Tag: belagavi

  • ಸದನದಲ್ಲಿ ಮೊಬೈಲ್ ಬಳಕೆ- ಮಾಜಿ ಸಚಿವ ಎನ್.ಮಹೇಶ್ ಸ್ಪಷ್ಟನೆ

    ಸದನದಲ್ಲಿ ಮೊಬೈಲ್ ಬಳಕೆ- ಮಾಜಿ ಸಚಿವ ಎನ್.ಮಹೇಶ್ ಸ್ಪಷ್ಟನೆ

    ಬೆಳಗಾವಿ: ಕೊಳ್ಳೆಗಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಕೆಲ ವಸ್ತುಗಳು ಅಗತ್ಯವಿತ್ತು. ಈ ಮಾಹಿತಿ ವಾಟ್ಸಾಪ್‍ನಲ್ಲಿ ಬಂದ ಕಾರಣ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೆ ಎಂದು ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎನ್ ಮಹೇಶ್ ಅವರು, ನಾನು ಸುಮ್ಮನೆ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿಲ್ಲ. ಇವತ್ತು ಸದನದಲ್ಲಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ನೀಡಬೇಕಿತ್ತು. ಕೊಳ್ಳೆಗಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಕೆಲ ವಸ್ತುಗಳು ಅಗತ್ಯವಿತ್ತು. ಈ ಮಾಹಿತಿ ವಾಟ್ಸಾಪ್‍ನಲ್ಲಿ ಬಂದ ಕಾರಣ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೆ. ಆದರೆ ಯಾವುದೇ ಕಾರಣವಿದ್ದರು ಮೊಬೈಲ್ ತಂದಿದ್ದು ನನ್ನ ತಪ್ಪು ಅಂತಾ ಹೇಳಿದರು.

    ಇದೇ ವೇಳೆ ವಾಟ್ಸಾಪ್ ನಲ್ಲಿ ಯುವತಿಯ ಫೋಟೋ ವಿಕ್ಷೀಸಿದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಗನಿಗೆ ಮದುವೆ ಸಿದ್ಧತೆಯಲ್ಲಿದ್ದು, ಈ ಬಗ್ಗೆ ಸೂಕ್ತ ವಧುವಿನ ಬಗ್ಗೆ ಮಾಹಿತಿ ನೀಡಲು ನನ್ನ ಸ್ನೇಹಿತ ಶಿವಕುಮಾರ್ ಎಂಬವರಿಗೆ ಮಾಹಿತಿ ನೀಡಿದ್ದೆ. ಅವರು ಕಳುಹಿಸಿದ ಫೋಟೋಗಳನ್ನೆ ನಾನು ನೋಡಿದ್ದು. ಆದರೆ ಅದನ್ನು ಪ್ರಸಾರ ಮಾಡಿದ್ದು, ವೃತ್ತಿ ಧರ್ಮ ಅಲ್ಲ ಎಂದರು. ಇದನ್ನೂ ಓದಿ: ಸದನದಲ್ಲಿ ಕದ್ದು ಮುಚ್ಚಿ ಯುವತಿ ಫೋಟೋ ನೋಡಿದ ಮಾಜಿ ಸಚಿವ ಎನ್ ಮಹೇಶ್!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸದನದಲ್ಲಿ ಕದ್ದು ಮುಚ್ಚಿ ಯುವತಿ ಫೋಟೋ ನೋಡಿದ ಮಾಜಿ ಸಚಿವ ಎನ್ ಮಹೇಶ್!

    ಸದನದಲ್ಲಿ ಕದ್ದು ಮುಚ್ಚಿ ಯುವತಿ ಫೋಟೋ ನೋಡಿದ ಮಾಜಿ ಸಚಿವ ಎನ್ ಮಹೇಶ್!

    ಬೆಳಗಾವಿ: ರಾಜ್ಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಿದ್ದ ವಿಧಾನಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಮಹಿಳೆಯರ ಫೋಟೊ ನೋಡುವ ಖಯಾಲಿ ಮುಂದುವರೆದಿದೆ.

    ಸೋಮವಾರ ಸುವರ್ಣಸೌಧದಲ್ಲಿ ಸದನ ಆರಂಭ ಆಗುವ ವೇಳೆ ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ, ಬಿಎಸ್‍ಪಿ ಶಾಸಕರಾಗಿರುವ ಎನ್ ಮಹೇಶ್ ಅವರು ಮಹಿಳೆಯ ಫೋಟೋ ನೋಡುವುದರಲ್ಲಿ ತಲ್ಲಿನರಾಗಿದ್ದರು. ಈ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಸದನದಲ್ಲಿ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂಬ ಚರ್ಚೆ ಆರಂಭವಾಗಿದೆ.

    ಇಂದು ಬೆಳಗ್ಗೆ ಸ್ಪೀಕರ್ ಅವರು ಸದನ ಆರಂಭ ಮಾಡಲು ಬೆಲ್ ಮಾಡಲು ಸೂಚನೆ ನೀಡುವ ಮುನ್ನ ಘಟನೆ ನಡೆದಿದ್ದು, ಈ ವೇಳೆ ಹಾಜರಿದ್ದ ಎನ್.ಮಹೇಶ್ ಅವರು ಕದ್ದುಮುಚ್ಚಿ ವಾಟ್ಸಾಪ್ ನಲ್ಲಿ ಮಹಿಳೆಯರ ಫೋಟೋ ವೀಕ್ಷಣೆ ಮಾಡಿದ್ದು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರು ಅವಧಿಯಲ್ಲಿ ಕೆಲ ಶಾಸಕರು ವಿಡಿಯೋಗಳನ್ನು ನೋಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಈ ಬಳಿಕ ಸದನದಲ್ಲಿ ಮೊಬೈಲ್ ತೆಗೆದುಕೊಂಡು ಹೋಗದಂತೆ ನಿಯಮ ರೂಪಿಸಿ, ಮೊಬೈಲ್ ಈಡಲು ಪ್ರತ್ಯೇಕ ನಿಯಮ ರೂಪಿಸಿದ್ದರು. ಆದರೂ ಮಹೇಶ್ ಅವರು ಮೊಬೈಲ್‍ನೊಂದಿಗೆ ತೆರಳಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ.

    ಈ ಕುರಿತು ಮಾಜಿ ಸಚಿವ ಮಹೇಶ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಚಿವರು ಮೊಬೈಲಿನಲ್ಲಿ ಕಾಣಿಕೊಂಡ ಯುವತಿ ಯಾರು? ಸದನದಲ್ಲಿ ಯುವತಿಯ ಫೋಟೋ ನೋಡಿದ್ದು ಯಾಕೆ ಎನ್ನುವುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕಿದೆ. ಅಂದಹಾಗೇ ಸಾಮಾನ್ಯವಾಗಿ ಮೊಬೈಲ್ ಬಳಕೆ ಮಾಡದ ಸಚಿವರು ತಮ್ಮನ್ನ ಯಾರು ನೋಡಿದ್ದಾರೆ ಎಂಬುವುದನ್ನು ಗಮನಿಸಿ ಬಳಿಕ ಫೋಟೋ ನೋಡಿದ್ದು ದೃಶ್ಯಗಳಲ್ಲಿ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಧಿವೇಶನಕ್ಕೆಂದು ಹೋಗಿ ಮೋಜು-ಮಸ್ತಿ ಮಾಡಿದ್ರು..!

    ಅಧಿವೇಶನಕ್ಕೆಂದು ಹೋಗಿ ಮೋಜು-ಮಸ್ತಿ ಮಾಡಿದ್ರು..!

    ಬೆಳಗಾವಿ: ಜಿಲ್ಲೆಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಲ್ಲಿಗೆ ಬಂದ ಅಧಿಕಾರಿಗಳು ವೀಕೆಂಡ್ ನಲ್ಲಿ ಮೋಜು-ಮಸ್ತಿ ಮಾಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇರಿಸುಮುರುಸು ಉಂಟಾಗಿದೆ.

    ಚಳಿಗಾಲದ ಅಧಿವೇಶನ ಡಿಸೆಂಬರ್ 10 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿದೆ. ಆದರೆ ಅಧಿವೇಶನಕ್ಕೆ ಬಂದ ಅಧಿಕಾರಿಗಳು ಬೆಳಗಾವಿಯಿಂದ ಸ್ವಲ್ಪ ದೂರದಲ್ಲಿರುವ ಗೋವಾದ ಜೂಜು-ಅಡ್ಡೆಗೆ ಹೋಗಿದ್ದಾರೆ. ಅಲ್ಲದೇ ಅಲ್ಲಿ ಅಧಿಕಾರಿಗಳು ಅರೆಬೆತ್ತಲಾಗಿ ಮೋಜು-ಮಸ್ತಿ ಮಾಡಿದ್ದಾರೆ. ವೀಕೆಂಡ್‍ನಲ್ಲಿ ಅನುಮತಿಯಿಲ್ಲದೆ ಅಧಿಕಾರಿಗಳ ಮೋಜು-ಮಸ್ತಿ ಮಾಡಿದ್ದು, ಜೂಜು ಅಡ್ಡೆಗೆ ಹೋಗುವಾಗ ಕೆಲವರು ಖಾಸಗಿ ವಾಹನದಲ್ಲಿ ಹೋಗಿದ್ದಾರೆ. ಉಳಿದವರು ಸರ್ಕಾರಿ ವಾಹನದಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಗೋವಾದ ಕ್ಯಾಸಿನೋ ಪ್ರೈಡ್ ಮುಂದೆ ಸಿಎಂ ಸಚಿವಾಲಯದ ಅಧಿಕಾರಿಗಳು ಮೋಜು-ಮಸ್ತಿ ಮಾಡಿದ್ದು, ಕ್ಯಾಸಿನೋ ಮುಂದೆ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಮೋಜು-ಮಸ್ತಿಯ ವಿಡಿಯೋ ವೈರಲ್ ಆಗುತ್ತಿದ್ದು, ಈ ದೃಶ್ಯ ಪಬ್ಲಿಕ್ ಟಿವಿಗೂ ಲಭಿಸಿದೆ.

    ಸಿಎಂ ಸಚಿವಾಲಯ ಅಧಿಕಾರಿಗಳು ಮತ್ತು ಭದ್ರತಾ ಪಡೆಯ ಇಬ್ಬರು ಪೊಲೀಸರು ಗೋವಾದ ಕ್ಯಾಸಿನೋ ಪ್ರೈಡ್ ಗೆ ಹೋಗಿದ್ದಾರೆ. ಅಧಿವೇಶನಕ್ಕೆ ಬಂದವರು ಅನುಮತಿ ಪಡೆಯದೇ ಹೊರಗಡೆ ಹೋಗುವಂತಿಲ್ಲ. ಆದರೂ ಅನುಮತಿ ಪಡೆಯದೇ ಗೋವಾದಲ್ಲಿ ಅಧಿಕಾರಿಗಳು ಜೂಜು ಅಡ್ಡೆಗೆ ಹೋಗಿ ಮೋಜು ಮಾಡಿದ್ದಾರೆ.

    ಅಧಿವೇಶನ ಮುಗಿಯಲು ನಾಲ್ಕು ದಿನಗಳಿದ್ದು ಉಳಿದ ಅಧಿಕಾರಿಗಳು ಅಧಿವೇಶನಕ್ಕೆ ಬೇಕಾದ ಮಾಹಿತಿ, ದಾಖಲೆಯನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಈ ರೀತಿಯಾಗಿ ಜೂಜು ಅಡ್ಡೆಗೆ ಹೋಗಿ ಮೋಜು-ಮಸ್ತಿ ಮಾಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳ ಈ ವರ್ತನೆಯ ಬಗ್ಗೆ ಸಿಎಂ ಕುಮಾರಸ್ವಾಮಿ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಸ್ತೆಯಲ್ಲಿ ಸಂಚರಿಸುವಾಗ ಏಕಾಏಕಿ ಚಿರತೆ ದಾಳಿ- ಮರವೇರಿ ಕುಳಿತ ಬೈಕ್ ಸವಾರರು

    ರಸ್ತೆಯಲ್ಲಿ ಸಂಚರಿಸುವಾಗ ಏಕಾಏಕಿ ಚಿರತೆ ದಾಳಿ- ಮರವೇರಿ ಕುಳಿತ ಬೈಕ್ ಸವಾರರು

    ಬೆಳಗಾವಿ: ರಸ್ತೆಯಲ್ಲಿ ಸಂಚರಿಸುವಾಗ ಚಿರತೆಯೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ಬೈಕ್ ಸವಾರರು ಮರವೇರಿ ಕುಳಿತಿರುವ ಘಟನೆ ಖಾನಾಪುರ ಬಳಿಯ ಚೋರಲಾ ಘಾಟಿಯಲ್ಲಿ ನಡೆದಿದೆ.

    ಬೆಳಗಾವಿಯಿಂದ ಗೋವಾಕ್ಕೆ ತೆರಳುವ ಚೋರಲಾ ಘಾಟಿ ಬಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿದೆ. ವ್ಯಕ್ತಿಯೋರ್ವ ಬೈಕ್‍ನಲ್ಲಿ ಚೋರಲಾ ಘಾಟಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದ ಪರಿಣಾಮ ಗಾಯಗೊಂಡಿದ್ದಾನೆ. ಇದನ್ನು ಕಂಡ ಇತರೇ ಬೈಕ್ ಸವಾರರು ಭಯದಿಂದ ಮರವೇರಿ ಕುಳಿತ್ತಿದ್ದಾರೆ.

    ಬೆಳಗಾವಿ ಮತ್ತು ಗೋವಾ ಮಧ್ಯೆ ಇರುವ ಚೋರಲಾ ಘಾಟಿ ಸುತ್ತಮುತ್ತ ದಟ್ಟವಾದ ಅರಣ್ಯ ಪ್ರದೇಶವಿದೆ. ಹೀಗಾಗಿ ಚಿರತೆ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ರಸ್ತೆಯಲ್ಲಿ ಏಕಾಏಕಿ ದಾಳಿ ಮಾಡಿದ ಚಿರತೆಯನ್ನು ಕಂಡು ತಬ್ಬಿಬ್ಬಾದ ಬೈಕ್ ಸವಾರರು, ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ಬಿಟ್ಟು ಪ್ರಾಣ ಉಳಿಕೊಂಡರೆ ಸಾಕು ಅಂತ ಮರಗಳನ್ನು ಹತ್ತಿ ಕುಳಿತಿದ್ದಾರೆ. ಚಿರತೆ ದಾಳಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಖಾನಾಪುರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚಿರತೆ ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಂಟೈನರ್ ಆಕ್ಸಿಡೆಂಟ್ ಮಾಡಿದ್ದಕ್ಕೆ ಚಾಲಕನನ್ನ ಕೊಂದ ಮಾಲೀಕ!

    ಕಂಟೈನರ್ ಆಕ್ಸಿಡೆಂಟ್ ಮಾಡಿದ್ದಕ್ಕೆ ಚಾಲಕನನ್ನ ಕೊಂದ ಮಾಲೀಕ!

    – ಅನ್ನ ನೀರು ಕೊಡದೇ ಕಂಟೈನರ್ ನಲ್ಲಿ ಕೂಡಿಟ್ಟು ಚಿತ್ರ ಹಿಂಸೆ

    ತುಮಕೂರು: ಕಂಟೈನರ್ ಆಕ್ಸಿಡೆಂಟ್ ಮಾಡಿದ್ದಕ್ಕೆ ಮಾಲೀಕನೊಬ್ಬ ಇಬ್ಬರು ಚಾಲಕರಿಗೆ ಚಿತ್ರಹಿಂಸೆ ನೀಡಿ, ಓರ್ವನನ್ನು ಕೊಲೆಗೈದ ಘಟನೆ ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆ ಬೈಲಹೊಂಗಲದ ಬಸಪ್ಪ(38) ಚಿತ್ರಹಿಂಸೆಗೆ ಬಲಿಯಾದ ಚಾಲಕ. ಮತ್ತೊಬ್ಬ ಚಾಲಕ ಸೋಮಪ್ಪ(35) ಅಸ್ವಸ್ಥಗೊಂಡಿದ್ದಾನೆ. ಕಂಟೈನರ್ ಲಾರಿ ಮಾಲೀಕ ಬಾಳಪ್ಪ ಹಾಗೂ ಆತನ ಸಹಚರರು ಸೇರಿ ಕೃತ್ಯ ಎಸಗಿದ್ದಾರೆ ಆರೋಪಿಸಿ ಬಸಪ್ಪನ ಪತ್ನಿ ಮತ್ತು ಹಲ್ಲೆಗೆ ಒಳಗಾದ ಸೋಮಪ್ಪ ಶಿರಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡು ಅಸ್ವಸ್ಥಗೊಂಡಿರುವ ಸೋಮಪ್ಪ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ದೂರಿನಲ್ಲಿರುವ ಆರೋಪ ಏನು?
    ಕಂಟೈನರ್ ಮಾಲೀಕ ಬಾಳಪ್ಪ ಕೂಡ ಬೈಲಹೊಂಗಲದ ನಿವಾಸಿಯಾಗಿದ್ದು ಅದೇ ಪಟ್ಟಣದ ನಿವಾಸಿಗಳಾದ ಬಸಪ್ಪ ಹಾಗೂ ಸೋಮಪ್ಪ ಅವರನ್ನು ಚಾಲಕರನ್ನಾಗಿ ನೇಮಿಸಿದ್ದ. ಕಂಟೈನರ್ ಡಿಸೆಂಬರ್ 11ರಂದು ಶಿರಾ ತಾಲೂಕಿನಲ್ಲಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿತ್ತು.

    ಈ ಕುರಿತು ಮಾಹಿತಿ ಪಡೆದ ಬಾಳಪ್ಪ ಘಟನಾ ಸ್ಥಳಕ್ಕೆ ಬಂದಿದ್ದ. ಈ ವೇಳೆ ಚಾಲಕರ ಮೇಲೆ ಕೋಪಗೊಂಡು ತನ್ನ ಸಹಚರರ ಜೊತೆಗೆ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಂಟೈನರ್ ನಲ್ಲಿ ಮೂರು ದಿನಗಳ ಕಾಲ ಅನ್ನ, ನೀರು ಕೊಡದೆ ಕೂಡಿ ಹಾಕಿದ್ದ. ಇಬ್ಬರನ್ನೂ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದ ಬಾಳಪ್ಪ, ಬಸಪ್ಪನನ್ನು ಕಾಲಿನಿಂದ ಒದ್ದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ರಾಮ ಪಂಚಾಯತ್ ಅಧ್ಯಕ್ಷನ ಬೆಂಬಲಿಗರಿಂದ ಸದಸ್ಯನ ಬರ್ಬರ ಹತ್ಯೆ!

    ಗ್ರಾಮ ಪಂಚಾಯತ್ ಅಧ್ಯಕ್ಷನ ಬೆಂಬಲಿಗರಿಂದ ಸದಸ್ಯನ ಬರ್ಬರ ಹತ್ಯೆ!

    – ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಕೊಲೆ

    ಬೆಳಗಾವಿ: ಗ್ರಾಮ ಪಂಚಾಯತ್ ನಲ್ಲಿ ಅವಿಶ್ವಾಸ ನಿರ್ಣಯ ಮಾಡಿದಕ್ಕೆ ಸದಸ್ಯರೊಬ್ಬರನ್ನು ಅಧ್ಯಕ್ಷನ ಬೆಂಬಲಿಗರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

    ಹೊಸ ವಂಟಮೂರಿ ಗ್ರಾಮ ಪಂಚಾಯತ್ ಸದಸ್ಯ ಬನ್ನೆಪ್ಪ ಪಾಟೀಲ್ ಕೊಲೆಯಾದ ಸದಸ್ಯ. ಹೊಸ ವಂಟಮೂರಿ ಗ್ರಾಮ ಪಂಚಾಯತಿಯಲ್ಲಿ ಕಳೆದ ಮೂರು ವರ್ಷಗಳಿಂದ ಶಿವಾಜಿ ವಣ್ಣೂರ ಎಂಬವರು ಅಧ್ಯಕ್ಷನಾಗಿದ್ದನು. ಆದರೆ ಶಿವಾಜಿ ವಣ್ಣೂರನ ಕಾರ್ಯವೈಖರಿ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಲವು ದಿನಗಳಿಂದ ಅಧ್ಯಕ್ಷನ ವಿರುದ್ಧ ಗ್ರಾಮ ಪಂಚಾಯ್ತಿ ಸದಸ್ಯರ ಗುಂಪೊಂದು ಅವಿಶ್ವಾಸ ನಿರ್ಣಯ ಹೊರಡಿಸಲು ಯತ್ನಿಸಿತ್ತು ಆದರೇ ಸಫಲಗೊಂಡಿರಲಿಲ್ಲ. ಆದರೆ ಡಿಸೆಂಬರ್ 7ಕ್ಕೆ ಹತ್ಯೆಯಾದ ಬನ್ನೆಪ್ಪ ಪಾಟೀಲ್ ನೇತೃತ್ವದಲ್ಲಿ ಸದಸ್ಯರು ಮತ್ತೊಮ್ಮೆ ಅಧ್ಯಕ್ಷನ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಿದ್ದರು. ಇದು ಶಿವಾಜಿ ವಣ್ಣೂರನ ಹತಾಶೆಗೆ ಕಾರಣವಾಗಿತ್ತು.

    ಗುರುವಾರ ರಾತ್ರಿ 9 ಗಂಟೆ ಸಮಯದಲ್ಲಿ ನಡು ಊರಿನಲ್ಲೇ ಸದಸ್ಯ ಬನ್ನಪ್ಪೆ ಪಾಟೀಲ್‍ನನ್ನು ಶಿವಾಜಿ ವಣ್ಣೂರ ಹಾಗೂ ಬೆಂಬಲಿಗರು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಗ್ರಾಮ ಪಂಚಾಯತಿಯಲ್ಲಿ ತನ್ನ ವಿರುದ್ಧ ಕೈಗೊಂಡ ಅವಿಶ್ವಾಸ ನಿರ್ಣಯ ಪ್ರಶ್ನಿಸಿ ಶಿವಾಜಿ ವಣ್ಣೂರ ಹೈಕೋರ್ಟ್ ಮೆಟ್ಟಿಲು ಏರಿದ್ದನು. ಹೈಕೋರ್ಟ್ ತೀರ್ಪು ಪ್ರಕಟವಾಗುವ ಮೊದಲೇ ಈ ಭೀಕರ ಹತ್ಯೆ ನಡೆದಿದೆ. ಕೊಲೆಯಾದ ಬನ್ನೆಪ್ಪ ಪಾಟೀಲ್ ಹಾಗೂ ಪತ್ನಿ ಸವಿತಾ ಪಾಟೀಲ್ ಇಬ್ಬರು ಸಹ ಪಂಚಾಯತ್ ಸದಸ್ಯರಾಗಿದ್ದಾರೆ. ಈ ಘಟನೆ ಇಡೀ ಹೊಸ ವಂಟಮೂರಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಕಾಕಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.

    ಹೊಸ ವಂಟೂರಿ ಗ್ರಾಮವು ಶಾಸಕ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಬಹತೇಕ ಎಲ್ಲಾ ಸದಸ್ಯರು ಕಾಂಗ್ರೆಸ್ ಪಕ್ಷದ ಬೆಂಬಲಿಗರೇ ಆಗಿದ್ದಾರೆ. ಈಗ ಪಂಚಾಯತ್ ಚುನಾವಣೆ ದ್ವೇಷಕ್ಕೆ ಸದಸ್ಯರೊಬ್ಬರು ಬಲಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಹುಕಾಲ ನೋಡಿ ವಾಹನದಿಂದಿಳಿದ ಸಚಿವ ರೇವಣ್ಣ

    ರಾಹುಕಾಲ ನೋಡಿ ವಾಹನದಿಂದಿಳಿದ ಸಚಿವ ರೇವಣ್ಣ

    ಬೆಳಗಾವಿ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬೆಳಗಾವಿಯಲ್ಲೂ ಮತ್ತೆ ರಾಹುಕಾಲ ನೋಡಿ ವಾಹನದಿಂದ ಇಳಿದಿದ್ದಾರೆ.

    ಬೆಳಗಾವಿ ಕೆಶಿಪ್ ಅವತಿಯಿಂದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಭಾಗವಹಿಸಲು ರೇವಣ್ಣ ಅವರು ರಾಹುಕಾಲ ವೀಕ್ಷಿಸಿದ್ದಾರೆ. ಕಾರ್ಯಕ್ರಮ ಸ್ಥಳಕ್ಕೆ ರೇವಣ್ಣ ಬಂದರೂ ವಾಹನದಿಂದ ಇಳಿಯಲಿಲ್ಲ. ರಾಹುಕಾಲ ಮುಗಿದ ಬಳಿಕವೇ ರೇವಣ್ಣ ವಾಹನದಿಂದ ಇಳಿದಿದ್ದಾರೆ.

    ಸಚಿವ ರೇವಣ್ಣ ಅವರು ಕಾರ್ಯಕ್ರಮಕ್ಕೆ 9.40ಕ್ಕೆ ಆಗಮಿಸಿದ್ದರು. ಆದರೆ ರಾಹುಕಾಲ ಇದ್ದ ಕಾರಣ ಅವರು 9.54 ನಿಮಿಷಕ್ಕೆ ವಾಹನದಿಂದ ಇಳಿದಿದ್ದಾರೆ. ಬೆಳಗ್ಗೆ 10 ಗಂಟೆಗೆ ಕೆಶಿಪ್ ಅವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ ಉದ್ಘಾಟನೆ ಆಗಬೇಕಿತ್ತು.

    ಸರಿಯಾದ ಸಮಯಕ್ಕೆ ಸಿಎಂ ಕುಮಾರಸ್ವಾಮಿ ಬಾರದ ಕಾರಣ ಸಚಿವ ಎಚ್.ಡಿ ರೇವಣ್ಣ ಅಭಿಯಾನ ಪ್ರಾತ್ಯಕ್ಷಿಕೆ ನೋಡಿ ಸದನಕ್ಕೆ ಮರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವತಿಯರು ಮಾರಾಟಕ್ಕಿದ್ದಾರೆ- ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋ ವೈರಲ್

    ಯುವತಿಯರು ಮಾರಾಟಕ್ಕಿದ್ದಾರೆ- ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋ ವೈರಲ್

    ಬೆಳಗಾವಿ: ಜಿಲ್ಲೆಯಲ್ಲಿ ಒಂದು ಕಡೆ ಅಧಿವೇಶನ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಪಡ್ಡೆ ಹುಡುಗರ ಕೈಯಲ್ಲಿರುವ ಮೊಬೈಲ್‍ಗಳಲ್ಲಿ ಯುವತಿಯರ ಫೋಟೋಗಳು ಸದ್ದು ಮಾಡುತ್ತಿವೆ.

    ರಂಭೆ, ಊರ್ವಶಿ ಹಾಗೂ ಮೇನಕೆಯರನ್ನು ನಾಚಿಸುವಂತಹ ಬೆಡಗಿಯರು ಬೆಳಗಾವಿಗೆ ಬಂದಿಳಿದಿದ್ದಾರೆ ಎಂದು ವಾಟ್ಸಾಪ್ ಮೆಸೇಜ್ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿಂದತೆ ಕೆಲ ಯುವತಿಯರ ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋಗಳು ಫುಲ್ ವೈರಲ್ ಮಾಡಿದ್ದಾರೆ. ಇದು ಕುಂದಾನಗರ ಜನರ ಗಂಡಸರು ಹಾಗೂ ಅಧಿವೇಶನದ ಭದ್ರತೆಯಲ್ಲಿರುವ ಪೊಲೀಸರಿಗೆ ತಲೆಕಡೆಸಿದೆ.

    ಈ ಯುವತಿಯರ ಮಾರಾಟಕ್ಕಿದ್ದಾರೆಂದು ಅವರ ದರ ಪಟ್ಟಿಯನ್ನ ವಾಟ್ಸಾಪ್‍ನಲ್ಲಿ ಹರಿಬಿಟ್ಟಿದ್ದಾರೆ
    * ಒಂದರಿಂದ ಒಂದೂವರೆ ಗಂಟೆಗೆ – 10ಸಾವಿರ ರೂ
    * ಮೂರರಿಂದ ಮೂರೂವರೆ ಗಂಟೆಗೆ – 20 ಸಾವಿರ ರೂ
    * 6 ರಿಂದ 7 ಗಂಟೆಗಳ ಕಾಲ – 30 ಸಾವಿರ ರೂ
    * 7 ರಿಂದ 8 ಗಂಟೆಗಳ ಕಾಲ – 40 ಸಾವಿರ ರೂ
    * ಯುವತಿ 24 ಗಂಟೆಗಳ ಕಾಲ ನಿಮ್ಮ ಜೊತೆಯಲ್ಲೇ ಇರಬೇಕಂದರೆ 60 ಸಾವಿರ ರೂಪಾಯಿ ಕೊಡಬೇಕಂತೆ ಅಂತ ಹರಿದಾಡುತ್ತಿದೆ.

    ಇದರಲ್ಲಿರುವ ಫೋನ್ ನಂಬರ್ ಗೆ ಕಾಲ್ ಮಾಡಿದರೆ ಅವರು ರಿಸೀವ್ ಮಾಡುತ್ತಿಲ್ಲ. ಇದರಲ್ಲಿರುವ ಯುವತಿಯರ ಫೋಟೋ ಅಸಲಿಯೋ, ನಕಲಿಯೋ ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದು, ಒಳ್ಳೆ ಕುಟುಂಬದ ಯುವತಿಯರು ಯಾವುದಾದರೂ ಇದ್ದು, ಬೇಕಂತಲೇ ಕೆಲವರು ಇವುಗಳನ್ನು ಹರಿಬಿಟ್ಟಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ. ಆದರೆ ಈ ರೀತಿ ನೂರಾರು ಫೋಟೋಗಳು ಹರಿಬಿಟ್ಟಿರುವುದು ಪೊಲೀಸರ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಇಂದು ಚಿಕ್ಕೋಡಿ ಬಂದ್‍ಗೆ ಕರೆ

    ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಇಂದು ಚಿಕ್ಕೋಡಿ ಬಂದ್‍ಗೆ ಕರೆ

    ಚಿಕ್ಕೋಡಿ(ಬೆಳಗಾವಿ): ಪ್ರತ್ಯೇಕ ಜಿಲ್ಲೆಗಾಗಿ ಆಗ್ರಹಿಸಿ ಇಂದು ಚಿಕ್ಕೋಡಿ ಬಂದ್‍ಗೆ ಕರೆ ನೀಡಲಾಗಿದೆ. ಬೆಳಗಾವಿ ಅಧಿವೇಶನ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಚಿಕ್ಕೋಡಿ ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದೆ.

    ಈಗಾಗಲೇ ಚಿಕ್ಕೋಡಿಯನ್ನ ಶೈಕ್ಷಣಿಕ ಜಿಲ್ಲೆ ಎಂದು ಘೋಷಿಸಲಾಗಿದ್ದರೂ ಆಡಳಿತಾತ್ಮಕ ದೃಷ್ಟಿಯಿಂದ ಚಿಕ್ಕೋಡಿಯನ್ನ ಜಿಲ್ಲೆ ಮಾಡುವಂತೆ ಹೋರಾಟಗಾರರರು ಒತ್ತಾಯಿಸಲಿದ್ದಾರೆ. ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿರುವ ಬೆಳಗಾವಿ ಜಿಲ್ಲೆಯನ್ನ ಆಡಳಿತಾತ್ಮಕ ದೃಷ್ಟಿಯಿಂದ ಒಡೆಯಬೇಕಿರುವ ಅನಿವಾರ್ಯತೆ ಸರ್ಕಾರದ ಮೇಲಿದ್ದರೂ ಗಡಿ ವಿವಾದ ಹಾಗೂ ಕೇಂದ್ರೀಕೃತ ರಾಜಕಾರಣಕ್ಕೆ ಚಿಕ್ಕೋಡಿ ಜಿಲ್ಲೆಯಾಗಿಲ್ಲ.

    ಹೀಗಾಗಿ ಹಲವು ವರ್ಷಗಳಿಂದ ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟಗಾರರು ನಡೆಸುತ್ತಿರುವ ಹೋರಾಟ, ಹೋರಾಟವಾಗಿಯೇ ಉಳಿದಿದೆ. ಒಟ್ಟಿನಲ್ಲಿ ಇಂದಿನ ಚಿಕ್ಕೋಡಿ ಬಂದ್ ಸರ್ಕಾರಕ್ಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟಿಪ್ಪು ಜಯಂತಿ ಆಚರಣೆ ಕುರಿತ ಚರ್ಚೆಗೆ ಆಗ್ರಹ – ಬಿಜೆಪಿ ಬೆಂಬಲಕ್ಕೆ ನಿಂತ ಬಸವರಾಜ ಹೊರಟ್ಟಿ

    ಟಿಪ್ಪು ಜಯಂತಿ ಆಚರಣೆ ಕುರಿತ ಚರ್ಚೆಗೆ ಆಗ್ರಹ – ಬಿಜೆಪಿ ಬೆಂಬಲಕ್ಕೆ ನಿಂತ ಬಸವರಾಜ ಹೊರಟ್ಟಿ

    ಬೆಳಗಾವಿ: ವಿಧಾನ ಪರಿಷತ್ ಕಲಾಪದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದ ಚರ್ಚೆಗೆ ಪಟ್ಟು ಹಿಡಿದ ವೇಳೆ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸದಸ್ಯರ ಬೆಂಬಲಕ್ಕೆ ನಿಂತಿದ್ದಾರೆ.

    ಪರಿಷತ್‍ನಲ್ಲಿ ಟಿಪ್ಪು ಜಯಂತಿ ಕುರಿತ ಚರ್ಚೆಗೆ ಸಿಎಂ ಕುಮಾರಸ್ವಾಮಿ ಅವರು ಕಾಲಾವಕಾಶ ಕೇಳಿದ್ರು, ಹೀಗಾಗಿ ಸಭಾಪತಿಗಳು ಚರ್ಚೆಗೆ ಅವಕಾಶ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು, ಸಂಜೆ ಒಳಗೆ ಸಿಎಂ ಉತ್ತರ ಕೊಡಲೇಬೇಕು ಅಂತ ಬಿಗಿಪಟ್ಟು ಹಿಡಿದರು.

    ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದಂತೆ ಅಚ್ಚರಿಯ ರೀತಿಯಲ್ಲಿ ಬೆಂಬಲಕ್ಕೆ ನಿಂತ ಹೊರಟ್ಟಿ ಅವರು, ಹೌದು, ಅಜೆಂಡಾದಿಂದ ಯಾಕೆ ಇದನ್ನು ಬಿಟ್ಟಿದ್ದೀರಿ ಎನ್ನುವುದನ್ನು ಹೇಳಬೇಕು. ಸರ್ಕಾರ ವಿಪಕ್ಷಕ್ಕೆ ಮನವರಿಕೆ ಮಾಡಬೇಕು ಎಂದರು. ನಂತರ ಮಾತನಾಡಲು ಮುಂದಾದ ಐವಾನ್ ಡಿಸೋಜಾ ಅವರನ್ನು ಹೊರಟ್ಟಿ ತರಾಟೆಗೆ ತೆಗೆದುಕೊಂಡರು. ಈ ರೀತಿ ಮಾಡಿ ದಾರಿ ತಪ್ಪಿಸಬೇಡಿ. ನೀವು ಸುಮ್ನೆ ಕುಳಿತುಕೊಳ್ಳಿ ಅಂತ ಹೇಳಿ ಗದರಿದರು.

    ಹೊರಟ್ಟಿ ಅವರ ಮಾತಿನಂತೆ ಐವಾನ್ ಡಿಸೋಜಾ ಅವರು ತಮ್ಮ ಸ್ಥಾನದಲ್ಲಿ ಕುಳಿತರು. ಬಳಿಕ ಮಾತನಾಡಿದ ಸಚಿವೆ ಜಯಮಾಲಾ ಅವರು ಎರಡು ದಿನ ಸಮಯ ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ಒಪ್ಪಿಗೆ ನೀಡಲಿಲ್ಲ. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಸಾರಾ ಮಹೇಶ್ ಅವರು, ನೀವು ಹೇಳಿದಂತೆ ಕೇಳಬೇಕಿಲ್ಲ ಎಂದು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು. ಸರ್ಕಾರ ನಡೆಯನ್ನು ವಿರೋಧಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.

    ಸಿಎಂ ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ವಿಚಾರದಲ್ಲಿ ನಿಲುವು ತಿಳಿಸಲು ಹಿಂದೇಟು ಹಾಕುತ್ತಿದ್ದಾರೆ. ಅದ್ದರಿಂದಲೇ 15 ದಿನಗಳ ಕಾಲಾವಕಾಶ ಕೇಳಿ ಪಲಾಯನ ಮಾಡುತ್ತಿದ್ದಾರೆ. ಅದ್ದರಿಂದ ನಮಗೇ ಈ ಕುರಿತು ತಮ್ಮ ನಿಲುವುವಿನ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಸಚಿವ ಕೃಷ್ಣಬೈರೈಗೌಡ ಮಾತನಾಡಿ ಈ ಕುರಿತು ಸಿಎಂ ಕುಮಾರಸ್ವಾಮಿ ಅವರ ಜೊತೆ ಮಾತನಾಡುತ್ತೇನೆ. ಏಕೆ ಹೆಚ್ಚಿನ ಸಮಯ ಕೇಳಿದರು ಎಂದು ತಿಳಿದುಕೊಂಡು ಹೇಳುತ್ತೇನೆ ಎಂದರು. ಆದರೆ ಇವರ ಸಮಾಜಯಿಸಿಗೆ ಕೂಡ ಬಿಜೆಪಿ ನಾಯಕರು ಸಮ್ಮತಿ ಸೂಚಿಸಲಿಲ್ಲ. ಗದ್ದಲ ಜಾಸ್ತಿಯಾದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಮುಂದೂಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv