Tag: belagavi

  • ಅಪರಿಚಿತ ವಾಹನ ಡಿಕ್ಕಿ – ಇಬ್ಬರ ದುರ್ಮರಣ, ಮತ್ತಿಬ್ಬರು ಗಂಭೀರ

    ಅಪರಿಚಿತ ವಾಹನ ಡಿಕ್ಕಿ – ಇಬ್ಬರ ದುರ್ಮರಣ, ಮತ್ತಿಬ್ಬರು ಗಂಭೀರ

    ಬೆಳಗಾವಿ: ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದ ಬಳಿ ನಡೆದಿದೆ.

    ಪ್ರದೀಪ್ ಬಡಿಗೇರ(22) ಮತ್ತು ವಿಶಾಲ ಶೇಖನವರ (14) ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಘಟನೆ ಸಂಭವಿಸಿದೆ. ಪ್ರದೀಪ್, ವಿಶಾಲ ಹಾಗೂ ಮತ್ತಿಬ್ಬರು ಒಟ್ಟಾಗಿ ದ್ವಿಚಕ್ರ ವಾಹನದ ಮೇಲೆ 4 ಜನ ಯುವಕರು ಬಾವಿಗೆ ಈಜಾಡಲು ಹೋಗುತ್ತಿದ್ದರು.

    ಈ ವೇಳೆ ಗೋಟೂರು ಗ್ರಾಮದ ಬಳಿ ಹಿಂಬದಿಯಿಂದ ಅಪರಿಚಿತ ವಾಹನ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಇನ್ನೂ ಇಬ್ಬರು ಬೈಕ್ ಸವಾರರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಘಟನೆ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ

    ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ

    ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಸಂಜೆ ವೇಳೆಗೆ ಗುಡುಗು, ಬಿರುಗಾಳಿ ಸಹಿತ ಮಳೆ ಸುರಿದಿದ್ದು ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನರಿಗೆ ವರುಣಾ ತಂಪೆರೆದಿದ್ದಾನೆ.

    ಲಕ್ಷ ದ್ವೀಪ ಮತ್ತು ತಮಿಳುನಾಡಿನ ಮೇಲ್ಮೆ ಸುಳಿಗಾಳಿ ನಿರ್ಮಾಣ ಹಿನ್ನೆಲೆಯಲ್ಲಿ ಮಳೆಯಾಗುತ್ತಿದ್ದು, ನಗರದ ನೆಲಮಂಗಲ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಗೊರಗುಂಟೆಪಾಳ್ಯ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸುತ್ತಮುತ್ತ ಮಳೆಯಾಗಿದ್ದು, ವಾಹನ ಸವಾರರು ಪರಾದಾಡುವಂತಾಗಿತ್ತು. ಸತತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಇದರಿಂದಾಗಿ ಹಲವು ಭಾಗಗಳಲ್ಲಿ ಕೆಲ ಕಾಲ ವಿದ್ಯುತ್ ಸಂಪರ್ಕ ಕಡಿತವಾದ ಕುರಿತು ವರದಿಯಾಗಿದೆ.

    ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ, ತುಮಕೂರು, ಗದಗ, ಮೈಸೂರು, ಹುಬ್ಬಳ್ಳಿ, ಮಡಿಕೇರಿ, ಹಾಸನ ಕೆಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇದೇ ವೇಳೆ ಭಾರೀ ಗಾಳಿ ಮಳೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಬಳಿಯ ಚೆಕ್ ಪೋಸ್ಟ್ ಮೇಲ್ಛಾವಣಿ ಹಾರಿಹೋಗಿದ್ದು, ರಸ್ತೆ ಮಧ್ಯೆ ಹಾಕಲಾಗಿದ್ದ ಬ್ಯಾರಿಕೇಡ್ ಉರುಳಿ ಬಿದ್ದಿದೆ. ಮಹಾರಾಷ್ಟ್ರ-ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿತ್ತು. ಚೆಕ್ ಪೋಸ್ಟ್ ತಗಡು ಹಾರಿ ಹೋದ ಕಾರಣದಿಂದ ಕೆಲ ಕಾಲ ಸಿಬ್ಬಂದಿ ಕಂಗಾಲಾಗಿದ್ದರು. ಇನ್ನು ಆಕಾಲಿಕ ಮಳೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ರೈತರ ಬೆಳೆಗಳಿಗೂ ಹಾನಿಯಾಗಿದೆ.

    ಮೂರು ದಿನ ಮಳೆ ಸಾಧ್ಯತೆ: ನಾಳೆಯಿಂದ ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಲಕ್ಷದ್ವೀಪ ಮತ್ತು ತಮಿಳುನಾಡಿನಲ್ಲಿ ಭಾಗದಲ್ಲಿ ಮೇಲ್ಮೆ ಸುಳಿಗಾಳಿ ನಿರ್ಮಾಣ ಹಾಗೂ ಉತ್ತರ ಕರ್ನಾಟಕದಿಂದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಟ್ರಫ್ ನಿರ್ಮಾಣದಿಂದ ಮಳೆಯಾಗುವುದಾಗಿ ತಿಳಿಸಿದ್ದಾರೆ. ಇನ್ನೂ ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡಿನ ಭಾಗ ಮತ್ತು ಉತ್ತರ ಕರ್ನಾಟಕದ ಹಾಗೂ ಮಲೆನಾಡು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ.

    ಮತದಾನಕ್ಕೆ ವರುಣನ ಅಡ್ಡಿ ಸಾಧ್ಯತೆ..?
    ರಾಜ್ಯದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಬಿರುಗಾಳಿ, ಗುಡುಗು ಸಿಡಿಲು ಸಹಿತ ಮಳೆಯಾಗುವ ಸಂಭವಿರುವುದರಿಂದ ಶನಿವಾರ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಮಳೆ ಅಡ್ಡಿಯಗುವ ಸಂಭವಿದೆ.

  • ಕಾಂಗ್ರೆಸ್ `C Six’ ರೋಗದಿಂದ ರಾಜ್ಯವನ್ನು ರಕ್ಷಿಸಿ: ಪ್ರಧಾನಿ ಮೋದಿ

    ಕಾಂಗ್ರೆಸ್ `C Six’ ರೋಗದಿಂದ ರಾಜ್ಯವನ್ನು ರಕ್ಷಿಸಿ: ಪ್ರಧಾನಿ ಮೋದಿ

    ಬೆಳಗಾವಿ/ಕೋಲಾರ/ಚಿಕ್ಕಮಗಳೂರು: ರಾಜ್ಯದ ಮುಂದಿನ 5 ವರ್ಷಗಳ ಭವಿಷ್ಯ ನಿರ್ಧಾರವಾಗುವ ದಿನಕ್ಕೆ ಇರುವುದು ಕೇವಲ ಮೂರು ದಿನ ಮಾತ್ರ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಒಂದು ದಿನ ಮೊದಲು ರಾಜ್ಯದ ಎಲ್ಲೆಡೆ ಪ್ರಚಾರದ ಕಾವು ಹೆಚ್ಚಾಗಿತ್ತು.

    ಇಂದು ಪ್ರಧಾನಿ ಮೋದಿ ನಾಲ್ಕು ಕಡೆ ಬಿರುಸಿನ ಪ್ರಚಾರ ನಡೆಸುವ ಮೂಲಕ ಕೇತ್ರಗಳಲ್ಲಿ ಮತದಾರರ ಮನ ಗೆಲ್ಲಲು ಯತ್ನಿಸಿದರು. ತಮ್ಮ ನಾಲ್ಕು ಪ್ರಚಾರ ಸಮಾವೇಶಗಳಲ್ಲಿ ಕಾಂಗ್ರೆಸ್ ಟಾರ್ಗೆಟ್ ಮಾಡಿದ್ದ ಮೋದಿ ಆರೋಪಗಳ ಸುರಿಮಳೆಗೈದರು.

    ಚಿಕ್ಕಮಗಳೂರಿನ ಸಮಾವೇಶದಲ್ಲಿ ಬೆಂಗಳೂರಿನ ಜಾಲಹಳ್ಳಿ ಅಪಾರ್ಟ್‍ಮೆಂಟ್‍ನಲ್ಲಿ ದೊರೆತ ರಾಶಿ ರಾಶಿ ವೋಟರ್ ಐಡಿ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷ ಆಕ್ರಮ ಮತದಾನ ಮಾಡಲು ಪ್ಲಾನ್ ಮಾಡಿದೆ ಎಂದು ಆರೋಪಿಸಿದರು. ಅಲ್ಲದೇ ರಾಜ್ಯದಲ್ಲಿ ನಡೆಯುತ್ತಿರುವ ಐಟಿ ದಾಳಿ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹಣ ಹೊಳೆ ಹರಿಸುತ್ತಿದೆ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ಕೋಲಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ `ಸಿ ಸಿಕ್ಸ್’ ವೈರಸ್ ದಾಳಿ ಮಾಡಿದೆ. ಸಿ ಸಿಕ್ಸ್ ಅಂದರೆ ಕಾಂಗ್ರೆಸ್, ಕಮ್ಯುನಲ್, ಕ್ಯಾಸ್ಟಿಸಮ್, ಕರಪ್ಶನ್, ಕ್ರೈಂ, ಕಂಟ್ರಾಕ್ಟ್ ರೋಗಗಳಿಂದ ರಾಜ್ಯದ ವ್ಯವಸ್ಥೆ ಹಾಳಾಗಿದೆ. ಕಾಂಗ್ರೆಸ್ ಸಂವಿಧಾನದ ರೀತಿ ನೀತಿಗಳನ್ನೇ ಹಾಳುಮಾಡಿದೆ, ಇವೆಲ್ಲವೂ ಕರ್ನಾಟಕದ ಭವಿಷ್ಯವನ್ನೇ ಹಾಳು ಮಾಡುತ್ತಿದೆ. ಮೈತ್ರಿ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೇ ನಾನೇ ಮುಂದಿನ ಪ್ರಧಾನಿ ಎಂದು ಹೇಳುವ ಮೂಲಕ ರಾಹುಲ್ ಅಹಂಕಾರ ತೋರಿದ್ದಾರೆ. ಕಾಂಗ್ರೆಸ್ ಡೀಲ್ ಪಾರ್ಟಿ. ಇದನ್ನು ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರದ ಮೊಯ್ಲಿ ಅವರು ಹೇಳಿದ್ದಾರೆ ಎಂದರು.

    ಬೆಳಗಾವಿಯ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಭಾವಚಿತ್ರವೊಂದಿರುವ ಕುಕ್ಕರ್ ವಶಕ್ಕೆ ಪಡೆದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಇದು ಪವಿತ್ರ ಚುನಾವಣೆಯೇ, ಇದು ಶೇ.10 ರಷ್ಟು ಪಡೆದ ಹಣವೇ ಎಂದು ಪ್ರಶ್ನಿಸಿದರು. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿಯೇ ಬೆಳಗಾವಿ ನಗರ ಆಯ್ಕೆ ಆಗಿತ್ತು. ಆದರೇ ಕರ್ನಾಟಕದಲ್ಲಿ ನಿದ್ರೆ ಮಾಡುವ ಸರ್ಕಾರವಿದೆ. ಸ್ಮಾಟ್ ಸಿಟಿ ನಿರ್ಮಾಣ ಮಾಡಲು ನೀಡಲಾಗಿದ್ದ 836 ಕೋಟಿ ರೂ. ಗಳಲ್ಲಿ ಕೇವಲ 12 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಜಿಲ್ಲೆಯಲ್ಲಿ ಹರಿಯುವ ಐದು ನದಿಗಳನ್ನು ಪ್ರಸ್ತಾಪಿಸಿದ ಅವರು, ಬೆಳಗಾವಿಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯ ಕೇಶಿ, ಮಾರ್ಖಂಡೇಯ ಪ್ರಮುಖ ಐದು 5 ನದಿ ಹರಿಯುತ್ತಿವೆ. ಆದ್ರು ಈ ಭಾಗದಲ್ಲಿ ನೀರಿನ ಸಮಸ್ಯೆ ಇದೇ. ಇದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

    https://www.youtube.com/watch?v=xNBtimUAH3s

    https://www.youtube.com/watch?v=VWX-Sv-6dpo

     

  • ಬಿಜೆಪಿ ಅಭ್ಯರ್ಥಿ ಭಾಷಣದ ಮಧ್ಯೆ ‘ಕಾಂಗ್ರೆಸ್‍ಗೆ ಜೈ’ ಅಂದ ಗ್ರಾಮಸ್ಥರು-ವಿಡಿಯೋ ನೋಡಿ

    ಬಿಜೆಪಿ ಅಭ್ಯರ್ಥಿ ಭಾಷಣದ ಮಧ್ಯೆ ‘ಕಾಂಗ್ರೆಸ್‍ಗೆ ಜೈ’ ಅಂದ ಗ್ರಾಮಸ್ಥರು-ವಿಡಿಯೋ ನೋಡಿ

    ಬೆಳಗಾವಿ: ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿಯಾಗಿರುವ ರಾಜು ಕಾಗೆ ಅವರ ಭಾಷಣದ ಮಧ್ಯೆ ಗ್ರಾಮಸ್ಥರು ಕಾಂಗ್ರೆಸ್‍ಗೆ ಜೈ ಅಂತಾ ಘೋಷಣೆ ಕೂಗಿದ್ದಾರೆ.

    ರಾಜು ಕಾಗೆ ಅವರು ಜಿಲ್ಲೆಯ ಅಥಣಿ ತಾಲೂಕಿನ ಶಿರೂರು ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ ವೇಳೆ ಮುಜುಗರಕ್ಕೆ ಒಳಗಾಗಿದ್ದಾರೆ. ಶಾಸಕರು ಭಾಷಣ ಮಾಡುತ್ತಿದ್ದಂತೆ ಕೆಲ ಗ್ರಾಮುಸ್ಥರು ಅಡ್ಡಿಪಡಿಸಿದ್ರು. ನಮ್ಮ ಊರಿಗೆ ಯಾಕೆ ಬಂದಿದ್ದೀರಿ? 15 ವರ್ಷಗಳಲ್ಲಿ ನಮ್ಮೂರಲ್ಲಿ ಏನು ಮಾಡಿದ್ರಿ ಅಂತಾ ರಾಜು ಕಾಗ ಅವ್ರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ರು.

    ಒಂದು ಕಡೆ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದರೆ, ಕೆಲ ಬಿಜೆಪಿಗೆ ಜೈ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಲು ಆರಂಭಿಸಿದ್ರು. ಕೂಡಲೇ ಪ್ರಶ್ನೆ ಕೇಳುತ್ತಿದ್ದ ಗ್ರಾಮಸ್ಥರು ಅವರ ವಿರುದ್ಧವಾಗಿ ಕಾಂಗ್ರೆಸ್‍ಗೆ ಜೈ ಅಂತಾ ಕೂಗುವ ಮೂಲಕ ತಿರುಗೇಟು ನೀಡಿದ್ರು.

    ಇದೇ ಮೊದಲೇನಲ್ಲ: ನಾಲ್ಕು ದಿನಗಳ ಹಿಂದೆ ಚಮಕೇರಿ ಗ್ರಾಮಕ್ಕೆ ತೆರಳಿದಾಗಲೂ ರಾಜು ಕಾಗೆ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ನಾಲ್ಕು ಬಾರಿ ಕಾಗವಾಡ ಕ್ಷೇತ್ರದಿಂದ ಶಾಸಕರಾದ್ರೂ ಗ್ರಾಮಗಳ ಅಭಿವೃದ್ಧಿ ಆಗಿಲ್ಲ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.

    ರಾಜು ಕಾಗೆ ಒಟ್ಟು ನಾಲ್ಕು ಬಾರಿ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2000ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಯು ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ರು. ನಂತರದ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾದ ರಾಜು ಕಾಗೆ ಸತತವಾಗಿ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಶಾಸಕರಾಗಿದ್ದಾರೆ.

  • ಸಿಎಂ ನಮ್ಮನ್ನು ಒಡೀತಾನೆ, ದೇವಸ್ಥಾನ, ಮಠದ ಆದಾಯದ ಮೇಲೆ ಕಣ್ಣಾಕಿದ್ದಾನೆ- ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ವಾಗ್ದಾಳಿ

    ಸಿಎಂ ನಮ್ಮನ್ನು ಒಡೀತಾನೆ, ದೇವಸ್ಥಾನ, ಮಠದ ಆದಾಯದ ಮೇಲೆ ಕಣ್ಣಾಕಿದ್ದಾನೆ- ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ವಾಗ್ದಾಳಿ

    ಬೆಳಗಾವಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ನಾಲಗೆ ಹರಿಯಬಿಟ್ಟಿದ್ದು, ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತಯಾಚಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ನಮ್ಮನ್ನು ಒಟ್ಟಾಗಿರೋಕೆ ಬಿಡಲ್ಲ. ನಮ್ಮನ್ನು ಒಡೀತಾನೆ, ದೇಶವನ್ನು ಹಾಳು ಮಾಡ್ತಾನೆ. ದೇವಸ್ಥಾನ, ಮಠದ ಆದಾಯದ ಮೇಲೆ ಕಣ್ಣಾಕಿದ್ದಾನೆ. ನಾವೆಲ್ಲಾ ಒಟ್ಟಾಗಿ ನಿಲ್ಲಲ್ಲ ಅನ್ನೋದು ನಮ್ಮ ವೀಕ್ನೆಸ್. ದೇಶದಲ್ಲಿ ಕಾಂಗ್ರೆಸ್ ಕೇವಲ ಸೋಲಬಾರದು. ಆತ್ಮಹತ್ಯೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಹೀನಾಯವಾಗಿ ಸೋತು ಇನ್ನೆಂದೂ ಮತ ಕೇಳೋಕೆ ಬರಬಾರದು ಅಂತ ಕಿಡಿಕಾರಿದ್ದಾರೆ.


    ಹಿಂದೂಗಳಲ್ಲಿ ಇರೋ ಜಾತಿ ಪದ್ಧತಿಯಲ್ಲಿ ನಾವು ಒಡೆದು ಸಾಯುತ್ತಿದ್ದೇವೆ. ನಾವೆಲ್ಲ ನಮ್ಮ ದೇಶ, ಧರ್ಮ ಎಂದು ಒಟ್ಟಾದ್ರೆ ಸಿದ್ದರಾಮಯ್ಯನಂತಹ ಕುತಂತ್ರಿಗಳು ಈ ದೇಶದಲ್ಲಿ ಬದುಕಲು ಸಾಧ್ಯವಿಲ್ಲ.  70 ವರ್ಷದಿಂದ ಪಾಪ ಮಾಡಿರುವ ಕಾಂಗ್ರೆಸ್ ಗೆ ಇಲ್ಲಿ ಬದುಕಲು ಅಧಿಕಾರವಿಲ್ಲ. ನೀವೇನಾದ್ರೂ ಕಾಂಗ್ರೆಸ್ಸಿಗರನ್ನ ಒಡೆದ್ರೆ ನಿಮ್ಮ ಕೈ ಕೊಳೆಯಾಗುತ್ತೆ. ಹೀಗಾಗಿ ಅವರೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿ. ಕಾಂಗ್ರೆಸ್ ಗೆ ನೈತಿಕತೆ ಇದ್ರೆ, ದೇಶದ ಬಗ್ಗೆ ಕಳಕಳಿ ಇದ್ರೆ, ಇನ್ನೂ ಮುಂದೆ ಸುಳ್ಳು ಹೇಳುವುದಿಲ್ಲ ಎಂದು ಹೇಳಿ ಮುಖಕ್ಕೆ ಮಸಿ ಬಡಿದುಕೊಂಡು ಹೋಗಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ನ ಆತ್ಮಹತ್ಯೆ ಸಿದ್ಧತೆ ನಡೆದಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಅಂತ ಹೇಳಿದ್ರು.

    ಕಾಂಗ್ರೆಸ್ ನ ದೊಡ್ಡ ದೊಡ್ಡ ನೇತಾರರು ಆ ಮನೆ ಖಾಲಿ ಮಾಡಿ ಬಿಜೆಪಿಗೆ ಬರುತ್ತಿದ್ದಾರೆ. ದೆವ್ವ ಹೊಕ್ಕಿರುವ ಮನೆಯಲ್ಲಿ ಯಾರು ಇರುವುದಿಲ್ಲ. ಸಿದ್ದರಾಮಯ್ಯ ಇರುವ ಕಡೆ ಯಾರು ನಿಲ್ಲುವುದಿಲ್ಲ. ಕರ್ನಾಟಕದ ಜನ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯನ ಮನೆಗೆ ಕಳುಹಿಸಬೇಕು ಯಡಿಯೂರಪ್ಪನ ಸಿಎಂ ಮಾಡಬೇಕೆಂದು. ಮೋದಿಯವರ ಯೋಜನೆ ಇಲ್ಲಿನ ಹಳ್ಳಿಗಳಿಗೆ ಬಂದಿಲ್ಲ. ಇದಕ್ಕೆ ಕಾರಣ ಕರ್ನಾಟಕದಲ್ಲಿ ರಾವಣ ರಾಜ್ಯ ಇದೆ ಎಂದು ಕಿಡಿಕಾರಿದ್ರು.

    ಪಡಿತರ ಅಕ್ಕಿಗೆ ಮೋದಿ 29ರೂ. ಕೋಡ್ತಾರೆ. ರಾಜ್ಯ ಸರ್ಕಾರ 3ರೂ. ಕೊಡ್ತಾರೆ. ಆದ್ರೇ ಬಿಕನಾಸಿ ಸಿದ್ದರಾಮಯ್ಯ ಗೆ ಮೋದಿ ಫೋಟೋ ಹಾಕುವ ಯೋಗ್ಯತೆ ಇಲ್ಲ. ಮೋದಿ ಕರ್ನಾಟಕ ಸರ್ಕಾರಕ್ಕೆ 1.63 ಸಾವಿರ ಕೋಟಿ ಅಭಿವೃದ್ಧಿಗೆ ಕೊಟ್ಟಿದ್ದಾರೆ. ಆದ್ರೆ ಈ ಹಣವನ್ನ ಕಾಂಗ್ರೆಸ್ ನವರು ಮೊದಲನೇ ಮನೆಯಲ್ಲಿ ಇಡ್ತಾರೋ, ಎರಡನೇ ಮನೆಯಲ್ಲಿ ಇಡ್ತಾರೋ ಗೊತ್ತಾಗುವುದಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ.

  • ಬೆಳಗಾವಿ: ಎಂಇಎಸ್ ಅಭ್ಯರ್ಥಿಗೆ ಮರಾಠಿಗರಿಂದಲೇ ತರಾಟೆ

    ಬೆಳಗಾವಿ: ಎಂಇಎಸ್ ಅಭ್ಯರ್ಥಿಗೆ ಮರಾಠಿಗರಿಂದಲೇ ತರಾಟೆ

    ಬೆಳಗಾವಿ: ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಎಂಇಎಸ್ ಪಕ್ಷದ ಅಭ್ಯರ್ಥಿಗೆ ಮರಾಠಿ ಯುವಕರೇ ಘೇರಾವ್ ಹಾಕಿದ್ದಾರೆ.

    ಎಂಇಎಸ್ ಅಭ್ಯರ್ಥಿ ಬಾಳಾಸಾಹೇಬ ಕಾಕತಕರ ಮತಯಾಚನೆಗಾಗಿ ಬೆಳಗಾವಿ ಪಟ್ಟಣದ ಶಿವಾಜಿ ನಗರಕ್ಕೆ ತೆರಳಿದ್ದರು. ಈ ವೇಳೆ ಬಾಳಾಸಾಹೇಬ ನಗರಕ್ಕೆ ಆಗಮಿಸುತ್ತಿದ್ದಂತೆ ಕೋಪಗೊಂಡ ಕೆಲ ಮರಾಠಿ ಭಾಷಿಕ ಯುವಕರು ಆರಂಭದಲ್ಲೇ ಅವರನ್ನು ತಡೆದಿದ್ದಾರೆ.

     

    ಮರಾಠಿ ಹೆಸರಲ್ಲಿ ವೋಟ್ ಕೇಳ್ತಿರಿ, ಆಮೇಲೆ ನಮ್ಮನ್ನು ನಿರ್ಲಕ್ಷ್ಯ ಮಾಡ್ತೀರಿ. ನಿಮ್ಮಿಂದಾಗಿ ಮರಾಠಾ ಸಮುದಾಯಕ್ಕೆ ಯಾವುದೇ ಕೊಡುಗೆಗಳಿಲ್ಲ. ಇದೂವರೆಗೂ ಎಂಇಎಸ್ ಮರಾಠಿಗರ ಅಭಿವೃದ್ಧಿ ಮಾಡು ವಲ್ಲಿ ವಿಫಲಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

    ಸಾರ್ವಜನಿಕವಾಗಿ ಮರಾಠಿ ಭಾಷಿಕರಿಂದಲೇ ತರಾಟೆಗೊಳಗಾದ ಬಾಳಾಸಾಹೇಬ ತೀವ್ರ ಮುಜುಗರಕ್ಕೊಳಗಾದ್ರು.

  • ಗೌರಿ ಸಂತಾನ, ಆ ಸಂತಾನ ಅಂತಾ ಹೇಳಿಕೊಳ್ಳುವ ಬಹುತೇಕ ಬುದ್ದಿ ಜೀವಿಗಳು ಮಾರಾಟವಾಗಿದ್ದಾರೆ: ಅನಂತಕುಮಾರ್ ಹೆಗ್ಡೆ

    ಗೌರಿ ಸಂತಾನ, ಆ ಸಂತಾನ ಅಂತಾ ಹೇಳಿಕೊಳ್ಳುವ ಬಹುತೇಕ ಬುದ್ದಿ ಜೀವಿಗಳು ಮಾರಾಟವಾಗಿದ್ದಾರೆ: ಅನಂತಕುಮಾರ್ ಹೆಗ್ಡೆ

    ಬೆಳಗಾವಿ: ಪ್ರಧಾನಿ ಮೋದಿ ವಿರುದ್ಧ ಪ್ರಚಾರ ನಡೆಸಲು ಕಾಂಗ್ರೆಸ್ ಕೆಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ 5 ಲಕ್ಷ ಕೋಟಿ. ರೂಪಾಯಿಗೆ ಗುತ್ತಿಗೆ ನೀಡಿದೆ. ಮೋದಿ ವಿರುದ್ಧ ಪ್ರಚಾರ ನಡೆಸಲು ಗೌರಿ ಸಂತಾನ, ಆ ಸಂತಾನ ಎಂಬ ಎಲ್ಲ ವಿಚಾರವಾದಿಗಳ ಬೆಂಬಲವಿದೆ. ರಾಜ್ಯದ ಬಹುತೇಕ ಬುದ್ದಿಜೀವಿಗಳು ತಮ್ಮನ್ನ ಹಣಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ ಅಂತಾ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಆರೋಪಿಸಿದ್ರು.

    ಭಾನುವಾರ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅನಂತಕುಮಾರ್ ಹಗ್ಡೆ, ನಟ ಪ್ರಕಾಶ್ ರೈ ನಾಲಿಗೆ ಎರಡು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಪ್ರಕಾಶ್ ರೈ ನಾನು ಹಿಂದೂ ವಿರೋಧಿ ಅಲ್ಲ, ಆದ್ರೆ ಮೋದಿ, ಅಮಿತ್ ಶಾ ಮತ್ತು ಅನಂತಕುಮಾರ್ ಹಗ್ಡೆ ವಿರೋಧಿ ಅಂತಾ ಹೇಳ್ತಾರೆ. ನಿದ್ದೆ ಮಂಪರಿನಲ್ಲಿ ಹುಚ್ಚು ಹಿಡಿದವ್ರು ಮಾತ್ರ ಈ ರೀತಿ ಹೇಳೋದಕ್ಕೆ ಸಾಧ್ಯ ಅಂತಾ ರೈ ವಿರುದ್ಧ ಕಿಡಿಕಾರಿದ್ರು.

    ನರೇಂದ್ರ ಮೋದಿ ಕಪ್ಪು ಹಣದ ಬಾಣ ಬಿಡುತ್ತಿದ್ದಂತೆ ಒಬ್ಬೊಬ್ಬರು ದೇಶ ಬಿಟ್ಟು ಹೋಗಲು ಆರಂಭಿಸಿದ್ರು. ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕೊಲೊಂಬಿಯಾ ಗರ್ಲ್ ಫ್ರೆಂಡ್ ಜೊತೆ ಹೋಗಲಿದ್ದಾರೆ. ಮಗನ ಜೊತೆ ಸೋನಿಯಾ ಗಾಂಧಿ ದೇಶ ಬಿಡ್ತಾರೆ ಅಂತಾ ಭವಿಷ್ಯ ನುಡಿದ್ರು.

    ಸಿದ್ದರಾಮಯ್ಯ ರಾಜ್ಯದ ದೇವಸ್ಥಾನ, ಮಠಗಳ ಮೇಲೆ ಕಣ್ಣೀಟ್ಟಿದ್ದಾರೆ. ಆದ್ರೆ ಜಕಾತ್ (ದಾನ) ಹೆಸರಲ್ಲಿ ಮಸೀದಿ, ಚರ್ಚ್ ಗಳಿಗೆ ಎಷ್ಟು ಹಣ ಬರುತ್ತೆಂದು ಲೆಕ್ಕ ಇಟ್ಟಿದ್ದಾರಾ? ಜಕಾತ್ ಹೆಸರಲ್ಲಿ ಬಂದ ಹಣದಿಂದ ಬಾಂಬ್, ತಲ್ವಾರ್ ಖರೀದಿ ಮಾಡಲಾಗುತ್ತೆ ಅಂತಾ ಆರೋಪ ಮಾಡಿದ್ರು.

  • ಮೂರು ಬಾರಿ ಗೆದ್ದು ಏನ್ ಮಾಡಿದ್ರಿ- ಗ್ರಾಮಸ್ಥರ ಪ್ರಶ್ನೆಗಳಿಂದ ಬೇಸತ್ತು ನಿಮ್ಮ ಮತವೇ ಬೇಡವಂದ್ರು ಶಾಸಕ ರಾಜು ಕಾಗೆ

    ಮೂರು ಬಾರಿ ಗೆದ್ದು ಏನ್ ಮಾಡಿದ್ರಿ- ಗ್ರಾಮಸ್ಥರ ಪ್ರಶ್ನೆಗಳಿಂದ ಬೇಸತ್ತು ನಿಮ್ಮ ಮತವೇ ಬೇಡವಂದ್ರು ಶಾಸಕ ರಾಜು ಕಾಗೆ

    ಬೆಳಗಾವಿ: ನಮ್ಮ ಗ್ರಾಮಕ್ಕೆ ಯಾಕೆ ಬಂದಿದ್ದೀರಿ? ಎರಡು ಅವಧಿಯಲ್ಲಿ ನಮ್ಮ ಗ್ರಾಮಕ್ಕೆ ಏನ್ ಅಭಿವೃದ್ಧಿ ಮಾಡಿದ್ದೀರಿ? ಲೆಕ್ಕ ಕೊಡಿ ಎಂದು ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಹಾಲಿ ಬಿಜೆಪಿ ಶಾಸಕ ರಾಜೂ ಕಾಗೆಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ನಮ್ಮ ಗ್ರಾಮಕ್ಕೆ ಏನ್ ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

    ಗ್ರಾಮಸ್ಥರ ಆಕ್ರೋಶಕ್ಕೆ ರಾಜು ಕಾಗೆ ಬೇಸತ್ತು ನಿಮ್ಮ ಮತ ನನಗೆ ಬೇಡ ಎಂದು ಮತ್ತೊಮ್ಮೆ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ. ಇದರಿಂದ ವಿಚಲಿತಗೊಂಡ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ನೀವು ಕಾಲು ಇಡಬೇಡಿ. ನಿಮ್ಮಿಂದ ಅಭಿವೃದ್ಧಿ ಸಾಧ್ಯವಿಲ್ಲ. ನಾವು ನಿಮಗೆ ಮತ ಹಾಕುವುದಿಲ್ಲ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಗರಂ ಆದ ರಾಜು ಕಾಗೆ ನೀವೇನ್ ಓಟ್ ಹಾಕ್ ಬೇಡಿ ಹೋಗ್ರಿ ಅಂತ ಸಿಡಿಮಿಡಿಗೊಂಡ್ರು.

    ಈ ವೇಳೆ ಸ್ವಲ್ಪ ಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಮರು ಉತ್ತರ ನೀಡದೆ ತಲೆ ತಗ್ಗಿಸಿದ ಹಾಲಿ ಶಾಸಕ ರಾಜೂ ಕಾಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸತತ 4 ಬಾರಿ ಶಾಸಕರಾಗಿರುವ ಶಾಸಕ ರಾಜು, ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಇದೀಗ ಮುಳುವಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.

  • ಕನ್ನಡದ ಕಂದ ಸಿದ್ದರಾಮಯ್ಯ ಮರಾಠಿ ಜಪ – ಬೆಳಗಾವಿಯಲ್ಲಿ ಭಾಷೆ ಬರಲ್ಲ ಎಂದು ಕ್ಷಮೆಯಾಚನೆ

    ಕನ್ನಡದ ಕಂದ ಸಿದ್ದರಾಮಯ್ಯ ಮರಾಠಿ ಜಪ – ಬೆಳಗಾವಿಯಲ್ಲಿ ಭಾಷೆ ಬರಲ್ಲ ಎಂದು ಕ್ಷಮೆಯಾಚನೆ

    ಬೆಳಗಾವಿ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ತನಗೆ ಮರಾಠಿ ಮಾತನಾಡಲು ಬರಲ್ಲ ಅದ್ದರಿಂದ ಕ್ಷಮಿಸಿ ಎಂದು ಹೇಳಿದ್ದಾರೆ.

    ಬೆಳಗಾವಿಯ ಚಿಕ್ಕೋಡಿ ಹಾಗೂ ನಿಪ್ಪಾಣಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಈ ವೇಳೆ ಕಾರ್ಯಕ್ರಮಕ್ಕೆ 3 ಗಂಟೆ ತಡವಾಗಿ ಬಂದ ಅವರು ವೇದಿಕೆಗೆ ಆಗಮಿಸಿ ಕ್ಷಮೆ ಕೋರಿದರು. ಆದರೆ ಮಹಾರಾಷ್ಟ್ರ ಗಡಿ ಪ್ರದೇಶವಾದ ಕಾರಣ ಅವರು ಮತ್ತೆ ತನಗೆ ಮರಾಠಿ ಭಾಷೆ ಬರಲ್ಲ ಎಂದು ಕ್ಷಮೆ ಕೇಳಿದರು.

    ಈ ಹಿಂದೆ ಬಿಜೆಪಿ ಕೇಂದ್ರ ನಾಯಕರ ವಿರುದ್ಧ ಕನ್ನಡ ಭಾಷೆಯ ಅಸ್ತ್ರ ಪ್ರಯೋಗಿಸಿ ತನಗೆ ಹಿಂದಿ ಭಾಷೆ ಬರಲ್ಲ ಎಂದು ಕಾಳೆಲೆದಿದ್ದರು. ಆದರೆ ಇಂದು ನಿಪ್ಪಾಣಿ ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಮನವೊಲಿಸಲು ಕ್ಷಮೆ ಕೇಳಿದ್ದಾರೆ.

    ಬಳಿಕ ಸಮಾವೇಶದಲ್ಲಿ ಮಾತನಾಡಿದ ಅವರು ವಿರೋಧಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ, ಜೆಡಿಎಸ್ ಅವರಪ್ಪನ ಆಣೆ ಅಧಿಕಾರಕ್ಕೆ ಬರುವುದಿಲ್ಲ ಎಂದರು. ಇದೇ ವೇಳೆ ತಾವು ಅಧಿಕಾರಕ್ಕೆ ಬಂದರೆ ಕುರಿಗಾಹಿಗಳ ಎಲ್ಲ ಸಾಲ ಮನ್ನಾ ಮಾಡಲು ತೀರ್ಮಾನಿಸಿದ್ದೇವೆ ಎಂದು ಘೋಷಿಸಿದರು.

    https://www.youtube.com/watch?v=mOOgdKVxZZg

  • ಮೋದಿಯವರೇ ಗಂಡಸ್ತನ ಇದ್ದರೆ ಸಿದ್ದರಾಮಯ್ಯರ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿ: ಸಿ.ಎಂ.ಇಬ್ರಾಹಿಂ

    ಮೋದಿಯವರೇ ಗಂಡಸ್ತನ ಇದ್ದರೆ ಸಿದ್ದರಾಮಯ್ಯರ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿ: ಸಿ.ಎಂ.ಇಬ್ರಾಹಿಂ

    ಬೆಳಗಾವಿ: ಕರ್ನಾಟಕದಲ್ಲಿ ಬಿಜೆಪಿ ನಾಯಕರು ಭ್ರಷ್ಟ ಸರ್ಕಾರ, ಭ್ರಷ್ಟ ಸರ್ಕಾರ ಅಂತ ಬರೀ ಭಾಷಣ ಮಾಡ್ತಾರೆ. ಚುನಾವಣೆಗೆ ಇನ್ನೂ 15 ದಿನಗಳ ಕಾಲವಿದ್ದು, ಮೋದಿಯವರೇ ಗಂಡಸ್ತನ ಇದ್ದರೆ ಸಿಎಂ ಸಿದ್ದರಾಮಯ್ಯರ ವಿರುದ್ಧ ಮಾಡುವ ಒಂದಾದ್ರೂ ಭ್ರಷ್ಟಾಚಾರದ ಆರೋಪವನ್ನು ಸಾಬೀತು ಮಾಡಿ ತೋರಿಸಿ ಅಂತಾ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಬಹಿರಂಗ ಸವಾಲು ಹಾಕಿದ್ದಾರೆ.

    ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಬೇಡಿಕಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ವೇಳೆ ಮೋದಿ ಅವರು ಸಿದ್ದರಾಮಯ್ಯರ ಭ್ರಷ್ಟಾಚಾರದ ಆರೋಪವನ್ನು ಸಾಬೀತು ಮಾಡಿದ್ದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತಾ ಶಪಥ ಮಾಡಿದ್ರು.

    ಹತ್ತು ಪೆರ್ಸೆಂಟ್ ಆರೋಪ ನಿಮಗೆ ಶೋಭೆ ತರಲ್ಲ. ಪೆಟ್ರೋಲ್ ಬೆಲೆ ಗಗನಕ್ಕೆ ಏರಿದ್ದು, 400 ರೂಪಾಯಿ ಇದ್ದ ಸಿಲಿಂಡರ್ ಬೆಲೆ 800 ರೂ. ಆಗಿದೆ. ಬದಾಮಿಯಲ್ಲಿ ಸಿಎಂ ಗೆಲುವು ನಿಶ್ಚಿತವಾಗಿದೆ. 5 ವರ್ಷ ಕೂಲಿ ಮಾಡಿದ್ದೇವೆ ನಮಗೆ ಆಶೀರ್ವಾದ ಮಾಡಿ, ಮುಂದೆ ರಾಹುಲ್ ಗಾಂಧಿ ಪ್ರಧಾನಿ ಆಗುವುದು ಸಹ ನಿಶ್ಚಿತ. ಮೋದಿ ಅವರ ಮನೆಯಲ್ಲಿ ಯಾರಾದರೂ ದೇಶಕ್ಕಾಗಿ ಸತ್ತಿದ್ದಾರಾ? ಆದರೆ ಗಾಂಧೀ ಕುಟುಂಬದವರು ದೇಶಕ್ಕಾಗಿ ಸಾವನ್ನಪ್ಪಿದ್ದಾರೆ. ಬಿಜೆಪಿ ಅವರು ಯಾರಾದರೂ ದೇಶಕ್ಕಾಗಿ ಸಾವನ್ನಪ್ಪಿದ್ದಾರಾ ಎಂದು ಪ್ರಶ್ನಿಸಿದ್ರು.