Tag: belagavi

  • ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಬೆಳಗಾವಿಯಿಂದ ಅಭಿಮಾನಿ ಸೈಕಲ್ ಯಾತ್ರೆ!

    ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಬೆಳಗಾವಿಯಿಂದ ಅಭಿಮಾನಿ ಸೈಕಲ್ ಯಾತ್ರೆ!

    ಬೆಳಗಾವಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲು ಕುಂದಾ ನಗರಿ ಬೆಳಗಾವಿಯಿಂದ ಅಭಿಮಾನಿಯೊಬ್ಬರು ಸೈಕಲ್ ಯಾತ್ರೆ ಆರಂಭಿಸಿದ್ದಾರೆ.

    ಭಾನುವಾರ ಬೆಳಗಾವಿ ಚನ್ನಮ್ಮ ವೃತ್ತದಿಂದ ಫಕೀರಪ್ಪ ಯಾತ್ರೆ ಆರಂಭಿಸಿದ್ದರು. ಕಳೆದ ಮೂರು ವರ್ಷಗಳಿಂದ ಸೈಕಲ್ ಯಾತ್ರೆ ನಡೆಸುತ್ತಿರುವ ಫಕೀರಪ್ಪ ಈ ಬಾರಿ ಕೂಡ ಇದನ್ನು ಮುಂದುವರಿಸಿದ್ದಾರೆ. ಇನ್ನೂ ಯಾತ್ರೆ ಬಳಸುತ್ತಿರುವ ಸೈಕಲ್ ಮೇಲೆ ಶಿವರಾಜ್ ಕುಮಾರ್ ಅಭಿನಯದ ಎಲ್ಲಾ ಚಿತ್ರಗಳ ಹೆಸರನ್ನು ಬರೆಸಿದ್ದಾರೆ.

    ಈ ಬಾರಿಯು ತಮ್ಮ ನೆಚ್ಚಿನ ನಟ ಶಿವರಾಜ್‍ಕುಮಾರ್ ಹುಟ್ಟು ಹಬ್ಬಕ್ಕೆ ಹೋಗಿ ವಿಶ್ ಮಾಡುವ ಉದ್ದೇಶ ಹೊಂದಿದ್ದಾರೆ.

  • ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ 2 ಸೇತುವೆ ಮುಳುಗಡೆ – ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಪ್ರವಾಹದ ಎಚ್ಚರಿಕೆ

    ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ 2 ಸೇತುವೆ ಮುಳುಗಡೆ – ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಪ್ರವಾಹದ ಎಚ್ಚರಿಕೆ

    ಬೆಳಗಾವಿ: ಮಹರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ಪ್ರಮುಖ ಎರಡು ಸೇತುವೆಗಳು ಮುಳುಗಡೆಯಾಗಿದೆ.

    ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ – ಕಲ್ಲೋಳ ಹಾಗೂ ಮಾಲಿಕವಾಡ – ದತ್ತವಾಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಜಲಾವೃತಗೊಂಡಿವೆ. ಸೇತುವೆಗಳು ಜಲಾವೃತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ.

    ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಕಾರಣ ಕ್ಷಣದಿಂದ ಕ್ಷಣಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಸದ್ಯ 90 ಸಾವಿರ ಕ್ಯೂಸೆಕ್ ಗೆ ಒಳ ಹರಿವು ಕೃಷ್ಣಾ ನದಿಯಲ್ಲಿ ಕಂಡು ಬಂದಿದ್ದು, ನದಿ ತೀರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದ್ದು, ನದಿಗೆ ಇಳಿಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ನದಿ ತೀರದಲ್ಲಿ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನಿಯೋಜನೆ ಮಾಡಿದೆ.

    ಚಿಕ್ಕೋಡಿ ತಾಲೂಕು ಅಧಿಕಾರಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ತಾಲೂಕಿನ ಕೆಲವು ಸೇತುವೆಗಳು ಮುಳುಗಡೆಯಾಗಿದ್ದು, ಸದ್ಯ 90 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ನದಿ ಪಾತ್ರದ ಜನರಿಗೆ ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಸಂಪರ್ಕ ಕಡಿತಗೊಂಡಿರುವ ಗ್ರಾಮಗಳಿಗೆ ದೋಣಿ ಮೂಲಕ ಜನರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಇನ್ನು ಹೆಚ್ಚಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ.

  • ಇದು ಫೈನಲ್ ಬಜೆಟಲ್ಲ, ಸಪ್ಲಿಮೆಂಟರಿಯಲ್ಲಿ ಉ.ಕ.ಕ್ಕೆ ನ್ಯಾಯ ಒದಗಿಸೋಣ- ಸಚಿವ ಶಿವಶಂಕರ್ ರೆಡ್ಡಿ

    ಇದು ಫೈನಲ್ ಬಜೆಟಲ್ಲ, ಸಪ್ಲಿಮೆಂಟರಿಯಲ್ಲಿ ಉ.ಕ.ಕ್ಕೆ ನ್ಯಾಯ ಒದಗಿಸೋಣ- ಸಚಿವ ಶಿವಶಂಕರ್ ರೆಡ್ಡಿ

    ಬೆಳಗಾವಿ: ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ಹಾಗೆನಾದ್ರೂ ಆಗಿದ್ದರೆ ಎಲ್ಲರೂ ಸೇರಿಕೊಂಡು ಚಿಂತನೆ ನಡೆಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡೋಣ ಅಂತ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಬಜೆಟ್ ಬಗ್ಗೆ ಮಾತನಾಡಿದ ಅವರು, ಇದು ಪೈನಲ್ ಬಜೆಟ್ ಅಲ್ಲಾ ಮತ್ತೆ ಸಪ್ಲಿಮೆಂಟರಿ ಬಜೆಟ್ ನಲ್ಲಿ ನ್ಯಾಯ ಒದಗಿಸೋಣ ಅಂದ್ರು. ಇದೇ ವೇಳೆ ಬಜೆಟ್ ಕುರಿತು ಮಾಜಿ ಸಚಿವ ಎಚ್.ಕೆ ಪಾಟೀಲ್ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, ಎಚ್.ಕೆ ಪಾಟೀಲ್ ಅವರು ಯಾವ ಆಧಾರದ ಮೇಲೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ ಗೊತ್ತಿಲ್ಲ. ಅವರು ದೊಡ್ಡವರು ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಅಂದ್ರು.

    ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ವಿರೋಧ ಪಕ್ಷದವರು ದೊಡ್ಡದಾಗಿ ಹೇಳಿ ಅದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. 34 ಸಾವಿರ ಕೋಟಿ ರೂ. ರೈತರ ಸಾಲಾ ಮನ್ನಾ ಮಾಡಿದ್ದೇವೆ. ಅದು ಹಾಸನ ಮೈಸೂರು ರೈತರಿಗಷ್ಟೇ ಇಲ್ಲ. ಇಡೀ ರಾಜ್ಯದ ರೈತರಿಗೆ ಅನುಕೂಲವಾಗಿದೆ. ಉತ್ತರ ಕರ್ನಾಟಕ ವಿಭಜನೆ ಮಾಡಲು ಬಿಡುವುದಿಲ್ಲ. ನಮ್ಮದು ಅಖಂಡ ಕರ್ನಾಟಕ. ಯಾರೋ ಒಬ್ಬರು ಆ ರೀತಿ ಕೂಗೆತ್ತಿದರು ಜನರು ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು ಅಂತ ಹೇಳಿದ್ರು.

    ಬಜೆಟ್ ನಿಂದ ಕೆಲವರಿಗೆ ಅಸಮಾಧಾನ ಇರುತ್ತೆ. ಅವರ ಹೇಳಿಕೆಗಳಿಂದ ಸರ್ಕಾರಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ಬಜೆಟ್ ನಿಂದ ನಮ್ಮ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸುಭದ್ರವಾಗಿ ಐದು ವರ್ಷ ನಮ್ಮ ಸರ್ಕಾರ ನಡೆಯುತ್ತೆ. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಹೀಗಾಗಿ ಆ ಭಾಗಕ್ಕೆ ಕಡಿಮೆ ಅನುದಾನ ಸಿಕ್ಕಿರಬಹುದು ಅಂತ ತಿಳಿಸಿದ್ರು.

  • ಅಮ್ಮನನ್ನು ನೋಡಲು ಬರ್ತಿದ್ದಾನೆ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾ

    ಅಮ್ಮನನ್ನು ನೋಡಲು ಬರ್ತಿದ್ದಾನೆ ಅಂಡರ್ ವರ್ಲ್ಡ್ ಡಾನ್ ಬನ್ನಂಜೆ ರಾಜಾ

    ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜಾ ಪೆರೋಲ್ ಮೇಲೆ ಹೊರಬರಲಿದ್ದಾನೆ. ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಬನ್ನಂಜೆ ರಾಜ ಉಡುಪಿಗೆ ಬರಲಿದ್ದಾನೆ.

    ಜುಲೈ  8  ರಂದು ಆತ ಉಡುಪಿಗೆ ಬರಲು ನ್ಯಾಯಾಲಯದ ಮುಂದೆ ಅನುಮತಿ ಕೋರಿದ್ದಾನೆ. ಆತನಿಗೆ ನ್ಯಾಯಾಧೀಶರಿಂದ ವಿಶೇಷ ಅನುಮತಿಯೂ ಸಿಕ್ಕಿದೆ ಎಂದು ತಿಳಿದು ಬಂದಿದೆ. ಬನ್ನಂಜೆ ರಾಜ ಅನಾರೋಗ್ಯ ಪೀಡಿತ ತನ್ನ ತಾಯಿಯನ್ನು ನೋಡಲು ಆಗಮಿಸಲಿದ್ದಾನೆ.

    ಬನ್ನಂಜೆ ರಾಜಾ ಮೊರಾಕ್ಕೋದಲ್ಲಿ 2015ರಲ್ಲಿ ಬಂಧನಕ್ಕೊಳಗಾಗಿದ್ದನು. ಇದೀಗ ಈತನ ಭೇಟಿ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವ ಸಾಧ್ಯತೆಯಿದೆ. ಶೂಟೌಟ್ , ದರೋಡೆ , ಕೊಲೆ ಪ್ರಕರಣ ಸಹಿತ 16 ಕ್ರಿಮಿನಲ್ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.

    ಬನ್ನಂಜೆ ರಾಜನ ಮೇಲೆ 45 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಉಡುಪಿ ಭೇಟಿ ಸಂದರ್ಭ ಬನ್ನಂಜೆಯ ಸಹಚರರು ಆಗಮಿಸುವ ಸಾಧ್ಯತೆಯಿದೆ.

  • ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ ಬೆಳಗಾವಿ ಕುವರಿಯ ಮಿಂಚು!

    ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ ಬೆಳಗಾವಿ ಕುವರಿಯ ಮಿಂಚು!

    ಬೆಳಗಾವಿ: ಆರ್ಥಿಕ ಸಂಕಷ್ಟದ ನಡುವೆಯೂ ದೇಶದ ಪರವಾಗಿ ಸ್ಪೇನ್‍ಗೆ ತೆರಳಿದ್ದ ಕುಂದಾನಗರಿಯ ಬೆಳಗಾವಿ ಕುವರಿ ಅಂತಾರಾಷ್ಟ್ರೀಯ ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ.

    ಬೆಳಗಾವಿಯ ವನಿತಾ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೇರಣಾ ಗೋನ್ಬಾರೆ ಈ ಸಾಧನೆ ಮಾಡಿರುವ ಸಾಧಕಿ. ಚಿರ್ಲ್ಡ್ ನ್ ಸೋಲೋ ಶೋ ಡ್ಯಾನ್ಸ್ ವಿಭಾಗದಲ್ಲಿ ಪ್ರೇರಣಾ 8ನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

    ನಗರದ ಗಣೇಶಪುರದಲ್ಲಿರುವ ಸ್ಟೈಲ್ ಡ್ಯಾನ್ಸ್ ಅಕಾಡೆಮಿಯಲ್ಲಿ ಕಳೆದ ಐದು ವರ್ಷಗಳಿಂದ ಪ್ರೇರಣಾ ನೃತ್ಯ ತರಬೇತಿ ಪಡೆಯುತ್ತಿದ್ದರು. ನೃತ್ಯ ಶಿಕ್ಷಕ ಮಹೇಶ್ ಜಾಧವ್ ಇವರಿಗೆ ತರಬೇತಿ ನೀಡಿದ್ದರು. ಕಳೆದ ಜೂನ್ 22ರಂದು ಸ್ಪೇನ್‍ನ ಬಾರ್ಸಿಲೋನಾ ನಗರದಲ್ಲಿ ನಡೆದಿದ್ದ ಡ್ಯಾನ್ಸ್ ವರ್ಲ್ಡ್ ಕಪ್‍ನಲ್ಲಿ 45 ದೇಶಗಳಿಂದ ಒಟ್ಟು 5,600 ನೃತ್ಯಪಟುಗಳು ಪಾಲ್ಗೊಂಡಿದ್ದರು.

    ಭಾರತ ದೇಶ ಪ್ರತಿನಿಧಿಯಾಗಿ ಬೆಳಗಾವಿಯ ಪ್ರೇರಣಾ ಗೋನ್ಬಾರೆ ಪಾಲ್ಗೊಂಡಿದ್ದರು. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಆಡಿಷನ್‍ನಲ್ಲಿ ಪ್ರೇರಣಾ ಪಾಲ್ಗೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಸ್ಪೇನ್‍ಗೆ ತೆರಳಲು ಆರ್ಥಿಕ ಸಂಕಷ್ಟ ಎದುರಾದಾಗ ಸ್ನೇಹಿತರು ಹಣ ಸಂಗ್ರಹಿಸಿ ನೀಡಿದ್ದರು.

    ಸ್ನೇಹಿತರ ಸಹಕಾರದಿಂದ ಸ್ಪೇನ್‍ಗೆ ತೆರಳಿದ್ದ ಪ್ರೇರಣಾ ಹಿಂದಿ, ತೆಲಗು ಹಾಗೂ ಮರಾಠಿ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಸ್ಪರ್ಧೆಯ ಕುರಿತು ಮಾಹಿತಿ ನೀಡಿದ ನೃತ್ಯ ಶಿಕ್ಷಕ ಮಹೇಶ್ ಜಾಧವ್, ಇಂಗ್ಲೇಂಡ್‍ನ ಜಾರ್ಜ್ ಶ್ರೀಮ್‍ಶಾ ಎಂಬುವವರು ಪ್ರತಿ ವರ್ಷ ಡ್ಯಾನ್ಸ್ ವರ್ಲ್ಡ್ ಕಪ್ ನೃತ್ಯ ಸ್ಪರ್ಧೆ ಆಯೋಜಿಸುತ್ತಾರೆ.

    ಈ ಬಾರಿ ಸ್ಪೇನ್ ದೇಶದಲ್ಲಿ ಈ ನೃತ್ಯ ಸ್ಪರ್ಧೆ ನಡೆಸಲಾಗಿತ್ತು. ದೇಶದ ಪ್ರತಿನಿಧಿಯಾಗಿದ್ದ ಬೆಳಗಾವಿಯ ಪ್ರೇರಣಾ ಅದ್ಭುತ ಪ್ರದರ್ಶನ ತೋರಿದ್ದು, ಮುಂದಿನ ಸಲ ಟ್ರೋಫಿ ಪಡೆಯಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ- ರಮೇಶ್ ಜಾರಕಿಹೊಳಿ ಹೊಸ ಬಾಂಬ್

    ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ- ರಮೇಶ್ ಜಾರಕಿಹೊಳಿ ಹೊಸ ಬಾಂಬ್

    ಬೆಳಗಾವಿ: ಪಕ್ಷಕ್ಕೆ ಬರುವ ಕಾಂಗ್ರೆಸ್- ಜೆಡಿಎಸ್ ಮುಖಂಡರ ಬಳಿ ಚರ್ಚಿಸಿ ಅವರನ್ನು ಪಕ್ಷಕ್ಕೆ ಕರೆತನ್ನಿ ಎಂಬ ಬಿಎಸ್‍ವೈ ಹೇಳಿಕೆ ಬೆನ್ನಲ್ಲೆ ಬಿಜೆಪಿ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ಸೇರ್ಪಡೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎಂದರು.

    ಡಿಕೆಶಿ ಗೆ ಟಾಂಗ್: ಇನ್ನು ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಆದ್ಯತೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ರಮೇಶ್ ಜಾರಕಿಹೊಳಿ, ಅದು ಸಚಿವ ಡಿಕೆ ಶಿವಕುಮಾರ್ ವೈಯಕ್ತಿಕ ಅಭಿಪ್ರಾಯ. ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಉಪಕಾರ ಮಾಡಿದ್ದಾರೆ ಎಂದರು.

    ಇದೇ ವೇಳೆ ಸಿದ್ದರಾಮಯ್ಯ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಆರೋಪಕ್ಕೂ ತಿರುಗೇಟುಕೊಟ್ಟ ರಮೇಶ್ ಜಾರಕಿಹೊಳಿ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಾಮಾಲೆ ಕಣ್ಣಿಗೆ ಕಾಣೋದು ಹಳದಿಯಂತೆ ಹಾಗೇ ನಾವೇನು ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಹೊಸ ಬಜೆಟ್ ಕುರಿತು ಹೊಸ ಸರ್ಕಾರಕ್ಕೆ ಕೇವಲ ಸಲಹೆ ಕೊಟ್ಟಿದ್ದಾರೆ. ಸಲಹೆ ಸ್ವೀಕರಿಸುವುದು ಬಿಡುವುದು ಸಿಎಂ ಅವರಿಗೆ ಬಿಟ್ಟಿದ್ದು. ಹಿಂದಿನ ಸರ್ಕಾರದ ಯೋಜನೆ ಮುಂದುವರೆಸುವುದು ನಮ್ಮ ಉದ್ದೇಶ ಎಂದು ಹೇಳಿದರು.

    ಉತ್ತರಕರ್ನಾಟಕ ನಾಯಕರಿಗೆ ನೀಡಲಿ: ಇದೇ ವೇಳೆ ಡಿಸಿಎಂ ಪರಮೇಶ್ವರ್ ಅವರ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೆ ನೀಡಿದರೆ ಒಳ್ಳೆಯದು. ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಎಚ್‍ಕೆ ಪಾಟೀಲ್ ಯಾರಿಗಾದರು ನೀಡಿದರೂ ಒಳ್ಳೆಯದು ಎಂದು ತಿಳಿಸಿದರು.

     

  • ಅಧಿಕಾರಿಗಳ ನಿರ್ಲಕ್ಷ್ಯ: ಮನೆಗಳಿಗೆ ನುಗ್ಗಿದ ಕಾಲುವೆ ನೀರು!

    ಅಧಿಕಾರಿಗಳ ನಿರ್ಲಕ್ಷ್ಯ: ಮನೆಗಳಿಗೆ ನುಗ್ಗಿದ ಕಾಲುವೆ ನೀರು!

    ಬೆಳಗಾವಿ: ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿ ಪಟ್ಟಣದಲ್ಲಿ ನಡೆದಿದೆ.

    ನೀರಾವರಿ ಇಲಾಖೆಯ ಅಧಿಕಾರಿಗಳು ಹಾರೋಗೇರಿ ಪಟ್ಟಣದ ಕೆರೆ ತುಂಬಿಸಲು, ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ನೀರು ಹಾಯಿಸಿದ್ದಾರೆ. ಏಕಾಏಕಿ ನೀರು ಹರಿಸಿದ್ದರಿಂದ ಹಾರೋಗೇರಿ ಪಟ್ಟಣದ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳು ತಗ್ಗು ಪ್ರದೇಶದಲ್ಲಿಂದರಿಂದ ನೀರು ತುಂಬಿಕೊಂಡಿದ್ದು, ಮನೆಯಿಂದ ನೀರು ತೆಗೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ನೀರಿನಿಂದಾಗಿ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ.

    ಪುರಸಭೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಯನ್ನು ಸ್ವಚ್ಛಗೊಳಿಸದೇ ನೀರು ಹರಿಸಿದ್ದರಿಂದ ಕಾಲುವೆ ತುಂಬಿ ಹತ್ತಿರದ ಮನೆಗಳಿಗೆ ನುಗ್ಗಿದೆ. ಯಾವುದೇ ಮಾಹಿತಿ ನೀಡದೆ ಏಕಾಏಕಿ ನೀರು ಬಿಟ್ಟಿದ್ದರ ಪರಿಣಾಮ ನೀರು ನುಗ್ಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

  • ಪ್ರೀತಿಸಿ ಮದ್ವೆಯಾಗಿ ಪತಿಯ ಮನೆಗೆ ಹೋದ್ರೂ ಭದ್ರತೆಗಾಗಿ ಪೊಲೀಸ್ ಮೆಟ್ಟಿಲೇರಿದ ನವಜೋಡಿ

    ಪ್ರೀತಿಸಿ ಮದ್ವೆಯಾಗಿ ಪತಿಯ ಮನೆಗೆ ಹೋದ್ರೂ ಭದ್ರತೆಗಾಗಿ ಪೊಲೀಸ್ ಮೆಟ್ಟಿಲೇರಿದ ನವಜೋಡಿ

    ಬೆಳಗಾವಿ: ಕುಟುಂಬಸ್ಥರ ವಿರೋಧದ ನಡುವೆಯೂ ಬೆಂಗಳೂರಿಗೆ ಹೋಗಿ ಮದುವೆಯಾದ ನವ ಜೋಡಿ ಇದೀಗ ಭದ್ರತೆ ನೀಡುವಂತೆ ಕೋರಿ ಬೆಳಗಾವಿ ಎಸ್‍ಪಿ ಕಚೇರಿ ಮೆಟ್ಟಿಲು ಏರಿದ್ದಾರೆ.

    ಅಥಣಿ ತಾಲೂಕಿನ ಕೊಟ್ಟಳಗಿ ಗ್ರಾಮದ ಸಂದೀಪ್ ಕರೆಪ್ಪಗೋಳ ಹಾಗೂ ಗೌರಿ ಪಾಟೀಲ ಮದುವೆಯಾದ ನವಜೋಡಿ. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ತಮ್ಮ ಪ್ರೀತಿ ಹಾಗೂ ಮದುವೆಯಾಗುವ ವಿಷಯವನ್ನು ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ ಇದಕ್ಕೆ ಇಬ್ಬರ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

    ಹೀಗಾಗಿ ಇದೇ 23 ರಂದು ಈ ಜೋಡಿ ಬೆಂಗಳೂರಿಗೆ ಹೋಗಿ ಮದುವೆಯಾಗಿದ್ದಾರೆ. ಆದರೆ ಹುಡುಗಿಯ ತಂದೆ ಅಣ್ಣಾಸಾಬ್ ಪಾಟೀಲ್ ತಮ್ಮ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಬೆಂಗಳೂರಲ್ಲಿ ಮದುವೆ ಮಾಡಿಕೊಂಡಿದ್ದ ಸಂದೀಪ್-ಗೌರಿ ಮಂಗಳವಾರ ಬೆಳಗ್ಗೆ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಮಗ ಮನೆಗೆ ಬರುತ್ತಿದ್ದಂತೆ ಪಾಲಕರು ಇಬ್ಬರನ್ನೂ ಮನೆ ತುಂಬಿಸಿಕೊಂಡಿದ್ದಾರೆ. ಇತ್ತ ಹುಡುಗಿಯ ಪಾಲಕರ ಕಿರುಕುಳ ಹೆಚ್ಚಾಗುತ್ತಿದ್ದಂತೆ ಸಂದೀಪ್ ತನ್ನ ಪತ್ನಿ, ತಂದೆ-ತಾಯಿ ಹಾಗೂ ಸಹೋದರನ ಸಮೇತ ಬೆಳಗಾವಿ ಎಸ್‍ಪಿ ಕಚೇರಿಗೆ ಬಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ಭದ್ರತೆ ನೀಡುವಂತೆ ಸಹಾಯ ಕೋರಿದರು.

    ಪತ್ನಿಯ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ನನ್ನ ಸಹೋದರ ಪ್ರದೀಪ್ ನನ್ನು ಠಾಣೆಗೆ ಕರೆಸಿ ಥಳಿಸಿದ್ದಾರೆ ಎಂದು ಸಂದೀಪ್ ಆರೋಪಿಸಿದ್ದಾರೆ.

  • ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಅಡುಗೆ ಭಟ್ಟ

    ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಅಡುಗೆ ಭಟ್ಟ

    ಬೆಳಗಾವಿ: ಕೌಟುಂಬಿಕ ಕಲಹದಿಂದ ಮನನೊಂದು ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

    ಶೇಖರ್ ತೇಜಪ್ಪ ಶೆಟ್ಟಿ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸಂಕೇಶ್ವರ ಪಟ್ಟಣದ ಶಬರಿ ಹೋಟೆಲ್‍ನಲ್ಲಿ ಶೇಖರ್ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದರು. ಶೇಖರ್ ತಾವು ಕೆಲಸ ಮಾಡುತ್ತಿದ್ದ ಹೋಟೆಲ್ ಕಟ್ಟಡದ ಮೆಟ್ಟಿಲ ಬಳಿಯೇ ನೇಣಿಗೆ ಶರಣಾಗಿದ್ದಾರೆ.

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೌಟುಂಬಿಕ ಕಲಹ ಹಾಗೂ ವೈಯಕ್ತಿಕ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಘಟನೆ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗನಿಗಿಟ್ಟ ಹಣದಿಂದ ದತ್ತು ಮಕ್ಕಳಿಗೆ ಭವಿಷ್ಯ- ನೂರಕ್ಕೂ ಹೆಚ್ಚು ಮಂದಿಗೆ ದಾರಿದೀಪವಾದ್ರು ಚಿಕ್ಕೋಡಿಯ ದಂಪತಿ

    ಮಗನಿಗಿಟ್ಟ ಹಣದಿಂದ ದತ್ತು ಮಕ್ಕಳಿಗೆ ಭವಿಷ್ಯ- ನೂರಕ್ಕೂ ಹೆಚ್ಚು ಮಂದಿಗೆ ದಾರಿದೀಪವಾದ್ರು ಚಿಕ್ಕೋಡಿಯ ದಂಪತಿ

    ಚಿಕ್ಕೋಡಿ: ಈ ಕಾಲದಲ್ಲಿ ಹೆತ್ತ ಮಕ್ಕಳನ್ನ ಸಾಕೋಕೇ ಪೋಷಕರು ಒದ್ದಾಡ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಿಕ್ಷಕ ದಂಪತಿ, ಶೈಕ್ಷಣಿಕವಾಗಿ ದತ್ತು ಪಡೆದ ಮಕ್ಕಳಿಗೆ ಉನ್ನತ ವ್ಯಾಸಂಗದವರೆಗೆ ಸಹಾಯ ಮಾಡ್ತಿದ್ದಾರೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಡಿ.ಎಸ್.ನಾಡಗೆ ಅನುದಾನಿತ ಪ್ರೌಢ ಶಾಲೆಯಲ್ಲಿ ಶಿಕ್ಷಕರಾದ ಶಕುಂತಲಾ ಮತ್ತು ಜನವಾಡೆ ದಂಪತಿ, ಮಗನ ವಿದ್ಯಾಭ್ಯಾಸಕ್ಕೆ 5ಲಕ್ಷ ಕೂಡಿಟ್ಟಿದ್ದರು. ಆದ್ರೆ, ಮಗ 5ನೇ ತರಗತಿಯಲ್ಲಿ ಪರೀಕ್ಷೆ ಬರೆದು ನವೋದಯ ಶಾಲೆಗೆ ಸೇರಿದನು. ನಂತರ ಆ 5 ಲಕ್ಷವನ್ನ ಇತರೆ ಮಕ್ಕಳನ್ನ ಶೈಕ್ಷಣಿಕವಾಗಿ ದತ್ತು ಪಡೆದು ಸಹಾಯಕ್ಕೆ ವಿನಿಯೋಗಿಸ್ತಿದ್ದಾರೆ. ಕಳೆದ 10 ವರ್ಷಗಳಿಂದ ಈ ಕಾಯಕವನ್ನ ಮುಂದುವರಿಸಿದ್ದಾರೆ.

    ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಪಾಲಕರಿಗೆ ಹೇಳಿ ಸಮವಸ್ತ್ರ, ಪಠ್ಯ ಪುಸ್ತಕ, ಶಾಲೆಯ ಫೀಸ್ ಸೇರಿದಂತೆ ವಿದ್ಯಾರ್ಥಿಯ 3 ವರ್ಷ ವಿದ್ಯಾಭ್ಯಾಸಕ್ಕೆ ತಗಲುವ ಖರ್ಚನ್ನು ಭರಿಸುತ್ತಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಬಡ ಮಕ್ಕಳಿಗೆ ಬದುಕು ರೂಪಿಸಿದ್ದಾರೆ. ಇವರಿಂದ ಸಹಾಯ ಪಡೆದವರು ಈಗ ವಕೀಲರು, ವೈದ್ಯರು ಹಾಗೂ ಎಂಜಿನಿಯರ್‍ಳಗಾಗಿದ್ದಾರೆ.

    ತಮ್ಮ ಮಗನ ಉಜ್ವಲ ಭವಿಷ್ಯಕ್ಕಾಗಿ ಕೂಡಿಟ್ಟ ಹಣದಿಂದ ಇದೀಗ ನೂರಾರು ಮಕ್ಕಳಿಗೆ ದಾರಿದೀಪವಾಗಿದ್ದಾರೆ.

    https://www.youtube.com/watch?v=S0ftceLWfvc