Tag: belagavi

  • ಸಿ.ಟಿ ರವಿ ಬಂಧನ ಖಂಡಿಸಿ ಚಿಕ್ಕಮಗಳೂರು ಬಂದ್‌ಗೆ ಕರೆ – ಕೇಸರಿ ಪಡೆ ನಿಗಿನಿಗಿ ಕೆಂಡ!

    ಸಿ.ಟಿ ರವಿ ಬಂಧನ ಖಂಡಿಸಿ ಚಿಕ್ಕಮಗಳೂರು ಬಂದ್‌ಗೆ ಕರೆ – ಕೇಸರಿ ಪಡೆ ನಿಗಿನಿಗಿ ಕೆಂಡ!

    – ಮೂರು ಜಿಲ್ಲೆ, 5 ತಾಲೂಕುಗಳಲ್ಲಿ ಇಡೀ ರಾತ್ರಿ ಸುತ್ತಾಟ

    ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar( ಅವರಿಗೆ ನಿಂದಿಸಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಘಟನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಸಿ.ಟಿ ರವಿ ಬಂಧನ (CT Ravi Arrest) ಖಂಡಿಸಿ ಡಿ. 20ರಂದು ಚಿಕ್ಕಮಗಳೂರು ನಗರ ಬಂದ್‌ಗೆ (Chikkamagaluru Bandh) ನಗರ ಬಿಜೆಪಿ ಕರೆ ಕೊಟ್ಟಿದೆ.

    ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ಗೆ ಕರೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೂರಾರು ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಗಸ್ತು ತಿರುಗುತ್ತಿದ್ದಾರೆ. ನಗರದ ಹನುಮಂತಪ್ಪ ಸರ್ಕಲ್‌ನಲ್ಲಿ 6 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    3 ಜಿಲ್ಲೆ 5 ತಾಲ್ಲೂಕಿನಲ್ಲಿ ಇಡೀ ರಾತ್ರಿ ಸುತ್ತಾಟ:
    ನಿನ್ನೆ ಸಂಜೆ ಸಿ.ಟಿ ರವಿ ಅವರನ್ನು ಬಂಧಿಸಿರುವ ಪೊಲೀಸರು ರಾತ್ರಿಯಿಡೀ ಜಿಲ್ಲೆಯನ್ನ ಸುತ್ತಾಡಿಸಿದ್ದಾರೆ. ಇದರಿಂದ ತಮಗೆ ಮಾನಸಿಕ ಹಿಂಸೆ ನೀಡಿದ್ದಾರೆಂದು ಸಿ.ಟಿ ರವಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದಬಳಕೆ ಆರೋಪ – ಸಿ.ಟಿ ರವಿ ವಿರುದ್ಧ ಎಫ್‌ಐಆರ್‌

    ಬೆಳಗಾವಿ, ಬಾಗಲಕೋಟೆ, ಧಾರವಾಡ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಯರಗಟ್ಟಿ ಮೂಲಕ ಮತ್ತೆ ಬೆಳಗಾವಿಯತ್ತ ಕರೆತಂದಿದ್ದಾರೆ. ಸಿ.ಟಿ ರವಿಗೆ ಉಪಹಾರ, ಕಾಫಿ, ಟೀ ವ್ಯವಸ್ಥೆ ಮಾಡಿಕೊಟ್ಟ ಪೊಲೀಸರು ರಾತ್ರಿಯಿಡೀ ಜಾಗರಣೆ ಮಾಡಿಸಿದ್ದಾರೆ. ಇಂದು ಬೆಳಗ್ಗೆ ಯರಗಟ್ಟಿ ಬಳಿಯ ಡಾಬಾದಲ್ಲಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಖಾನಾಪುರ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ:
    ಇನ್ನೂ ಸಿ.ಟಿ ರವಿ ಅವರನ್ನ ಬೆಂಗಳೂರಿಗೆ ಕರೆತರುವ ವೇಳೆ ಖಾನಾಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ ನಡೆದಿದೆ. ಹಣೆಗೆ ಪೆಟ್ಟಾಗಿ ರಕ್ತ ಸೋರುತ್ತಿದ್ದರೂ, ಪೊಲೀಸರು ಸಿ.ಟಿ ರವಿ ಅವರನ್ನ ಹೊತ್ತು ವಾಹನದಲ್ಲಿ ಹಾಕಿದ್ದಾರೆ. ಈ ವೇಳೆ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಸಿ.ಟಿ ರವಿ ಚೀರಾಡಿದ್ದಾರೆ. ರಸ್ತೆ ಮಧ್ಯೆ ಧರಣಿ ಕುಳಿತು, ನನ್ನನ್ನ ಕೊಲೆ ಮಾಡಲು ಪ್ರಯತ್ನ ಮಾಡ್ತಿದ್ದೀರಿ, ನೀವು ಅಧಿಕಾರಿಗಳಂತೆ ನಡೆದುಕೊಳ್ತಿದ್ದೀರಾ? ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ನೂಕಾಟದಿಂದ ಬಿಜೆಪಿಯ ಇಬ್ಬರು ಸಂಸದರಿಗೆ ಗಾಯ – ರಾಹುಲ್‌ ಗಾಂಧಿ ವಿರುದ್ಧ FIR

    ಠಾಣೆ ಮುಂದೆ ಬಿಜೆಪಿ ಪ್ರತಿಭಟನೆ:
    ಸಿ.ಟಿ ರವಿ ಬಂಧನ ಖಂಡಿಸಿ ತಡರಾತ್ರಿ ವಿಪಕ್ಷ ನಾಯಕ ಆರ್‌. ಅಶೋಕ್‌ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಆರ್‌. ಅಶೋಕ್‌, ರಾಜ್ಯವನ್ನು ಕಾಂಗ್ರೆಸ್‌ನವರು ಮಿನಿ ಪಾಕಿಸ್ತಾನ ಮಾಡಿದ್ದಾರೆ, ಸಿಟಿ ರವಿ ಜನಪ್ರತಿನಿಧಿಯೆಂಬುದನ್ನು ಮರೆತು ಹಲ್ಲೆ ಮಾಡಿದ್ದಾರೆ. ಸಿಟಿ ರವಿ ಹಣೆಗೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ, ಪೊಲೀಸರಿಗೆ ನಮ್ಮ ಸರ್ಕಾರ ಬಂದ ಬಳಿಕ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.  ಇದನ್ನೂ ಓದಿ:  ರಕ್ತ ಬರುವಂತೆ ಸಿ.ಟಿ ರವಿ ಮೇಲೆ ಹಲ್ಲೆ – ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆಂದು ಚೀರಾಡಿದ ಎಂಎಲ್‌ಸಿ

  • ಎಂಎಲ್‌ಸಿ ಸಿ.ಟಿ.ರವಿ ಬಂಧನ

    ಎಂಎಲ್‌ಸಿ ಸಿ.ಟಿ.ರವಿ ಬಂಧನ

    ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಸಿ.ಟಿ.ರವಿ (C.T.Ravi) ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸಿ.ಟಿ.ರವಿ ಅವರನ್ನು ಬಂಧಿಸಿದ ಹಿರೇಬಾಗೇವಾಡಿ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಂಧನ ಖಂಡಿಸಿ ಪೊಲೀಸ್ ವ್ಯಾನ್ ಹತ್ತಿ ಬಿಜೆಪಿ ಶಾಸಕರು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು. ಇದನ್ನೂ ಓದಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದಬಳಕೆ ಆರೋಪ – ಸಿ.ಟಿ ರವಿ ವಿರುದ್ಧ ಎಫ್‌ಐಆರ್‌

    ಸುವರ್ಣಸೌಧದ ಬಳಿ ತನ್ನ ಮೇಲೆ ಹಲ್ಲೆಗೆ ಮುಂದಾದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಿ.ಟಿ.ರವಿ ಆಕ್ರೋಶ ಹೊರಹಾಕಿದರು. ಬಿಜೆಪಿ ನಾಯಕರೆಲ್ಲರೂ ಸೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಹಲ್ಲೆ ಮಾಡಲು ಬಂದವರು ಗೂಂಡಾಗಳು ಎಂದು ಅಸಮಾಧಾನ ಹೊರಹಾಕಿದರು.

    ಬಿಜೆಪಿ ನಾಯಕರ ಪ್ರತಿಭಟನೆ ವೇಳೆ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಖಾನಾಪುರ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸುವರ್ಣ ಸೌಧದಲ್ಲಿ ಹೈಡ್ರಾಮಾ – ಹೆಬ್ಬಾಳ್ಕರ್‌ ಬೆಂಬಲಿಗರಿಂದ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ, ಏಕವಚನದಲ್ಲೇ ಆವಾಜ್‌!

  • ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದಬಳಕೆ ಆರೋಪ – ಸಿ.ಟಿ ರವಿ ವಿರುದ್ಧ ಎಫ್‌ಐಆರ್‌

    ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದಬಳಕೆ ಆರೋಪ – ಸಿ.ಟಿ ರವಿ ವಿರುದ್ಧ ಎಫ್‌ಐಆರ್‌

    ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ವಿರುದ್ಧ ವಿಧಾನ ಪರಿಷತ್‌ನಲ್ಲಿ ಗುರುವಾರ ಅಶ್ಲೀಲ ಪದಬಳಕೆ ಮಾಡಿದ ಆರೋಪ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

    ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ನೀಡಿದ ದೂರಿನ್ವಯ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 75, 79ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಅಂಬೇಡ್ಕರ್ ಕುರಿತು ನೀಡಿದ್ದಾರೆ ಎನ್ನಲಾದ ಹೇಳಿಕೆ ಸಂಬಂಧ ವಿಧಾನ ಪರಿಷತ್‌ನಲ್ಲಿ ಗುರುವಾರ ಬೆಳಗ್ಗೆ ಕಾಂಗ್ರೆಸ್ ಪ್ರತಿಭಟನೆ (Congress Protest) ನಡೆಸುತ್ತಿದ್ದ ವೇಳೆ ಸಿ.ಟಿ ರವಿ, ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಕುರಿತು ಅವಹೇಳನಕಾರಿ ಪದಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹೆಬ್ಬಾಳ್ಕರ್‌ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ರಾ?

    ಪ್ರಕರಣದ ಸಂಬಂಧ ಕಾಂಗ್ರೆಸ್ ಮುಖಂಡರು ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ. ಸಿ.ಟಿ ರವಿ ಅವರನ್ನು ಸದನದಿಂದ ಅಮಾನತುಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸುವರ್ಣ ಸೌಧದಲ್ಲಿ ಹೈಡ್ರಾಮಾ – ಹೆಬ್ಬಾಳ್ಕರ್‌ ಬೆಂಬಲಿಗರಿಂದ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ, ಏಕವಚನದಲ್ಲೇ ಆವಾಜ್‌!

    ಸಿ.ಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವುದು ಕ್ರಿಮಿನಲ್ ಅಪರಾಧ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಮನಾದುದು ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: Kolar| ಅಪಘಾತದಲ್ಲಿ ಐವರು ಸಾವು – ಮುಳಬಾಗಿಲು ಶಾಸಕನಿಂದ ತಲಾ 20,000 ರೂ. ಆರ್ಥಿಕ ನೆರವು

    ಬಸವರಾಜ ಹೊರಟ್ಟಿ ಭೇಟಿಯಾದ ಡಿಸಿಎಂ, ಸಚಿವರು
    ಸಚಿವರ ವಿರುದ್ಧ ಸಿ.ಟಿ ರವಿ ಅಸಂವಿಧಾನಿಕ ಪದ ಬಳಕೆ ಆರೋಪ ಪ್ರಕರಣ ಸದ್ದು ಮಾಡ್ತಿದ್ದಂತೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಕಾನೂನು ಸಚಿವ ಹೆಚ್.ಕೆ ಪಾಟೀಲ್, ಸಚಿವ ಹಾಗೂ ಪರಿಷತ್‌ನ ಕಾಂಗ್ರೆಸ್ ಸಭಾ ನಾಯಕ ಎನ್‌.ಎಸ್‌ ಬೋಸರಾಜು, ಸಚಿವರಾದ ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಡಗಡಿ, ಡಾ.ಶರಣಪ್ರಕಾಶ್ ಪಾಟೀಲ್, ಹಿರಿಯ ಸದಸ್ಯರಾದ ಬಿ.ಕೆ ಹರಿಪ್ರಸಾದ್, ನಾಗರಾಜ್ ಯಾದವ್, ಉಮಾಶ್ರೀ, ಶಾಸಕಿಯರಾದ ನಯನ ಮೋಟಮ್ಮ, ರೂಪಾ ಶಶಿಧರ್, ಲತಾ ಮಲ್ಲಿಕಾರ್ಜುನ್, ಅನ್ನಪೂರ್ಣ ತುಕಾರಂ ಸೇರಿದಂತೆ ಕಾಂಗ್ರೆಸ್ ಶಾಸಕರು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಸಿ.ಟಿ ರವಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

  • ಸುವರ್ಣ ಸೌಧದಲ್ಲಿ ಹೈಡ್ರಾಮಾ – ಹೆಬ್ಬಾಳ್ಕರ್‌ ಬೆಂಬಲಿಗರಿಂದ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ, ಏಕವಚನದಲ್ಲೇ ಆವಾಜ್‌!

    ಸುವರ್ಣ ಸೌಧದಲ್ಲಿ ಹೈಡ್ರಾಮಾ – ಹೆಬ್ಬಾಳ್ಕರ್‌ ಬೆಂಬಲಿಗರಿಂದ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ, ಏಕವಚನದಲ್ಲೇ ಆವಾಜ್‌!

    ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಎಂಎಲ್‌ಸಿ ಸಿ.ಟಿ ರವಿ (CT Ravi) ಅಸಂವಿಧಾನಿಕ ಪದ ಬಳಕೆ ಆರೋಪದ ಬಗ್ಗೆ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಈ ನಡುವೆ ಸುವರ್ಣ ಸೌಧದಲ್ಲಿ ಭಾರೀ ಹೈಡ್ರಾಮಾ ನಡೆದಿದೆ.

    ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಬೆಂಬಲಿಗರು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ, ಕೆಲವರು ಹಲ್ಲೆಗೂ ಯತ್ನಿಸಿರುವ ದೃಶ್ಯಗಳು ಕಂಡುಬಂದಿವೆ.

    ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ:
    ಸಿ.ಟಿ ರವಿ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ಲಕ್ಷ್ಮಿ ಹೆಬ್ಬಾಳ್ಕರ್‌ ಬೆಂಬಲಿಗರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ರು. ನೂರಾರು ಬೆಂಬಲಿಗರು ಸುವರ್ಣಸೌಧದ ಎದುರು ಜಮಾಯಿಸಿದರು. ಸೌಧದ ಫಸ್ಟ್‌ಫ್ಲೋರ್‌ ಲಾಂಜ್ ಬಳಿ ನಿಂತು ಗಲಾಟೆ ಮಾಡಿದ್ರು. ಸಿ.ಟಿ ರವಿ ವಿರುದ್ಧ ಧಿಕ್ಕಾರ ಕೂಗಿದ್ದಲ್ಲದೇ ಏಯ್‌, ಆಚೆ ಬಾರೋ, ಧೈರ್ಯವಿದ್ದರೆ ಹೊರಗೆ ಬಾ ಎಂದು ಏಕವಚನದಲ್ಲೇ ಆವಾಜ್‌ ಹಾಕಿದ್ರು. ಈ ವೇಳೆ ಒಂದಿಬ್ಬರು ಹಲ್ಲೆಗೂ ಯತ್ನಿಸಿದ ಪ್ರಸಂಗ ನಡೆಯಿತು. ಇದರಿಂದ ಹೆಬ್ಬಾಳ್ಕರ್‌ ಬೆಂಬಲಿಗರ ವಿರುದ್ಧ ಕೆಂಡಾಮಂಡಲರಾದ ಸಿ.ಟಿ ರವಿ ʻಬಾ.. ಬಾ.. ಹೊಡಿ ಬಾ.., ಅದೇನ್‌ ಮಾಡ್ತಾರೆ ಮಾಡ್ಲಿ ಬಿಡ್ರಿ ಎಂದು ಪ್ರತಿ ಸವಾಲು ಹಾಕಿದರು.

    ಅಲ್ಲದೇ ಘಟನೆ ಖಂಡಿಸಿ ಸಿ.ಟಿ ರವಿ, ಅಶ್ವಥ್‌ ನಾರಾಯಣ್‌ ಸ್ಥಳದಲ್ಲೇ ಧರಣಿ ಕುಳಿತರು. ಎಡಿಜಿಪಿ ಮನವೊಲಿಕೆ ಬಳಿಕ ಸಭಾಪತಿಗಳಿಗೆ ದೂರು ನೀಡಲು ಅಲ್ಲಿಂದ ತೆರಳಿದರು. ಬಳಿಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದರು.

  • PUBLiC TV Impact; 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರ

    PUBLiC TV Impact; 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರ

    – 70 ಲಕ್ಷ ರೂ. ಬಿಲ್ ಮನ್ನಾ

    ಬೆಳಗಾವಿ: ಸರ್ಕಾರಿ ನೀರಾವರಿ ಯೋಜನೆಗೆ ಬಳಸಿದ ಬರೊಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ (Siddaganga Mutt) ಕೆಐಎಡಿಬಿ (KIADB) ನೀಡಿದ್ದ ನೋಟಿಸ್ ಅನ್ನು ಸರ್ಕಾರ ವಾಪಸ್ ಪಡೆದಿದೆ.

    ಕರೆಂಟ್ ಬಿಲ್ (Electricity Bill) ಕಟ್ಟುವಂತೆ ಕೆಐಎಡಿಬಿ ಸಿದ್ದಗಂಗಾ ಮಠಕ್ಕೆ ನೋಟಿಸ್ ನೀಡಿದ್ದ ಕುರಿತು ನಿಮ್ಮ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿ ಬಿತ್ತರಿಸಿತ್ತು. ಈ ಕುರಿತು ಸಚಿವ ಎಂ.ಬಿ.ಪಾಟೀಲ್ (MB Patil) ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಇದು ಏಪ್ರಿಲ್‌ನಲ್ಲಿ ಕೊಟ್ಟ ನೋಟಿಸ್. ಕೆಐಡಿಬಿಯ ಒಂದು ಕೆರೆ ಇದೆ. ಆ ಕೆರೆಯಿಂದ ನೀರು ತೆಗೆದುಕೊಂಡಿದ್ದಾರೆ. ನೀರು ಬಳಸಿದ್ದರೂ ಅದು ತಪ್ಪಲ್ಲ. ನೀರೇ ಬಳಸದೆ ನೋಟಿಸ್ ಕೊಟ್ಟಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಯೋಜನೆಗೆ ಸಿದ್ಧಗಂಗಾ ಮಠಕ್ಕೆ `ಕರೆಂಟ್’ ಶಾಕ್ – 70 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ KIADB ಪತ್ರ

    ಕೆರೆಯಿಂದ ನೀರು ಬಳಕೆ ಮಾಡಿರುವುದಕ್ಕೆ ಈ ನೋಟಿಸ್ ಕೊಡಲಾಗಿದೆ. ಆದರೆ ಅದನ್ನು ವಾಪಸ್ ಪಡೆದುಕೊಳ್ಳುತ್ತೇವೆ. ಸಿದ್ದಗಂಗಾ ಮಠ ವಿಶ್ವಕ್ಕೆ ಮಾದರಿಯಾದ ಮಠವಾಗಿದೆ. ಮಕ್ಕಳಿಗೆ ಶಿಕ್ಷಣ, ದಾಸೋಹ ಕೊಡುತ್ತಿರುವ ಮಠವಾಗಿದೆ. ಈ ಬಗ್ಗೆ ಮುಖ್ಯ ಎಂಜಿನಿಯರ್ ಸ್ವಾಮೀಜಿ ಜೊತೆ ಮಾತನಾಡಿದ್ದಾರೆ. ಸಿದ್ದಗಂಗಾ ಮಠ ನೀರನ್ನು ಬಳಸಿಕೊಂಡರೂ ತಪ್ಪಲ್ಲ. ಈ ಕುರಿತಾಗಿ ಸ್ವಾಮೀಜಿ ಜೊತೆಗೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಅಸಮಾಧಾನ – ಉಸ್ತುವಾರಿ ಮಲ್ಲಿಕಾರ್ಜುನ್‌ ಬದಲಾಯಿಸುವಂತೆ ಶಿವಗಂಗಾ ಬಸವರಾಜ್ ಪತ್ರ

    ಒಂದು ವೇಳೆ ನೀರು ಬಳಸದೇ ನೋಟಿಸ್ ಕೊಟ್ಟರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದೆಯೂ ಮಠ ನೀರನ್ನು ಬಳಸಬಹುದು. ಸಿಎಸ್‌ಆರ್ ಲೆಕ್ಕದಲ್ಲಿ ನಾವು ಉಚಿತವಾಗಿಯೇ ನೀರು ಕೊಡುತ್ತೇವೆ. ಮಠ ಯಾವಾಗ ಬೇಕಾದರೂ ನೀರನ್ನು ಬಳಸಿಕೊಳ್ಳಬಹುದು. ಈಗ ಬಳಸಿಕೊಂಡಿದ್ದರೂ ತಪ್ಪಲ್ಲ, ಮುಂದೆಯು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Bengaluru | ಐಐಎಸ್‌ಸಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ನಾಪತ್ತೆ

  • ಮುಡಾ ರದ್ದಾಗಿ ಹೊಸದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

    ಮುಡಾ ರದ್ದಾಗಿ ಹೊಸದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

    ಬೆಳಗಾವಿ: ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಈಗಿನ ಮುಡಾ ರದ್ದಾಗಿ ಹೊಸದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅವಕಾಶ ಕೊಡುವ ವಿಧೇಯಕ ಇದಾಗಿದೆ.

    ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಿದೇಯಕವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

    ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರಕ್ಕೂ ಮುನ್ನ ಚರ್ಚೆ ನಡೆಯಿತು. ವಿಧೇಯಕವನ್ನು ಶಾಸಕ ಎಸ್.ಟಿ.ಸೋಮಶೇಖರ್ ಸ್ವಾಗತಿಸಿದರು. ಬೈರತಿ ಸುರೇಶ್ ಮಾತನಾಡಿ, ಈ ವಿಧೇಯಕ ಸಮಂಜಸವಾಗಿದೆ ಎಂದರು.

    ಜಿ.ಟಿ.ದೇವೇಗೌಡ ಮಾತನಾಡಿ, ಮುಡಾದಲ್ಲಿ ಹೆಚ್ಚು ಶಾಸಕರು ಇಲ್ಲ. ಹೊಸ ಪ್ರಾಧಿಕಾರದಲ್ಲಿ ಶಾಸಕರನ್ನು ಸದಸ್ಯರಾಗಿ ಮಾಡಿ. ತಜ್ಞರ ಸಮಿತಿ ಮಾಡಿ. ಮೈಸೂರು ನಗರಾಭಿವೃದ್ಧಿ ಪ್ಲಾನಿಂಗ್ ಅಧೋಗತಿಗೆ ಹೋಗಿದೆ. ತಜ್ಞರ ಸಮಿತಿ ಮಾಡಿ ವಿಧೇಯಕದಲ್ಲಿ ಸೇರಿಸಿ ಎಂದು ಸಲಹೆ ನೀಡಿದರು.

    ಆಡಳಿತಾತ್ಮಕ ವಿವರಣೆ ಇಲ್ಲ, ಆರ್ಥಿಕ ವೆಚ್ಚ ಎಷ್ಟಾಗುತ್ತೆ ಅಂತ ಇದರಲ್ಲಿ ಇಲ್ಲ. ಅದರ ಬಗ್ಗೆ ತಿಳಿಸಿ ಎಂದು ಸುನೀಲ್ ಕುಮಾರ್ ಕೇಳಿದ್ದರು.

  • ದೇಶಿಯ ಕುರಿ ತಳಿ ಸಂರಕ್ಷಣೆ ಮಾಡಲು ವಿಶೇಷ ಅನುದಾನ ಕೊಡಿ – ಯತೀಂದ್ರ ಸಿದ್ದರಾಮಯ್ಯ

    ದೇಶಿಯ ಕುರಿ ತಳಿ ಸಂರಕ್ಷಣೆ ಮಾಡಲು ವಿಶೇಷ ಅನುದಾನ ಕೊಡಿ – ಯತೀಂದ್ರ ಸಿದ್ದರಾಮಯ್ಯ

    ಬೆಂಗಳೂರು: ದೇಶಿಯ ಕುರಿ ತಳಿ ಸಂರಕ್ಷಣೆ ಮಾಡಲು ರೈತರಿಗೆ ಉಚಿತವಾಗಿ ದೇಶಿ ತಳಿ ಕುರಿಗಳನ್ನ ಸರ್ಕಾರ ನೀಡಬೇಕು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹಿಸಿದರು.ಇದನ್ನೂ ಓದಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಲವಾರು ದೇಶಿಯ ಕುರಿ ತಳಿಗಳು ವಿನಾಶದ ಅಂಚಿನಲ್ಲಿವೆ. ದೇಶಿ ಕುರಿ ತಳಿಗಳ ಸಂರಕ್ಷಣೆಗೆ ಸಾಕಷ್ಟು ಮೂಲಭೂತ ಸೌಕರ್ಯಗಳು ಮತ್ತು ಕುರಿಗಾಹಿಗಳಿಗೆ ಸಹಾಯ ಧನದ ಅವಶ್ಯಕತೆ ಇದೆ. ಇದಕ್ಕಾಗಿ 5 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು. ಅಲ್ಲದೆ ಉಚಿತವಾಗಿ ರೈತರಿಗೆ ದೇಶಿ ತಳಿ ಕೊಡಬೇಕು ಎಂದು ಒತ್ತಾಯಿಸಿದರು.

    ಇದಕ್ಕೆ ಸಚಿವ ವೆಂಕಟೇಶ ಉತ್ತರ ನೀಡಿ, 2019ರ ಜಾನುವಾರು ಗಣತಿ ಪ್ರಕಾರ ರಾಜ್ಯದಲ್ಲಿ 110.51 ಲಕ್ಷ ಕುರಿಗಳು ಹಾಗೂ 61.69 ಲಕ್ಷ ಮೇಕೆಗಳು ಇವೆ. ಮಂಡ್ಯ, ಹಾಸನ, ಕೆಂಗುರಿ, ಬಳ್ಳಾರಿಯಲ್ಲಿ ಡೆಕನಿ, ಯಳಗ ಕುರಿ ತಳಿಗಳು ಮತ್ತು ನಂದಿದುರ್ಗ, ಬಿದರಿ ಮೇಕೆ ತಳಿಗಳು ಇವೆ. ರಾಜ್ಯದಲ್ಲಿ ವಿನಾಶದ ಅಂಚಿನಲ್ಲಿ ಇರುವ ದೇಶಿಯ ಕುರಿ ತಳಿ ಸಂರಕ್ಷಣೆಗಾಗಿ 5 ಕಡೆ ಕುರಿ/ಮೇಕೆ ತಳಿ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ರೈತರಿಗೆ ರಿಯಾಯಿತಿ ದರದಲ್ಲಿ ಮೇಕೆ, ಕುರಿ ತಳಿಗಳನ್ನು ಕೊಡಲಾಗುತ್ತಿದೆ. ವಿಶೇಷ ಅನುದಾನ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.ಇದನ್ನೂ ಓದಿ: ಜಮ್ಮು ಕಾಶ್ಮೀರದ ಕಥುವಾದಲ್ಲಿ ಮನೆಗೆ ಬೆಂಕಿ – ಮಾಜಿ ಡಿಎಸ್‌ಪಿ ಸೇರಿ 6 ಮಂದಿ ಸಾವು

  • ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರ ಸಾವು – ದಿನೇಶ್ ಗುಂಡೂರಾವ್ ಉತ್ತರ

    ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರ ಸಾವು – ದಿನೇಶ್ ಗುಂಡೂರಾವ್ ಉತ್ತರ

    – ಬ್ಲಾಕ್‌ಲಿಸ್ಟ್ ಕಂಪನಿಯಿಂದ ಔಷಧಿ ಸರಬರಾಜು – ಮೆಡಿಕಲ್ ಮಾಫಿಯಾ ಎಂದ ಅಶೋಕ್

    ಬೆಳಗಾವಿ: ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ ಎಂದು ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಪ್ರತಿಕ್ರಿಯಿಸಿದ್ದಾರೆ.

    ಪರಿಷತ್‌ನಲ್ಲಿ ಮಾತನಾಡಿದ ಅವರು, ನ.11ರಂದು ಬಳ್ಳಾರಿ (Ballary) ಆಸ್ಪತ್ರೆಯಲ್ಲಿ ತಾಯಂದಿರ ಸಾವು ವರದಿಯಾಗಿದೆ. 34 ಸಿಸೇರಿಯನ್ ಆಪರೇಷನ್‌ನಲ್ಲಿ 7 ಪ್ರಕರಣಗಳಲ್ಲಿ ತೊಂದರೆ ಆಗಿದೆ. ಮೂತ್ರಪಿಂಡ ತೊಂದರೆ, ಬಹು ಅಂಗಾಂಗ ವೈಫಲ್ಯತೆದಿಂದ 7 ಪ್ರಕರಣಗಳಲ್ಲಿ 5 ಬಾಣಂತಿಯರು ಸಾವಿಗೀಡಾಗಿದ್ದಾರೆ. 2 ಬಾಣಂತಿಯರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಿಂಗರ್ ಲ್ಯಾಕ್ವೆಟ್ ದ್ರಾವಣ ಮಾದರಿ ಪರೀಕ್ಷೆಯಲ್ಲಿ ನಿರ್ಲಕ್ಷ್ಯತೆ ತೋರಿರುವ ಔಷಧಿ ನಿಯಂತ್ರಕರಾದ ಡಾ.ಉಮೇಶ್‌ರನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಸ್ಪೇಸ್‌ನಲ್ಲೇ ಕ್ರಿಸ್ಮಸ್ ಸಂಭ್ರಮ – ಸಾಂತಾಕ್ಲಾಸ್ ಆದ ಸುನಿತಾ ವಿಲಿಯಮ್ಸ್!

    ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಡ್ರಗ್ ಕಂಪನಿ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಡ್ರಗ್ ಕಂಟ್ರೋಲರ್ ಜನರ್ ಅಫ್ ಇಂಡಿಯಾಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

    ಇದೇ ವೇಳೆ ಸಚಿವರು ಉತ್ತರ ನೀಡುತ್ತಿದ್ದಂತೆ ಛಲವಾದಿ ನಾರಾಯಣಸ್ವಾಮಿ, ಸಿಟಿ ರವಿ ಮಾತನಾಡಿ, ಬ್ಲ್ಯಾಕ್‌ ಲಿಸ್ಟ್‌ಗೆ ಹಾಕಿದ ಕಂಪನಿಯಿಂದ ಹೇಗೆ ಸಪ್ಲೈ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಜೊತೆಗೆ ವಿಧಾನಸಭೆಯಲ್ಲಿ ಆರ್.ಅಶೋಕ್ ಮಾತನಾಡಿ, ಇದು ಮೆಡಿಕಲ್ ಮಾಫಿಯಾ, ಬಾಣಂತಿಯರ ಸಾವಿಗೆ ಸರ್ಕಾರ ಕಾರಣ ಎಂದು ಕಿಡಿಕಾರಿದರು.ಇದನ್ನೂ ಓದಿ: NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್‌

  • ಔತಣಕೂಟ ಮಾಡಿ ಬೆನ್ನಿಗೆ ಚಾಕು ಹಾಕೋದಲ್ಲ, ಇದ್ರಲ್ಲಿ ಬಿಎಸ್‌ವೈ ಕುತಂತ್ರ ಇದ್ದೇ ಇರುತ್ತೆ – ಯತ್ನಾಳ್ ಕಿಡಿ

    ಔತಣಕೂಟ ಮಾಡಿ ಬೆನ್ನಿಗೆ ಚಾಕು ಹಾಕೋದಲ್ಲ, ಇದ್ರಲ್ಲಿ ಬಿಎಸ್‌ವೈ ಕುತಂತ್ರ ಇದ್ದೇ ಇರುತ್ತೆ – ಯತ್ನಾಳ್ ಕಿಡಿ

    ಬೆಳಗಾವಿ: ಔತಣಕೂಟ ಮಾಡಿ ಬೆನ್ನಿಗೆ ಚಾಕು ಹಾಕುವುದು ಅಲ್ಲ. ಇದರ ಹಿಂದೆ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರ ಕುತಂತ್ರ ಇದ್ದೇ ಇರುತ್ತದೆ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದರು.

    ಬೆಳಗಾವಿಯಲ್ಲಿಂದು (Belagavi) ಉಭಯ ನಾಯಕರ ಚರ್ಚೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮತ್ತು ಮಾಜಿ ಸಿಎಂ ಬಿಎಸ್‌ವೈ ವಿರುದ್ಧ ಮತ್ತೆ ಹರಿಹಾಯ್ಡರು. ವಿಜಯೇಂದ್ರ ಔತಣಕೂಟಕ್ಕೆ ಆಹ್ವಾನಿಸಿದ್ದರು, ನಾನು ಹೋಗಿಲ್ಲ, ರಮೇಶ್ ಜಾರಕಿಹೊಳಿ ಸಹ ಹೋಗಲ್ಲ. ಇಲ್ಲಿ ಕರೆಯುತ್ತಾರೆ, ಆದ್ರೆ ದಾವಣಗೆರೆಯಲ್ಲಿ ಅವರ ಚೇಲಾಗಳನ್ನು ಬಿಟ್ಟು ಯಡಿಯೂರಪ್ಪ, ವಿಜಯೇಂದ್ರ ನಿರಂತರವಾಗಿ ಅಲ್ಲಿನ ಸಭೆಗಳನ್ನ ಮಾನಿಟರ್ ಮಾಡುತ್ತಿದ್ದಾರೆ. ಅವರ ಗನ್ ಮ್ಯಾನ್‌ಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಔತಣಕೂಟಕ್ಕೆ ಕರೆದು, ಬೆನ್ನಿಗೆ ಚಾಕು ಹಾಕುವುದು ಅಲ್ಲ. ನಾವು ಉತ್ತರ ಕರ್ನಾಟಕದವರು ಆ ರೀತಿ ಮಾಡಲ್ಲ. ಏನಿದ್ದರೂ ಏಕ್ ಮಾರ್ ದೋ ತುಕ್ಡಾ, ಎದುರಿಗೇ ಮಾತನಾಡ್ತೀವಿ ಎಂದು ಹೇಳಿದರು.ಇದನ್ನೂ ಓದಿ: ಮುರುಡೇಶ್ವರದಲ್ಲಿ ವಿದ್ಯಾರ್ಥಿನಿಯರ ದುರ್ಮರಣ – ಕುಟುಂಬಸ್ಥರಿಗೆ ಶಾಸಕ ಸಮೃದ್ಧಿ ಮಂಜುನಾಥ್ ಸಾಂತ್ವನ

    ಯತ್ನಾಳ್ ಉಚ್ಚಾಟನೆ ಮಾಡಿ ಎಂದು ಯಡಿಯೂರಪ್ಪ ಸೇರಿ ಕೆಲ ಶಾಸಕರು ಮಾತಾಡಿದ್ದನ್ನು ಸ್ವತಃ ಮಾಜಿ ಶಾಸಕರೇ ನಮಗೆ ಮಾಹಿತಿ ನೀಡಿದ್ದಾರೆ. ಇವರು ವಯೋವೃದ್ಧ, ಯತ್ನಾಳ್ ನಮ್ಮವರೇ ಕೂತು ಬಗೆಹರಿಸಿಕೊಳ್ಳುತ್ತೀವಿ ಎನ್ನುತ್ತಾರೆ. ಇದರ ಹಿಂದೆ ಯಡಿಯೂರಪ್ಪ ಕುತಂತ್ರ ಯಾವಾಗಲೂ ಇದ್ದೇ ಇರುತ್ತದೆ. ಹಿಂದೆಯೂ ವಿಜಯೇಂದ್ರ ಇದೇ ರೀತಿ ಹೇಳಿಕೆ ಕೊಟ್ಟಿದ್ದ. ಯತ್ನಾಳ್ ವಿಪಕ್ಷ ನಾಯಕ, ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷರಾಗೋಕೆ ನಮ್ಮದೇನು ತಕರಾರು ಇಲ್ಲ ಅಂದಿದ್ದರು. ಆದರೇ ಎರಡೇ ದಿನಕ್ಕೆ ರಾಜ್ಯಾಧ್ಯಕ್ಷರ ಘೋಷಣೆ ಆಯ್ತು. ಇವರು ಮ್ಯಾನೇಜ್ ಮಾಡುತ್ತಾರೆ, ಯಡಿಯೂರಪ್ಪರ ಈ ಹೇಳಿಕೆ ಹಿಂದೆ ದೊಡ್ಡ ಮ್ಯಾನೇಜ್ಮೆಂಟ್ ಇದೆ. ಆಮೇಲೆ ನಾವು ಮಾಡಿಲ್ಲ, ಹೈಕಮಾಂಡ್ ಮಾಡಿದೆ. ನಾನು ನಮ್ಮ ಮಗ ಇಬ್ಬರೂ ಪ್ರಾಮಾಣಿಕರು ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.

    ಸಭೆ ಮಾಡಿದ್ದಕ್ಕೆ ನನ್ನ ಮೇಲೆ ಬಹಳ ವಿರೋಧ ಇದೆ ಎಂದು ವಿಜಯೇಂದ್ರ ಹೇಳುತ್ತಾನೆ. ಇವರದ್ದು ನಾಟಕದ ಕಂಪನಿ ಎಂದು ಗೊತ್ತಾಗುವುದಿಲ್ವಾ? ನಾವು 35-40 ವರ್ಷದಿಂದ ಯಡಿಯೂರಪ್ಪ ಜೊತೆಗೆ ಜೀವನ ಮಾಡಿದ್ದಲ್ವಾ? ಯಡಿಯೂರಪ್ಪ ಒಬ್ಬರೇ ಬಿಜೆಪಿ ಕಟ್ಟಿದ್ದಾರಾ? ನಾವೇ ಪೆಟ್ರೋಲ್ ಹಾಕಿ ಬಸ್‌ಗೆ ಟಿಕೆಟ್ ಕೊಡಿಸಿ ಕಳುಹಿಸಿ ಕೊಟ್ಟಿದ್ದಿವಿ. ಈಗ ಅವರ ಶಿಷ್ಯಂದಿರು ನಮಗೆ ಸೈಕಲ್ ಹೊಡೆದದ್ದು ಹೇಳುತ್ತಾರೆ. ಪಕ್ಷದಲ್ಲಿ ಸಂಘಟನೆ ಮಾಡಬೇಕಿದ್ದರೆ ದಾವಣಗೆರೆ ಸಭೆ ಮಾಡುತ್ತಿರಲಿಲ್ಲ. ಸ್ವತಃ ಯಡಿಯೂರಪ್ಪ ಮನೆಯಲ್ಲೇ ಭಿನ್ನಮತಿಯರ ಸಭೆ ಆಗುತ್ತದೆ. ರಾಜ್ಯಾಧ್ಯಕ್ಷ ಆ ಸಭೆಯಲ್ಲಿ ಪಾಲ್ಗೊಳ್ಳುತ್ತಾನೆ, ಇದು ಗುಂಪಿನ ನಾಯಕ ಎಂದು ಆಗ್ರಹಿಸಿದರು.

    ನಾವು ಯಾವುದೇ ಜನ್ಮದಿನ ಹುಟ್ಟು ಹಬ್ಬ, ಪುಣ್ಯತಿಥಿ ಆಚರಣೆ ಮಾಡುವ ಕಾರ್ಯಕರ್ತರಲ್ಲ. ಹುಟ್ಟುಹಬ್ಬವನ್ನ ಅವರವರ ಮನೆಯಲ್ಲಿ ಮಾಡಿಕೊಳ್ಳಲಿ. ನಾನು ನನ್ನ ಸ್ವಂತ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳಲ್ಲ. ಮೊನ್ನೆ ನನ್ನ ಹುಟ್ಟುಹಬ್ಬದಂದು ಬೆಳಗ್ಗೆ 10ಕ್ಕೆ ಸದನದ ಒಳಗೆ ಹೋದರೆ ರಾತ್ರಿ 10ಕ್ಕೆ ಮನೆಗೆ ಹೋಗಿದ್ದೀನಿ. ಯಾರೋ ಒಬ್ಬ ಬಂದು ಹಾರ ಹಾಕಿದ. ಹುಟ್ಟುಹಬ್ಬ ಮಾಡಿಕೊಳ್ಳುವುದು ಜಿಲ್ಲಾ ಪಂಚಾಯತ್ ಚುನಾವಣೆಗೆ ಅನುಕೂಲ ಆಗುತ್ತದೆ ಎನ್ನುವುದೇನು ಇಲ್ಲ. ನಾವು ವಕ್ಫ್ ವಿಚಾರವಾಗಿ ಹೋರಾಟ ಮಾಡುತ್ತೇನೆ. ವಕ್ಫ್ನ ದೇಶದ್ಯಾಂತ ಕಿತ್ತು ಹಾಕಬೇಕು. ನಾವೂ ದಾವಣಗೆರೆಯಲ್ಲಿ ಸಮಾವೇಶ ಮಾಡ್ತೀವಿ. ಅವರ ಸಮಾವೇಶ ಮುಗಿದು ಒಂದು ವಾರದೊಳಗೆ ನಾವೂ ಸಮಾವೇಶ ಮಾಡ್ತೀವಿ. ನಮ್ಮ ಶಕ್ತಿ ಏನೂ ಅನ್ನೋದು ಅವರಿಗೆ ತೋರಿಸುತ್ತೇವೆ. ನಮ್ಮದು ಜನ ಶಕ್ತಿ, ಜನಪರ ಹೋರಾಟ. ಹುಟ್ಟುಹಬ್ಬದ ಹೋರಾಟ ಪುಣ್ಯ ತಿಥಿ ಹೋರಾಟ ಅಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಪಕ್ಷದ ಆಂತರಿಕ ವಿಚಾರ ನಾನು ಹೇಳುವುದಿಲ್ಲ. ಆದರೆ ಯಡಿಯೂರಪ್ಪ ಏನು ನಡೆಸಿದ್ದಾರೆಂಬ ಮಾಹಿತಿ ನಿಮಗೆ ಕೊಟ್ಟಿದ್ದೇನೆ. ಯಾವುದೇ ಮಾಜಿ ಶಾಸಕನ ಬಳಿ ಮಾತುಕತೆ ನಡೆಸಿಲ್ಲ ಎಂದು ಯಡಿಯೂರಪ್ಪ ಹೇಳಿಕೆ ಕೊಡಲಿ ನೋಡೋಣ ಎಂದು ಹೇಳಿದರು.

    ಮಾಣಿಪ್ಪಾಡಿ ಆರೋಪದ ಬಗ್ಗೆ ಮಾತನಾಡಿ, ಅನ್ವರ್ ಮಾಣಿಪ್ಪಾಡಿ ಪ್ರಕರಣವನ್ನು ಸಿಬಿಐಗೆ ಕೊಡಲಿ ಎನ್ನುವುದೇ ನಮ್ಮ ವಾದ. ಒಬ್ಬ ಸಿಎಂ ಆಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಳುತ್ತಾರೆ. ಸಾಕ್ಷಿ ಇದ್ದರೆ ಬಿಡುಗಡೆ ಮಾಡಲಿ. ಸಿಎಂ ಹತಾಶರಾಗಿದ್ದಾರೆ, ಬಿಜೆಪಿಯವರನ್ನ ಸಿಲುಕಿಸಬೇಕು ಎಂದುಕೊಂಡಿದ್ದಾರೆ. ತಾವೇ ಕೆಲವು ಜನಾಂಗದವರನ್ನ ಪ್ರಚೋದನೆ ಮಾಡುತ್ತಿದ್ದಾರೆ. ಆದರೆ ಈಗ ಬಿಜೆಪಿ ಮೇಲೆ ಸಿಎಂ ಸಿದ್ದರಾಮಯ್ಯಗೆ ಭಯ ಬಂದಿದೆ. ಸಿಬಿಐಗೆ ಪತ್ರ ಬರೆಯಲಿ, ಅವರೇ ತನಿಖೆ ಮಾಡುತ್ತಾರೆ. ನಿನ್ನೆ ಸದನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮುಖ ನೋಡಬಾರದಿತ್ತು. ವೀಡಿಯೋ ಅಂದಿದ್ದರೂ, ಆದರೆ ಆಡಿಯೋ ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.ಇದನ್ನೂ ಓದಿ: `ಒಂದು ದೇಶ ಒಂದು ಚುನಾವಣೆ’ ಜಾರಿ ಅಗತ್ಯವಿದೆ – ಮಸೂದೆಗೆ ರಾಜ್ಯ ಬಿಜೆಪಿ ಸಂಸದರ ಬೆಂಬಲ

  • ಬೆಳಗಾವಿ ಅಧಿವೇಶನ- ಒಂದೇ ದಿನ 15 ಗಂಟೆ ವಿಧಾನಸಭಾ ಕಲಾಪ

    ಬೆಳಗಾವಿ ಅಧಿವೇಶನ- ಒಂದೇ ದಿನ 15 ಗಂಟೆ ವಿಧಾನಸಭಾ ಕಲಾಪ

    – ಬೆಳಗ್ಗೆ 10:40ಕ್ಕೆ ಆರಂಭ ಮಧ್ಯರಾತ್ರಿ 12:53ಕ್ಕೆ ಅಂತ್ಯ

    ಬೆಳಗಾವಿ: ಸೋಮವಾರ ಸುವರ್ಣ ಸೌಧದಲ್ಲಿ (Suvarna Soudha) ನಡೆದ ವಿಧಾನಸಭಾ (Vidhasbaha) ಕಲಾಪ ಬಹುತೇಕ 15 ಗಂಟೆಗಳ ಕಾಲ ನಡೆದಿದೆ. ಬೆಳಗ್ಗೆ 10:40ಕ್ಕೆ ಆರಂಭವಾದ ಕಲಾಪ ಮಧ್ಯರಾತ್ರಿ 12.53ರವರೆಗೆ ನಡೆಯಿತು. ಮಧ್ಯ ರಾತ್ರಿ 1 ಗಂಟೆವರೆಗೆ ವರೆಗೆ ಒಟ್ಟಾಗಿ ಸ್ಪೀಕರ್ ಹಾಗೂ ಡೆಪ್ಯೂಟಿ ಸ್ಪೀಕರ್ ಕಲಾಪ ನಡೆಸಿದರು.

    ಬೆಳಗಾವಿಯಲ್ಲಿ 10 ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನ ಕನ್ನಡಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ 9 ದಿನಕ್ಕೆ ಮೊಟಕುಗೊಳಿಸಲಾಗಿದೆ. ಇದರ ಜೊತೆ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನದಿಂದಾಗಿ ಕಳೆದ ಮಂಗಳವಾರ ಇಡೀ ದಿನ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಿತ್ತು. ಬುಧವಾರ ಸರ್ಕಾರಿ ರಜೆ ಘೋಷಣೆಯಿಂದಾಗಿ ಕಲಾಪ ನಡೆಯಲಿಲ್ಲ. ಹೀಗಾಗಿ ಅಧಿವೇಶನ 8 ದಿನಕ್ಕೆ ಇಳಿಕೆಯಾಗಿತ್ತು.

    ವಿಧಾನಸಭೆಯ ಕಲಾಪವನ್ನು ಪೂರ್ಣಗೊಳಿಸುವ ಉದ್ದೇಶದಿಂದಾಗಿ ಕಳೆದ ಗುರುವಾರ ರಾತ್ರಿ 10:15ರವರೆಗೆ ನಡೆಸಲಾಗಿತ್ತು. ಸೋಮವಾರ ಈ ಅವಧಿಯನ್ನೂ ಮೀರಿ ಬೆಳಗ್ಗೆ 10: 40ಕ್ಕೆ ಆರಂಭವಾದ ಕಲಾಪ ಮಧ್ಯರಾತ್ರಿ 12:53 ವರೆಗೂ ನಡೆಸಲಾಯಿತು. ಮಧ್ಯಾಹ್ನ ಭೋಜನ ವಿರಾಮ ಮತ್ತು ಸಂಜೆ ಕಲಾಪದಲ್ಲಿ ನಡೆದ ಗದ್ದಲದಿಂದಾಗಿ 30 ನಿಮಿಷ ಕಲಾಪ ಮುಂದೂಡಿಕೆಯಾಗಿದ್ದು ಬಿಟ್ಟರೆ ದಿನದಲ್ಲಿ 12 ಗಂಟೆ ಕಲಾಪ ನಡೆಯಿತು. ಇದನ್ನೂ ಓದಿ: ಹಾವು ಕಡಿತಕ್ಕೆ ಮುಕ್ತಿ ನೀಡಲು ಸರ್ಕಾರ ಬದ್ಧ – ಚಿಕಿತ್ಸಾ ವ್ಯವಸ್ಥೆ ಸಮಪರ್ಕ ಜಾರಿಗೆ ರಾಜ್ಯಗಳಿಗೆ ಸೂಚನೆ!

    ಕೆಲ ಶಾಸಕರು ಕಲಾಪದಿಂದ ಹೊರಗು ತೆರಳಲು ಮುಂದಾದಾಗ ಸ್ಪೀಕರ್‌ ಅರ್ಧಗಂಟೆಯಲ್ಲಿ ಮುಗಿಯುತ್ತದೆ ಎಂದು ಹೇಳಿ ಕೂರಿಸುತ್ತಿದ್ದರು. ಅಧ್ಯಕ್ಷರೇ ಬಹಳ ಸಮಯ ಆಯ್ತು ಎಂದು ಕೆಲ ಶಾಸಕರು ಹೇಳಿದಾಗ, ಕ್ರಿಕೆಟ್‌ ಪಂದ್ಯ ಇದ್ದಾಗ ರಾತ್ರಿಯವರೆಗೆ ನೀವು ಕುಳಿತು ವೀಕ್ಷಣೆ ಮಾಡುತ್ತೀರಿ ಅಲ್ವೇ? ಅದೇ ರೀತಿಯಾಗಿ ಇಲ್ಲೂ ಕುಳಿತುಕೊಳ್ಳಿ ಎಂದು ಹೇಳಿ ಸಮ್ಮನಾಗಿಸುತ್ತಿದ್ದರು.

    ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಶಾಸಕರು ಬೆಂಬಲ ನೀಡಿದ್ದರಿಂದ ಕಲಾಪ ಮಧ್ಯರಾತ್ರಿಯವರೆಗೂ ನಡೆಯಿತು.