Tag: belagavi

  • ಗಂಡನ ಬಿಟ್ಟು ಲವ್ವರ್ ಜೊತೆ ಮಗಳ ಚೆಲ್ಲಾಟ: ಸಹಕರಿಸದ ಅಪ್ಪನ ಕೊಂದೇ ಬಿಟ್ಟ ತಾಯಿ-ಮಗಳು!

    ಗಂಡನ ಬಿಟ್ಟು ಲವ್ವರ್ ಜೊತೆ ಮಗಳ ಚೆಲ್ಲಾಟ: ಸಹಕರಿಸದ ಅಪ್ಪನ ಕೊಂದೇ ಬಿಟ್ಟ ತಾಯಿ-ಮಗಳು!

    ಬೆಳಗಾವಿ: ಕೈಹಿಡಿದು ಬಾಳಪೂರ್ತಿ ಜೀವನ ಸಂಗಾತಿಯಾಗಿರುವೆ ಎಂದು ಸಪ್ತಪದಿ ತುಳಿದ ಹೆಂಡತಿಯೇ ಗಂಡನನ್ನು ಕೊಲ್ಲಿಸಲು ಸುಪಾರಿ ನೀಡಿದ ಭಯಾನಟಕ ಘಟನೆ ಬೆಳಗಾವಿಯ ಗೋಕಾಕ ಹೊರವಲಯದ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ.

    ಮೂಲತಃ ಗೋಕಾಕ ತಾಲೂಕಿನ ಕೈತನಾಳ ಹೊಸೂರು ಗ್ರಾಮದ ಕೆಂಚಪ್ಪಾ ನೊಗನಿಹಾಳ ತನ್ನ ಪತ್ನಿ ಗೌರವ್ವಾ ನೊಗನಿಹಾಳ ಹಾಕಿದ ಮರ್ಡರ್ ಸ್ಕೆಚ್‍ಗೆ ಬಲಿಯಾಗಿದ್ದಾನೆ. ಕೊಲೆಯಾದ ಕೆಂಚಪ್ಪಾ ಮಗಳು ಸಿದ್ದವ್ವಾ ಕಟ್ಟಿಕಾರ, ಪತ್ನಿ ಗೌರಮ್ಮ ನೋಗನಿಹಾಳ ಸೇರಿ 70 ಸಾವಿರ ಸುಪಾರಿ ನೀಡಿ ಕೊಲೆಮಾಡಿಸಿದ್ದಾರೆ.

    ಮನೆ ಯಜಮಾನ ಮಿಸ್ಸಿಂಗ್ ಆಗಿದ್ದಾನೆ ಎಂದು ಊರಲ್ಲಿ ಸುದ್ದಿ ಹರಡಿಸಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಪಾಪಿ ಪತ್ನಿ ಗೌರವ್ವ ಯತ್ನಿಸಿದ್ದಾಳೆ. ಆದ್ರೆ ಊರ ತುಂಬೆಲ್ಲಾ ಕೆಂಚಪ್ಪಾ ಕಾಣೆಯಾಗಿಲ್ಲ ಬದಲಾಗಿ ಕೊಲೆಯಾಗಿದ್ದಾನೆ ಎಂಬ ಗುಸು ಗುಸು ಸುದ್ದಿ ಹರಡಿತ್ತು. ಸಂಶಯದ ಮೆರೆಗೆ ಕೆಂಚಪ್ಪಾ ಸಹೋದರ ವಿಠ್ಠಲ ಪೊಲೀಸ್ ಠಾಣೆಗೆ ದೂರು ಕೊಟ್ಟರು. ತನಿಖೆ ಆರಂಭಿಸಿದ ಗೋಕಾಕ ಗ್ರಾಮೀಣ ಪೋಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ.

    ಪ್ರಕಣದಲ್ಲಿ ಸುಪಾರಿ ಪಡೆದ ಪ್ರಮೂಖ ಆರೋಪಿ ಶಿವಾಜಿ ಹೊಳೆವ್ವಗೋಳ, ಶಂಕರ ದೇಶಿಂಗೆ, ದುರ್ಗಪ್ಪಾ ನಂದಿ, ರಾಮಸಿದ್ದದ್ದಪ್ಪ ನಂದಿ, ಗೌರವ್ವಾ ನೊಗನಿಹಾಳ ಹಾಗೂ ಸಿದ್ದವ್ವ ಕಟ್ಟಿಕಾರಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಒಟ್ಟಾರೆ ಪತ್ನಿ ಗೌರವ್ವ, ಮಗಳ ನೀಚ ಕೆಲಸಕ್ಕೆ ಅಪ್ಪ ಸಹಕರಿಸಲಿಲ್ಲ ಅಂತ ಸುಪಾರಿ ಕೊಟ್ಟು ಮುಗಿಸಿರುವುದು ಬೆಳಕಿಗೆ ಬಂದಿದೆ.

  • ಶಿಕ್ಷಣ ಕ್ಷೇತ್ರದ ಮಹಾನ್ ಸುಧಾರಕ- ನಿರುದ್ಯೋಗಿಗಳು, ಅನಾಥರಿಗೆ ರಕ್ಷಕರಾಗಿರೋ ಬೆಳಗಾವಿಯ ಬಿಇಓ ಅಜಿತ್

    ಶಿಕ್ಷಣ ಕ್ಷೇತ್ರದ ಮಹಾನ್ ಸುಧಾರಕ- ನಿರುದ್ಯೋಗಿಗಳು, ಅನಾಥರಿಗೆ ರಕ್ಷಕರಾಗಿರೋ ಬೆಳಗಾವಿಯ ಬಿಇಓ ಅಜಿತ್

    ಬೆಳಗಾವಿ: ಇಂದಿನ ನಮ್ಮ ಪಬ್ಲಿಕ್ ಹೀರೋ ವೃತ್ತಿಯಲ್ಲಿ ಬಿಇಓ. ಆದರೆ ಪ್ರವೃತ್ತಿಯಲ್ಲಿ ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ. ಪ್ರತಿಭಾವಂತ ಅನಾಥ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಸದ್ದಿಲ್ಲದೆ ಸಹಾಯ ಮಾಡ್ತಿದ್ದಾರೆ.

    ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಮೂಡಲಗಿಯ ಬಿಇಓ ಅಜಿತ್ ಮನ್ನಿಕೇರಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರ ಪರಿಶ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಮೂಡಲಗಿ ವಲಯ ಹಲವಾರು ವಿಷಯಗಳಲ್ಲಿ ರಾಜ್ಯದಲ್ಲಿಯೇ ಹೆಸರಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ಸತತವಾಗಿ ಮೂರು ವರ್ಷ ಪ್ರಥಮ ಸ್ಥಾನದಲ್ಲಿದೆ. ಶಾಲಾ ಹೆಣ್ಣು ಮಕ್ಕಳಿಂದ ಅವರ ಅಪ್ಪಂದಿರಿಗೆ ಪತ್ರ ಬರೆಸಿ, ಪಾಲಕರೇ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರಣೆ ಮಾಡಿ ಯಶಸ್ಸು ಕಂಡಿದ್ದಾರೆ.

    ಪದವಿ ಪಡೆದ 368 ನಿರುದ್ಯೋಗಿಗಳನ್ನ ಗ್ರಾಮೀಣ ಭಾಗದಲ್ಲಿ ಶಿಕ್ಷಕರನ್ನಾಗಿ ನೇಮಿಸಿ ತಮ್ಮ ಸ್ವಂತ ದುಡ್ಡಿನಲ್ಲೇ ಗೌರವ ಧನ ನೀಡ್ತಿದ್ದಾರೆ. ಇದು ದೇಶದಲ್ಲಿಯೇ ಮಾದರಿ ಕೆಲಸ. ಇದರ ಜೊತೆ ಪ್ರತಿ ವರ್ಷ 60 ಪ್ರತಿಭಾವಂತ ಅನಾಥ ಮಕ್ಕಳನ್ನು ಗುರುತಿಸಿ ಅವರನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಇವರ ಸೇವೆ ನಿರಂತರವಾಗಿದೆ.

    ಜಾರಕಿಹೊಳಿ ಟ್ರಸ್ಟ್ ಸೇರಿದಂತೆ ವಿವಿಧ ಸಹೃದಯಿಗಳಿಂದ, ಶಾಸಕರು, ಸಂಸದರಿಂದ ಪಡೆದ ಸಹಾಯಧನವನ್ನು ಶಿಕ್ಷಕರಿಗೆ ವೇತನ ನೀಡಲು ಮನ್ನಿಕೇರಿ ಬಳಸುತ್ತಿದ್ದಾರೆ. ಸರಳ ಸಜ್ಜನಿಕೆಗೆ ಹೆಸರಾದ ಅಜಿತ್ ಮನ್ನಿಕೇರಿ ಎಂದರೆ ಈ ಭಾಗದ ಜನರಿಗೆ ಅಚ್ಚು ಮೆಚ್ಚು.

    https://www.youtube.com/watch?v=qqKtX6cbL38

  • ಬೆಳಗಾವಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ಇಂಡಿಕಾ- ಚಾಲಕ ಅಪಾಯದಿಂದ ಪಾರು

    ಬೆಳಗಾವಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ಇಂಡಿಕಾ- ಚಾಲಕ ಅಪಾಯದಿಂದ ಪಾರು

    ಬೆಳಗಾವಿ: ನಗರದ ಕೋಟೆ ಕೆರೆ ಬಳಿ ತಡರಾತ್ರಿ ಅಪಘಾತ ನಡೆದು ಇದ್ದಕ್ಕಿದ್ದಂತೆ ಇಂಡಿಕಾ ಕಾರು ಧಗಧಗನೇ ಹೊತ್ತಿ ಉರಿದಿರುವ ಘಟನೆ ನಡೆದಿದೆ.

    ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರೋದಕ್ಕೆ ಕಾರಣ ಏನು ಅನ್ನೋದರ ಬಗ್ಗೆ ಪೊಲೀಸರು ತನಿಖೆಯನ್ನು ಮಾಡ್ತಿದ್ದಾರೆ.

    ನಗರದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=GX66lDJfoa4&feature=youtu.be

  • ಶೂ ತೆಗೆದುಕೊಂಡು ಹೋಗೋದಕ್ಕೂ ಬೇಕು ಬಂಟರು- ಬೆಳಗಾವಿಯಲ್ಲಿ ಗೋವಾಕ್ಕೆ ನೀರು ಬಿಟ್ಟ ಅಧಿಕಾರಿಗಳ ದರ್ಪ

    ಶೂ ತೆಗೆದುಕೊಂಡು ಹೋಗೋದಕ್ಕೂ ಬೇಕು ಬಂಟರು- ಬೆಳಗಾವಿಯಲ್ಲಿ ಗೋವಾಕ್ಕೆ ನೀರು ಬಿಟ್ಟ ಅಧಿಕಾರಿಗಳ ದರ್ಪ

    ಬೆಳಗಾವಿ: ನೀರಾವರಿ ಅಧಿಕಾರಿಯೊಬ್ಬರು ದರ್ಪ ತೋರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಟೋಜಿ ರಾವ್ ಅವರು ತಮ್ಮ ಚಾಲಕನ ಕೈಯಲ್ಲಿ ಶೂ ತೆಗೆದುಕೊಂಡು ಹೋಗುವಂತೆ ಹೇಳೋ ಮೂಲಕ ದರ್ಪ ತೋರಿಸಿದ್ದಾರೆ.

    ಮಲಪ್ರಭೆ ನೀರು ಕಳಸಾಗೆ ಸೇರಿ ಗೋವಾ ಪಾಲಾಗುತ್ತಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ ಈ ದರ್ಪ ತೋರಿದ್ದಾರೆ. ಅಧಿಕಾರಿ ಭೇಟಿ ನೀಡುವ ಸ್ಥಳ ಕೆಸರಿನಿಂದ ತುಂಬಿತ್ತು. ಹೀಗಾಗಿ ಶೂ ಕಳಚಿದ ಅಧಿಕಾರಿ ಶೂ ಕಳಚಿ ತಮ್ಮ ಚಾಲಕ ಗಣಪತಿ ಮದ್ಲಿಗೆ ನೀಡಿದ್ದಾರೆ. ಆ ಬಳಿಕ ಚಾಲಕ ಅಧಿಕಾರಿಯ ಶೂ ಹಿಡಿದುಕೊಂಡು ಹೋಗಿದ್ದು, ಈ ಮೂಲಕ ಅಧಿಕಾರಿಯ ಶೂ ಸೇಫ್ ಆಗಿದೆ.

     

     

  • ಚಿಕಿತ್ಸೆಗೆಂದು ಆಸ್ಪತ್ರೆಗೆ ಕರ್ಕೊಂಡೋಗಿ ಗರ್ಭಪಾತ ಮಾಡ್ಸಿ ಪತಿ ಪರಾರಿ!

    ಚಿಕಿತ್ಸೆಗೆಂದು ಆಸ್ಪತ್ರೆಗೆ ಕರ್ಕೊಂಡೋಗಿ ಗರ್ಭಪಾತ ಮಾಡ್ಸಿ ಪತಿ ಪರಾರಿ!

    ಬೆಳಗಾವಿ: ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ಗಂಡ ಆಕೆಗೆ ಗೊತ್ತೇ ಇಲ್ಲದಂತೆ ಗರ್ಭಪಾತ ಮಾಡಿಸಿ ಓಡಿಹೋಗಿರೋ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಣಿಕೊಪ್ಪದ ಸಿದ್ದಪ್ಪ ಎರಗಣವಿಯೇ ಆ ಪಾಪಿ ಪತಿ. ಇದರಿಂದ ನೊಂದ ಪತ್ನಿ ವಾಣಿ ಬೆಳಗಾವಿ ಎಪಿಎಂಸಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಚಿಕಿತ್ಸೆ ಕೊಡಿಸೋದಾಗಿ ಹೇಳಿ ವಾಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಸಿದ್ದಪ್ಪ ಈ ಕೃತ್ಯ ಎಸಗಿದ್ದಾನೆ. ಕಾನೂನುಬಾಹಿರವಾಗಿ ಗರ್ಭಪಾತ ನಡೆಸಿರುವ ಬೆಳಗಾವಿಯ ಖಾಸಗಿ ಆಸ್ಪತ್ರೆ ಮತ್ತು ಗಂಡ ಸಿದ್ದಪ್ಪ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಸದ್ಯ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿರುವ ವಾಣಿ ಬೆಳಗಾವಿ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಪತ್ನಿಗಾದ ಸಮಸ್ಯೆ ಯಾರಿಗೂ ಆಗಬಾರದೆಂದು ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡ್ತಿರೋ ಬೆಳಗಾವಿಯ ಮಲ್ಲಯ್ಯ

    ಪತ್ನಿಗಾದ ಸಮಸ್ಯೆ ಯಾರಿಗೂ ಆಗಬಾರದೆಂದು ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡ್ತಿರೋ ಬೆಳಗಾವಿಯ ಮಲ್ಲಯ್ಯ

    -ದಿನದ 24 ಗಂಟೆಯೂ ಸಿಗ್ತಾರೆ ಜೀವರಕ್ಷಕ

    ಬೆಳಗಾವಿ: ಎಲ್ಲದರಲ್ಲೂ ಹಣ ಗಳಿಕೆಯನ್ನು ನೋಡೋ ಜನರೇ ಹೆಚ್ಚು. ಇಂತಹವರ ನಡುವೆ ತಮ್ಮ ಶಕ್ತಿಗೆ ಅನುಸಾರ ಸಮಾಜ ಸೇವೆ ಮಾಡೋವ್ರು ಇದ್ದಾರೆ. ಇವತ್ತಿನ ನಮ್ಮ ಪಬ್ಲಿಕ್ ಹೀರೋ ಗರ್ಭಿಣಿಯರಿಗೆ ಉಚಿತವಾಗಿ ಆಟೋಸೇವೆ ಒದಗಿಸ್ತಿದ್ದಾರೆ.

    ಬೆಳಗಾವಿಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ನಿವಾಸಿಯಾದ ಆಟೋ ಚಾಲಕ ಮಲ್ಲಯ್ಯ ಹಿರೇಮಠ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ತಮ್ಮ ಸ್ವಗ್ರಾಮ ಯಮಕನಮರಡಿ ಸೇರಿದಂತೆ ಸುತ್ತಮುತ್ತಲಿನ ಗರ್ಭಿಣಿಯರನ್ನ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯುತ್ತಾರೆ. ಹೆರಿಗೆ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ಕರೆದರೂ ಸಹ ಹಾಜರಾಗ್ತಾರೆ. ಆಸ್ಪತ್ರೆಗೆ ದಾಖಲಿಸಿ ವೈದ್ಯರಿಂದ ಮಾಹಿತಿ ಪಡೆದ ನಂತರವೇ ಅಲ್ಲಿಂದ ಹೊರಡುತ್ತಾರೆ. ಒಂದು ವೇಳೆ ದೊಡ್ಡ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದರೆ ಬೇರೆ ನಗರಕ್ಕೆ ಹೋಗಲು ಅಂಬ್ಯುಲೆನ್ಸ್ ಅಥವಾ ಬೇರೆ ವಾಹನ ಕಲ್ಪಿಸಿಕೊಡ್ತಾರೆ.

    ಹೀಗೆ 140ಕ್ಕೂ ಹೆಚ್ಚು ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ಒದಗಿಸಿರುವ ಹಿರೇಮಠ್ ಅವ್ರು ರಿಜಿಸ್ಟರ್ ಬುಕ್‍ನಲ್ಲಿ ಬರೆದಿಟ್ಟುಕೊಂಡಿದ್ದಾರೆ. ಯಾಕೆ ನೀವು ಉಚಿತ ಸೇವೆ ನೀಡ್ತಿದ್ದೀರಿ ಅಂದ್ರೆ ನನ್ನ ಪತ್ನಿಗಾದ ಸಮಸ್ಯೆ ಯಾರಿಗೂ ಆಗಬಾರದು ಎಂದು ಹೇಳ್ತಾರೆ.

    ತಮ್ಮ ಇಂತಹ ನಿಸ್ವಾರ್ಥ ಸೇವೆಯಿಂದ ಗ್ರಾಮೀಣ ಪ್ರದೇಶದಲ್ಲಿ ಮಲ್ಲಯ ಹಿರೇಮಠ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    https://www.youtube.com/watch?v=9nYoG0_M4e0

     

  • ವಿಡಿಯೋ: ನಡುರಸ್ತೆಯಲ್ಲೇ ಮಹಿಳೆಗೆ 10ಕ್ಕೂ ಹೆಚ್ಚು ಮಂದಿಯಿಂದ ಥಳಿತ!

    ವಿಡಿಯೋ: ನಡುರಸ್ತೆಯಲ್ಲೇ ಮಹಿಳೆಗೆ 10ಕ್ಕೂ ಹೆಚ್ಚು ಮಂದಿಯಿಂದ ಥಳಿತ!

    – ಥಳಿತದಿಂದ ಕುಸಿದ ಮಹಿಳೆಯ ಕೂದಲನ್ನೇ ಹಿಡಿದು ಎಳೆದಾಡಿದ್ರು

    ಬೆಳಗಾವಿ: ಆಸ್ತಿ ವಿಚಾರವಾಗಿ ಮಹಿಳೆಯ ಮೇಲೆ ಸಂಬಂಧಿಕರು ಚಿಕ್ಕೋಡಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಮಾರಾಮಾರಿ ನಡೆಸಿದ ಘಟನೆ ಇಂದು ನಡೆದಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರ ಮಂಗಳ ನಾಯಕ್ ಎಂಬವರೇ ಸಂಬಂಧಿಕರಿಂದ ಥಳಿತಕ್ಕೊಳಕ್ಕಾದ ಮಹಿಳೆ.

    ಏನಿದು ಪ್ರಕರಣ?: ಮಂಗಳ ನಾಯಕ್ ತಮ್ಮ ಅಕ್ಕನ ಮಗ ಭರತ್ ಜೊತೆ ಚಿಕ್ಕೋಡಿ ಪಟ್ಟಣದ ತಹಶೀಲ್ದಾರ್ ಕೋರ್ಟ್ ನಲ್ಲಿ ಪ್ರಕರಣವೊಂದರ ವಿಚಾರಣೆಗೆ ಬಂದಿದ್ದು, ವಾಪಾಸ್ಸು ಮನೆಗೆ ಹೋಗುತ್ತಿದ್ದರು. ಈ ವೇಳೆ 10ಕ್ಕೂ ಹೆಚ್ಚು ಜನರ ತಂಡದಿಂದ ಮಂಗಳ ಮತ್ತು ಭರತ ಮೇಲೆ ಚಿಕ್ಕೋಡಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಹಲ್ಲೆ ನಡೆದಿದೆ. ಅಲ್ಲದೇ ಸಂಬಂಧಿಕರು ಮಂಗಳ ನಾಯಕ ಅವರ ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ಬಳಿಕ ಚಪ್ಪಲಿಯಿಂದ ಹೊಡೆದಾಡಿದ್ದಾರೆ.

    ಮಾಹಿತಿ ಪಡೆದ ಪೊಲಿಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆಯೇ ಹಲ್ಲೆ ಮಾಡಿದ ತಂಡ ಸ್ಥಳದಿಂದ ಕಾಲ್ಕಿತ್ತಿದೆ. ಹಲ್ಲೆ ನಡೆಸಿದವರು ಕೂಡ ನಿಪ್ಪಾಣಿ ನಗರದವರು ಎಂದು ಹೇಳಲಾಗುತ್ತಿದೆ. ಹೊಡೆದಾಟದ ವೇಳೆ ಮೂರ್ಛೆ ಹೋಗಿದ್ದ ಮಂಗಳಗೆ ಸ್ಥಳೀಯರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=vJSPrfa-Lyk

  • ಮೊದಲು ಮಗುವಿಗೆ, ಈಗ ತಾಯಿಯ ಮೈ ಮೇಲೆ ಬ್ಲೇಡ್‍ನಿಂದ ಕುಯ್ದಂತೆ ಗುರುತು

    ಮೊದಲು ಮಗುವಿಗೆ, ಈಗ ತಾಯಿಯ ಮೈ ಮೇಲೆ ಬ್ಲೇಡ್‍ನಿಂದ ಕುಯ್ದಂತೆ ಗುರುತು

    ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಕೋಟೂರು ಗ್ರಾಮದ ಪೂಜೇರಿ ಕುಟುಂಬಸ್ಥರು ಭಾನಾಮತಿಯಿಂದ ನೊಂದು ಹೋಗಿದ್ದೇವೆ ಅಂತಿದ್ದಾರೆ.

    ಪೂಜೇರಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಭಾನಾಮತಿ ಕಾಟಕ್ಕೆ ತುತ್ತಾಗಿದ್ದು, ಇತ್ತೀಚಿಗೆ ಭಾನಾಮತಿ ಕಾಟ ಹೆಚ್ಚಾಗಿದೆ ಎನ್ನುತ್ತಿದ್ದಾರೆ. ಮೊದಲು ಭಾರತಿ ಪೂಜೇರಿ ಅವರ ಕಣ್ಣಲ್ಲಿ ಖಾರದ ಪುಡಿ ಬಿದ್ದ ಅನುಭವ ಆಗ್ತಿತ್ತು. ಬಳಿಕ ಮೂರು ತಿಂಗಳ ಮಗುವಿನ ಮೈಮೇಲೆ ಬ್ಲೇಡ್‍ನಿಂದ ಕೊಯ್ದಂತಾಗಿ ರಕ್ತ ಬರುತ್ತಿತ್ತು. ಇದೀಗ ಮತ್ತೆ ಭಾರತಿ ಮೈ ಮೇಲೆಲ್ಲಾ ಬ್ಲೇಡ್‍ನಿಂದ ಕುಯ್ದ ಗುರುತುಗಳಾಗ್ತಿವೆ.

    ಈ ವಿಚಾರವಾಗಿ ತಾಯಿ ಮತ್ತು ಮಗುವನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ, ಎಕ್ಸರೇ, ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಟೆಸ್ಟ್ ಮಾಡಿಸಿದ್ದಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ದೇವರು, ಪೂಜೆ- ಪುನಸ್ಕಾರ, ಹೋಮ-ಹವನ ಅಂತಾ ಏನೇ ಮಾಡಿದ್ರೂ ಪ್ರಯೋಜನವಾಗಿಲ್ಲ. ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

    ಭಾನಾಮತಿ ಅನ್ನೋದು ಅಸಲಿಗೆ ಇಲ್ಲವೇ ಇಲ್ಲ. ಅದೊಂದು ಮಾನಸಿಕ ಕಾಯಿಲೆ, ಕೌನ್ಸೆಲಿಂಗ್ ಮಾಡುವ ಮೂಲಕ ಸರಿಮಾಡಬೇಕು ಎಂದು ನುರಿತ ತಜ್ಞರು ಹೇಳುತ್ತಾರೆ.

    ಇದನ್ನೂ ಓದಿ: ಅಚ್ಚರಿ: 2 ವರ್ಷದ ಮಗುವಿನ ದೇಹದಲ್ಲಿ ಬ್ಲೇಡ್ ನಿಂದ ಕೊಯ್ದಂತೆ ಹೊರಬರುತ್ತಿದೆ ರಕ್ತ!

  • ಬೆಳಗಾವಿಯಲ್ಲಿ ಇನೋವಾ ಕಾರು ಪಲ್ಟಿ: ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ

    ಬೆಳಗಾವಿಯಲ್ಲಿ ಇನೋವಾ ಕಾರು ಪಲ್ಟಿ: ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ

    ಬೆಳಗಾವಿ: ತಾಲೂಕಿನ ವಂಟಮೂರಿ ಗ್ರಾಮದ ಬಳಿ ಗುರುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇನೋವಾ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

    ತಾಲೂಕಿನ ವಂಟಮೂರಿ ಘಾಟ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ದುರ್ಘಟನೆ ಸಂಭವಿಸಿದ್ದು. ಇಜಾಜ್ ಪಠಾಣ, ವಿನಾಯಕ ಪಿರಾಜೆ, ವಿಶ್ವನಾಥ, ಸುಶಾಂತ ಮಾನೆ ಮೃತ ದುರ್ದೈವಿಗಳು.

    ಘಟನೆಯಲ್ಲಿ ಓಂಕಾರ ಜಮಖಂಡಿ ಹಾಗೂ ವಿಶ್ವನಾಥ ಗಂಭೀರವಾಗಿ ಗಾಯಗೊಂಡಿದ್ದು ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಎಲ್ಲರೂ ಮೂಲತಃ ಚಿಕ್ಕೋಡಿ ನಿವಾಸಿಗಳೆಂದು ಗುರುತಿಸಲಾಗಿದ್ದು, ಚಿಕ್ಕೋಡಿಯ ಕೆಎಲ್‍ಇ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.

    ಅಂಬೋಲಿಯಿಂದ ಚಿಕ್ಕೋಡಿಗೆ ಹೊರಟ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಘಟನೆಯಿಂದ ಕಾರು ಸಂಪೂರ್ಣ ನಜ್ಜುಗಯಜ್ಜಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಸಿಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಶೀಲನೆ ನಡೆಸಿದರು.

  • ಲಾರಿ ಪಲ್ಟಿ- ರಂಜಾನ್‍ಗಾಗಿ ಕೊಂಡೊಯ್ಯುತ್ತಿದ್ದ ಕುರಿಗಳಲ್ಲಿ 40ಕ್ಕೂ ಹೆಚ್ಚು ಸಾವು, 30ರ ಸ್ಥಿತಿ ಗಂಭೀರ

    ಲಾರಿ ಪಲ್ಟಿ- ರಂಜಾನ್‍ಗಾಗಿ ಕೊಂಡೊಯ್ಯುತ್ತಿದ್ದ ಕುರಿಗಳಲ್ಲಿ 40ಕ್ಕೂ ಹೆಚ್ಚು ಸಾವು, 30ರ ಸ್ಥಿತಿ ಗಂಭೀರ

    ಬೆಳಗಾವಿ: ಇಂದು ನಾಡಿನಾದ್ಯಂತ ರಂಜಾನ್ ಹಬ್ಬದ ಸಂಭ್ರಮ. ಹೀಗಾಗಿ ಹಬ್ಬಕ್ಕಾಗಿ ಕುರಿ ಹಾಗೂ ಮೇಕೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಪಲ್ಟಿಯಾದ ಘಟನೆ ಬೆಳಗಾವಿಯ ಇಟಗಿ ಕ್ರಾಸ್ ಬಳಿ ನಡೆದಿದೆ.

    ಇಂದು ಬೆಳಗ್ಗಿನ ಜಾವ ಮಳೆ ಸುರಿಯುತ್ತಿದ್ದರಿಂದ ಚಾಲಕ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಘಟನೆಯಿಂದ 40 ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿವೆ. 30 ಕುರಿಗಳ ಸ್ಥಿತಿ ಗಂಭೀರವಾಗಿದೆ. ಇನ್ನು ಲಾರಿ ಪಲ್ಟಿಯಾಗುತ್ತಿದ್ದಂತೆ ಕೆಲವು ಸ್ಥಳೀಯರು ಕುರಿಗಳನ್ನ ಕದ್ದೊಯ್ದಿದ್ದಾರೆ ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ.

    ಘಟನೆ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.