Tag: belagavi

  • ಕೇವಲ 500 ರೂ.ಗೆ ಸ್ನೇಹಿತನ ಪತ್ನಿಯನ್ನೇ ಹೊತ್ತೊಯ್ದ ಭೂಪ!

    ಕೇವಲ 500 ರೂ.ಗೆ ಸ್ನೇಹಿತನ ಪತ್ನಿಯನ್ನೇ ಹೊತ್ತೊಯ್ದ ಭೂಪ!

    ಬೆಳಗಾವಿ: ಕೇವಲ 500 ರೂಪಾಯಿ ಹಣ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತುಕೊಂಡು ಹೋಗಿ ಮದುವೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬಸವರಾಜ್ ಕೊನನ್ನವರ್ ನೊಂದ ಪತಿ. ರಮೇಶ್ ಹುಕ್ಕೇರಿ ಸ್ನೇಹಿತನ ಪತ್ನಿಯನ್ನೇ ಹೊತ್ತುಕೊಂಡು ಹೋಗಿ ಮದುವೆಯಾಗಿರುವ ಸಾಲ ಕೊಟ್ಟ ಸ್ನೇಹಿತ. ಬೈಲಹೊಂಗಲ ತಾಲೂಕಿನ ಮುರಕಿಬಾವಿ ನಿವಾಸಿ ಬಸವರಾಜ್ ಕೋನನ್ನವರ್ 2011ರಲ್ಲಿ ಮೀನಾಕ್ಷಿ (ಹೆಸರು ಬದಲಾಯಿಸಲಾಗಿದೆ)ಯನ್ನು ಮದುವೆಯಾಗಿದ್ದರು. ಕೆಲ ವರ್ಷಗಳ ಹಿಂದೆ ಬೆಳಗಾವಿಗೆ ಬಂದು ಖಡೇ ಬಜಾರ್ ಬಳಿ ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡು ಇದ್ದರು. ಇದೇ ಹೋಟೆಲಿನಲ್ಲಿ ಗೋಕಾಕ್ ತಾಲೂಕಿನ ಮಿಡಕನಟ್ಟಿಯ ರಮೇಶ್ ಹುಕ್ಕೇರಿ ಎಂಬಾತನೂ ಕೆಲಸ ಮಾಡುತ್ತಿದ್ದನು.

    ಹೀಗೆ ಇವರಿಬ್ಬರ ನಡುವೆ ಸ್ನೇಹ ಬೆಳೆದು ರಮೇಶ್ ಬಳಿ ಬಸವರಾಜ್ 500 ರೂಪಾಯಿ ಸಾಲ ತಗೊಂಡಿದ್ದರು. ಆದರೆ ತುಂಬಾ ಸಮಯ ಕಳೆದರು ಸಾಲ ವಾಪಸ್ ಕೊಡಲಿಲ್ಲ ಎಂದು ಬಸವರಾಜ್ ಪತ್ನಿಯನ್ನು ಕರೆದೊಕೊಂಡು ಹೋಗಿ ರಮೇಶ್ ಮದುವೆಯಾಗಿದ್ದಾನೆ. ಬಸವರಾಜ್‍ಗೆ ಓರ್ವ ಮಗಳಿದ್ದು, ಪತ್ನಿಗಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ಪೊಲೀಸರು ಮಾತ್ರ ದೂರು ದಾಖಲಿಸಿಕೊಳ್ಳದೆ ಸತಾಯಿಸುತ್ತಿದ್ದಾರೆ.

    ರಮೇಶ್ ಹುಕ್ಕೇರಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿಯನ್ನು ತವರು ಮನೆಗೆ ಕಳುಹಿಸಿ ಇದೀಗ ಮೀನಾಕ್ಷಿಯ ಜತೆಗೆ ನನ್ನ ಗ್ರಾಮದಲ್ಲಿ ನೆಲೆಸಿದ್ದಾನೆ. ನನ್ನ ಪತ್ನಿಯನ್ನು ವಾಪಸ್ ಕಳುಹಿಸುವಂತೆ ನಾನು ಅನೇಕ ಬಾರಿ ರಮೇಶ್ ಹುಕ್ಕೇರಿಗೆ ಫೋನ್ ಮಾಡಿದ್ದೇನೆ. ಆದರೆ ನನಗೆ ರಮೇಶ್ ಹುಕ್ಕೇರಿ ಅನೇಕ ಬಾರಿ ಅವಾಜ್ ಹಾಕಿದ್ದಾನೆ. ನಿನ್ನ ಪತ್ನಿಯನ್ನು ನಾನು ಮದುವೆಯಾಗಿದ್ದೇನೆ. ಅದೇನು ಮಾಡಿಕೊಳ್ಳುತ್ತೀಯೋ..? ಮಾಡಿಕೋ..? ಎಂದು ಧಮ್ಕಿ ಹಾಕಿದ್ದಾನೆ ಅಂತ ನೊಂದ ಪತಿ ಬಸವರಾಜ್ ಹೇಳಿದ್ದಾರೆ.

    ಕೇವಲ 500 ರೂಪಾಯಿಗಾಗಿ ಸ್ನೇಹಿತನೇ ಪತ್ನಿಯನ್ನು ಕರೆದುಕೊಂಡು ಮದುವೆಯಾಗಿದ್ದು. ಪತ್ನಿಯನ್ನು ವಾಪಸ್ ಪಡೆಯಲು ನೊಂದ ಪತಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಬಗ್ಗೆ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದು, ಪೊಲೀಸರು ನೊಂದ ಪತಿಗೆ ನ್ಯಾಯ ಕೊಡಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 9ರ ಬಾಲಕನ ಮೇಲೆ ಇಬ್ಬರು ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ

    9ರ ಬಾಲಕನ ಮೇಲೆ ಇಬ್ಬರು ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ

    ಬೆಳಗಾವಿ: 9 ವರ್ಷದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.

    ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ಹೋಗುತ್ತಿದ್ದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ನಡೆದು ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    3 ದಿನಗಳ ಹಿಂದೆ ಬಾಲಕ ಶಾಲೆಯಿಂದ ಮನೆಗೆ ಹೋಗುವಾಗ ಅಪ್ರಾಪ್ತ ಬಾಲಕರು ಮೀನು ಹಿಡಿಯಲು ಕರೆದುಕೊಂಡು ಹೋಗಿದ್ದಾರೆ. ಹೀಗೆ ಪುಸಲಾಯಿಸಿ ಕರೆದುಕೊಂಡು ಹೋಗಿ ಅಪ್ರಾಪ್ತರಿಬ್ಬರು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದರಿಂದಾಗಿ ಬಾಲಕನಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವು ಸಹಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಅಪ್ರಾಪ್ತ ಬಾಲಕರು ತನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮನೆಯವರಿಗೆ ತಿಳಿಸಿದ್ದಾನೆ.

    ಕೂಡಲೇ ಪೋಷಕರು ಅಸ್ವಸ್ಥ ಬಾಲಕನನ್ನು ಬೆಳಗಾವಿಯ ಜಿಲ್ಲಾಸ್ಪತ್ರೆ ದಾಖಲಿಸಿದ್ದು, ಸದ್ಯ ಬಾಲಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಅಪ್ರಾಪ್ತ ಬಾಲಕರ ವಿರುದ್ಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಜೆ ಬೇಡ ಎಂದವರ ಮನೆಗೆ ಪಟಾಕಿ ಎಸೆದ ಪುಂಡರು!

    ಡಿಜೆ ಬೇಡ ಎಂದವರ ಮನೆಗೆ ಪಟಾಕಿ ಎಸೆದ ಪುಂಡರು!

    ಬೆಳಗಾವಿ: ಗಣೇಶ ಉತ್ಸವ ಮೆವಣಿಗೆಯಲ್ಲಿ ಡಿಜೆ ಬೇಡ ಎಂದು ಪೊಲೀಸರಿಗೆ ಮನವಿ ಮಾಡಿದ್ದ ವ್ಯಕ್ತಿಗಳ ಮನೆಯೊಳಗೆ ಪುಂಡರು ಪಟಾಕಿ ಎಸೆದಿದ್ದಾರೆ. ಪರಿಣಾಮ ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.

    ಸತ್ತಿಗೇರಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಯುವಕರ ತಂಡ ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದರು. ಗಣಪತಿ ವಿಸರ್ಜನೆ ವೇಳೆ ಡಿಜೆ ಅನುಮತಿ ನೀಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಗ್ರಾಮದ ಸರನಾಡಗೌಡ್ರ ಸೇರಿದಂತೆ ಕೆಲವು ವ್ಯಕ್ತಿಗಳು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಡಿಜೆ ಹಾಕಲು ಅನುಮತಿ ನೀಡಬಾರದೆಂದು ಪೊಲೀಸರಿಗೆ ದೂರು ಕೊಟ್ಟಿದ್ದರು.

    ಪೊಲೀಸರಿಗೆ ಡಿಜೆ ಬಳಸದಂತೆ ದೂರು ಕೊಟ್ಟ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಕೆಲ ಯುವಕರು ಗಣೇಶ ಉತ್ಸವದ ಮೆರವಣಿಗೆಯ ವೇಳೆ ಉದ್ದೇಶ ಪೂರ್ವಕವಾಗಿ ದೂರು ಕೊಟ್ಟ ಸರನಾಡಗೌಡ್ರ ಸೇರಿದಂತೆ ಹಲವರ ಮನೆಗಳ ಒಳಗೆ ಪಟಾಕಿ ಹಚ್ಚಿ ಎಸೆದಿದ್ದಾರೆ. ಅಲ್ಲದೆ ಮನೆ ಮುಂದೆ ಪಟಾಕಿ ಹಚ್ಚಿ ಕುಣಿದು ಕುಪ್ಪಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯುವಕರ ಈ ವರ್ತನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಮುರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಗ್ರಾಮದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗಾವಿ ವಿಚಾರದಲ್ಲಿ ತಲೆ ತೂರಿಸಿದ್ರೆ ನಾವು ಸುಮ್ನಿರಲ್ಲ: ಸಿಎಂಗೆ ಜಾರಕಿಹೊಳಿ ದೂರು

    ಬೆಳಗಾವಿ ವಿಚಾರದಲ್ಲಿ ತಲೆ ತೂರಿಸಿದ್ರೆ ನಾವು ಸುಮ್ನಿರಲ್ಲ: ಸಿಎಂಗೆ ಜಾರಕಿಹೊಳಿ ದೂರು

    ಬೆಂಗಳೂರು: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಕುಮಾರಸ್ವಾಮಿ ಅವರಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ.

    ನಿಮ್ಮ ಸಮುದಾಯದ ನಾಯಕರಿಂದ ಜಿಲ್ಲೆಯಲ್ಲಿ ಕೋಲಾಹಲ ಎದ್ದಿದ್ದು, ಇಡೀ ಸರ್ಕಾರ ಒಬ್ಬರು-ಇಬ್ಬರ ಅಣತಿಯಂತೆ ನಡೆಯುವುದಾದ್ರೆ ನಾವ್ಯಾಕೆ ಇರಬೇಕು?ನಮ್ಮ ಜಿಲ್ಲೆಯಲ್ಲಿ ಡಿಕೆಶಿ ಮೂಗು ತೂರಿಸುವುದಾದ್ರೆ ನಾವ್ಯಾಕೆ ಸುಮ್ಮನಿರಬೇಕು ಎಂದು ಪ್ರಶ್ನಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ನಿಮ್ಮ ಸಮುದಾಯದ ನಾಯಕ ನಿಮ್ಮನ್ನು ಸಂಧಾನಕ್ಕೆ ಕಳುಹಿಸಿದ್ರಾ ಎಂದು ಪ್ರಶ್ನಿಸಿ ನಿಮ್ಮ ನಾಯಕನಿಂದಾಗಿ ಪಿಎಲ್‍ಡಿ ಎಲೆಕ್ಷನ್‍ನಲ್ಲಿ ಮುಖಭಂಗ ಅನುಭವಿಸುವಂತಾಯ್ತು. ಬೆಳಗಾವಿ ವಿಚಾರದಲ್ಲಿ ತಲೆದೂರಿಸಿದ್ರೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

    ಬಳ್ಳಾರಿ ಉಸ್ತುವಾರಿ ಬಿಡಲು ನೀವೇ ನಿಮ್ಮ ಸಮುದಾಯದ ಬಂಧುವಿಗೆ ಹೇಳಿ. ನಾವು ಬೆಳೆಸಿದ ಲಕ್ಷ್ಮಿ ಹೆಬ್ಬಾಳ್ಕರ್ ನಮಗೆ ಅಡ್ಡಗಾಲಾದ್ರೆ ಸುಮ್ಮನಿರಬೇಕಾ? ನಿಮ್ಮಲ್ಲಿ ಮತ್ತು ರೇವಣ್ಣರಲ್ಲಿ ನಮಗೆ ಆತ್ಮೀಯತೆ ಇದೆ. ಆದರೆ ಈ ಹಂತದಲ್ಲಿ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿ ಡಿಕೆಶಿ ವಿರುದ್ಧ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಇದೆ: ಸತೀಶ್ ಜಾರಕಿಹೊಳಿ

    ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಇದೆ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಕೂಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈ ಬಗ್ಗೆ ರಮೇಶ್ ಜೊತೆಗೆ ಮಾತುಕತೆ ಮಾಡಲು ಸಾಧ್ಯವಾಗಿಲ್ಲ. ಸದ್ಯ ಅವರು ಬೆಂಗಳೂರಿಗೆ ಹೋಗಿದ್ದಾರೆ. ನಾನೂ ಸಹ ಸಂಜೆ ಹೋಗುತ್ತೇನೆ. ರಮೇಶ್ ಜಾರಕಿಹೊಳಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತಹ ಯಾವುದೇ ಪ್ರಸ್ತಾಪ ಇಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

    ಹೈಕಮಾಂಡ್‍ನಿಂದ ದೆಹಲಿಗೆ ಬುಲಾವ್ ಬಂದಿರುವ ಬಗ್ಗೆ ಪ್ರಸ್ತಾಪಿಸಿದಾಗ, ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ವೇಣುಗೋಪಾಲ್‍ರೊಂದಿಗೆ ಅನೇಕ ಬಾರಿ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅಲ್ಲದೆ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಗೆ ಮಾತನಾಡಿದ್ದೇನೆ. ಸಮ್ಮಿಶ್ರ ಸರ್ಕಾರದ ಮುಂದಿನ ಯೋಜನೆಗಳ ಬೆಳವಣಿಗೆ, ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಕರೆಯಲಾಗಿದೆ. ಅಲ್ಲದೇ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ತೆರಳುತ್ತಿದ್ದೇನೆ ಎಂದು ತಿಳಿಸಿದರು.

    ರಮೇಶ್ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯನವರು ಭೇಟಿಯಾಗುವ ಸಾಧ್ಯತೆ ಇದೆ. ವಿದೇಶ ಪ್ರವಾಸದ ಬಳಿಕ ಅವರನ್ನು ಭೇಟಿಯಾಗಲು ತೆರಳಿದ್ದಾರೆ. ಸರ್ಕಾರ ಬಿಳಿಸುವ ಹಾಗೂ ಬಿಜೆಪಿ ಸಂಪರ್ಕ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಶಾಸಕರ ಹೇಳಿರುವ ಹಾಗೆ ಕಳೆದ 4 ತಿಂಗಳಿನಿಂದಲೂ ಬಿಜೆಪಿಯವರು ಪಕ್ಷಕ್ಕೆ ಆಹ್ವಾನಿಸುತ್ತಿರುವ ವಿಚಾರ ತಿಳಿದಿದೆ ಅಷ್ಟೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಳೆಯೇ ಸರ್ಕಾರ ಪತನ ಆಗ್ಬಹುದು ನಮಗೇನು ಗೊತ್ತು – ಸತೀಶ್ ಜಾರಕಿಹೊಳಿ ಹೊಸ ಬಾಂಬ್

    ನಾಳೆಯೇ ಸರ್ಕಾರ ಪತನ ಆಗ್ಬಹುದು ನಮಗೇನು ಗೊತ್ತು – ಸತೀಶ್ ಜಾರಕಿಹೊಳಿ ಹೊಸ ಬಾಂಬ್

    ಬೆಳಗಾವಿ: ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದರೆ ಇತ್ತ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ಕೆಲ ಶಾಸಕರು ಪಕ್ಷ ತೊರೆದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಿಜೆಪಿ ಅಪರೇಷನ್ ಕಮಲ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಪಕ್ಷ ಬಿಟ್ಟು ಹೋಗಿ ಮತ್ತೆ ಬಂದರು. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಶಾಸಕರು ಯಾರು ಪಕ್ಷದಲ್ಲಿ ಇಲ್ಲ. ಆದರೆ ಒಂದೊಮ್ಮೆ ಪಕ್ಷದ ಇತರೇ ಶಾಸಕರು ಬಿಟ್ಟು ಹೋದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಸಂಚಲನ ಮೂಡಿಸಿದ್ದಾರೆ.

    ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಸಹೋದರರಿಂದ ತೊಂದರೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ನಮ್ಮ ಕಾರಣದಿಂದ ಸರ್ಕಾರಕ್ಕೆ ತೊಂದರೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಕಾಂಗ್ರೆಸ್ ಪಕ್ಷ ತೊರೆದು ಕೆಲ ಶಾಸಕರು ಹೋದರೆ ನಾವು ಏನು ಮಾಡಲು ಸಾಧ್ಯವಿಲ್ಲ. ನಾಳೆಯೇ ಸರ್ಕಾರ ಪತನ ಆಗಬಹುದು ನಮಗೇನು ಗೊತ್ತು? ಬೇರೆಯಾದರೂ ಹೋಗಬಹುದು ನಾವು ಪಕ್ಷ ಬಿಟ್ಟು ಹೋಗಲ್ಲ ಎಂದರು.

    ಇದೇ ವೇಳೆ ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮನೆಗೆ ಕಾಂಗ್ರೆಸ್ ವರಿಷ್ಠರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಉದ್ಭವವಾಗಿರುವ ಸಮಸ್ಯೆಗಳ ಬಗೆಹರಿಸಲು ವರಿಷ್ಠರು ಬಂದಿದ್ದಾರೆ. ಈ ರೀತಿಯ ಸಭೆಗಳು ನಡೆಯವುದು ಸಾಮಾನ್ಯ. ಮೇಲಿಂದ ಮೇಲೆ ಇಂತಹ ಸಭೆ ನಡೆಯುವುದು ರಾಜಕೀಯ ಸಹಜವಾದ ಪ್ರಕ್ರಿಯೆ. ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವುದರಿಂದ ಸಿಎಂ ಸೇರಿದಂತೆ ಎಷ್ಟೇ ದೊಡ್ಡವರಾದರು ಚರ್ಚೆ ಮಾಡಲೇಬೇಕು. ಇದು ನಮ್ಮ ಪಕ್ಷದ ನಿಯಮವಾಗಿದೆ ಎಂದರು.

    ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ ಬ್ರೇಕ್ ಹಾಕಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ಸಿದ್ದರಾಮಯ್ಯ ಅವರು ನನಗೆ ಆಗಲಿ, ರಮೇಶ್ ಅವರಿಗೆ ಆಗಲಿ ಹೇಳುವ ಅವಶ್ಯಕತೆ ಇಲ್ಲ. ಅಂತಹ ಸಮಸ್ಯೆಗಳು ಉದ್ಭವವಾಗಿಲ್ಲ. ಸದ್ಯ ಇದರಲ್ಲಿ ನಮ್ಮ ಪಾತ್ರವೇನು ಇಲ್ಲ. ಪಕ್ಷದ ಕೆಲಸವನಷ್ಟೇ ನಾವು ಮಾಡುತ್ತೇವೆ ಎಂದು ತಿಳಿಸಿದರು.

  • ಬೆಳಗಾವಿಯನ್ನು ಹಾಡಿ ಹೊಗಳಿದ ರಾಷ್ಟ್ರಪತಿ ಕೋವಿಂದ್

    ಬೆಳಗಾವಿಯನ್ನು ಹಾಡಿ ಹೊಗಳಿದ ರಾಷ್ಟ್ರಪತಿ ಕೋವಿಂದ್

    ಬೆಳಗಾವಿ: 1892ರಲ್ಲಿ ಸ್ವಾಮಿ ವಿವೇಕಾನಂದರು ಬೆಳಗಾವಿಗೆ ಭೇಟಿ ನೀಡಿದ್ದರು. ಅವರ ಪ್ರಭಾವ ಈ ನೆಲದಲ್ಲಿ ಇಂದಿಗೂ ಇದೆ. ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಪ್ರಾರಂಭಿಸಿದ್ದ ಗಣೇಶ ಹಬ್ಬದ ಸಂಸ್ಕೃತಿ ಹಾಗೂ ಪಾವಿತ್ರತೆಯನ್ನ ಜಿಲ್ಲೆಯ ಜನತೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಹೇಳಿದ್ದಾರೆ.

    ನಗರದಲ್ಲಿ ನಡೆದ ಕರ್ನಾಟಕ ಲಾ ಸೂಸೈಟಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗಾವಿಗೆ ಇದು ನನ್ನ ಮೊದಲ ಭೇಟಿ. ಜಿಲ್ಲೆಯು ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಸಾಕಷ್ಟು ಹೆಸರು ಮಾಡಿದ್ದು, ದೇಶದಲ್ಲಿ ತನ್ನದೇ ಛಾಪು ಮೂಡಿಸಿದೆ. ಬೆಳಗಾವಿಯು ಲೋಹ ಹಾಗೂ ಲಸಿಕೆ ತಯಾರಿಕೆಯಲ್ಲಿ ಇತಿಹಾಸ ಬರೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ವಕೀಲಿಕೆ ಕೇವಲ ವೃತ್ತಿಯಾಗದೇ ಪ್ಯಾಷನ್ ಆಗಬೇಕು. ಈ ನಿಟ್ಟಿನಲ್ಲಿ ರಾಜಾ ಲಖಮಗೌಡ ಕಾಲೇಜ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ರಾಜಾ ಲಖಮಗೌಡ ಅವರ ತ್ಯಾಗವು ಇಂದು ದೊಡ್ಡ ಕಾನೂನು ಸೊಸೈಟಿಯಾಗಿ ಬೆಳೆಯುವಂತೆ ಮಾಡಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಹಾತ್ಮಾ ಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್ ವಕೀಲರಾಗಿ ಸೇವೆ ಸಲ್ಲಿಸಿದ್ದರು ಎಂದರು.

    ದೇಶದಲ್ಲಿ ಯುವ ಕ್ರಾಂತಿ ಆಗುತ್ತಿದ್ದು, ಅದರ ಲಾಭ ದೇಶಕ್ಕೆ ಸದ್ಯಕ್ಕೆ ಆಗದಿದ್ದರೂ ಮುಂದಿನ ದಿನದಲ್ಲಿ ಫಲ ಸಿಗಲಿದೆ. ದೇಶದ ಜನತೆ ಸರಿಯಾದ ದಾರಿಯಲ್ಲಿ ನಡೆಯಬೇಕಾದರೆ ನ್ಯಾಯಮೂರ್ತಿಗಳ ಪಾತ್ರ ಮಹತ್ವದ್ದಾಗಿದೆ. ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನಿವೃತ್ತಿ ಹೊಂದಲಿದ್ದಾರೆ ಎಂದ ಅವರು, ದೀಪಕ್ ಮಿಶ್ರಾ ಅವರಿಗೆ ಅಭಿನಂದನೆ ಸಲ್ಲಿಸಿದರು.

    ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ನನಗೂ ಮತ್ತು ಬೆಳಗಾವಿಗೂ ಅವಿನಾಭಾವ ಸಂಬಂಧವಿದೆ. ಜಿಲ್ಲೆಗೆ ಸುವರ್ಣ ಸೌಧ ಕೊಟ್ಟಿರುವುದು ನಮ್ಮ ಸರ್ಕಾರ. ಅಷ್ಟೇ ಅಲ್ಲದೇ ಬೆಳಗಾವಿ ಜಿಲ್ಲೆಯ ಗ್ರಾಮದಿಂದ ನಾನು ಗ್ರಾಮ ವಾಸ್ತವ್ಯವನ್ನು ಆರಂಭ ಮಾಡಿದ್ದೆ ಎಂದು ತಿಳಿಸಿದರು. ಬೆಳಗಾವಿಯು ದೇಶ ಮತ್ತು ರಾಜ್ಯಕ್ಕೆ ಮಹಾನ್ ವ್ಯಕ್ತಿಗಳನ್ನು ಕೊಡುಗೆ ನೀಡಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಈ ನಾಡಿನ ಮಹಾನ್ ವ್ಯಕ್ತಿಗಳು ಎಂದರು.

    ಹಳೇ ತಲೆಮಾರಿನವರು ಯುವಕರನ್ನು ಕಡೆಗಣನೆ ಮಾಡಬಾರದು. ಪ್ರತಿದಿನ 10 ಯುವಕರ ಜತೆ ಮಾತನಾಡಿದರೆ ಬೌದ್ಧಿಕ ಹಾಗೂ ಶಾರೀರಿಕವಾಗಿ ಬಲಗೊಳ್ಳುತ್ತೇವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಕ್ಕಪಕ್ಕ ಕುಳಿತ ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ

    ಅಕ್ಕಪಕ್ಕ ಕುಳಿತ ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ

    ಬೆಳಗಾವಿ: ಪಿಎಲ್‍ಡಿ ಬ್ಯಾಂಕ್ ಚುನಾವಣೆ ಸಂಬಂಧ ಪರಸ್ಪರ ಕಿತ್ತಾಡಿಕೊಂಡಿದ್ದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಕಪಕ್ಕ ಕುಳಿತುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ಕೆಎಲ್‍ಎ ಸಂಸ್ಥೆಯ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಆಗಮಿಸಿದ್ದರು. ಸತೀಶ್ ಜಾರಕಿಹೊಳಿ ಪಕ್ಕದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಕುಳಿತ್ತಿದ್ದರು. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸುತ್ತಿದ್ದಂತೆ ಪ್ರಕಾಶ ಹುಕ್ಕೇರಿ ಜಾಗ ಬಿಟ್ಟುಕೊಟ್ಟಿದ್ದಾರೆ. ನಂತರ ಲಕ್ಷ್ಮಿ ಅವರು ಸತೀಶ್ ಜಾರಕಿಹೊಳಿ ಪಕ್ಕದಲ್ಲಿ ಹೋಗಿ ಕುಳಿತ್ತಿದ್ದಾರೆ. ಇದನ್ನು ಕಾರ್ಯಕ್ರದಲ್ಲಿದ್ದವರು ನೋಡಿ ನಗುತ್ತಾ ವಿಡಿಯೋ ಮಾಡಿಕೊಂಡಿದ್ದಾರೆ.

    ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರನ್ನು ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಬ್ಬರೂ ಪ್ರತ್ಯೇಕವಾಗಿ ಸ್ವಾಗತಿಸಿದ್ದರು. ಈ ವೇಳೆ ಸಿಎಂ ಅವರು ರಮೇಶ್ ಜಾರಕಿಹೊಳಿ ಕೆನ್ನೆ ಸವರಿ ಮಾತನಾಡಿದರು.

    ಬೆಳಗಾವಿಯ ಕೆಎಲ್‍ಇ ಸಂಸ್ಥೆಯ 75ನೇ ವರ್ಷದ ಅಮೃತಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿಯನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಸ್ವಾಗತಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಜಿಐಟಿ ಕಾಲೇಜು ಆವರಣಕ್ಕೆ ರಾಷ್ಟ್ರಪತಿ ಆಗಮಿಸಿದರು.

    ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ನಗರದಲ್ಲಿ ಚೆನ್ನಮ್ಮ ವೃತ್ತ ಸೇರಿದಂತೆ ಬೆಳಗಾವಿ ಖಾನಾಪುರ ರಸ್ತೆ, ಸಾಂಬ್ರಾ ಬೆಳಗಾವಿ ರಸ್ತೆಯ ಸಾರ್ವಜನಿಕ ಸಂಚಾರವನ್ನ ಸಂಪೂರ್ಣವಾಗಿ ಬಂದ್ ಮಾಡಿ ಉಳಿದಂತೆ ರಸ್ತೆ ಮಾರ್ಗಗಳನ್ನ ಬದಲಿಸಲಾಗಿತ್ತು. ಈ ಮಧ್ಯೆ, ರಾಷ್ಟ್ರಪತಿಗಳು ಬರ್ತಿದ್ದಾರೆ ಎಂಬ ಕಾರಣಕ್ಕೆ ರಸ್ತೆಗಳಿಗೆ ಡಾಂಬರ್ ಭಾಗ್ಯ ಕೊಟ್ಟಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಮೇಶ್ ಜಾರಕಿಹೊಳಿಯ ಕೆನ್ನೆ ಸವರಿ ಮಾತಾಡಿಸಿದ್ರು ಸಿಎಂ ಎಚ್‍ಡಿಕೆ

    ರಮೇಶ್ ಜಾರಕಿಹೊಳಿಯ ಕೆನ್ನೆ ಸವರಿ ಮಾತಾಡಿಸಿದ್ರು ಸಿಎಂ ಎಚ್‍ಡಿಕೆ

    ಬೆಳಗಾವಿ: ಜಿಲ್ಲೆಯ ಸಾಂಬ್ರಾ ಏರ್ ಪೋರ್ಟ್ ಗೆ ಬಂದಿಳಿದ ವೇಳೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರನ್ನು ಸಚಿವ ರಮೇಶ್ ಜಾರಕಿಹೊಳಿ ಸ್ವಾಗಿಸಿದ್ರು. ಈ ವೇಳೆ ಸಿಎಂ ಅವರು ರಮೇಶ್ ಜಾರಕಿಹೊಳಿ ಕೆನ್ನೆ ಸವರಿ ಮಾತನಾಡಿಸಿದ್ದಾರೆ.

    ಬೆಳಗಾವಿ ಏರ್ ಪೋರ್ಟ್ ಗೆ ಮುಖ್ಯಮಂತ್ರಿಯವರು ಬಂದಿಳಿಯುತ್ತಿದ್ದಂತೆಯೇ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಬ್ಬರೂ ಪ್ರತ್ಯೇಕವಾಗಿ ಸ್ವಾಗತಿಸಿದ್ದಾರೆ. ಸಚಿವರು ಆದರದಿಂದ ಮುಖ್ಯಮಂತ್ರಿಯವನ್ನು ಹೂ ಗುಚ್ಚ ನೀಡಿ ಬರಮಾಡಿಕೊಳ್ಳುತ್ತಿದ್ದಾಗ ಸಿಎಂ ಅವರು ರಮೇಶ್ ಜಾರಕಿಹೊಳಿ ಕೆನ್ನೆ ಸವರಿ ಮಾತನಾಡಿಸಿದ್ದಾರೆ. ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಎಂ ಕಾರಿನಲ್ಲೇ ತೆರಳಿದ್ದಾರೆ. ಆದ್ರೆ ರಮೇಶ್ ಜಾರಕಿಹೊಳಿ ಅವರು ಸಿಎಂ ಜೊತೆಗೆ ಹೋಗದೆ ಪ್ರತ್ಯೇಕ ಕಾರಿನಲ್ಲಿ ಕಾರ್ಯಕ್ರಮದತ್ತ ತೆರಳಿದ್ದಾರೆ.

    ಬೆಳಗಾವಿಯ ಕೆಎಲ್‍ಇ ಸಂಸ್ಥೆಯ 75ನೇ ವರ್ಷದ ಅಮೃತಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ವಿಶೇಷ ಅತಿಥಿಗಳಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ಸ್ವಾಗತಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಜಿಐಟಿ ಕಾಲೇಜು ಆವರಣಕ್ಕೆ ರಾಷ್ಟ್ರಪತಿ ಬಂದಿದ್ದಾರೆ. ಇದನ್ನೂ ಓದಿ: ನಾನು ನನ್ನ ಪಕ್ಷದ ಶಿಸ್ತಿನ ಸಿಪಾಯಿ: ಲಕ್ಷ್ಮಿ ಹೆಬ್ಬಾಳ್ಕರ್

    ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದು, ಬೆಳಗ್ಗೆ 8 ಗಂಟೆಯಿಂದಲೇ ನಗರದಲ್ಲಿ ಚೆನ್ನಮ್ಮ ವೃತ್ತ ಸೇರಿದಂತೆ ಬೆಳಗಾವಿ ಖಾನಾಪುರ ರಸ್ತೆ, ಸಾಂಬ್ರಾ ಬೆಳಗಾವಿ ರಸ್ತೆಯ ಸಾರ್ವಜನಿಕ ಸಂಚಾರವನ್ನ ಸಂಪೂರ್ಣವಾಗಿ ಬಂದ್ ಮಾಡಿ ಉಳಿದಂತೆ ರಸ್ತೆ ಮಾರ್ಗಗಳನ್ನ ಬದಲಿಸಲಾಗಿದೆ. ಈ ಮಧ್ಯೆ, ರಾಷ್ಟ್ರಪತಿಗಳು ಬರ್ತಿದ್ದಾರೆ ಎಂಬ ಕಾರಣಕ್ಕೆ ರಸ್ತೆಗಳಿಗೆ ಡಾಂಬರ್ ಭಾಗ್ಯ ಕೊಟ್ಟಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ಎಂ.ಬಿ.ಪಾಟೀಲ್

    ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ಎಂ.ಬಿ.ಪಾಟೀಲ್

    -ಬಿಜೆಪಿ ಗಾಳಿಯಲ್ಲಿ ಗುಂಡು ಹೊಡೆಯೋದನ್ನ ಬಿಡಲಿ

    ಬೆಂಗಳೂರು: ಬೆಳಗಾವಿ ಸಮಸ್ಯೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಸಹ ಸಣ್ಣ-ಪುಟ್ಟ ಸಮಸ್ಯೆಗಳು ಇದ್ದೆ ಇರುತ್ತವೇ ಎಂದು ಬೆಳಗಾವಿ ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ಬೆಳಗಾವಿ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಸಮಸ್ಯೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಸಣ್ಣ-ಪುಟ್ಟ ಸಮಸ್ಯೆಗಳು ಇವೆ. ಇವುಗಳನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಪಡಿಸುತ್ತಾರೆ. ಇವತ್ತು ಅಥವಾ ನಾಳೆ ಕೆಪಿಸಿಸಿ ಅಧ್ಯಕ್ಷರು ಮತ್ತು ಜಾರಕಿಹೊಳಿ ಸಹೋದರರೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ. ಅಲ್ಲದೇ ಸತೀಶ್ ಜಾರಕಿಹೊಳಿಯವರು ನಮ್ಮ ಜಿಲ್ಲೆಯಲ್ಲಿ ಬೇರೆಯವರ ಹಸ್ತಕ್ಷೇಪ ಸಹಿಸೋಲ್ಲ ಅಂತಾ ಹೇಳಿದ್ದಾರೆ. ಅವರ ಮಾತೂ ನನಗೂ ಅನ್ವಯವಾಗುತ್ತೆ. ಅಲ್ಲದೇ ಅವರು ಮೊದಲಿನಿಂದಲೂ ಸಚಿವನಾಗಬೇಕೆಂದು ಹೇಳಿಕೊಂಡು ಬಂದಿದ್ದಾರೆ ಎಂದು ಹೇಳಿದರು.

    ಬಿಜೆಪಿ ಜೊತೆ ಕಾಂಗ್ರೆಸ್ಸಿನ 14 ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೇನು ಹೇಳೋದು ನಾವು ಹೇಳುತ್ತೇವೆ, ನಮ್ಮ ಬಳಿಯು ಬಿಜೆಪಿಯ ಏಳೆಂಟು ಶಾಸಕರು ಸಂಪರ್ಕದಲ್ಲಿ ಇದ್ದಾರೆ ಅಂಥ. ಅವರು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ, ಅತಂತ್ರ ಸೃಷ್ಟಿ ಮಾಡುವುದು ಬೇಡ. ಯಾರು ಸಂಪರ್ಕದಲ್ಲಿದ್ದಾರೆ ಅನ್ನುವುದನ್ನು ಮೊದಲು ಹೇಳಲಿ, ಅಲ್ಲದೇ ನನ್ನನ್ನು ಯಾವ ಬಿಜೆಪಿ ನಾಯಕರ ಸಂಪರ್ಕ ಮಾಡಿಲ್ಲ. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಮಾತನಾಡಿ, ಎಲ್ಲಾ 78 ಶಾಸಕರು ಅರ್ಹತೆ ಇರುವವರೆ, ಯಾರನ್ನು ಆಯ್ಕೆ ಮಾಡಬೇಕೆಂದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv