Tag: belagavi

  • ರೈಲಿಗೆ ಸಿಲುಕಿ ಬ್ರಿಡ್ಜ್ ಮೇಲಿಂದ ಬಿದ್ದು ಆನೆಮರಿ ಸಾವು

    ರೈಲಿಗೆ ಸಿಲುಕಿ ಬ್ರಿಡ್ಜ್ ಮೇಲಿಂದ ಬಿದ್ದು ಆನೆಮರಿ ಸಾವು

    ಬೆಳಗಾವಿ: ರೈಲ್ವೇ ಹಳಿ ದಾಟುವಾಗ, ರೈಲಿಗೆ ಸಿಲುಕಿ ಬ್ರಿಡ್ಜ್ ಮೇಲಿಂದ ಕೆಳಗೆ ಬಿದ್ದು ಆನೆ ಮರಿಯೊಂದು ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಖಾನಾಪುರ ತಾಲೂಕಿನ ಗೋಲಿಹಳ್ಳಿ ವಲಯ ಅರಣ್ಯ ಪ್ರದೇಶದ ತಾವರಗಟ್ಟಿ ಹಾಗೂ ಬಿಷ್ಟೆನಟ್ಟಿ ಗ್ರಾಮಗಳ ನಡುವೆ ಇಂದು ಬೆಳಗ್ಗಿನ ಜಾವ ಈ ಘಟನೆ ನಡೆದಿದೆ.

    ಮೃತ ಹೆಣ್ಣು ಆನೆಗೆ ಅಂದಾಜು 8-10 ವರ್ಷ ವಯಸ್ಸಾಗಿರಬಹುದು. ಈ ಆನೆ ಮರಿಯು ದಾಂಡೇಲಿ ಅರಣ್ಯ ಪ್ರದೇಶದಿಂದ ಗೋಲಿಹಳ್ಳಿ ಅರಣ್ಯ ಪ್ರದೇಶಕ್ಕೆ ಆಹಾರ ಅರಸಿ ಬಂದಿರುವ ಶಂಕೆ ವ್ಯಕ್ತವಾಗುತ್ತಿದೆ.

    ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಒಂದಲ್ಲ, ಎರಡಲ್ಲ, ಮೂರು ಮದುವೆ- ಇಲ್ಲಿದೆ ಕಿಲಾಡಿ ಹೆಂಡ್ತಿಯ ಕಹಾನಿ

    ಒಂದಲ್ಲ, ಎರಡಲ್ಲ, ಮೂರು ಮದುವೆ- ಇಲ್ಲಿದೆ ಕಿಲಾಡಿ ಹೆಂಡ್ತಿಯ ಕಹಾನಿ

    ಬೆಳಗಾವಿ: ಈ ಮಹಿಳೆ ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿದ್ದಾಳೆ. ಮದುವೆಯಾದ ಮೇಲೆ ಕಿರಿಕ್ ಮಾಡಿಕೊಂಡು ಗಂಡಂದಿರ ಮೇಲೆ ವರದಕ್ಷಿಣೆ ಕೇಸ್ ಹಾಕಿ ಹಣ ಕೇಳೋದು ಈಕೆಯ ವೃತ್ತಿಯಾಗಿದೆ.

    ಮೂಲತಃ ನವಲಗುಂದ ತಾಲೂಕಿನ ಗುಡಿಸಾಗರ್ ಗ್ರಾಮದ ನಿವಾಸಿ ಗೀತಾ ಬೆಲ್ಲದ ಮಹಿಳೆಯೇ ನಮ್ಮ ಸ್ಟೋರಿಯ ಕಿಲಾಡಿ ಹೆಂಡತಿ. ಮೊದಲೇ ಎರಡು ಮದುವೆಯಾಗಿದ್ದ ಗೀತಾ, ವಿಚ್ಚೇಧನ ಪಡೆದು 2014ರಲ್ಲಿ ಬೆಳಗಾವಿಯ ಮಹಾಂತೇಶ ಬೆಲ್ಲದ ಎಂಬವರನ್ನ ಮದುವೆಯಾಗಿದ್ದರು.

    ಕೆಲ ದಿನ ಆದ್ಮೇಲೆ ತಾನು ಗೀತಾಳ ಮೂರನೇ ಗಂಡ ಅಂತಾ ಮಹಾಂತೇಶ್ ರಿಗೆ ಗೊತ್ತಾಗಿದೆ. ಆದರೆ ಗೀತಾ ಮೂರನೇ ಗಂಡ ಮಹಾಂತೇಶನ ವಿರುದ್ಧವೂ ಬೆಳಗಾವಿ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ದೂರು ದಾಖಲು ಮಾಡಿದ್ದಾರೆ. ಇದರಿಂದ ತೀವ್ರ ನೊಂದ ಗಂಡ ಕೋರ್ಟ್ ಮೂಲಕ ಹೆಂಡತಿ ವಿರುದ್ಧ ವಂಚನೆ ದೂರು ದಾಖಲು ಮಾಡಿದ್ದಾರೆ.

    2012ರಲ್ಲಿ ಧಾರವಾಡ ಜಿಲ್ಲೆಯ ಪೊಲೀಸ್ ಅಧಿಕಾರಿ ರಾಜಶೇಖರ್ ಕುಲಕರ್ಣಿ ಅವರನ್ನ ಮದುವೆ ಆಗಿ ಗೀತಾ ವಿಚ್ಚೇದನ ಪಡೆದಿದ್ದರು. ನಂತರ ಒಂದೇ ತಿಂಗಳಲ್ಲಿ ದೆಹಲಿಯ ಉದ್ಯಮಿ ಹರ್ಷ ಜೈನ್ ಜೊತೆ ಮದುವೆಯಾದ್ರು. ಆದರೆ ಅವರ ಜೊತೆಯೂ ಕಿರಿಕ್ ಮಾಡಿಕೊಂಡು ಕೋರ್ಟ್ ಮೆಟ್ಟಿಲೇರಿದ್ರು. ಈ ಕೇಸ್ ಇತ್ಯರ್ಥವಾಗುವ ಮುನ್ನವೇ ಮಹಾಂತೇಶ ಅವರನ್ನ ಮದುವೆ ಆಗಿದ್ದಾರೆ. ಇಷ್ಟೆಲ್ಲಾ ಆಟವಾಡೋ ಗೀತಾ ಮಾತ್ರ ನಾನು ಕಾನೂನು ಹೋರಾಟ ಮಾಡ್ತೀನಿ ಎಂದು ಹೇಳುತ್ತಾರೆ.

  • ಬಸ್ಸಿನ ಬಾಗಿಲಲ್ಲಿ ನಿಲ್ಲಬೇಡ ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಯುವಕನಿಂದ ಹಲ್ಲೆ

    ಬಸ್ಸಿನ ಬಾಗಿಲಲ್ಲಿ ನಿಲ್ಲಬೇಡ ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಯುವಕನಿಂದ ಹಲ್ಲೆ

    ಬೆಳಗಾವಿ: ಬಸ್ಸಿನ ಬಾಗಿಲಲ್ಲಿ ನಿಲ್ಲಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೆಎಸ್‍ಆರ್‍ಟಿಸಿ ಬಸ್ ಕಂಡಕ್ಟರ್ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಚಿಕ್ಕೋಡಿಯಿಂದ ಇಚಲಕರಂಜಿಗೆ ತೆರಳುತ್ತಿದ್ದ ಬಸ್‍ನಲ್ಲಿ ನಿರ್ವಾಹಕ ಹಾಗೂ ಯುವಕನ ನಡುವೆ ಗಲಾಟೆ ನಡೆದಿದೆ. ಬಸ್ಸಿನ ಬಾಗಿಲಲ್ಲಿ ನಿಲ್ಲಬೇಡ ಎಂದು ಹೇಳಿದರೂ ಕೇಳದೆ ಇದ್ದಿದ್ದಕ್ಕೆ ನಿರ್ವಾಹಕ ಮತ್ತು ಯುವಕನ ನಡುವೆ ವಾಗ್ವಾದ ನಡೆದಿದೆ.

    ಈ ಸಂದರ್ಭದಲ್ಲಿ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಮೊಹಮ್ಮದ ಶೇಖ್ 18 ಎಂಬ ಯುವಕ ನಿರ್ವಾಹಕ ಪ್ರಕಾಶ ಮಾಯಣ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಹಿನ್ನೆಲೆಯಲ್ಲಿ ಬಸ್ ಅನ್ನು ಚಿಕ್ಕೋಡಿ ಪೊಲೀಸ್ ಠಾಣೆಗೆ ತಂದು ಯುವಕನ ವಿರುದ್ಧ ನಿರ್ವಾಹಕ ದೂರು ದಾಖಲಿಸಿದ್ದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಣ್ಣಿಗೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಕೊಚ್ಚಿ ಶ್ರೀರಾಮಸೇನೆ ಕಾರ್ಯಕರ್ತನ ಬರ್ಬರ ಹತ್ಯೆ

    ಕಣ್ಣಿಗೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಕೊಚ್ಚಿ ಶ್ರೀರಾಮಸೇನೆ ಕಾರ್ಯಕರ್ತನ ಬರ್ಬರ ಹತ್ಯೆ

    ಬೆಳಗಾವಿ: ಕಣ್ಣಿಗೆ ಖಾರದ ಪುಡಿ ಎರಚಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಶ್ರೀ ರಾಮಸೇನೆ ಕಾರ್ಯಕರ್ತರೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಅಪ್ಸರಾ ಕೂಟದಲ್ಲಿ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಶ್ರೀರಾಮ ಸೇನೆ ಕಾರ್ಯಕರ್ತನನ್ನು ರೋಹಿತ್ ಪಾಟೀಲ್ (23) ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ರೋಹಿತ್ ಪಾಟೀಲ್ ಅವರ ಜೊತೆಯಲ್ಲಿದ್ದ ಅಕ್ಷಯ್ ಘೋರ್ಪಡೆಗೆ ಗಂಭೀರ ಗಾಯವಾಗಿದ್ದು, ಗೋಕಾಕ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಚೂರಿ, ಕೊಡಲಿ, ತಲ್ವಾರಿನಿಂದ ರೋಹಿತ್ ಪಾಟೀಲ್ ಎದೆ, ತಲೆ, ಕೈ ಮತ್ತು ಕಾಲಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ರೋಹಿತ್ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

    ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಅಂತ ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್‍ಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ವಿಡಿಯೋ: ಮಹಿಳೆಯ ಜತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಬಿತ್ತು ಗೂಸಾ

    ವಿಡಿಯೋ: ಮಹಿಳೆಯ ಜತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಬಿತ್ತು ಗೂಸಾ

    ಬೆಳಗಾವಿ: ಮಹಿಳೆಯ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಖತ್ ಗೂಸಾ ನೀಡಿದ ಘಟನೆ ಜಿಲ್ಲೆಯ ಸವದತ್ತಿ ಪಟ್ಟಣದ ಅರಳಿಗಿಡ ಓಣಿಯಲ್ಲಿ ನಡೆದಿದೆ.

    ಪಟ್ಟಣದ ಅರಳಿಗಿಡ ಓಣಿಯಲ್ಲಿ ಆರೋಪಿ ದಾವಲ್ ಉಸ್ತಾದ ಎಂಬಾತ ಮದ್ಯಪಾನ ಮಾಡಿ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದ. ಇದನ್ನ ಗಮನಿಸಿದ ಮಹಿಳೆಯರು ಮತ್ತು ಸ್ಥಳೀಯರು ಸೇರಿ ದಾವಲ್‍ಗೆ ಥಳಿಸಿದ್ದಾರೆ.

    ಅಲ್ಲದೇ ದಾವಲ್ ನನ್ನು ಪಟ್ಟಣದಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸವದತ್ತಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://youtu.be/ceDHNlsOlBw

  • ಬೆಳಗಾವಿ: ಮೂರು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಕೊಲೆ!

    ಬೆಳಗಾವಿ: ಮೂರು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಕೊಲೆ!

    ಬೆಳಗಾವಿ: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ಕಾಮುಕ ಆರೋಪಿಯನ್ನು ಉದಪ್ಪ ಗಾಣಿಗೇರ(25) ಎಂಬುವುದಾಗಿ ಗುರುತಿಸಲಾಗಿದೆ.

    ಈತ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಮನೆ ಪಕ್ಕದ ತಿಪ್ಪೆಯಲ್ಲಿ ಹೂತು ಹಾಕಿದ್ದನು. ಇತ್ತ ಬಾಲಕಿ ಕಾಣದಿದ್ದಾಗ ಅಕ್ಕ ಪಕ್ಕದವರನ್ನು ಬಾಲಕಿಯ ಮನೆಯವರು ವಿಚಾರಿಸಿದಾಗ ಈ ಘಟನೆ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಸದ್ಯ ಪೊಲೀಸರು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಟುಂಬದ ಕಣ್ಮಣಿಗೆ ಕೊಂಬು ಕ್ಯಾನ್ಸರ್-ಕಸಾಯಿಖಾನೆಗೆ ಮಾರದೇ ಚಿಕ್ಕೋಡಿ ರೈತನಿಂದ ಆರೈಕೆ

    ಕುಟುಂಬದ ಕಣ್ಮಣಿಗೆ ಕೊಂಬು ಕ್ಯಾನ್ಸರ್-ಕಸಾಯಿಖಾನೆಗೆ ಮಾರದೇ ಚಿಕ್ಕೋಡಿ ರೈತನಿಂದ ಆರೈಕೆ

    ಬೆಳಗಾವಿ: ಇಂದಿನ ಕಾಲದಲ್ಲಿ ರೈತರು ತಾವು ಸಾಕಿದ, ತಮ್ಮ ಗದ್ದೆಗಳಲ್ಲಿ ಉಳುಮೆ ಮಾಡಿದ ಹಸು, ಎತ್ತು, ಹೋರಿಗಳು ಅನಾರೋಗ್ಯಕ್ಕೆ ಒಳಗಾದಾಗ ಕಸಾಯಿಖಾನೆಗೆ ಒಪ್ಪಿಸಿ ಕೈ ತೊಳೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ರೈತ ತಮ್ಮ ಎತ್ತಿಗೆ ಕ್ಯಾನ್ಸರ್ ಕಾಯಿಲೆ ಬಂದ್ರೂ ಸಹ ಅದನ್ನ ತನ್ನ ಮಗುವಿನಂತೆ ಜೋಪಾನ ಮಾಡುತ್ತಿದ್ದಾರೆ.

    ಹೌದು. ಎಲ್ಲ ದನಕರುಗಳ ಹಾಗೆ ಕೊಟ್ಟಿಗೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರೋ ಈ ಎತ್ತುವಿನ ಹೆಸರು ರಾಜ. ಕಳೆದ 18 ವರ್ಷಗಳ ಹಿಂದೆ ಯಾವುದೋ ಒಂದು ಬೇರೆ ಸ್ಥಳದಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮಕ್ಕೆ ಖರೀದಿಸಿದ ಬಳಿಕ ಮಾಲೀಕ ದುಂಡಪ್ಪನ 3 ಎಕರೆ ಗದ್ದೆಯನ್ನು ಉತ್ತಿ ಬಿತ್ತಲು ಸಹಕಾರಿಯಾಗಿದೆ.

    ಕೇವಲ ಕೃಷಿ ಕಾರ್ಯವನ್ನೆ ಮೆಚ್ಚಿಕೊಂಡಿದ್ದ ಮಾಲೀಕನ ಬಡತನದ ಮತ್ತು ಕಷ್ಟದ ಕಾಲದಲ್ಲಿ ಕೂಡ ದುಡಿದು ಸಹಕಾರಿಯಾಗಿದೆ. ಆದ್ರೆ ಕಳೆದ 6 ತಿಂಗಳಿನಿಂದ ಈ ಎತ್ತು ಕೊಂಬು ಕ್ಯಾನ್ಸರ್‍ನಿಂದ ಬಳಲುತ್ತಿದೆ. ಆದ್ರೆ ಮಾಲೀಕ ಬೇರೆ ರೈತರ ಹಾಗೆ ಕಟುಕರಿಗೆ ಕೊಟ್ಚು ಕೈ ತೊಳೆದುಕೊಂಡಿಲ್ಲ. ಹೊರತಾಗಿ ತಮ್ಮ ಮಗನ ಹಾಗೆ ಆರೈಕೆ ಮಾಡುತ್ತಿದ್ದಾರೆ.

    ಸದ್ಯ ರೈತ ಎತ್ತುವಿಗೆ ಆಪರೇಷನ್ ಕೂಡ ಮಾಡಿಸಿದ್ದಾರೆ. ಬಾಯಿ ನೋವಾಗಿ ಮೇವು ತಿನ್ನಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಸ್ವತಃ ಬಾಯಿಗೆ ಮೇವಿಟ್ಟು ಸಲಹುತ್ತಿದ್ದಾರೆ. ನಿತ್ಯ 2 ಬಾರಿ ಸ್ನಾನ ಮಾಡಿಸಿ ಗಾಯಕ್ಕೆ ಔಷಧಿ ಹಚ್ಚುತ್ತಿದ್ದಾರೆ. ಕ್ಯಾನ್ಸರ್ ಬಂದ ಬಳಿಕ ಬೇರೆ ಎರಡು ಎತ್ತುಗಳನ್ನು ಸಹ ತಂದಿದ್ದರು. ಆದ್ರೆ ಈ ಎತ್ತುವಿನ ಆರೈಕೆಗೆ ತೊಂದರೆ ಆಗಬಾರದು ಅಂತ ಆ ಎತ್ತುಗಳನ್ನು ಸಹ ಮಾರಿದ್ರೂ. ಒಟ್ಟಿನಲ್ಲಿ ಮಾಲೀಕನ ಈ ಮಹಾನ್ ಕಾರ್ಯವನ್ನು ಸಮಾಜದ ಪ್ರತಿಯೊಬ್ಬರು ಶ್ಲಾಘಿಸುತ್ತಿದ್ದಾರೆ.

  • ನಾಗರ ಹಾವಿನ ಮೂಗಿನೊಳಗೆ ಸೇರಿತು ಮರಿ ಹಾವು!

    ನಾಗರ ಹಾವಿನ ಮೂಗಿನೊಳಗೆ ಸೇರಿತು ಮರಿ ಹಾವು!

    ಬೆಳಗಾವಿ: ಹಾವುಗಳು ಇಲಿ, ಕಪ್ಪೆ ನುಂಗೋದು ಸಾಮಾನ್ಯ. ಆದ್ರೆ ಇಲ್ಲೊಂದು ನಾಗರ ಹಾವಿನ ಮೂಗಿನೊಳಗೆ ಮರಿ ಹಾವು ಹೊಕ್ಕಿದ ವಿಚಿತ್ರ ಘಟನೆ ನಡೆದಿದೆ.

    ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ನಗರದ ಬ್ರಹ್ಮ ನಗರದ ಸಿಮೆಂಟ್ ಇಟ್ಟಿಗೆ ಭಟ್ಟಿಯಲ್ಲಿ ಹಾವು ಪತ್ತೆಯಾಗಿದೆ. ಈ ನಾಗರ ಹಾವಿನ ಮೂಗಿನೊಳಗೆ ಮರಿ ಹಾವೊಂದು ಸಿಲುಕಿರುವುದನ್ನು ಕಂಡ ಸ್ಥಳೀಯರು ಕೂಡಲೇ ಉರಗ ತಜ್ಞರಿಗೆ ತಿಳಿಸಿದ್ದಾರೆ.

    ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಖ್ಯಾತ ಉರಗ ತಜ್ಞ ಆನಂದ ಚಿಟ್ಟಿ ಹಾವನ್ನು ಸಿಮೆಂಟ್ ಇಟ್ಟಿಗೆಯಿಂದ ಹೊರತೆಗೆದು ರಕ್ಷಿಸಿದ್ದಾರೆ. ಈ ವೇಳೆ ಹಾವಿನ ಮೂಗಿನಲ್ಲಿ ಅರ್ಧದಷ್ಟು ಹೊಕ್ಕಿದ್ದ ಹಾವಿನ ಮರಿಯನ್ನು ಹೊರತೆಗೆದಿದ್ದಾರೆ. ಆದ್ರೆ ಮರಿ ಹಾವು ಅದಾಗಲೇ ಮೃತಪಟ್ಟಿತ್ತು.

    ಈ ರೀತಿಯ ಘಟನೆಯನ್ನು ನೋಡಿದ್ದು ಇದೇ ಮೊದಲ ಬಾರಿಗೆ ಅಂತ ಉರಗ ತಜ್ಞ ಹೇಳಿದ್ದಾರೆ.

     

  • ಊರಿಗೇ ಊರೇ ಹಾವಿನ ಕಾಟದಿಂದ ಹೈರಾಣ- ರಾತ್ರಿ ಮಲಗೋಕಾಗಲ್ಲ, ಬೆಳಗಾದ್ರೆ ಸಾವಿನ ಸುದ್ದಿ ತಪ್ಪಲ್ಲ

    ಊರಿಗೇ ಊರೇ ಹಾವಿನ ಕಾಟದಿಂದ ಹೈರಾಣ- ರಾತ್ರಿ ಮಲಗೋಕಾಗಲ್ಲ, ಬೆಳಗಾದ್ರೆ ಸಾವಿನ ಸುದ್ದಿ ತಪ್ಪಲ್ಲ

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ ಜನ ಹಾವಿನ ಕಾಟದಿಂದ ಹೈರಾಣವಾಗಿದ್ದಾರೆ.

    ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟವಿದ್ದು ಸರಿ ಸುಮಾರು ಐದು ಸಾವಿರ ಜನ ಇಲ್ಲಿ ವಾಸ ಮಾಡ್ತಿದ್ದಾರೆ. ಆದ್ರೆ 3 ತಿಂಗಳಿನಿಂದ ಈ ಗ್ರಾಮದ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಬೆಳಗಾಗ್ತಿದ್ದಂತೆ ಗ್ರಾಮದಲ್ಲಿ ಒಬ್ಬರಲ್ಲ ಒಬ್ಬರಿಗೆ ಹಾವು ಕಚ್ಚಿದೆ ಅನ್ನೋ ಸುದ್ದಿ ಕಿವಿಗೆ ಬೀಳುತ್ತೆ. ಕೆಲವರಂತೂ ರಾತ್ರಿಯಿಡೀ ಕೈಯಲ್ಲಿ ಕೋಲು ಹಿಡ್ಕೊಂಡು ಹಾವನ್ನ ಕಾಯೋ ಕೆಲಸ ಮಾಡಿಕೊಂಡಿದ್ದಾರೆ.

    ಕರಿನಾಗರ ಹಾವು ಕಚ್ಚಿ ಈಗಾಗಲೇ ಐವರು ಸಾವನ್ನಪ್ಪಿದ್ದು, 17 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಂದು ಸಹ ಇಬ್ಬರಿಗೆ ನಾಗರಹಾವು ಕಚ್ಚಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.

    ಸುತ್ತಮುತ್ತಲಿನ ಗ್ರಾಮದಲ್ಲಿರುವ 51 ದೇವರಿಗೆ ಪೂಜೆ, ಪುನಸ್ಕಾರ, ಹೋಮ ಹವನ, ಮಾಟ ಮಂತ್ರ ಎಲ್ಲವನ್ನೂ ಮಾಡಿಸಿದ್ದಾರೆ. ಪ್ರತಿ ಮನೆಗೂ ನೂರು ರೂಪಾಯಿ ಹಣ ಪಡೆದು ಗ್ರಾಮ ದೇವತೆಗೆ ಶಾಂತಿ ಪೂಜೆ, ನಾಗದೇವತೆಗೆ ಬಲಿದಾನ ನೀಡಿದ್ದಾರೆ. ಇಷ್ಟಾದ್ರೂ ಹಾವಿನ ಕಾಟ ತಪ್ಪುತ್ತಿಲ್ಲ. ರಾತ್ರಿ ಮನೆಯಲ್ಲಿ ಮಲಗಿದ ಸಮಯದಲ್ಲಿ ಕಿವಿಗೆ, ಗಂಟಲಿಗೆ ಹೆಚ್ಚಾಗಿ ಹಾವು ಕಚ್ಚಿದೆ. ಕೆಲವರಂತೂ ಹಾವಿನ ಭಯದಿಂದ ಊರನ್ನೇ ತ್ಯಜಿಸಿದ್ದಾರೆ.

    ಗ್ರಾಮದಲ್ಲಿ ಕಣ್ಣಿಗೆ ಬಿದ್ದ ಹಾವು ನೋಡ ನೋಡ್ತಿದ್ದಂತೆ ಮಾಯವಾಗ್ತಿವೆಯಂತೆ. ಬೆಡ್‍ರೂಂ, ಬಾತ್‍ರೂಂ ಸೇರಿದಂತೆ ಎಲ್ಲಾ ಕಡೆನೂ ಹಾವುಗಳದ್ದೇ ಭಯ. ಇದನ್ನೆ ಬಂಡವಾಳ ಮಾಡಿಕೊಂಡ ಮಾಂತ್ರಿಕರು ಜನರಿಂದ ಹಣ ಕೀಳ್ತಿದ್ದಾರೆ.

  • 2 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಅರೆಸ್ಟ್

    2 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಅರೆಸ್ಟ್

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲದಲ್ಲಿ ಕಾಮುಕ ಯುವಕನೊಬ್ಬ 2 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

    ಯುವಕನನ್ನು ಸುಭಾಷ್ ನಾಯ್ಕ್(21) ಎಂದು ಗುರುತಿಸಲಾಗಿದ್ದು, ಈತ 2 ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಕಾಮುಕನಿಗೆ ಜನರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಮುಕನ ಕೃತ್ಯದಿಂದ ಮಗುವಿಗೆ ತೀವ್ರ ರಕ್ತಸ್ರಾವವಾಗಿದ್ದು, ಸದ್ಯ ಆಕೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    21 ವರ್ಷದ ಸುಭಾಷ್ ನಾಯ್ಕರ್‍ನನ್ನು ವಶಕ್ಕೆ ಪಡೆದ ನೇಸರ್ಗಿ ಪೊಲೀಸರು, ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ.