Tag: belagavi

  • ತಪ್ಪೊಪ್ಪಿಕೊಂಡ ಡಿಕೆಶಿ ಹೇಳಿಕೆ ಸ್ವಾಗತಾರ್ಹ: ಶ್ರೀಶೈಲ ಜಗದ್ಗುರು

    ತಪ್ಪೊಪ್ಪಿಕೊಂಡ ಡಿಕೆಶಿ ಹೇಳಿಕೆ ಸ್ವಾಗತಾರ್ಹ: ಶ್ರೀಶೈಲ ಜಗದ್ಗುರು

    ಬೆಳಗಾವಿ: ಲಿಂಗಾಯತ ಧರ್ಮ ಹೋರಾಟ ಮಾಡಿದ್ದು ತಪ್ಪು ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದು ಸ್ವಾಗತಾರ್ಹ ಎಂದು ಪಂಚ ಪೀಠದ ಶ್ರೀಶೈಲ ಜಗದ್ಗುರು ಶ್ರೀ ಹೇಳಿದ್ದಾರೆ.

    ಹುಕ್ಕೇರಿ ಪಟ್ಟಣದ ಹಿರೇಮಠದ ದಸರಾ ಉತ್ಸವದಲ್ಲಿ ಮಾತನಾಡಿದ ಶ್ರೀಗಳು, ಧರ್ಮವನ್ನ ಇಬ್ಭಾಗ ಮಾಡುವ ಪ್ರಯತ್ನ ಹಿಂದಿನ ದಿನಮಾನಗಳಲ್ಲಿ ಒಂದು ಪಕ್ಷ ಮಾಡಿತ್ತು. ಆದರೆ ಇಂದು ಆ ತಪ್ಪನ್ನ ಒಪ್ಪಿಕೊಂಡಿರುವುದು ಸ್ವಾಗತಾರ್ಹ. ವೀರಶೈವ ಲಿಂಗಾಯತ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಕೆಟ್ಟ ಪ್ರತಿಫಲ ಅನುಭವಿಸುತ್ತೇವೆ ಎನ್ನುವ ಸಂದೇಶ ಅವರಿಗೆ ಸಿಕ್ಕದೆ ಎಂದು ತಿಳಿಸಿದರು.

    ಸಚಿವ ಡಿಕೆ ಶಿವಕುಮಾರ್ ಅವರು ನಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಈಗಲಾದರು ಅವರಿಗೆ ತಪ್ಪು ಅರ್ಥವಾಗಿದ್ದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಧರ್ಮದ ವಿಷಯಕ್ಕೆ ಕೈ ಹಾಕಬಾರದು. ಧರ್ಮ ಒಡೆಯಲು ಸಿದ್ದರಾಮಯ್ಯ ಮುಂದಾದಾಗ ಧರ್ಮ ಒಡೆಯಬೇಡಿ ಎಂದು ತಿಳಿಸಿ ಹೇಳಿದರೂ ಹಠ ತೊಟ್ಟು ಧರ್ಮ ಒಡೆಯುವ ಕಾರ್ಯಕ್ಕೆ ಮುಂದಾದರು. ಇಂದು ಅದರ ಕೆಟ್ಟ ಪ್ರತಿಫಲವನ್ನ ಸಿದ್ದರಾಮಯ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಕತ್ತಿ ತಿರುಗೇಟು: ಇದೇ ವೇಳೆ ಮಾತನಾಡಿದ ಬಿಜೆಪಿ ಶಾಸಕ ಉಮೇಶ್ ಕತ್ತಿ ಡಿಕೆ ಶಿವುಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದು, ಡಿಕೆ ಶಿವುಕುಮಾರ್ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ. ಒಬ್ಬ ಒಳ್ಳೆಯ ರಾಜಕಾರಣಿ. ಅವರ ಬಾಯಲ್ಲಿ ಯಾವಾಗ ಏನು ಬರುತ್ತೆ ಏನೋ ತಿಳಿಯುತ್ತೆ ಹಾಗೆ ರಾಜಕಾರಣ ಮಾಡುತ್ತಾರೆ. ಕಾಂಗ್ರೆಸಿಗರು ವೀರಶೈವ ಲಿಂಗಾಯತ ಮಹಾಸಭಾದ ಕ್ಷಮೆ ಕೇಳಿ ಬಳಿಕ ಮಾತನಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಧರ್ಮದ ವಿಷಯದಲ್ಲಿ ಕೈ ಹಾಕಬಾರದು ಎಂದು ಅವರು ಕಿವಿಮಾತು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವೆಂಬರ್ 1ರಂದು ಎಂಇಎಸ್ ಆಚರಿಸೋ ಕರಾಳ ದಿನಕ್ಕೆ ಬ್ರೇಕ್ ಹಾಕ್ತಾರಾ ಸಿಎಂ?

    ನವೆಂಬರ್ 1ರಂದು ಎಂಇಎಸ್ ಆಚರಿಸೋ ಕರಾಳ ದಿನಕ್ಕೆ ಬ್ರೇಕ್ ಹಾಕ್ತಾರಾ ಸಿಎಂ?

    ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಕುಂದಾನಗರಿ ಬೆಳಗಾವಿಯಲ್ಲಿ ಎಂಇಎಸ್ ಕಿರಿಕ್ ಆರಂಭವಾಗುತ್ತದೆ. ಕರಾಳ ದಿನಾಚರಣೆ ಸೇರಿದಂತೆ ಇನ್ನಿಲ್ಲದ ನಾಡ ವಿರೋಧಿ ಕೃತ್ಯಕ್ಕೆ ಕೈ ಹಾಕುತ್ತದೆ. ಇದಕ್ಕೆ ಪುಷ್ಟಿ ಎನ್ನುವಂತೆ ಬೆಳಗಾವಿ ಜಿಲ್ಲಾಡಳಿತ ಕಡೆ ಕ್ಷಣದವರೆಗೆ ಕಾದು ನೋಡುವ ತಂತ್ರ ಅನುಸರಿಸಿ ಕಡೆಗೆ ಕರಾಳ ದಿನಾಚರಣೆ ಅನುಮತಿ ನೀಡುತ್ತಾರೆ.

    ಗಡಿ ಜಿಲ್ಲೆ ಬೆಳಗಾವಿ ಸಿಹಿ ಸಿಹಿ ಕುಂದಾಗೆ ಎಷ್ಟು ಫೇಮಸ್ಸೋ ಭಾಷಾ ವಿವಾದ, ಗಡಿ ಗಲಾಟೆಗೂ ಅಷ್ಟೇ ಹೆಸರುವಾಸಿ. ಕ್ಯಾಲೆಂಡರ್‍ನಲ್ಲಿ ನವೆಂಬರ್ 1 ಬರುತ್ತಿದ್ದಂತೆ ಬೆಳಗಾವಿಯಲ್ಲಿ ಎಂಇಎಸ್ ಸಭೆ ಮೇಲೆ ಸಭೆ ನಡೆಸುತ್ತದೆ. ಮೇಲಿಂದ ಮೇಲೆ ಡಿಸಿ ಕಚೇರಿಗೆ ಬಂದು ನಾಡ ವಿರೋಧಿ ಚಟುವಟಿಕೆಗೆ ಅನುಮತಿ ಕೇಳುತ್ತಾರೆ. ನಮ್ಮ ಅಧಿಕಾರಿಗಳು ಸಹ ಯಾರದ್ದೋ ಒತ್ತಡಕ್ಕೆ ಮಣಿದು ನಾಡು ನುಡಿ ಎಂಬ ಅಭಿಮಾನ ಮರೆತು ಕರಾಳ ದಿನಾಚರಣೆಗೆ ಪರವಾನಿಗೆ ನೀಡುತ್ತಾರೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ ಈ ಕುರಿತು ಏನನ್ನು ನಿರ್ಧಾರ ಮಾಡಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತೇವೆ. ನೊಡೋಣ ಎಂಬ ರೆಡಿಮೇಡ್ ಉತ್ತರ ನೀಡ್ತಾರೆ.

    ನಾಡ ಹಬ್ಬವನ್ನು ಆಚರಿಸಲು ಜಿಲ್ಲೆಯ ಮೂಲೆ ಮೂಲೆಗಳಿಂದ ಕನ್ನಡಿಗರು, ಕನ್ನಡ ಪರ ಜನರು, ಹೋರಾಟಗಾರರು ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಾರೆ. ತಮ್ಮದೇ ಶೈಲಿಯಲ್ಲಿ ದಿನವಿಡೀ ಬೆಳಗಾವಿ ಮಹಾನಗರದಲ್ಲಿ ನಡೆಯುವ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ವಿಪರ್ಯಾಸ ಅಂದ್ರೆ ಇಷ್ಟೆಲ್ಲಾ ಸರ್ಕಾರಗಳು ಬಂದರೂ ಕರಾಳ ದಿನಾಚರಣೆಗೆ ಪರವಾನಿಗೆ ಕೊಡುವುದು ಮಾತ್ರ ನಿಂತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇದಕ್ಕೆ ಬ್ರೇಕ್ ಹಾಕ್ತಾರಾ ಎಂಬುವುದು ಮುಂದಿನ ದಿಗಳಲ್ಲಿ ತಿಳಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿಯ ಯಾವ ಬಾಂಬ್ ಸಿಡಿಯಲ್ಲ, ಎಲ್ಲಾ ಠುಸ್ ಆಗುತ್ತೆ: ಈಶ್ವರ್ ಖಂಡ್ರೆ

    ಬಿಜೆಪಿಯ ಯಾವ ಬಾಂಬ್ ಸಿಡಿಯಲ್ಲ, ಎಲ್ಲಾ ಠುಸ್ ಆಗುತ್ತೆ: ಈಶ್ವರ್ ಖಂಡ್ರೆ

    ಬೆಳಗಾವಿ: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಯ ಯಾವ ಬಾಂಬ್‍ಗಳ ಸಹ ಸಿಡಿಯುವುದಿಲ್ಲ, ಅವುಗಳೆಲ್ಲಾ ಠುಸ್ ಆಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಆಯೋಜಿಸಿರುವ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿನ 3 ಲೋಕಸಭೆ ಹಾಗೂ 2 ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ 5 ಅಭ್ಯರ್ಥಿಗಳು ಸಹ ಪ್ರಚಂಡ ಬಹುಮತದಿಂದ ಆಯ್ಕೆಯಾಗುತ್ತಾರೆ. ಯಾವುದೇ ಭಿನ್ನಮತ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದ್ರು.

    ರಮೇಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಬಗ್ಗೆ ಇರುವ ಅಸಮಾಧಾನದ ಬಗ್ಗೆ ಕೇಳಿದ ಪ್ರಶ್ನೆಗೆ ಅವರಿಬ್ಬರೂ ಪಕ್ಷದ ಗೌರವಾನ್ವಿತ ಮುಖಂಡರು ಹಾಗೂ ಸ್ನೇಹಿತರು. ಇದರಲ್ಲಿ ಯಾವುದೇ ಅಪಾರ್ಥ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿನ್ನೆ ಬೆಂಗ್ಳೂರು.. ಇಂದು ಬೆಳಗಾವಿ- ಸಿಎಂ ಎಚ್ಚರಿಕೆ ಕೊಟ್ರೂ ನಿಲ್ತಿಲ್ಲ ಬಡ್ಡಿ ದಂಧೆಕೋರರ ಕಿರುಕುಳ

    ನಿನ್ನೆ ಬೆಂಗ್ಳೂರು.. ಇಂದು ಬೆಳಗಾವಿ- ಸಿಎಂ ಎಚ್ಚರಿಕೆ ಕೊಟ್ರೂ ನಿಲ್ತಿಲ್ಲ ಬಡ್ಡಿ ದಂಧೆಕೋರರ ಕಿರುಕುಳ

    ಬೆಳಗಾವಿ: ಸಿಎಂ ಕುಮಾರಸ್ವಾಮಿ ಎಷ್ಟೇ ಎಚ್ಚರಿಕೆ ಕೊಟ್ಟರೂ ಮೀಟರ್ ದಂಧೆಕೋರರ ಅಟ್ಟಹಾಸ ನಿಲ್ಲುತ್ತಿಲ್ಲ. ಶುಕ್ರವಾರವಷ್ಟೇ ಬೆಂಗಳೂರಿನಲ್ಲಿ ನಡೆದ ಪ್ರಕರಣವೊಂದನ್ನು ಪಬ್ಲಿಕ್ ಟಿವಿ ಬಯಲಿಗೆಳೆದಿತ್ತು. ಈಗ ಬೆಳಗಾವಿಯಲ್ಲೂ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ.

    ಶಹಾಪುರದಲ್ಲಿ ಕೈಮಗ್ಗ ಕಾರ್ಖಾನೆ ಇಟ್ಟುಕೊಂಡಿದ್ದ ಶಾಂತಾ ಮತ್ತು ಬಾಬು ಎಂಬವರು ಒಟ್ಟು 8 ಜನರ ಬಳಿಯಿಂದ 5 ಪರ್ಸೆಂಟ್ ಬಡ್ಡಿಗೆ 16 ಲಕ್ಷ ಸಾಲ ಮಾಡಿದ್ರು. ತಿಂಗಳು ತಿಂಗಳು ಸರಿಯಾಗೆ ಬಡ್ಡಿ ಕಟ್ಟುತ್ತಿದ್ದರು. ಆದ್ರೆ ಈ ತಿಂಗಳು ಬಡ್ಡಿ ಕಟ್ಟಲು ನಾಲ್ಕು ದಿನ ತಡವಾಗಿದ್ದಕ್ಕೆ ಸುಮಾರು ಮೂವತ್ತಕ್ಕೂ ಹೆಚ್ಚು ಜನ ಇವರ ಕಾರ್ಖಾನೆಗೆ ನುಗ್ಗಿ ಹೇಳದೆ ಕೇಳದೆ 14 ಸೀರೆ ನೇಯುವ ಮಗ್ಗವನ್ನ ಹೊತ್ಕೊಂಡು ಹೋಗಿದ್ದಾರೆ. ಇದನ್ನೂ ಓದಿ: ತಂದೆ ಮುಂದೆನೇ ಸೀರೆ ಎಳೆದಾಡಿ ಮಗಳಿಗೆ ಲೈಂಗಿಕ ಕಿರುಕುಳ!

    ಈ ವೇಳೆ ತಡೆಯುವ ಪ್ರಯತ್ನ ಮಾಡಿದ ಹೆಂಡತಿ ಶಾಂತಾಗೆ ಧಮ್ಕಿ ಹಾಕಿದ್ದಾರೆ. ಈ ಕುರಿತು ಶಹಾಪುರ ಠಾಣೆಗೆ ದೂರು ನೀಡಿ ಇದನ್ನ ತಡೆಯುವಂತೆ ವಿನಂತಿಸಿಕೊಂಡ್ರೆ, ಪೊಲೀಸರು ದಂಧೆಕೋರರ ಪರವಾಗಿ ಮಾತನಾಡಿ ಇವರನ್ನೇ ಬೈದು ಕಳುಹಿಸಿದ್ದಾರೆ. ಕೈಮಗ್ಗದ ದುಡಿಮೆಯನ್ನೇ ನಂಬಿಕೊಂಡಿದ್ದ ಇವರು ಸಾಲಗಾರರ ಕಿರುಕುಳಕ್ಕೆ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=M9g9VjA82zg

     

  • ಯುವತಿಗೆ ಕಾರು ಡಿಕ್ಕಿ – ಪರಾರಿಯಾಗಿದ್ದ ಬಿಜೆಪಿ ಶಾಸಕನ ಪುತ್ರ ಬಂಧನ

    ಯುವತಿಗೆ ಕಾರು ಡಿಕ್ಕಿ – ಪರಾರಿಯಾಗಿದ್ದ ಬಿಜೆಪಿ ಶಾಸಕನ ಪುತ್ರ ಬಂಧನ

    ಬೆಳಗಾವಿ: ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಬಿಜೆಪಿ ಶಾಸಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

    ಗೋವಾ ಬಿಜೆಪಿ ಶಾಸಕ ಗ್ಲೆನ್ ಶಿಕ್ಲಾನ್ ಪುತ್ರ ಕೈಲ್ ಟಿಕ್ಲೋ ನನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ ಸಂಜೆ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಲ್ ಟಿಕ್ಲೋನನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.

    ಏನಿದು ಪ್ರಕರಣ?
    ಸೋಮವಾರ ಸಂಜೆ ಬೆಳಗಾವಿಯ ಹೆದ್ದಾರಿ 4 ರಲ್ಲಿ ಗ್ಲೆನ್ ಶಿಕ್ಲಾನ್ ಪುತ್ರ ಕೈಲ್ ಟಿಕ್ಲೋ ಬಿಎಂಡಬ್ಲ್ಯೂ ಕಾರನ್ನು ಓಡಿಸುತ್ತಿದ್ದನು. ಈ ವೇಳೆ ಅತಿವೇಗವಾಗಿ ರಸ್ತೆಬದಿ ನಿಂತಿದ್ದ ಯುವತಿಯೊಬ್ಬಳಿಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿ ಹೊಡೆದ ರಭಸಕ್ಕೆ ಆಜಾದ್ ನಗರದದ ನಿವಾಸಿಯಾಗಿರುವ ಸ್ಯಾನಿಯತ್ ವಾಹಿದ್ ಬಿಸ್ತಿ (18) ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಅಪಘಾತದ ನಂತರ ರೊಚ್ಚಿಗೆದ್ದ ಸ್ಥಳೀಯರು ಶಾಸಕ ಪುತ್ರನ ಕಾರನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದರು. ಇತ್ತ ಅಪಘಾತವಾಗುತ್ತಿದ್ದಂತೆ ಕಾರು ಬಿಟ್ಟು ಶಾಸಕನ ಪುತ್ರ ಪರಾರಿಯಾಗಿದ್ದ. ಅಷ್ಟೇ ಅಲ್ಲದೇ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಶಾಸಕನ ಪುತ್ರ ಮಾಳಮಾರುತಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲಿಸಿದ್ದ.

    ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಬಳಿಕ ಪೊಲಿಸರು ಕೈಲ್ ಟಿಕ್ಲೋ ನ ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗಾವಿ ಆಸ್ಪತ್ರೆಯಲ್ಲಿ ವಂಚಕರಿದ್ದಾರೆ ಹುಷಾರ್ !

    ಬೆಳಗಾವಿ ಆಸ್ಪತ್ರೆಯಲ್ಲಿ ವಂಚಕರಿದ್ದಾರೆ ಹುಷಾರ್ !

    ಬೆಳಗಾವಿ: ಬ್ಯಾಂಕ್, ಸೊಸೈಟಿ, ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಕಡೆಗಳಲ್ಲಿ ವಂಚನೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಬಂಧಿಗಳಿಗೆ ವಂಚನೆ ಮಾಡುವುದನ್ನು ಕುಲ ಕಸುಬುವನ್ನಾಗಿ ಮಾಡಿಕೊಂಡು ಸಿಕ್ಕಿಬಿದ್ದಿದ್ದಾನೆ.

    ಆರೋಪಿ ಸುರೇಶ್ ಕೆಎಲ್‍ಇ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿ ಹುಕ್ಕೇರಿ ತಾಲೂಕಿನ ಶಾಂತವ್ವಗೆ ವಂಚಿಸಿ ಕೊನೆಗೂ ಪೊಲೀಸ್ ಅತಿಥಿಯಾಗಿದ್ದಾನೆ. ಶಾಂತವ್ವ ಬಳಿ ನಿಮಗೆ 60 ಸಾವಿರ ಬಿಲ್ ಹಣ ಕಡಿಮೆ ಆಗುತ್ತದೆ, ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕೊಡಿ ಎಂದು ಹೇಳಿದ್ದಾನೆ. ಈತನನ್ನು ನಂಬಿದ್ದ ಶಾಂತವ್ವ ಎಲ್ಲಾ ದಾಖಲೆಗಳನ್ನು ಜೆರಾಕ್ಸ್ ಮಾಡಿಕೊಟ್ಟಿದ್ದಾರೆ. ಬಳಿಕ ನಿಮ್ಮ ಬಳಿ ಬಂಗಾರ ಇದೆ ಅಂತ ಗೊತ್ತಾದರೆ ನಿಮಗೆ ಹಣ ಸಿಗಲ್ಲವೆಂದು ಬಂಗಾರವನ್ನು ನಿಮ್ಮ ಸಹೋದರನ ಕೈಯಲ್ಲಿ ಕೊಡಿ ಎಂದು ಕೊಡಿಸುತ್ತಾನೆ.

    ಆರೋಪಿ ಶಾಂತವ್ವರನ್ನು ಬೇರೆ ಕಡೆ ನಿಲ್ಲಿಸಿ ಮತ್ತೆ ಆಕೆಯ ಸಹೋದರನ ಬಳಿ ಬಂದು ಬಂಗಾರ, ಹಣದ ಬ್ಯಾಗ್ ಕೊಡುವುದಕ್ಕೆ ನಿಮ್ಮ ಸಹೋದರಿ ಹೇಳಿದ್ದಾರೆ ಎಂದು ಸುಳ್ಳು ಹೇಳಿ ಹಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಶಾಂತವ್ವಳಿಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿದಾಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಗ ಆರೋಪಿ ಸುರೇಶ್ ಕೊನೆಗೂ ಎಪಿಎಂಸಿ ಪೊಲೀಸರ ಅತಿಥಿಯಾಗಿದ್ದಾನೆ ಎಂದು ಸ್ಥಳೀಯ ಬಾಲ ಸಂಗೋಡಿ ತಿಳಿಸಿದ್ದಾರೆ.

    ಕೆಎಲ್‍ಇ ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಗಳ ತರಹ ಓಡಾಡುತ್ತಿರುವ ಈತ ಸಾಮಾನ್ಯನಲ್ಲ. ಮೊದಲಿಗೆ ರೋಗಿಯ ಸಂಬಂಧಿಗಳ ಜೊತೆಗೆ ಮಾತಿಗೆ ಇಳಿದು, ಎಷ್ಟು ಬಿಲ್ ಆಗಿದೆ ಎಂದು ಕೇಳುತ್ತಾನೆ. ಸಹಜವಾಗಿ ಬಿಲ್ ಹೆಚ್ಚಾಗಿದೆ ಅಂತ ಹೇಳಿದರೆ, ಈತ ತನ್ನ ಕೆಲಸ ಶುರುಮಾಡಿಕೊಳ್ಳುತ್ತೇನೆ. ನಿಮಗೆ ಸರ್ಕಾರದ ಆ ಯೋಜನೆಯಲ್ಲಿ ಹಣ ಕೊಡಿಸುತ್ತೇನೆ, ಈ ಯೋಜನೆಯಲ್ಲಿ ಬಿಲ್ ಕಡಿಮೆ ಮಾಡಿಸುತ್ತೀನಿ ಅಂತ ನಂಬಿಸಿ ಕೊನೆಗೆ ಎಲ್ಲಾ ಒಡವೆಯನ್ನು ಮತ್ತು ಹಣವನ್ನು ಲಪಟಾಯಿಸಿ ಪರಾರಿ ಆಗುವುದೇ ಈತನ ಕಾಯಕವಾಗಿದೆ ಎಂದು ಬೆಳಗಾವಿ ಡಿಸಿಪಿ ಮಹಾಲಿಂಗ್ ನಂದಗಾವಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯಾರ್ಥಿನಿಯರ ಜೊತೆ ಹೆಜ್ಜೆ ಹಾಕಿದ ನಿಪ್ಪಾಣಿ ಶಾಸಕಿ – ವಿಡಿಯೋ ನೋಡಿ

    ವಿದ್ಯಾರ್ಥಿನಿಯರ ಜೊತೆ ಹೆಜ್ಜೆ ಹಾಕಿದ ನಿಪ್ಪಾಣಿ ಶಾಸಕಿ – ವಿಡಿಯೋ ನೋಡಿ

    ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆಯವರು ಕಾಲೇಜು ವಿದ್ಯಾರ್ಥಿನಿಯರ ಜೊತೆ ಸಖತ್ ಡ್ಯಾನ್ಸ್ ಮಾಡಿ ನೋಡುಗರನ್ನು ರಂಜಿಸಿದ್ದಾರೆ.

    ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಮೌಲಾನ ಆಜಾದ್ ಎಂಎಸ್‍ಡಬ್ಲ್ಯೂ ಮಹಾವಿದ್ಯಾಲಯ ನಣದಿಯವರ ಸಂಯುಕ್ತಾಶ್ರಯದಲ್ಲಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಗ್ರಾಮೀಣ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಸಕಿಯಾದ ಶಶಿಕಲಾ ಜೊಲ್ಲೆಯವರು ಸಹ ಪಾಲ್ಗೊಂಡಿದ್ದರು.

    ಈ ವೇಳೆ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮರಾಠಿ ಹಾಡೊಂದಕ್ಕೆ ವಿದ್ಯಾರ್ಥಿಗಳ ಜೊತೆಯಲ್ಲೆ ಹೆಜ್ಜೆಹಾಕಿದರು. ಅವರು ಡ್ಯಾನ್ಸ್ ಮಾಡಿದ ಶೈಲಿ ವಿದ್ಯಾರ್ಥಿಗಳನ್ನೇ ನಾಚಿಸುವಂತೆ ಕುಣಿದು ಎಲ್ಲರ ಗಮನ ಸೆಳೆದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಭಿರುಚಿಯನ್ನು ಹೊಂದಿರುವ ಶಾಸಕಿ ಮತ್ತೊಮ್ಮೆ ಡ್ಯಾನ್ಸ್ ಮಾಡುವ ಮೂಲಕ ನೋಡುಗರನ್ನು ರಂಜಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=AVMv_SuOLMw

  • ಮೈಮೇಲೆ ಕಸ ಸುರಿದು ಗೆಳೆಯನ ಬರ್ತ್ ಡೇ ಆಚರಿಸಿದ್ರು!

    ಮೈಮೇಲೆ ಕಸ ಸುರಿದು ಗೆಳೆಯನ ಬರ್ತ್ ಡೇ ಆಚರಿಸಿದ್ರು!

    ಚಿಕ್ಕೋಡಿ: ಕೆಲವರು ತಮ್ಮ ಹುಟ್ಟು ಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ. ಆನಾಥಶ್ರಾಮದಲ್ಲೋ ಇನ್ನೂ ಕೆಲವರು ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬವನ್ನು ಆತನ ಸ್ನೇಹಿತರು ವಿಚಿತ್ರವಾಗಿ ಆಚರಣೆ ಮಾಡಿದ್ದಾರೆ.

    ಬರ್ತ್ ಡೇ ಪಾರ್ಟಿ ಮಾಡಲು ಬಂದಿದ್ದ ಸ್ನೇಹಿತರು ಡಾಬಾದಲ್ಲಿನ ನಿರುಪಯುಕ್ತ ಕಸವನ್ನು ಯುವಕ ಮೇಲೆ ಸುರಿದು ಸಂಭ್ರಮಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ ಶಿರಕೋಳಿ ಮೆಡಿಕಲ್ ಕಾಲೇಜಿನ ಬಿಎಚ್‍ಎಂಎಸ್ ಓದುತ್ತಿರುವ ವಿದ್ಯಾರ್ಥಿಗಳ ಗುಂಪು ಈ ರೀತಿಯಾಗಿ ವಿಚಿತ್ರವಾಗಿ ಆಚರಣೆ ಮಾಡಿಕೊಂಡಿದೆ.

    ಮನೋಜ್ ಕುಮಾರ್ ನ ಮೈ ಮೇಲೆ ಅಡುಗೆ ಎಣ್ಣೆ, ಮೊಟ್ಟೆ, ಮೊಸರು, ಹಿಟ್ಟು ಸೇರಿದಂತೆ ವಿವಿಧ ವಸ್ತುಗಳನ್ನ ಹಾಕಿ ವಿಚಿತ್ರ ಬರ್ತ್ ಡೇ ಆಚರಿಸಿರುವ ಈ ವಿಡಿಯೋ ಈಗ ಫುಲ್ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಂಧನದ ಭೀತಿಯಲ್ಲಿ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್

    ಬಂಧನದ ಭೀತಿಯಲ್ಲಿ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್

    ಬೆಳಗಾವಿ: ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ ಅವರಿಗೆ ಬಂಧನದ ಭೀತಿ ಎದುರಾಗಿದೆ. 2016ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಪಿ. ರಾಜೀವ್ ವಿರುದ್ಧ ವಾರಂಟ್ ಜಾರಿ ಮಾಡಿದೆ.

    2016ರಲ್ಲಿ ಶಾಸಕರಾಗಿದ್ದ ಪಿ.ರಾಜೀವ್ ಅವರು ಸಕ್ಕರೆ ಕಾರ್ಖಾನೆಗಳಿಂದ ಹಣ ಪಡೆದು ರೈತ ಪರ ನಿಲ್ಲುವುದನ್ನು ಬಿಟ್ಟು ಪ್ರತಿಭಟನೆ ಮಾಡುವುದನ್ನ ನಿಲ್ಲಿಸಿದ್ದಾರೆ ಎಂದು ಕುಡಚಿ ಕ್ಷೇತ್ರದ ಮಾಜಿ ಶಾಸಕ ಶಾಮ ಘಾಟಗೆ ಆರೋಪ ಮಾಡಿರುತ್ತಾರೆ. ಆರೋಪ ಮಾಡಿದ ಹಿನ್ನೆಲೆಯಲ್ಲಿ ಶಾಸಕ ರಾಜೀವ್ ನೇರವಾಗಿ ಶಾಮ ಘಾಟಗೆ ಅವರ ಮನೆಗೆ ಹೋಗಿ ಅಭಿವೃದ್ಧಿ ಹಾಗೂ ಹಣ ಪಡೆದ ಬಗ್ಗೆ ಬಹಿರಂಗ ಚರ್ಚೆ ಮಾಡಲು ಆಮಂತ್ರಣ ನೀಡಲು ಹೋಗುತ್ತಾರೆ.

    ಈ ಸಂದರ್ಭದಲ್ಲಿ ಶಾಮ ಘಾಟಗೆ ಇಲ್ಲದಿದ್ದರೂ ಕುಟುಂಬಸ್ಥರ ನಡುವೆ ವಾಗ್ವಾದ ನಡೆಯುತ್ತದೆ. ಹೀಗಾಗಿ ಶಾಸಕ ಪಿ.ರಾಜೀವ್ ಸೇರಿದಂತೆ ಅವರ ಬೆಂಬಲಿಗರ ಮೇಲೆ ಘಾಟಗೆ ಕುಟುಂಬ ಕುಡಚಿ ಪೊಲೀಸ್ ಠಾಣೆಯಲ್ಲಿ ಅವ್ಯಾಚ ಶಬ್ಧಗಳಿಂದ ನಿಂದನೆ ಸೇರಿದಂತೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಾರೆ. ಪ್ರಕರಣ ದಾಖಲಾದರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಬೆಂಗಳೂರಿನ ವಿಶೇಷ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಬಂಧನ ಭೀತಿ ತಪ್ಪಿಸಲು ಶಾಸಕರು ನ್ಯಾಯವಾದಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv