Tag: belagavi

  • ಬೆಳಗಾವಿ| ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವು

    ಬೆಳಗಾವಿ| ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವು

    ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು (Maternal Death) ಸಾವನ್ನಪ್ಪಿದ್ದಾರೆ.

    ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಕೊಡಬಾಗಿ ಅವರು ಹೆರಿಗೆಗಾಗಿ ಬೆಳಗಾವಿ ಬಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸಿಸೇರಿಯನ್ ಮೂಲಕ‌ ಹೆಣ್ಣು ಮಗುವಿಗೆ ಜನ್ಮ ನೀಡಿದ ವೈಶಾಲಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಬಳ್ಳಾರಿ ಬಳಿಕ ಬೆಳಗಾವಿಯಲ್ಲೂ ಬಾಣಂತಿಯರು, ಶಿಶುಗಳ ಸಾವು!

    ತಕ್ಷಣ ಬಾಣಂತಿ ವೈಶಾಲಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿತ್ತಾದರೂ, ಚಿಕಿತ್ಸೆ ಫಲಿಸದೇ ಮರಣ ಹೊಂದಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿಲ್ಲ ಎಂದು ವೈಶಾಲಿ ಪತಿ ಈರಣ್ಣ ಆರೋಪಿಸಿದ್ದಾರೆ.

    ಈ ಘಟನೆಯಿಂದ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಎಪಿಎಂಸಿ ಪೊಲೀಸರು ಆಗಮಿಸಿದ್ದಾರೆ.

    ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ 29 ಬಾಣಂತಿಯರು ಸಾವಿಗೀಡಾಗಿದ್ದಾರೆಂದು ವರದಿಯಾಗಿತ್ತು. ಈಗ ಮತ್ತೊಂದು ಸಾವಾಗಿದೆ. ಬಾಣಂತಿಯರ ಸಾವಿಗೆ ಬಹುಅಂಗಾಂಗ ವೈಫಲ್ಯ, ಕಿಡ್ನಿ ಸಮಸ್ಯೆ ಕಾರಣ ಎಂದು ಈಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದರು. ಇದನ್ನೂ ಓದಿ: ಸರ್ಕಾರದ ಬೇಜವಾಬ್ದಾರಿತನದಿಂದ ಬಾಣಂತಿಯರು, ಹಸುಗೂಸುಗಳ ಸಾವು : ವಿಜಯೇಂದ್ರ

  • ಆ ಬಣ ಈ ಬಣ ಎನ್ನದೇ ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರು

    ಆ ಬಣ ಈ ಬಣ ಎನ್ನದೇ ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರು

    ಬೆಂಗಳೂರು: ಸುವರ್ಣಸೌಧದಿಂದ ಸಿ.ಟಿ.ರವಿ (CT Ravi) ಆರೆಸ್ಟ್ ಆದ ಬಳಿಕ ಬಿಜೆಪಿ (BJP) ಒಗ್ಗಟ್ಟು ಪ್ರದರ್ಶಿಸಿದೆ. ಮಾಧ್ಯಮಗಳ ಮುಂದೆ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದ ಬಿಜೆಪಿಯ ದೊಡ್ಡ ನಾಯಕರು ಎಲ್ಲರೂ ಸಿಟಿ ರವಿ ರಕ್ಷಣೆ ನಿಂತಿದ್ದರು.

    ಶುಕ್ರವಾರವೇ ವಿಧಾನ ಸೌಧದಲ್ಲಿ ಬೆಲ್ಲದ್‌ ಮತ್ತು ಯತ್ನಾಳ್‌ ಪೊಲೀಸ್‌ ವ್ಯಾನ್‌ ತಡೆದಿದ್ದರು. ನಂತರ ಖಾನಾಪುರ ಪೊಲೀಸ್ ಠಾಣೆಗೆ ಬಿಜೆಪಿ ನಾಯಕರು ತೆರಳಿದ್ದರು. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶನವಾಗಿತ್ತು. ಬೆಂಗಳೂರಿನಿಂದ ವಿಮಾನವೇರಿ ಬಿ.ವೈ ವಿಜಯೇಂದ್ರ ಬೆಳಗಾವಿಗೆ ಬದಿದ್ದರು. ಈ ಬಣ ಎನ್ನದೇ ಪಕ್ಷದೊಳಗಿನ ಅಸಮಾಧಾನ ಕಿತ್ತೆಸೆದು ಹೋರಾಟ ನಡೆಸಿದ್ದರು. ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ

     

    ಪಬ್ಲಿಕ್‌ ಟಿವಿಯ ವಿಶೇಷ ಸಂದರ್ಶನಲ್ಲಿ ಬಿಜೆಪಿ ನಾಯಕರ ನಡುವಿನ ಒಗ್ಗಟ್ಟಿನ ಬಗ್ಗೆ ಸಿಟಿ ರವಿ ಪ್ರತಿಕ್ರಿಯಿಸಿ, ರಾಷ್ಟ್ರ, ಸಿದ್ಧಾಂತದ ವಿಚಾರ ಬಂದಾಗ ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು ಒಂದಾಗುತ್ತಾರೆ. ಮಾಜಿ ಸಿಎಂ ಯಡಿಯರೂಪ್ಪ ಅವರು ಕರೆ ಮಾಡಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ, ಗೃಹ ಸಚಿವ ಅಮಿತ್‌ ಶಾ, ಬಿಎಲ್‌ ಸಂತೋಷ್ ಮಾತನಾಡಿದರು. ವಿಜಯೇಂದ್ರ ಅವರು ಮೊದಲ ವಿಮಾನ ಹತ್ತಿ ಬೆಳಗಾವಿಗೆ ಬಂದಿದ್ದರು. ಚೆಕ್‌ ಇನ್‌ ಆಗಿದ್ದ ವಿರೋಧ ಪಕ್ಷದ ನಾಯಕರಾದ ಅಶೋಕ್‌, ಛಲವಾದಿ ನಾರಾಯಣ ಸ್ವಾಮಿ ವಿಷಯ ತಿಳಿದು ವಿಮಾನ ನಿಲ್ದಾಣದಿಂದ ಮರಳಿದರು ಎಂದು ತಿಳಿಸಿದರು.

     

    ಬಸನ ಗೌಡ ಪಾಟೀಲ್‌ ಯತ್ನಾಳ್‌ ವಿಷಯ ತಿಳಿದು ದಾರಿ ಮಧ್ಯದಿಂದ ರಿಟರ್ನ್‌ ಆದರು. ಅರವಿಂದ್‌ ಬೆಲ್ಲದ್‌ ನಮ್ಮ ಜೊತೆಗೆ ಇದ್ದರು. ಅಭಯ್‌ ಪಾಟೀಲ್‌ ವಕೀಲರ ಸಮೂಹವನ್ನೇ ಸಿದ್ಧಮಾಡಿದ್ದರು. ನನ್ನ ಪರವಾಗಿ ಹೈಕೋರ್ಟ್‌ ಮತ್ತು ಸೆಷನ್‌ ಕೋರ್ಟ್‌ನಲ್ಲಿ ಅರ್ಜಿ ಸಹ ಸಲ್ಲಿಕೆಯಾಗಿತ್ತು. ಇದೆಲ್ಲ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು.

  • ಸಿ.ಟಿ ರವಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ – ಹೆಗಲ ಮೇಲೆ ಹೊತ್ತು ಕಾರ್ಯಕರ್ತರ ಸಂಭ್ರಮ

    ಸಿ.ಟಿ ರವಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ – ಹೆಗಲ ಮೇಲೆ ಹೊತ್ತು ಕಾರ್ಯಕರ್ತರ ಸಂಭ್ರಮ

    ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Lakshmi Hebbalkar) ಅಸಂವಿಧಾನಿಕ ಪದ ಬಳಸಿದ ಆರೋಪದ ಮೇಲೆ ಬಂಧನವಾಗಿದ್ದ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿಗೆ (CT Ravi) ನ್ಯಾಯಾಲಯ ಜಾಮೀನು ನೀಡಿದೆ. ಈ ಬೆನ್ನಲ್ಲೇ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.

    ಕಾರ್ಯಕರ್ತರು ಪಟಾಕಿ ಸಿಡಿಸಿ, ಹಾರ ಹಾಕಿ ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡಿದ್ದಾರೆ. ಸಿ.ಟಿ ರವಿ ಅವರನ್ನ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದಾರೆ. ಇದೇ ವೇಳೆ ಕೈ ಮುಗಿದು ಧನ್ಯವಾದ ಹೇಳಿರುವ ಸಿ.ಟಿ ರವಿಗೆ, ನಿಮ್ಮೊಂದಿಗೆ ನಾವಿದ್ದೇವೆ, ಹೆದರಬೇಡಿ ಅಭಯ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ರವಿ, ನೀವೆಲ್ಲ ನನಗೆ ಧೈರ್ಯ ತುಂಬಿದ್ದೀರಿ, ಎಲ್ಲವನ್ನೂ ಮಾತನಾಡೋಣ, ತುಂಬಾ ಧನ್ಯವಾದ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಸಿ.ಟಿ.ರವಿ ಬಿಡುಗಡೆಗೆ ಕೋರ್ಟ್‌ ಆದೇಶ – ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

    ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ ರವಿ ರೋಷಾಗ್ನಿ:
    24 ಗಂಟೆ ಪೊಲೀಸರ ವಶದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೈಕೋರ್ಟ್ ಆದೇಶದಡಿ ಬಿಡುಗಡೆ ಆಗಿದ್ದೇ ತಡ ಚಿಕ್ಕಮಗಳೂರು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಡ್ರಮ್ ಸೆಟ್ ಶಬ್ಧಕ್ಕೆ ರಸ್ತೆ-ರಸ್ತೆಯಲ್ಲಿ ಕುಣಿದು-ಕುಪ್ಪಳಿಸಿ ಸಂಭ್ರಮಿಸಿದರು. ಸುಳ್ಳು ಕೇಸ್ ಸೋಲ್ತು… ಸತ್ಯ ಗೆಲ್ತು ಎಂದು ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ರು.

    ಇತ್ತ ಬೇಲ್ ಸಿಕ್ಕ ಮರು ಕ್ಷಣವೇ ಎಂಎಲ್‌ಸಿ ಸಿ.ಟಿ.ರವಿ, ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿ.ಟಿ.ರವಿಗೆ ಬಿಗ್‌ ರಿಲೀಫ್‌ – ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶ

    ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಹೈಡ್ರಾಮಾ ಬಳಿಕ ಪೊಲೀಸರು ಎಂಎಲ್‌ಸಿ ಸಿ.ಟಿ.ರವಿರನ್ನ ಬಂಧಿಸಿದ್ದರು. ರಾತ್ರಿ ಇಡೀ ಸಿ.ಟಿ.ರವಿಯನ್ನ ಬೆಳಗಾವಿ ಜಿಲ್ಲೆಯಾದ್ಯಂತ ಸುತ್ತಾಡಿಸಿ ರಾತ್ರಿಪೂರ ಜಾಗರಣೆ ಮಾಡಿಸಿದ್ರು. ಈ ವೇಳೆ, ಸಿಟಿ ರವಿ ಪೊಲೀಸರು ನನ್ನನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾರೆಂದು ಕಿಡಿಕಾರಿದರು. ಬಳಿಕ ಬೆಳಗ್ಗೆ ಕೋರ್ಟ್‌ಗೆ ಹಾಜರಾದ ಸಿಟಿ ರವಿಗೆ ಬೇಲ್ ಸಿಕ್ಕಿತ್ತು. ಬೇಲ್ ಸಿಕ್ಕ ಬೆನ್ನಲ್ಲೇ ದಾವಣಗೆರೆಯ ಸರ್ಕೀಟ್‌ ಹೌಸ್‌ನಲ್ಲಿ ಸಿ.ಟಿ ರವಿ ಸುದ್ದಿಗೋಷ್ಠಿ ನಡೆಸಿದ್ರು. ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ಸಾಥ್ ನೀಡಿದ್ರು.

    ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ.ರವಿ ಸತ್ಯಾಮೇವ ಜಯತೇ ಎಂದು ಹೇಳಿದ್ರು. ಪೊಲೀಸರು ಯಾವುದೇ ನೋಟಿಸ್ ಕೊಡದೆ ಬಂಧನ ಮಾಡಿದ್ದು, 4 ಜಿಲ್ಲೆ, 50ಕ್ಕೂ ಹೆಚ್ಚು ಗ್ರಾಮ 14 ಗಂಟೆಗೂ ಅಧಿಕ ಕಾಲ ನನ್ನನ್ನು ಪೊಲೀಸರು ಸುತ್ತಾಡಿಸಿ ಮಾನಸಿಕ ಹಿಂಸೆ ನೀಡಿದ್ರು ಅಂತ ಆರೋಪಿಸಿದ್ರು.

    ಇನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ನೋಟೀನ್ ನೀಡದೆ ಶಾಸಕರನ್ನು ಬಂಧನ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ರು. ಬೆಳಗಾವಿಯಿಂದ ಸಿಟಿ ರವಿ ಬಿಟ್ಟಿದ್ದೇ ಹೆಚ್ಚು ಎನ್ನುವ ದಾಟಿಯಲ್ಲಿ ಡಿಕೆಶಿ ಹೇಳುತ್ತಾರೆ. ನಿಮ್ಮ ಗೂಂಡಾ ವರ್ತನೆ ಇಲ್ಲಿ ನಡೆಯೋದಿಲ್ಲ ಎಂದು ಎಚ್ಚರಿಕೆ ನೀಡಿದ್ರು.

    https://youtu.be/YlG_OlaLqTs?si=PdsygCcmQkaDUCfm

    ಈ ಮಧ್ಯೆ, ವಿಪಕ್ಷ ನಾಯಕರ ಆರ್.ಅಶೋಕ್ ಮಾತನಾಡಿ, ಸರ್ಕಾರದ ವಿರದ್ಧ ಹೋರಾಟಕ್ಕೆ ಸಭೆ ನಡೆಸೋದಾಗಿ ಹೇಳಿದ್ರು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರವೇಶ ನೀಡದ ವಿಚಾರ ಪ್ರಸ್ತಾಪಿಸಿದ್ರು. ಅವನ್ಯಾರೋ ಪೊಲೀಸ್ ಕಮಿಷನರ್ ವ್ಯಾಪ್ತಿಗೆ ಬರದಿದ್ರೂ ನನ್ನನ್ನು ತಡೆದ್ರು ಅಂತ ಕಿಡಿಕಾರಿದ್ರು.

  • ಸಿ.ಟಿ ರವಿ ಕೇಸ್‌ ಬೆಂಗಳೂರಿಗೆ ಶಿಫ್ಟ್‌ – ಬೆಳಗಾವಿ ಕೋರ್ಟ್‌ ಆದೇಶ

    ಸಿ.ಟಿ ರವಿ ಕೇಸ್‌ ಬೆಂಗಳೂರಿಗೆ ಶಿಫ್ಟ್‌ – ಬೆಳಗಾವಿ ಕೋರ್ಟ್‌ ಆದೇಶ

    ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸಂವಿಧಾನಿಕ ಪದಬಳಕೆ ಆರೋಪ ಪ್ರಕರಣದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೋರ್ಟ್‌ ಆದೇಶ ಪ್ರಕಟಿಸಿದೆ.

    ಸಿ.ಟಿ ರವಿ ಅವರನ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಳಗಾವಿ 5ನೇ ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀರಾದ ಸ್ಪರ್ಶಾ ಡಿಸೋಜಾ ಅವರು ಆದೇಶಿಸಿದ್ದಾರೆ. ಅದರಂತೆ ಟ್ರಾಂಜಿಟ್ ವಾರೆಂಟ್ ಮೇಲೆ ಪೊಲೀಸರು ಸಿ.ಟಿ ರವಿ ಅವರನ್ನ ಕರೆತರಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಹಿರೇಬಾಗೇವಾಡಿ ಪೊಲೀಸರು ಇಂದು ಬೆಳಗ್ಗೆ ಬೆಳಗಾವಿ ಕೋರ್ಟ್‌ಗೆ ಸಿ.ಟಿ ರವಿ ಅವರನ್ನು ಹಾಜರುಪಡಿಸಿದ್ದರು. ಈ ವೇಳೆ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್‌ ಆದೇಶ ಕಾಯ್ದಿರಿಸಿತ್ತು. ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದ್ರು. ಅದಕ್ಕೆ ಕೋರ್ಟ್‌ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

    ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರು ತಲುಪುವ ಅವಧಿ ಹೊರತುಪಡಿಸಿ, ಬೆಂಗಳೂರು ತಲುಪಿದ ಕೂಡಲೇ ಜನ ಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ಯಾವುದೇ ರೀತಿಯ ತೊಂದರೆ ಎಚ್ಚರವಹಿಸುವಂತೆಯೂ ಕೋರ್ಟ್‌ ತಾಕೀತು ಮಾಡಿದೆ.

  • ಸಿ.ಟಿ ರವಿ ಅಶ್ಲೀಲ ಪದ ಬಳಸಿದ್ದರೆ ಅದನ್ನ ನಾನೂ ಸಮರ್ಥಿಸಲ್ಲ – ಹೆಚ್‌ಡಿಕೆ

    ಸಿ.ಟಿ ರವಿ ಅಶ್ಲೀಲ ಪದ ಬಳಸಿದ್ದರೆ ಅದನ್ನ ನಾನೂ ಸಮರ್ಥಿಸಲ್ಲ – ಹೆಚ್‌ಡಿಕೆ

    – ಆ ಗೂಂಡಾಗಳು ಕೊಲೆಗೆತ್ನಿಸುತ್ತಾರೆಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ
    – MLC ಸಿ.ಟಿ ರವಿ ಮೇಲೆ ಹಲ್ಲೆ ಯತ್ನ; ಕುಮಾರಸ್ವಾಮಿ ತೀವ್ರ ಖಂಡನೆ

    ನವದೆಹಲಿ: ಬೆಳಗಾವಿಯ ಸುವರ್ಣಸೌಧದಲ್ಲಿಯೇ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರ ಮೇಲೆ ನಡೆದಿರುವ ಹಲ್ಲೆ ಯತ್ನವನ್ನು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಕೇಂದ್ರ ಸಚಿವರು, ಸಚಿವೆ ಬಗ್ಗೆ ಸಿ.ಟಿ.ರವಿ (CT Ravi) ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಹ ಸಮರ್ಥಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಖದ್ದು ಎಂದು ಕಿಡಿಕಾರಿದ್ದಾರೆ.

    ಕರ್ನಾಟಕದಲ್ಲಿ ಪ್ರಜಾಪ್ರಭುತ್ವ (Democracy in Karnataka) ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ. ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಅಂದ್ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ? ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರ ಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನ ನಡೆದಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವ್ದೇ ನಿರ್ಧಾರಕ್ಕೆ ಬರೋದು ತಪ್ಪು: ಬೊಮ್ಮಾಯಿ

    ಗೌರವಾನ್ವಿತ ಸಚಿವೆ ಬಗ್ಗೆ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಖದ್ದು. ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿದೆ. ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ. ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ. ಸರ್ಕಾರದಲ್ಲಿರುವ ಕೆಲವರು ಈ ಘಟನೆಗೆ ಜ್ವಾಲೆ ಸ್ವರೂಪ ನೀಡಿ ಪ್ರಚೋದಿಸುತ್ತಿರುವ ಬಗ್ಗೆ ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.

    ಯಾವ ಬಂಡೆಯ ಕರಾಮತ್ತು?
    ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಪೌರುಷ ಮೆರೆದಿತ್ತು ಕಾಂಗ್ರೆಸ್ ಸರ್ಕಾರ. ಅಂದು ಪೊಲೀಸರ ಪ್ರತಾಪ ಹೇಳತೀರದು. ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೊಲೀಸರೇ, ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು? ಅಥವಾ ಅವರೇ ನಿಮ್ಮ ಕಣ್ತಪ್ಪಿಸಿ ಒಳ ನುಸುಳಿದರೋ ಅಥವಾ ಸರ್ಕಾರವೇ ಷಡ್ಯಂತ್ರ ಮಾಡಿ ಒಳ ನುಗ್ಗಿಸಿತೋ? ಇಲ್ಲವೇ ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಕೋರ್ಟ್ ಹಾಲ್‌ನಲ್ಲಿ ಕಣ್ಣೀರಿಟ್ಟ ಸಿ.ಟಿ ರವಿ – ಜಾಮೀನಿಗೆ ವಕೀಲರ ಮನವಿ, ಆದೇಶ ಕಾಯ್ದಿರಿಸಿದ ಕೊರ್ಟ್

    ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ, ಕೊಲೆಗೆತ್ನಿಸುತ್ತಾರೆ, ಮಾರ್ಷಲ್’ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ. ಆ ಗೌರವಾನ್ವಿತ ಸಚಿವೆಯ ಆಪ್ತ ಸಹಾಯಕ ಶಾಸಕರ ಮೇಲೇರಿ ಹೋಗುವ, ಕಾರಿಡಾರಿನ ಕಬ್ಬಿಣದ ಬಾಗಿಲನ್ನೇ ಮುರಿಯಲೆತ್ನಿಸಿ ಹಲ್ಲೆಗೆ ಯತ್ನಿಸುವ ದೃಶ್ಯಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ರಾಜ್ಯದಲ್ಲಿ ಆಡಳಿತ ಸುರಕ್ಷಿತ ಕೈಗಳಲ್ಲಿ ಇಲ್ಲ ಎನ್ನುವುದಕ್ಕೆ ಆ ದೃಶ್ಯಗಳೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.

    ಸುವರ್ಣಸೌಧಕ್ಕೆ ನುಗ್ಗಿದ ಗೂಂಡಾಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಪಟ್ಟಿ ತೆರೆಯಬೇಕು. ಸಮಾಜದ ಶಾಂತಿಗೆ ಬೆದರಿಕೆಯಾಗಿರುವ ಆ ಕಿಡಿಗೇಡಿಗಳನ್ನು ಸುವರ್ಣಸೌಧ, ವಿಧಾನಸೌಧದಿಂದ ಶಾಶ್ವತವಾಗಿ ನಿರ್ಬಂಧಿಸಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ. ಪೊಲೀಸರೇ, ಇಡೀ ಪ್ರಕರಣದ ಬಗ್ಗೆ ನೀವು ಉತ್ತರಿಸಬೇಕಾಗುತ್ತದೆ. ಇಡೀ ರಾತ್ರಿ ಸಿ.ಟಿ.ರವಿ ಅವರನ್ನು ಪೊಲೀಸ್ ಜೀಪಿನಲ್ಲಿ ಸುತ್ತಿಸುತ್ತೀರಿ ಎಂದರೆ, ಇದಕ್ಕೆ ಯಾರ ಫರ್ಮಾನು ಕಾರಣ? ಈ ಗೂಂಡಾಗಳ ಗ್ಯಾಂಗ್ ಲೀಡರ್ ಯಾರು? ನಿಮಗೆ ಎಲ್ಲಾ ಮಾಹಿತಿ ಇರುತ್ತದೆ, ನೀವೂ ಸತ್ಯ ಹೇಳಬೇಕಾಗುತ್ತದೆ ಎಂದು ಅವರು ಗುಡುಗಿದ್ದಾರೆ. ಇದನ್ನೂ ಓದಿ: ರಾಮಮಂದಿರ ಕಟ್ಟೋದ್ರಿಂದ ಹಿಂದೂ ನಾಯಕನಾಗಲು ಸಾಧ್ಯವಿಲ್ಲ: ಮೋಹನ್‌ ಭಾಗವತ್‌

  • ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವ್ದೇ ನಿರ್ಧಾರಕ್ಕೆ ಬರೋದು ತಪ್ಪು: ಬೊಮ್ಮಾಯಿ

    ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವ್ದೇ ನಿರ್ಧಾರಕ್ಕೆ ಬರೋದು ತಪ್ಪು: ಬೊಮ್ಮಾಯಿ

    – ಕರ್ನಾಟಕದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗ್ತಿದೆ ಎಂದ ಸಂಸದ

    ನವದೆಹಲಿ: ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿಯವರು (CT Ravi) ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಆ ಬಳಿಕವಷ್ಟೆ ಕಾನೂನು ಕ್ರಮವಾಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆಗ್ರಹಿಸಿದರು.

    ದೆಹಲಿಯಲ್ಲಿಂದು (New Delhi) ಮಾತನಾಡಿದ ಅವರು, ಪೊಲೀಸರ ನಡವಳಿಕೆಯನ್ನು ನಾವು ಸಮರ್ಥಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಈ ಸರ್ಕಾರ ಯಾವುದೇ ಶಿಕ್ಷೆ ವಿಧಿಸಲಿಲ್ಲ. ಸಿ.ಟಿ.ರವಿಯವರು ತಾವು ಆ ರೀತಿ ಹೇಳಿಕೆ ನೀಡಲಿಲ್ಲ ಎಂದು ಬಹಳ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಾವು ನ್ಯಾಯ‌ಸಮರ್ಥವಾಗಿ ಮಾತನಾಡುತ್ತಿದ್ದೇವೆ. ನಾವೇನೂ ತನಿಖೆ ಬೇಡ ಎಂದು ಹೇಳಿಲ್ಲವಲ್ಲ. ಸತ್ಯಶೋಧನೆ ಆಗದೇ ತನಿಖೆಯಾಗದೇ ಯಾವುದೇ ಅಂತಿಮನಿರ್ಧಾರಕ್ಕೆ ಬರುವುದು ತಪ್ಪು ಎಂದರು.

    ಕರ್ನಾಟಕದಲ್ಲಿ ಆಡಳಿತ ಹಳಿ ತಪ್ಪಿದೆ:
    ಕರ್ನಾಟಕದಲ್ಲಿ ಆಡಳಿತ ಹಳಿ ತಪ್ಪಿದೆ. ಪೊಲೀಸ್ ರಾಜ್ಯ ನಡೆಯುತ್ತಿದೆ. ಪ್ರತಿಯೊಂದಕ್ಕೂ ಪೋಲಿಸ್ ದುರ್ಬಳಕೆ ಆಗುತ್ತಿದೆ. ವಿರೋಧ ಪಕ್ಷಗಳ ಮೇಲೆ ದ್ವೇಷ ಸಾಧಿಸಲು ಹಲವಾರು ಎಸ್‌ಐಟಿ ರಚನೆ ಮಾಡಿ ಹಲವಾರು ತನಿಖೆ ಮಾಡುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರ ವಿರುದ್ಧವೇ ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆ ದುರ್ಬಳಕೆ ವಿಧಾನಸೌಧದವರೆಗೂ ತಲುಪಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

    ಬೆಳಗಾವಿ ಅಧಿವೇಶನದಲ್ಲಿ ಮೊದಲು ರೈತ ಸಮುದಾಯವಾಗಿರುವ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿ ರಕ್ತ ಸುರಿಸಿದರು. ಹಲವಾರು ಬಾರಿ ರೈತರು, ಇದೇ ಪಂಚಮಸಾಲಿ ಸಮುದಾಯದವರು ಪ್ರತಿಭಟನೆ ಮಾಡಿದಾಗಲೂ ಈ ರೀತಿ ನಡೆದಿರಲಿಲ್ಲ. ಒಂದು ರೀತಿಯಲ್ಲಿ ಪೊಲೀಸರ ದಬ್ಬಾಳಿಕೆಯಿಂದಲೇ ಎಲ್ಲವನ್ನು ಮಾಡಬಲ್ಲೆ ಎಂಬ ಅಭಿಪ್ರಾಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಬಂದಂತಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರ ಬಂಧನ ಸದನದೊಳಗೆ ಆಗಿರುವ ಘಟನೆಯ ಬಗ್ಗೆ ಸಭಾಪತಿಯವರು ನಿರ್ಣಯ ಮಾಡಬೇಕು ಎಂದು ಹೇಳಿದರು.

  • ಬೆಳಗಾವಿ ಕೋರ್ಟ್ ಹಾಲ್‌ನಲ್ಲಿ ಕಣ್ಣೀರಿಟ್ಟ ಸಿ.ಟಿ ರವಿ – ಜಾಮೀನಿಗೆ ವಕೀಲರ ಮನವಿ, ಆದೇಶ ಕಾಯ್ದಿರಿಸಿದ ಕೊರ್ಟ್

    ಬೆಳಗಾವಿ ಕೋರ್ಟ್ ಹಾಲ್‌ನಲ್ಲಿ ಕಣ್ಣೀರಿಟ್ಟ ಸಿ.ಟಿ ರವಿ – ಜಾಮೀನಿಗೆ ವಕೀಲರ ಮನವಿ, ಆದೇಶ ಕಾಯ್ದಿರಿಸಿದ ಕೊರ್ಟ್

    – ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್‌ ನಿನ್ನನ್ನ ನೋಡಿಕೊಳ್ತೀವಿ ಅಂದ್ರು
    – ಹತ್ತತ್ತು ನಿಮಿಷಕ್ಕೆ ಪೊಲೀಸರಿಗೆ ಫೋನ್ ಮಾಡ್ತಿದ್ರು ಎಂದ ಎಂಎಲ್‌ಸಿ

    ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalakar) ವಿರುದ್ಧ ಅಸಂವಿಧಾನಿಕ ಪದಬಳಕೆ ಆರೋಪದಲ್ಲಿ ಬಂಧನವಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ಇಂದು ಬೆಳಗಾವಿ ಕೋರ್ಟ್‌ಗೆ (Belagavi Court) ಹಾಜರುಪಡಿಸಿದರು.

    5ನೇ ಸಿವಿಲ್ ಅಂಡ್ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿದ್ರು, ಕಲಂ 481 ಅಡಿ ವಕೀಲರು ಬೇಲ್‌ಗೆ ಅರ್ಜಿ ಸಲ್ಲಿಸಿದರು. ಈ ವೇಳೆ ಕೋರ್ಟ್‌ಹಾಲ್‌ನಲ್ಲಿ ಸಿ.ಟಿ ರವಿ (CT Ravi) ಕಣ್ಣೀರು ಹಾಕಿದ್ರು, ಬಳಿಕ ಅವರಿಗೆ ಆರ್‌. ಅಶೋಕ್‌, ಅಭಯ್‌ ಪಾಟೀಲ್‌ ಸಾಂತ್ವನ ಹೇಳಿದ ಪ್ರಸಂಗ ನಡೆಯಿತು. ನಂತರ ನ್ಯಾಯಾಧೀಶರಾದ ಸ್ಪರ್ಶಾ ಎಂ ಡಿಸೋಜಾ ಎದುರು ವಾದ ಮಂಡಿಸಿದ ಸಿ.ಟಿ ರವಿ ಪರ ವಕೀಲರಾದ ಎಮ್.ಬಿ ಜಿರಲಿ ಮತ್ತು ರವಿರಾಜ್ ಪಾಟೀಲ್ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡುವಂತೆ ಮನವಿ ಮಾಡಿದ್ರು.

    ಇದಕ್ಕೆ ನ್ಯಾಯಾಧೀಶರು ಎಲ್ಲಿ ಅರೆಸ್ಟ್? ಎಷ್ಟು ಗಂಟೆಗೆ ಅರೆಸ್ಟ್? ಎಲ್ಲೆಲ್ಲಿಗೆ ಕರ್ಕೊಂಡು ಹೋಗಿದ್ದರು? ಏನು ಮಾಡಿದ್ರು, ತೊಂದರೆ ಕೊಟ್ರಾ ? ಎಂದೆಲ್ಲಾ ಪ್ರಶ್ನಿಸಿದರು. ಕಟಕಟೆಯಲ್ಲಿ ನಿಂತು ಉತ್ತರಿಸಿದ ಸಿ.ಟಿ ರವಿ, ಮೂರು ಜಿಲ್ಲೆಗಳಲ್ಲಿ ಸುತ್ತಾಡಿಸಿದ್ರು, ಗದಗ, ಧಾರವಾಡ, ಸವದತ್ತಿ, ರಾಮದುರ್ಗ ಸುತ್ತಾಡಿಸಿದ್ರು. ಖಾನಾಪುರ ಪೊಲೀಸರು ನನ್ನನ್ನ ಹೊಡೆದರು, ಕಬ್ಬಿನ ಗದ್ದೆಯಲ್ಲಿ ನಿಲ್ಲಿಸಿದ್ದರು. ಪೊಲೀಸರು ನನಗೆ ಮಾನಸಿಕ, ದೈಹಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಮೊಬೈಲ್ ಜೊತೆಗೆ ವಾಚ್ ಕೂಡ ಕಿತ್ತುಕೊಂಡರು ಎಂದು ಸರಣಿ ಆರೋಪ ಮಾಡಿದ್ರು.

    ಪ್ರತಿ 10 ನಿಮಿಷಕ್ಕೆ ಪೊಲೀಸರಿಗೆ ಯಾರೋ ಫೋನ್ ಮಾಡ್ತಿದ್ರು. ಯಾವ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ, ಅನ್ನೋ ಮಾಹಿತಿ ಕೂಡ ಕೊಡಲಿಲ್ಲ. ನನ್ನ ಕುಟುಂಬಕ್ಕೂ ಕೂಡ ಮಾಹಿತಿ ನೀಡಲಿಲ್ಲ ಎಂದು ಕಣ್ಣೀರಿಟ್ಟರು.

    ನನ್ನ ಮೇಲೆ ಮೂರು ಬಾರಿ ಅಟ್ಯಾಕ್ ಆಯಿತು. ಝಿರೋ ಎಫ್‌ಐಆರ್ ಮಾಡಿ ಎಂದು ಕೇಳಿದೆ ಅದನ್ನು ಮಾಡಲಿಲ್ಲ. ಮಿನಿಸ್ಟರ್ ವಿರುದ್ಧ ಕೇಸ್ ಮಾಡದೇ ಇರುವುದು ಅಪರಾಧ. ಎರಡೂವರೆ ಗಂಟೆ ಯಾವ ನಾಯಕರನ್ನು ಒಳಗಡೆ ಬಿಟ್ಟಿಲ್ಲ. ಮಧ್ಯಾಹ್ನ ಕಾರಿಡಾರ್‌ನಲ್ಲಿ ನಿನ್ನ ಹೆಣವೂ ಚಿಕ್ಕಮಗಳೂರಿಗೆ ಹೋಗಲ್ಲ ಅಂತ ಮಂತ್ರಿಯೊಬ್ಬರು ಧಮ್ಕಿ ಹಾಕಿದರು. ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಡಿಕೆ ಶಿವಕುಮಾರ್ ನಿನ್ನನ್ನ ನೋಡಿ ಕೊಳ್ಳುತ್ತೇನೆ ಅಂದ್ರು. ಇದೆಲ್ಲವನ್ನೂ ನೋಡಿ ನಾನು ರಾತ್ರಿಯಿಡಿ ಆತಂಕದಲ್ಲಿದ್ದೆ ಎಂದು ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡರು.


    ಇದಕ್ಕೆ ದನಿಗೂಡಿಸಿದ ವಕೀಲ ಜಿರಲಿ, ನ್ಯಾಯಾಂಗದ ಸಮಯ ವ್ಯರ್ಥವಾಗುತ್ತದೆ ಅಲ್ಲದೇ ನನ್ನ ಕಕ್ಷಿದಾರ ಮಾನಸಿಕ ಹಾಗು ದೈಹಿಕ ಆರೋಗ್ಯ ಹಾಳಾಗಬಹುದು. ಸ್ಪೀಕರ್ ಸಾವಿಂಧಾನಿಕ ಹೆಡ್ ಇರುತ್ತಾರೆ, ಸ್ಪೀಕರ್‌ಗೆ ಎಲ್ಲವೂ ಗೊತ್ತಿದೆ, ಅಲ್ಲಿ ಯಾವುದೇ ಡಿಸಿಶನ್ ಸ್ಪೀಕರ್ ತೆಗೆದುಕೊಂಡಿಲ್ಲ. ಮೊದಲು ನನ್ನ ಕಕ್ಷಿದಾರನಿಗೆ ಮೆಡಿಕಲ್ ಟ್ರೀಟ್‌ಮೆಂಟ್ ಬೇಕಾಗಿದೆ, ಹೀಗಾಗಿ ಬೇಲ್ ನೀಡುವಂತೆ ಮನವಿ ಮಾಡಿದ್ರು. ವಾದ ಪ್ರತಿವಾದ ಆಲಿಸಿದ ಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ.

  • ಸಿ.ಟಿ ರವಿ ಪರವಾಗಿ ನಿಂತು ಎಲ್ಲರೂ ಧೃತರಾಷ್ಟ್ರರಾದ್ರು – ಲಕ್ಷ್ಮಿ ಹೆಬ್ಬಾಳ್ಕರ್‌ ಕಣ್ಣೀರು

    ಸಿ.ಟಿ ರವಿ ಪರವಾಗಿ ನಿಂತು ಎಲ್ಲರೂ ಧೃತರಾಷ್ಟ್ರರಾದ್ರು – ಲಕ್ಷ್ಮಿ ಹೆಬ್ಬಾಳ್ಕರ್‌ ಕಣ್ಣೀರು

    – ನಾನು ಒಬ್ಬ ತಾಯಿ, ಅಕ್ಕ ಇದ್ದೀನಿ ಎಂದು ಸಚಿವೆ ಭಾವುಕ

    ಬೆಳಗಾವಿ/ಬೆಂಗಳೂರು: ರಾಜಕಾರಣದಲ್ಲಿ ರೋಷಾವೇಶವಾಗಿ ಮಾತನಾಡಬಹುದು, ಆದ್ರೆ ಸಿ.ಟಿ ರವಿ ಹೇಳಿದ ಪದ ಹೇಳೋದಕ್ಕೂ ಅಸಹ್ಯವಾಗುತ್ತೆ. ಅವರ ಪರವಾಗಿ ನಿಂತು ಎಲ್ಲರೂ ಧೃತರಾಷ್ಟ್ರರಾದ್ರು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಕಣ್ಣೀರಿಟ್ಟಿದ್ದಾರೆ.

    ಸುವರ್ಣಸೌಧದ ಪರಿಷತ್‌ ಕಲಾಪದಲ್ಲಿ ಸಿ.ಟಿ ರವಿ (CT Ravi) ನಿಂದನೆ ಆರೋಪ ಪ್ರಕರಣದ ಕುರಿತು ಬೆಳಗಾವಿಯಲ್ಲಿಂದು ಸಚಿವೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ನೇರವಾಗಿ ಬೆದರಿಕೆ ಹಾಕಿದ್ದಾರೆ: ಸಿ.ಟಿ ರವಿ

    ನಿನ್ನೆ ಸದನದಲ್ಲಿ ಅಂಬೇಡ್ಕರ್ (Ambedkar) ಅವರ ಬಗ್ಗೆ ಅವಹೇಳನ ಖಂಡಿಸಿ ಧರಣಿ ಮಾಡುತ್ತಿದ್ದೆವು. ಧರಣಿ ಮಾಡಿ ನಾವೆಲ್ಲ ಕೂತಿದ್ದೆವು ಸಭಾಪತಿಗಳು ಅಡ್ಜರ್ನ್ ಮಾಡಿದ್ದರು. ನಾನು ನನ್ನ ಸೀಟಲ್ಲಿ ಕೂತಿದ್ದೆ ನಮ್ಮ ನಾಯಕ ರಾಹುಲ್ ಗಾಂಧಿಗೆ (Rahul Gandhi) ಡ್ರಗ್ ಅಡಿಕ್ಟ್ ಅಂತ 3-4 ಬಾರಿ ಹೇಳಿದರು, ನಾನು ಸುಮ್ಮನೆ ಕುಳಿತಾಗ ಮತ್ತೆ ಹೇಳಿದರು. ಇದರಿಂದ ಸಿಟ್ಟಾಗಿ ನಾವು ಅವರ ಅಪಘಾತ ಪ್ರಕರಣ ಪ್ರಸ್ತಾಪಿಸಿದೆ. ಅದಕ್ಕೆ ಆ ಪದ ಉಪಯೋಗಿಸಿದ್ದಾರೆ. ಒಮ್ಮೆ ಅಲ್ಲ ಹತ್ತು ಬಾರಿ ಹೇಳಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.

    ನಾನು ಒಬ್ಬ ತಾಯಿ ಇದ್ದೀನಿ, ಅಕ್ಕ ಇದ್ದೀನಿ. ರಾಜಕಾರಣದಲ್ಲಿ ರೋಷಾವೇಶವಾಗಿ ಮಾತನಾಡಬಹುದು, ನಾನು ಯಾರಿಗೂ ಕಾಟ ಕೊಟ್ಟಿಲ್ಲ. ಆದ್ರೆ ಸಿ.ಟಿ ರವಿ ಅವರು ಹೇಳಿದ ಪದ ಹೇಳೋದಕ್ಕೂ ಅಸಹ್ಯ ಆಗುತ್ತೆ. ಅವರ ಪರವಾಗಿ ನಿಂತು ಎಲ್ಲರೂ ಧೃತರಾಷ್ಟ್ರ ಆದ್ರು. ಡ್ರಗ್ ಅಡಿಕ್ಟ್ ಅಂದಿದ್ದಕ್ಕೆ ನೀವು ಆಕ್ಸಿಡೆಂಟ್ ಮಾಡಿ ಮೂವರ ಕೊಲೆಗಾರ ಎಂದಿದ್ದೆ. ಅದಕ್ಕೆ ಆ ರೀತಿ ಮಾತನಾಡಿದ್ದಾರೆ. ಸದನದಲ್ಲಿ ನ್ಯಾಯ ಸಿಗದ ಬಗ್ಗೆ ನಾನು ಏನೂ ಹೇಳಲ್ಲ. ನನ್ನ ಸೊಸೆ ನನ್ನ ಮಗ ನನಗೆ ಧೈರ್ಯ ತುಂಬಿದ್ದರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ – ಡಿಕೆ ಶಿವಕುಮಾರ್‌ 

  • ವಿಧಾನ ಪರಿಷತ್ ಸದಸ್ಯನನ್ನ ಟೆರರಿಸ್ಟ್ ರೀತಿ ನಡೆಸಿಕೊಂಡಿದ್ದಾರೆ: ವಿಜಯೇಂದ್ರ

    ವಿಧಾನ ಪರಿಷತ್ ಸದಸ್ಯನನ್ನ ಟೆರರಿಸ್ಟ್ ರೀತಿ ನಡೆಸಿಕೊಂಡಿದ್ದಾರೆ: ವಿಜಯೇಂದ್ರ

    – ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ

    ಬೆಳಗಾವಿ: ವಿಧಾನ ಪರಿಷತ್ ಸದಸ್ಯನನ್ನು ಒಬ್ಬ ಟೆರರಿಸ್ಟ್ (Terrorist) ರೀತಿ ನಡೆಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿ.ಟಿ ರವಿ (CT Ravi) ಬಂಧನ ಹಿನ್ನೆಲೆ ವಿಜಯೇಂದ್ರ ಬೆಳಗಾವಿಗೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ ಅವರಿಗೆ ಗಾಯ ಆಗಿದೆ, ಆಸ್ಪತ್ರೆಗೆ ಕರೆದುಕೊಮಡು ಹೋಗಿಲ್ಲ. ರಾತ್ರಿಯೆಲ್ಲಾ 400-500 ಕಿ.ಮೀ ಸುತ್ತಾಡಿಸಿದ್ದಾರೆ. ಎಲ್ಲೂ ಕೂಡ ಕೂರುವುದಕ್ಕೆ ಅವಕಾಶ ಕೊಟ್ಟಿಲ್ಲ. ಬೆಂಗಳೂರಿಗೆ ಹಾಜರು ಪಡಿಸುತ್ತೇವೆ ಎಂದು ಗದಗ, ರಾಮದುರ್ಗ ಸೇರಿ ಎಲ್ಲಾ ಪೊಲೀಸ್ ಸ್ಟೇಷನ್ ಸುತ್ತಾಡಿಸಿ ಈಗ ವಾಪಸ್ ಬೆಳಗಾವಿಗೆ ಕರೆತರುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ನೇರವಾಗಿ ಬೆದರಿಕೆ ಹಾಕಿದ್ದಾರೆ: ಸಿ.ಟಿ ರವಿ

    ಸರ್ಕಾರದ ನಡವಳಿಕೆ, ಸುವರ್ಣಸೌಧದೊಳಕ್ಕೆ ನುಗ್ಗಿ ಕೆಲವು ಪುಡಾರಿಗಳು, ರೌಡಿಗಳು ದಾಂಧಲೆ ನಡೆಸಲು ಹೊರಟಿದ್ದರು. ನಡುರಸ್ತೆಯಲ್ಲಿ ಹಲ್ಲೆ ಮಾಡಲು ಹೋಗಿದ್ದರು. ಹಲ್ಲೆಯಾಗಿದ್ದರೆ ಯಾರು ಕಾರಣ? ಯಾರು ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು? ಪೊಲೀಸರದ್ದು ಅತಿರೇಕದ ವರ್ತನೆ. ಸರ್ಕಾರದ ಕುಮ್ಮಕ್ಕಿನಿಂದ ನಡೆದಿದೆ. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ದಿದ್ದೇವೆ. ಪ್ರಜಾಪ್ರಭುತ್ವದ ಕಗ್ಗೊಲೆಯಿದು ಎಂದು ಗುಡುಗಿದರು. ಇದನ್ನೂ ಓದಿ: ಸಿ.ಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ – ಡಿಕೆ ಶಿವಕುಮಾರ್‌

  • ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ನೇರವಾಗಿ ಬೆದರಿಕೆ ಹಾಕಿದ್ದಾರೆ: ಸಿ.ಟಿ ರವಿ

    ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್ ನೇರವಾಗಿ ಬೆದರಿಕೆ ಹಾಕಿದ್ದಾರೆ: ಸಿ.ಟಿ ರವಿ

    ಬೆಳಗಾವಿ: ಡಿಸಿಎಂ ಶಿವಕುಮಾರ್ (DK Shivakumar) ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನೇರವಾಗಿ ಸುವರ್ಣ ಸೌಧ ಸಭಾಂಗಣದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಎಂಎಲ್‌ಸಿ ಸಿ.ಟಿ ರವಿ (CT Ravi) ಗಂಭೀರ ಆರೋಪ ಮಾಡಿದ್ದಾರೆ.

    ಠಾಣೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೊಲೀಸರಿಂದ ಜೀವಕ್ಕೆ ಅಪಾಯವಿದೆ. ಅನುಮಾನಾಸ್ಪದವಾಗಿ, ನಿಗೂಢವಾಗಿ ವರ್ತನೆ ಮಾಡುತ್ತಿದ್ದಾರೆ. ಇಲ್ಲಿಗೆ ನಮ್ಮನ್ನು ಯಾಕೆ ಕರೆದುಕೊಂಡು ಬಂದರು ಎಂದು ಹೇಳಿಲ್ಲ. ನನ್ನ ಮೇಲೆ ಯಾವ ಕೇಸ್ ಹಾಕಿದ್ದಾರೆ ಎಂದು ಮಾಹಿತಿ ನೀಡಿಲ್ಲ. ನನ್ನನ್ನು ಪ್ರತ್ಯೇಕವಾಗಿ ಕರೆದುಕೊಂಡು ಬಂದಿದ್ದಾರೆ. ಸುವರ್ಣಸೌಧದಲ್ಲಿ ನನ್ನ ಮೇಲೆ ಕೊಲೆ ಪ್ರಯತ್ನ ನಡೆಯಿತು. ಕೊಲೆ ಪ್ರಯತ್ನದ ಬಗ್ಗೆ ಸಭಾಪತಿಗೂ ದೂರುಕೊಟ್ಟಿದ್ದೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎನ್‌ಜಿ ಟ್ಯಾಂಕರ್‌ ನಡುವೆ ಡಿಕ್ಕಿ – ಧಗಧಗಿಸಿದ ಅಗ್ನಿ ಜ್ವಾಲೆ, ನಾಲ್ವರು ಸಜೀವ ದಹನ, 15 ಮಂದಿ ಸಾವು!

    ಪೊಲೀಸರಿಗೆ ದೂರು ನೀಡಿದ್ದೇನೆ. ಕಳೆದ 2 ಗಂಟೆಯಿಂದ ಎಫ್‌ಐಆರ್ ಮಾಡಿ ಎಂದು ಒತ್ತಾಯಿಸಿದ್ದೇನೆ. ನಮಗೆ ಎಫ್‌ಐಆರ್ ಕಾಪಿ ನೀಡುತ್ತಿಲ್ಲ. ಪೊಲೀಸರ ನಡೆ ಅನುಮಾನಸ್ಪದವಾಗಿದೆ. ಇವರದು ಹಿಡನ್ ಅಜೆಂಡಾ ಇದ್ದ ಹಾಗೆ ಕಾಣುತ್ತಿದೆ. ಇದರ ಹಿಂದಿನ ದುರುದ್ದೇಶ ನನಗೆ ತಿಳಿಯುತ್ತಿಲ್ಲಾ. ಸಭಾಪತಿ ಅವರು ರೋಲಿಂಗ್ ಕೊಟ್ಟ ಮೇಲೆ ಇವರು ಯಾವ ಕಾರಣಕ್ಕೆ ಎಫ್‌ಐಆರ್ ಹಾಕಿದ್ದಾರೆ ಹೇಳಬೇಕು. ಏನೇ ಇರಲಿ ಅವರು ಮೊದಲು ನನಗೆ ಹೇಳಬೇಕು. ಇವರ ನಡೆ ಅನುಮಾನಾಸ್ಪದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿ.ಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ – ಡಿಕೆ ಶಿವಕುಮಾರ್‌