Tag: belagavi

  • ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ: ಪೊಲೀಸರಿಂದ ಬಾಲಕಿ ರಕ್ಷಣೆ

    ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ: ಪೊಲೀಸರಿಂದ ಬಾಲಕಿ ರಕ್ಷಣೆ

    ಚಿಕ್ಕೋಡಿ: ಪ್ರೌಢಶಾಲಾ ಅತಿಥಿ ಶಿಕ್ಷಕ ಅಪಹರಿಸಿದ್ದ ವಿದ್ಯಾರ್ಥಿನಿಯನ್ನು ಯಮಕನಮರಡಿ ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಗುಟಗುದ್ದಿ ಗ್ರಾಮದ ಹೈಸ್ಕೂಲ್ ವಿದ್ಯಾರ್ಥಿನಿ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದ್ದು, ಖಾನಾಪೂರ ತಾಲೂಕಿನ ಕಾಟಗಳ್ಳಿ ಗ್ರಾಮದಲ್ಲಿ ಅಪಹರಣಗೊಂಡಿದ್ದ 9ನೇ ತರಗತಿ ವಿದ್ಯಾರ್ಥಿ ಆರತಿ(ಹೆಸರು ಬದಲಾಯಿಸಲಾಗಿದೆ)ಯನ್ನು ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೇ ಅಪಹರಣ ಮಾಡಿದ್ದ ಅತಿಥಿ ಶಿಕ್ಷಕ ಸಿದ್ರಾಯ ಲಕ್ಷ್ಮಣ ನಿಂಗರಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಏನಿದು ಪ್ರಕರಣ?
    ಗುಟಗುದ್ದಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಸಿದ್ರಾಯ ಲಕ್ಷ್ಮಣ ನಿಂಗರಾಯಿ (34), ಅದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆರತಿಯನ್ನು ಅಕ್ಟೋಬರ್ 30 ರಂದು ಕಿಡ್ನಾಪ್ ಮಾಡಿದ್ದ. ಈ ಸಂಬಂಧ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದರು.

    ದೂರಿನಲ್ಲಿ ಏನಿತ್ತು?
    ಅಕ್ಟೋಬರ್ 30 ರಂದು ನನ್ನ ಮಗಳು ಶಾಲೆಯಲ್ಲಿ ಪರೀಕ್ಷೆ ಇದೆ ಎಂದು ಹೇಳಿ ಹೋಗಿದ್ದು, ಸಂಜೆಯಾದವರೂ ವಾಪಸ್ ಬರಲಿಲ್ಲ. ಬಳಿಕ ನಾನು ಗ್ರಾಮದ ಸುತ್ತಮುತ್ತ ಮತ್ತು ಸಂಬಂಧಿಕರ ಮನೆಗೆ ಹೋಗಿ ಹುಡುಕಿದೆವು. ಆದರೆ ನನ್ನ ಮಗಳು ಎಲ್ಲೂ ಪತ್ತೆಯಾಗಿಲ್ಲ. ಬಳಿಕ ನಮ್ಮ ಊರಿನ ಜನರು ಸಿದ್ರಾಮ ಲಕ್ಷ್ಮಣ ನಿಂಗರಾಯ ಜೊತೆಗೆ ಬೇರೆ ಊರಿಗೆ ಹೋಗುತ್ತಿದ್ದನ್ನು ನೋಡಿರುವುದಾಗಿ ಹೇಳಿದ್ದರು. ಈ ಬಗ್ಗೆ ತಿಳಿದ ತಕ್ಷಣ ಆತನ ಮನೆಗೆ ಹೋಗಿ ವಿಚಾರಿಸಿದೆ. ಆದರೆ ಆತ ಮನೆಯಲ್ಲಿ ಇರಲಿಲ್ಲ. ಸಿದ್ರಾಮ ನನ್ನ ಮಗಳ ಜೊತೆ ಪ್ರೀತಿಯ ನಾಟಕವಾಡಿ, ಮನೆ ಬಿಟ್ಟು ಬರುವಂತೆ ಆಕೆಯ ತಲೆ ಕೆಡಿಸಿ ಅಪಹರಿಸಿಕೊಂಡು ಹೋಗಿದ್ದಾನೆ. ದಯವಿಟ್ಟು ನನ್ನ ಮಗಳನ್ನು ಹುಡುಕಿಕೊಡಿ ಎಂದು ವಿದ್ಯಾರ್ಥಿನಿಯ ತಂದೆ ಯಮಕನಮರಡಿ ಪೊಲೀಸರಿಗೆ ದೂರು ಕೊಟ್ಟಿದ್ದರು.

    ಪತ್ತೆಯಾಗಿದ್ದು ಹೇಗೆ?
    ಪೊಲೀಸರು ವಿದ್ಯಾರ್ಥಿನಿ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿದ್ಯಾರ್ಥಿನಿ ತಂದೆಯ ದೂರಿನ ಹಿನ್ನೆಲೆಯಲ್ಲಿ, ಅತಿಥಿ ಶಿಕ್ಷಕ ಸಿದ್ರಾಯಿ ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸಿದ್ರಾಯಿಯ ಫೋನ್ ನಂಬರ್ ಚೆಕ್ ಮಾಡಿದ್ದಾರೆ. ಟವರ್ ಪರಿಶೀಲನೆ ವೇಳೆ ಲೋಕೇಶನ್ ಖಾನಾಪೂರ ತಾಲೂಕಿನ ಕಾಟಗಳ್ಳಿ ಗ್ರಾಮದಲ್ಲಿರುವುದು ತಿಳಿದು ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಕಾಟಹಳ್ಳಿ ಗ್ರಾಮಕ್ಕೆ ತೆರಳಿ, ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ಅಲ್ಲದೇ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೌಢ ಶಾಲಾ ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ

    ಪ್ರೌಢ ಶಾಲಾ ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿನಿ ಅಪಹರಣ

    ಬೆಳಗಾವಿ: ಪ್ರೌಢಶಾಲಾ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯನ್ನು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.

    ಸಿದ್ರಾಮ ಲಕ್ಷ್ಮಣ ನಿಂಗರಾಯ(28) ವಿದ್ಯಾರ್ಥಿನಿಯನ್ನು ಅಪಹರಿಸಿದ ಶಿಕ್ಷಕ. 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ಶಿಕ್ಷಕ ಪರಾರಿಯಾಗಿದ್ದಾನೆ. ಈ ಬಗ್ಗೆ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ಅಕ್ಟೋಬರ್ 30 ರಂದು ನನ್ನ ಮಗಳು ಶಾಲೆಯಲ್ಲಿ ಪರೀಕ್ಷೆ ಇದೆ ಎಂದು ಹೇಳಿ ಹೋಗಿದ್ದು, ಸಂಜೆಯಾದವರೂ ವಾಪಸ್ ಬರಲಿಲ್ಲ. ಬಳಿಕ ನಾನು ಗ್ರಾಮದ ಸುತ್ತಮುತ್ತ ಮತ್ತು ಸಂಬಂಧಿಕರ ಮನೆಗೆ ಹೋಗಿ ಹುಡುಕಿದೆವು. ಆದರೆ ನನ್ನ ಮಗಳು ಎಲ್ಲೂ ಪತ್ತೆಯಾಗಿಲ್ಲ. ಬಳಿಕ ನಮ್ಮ ಊರಿನ ಜನರು ಸಿದ್ರಾಮ ಲಕ್ಷ್ಮಣ ನಿಂಗರಾಯ ಅವರ ಜೊತೆಗೆ ಬೇರೆ ಊರಿಗೆ ಹೋಗುತ್ತಿದ್ದನ್ನು ನೋಡಿರುವುದಾಗಿ ಹೇಳಿದ್ದಾರೆ.

    ಸಿದ್ರಾಮ ನನ್ನ ಮಗಳ ಜೊತೆ ಪ್ರೀತಿಯ ನಾಟಕವಾಡಿ, ಮನೆ ಬಿಟ್ಟು ಬರುವಂತೆ ಆಕೆಯ ತಲೆ ಕೆಡಿಸಿ ಅಪಹರಿಸಿಕೊಂಡು ಹೋಗಿದ್ದಾನೆ. ಈ ಬಗ್ಗೆ ತಿಳಿದ ತಕ್ಷಣ ಆತನ ಮನೆಗೂ ಹೋಗಿ ವಿಚಾರಿಸಿದೆ. ಆದರೆ ಆತ ಮನೆಯಲ್ಲಿ ಇರಲಿಲ್ಲ. ಕೊನೆಗೆ ಯಮಕನಮರಡಿ ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ದಯವಿಟ್ಟು ನನ್ನ ಮಗಳನ್ನು ಹುಡುಕಿಕೊಡಿ ಎಂದು ದೂರಿನಲ್ಲಿ ವಿದ್ಯಾರ್ಥಿನಿಯ ತಂದೆ ಮನವಿ ಮಾಡಿಕೊಂಡಿದ್ದಾರೆ.

    ಈ ಘಟನೆ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಂಇಎಸ್ ಪುಂಡರಿಗೆ ಗೂಸಾ ಕೊಟ್ಟ ಪೊಲೀಸರು

    ಎಂಇಎಸ್ ಪುಂಡರಿಗೆ ಗೂಸಾ ಕೊಟ್ಟ ಪೊಲೀಸರು

    ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ವಿರೋಧಿಸಿ ಕರಾಳ ದಿನಾಚರಣೆ ನಡೆಸಲು ಮುಂದಾಗಿದ್ದ ಎಂಇಎಸ್ ಪುಂಡರಿಗೆ ಪೊಲೀಸರು ಗೂಸಾ ನೀಡಿದ್ದಾರೆ.

    ಕರಾಳ ದಿನಾಚರಣೆಗೆ ಸಿದ್ಧತೆ ನಡೆಸಿದ್ದ ನಾಡದ್ರೋಹಿಗಳು ಮೆರವಣಿಗೆಯಲ್ಲಿ ಭಾಗವಹಿಸಲು ಪೊಲೀಸರ ಎದುರೇ ತ್ರಿಬಲ್ ರೈಡಿಂಗ್ ಮಾಡಿದ್ದರು. ಇದನ್ನು ಕಂಡ ಬೆಳಗಾವಿ ಮಾರ್ಕೆಟ್ ಎಸಿಪಿ ಎನ್‍ವಿ ಭರಮಣಿ ಕಪಾಳಮೋಕ್ಷ ಮಾಡಿ ಎಚ್ಚರಿಕೆ ನೀಡಿದ್ದಾರೆ.

    ಪೊಲೀಸರ ಏಟು ಬೀಳುತ್ತಿದ್ದಂತೆ ಗಾಬರಿಗೊಂಡು ತ್ರಿಬಲ್ ರೈಡ್ ಮಾಡುತ್ತಿದ್ದ ಯುವಕರು ಬೈಕ್ ಸಮೇತ ಓಡಿ ಹೋಗಿದ್ದಾರೆ. ಕರಾಳ ದಿನದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತ್ ನಡೆಸಿದ್ದರು. ಯಾವುದನ್ನೂ ಲೆಕ್ಕಿಸದೇ ಎಂಇಎಸ್ ಕಾರ್ಯಕರ್ತರು ಪುಂಡಾಟ ನಡೆಸಿದ್ದರು. ಇದಕ್ಕೆ ಪೊಲೀಸರು ಸರಿಯಾದ ಪಾಠ ಕಲಿಸಿದ್ದು ಸಾಕಷ್ಟು ಮೆಚ್ಚುಗೆ ಕಾರಣವಾಗಿದೆ.

    ಎಂಇಎಸ್ ನಿಂದ ಕನ್ನಡ ರಾಜ್ಯೋತ್ಸವ ವಿರುದ್ಧ ಕರಾಳ ದಿನಾಚರಣೆ ಆಚರಣೆಗೆ ಸಿದ್ಧತೆ ನಡೆಸಲಾಗಿತ್ತು. ನಗರದ ಸಂಭಾಜಿ ಉದ್ಯಾನವನದಲ್ಲಿ ಇದಕ್ಕೆ ಸ್ಥಳವನ್ನು ನಿಗದಿ ಮಾಡಲಾಗಿತ್ತು. ಬಳಿಕ ಶಿವಾಜಿ ಗಾರ್ಡನ್ ಮಾರ್ಗವಾಗಿ ಮೆರವಣಿಗೆ ನಡೆಸಿ ಮರಾಠ ಮಂಡಳದಲ್ಲಿ ಎಂಇಎಸ್ ನ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡವೇ ನನ್ನ ಉಸಿರು ಅಂತಾ ಬಾಳುತ್ತಿರುವ ಅಪರೂಪದ ಕನ್ನಡ ಅಭಿಮಾನಿ

    ಕನ್ನಡವೇ ನನ್ನ ಉಸಿರು ಅಂತಾ ಬಾಳುತ್ತಿರುವ ಅಪರೂಪದ ಕನ್ನಡ ಅಭಿಮಾನಿ

    ಬೆಳಗಾವಿ: ಪ್ರತಿಯೊಬ್ಬರಿಗೂ ತಾನೂ ಸ್ವಂತ ಮನೆ ಕಟ್ಟಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಮನೆ ಕಟ್ಟಿದ ಮೇಲೆ ಮನೆಗೆ ಏನೂ ಹೆಸರಿಡಬೇಕು ಎಂದು ತಲೆ ಕೆಡಿಸಿಕೊಳ್ಳುವರೇ ಜಾಸ್ತಿ. ಅಂಥದರದಲ್ಲಿ ಚಿಕ್ಕೋಡಿಯ ಕನ್ನಡ ಅಭಿಮಾನಿ ಡಿಫರೆಂಟ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂದಿನ ನಮ್ಮ ಕನ್ನಡಾಭಿಮಾನಿ ತಮ್ಮ ಮನೆಯನ್ನೇ ಕನ್ನಡ ಬಾವುಟಗಳಿಂದ ಸಿಂಗರಿಸಿ, ತಮ್ಮ ಅರಮನೆಗೆ ಭುವನೇಶ್ವರಿ ಎಂಬ ಹೆಸರನ್ನು ಇಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಅನಿಲ್ ಕುಮಾರ್ ಮಾಳಗೆ ಎಂಬವರು ಕನ್ನಡ ನಾಡು, ನುಡಿಯ ಮೇಲೆ ಎಲ್ಲಿಲ್ಲದ ಅಭಿಮಾನ ಹೊಂದಿದ್ದಾರೆ. ಕನ್ನಡಕ್ಕಾಗಿಯೇ ಜನನ ಕನ್ನಡಕ್ಕಾಗಿಯೇ ಮರಣ ಎಂದು ಬಾಳುತ್ತಿರೋ ಇವರಿಗೆ ಕನ್ನಡಮ್ಮ ದಿನಪತ್ರಿಕೆ ಸಂಸ್ಥಾಪಕರಾದ ಮಹಾದೇವ ಟೋಪಣ್ಣವರ ಅವರೇ ಪ್ರೇರಣೆ ಎಂದು ಹೇಳುತ್ತಾರೆ.

    ಇವರ ಕನ್ನಡಾಭಿಮಾನ ಮನೆಗೆ ಮಾತ್ರ ಸೀಮಿತವಲ್ಲ. ಶಾಲೆಯಲ್ಲಿ ದಿನನಿತ್ಯ ಇವರು ಕನ್ನಡ ಅಂಕಿಗಳನ್ನೇ ಬಳಸುತ್ತಾರೆ. ಬೇರೆ ಶಿಕ್ಷಕರು ಆಂಗ್ಲ ಭಾಷೆಯಲ್ಲಿ ಶಾಲಾ ದಾಖಲೆಗಳನ್ನು ಬರೆದರೇ ಇವರು ಕನ್ನಡದಲ್ಲಿಯೇ ಬರೆಯೋದು ವಿಶೇಷ. ಜೊತೆಗೆ ಬೈಕ್ ಹಾಗೂ ತನ್ನ ಮನೆ ಮೇಲೆ ಕರ್ನಾಟಕದ ನಕ್ಷೆಯನ್ನು ಬರೆಸಿದ್ದಾರೆ.

    ನಾಡು ನುಡಿಯ ಹೆಸರಿನಲ್ಲಿ ಸಂಘ ಕಟ್ಟಿಕೊಂಡು ಕನ್ನಡದ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿರುವ ಕೆಲ ಜನರ ಮಧ್ಯೆ ಕನ್ನಡವೇ ನನ್ನ ಉಸಿರು ಎಂದು ಬಾಳುತ್ತಿರುವ ಇಂಥ ಅಪ್ಪಟ ಕನ್ನಡಾಭಿಮಾನಿಗಳೂ ನಿಜಕ್ಕೂ ಇತರರಿಗೂ ಮಾದರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧಗೊಂಡ ಕುಂದಾ ನಗರಿ ಬೆಳಗಾವಿ

    ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧಗೊಂಡ ಕುಂದಾ ನಗರಿ ಬೆಳಗಾವಿ

    ಬೆಳಗಾವಿ: ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ಎಲ್ಲೆಲ್ಲೂ ಕನ್ನಡ ನಾದ ಮೊಳಗುತ್ತದೆ. ಮಾತ್ರವಲ್ಲದೇ ಎಲ್ಲೆಲ್ಲೂ ಕನ್ನಡಮಯವಾಗಿ ಗೋಚರಿಸುತ್ತದೆ. ಆದರೆ ಗಡಿನಾಡು ಬೆಳಗಾವಿಯಲ್ಲಿ ಕರಾಳ ದಿನದ ಭೀತಿಯಲ್ಲೇ ಕನ್ನಡ ಹಬ್ಬದ ಸಡಗರ ಮನೆ ಮಾಡಿದೆ. ರಾಣಿ ಚನ್ನಮ್ಮ ವೃತ್ತದಲ್ಲಿ ದೊಡ್ಡ ದೊಡ್ಡ ದ್ವಾರ ಬಾಗಿಲು, ಎಲ್ಲೆಲ್ಲು ಕನ್ನಡ ಬಾವುಟಗಳು ಕಾಣಿಸುತ್ತಿವೆ. ಬೆಳಗ್ಗೆ ಸಿಪಿಎಡ್ ಮೈದಾನದಿಂದ ಚನ್ನಮ್ಮ ವೃತ್ತ ಮಾರ್ಗವಾಗಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಲಿವೆ.

    ಸಾಮಾಜಿಕ ಜಾಲತಾಣದಲ್ಲಿ ‘ಯಾರಪ್ಪಂದ್ ಏನೈತಿ ಬೆಳಗಾವಿ ನಮ್ದೈತಿ’ ಎನ್ನುವ ಘೋಷ ವಾಕ್ಯ ಹೊಂದಿರೋ ಟೀ ಶರ್ಟ್ ಗಳ ಮಾರಾಟ ಜೋರಾಗಿದೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಜನ ಈ ಟಿ ಶರ್ಟ್ ಖರೀದಿ ಮಾಡಿದ್ದಾರೆ. ಅಲ್ಲದೇ ಬೆಳಗಾವಿಯ ಬಗ್ಗೆ ಹಾಡೊಂದನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ಸಾವಿರಾರು ಜನ ಈ ವಿಡಿಯೋ ನೋಡಿದ್ದಾರೆ.

    ಎಂಇಎಸ್ ಸಂಘಟನೆ ಕರಾಳ ದಿನ ಆಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಕರಾಳ ದಿನಕ್ಕೆ ನಗರ ಪೊಲೀಸ್ ಆಯುಕ್ತರಿಂದ ಯಾವುದೇ ರೀತಿಯ ಅನುಮತಿ ಸಿಕ್ಕಿಲ್ಲ. ಬೆಳಗಾವಿಯಲ್ಲಿ ಲಕ್ಷಾಂತರ ಜನ ಸೇರುವ ಹಿನ್ನೆಲೆ ನಗರ ಪೆÇಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ನೇತೃತ್ವದಲ್ಲಿ 1,500 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. ಒಟ್ಟಾರೆಯಾಗಿ ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಆದರೆ ಕನ್ನಡಿಗರ ಸಂಭ್ರಮದ ವೇಳೆಯಲ್ಲಿ ವಿಘ್ನ ಸಂತೋಷಿಗಳು ಕರಾಳ ದಿನ ಆಚರಣೆ ಮಾಡೋದು ಖಂಡನೀಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಮ್ಮ ಸೊಸೆಯನ್ನ ಮನೆಗೆ ಕರ್ಕೋಂಡು ಹೋಗಿ ಎಂದಿದ್ದೇ ತಪ್ಪಾಯ್ತು!

    ನಿಮ್ಮ ಸೊಸೆಯನ್ನ ಮನೆಗೆ ಕರ್ಕೋಂಡು ಹೋಗಿ ಎಂದಿದ್ದೇ ತಪ್ಪಾಯ್ತು!

    ಬೆಳಗಾವಿ: ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಆತನ ಮಕ್ಕಳು ಸೇರಿ ವ್ಯಕ್ತಿಯೊಬ್ಬನಿಗೆ ಮನಬಂದಂತೆ ಥಳಿಸಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ನಡೆದಿದೆ.

    ಕುಮಾರ ಬಸಪ್ಪ ಕವಲಗುಡ್ಡ ಹಲ್ಲೆಗೆ ಒಳಗಾದ ವ್ಯಕ್ತಿ. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಯಪ್ಪ ಗೌಡಪ್ಪನವರ್ ಹಾಗೂ ಆತನ ಮಕ್ಕಳಾದ ಮಹದೇವ್ ಹಾಗೂ ಭೀಮಪ್ಪ ಮನಬಂದಂತೆ ಥಳಿಸಿದ್ದಾರೆ. ಬಸಪ್ಪ, ನಿಮ್ಮ ಮನೆಗೆ ನಿಮ್ಮ ಸೊಸೆಯನ್ನ ಕರೆದುಕೊಂಡು ಹೋಗಿ ಎಂದು ಹೇಳಲು ಬಂದಿದ್ದಾರೆ. ಈ ವೇಳೆ ಸೊಸೆಯ ಚಿಕ್ಕಪ್ಪ ಬಸಪ್ಪನನ್ನು ಅಧ್ಯಕ್ಷ ರಾಯಪ್ಪ, ಮಹದೇವ ಹಾಗೂ ಭೀಮಪ್ಪ ಸೇರಿ ಬೈಕ್ ಮೇಲಿಂದ ಬೀಳಿಸಿ ಒದ್ದು, ಶರ್ಟ್ ಹರಿದು ಮನಬಂದಂತೆ ಥಳಿಸಿದ್ದಾರೆ.

    ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಯಪ್ಪನ ಪುತ್ರನಾದ ಮಹಾದೇವನ ಪತ್ನಿ ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ 6 ತಿಂಗಳು ಹಿಂದೆ ಗಂಡನ ಮನೆ ತೊರೆದು ತವರು ಮನೆ ಸೇರಿದ್ದರು. ನಂತರ ರಾಜಿ ಪಂಚಾಯತಿ ಬಳಿಕ ರಾಯಪ್ಪ ಸೊಸೆಯನ್ನು ಮನೆಗೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದರು. ಆದರೆ 6 ತಿಂಗಳಾದರೂ ಮನೆಗೆ ಕರೆದುಕೊಂಡು ಹೋಗದ ಕಾರಣ ಮಗಳನ್ನ ಕರೆದುಕೊಂಡು ಹೋಗುವಂತೆ ಹೇಳಲು ಬಂದಿದ್ದ ಚಿಕ್ಕಪ್ಪನನ್ನು ಮನುಷ್ಯತ್ವವನ್ನ ಮರೆತು ಥಳಿಸಿದ್ದಾರೆ.

    ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ. ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಗಿರುವ ಕಾರಣ ಪೊಲೀಸರು ಆರೋಪಿಗಳನ್ನ ಬಂಧಿಸುತ್ತಿಲ್ಲ ಎಂದು ಥಳಿತಕ್ಕೊಳಗಾದ ಕುಮಾರ ಕವಲಗುಡ್ಡ ಕುಟುಂಬಸ್ಥರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವವಧುವಿನಂತೆ ಸಿಂಗಾರಗೊಂಡು ಡಾಗ್ ಶೋನಲ್ಲಿ ಭಾಗವಹಿಸಿದ ಶ್ವಾನ

    ನವವಧುವಿನಂತೆ ಸಿಂಗಾರಗೊಂಡು ಡಾಗ್ ಶೋನಲ್ಲಿ ಭಾಗವಹಿಸಿದ ಶ್ವಾನ

    ಬೆಳಗಾವಿ: ಹೆಣ್ಮಕ್ಕಳಿಗೆ ಮೇಕಪ್ ಅಂದರೆ ಬಹಳ ಇಷ್ಟ. ಫೇಶಿಯಲ್, ಪೆಡಿಕ್ಯೂರ್, ಮೆನಿಕ್ಯೂರ್, ಹೇರ್ ಕಟ್ ಅಂತಾ ಪಾರ್ಲರ್‍ಗೆ ಹೋಗ್ತಾರೆ. ಆದರೆ ಇಲ್ಲಿ ಶ್ವಾನಗಳಿಗೂ ಇದೇ ತರಹ ಅಲಂಕಾರ ಮಾಡಿ ನವವಧುವಿನಂತೆ ಸಿಂಗಾರ ಮಾಡ್ತಾರೆ.

    ದೇಶದ ವಿವಿಧ ನಗರಗಳಿಂದ ಶ್ವಾನಗಳು ಅತಿಥಿಯಾಗಿ ಬಂದಿದೆ. ಶ್ವಾನಗಳು ತಮ್ಮದೇ ಆದ ಸ್ಟೇಲ್ ನಲ್ಲಿ ವಾಕಿಂಗ್, ರನ್ನಿಂಗ್ ಮಾಡಿ ತಮ್ಮ ಪ್ರತಿಭೆಯನ್ನು ತೋರಿಸುತ್ತವೆ. ಈ ಶೋಗೆ ತಯಾರಿ ಮಾಡಲು ಇವರ ಆಪ್ತರು ಹರಸಾಹಸ ಪಡುತ್ತಾರೆ. ಫೇಶಿಯಲ್, ಪೆಡಿಕ್ಯೂರ್, ಮೆನಿಕ್ಯೂರ್, ಹೇರ್ ಡ್ರೇಸ್, ಮಸಾಜ್, ಸನ್ ಸ್ಟ್ರೇನ್ ಲೋಶನ್, ಮಸ್ಕರಾ, ಹೈಬ್ರೋ ಜೊತೆಗೆ ಕೋಲ್ಡ್ ಕ್ರೀಂ ಹಚ್ಚಿ ಸಿಂಗಾರ ಮಾಡುತ್ತಾರೆ.

    ಬೆಳಗಾವಿಯ ಉದ್ಯಮ ಭಾಗದ ಶಗುನ್ ಗಾರ್ಡನ್‍ನಲ್ಲಿ 2 ದಿನಗಳಿಂದ ಶ್ವಾನ ಪ್ರಿಯರೆಲ್ಲಾ ಒಂದೆಡೆ ಸೇರಿದ್ದಾರೆ. ಪಪ್ಪಿ, ಡಾಬರ್ ಮ್ಯಾನ್, ಗ್ರೇಡ್ ಡೆನ್, ಲ್ಯಾಬರಡಾಲ್, ಮುಧೋಳ ಹೊಂಡ್, ಗೊಲ್ಡನ್ ರಿಟರ್ವೆರ್, ಬುಲ್ ಡಾಗ್ ಸೇರಿದಂತೆ ಹತ್ತು ಹಲವು ತಳಿಗಳ ನಾಯಿಗಳನ್ನು ಭಾಗವಹಿಸಿದ್ದವು. ಕೆನಪಿ ಕ್ಲಬ್ ಎರ್ಪಡಿಸಿದ ಅಂತರಾಷ್ಟ್ರೀಯ ಮಟ್ಟದ ಡಾಗ್ ಶೋದಲ್ಲಿ ನೂರಾರು ಶ್ವಾನಗಳು ಭಾಗಿಯಾಗಿತ್ತು.

    ನಂಬಿಕೆ ನಿಯತ್ತಿಗೆ ಇನ್ನೊಂದು ಹೆಸರು ಶ್ವಾನ. ಕುಂದಾನಗರಿಯಲ್ಲಿ ನಡೆಯುತ್ತಿರುವ ಈ ಶ್ವಾನ ಪ್ರದರ್ಶನ ಎಲ್ಲರ ಮನ ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗಾವಿ ಜಿಲ್ಲೆಯಲ್ಲೇ 6 ತಿಂಗಳಲ್ಲಿ ಬರೋಬ್ಬರಿ 43 ರೈತರು ಆತ್ಮಹತ್ಯೆಗೆ ಶರಣು

    ಬೆಳಗಾವಿ ಜಿಲ್ಲೆಯಲ್ಲೇ 6 ತಿಂಗಳಲ್ಲಿ ಬರೋಬ್ಬರಿ 43 ರೈತರು ಆತ್ಮಹತ್ಯೆಗೆ ಶರಣು

    ಬೆಳಗಾವಿ: ಸಾಲಮನ್ನಾ ಆದೇಶ ಹೊರಡಿಸಿದ್ರು ರಾಜ್ಯದಲ್ಲಿ ಅನ್ನದಾತರ ಸಂಕಷ್ಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಕುಂದಾನಗರಿಯೊಂದರಲ್ಲೇ 6 ತಿಂಗಳಲ್ಲಿ 43 ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.

    ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ ಎರಡು ಸರ್ಕಾರಗಳು ರೈತರ ಸಾಲಮನ್ನಾ ಮಾಡಿವೆ. ಆದರೂ ರೈತರ ನೂರಾರು ಸಮಸ್ಯೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ಗಡಿ ಜಿಲ್ಲೆ ಬೆಳಗಾವಿಯ ರೈತರು ಇಂದಿಗೂ ಅನೇಕ ಸಮಸ್ಯೆಗಳಿಂದ ಹೊರಬಂದಿಲ್ಲ. ಜಿಲ್ಲೆಯಲ್ಲಿ 23 ಸಕ್ಕರೆ ಕಾರ್ಖಾನೆಗಳಿದ್ದು, ಕಾರ್ಖಾನೆಗಳಿಂದ ಸರಿಯಾದ ಸಮಯಕ್ಕೆ ಬಿಲ್ ಬಾರದೆ ಕಂಗಾಲಾಗಿದ್ದಾರೆ. ಮೀಟರ್ ಬಡ್ಡಿ, ಬೆಳೆ ನಷ್ಟ, ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲದೆ ಜಿಲ್ಲೆಯೊಂದರಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ 43 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಬಾರಿ ಸರ್ಕಾರ ಬೆಳಗಾವಿಯ ಜಿಲ್ಲೆಯ ಅಥಣಿ, ಕಾಗವಾಡ, ರಾಮದುರ್ಗ ಹಾಗೂ ಸವದತ್ತಿ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಇಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಲು ಜಿಲ್ಲಾಡಳಿತ ಮುಂದಾಗಿದೆ. ಸಾಲಮನ್ನಾ ಜೊತೆಗೆ ಸರ್ಕಾರ ರೈತ ಪರ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದೆ. ಆದ್ರೂ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗದಿರೋದು ಆತಂಕಕಾರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಮಾನ ನಿಲ್ದಾಣದಲ್ಲೇ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ ಜಿ. ಪರಮೇಶ್ವರ್

    ವಿಮಾನ ನಿಲ್ದಾಣದಲ್ಲೇ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ ಜಿ. ಪರಮೇಶ್ವರ್

    ಬೆಳಗಾವಿ: ಸಿಆರ್​ಪಿಎಫ್ ಯೋಧ ಉಮೇಶ್ ಅವರ ಪಾರ್ಥಿವ ಶರೀರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಹುತಾತ್ಮ ಯೋಧನಿಗೆ ವಿಮಾನ ನಿಲ್ದಾಣದಲ್ಲೇ ಗೌರವ ಸಲ್ಲಿಸಿ ಜಮಖಂಡಿಯತ್ತ ಪ್ರಯಾಣ ಬೆಳೆಸಿದರು.

    ಗೋಕಾಕ್ ಸಿಆರ್​ಪಿಎಫ್ ಯೋಧ ಮಣಿಪುರದಲ್ಲಿ ಹುತಾತ್ಮರಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಯೋಧನಿಗೆ ಗೌರವ ಸಲ್ಲಿಸಿದ್ದೇವೆ. ಹುತಾತ್ಮ ಯೋಧ ಉಮೇಶ್ 20 ಜನ ಯೋಧರ ಪ್ರಾಣ ಉಳಿಸಿದ್ದಾರೆ. ಯೋಧನ ಧೈರ್ಯ ಹಾಗೂ ಸಾಹಸಕ್ಕೆ ನಾನು ನನ್ನ ನಮನವನ್ನು ಸಲ್ಲಿಸುತ್ತೇನೆ. ಸರ್ಕಾರ ಯೋಧನ ಕುಟುಂಬಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

    ಅಲ್ಲದೇ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು ಜಮಖಂಡಿ ಚುನಾವಣೆ ಉಸ್ತುವಾರಿ ಆಗಿ ನನ್ನನ್ನು ನೇಮಕ ಮಾಡಿದ್ದಾರೆ. 5 ಕ್ಷೇತ್ರದಲ್ಲಿ ನಮ್ಮ ಗೆಲ್ಲುವು ನಿಶ್ಚಿತವಾಗಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬಾರದು. ಮುಂದಿನ ಲೋಕಸಭಾ ಚುನಾವಣೆಗೆ ಈ ಎಲೆಕ್ಷನ್ ದಿಕ್ಸೂಚಿ ಅಲ್ಲ. ರಮೇಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಒಳ್ಳೆಯ ಫ್ರೆಂಡ್ಸ್. ಅವರಿಬ್ಬರು ಮಾತನಾಡುವುದು ಸಹಜ. ಇವರಿಬ್ಬರಿಗೂ ಬಹಿರಂಗವಾಗಿ ಮಾತನಾಡದಿರಲು ಸೂಚಿಸುತ್ತೇವೆ. ಎಂಇಎಸ್ ಕರಾಳ ದಿನ ಆಚರಣೆ ಹೊಸದಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾನು ಈಗಲೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಪರ ಇದ್ದೇನೆ: ಸತೀಶ್ ಜಾರಕಿಹೊಳಿ

    ನಾನು ಈಗಲೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಪರ ಇದ್ದೇನೆ: ಸತೀಶ್ ಜಾರಕಿಹೊಳಿ

    ಚಿಕ್ಕೋಡಿ: ನಾನು ಈಗಲೂ ಸಹ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಪರವೇ ಇದ್ದೇನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ರಾಯಬಾಗ ತಾಲೂಕಿನ ಭಾವನ ಸೌದತ್ತಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್‍ರವರ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ತಪ್ಪೊಪ್ಪಿಗೆ ಅವರ ವೈಯಕ್ತಿಕ ಅಭಿಪ್ರಾಯ. ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಲಿಂಗಾಯತ ಧರ್ಮ ಹೋರಾಟವನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ಪ್ರಸ್ತುತ ಪಡಿಸಲು ಆಗದೆ ನಾವು ಎಡವಿದ್ದೇವೆ. ನಾನು ಈಗಲೂ ಬಸವೇಶ್ವರರ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಪರವೇ ಇದ್ದೇನೆ ಎಂದು ಹೇಳಿದ್ದಾರೆ.

    ಜನರಿಗೆ ಹಾಗೂ ಪಕ್ಷಕ್ಕೆ ಅನುಕೂಲ ಆಗಲಿ ಎಂದು ಹೋರಾಟಕ್ಕೆ ಕೈ ಹಾಕಿದ್ದೇವು. ಆದರೆ ಈಗ ಅದು ಮುಗಿದು ಹೋದ ಅಧ್ಯಾಯ ಆಗಿದೆ. ಸಮಾಜದ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಇದ್ದರೂ, ಪಕ್ಷದ ವಿಷಯಕ್ಕೆ ಬಂದರೆ ನಾವು ಒಗ್ಗಟ್ಟಾಗಿದ್ದೇವೆ. ಈ ವಿಷಯದಲ್ಲಿ ನಾನು ಖಂಡಿತ ಎಂ.ಬಿ.ಪಾಟೀಲರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಡಿಕೆಶಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv