Tag: belagavi

  • ಒಂಟಿಯಾಗಿ ಓಡಾಡೋ ಲವ್ವರ್ಸ್ ಟಾರ್ಗೆಟ್ ಮಾಡಿ ಹಣ, ಆಭರಣ ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಒಂಟಿಯಾಗಿ ಓಡಾಡೋ ಲವ್ವರ್ಸ್ ಟಾರ್ಗೆಟ್ ಮಾಡಿ ಹಣ, ಆಭರಣ ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಳಗಾವಿ: ನಿರ್ಜನ ಪ್ರದೇಶದಲ್ಲಿ ಓಡಾಡುವ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ, ಅವರಿಗೆ ಕೀಟಲೆ ಕೊಟ್ಟು, ಹಣ, ಆಭರಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಬೆಳಗಾವಿಯ ಪೊಲೀಸರು ಬಂಧಿಸಿದ್ದಾರೆ.

    ಮಹ್ಮದ್, ಜಾವೀದ್, ಮೊಹ್ಮದ್, ಶಾರೂಕ್, ರಹಿಮ್ ಬಂಧಿತ ಆರೋಪಿಗಳಾಗಿದ್ದು, ಬೆಳಗಾವಿಯ ಕ್ಯಾಂಪ್ ಪೊಲೀಸರು ಈ 5 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನು ಆರಂಭಿಸಿದ್ದಾರೆ.

    ನಗರದ ಸಿಪಿಎಡ್ ಮೈದಾನ, ಕ್ಯಾಂಪ್ ಪ್ರದೇಶದಲ್ಲಿ ಇರುವ ಪಾರ್ಕ್ ಬಳಿ ಪ್ರೇಮಿಗಳು ಹೆಚ್ಚು ಭೇಟಿ ನೀಡುತ್ತಾರೆ. ಹೀಗೆ ಬರುವ ಜೋಡಿಗಳನ್ನು ಟಾರ್ಗೆಟ್ ಮಾಡಿ ಚಾಕು ತೋರಿಸಿ ಬೆದರಿಸಿ ಅವರಿಂದ ಹಣ, ಆಭರಣವನ್ನು ಆರೋಪಿಗಳು ವಸೂಲಿ ಮಾಡುತ್ತಿದ್ದರು.

    ಪೋಷಕರ ಕಣ್ಣು ತಪ್ಪಿಸಿ ಅಥವಾ ಮಾನಕ್ಕೆ ಹೆದರಿ ಇದುವರೆಗೂ ಪ್ರೇಮಿಗಳು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ ಇತ್ತೀಚಿಗೆ ಈ ಕುರಿತು ದೂರು ದಾಖಲಾಗಿದ್ದು, ಈ ದೂರು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಸಿಎಂ ಸಿದ್ದರಾಮಯ್ಯನದ್ದು ರಾಕ್ಷಸ ಮುಖ, ಕನ್ನಡಿ ನೋಡಿದ್ರೆ ಗೊತ್ತಾಗುತ್ತೆ – ಅನಂತ್‍ಕುಮಾರ್ ಹೆಗಡೆ

    ಸಿಎಂ ಸಿದ್ದರಾಮಯ್ಯನದ್ದು ರಾಕ್ಷಸ ಮುಖ, ಕನ್ನಡಿ ನೋಡಿದ್ರೆ ಗೊತ್ತಾಗುತ್ತೆ – ಅನಂತ್‍ಕುಮಾರ್ ಹೆಗಡೆ

    ಬೆಳಗಾವಿ: ಸಿಎಂ ಸಿದ್ದರಾಮಯ್ಯನದ್ದು ರಾಕ್ಷಸ ಮುಖವಿದೆ. ಕಾಂಗ್ರೆಸ್‍ನವರು ಮೊದಲು ತಮ್ಮ ಮುಖ ಕನ್ನಡಿಯಲ್ಲಿ ನೋಡಿಕೋಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‍ನವರ ಮುಖ ರಾಕ್ಷಸ ಮುಖವೋ, ಮನುಷ್ಯನ ಮುಖವೊ ಗೊತ್ತಾಗುತ್ತೆ ಅಂತ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬೆಳಗಾವಿಯಲ್ಲಿ ಮಾತನಾಡಿದ ಅವರು, ಪರೇಶ್‍ನನ್ನ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ. ಉತ್ತರ ಕರ್ನಾಟಕ ಜನ ಶಾಂತಿಪ್ರಿಯರು. ಪರೇಶ್ ಸಾವು ಮಾನವೀಯತೆಯ ಕಗ್ಗೊಲೆ. ವ್ಯವಸ್ಥಿತವಾಗಿ ಕೇಸ್ ಮುಚ್ಚಿ ಹಾಕಲಾಗುತ್ತಿದೆ. ನ್ಯಾಯಯುತ ತನಿಖೆ ಮಾಡುವ ಮನಸ್ಸು ಕಾಂಗ್ರೆಸ್ಸಿಗಿಲ್ಲ. ಇದು ಅಲ್ಪಸಂಖ್ಯಾರ ಮತಗಳ ತುಷ್ಠಿಕರಣ. ಅಲ್ಲಿನ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಅಂತ ಕಿಡಿ ಕಾರಿದ್ರು.

    ಸಿಪಿಐ, ಪಿಎಸ್‍ಐ ಪೊಲೀಸ್ ಅಧಿಕಾರಿಗಳು ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ. ರಾಜ್ಯ ಸರ್ಕಾರದಿಂದ ನಮಗೆ ನ್ಯಾಯ ಸಿಗುವ ಭರವಸೆಯಿಲ್ಲ. ರಾಜ್ಯದಲ್ಲಿ ಪರೇಶ್ ಸೇರಿ 20 ಜನರ ಕಗ್ಗೊಲೆ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ರು.

  • ಮನೆ ಬಳಿ ಬಂದು ಕಾಟ ಕೊಡ್ತಿತ್ತೆಂದು ಕೋತಿಯ ಶೂಟೌಟ್

    ಮನೆ ಬಳಿ ಬಂದು ಕಾಟ ಕೊಡ್ತಿತ್ತೆಂದು ಕೋತಿಯ ಶೂಟೌಟ್

    ಬೆಳಗಾವಿ: ಮನೆಯ ಬಳಿ ಬಂದು ಕಾಟ ಕೊಡುತ್ತಿದ್ದ ಕೋತಿಯನ್ನು ಶೂಟೌಟ್ ಕೊಂದಿರುವ ಅಮಾನವೀಯ ಘಟನೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ.

    ನಿಪ್ಪಾಣಿ ಪಟ್ಟಣದ ನಿಲೇಶ ಕುರುಬೆಟ್ಟ (55) ಎಂಬಾತನಿಂದ ಶೂಟೌಟ್ ನಡೆದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಸಾವನ್ನಪ್ಪಿದ ಕೋತಿಯನ್ನು ನಿಪ್ಪಾಣಿ ಶಹರ ಪೊಲೀಸ್ ಠಾಣೆ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಕೋತಿಯನ್ನು ಕೊಂದಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಆದ್ರೆ ಕೋತಿ ಕೊಲೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ. ಮತ್ತೊಂದು ಕಡೆ ಪ್ರಕರಣ ದಾಖಲಾದ ಬಳಿಕ ತಮ್ಮ ಸುಪರ್ದಿಗೆ ಪಡೆದುಕೊಳ್ಳುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ವಾದಿಸಿದ್ದಾರೆ.

    ಕೋತಿಯ ಅಂತ್ಯಕ್ರಿಯೆ ಮಾಡಿಯೇ ಮನೆಗೆ ಹೋಗುವುದಾಗಿ ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

  • ಎಸ್ ಆರ್ ಹಿರೇಮಠ್ ಹೇಳಿಕೆಗೆ ಕೆಪಿಜೆಪಿ ಸ್ಥಾಪಕ ಉಪೇಂದ್ರ ತಿರುಗೇಟು!

    ಎಸ್ ಆರ್ ಹಿರೇಮಠ್ ಹೇಳಿಕೆಗೆ ಕೆಪಿಜೆಪಿ ಸ್ಥಾಪಕ ಉಪೇಂದ್ರ ತಿರುಗೇಟು!

    ಬೆಳಗಾವಿ: ನಾನು ನನ್ನ ಅಣ್ಣ ಸೇರಿ ಒಂದು ರೆಸಾರ್ಟ್ ಖರೀದಿ ಮಾಡಿದ್ದೀವಿ. ಇದರ ಹಿಂದುಗಡೆ ನಮ್ಮ ಜಮೀನಿದೆ. ಹಿರೇಮಠ್ ಕಡೆಯವರು ಯಾರೋ ಬಂದು ರೇಸಾರ್ಟ್ ನೋಡ್ಬಿಟ್ಟು ಕೃಷಿ ಭೂಮಿಯಲ್ಲಿ ರೆಸಾರ್ಟ್ ಕಟ್ಟಿದ್ದಾರೆ ಅಂತ ಹೇಳಿದ್ದಾರೆ ಅಂತ ನಟ ಹಾಗೂ ಕೆಪಿಜೆಪಿ ಸ್ಥಾಪಕ ಉಪೇಂದ್ರ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಕೆಪಿಜೆಪಿ ಪಕ್ಷದ ಪ್ರಚಾರಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ ಭೂಮಿಯಲ್ಲಿ ರೆಸಾರ್ಟ್ ಮಾಡಲು ಸಾಧ್ಯವೇ ಇಲ್ಲ. ಕೃಷಿ ಭೂಮಿಯನ್ನು ಕೃಷಿಗಾಗಿಯೇ ಬಳಸಬೇಕು. ಇಂದಿಗೂ ನಾವು ಅಲ್ಲಿ ವ್ಯವಸಾಯ ಮಾಡ್ತಾ ಇದ್ದೀವಿ. ಬೆಳೆ ಬೆಳೆಯುತ್ತಾ ಇದ್ದೀವಿ. ಒಟ್ಟಿನಲ್ಲಿ ಅವರಿಗೆ ಈ ಗೊಂದಲ ಉಂಟಾಗಲು ಕಾರಣ ಅವರು ರೆಸಾರ್ಟ್ ಮುಂದುಗಡೆ ಬಂದಿದ್ದಾರೆ. ಹೀಗಾಗಿ ಅವರು ಹಿಂದುಗಡೆ ನೋಡಿಲ್ಲ. ಹೀಗಾಗಿ ಮಂದುಗಡೆ ಬಂದು ಈ ಜಮೀನಿನಲ್ಲಿ ಹೊಟೇಲ್ ಮಾಡ್ಕೊಂಡಿದ್ದಾರೆ ಅಂತ ಅವರು ಹೇಳಿದ್ದಾರೆ.

    ನಾವು ಹೊಟೇಲನ್ನು ಕೆಸ್‍ಇಡಿಸಿ (ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಡೆವೆಲಪ್ ಮೆಂಟ್ ಕಾರ್ಪೋರೇಶನ್) ಯಿಂದ ತೆಗೆದುಕೊಂಡಿದ್ದೇವೆ. ಅದರ ಸಂಪೂರ್ಣ ದಾಖಲೆಗಳಿವೆ. ಅದನ್ನೆಲ್ಲಾ ನೋಡಿಯೇ ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ. ಹೀಗಾಗಿ ಕೋರ್ಟ್ ನಿರ್ಧಾರ ತೆಗೆದುಕೊಂಡ ಮೇಲೂ ಒಬ್ಬ ವ್ಯಕ್ತಿ ಅದರ ಬಗ್ಗೆ ಮಾತನಾಡುತ್ತಾರೆ ಅಂದ್ರೆ ನನಗೆ ಅದರ ಬಗ್ಗೆ ಅರ್ಥನೇ ಆಗಲ್ಲ. ಕೋರ್ಟ್ ಗಿಂತಲೂ ಇವರು ದೊಡ್ಡವರಾಗಿಬಿಟ್ಟರಾ ಅಂತ ಅವರು ಹೇಳಿದ್ರು. ಇದನ್ನೂ ಓದಿ: ನಟ, ಕೆಪಿಜೆಪಿ ಸ್ಥಾಪಕ ಉಪೇಂದ್ರಗೆ ಎಸ್.ಆರ್. ಹಿರೇಮಠ ಕಿವಿಮಾತು!

    ಇದೇ ವೇಳೆ ಪಕ್ಷದ ಪರ ಪ್ರಚಾರ ಮಾಡಿದ ಅವರು, ಜನ ಈಗಿರುವ ರಾಜಕೀಯ ವ್ಯವಸ್ಥೆಗೆ ಬೇಸತ್ತು ಹೋಗಿದ್ದಾರೆ. ವಿಷಯಾಧಾರಿತ ರಾಜಕೀಯ ನಡೆಯುತ್ತಿದೆ. ಹೊಸ ರಾಜಕಾರಣಕ್ಕೆ ವೇದಿಕೆ ರೂಪಿಸಿದ್ದೇನೆ. ಸಾಕಷ್ಟು ಜನರು ನನ್ನ ಕೈಜೋಡಿಸುತ್ತಿದ್ದಾರೆ. ಕೇವಲ 20 ರಷ್ಟು ಜನರ ಕೈಯಲ್ಲಿ ಅಧಿಕಾರವಿದೆ. ಶೇ.80 ಜನರು ಸುಮ್ಮನಿದ್ದೇವೆ. ಅಕೌಂಟೆಬಿಲಿಟಿ ನಮಗೆ ಬೇಕಾಗಿದೆ. ಹಿಂದೆ ರಾಜರ ಆಡಳಿತ ಕಾಲವಿತ್ತು. ಈಗ ರಾಜಕಾರಣವಾಗಿದೆ ರಾಜಕೀಯ ವ್ಯವಸ್ಥೆ ಅಂದ್ರು.

    ವಿಚಾರ ಇರೋರು ರಾಜಕಾರಣಕ್ಕೆ ಬರದಂತೆ ಹೆದರಿಸುತ್ತಾರೆ. ನಮ್ಮ ಮೈಂಡ್ ಸೆಟ್ ಹೇಗಾಗಿದೆ ಅಂದ್ರೆ ಹಣವಿದ್ರೆ ಮಾತ್ರ ರಾಜಕಾರಣ ಅಂತಾ ಆಗಿ ಹೋಗಿದೆ. ರಾಜ್ಯ ಮಟ್ಟದ ಪ್ಲಾನಿಂಗ್ ನಮ್ಮ ಪ್ರಣಾಳಿಕೆಯಲ್ಲಿದೆ. ಜನವರಿ ಅಂತ್ಯದವರೆಗೂ ಕೆಪಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಉದ್ದೇಶ ಇದೆ. ಅರ್ಹತೆ ಇರುವ ಅಭ್ಯರ್ಥಿಗಳನ್ನ ಸಂದರ್ಶನ ಮಾಡಿ ಆಯ್ಕೆ ಮಾಡ್ತಿವಿ ಅಂತ ಅವರು ವಿವರಿಸಿದ್ರು.

    https://www.youtube.com/watch?v=7C5QPHui87Y

     

  • ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮನೆ ಮೇಲೆ ಮಹಿಳೆಯರ ದಾಳಿ

    ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮನೆ ಮೇಲೆ ಮಹಿಳೆಯರ ದಾಳಿ

    ಬೆಳಗಾವಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಮಹಿಳೆಯರು ದಾಳಿ ನಡೆಸಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಹೊಸ ಶಿರಹಟ್ಟಿ ಗ್ರಾಮದಲ್ಲಿ ಘಟನೆದಿದೆ.

    ಗ್ರಾಮದ ಗುರುಲಿಂಗ ಅಂಬಿ ಎಂಬ ವ್ಯಕ್ತಿಯ ಮನೆ ಮೇಲೆ ದಾಳಿ ನಡೆಸಿದ ಮಹಿಳೆಯರು, ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ರಸ್ತೆ ಮಧ್ಯೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

    ಹಲವು ದಿನಗಳಿಂದ ಗುರುಲಿಂಗ ಅಂಬಿ ಎಂಬವರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದರು, ದಿನನಿತ್ಯ ಅಕ್ರಮ ಮದ್ಯ ಮಾರಾಟದಿಂದ ರೋಸಿ ಹೋಗಿದ್ದ ಗ್ರಾಮದ ಮಹಿಳೆಯರು ತಾವೇ ಮನೆ ಮೇಲೆ ದಾಳಿ ನಡೆಸಿ ಅಧಿಕಾರಿಗಳ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ.

    ಗ್ರಾಮದಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ನಡೆಸಯುತ್ತಿರೋ ಮದ್ಯ ಮಾರಾಟದ ಕುರಿತು ಅಧಿಕಾರಿಗಳಿಗೆ ಮಾಹಿತಿ ಇದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ.

    ಅಕ್ರಮ ಮದ್ಯ ಮಾರಾಟ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇನ್ನು ಚಿಕ್ಕೋಡಿ ಉಪ ವಿಭಾಗದಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆದಿದ್ದರೂ, ಅಬಕಾರಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿಯಾಗಿದೆ.

  • ಬಿಜೆಪಿಯವರು ಹರಾಮ್‍ಕೋರರು ಎಂದು ಹೇಳಿ ನಂತ್ರ ಉಲ್ಟಾ ಹೊಡೆದ ಉಮೇಶ್ ಕತ್ತಿ

    ಬಿಜೆಪಿಯವರು ಹರಾಮ್‍ಕೋರರು ಎಂದು ಹೇಳಿ ನಂತ್ರ ಉಲ್ಟಾ ಹೊಡೆದ ಉಮೇಶ್ ಕತ್ತಿ

    ಬೆಂಗಳೂರು: ಬಿಜೆಪಿಯವರನ್ನು ಹರಾಮ್‍ಕೋರರು ಎಂದಿದ್ದ ಮಾಜಿ ಸಚಿವ, ಬೆಳಗಾವಿಯ ಹುಕ್ಕೇರಿಯ ಶಾಸಕ ಉಮೇಶ್ ಕತ್ತಿ ಉಲ್ಟಾ ಹೊಡೆದಿದ್ದು, ನಾನು ನನ್ನ ಆಪ್ತನಿಗೆ ಅಂದಿದ್ದು ಬಿಜೆಪಿ ಅವರಿಗೆ ಅಂದಿಲ್ಲ ಎಂದು ಹೇಳಿದ್ದಾರೆ.

    ಸಿಎಂ ಸಿದ್ದರಾಮಯ್ಯ ಅವರ ಭೇಟಿ ಬಳಿಕ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುತ್ತಾ ಬಿಜೆಪಿಯವರು ಹರಾಮ್‍ಕೋರರು ಎಂದು ಹೇಳಿದ್ದರು.

    ವಿವಾದ ಜೋರಾಗುತ್ತಿದ್ದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ನಾನು ಬಿಜೆಪಿ ಅವರಿಗೆ ಹೇಳಿಲ್ಲ. ಜಗದೀಶ್ ಶೆಟ್ಟರ್ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಹೋಗಬೇಡಿ ಎಂದು ಹೇಳಿದ್ದರು. ಲಿಂಗಾಯತ ವೀರಶೈವರನ್ನು ಒಡೆಯಲು ಎಂಬಿ ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ ಮುಂದಾಗಿದ್ದಾರೆ. ಆದರೆ ಇಗ ಬಸವರಾಜರಾಯರೆಡ್ಡಿ ಈ ವಿಚಾರದಿಂದ ಹಿಂದೆ ಸರಿದಿದ್ದಾರೆ. ನಾನು ವೀರಶೈವ ಲಿಂಗಾಯತನಾಗಿದ್ದು ನನ್ನ ಧರ್ಮ ಹಿಂದೂ. ಎಂ.ಬಿ.ಪಾಟೀಲ್ ನಡೆಸಿದ ಸಮಾವೇಶಕ್ಕೆ ಹೋದರೆ ಲಿಂಗಾಯತನಾಗಲ್ಲ. ನಾನು ಹುಟ್ಟಿದಾಗಿನಿಂದಲೇ ಲಿಂಗಾಯತ. ಲಿಂಗಾಯತನಾಗಿಯೇ ಸಾಯುತ್ತೇನೆ ಎಂದು ಹೇಳಿದರು.

    ಇದೆ ವೇಳೆ ಬಿಜೆಪಿಯಿಂದ ನಿಮಗೆ ಟಿಕೆಟ್ ಸಿಗುತ್ತಾ ಎಂದು ಕೇಳಿದ್ದಕ್ಕೆ, ಇನ್ನೂ ನಿರ್ಧಾರವಾಗಿಲ್ಲ. ಖಂಡಿತವಾಗಿಯೂ ಬಿಜೆಪಿಯಿಂದ ನನಗೆ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದರು. ಒಂದು ವೇಳೆ ಟಿಕೆಟ್ ಸಿಗದೇ ಇದ್ದಲ್ಲಿ ಎನ್ನುವ ಮರು ಪ್ರಶ್ನೆಗೆ, ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

    https://youtu.be/vdLowLrsQL0

     

     

  • 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಬಣ್ಣ ನಾಲ್ಕೇ ತಿಂಗಳಲ್ಲಿ ಬಯಲು

    1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಬಣ್ಣ ನಾಲ್ಕೇ ತಿಂಗಳಲ್ಲಿ ಬಯಲು

    ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಬಳಿ ಕೇವಲ ನಾಲ್ಕು ತಿಂಗಳ ಹಿಂದೆ ನಿರ್ಮಿಸಿದ್ದ ಸೇತುವೆ ಈಗ ಮುರಿದು ಬೀಳುವ ಹಂತದಲ್ಲಿದೆ.

    ಚಿಕ್ಕೋಡಿ ಹಾಗೂ ಬೆಳಕೂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಬಿರುಕು ಕಾಣಿಸಿದ್ದು ಗ್ರಾಮಸ್ಥರು ಓಡಾಡೋಕೆ ಹೆದರುತ್ತಿದ್ದಾರೆ. ಈ ಸೇತುವೆ ನಿರ್ಮಾಣಕ್ಕೂ ಮುನ್ನ ಸೇತುವೆ ಚಿಕ್ಕದಾಗಿತ್ತು. ಜೊತೆಗೆ ನೀರು ಬಂದ್ರೆ ಸೇತುವೆ ಮುಳುಗಿ ಹೋಗ್ತಿತ್ತು. ಬಳಿಕ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಬಣ್ಣ ನಾಲ್ಕೇ ತಿಂಗಳಲ್ಲಿ ಬಯಲಾಗಿದೆ.

    ಈ ಮಾರ್ಗವಾಗಿ ಹತ್ತಾರು ಭಾರೀ ವಾಹನಗಳು, ಸಾರಿಗೆ ಇಲಾಖೆಯ ಬಸ್‍ಗಳು ಸಾಗುತ್ತವೆ. ಹೀಗಾಗಿ ಏನಾದ್ರೂ ಅನಾಹುತ ಆಗುತ್ತೆ ಅನ್ನೋ ಭಯದಲ್ಲಿ ಗ್ರಾಮಸ್ಥರು ಇದ್ದಾರೆ.

    ಇದು ರಾಯಭಾಗ ಕ್ಷೇತ್ರಕ್ಕೆ ಸೇರಿದ್ದು, ಬಿಜೆಪಿ ಶಾಸಕ ದುಯೋರ್ಧನ ಐಹೊಳೆಯವರಿಗೆ ಕೇಳಿದ್ರೆ ಈ ಸೇತುವೆ ಕಾಮಗಾರಿಗೆ ಕೊಟ್ಟಿದ್ದ ಟೆಂಡರ್‍ನಲ್ಲಿ ಕೇವಲ ಸೇತುವೆ ನಿರ್ಮಾಣ ಪ್ರಸ್ತಾವನೆ ಮಾತ್ರ ಸಲ್ಲಿಸಲಾಗಿತ್ತು. ಈಗ ರಸ್ತೆ ಕಾಮಗಾರಿಗಾಗಿ ಬೇರೆ ಟೆಂಡರ್‍ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತ ಹೇಳ್ತಾರೆ.

    ಇದನ್ನು ನೋಡಿದ್ರೆ ಡಬಲ್ ಟೆಂಡರ್ ಕರೆದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಣ ನುಂಗುವ ತಂತ್ರ ಮಾಡಿದ್ದಾರಾ? ಅಂತ ಅನುಮಾನ ಮೂಡ್ತಿದೆ.

  • ಅತ್ಯಾಚಾರದಿಂದ 7 ತಿಂಗ್ಳ ಗರ್ಭಿಣಿಯಾದ ಬುದ್ಧಿಮಾಂದ್ಯ ಯುವತಿ!

    ಅತ್ಯಾಚಾರದಿಂದ 7 ತಿಂಗ್ಳ ಗರ್ಭಿಣಿಯಾದ ಬುದ್ಧಿಮಾಂದ್ಯ ಯುವತಿ!

    ಬೆಳಗಾವಿ: ಅತ್ಯಾಚಾರವೆಸಗಿದ್ದರಿಂದ ಬುದ್ಧಿಮಾಂದ್ಯ ಯವತಿಯೊಬ್ಬರು ಇದೀಗ 7 ತಿಂಗಳ ಗರ್ಭಿಣಿಯಾಗಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಬೆಳಗಾವಿ ತಾಲೂಕಿನ ಕೆ ಕೆ ಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಹೀನ ಕೃತ್ಯ ಮಾಡಿದ ಆರೋಪಿ ಯಾರು ಎಂಬುದು ಗೊತ್ತಾಗಿಲ್ಲ.

    ಸಂತ್ರಸ್ಥೆ 7 ತಿಂಗಳು ಗರ್ಭಿಣಿಯಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬುದ್ಧಿಮಾಂದ್ಯ ಯುವತಿಯರನ್ನು ಟಾರ್ಗೇಟ್ ಮಾಡಿ ಅವರ ಮೇಲೆ ಅತ್ಯಾಚಾರ ಮಾಡಿ ಅವರಿಗೆ ಜನಿಸಿದ ಮಕ್ಕಳನ್ನು ಮಾರಾಟ ಮಾಡುವ ಜಾಲ ಬೆಳಗಾವಿ ಜಿಲ್ಲೆಯಲ್ಲಿ ಸಕ್ರೀಯವಾಗಿ ನಡೆಯುತ್ತಿದೆ ಎಂದು ಈ ಹಿಂದೆ ಪಬ್ಲಿಕ್ ಟಿವಿ ವರದಿ ಮಾಡಿತ್ತು.

     

     

     

  • ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಎಂಡಿ ಲಕ್ಷ್ಮಿನಾರಾಯಣ್‍ಗೆ ಟಿಕೆಟ್- ಸಿಎಂ ವಿರುದ್ಧ ಸತೀಶ್ ಜಾರಕಿಹೋಳಿ ಗರಂ

    ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಎಂಡಿ ಲಕ್ಷ್ಮಿನಾರಾಯಣ್‍ಗೆ ಟಿಕೆಟ್- ಸಿಎಂ ವಿರುದ್ಧ ಸತೀಶ್ ಜಾರಕಿಹೋಳಿ ಗರಂ

    ಬೆಳಗಾವಿ: ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿವಾದದಿಂದ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೋಳಿ ನಡುವೆ ಮತ್ತೊಂದು ಸುತ್ತಿನ ಮುನಿಸಿಗೆ ಕಾರಣವಾಗುವ ಸಾಧ್ಯತೆ ಇದೆ.

    ಕೆಪಿಸಿಸಿ ಹಿಂದುಳಿದ ಘಟಕದ ಅಧ್ಯಕ್ಷ ಹಾಲಿ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿ ನಾರಾಯಣ್ ಈ ವಿವಾದದ ಮೂಲ. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರ ನೇಕಾರ ಸಮುದಾಯದ ಮತದಾರರಿದ್ದಾರೆ. ಆದ್ದರಿಂದ ನೇಕಾರ ಸಮುದಾಯದ ಲಕ್ಷ್ಮಿನಾರಾಯಣ್‍ಗೆ ಬೆಳಗಾವಿ ದಕ್ಷಿಣ ಟಿಕೆಟ್ ಎಂದು ಸಿಎಂ ಘೋಷಿಸಿದ್ದಾರೆ. ಇದು ಜಿಲ್ಲೆಯ ಪ್ರಭಾವಿ ನಾಯಕ ಸತೀಶ್ ಜಾರಕಿಹೋಳಿ ಕಣ್ಣು ಕೆಂಪಾಗಿಸಿದೆ.

    ಜಿಲ್ಲಾ ಮುಖಂಡರ ಅನುಮತಿ ಪಡೆಯದೆ ತುಮಕೂರಿನ ಲಕ್ಷ್ಮಿನಾರಾಯಣ್ ಹೆಸರನ್ನು ಸಿಎಂ ಘೋಷಿಸಿದ್ದು ಹೇಗೆ? ಎಂದು ಸತೀಶ್ ಜಾರಕಿಹೋಳಿ ಸಿಟ್ಟಾಗಿದ್ದು, ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಹೇಗೆ ಟಿಕೆಟ್ ಕೊಟ್ಟು ಸಿಎಂ ಗೆಲ್ಲಿಸ್ತಾರೆ ನೋಡೋಣ ಎಂದಿದ್ದಾರೆ.

    ಅಲ್ಲದೆ ಇವರೊಬ್ಬರೆನಾ ಹಿಂದುಳಿದ ವರ್ಗದ ನಾಯಕ? ನಾನು ನೋಡ್ತೀನಿ ಎಂದು ಅಸಮಧಾನ ಹೊರಹಾಕಿದ್ದಾರೆ. ರಾಜ್ಯ ನಾಯಕರ ಬಳಿಯೂ ಅಸಮಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

  • 300 ರೋಗಿಗಳಿಗೆ ಮೂರೇ ವೈದ್ಯರು – ವಸತಿಗೃಹದಲ್ಲಿ ಹಾವು, ಚೇಳುಗಳ ದರ್ಬಾರ್

    300 ರೋಗಿಗಳಿಗೆ ಮೂರೇ ವೈದ್ಯರು – ವಸತಿಗೃಹದಲ್ಲಿ ಹಾವು, ಚೇಳುಗಳ ದರ್ಬಾರ್

    ಬೆಳಗಾವಿ: ಒಂದೆಡೆ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ತೊಡಿಸಲು ಸರ್ಕಾರ ಮುಂದಾಗಿದೆ. ಆದರೆ ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳೇ ಐಸಿಯುನಲ್ಲಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಬ್ಬೂರು ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲಿನ 10 ಹಳ್ಳಿಗಳಿಂದ ದಿನನಿತ್ಯ ಇನ್ನೂರರಿಂದ ಮುನ್ನೂರು ರೋಗಿಗಳು ಬರುತ್ತಾರೆ. ಆದ್ರೆ ಸೂಕ್ತ ಸಮಯದಲ್ಲಿ ಇಲ್ಲಿ ಚಿಕಿತ್ಸೆ ಸಿಗುವುದು ಮಾತ್ರ ಅಪರೂಪ.

    ಇಲ್ಲಿರುವುದು ಕೇವಲ ಮೂರು ವೈದ್ಯರು ಹಾಗೂ ಮೂವರು ನರ್ಸ್‍ಗಳು ಮಾತ್ರ. ಡಿ ದರ್ಜೆ ಸಿಬ್ಬಂದಿಯಿರುವುದು ಕೇವಲ ಒಬ್ಬರು ಮಾತ್ರ. ಹಲವು ಬಾರಿ ಗರ್ಭಿಣಿಯರಿಗೆ ನರ್ಸಗಳೇ ಹೆರಿಗೆ ಮಾಡಿಸಿದ್ದಾರೆ. ಮತ್ತೊಂದಡೆ ವೈದ್ಯರಿಗಾಗಿ ನಿರ್ಮಿಸಲಾಗಿರುವ ವಸತಿ ಗೃಹಗಳು ಹಾವು ಚೇಳುಗಳ ಆವಾಸ ಸ್ಥಾನವಾಗಿದೆ.