Tag: belagavi

  • ಖಾನಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಐಟಿ ಶಾಕ್

    ಖಾನಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಐಟಿ ಶಾಕ್

    ಬೆಳಗಾವಿ: ಖಾನಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ಮಾಡುವ ಮೂಲಕ ಶಾಕ್ ಕೊಟ್ಟಿದ್ದಾರೆ.

    ಖಾನಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ ಭಾಗವಾನ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಇರುವ ಮನೆ ಮತ್ತು ಹುಬ್ಬಳ್ಳಿಯಲ್ಲಿರುವ ಮನೆಯ ಮೇಲೂ 13 ಮಂದಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

    ನಾಸೀರ ಭಾಗವಾನ್ ಕರ್ನಾಟಕ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಸುಮಾರು 191 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೇ ತಮ್ಮ ಬಳಿ ಯಾವುದೇ ವಾಹನ ಇಲ್ಲ ಎಂದು ಹೇಳಿದ್ದರು. ಅಂದು ಹೇಳಿದ್ದ ಹೇಳಿಕೆಯೇ ಇಂದು ಅವರಿಗೆ ಮುಳುವಾಗಿದೆ ಎನ್ನಲಾಗಿದೆ.

    ಆದ್ರೆ ಇತ್ತ ಅಧಿಕಾರಿಗಳು ಮಾತ್ರ ಇನ್ನು ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಲಿಲ್ಲ.

  • ಕಾರಿಗೆ ಡಿಕ್ಕಿಗೆ ಹೊಡೆದ ಟಿಪ್ಪರ್-ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಕಾರಿಗೆ ಡಿಕ್ಕಿಗೆ ಹೊಡೆದ ಟಿಪ್ಪರ್-ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

    ಚಿಕ್ಕೋಡಿ ಪಟ್ಟಣದ ಹುಕ್ಕೇರಿ ಕ್ರಾಸ್ ಬಳಿ ಸ್ವಿಫ್ಟ್ ಕಾರಿಗೆ ಹಿಂಬದಿಯಿಂದ ಕಲ್ಲು ತುಂಬಿದ್ದ ಟಿಪ್ಪರ್ ಗುದ್ದಿದ ಪರಿಣಾಮ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದೆ. ಕಾರ್ ನುಜ್ಜಾಗುಜ್ಜಾಗಿದ್ದರಿಂದ ಒಳಗಡೆ ಯಕ್ಸಾಂಬಾ ಪಟ್ಟಣದ ಜಗದೀಶ್ ಸರಿಕರ್ ಮತ್ತು ಅಥಣಿಯ ಹೊನಕಪ್ಪ ಎಂಬವರು ಸಿಲುಕಿಕೊಂಡಿದ್ದರು.

    ಕಾರಿನೊಳಗೆ ಸಿಲುಕಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಚಿಕ್ಕೋಡಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸುಳ್ಳು ಅಫಿಡವಿಟ್ ಸಲ್ಲಿಸಿ ಸಿಕ್ಕಿ ಹಾಕಿಕೊಂಡ ಶಾಸಕ ಅರವಿಂದ್ ಪಾಟೀಲ್

    ಸುಳ್ಳು ಅಫಿಡವಿಟ್ ಸಲ್ಲಿಸಿ ಸಿಕ್ಕಿ ಹಾಕಿಕೊಂಡ ಶಾಸಕ ಅರವಿಂದ್ ಪಾಟೀಲ್

    ಬೆಳಗಾವಿ: ನಗರದಲ್ಲಿ ಮರಾಠಿಗರ ಪರ ಹೋರಾಟ ಮಾಡಿ ಪಕ್ಷೇತರರ ಅಭ್ಯರ್ಥಿಯಾಗಿ ಖಾನಾಪುರ ಕ್ಷೇತ್ರದಿಂದ ನಿಂತು ಗೆದ್ದಿದ್ದ ಶಾಸಕ ಅರವಿಂದ್ ಪಾಟೀಲ್‍ ಅವರಿಗೆ  ಈಗ ತನಿಖೆಯ ಬಿಸಿ ಕಾಣತೊಡಗಿದೆ.

    ಮರಾಠ ಪರ ಹೋರಾಟಗಾರ ಅಂತ ಹೇಳಿಕೊಂಡು ಬೆಳಗಾವಿಯನ್ನು ಮಹರಾಷ್ಟ್ರಕ್ಕೆ ಸೇರಿಸಬೇಕು ಅಂತ ಹೋರಾಟ ಮಾಡಿ ಈ ಬಾರಿ ಎಂಇಎಸ್‍ನಿಂದ ಖಾನಾಪುರ ಕ್ಷೇತ್ರಕ್ಕೆ ಮತ್ತೆ ಸ್ಪರ್ದೆ ಮಾಡಲು ಮುಂದಾಗಿದ್ದ ಅರವಿಂದ್ ಪಾಟೀಲ್‍ಗೆ 2013 ಚುನಾವಣೆಯ ಸಂದರ್ಬದಲ್ಲಿ ಸಲ್ಲಿಸಿರೋ ಅಫಿಡವಿಟ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತನ್ನ ಪತ್ನಿ ಸುಜಾತ ಯಾವುದೇ ನೌಕರಿಯಲ್ಲಿ ಇಲ್ಲ ಮತ್ತು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟುತ್ತಿಲ್ಲ ಅಂತ ಘೋಷಣೆ ಮಾಡಿದ್ರು. ಆದ್ರೆ ಅರವಿಂದ್ ಪಾಟೀಲ್ ಪತ್ನಿ ರಾಜ್ಯ ಸರ್ಕಾರಿ ನೌಕರರಾಗಿದ್ದು ಹುಕ್ಕೇರಿ ತಾಲೂಕಿನ ಹಿಟ್ನಾ ಗ್ರಾಮದಲ್ಲಿರೋ ಮರಾಠಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಆರ್‍ಟಿಐ ಕಾರ್ಯಕರ್ತರು ದೂರನ್ನು ನೀಡಿದ್ದು ಇದನ್ನು ಗಂಬೀರವಾಗಿ ಪರಿಗಣಿಸಿರೋ ಚುನವಣಾ ಆಯೋಗ ಬೆಳಗಾವಿ ಚುನಾವಣಾ ಅಧಿಕಾರಿಗೆ ಅರವಿಂದ್ ಪಾಟೀಲ್ ವಿರುದ್ದ ಸೂಕ್ತ ಕ್ರಮ ಕೈಗೋಳ್ಳುವಂತೆ ನಿರ್ದೇಶನ ನೀಡಿದೆ.

    2007ರಿಂದ ಸುಜಾತ ಅವರು ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಮರಾಠಿಗರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದ ಶಾಸಕ ಅರವಿಂದ್ ಪಾಟೀಲ್ ಪತ್ನಿ ರಾಜ್ಯ ಸರ್ಕಾರಿ ಮರಾಠಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದನ್ನು ಮರೆಮಾಚಿದ್ದರು. ಪತ್ನಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಕಿ ಆಗಿರೋದು ಗೊತ್ತಾದ್ರೆ ತಾಲೂಕಿನ ಜನ ಮತ ಹಾಕೋದಿಲ್ಲ ಅನ್ನೋ ಆತಂಕದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

  • ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7ಕೋಟಿ ರೂ. ಮೌಲ್ಯದ ನಕಲಿ ನೋಟು ಪತ್ತೆ- ಓರ್ವನ ಬಂಧನ

    ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7ಕೋಟಿ ರೂ. ಮೌಲ್ಯದ ನಕಲಿ ನೋಟು ಪತ್ತೆ- ಓರ್ವನ ಬಂಧನ

    ಬೆಳಗಾವಿ: ಚುನಾವಣೆ ಮೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7 ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.

    ವಿಶ್ವೇಶ್ವರಯ್ಯ ನಗರದ ಪಿಡಬ್ಲೂಡಿ ಹಾಪಾಳು ಬಿದ್ದ ವಸತಿ ಗೃಹದಲ್ಲಿ ಪತ್ತೆಯಾದ ನಕಲಿ ನೋಟುಗಳು ಪತ್ತೆಯಾಗಿದ್ದು, ಸದ್ಯ ಆರೋಪಿ ವಿಜಯಪುರ ಮೂಲದ ಅಜೀತಕುಮಾರ್ ನಿಡೋಣಿ(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಎರಡು ಸಾವಿರ ಹಾಗೂ ಐನೂರು ಮುಖ ಬೆಲೆಯ ನಕಲಿ ನೋಟುಗಳನ್ನು ಸಂಗ್ರಹ ಮಾಡಲಾಗಿತ್ತು. ಇದರ ಖಚಿತ ಮಾಹಿತಿ ಪಡೆದಿದ್ದ ಚುನಾವಣಾಧಿಕಾರಿಗಳು ಇಂದು ದಾಳಿ ನಡೆಸಿ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

    ಕಲರ್ ಪ್ರಿಂಟಿಂಗ್ ಮಷಿನ್‍ನಲ್ಲಿ ಬಿಳಿ ಕಾಗದದ ಮೇಲೆ ಪ್ರಿಂಟ್ ಮಾಡಿರುವ ನೋಟುಗಳು, ಜೊತೆಗೆ ರದ್ದಾದ ಒಂದು ಸಾವಿರ ಮುಖ ಬೆಲೆಯ ನೋಟುಗಳು ಹಾಗೂ ಎರಡು ಸಾವಿರ ನೋಟಿನ ಅಳತೆಯ ಕಟ್ ಮಾಡಿರುವ ಬಿಳಿ ಕಾಗದ ಬಂಡಲ್‍ಗಳು ಪತ್ತೆಯಾಗಿವೆ.

    ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಗೌರಿ ಲಂಕೇಶ್ ಹತ್ಯೆ ನಂತ್ರ ರೈ ಗೋರಿಯಿಂದ ಹೊರ ಬಂದಿದ್ದಾರೆ- ಪ್ರಮೋದ್ ಮುತಾಲಿಕ್ ಕಿಡಿ

    ಗೌರಿ ಲಂಕೇಶ್ ಹತ್ಯೆ ನಂತ್ರ ರೈ ಗೋರಿಯಿಂದ ಹೊರ ಬಂದಿದ್ದಾರೆ- ಪ್ರಮೋದ್ ಮುತಾಲಿಕ್ ಕಿಡಿ

    ಬೆಳಗಾವಿ: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೇಲೆ ಪ್ರಹಾರ ನಡೆಸುತ್ತಿರುವ ನಟ ಪ್ರಕಾಶ್ ರೈ ಗೌರಿ ಲಂಕೇಶ್ ಹತ್ಯೆ ನಂತರ ಗೋರಿಯಿಂದ ಹೊರ ಬಂದಿದ್ದಾರೆ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾವರಿ, ಮಹದಾಯಿ ಮತ್ತು ಕೃಷ್ಣ ನದಿ ಬಗ್ಗೆ ರೈ ಮಾತನಾಡಲ್ಲ. ನಟನಾಗಿ ಎಲ್ಲ ಭಾಷೆಯಿಂದ ಆಗೋ ಲಾಭ ಬೇಕು. ಕಾಂಗ್ರೆಸ್ ಅಧಿಕಾರದಲ್ಲಿಯೇ ಕಲಬುರ್ಗಿ, ಗೌರಿ, ಪನ್ಸಾರೆ ಹತ್ಯೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಪ್ರಕಾಶ್ ರೈ ಮಾತನಾಡಬೇಕು. ಬೈಯೋದಾದ್ರೆ ಎಲ್ಲರನ್ನು ಬೈಯಿರಿ ಇಲ್ಲವಾದ್ರೆ ನೀವು ಕಾಂಗ್ರೆಸ್ ಏಜೆಂಟ್ ಎನ್ನುವುದು ಸಾಬೀತಾಗುತ್ತದೆ ಅಂತ ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ನನಗೆ ಲೇಟಾಗಿ ಆದರೂ ಜ್ಞಾನೋದಯ ಆಗಿದೆ, ಹೀಗಾಗಿ ಕ್ಷಮಿಸಿ: ಪ್ರಕಾಶ್ ರೈ

    ಇದೇ ವೇಳೆ ವಿಎಚ್‍ಪಿಯಿಂದ ಪ್ರವೀಣ್ ತೊಗಾಡಿಯ ಉಚ್ಛಾಟನೆ ವಿಚಾರದ ಕುರಿತು ಮಾತನಾಡಿದ ಅವರು, ಇದು ಅತ್ಯಂತ ನೀಚ, ನಿರ್ಲಜ್ಜದ ಕೆಲಸವಾಗಿದ್ದು ಖಂಡನೀಯವಾಗಿದೆ. ತೊಗಾಡಿಯ ಉಚ್ಛಾಟನೆ ಹಿಂದೆ ಮೋದಿ, ಆರ್ ಎಸ್ ಎಸ್ ಕೈವಾಡವಿದೆ. ಪ್ರವೀಣ ತೊಗಾಡಿಯ ಮಾಡಿದ ಅಪರಾಧ ಏನು? ಹಿಂದೂ ಮತಗಳನ್ನು ಒಗ್ಗೂಡಿಸಲು ಪ್ರವೀಣ ತೊಗಾಡಿಯಾ ಬೇಕು. ಆದರೇ ಈಗ ಯಾರೊಬ್ಬರು ಆರ್ ಎಸ್ ಎಸ್ ವಿರುದ್ಧ ಧ್ವನಿ ಎತ್ತುತ್ತಿಲ್ಲ. ನಿಮ್ಮ ಅವಧಿಯಲ್ಲಿ ರಾಮಮಂದಿರ ನಿರ್ಮಿಸಿ ಅಂತ ಹೇಳಿದ್ದ ತೊಗಾಡಿಯ ಮಾಡಿದ್ದು ತಪ್ಪಾ? ಗೋ ಹತ್ಯೆ, ಸಮಾನ ನಾಗರೀಕ ಕಾಯ್ದೆ ಜಾರಿ ಮಾಡಿ ಅಂತ ಹೇಳಿದ್ದೆ ತಪ್ಪೇ? ರಾಮ ಮಂದಿರದ ಹೆಸರಲ್ಲಿ ಕಟ್ಟಿಸುವ ಹೆಸರಿನಲ್ಲಿ ಮೋದಿ ಪ್ರಧಾನಿಯಾಗಿದ್ದಾರೆ. ಇದೀಗ ಆರ್ ಎಸ್ ಎಸ್ ಕಟ್ಟಪ್ಪಣೆ ಮೀರಿದ್ದಕ್ಕೆ ತೊಗಾಡಿಯಾ ಉಚ್ಛಾಟನೆಯಾಗಿದ್ದಾರೆ ಅಂತ ಸಿಡಿಮಿಡಿಗೊಂಡರು. ಇದನ್ನೂ ಓದಿ: ಮೋದಿ, ಅಮಿತ್ ಶಾ ತಲೆಯಲ್ಲಿ ಏನು ಇಲ್ಲ ಅನ್ನೋದಕ್ಕೆ ಪುರಾವೆ ನನ್ನಲ್ಲಿದೆ: ಪ್ರಕಾಶ್ ರೈ

    ತೊಗಾಡಿಯ ಉಚ್ಛಾಟನೆ ಖಂಡಿಸಿ ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯದ 22 ಜಿಲ್ಲೆಯಲ್ಲಿ ಶ್ರೀರಾಮಸೇನೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದೆ. ಶ್ರೀರಾಮಸೇನೆಗೆ 5 ಹಿಂದುಪರ ಸಂಘಟನೆಗಳ ಬೆಂಬಲ ಸೂಚಿಸಿವೆ ಅಂತ ಅವರು ತಿಳಿಸಿದ್ರು.

  • ತಡರಾತ್ರಿ ಭೈರಾಪೂರ ಚೆಕ್‍ಪೋಸ್ಟ್ ನಲ್ಲಿ  4 ಕೋಟಿ ರೂ. ಹಣ ಜಪ್ತಿ

    ತಡರಾತ್ರಿ ಭೈರಾಪೂರ ಚೆಕ್‍ಪೋಸ್ಟ್ ನಲ್ಲಿ 4 ಕೋಟಿ ರೂ. ಹಣ ಜಪ್ತಿ

    ಬೆಳಗಾವಿ: ವಿಧಾನಸಭೆ ಚುನಾವಣೆ ಘೋಷಣೆಯಾಗ್ತಿದ್ದಂತೆಯೇ ಹಣದ ಹೊಳೆಯೇ ಹರಿಯುತ್ತಿದೆ. ಈಗಾಗಲೇ ಚುನಾವಣಾಧಿಕಾರಿಗಳು ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದಾರೆ.

    ಅದೇ ರೀತಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಭೈರಾಪುರ ಚೆಕ್ ಪೋಸ್ಟ್ ನಲ್ಲಿ ತಡರಾತ್ರಿ ಬರೋಬ್ಬರಿ 4 ಕೋಟಿ ರೂ. ಜಪ್ತಿ ಮಾಡಲಾಗಿದೆ. ಕೊಲ್ಹಾಪುರದಿಂದ ಗಡಹಿಂಗ್ಲಜಕ್ಕೆ ಖಾಸಗಿ ವಾಹನದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಸಂಕೇಶ್ವರ ಠಾಣೆ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಣ, ವಾಹನ ಜಪ್ತಿ ಮಾಡಲಾಗಿದ್ದು, ದಾಖಲಾತಿಗಳ ಪರಿಶೀಲನೆ ಬಳಿಕ ಬ್ಯಾಂಕಿನ ಹಣವೆಂದು ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ. ಕೊಲ್ಹಾಪುರ ಡಿಸಿಸಿ ಬ್ಯಾಂಕಿನಿಂದ ಗಡಹಿಂಗ್ಲಜ ಶಾಖೆಗೆ ಸಾಗಾಟ ಮಾಡುತ್ತಿದ್ದ ಹಣವಾಗಿದ್ದು, ಬ್ಯಾಂಕಿನ ಕ್ಲರ್ಕ್ ಡಿಡಿ ಕೇರ್ಲೆ ಹಾಗೂ ಪ್ಯೂನ್ ವಿಜಯ ನಾಯಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

    ಈ ಘಟನೆ ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ದೊಣ್ಣೆಗಳಿಂದ ಮಾರಾಮಾರಿ – ವಿಡಿಯೋ

    ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ದೊಣ್ಣೆಗಳಿಂದ ಮಾರಾಮಾರಿ – ವಿಡಿಯೋ

    ಬೆಳಗಾವಿ: ಜಮೀನಿಗಾಗಿ ಎರಡು ಕುಟುಂಬಗಳ ಸದಸ್ಯರು ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ರಾಯಬಾಗ ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿ ನಡೆದಿದೆ.

    ಮಾಯಪ್ಪ ಪಾಯಪ್ಪಗೋಳ ಹಾಗೂ ರಾಮ ಪಾಯಪ್ಪಗೋಳ ಕುಟುಂಬದ ಸುಮಾರು 15ಕ್ಕೂ ಹೆಚ್ಚು ಮಂದಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

    https://www.youtube.com/watch?v=EZPfOAIfFEY

  • ನಾನು ಗೆದ್ರೆ ಅಕ್ರಮ ಮರಳು ದಂಧೆಗೆ ಅವಕಾಶ- ಬಿಜೆಪಿ ಟಿಕೆಟ್ ಆಕಾಂಕ್ಷಿ ಘೋಷಣೆ

    ನಾನು ಗೆದ್ರೆ ಅಕ್ರಮ ಮರಳು ದಂಧೆಗೆ ಅವಕಾಶ- ಬಿಜೆಪಿ ಟಿಕೆಟ್ ಆಕಾಂಕ್ಷಿ ಘೋಷಣೆ

    ಬೆಳಗಾವಿ: ಚುನಾವಣೆಯಲ್ಲಿ ಗೆದ್ದರೆ ಭ್ರಷ್ಟಾಚಾರ, ಅಕ್ರಮ ಮಟ್ಟ ಹಾಕ್ತೀನಿ ಅಂತ ಮತದಾರರಿಗೆ ಭರವಸೆ ಕೊಡೋದು ಸಾಮಾನ್ಯ. ಆದ್ರೆ ಇಲ್ಲೊಬ್ಬರು ಟಿಕೆಟ್ ಆಕಾಂಕ್ಷಿ ನಾನೇನಾದ್ರೂ ಗೆದ್ದರೆ ಅಕ್ರಮಕ್ಕೆ ಬೆಂಬಲ ನೀಡುತ್ತೇನೆಂದು ಬಹಿರಂಗವಾಗಿ ಹೇಳಿದ್ದಾರೆ.

    ಹೌದು. ಬೆಳಗಾವಿ ಜಿಲ್ಲೆಯ ಯಮನಕರಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾರುತಿ ಅಷ್ಟಗಿ ಈ ಆಶ್ವಾಸನೆ ನೀಡಿದ್ದಾರೆ. ನನ್ನನ್ನು ಶಾಸಕರ ಚುನಾವಣೆಯಲ್ಲಿ ಗೆಲ್ಲಿಸಿದ್ರೆ 24 ಗಂಟೆಯಲ್ಲಿ ಅಕ್ರಮ ಮರಳು ದಂಧೆಗೆ ಅವಕಾಶ ಮಾಡಿಕೊಡ್ತೀನಿ ಅಂತ ಮಾತುಕೊಟ್ಟಿದ್ದಾರೆ. ಟಿಕೆಟ್ ಆಕಾಂಕ್ಷಿಯ ಈ ಮಾತು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಈ ಮೂಲಕ ವೋಟಿಗಾಗಿ ಘಟಪ್ರಭಾ ನದಿಯ ಒಡಲು ಬಗೆಯೋರ ಬೆನ್ನಿಗೆ ನಿಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಮಾರುತಿ ಅಷ್ಟಗಿ ಸತೀಶ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

  • ಈಜು ಕಲಿಯಲು ಹೋದ ಮೂವರು ಬಾಲಕರು ನೀರುಪಾಲು- ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಈಜು ಕಲಿಯಲು ಹೋದ ಮೂವರು ಬಾಲಕರು ನೀರುಪಾಲು- ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಬೆಳಗಾವಿ: ಕೆರೆಯಲ್ಲಿ ಈಜಲು ಹೋಗಿ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ನಡೆದಿದೆ.

    ಮಣ್ಣೂರ ಗ್ರಾಮದ ಕುಷಾಲ ಕಲ್ಲಪ್ಪ ಚೌಗಲೆ(12), ಆಕಾಶ ಕಲ್ಲಪ್ಪ ಚೌಗಕೆ (15) ಮತ್ತು ಸಾಹೀಲ್ ಮನೊಹರ ಬಾಳೆಕುಂದ್ರಿ (13) ಮೃತ ದುರ್ದೈವಿಗಳು. ಈ ಮೂವರು ಮಕ್ಕಳು ಅಕ್ಕಪಕ್ಕದ ಮನೆಯವರಾಗಿದ್ದಾರೆ.

    ಭಾನುವಾರ ಶಾಲೆಗೆ ರಜಾ ಇದ್ದ ಕಾರಣ ಊರಿನ ಮುಂದೆ ಹೊಂಡದಂತೆ ಇರುವ ಕೆರೆಯಲ್ಲಿ ಈಜು ಬಾರದೇ ಇದ್ದರೂ ಸಹ ಮೂವರು ಮಕ್ಕಳು ಸೇರಿ ಪ್ಲಾಸ್ಟಿಕ್ ಡಬ್ಬಿಗಳನ್ನು ತೆಗೆದುಕೊಂಡು ಈಜು ಕಲಿಯಲೆಂದು ಹೊಗಿದ್ದರು. ಆದರೆ ಮಕ್ಕಳು ಮಾತ್ರ ಆ ಪ್ಲಾಸ್ಟಿಕ್ ಡಬ್ಬಿಯನ್ನು ಬಳಸದೆ ನೀರಿನಲ್ಲಿ ಇಳಿದಿದ್ದಾರೆ. ಹೀಗಾಗಿ ಮೂವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

  • ಪ್ರತಿದಿನ ಬೆಳಿಗ್ಗೆ ಜನರೊಂದಿಗೆ ಸೇರಿ ಯೋಗ ಮಾಡುತ್ತೆ ಈ ಶ್ವಾನ!

    ಪ್ರತಿದಿನ ಬೆಳಿಗ್ಗೆ ಜನರೊಂದಿಗೆ ಸೇರಿ ಯೋಗ ಮಾಡುತ್ತೆ ಈ ಶ್ವಾನ!

    ಬೆಳಗಾವಿ: ನಮ್ಮ ದೇಶದ ಹೆಮ್ಮೆಯ ಯೋಗವನ್ನ ಇಡಿ ವಿಶ್ವವೇ ಒಪ್ಪಿಕೊಂಡಿದೆ. ವಿಶ್ವದಾದ್ಯಂತ ಯೋಗ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ವಿಚಿತ್ರ ಎನ್ನುವಂತೆ ಶ್ವಾನವೊಂದು ದಿನನಿತ್ಯ ಯೋಗ ಮಾಡುತ್ತಿದೆ ಅಂದರೆ ನೀವು ನಂಬಲೇಬೇಕು. ಇದು ವಿಚಿತ್ರವಾದರೂ ನಿಜವಾಗಿದೆ.

    ದಿನನಿತ್ಯ ಶ್ವಾನ ಯೋಗ ಮಾಡುತ್ತಿರುವ ಘಟನೆ ನಡೆಯುತ್ತಿರುವುದು ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದಲ್ಲಿ. ಕಳೆದ 4 ವರ್ಷಗಳಿಂದ ಈ ಶ್ವಾನ ಯೋಗಾಭ್ಯಾಸ ಮಾಡುವರ ಜೊತೆ ಸೇರಿ ಓಂಕಾರ ಯೋಗವನ್ನು ತಪ್ಪದೆ ಮಾಡುತ್ತಿದೆ.

    ಗ್ರಾಮದ ಹೊರ ವಲಯದಲ್ಲಿ ದಿನನಿತ್ಯ ಯೋಗ ಮಾಡುವರ ಜೊತೆಗೆ ಬೆಳಿಗ್ಗೆ 5 ಗಂಟೆಗೆ ಹಾಜರಾಗುವ ಶ್ವಾನ ಎಲ್ಲರೊಂದಿಗೆ ಸೇರಿ ತಾನೂ ಯೋಗದಲ್ಲಿ ಮಗ್ನನಾಗಿರುವುದು ಜನಸಾಮಾನ್ಯರ ಅಚ್ಚರಿಗೆ ಕಾರಣವಾಗಿದೆ. ಯಾರಿಗೂ ತೊಂದರೆ ನೀಡದೆ ಈ ಶ್ವಾನ ಯೋಗಾಭ್ಯಾಸ ಮಾಡಿ ಯೋಗ ಮುಗಿದ ನಂತರ ಮತ್ತೆ ಬೆಳಿಗ್ಗೆ ಹಾಜರಾಗುತ್ತಿದೆ.

    ಯೋಗಾಭ್ಯಾಸ ಮಾಡದೆ ಇರುವವರು ಪ್ರಾಮಾಣಿಕತೆಗೆ ಹೆಸರಾಗಿರುವ ಶ್ವಾನ ಯೋಗಾಭ್ಯಾಸವನ್ನು ನೋಡಿಯಾದರೂ ಯೋಗ ಮಾಡಿ ತಮ್ಮ ಆರೋಗ್ಯ ಕಾಪಾಡುವಂತಾಗಲಿ ಎಂದು ಸ್ಥಳೀಯ ಬಸವರಾಜ ಮೂಡಲಗಿ ಅವರು ಹೇಳಿದ್ದಾರೆ.