 41 ಶಿಶುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಖುದ್ದು ಸಾವಿನ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿಯವರೇ ಒಪ್ಪಿಕೊಂಡಿದ್ದು ಹೀಗಾಗಿ ಜನರಿಗೆ ಸಾಕಷ್ಟು ಆತಂಕ ಹುಟ್ಟುವಂತೆ ಮಾಡಿದೆ.

    ಆಗಸ್ಟ್‌ನಲ್ಲಿ 12 ಮಕ್ಕಳು ಸೆಪ್ಟಂಬರ್‌ನಲ್ಲಿ 18 ಮತ್ತು ಅಕ್ಟೋಬರ್‌ನಲ್ಲಿ 11 ಶಿಶುಗಳು ಮೃತಪಟ್ಟಿವೆ. ಆಸ್ಪತ್ರೆಯಲ್ಲಿರುವ ಏರ್ ಕಂಪ್ರೆಸರ್ ಕೆಟ್ಟು ಹೋಗಿದ್ದರಿಂದ ಶಿಶುಗಳು ಸಾವನ್ನಪ್ಪುತ್ತಿವೆ. ಆಸ್ಪತ್ರೆಯಲ್ಲಿ ಎರಡು ಏರ್ ಕಂಪ್ರೆಸರ್ ಇದ್ದು ಎರಡರ ಪೈಕಿ ಒಂದು ಮೂರು ತಿಂಗಳ ಹಿಂದೆ ಕೆಟ್ಟು ಹೋಗಿದ್ದು ಅದನ್ನ ರಿಪೇರಿ ಕೂಡ ಮಾಡಿಲ್ಲ. ಇದರಿಂದ ಆಕ್ಸಿಜನ್ ಸರಿಯಾಗಿ ಸಿಗದೇ ಹೆಚ್ಚು ಕಂದಮ್ಮಗಳು ಸಾವಾಗುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ.

    ವೈದ್ಯರನ್ನು ನಂಬಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ದೇವರಾಗಬೇಕಿದ್ದ ಕೆಲವರ ನಿರ್ಲಕ್ಷ್ಯ ಹಲವು ಸಾವುಗಳಿಗೆ ಕಾರಣವಾಯ್ತಾ ಎಂಬ ಅನುಮಾನ ಇದ್ದು ಈ ಬಗ್ಗೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ.

     

  • ಬಸ್‌ ಸೀಟಿಗಾಗಿ ಚಪ್ಪಲಿಯಲ್ಲಿ ಬಡಿದಾಡಿದ ಮಹಿಳೆಯರು

    ಬಸ್‌ ಸೀಟಿಗಾಗಿ ಚಪ್ಪಲಿಯಲ್ಲಿ ಬಡಿದಾಡಿದ ಮಹಿಳೆಯರು

    ಬೆಳಗಾವಿ: ಸರ್ಕಾರಿ ಬಸ್ಸಿನಲ್ಲಿ (Government Bus) ಸೀಟ್‌ ವಿಚಾರಕ್ಕೆ ಮಹಿಳೆಯರು (Women) ಚಪ್ಪಲಿಯಲ್ಲಿ ಹೊಡೆದಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ಪಡೆಯಲು ಸವದತ್ತಿಗೆ ಹೋಗುವ ಬಸ್ಸನ್ನು ಮಹಿಳೆಯರು ಹತ್ತಿದ್ದಾರೆ. ಈ ವೇಳೆ ಸೀಟ್ ನನ್ನದು ನನ್ನದು ಅಂತಾ ಮಹಿಳೆಯರ ಮಧ್ಯೆ ಜಗಳ ಆರಂಭವಾಗಿದೆ.

    ಮೊದಲಿಗೆ ಮಹಿಳೆಯರು ಪರಸ್ಪರ ಬೈದಾಡಿಕೊಂಡಿದ್ದಾರೆ. ನಂತರ ಕೈಕೈ ಮಿಲಾಯಿಸಿ ಚಪ್ಪಲಿಯಲ್ಲಿ ಹೊಡೆದಾಡಿದ್ದಾರೆ. ಈ ವೇಳೆ ವೇಳೆ ಅಡ್ಡ ಬಂದ ಬಾಲಕಿಗೂ ಚಪ್ಪಲಿಯಿಂದ ಮಹಿಳೆ ಹೊಡೆದಿದ್ದಾಳೆ.  ಇದನ್ನೂ ಓದಿ: ಶಿವಮೊಗ್ಗ| ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ದ ಕಾರು – ಚಾಲಕ‌ ಪೊಲೀಸರ ವಶಕ್ಕೆ

    ಮಹಿಳೆಯರ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

  • ಮಕ್ಕಳ ಕಳ್ಳರ ಮೇಲೆ ಅಥಣಿ ಪೊಲೀಸರಿಂದ ಫೈರಿಂಗ್- ತಾಯಿ ಮಡಿಲು ಸೇರಿದ ಮಕ್ಕಳು

    ಮಕ್ಕಳ ಕಳ್ಳರ ಮೇಲೆ ಅಥಣಿ ಪೊಲೀಸರಿಂದ ಫೈರಿಂಗ್- ತಾಯಿ ಮಡಿಲು ಸೇರಿದ ಮಕ್ಕಳು

    ಬೆಳಗಾವಿ: ಮಕ್ಕಳ ಕಳ್ಳರ (Child Theft) ಮೇಲೆ ಅಥಣಿ ಪೋಲಿಸರು (Athani Police) ಫೈರಿಂಗ್ (Firing) ಮಾಡಿ ಇಬ್ಬರು ಬಾಲಕರನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದಿದೆ.

    ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಹೊರವಲಯದ ಮಹಾರಾಷ್ಟ್ರ ಗಡಿಯಲ್ಲಿ (Maharashtra Border) ಮಕ್ಕಳ ಕಳ್ಳರನ್ನು ತಡೆಗಟ್ಟಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಓರ್ವ ಆರೋಪಿಯ ಎಡಗಾಲಿಗೆ ಗುಂಡೇಟು ಹೊಡೆದು ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದು ಗಾಯಾಳುವನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಗುರುವಾರ ಅಥಣಿ ಪಟ್ಟಣದ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟದ ಬಡಾವಣೆಯ ವಿಜಯ್ ದೇಸಾಯಿ ಎಂಬುವರ ಮನೆಗೆ ಹೊಕ್ಕು ಅವರ ಇಬ್ಬರು ಮಕ್ಕಳಾದ ಸ್ವಸ್ತಿ ವಿಜಯ್ ದೇಸಾಯಿ (4) ಮತ್ತು ವಿಯೋಮ್ ವಿಜಯ ದೇಸಾಯಿ (3) ಮಕ್ಕಳನ್ನು ಅಪಹರಿಸಿ ಪರಾರಿಯಾಗಿದ್ದರು. ಇದನ್ನೂ ಓದಿ: ಒಡಿಶಾ ತೀರಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ – ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ

    ಕೂಡಲೇ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸರು ಮೂರು ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸಿದರು. ಮಹಾರಾಷ್ಟ್ರ ಗಡಿಯಾದ ಕೋಹಳ್ಳಿ ಸಿಂಧೂರ್ ಮಾರ್ಗ ಮಧ್ಯದಲ್ಲಿ ಮಕ್ಕಳ ಕಳ್ಳರನ್ನು ಪೊಲೀಸರು ತಡೆಗಟ್ಟಿದಾಗ ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ..

    ಪೊಲೀಸರು ಕೊಲ್ಲಾಪುರ ಜಿಲ್ಲೆ ಹಾತ್ ಕನಗಲಾ ಗ್ರಾಮದ ಆರೋಪಿ ಸಂಬಾಜಿ ರಾವಸಾಬ ಕಾಂಬಳೆಯ ಎಡಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಆತನನ್ನು ಸ್ಥಳೀಯ ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬೆಳಗಾವಿ ಎಸ್ ಪಿ ಭೀಮಶಂಕರ್ ಗುಳೆದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಈ ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಿಬ್ಬಂದಿಯಾದ ಜಮೀರ್ ಡಾಂಗೆ ಹಾಗೂ ರಮೇಶ್ ಹಾದಿಮನಿ ಗಾಯಗೊಂಡಿದ್ದು ಅವರನ್ನು ಅಥಣಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

     

  • ಎಂಇಎಸ್ ಭಯೋತ್ಪಾದನಾ ಸಂಘಟನೆ: ಬೆಳಗಾವಿಯಲ್ಲಿ ಕರವೇ ಆಕ್ರೋಶ

    ಎಂಇಎಸ್ ಭಯೋತ್ಪಾದನಾ ಸಂಘಟನೆ: ಬೆಳಗಾವಿಯಲ್ಲಿ ಕರವೇ ಆಕ್ರೋಶ

    ಬೆಳಗಾವಿ: ರಾಜ್ಯೋತ್ಸವದ (Kannada Rajyotsava) ದಿನದಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ (MES) ಕರಾಳ ದಿನಾಚರಣೆ ಆಚರಿಸಲು ಅನುಮತಿ ಕೊಡಬಾರದೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ (Karnataka Rakshana Vedike) ಇಂದು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

    ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ದಿನ ಬೆಳಗಾವಿ (Belagavi) ಸೇರಿದಂತೆ ರಾಜ್ಯಾದ್ಯಂತ ಕನ್ನಡದ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ ಆಚರಿಸುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ದ್ರೋಹ ಬಗೆಯುವ ಕರಾಳ ದಿನಾಚರಣೆಗೆ ಈ ವರ್ಷ ಯಾವುದೇ ಕಾರಣಕ್ಕೂ ಬೆಳಗಾವಿ ನಗರ ಪೊಲೀಸ್ ಇಲಾಖೆಯು ಅನುಮತಿ ನೀಡಬಾರದು. ಅನುಮತಿ ನೀಡುವದಿಲ್ಲ ಎಂದು ಸುಳ್ಳು ಹೇಳಿ ಪೊಲೀಸ್ ಇಲಾಖೆಯು ಮಧ್ಯರಾತ್ರಿ ಅನುಮತಿ ನೀಡುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುತ್ತಾ ಬಂದಿರುತ್ತದೆ. ಈ ಕುರಿತು ನಾವು ರಾಜ್ಯದ ಗೃಹ ಮಂತ್ರಿಗಳಿಗೂ ಮತ್ತು ಮುಖ್ಯಮಂತ್ರಿಗಳಿಗೂ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

    ರಾಜ್ಯೋತ್ಸವದ ದಿನದಂದು ಕರಾಳ ದಿನಾಚರಣೆ ಮಾಡುತ್ತೇವೆ ಎಂದು ತಮ್ಮ ಬಳಿ ಬರುವ ಎಂಈಎಸ್ ನಾಯಕರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಅವರನ್ನು ಮುಂಜಾಗ್ರತವಾಗಿ ಬಂಧಿಸುವ ಮೂಲಕ ಕನ್ನಡದ ನೆಲದಲ್ಲಿ ಕನ್ನಡದ ಹಿತ ಕಾಯಬೇಕೆಂದು ಒತ್ತಾಯಿಸಿದರು.