Tag: belagavi

  • ಮತದಾರರಿಗೆ ಸ್ಯಾನಿಟರಿ ಪ್ಯಾಡ್ ಹಂಚಿಕೆ- ಮುಜುಗರಕ್ಕೆ ಒಳಗಾದ ಮಹಿಳೆಯರಿಂದ ಪ್ರತಿಭಟನೆ

    ಮತದಾರರಿಗೆ ಸ್ಯಾನಿಟರಿ ಪ್ಯಾಡ್ ಹಂಚಿಕೆ- ಮುಜುಗರಕ್ಕೆ ಒಳಗಾದ ಮಹಿಳೆಯರಿಂದ ಪ್ರತಿಭಟನೆ

    ಬೆಳಗಾವಿ: ಇತ್ತೀಚೆಗೆ ಬೆಳಗಾವಿಯಲ್ಲಿ ಗ್ಯಾಸ್ ಸ್ಟೋ, ಕುಕ್ಕರ್ ಮತ್ತು ಇಸ್ತ್ರೀ ಪೆಟ್ಟಿಗೆಗಳನ್ನು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿತರಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಬಿಜೆಪಿ ಮುಖಂಡರೊಬ್ಬರು ಸ್ಲಂ ನಿವಾಸಿಗಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿ ಮಹಿಳೆಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಬೆಳಗಾವಿ ಶ್ರೀನಗರ ಗಾರ್ಡನ್ ಬಳಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮಹಿಳೆಯರು ಸ್ಯಾನಿಟರಿ ಪ್ಯಾಡ್ ಕೈಯಲ್ಲಿ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ನೀಡಿದ ರಾಜಕಾರಣಿಗೆ ಹಿಡಿ ಶಾಪ ಹಾಕಿದ್ದಾರೆ.

    ಸ್ಲಂ ನಿವಾಸಿಗಳ 60 ಮನೆಗಳಿಗೆ ಬಿಜೆಪಿ ಮುಖಂಡರ ಬೆಂಬಲಿಗರು ಬಂದು ಸ್ಯಾನಟರಿ ಪ್ಯಾಡ್ ನೀಡಿ ಇದನ್ನು ಬಳಸುವಂತೆ ಹೇಳಿದ್ದಾರೆ. ಆದರೇ ಮೊದಲು ಈ ಬಗ್ಗೆ ಇಲ್ಲಿನ ಮಹಿಳೆಯರಿಗೆ ಗೊತ್ತಾಗಿಲ್ಲ. ನಂತರ ಮಾಹಿತಿ ತಿಳಿದು ಬಿಜೆಪಿ ಮುಖಂಡ ಅನಿಲ್ ಬೆನಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಅನಿಲ್ ಬೆನಕೆ ಅಪಮಾನ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಹ ಇಲ್ಲಿನ ಮುಖಂಡರು ಪತ್ರ ಬರೆದು ಒತ್ತಾಯಿಸಿದ್ದಾರೆ. ಬುಧವಾರ ಸ್ಲಂ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿದ್ದು ಈಗಲ್ಲ. ಬದಲಿಗೆ ಮಾರ್ಚ್ 10ರಂದು ಮಹಿಳಾ ದಿನದ ಅಂಗವಾಗಿ ವಿತರಣೆ ಮಾಡಲಾಗಿತ್ತು. ಸ್ವಯಂ ಸೇವಾ ಸಂಘವೊಂದು ನನ್ನ ಬಳಿ ಬಂದು ಸ್ಯಾನಿಟರಿ ಪ್ಯಾಡ್ ವಿತರಣೆ ಸಹಾಯ ಕೇಳಿತ್ತು. ಅದರಂತೆ ಧನ ಸಹಾಯ ಮಾಡಿದ್ದೇನೆ. ಇದರಲ್ಲಿ ನನ್ನದು ಏನು ತಪ್ಪಿಲ್ಲ. ಈ ವಿಚಾರವನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂದು ಅನಿಲ್ ಬೆನಕೆ ಸ್ಪಷ್ಟನೆ ನೀಡಿದ್ದಾರೆ.

    ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ರಾಜಕಾರಣಿಗಳು ಪರಸ್ಪರ ಕಾಲೆಳೆಯೋದು ಆರಂಭವಾಗಿದೆ.

  • ಪಿಕ್‍ಅಪ್ ವಾಹನ, ಬೈಕ್ ಮುಖಾಮುಖಿ ಡಿಕ್ಕಿ-ಸವಾರ ಸಾವು

    ಪಿಕ್‍ಅಪ್ ವಾಹನ, ಬೈಕ್ ಮುಖಾಮುಖಿ ಡಿಕ್ಕಿ-ಸವಾರ ಸಾವು

    ಬೆಳಗಾವಿ: ಬೊಲೆರೋ ಪಿಕ್‍ಅಪ್ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಒರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದ ಬಳಿ ನಡೆದಿದೆ.

    ಹರೀಶ್ ಪಟೇಲ್ (55) ಎಂಬ ಮೃತ ಬೈಕ್ ಸವಾರ. ಜಾನುವಾರು ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಹರೀಶ್ ಗಂಭೀರವಾಗಿ ಗಾಯಗೊಂಡಿದ್ದರಿಂದ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • `ಕತ್ತಿ ಸಾಹುಕಾರ್’ ಅಂತ ಬ್ಲೇಡ್‍ನಿಂದ ಹಚ್ಚೆ ಹಾಕಿಕೊಂಡ ಬಿಜೆಪಿ ಮುಖಂಡನ ಹುಚ್ಚು ಅಭಿಮಾನಿ- ಫೋಟೋ ವೈರಲ್

    `ಕತ್ತಿ ಸಾಹುಕಾರ್’ ಅಂತ ಬ್ಲೇಡ್‍ನಿಂದ ಹಚ್ಚೆ ಹಾಕಿಕೊಂಡ ಬಿಜೆಪಿ ಮುಖಂಡನ ಹುಚ್ಚು ಅಭಿಮಾನಿ- ಫೋಟೋ ವೈರಲ್

    ಬೆಳಗಾವಿ: ಅಭಿಮಾನಿಗಳು ನೆಚ್ಚಿನ ನಟ-ನಟಿಯರ ಹೆಸರುಗಳನ್ನ ತಮ್ಮ ಮೈಮೇಲೆ ಹಚ್ಚೆ ಹಾಕಿಸಿಕೊಳ್ಳೋದು ಸಾಮಾನ್ಯ. ಆದ್ರೆ ಚುಣಾವಣೆ ಹತ್ತಿರ ಬರುತ್ತಿದ್ದಂತೆಯೇ ಅಭಿಮಾನಿಗಳಿಗೆ ತಮ್ಮ ನಾಯಕರ ಪರವಾಗಿ ಎಲ್ಲಿಲ್ಲದ ಪ್ರೀತಿ ಬಂದು ಬಿಡುತ್ತೆ ಅನ್ನೋದಕ್ಕೆ ಇಲ್ಲೊಂದು ಜೀವಂತ ಉದಾಹರಣೆ ಇದೆ.

    ಇಲ್ಲೊಬ್ಬ ಅಭಿಮಾನಿ ತನ್ನ ಕೈಯಲ್ಲಿ ನಾಯಕನ ಹೆಸರನ್ನು ಬ್ಲೇಡ್ ನಿಂದ ಕೊಯ್ದುಕೊಳ್ಳುವ ಮೂಲಕ ಹುಚ್ಚು ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಿಜೆಪಿ ಯುವ ಮುಖಂಡ ಪವನ್ ಪಾಟೀಲ್ ಎಂಬಾತ ಹುಕ್ಕೇರಿ ಮತ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಹೆಸರನ್ನು `ಕತ್ತಿ ಸಾಹುಕಾರ್’ ಅಂತ ಬರೆದುಕೊಳ್ಳುವುದರ ಮೂಲಕ ತನ್ನ ಹುಚ್ಚು ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ.

    ಪವನ್ ಪಾಟೀಲ್ ತನ್ನ ಮನೆ ದೇವರಾದ ಮಂಗಸೂಳಿ ಮಲ್ಲಯ್ಯ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಹರಕೆ ಹೊತ್ತು ತನ್ನ ಎಡಗೈ ಮೇಲೆ ಕತ್ತಿಸಾಹುಕಾರ್ ಎಂದು ಬರೆದುಕೊಂಡಿದ್ದಾನೆ ಎನ್ನಲಾಗಿದೆ.

    ಸದ್ಯ ಪವನ್ ಪಾಟೀಲ್ ಅವರ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

  • ಟೈಟ್ ಆದ ಕುಡುಕರ ಸಾಗ ಹಾಕಲು ಆಂಬುಲೆನ್ಸ್ ಬಳಕೆ- ಚಿಕ್ಕೋಡಿಯಲ್ಲಿ ಸರ್ಕಾರದ ಸೇವೆ ದುರ್ಬಳಕೆ

    ಟೈಟ್ ಆದ ಕುಡುಕರ ಸಾಗ ಹಾಕಲು ಆಂಬುಲೆನ್ಸ್ ಬಳಕೆ- ಚಿಕ್ಕೋಡಿಯಲ್ಲಿ ಸರ್ಕಾರದ ಸೇವೆ ದುರ್ಬಳಕೆ

    ಬೆಳಗಾವಿ: ರೋಗಿಗಳಿಗೆ, ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಸೇವೆಗಾಗಿ ಇರೋ 108 ಆಂಬುಲೆನ್ಸ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣವೊಂದು ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿರುವ ಹುಲಿಗೆಮ್ಮ ಬಾರ್ ಹಾಗೂ ರೆಸ್ಟೋರೆಂಟ್‍ನವರು ಆಂಬುಲೆನ್ಸ್ ಸೇವೆಯನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಬಾರ್ ಗೆ ಬಂದು ಟೈಟ್ ಆಗೋ ಕುಡುಕರನ್ನು ಸಾಗ ಹಾಕಲು ಆಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸೇವೆ ಒದಗಿಸುವ ನಿಟ್ಟಿನಲ್ಲಿ ಆಂಬುಲೆನ್ಸ್ ಸಿಬ್ಬಂದಿ ಅನಿವಾರ್ಯವಾಗಿ ಸೇವೆ ನೀಡುತ್ತಿದ್ದಾರೆ. ವಾರಕ್ಕೆ ಮೂರ್ನಾಲ್ಕು ಬಾರಿ ಈ ರೀತಿ ಮಾಡುತ್ತಿದ್ದು, ಆರೋಗ್ಯ ಇಲಾಖೆ ಹಾಗೂ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇದೀಗ ಅಲ್ಲಿನ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

  • ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಒಂದು ಲಾರಿ ಕುಕ್ಕರ್ ವಶಕ್ಕೆ!

    ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಒಂದು ಲಾರಿ ಕುಕ್ಕರ್ ವಶಕ್ಕೆ!

    ಬೆಳಗಾವಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಅಮಿಷಗಳ ಸುರಿಮಳೆಯಾಗುತ್ತಿದೆ. ಮತದಾರರಿಗೆ ಹಂಚಲು ಲಾರಿಯಲ್ಲಿ ಸಾಗಿಸುತ್ತಿದ್ದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಕುಕ್ಕರ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಮತದಾರರಿಗೆ ನೀಡಲು ಸಾಗಾಟ ಮಾಡುತ್ತಿದ್ದ ಕುಕ್ಕರ್ ಗಳ ಬಗ್ಗೆ ಬಿಜೆಪಿ ಮುಖಂಡ ಅನಿಲ್ ಬೆನಕೆ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಲಾರಿ ಸಮೇತ ಕುಕ್ಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೆಳಗಾವಿ ಜಿಲ್ಲಾಧಿಕಾರಿ ಮನೆ ಮುಂಭಾಗದಲ್ಲಿ ನಡೆದ ಘಟನೆ ವೇಳೆ ಬಿಜೆಪಿ ಮುಖಂಡ ಅನಿಲ್ ಬೆನಕೆ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನಾರಾಜ್ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಲಾರಿಯನ್ನು ತಡೆದು ವಶಕ್ಕೆ ಪಡೆದಿದ್ದಾರೆ.

    https://twitter.com/ShobhaBJP/status/980035106738880512

  • ಕ್ರೂಸರ್, ಕಾರ್, 4 ಬೈಕ್ ಗಳಿಗೆ ಡಿಕ್ಕಿ ಹೊಡೆದ ಟೆಂಪೋ – ಬೈಕ್ ಸವಾರನ ಕಾಲು ಕಟ್

    ಕ್ರೂಸರ್, ಕಾರ್, 4 ಬೈಕ್ ಗಳಿಗೆ ಡಿಕ್ಕಿ ಹೊಡೆದ ಟೆಂಪೋ – ಬೈಕ್ ಸವಾರನ ಕಾಲು ಕಟ್

    ಬೆಳಗಾವಿ: ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್, ಕಾರು ಮತ್ತು ನಾಲ್ಕು ಬೈಕ್ ಗಳು ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ಕಾಲು ಕಟ್ ಆಗಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ್ ಕ್ರಾಸ್ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ.

    ಟೆಂಪೋ ವಿಜಯಪುರದಿಂದ ಅಥಣಿ ಕಡೆಗೆ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕ್ರೂಸರ್, ಕಾರು ಮತ್ತು ನಾಲ್ಕು ಬೈಕ್ ಗಳಿಗೆ ಡಿಕ್ಕಿಯಾಗಿದೆ. ಇದರಿಂದ ಬೈಕ್ ಸವಾರನ ಕಾಲು ಕಟ್ ಆಗಿದ್ದು, ಉಳಿದ ಬೈಕ್ ಸವಾರರ ಪರಿಸ್ಥಿತಿ ಚಿಂತಾಜನಕವಾಗಿದೆ.

    ಚಾಲಕನ ನಿಯಂತ್ರಣ ತಪ್ಪಿ ಈ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರರು ಬಿದ್ದು ನರಳಾಡುತ್ತಿದ್ದರು. ಆದರೆ ಅಪಘಾತ ನಡೆದು ಅರ್ಧ ಗಂಟೆಯಾದರೂ ಸಹ ಸ್ಥಳಕ್ಕೆ ಆಂಬುಲೆನ್ಸ್ ಬರಲಿಲ್ಲ. ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಟೆಂಪೋ ಚಾಲಕ ಭಯಗೊಂಡು ಪರಾರಿಯಾಗಿದ್ದಾನೆ.

  • ಕಾಂಗ್ರೆಸ್ ನಲ್ಲಿ ಬರ್ತ್, ಡೆತ್ ಸರ್ಟಿಫಿಕೇಟಿದ್ದರೆ ಸಾಕು, ಪ್ರಧಾನಿಯಾಗ್ಬಹುದು- ನಟಿ ತಾರಾ

    ಕಾಂಗ್ರೆಸ್ ನಲ್ಲಿ ಬರ್ತ್, ಡೆತ್ ಸರ್ಟಿಫಿಕೇಟಿದ್ದರೆ ಸಾಕು, ಪ್ರಧಾನಿಯಾಗ್ಬಹುದು- ನಟಿ ತಾರಾ

    ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಡೆತ್ ಸರ್ಟಿಫಿಕೇಟ್, ಬರ್ತ್ ಸರ್ಟಿಫಿಕೇಟ್ ಇದ್ರೆ ಸಾಕು ಪ್ರಧಾನಿ, ಪಕ್ಷದ ಅಧ್ಯಕ್ಷ ಆಗಬಹುದು ಎಂದು ನಟಿ, ವಿಧಾನ ಪರೀಷತ್ ಸದಸ್ಯೆ ತಾರಾ ಹೇಳಿದ್ದಾರೆ.

    ಬೆಳಗಾವಿ ಮಿಲೇನಿಯಮ್ ಗಾರ್ಡನ್ ನಲ್ಲಿ ಎಬಿವಿಪಿ ಏರ್ಪಡಿಸಿದ್ದ ರಂಗ್‍ದೇ ಬಸಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ಹೇಳಿಕೆ ನೀಡಿದ್ದಾರೆ. ನೆಹರು ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು. ನಂತರ ಇಂದಿರಾ ಗಾಂಧಿಯಿಂದ ಡೆತ್ ಸರ್ಟಿಫಿಕೇಟ್ ಪಡೆದು ರಾಜೀವ್ ಗಾಂಧಿ ಸಹ ಪ್ರಧಾನಿಯಾಗಿದ್ದರು. ರಾಜೀವ್ ಗಾಂಧಿಯ ಡೆತ್ ಸರ್ಟಿಫಿಕೇಟ್ ಪಡೆದು ಸೊನಿಯಾ ಗಾಂಧಿ ಸಹ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದೀಗ ಸೋನಿಯಾ ಗಾಂಧಿಯಿಂದ ಬರ್ತ್ ಸರ್ಟಿಫಿಕೇಟ್ ಪಡೆದ ರಾಹುಲ್ ಸಹ ಎಐಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ ಅಂದ್ರು.

    ಆದರೆ ಈ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿ ಇಲ್ಲ. ಇಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ದೇಶದ ಪ್ರಧಾನಿ ಆಗಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಧರ್ಮ ಒಡೆಯುವ ಸಂಸ್ಕೃತಿ ಆರಂಭವಾಗಿದ್ದು, ಇದರ ವಿರುದ್ಧ ಎಬಿವಿಪಿ ಜಾಗೃತಿ ಮೂಡುವ ಅವಶ್ಯಕತೆ ಇದೆ ಎಂದು ತಾರಾ ಕರೆ ನೀಡಿದ್ರು.

  • 2ನೇ ಬಾರಿ ಮೋಸ ಹೋದ ಗ್ರಾಹಕ- ಮೊಬೈಲ್ ಬುಕ್ ಮಾಡಿದ್ರೆ ಬಂದಿದ್ದು ಬರೀ ಬಾಕ್ಸ್ ಮಾತ್ರ!

    2ನೇ ಬಾರಿ ಮೋಸ ಹೋದ ಗ್ರಾಹಕ- ಮೊಬೈಲ್ ಬುಕ್ ಮಾಡಿದ್ರೆ ಬಂದಿದ್ದು ಬರೀ ಬಾಕ್ಸ್ ಮಾತ್ರ!

    ಬೆಳಗಾವಿ: ಪ್ರತಿಷ್ಠಿತ ಆನ್ ಲೈನ್ ಕಂಪನಿಯಿಂದ ವ್ಯಕ್ತಿಯೊಬ್ಬರು ಎರಡನೇ ಬಾರಿ ಮೋಸ ಹೋದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ.

    ಕುಡಚಿ ಪಟ್ಟಣ ನಿವಾಸಿ ವರ್ಧಮಾನ ಬಾಲೋಜಿ ಎಂಬವರು ಫ್ಲಿಪ್‍ಕಾರ್ಟ್ ಮೂಲಕ್ ಲೆನೊವೊ ನೋಟ್ ಮೊಬೈಲ್ ಫೋನ್ ಬುಕ್ ಮಾಡಿದ್ದರು. ಆದ್ರೆ ಇದೀಗ ಅವರಿಗೆ ಕಂಪೆನಿಯಿಂದ ಮೊಬೈಲ್ ಬದಲು ಖಾಲಿ ಇರುವ ಲೆನೊವೊ ಕಂಪನಿಯ ಬಾಕ್ಸ್ ಮಾತ್ರ ಬಂದಿದೆ.

    ಈ ಮೊದಲು ವರ್ಧಮಾನ ಅವರು ಮೊಬೈಲ್ ಬುಕ್ ಮಾಡಿ ಇದೇ ರೀತಿ ಮೋಸ ಹೋಗಿದ್ದರು. ಹೀಗಾಗಿ ಈ ಬಾರಿ ಅವರು ಆನ್ ಲೈನ್ ಮೂಲಕ ಬಂದಿದ್ದ ಪ್ಯಾಕ್ ತೆರೆಯುವಾಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಪ್ಯಾಕ್ ಬಿಚ್ಚಿದಾಗ ಪಾರ್ಸೆಲ್ ನಲ್ಲಿ ಕೇವಲ ಖಾಲಿ ಬಾಕ್ಸ್ ಮಾತ್ರ ಇದ್ದಿದ್ದು ಕಂಡುಬಂದಿದೆ.

    ಹಣ ನೀಡಿಯೇ ಪಾರ್ಸೆಲ್ ಪಡೆದಿದ್ದ ವರ್ಧಮಾನ ಅವರು ಈ ಬಾರಿಯೂ ಮೊಬೈಲ್ ಸಿಗದೇ ಮೋಸ ಹೋಗಿದ್ದಾರೆ. ಸದ್ಯ ಆನ್‍ಲೈನ್ ಕಂಪನಿ ಮಾಡಿರುವ ಮೋಸಕ್ಕೆ ವರ್ಧಮಾನ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

  • ಗೋವಾ ಪ್ರವಾಸದ ನೆಪದಲ್ಲಿ ರೈಲಿನಿಂದ ತಳ್ಳಿ ಪ್ರೇಯಸಿಯ ಹತ್ಯೆ

    ಗೋವಾ ಪ್ರವಾಸದ ನೆಪದಲ್ಲಿ ರೈಲಿನಿಂದ ತಳ್ಳಿ ಪ್ರೇಯಸಿಯ ಹತ್ಯೆ

    ಬೆಳಗಾವಿ: ಮದುವೆಗೆ ಒತ್ತಾಯಿಸಿದ್ದಕ್ಕೆ ಪ್ರೇಯಸಿಯನ್ನು ರೈಲಿನಿಂದ ತಳ್ಳಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಪುನಂ (22) ಪ್ರಿಯಕರನಿಂದ ಹತ್ಯೆಯಾದ ಯುವತಿ. ಅಸ್ಟೋಳಿ ಗ್ರಾಮದ ರೈಲ್ವೆ ಸೇತುವೆ ಬಳಿ ಮಾರ್ಚ್ 15 ರಂದು ಪುನಂ ಶವ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಾಳ ಪೋಷಕರು ಇದು ಕೊಲೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

    ದೂರು ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ ಖಾನಾಪುರ ಪೊಲೀಸರ ಬಲೆಗೆ ಕೊಲೆ ಮಾಡಿದ್ದ ಸಹೋದರರು ಸಿಕ್ಕಿದ್ದಾರೆ. ಬಿಎಚ್‍ಎಂಎಸ್ ವೈದ್ಯ ಸುನೀಲ್ ನನ್ನು ಮೃತ ಪುನಂ ಪ್ರೀತಿಸುತ್ತಿದ್ದಳು. ಆದರೆ ಪುನಂ ಇತ್ತೀಚೆಗೆ ಮದುವೆ ಮಾಡಿಕೊಳ್ಳುವಂತೆ ಸುನೀಲ್ ನನ್ನು ಒತ್ತಾಯಿಸಿದ್ದಳು. ಆದರೆ ಸುನೀಲ್ ಅಂತರ್ ಜಾತಿ ಹಿನ್ನೆಲೆಯಲ್ಲಿ ಮದುವೆಯನ್ನು ನಿರಾಕರಿಸಿದ್ದಾನೆ.

    ಪುನಂ ಮತ್ತೆ ಮತ್ತೆ ಮದುವೆ ಒತ್ತಾಯಿಸಿದ್ದರಿಮದ ಸುನೀಲ್ ತನ್ನ ಸಹೋದರ ಸಂಜಯ ಜೊತೆ ಪುನಂ ಮುಗಿಸಲು ಪ್ಲಾನ್ ಮಾಡಿದ್ದಾನೆ. ಅದರಂತೆಯೇ ಗೋವಾ ಪ್ರವಾಸದ ನೆಪದಲ್ಲಿ ಪುನಂ ಕರೆದು ಕೊಂಡು ಹೋಗಿದ್ದಾನೆ. ನಂತರ ರೈಲಿನಿಂದ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯಕ್ಕೆ ಖಾನಾಪುರ ಪೊಲೀಸರು ಆರೋಪಿಗಳಾದ ವೈದ್ಯ ಸುನೀಲ್ ಮತ್ತು ಸಂಜಯ್ ನನ್ನ ಬಂಧಿಸಿದ್ದಾರೆ.

  • ಬೆಳಗಾವಿಯಲ್ಲಿ ಮೌಢ್ಯಾಚರಣೆ ಇನ್ನೂ ಜೀವಂತ- ದೇವಸ್ಥಾನದ 15 ಅಡಿ ಎತ್ತರದಿಂದ ಮಕ್ಕಳನ್ನು ಕೆಳಕ್ಕೆ ಎಸೆಯುತ್ತಾರೆ

    ಬೆಳಗಾವಿಯಲ್ಲಿ ಮೌಢ್ಯಾಚರಣೆ ಇನ್ನೂ ಜೀವಂತ- ದೇವಸ್ಥಾನದ 15 ಅಡಿ ಎತ್ತರದಿಂದ ಮಕ್ಕಳನ್ನು ಕೆಳಕ್ಕೆ ಎಸೆಯುತ್ತಾರೆ

    ಬೆಳಗಾವಿ: ಜಿಲ್ಲೆಯಲ್ಲಿ ಮೌಢ್ಯಾಚರಣೆ ಇನ್ನೂ ಜೀವಂತವಾಗಿದೆ. ಇದಕ್ಕೆ ಸಾಕ್ಷಿಯೆನ್ನುವಂತೆ 12 ರಿಂದ 15 ಅಡಿ ಎತ್ತರದಿಂದ ಮಕ್ಕಳನ್ನು ಪೂಜಾರಿ ಎಸೆಯುವ ಆಚರಣೆ ಇಲ್ಲಿನ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಭೀರೇಶ್ವರ ದೇವಸ್ಥಾನದಲ್ಲಿ ನಡೆದಿದೆ.

    ಯುಗಾದಿ ಹಬ್ಬದ ದಿನವೇ ಅಮಾನವಿಯ ಘಟನೆ ನಡೆದಿದ್ದು, ಘಟನೆ ನಡೆದು 48 ಗಂಟೆ ಕಳೆದರೂ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಪ್ರಜ್ಞಾವಂತ ನಾಗರಿಕರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

    ಗಂಡು ಮಕ್ಕಳಾದ್ರೆ ಇಲ್ಲವೇ ಕುಟುಂಬಕ್ಕೆ ಒಳ್ಳೆಯದನ್ನ ಬಯಸಿ ಹರಕೆ ಹೊತ್ತಿದ್ದರೆ ಚಿಕ್ಕ ಮಕ್ಕಳನ್ನು 12 ರಿಂದ 15 ಅಡಿ ಎತ್ತರದಿಂದ ಎಸೆಯುವ ಅಂಧಾಚರಣೆಗೆ ಗ್ರಾಮಸ್ಥರು ಮೊರೆ ಹೋಗಿದ್ದಾರೆ. 1-5 ವರ್ಷದೊಳಗಿನ ಮಕ್ಕಳನ್ನು ದೇವಸ್ಥಾನದ ಮೇಲಿಂದ ಕೆಳಕ್ಕೆ ಎಸೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಅಥಣಿ ತಾಲೂಕಾಡಳಿತ ಮಾತ್ರ ಇನ್ನು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಕಿರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೂಡಲೇ ಬೆಳಗಾವಿ ಜಿಲ್ಲಾಡಳಿತ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.