Tag: belagavi

  • ಸಿಕ್ಕ-ಸಿಕ್ಕ ಹುಡುಗಿಯರ ಜೊತೆ ಚೆಲ್ಲಾಟ – ಪತಿ ಬಣ್ಣ ಬಯಲು ಮಾಡಿದ ಸತಿ

    ಸಿಕ್ಕ-ಸಿಕ್ಕ ಹುಡುಗಿಯರ ಜೊತೆ ಚೆಲ್ಲಾಟ – ಪತಿ ಬಣ್ಣ ಬಯಲು ಮಾಡಿದ ಸತಿ

    ಬೆಳಗಾವಿ: ಸಿಕ್ಕ-ಸಿಕ್ಕ ಹುಡುಗಿಯರ ಮೊಬೈಲ್ ನಂಬರ್ ಸಿಕ್ಕರೆ ಸಾಕು ಮೆಸೇಜ್ ಮೂಲಕ ಪರಿಚಯ ಮಾಡಿಕೊಂಡು ಪ್ರೀತಿ, ಪ್ರೇಮದ ನಾಟಕವಾಡುತ್ತಿದ್ದ ಪತಿ ಬಣ್ಣವನ್ನು ಪತ್ನಿಯೇ ಈಗ ಬಯಲು ಮಾಡಿದ್ದಾರೆ.

    ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಿವಾಸಿ ಧರೆಪ್ಪ ಕಂಕಣವಾಡಿ ಪತ್ನಿಗೆ ಮೋಸ ಮಾಡಿದ ವ್ಯಕ್ತಿ. ಈತನಿಗೆ ಹುಡುಗಿಯರ ಮೊಬೈಲ್ ನಂಬರ್ ಸಿಕ್ಕರೆ ಸಾಕು ಚಾಟಿಂಗ್ ಆರಂಭಿಸುತ್ತಿದ್ದ. ಬಳಿಕ ಪರಿಚಯ ಮುಂದುವರಿಸಿ ಪ್ರೀತಿ ಪ್ರೇಮದ ನಾಟಕವಾಡಿ ಮೊಬೈಲಿನಲ್ಲಿ ರೋಮ್ಯಾಂಟಿಕ್ ಆಗಿ ಫೋಟೋ ತೆಗೆದುಕೊಂಡು ಪೆನ್ ಡ್ರೈವ್ ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದನು. ಹೀಗೆ ಕದ್ದು ಮುಚ್ಚಿ ನಡೆಯುತ್ತಿದ್ದ ಈತನ ಕಳ್ಳಾಟ ಕೊನೆಗೂ ಹೆಂಡತಿ ಮುಂದೆ ಬಯಲಾಗಿದೆ.

    ಫೋಟೋ ನೋಡಿ ಶಾಕ್:
    ಗಂಡನ ಮೊಬೈಲ್ ಹಾಗೂ ಪೆನ್‍ಡ್ರೈವ್ ನೋಡಿದಾಗ ಬೇರೆ ಹುಡುಗಿಯರೊಂದಿಗೆ ಇರುವ ಫೋಟೊಗಳು, ಕಾಲ್ ರೆಕಾರ್ಡಿಂಗ್ಸ್, ವಾಟ್ಸಪ್ ಸ್ಕ್ರೀನ್ ಶಾಟ್ ನೋಡಿ ಪತ್ನಿ ಶಾಕ್ ಆಗಿದ್ದಾರೆ. ಫೋಟೋಗಳು, ಕಾಲ್ ರೆಕಾರ್ಡಿಂಗ್ಸ್, ವಾಟ್ಸಪ್ ಸ್ಕ್ರೀನ್ ಶಾಟ್ಸ್ ಸಂಗ್ರಹಿಸಿಟ್ಟು ಹುಡುಗಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನಾ ಎಂಬ ಅನುಮಾನ ಪತ್ನಿಗೆ ಮೂಡಿದೆ.

    ಪ್ರೀತಿಸಿ ಮದ್ವೆಯಾಗಿದ್ದ:
    ಧರೆಪ್ಪ ಕಂಕಣವಾಡಿ ಇಂದಿರಾಳನ್ನ 2011ರಲ್ಲಿ ಪ್ರೇಮ ವಿವಾಹವಾಗಿದ್ದನು. ಇಂದಿರಾ ಅವರಿಗೂ ಮೆಸೇಜ್ ಮಾಡಿ ಪರಿಚಯ ಮಾಡಿಕೊಂಡು, ಲವ್ ಮಾಡಿ ಮದುವೆ ಮಾಡಿಕೊಂಡಿದ್ದನು. ಇಂದಿರಾ ಮನೆಯವರ ವಿರೋಧದ ನಡುವೆಯೂ ತಮ್ಮ ಮನೆಯವರನ್ನ ಒಪ್ಪಿಸಿ ವಿವಾಹವಾಗಿದ್ದರು. ಆದರೆ ಪತ್ನಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಕಳ್ಳಾಟ ಶುರುವಿಟ್ಟುಕೊಂಡಿದ್ದನು. ಈ ಕಳ್ಳಾಟದ ವಿಷಯ ಮದುವೆಯಾಗಿ ಆರು ವರ್ಷಕ್ಕೆ ಬಯಲಾಗಿದೆ.

    ಹಣ ನೀಡಿದ್ದ ಪತ್ನಿ:
    ಕೆಲಸವೇ ಇಲ್ಲದೇ ಅಲೆಯುತ್ತಿದ್ದ ಧರೆಪ್ಪನಿಗೆ ಧಾರವಾಡದ ಜಿಲ್ಲಾಸ್ಪತ್ರೆಗೆ ಲ್ಯಾಬ್ ಟೆಕ್ನಿಶಿಯನ್ ಕೋರ್ಸ್ ಗೆ ನಾನು ಕಳುಹಿಸಿದ್ದೆ. ಇತನ ಸಂಪೂರ್ಣ ಖರ್ಚು ವೆಚ್ಚಕ್ಕೆ ಎಂದು ತಿಂಗಳಿಗೆ 10 ಸಾವಿರ ಹಣ ನೀಡುತ್ತಿದ್ದೆ. ಆದರೆ ನಾನು ಕಳುಹಿಸಿದ್ದ ಹಣದಲ್ಲಿ ಪರಸ್ತ್ರೀಯರೊಂದಿಗೆ ಮಜಾ ಮಾಡುತ್ತಿದ್ದನು. ಹುಡುಗಿಯರೊಂದಿಗೆ ಎಲ್ಲೆಂದರಲ್ಲಿ ಸುತ್ತಾಡಿ ಅವರೊಟ್ಟಿಗೆ ತೀರಾ ಖಾಸಗಿಯಾಗಿ ಫೋಟೋಗಳನ್ನ ತೆಗೆದಿಟ್ಟುಕೊಂಡಿದ್ದಾನೆ. ಇವುಗಳನ್ನ ನೋಡಿ ನನಗೆ ಶಾಕ್ ಆಯಿತು. ಅಂದಿನಿಂದ ನಾನು ಆತನಿಗೆ ಹಣ ಕೊಡುವುದನ್ನು ನಿಲ್ಲಿಸಿದೆ. ಇದರಿಂದ ನನ್ನ ಜೊತೆಗೆ ಮೇಲಿಂದ ಮೇಲೆ ಜಗಳವಾಡಿಕೊಂಡು, ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಇಂದಿರಾ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.

    ಇಂದಿರಾ ಕೊನೆಗೆ ಬೇಸತ್ತು ನವೆಂಬರ್ 26ರಂದು ಪತಿ ಧರೆಪ್ಪನ ವಿರುದ್ಧ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ್ದಕ್ಕೆ ಕೋಪಗೊಂಡ ಧರೆಪ್ಪ ಹಾಗೂ ಆತನ ಕುಟುಂಬಸ್ಥರು ದೂರು ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ನಿ ಇಂದಿರಾ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಂಇಎಸ್ ಮಾಜಿ ಶಾಸಕ ಸಾಂಬಾಜಿ ಪಾಟೀಲ್ ಪುತ್ರ ದುರ್ಮರಣ

    ಎಂಇಎಸ್ ಮಾಜಿ ಶಾಸಕ ಸಾಂಬಾಜಿ ಪಾಟೀಲ್ ಪುತ್ರ ದುರ್ಮರಣ

    ಬೆಂಗಳೂರು: ಸೋಮವಾರ ರಾತ್ರಿ ಎಂಇಎಸ್ ಮಾಜಿ ಶಾಸಕ ಸಾಂಬಾಜಿ ಪಾಟೀಲ್ ಪುತ್ರ ರೈಲಿನಿಂದ ಬಿದ್ದು ಮೃತಪಟ್ಟಿದ್ದಾರೆ.

    ಸಾಗರ್ ಸಾಂಬಾಜಿ ಪಾಟೀಲ್ (38) ಸಾವನ್ನಪ್ಪಿದ ದುರ್ದೈವಿ. ಸಾಗರ್ ಸಾಂಬಾಜಿ ಪಾಟೀಲ್ ಸೋಮವಾರ ರಾತ್ರಿ ಸ್ನೇಹಿತರ ಜೊತೆ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದರು. ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಳಗಾವಿಗೆ ಹೊರಟಿದ್ದ ಸಾಗರ್, ರೈಲು ಶ್ರೀರಾಮಪುರದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ.

    ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸಾಗರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ಭೀಕರ ಅಪಘಾತ- 6 ಸಾವು, 8 ಜನರಿಗೆ ಗಾಯ

    ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ಭೀಕರ ಅಪಘಾತ- 6 ಸಾವು, 8 ಜನರಿಗೆ ಗಾಯ

    ಬೆಳಗಾವಿ: ಬೊಲೆರೋ ಹಾಗೂ ಕಬ್ಬು ತುಂಬಿದ ಟ್ರ್ಯಾಕ್ಟರ್ ನಡುವೆ ಭೀಕರ ರಸ್ತೆ ಅಪಘಾತವಾಗಿ ಸ್ಥಳದಲ್ಲಿ 6 ಜನ ಮೃತಪಟ್ಟು, 8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಹಿರೇನಂದಿ ಗ್ರಾಮದ ಬಳಿ ನಡೆದಿದೆ.

    ಯಲ್ಲವ್ವ ಖಂಡ್ರೆ(60), ನೀಲವ್ವಾ(40), ಅನುಸೂಯಾ ನಾಯ್ಕರ(38), ಪಾರವ್ವಾ ಖಂಡ್ರಿ(30), ಬಿಮಸೆಪ್ಪ ಪೂಜಾರಿ(38) ಹಾಗೂ ಮಹಾದೇವ(30) ಮೃತ ದುರ್ದೈವಿಗಳು. ಅಪಘಾತದ ನಂತರ ಸ್ಥಳದಲ್ಲಿ ನಾಲ್ವರು ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಈ ಅಪಘಾತದಲ್ಲಿ ಬೊಲೆರೋದಲ್ಲಿದ್ದ 6 ಜನರ ಮೃತಪಟ್ಟಿದ್ದು, 8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಮೃತರು, ಗೋಕಾಕ್ ತಾಲೂಕಿನ ಯರಗರವಿ ಗ್ರಾಮದವರು ಎಂದು ಹೇಳಲಾಗುತ್ತಿದೆ. ಗೋಕಾಕ್ ಫಾಲ್ಸ್ ನಲ್ಲಿದ್ದ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ತೆರಳುವಾಗ ಈ ಘಟನೆ ನಡೆದಿದೆ.

    ಸದ್ಯ ಈ ಬಗ್ಗೆ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದೆ ಶಾಸಕರನ್ನು ಕರೆದೊಯ್ಯುವ ಉದ್ದೇಶದಿಂದ ರೆಸಾರ್ಟ್ ಗೆ ಭೇಟಿ – ಸತೀಶ್ ಜಾರಕಿಹೊಳಿ

    ಮುಂದೆ ಶಾಸಕರನ್ನು ಕರೆದೊಯ್ಯುವ ಉದ್ದೇಶದಿಂದ ರೆಸಾರ್ಟ್ ಗೆ ಭೇಟಿ – ಸತೀಶ್ ಜಾರಕಿಹೊಳಿ

    ಬೆಳಗಾವಿ: ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನುವ ಸುದ್ದಿಯ ಬೆನ್ನಲ್ಲೇ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ರೆಸಾರ್ಟ್ ಗೆ ಭೇಟಿ ನೀಡಿದ್ದು ನಿಜ. ಮುಂದಿನ ದಿನಗಳಲ್ಲಿ ನಮ್ಮ ಶಾಸಕರನ್ನು ಕರೆದ್ಯೊಯವ ಉದ್ದೇಶದಿಂದ ಭೇಟಿ ನೀಡಲಾಗಿತ್ತು ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ.

    ಈ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅಪರೇಷನ್ ಕಮಲದ ಬಗ್ಗೆ ನಮಗೆ ಮಾಹಿತಿ ಇಲ್ಲ. ಪಕ್ಷದ ಕೆಲ ಶಾಸಕರಲ್ಲಿ ಅಸಮಾಧಾನ ಇರುವುದು ಸಾಮಾನ್ಯ. ಇದು ಎಲ್ಲಾ ಮುಖ್ಯಮಂತ್ರಿಗಳ ಸಮಯದಲ್ಲೂ ಇರುತ್ತದೆ ಅಷ್ಟೇ. ಆದರೆ ಸಿದ್ದರಾಮಯ್ಯ ಅವರ ಮೇಲೆ ಹೈಕಮಾಂಡ್ ಗೆ ದೂರು ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

    ಇದೇ ವೇಳೆ ಬೆಳಗಾವಿಯ ಸಾತೇರಿ ರೆಸಾರ್ಟ್ ಭೇಟಿ ಮಾಡಿ ಪರಿಶೀಲನೆ ನಡೆಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸ್ನೇಹಿತ ಮಗನ ಮದುವೆಗೆ ಭೇಟಿ ನೀಡಿದ್ದೆ. ಈ ವೇಳೆ ಬೆಳಗಾವಿಯ ಸಾತೇರಿ ರೆಸಾರ್ಟ್ ಗೂ ಕೂಡ ಹೋಗಿದ್ದೆ. ಮುಂದೇ ನಮ್ಮ ಶಾಸಕರನ್ನು ಕರೆದುಕೊಂಡು ಹೋಗಲು ನೆರವಾಗಲಿದೆ. ಮುಂದೆ ಶಾಸಕರನ್ನು ಟೂರ್ ಮಾಡಲಿಕ್ಕೆ ರೆಸಾರ್ಟ್ ನೋಡಿಕೊಂಡು ಬಂದಿದ್ದೆನೆ ವಿನಾಃ ಪಕ್ಷಾಂತರ ಮಾಡಲು ಕರೆದುಕೊಂಡು ಹೋಗುವುದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.

    ನಾನು ಯಾವುದೇ ಆತೃಪ್ತರ ಸಂಪರ್ಕದಲ್ಲಿ ಇಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ನಮ್ಮ ಬೇಡಿಕೆಗಳನ್ನು ಹೈಕಮಾಂಡ್ ಅವರಿಗೆ ತಿಳಿಸಿದ್ದೇವೆ. ಸಂಪುಟ ವಿಸ್ತರಣೆ ಮಾಡಿದರೆ ಒಳ್ಳೇಯದು. ಶೀಘ್ರವೇ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಮಾಡುವುದರಿಂದ ಸರ್ಕಾರದ ಆಡಳಿತ ಸುಗಮವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನು ಓದಿ : ರಾಜ್ಯದ ದೋಸ್ತಿ ಸರ್ಕಾರವೇ ಬೆಚ್ಚಿ ಬೀಳುವಂತಹ ಬೆಳವಣಿಗೆ – ಗುಪ್ತಚರ ಇಲಾಖೆ ನೀಡಿದ್ದ ಆಡಿಯೋ ಔಟ್

    ಕಳೆದ ಕೆಲ ದಿನಗಳಿಂದ ಸತೀಶ್ ಜಾರಕಿಹೊಳಿ ಅವರ ಸಹೋದರ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಕಳೆದ ಕೆಲ ದಿನಗಳಿಂದ ಮಾಧ್ಯಮಗಳಿಂದ ದೂರವೇ ಉಳಿದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ ಜಾರಕಿಹೊಳಿ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದ್ದು, ಪಕ್ಷಾಂತರದ ಬಗ್ಗೆ ಚಿಂತನೆ ನಡೆಸಲಾಗಿದೆ ಎಂಬ ಅಂಶ ಬೆಳಗಾವಿ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಬ್ಬ ಲಾಕ್ ತೆಗ್ದ, ಇಬ್ಬರು ದೂಡಿಕೊಂಡು ಹೋದ್ರು- ಕಳ್ಳರ ಕೈ ಚಳಕದ ವಿಡಿಯೋ ನೋಡಿ

    ಒಬ್ಬ ಲಾಕ್ ತೆಗ್ದ, ಇಬ್ಬರು ದೂಡಿಕೊಂಡು ಹೋದ್ರು- ಕಳ್ಳರ ಕೈ ಚಳಕದ ವಿಡಿಯೋ ನೋಡಿ

    ಬೆಳಗಾವಿ: ಮನೆಯೊಂದರ ಮುಂದೆ ನಿಲ್ಲಿಸಿದ ಪ್ರೀಮಿಯರ್ ಪಧ್ಮಿನಿ ಕಾರನ್ನು ಕಳ್ಳರು ಕದಿಯುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ನಗರದ ಮರಾಠಾ ಕಾಲೋನಿಯಲ್ಲಿ ಇಂದು ನಡೆದಿದೆ.

    ಮರಾಠಾ ಕಾಲೋನಿಯ ನಿವಾಸಿಯಾದ ಸಾವಂತ್ ಎಂಬುವವರ ಕಾರು ಕಳುವಾಗಿದೆ. ಯಾವಾಗಲು ಸಾವಂತ್ ಕಾರನ್ನು ತಮ್ಮ ಮನೆಯ ಮುಂದೆ ನಿಲ್ಲಿಸುತ್ತಿದ್ದರು. ಆದರೆ ಇಂದು ಬೆಳಗಿನ ಜಾವ ಮನೆ ಹೊರಗೆ ನಿಲ್ಲಿಸಿದ್ದ ಅವರ ಕಾರನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ವೇಳೆ ಮನೆ ಹೊರಗಿದ್ದ ಸಿಸಿಟಿವಿಯಲ್ಲಿ ಕಳ್ಳರು ಕಾರನ್ನು ಕದ್ದಿರುವ ದೃಶ್ಯವು ಸೆರೆಯಾಗಿದೆ.

    ಒಟ್ಟು ಮೂವರು ಕಳ್ಳರು ಸೇರಿ ಕಾರನ್ನು ಕದ್ದಿದ್ದಾರೆ. ಮನೆ ಮುಂದೆ ನಿಂತಿದ್ದ ಕಾರಿನ ಲಾಕ್ ತೆಗೆದು ಒಬ್ಬ ಕಾರು ಚಲಾಯಿಸಿದರೆ, ಇನ್ನು ಉಳಿದ ಇಬ್ಬರು ಸ್ಟೈಲಾಗಿ ಕಾರನ್ನು ದೂಡಿಕೊಂಡು ಹೋಗಿದ್ದಾರೆ. ಈ ದೃಶ್ಯವು ಕಾರಿನ ಮಾಲೀಕ ಮನೆಯ ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದಾಗ ತಿಳಿದು ಬಂದಿದೆ.

    ಘಟನೆ ಕುರಿತು ತಿಳಕವಾಡಿ ಪೊಲೀಸ್ ಠಾಣೆಯಲ್ಲಿ ಸಾವಂತ್ ಪ್ರಕರಣ ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ತನಿಖೆಯನ್ನು ನಡೆಸುತ್ತಿದ್ದಾರೆ.

    https://www.youtube.com/watch?v=LeWnzOyfgvQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ಕಚೇರಿಯಲ್ಲಿ ಕುರ್ಚಿಗಾಗಿ ಕಿತ್ತಾಟ- ಅಧಿಕಾರಿಗಳ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕರು

    ಸರ್ಕಾರಿ ಕಚೇರಿಯಲ್ಲಿ ಕುರ್ಚಿಗಾಗಿ ಕಿತ್ತಾಟ- ಅಧಿಕಾರಿಗಳ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕರು

    ಬೆಳಗಾವಿ: ಅದೊಂದು ಸರ್ಕಾರಿ ಕಚೇರಿಯಲ್ಲಿ ಇಬ್ಬರು ಕುರ್ಚಿಗಾಗಿ ಕಿತ್ತಾಡ್ತಿದ್ದಾರೆ. ಕಚ್ಚಾಟ ಸರಿಪಡಿಸಬೇಕಾದ ಮೇಲಾಧಿಕಾರಿಗಳು ಕಂಡು ಕಾಣದಂತೆ ಕುಳಿತ್ತಿದ್ದಾರೆ. ಕಚೇರಿಯಲ್ಲಿ ನಾನೇ ಆಫೀಸರ್ ಎಂದುಕೊಂಡು ಇಬ್ಬರು ದರ್ಬಾರ್ ಮಾಡ್ತಿದ್ದಾರೆ. ಆದ್ರೆ ಇಬ್ಬರ ಜಗಳದಿಂದ ಕಚೇರಿಗೆ ಬರೋ ಜನ ಹೈರಾಣಾಗಾಗಿದ್ದಾರೆ.

    ಬೆಳಗಾವಿಯ ಸಬ್‍ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೈಡ್ರಾಮವೇ ನಡೆದಿದೆ. ಕಚೇರಿಯ ಅಧಿಕಾರಿಗಳಿಬ್ಬರು ಕುರ್ಚಿಗಾಗಿ ಕದನ ನಡೆಸಿದ್ದಾರೆ. ವಿಶ್ವತೀರ್ಥ ಹಾಗೂ ಸದಾಶಿವ ಡಬ್ಬುಗೋಳ ನಡುವೆ ವರ್ಗಾವಣೆ ವಿಷಯಕ್ಕೆ ಜಟಾಪಟಿ ನಡೆದಿದೆ. 3 ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದ ವಿಶ್ವತೀರ್ಥರನ್ನು ಸರ್ಕಾರ ರಾಯಭಾಗ ಪಟ್ಟಣಕ್ಕೆ ವರ್ಗಾವಣೆ ಮಾಡಿತ್ತು. ಅದೇ ಜಾಗಕ್ಕೆ ಸದಾಶಿವ ಡಬ್ಬುಗೋಳರನ್ನು ನೇಮಕ ಸಹ ಮಾಡಲಾಗಿತ್ತು. ಆದರೆ ಕುರ್ಚಿ ಬಿಡದೇ ವಿಶ್ವತೀರ್ಥ ಕೆಎಟಿ ಮೊರೆ ಹೋದ್ರು. ಕೆಎಟಿ ಕೂಡ ವಿಶ್ವತೀರ್ಥರಿಗೆ ಅಧಿಕಾರ ಮುಂದುವರಿಸುವಂತೆ ಆದೇಶ ನೀಡಿ ವಿಚಾರಣೆಯನ್ನು ಕಾಯ್ದಿರಿಸಿತು.

    ಅಧಿಕಾರಿಗಳಿಬ್ಬರ ಕಾದಾಟ ರಾಜಕಾರಣಿಗಳ ಪ್ರತಿಷ್ಠೆ ಸಮರವಾಗಿ ಮಾರ್ಪಟ್ಟಿದೆ. ವಿಶ್ವತೀರ್ಥ ಬೆನ್ನಿಗೆ ಸಚಿವ ರಮೇಶ್ ಜಾರಕಿಹೊಳಿ ನಿಂತ್ರೆ, ಸದಾಶಿವ ಪರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಿಂತಿದ್ದಾರೆ. ವಿಶ್ವತೀರ್ಥ ವರ್ಗಾವಣೆ ರದ್ದುಗೊಳಿಸಿ ಅಂತ ರಮೇಶ್ ಜಾರಕಿಹೊಳಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ತಮಗೆ ಬೇಕಾದವ ಅಂತ ಸದಾಶಿವರನ್ನು ಇಲ್ಲಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಧಿಕಾರಿಗಳ ಕಾದಾಟದಿಂದ ಸಾರ್ವಜನಿಕರ ಕೆಲಸ ವಿಳಂಬವಾಗ್ತಿದ್ದು ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

    ಕೆಎಟಿ ಈ ಪ್ರಕರಣವನ್ನು ದೀರ್ಘ ಕಾಲ ಕಾಯ್ದಿರಿಸದೇ ಶೀಘ್ರ ಇತ್ಯರ್ಥಗೊಳಿಸಿ ಬೆಳಗಾವಿ ಜನರ ಕಾರ್ಯ ಸುಗಮವಾಗುವಂತೆ ಮಾಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲಕ್ಷ್ಮಿ -ಸತೀಶ್ ಜಾರಕಿಹೊಳಿ ನಡುವೆ ಬಸ್ ವಾರ್!

    ಲಕ್ಷ್ಮಿ -ಸತೀಶ್ ಜಾರಕಿಹೊಳಿ ನಡುವೆ ಬಸ್ ವಾರ್!

    ಬೆಳಗಾವಿ: ಕಾಂಗ್ರೆಸ್ ಮಹಿಳಾ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಾಸಕ ಸತೀಶ್ ಜಾರಕಿಹೊಳಿ ನಡುವೆ ಬಸ್ ಯುದ್ಧ ಆರಂಭವಾಗಿದ್ದು, ಇದರಿಂದ ಇಬ್ಬರು ಜಿದ್ದಿಗೆ ಬಿದ್ದಿದ್ದಾರೆ ಎಂದು ಮಾತು ಕೇಳಿ ಬಂದಿದೆ.

    ಶಾಸಕಿ ಲಕ್ಷ್ಮಿ ಕಳೆದ ಒಂದು ವಾರದ ಹಿಂದೆ ಬೆಳಗಾವಿಯ ಸುವರ್ಣ ಸೌಧದ ಎದುರು ತನ್ನ ಗ್ರಾಮೀಣ ಕ್ಷೇತ್ರಗಳಿಗೆ ಓಡಾಡಲು 10 ಬಸ್ಸುಗಳ ಸೇವೆಗೆ ಚಾಲನೆ ನೀಡಿದ್ದರು. ಇದಾದ ಬೆನ್ನಲ್ಲೇ ಎರಡು ದಿನಗಳ ಹಿಂದೆ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಕೂಡಾ ಬೆಳಗಾವಿಯ ಸಿಟಿ ಬಸ್ ನಿಲ್ದಾಣದಲ್ಲಿ ತಮ್ಮ ಕ್ಷೇತ್ರಕ್ಕೆ 10 ಬಸ್ಸುಗಳ ಸೇವೆಗೆ ಚಾಲನೆ ನೀಡಿದ್ದಾರೆ.

    ಶಾಸಕಿ ಲಕ್ಷ್ಮಿ ಹತ್ತು ಬಸ್ಸುಗಳಿಗೆ ಚಾಲನೆ ನೀಡಿದರೆ, ಜಾರಕಿಹೊಳಿ ಸಹ 10 ಬಸ್ಸುಗಳ ಸೇವೆಯನ್ನು ದಿಢೀರ್ ಆರಂಭಿಸಿದ್ದು, ಈಗ ಚರ್ಚೆ ಆರಂಭವಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಯ ಕಾಮಗಾರಿ ಹೆಸರಿನಲ್ಲಿ ಇಬ್ಬರ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.

    ಇತ್ತ ಬೆಳಗಾವಿಯ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದ್ದ ಸತೀಶ್ ಜಾರಕಿಹೊಳಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಾಲ್ಗೊಂಡಿದ್ದರು. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಸಮಾರಂಭಕ್ಕೆ ಡಿಸಿ ಹೋಗಿರಲೇ ಇಲ್ಲ. ಆದರೆ ಈ ಬಗ್ಗೆ ಸ್ವತಃ ಡಿಸಿ ಅವರೇ ಸ್ಪಷ್ಟನೆ ನೀಡಬೇಕಿದೆ.

    ನಮ್ಮ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಓಡಾಡಲು ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಹೆಚ್ಚಿನ ಬಸ್ ಸೌಲಭ್ಯವನ್ನು ಒದಗಿಬೇಕು ಎಂದು ಇಬ್ಬರು ನಾಯಕರು ಕೇಳಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ಪ್ರಭಾವಿ ನಾಯಕರಾದ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಯಾರ ಬೇಡಿಕೆ ಈಡೇರಿಸಬೇಕು ಎನ್ನುವ ಗೊಂದಲಕ್ಕೆ ಈಡಾಗಿ ಕೊನೆಗೆ ಇಬ್ಬರ ಕ್ಷೇತ್ರಗಳಿಗೆ 10 ಬಸ್ಸುಗಳ ಸೇವೆಯನ್ನು ಆರಂಭಿಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುಂದಾನಗರಿ ಮದುವೆಗಳಿಗೆ ಚಳಿಗಾಲ ಅಧಿವೇಶನದ ಕರಿನೆರಳು

    ಕುಂದಾನಗರಿ ಮದುವೆಗಳಿಗೆ ಚಳಿಗಾಲ ಅಧಿವೇಶನದ ಕರಿನೆರಳು

    -ನಿಯೋಜಿತ ಮದುವೆಗಳಿಗೆ ಶುರುವಾಗಿದೆ ಸಂಕಷ್ಟ!

    ಬೆಳಗಾವಿ: ಕುಂದಾ ನಗರರಯಲ್ಲಿ ನಿಗದಿಯಾದ 60 ಮದುವೆಗಳ ಮೇಲೆ ಅಧಿವೇಶನದ ಕರಿನೆರಳು ಬಿದ್ದಿದೆ. ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಆಗುತ್ತಿದ್ದಂತೆ ಮದುವೆ ಮಾಡೋರಿಗೆ ಟೆನ್ಶನ್ ಶುರುವಾಗಿದೆ.

    ಡಿಸೆಂಬರ್ 10ರಿಂದ 21ರವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶ ನಡೆಯಲಿದೆ. ಡಿಸೆಂಬರ್ ತಿಂಗಳಿನ 09, 12, 14, 16, 17, 18, 23ರಂದು ಮದುವೆಗೆ ಒಳ್ಳೆಯ ಲಗ್ನ ಮುಹೂರ್ತಗಳಿದ್ದು, ಬೆಳಗಾವಿ ನಗರದಲ್ಲಿ ಮದುವೆಗಳು ಈಗಾಗಲೇ ಫಿಕ್ಸ್ ಆಗಿದೆ. ಈ ಸಮಯದಲ್ಲಿ ದೂರದ ಊರಿನಿಂದ ಮದುವೆಗೆ ಬರೋ ಬೀಗರಿಗೆ ವಸತಿ ವ್ಯವಸ್ಥೆ ಬೇಕು. ಆದರೆ ಅಧಿವೇಶನ ಇರೋದ್ರಿಂದ ಬೆಳಗಾವಿಯಲ್ಲಿನ ಎಲ್ಲಾ ವಸತಿ ನಿಲಯಗಳು, ಲಾಡ್ಜ್ ಗಳನ್ನು ಬೆಳಗಾವಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.

    ಅಧಿವೇಶನ ದಿನಾಂಕ ನಿಗದಿ ಆಗೋದಕ್ಕಿಂತ ಮುಂಚೆಯೇ ಎಲ್ಲಾ ಮದುವೆ ದಿನಾಂಕಗಳು ಫಿಕ್ಸ್ ಆಗಿದೆ. ಅದರಂತೆ ಮದುವೆ ಮನೆಯವರು ಆವತ್ತೆ ಎಲ್ಲಾ ಚೌಟರಿಗಳನ್ನು, ಲಾಡ್ಜ್ ಗಳನ್ನು ಬುಕ್ ಮಾಡಿದ್ದಾರೆ. ಜಿಲ್ಲಾಡಳಿತ ಎಲ್ಲಾ ಲಾಡ್ಜ್ ಮಾಲೀಕರ ಸಭೆ ಕರೆದು ರೂಂಗಳನ್ನು ವಶಕ್ಕೆ ಪಡೆದಿದೆ. ಹೀಗಾಗಿ 60ಕ್ಕೂ ಹೆಚ್ಚು ಮದ್ವೆಗಳಿಗೆ ಅಧಿವೇಶನದ ದಿನಾಂಕ ಅಡ್ಡಿಯಾಗಿದೆ. ಅಧಿವೇಶನ ದಿನಾಂಕ ನಿಗದಿಗೂ ಮುನ್ನ ಈ ವಿಚಾರವನ್ನು ಸ್ಥಳೀಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕಿತ್ತು ಅಂತ ಆರ್ ಟಿಐ ಕಾರ್ಯಕರ್ತ ಭೀಮಶಿ ಆರೋಪಿಸಿದ್ದಾರೆ.

    ಮದುವೆ ಡೇಟ್ ಫಿಕ್ಸ್ ಮಾಡಿಕೊಂಡ ಕುಟುಂಬಗಳು ಈ ಸಮಸ್ಯೆಯನ್ನು ನೀವೆ ಬಗೆಹರಿಸಿ ಅಂತ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಎಲ್ಲಾ ಲಾಡ್ಜ್ ಗಳು ಜಿಲ್ಲಾಡಳಿತದ ಸುಪರ್ದಿಯಲ್ಲಿದ್ದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂಬುದೇ ಯಕ್ಷ ಪ್ರಶ್ನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ಪ್ರೇಮಿಗಳು

    ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ಪ್ರೇಮಿಗಳು

    ಬೆಳಗಾವಿ: ಒಂದೇ ಹಗ್ಗಕ್ಕೆ ನೇಣು ಬಿಗಿದುಕೊ0ಡು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.

    ಈರಣ್ಣ ಸಾಲಿಮನಿ ಹಾಗೂ ಶ್ವೇತಾ ಕುಂಬಾರ ಆತ್ಮಹತ್ಯೆ ಶರಣಾದ ಪ್ರೇಮಿಗಳು. ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ಕೆಳಗಿಳಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

    ಮೃತ ಈರಣ್ಣ ಸಾಲಿಮನಿಯ ತಾಯಿ ಮಾತನಾಡಿ, ನನಗೆ ಏನೂ ಗೊತ್ತಿಲ್ಲ. ಮಗ ಈರಣ್ಣ ಒಂದು ವರ್ಷದಿಂದ ಕೆಎಲ್‍ಇ ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೇ ಬೆಳಗ್ಗೆ ನನಗೆ ಯಲ್ಲಮ್ಮನ ದೇವಾಲಯಕ್ಕೆ ಹೋಗಲು ದುಡ್ಡು ಕೊಟ್ಟು ಕಳುಹಿಸಿದ್ದ. ಮಧ್ಯಾಹ್ನ ಮನೆಗೆ ಬಂದು ಬಾಗಿಲು ಬಡಿದಾಗ ತೆಗೆಯಲಿಲ್ಲ. ನೀರು ತೆಗೆದುಕೊಳ್ಳಲು ಕಿಟಿಕಿ ತೆಗೆದಾಗ ಇಬ್ಬರು ನೇಣು ಹಾಕಿಕೊಂಡಿದ್ದು ಗೊತ್ತಾಯಿತು. ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಕುರಿತು ನನಗೆ ಏನೂ ಗೊತ್ತಿಲ್ಲ. ನಮಗೆ ಹುಡುಗಿಯ ಹೆಸರು ಸಹ ಗೊತ್ತಿಲ್ಲ. ಅಲ್ಲದೇ ಇಬ್ಬರೂ ಒಂದೇ ಪಂಗಡದವರಾಗಿದ್ದೆವು. ಒಂದು ವೇಳೆ ಪ್ರೀತಿಸುತ್ತಿದ್ದ ವಿಚಾರವನ್ನು ತಿಳಿಸಿದ್ದರೆ ನಾವೇ ಮುಂದೆ ನಿಂತು ಮದುವೆ ಮಾಡಿಕೊಡುತ್ತಿದ್ದವೆಂದು ಕಣ್ಣೀರು ಸುರಿಸಿದ್ದಾರೆ.

    ಪೊಲೀಸರ ತನಿಖೆಯಿಂದ ಪ್ರೇಮಿಗಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಬೇಕಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೌಚಕ್ಕೆ ಕುಳಿತಾಗ ನಾಯಿಗಳ ದಾಳಿಗೊಳಗಾಗಿದ್ದ ಕಂದಮ್ಮ ಸಾವು

    ಶೌಚಕ್ಕೆ ಕುಳಿತಾಗ ನಾಯಿಗಳ ದಾಳಿಗೊಳಗಾಗಿದ್ದ ಕಂದಮ್ಮ ಸಾವು

    ಬೆಳಗಾವಿ: ನಾಯಿಗಳು ಮಗುವನ್ನೇ ತಿನ್ನಲು ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾದೇ ಮಗು ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ನಡೆದಿದೆ.

    2 ವರ್ಷದ ಅಬ್ಬಾಸ್ ಸನದಿ ಮೃತ ದುರ್ದೈವಿ. ಗುರುವಾರ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಅಬ್ಬಾಸ್ ಸ್ಥಿತಿ ಚಿಂತಾಜನಕವಾಗಿತ್ತು. ಅಬ್ಬಾಸ್ ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಬ್ಬಾಸ್ ಮೃತಪಟ್ಟಿದ್ದಾನೆ.

    ಅಬ್ಬಾಸ್ ಸನದಿ ಮನೆ ಮುಂದೆ ಶೌಚಕ್ಕೆ ಕುಳಿತಿದ್ದನು. ಈ ವೇಳೆ ಬೀದಿ ನಾಯಿಗಳು ಏಕಾಏಕಿ ಆತನ ಮೇಲೆ ದಾಳಿ ಮಾಡಿತ್ತು. ಪರಿಣಾಮ ಮುಖ, ತಲೆ ಭಾಗ ಸೇರಿ ಮೈಯೆಲ್ಲಾ ಕಚ್ಚಿ, ತಿಂದು ಹಾಕುವ ಪ್ರಯತ್ನ ಮಾಡಿವೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಬ್ಬಾಸ್ ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಬ್ಬಾಸ್ ಮೃತಪಟ್ಟಿದ್ದಾನೆ.

    ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv