Tag: belagavi

  • ಯುವಕನ ಮೇಲೆ ಆ್ಯಸಿಡ್ ಎಸೆದ ಮಹಿಳೆ

    ಯುವಕನ ಮೇಲೆ ಆ್ಯಸಿಡ್ ಎಸೆದ ಮಹಿಳೆ

    ಬೆಳಗಾವಿ: ಮಹಿಳೆಯಿಂದ ಯುವಕನ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಜಿಲ್ಲೆಯ ಕಪೀಲೇಶ್ವರ ಮಂದಿರದ ಬಳಿ ನಡೆದಿದೆ.

    ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಅರ್ಚಕ ರಾಮಾ ಪೂಜಾರಿ ಸಹೋದರಿ ಮಾಧವಿಯಿಂದ ಈ ಕೃತ್ಯ ನಡೆದಿದೆ. ರೊಚ್ಚಿಗೆದ್ದ ಸಾರ್ವಜನಿಕರಿಂದ ಅರ್ಚಕ ಗೋಪಾಲ್ ಪೂಜಾರಿಯನ್ನ ಅರೆಬೆತ್ತಲೆ ಮಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಪ್ರಥಮೇಶ್ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಅರ್ಚಕ ರಾಮಾ ಪೂಜಾರಿ ಹಾಗೂ ಆಸ್ಯಿಡ್ ದಾಳಿಗೆ ಒಳಗಾದ ಯುವಕ ನಡುವೆ ಘರ್ಷಣೆ ನಡೆದಿದ್ದು, ಭಕ್ತರ ಜೊತೆ ಅರ್ಚಕನ ಅನುಚಿತ ವರ್ತನೆಗೆ ಬಗ್ಗೆ ಹಲವು ಬಾರಿ ಪ್ರಥಮೇಶ್ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯುವಕ ಪ್ರಥಮೇಶ್ ಮೇಲೆ ಅರ್ಚಕ ಸಹೋದರಿ ಆ್ಯಸಿಡ್ ದಾಳಿ ನಡೆಸಿದ್ದಾಳೆ.

    ಆ್ಯಸಿಡ್ ದಾಳಿಯಿಂದ ರೊಚ್ಚಿಗೆದ್ದ ಸಾರ್ವಜನಿಕರಿಂದ ಅರ್ಚಕ ಗೋಪಾಲ್ ಪೂಜಾರಿಯನ್ನ ಅರೆಬೆತ್ತಲೆ ಮಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಭಕ್ತರೊಂದಿಗೆ ಗೋಪಾಲ್ ಪೂಜಾರಿ ನಡುವಳಿಕೆ ಸರಿಯಾಗಿ ಇರಲಿಲ್ಲ. ಈ ಹಿಂದೆ ಕೂಡಾ ಅರ್ಚಕನ ಮಗ ದೇವಸ್ಥಾನದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಈ ಆ್ಯಸಿಡ್ ದಾಳಿಯಿಂದ ಯುವಕ ಪ್ರಥಮೇಶ್ ಕೈಗೆ ಗಾಯವಾಗಿದ್ದು, ಗಾಯಾಳು ಪ್ರಥಮೇಶ್ ನನ್ನ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಘಟನೆ ಸಂಬಂಧ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಾರೀ ಮಳೆ, ಗಾಳಿಗೆ ಧರೆಗುರುಳಿದ ಮೊಬೈಲ್ ಟವರ್!

    ಭಾರೀ ಮಳೆ, ಗಾಳಿಗೆ ಧರೆಗುರುಳಿದ ಮೊಬೈಲ್ ಟವರ್!

    ಬೆಳಗಾವಿ/ವಿಜಯಪುರ: ಶನಿವಾರ ಸಂಜೆಯಿಂದ ಸುರಿದ ಭಾರೀ ಮಳೆ, ಗಾಳಿಗೆ ಮೊಬೈಲ್ ಟವರೊಂದು ಧರೆಗುರುಳಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಪಂಚಾಯತ್ ಆವರಣದಲ್ಲಿರುವ ಮೊಬೈಲ್ ಟವರ್ ನೆಲ ಕಚ್ಚಿದೆ. ಅಲ್ಲದೇ ಕೆಲ ಮನೆಗಳ ಹಂಚುಗಳು, ತಗಡಿನ ಶೆಡ್ಡುಗಳು ಕೂಡ ಗಾಳಿ ರಭಸಕ್ಕೆ ಹಾರಿಹೋಗಿವೆ. ಕೆಲ ಮರಗಳು ಕೂಡ ಉರುಳಿ ಬಿದ್ದಿವೆ.

    ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಸಂಬಂಧ ದೊಡ್ಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಜನ ತತ್ತರಿಸಿ ಹೋಗಿದ್ದು, ಜಿ. ಸಿಂದಗಿ ತಾ. ಮುಳಸಾವಳಗಿ ಗ್ರಾಮದಲ್ಲಿ ಬಿರುಗಾಳಿಗೆ ಮನೆಯ ಮೇಲಿದ್ದ ತಗಡಿನ ಮೇಲ್ಛಾವಣಿ ಹಾರಿ ಹೋಗಿದೆ. ಸಾಹೇಬಗೌಡ ಈರ್ ಎಂಬವರಿಗೆ ಸೇರಿದ ತಗಡಿನ ಮನೆ ಇದಾಗಿದೆ.

    ಭಾರೀ ಪ್ರಮಾಣದ ಮಳೆ, ಗಾಳಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಕಳೆದ ರಾತ್ರಿಯಿಂದ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳು, ಜಿಲ್ಲೆಯಾದ್ಯಂತ 50ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿ ಬಿದ್ದಿವೆ. ಒಟ್ಟಾರೆಯಾಗಿ ಭಾರೀ ಬಿರುಗಾಳಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

  • ಮೂರು ಬಿಟ್ಟ ಅನರ್ಹರಿಗೆ ಅಧಿಕಾರ, ಪ್ರಜಾಪ್ರಭುತ್ವಕ್ಕೆ ಅಪಚಾರ: ಪೊಲೀಸ್ ಅಧಿಕಾರಿಯಿಂದ ಪೋಸ್ಟ್

    ಮೂರು ಬಿಟ್ಟ ಅನರ್ಹರಿಗೆ ಅಧಿಕಾರ, ಪ್ರಜಾಪ್ರಭುತ್ವಕ್ಕೆ ಅಪಚಾರ: ಪೊಲೀಸ್ ಅಧಿಕಾರಿಯಿಂದ ಪೋಸ್ಟ್

    ಚಿಕ್ಕೋಡಿ: ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ರಚನೆಯಾದ ನಂತರ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.

    “ಮೂರು ಬಿಟ್ಟ ಅನರ್ಹರಿಗೆ ಅಧಿಕಾರ, ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ, ಅನುಭವಿಸೋದು ಜನರ ಗ್ರಹಚಾರ” ಎಂದು ಬೆಳಗಾವಿ ಜಿಲ್ಲೆ ಅಪರಾಧ ದಳದ ಪಿಎಸ್‍ಐ ಉದ್ದಪ್ಪ ಕಟ್ಟಿಕರ ಅವರು ಫೇಸ್‍ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಉದ್ದಪ್ಪ ಅವರು “ಜಾತ್ಯತೀತರ ಸೋಗಿನಲ್ಲಿ ಜಾತಿವಾದಿಗಳು, ಮತ್ತು ಕೋಮುವಾದಿಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.  ಮೇ 15 ರಂದು “ನೈತಿಕ ಅಧಃಪತನದ ಪರಮಾವಧಿಗೆ ಸಾಕ್ಷಿ ಇಂದಿನ ಕರ್ನಾಟಕದ ಘಟನಾವಳಿ” ಎಂದು ಬರೆದರೆ ಮೇ 23 ರಂದು “ದೇಶದ್ರೋಹಿಗಳು ಒಂದಾದ ದಿನ ಈ ದಿನ” ಎಂದು ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    “ಯೋಗ್ಯರಿಂದ ಪ್ರಗತಿ, ಆಯೋಗ್ಯರಿಂದ ಅವನತಿ, ಆಯ್ಕೆ ನಮ್ಮ ಕೈಯಲ್ಲಿ” ಎಂದು ಒಂದು ಪೋಸ್ಟ್ ಹಾಕಿದ್ದರೆ “ದೇಶಕ್ಕಾಗಿ ದುಡಿಯುವವರು ಒಂದು ಕಡೆ ಅಧಿಕಾರಕ್ಕೆ ಮೈತ್ರಿ ಮಾಡಿಕೊಳ್ಳುವವರು ಒಂದು ಕಡೆ ಎತ್ತು ಏರಿಗೆ ಎಳೆದರೆ ಕೋಣ ನೀರಿಗೆಳೆದಂತೆ” ಎಂದು ಇನ್ನೊಂದು ಪೋಸ್ಟ್ ಪ್ರಕಟಿಸಿದ್ದಾರೆ. ಈ ಪೋಸ್ಟ್ ಗಳಿಗೆ ಜನರು ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಈ ರೀತಿ ಬರೆದುಕೊಂಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.

    ಪ್ರಸ್ತುತ ಈಗ ಬೆಳಗಾವಿ ಕಾಂಗ್ರೆಸ್ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು 2016 ರಲ್ಲಿ ಉದ್ದಪ್ಪ ಕಟ್ಟಿಕರ್ ಅವರಿಗೆ ಕರೆ ಮಾಡಿದ್ದ ಬೈದಿದ್ದ ಆಡಿಯೋ ಈ ಹಿಂದೆ ವೈರಲ್ ಆಗಿತ್ತು.

     

    https://www.youtube.com/watch?v=on0BtQqB7Ew

  • ಗರ್ಭಪಾತ ನಿಷೇಧ ಕಾನೂನಿಗೆ ಬಲಿಯಾದ ಕನ್ನಡತಿ – ಜನಾದೇಶಕ್ಕೆ ಜಯ ಸಿಗಲಿ ಅಂತ ಪೋಷಕರ ಮನವಿ

    ಗರ್ಭಪಾತ ನಿಷೇಧ ಕಾನೂನಿಗೆ ಬಲಿಯಾದ ಕನ್ನಡತಿ – ಜನಾದೇಶಕ್ಕೆ ಜಯ ಸಿಗಲಿ ಅಂತ ಪೋಷಕರ ಮನವಿ

    ಬೆಳಗಾವಿ: ಐರ್ಲೆಂಡ್ ನಲ್ಲಿ ಬೆಳಗಾವಿ ಮೂಲದ ಸವಿತಾ ಹಾಲಪ್ಪನವರ್ ಅವರು ಗರ್ಭಪಾತಕ್ಕೆ ಬಲಿಯಾಗಿ ಇದೀಗ 5 ವರ್ಷಗಳೇ ಕಳೆದಿವೆ. ಅನೇಕ ವರ್ಷಗಳ ಕಾನೂನು ಹೋರಾಟದ ಬಳಿಕ ಈಗ ಐರ್ಲೆಂಡ್ ಸರ್ಕಾರ ಗರ್ಭಪಾತ ಬೆಕೋ, ಬೆಡವೋ ಎನ್ನುವುದರ ಬಗ್ಗೆ ಜನಾದೇಶ ಸಂಗ್ರಹಕ್ಕೆ ಮುಂದಾಗಿದೆ.

    ಈ ಬಗ್ಗೆ ಐರ್ಲೆಂಡ್ ದೇಶದಲ್ಲಿ ಜನಾದೇಶ ನಡೆಯಲಿದ್ದು, ಶನಿವಾರ ಗರ್ಭಪಾತ ನಿಷೇಧ ಕಾನೂನು ತಿದ್ದುಪಡಿ ಕುರಿತು ನಿರ್ಧಾರ ಹೊರ ಬೀಳಲಿದೆ. ಈ ಕುರಿತು ವಿಶ್ವವೇ ಐರ್ಲೆಂಡ್ ದೇಶದ ಜನಾದೇಶದತ್ತ ಎದುರು ನೋಡುತ್ತಿದೆ.

    ಏನಿದು ಪ್ರಕರಣ?:
    ಬೆಳಗಾವಿಯ ಶ್ರೀನಗರದ ನಿವಾಸಿಯಾಗಿದ್ದ ಸವಿತಾರನ್ನು ವೈದ್ಯ ಪ್ರವೀಣ್ ಜತೆಗೆ ಮದುವೆ ಮಾಡಿಕೊಡಲಾಗಿತ್ತು. ವೃತ್ತಿಯಲ್ಲಿ ಇಬ್ಬರು ವೈದ್ಯರಾಗಿದ್ದರಿಂದ ಉದ್ಯೋಗ ಅರಸಿ ದೂರದ ಐರ್ಲೆಂಡ್ ದೇಶಕ್ಕೆ ತೆರಳಿದ್ದರು. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸವಿತಾಗೆ ಹೊಟ್ಟೆಯಲ್ಲಿ ನಂಜಾಗಿತ್ತು. ಗರ್ಭಪಾತ ಮಾಡಿದರೆ ಸವಿತಾ ಬದುಕುತ್ತಿದ್ದರು. ಆದರೆ ಈ ಚಿಕಿತ್ಸೆಗೆ ಅಲ್ಲಿನ ಗರ್ಭಪಾತ ನಿಷೇಧ ಕಾನೂನು ಅಡ್ಡಿಯಾಗಿತ್ತು.

    ಐರ್ಲೆಂಡ್ ಕ್ಯಾತೊಲಿಕ್ ದೇಶವಾಗಿದ್ದರಿಂದ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ್ದರು. ಇದರಿಂದ ದಂತವೈದ್ಯೆ ಸವಿತಾ ಹಾಲಪ್ಪನವರ್ ಅಕ್ಟೋಬರ್ 28, 2013 ಮೃತಪಟ್ಟಿದ್ದರು. ಸವಿತಾ ಹಾಲಪ್ಪನವರ್ ಅವರ ಸಾವು ಪ್ರಕರಣ ಇಡೀ ವಿಶ್ವದಲ್ಲಿಯೇ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಐರ್ಲೆಂಡ್ ದೇಶದ ಕಾನೂನಿನ ವಿರುದ್ಧ ಆಕ್ರೋಶ ವ್ಯಕ್ತವಾಗುವಂತೆ ಮಾಡಿತ್ತು. ಐರ್ಲೆಂಡ್ ದೇಶದ ಮಾನವೀಯತೆ ಮತ್ತು ಸಂಪ್ರದಾಯದ ಬಗ್ಗೆ ವ್ಯಾಪಕ ಟೀಕೆ ಟಿಪ್ಪಣಿಗಳು ಕೇಳಿ ಬಂದಿದ್ದವು.

    ಮೃತ ಸವಿತಾ ಕುಟುಂಬಸ್ಥರು ಸಹ ಮಗಳ ಸಾವಿನ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಿದ್ದರು. ಇದೀಗ ಐರ್ಲೆಂಡ್ ಸರ್ಕಾರ ಗರ್ಭಪಾತ ಮೇಲಿರುವ ನಿಷೇಧ ಕಾನೂನು ತಿದ್ದುಪಡಿ ಮಾಡಲು ಜನಾದೇಶ ಸಂಗ್ರಹಿಸಲು ಮುಂದಾಗಿದೆ. ಇಂದು ಐರ್ಲೆಂಡ್ ದೇಶದಲ್ಲಿ ಜನಮತ ಸಂಗ್ರಹ ನಡೆಯಲಿದೆ. ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಮೃತ ಸವಿತಾ ಹಾಲಪ್ಪನವರ ತಂದೆ ಅಂದಾನಪ್ಪ ಯಾಳಗಿ, ಅಲ್ಲಿನ ಜನ ಗರ್ಭಪಾತ ನಿಷೇಧ ಕಾನೂನಿನ ವಿರುದ್ಧವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ನನ್ನ ಮಗಳಿಗೆ ಆಗಿರುವ ಅನ್ಯಾಯ ಮತ್ಯಾವ ಕುಟುಂಬಕ್ಕೆ ಆಗದಂತೆ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.

    ಇಂದು ಸಂಗ್ರಹವಾದ ಜನಮತ ಇದೇ ಶನಿವಾರ(ನಾಳೆ) ಪ್ರಕಟವಾಗಲಿದೆ. ಈ ಜನಮತದ ಬಗ್ಗೆ ಇಡೀ ಜಗತ್ತು ಕುತೂಹಲ ಹೊಂದಿದ್ದು, ಐರ್ಲೆಂಡ್ ಸರ್ಕಾರ ಭಾರತದ ಮಹಿಳೆಯೊಬ್ಬರ ಸಾವಿನಿಂದ ಎಚ್ಚೆತ್ತುಕೊಂಡು ಗರ್ಭಪಾತ ನಿಷೇಧ ಕಾಯ್ದೆ ರದ್ದುಗೊಳಿಸುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.

  • ಬಾವಿಗೆ ಬಿದ್ದು ಇಬ್ಬರು ಕಂದಮ್ಮಗಳ ದುರ್ಮರಣ

    ಬಾವಿಗೆ ಬಿದ್ದು ಇಬ್ಬರು ಕಂದಮ್ಮಗಳ ದುರ್ಮರಣ

    ಚಿಕ್ಕೋಡಿ: ಆಟವಾಡಲು ಹೋಗಿ ಬಾವಿಗೆ ಬಿದ್ದು ಎರಡು ಕಂದಮ್ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ.

    6 ವರ್ಷದ ಆದರ್ಶ ಸುಭಾಷ್ ತಳವಾರ ಹಾಗೂ 5 ಅಭಿಶೇಕ್ ಬಸವರಾಜ್ ಮಡಿವಾಳ ಮೃತ ದುರ್ದೈವಿ ಬಾಲಕರು. ಗ್ರಾಮದ ರಬಕವಿ ತೋಟದ ವಸತಿಯಲ್ಲಿ ಪೋಷಕರೊಂದಿಗೆ ಗದ್ದೆಗೆ ತೆರಳಿದ ಸಂದರ್ಭದಲ್ಲಿ ಆಟ ಆಡುತ್ತ ಎರಡೂ ಮಕ್ಕಳು ಬಾವಿಗೆ ಬಿದ್ದು ಈಜು ಬಾರದೇ ನೀರಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬಾವಿಯೊಳಗಿನ ಅಭಿಷೇಕನ ಶವವನ್ನು ಹೊರ ತೆಗೆದಿದ್ದು, ಆದರ್ಶನ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಮಾರಸ್ವಾಮಿ ಸಿಎಂ ಆದ್ರೆ ದೀರ್ಘ ದಂಡ ನಮಸ್ಕಾರ- ಹರಕೆ ತೀರಿಸಿದ ಎಚ್‍ಡಿಕೆ ಅಭಿಮಾನಿ

    ಕುಮಾರಸ್ವಾಮಿ ಸಿಎಂ ಆದ್ರೆ ದೀರ್ಘ ದಂಡ ನಮಸ್ಕಾರ- ಹರಕೆ ತೀರಿಸಿದ ಎಚ್‍ಡಿಕೆ ಅಭಿಮಾನಿ

    ಚಿಕ್ಕೋಡಿ: ರಾಜ್ಯದ 25 ನೇ ಸಿಎಂ ಆಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ನಾಯಕರು ಕರಾಳ ದಿನಾಚರಣೆಗೆ ಮುಂದಾಗಿದ್ದರೆ, ಇತ್ತ ಜೆಡಿಎಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.

    ಒಂದೆಡೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಹರಕೆ ತೀರಿಸಲು ಟೆಂಪಲ್ ರನ್ ನಡೆಸಿದ್ದಾರೆ. ಇತ್ತ ಎಚ್‍ಡಿಕೆ ಅಭಿಮಾನಿಗಳು ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ದೇವರಿಗೆ ಹೊತ್ತಿದ್ದ ಹರಕೆ ತೀರಿಸುತ್ತಿದ್ದಾರೆ.

    ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಚಿಂಚಲಿ ಮಾಯಕ್ಕಾ ದೇವಿಗೆ ದೀರ್ಘ ದಂಡ ಪ್ರದಕ್ಷಿಣೆ ಹಾಕುವುದಾಗಿ ಹರಕೆ ಹೊತ್ತುಕೊಂಡಿದ್ದ ಪ್ರಭಾಕರ್ ಗಗ್ಗರಿ ಇಂದು ಆ ಹರಕೆಯನ್ನು ತೀರಿಸಿದರು.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಶಕ್ತಿ ದೇವತೆ ಚಿಂಚಲಿ ಮಾಯಕ್ಕಾ ದೇವಿಗೆ ಕಳೆದ ಕೆಲ ತಿಂಗಳುಗಳ ಹಿಂದೆ ಭೇಟಿ ನೀಡಿ, ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಗಳಾದ್ರೆ ತಾನು ಚಿಂಚಲಿ ಮಾಯಕ್ಕಾ ದೇವಿಗೆ ದೀರ್ಘ ದಂಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತುಕೊಂಡಿದ್ದರು. ಹೀಗಾಗಿ ಇಂದು ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಹಿನ್ನೆಲೆಯಲ್ಲಿ ಪ್ರಭಾಕರ್ ಗಗ್ಗರಿ ತಮ್ಮ ಹರಕೆಯನ್ನು ತೀರಿಸಿದ್ದಾರೆ.

    ಚಿಂಚಲಿ ಕ್ಷೇತ್ರದ ಹಾಲಹಳ್ಳದಿಂದ ಸುಮಾರು 3 ಕಿ.ಮೀ ದೂರವಿರುವ ಮಾಯಕ್ಕಾ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕಿ ಪ್ರಭಾಕರ್ ಗಗ್ಗರಿ ತಮ್ಮ ಹರಕೆ ತೀರಿಸಿದ್ದಾರೆ.

  • ಸತತ 4 ಗಂಟೆ ಸುರಿದ ಮಳೆ – ದೇವಸ್ಥಾನದಲ್ಲಿ ನದಿಯಂತೆ ಹರಿದ ನೀರು

    ಸತತ 4 ಗಂಟೆ ಸುರಿದ ಮಳೆ – ದೇವಸ್ಥಾನದಲ್ಲಿ ನದಿಯಂತೆ ಹರಿದ ನೀರು

    ಬೆಳಗಾವಿ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಭಾರೀ ಮಳೆಯಾಗಿದ್ದು, ದೇವಸ್ಥಾನದ ಒಳಗಡೆ ನೀರು ನುಗ್ಗಿ ಭಕ್ತರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

    ಜಿಲ್ಲೆಯಲ್ಲಿ ಸತತ 4 ಗಂಟೆಗಳಿಂದ ಮಳೆ ಸುರಿದಿದೆ. ಪರಿಣಾಮ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇದರಿಂದ ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ದೇವಾಸ್ಥಾನದ ಒಳಗೆ ಪ್ರವೇಶಿಸಿದ್ದರಿಂದ ಭಕ್ತರಲ್ಲಿ ಆತಂಕ ಹೆಚ್ಚಾಗಿತ್ತು.

    ದೇವಾಸ್ಥಾನದ ಒಳಗೆ ನೀರು ನದಿಯಂತೆ ಹರಿದಿದ್ದು, ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಅಷ್ಟೇ ಅಲ್ಲದೇ ದೇವಾಲಯದ ಆವರಣದಲ್ಲಿ ನೀರು ಹರಿದು, ದೇವಾಲಯದ ಹೊರಗಡೆ ಇದ್ದ ಅಂಗಡಿಗಳಿಗೂ ನೀರು ನುಗ್ಗಿ ಸಾವಿರಾರು ರೂಪಾಯಿ ನಷ್ಟವಾಗಿದೆ.

  • ಸಿದ್ದರಾಮಯ್ಯ ಆಪ್ತನ ನಡೆಯಿಂದ ಕಾಂಗ್ರೆಸ್ ಮುಖಂಡರಲ್ಲಿ ಆತಂಕ!

    ಸಿದ್ದರಾಮಯ್ಯ ಆಪ್ತನ ನಡೆಯಿಂದ ಕಾಂಗ್ರೆಸ್ ಮುಖಂಡರಲ್ಲಿ ಆತಂಕ!

    ಬೆಳಗಾವಿ: ಕಾಂಗ್ರೆಸ್ ಮುಖಂಡ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ನಿಗೂಢ ನಡೆಯಿಂದ ಇದೀಗ ಪಕ್ಷದ ಮುಖಂಡರಲ್ಲಿ ಆತಂಕ ಮೂಡಿದೆ.

    ತಾನು ತೆರಳದೆ ತನ್ನ ಬೆಂಬಲಿಗ ಶಾಸಕರಿಗೂ ಬೆಂಗಳೂರಿಗೆ ತೆರಳದಂತೆ ಸೂಚನೆ ನಿಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಅಥಣಿ ಕಾಂಗ್ರೆಸ್ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲರಿಗೂ ಬೆಂಗಳೂರಿಗೆ ತೆರಳದಂತೆ ರಮೇಶ್ ಸೂಚನೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಿಗೆ ತೆರಳಲು ರಮೇಶ ಜಾರಕಿಹೊಳಿ ಆದೇಶಕ್ಕೆ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಟಳ್ಳಿ ಕಾದು ಕುಳಿತಿದ್ದಾರೆ ಎನ್ನಲಾಗಿದೆ.

    ಇಬ್ಬರೂ ಅಭ್ಯರ್ಥಿಗಳ ಆಯ್ಕೆಗಾಗಿ ಹಗಲಿರುಳು ಶ್ರಮ ವಹಿಸಿದ್ದ ರಮೇಶ ಜಾರಕಿಹೊಳಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಅವರು ನಿಗೂಢ ನಡೆಯಿಂದಾಗಿ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಆತಂಕ ಮೂಡಿದೆ ಎಂಬುದಾಗಿ ತಿಳಿದುಬಂದಿದೆ.

  • ಮತಯಂತ್ರಗಳನ್ನ 3 ಕಿ.ಮೀ ಹೊತ್ತುಕೊಂಡೇ ಹೋದ್ರು!

    ಮತಯಂತ್ರಗಳನ್ನ 3 ಕಿ.ಮೀ ಹೊತ್ತುಕೊಂಡೇ ಹೋದ್ರು!

    ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಶನಿವಾರ ಮುಗಿದಿದೆ. ಆದರೆ ಎಲೆಕ್ಷನ್ ಡ್ಯೂಟಿ ಮುಗಿಸಿ ಏಕಕಾಲಕ್ಕೆ ಹೊರಟಿದ್ದರಿಂದ ಬೆಳಗಾವಿಯ ರಾಯಬಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ತಾಲೂಕಿನ ವಿವಿಧೆಡೆಗಳಿಂದ ಚುನಾವಣೆ ಕರ್ತವ್ಯ ಮುಗಿಸಿ ಏಕಕಾಲಕ್ಕೆ ಬಂದಿದ್ದರಿಂದ ಬಸ್ ಹಾಗೂ ವಾಹನಗಳಿಂದ ಸಂಚಾರ ದಟ್ಟಣೆಯುಂಟಾಗಿತ್ತು. ಆದ್ದರಿಂದ ಕುಡಚಿ ಹಾಗೂ ರಾಯಬಾಗ ಕ್ಷೇತ್ರಗಳಲ್ಲಿ ಕರ್ತವ್ಯ ಮುಗಿಸಿ ಬಂದ ಚುನಾವಣಾ ಸಿಬ್ಬಂದಿ ಮತ ಯಂತ್ರಗಳನ್ನು ಹಸ್ತಾಂತರಿಸಲು ವಿಳಂಬವಾಗಿದ್ದು, ಸಂಚಾರ ದಟ್ಟಣೆಯಿಂದ ಚುನಾವಣಾ ಸಿಬ್ಬಂದಿ ಹೈರಾಣಾಗಿದ್ದಾರೆ.

    ಟ್ರಾಫಿಕ್ ಜಾಮ್‍ನಿಂದ ಸಿಬ್ಬಂದಿ ಪಟ್ಟಣದ ಹೊಸ ಸಂಯುಕ್ತ ಪದವಿ ಪೂರ್ವ ಕಾಲೇಜುವರೆಗೆ ನಡೆದುಕೊಂಡು ಹೋಗಿದ್ದಾರೆ. ಸುಮಾರು ಮೂರು ಕಿಲೋಮೀಟರ್  ವರೆಗೆ ಮತಯಂತ್ರಗಳನ್ನು ಹೊತ್ತುಕೊಂಡೇ ಹೋಗಿದ್ದಾರೆ.

    ಟ್ರಾಫಿಕ್ ಜಾಮ್ ಸರಿಪಡಿಸಲು ಪೊಲೀಸರು ಸತತ 3 ಗಂಟೆಗಳ ಕಾಲ ಹರಸಾಹಸಪಟ್ಟರು.

  • ಗಾಳಿ, ಮಳೆಗೆ ಹೋಟೆಲ್ ಮೇಲೆ ಬಿತ್ತು ಭಾರೀ ಗಾತ್ರದ ಮರ!

    ಗಾಳಿ, ಮಳೆಗೆ ಹೋಟೆಲ್ ಮೇಲೆ ಬಿತ್ತು ಭಾರೀ ಗಾತ್ರದ ಮರ!

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಭಾರೀ ಗಾತ್ರದ ಮರವೊಂದು ಹೊಟೇಲ್ ಮೇಲೆ ಬಿದ್ದಿದ್ದು, ಅನಾಹುತವೊಂದು ತಪ್ಪಿದೆ.

    ಗುರುವಾರ ತಡರಾತ್ರಿ ಸುರಿದ ಭಾರೀ ಮಳೆ ಗಾಳಿಯಿಂದಾಗಿ ಮರ ಅರಟಾಳ ಕ್ರಾಸ್ ಬಳಿಯಿರುವ ಹೋಟೆಲ್ ಮೇಲೆ ಬಿದ್ದಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದ್ದರಿಂದ ಜಗದೀಶ್ ಬಿರಾದಾರ್ ಎಂಬವರಿಗೆ ಸೇರಿದ ಹೊಟೇಲ್ ಶೆಡ್ ಹಾರಿ ಹೋಗಿದೆ. ಅವಘಡದಿಂದಾಗಿ ಹೊಟೇಲ್ ಮಾಲೀಕನ ಪತ್ನಿಗೆ ಸಣ್ಣಪಟ್ಟ ಗಾಯಗಳಾಗಿವೆ.

    ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.