Tag: belagavi

  • ನಾನೇನು ದೇವರಾ.. ನಾ ಬಂದು ಏನ್ ಮಾಡ್ಬೇಕು?: ರಮೇಶ್ ಜಾರಕಿಹೊಳಿ

    ನಾನೇನು ದೇವರಾ.. ನಾ ಬಂದು ಏನ್ ಮಾಡ್ಬೇಕು?: ರಮೇಶ್ ಜಾರಕಿಹೊಳಿ

    ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ನೀವು ಬೇಗ ಬರಬಹುದಿತ್ತಲ್ಲಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನಾನೇನು ದೇವರಾ, ನಾ ಬೇಗ ಬಂದು ಏನ್ ಮಾಡ್ಬೇಕು ಎಂದು ಉಡಾಫೆ ಉತ್ತರ ನೀಡಿದ್ದಾರೆ.

    ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಕೊಳವೆಗೆ ಕಾವೇರಿ ಎಂಬ ಬಾಲಕಿ ಬಿದ್ದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ವಿಳಂಬವಾಗಿ ಸ್ಥಳಕ್ಕೆ ಆಗಮಿಸಿದ್ದರು. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಸ್ವಲ್ಪ ಬೇಗ ಬರಬಹುದಿತ್ತಲವೇ ಎಂದು ಪ್ರಶ್ನೆ ಕೇಳಿದ್ದಕ್ಕೆ, ನಾನೇನು ದೇವರಾ.. ಬೇಗ ಬಂದು ನಾನ್ ಏನ್ ಮಾಡ್ಬೇಕು? ಎಷ್ಟು ಕೋಟಿ ಹಣ ವ್ಯಯ ಮಾಡಿದ್ರೂ ಬಾಲಕಿ ಬದುಕಿ ಬರಲ್ಲಾ. ಬದುಕಿ ಬಂದರೆ ಸಂತೋಷ ಎಂದು ಉತ್ತರಿಸಿದ್ದಾರೆ.

    ನನಗೆ ನಮ್ಮ ಜಿಲ್ಲಾಡಳಿತದ ಅಧಿಕಾರಿಗಳ ಮೇಲೆ ನಂಬಿಕೆಯಿದೆ. ಅವರು ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ನಾನು ದೂರದಿಂದಲೇ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

    ಉಡಾಫೆಯ ಮಂತ್ರಿಗಳು: ಈ ಸರ್ಕಾರದಲ್ಲಿ ಎಲ್ಲಾ ಉಡಾಫೆ ಮಂತ್ರಿಗಳೇ ಇರೋದು. ಸಿಎಂ ಕೂಡಾ ಉಡಾಫೆ ವರ್ತನೆ ತೋರಿಸ್ತಾರೆ. ಮುಖ್ಯಮಂತ್ರಿಗಳ ಹಾಗೆ ಮಂತ್ರಿಗಳು ಅನುಸರಿಸುತ್ತಾರೆ. ಸಿಎಂ ಎಸ್‍ಪಿ ಗೆ ಸಾರ್ವಜನಿಕವಾಗಿ ಬೈಯ್ತಾರೆ. ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆಯಿಲ್ಲ. ಚುನಾವಣೆ ನಂತರ ಕಾಂಗ್ರೆಸ್‍ನ ಅಡ್ರೆಸ್ ಇರೋದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.

    ಕೊಳವೆಬಾವಿ ದುರಂತ ಪ್ರಕರಣಗಳು ನಡೆಯುತ್ತಾನೆ ಇರುತ್ತದೆ. ದುರ್ಘಟನೆ ನಡೆದಿದೆ ಆ ಬಗ್ಗೆ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಳ್ಳುತ್ತಾರೆ. ಸರ್ಕಾರದಲ್ಲಿ ಈಗಾಗಲೇ ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ಆದೇಶಗಳಿವೆ. ಜಮೀನಿನಲ್ಲಿ ತೆರೆದ ಕೊಳವೆ ಬಾವಿ ಮುಚ್ಚಲು ಆದೇಶವಿದೆ. ಇದನ್ನು ಬಿಟ್ಟು ಮಾಧ್ಯಮಗಳು ಬೇರೆ ವಿಚಾರಗಳನ್ನ ಹೈಲೈಟ್ ಮಾಡಿ ಎಂದು ಸಚಿವ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

    https://youtu.be/9-J2kwfP51M

     

     

     

  • ಕೊಳವೆಬಾವಿಗೆ ಬಿದ್ದ 6ರ ಬಾಲಕಿಗಾಗಿ ಮುಂದುವರಿದ ಕಾರ್ಯಾಚರಣೆ- ಅಡ್ಡಿಯಾಗ್ತಿದೆ ಬಂಡೆಗಲ್ಲು

    ಕೊಳವೆಬಾವಿಗೆ ಬಿದ್ದ 6ರ ಬಾಲಕಿಗಾಗಿ ಮುಂದುವರಿದ ಕಾರ್ಯಾಚರಣೆ- ಅಡ್ಡಿಯಾಗ್ತಿದೆ ಬಂಡೆಗಲ್ಲು

    – ಭದ್ರತೆಗೆ ಬಂದಿದೆ ಸೇನೆ

    ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಜುಂಜರವಾರ ಗ್ರಾಮದಲ್ಲಿ ಕೊಳವೆ ಬಾವಿಯೊಳಗೆ 6 ವರ್ಷದ ಬಾಲಕಿ ಕಾವೇರಿ ಬಿದ್ದ ಪ್ರಕರಣದ ಕಾರ್ಯಾಚರಣೆ ಚುರುಕು ಪಡೆದಿದೆ. 15 ಗಂಟೆಗಳಿಂದಲೂ ಕಾರ್ಯಾಚರಣೆ ನಡೀತಿದೆ. ಕೊಳವೆ ಬಾವಿಗೆ ಆಮ್ಲಜನಕ ಪೂರೈಸಲಾಗುತ್ತಿದ್ದು, ಪುಣೆ ಎನ್‍ಡಿಆರ್‍ಎಫ್ ತಂಡ ಒಂದ್ಕಡೆ ಆ್ಯಂಕರ್ (ಲಂಗರು) ಬಳಸಿಯೂ ಮತ್ತೊಂದು ಕಡೆ ಹಿಟಾಚಿ, ಬಂಡೆ ಒಡೆಯೋ ಯಂತ್ರಗಳಿಂದ ಮಣ್ಣನ್ನು ಅಗೆಯಲಾಗ್ತಿದೆ. ಈಗಾಗಲೇ 13 ಅಡಿ ಅಗೆಯಲಾಗಿದೆ.

    ಶನಿವಾರ ಸಂಜೆ 5 ಗಂಟೆ ಆಸುಪಾಸಿನಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ ಕಾವೇರಿಯನ್ನ ಇನ್ನೂ ಮೇಲೆತ್ತಲು ಆಗಿಲ್ಲ. ರಾತ್ರಿಯೆಲ್ಲಾ ನಡೆದ ಕಾರ್ಯಾಚರಣೆ ಇದೀಗ 15 ಗಂಟೆಯೇ ಮುಗಿದಿದೆ. ಆದಾಗ್ಯೂ ಕಾವೇರಿ ಇನ್ನೂ ಮೇಲೆ ಬಂದಿಲ್ಲ. ಸುಮಾರು 30 ಅಡಿ ಆಳದಲ್ಲಿ ಸಿಕ್ಕಿರುವ ಕಾವೇರಿಯ ಚಲನವಲನ ವೀಕ್ಷಿಸಲು 18 ಅಡಿಯವರೆಗೆ ವೆಬ್ ಕ್ಯಾಮೆರಾ ಬಿಡಲಾಗಿತ್ತು. ಆದ್ರೆ ಮಧ್ಯದಲ್ಲಿ ಮಣ್ಣು ಆವರಿಸಿದ ಕಾರಣ ಬಾಲಕಿಯ ಸುಳಿವು ಸಿಕ್ಕಿಲ್ಲ.

    ಬಾಲಕಿ ಕಾವೇರಿ ರಕ್ಷಣಾ ಕಾರ್ಯದಲ್ಲಿ 9 ತಂಡಗಳು ಭಾಗಿಯಾಗಿವೆ. ಪುಣೆ, ಹೈದರಾಬಾದ್‍ನ ಎನ್‍ಡಿಆರ್‍ಎಫ್ ತಂಡಗಳು, ಬೆಳಗಾವಿಯ ಮಿಲಿಟರಿ ತುಕಡಿ, ಸಾಂಗ್ಲಿಯ ಹೆಲ್ಪ್‍ಲೈನ್ ಬಸವರಾಜ್ ಹಿರೇಮಠ್, ರಾಯಚೂರಿನ ಹಟ್ಟಿ, ಸ್ಥಳೀಯ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸ್ ಇಲಾಖೆಗಳು ಆಪರೇಷನ್ ಕಾವೇರಿಯಲ್ಲಿ ಭಾಗಿಯಾಗಿವೆ. ಇನ್ನು ಬೆಳಗಾವಿಯ ಡಿಸಿ ಜಯರಾಮ್, ಎಸ್‍ಪಿ ರವಿಕಾಂತೇಗೌಡ, ಅಥಣಿ ತಹಸೀಲ್ದಾರ್ ಉಮಾದೇವಿ ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವಧಿ ರಾತ್ರಿಯೆಲ್ಲಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಗಂಟೆ ಗಂಟೆಗೂ ಎಲ್ಲರೂ ಮಾಹಿತಿ ಕೊಡ್ತಿದ್ರು.

    ಸವಿತಾ – ಅಜಿತ್ ದಂಪತಿಗೆ ಅನ್ನಪೂರ್ಣ, ಕಾವೇರಿ ಮತ್ತು ಪವನ್ ಎಂಬ ಮೂವರು ಮಕ್ಕಳಿದ್ದಾರೆ. ಶನಿವಾರ ಸಂಜೆ ಕಟ್ಟಿಗೆ ಆರಿಸಲು ತಾಯಿ ಜೊತೆ ಕಾವೇರಿ ಮತ್ತು ಪವನ್ ತೆರಳಿದ್ದರು. ಈ ವೇಳೆ ಶಂಕರಪ್ಪ ಹಿಪ್ಪರಗಿ ಅವರ ಜಮೀನಿನಲ್ಲಿ ಮೂರು ವರ್ಷಗಳ ಹಿಂದೆ ಕೊರೆದು ಫೇಲ್ ಆದ ಕಾರಣ ಹಾಗೇ ಬಿಟ್ಟಿದ್ದ ಕೊಳವೇ ಬಾವಿಗೆ ಅಚಾನಕ್ ಆಗಿ ಕಾವೇರಿ ಆಯತಪ್ಪಿ ಬಿದ್ದಿದ್ದಾರೆ. ಅಕ್ಕ ಬಾವಿಗೆ ಬಿದ್ದ ಸುದ್ದಿಯನ್ನ ಪವನ್ ತಕ್ಷಣವೇ ತಾಯಿಗೆ ತಿಳಿಸಿದ್ದಾನೆ. ಆತಂಕದಿಂದ ಓಡಿ ಬಂದ ತಾಯಿ ಸವಿತಾಗೆ ಮೊದಲಿಗೆ ಕಾವೇರಿಯ ಅಳಲು ಕೇಳಿಸಿದೆ. ಆಮೇಲೆ ಹಗ್ಗ ಬಿಟ್ಟು ರಕ್ಷಿಸಲು ಯತ್ನಿಸಿದ್ದಾರೆ. ಆದ್ರೆ ಸಾಧ್ಯವಾಗಿಲ್ಲ. ತಕ್ಷಣವೇ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿ ಎಲ್ಲರಿಗೂ ತಿಳಿದಿದೆ. ಕೂಲಿಗೆ ಹೋಗಿದ್ದ ಪತಿ ಅಜಿತ್ ಬರುವಷ್ಟರಲ್ಲಿ ಇಡೀ ಗ್ರಾಮವೇ ಅಲ್ಲಿ ನೆರೆದಿತ್ತು. ಡಿಸಿ, ಎಸ್‍ಪಿ, ಅಗ್ನಿಶಾಮಕ ದಳವೆಲ್ಲಾ ಬಂದಿತ್ತು. ಸವಿತಾ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೆ, ಅನ್ನ-ಆಹಾರ ಸೇವಿಸದೆ ರಾತ್ರಿಯೆಲ್ಲಾ ಗೋಳಾಡಿ ಕಣ್ಣೀರಿಟ್ಟ ಸವಿತಾ ಅಸ್ವಸ್ಥರಾಗಿದ್ದರು.

  • ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ : 6 ವರ್ಷದ ಪುಟಾಣಿಯ ರಕ್ಷಣೆಗೆ ಹರಸಾಹಸ

    ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ : 6 ವರ್ಷದ ಪುಟಾಣಿಯ ರಕ್ಷಣೆಗೆ ಹರಸಾಹಸ

    ಬೆಳಗಾವಿ: 10 ದಿನಗಳ ಅಂತರದಲ್ಲಿ ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದೆ. ಅಥಣಿ ತಾಲೂಕಿನ ಝಂಜರವಾಡದಲ್ಲಿ ತೆರೆದ ಬೋರ್‍ವೆಲ್‍ಗೆ 6 ವರ್ಷದ ಬಾಲಕಿ ಬಿದ್ದಿದ್ದಾಳೆ.

    ಕಾವೇರಿ ಮಾದರ ಝಂಜರವಾಡ ಗ್ರಾಮದ ತೋಟದ ಮನೆಯಲ್ಲಿನ ತೆರೆದ ಕೊಳವೆ ಬಾವಿಗೆ ಬಿದ್ದ ಬಾಲಕಿ. ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಮಗು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ರೈತ ಶಂಕರಪ್ಪ ಹಿಪ್ಪರಗಿ ಅವರು 400 ಅಡಿ ಕೊಳವೆ ಬಾವಿ ಕೊರೆಸಿದ್ದಾಗ ಫೇಲ್ ಆಗಿತ್ತು. ಇವರು ಕೊಳವೆ ಬಾವಿ ಮುಚ್ಚದೇ ಹಾಗೇ ಬಿಟ್ಟಿದ್ದರು. ಇಂದು ಸಂಜೆ ಸುಮಾರು 5 ಗಂಟೆಗೆ ಬಾಲಕಿ `ಕಾವೇರಿ ಮಾದರ’ ಆಟವಾಡುತ್ತಾ ಹೋಗಿ ಬಿದ್ದಿದ್ದಾಳೆ. ಸುಮಾರು 50 ಅಡಿ ಆಳದಲ್ಲಿ ಬಾಲಕಿ ಸಿಲುಕಿದ್ದಾಳೆ ಎನ್ನುವ ಮಾಹಿತಿ ಈಗ ಸಿಕ್ಕಿದೆ.

  • ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ!

    ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ!

    ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುವೆಂಪು ನಗರದಲ್ಲಿರುವ ಮನೆ ಮುಂದೆ ವಾಮಾಚಾರ ಮಾಡಲಾಗಿದೆ.

    ಕಳೆದ 2013 ರ ಚುನಾವಣೆಯ ನಂತರ ಹೆಬ್ಬಾಳ್ಕರ್ ಮನೆ ಮುಂಭಾಗದಲ್ಲಿ ನಿರಂತರವಾಗಿ ವಾಮಾಚಾರ ಮಾಡಲಾಗುತ್ತಿದೆ ಎನ್ನಲಾಗಿದೆ. ಮನೆ ಮುಂದೆ, ಕಾರ್ ಕೆಳಗೆ ನಿಂಬೆಹಣ್ಣು, ತೆಂಗಿನಕಾಯಿ, ಮೊಟ್ಟೆ, ಮೆಣಸಿನಕಾಯಿ, ಬೂದುಗುಂಬಳಕಾಯಿ, ಕುಂಕುಮ, ಅರಶಿಣ ಪತ್ತೆಯಾಗಿದೆ.

    ಅಮವಾಸೆ ಮತ್ತು ಹುಣ್ಣಿಮೆ ದಿನಗಳಂದು ವಾಮಾಚಾರ ಹೆಚ್ಚಾಗಿರುತ್ತದೆ. ಮಾಟಮಂತ್ರದಿಂದ ಮಾನಸಿಕ ಹಿಂಸೆ ಆಗುತ್ತಿದೆ. ನಾನು ಮಾಟ ಮಂತ್ರ ನಂಬಲ್ಲ. ಆದರೆ ಮಾಟಮಂತ್ರದಂತಹ ಅನೇಕ ಘಟನೆ ನಡೆದಿವೆ. ನನ್ನ ಕಾರು, ಸಹೋದರ ಚನ್ನಾರಾಜ್ ಕಾರಿಗೆ ಅಪಘಾತಗಳಾಗಿವೆ. ಯಾವ ಸಾಧನೆಗೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.


    ಇದನ್ನೂ ಓದಿ: ಕಲಬುರಗಿ: ವಾಮಾಚಾರಕ್ಕೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದ ಗ್ರಾಮಸ್ಥರು

    https://www.youtube.com/watch?v=WmoOtp7rMK4

  • ಪ್ರಿಯಕರನ ಜೊತೆಗೂಡಿ ಸಹಪಾಠಿಯನ್ನೇ ಅಪಹರಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿನಿ

    ಪ್ರಿಯಕರನ ಜೊತೆಗೂಡಿ ಸಹಪಾಠಿಯನ್ನೇ ಅಪಹರಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿನಿ

    ಬೆಳಗಾವಿ: ಹಣಕ್ಕಾಗಿ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಸಹಪಾಠಿಯನ್ನೇ ಅಪಹರಿಸಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಳಗಾವಿಯ ಜಿಐಟಿ ಕಾಲೇಜಿನ 23 ವರ್ಷದ ವಿದ್ಯಾರ್ಥಿನಿ ಅರ್ಪಿತಾ ನಾಯಕ್ ಕಿಡ್ನಾಪ್ ಆಗಿದ್ದ ವಿದ್ಯಾರ್ಥಿನಿ. 17ನೇ ತಾರೀಖಿನಂದು ರಾತ್ರಿ ಅರ್ಪಿತಾ ಊಟಕ್ಕೆಂದು ಸ್ನೇಹಿತೆ ದಿವ್ಯಾ ಮಲಘಾಣ ಜೊತೆ ತೆರಳಿದ್ದರು. ಈ ವೇಳೆ ದಿವ್ಯಾ ಹಾಗೂ ಆಕೆಯ ಪ್ರಿಯತಮನಾದ ಗದಗ ಮೂಲದ ಕೇಧಾರಿ ಇಬ್ಬರೂ ಸೇರಿ ಅರ್ಪಿತಾರನ್ನ ಕಿಡ್ನ್ಯಾಪ್ ಮಾಡಿದ್ದರು.

    ಎಳನೀರಲ್ಲಿ ನಿದ್ದೆ ಮಾತ್ರೆ ಹಾಕಿ ಕುಡಿಸಿ, ಕ್ಲೋರೋಫಾರ್ಮ್ ಮೂಗಿಗೆ ಒತ್ತಿ ಅರ್ಪಿತಾ ಪ್ರಜ್ಞೆ ತಪ್ಪುವಂತೆ ಮಾಡಿ ಅಪಹರಿಸಿದ್ದರು. ನಂತರ ಟಾಟಾ ಇಂಡಿಕಾ ಕಾರಿನಲ್ಲಿ ಅರ್ಪಿತಾರನ್ನು ಕರೆದುಕೊಂಡು ಹೋಗಿ ಗದಗದಲ್ಲಿ ಆಕೆಯನ್ನು ಬಚ್ಚಿಟ್ಟಿದ್ದರು. ಎಚ್ಚರವಾದಾಗ ತಾಯಿಗೆ ಕರೆ ಮಾಡಿ ತನ್ನನ್ನು ಅಪಹರಿಸಲಾಗಿದೆ ಅಂತ ಅರ್ಪಿತಾ ಹೇಳಿದ್ದರು. ಬಳಿಕ ಅರ್ಪಿತಾ ಮನೆಯವರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಐವರು ಪೊಲೀಸರ ವಿಶೇಷ ತಂಡದಿಂದ ಯುವತಿಯ ಪತ್ತೆ ಕಾರ್ಯ ನಡೆದಿತ್ತು. ಇದೀಗ ಗದಗದಲ್ಲಿ ಯುವತಿ ಪತ್ತೆಯಾಗಿದ್ದು, ಆಕೆಯನ್ನು ರಕ್ಷಿಸಿ ಪೊಲೀಸರು ಬೆಳಗಾವಿಗೆ ಕರೆತರುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಿವ್ಯಾ, ಕೇಧಾರಿ, ಕಾರು ಚಾಲಕ ಸುಮೀತ ಗಂಗಪ್ಪ ಅಲಿಯಾಸ್ ಬಬ್ಲುವನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 5 ಕೋಟಿ ರೂ. ಹಣ ವಸೂಲಿ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕ್ಕೆ ಬಳಸಿದ ಇಂಡಿಕಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಡಿವೈಎಸ್‍ಪಿ ಮೇಲೆ ಹಲ್ಲೆ ಆರೋಪ – ಎಂಇಎಸ್ ಮುಖಂಡನ ಬಂಧನ, ಬೆಳಗಾವಿ ಉದ್ವಿಗ್ನ

    ಡಿವೈಎಸ್‍ಪಿ ಮೇಲೆ ಹಲ್ಲೆ ಆರೋಪ – ಎಂಇಎಸ್ ಮುಖಂಡನ ಬಂಧನ, ಬೆಳಗಾವಿ ಉದ್ವಿಗ್ನ

    ಬೆಳಗಾವಿ: ಡಿವೈಎಸ್‍ಪಿ ಸದಾನಂದ ಪಡೋಳಕರ್ ಮೇಲೆ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಮಾಜಿ ಮೇಯರ್, ಎಂಇಎಸ್ ಮುಖಂಡ ಶಿವಾಜಿ ಸುಂಟಕರ್‍ರನ್ನು ಬಂಧಿಸಲಾಗಿದೆ.

    ಶನಿವಾರ ಕಣಬುರ್ಗಿಯ ಜೋರ್ತಿಲಿಂಗದಲ್ಲಿ ಡಿವೈಎಸ್‍ಪಿ ಮೇಲೆ ಶಿವಾಜಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ಶಿವಾಜಿ ಅವರನ್ನ ಮಾಳ ಮಾರುತಿ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

    ಇತ್ತ ಶಿವಾಜಿ ಅವರನ್ನು ಜೈಲಿಗೆ ಹಾಕಿದ್ದರಿಂದ ಸಿಟ್ಟಿಗೆದ್ದ ಬೆಂಬಲಿಗರು ಠಾಣೆ ಮುಂದೆ ಜಮಾಯಿಸಿದ್ದಾರೆ. ಪರಿಣಾಮ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

  • ಭಿಕ್ಷಾಟನೆ ಮಾಡಿ ಮಕ್ಕಳನ್ನ ಸಾಕ್ತಿರೋ ತಂದೆ, ಸ್ಲಮ್‍ನಲ್ಲಿದ್ರೂ ಕೆಎಎಸ್ ಮಾಡ್ಬೇಕೆಂಬ ಬಿಕಾಂ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಭಿಕ್ಷಾಟನೆ ಮಾಡಿ ಮಕ್ಕಳನ್ನ ಸಾಕ್ತಿರೋ ತಂದೆ, ಸ್ಲಮ್‍ನಲ್ಲಿದ್ರೂ ಕೆಎಎಸ್ ಮಾಡ್ಬೇಕೆಂಬ ಬಿಕಾಂ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಬೆಳಗಾವಿ: ಜಿಲ್ಲೆಯ ಸ್ಲಂವೊಂದರ ಯುವಕ ಕೆಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದಾರೆ. ಆದರೂ ಕಿತ್ತು ತಿನ್ನುವ ಬಡತನ ವಿದ್ಯಾಭ್ಯಾಸಕ್ಕೆ ಅಡ್ಡಗಾಲು ಹಾಕುತ್ತಿದೆ.

    ಬಿಕಾಂ ವಿದ್ಯಾರ್ಥಿಯಾದ ಗಣೇಶ್ ವಿಭೂತಿ ಬೆಳಗಾವಿ ಮಹಾನಗರದ ಕಣಬರ್ಗಿ ಸ್ಲಂನಲ್ಲಿ ಹರಿದು ಹೋದ ಗುಡಿಸಲಿನಲ್ಲಿ ವಾಸವಿದ್ದಾರೆ. ಇವರ ತಂದೆ ಮನೆ ಮನೆಗೆ ತೆರಳಿ ಹಾಡು ಹೇಳಿ ಭಿಕ್ಷೆ ಬೇಡಿ ಬಂದ ಹಣದಿಂದ 5 ಮಕ್ಕಳನ್ನು ಸಾಕುತ್ತಿದ್ದಾರೆ. ತಾಯಿ ಬೇರೆಯವರ ಮನೆಗೆಲಸ, ಪಾತ್ರೆ ತೊಳೆಯುವ ಕೆಲಸ ಮಾಡುವುದರ ಜೊತೆಗೆ ಪೊರಕೆ ಮಾರಲು ಹೋಗುತ್ತಾರೆ. ಕಿತ್ತು ತಿನ್ನುವ ಬಡತನ, ಓದಲು ಆಸಕ್ತಿಯಿದ್ದರೂ ಹಣದ ಕೊರತೆ ಗಣೇಶ್‍ರನ್ನು ಕಾಡುತ್ತಿದೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅವರಿವರ ಸಹಾಯ ಪಡೆದು ಬಿಕಾಂ ಓದುತ್ತಿದ್ದಾರೆ.

    ಐದು ಮಕ್ಕಳಿಗೂ ಊಟ ಕೊಡಿಸುವುದೇ ದೊಡ್ಡ ಸವಾಲಾಗಿರುವಾಗ ನಿನಗೆ ಓದಲು ಹಣ ಎಲ್ಲಿಂದ ತರಲಿ ಎಂದು ಪಾಲಕರು ಅಸಹಾಯಕರಾಗಿದ್ದಾರೆ. ಆದರೆ ನಾನು ಕಷ್ಟಪಟ್ಟು ಓದಿ ಮುಂದೆ ಬರಬೇಕು ಎಂದು ಗಣೇಶ್ ತನ್ನ ಕೆಎಎಸ್ ಗುರಿ ಬಗ್ಗೆ ಹೇಳಿಕೊಳ್ಳುತ್ತಾರೆ.

    ನಮ್ಮ ತಂದೆ ನಮಗೆ ವಿದ್ಯಾಭ್ಯಾಸ ನೀಡಲಿಲ್ಲ. ಅದರ ಬದಲು ತಬಲಾ ,ಹಾರ್ಮೊನಿಯಂ ನೀಡಿದರು. ಆದರೆ ಮಗ ಗಣೇಶ್ ಓದುವಲ್ಲಿ ಆಸಕ್ತಿ ತೋರಿದ್ದಾನೆ ಎಂದು ಗಣೇಶ್ ಅವರ ತಂದೆ ಹೇಳುತ್ತಾರೆ. ಕಂದೀಲು ಬೆಳಕಿನಲ್ಲಿ ಓದಿದ ಗಣೇಶ್ ಹಠ ಮಾತ್ರ ಬಿಟ್ಟಿಲ್ಲ. ಕೆಎಎಸ್ ಮಾಡಿ ತಮ್ಮ ಜನರ ಬದುಕಿಗೆ ಆಸರೆಯಾಗಬೇಕೆಂಬುದೇ ಗಣೇಶ್ ಅವರ ಜೀವನದ ಮುಖ್ಯ ಗುರಿ.

    https://www.youtube.com/watch?v=QMEWBdErnLE

     

  • ಬೆಳಗಾವಿ ಮೂಲದ 8 ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

    ಬೆಳಗಾವಿ ಮೂಲದ 8 ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

    ಬೆಳಗಾವಿ: ನಗರದ ಮರಾಠ ಮಂಡಳ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದಾಗ ಮಹಾರಾಷ್ಟ್ರದ ಮಾಲ್ವಾನ್ ಬೀಚ್‍ನಲ್ಲಿ ಇಂದು ಬೆಳಗ್ಗೆ ನೀರುಪಾಲಾಗಿದ್ದಾರೆ.

    ಸಂತೋಷ್, ಉಜಾಮಿಲ್, ಅನಿಕೇತ್, ಕಿರಣ್, ನಿತಿನ್, ಅನಿತಾ, ಆರತಿ ಮತ್ತು ಆಕಾಂಕ್ಷ ಮೃತ ವಿದ್ಯಾರ್ಥಿಗಳು. 40 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ನೀರು ಪಾಲಾಗುತ್ತಿದ್ದ ಅವಧೂತ್, ಮಾಯಾ ಮತ್ತು ಮಹೇಶ್ ಎಂಬವರನ್ನು ರಕ್ಷಣೆ ಮಾಡಲಾಗಿದೆ. ಮೃತರೆಲ್ಲರೂ 22 ರಿಂದ 25 ವಯಸ್ಸಿನವರು ಎಂದು ಹೇಳಲಾಗಿದೆ.

    ಇದು ಶೈಕ್ಷಣಿಕ ಪ್ರವಾಸ ಅಲ್ಲ. ನಮ್ಮ ಕಾಲೇಜಿನಿಂದ ಯಾವುದೇ ಅನುಮತಿಯನ್ನು ಕೊಟ್ಟಿಲ್ಲ. ವಿದ್ಯಾರ್ಥಿಗಳು ಖಾಸಗಿಯಾಗಿ ಪ್ರವಾಸ ಹೋಗಿದ್ದು, ಪ್ರವಾಸಕ್ಕೆ ಹೋಗಿರುವ ವಿಷಯ ನಮಗೆ ಹಾಗು ಕಾಲೇಜಿನ ಆಡಳಿತ ಮಂಡಳಿಗೆ ಗೊತ್ತಿರಲಿಲ್ಲ. ಇಂದು ಬೆಳಗ್ಗೆ 11 ಗಂಟೆಯ ವೇಳೆಯಲ್ಲಿ ನಮಗೆ ವಿಷಯ ಗೊತ್ತಾಗಿದೆ ಎಂದು ಕಾಲೇಜಿನ ಉಪನ್ಯಾಸಕಿ ರಾಜಶ್ರೀ ಹಾಲ್‍ಗೇಕರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಆದರೆ ಪ್ರವಾಸಕ್ಕೆಂದು ಪುಣೆಗೆ ಹೋಗಬೇಕಾಗಿದ್ದವರು ಮಾರ್ಗ ಬದಲಿಸಿ ಮಾಲ್ವಾನ್‍ನ ವೈರಿ ಬೀಚ್‍ಗೆ ಹೋಗಿದ್ದಾರೆ. ವಿದ್ಯಾರ್ಥಿಗಳ ಜೊತೆ ಮಹೇಶ್ ಎಂಬ ಕಿರಿಯ ಉಪನ್ಯಾಸಕರು ಸಹ ಹೋಗಿದ್ದರು ಎಂದು ತಿಳಿದುಬಂದಿದೆ. ಆದರೆ ಕಾಲೇಜು ಆಡಳಿತ ಮಂಡಳಿ ಇದರ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ನೀಡುತ್ತಿಲ್ಲ. ಮೃತದೇಹಗಳನ್ನು ಮಾಲ್ವಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

     

    https://www.youtube.com/watch?v=bF5ytf3pHSA

     

  • ಬೆಳಗಾವಿ: 15 ಬೀದಿನಾಯಿಗಳ ದಾಳಿಗೆ ವ್ಯಕ್ತಿ ಬಲಿ

    ಬೆಳಗಾವಿ: 15 ಬೀದಿನಾಯಿಗಳ ದಾಳಿಗೆ ವ್ಯಕ್ತಿ ಬಲಿ

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ನಡೆದಿದೆ.

    34 ವರ್ಷದ ಹಸನ್ ಸಾಬ್ ಮೃತ ವ್ಯಕ್ತಿ. ಹಸನ್ ಸಾಬ್ ಮದ್ಯ ಸೇವಿಸಿ ಬಸ್ ನಿಲ್ದಾಣ ಬಳಿಯ ಫುಟ್ ಬಾತ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಈ ವೇಳೆ 15ಕ್ಕೂ ಬೀದಿ ನಾಯಿಗಳು ಹಸನ್ ಸಾಬ್ ಮೇಲೆ ದಾಳಿ ನಡೆಸಿವೆ. ಪರಿಣಾಮ ಅವರ ಮುಖ, ಶರೀರ ಹಾಗೂ ಗುಪ್ತಾಂಗವನ್ನು ಬೀದಿನಾಯಿಗಳು ಕಚ್ಚಿ ತಿಂದಿವೆ.

    ಇದೇ ವೇಳೆಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಸಿಪಿಐ ಸಂಗನಗೌಡ ಹಸನ್ ಅವರನ್ನು ಬೈಲಹೊಂಗಲ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

  • ಗ್ರಾಮಕ್ಕೆ ಸುದೀಪ್ ಬರಬೇಕೆಂದು ನಾಲ್ಕು ದಿನಗಳಿಂದ ಊಟ ಬಿಟ್ಟು ಆಸ್ಪತ್ರೆ ಸೇರಿದ ಅಭಿಮಾನಿಗಳು

    ಗ್ರಾಮಕ್ಕೆ ಸುದೀಪ್ ಬರಬೇಕೆಂದು ನಾಲ್ಕು ದಿನಗಳಿಂದ ಊಟ ಬಿಟ್ಟು ಆಸ್ಪತ್ರೆ ಸೇರಿದ ಅಭಿಮಾನಿಗಳು

    ಬೆಳಗಾವಿ: ತಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ಗ್ರಾಮಕ್ಕೆ ಬರಬೇಕೆಂದು ಪಟ್ಟು ಹಿಡಿದು ಕಳೆದ ನಾಲ್ಕು ದಿನಗಳಿಂದ ಉಪವಾಸ ಮಾಡಿ ಆಸ್ಪತ್ರೆ ಸೇರಿದ್ದಾರೆ.

    ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಗ್ರಾಮದ ಪ್ರವೀಣ್ ಪಾಟೀಲ್, ಸಚಿನ್ ಅಸ್ವಸ್ಥ ಯುವಕರು. ಮಾರ್ಚ್ 8ರಂದು ಸುದೀಪ್ ನೋಡಬೇಕು ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸೀಮೆ ಎಣ್ಣೆ ತೆಗೆದುಕೊಂಡು ಬೆಳಗಾವಿ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಟ್ಟು ಕಳುಹಿಸಿದ್ದರು.

    ಇಬ್ಬರು ಯುವಕರ ಸುದ್ದಿ ತಿಳಿದ ನಟ, ಸುದೀಪ್ ಇಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡು ಆತ್ಮೀಯವಾಗಿ ಮಾತನಾಡಿಸಿ ಇನ್ನೊಮ್ಮೆ ಹೀಗೆ ಮಾಡದಂತೆ ತಿಳಿ ಹೇಳಿದ್ದರು. ಆದರೆ ನಟ ಸುದೀಪ್ ತಮ್ಮ ಗ್ರಾಮಕ್ಕೆ ಆಗಮಿಸಬೇಕು ಎಂದು ಇದೀಗ ಅಭಿಮಾನಿಗಳು ಪಟ್ಟು ಹಿಡಿದ್ದಾರೆ. ಅಸ್ವಸ್ಥರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.