Tag: belagavi

  • ಭೀಕರ ರಸ್ತೆ ಅಪಘಾತ ಮೂರು ಜನ ವಿದ್ಯಾರ್ಥಿಗಳು ಸಾವು

    ಭೀಕರ ರಸ್ತೆ ಅಪಘಾತ ಮೂರು ಜನ ವಿದ್ಯಾರ್ಥಿಗಳು ಸಾವು

    ಬೆಳಗಾವಿ: ಭೂತನಾಥ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂರು ಜನ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ದೇಸೂರ ಗ್ರಾಮದ ಬಳಿ ನಡೆದಿದೆ.

    ಅಥರ್ವ(16), ಅಮನ್ ಕಬ್ಲೇಶ್ವರಿ(17) ಹಾಗೂ ಹರ್ಷ(17) ಮೃತ ವಿದ್ಯಾರ್ಥಿಗಳು. ದೇವರ ದರ್ಶನ ಮುಗಿಸಿ ಬೈಕಿನಲ್ಲಿ ವಾಪಸ್ ಬರುತ್ತಿದ್ದ ವೇಳೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೂರು ಜನ ಮೃಪಟ್ಟಿದ್ದಾರೆ. ಇನ್ನೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಜಕೀಯ ಲಾಭಕ್ಕಾಗಿ ಕುರಿ ಕಾಯುತ್ತಿರುವ ರಾಯಬಾಗ ಬಿಜೆಪಿ ಶಾಸಕ

    ರಾಜಕೀಯ ಲಾಭಕ್ಕಾಗಿ ಕುರಿ ಕಾಯುತ್ತಿರುವ ರಾಯಬಾಗ ಬಿಜೆಪಿ ಶಾಸಕ

    ಬೆಳಗಾವಿ: ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಏನೂ ಬೇಕಾದರೂ ಮಾಡುತ್ತಾರೆ. ಅದಕ್ಕೆ ಸಾಕ್ಷಿಯೆನ್ನುವಂತೆ ಬಿಜೆಪಿ ಶಾಸಕರೊಬ್ಬರು ಕುರಿ ಕಾಯುತ್ತಿದ್ದಾರೆ.

    ಹೌದು, ರಾಜಕೀಯದಲ್ಲಿ ಹಿನ್ನಡೆ ಆಗದಿರಲಿ ಎಂದು ಬೆಳಗಾವಿ ಜಿಲ್ಲೆಯ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು ಕುರಿ ಮೇಯಿಸುತ್ತಾ ಮಡ್ಡಿಯಲ್ಲಿ ಅಡ್ಡಾಡುತ್ತಿದ್ದಾರೆ. ಹೆಗಲ ಮೇಲೆ ಕಂಬಳಿ ಹಾಕಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಹೊರವಲಯದ ಮಡ್ಡಿಗಾಡಿನ ಪ್ರದೇಶದಲ್ಲಿ ಕುರಿ ಕಾಯುತ್ತಾ ಇದ್ದಾರೆ.

    ಕುರಿ ಕಾಯೋದು ಯಾಕೆ?
    ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಿರುವ ಸಂತ ಬಾಳು ಅಜ್ಜಾನ ಕುರಿಗಳು ರಾಯಬಾಗಕ್ಕೆ ಆಗಮಿಸಿವೆ. ಈ ಕುರಿಗಳನ್ನು ಕಾಯುವುದರಿಂದ ರಾಜಕೀಯದಲ್ಲಿ ಒಳ್ಳೆಯದಾಗುತ್ತದೆ ಎಂಬ ಪ್ರತೀತಿ ಇದ್ದು, ಅದಕ್ಕಾಗಿ ರಾಜ್ಯಕ್ಕೆ ಆಗಮಿಸುವ ಕುರಿಗಳನ್ನು ಈ ಭಾಗದಲ್ಲಿನ ಜನ ಪ್ರತಿನಿಧಿಗಳು ಮೇಯಿಸುವುದು ವಾಡಿಕೆಯಾಗಿದೆ.

    ಕುರಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ದುರ್ಯೋಧನ ಐಹೊಳೆ ಕುರಿ ಕಾದಿದ್ದಾರೆ. ಇನ್ನೂ ಕುರಿ ಕಾಯುದರಲ್ಲಿ ಕಾಳಜಿ ವಹಿಸಿದ್ದಷ್ಟು ಜನರ ಸಮಸ್ಯೆಗಳ ಕಡೆಗೂ ಶಾಸಕರು ಗಮನ ಹರಿಸಲಿ ಅಂತಾರೆ ಕ್ಷೇತ್ರದ ಪ್ರಜ್ಞಾವಂತ ನಾಗರಿಕರು.

  • ಎಟಿಎಂನಿಂದ ಡ್ರಾ ಮಾಡ್ದಾಗ ಸುಟ್ಟ, ಹರಿದ, ಮಸಿ ಮೆತ್ತಿಕೊಂಡ 6 ನೋಟುಗಳು ಬಂದ್ವು!

    ಎಟಿಎಂನಿಂದ ಡ್ರಾ ಮಾಡ್ದಾಗ ಸುಟ್ಟ, ಹರಿದ, ಮಸಿ ಮೆತ್ತಿಕೊಂಡ 6 ನೋಟುಗಳು ಬಂದ್ವು!

    ಬೆಳಗಾವಿ: ಎಸ್‍ಬಿಐ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಸುಟ್ಟ ಹಾಗೂ ಹರಿದ ನೋಟುಗಳು ಗ್ರಾಹಕರಿಗೆ ದೊರೆತಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ನಡೆದಿದೆ.

    ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡ ಹಿಂದೂಸ್ತಾನ ಲೇಟೆಕ್ಸ್ ಕಂಪೆನಿ ನೌಕರ ರಫೀಕ್ ಭಾಗವಾನ, ಕಣಗಲಾ ಗ್ರಾಮದ ಎಟಿಎಂ ನಿಂದ ಹಣ ಡ್ರಾ ಮಾಡಿದಾಗ ಈ ನೋಟುಗಳು ಪತ್ತೆಯಾಗಿವೆ.

    ಹೆಚ್‍ಎಎಲ್ ಕಂಪನಿ ಬಳಿಯ ಎಸ್‍ಬಿಐ ಎಟಿಎಂನಲ್ಲಿ ಅವಾಂತರದಿಂದ ಕಂಪನಿ ನೌಕರರು ಹಾಗೂ ಗ್ರಾಹಕರು ಆತಂಕದಲ್ಲಿದ್ದಾರೆ. 2 ಸಾವಿರ ರೂ. ಮುಖಬೆಲೆಯ 6 ಡ್ಯಾಮೇಜ್ ಆಗಿದ್ದು, ಸುಟ್ಟ, ಹರಿದ ಮತ್ತು ಮಸಿ ಮೆತ್ತಿಕೊಂಡ ನೋಟುಗಳು ರಫೀಕ್ ಭಾಗವಾನ ಅವರಿಗೆ ಸಿಕ್ಕಿದೆ. ಇದರಿಂದ ಕಂಗಲಾದ ಅವರು ಸಂಬಂಧಿಸಿದ ಎಸ್‍ಬಿಐ ಬ್ಯಾಂಕ್ ಶಾಖೆಗೆ ದೂರು ನೀಡಿದ್ದಾರೆ.

    ಮೇಲಿಂದ ಮೇಲೆ ಇದೇ ಎಟಿಎಂ ನಲ್ಲಿ ಇಂತಹ ನೋಟುಗಳು ಸಿಗುತ್ತಿದ್ದು, ಈ ರೀತಿ ಆಗದಂತೆ ನೋಡಿಕೊಳ್ಳುವಂತೆ ಆಗ್ರಹಿಸಿದ್ದಾರೆ.

    ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ವಾದ್ಯ ಮೇಳಗಳೊಂದಿಗೆ ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು!

    ವಾದ್ಯ ಮೇಳಗಳೊಂದಿಗೆ ಕತ್ತೆಗಳ ಮದುವೆ ಮಾಡಿದ ಗ್ರಾಮಸ್ಥರು!

    ಬೆಳಗಾವಿ: ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಸತತ ಮೂರು ವರ್ಷಗಳಿಂದ ಬರಗಾಲವಿರುವ ಹಿನ್ನೆಲೆಯಲ್ಲಿ ಈ ವರ್ಷ ಉತ್ತಮ ಮಳೆಗಾಗಿ ಕತ್ತೆಗಳ ಮದುವೆ ಮಾಡಿಸಿದ್ದಾರೆ. ವಾದ್ಯ ಮೇಳಗಳೊಂದಿಗೆ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿಸಿದ್ದಾರೆ.

    ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಈ ಮದುವೆ ಮಾಡಿಸಿದ್ದು, ಗ್ರಾಮದ ಮಹಿಳೆಯರು ಹಾಗೂ ಪುರುಷರು ಮದುವೆಯಲ್ಲಿ ಭಾಗಿಯಾಗಿದ್ದರು.

  • ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ – ಜಲಪಾತದಿಂದ ಕೆಳಗೆ ಬೀಳುವ ದೃಶ್ಯ ಸೆರೆ

    ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ – ಜಲಪಾತದಿಂದ ಕೆಳಗೆ ಬೀಳುವ ದೃಶ್ಯ ಸೆರೆ

    ಬೆಳಗಾವಿ: ಇಲ್ಲಿನ ಗೋಕಾಕ್ ಫಾಲ್ಸ್ ನಲ್ಲಿ ಈಜಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಘಟಪ್ರಭಾದ ನಿವಾಸಿ ರೆಹಮಾನ್ ಉಸ್ಮಾನ್ ಕಾಜಿ (35) ಮೃತ ದುರ್ದೈವಿ. ಉಸ್ಮಾನ್ ರಂಜಾನ್ ಇದ್ದ ಪ್ರಯುಕ್ತ ಸ್ನೇಹಿತರ ಜೊತೆ ಗೋಕಾಕ್ ಫಾಲ್ಸ್ ಗೆ ಹೋಗಿದ್ದಾನೆ. ಆದರೆ ತಮಾಷೆ ಮಾಡಲು ಹೋಗಿ ಫಾಲ್ಸ್ ನ ಕೆಳಗೆ ಇಳಿದಿದ್ದಾನೆ. ನಂತರ ಫಾಲ್ಸ್ ಸ್ವಲ್ಪ ಕೆಳಗೆ ಕಲ್ಲು ಬಂಡೆ ಹಿಡಿದು ಸ್ನೇಹಿತರ ಜೊತೆ ಮಾತನಾಡುತ್ತಿರುತ್ತಾನೆ. ಬಳಿಕ ಉಸ್ಮಾನ್ ಮೇಲೆ ಎದ್ದು ತಕ್ಷಣ ಕೈ ಜಾರಿ ಜಲಪಾತಕ್ಕೆ ಧುಮುಕಿ ಮೃತಪಟ್ಟಿದ್ದಾನೆ.

    ಉಸ್ಮಾನ್ ಕೆಳಗೆ ಬೀಳುವ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ಕುರಿತು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ!

    ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ!

    ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ನಡೆದಿದೆ.

    ಜಂಬಗಿ ಗ್ರಾಮದ ಹಣುಮಂತ ಕಾಳೆ (24) ಮೃತ ದುರ್ದೈವಿ. ಅದೇ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕೊಲೆ ಮಾಡಿ ಬಿಸಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಪ್ರೀತಿ ಪ್ರಕರಣ ಅಥವಾ ಹಣದ ವ್ಯವಹಾರಕ್ಕೆ ಗುರುವಾರ ತಡರಾತ್ರಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಘಟನೆ ನಡೆದ ಸ್ಥಳಕ್ಕೆ ಅಥಣಿ ಪೊಲೀಸರ ಭೇಟಿ ನೀಡಿ ತನಿಖೆ ನಡೆಸಿದ್ದು, ಕೊಲೆಗಾರರ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.

    ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು!

    ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು!

    ಬೆಳಗಾವಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ಸ್ಪರ್ಶಿಸಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.

    ನಿಜಗುಣಯ್ಯ ಗುಂಡಕಲ್(45) ಮೃತ ದುರ್ದೈವಿ. ಇವರು ವೀರಾಪುರ ಗ್ರಾಮದ ನಿವಾಸಿಯಾಗಿದ್ದು, ಇಂದು ಬೆಳಗ್ಗೆ ತಮ್ಮ ಜಮೀನಿಗೆ ಕೆಲಸಕ್ಕೆಂದು ಹೋಗಿದ್ದಾರೆ. ಈ ವೇಳೆ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ತುಳಿದಿದ್ದಾರೆ. ವಿದ್ಯುತ್ ಹರಿದ ಪರಿಣಾಮ ರೈತ ಸ್ಥಳದಲ್ಲಿಯೇ ಅಸುನೀಗಿದ್ದಾರೆ.

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಿಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಿತ್ತೂರು ಪೊಲೀಸ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಸಮಸ್ಯೆ ಒಂದೇ ಆಗಿದೆ – ಸತೀಶ್ ಜಾರಕಿಹೊಳಿ

    ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಸಮಸ್ಯೆ ಒಂದೇ ಆಗಿದೆ – ಸತೀಶ್ ಜಾರಕಿಹೊಳಿ

    ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ತನಗೂ ಸಚಿವ ಸ್ಥಾನ ನೀಡಿಲ್ಲ. ನಾವಿಬ್ಬರೂ ಸೇರಿಕೊಂಡು ನಮಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು ಎಂದು ಹುಡುಕಾಟ ನಡೆಸಬೇಕಿದೆ ಎಂದು ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.

    ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಂತ್ರಿ ಸ್ಥಾನ ಕೈ ತಪ್ಪಿದ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ ಅವರು, ಅವರಿಗೂ ಸಚಿವ ಸ್ಥಾನ ತಪ್ಪಿದೆ. ನನಗೂ ಸಚಿವ ಸ್ಥಾನ ತಪ್ಪಿದೆ. ಹೀಗಿರುವಾಗ ಯಾರು ಯಾರಿಗೆ ಸಚಿವ ಸ್ಥಾನ ತಪ್ಪಿಸಿದರು ಎನ್ನುವ ಮಾತೇ ಉದ್ಭವಿಸುವುದಿಲ್ಲ. ಆದರೆ ಅವರು ಸಚಿವ ಸ್ಥಾನ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ, ನಾನು ಹಾಕಲಿಲ್ಲ ಅಷ್ಟೇ. ನಾವಿಬ್ಬರೂ ಸೇರಿಕೊಂಡು ನಮಗೆ ಸಚಿವ ಸ್ಥಾನ ತಪ್ಪಿಸಿದವರು ಯಾರು ಅಂತಾ ಹುಡುಕಾಡಬೇಕಿದೆ ಎಂದು ಹೇಳಿದ್ದಾರೆ.

    ಸಚಿವ ಸ್ಥಾನದ ನೀಡುವಲ್ಲಿ ಪಕ್ಷದಲ್ಲಿ ಉಂಟಾಗಿರುವ ತಾರತಮ್ಯದ ಕುರಿತು ಈಗಾಗಲೇ ತಮ್ಮ ಅಸಮಾಧಾನವನ್ನು ನಾಯಕರಿಗೆ ತಿಳಿಸಿದ್ದು, ಸೋಮವಾರವೇ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಮುಂದೆ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ, ಸೂಕ್ತ ಸ್ಥಾನಮಾನ ನೀಡಬೇಕು ಎಂದರು.

    ಇದೇ ವೇಳೆ ಶುಕ್ರವಾರ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸಮ್ಮುಖದಲ್ಲಿ ಬೆಂಗಳೂರಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದ ಅವರು, ಸಭೆಯಲ್ಲಿ ಭಾಗವಹಿಸುತ್ತೇನೆ. ಆದರೆ ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದಲ್ಲಿದ್ದುಕೊಂಡೇ ಚರ್ಚೆ ಮಾಡುತ್ತೇವೆ. ನಮ್ಮ ಬೇಡಿಕೆಯನ್ನ ಕೇಳುತ್ತೇವೆ. ಸಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾವುದಿಲ್ಲ ಎಂದು ತಿಳಿಸಿದರು.

    ಸದ್ಯ ಪಕ್ಷದಲ್ಲಿ ಉಂಟಾಗಿರುವ ಗೊಂದಲ ಹಾಗೂ ಸಮಸ್ಯೆಗಳು ಬಗೆಹರಿಯಲಾರದ ಸಮಸ್ಯೆಗಳಲ್ಲ. ಶೀಘ್ರವೇ ಈ ಕುರಿತ ಎಲ್ಲವೂ ಬಗೆಹರಿಯಲಿದೆ. ಆದರೆ ನಾನು ರಾಜೀನಾಮೆ ನೀಡಿರುವ ಕುರಿತು ಕೆಲ ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಆದರೂ ರಾಜೀನಾಮೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ರಾಜ್ಯದ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.

     

  • ರಸ್ತೆಗೆ ಹಾಲು ಸುರಿದು ಪ್ರತಿಭಟಿಸಿದ ಬೆಳಗಾವಿ ರೈತರು

    ರಸ್ತೆಗೆ ಹಾಲು ಸುರಿದು ಪ್ರತಿಭಟಿಸಿದ ಬೆಳಗಾವಿ ರೈತರು

    ಬೆಳಗಾವಿ: ದುಪ್ಪಟ್ಟು ದರ ನೀಡಿ ಹಾಲು ಖರೀದಿಸುತ್ತಿದ್ದ ಮಹಾರಾಷ್ಟ್ರದ ಗೋಕುಲ ಡೈರಿಯು ಏಕಾಏಕಿ ಹಾಲು ಖರೀದಿಯನ್ನು ನಿಲ್ಲಿಸಿದ್ದಕ್ಕೆ ರೊಚ್ಚಿಗೆದ್ದ ರೈತರು ಹಾಲನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಗೋಕುಲ ಡೈರಿಯು ಕಳೆದ 8 ವರ್ಷಗಳಿಂದ ಹಾಲು ಖರೀದಿ ಮಾಡುತ್ತಿದ್ದು, ಪ್ರತಿ ಲೀಟರ್‍ಗೆ ಕರ್ನಾಟಕ್ಕಿಂತ ಹೆಚ್ಚಿನ ದರ ನೀಡುತ್ತಿದ್ದರಿಂದ ರೈತರು ಗೋಕುಲ ಡೈರಿಗೆ ಹಾಲನ್ನು ನೀಡುತ್ತಿದ್ದರು. ಪ್ರತಿದಿನ ಸರಾಸರಿ 10 ಸಾವಿರ ಲೀಟರ್ ಹಾಲನ್ನು ಡೈರಿ ಖರೀದಿಸುತ್ತಿತ್ತು. ಈಗ ಏಕಾಏಕಿ ಡೈರಿಯು ಹಾಲು ಖರೀದಿಯನ್ನು ಸ್ಥಗಿತಗೊಳಿಸಿದೆ. ಡೈರಿಯ ಈ ನಿರ್ಧಾರಕ್ಕೆ ಮುಗಳಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿ, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ಹಾಲನ್ನು ರಸ್ತೆಗೆ ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮದ ಹಾಲು ಉತ್ಪಾದಕರಾದ ಮಹಾಂತೇಶ್ ಬಡಿಗೇರ್ ಮಾತನಾಡಿ, ಕಳೆದ 8 ವರ್ಷಗಳಿಂದ ಮನೆಗೆ ಬಂದು ಗೋಕುಲ ಡೈರಿಯು ಹಾಲು ಖರೀದಿಸುತ್ತಿತ್ತು. ಈಗ ಏಕಾಏಕಿ ಹಾಲು ಖರೀದಿಯನ್ನು ಸ್ಥಗಿತಗೊಳಿಸಿದೆ. ಬೇರೆ ಡೈರಿಗೆ ಹಾಲನ್ನು ಮಾರಲು ಹೋದರೆ, ಅವರೂ ಸ್ವೀಕರಿಸುತ್ತಿಲ್ಲ. ದಿನಕ್ಕೆ ಸಾವಿರಾರು ಲೀಟರ್ ಉತ್ಪಾದನೆಯಾಗುತ್ತಿದ್ದು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಸರ್ಕಾರ ಕೂಡಲೇ ಇತ್ತ ಗಮನಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

    ಕರ್ನಾಟಕದಲ್ಲಿ ಪ್ರಲೀಟರ್ ಹಾಲಿಗೆ 18-23 ರೂ. ದರ ನಿಗದಿಯಾಗಿದ್ದರೆ, ಮಹಾರಾಷ್ಟ್ರದ ಗೋಕುಲ್ ಡೈರಿಯು ಮೊದಲು ಹಾಲಿನ ಫ್ಯಾಟ್ ನೋಡಿಕೊಂಡು ಪ್ರತಿ ಲೀಟರ್‍ಗೆ 22-27 ರೂ. ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಹಾಲನ್ನು ರೈತರು ಗೋಕುಲ್ ಡೈರಿಗೆ ನೀಡುತ್ತಿದ್ದರು. ಇತ್ತೀಚೆಗೆ ಲೀಟರ್ ಹಾಲಿಗೆ 18 ರೂ. ನಿಗದಿ ಪಡಿಸಿದ್ದ ಡೈರಿಯು ಈಗ ಏಕಾಏಕಿ ಹಾಲು ಖರೀದಿಯನ್ನು ಸ್ಥಗಿತಗೊಳಿಸಿದೆ.

  • ನನಗೆ ಶಿಕ್ಷಣ ಸಚಿವನಾಗುವ ಬಯಕೆಯಿತ್ತು, ಕೈಕಟ್ಟಿ ಕೂರೋ ಸಭಾಪತಿ ಸ್ಥಾನ ಬೇಡ- ಹೊರಟ್ಟಿ

    ನನಗೆ ಶಿಕ್ಷಣ ಸಚಿವನಾಗುವ ಬಯಕೆಯಿತ್ತು, ಕೈಕಟ್ಟಿ ಕೂರೋ ಸಭಾಪತಿ ಸ್ಥಾನ ಬೇಡ- ಹೊರಟ್ಟಿ

    ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಬಿಟ್ಟು ಹುಬ್ಬಳ್ಳಿ, ಧಾರವಾಡ ದೊಡ್ಡ ಜಿಲ್ಲೆಯಲ್ಲಿ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ನನಗೆ ಸಚಿವನಾಗುವ ಭರವಸೆ ಇತ್ತು. ವಿಧಾನಸಭೆ ಪರಿಷತ್ತಿನಲ್ಲಿ ನಾನೇ ಹಿರಿಯ ಸದಸ್ಯ. ಆದರೆ ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ಕೈಬಿಟ್ಟಿದ್ದು ಯಾಕೆ ಅಂತ ಗೊತ್ತಿಲ್ಲ. ಪಕ್ಷದ ತೀರ್ಮಾನವೇ ಅಂತಿಮ ಎಂದು ಭಾವಿಸಿ ಸುಮ್ಮನಿದ್ದೇನೆ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

    ನನಗೆ ವಿಧಾನ ಪರಿಷತ್ ಸಭಾಪತಿ ಹುದ್ದೆ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಪತ್ರಿಕೆ, ಟಿವಿಯಲ್ಲಿ ನೋಡಿದ್ದೇನೆ. ನನಗೆ ಯಾರು ಈ ಬಗ್ಗೆ ಸ್ಟಷ್ಟವಾಗಿ ಹೇಳಿಲ್ಲ. ದೇವೇಗೌಡರು ಕಾರ್ಯಕರ್ತರ ಮುಂದೆ ಈ ಸಭಾಪತಿ ಹುದ್ದೆ ನೀಡುವ ಬಗ್ಗೆ ಹೇಳಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ನನಗೆ ಶಿಕ್ಷಣ ಸಚಿವನಾಗುವ ಬಯಕೆ ಇತ್ತು, ಕೈಕಟ್ಟಿ ಕುರುವ ಸಭಾಪತಿ ಸ್ಥಾನ ಬೇಡ ಎಂದು ಹೇಳಿದರು.

    ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕದ ಶಾಸಕರಿಗೆ ಅನ್ಯಾಯ ಆಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರ ಮನಸ್ಸಿನಲ್ಲಿ ಈ ರೀತಿಯ ಭಾವನೆ ಮೂಡುತ್ತಿದೆ. ನನ್ನನ್ನು ಮಂತ್ರಿ ಮಾಡುವಂತೆ ಯಾರಲ್ಲೂ ನಾನು ಭಿಕ್ಷೆ ಕೇಳಲ್ಲ. 38 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.

    ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಹೋರಾಟದಲ್ಲಿ ಪಾಲ್ಗೊಂಡವರನ್ನು ಸಚಿವ ಸಂಪುಟದಿಂದ ಹೊರ ಹಾಕಿದ್ದಾರೆ. ನನ್ನನ್ನು ಹಾಗೂ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಇದೆಲ್ಲ ನೋಡಿದ್ರೆ ಇದಕ್ಕೆ ಪುಷ್ಠಿ ನೀಡುತ್ತದೆ. ಲಿಂಗಾಯತ ಧರ್ಮ ಪರ ಹೋರಾಟ ಮಾಡಿದ್ರಿಂದ ಕೆಲ ಸ್ವಾಮೀಜಿಗಳಿಂದ ಅಪಪ್ರಚಾರ ನಡೆಯಿತು. ಸಮಾಜದ ಜನರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಹೋರಾಟದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ತಿಳಿಸಿದರು.

    ನಾವು ಎಂದು ಜಾತಿ ಮಾಡಿದವರಲ್ಲ. ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಹೋರಾಟ ಮಾಡಿದ್ದು ನಿಜ. ಎಲ್ಲರೂ ಮಾಡುವುದನ್ನು ನಾವು ಮಾಡಿದ್ದೇವೆ ನಾವೇನು ಕೊಲೆ, ದರೋಡೆ ಮಾಡಿಲ್ಲ. ಇದನ್ನೇ ತಪ್ಪು ಎಂದು ಭಾವಿಸಿದ್ದರೆ, ನಾವೇನು ಮಾಡೋಕೆ ಆಗಲ್ಲ. ಲಿಂಗಾಯತ ಧರ್ಮದ ಶಿಫಾರಸ್ಸು ಕೇಂದ್ರದಿಂದ ವಾಪಸ್ ಬಂದ ವಿಚಾರ. ಈ ಬಗ್ಗೆ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.