Tag: belagavi

  • ಗಾಯಗೊಂಡಿದ್ದ ಕೋತಿಗೆ ಆರೈಕೆ ಮಾಡಿ ಮಾನವೀಯತೆ ಮೆರೆದ ಕರವೇ ಕಾರ್ಯಕರ್ತರು

    ಗಾಯಗೊಂಡಿದ್ದ ಕೋತಿಗೆ ಆರೈಕೆ ಮಾಡಿ ಮಾನವೀಯತೆ ಮೆರೆದ ಕರವೇ ಕಾರ್ಯಕರ್ತರು

    ಬೆಳಗಾವಿ: ಗಾಯಗೊಂಡು ನರಳುತ್ತಿದ್ದ ಕೋತಿಗೆ ಚಿಕಿತ್ಸೆ ಕೊಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ.

    ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಕೋತಿಯೊಂದು ಗಾಯಗೊಂಡು ನರಳಾಡುತ್ತಿತ್ತು. ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆರೈಕೆ ಮಾಡಿದ್ದಾರೆ.

    ಕೋತಿ ನರಳುತ್ತಿದ್ದ ಸ್ಥಳಕ್ಕೆ ಪಶುವೈದ್ಯರನ್ನು ಕರೆಸಿದ ಕಾರ್ಯಕರ್ತರು ಅದಕ್ಕೆ ಚಿಕಿತ್ಸೆ ಕೊಡಿಸಿ ಬಳಿಕ ಎಳನೀರು ಕುಡಿಸಿದ್ದಾರೆ. ಒಟ್ಟಿನಲ್ಲಿ ಮಾನವೀಯತೆ ಮೆರೆದ ಕಾರ್ಯಕರ್ತರ ಬಗ್ಗೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

     

     

  • ಸ್ನೇಹಿತರಿಂದ್ಲೇ ಕಾಲ್‍ಸೆಂಟರ್ ಯುವತಿಯ ರೇಪ್&ಮರ್ಡರ್- ಸೂಟ್‍ ಕೇಸ್‍ನಲ್ಲಿ ಶವ ಪತ್ತೆ

    ಸ್ನೇಹಿತರಿಂದ್ಲೇ ಕಾಲ್‍ಸೆಂಟರ್ ಯುವತಿಯ ರೇಪ್&ಮರ್ಡರ್- ಸೂಟ್‍ ಕೇಸ್‍ನಲ್ಲಿ ಶವ ಪತ್ತೆ

    ಬೆಳಗಾವಿ: ನಗರದ ಭೂತರಾಮನಹಟ್ಟಿ ಬಳಿಯ ಮ್ಯಾನ್‍ಹೋಲ್‍ನಲ್ಲಿ ಕಾಲ್‍ಸೆಂಟರ್ ಯುವತಿ ಶವವೊಂದು ಸೂಟ್‍ಕೇಸ್‍ನಲ್ಲಿ ಪತ್ತೆಯಾಗಿದೆ.

    ಮುಂಬೈ ಮೂಲದ 23 ವರ್ಷದ ಅಂಕಿತಾ ಕನೋಜಿಯಾ ಕೊಲೆಯಾದ ಯುವತಿ. ಅಂಕಿತಾ ಮೂಲತಃ ಮಾಹಾರಾಷ್ಟ್ರದ ನಾಗಪುರ ನಗರದವರಾಗಿದ್ದು, ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಗಳು. ಮುಂಬೈನಲ್ಲಿ ಸೆಪ್ಟೆಂಬರ್ 4 ರಂದು ತನ್ನಿಬ್ಬರು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಇದೇ ವೇಳೆ ಸ್ನೇಹಿತರ ಮಧ್ಯೆ ಜಗಳ ನಡೆದು ಇಬ್ಬರು ಸ್ನೇಹಿತರು ಸೇರಿ ಅಂಕಿತಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.

    ನಂತರ ಸ್ನೇಹಿತರು ಸೂಟ್ ಕೇಸ್‍ವೊಂದರಲ್ಲಿ ಶವವನ್ನು ತುಂಬಿಕೊಂಡು ಮುಂಬೈನಿಂದ ಗೋವಾ ಮಾರ್ಗವಾಗಿ ಪ್ರಯಾಣ ಆರಂಭಿಸಿದ್ದಾರೆ. ಬೆಳಗಾವಿಯ ಬಳಿಯ ಭೂತರಾಮನಟ್ಟಿ ಬಳಿ ಬರುವ ವೇಳೆಗೆ ಕಾರು ಚಾಲಕನಿಗೆ ನಿದ್ರೆ ಆವರಿಸಿದೆ. ಆತ ಮಲಗಿದ್ದನ್ನು ಗಮಿಸಿದ ಇಬ್ಬರು ಆರೋಪಿಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದ ಮ್ಯಾನ್ ಹೋಲ್‍ಗೆ ಅಂಕಿತಾ ಶವ ತುಂಬಿದ್ದ ಸೂಟ್ ಕೇಸ್ ಬಿಸಾಡಿದ್ದಾರೆ

     

    ಶವ ಬಿಸಾಡಿದ ನಂತರ ಗೋವಾಕ್ಕೆ ತೆರಳಿದ್ದು ಅಲ್ಲಿ ಸೂಟ್ ಕೇಸ್ ಇಲ್ಲದೇ ಇರೋದು ಗಮನಿಸಿದ ಕಾರು ಚಾಲಕ ಈ ಬಗ್ಗೆ ಪ್ರಯಾಣಿಕರನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಈ ಭೀಕರ ಅತ್ಯಾಚಾರ, ಕೊಲೆ ಪ್ರಕರಣ ಬಹಿರಂಗವಾಗಿದೆ. ನಂತರ ಕಾರು ಚಾಲಕ ಇಬ್ಬರಿಗೆ ಪೊಲೀಸರ ಮುಂದೆ ಶರಣಾಗುವಂತೆ ಹೇಳಿದ್ದು, ಆರೋಪಿಗಳು ಮುಂಬೈನ ಥಾಣೆ ಪೊಲೀಸರ ಮುಂದೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬೆಳಗಾವಿಯ ಕಾಕತಿ ಪೊಲೀಸರಿಗೆ ಮಾಹಿತಿ ನೀಡಿ ಸೂಟ್ ಕೇಸ್ ಇರುವ ಬಗ್ಗೆ ಥಾಣೆ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಸೂಟ್ ಕೇಸ್ ನಿಂದ ತೀವ್ರ ರಕ್ತ ಹೊರಗೆ ಬಂದಿದ್ದು, ದುರ್ವಾಸನೆ ಬೀರುತ್ತಿತ್ತು. ಅಂಕಿತಾ ತಂದೆ ಹಾಗೂ ಕುಟುಂಬಸ್ಥರು ಶವ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬುಧವಾರ ತಡರಾತ್ರಿ ಮುಂಬೈನ ಥಾಣೆ ಪೋಲಿಸರು ಆರೋಪಿಗಳಾದ ಅಕ್ಷಯ ತಾಳುದೆ ಮತ್ತು ಅಲ್ಕೇಶ್ ಪಾಟೀಲ್‍ನನ್ನ ಮುಂಬೈನಿಂದ ಬೆಳಗಾವಿಗೆ ಕರೆತಂದಿದ್ದಾರೆ.

    ಪೊಲೀಸರು ಕೊಲೆ ಮಾಡಿ ಎಸೆದ ಸ್ಥಳ ಪರಿಶೀಲನೆ ನಡೆಸಿದ್ದು, ಸೂಟ್ ಕೇಸ್ ನಲ್ಲಿ ತುಂಬಿ ಮ್ಯಾನ ಹೋಲ್ ಗೆ ಎಸೆದಿದ್ದ ಅಂಕಿತ ಮೃತ ದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

     

  • 9ನೇ ತರಗತಿ ವಿದ್ಯಾರ್ಥಿನಿಯೊಂದಿಗೆ 25ರ ಯುವಕನ ಕಾಮಚೇಷ್ಟೆಯ ವಿಡಿಯೋ ವೈರಲ್

    9ನೇ ತರಗತಿ ವಿದ್ಯಾರ್ಥಿನಿಯೊಂದಿಗೆ 25ರ ಯುವಕನ ಕಾಮಚೇಷ್ಟೆಯ ವಿಡಿಯೋ ವೈರಲ್

    ಬೆಳಗಾವಿ: 9ನೇ ತರಗತಿ ಬಾಲಕಿಯನ್ನ ಪುಸಲಾಯಿಸಿ ಯುವಕನೊಬ್ಬ ಕಾಮಚೇಷ್ಟೆ ತೀರಿಸಿಕೊಂಡ ಮೊಬೈಲ್ ವಿಡಿಯೋ ಒಂದು ವೈರಲ್ ಆಗಿದೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ 25 ವರ್ಷದ ಯುವಕ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ತಿರೋದನ್ನು ತಾನೇ ವಿಡಿಯೋ ಮಾಡಿಕೊಂಡಿದ್ದಾನೆ. ಮಗಳ ವಿಡಿಯೋ ಬಗ್ಗೆ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿರೋ ಬಾಲಕಿಯ ತಾಯಿ ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ ಯುವಕ ಯುವತಿ ಸರಸ ಸಲ್ಲಾಪ-ಮಂಗ್ಳೂರಲ್ಲಿ ವೈರಲಾಯ್ತು ರಾಸಲೀಲೆ ವಿಡಿಯೋ

    ಅಸಲಿಗೆ ಈ ಘಟನೆ ಎರಡು ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಮೊಬೈಲ್ ರಿಪೇರಿಗೆ ಕೊಟ್ಟಿದ್ದಾಗ ಮೊಬೈಲ್ ಅಂಗಡಿ ಮಾಲೀಕ ವಿಡಿಯೋವನ್ನು ವಾಟ್ಸಾಪ್‍ನಲ್ಲಿ ಹರಿಬಿಟ್ಟು ವೈರಲ್ ಮಾಡಿರೋದು ಗೊತ್ತಾಗಿದೆ.

    ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಮೊಬೈಲ್ ಅಂಗಡಿ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ: ಎಂಗೇಜ್‍ಮೆಂಟ್ ಆದ್ರೂ ತನ್ನ ಜೊತೆ ಎಂಗೇಜ್ ಆಗೆಂದ ಹುಡ್ಗ-ಮುಂದೆ ಏನ್ ಮಾಡ್ದಾ ಗೊತ್ತಾ?

    https://youtu.be/D5gLc8sSen8

  • ಇನ್ನೂ 6 ತಿಂಗಳು ಮಾತ್ರ, ಆಮೇಲೆ ನೋಡ್ಕೊಳ್ತೀನಿ: ಪೊಲೀಸ್ರಿಗೆ ಶಾಸಕ ಸಂಜಯ್ ಪಾಟೀಲ್ ಅವಾಜ್

    ಇನ್ನೂ 6 ತಿಂಗಳು ಮಾತ್ರ, ಆಮೇಲೆ ನೋಡ್ಕೊಳ್ತೀನಿ: ಪೊಲೀಸ್ರಿಗೆ ಶಾಸಕ ಸಂಜಯ್ ಪಾಟೀಲ್ ಅವಾಜ್

    ಬೆಳಗಾವಿ: ಇಂದು ನಗರದಲ್ಲಿ ಬಿಜೆಪಿಯಿಂದ ಮಂಗಳೂರು ಚಲೋ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ತಡೆಯಲು ಮುಂದಾದ ಪೊಲೀಸರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್, ಇನ್ನೂ ಕೇವಲ ಆರು ತಿಂಗಳು ಮಾತ್ರ ಮುಂದಿನ ದಿನಗಳಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬಹಿರಂಗವಾಗಿ ಅವಾಜ್ ಹಾಕಿದ್ದಾರೆ.

    ಪೊಲೀಸರು ಸಮಾಧಾನ ಮಾಡಲು ಪ್ರಯತ್ನಿಸಿದಾಗ ಸುಮ್ಮನಾಗದ ಶಾಸಕರು ನಮ್ಮನ್ನೇಕೆ ಬಂಧಿಸುತ್ತಿದ್ದೀರಿ, ನಾವೇನು ಪ್ರತಿಭಟನೆ ಮಾಡುತ್ತಿಲ್ಲ. ಬೈಕ್ ರ‍್ಯಾಲಿಗಾಗಿ ಒಂದೆಡೆ ಸೇರಿದ್ದೇವೆ. ನಾವು ಪ್ರತಿಭಟನೆ ಮಾಡಿದ್ದನ್ನು ನೀವು ನೋಡಿದ್ದೇವೆ. ನಮ್ಮ ಮೈ ಮುಟ್ಟುವಂತಿಲ್ಲ. ನಾವು ನಿಜ ಹೇಳುವವರು ಒಂದೇ ತಂದೆ-ತಾಯಿಗೆ ಹುಟ್ಟಿದವರು. ಸುಮ್ಮನೆ ನಮ್ಮಲೇ ಆರೋಪ ಮಾಡಬೇಡಿ ಎಂದು ಎಸಿಪಿ ಜಯಕುಮಾರ್ ಅವರ ವಿರುದ್ಧ ಕೋಪಗೊಂಡರು.

    ಇದನ್ನೂ ಓದಿ: ಪಕ್ಷದವ್ರಿಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಅಧಿಕಾರಕ್ಕೆ ಬಂದ್ಮೇಲೆ ಜಾಗ ತೋರಿಸ್ತೀವಿ- ಪೊಲೀಸರಿಗೆ ಬಿಎಸ್‍ವೈ ಧಮ್ಕಿ

    ಬೆಳಗಾವಿಯಲ್ಲಿ ಇಂದು ರ‍್ಯಾಲಿಗೆ ನಿರ್ಬಂಧ ಹೇರಲಾಗಿತ್ತು. ಆದರೂ ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ನಗರ ಪ್ರವೇಶಕ್ಕೆ ಪ್ರಯತ್ನಿಸಿದ್ರು. ಹೀಗಾಗಿ ಎಸಿಪಿ ಜಯಕುಮಾರ್ ಅವರು ಚನ್ನಮ್ಮ ವೃತ್ತದಲ್ಲಿಯೇ ಬಿಜೆಪಿ ಕಾರ್ಯಕರ್ತರನ್ನು ತೆಡೆದಿದ್ದರು. ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಬದಲಾಗುತ್ತಿದ್ದಂತೆ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದುಕೊಂಡರು.

    https://youtu.be/nPG6S4OrTz8

  • ಬೊಲೆರೋ, ಬೈಕ್‍ಗಳ ನಡುವೆ ಸರಣಿ ಅಪಘಾತ- ಓರ್ವ ಸಾವು

    ಬೊಲೆರೋ, ಬೈಕ್‍ಗಳ ನಡುವೆ ಸರಣಿ ಅಪಘಾತ- ಓರ್ವ ಸಾವು

    ಬೆಳಗಾವಿ: ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ 2 ಬೈಕ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಚಿಕ್ಕೋಡಿ ತಾಲೂಕಿನ ಕೇರೂರ ಕ್ರಾಸ್ ಬಳಿ ನಡೆದಿದೆ.

    ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ. ವಿಜಯಪುರದಿಂದ ಸಂಕೇಶ್ವರ ಪಟ್ಟಣಕ್ಕೆ ಬುಲೆಟ್‍ನಲ್ಲಿ ಬರುತ್ತಿದ್ದ ಸಂಕೇಶ್ವರ ಪಟ್ಟಣದ ನಿವಾಸಿ ಕಿಶೋರ ಕುಮಾರ ಶಹಾ(38) ಮೃತ ವ್ಯಕ್ತಿ. ಮಹಾರಾಷ್ಟ್ರ ಮೂಲದ ಬಾರಸಿದ ಮಹಾನಂದಾ ಜಗದಾಳೆ(40), ದಶರಥ ಜಗದಾಳೆ(52), ಅಂಕಲಿ ಗ್ರಾಮದ ನವೀನ ಕರಾಡಕರ(29) ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

    ಅಥಣಿ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ 2 ಬೈಕ್‍ಗಳ ಮೇಲೆ ಬಂದ ಪರಿಣಾಮ ಬೈಕ್‍ಗಳ ನಡುವೆ ಅಪಘಾತ ಸಂಭವಿಸಿದೆ. ನಂತರ ಬೊಲೆರೋ ವಾಹನ ಪಲ್ಟಿಯಾಗಿದೆ.

    ಬೊಲೆರೋ ವಾಹನದ ಚಾಲಕ ಹಾಗೂ ಇನ್ನೊಂದು ಬೈಕ್ ಮೇಲೆ ಇದ್ದ ಬೈಕ್ ಸವಾರರಿಗೆ ಗಂಭೀರ ಗಾಯವಾಗಿದ್ದು, ಬುಲೆಟ್ ವಾಹನ ಸವಾರ ಸಾವನ್ನಪ್ಪಿದ್ದಾರೆ. ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ – ಚಿಕ್ಕೋಡಿಯಲ್ಲಿ ಮೂವರು ಸ್ಥಳದಲ್ಲೇ ಸಾವು

    ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ – ಚಿಕ್ಕೋಡಿಯಲ್ಲಿ ಮೂವರು ಸ್ಥಳದಲ್ಲೇ ಸಾವು

    ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಕ್ಕದಲ್ಲಿ ಅಳವಡಿಸಿದ್ದ ರಸ್ತೆ ಫಲಕಕ್ಕೆ ಆಲ್ಟೋ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಟ್ಟಿದ್ದಾರೆ.

    ಈ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ರ ಹಿಟ್ನಿ ಕ್ರಾಸ್ ಬಳಿ ನಡೆದಿದೆ. ಮೃತರು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಮೂಲದವರು ಎಂದು ತಿಳಿದು ಬಂದಿದೆ.

    ಮೃತರು ವಕೀಲ ವೃತ್ತಿ ಮಾಡುತ್ತಿರಬಹುದೆಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಗುರುತು ಪತ್ತೆ ಮಾಡಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸ್ಥಳಕ್ಕೆ ಸಂಕೇಶ್ವರ ಹಾಗೂ ನಿಪ್ಪಾಣಿ ನಗರ ಪೊಲೀಸರು ಭೇಟಿ ನೀಡಿ ಶವಗಳನ್ನು ಹೊರತೆಗೆಯುವ ಕಾರ್ಯವನ್ನು ನಡೆಸಿದ್ದಾರೆ.

    ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

  • ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್‍ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಗೈದ!

    ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್‍ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಗೈದ!

    ಬೆಳಗಾವಿ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದ ಘಟನೆಯೊಂದು ಬೆಳಕಿಗೆ ಬಂದಿದೆ.

    20 ವರ್ಷದ ಕಾವೇರಿ ವಾಲಿ ಎಂಬ ಮಹಿಳೆಯ ಮೇಲೆ ಪತಿ ಅರ್ಜುನ ಬಾಗರಾಯ್ ಈ ಕೃತ್ಯ ಎಸಗಿದ್ದಾನೆ. ಈತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಲೋಕಾಯುಕ್ತ ಕಚೇರಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.

    ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ದಂಪತಿ ನೆಲೆಸಿದ್ದರು. ಪ್ರತಿ ನಿತ್ಯವೂ ಮದ್ಯದ ಅಮಲಿನಲ್ಲಿ ಬಂದು ಪತಿ ತನ್ನ ವಿಕೃತಿ ಮೆರೆಯುತ್ತಾನೆ ಎನ್ನಲಾಗಿದೆ. ಪತ್ನಿಯ ತಲೆ ಕೂದಲು ಕತ್ತರಿಸಿ, ಸಿಗರೇಟ್ ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಮಾಡಿ ಚಿತ್ರಹಿಂಸೆ ನೀಡಿದ್ದಾನೆ. ಅಲ್ಲದೇ ವರದಕ್ಷಿಣೆ ತರುವಂತೆ ನಿತ್ಯವೂ ಹಿಂಸೆ ನೀಡುತ್ತಿದ್ದಾನೆಂದು ಪತ್ನಿ ಕಾವೇರಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಸದ್ಯ ಪತಿಯ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಬೆಳಗಾವಿಯ ಈ ಪಾರ್ಕ್ ಗೆ ಪ್ರೇಮಿಗಳಿಗೆ ನೋ ಎಂಟ್ರಿ!

    ಬೆಳಗಾವಿಯ ಈ ಪಾರ್ಕ್ ಗೆ ಪ್ರೇಮಿಗಳಿಗೆ ನೋ ಎಂಟ್ರಿ!

    ಬೆಳಗಾವಿ: ಉದ್ಯಾನವನ ಅಂದ್ಮೇಲೆ ಅಲ್ಲಿ ಪ್ರೇಮಿಗಳು ಇದ್ದೇ ಇರ್ತಾರೆ. ಪ್ರೇಮಿಗಳು ಸಾಮಾನ್ಯವಾಗಿ ಪಾರ್ಕ್‍ಗಳಿಗೆ ಹೋಗ್ತಾರೆ. ಆದ್ರೆ ಗಡಿನಾಡಿನ ಪಾರ್ಕ್‍ನಲ್ಲಿ ಇಂಥಹ ಪ್ರೇಮಿಗಳ ಪ್ರವೇಶವನ್ನ ಬ್ಯಾನ್ ಮಾಡಲಾಗಿದೆ. ಜೊತೆಯಾಗಿ ಹೋದರೆ ಪ್ರೇಮಿಗಳಿಗೆ ಇಲ್ಲಿ ನೋ ಎಂಟ್ರಿ.

    ಬೆಳಗಾವಿಯ ಪ್ರಸಿದ್ಧ ಕೋಟೆ ಕೆರೆ ಉದ್ಯಾನವನದಲ್ಲಿ ಪ್ರೇಮಿಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಹೀಗೆ ಪಾರ್ಕ್‍ನಲ್ಲಿ ಪ್ರೇಮಿಗಳಿಗೆ ಬ್ಯಾನ್ ಮಾಡೋಕೆ ಅವರ ಉಪಟಳವೇ ಕಾರಣವಂತೆ.

    ಕಾಲೇಜುಗಳಿಗೆ ಚಕ್ಕರ್ ಹಾಕಿ ಪಾರ್ಕ್‍ನಲ್ಲಿ ದಿನ ಕಳೆಯುವ ಹದಿಹರೆಯದ ಯುವಕ ಯುವತಿಯರಿಂದ ಸಾರ್ವಜನಿಕರು ಮುಜುಗರ ಪಡುತ್ತಿದ್ದರು. ಅಲ್ಲದೇ ಕಿರಿಕಿರಿ ಅನುಭವಿಸ್ತಿದ್ರು. ಹೀಗಾಗಿ ಹುಡುಗ-ಹುಡುಗಿ ಜತೆಯಾಗಿ ಪಾರ್ಕ್‍ಗೆ ಬಂದ್ರೆ ಗೇಟ್‍ನಲ್ಲಿ ನೋ ಎಂಟ್ರಿ. ಇದ್ರಿಂದ ಸಂಸಾರ ಸಮೇತ ಬರುವವರಿಗೆ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ ಅಂತ ವಾಯುವಿಹಾರಿಗಳು ಹೇಳುತ್ತಾರೆ.

    ಈ ಪಾರ್ಕ್‍ನಲ್ಲಿ ಪುಂಡರ ಹಾವಳಿಯೂ ಹೆಚ್ಚಾಗಿತ್ತು. ಪ್ರೇಮಿಗಳನ್ನ ಸುಲಿಗೆ ಮಾಡೋಕೆ ಅಂತಾನೇ ಪುಂಡರು ಗ್ಯಾಂಗ್ ಕಟ್ಟಿಕೊಂಡು ಬರ್ತಿದ್ರು. ಜೊತೆಗೆ ಕೋಟೆ ಕೆರೆಯಲ್ಲಿ ಮಾದಕ ವಸ್ತಗಳನ್ನ ಮಾರ್ತಿದ್ರು. ಹೀಗಾಗಿ ಪ್ರೇಮಿಗಳು ಹಾಗೂ ಸಾರ್ವಜನಿಕರಿಗೂ ತೊಂದರೆಯಾಗಬಾರದೆಂದು ನಿಷೇಧ ಹೇರಿರೋದಾಗಿ ಪಾರ್ಕ್ ನಿರ್ವಹಣಾಧಿಕಾರಿ ಹೇಳಿದ್ದಾರೆ.

    ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಪಾರ್ಕ್‍ಗೆ ಹುಡುಗ ಹುಡುಗಿ ಜೊತೆಯಾಗಿ ಹೋಗುವಂತಿಲ್ಲ. ಇದ್ರಿಂದ ಕಾಲೇಜ್ ಬಂಕ್ ಮಾಡೋದು ತಪ್ಪುತ್ತೆ ಅಂತಿದ್ದಾರೆ. ಒಟ್ಟಿನಲ್ಲಿ ಪಾರ್ಕ್‍ನಲ್ಲಿ ಪ್ರೇಮಿಗಳಿಗೆ ನಿಷೇಧ ಮಾಡಿದ್ದಕ್ಕೆ ಸಾರ್ವಜನಿಕರೇನೋ ಖುಷಿಯಾಗಿದ್ದಾರೆ. ಆದ್ರೆ ಹದಿಹರೆಯದ ಪ್ರೇಮಿಗಳ ಕಣ್ಣು ಮಾತ್ರ ಕೆಂಪಾಗಿದೆ.

  • ಸೈಕಲ್‍ನಲ್ಲೇ ಬಂದು ಪರಿಸರ ಜಾಗೃತಿ ಮೂಡಿಸ್ತಾರೆ ಕೆಎಲ್‍ಇ ಕಾಲೇಜಿನ ಪ್ರಿನ್ಸಿಪಾಲ್!

    ಸೈಕಲ್‍ನಲ್ಲೇ ಬಂದು ಪರಿಸರ ಜಾಗೃತಿ ಮೂಡಿಸ್ತಾರೆ ಕೆಎಲ್‍ಇ ಕಾಲೇಜಿನ ಪ್ರಿನ್ಸಿಪಾಲ್!

    ಬೆಳಗಾವಿ: ರಾಜ್ಯದ ಪ್ರತಿಷ್ಠಿತ ಖಾಸಗಿ ಕಾಲೇಜ್‍ನ ಪ್ರಾಂಶುಪಾಲರಾಗಿ ಲಕ್ಷಾಂತರ ರೂಪಾಯಿ ಸಂಬಳ ಪಡೆದರೂ ಇವರು ಮಾತ್ರ ಸೈಕಲ್‍ನಲ್ಲೇ ಕಾಲೇಜ್‍ಗೆ ಬರುತ್ತಾರೆ.

    ಹೌದು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕೆಎಲ್‍ಇ ಎಂಜಿನಿಯರ್ ಕಾಲೇಜ್‍ನ ಪ್ರಿನ್ಸಿಪಾಲ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಪ್ರತಿನಿತ್ಯ ಸೈಕಲ್ ನಲ್ಲಿ ಬಂದು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಕಾಲೇಜ್‍ಗೆ ಬಂದ ಮೇಲೂ ಕ್ಯಾಂಪಸ್ ನಲ್ಲಿ ಸೈಕಲ್ ನಲ್ಲಿ ಒಂದು ರೌಂಡ್ ಹೋಗಿ ಕೆಲಸ ಕಾರ್ಯಗಳ ಪರಿಶೀಲನೆ ನಡೆಸುತ್ತಾರೆ.

    ಖಾಸಗಿ ಕಾಲೇಜಿನಲ್ಲಿ ಲಕ್ಷ-ಲಕ್ಷ ಸಂಬಳ ಪಡೆದು ಜುಂ ಅಂತ ಕಾರ್‍ನಲ್ಲಿ ಬರದ ಸಿದ್ದರಾಮಪ್ಪ ಇಟ್ಟ ಅವರು, ಸೈಕಲ್‍ನಲ್ಲಿ ಬಂದು ಸಮಾಜದ ಆರೋಗ್ಯ, ಸ್ವಂತ ಆರೋಗ್ಯ ಎರಡನ್ನೂ ಕಾಪಾಡುತ್ತಿದ್ದಾರೆ.

     

  • ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರ- ಸುತ್ತೂರು ಮಠದಲ್ಲಿ ಗೌಪ್ಯ ಸಭೆ

    ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರ- ಸುತ್ತೂರು ಮಠದಲ್ಲಿ ಗೌಪ್ಯ ಸಭೆ

    -ನಾಳೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ

    ಮೈಸೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಮತ್ತೆ ಹೋರಾಟ ತೀವ್ರಗೊಂಡಿದೆ. ಮೈಸೂರಿನ ಸುತ್ತೂರು ಮಠದಲ್ಲಿ ವೀರಶೈವ-ಲಿಂಗಾಯಿತ ಚಿಂತಕರ ಕಾರ್ಯಗಾರ ನಡೆದಿದೆ.

    ಇದೇ ಮೊದಲ ಬಾರಿಗೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸುತ್ತೂರು ಮಠ ವೇದಿಕೆಯಾಗಿದೆ. ಹಲವು ದಿನದಿಂದ ಧರ್ಮ ಸ್ಥಾಪನೆ ವಿಚಾರದ ವಿವಾದದಿಂದ ದೂರ ಇದ್ದ ಶ್ರೀಮಠ ಹಾಗೂ ಸುತ್ತೂರು ಶ್ರೀಗಳು ಸಹ ಇದೇ ಮೊದಲ ಬಾರಿಗೆ ಈ ವಿಚಾರದ ಚರ್ಚೆಗೆ ಮಠದಲ್ಲೇ ವೇದಿಕೆ ಕಲ್ಪಿಸಿದ್ದಾರೆ. ಈ ಕಾರ್ಯಗಾರದಲ್ಲಿ 700ಕ್ಕು ಹೆಚ್ಚು ಮಂದಿ ಭಾಗಿಯಾಗಿದ್ದರು. ಸಮುದಾಯದ ಸಂಪನ್ಮೂಲಗಳ ವ್ಯಕ್ತಿಗಳೊಂದಿಗೆ ವಿಶೇಷ ಚರ್ಚೆ ಕೂಡ ನಡೆಯಿತು. ವೀರಶೈವ-ಲಿಂಗಾಯಿತ ಒಂದಾಗಿರಬೇಕೋ? ಅಥವಾ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪಿಸಲು ಹೋರಾಟ ನಡೆಸಬೇಕೋ ಎನ್ನುವುದರ ಬಗ್ಗೆ ಚರ್ಚೆ ನಡೆಯಿತು.

    ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಮುದಾಯದ ಇತರೆ ಮಠಾಧಿಶರು ಕಾರ್ಯಾಗಾರದಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮಾಧ್ಯಮಗಳನ್ನು ಹೊರಗಿಟ್ಟು ನಡೆದ ಕಾರ್ಯಾಗಾರದಲ್ಲಿ ಅಂತಿಮವಾಗಿ ಯಾವ ನಿರ್ಣಾಯಕ್ಕೂ ಬಂದಿಲ್ಲ. ಬದಲಾಗಿ ಕೇವಲ ಚರ್ಚೆ ಮಾತ್ರ ನಡೆದಿದೆ. ಲಿಂಗಾಯತ ಸ್ವಾತಂತ್ರ್ಯ ಧರ್ಮ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಸುತ್ತೂರು ಮಠ ಈಗ ಇಂತಹ ಚರ್ಚೆಗೆ ವೇದಿಕೆ ಕಲ್ಪಿಸಿರುವುದು ತೀವ್ರ ಕೂತುಹಲ ಕೆರಳಿಸಿದೆ.

    ಅತ್ತ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಆಗ್ರಹಿಸಿ ನಾಳೆ ಬೆಳಗಾವಿ ಚಲೋ ಮಹಾ ಜಾಥಾ ನಡೆಯಲಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗುವ ಸಾಧ್ಯತೆ ಇದೆ.