Tag: belagavi

  • ಕುಡಚಿ ಶಾಸಕ ಕಾರ್ಮಿಕನಾಗಿ ಕಲ್ಲು ಒಡೆಯುತ್ತಿರುವ ವಿಡಿಯೋ ವೈರಲ್

    ಕುಡಚಿ ಶಾಸಕ ಕಾರ್ಮಿಕನಾಗಿ ಕಲ್ಲು ಒಡೆಯುತ್ತಿರುವ ವಿಡಿಯೋ ವೈರಲ್

    ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡು ಸುದ್ದಿಯಾಗುತ್ತಾರೆ. ಆದರೆ ಶಾಸಕ ಪಿ. ರಾಜೀವ್ ಕ್ಷೇತ್ರದ ಜನರಿಗೆ ಅಷ್ಟೇ ಸ್ನೇಹ ಜೀವಿ ಕೂಡ ಆಗಿದ್ದಾರೆ.

    ಬಹಳಷ್ಟು ಕ್ಷೇತ್ರದ ಶಾಸಕರು ಕ್ಷೇತ್ರದಲ್ಲೇ ಇರುವುದಿಲ್ಲ ಎಂದು ಜನರು ಆರೋಪವನ್ನು ಮಾಡುತ್ತಾರೆ. ಆದರೆ ಕುಡಚಿ ಶಾಸಕ ಪಿ. ರಾಜೀವ್ ಕ್ಷೇತ್ರದಲ್ಲಿ ಕಲ್ಲು ಒಡೆಯುವ ಕಾರ್ಯ ನಿರ್ವಹಿಸಿರುವ ವಿಡಿಯೋ ಈಗ ವೈರಲ್ ಆಗಿದೆ.

    ಶಾಸಕ ಪಿ. ರಾಜೀವ್ ಕಾಮಗಾರಿ ವೀಕ್ಷಣೆಗೆ ಹೋಗಿ ತಾವೇ ಕಾರ್ಮಿಕನಾಗಿ ಕೆಲಸ ಮಾಡಿದ್ದಾರೆ. ರಾಯಬಾಗ ತಾಲೂಕಿನ ಕುಡಚಿ ಮತ ಕ್ಷೇತ್ರದ ಯಲ್ಪಾರಟ್ಟಿ ಗ್ರಾಮದಿಂದ ಪರಮಾನಂದವಾಡಿ ಗ್ರಾಮದ ರಸ್ತೆ ಕಾಮಗಾರಿ ವೀಕ್ಷಣೆಗೆ ಹೋಗಿ ಶಾಸಕರೇ ಕಾಮಗಾರಿಯಲ್ಲಿ ಬಳಸುವ ಕಲ್ಲು ಒಡೆದಿರುವ ದೃಶ್ಯಗಳು ವೈರಲ್ ಆಗಿವೆ.

    ಅಲ್ಲದೇ ಮಧ್ಯಾಹ್ನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಬಿಸಿಯೂಟ ಯೋಜನೆ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶಾಸಕರು ಶಾಲೆಯಲ್ಲಿ ಮಕ್ಕಳೊಂದಿಗೆ ಊಟ ಮಾಡಿದ್ದಾರೆ. ಶಾಸಕರ ಇಂತಹ ಕಾರ್ಯಗಳಿಗೆ ಕ್ಷೇತ್ರದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಸದಾ ಕ್ಷೇತ್ರದ ಜನರಲ್ಲಿ ಬೆರೆಯುವ ಶಾಸಕರ ಕಾರ್ಯಕ್ಕೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಮೇಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಐಟಿ ದಾಳಿ – ರಾತ್ರೋರಾತ್ರಿ ಊರು ಬಿಟ್ಟ ಶಾಸಕರ ಆಪ್ತರು

    ರಮೇಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಐಟಿ ದಾಳಿ – ರಾತ್ರೋರಾತ್ರಿ ಊರು ಬಿಟ್ಟ ಶಾಸಕರ ಆಪ್ತರು

    ಬೆಳಗಾವಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಐಟಿ ಇಲಾಖೆ ಕಣ್ಣಿಟ್ಟಿದ್ದು, ಗೋಕಾಕ್ ಕ್ಷೇತ್ರದ ಗ್ರಾಮಗಳಲ್ಲಿ ಐಟಿ ದಾಳಿ ನಡೆಸಿದೆ.

    9 ಗ್ರಾಮಗಳಲ್ಲಿ 165 ಜನರಿಗೆ ಐಟಿ ನೋಟಿಸ್ ಜಾರಿ ಮಾಡಿದ್ದು, ರಾತ್ರೋರಾತ್ರಿ ಸ್ಥಳೀಯ ಮುಖಂಡರು ಊರು ಬಿಟ್ಟು ಪರಾರಿಯಾಗಿದ್ದಾರೆ. ಗುಜನಾಳ, ಅಕ್ಕತಂಗೇರಹಾಳ್, ಅಂಕಲಗಿ, ಮದವಾಲ್, ದಾಸನಟ್ಟಿ, ಕುಂದರಗಿ, ಮಲ್ಲಾಪೂರ ಗ್ರಾಮದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಶಾಸಕರ ಬೆಂಬಲಿಗರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 1500 ಎಕರೆ ಜಮೀನು, 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಸೇರಿದಂತೆ ಆಸ್ತಿ ದಾಖಲಾತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ರಮೇಶ್ ಜಾರಕಿಹೊಳಿ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಸಚಿವ ಸ್ಥಾನ ಕಳೆದುಕೊಂಡ ಬಳಿಕ ರಮೇಶ್ ಜಾರಕಿಹೊಳಿ ಅಜ್ಞಾತವಾಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದ್ಯಾರ್ಥಿಗಳನ್ನು ನೋಡಿ ಬಸ್ ನಿಲ್ಲಿಸದ ಚಾಲಕರು

    ವಿದ್ಯಾರ್ಥಿಗಳನ್ನು ನೋಡಿ ಬಸ್ ನಿಲ್ಲಿಸದ ಚಾಲಕರು

    ಬೆಳಗಾವಿ/ಚಿಕ್ಕೋಡಿ: ಕೆಎಸ್ಆರ್‌ಟಿಸಿ ಬಸ್ ಚಾಲಕರ ಹಾಗೂ ನಿರ್ವಾಹಕರ ನಿರ್ಲಕ್ಷ್ಯ ಹಾಗೂ ಅಸಡ್ಡೆ ಮನೋಭಾವನೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿ ಇರುವ ಸರ್ಕಾರಿ ಪಿಯು ಕಾಲೇಜು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರಾಣಗಳನ್ನು ಒತ್ತೆ ಇಟ್ಟು ಪಾಠ ಕಲಿಯಲು ಬರುವಂತಾಗಿದೆ.

    ಬಸ್‍ನಲ್ಲಿ ತಮ್ಮ ಕಲೆಕ್ಷನ್ ಕಡಿಮೆ ಆಗುತ್ತೆ ಎನ್ನುವ ಕಾರಣಕ್ಕಾಗಿ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ಚಾಲಕರು ನೂರಾರು ಬಾರಿ ಯೋಚನೆ ಮಾಡುತ್ತಿದ್ದಾರೆ. ಕಾಲೇಜು ಮುಂಭಾಗದಲ್ಲಿ ನಿಲ್ದಾಣಕ್ಕೆ ಅನುಮತಿ ನೀಡಲಾಗಿದ್ದರೂ, ಬಸ್ ನಿಲ್ಲಿಸುವದೇ ಇಲ್ಲ. ಇದರಿಂದ ನಿಲ್ಲುವ ಬಸ್ ಗಾಗಿ ದಿನನಿತ್ಯ ಕಾಲೇಜು ಮುಗಿದ ಮೇಲೆ ಮೂರರಿಂದ ನಾಲ್ಕು ಗಂಟೆ ವಿದ್ಯಾರ್ಥಿಗಳು ಕಾಯಬೇಕು.

    ಬಸ್ ಬಂತೆಂದರೆ ಅದರಲ್ಲಿ ಕುರಿ ತುಂಬಿದ ಹಾಗೆ ವಿದ್ಯಾರ್ಥಿಗಳನ್ನು ತುಂಬುತ್ತಾರೆ. ವಿದ್ಯಾರ್ಥಿಗಳು ಹತ್ತುತ್ತಿರುವಾಗಲೇ ಚಾಲಕರು ಬಸ್ ಸ್ಟಾರ್ಟ್ ಮಾಡ್ತಾರೆ. ಇಂತಹ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಕಾಲೇಜು ಸಮೀಪ ಯಾವುದೇ ಬಸ್ ತಂಗುದಾಣ ಇಲ್ಲದೆ ಇರುವ ಕಾರಣ ವಿದ್ಯಾರ್ಥಿಗಳು ರಸ್ತೆ ಬದಿಯೇ ನಿಂತು ಕಾಲ ಕಳೆಯಬೇಕು. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ವಿದ್ಯಾರ್ಥಿಗಳ ಪಾಡು ಯಾರಿಗೂ ಹೇಳ ತೀರದು ಎಂದು ಸಾರ್ವಜನಿಕರು ಸಾರಿಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

    ನಮಗೆ 9 ಗಂಟೆಗೆ ಕಾಲೇಜು ಶುರುವಾಗುತ್ತೆ. ಕಾಲೇಜಿಗೆ ಹೋಗಬೇಕೆಂದರೆ ನಮ್ಮ ಬಳಿ ಪಾಸ್ ಇದ್ದಾಗ ಬಸ್‍ಯೊಳಗೆ ಹತ್ತಿಸಲ್ಲ. ಅದೇ ನಾವು ಹಣ ನೀಡಿದರೆ ಅವರು ನಮಗೆ ಬಸ್‍ವೊಳಗೆ ಹತ್ತಿಸಿಕೊಳ್ಳುತ್ತಾರೆ. ಕಾಲೇಜಿನಿಂದ ವಾಪಸ್ ಮನೆಗೆ ಹೋಗುವಾಗ ಕೂಡ ಅವರು ಬಸ್ ನಿಲ್ಲಿಸುವುದಿಲ್ಲ. ನಾವು ಇಲ್ಲಿ ನಿಂತುಕೊಂಡು ಕೈ ತೋರಿಸಿದ್ದರೆ, ಅವರು ತುಂಬಾ ಮುಂದೆ ಹೋಗಿ ಬಸ್ ಅನ್ನು ನಿಲ್ಲಿಸುತ್ತಾರೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಾನ್ ಪಟ್ಟಕ್ಕಾಗಿ ಸ್ನೇಹಿತನನ್ನೇ ಕೊಂದ ಕಿರಾತಕರು – ಕೂಲಿ ಮಾಡಿ ಸಾಕುತ್ತಿದ್ದ ಏಕೈಕ ಮಗನನ್ನ ಕಳೆದ್ಕೊಂಡ ತಾಯಿ

    ಡಾನ್ ಪಟ್ಟಕ್ಕಾಗಿ ಸ್ನೇಹಿತನನ್ನೇ ಕೊಂದ ಕಿರಾತಕರು – ಕೂಲಿ ಮಾಡಿ ಸಾಕುತ್ತಿದ್ದ ಏಕೈಕ ಮಗನನ್ನ ಕಳೆದ್ಕೊಂಡ ತಾಯಿ

    ಬೆಳಗಾವಿ: ಡಾನ್ ಪಟ್ಟಕ್ಕಾಗಿ ಸ್ನೇಹಿತರೆಲ್ಲರೂ ಸೇರಿಕೊಂಡು ಗೆಳೆಯನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.

    ವಿಶ್ವನಾಥ್ ಬಿರಾಮುಟ್ಟಿ (23) ಸ್ನೇಹಿತರಿಂದಲೇ ಕೊಲೆಯಾದ ಯುವಕ. ಭಾನುವಾರ ರಾತ್ರಿ ವಿಶ್ವನಾಥ್ ತನ್ನ ಮನೆಯಲ್ಲಿದ್ದಾಗ ಆತನ ಸ್ನೇಹಿತ ಬಂದು ಕಾರ್ ತೋರಿಸುತ್ತೇನೆ ಬಾ ಎಂದು ಕರೆದುಕೊಂಡು ಹೋಗಿದ್ದನು. ಆದರೆ ರಾತ್ರಿ 11 ಗಂಟೆಗೆ ಆತನನ್ನ ಊರ ಹೊರವಲಯದ ಶಾಲೆಯ ಪಕ್ಕದ ಜಮೀನೊಂದರಲ್ಲಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ, ರುಂಡವನ್ನ ಬೇರೆ ಮಾಡಿ ಪರಾರಿಯಾಗಿದ್ದಾರೆ.

    ಇದೇ ಗ್ಯಾಂಗ್ ನಲ್ಲಿದ್ದ ಓರ್ವ ಸ್ನೇಹಿತ ಬಿಯರ್ ಬಾಟಲ್ ತರಲು ಹೊರ ಹೋದವ ಸ್ಥಳಕ್ಕೆ ಹೋದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶ್ವನಾಥ್‍ನನ್ನ ನೋಡಿ ತಕ್ಷಣ ಕುಟುಂಬಸ್ಥರಿಗೆ ಸುದ್ದಿ ಮುಟ್ಟಿಸಿದ್ದಾನೆ. ನಾವು ಹಾಗೂ ಗ್ರಾಮಸ್ಥರು ಹೋದಾಗ ಮಗನ ಕೊಲೆಯಾದ ಸ್ಥಿತಿ ನೋಡಿ ಗಾಬರಿಯಾಗಿತ್ತು. ಪಾರ್ಟಿ ಮಾಡಲು ಕರೆದುಕೊಂಡು ಬಂದಿದ್ದ ಸ್ನೇಹಿತರು ಮಾತ್ರ ಅಲ್ಲಿಂದ ಪರಾರಿಯಾಗಿದ್ದರು ಎಂದು ಮೃತ ವಿಶ್ವನಾಥ್ ತಾಯಿ ಮಾಲಾ ಕಣ್ಣೀರು ಹಾಕುತ್ತಾರೆ.

    ವಿಶ್ವನಾಥ್ ಒಬ್ಬನೇ ಮಗನಾಗಿದ್ದು, ಪಿಯುಸಿ ಡ್ರಾಯಿಂಗ್ ಕೋರ್ಸ್ ಮಾಡುತ್ತಿದ್ದ. ಈ ಹಿಂದೆ ಕೂಡ ಪಾರ್ಟಿಗೆ ಕರೆದುಕೊಂಡು ಹೋಗಿದ್ದ ಸ್ನೇಹಿತರಿಗೂ ಹಾಗೂ ವಿಶ್ವನಾಥ್‍ಗೂ ಜಗಳವಾಗಿ ಅಂದು ಕೂಡ ಈತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಆ ಕೇಸ್ ಕೂಡ ಸದ್ಯ ಕೋರ್ಟ್ ನಲ್ಲಿ ನಡೆಯುತ್ತಿದೆ. 2 ವರ್ಷ ಕಳೆಯುವಷ್ಟರಲ್ಲಿ ಆತನನನ್ನ ಹೇಗಾದರೂ ಮಾಡಿ ಕೊಲೆ ಮಾಡಬೇಕು  ಅಂತ ಗ್ಯಾಂಗ್ ಸೋಮವಾರ ಸ್ಕೆಚ್ ಹಾಕಿತ್ತು ಎಂದು ವಿಶ್ವನಾಥ್ ಸಂಬಂಧಿ ಮಲ್ಲವ್ವಾ ಆರೋಪಿಸುತ್ತಾರೆ.

    ಸುರೇಶ್ ಎಂಬಾತ ಬಂದು ಆತನನ್ನ ಕರೆದುಕೊಂಡು ಹೋಗಿದ್ದು, ಪಾರ್ಟಿಯಲ್ಲಿ ಸುರೇಶ್, ಪರಶು, ಬಸು ಸೇರಿದಂತೆ 5ಕ್ಕೂ ಅಧಿಕ ಗೆಳೆಯರು ಗ್ರಾಮದ ಹೊರವಲಯದ ಮನೆಯೊಂದರಲ್ಲಿ ಮೊದಲು ಆತನನ್ನ ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ. ನಂತರ ಮನೆಯ ಪಕ್ಕದಲ್ಲಿದ್ದ ತೋಟದಲ್ಲಿ ರುಂಡವನ್ನ ಕಟ್ ಮಾಡಿರುತ್ತಾರೆ. ಸದ್ಯ ಪಾರ್ಟಿ ಮಾಡಿದ್ದ ಸ್ನೇಹಿತರ ಗ್ಯಾಂಗೇ ಈ ಕೊಲೆ ಮಾಡಿದೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ಈ ವಿಶ್ವನಾಥ್ ಕೂಡ ಖದೀಮರ ಗ್ಯಾಂಗ್ ವಿರುದ್ಧ ಊರಿನಲ್ಲಿ ಒಂದು ಹಂತದ ಹವಾ ಮೆಂಟೆನ್ ಮಾಡಿಕೊಂಡಿದ್ದ. ಆದರೆ ಅವನನ್ನೇ ಮುಗಿಸಿದರೆ ಹಿಂದಿನ ಕೇಸ್ ಮುಗಿಯುತ್ತೆ. ಜೊತೆಗೆ ಊರಲ್ಲಿ ಡಾನ್ ಎಂಬ ಪಟ್ಟ ಕೂಡ ಸಿಗುತ್ತೆ ಅಂದುಕೊಂಡಿದ್ದ ಸ್ನೇಹಿತರಲ್ಲೇ ಒಬ್ಬ ಇದನ್ನೆಲ್ಲ ಪ್ಲಾನ್ ಮಾಡಿದ್ದಾನೆ. ಬಳಿಕ ತನ್ನ ಜೊತೆಗೆ ನಾಲ್ಕು ಜನರನ್ನ ಕರೆದುಕೊಂಡು ವಿಶ್ವನಾಥ್ ನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತದೆ.

    ಮಾಹಿತಿ ತಿಳಿದು ಗ್ರಾಮೀಣ ಡಿವೈಎಸ್.ಪಿ ಬಾಲಚಂದ್ರ ಶಿಂಘ್ಯಾಗೋಳ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಪಾರ್ಟಿಯಲ್ಲಿದ್ದ ಇಬ್ಬರು ಸ್ನೇಹಿತರನ್ನ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಅವರ ಹೇಳಿಕೆ ಮೇಲೆ ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪಾದಾಚಾರಿ ಅಪ್ಪ-ಮಗನ ಮೇಲೆ ಹರಿದ ಕಾರ್- 12 ಕಿ.ಮೀ ಬೆನ್ನತ್ತಿ ಚಾಲಕನಿಗೆ ಥಳಿತ

    ಪಾದಾಚಾರಿ ಅಪ್ಪ-ಮಗನ ಮೇಲೆ ಹರಿದ ಕಾರ್- 12 ಕಿ.ಮೀ ಬೆನ್ನತ್ತಿ ಚಾಲಕನಿಗೆ ಥಳಿತ

    ಚಿಕ್ಕೋಡಿ(ಬೆಳಗಾವಿ): ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಂದೆ ಹಾಗೂ ಮಗನ ಮೇಲೆ ಕಾರ್ ಹರಿಸಿದ್ದರಿಂದ ಸಿಟ್ಟುಗೊಂಡ ಗ್ರಾಮಸ್ಥರು ಚಾಲಕನನ್ನು ಬೆನ್ನಟ್ಟಿ ಹಿಗ್ಗಾಮುಗ್ಗ ಥಳಿಸಿದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನನದಿವಾಡಿ ಗ್ರಾಮದಲ್ಲಿ ನಡೆದಿದೆ.

    ಕಾರು ಹರಿದ ಪರಿಣಾಮ ತಂದೆ ಆನಂದ ನಾಯಿಕ(38) ಹಾಗೂ ಮಗ ಕೃಷ್ಣಾ ನಾಯಿಕ(14) ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಚಾಲಕ 30 ವರ್ಷದ ವಿಠ್ಠಲ ಪೋತದಾರ ಕುಡಿದು ತನ್ನ ವಾಹನ ಚಲಾಯಿಸಿದ್ದೇ ಘಟನೆಗೆ ಕಾರಣವಾಗಿದೆ.

    ಪಾದಾಚಾರಿಗಳಾದ ತಂದೆ-ಮಗನ ಮೇಲೆ ಕಾರು ಹರಿಯುತ್ತಿದ್ದಂತೆಯೇ ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ. ಅಲ್ಲದೇ ತಂದೆ ಹಾಗೂ ಮಗನ ಸ್ಥಿತಿ ಕಂಡು ರೊಚ್ಚಿಗೆದ್ದ ಗ್ರಾಮಸ್ಥರು 12 ಕಿಲೋಮೀಟರ್ ಬೆನ್ನಟ್ಟಿ ಕುಡುಕ ಚಾಲಕನನ್ನು ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಕಾರಿನ ಗ್ಲಾಸ್ ಪುಡಿಗೈದಿದ್ದಾರೆ.

    ಈ ಘಟನೆ ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೈಕಾಲು ಕಟ್ಟಿ, ಗೋಣಿ ಚೀಲದಲ್ಲಿ ಮಹಿಳೆಯ ಶವ ಪತ್ತೆ!

    ಕೈಕಾಲು ಕಟ್ಟಿ, ಗೋಣಿ ಚೀಲದಲ್ಲಿ ಮಹಿಳೆಯ ಶವ ಪತ್ತೆ!

    ಬೆಳಗಾವಿ: ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯೊಬ್ಬರ ಮೃತದೇಹವು ನೆರೆಯ ಮಹಾರಾಷ್ಟ್ರದ ನದಿಯಲ್ಲಿ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ತಾಯವ್ವ ಶಿವಾಜಿ ಕದಮ(60) ಮೃತ ದುರ್ದೈವಿ. ಬೆಳಗಾವಿ ಸಮೀಪದ ಕೆ.ಕೆ ಕೊಪ್ಪ ಗ್ರಾಮದಿಂದ ಜನವರಿ 19ರಂದು ತಾಯವ್ವ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ತಾಯವ್ವ ಮೃತದೇಹ ಮಹಾರಾಷ್ಟ್ರದ ನದಿಯಲ್ಲಿ ಪತ್ತೆಯಾಗಿದೆ.

    ಕೊಲ್ಹಾಪೂರ ಜಿಲ್ಲೆಯ ಮುರಗುಡ ಪ್ರದೇಶದಲ್ಲಿರುವ ವೇದಗಂಗಾ ನದಿಯಲ್ಲಿ ಜ.24 ರಂದು ಗೋಣಿ ಚೀಲದಲ್ಲಿ ಕೈಕಾಲು ಕಟ್ಟಿದ್ದ ಸ್ಥಿತಿಯಲ್ಲಿ ತಾಯವ್ವ ಅವರ ಶವ ಪತ್ತೆಯಾಗಿತ್ತು. ಆದರೆ ಮಹಿಳೆಯ ಗುರುತು ಸ್ಥಳಿಯ ಪೊಲೀಸರಿಗೆ ಸಿಕ್ಕಿರಲಿಲ್ಲ. ಈ ವಿಚಾರವಾಗಿ ತನಿಖೆ ನಡೆಸಿದ ಬಳಿಕ ನೆರೆಯ ರಾಜ್ಯದಲ್ಲಿ ಪತ್ತೆಯಾದ ಮೃತದೇಹ ಕಾಣೆಯಾದ ತಾಯವ್ವ ಅವರದ್ದು ಎಂದು ತಿಳಿದುಬಂದಿದೆ.

    ತಾಯವ್ವ ಜೀವನ ನಡೆಸಲು ತರಕಾರಿ ವ್ಯಾಪಾರ ಮಾಡಿಕೊಂಡು ಇದ್ದರು. ಹೀಗೆ ಜ. 16ರಂದು ಕೆಲಸದ ಹಿನ್ನೆಲೆ ತಾಯವ್ವ ಬೆಳಗಾವಿಗೆ ಹೋದವರು ಮನೆಗೆ ಹಿಂತಿರುಗಿರಲಿಲ್ಲ. ಈ ವಿಚಾರವಾಗಿ ತಾಯವ್ವ ಕಾಣೆಯಾಗಿದ್ದಾರೆ ಎಂದು ಮನೆಯವರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರಿಂದ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಲು ಹುಡುಕಾಟ ನಡೆಸಿದ್ದರು. ಈಗ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆ ಬಳಿ ಇದ್ದ ಹಣಕ್ಕಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಕೀಯಕ್ಕೆ ಬಂದು ಪ್ರಿಯಾಂಕಾ ಗಾಂಧಿ ಏನ್ ಮಾಡ್ತಾರೆ? ಈಶ್ವರಪ್ಪ ವ್ಯಂಗ್ಯ

    ರಾಜಕೀಯಕ್ಕೆ ಬಂದು ಪ್ರಿಯಾಂಕಾ ಗಾಂಧಿ ಏನ್ ಮಾಡ್ತಾರೆ? ಈಶ್ವರಪ್ಪ ವ್ಯಂಗ್ಯ

    ಚಿಕ್ಕೋಡಿ: ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕ ಗಾಂಧಿ ಪ್ರವೇಶ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ, ತಾತ, ಅಜ್ಜ, ಅಜ್ಜಿ, ಅಮ್ಮ, ಅಪ್ಪ, ಅಣ್ಣನ ಕೈಯಲ್ಲೇ ಏನು ಮಾಡಲು ಆಗಲಿಲ್ಲ. ಇನ್ನು ಈ ಪ್ರಿಯಾಂಕಾ ಗಾಂಧಿ ಅವರು ಬಂದು ಏನು ಮಾಡುತ್ತಾರೆ ಎಂದು ವ್ಯಂಗವಾಡಿದ್ದಾರೆ.

    ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣಕ್ಕೆ ಆಗಮಿಸಿದ್ದ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ, ರಾಜ್ಯ ಸರ್ಕಾರ ಮತ್ತು ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ಮಾಧ್ಯಮಗಳನ್ನು ಟೆರೆರಿಸ್ಟ್‍ಗಳಗೆ ಹೋಲಿಸಿದ ಪ್ರಿಯಾಂಕ್ ಖರ್ಗೆ ಅವರಿಗೆ ರಾಜಕೀಯ ಎಂದರೆ ಏನು ಎಂದು ಗೊತ್ತಿಲ್ಲ. ಅಂತವರನ್ನು ಕಾಂಗ್ರೆಸ್ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದೆ. ಹೀಗಾಗಿ ಕಾಂಗ್ರೆಸ್ ಇಂದು ಯಾವ ಮಟ್ಟಕ್ಕೆ ಬಂದಿದೆ ಎನ್ನುವುದು ಗೊತ್ತಾಗುತ್ತೆ ಎಂದರು.

    ರಾಜೀನಾಮೆ ಕೊಡಿ:
    ಆಪರೇಷನ್ ಕಮಲದಲ್ಲಿ ಒಬ್ಬ ಶಾಸಕನಿಗೆ ಬಿಜೆಪಿಯಿಂದ ಭಾರೀ ಮೊತ್ತದ ಹಣದ ಆಮಿಷ ಒಡ್ಡಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ ಅವರು ಆ ಶಾಸಕ ಯಾರು ಅಂತ ಹೇಳಿಲ್ಲ. ಆ ಶಾಸಕ ಯಾರು ಅಂತ ಮೊದಲು ಕುಮಾರಸ್ವಾಮಿ ಹೇಳಲಿ ಎಂದು ಸವಾಲು ಎಸೆದರು. ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರು ಶಾಸಕರನ್ನು ರೆಸಾರ್ಟಿಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಅಲ್ಲಿ ಶಾಸಕರು ರೌಡಿಗಳ ಹಾಗೆ ಕುಡಿದು ಬಡಿದಾಡಿಕೊಳ್ಳುತ್ತಾರೆ. ಸಿದ್ದರಾಮಯ್ಯನವರು ಈಗೇನು ಹೇಳ್ತಾರೆ. ಕಾಂಗ್ರೆಸ್ ಮುಖಂಡರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ನಿಜಕ್ಕೂ ಸಿದ್ದರಾಮಯ್ಯನವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರೆ ಮೊದಲು ರಾಜೀನಾಮೆ ಕೊಟ್ಟು ಹೊರ ಬರಲಿ ಎಂದು ಆಗ್ರಹಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ, ಪ್ರೇಯಸಿಗೆ ಕೈ ಕೊಟ್ಟು ಸಮಾಜ ಸೇವಕಿಯ ಕೈ ಹಿಡಿದ ಯೋಧ..!

    ಪತ್ನಿ, ಪ್ರೇಯಸಿಗೆ ಕೈ ಕೊಟ್ಟು ಸಮಾಜ ಸೇವಕಿಯ ಕೈ ಹಿಡಿದ ಯೋಧ..!

    ಬೆಳಗಾವಿ: ದೇಶದಲ್ಲಿ ಯೋಧರಿಗೆ ವಿಶೇಷ ಗೌರವಿದೆ. ಆದರೆ ಯೋಧರೊಬ್ಬರು ಪತ್ನಿ ಹಾಗೂ ಪ್ರೇಯಸಿಗೆ ಕೈ ಕೊಟ್ಟು, ಸಮಸ್ಯೆ ಬಗೆಹರಿಸಲು ಬಂದ ಸಮಾಜ ಸೇವಕಿಯನ್ನೇ ಮದುವೆಯಾದ ವಿಚಿತ್ರ ಘಟನೆಯೊಂದು ನಡೆದಿದೆ.

    ಮೂಲತಃ ಬಾಗಲಕೋಟೆಯ ಮದರಕಂಡಿ ಗ್ರಾಮದ ಅಜಿತ್ ಮಾದರ್ ಮೂವರನ್ನು ಮದುವೆಯಾದ ಯೋಧ. ಸಿ.ಆರ್.ಪಿ.ಎಫ್ ನಲ್ಲಿ ಕೆಲಸ ಶುರು ಮಾಡಿದ ನಂತರ 2011ರಲ್ಲಿ ದಾಕ್ಷಾಯಿಣಿ ಎಂಬಾಕೆ ಜೊತೆ ಅಜಿತ್ ಮದುವೆ ನೆರವೇರಿತ್ತು. ಇಬ್ಬರು ಮಕ್ಕಳು ಕೂಡ ಇದ್ದರು. ಆದ್ರೆ ಅಜಿತ್ ಬಿಹಾರದಲ್ಲಿ ಕೆಲಸ ಮಾಡ್ತಿದ್ದ ವೇಳೆ ಪತ್ನಿಗೆ ಗೊತ್ತಾಗದಂತೆ ಇನ್ನೊಬ್ಬ ವಿವಾಹಿತೆಯೊಂದಿಗೆ ಲವ್ವಿ ಡವ್ವಿ ಶುರುವಾಗಿತ್ತು.

    ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸೀಮಾ ಎಂಬಾಕೆಯನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿ ಸಂಸಾರ ಆರಂಭಿಸಿದ್ದನು. ಈ ವಿಚಾರ ಗೊತ್ತಾಗ್ತಿದ್ದಂತೆ ದಾಕ್ಷಾಯಿಣಿ, ಸಿ.ಆರ್.ಪಿ.ಎಫ್ ಕಮಾಂಡರ್ ಗೆ ದೂರು ಕೊಟ್ಟಿದ್ದಾರೆ. ಬಳಿಕ ಕಮಾಂಡರ್ ಕೌಟುಂಬಿಕ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಬರುವಂತೆ ಅಜಿತ್ ಮಾದರ್ ಗೆ 15 ದಿನ ರಜೆ ಮೇಲೆ ಊರಿಗೆ ಕಳುಹಿಸಿದ್ದರು. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿ ಮಗುವಾದ್ಮೇಲೆ ಕೈಕೊಟ್ಟ- ರೊಚ್ಚಿಗೆದ್ದ ಪತ್ನಿಯಿಂದ ಪತಿ ಮನೆಯೆದುರು ಆಕ್ರೋಶ

    ಯಾವಾಗ ರಜೆಯಲ್ಲಿ ಊರಿಗೆ ಬಂದ ಬಳಿಕ ಜೆಡಿಎಸ್ ಕಿತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸೂರ್ಯವಂಶಿ ಬಳಿ ತನ್ನ ಸಂಸಾರದ ವಿವಾದ ಇತ್ಯರ್ಥ ಪಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಈ ಸಮಸ್ಯೆ ಇತ್ಯರ್ಥ ಮಾಡುವ ವೇಳೆ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು, ಇಬ್ಬರೂ ರಿಜಿಸ್ಟರ್ ಮದುವೆ ಕೂಡ ಆಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡೋಕೆ ಹೋದ ನನಗೆ ಜಯಶ್ರೀ ಸೂರ್ಯವಂಶಿ ಬೆದರಿಕೆ ಹಾಕಿದ್ದಾಳೆ ಅಂತ ನೊಂದ ದಾಕ್ಷಾಯಿಣಿ ಆರೋಪಿಸಿದ್ದಾರೆ.

    ಸದ್ಯ ದಾಕ್ಷಾಯಿಣಿ ನನಗೆ ನ್ಯಾಯ ಕೊಡಿಸಿ ಎಂದು ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ಇನ್ನೊಂದು ಕಡೆ ಅಜಿತ್ ಪ್ರೇಯಸಿ ಸೀಮಾ ಬದುಕು ಕೂಡ ಅತಂತ್ರವಾಗಿದೆ. ಸಾಮಾಜ ಸೇವೆ ಮಾಡೋ ಜಯಶ್ರೀ ಸೂರ್ಯವಂಶಿ ಮಾಡಿರೋ ಕೆಲಸಕ್ಕೆ ದಾಕ್ಷಾಯಿಣಿ ಕುಟುಂಬ ಬೀದಿಪಾಲಾಗಿದೆ.

    ಈ ಬಗ್ಗೆ ಠಾಣೆಯಲ್ಲಿ ದೂರು ಕೊಟ್ಟರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ದೇಶ ಕಾಯುವ ಯೋಧ ಇಬ್ಬರ ಬಾಳಲ್ಲಿ ಆಟವಾಡಿರೋದು ತಪ್ಪು. ನಮಗೆ ನ್ಯಾಯ ಕೊಡಿಸಿ ಅಂತ ನೊಂದ ಮಹಿಳೆ ಕಣ್ಣೀರಿಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ಯಾಕ್ ಪೇನ್ ಇತ್ತು, ಮುಂಬೈಗೆ ಹೋಗಿದ್ದೆ- ಶಾಸಕ ಮಹೇಶ್ ಕುಮಟಳ್ಳಿ

    ಬ್ಯಾಕ್ ಪೇನ್ ಇತ್ತು, ಮುಂಬೈಗೆ ಹೋಗಿದ್ದೆ- ಶಾಸಕ ಮಹೇಶ್ ಕುಮಟಳ್ಳಿ

    – ರಾತ್ರೋರಾತ್ರಿ ಕಾಂಗ್ರೆಸ್ ಅತೃಪ್ತ ಶಾಸಕ ದಿಢೀರ್ ಪ್ರತ್ಯಕ್ಷ

    ಬೆಳಗಾವಿ (ಚಿಕ್ಕೋಡಿ): ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿದ್ದ ಕಾಂಗ್ರೆಸ್ ಶಾಸಕರು ಒಬ್ಬೊಬ್ಬರಾಗಿ ಕ್ಷೇತ್ರಕ್ಕೆ ಮರಳುತ್ತಿದ್ದಾರೆ. ಈ ಬೆನ್ನಲ್ಲೇ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಕೂಡ ಗುರುವಾರ ರಾತ್ರಿ ಕ್ಷೇತ್ರದಲ್ಲಿ ದಿಢೀರ್ ಆಗಿ ಪ್ರತ್ಯಕ್ಷರಾಗಿದ್ದಾರೆ.

    ಅಥಣಿ ಪಟ್ಟಣದ ಅಬ್ದುಲ್ ಕಲಾಂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದ್ದ ಕಾಮಗಾರಿಯನ್ನು ಶಾಸಕ ಮಹೇಶ ಕುಮಟಳ್ಳಿ ಅವರು ರಾತ್ರಿ 9 ಗಂಟೆ ಸುಮಾರು ವೀಕ್ಷಿಸಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎನ್ನುವುದು ಕೇವಲ ಉಹಾ ಪೋಹ. ನಾನು ಕಾಂಗ್ರೆಸ್‍ನಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟನೆ ನೀಡಿದರು.

    ಸಿಎಲ್‍ಪಿ ಸಭೆಗೆ ಗೈರು ಆಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ನನಗೆ ಬ್ಯಾಕ್ ಪೇನ್ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ ಸಿಎಲ್‍ಪಿ ಸಭೆ ನಿಗಧಿಯಾಗುವ ಮುನ್ನವೇ ಮುಂಬೈಗೆ ಟಿಕೇಟ್ ಬುಕ್ ಮಾಡಿದ್ದೆ. ಚಿಕಿತ್ಸೆಗೆ ಪಡೆಯಲು ಹೋಗುವುದು ಅನಿವಾರ್ಯವಾಗಿದ್ದರಿಂದ ಪಕ್ಷದ ನಾಯಕರಿಗೆ ಪತ್ರ ಕೂಡ ಬರೆದಿದ್ದೇನೆ ಎಂದ ಅವರು, ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಕಾಂಗ್ರೆಸ್‍ನಿಂದ. ಹೀಗಾಗಿ ಪಕ್ಷವನ್ನು ಬಿಟ್ಟು ಹೋಗುವ ವಿಚಾರವನ್ನು ಮಾಡಿಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೋಕಾಚಾರಣೆ ಘೋಷಣೆ ನಡುವೆಯೂ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ಬಿಜೆಪಿ ಶಾಸಕ

    ಶೋಕಾಚಾರಣೆ ಘೋಷಣೆ ನಡುವೆಯೂ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ಬಿಜೆಪಿ ಶಾಸಕ

    – ಶಾಸಕ ದುರ್ಯೋಧನ ಐಹೊಳೆ ನಡೆಯಿಂದ ಬಿಜೆಪಿಗೆ ಮುಖಭಂಗ

    ಬೆಳಗಾವಿ (ಚಿಕ್ಕೋಡಿ): ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚಾರಣೆ ಘೋಷಿಸಿದೆ. ಆದರೆ ಬೆಳಗಾವಿ ಜಿಲ್ಲೆಯ ರಾಯಬಾಗದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು 63ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

    ಜನ್ಮದಿನದ ನಿಮಿತ್ತ ಅನೇಕರಿಗೆ ಆಮಂತ್ರಣ ನೀಡಿದ್ದರಿಂದ ಸಾವಿರಾರು ಜನರು ಶಾಸಕರ ಸಾರೋಟ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಾಸಕರು ಹಾಗೂ ಧರ್ಮ ಪತ್ನಿ ಅವರನ್ನು ರಾಯಬಾಗ ಪಟ್ಟಣದಲ್ಲಿ ಮೆರವಣಿಗೆ ಮಾಡಿ, ಬಳಿಕ ವೇದಿಕೆಗೆ ಕರೆತರಲಾಯಿತು. ಆದರೆ ಹೆಸರಿಗೆ ಎಂಬಂತೆ ಸಾರೋಟದಲ್ಲಿ ಶಿವಕುಮಾರ ಶ್ರೀಗಳ ಭಾವ ಚಿತ್ರ ಇಟ್ಟು ಪೂಜೆ ಮಾಡಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಲು-ಬಾಯಿ ಜ್ವರದಿಂದ ಸಾವನ್ನಪ್ಪುತ್ತಿರುವ ರಾಸುಗಳು-ಇತ್ತ ರೆಸಾರ್ಟ್ ಸೇರಿಕೊಂಡ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ

    ಸಂಜೆಯೂ ಗಾಯನ ಸ್ಪರ್ಧೆ ಹೆಸರಿನಲ್ಲಿ ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶೋಕಾಚರಣೆ ಹಾಗೂ ಭೀಕರ ಬರಗಾಲದ ನಡುವೆಯೂ ಶಾಸಕರು ಜನ್ಮದಿನಕ್ಕೆ ಲಕ್ಷಾಂತರ ಹಣ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

    ಶೋಕಾಚರಣೆ ನಡುವೆಯೂ ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಸರ್ಕಾರಿ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ವಿರೋಧ ಮಾಡಿದ್ದವು. ಈಗ ಶಾಸಕ ದುರ್ಯೋಧನ ಐಹೊಳೆ ಅವರು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಬಿಜೆಪಿಗೆ ಸಾಕಷ್ಟು ಮುಜುಗುರ ತಂದಿದೆ. ಇದನ್ನೂ ಓದಿ: ಸರ್ಕಾರದಿಂದ ರಜೆ ಘೋಷಣೆ – ಸಮಾಜ ಕಲ್ಯಾಣ ಇಲಾಖೆಯಿಂದ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಕಾರ್ಯಕ್ರಮ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv