Tag: belagavi

  • ಹಾವಿನ ಹೆಡೆಯಂತಿದೆ ಬಾಲಕನ ಎಡಗೈ- ಬೆಳಗಾವಿಯಲ್ಲೊಂದು ಅಚ್ಚರಿ

    ಹಾವಿನ ಹೆಡೆಯಂತಿದೆ ಬಾಲಕನ ಎಡಗೈ- ಬೆಳಗಾವಿಯಲ್ಲೊಂದು ಅಚ್ಚರಿ

    – ಹುತ್ತದ ಬಳಿಯೇ ಬಾಲಕನ ವಾಸ್ತವ್ಯ

    ಬೆಳಗಾವಿ: ಸರ್ಪಶಾಪದಿಂದಾಗಿ ಬಾಲಕನೊಬ್ಬ ನರಕಯಾತನೆ ಅನುಭವಿಸುತ್ತಿರೋ ಘಟನೆಯೊಂದು ಬೆಳಗಾವಿ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಬಾಲಕನ ಕೈ ಹಾವಿನ ಹೆಡೆಯನ್ನೇ ಹೋಲುತ್ತಿದೆ. ಆತನ ಎಡಗೈಯ ಎರಡು ಬೆರಳುಗಳು ಒಂದಾಗಿ ಸರ್ಪದ ಹೆಡೆಯಂತಾಗಿದ್ದು, ಅಚ್ಚರಿ ಹುಟ್ಟಿಸಿದೆ. ಕನಸಲ್ಲಿ ಹಾವು ಬರುತ್ತೆ ಅಂತಾ ಬಾಲಕ ಒದ್ದಾಡುತ್ತಾನೆ. ಅಲ್ಲದೇ ರಾತ್ರೋರಾತ್ರಿ ಹುತ್ತದ ಬಳಿ ಕುಳಿತಿರುತ್ತಾನೆ. ಯಾವುದೇ ಆಸ್ಪತ್ರೆಗೆ ಕರೆದೊಯ್ದರೂ ಪರಿಹಾರ ಸಿಕ್ಕಿಲ್ಲ. ನಾಗರಹಾವನ್ನು ಮುಟ್ಟಿದ್ರೂ ಈತನಿಗೆ ಕಚ್ಚೋದಿಲ್ಲ. ಶಾಲೆಯಲ್ಲಿ ಫ್ರೆಂಡ್ಸ್ ಜೊತೆ ಇರಬೇಕಾದ ಬಾಲಕನಿಗೆ ಇದೆಂಥಾ ಶಾಪ ಅನ್ನೋ ಪ್ರಶ್ನೆಯೊಂದು ಇದೀಗ ಕಾಡುತ್ತಿದೆ.

    ಜಿಲ್ಲೆಯ ಪೂಜೇರಿ ಕುಟುಂಬಕ್ಕೆ ತಲೆ ತಲಾಂತರಗಳಿಂದ ಸರ್ಪದ ಶಾಪವಿದೆಯಂತೆ. ಹಲವಾರು ಆಸ್ಪತ್ರೆಗಳಿಗೆ ಹೋದರೂ ಇದಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಪೂಜೇರಿ ಕುಟುಂಬದವರ ಹೇಳುತ್ತಾರೆ. ಈ ಸಮಸ್ಯೆಯಿಂದ ಬಾಲಕ ತನ್ನ ವಿದ್ಯಾಭ್ಯಾಸವನ್ನೂ ಮೊಟಕುಗೊಳಿಸಿದ್ದಾನೆ. ಒಂದೆಡೆ ಕಿತ್ತು ತಿನ್ನುವ ಬಡತನ ಇನ್ನೊಂದೆಡೆ ಬಾಲಕನ ಸಮಸ್ಯೆ ಪಾಲಕರ ನಿದ್ದೆಗೆಡಿಸಿದೆ.

    ರಾತ್ರಿ ನನ್ನ ಕನಸಲ್ಲಿ ಹಾವು ಬರುತ್ತದೆ. ಬಳಿಕ ಹುತ್ತದ ಬಳಿ ಬಂದು ಕುಳಿತರೆ ಸಮಾಧಾನವಾಗುತ್ತದೆ. ನಾನು ಸಣ್ಣ ಇರುವಾಗಿಂದಲೂ ಇದೆ. ತಲೆತಲಾಂತರದಿಂದ ಈ ದೋಷ ನಮಗೆ ಇದೆ ಅಂತ ಬಾಲಕ ತಿಳಿಸಿದ್ದಾನೆ.

    ತಲೆತಲಾಂತರದ ಶಾಪ ಇದಾಗಿದ್ದು, ಈ ಮನೆಯಲ್ಲಿ ಪೂರ್ವಜರು ಹಾವನ್ನು ಹೊಡೆದಿದ್ದಾರಂತೆ. ಆ ಬಳಿಕದಿಂದ ಹಾವು ಮನೆಯಲ್ಲೇ ಇರುತ್ತಿತ್ತಂತೆ. ಹಾವಿನ ಮೇಲೆ ಹಾಲಿನ ಪಾತ್ರೆ ಇಟ್ಟು ಸಾಯಿಸಿದ್ದರಂತೆ. ಹೀಗಾಗಿ ಈ ಕುಟುಂಬಕ್ಕೆ ದೋಷ ಅಂಟಿಕೊಂಡಿದೆ. ಸದ್ಯ ಬಾಲಕನ ಈ ಸಮಸ್ಯೆಯಿಂದ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಅಂತ ತಿಳಿದುಬಂದಿದೆ. ಸದ್ಯ ಬಾಲಕನ ಕುಟುಂಬಸ್ಥರು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಅಥವಾ ತಮಿಳುನಾಡಿನ ದೇವಾಲಯಕ್ಕೆ ತೆರಳಿ ಪೂಜೆ-ಪುನಸ್ಕಾರಗಳನ್ನು ಮಾಡುವ ಯೋಚನೆ ಮಾಡಿದ್ದಾರೆ.

    ಬಾಲಕ ಇತರ ಮಕ್ಕಳಂತೆ ಚಟುವಟಿಕೆಯಿಂದರಲ್ಲ. ಬದಲಾಗಿ ತನ್ನ ಪಾಡಿಗೆ ತಾನು ಕುಳಿತುಕೊಂಡಿರುತ್ತಾನೆ. ಕಣ್ಣಲ್ಲಿ ನೀರು ಬರುತ್ತಿರುತ್ತದೆ. ಅಲ್ಲದೇ ಮಲಗುವ ಸಂದರ್ಭದಲ್ಲೂ ಹಾವಿನ ರೀತಿಯೇ ಮಲಗಿರುತ್ತಾನೆ. ಒಟ್ಟಿನಲ್ಲಿ ಬಾಲಕನ ಈ ಸಮಸ್ಯೆಯಿಂದ ಆದಷ್ಟು ಬೇಗ ಮುಕ್ತವಾಗಲಿ ಎಂಬುದೇ ಸ್ಥಳೀಯರ ಆಶಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಣ್ಣಲ್ಲಿ ಮಣ್ಣಾದ್ರು ಪ್ರಕಾಶ್ ಜಾಧವ್- ಯೋಧನ ಅಂತಿಮ ದರ್ಶನಕ್ಕೆ ಹರಿದು ಬಂತು ಜನಸ್ತೋಮ

    ಮಣ್ಣಲ್ಲಿ ಮಣ್ಣಾದ್ರು ಪ್ರಕಾಶ್ ಜಾಧವ್- ಯೋಧನ ಅಂತಿಮ ದರ್ಶನಕ್ಕೆ ಹರಿದು ಬಂತು ಜನಸ್ತೋಮ

    ಬೆಳಗಾವಿ(ಚಿಕ್ಕೋಡಿ): ಜಮ್ಮುವಿನಲ್ಲಿ ಸೋಮವಾರ ವೀರಮರಣ ಹೊಂದಿದ್ದ ಯೋಧ ಪ್ರಕಾಶ್ ಜಾಧವ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಅವರ ಸ್ವಗ್ರಾಮ ಬೂಧಿಹಾಳದಲ್ಲಿ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ನಡೆಸಲಾಯಿತು.

    ಇಂದು ಬೂಧಿಹಾಳದಲ್ಲಿ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ಯೋಧ ಪ್ರಕಾಶ್ ಜಾಧವ್ ಅವರ ಅಂತ್ಯ ಸಂಸ್ಕಾರ ನಡೆದಿದೆ. ಯೋಧನ ಅಂತಿಮ ದರ್ಶನ ಪಡೆಯಲು 50 ಸಾವಿರಕ್ಕೂ ಹೆಚ್ಚು ಜನ ಬೂಧಿಹಾಳ ಗ್ರಾಮಕ್ಕೆ ಬಂದಿದ್ದರು. ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧೆಡೆಯಿಂದ ಜನರು ಬಂದು ಯೋಧನ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದರು.

    ಯೋಧ ಪ್ರಕಾಶ್ ಜಾಧವ್ ಜಮ್ಮುವಿನಲ್ಲಿ ಉಗ್ರರ ಜತೆ ಸೆಣಸಾಡಿ ವೀರಮರಣ ಹೊಂದಿದ್ದರು. ಇಂದು ಪ್ರಕಾಶ್ ಪಾರ್ಥಿವ ಶರೀರವನ್ನು ಜಮ್ಮುವಿನಿಂದ ಸ್ವಗ್ರಾಮ ಬೂಧಿಹಾಳಕ್ಕೆ ಸೇನಾ ಸಿಬ್ಬಂದಿ ತಂದಿದ್ದರು, ಇದೀಗ ವೀರ ಯೋಧನಿಗೆ ಸಕಲ ಗೌರವದಿಂದ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿದೆ.

    ವೀರ ಯೋಧನ ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು, ವಿವಿಧೆಡೆಯಿಂದ ಜನ ಆಗಮಿಸಿದ್ದರು, ನೆರೆದ ಜನಸಾಗರವನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೌಚಕ್ಕೆ ಕುಳಿತಾಗ ಬೀದಿನಾಯಿಗಳ ದಾಳಿ- ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ

    ಶೌಚಕ್ಕೆ ಕುಳಿತಾಗ ಬೀದಿನಾಯಿಗಳ ದಾಳಿ- ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ

                                                               ಸಾಂದರ್ಭಿಕ ಚಿತ್ರ

    ಬೆಳಗಾವಿ: ನಾಯಿಗಳು ಮಗುವನ್ನೇ ತಿನ್ನಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ನಡೆದಿದೆ.

    2 ವರ್ಷದ ಅಬ್ಬಾಸ್ ಸನದಿ ನಾಯಿಗಳ ದಾಳಿಗೆ ಒಳಗಾದ ಮಗು. ಬೀದಿ ನಾಯಿಗಳು ಗಂಭೀರವಾಗಿ ಕಚ್ಚಿದ ಪರಿಣಾಮ ಅಬ್ಬಾಸ್ ಸ್ಥಿತಿ ಚಿಂತಾಜನಕವಾಗಿದೆ.

    ಅಬ್ಬಾಸ್ ಸನದಿ ಮನೆ ಮುಂದೆ ಶೌಚಕ್ಕೆ ಕುಳಿತಿದ್ದನು. ಈ ವೇಳೆ ಬೀದಿ ನಾಯಿಗಳು ಏಕಾಏಕಿ ಆತನ ಮೇಲೆ ದಾಳಿ ಮಾಡಿವೆ. ಪರಿಣಾಮ ಮುಖ, ತಲೆ ಭಾಗ ಸೇರಿ ಮೈಯೆಲ್ಲಾ ಕಚ್ಚಿ, ತಿಂದು ಹಾಕುವ ಪ್ರಯತ್ನ ಮಾಡಿವೆ. ಘಟನೆಯಿಂದ ಗಂಭೀರ ಗಾಯಗೊಂಡ ಅಬ್ಬಾಸ್ ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

    ಸದ್ಯ ಅಬ್ಬಾಸ್ ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಂಕಿಯಲ್ಲಿ ಅಗ್ನಿ ದೇವತೆ ಪ್ರತ್ಯಕ್ಷ- ವಿಸ್ಮಯ ಕಂಡು ಪುಳಕಿತರಾದ ಭಕ್ತರು

    ಬೆಂಕಿಯಲ್ಲಿ ಅಗ್ನಿ ದೇವತೆ ಪ್ರತ್ಯಕ್ಷ- ವಿಸ್ಮಯ ಕಂಡು ಪುಳಕಿತರಾದ ಭಕ್ತರು

    ಬೆಳಗಾವಿ: ದೇವರು ಮಾತನಾಡಲಿಲ್ಲ ಎಂದು ಬೆಳಗಾವಿ ತಾಲೂಕಿನ ಗೊಡಿಹಾಳ ಗ್ರಾಮದಲ್ಲಿ ಹತ್ತಾರು ವರ್ಷಗಳ ಬಳಿಕ ಜನ ಹೋಮ ಹವನ ಮಾಡಿಸಿದ್ದಾರೆ. ಆದರೆ ಈ ವೇಳೆ ಅಗ್ನಿ ಕುಂಡದಲ್ಲಿ ಮಗುವಿನ ಆಕಾರವೊಂದು ಪ್ರತಕ್ಷವಾಗಿದೆ. ಇದು ವಿಸ್ಮಯವೋ ಪವಾಡವೋ ಗೊತ್ತಿಲ್ಲ ಜನ ಮಾತ್ರ ವಿಡಿಯೋ ನೋಡಿ ಅಶ್ಚರ್ಯಗೊಳಗಾಗಿದ್ದಾರೆ.

    ಈ ವಿಸ್ಮಯ ಬೆಳಗಾವಿ ತಾಲೂಕಿನ ಗೊಡಿಹಾಳ ಗ್ರಾಮದಲ್ಲಿ ನಡೆದಿದೆ. ಸಿದ್ದೇಶ್ವರ ದೇವರು ನಮ್ಮ ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಪ್ರತ್ಯಕ್ಷನಾಗಿದ್ದಾನೆ ಎಂದು ಭಕ್ತಿಪರವಶರಾಗಿದ್ದಾರೆ. 11 ದಿನಗಳ ಅಗ್ನಿ ಪೂಜೆಯ ನಂತರ ಕಡೆ ದಿನ ಈ ಘಟನೆ ನಡೆದಿದೆ. ಇದನ್ನೂ ಓದಿ: 

    ಇದು ನಂಬಿಕೆಯೋ ಅಥವಾ ಮುಢ ನಂಬಿಕೆಯೋ ಗೊತ್ತಿಲ್ಲ ಆದರೆ ಮುಗ್ಧ ಮಗುವಿನ ಆಕಾರದಲ್ಲಿರುವ ದೃಶ್ಯಗಳು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಸಿದ್ದೇಶ್ವರ ದೇವರು ನಮ್ಮ ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಪ್ರತ್ಯಕ್ಷನಾಗಿದ್ದಾನೆ. ಇನ್ನು ಮುಂದೆ ನಮ್ಮ ಕಷ್ಟ ಕಾರ್ಪಣ್ಯಗಳು ಎಲ್ಲವೂ ದೂರಾಗುತ್ತವೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಪೂಜೆಗೆ ಸನ್ನಿಧೀವಹಿಸಿದ ಭೂತರಾಮನಹಟ್ಟಿ ಶ್ರೀಗಳು ಆಶ್ಚರ್ಯ ಚಕಿತರಾಗಿದ್ದಾರೆ. ಇದನ್ನೂ ಓದಿ:  ಕಣ್ಣೀರು ಸುರಿಸಿದ ಆರೋಗ್ಯಮಾತೆ: ನೋಡಲು ಮುಗಿಬಿದ್ದ ಸಾರ್ವಜನಿಕರು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಳ್ಳಂಬೆಳಗ್ಗೆ ಶೌಚಾಲಯಕ್ಕೆ ತೆರಳಲು ಮಹಿಳೆಯರ ಹರಸಾಹಸ

    ಬೆಳ್ಳಂಬೆಳಗ್ಗೆ ಶೌಚಾಲಯಕ್ಕೆ ತೆರಳಲು ಮಹಿಳೆಯರ ಹರಸಾಹಸ

    ಬೆಳಗಾವಿ: ಬೆಳಗಾಯಿತೆಂದರೆ ಕಣ್ಣೀರು ಹಾಕ್ತಾರೆ ಬಹಿರ್ದೆಸೆಗೆ ತೆರಳಲು ಹರಸಾಹಸ ಮಾಡುತ್ತಾರೆ. ಒಂದೂವರೆ ಅಡಿಯ ಕಿಂಡಿಯಲ್ಲಿ ದಾಟುವ ಸರ್ಕಸ್ ಮಾಡುತ್ತಾರೆ. ದಿನನಿತ್ಯ ಶೌಚಾಲಯ ತೆರಳಲು ಮಹಿಳೆಯರು ಪರದಾಡುತ್ತಾರೆ. ದಿನನಿತ್ಯ ಮಹಿಳೆಯರ ಗೋಳು ಕೇಳುವವರೇ ಇಲ್ಲ.

    ಇದು ಬೆಳಗಾವಿ ಮಹಾನಗರದ ಶ್ರೀನಗರ ಬಡಾವಣೆಯ ಮಹಿಳೆಯರ ಗೋಳು. ಮಳೆಗಾಲ ಬಂತೆದರೆ ಈ ಸಮಸ್ಯೆ ಇನ್ನೂ ಜಟಿಲಗೊಳ್ಳುತ್ತದೆ. ಮೇಲಿಂದ ಸುರಿಯುವ ಮಳೆ, ಕೆಳಗೆ ಕೊಳಚೆ, ರೊಜ್ಜು ಮಣ್ಣು ಆ ಕಡೆಯಿಂದ ರಭಸದಿಂದ ಬರುವ ನೀರಿನ ವಿರುದ್ಧ ದಿಕ್ಕಿನಲ್ಲಿ ಕಿಂಡಿಯನ್ನು ದಾಟಿ ಆ ಕಡೆ ಹೋಗಿ ಬಯಲು ಬಹಿರ್ದೆಸೆ ಮಾಡುವ ದೃಶ್ಯ ಊಹಿಸಿಕೊಳ್ಳಲು ಅಸಾಧ್ಯ.

    ಇಂಥದೊಂದು ಕರುಣಾಜಕನ ಸ್ಟೋರಿಯನ್ನು ಬೆನ್ನಟ್ಟಿ ಹೊರಟ ಪಬ್ಲಿಕ್ ಟಿವಿ ತಂಡಕ್ಕೆ ಮೊದಲು ಮೂರು ದಿನ ಮಹಿಳೆಯರಿಗೆ ಸಮಜಾಯಿಸಿ ತಿಳಿ ಹೇಳಬೇಕಾಯಿತು. ಮಾನಕ್ಕೆ ಹೆದರಿ, ನಾಚಿಕೆಯಿಂದ ಮಹಿಳೆಯರು ಕ್ಯಾಮರಾ ಮುಂದೆ ಬರಲು ಹೇದರುತ್ತಿದ್ದರು.

    ನಾವು ಬಹಳ ಸಲ ಬಹಿರ್ದೆಸೆಗೆ ಹೋಗಲು ಕಷ್ಟಪಡುತ್ತೇವೆ. ಹಾಗಾಂತ ನಾವು ಕಟ್ಟಡಗಳ ಮಧ್ಯೆ ಬಹಿರ್ದೆಸೆಗೆ ಹೋಗಲು ಆಗುವುದಿಲ್ಲ ಎಂದು ಮಹಿಳೆಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ. ಸಂಸದ ಹಾಗೂ ಮಾಜಿ ಶಾಸಕನ ಕ್ಷೇತ್ರದಲ್ಲಿ ಈ ಘಟನೆ ನಡೆದಿರುವುದು ವಿಪರ್ಯಾಸ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಉಗ್ರರೊಂದಿಗೆ ಹೋರಾಟ-ವೀರ ಮರಣವನ್ನಪ್ಪಿದ ಬೆಳಗಾವಿ ಯೋಧ

    ಉಗ್ರರೊಂದಿಗೆ ಹೋರಾಟ-ವೀರ ಮರಣವನ್ನಪ್ಪಿದ ಬೆಳಗಾವಿ ಯೋಧ

    ಬೆಳಗಾವಿ (ಚಿಕ್ಕೋಡಿ): ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೂದಿಹಾಳ್ ಗ್ರಾಮದ ಯೋಧ ವೀರ ಮರಣವನ್ನಪ್ಪಿದ್ದಾರೆ.

    ಪ್ರಕಾಶ್ (ಭೋಜರಾಜ್) ಪುಂಡಲೀಕ ಜಾಧವ್ (28) ಹುತಾತ್ಮ ಯೋಧರಾಗಿದ್ದಾರೆ. ಯೋಧ ಭೋಜರಾಜ್ ಜಮ್ಮು ಮತ್ತು ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ತಡರಾತ್ರಿ ಉಗ್ರರೊಂದಿಗಿನ ನಡೆದ ಗುಂಡಿನ ಚಕಮಕಿಯಲ್ಲಿ ಹೋರಾಡಿ, ವೀರ ಸ್ವರ್ಗವನ್ನಪ್ಪಿದ್ದಾರೆ.

    ಭೋಜರಾಜ್ ಮರಾಠಾ ರೆಜಿಮೆಂಟಿನಲ್ಲಿ ಕಳೆದ 11 ವರ್ಷಗಳಿಂದ ಯೋಧರಾಗಿದ್ದರು. ಅಲ್ಲದೇ ಇವರ ತಂದೆಯೂ ಕೂಡ ನಿವೃತ್ತ ಸೈನಿಕರಾಗಿದ್ದಾರೆ. ಮೃತ ಭೋಜರಾಜ್ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ಮುದ್ದಾದ ಮೂರು ತಿಂಗಳ ಹೆಣ್ಣು ಮಗುವನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ದೀಪಾವಳಿ ಹಬ್ಬವನ್ನು ಮುಗಿಸಿ ಸೇನೆಗೆ ವಾಪಾಸ್ಸಾಗಿದ್ದರು. ಯೋಧ ಭೋಜರಾಜ್ ಹೆಂಡತಿ, ಮಗು, ತಂದೆ-ತಾಯಿ ಹಾಗೂ ಓರ್ವ ಸಹೋದರರನ್ನು ಅಗಲಿದ್ದಾರೆ.

    ಜಾಧವ್ ಸಾವಿನ ಸುದ್ದಿಯಿಂದಾಗಿ ಕುಟುಂಬಸ್ಥರು ಹಾಗೂ ಸ್ವಗ್ರಾಮದಲ್ಲಿ ನೀರವ ಮೌನ ಮಡುಗಟ್ಟಿದೆ. ಬುಧವಾರ ಮಧ್ಯಾಹ್ನ ಯೋಧ ಜಾಧವ್ ರ ಪಾರ್ಥಿವ ಶರೀರ ಬೂದಿಹಾಳ ಗ್ರಾಮಕ್ಕೆ ಬರುತ್ತದೆಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಳ್ಳಾರಿ ಆಯ್ತು ಈಗ ಜಾರಕಿಹೊಳಿ ಕೋಟೆಯಲ್ಲಿ ಹವಾ – ರೈತರ ಜೊತೆ ಡಿಕೆಶಿ ಸಂಧಾನ ಯಶಸ್ವಿ

    ಬಳ್ಳಾರಿ ಆಯ್ತು ಈಗ ಜಾರಕಿಹೊಳಿ ಕೋಟೆಯಲ್ಲಿ ಹವಾ – ರೈತರ ಜೊತೆ ಡಿಕೆಶಿ ಸಂಧಾನ ಯಶಸ್ವಿ

    – ಕಾರ್ಖಾನೆ ಮಾಲೀಕರನ್ನ ಬಿಡುತ್ತೇವೆ ಹೊರತು ರೈತರನ್ನ ಬಿಡುವ ಪ್ರಶ್ನೆಯೇ ಇಲ್ಲ
    – ಡಿಕೆಶಿ ಸಂಧಾನಕ್ಕೆ ಬಗ್ಗಿ ರೈತರ ಪ್ರತಿಭಟನೆ ವಾಪಸ್

    ಬೆಳಗಾವಿ: ಬಳ್ಳಾರಿಯಲ್ಲಿ ಗಣಿಧಣಿಗಳ ಕೋಟೆಯನ್ನು ಉರುಳಿಸಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಈಗ ಜಾರಕಿಹೊಳಿ ಸಹೋದರರ ಕೋಟೆಗೆ ಲಗ್ಗೆ ಇಟ್ಟು ಯಶಸ್ವಿಯಾಗಿದ್ದಾರೆ. ನಾಲ್ಕು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಬ್ಬಿನ ಬಾಕಿ ಹಣವನ್ನು ಪಾವತಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮನ ಒಲಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.

    ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಡಿಕೆಶಿ ಸಮಾಧಾನ ಮಾಡಿದ್ದಾರೆ. ರೈತರು ಕೂಡ ಡಿಕೆಶಿ ಅವರ ಮಾತಿಗೆ ಬೆಲೆಕೊಟ್ಟು ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.

    ಈ ವೇಳೆ ಹೋರಾಟ ನಡೆಸುತ್ತಿದ್ದ ರೈತರು ಡಿ.ಕೆ.ಶಿವಕುಮಾರ್ ಅವರಲ್ಲಿ ಸಚಿವ ಜಾರಕಿಹೊಳಿ ಮತ್ತು ಡಿಸಿ ಬೊಮ್ಮನಹಳ್ಳಿ ವಿರುದ್ಧ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ನಾವೂ ಪ್ರತಿ ಸಲ ಡಿಸಿ ಅವರಿಗೆ ಮನವಿ ಕೊಡಬೇಕೇ? ನ್ಯಾಯಕ್ಕಾಗಿ ಸಾಯುವವರೆಗೂ ಮನವಿ, ಅರ್ಜಿ ಕೊಡುತ್ತಾ ಇರಬೇಕು ಎಂದು ಕಬ್ಬಿನ ಹೋರಾಟಗಾರರು ಅಳಲು ತೋಡಿಕೊಂಡಿದ್ದಾರೆ. ಕಬ್ಬಿನ ಬಾಕಿ ಉಳಿದಿರುವ ಹಣವನ್ನ ಕೊಡಿಸಿ, ಅಲ್ಲದೇ ಜಿಲ್ಲಾಡಳಿತಕ್ಕೆ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಈ ವೇಳೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮ ರೈತರು ರಾತ್ರೋರಾತ್ರಿ ಬೆಳಗಾವಿಯಲ್ಲಿ ಧರಣಿಯನ್ನು ನಡೆಸುತ್ತಿದ್ದಾರೆ. ಸರ್ಕಾರದ ಗಮನವನ್ನು ಸೆಳೆದಿದ್ದಾರೆ. ಅದಕ್ಕೆ ಸ್ಪಂದಿಸಬೇಕಾದದ್ದು ನಮ್ಮ ಧರ್ಮ. ಈಗಾಗಲೇ ಮುಖ್ಯಮಂತ್ರಿಗಳು ಮೂರು ದಿನಗಳಿಂದ ಹಗಲು-ರಾತ್ರಿ ಕುಳಿತುಕೊಂಡು ಮಾಲೀಕರು, ಅಧಿಕಾರಿಗಳು ಮತ್ತು ರೈತರ ಬಳಿ ಚರ್ಚೆ ಮಾಡಿದ್ದಾರೆ. ಜೊತೆಗೆ ಇನ್ನೂ 15 ದಿನದ ಒಳಗಡೆ ರೈತರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

    ಸರ್ಕಾರ ನ್ಯಾಯಬದ್ಧವಾದ ಹಣ, ಬಾಕಿಯನ್ನ ಕೊಡಿಸುವ ಕೆಲಸ ಮಾಡುತ್ತದೆ. ನಮ್ಮ ಸರ್ಕಾರಕ್ಕೆ ರೈತರ ಸಮಸ್ಯೆ ಗೊತ್ತಿದೆ. ಆದರೆ ದುರದೃಷ್ಟಕರ ಸಕ್ಕರೆ ಮಾಲೀಕರು ರೈತರಿಗೆ ಕೊಡಬೇಕಾದ ಹಣ ಕೊಟ್ಟಿಲ್ಲ. ಯಾವುದೇ ಕಾರಣಕ್ಕೂ ನಾವು ಕಾರ್ಖಾನೆ ಮಾಲೀಕರನ್ನು ಬಿಡುತ್ತೇವೆ ಹೊರತು ರೈತರನ್ನು ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಜೀವನಾಡಿ ರೈತರು, ರೈತರಿಂದಲೇ ನಮ್ಮ ಸರ್ಕಾರ. ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಡಿಕೆಶಿ ಹೇಳಿದರು.


    ನಾನು ಕೂಡ ರೈತರ ಮುಖಂಡರ ಜೊತೆ ಮಾತನಾಡಿದ್ದೇನೆ. ಕಾನೂನನ್ನು ಕೈಯಲ್ಲಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ನಮ್ಮ ಮನವಿಗೆ ರೈತರು ಸ್ಪಂದಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಜೊತೆಗೆ ಕಬ್ಬಿನ ಬಾಕಿ ಬಿಲ್ ಕೊಡಿಸುವ ಭರವಸೆಯನ್ನು ಕೂಡ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಡಿಕೆಶಿ, ರಮೇಶ್ ಜಾರಕಿಹೊಳಿ ಭಿನ್ನಮತ ಸ್ಫೋಟ

    ಡಿಕೆಶಿ, ರಮೇಶ್ ಜಾರಕಿಹೊಳಿ ಭಿನ್ನಮತ ಸ್ಫೋಟ

    -ಬೆಳಗಾವಿಗೆ ಬಂದ ಡಿಕೆಶಿ ಸ್ವಾಗತಕ್ಕೆ ಕಾಂಗ್ರೆಸ್ ನಾಯಕರು ಬರಲೇ ಇಲ್ಲ

    ಬೆಳಗಾವಿ: ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಇಬ್ಬರ ನಡುವಿನ ಶೀತಲ ಸಮರ ಮುಂದುವರೆದಂತೆ ಕಾಣುತ್ತಿದೆ. ಆದ್ರೆ ಇಬ್ಬರು ನಾಯಕರು ರಾಜಕೀಯದಲ್ಲಿ ಸ್ವಲ್ಪ ಬಿನ್ನಾಬಿಪ್ರಾಯಗಳು ಇರಬಹುದು. ನಾವಿಬ್ಬರು ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡು ಬರುತ್ತಿದ್ದಾರೆ. ಗುರುವಾರ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲು ಯಾವ ಕಾಂಗ್ರೆಸ್ ಮುಖಂಡರು ಬರದೇ ಇರೋದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

    ರಮೇಶ್ ಜಾರಕಿಹೊಳಿ ಅವರಿಗೆ ಹೆದರಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿಲ್ಲ ಎಂಬ ಸುದ್ದಿಗಳು ಬೆಳಗಾವಿ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತುಗಳು. ಇನ್ನು ವಿಮಾನ ನಿಲ್ದಾಣಕ್ಕೆ ಬಂದ ಸಚಿವರನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸ್ವಾಗತಿಸಿದರು.

    ಕೆಎಲ್‍ಇ ಸಂಸ್ಥೆಯಲ್ಲಿ ನಡೆಯುವ ಕಾನ್ಪೆರೆನ್ಸ್ ಮತ್ತು ಐಪಿಪಿ ಕಾನ್ಫೆರನ್ಸ್ ಗಳಲ್ಲಿ ಭಾಗಿಯಾಗಲಿದ್ದೇನೆ. ಸಿಎಂ ಈಗಾಗಲೇ ರೈತರು ಸಕ್ಕರೆ ಕಾರ್ಖಾನೆಯ ಮಾಲೀಕರ ಜೊತೆ ಮಾತನಾಡಿದ್ದಾರೆ. ನಮ್ಮ ಸರ್ಕಾರ ಯಾವತ್ತು ರೈತರ ಕೈಯನ್ನು ಬಿಡುವುದಿಲ್ಲ. ರೈತರಿಗೆ ಏನು ಕೊಡಬೇಕು ಅದನ್ನು ಆದಷ್ಟು ಬೇಗ ನೀಡುವಂತೆ ಮಾಡಲಾಗುತ್ತದೆ. ರಮೇಶ್ ಜಾರಕಿಹೊಳಿ ನಾವು ಒಳ್ಳೆಯ ಗೆಳೆಯರು ಅಂತಾ ಡಿಕೆ ಶಿವಕುಮಾರ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸರ್ಕಾರ & ಸಕ್ಕರೆ ಕಾರ್ಖಾನೆ ಮಾಲೀಕರ ಸೂತ್ರಕ್ಕೆ ಒಪ್ಪದ ರೈತರು -ಮುಂದುವರೆದ ಪ್ರತಿಭಟನೆ

    ಸರ್ಕಾರ & ಸಕ್ಕರೆ ಕಾರ್ಖಾನೆ ಮಾಲೀಕರ ಸೂತ್ರಕ್ಕೆ ಒಪ್ಪದ ರೈತರು -ಮುಂದುವರೆದ ಪ್ರತಿಭಟನೆ

    ಬೆಳಗಾವಿ: ರಾಜ್ಯ ಸರ್ಕಾರಕ್ಕೆ ಸಕ್ಕರೆ ಸಮಸ್ಯೆ ಜಾಸ್ತಿಯಾಗುವ ಲಕ್ಷಣ ಕಾಣಿಸುತ್ತಿದೆ. ಸಕ್ಕರೆ ಕಾರ್ಖಾನೆಗಳ ಸಾಹುಕಾರರ ಜೊತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಡೆಸಿದ ಸಂಧಾನ ಸಭೆಯೇನೋ ಸಕ್ಸಸ್ ಆಗಿದೆ. ಸರ್ಕಾರ ಫಿಫ್ಟಿ ಫಿಫ್ಟಿ ಸೂತ್ರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಅಸ್ತು ಎಂದಿದ್ದಾರೆ. ಅಂತೂ ಕಬ್ಬು ಬೆಳೆಗಾರರ ಕಣ್ಣೀರು ಒರೆಸಿದಂತಾಯ್ತು ಅಂತಾ ಸಿಎಂ ನಿಟ್ಟುಸಿರು ಬಿಟ್ಟರು. ಆದರೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸೂತ್ರಕ್ಕೆ ಒಪ್ಪದ ರೈತರು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.

    ಸಂಧಾನ ಸಭೆಯ ನಿರ್ಣಯ:
    ನ್ಯಾಯ ಹಾಗೂ ಲಾಭದಾಯಕ ಬೆಲೆಗಿಂತ (ಎಫ್.ಆರ್.ಪಿ) ಹೆಚ್ಚಿನ ಮೊತ್ತ ನೀಡುವ ಪ್ರಸ್ತಾವನೆಗೆ ಮಾಲೀಕರಿಂದ ವಿರೋಧ ವ್ಯಕ್ತವಾಯಿತು. ಬಳಿಕ ಎಫ್.ಆರ್.ಪಿ ದರವನ್ನು ಕೊಡುವುದಕ್ಕೆ ಒಪ್ಪಿಕೊಂಡರು. ಈಗ ಎಫ್.ಆರ್.ಪಿ ದರ 2,750 ರೂ. ಇದೆ. ಉಳಿದಂತೆ ಮಾಲೀಕರಿಂದ 150 ರೂ., ಸರ್ಕಾರದಿಂದ 150 ರೂ. ಸೇರಿ ಒಟ್ಟು 300 ರೂ. ಪ್ರೋತ್ಸಾಹಧನವಾಗಿ ನೀಡಲು ಸಭೆ ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ರೈತರು ಪ್ರತಿ ಟನ್ ಕಬ್ಬಿಗೆ 3,050 ರೂ. ಪಡೆಯಲಿದ್ದಾರೆ.

    ಹೆಚ್ಚು ಬಾಕಿ ಉಳಿಸಿಕೊಂಡಿರುವ ಬಾಗಲಕೋಟೆ, ವಿಜಯಪುರ ಕಾರ್ಖಾನೆ ಮಾಲೀಕರು ಮುರುಗೇಶ್ ನಿರಾಣಿ, ಆನಂದ್ ನ್ಯಾಮಗೌಡ, ಎಸ್.ಆರ್ ಪಾಟೀಲ ಅವರು ತಕ್ಷಣ ಬಾಕಿ ಬಿಲ್ ಪಾವತಿ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಲೀಕರು, ತಕ್ಷಣ ಪಾವತಿ ಕಷ್ಟ, ಹಂಗಾಮು ಒಳಗೆ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇತ್ತ ಬೆಳಗಾವಿ ಸಕ್ಕರೆ ಕಾರ್ಖಾನೆ ಮಾಲೀಕರು 15 ದಿನ ಗಡುವು ಕೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡರು ಕಬ್ಬಿನ ದರ ಹಾಗೂ ಬಾಕಿ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ತೇವೆ. ಅಲ್ಲಿವರೆಗೆ ಅಹೋರಾತ್ರಿ ಧರಣಿ ಮುಂದುವರಿಸುತ್ತೇವೆ ಅಂತಾ ಹೇಳಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರನ್ನು ಭೇಟಿಯಾದ ಜೆಡಿಎಸ್ ಮುಖಂಡ ಪ್ರಕಾಶ್ ಸೋನಾವಲಕರ, ರೈತರ ಮನವೊಲಿಕೆಗೆ ವಿಫಲ ಯತ್ನ ನಡೆಸಿದ್ರು. ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಸರ್ಕಾರ ರೈತರ ಪರವಿದ್ದು, ರೈತರನ್ನು ಕೈ ಬಿಡುವ ಪ್ರಶ್ನೆಯೆ ಇಲ್ಲ ಅಂದರು.

    ಈ ನಡುವೆ ನವೆಂಬರ್ 20ರಂದು ನಡೆದ ಸಭೆಯ ಅನುಸಾರವಾಗಿ ರೈತರ ಬಾಕಿ ಹಣ ಪಾವತಿಸುವಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಲ್ಲದೆ ಇಂದು ಬಾಗಲಕೋಟೆ, ಬೆಳಗಾವಿ, ವಿಜಯಪುರದಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಸರ್ಕಾರ, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವಿನ ಕಬ್ಬಿನ ಸಂಘರ್ಷ ಯಾವ ಹಂತಕ್ಕೆ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಷ್ಟು ದಿನ ಎಲ್ಲಿ ಮಲಗಿದ್ದೆ- ಸಿಎಂ ಹೇಳಿಕೆಗೆ ಹೆಬ್ಬಾಳ್ಕರ್ ಟಾಂಗ್

    ಇಷ್ಟು ದಿನ ಎಲ್ಲಿ ಮಲಗಿದ್ದೆ- ಸಿಎಂ ಹೇಳಿಕೆಗೆ ಹೆಬ್ಬಾಳ್ಕರ್ ಟಾಂಗ್

    ಬೆಳಗಾವಿ: ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಇರುವುದು ರೈತ ಮಹಿಳೆ. ನಾನು ಕಾಂಗ್ರೆಸ್ಸಿನವಳು. ಹೀಗಾಗಿ ಪಕ್ಷದ ಚಿಹ್ನೆಯಲ್ಲಿ ತೆನೆ ಹೊತ್ತ ರೈತ ಮಹಿಳೆಯನ್ನು ಇಟ್ಕೊಂಡು ಮುಖ್ಯಮಂತ್ರಿಗಳು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಅಂತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನ ಚಿಹ್ನೆ ರೈತ ಮಹಿಳೆಯಾಗಿದೆ. ಹೀಗಾಗಿ ರೈತ ಮಹಿಳೆಯ ಮೇಲೆ ಜೆಡಿಎಸ್ ನವರಿಗೆ ಮರ್ಯಾದೆ(ಗೌರವ) ಇಲ್ಲ ಅಂತಂದ್ರೆ ಏನ್ ಹೇಳಲಿ. ರೈತ ಮಹಿಳೆಯನ್ನು ತಮ್ಮ ಸಿಂಬಲ್ ಆಗಿ ಇಟ್ಕೊಂಡು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಅಂತ ಅವರು ತಿಳಿಸಿದ್ರು.

    ಮುಖ್ಯಮಂತ್ರಿಗಳು ಯಾವುದೋ ಒಂದು ಉದ್ವೇಗದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಏನ್ ಮಾಡ್ತಿದ್ದಿಯಮ್ಮಾ, ಯಾಕೆ ವಿಚಾರ ಮಾಡಿಲ್ಲ ಅಂತ ಹೇಳಬಹುದಾಗಿತ್ತು. ಆದ್ರೆ ಉದ್ವೇಗದಲ್ಲಿ ಅದೊಂದು ಪದವನ್ನು ಬಳಸಿದ್ದಾರೆ. ರಾಜಕಾರಣದಲ್ಲಿ ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ. ಮಾತು ಆಡಿದ್ರೆ ಸಾಕು, ಮುತ್ತು ಒಡೆದ್ರೆ ಹೋಯ್ತು ಅನ್ನೋ ಪರಿಸ್ಥಿತಿ ಬಂದಿದೆ ಅಂದ್ರು.

    ಒಂದು ಪಕ್ಷದ ಚಿಹ್ನೆಗೆ ನಾವು ಪೂಜೆ ಮಾಡುತ್ತೇವೆ. ನಮ್ಮ ಉಸಿರು ಏನಪ್ಪ ಅಂದ್ರೆ ನಮ್ಮ ಚಿಹ್ನೆ ಆಗಿರುತ್ತದೆ. ಹೀಗಾಗಿ ರೈತ ಮಹಿಳೆಯನ್ನೇ ಚಿಹ್ನೆಯಾಗಿ ಇಟ್ಕೊಂಡಿದ್ದಾರೆ ಅಂತ ಹೇಳುವ ಮೂಲಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಹೆಬ್ಬಾಳ್ಕರ್ ಟಾಂಗ್ ನೀಡಿದ್ರು.

    ಸಕ್ಕರೆ ಕಾರ್ಖಾನೆಯ ಮಾಲೀಕರ ಜೊತೆ ಸಭೆಗೆ ನನಗೆ ಆಹ್ವಾನವಿಲ್ಲ. ನಾನು ಈ ಬಾರಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿದ್ದೇನೆ. ಈಗ ಅಂಬೆಗಾಲು ಇಡುತ್ತಿದ್ದೇನೆ. ಸರಕಾರವು ಸಕ್ಕರೆ ಮಾಲೀಕರ ಜೊತೆ ಯಾವ ತೀರ್ಮಾನ ಕೈಗೊಳ್ಳುತ್ತೆ ಅದಕ್ಕೆ ನಾನು ಬದ್ಧವಾಗಿದ್ದೇನೆ. ನಾನು ರೈತರ ಹಿತ ಕಾಪಾಡುವ ಉದ್ದೇಶದಿಂದ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿದ್ದೇನೆ ಅಂದ್ರು.

    ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್, ಕಾಯಕವೇ ಕೈಲಾಸ ಅನ್ನೋ ರೀತಿ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸಲು ನಾನು ಸಿದ್ಧಳಾಗಿದ್ದೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv