Tag: belagavi

  • ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಾಳೆ: ಸಿದ್ದರಾಮಯ್ಯ

    ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಾಳೆ: ಸಿದ್ದರಾಮಯ್ಯ

    – ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ಲಕ್ಷ್ಮಿ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಸಿಎಂ

    ಬೆಳಗಾವಿ: ನಾಳೆ 1 ಗಂಟೆಗೆ (ಜ.21) ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ಕಳೆದ ತಿಂಗಳು 27 ರಂದು ಈ ಸಮಾವೇಶ ನಡೆಯಬೇಕಿತ್ತು. ಮನಮೋಹನ್ ಸಿಂಗ್ ನಿಧನದಿಂದ ರದ್ದಾಯಿತು. ಮಹಾತ್ಮಾ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಎಷ್ಟು ಪ್ರಸ್ತುತ, ನಮ್ಮ ಸಂವಿಧಾನ ರಕ್ಷಣೆ ಮಾಡುವ ಜವಾಬ್ದಾರಿಯಿದೆ. ಸಂವಿಧಾನ ಇಡೀ ಭಾರತೀಯರನ್ನ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.

    1924 ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. 1924 ರಲ್ಲಿ ಡಿಸೆಂಬರ್ 26 ರಂದು ನಡೆದ ಸಮಾವೇಶ ಅಧ್ಯಕ್ಷತೆ ಗಾಂಧೀಜಿ ವಹಿಸಿದ್ದರು. ಸಮಾವೇಶ ಸಿದ್ಧತೆಯನ್ನ ಡಿಕೆಶಿ ಅಚ್ಚುಕಟ್ಟಾಗಿ ಮಾಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನ ಸೇರ್ತಾರೆ. ಸಮಾವೇಶದಲ್ಲಿ ಯಾವುದೇ ವಿಶೇಷ ಕೊಡುಗೆ ಘೋಷಣೆ ಮಾಡಲ್ಲ. ಇದು ನೂರು ವರ್ಷದ ಸವಿ ನೆನಪು ಎಂದು ಸ್ಪಷ್ಟಪಡಿಸಿದರು.

    ಸಮಾವೇಶದ ಬಗ್ಗೆ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಪ್ರಹ್ಲಾದ್ ಜೋಶಿಗೆ ಇತಿಹಾಸ ಗೊತ್ತಿಲ್ಲ. ಸಂವಿಧಾನ ಜಾರಿಯಾದಾಗ ಸಾವರ್ಕರ್ ಏನು ಮಾತಾಡಿದ್ರು ಗೊತ್ತಿದೆಯಾ? ಇದು ಅವರಿಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಸರ್ಕಾರದ ಕಾರ್ಯಕ್ರಮ ಬೇರೆ. ಸಮಾವೇಶವನ್ನ ಪಕ್ಷದಿಂದ ಮಾಡುತ್ತಿದ್ದೇವೆ ಎಂದರು.

    ಗೋಡ್ಸೆ ಹತ್ಯೆಯಲ್ಲಿ ನೆಹರೂ ಪಾತ್ರವಿದೆ ಅಂತಾ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇತಿಹಾಸ ಯತ್ನಾಳ್‌ಗೂ ಗೊತ್ತಿಲ್ಲ, ನಿಮಗೂ ಗೊತ್ತಿಲ್ಲ. ಯತ್ನಾಳ್ ಇತಿಹಾಸವನ್ನ ಓದಿಕೊಂಡಿಲ್ಲ. ಅಂಬೇಡ್ಕರ್ ಏನೂ ಹೇಳಿದ್ದಾರೆ ಗೊತ್ತಾ? ಇತಿಹಾಸ ಗೊತ್ತಿಲ್ಲದೇ ಭವಿಷ್ಯ ರೂಪಿಸಲು ಆಗುವುದಿಲ್ಲ ಅಂತಾ ಹೇಳಿದ್ದಾರೆ. ಗೋಡ್ಸೆ, ಮಹಾತ್ಮಾ ಗಾಂಧಿ ಹತ್ಯೆ ಮಾಡಿದ್ದು. ಅವರೊಂದಿಗೆ ಯಾರಿದ್ದರು ಗೊತ್ತಾ ನಿಮಗೆ? ಸಾವರ್ಕರ್ ಮೇಲೆ ಕೇಸ್ ಇದ್ದವು ಗೊತ್ತಾ ನಿಮಗೆ ಎಂದು ಹೇಳಿದರು.

    ಇದೇ ವೇಳೆ, ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾದರು. ಖಾಸಗಿ ಆಸ್ಪತ್ರೆಗೆ ತೆರಳಿ ಸಚಿವರ ಆರೋಗ್ಯ ವಿಚಾರಿಸಿದರು. ಸಚಿವೆ ಹೆಬ್ಬಾಳ್ಕರ್ ಅವರಿಗೆ ಧೈರ್ಯ ತುಂಬಿದರು. ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಸಿಎಂ ಸಿದ್ದರಾಮಯ್ಯ ಅವರಿಗೆ ಗೃಹ ಸಚಿವ ಪರಮೇಶ್ವರ್, ಸಚಿವ ಹೆಚ್.ಸಿ.ಮಹದೇವಪ್ಪ ಸಾಥ್ ನೀಡಿದರು.

  • 5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್‌ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು

    5 ಗೋವುಗಳನ್ನು ಎತ್ತಿಕೊಂಡು ಹೋಗುತ್ತಿದ್ದ ದೃಶ್ಯ ಸಿಕ್ಕಿದ್ರೂ ವಾಹನ ನಂಬರ್‌ ಇಲ್ವಂತೆ – ಕೈ ಚೆಲ್ಲಿದ ಪೊಲೀಸರು

    ಬೆಳಗಾವಿ: ಜಮೀನಿನಲ್ಲಿ ಕಟ್ಟಿದ್ದ ಗೋವುಗಳನ್ನ ರಾತ್ರೋರಾತ್ರಿ ದುರುಳರು ಕದ್ದು ಸಾಗಿಸಿದ ಘಟನೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ನಡೆದಿದೆ.

    ಜ.7ರ ರಾತ್ರಿ ಉಮಾ ಸಂಪಗಾವ ಎಂಬುವವರಿಗೆ ಸೇರಿದ್ದ ಐದು ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಜಮೀನಿನ ಶೆಡ್ ನಲ್ಲಿ ಕಟ್ಟಿದ್ದ ನಾಲ್ಕು ಜರ್ಸಿ ಆಕಳು, ಒಂದು ಆಕಳಿನ ಕರುವನ್ನು ಪಿಕಪ್‌ ವಾಹನದಲ್ಲಿ ಎತ್ತಿಕೊಂಡು ಹೋಗಿದ್ದಾರೆ.

    ತಂದೆ ಇಲ್ಲದ, ಗಂಡನಿಲ್ಲದ ಉಮಾಗೆ ಆಕಳುಗಳು ಆಧಾರ ಸ್ತಂಭವಾಗಿದ್ದವು. ತಂದೆಯ ಆಸ್ತಿಯಲ್ಲಿ ಪಶುಪಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಉಮಾ ಅವರು ಈಗ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ವಕ್ಫ್‌ ವಿರುದ್ಧ ಅನ್ನದಾತರ ಆಕ್ರೋಶ – ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್‌

    ಜ.8 ರ ಮಧ್ಯರಾತ್ರಿ ಆಕಳುಗಳನ್ನು ಪಿಕಪ್‌ ವಾಹನದಲ್ಲಿ ಕದ್ದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಇಟ್ಟುಕೊಂಡು ಸವದತ್ತಿ ಪೊಲೀಸ್ ಠಾಣೆಯಲ್ಲಿ ಉಮಾ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿ ವಾರ ಕಳೆದರೂ ದನಗಳನ್ನ ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ.

    ಸಿಸಿಟಿವಿ ದೃಶ್ಯವನ್ನು ನೀಡಿದಾಗ ಪಿಕ್‌ಅಪ್‌ ವಾಹನಕ್ಕೆ ನಂಬರ್‌ ಇಲ್ಲ ಎಂದು ಹೇಳಿ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ. ದನಗಳನ್ನು ಕಸಾಯಿಖಾನೆಗೆ ಸಾಗಿಸಿರಬಹುದು ಶಂಕೆ ವ್ಯಕ್ತಪಡಿಸುತ್ತಿರುವ ಉಮಾ ಈಗ ಕಂಡಕಂಡವರಲ್ಲಿ ಐದು ಆಕಳುಗಳನ್ನ ಹುಡುಕಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

  • ಬೆಳಗಾವಿಗೆ ಬರುತ್ತಿದ್ದಂತೆ ಡಿಸಿಎಂ ಡಿಕೆಶಿ ಸೈಲೆಂಟ್

    ಬೆಳಗಾವಿಗೆ ಬರುತ್ತಿದ್ದಂತೆ ಡಿಸಿಎಂ ಡಿಕೆಶಿ ಸೈಲೆಂಟ್

    ಬೆಳಗಾವಿ: ಕುಂದಾನಗರಿಗೆ (Belagavi) ಬರುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಬಹಳ ಸೈಲೆಂಟ್‌ (Silent) ಆದಂತೆ ಕಾಣುತ್ತಿದೆ.

    ಪಕ್ಷದ‌ ಅಂತರಿಕ ಬೆಳವಣಿಗೆಗಳ‌ ಪ್ರಶ್ನೆಗೆ ಡಿಕೆಶಿ ಉತ್ತರ ಕೊಡುತ್ತಿಲ್ಲ. ಏನೇ ಕೇಳಿದರೂ ಸಹ ಪಕ್ಷ ಸಂಘಟನೆ ಮಾತ್ರ ನನ್ನ ಗುರಿ ಎನ್ನುತ್ತಿದ್ದಾರೆ. ಪ್ರಶ್ನೆ ಕೇಳಿದರೆ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ‌ ಅವರ ಕಡೆ‌ ಬೊಟ್ಟು ಮಾಡುತ್ತಿದ್ದಾರೆ.

    ಕಾಂಗ್ರೆಸ್‌ ಪಕ್ಷದ ನೂತನ ಶಾಸಕರ‌ ವಿದೇಶಿ ಪ್ರವಾಸದ ಕುರಿತು ಬೆಳಗಾವಿ ‌ಉತ್ತರ ಕ್ಷೇತ್ರದ ಶಾಸಕ ಅಸೀಫ್‌ ಸೇಠ್ ಮಾತನಾಡಿದ್ದರು. ಮಾಧ್ಯಮಗಳು 15ಕ್ಕೂ ಹೆಚ್ಚು ಶಾಸಕರ ವಿದೇಶಿ ಪ್ರವಾಸದ ಬಗ್ಗೆ ಪ್ರಶ್ನೆ ಮಾಡಿದಾಗ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೋರ್ಟ್‌ನಲ್ಲಿ ತನ್ನದೇ ವಿಡಿಯೋ ನೋಡಿದ ಪ್ರಜ್ವಲ್‌ ರೇವಣ್ಣ

    ನನ್ನದು ಈಗ ಜೈ ಬಾಪು, ‌ಜೈ ಭೀಮ್, ಜೈ ಸಂವಿಧಾನ್ ಮಾತ್ರ. ಪಕ್ಷ ಸಂಘಟನೆ ನನ್ನ‌ಗುರಿ ಎಂದು ಡಿಕೆಶಿ ಹೇಳಿ ಹೊರಟರು.

  • ಸಾಲ ಪಾವತಿಸದ್ದಕ್ಕೆ ಸಿಟ್ಟು – ಮಹಿಳೆಯ ಅಪ್ರಾಪ್ತೆ ಮಗಳನ್ನು ತನ್ನ ಮಗನ ಜೊತೆ ಮದ್ವೆ ಮಾಡಿಸಿದ್ಳು!

    ಸಾಲ ಪಾವತಿಸದ್ದಕ್ಕೆ ಸಿಟ್ಟು – ಮಹಿಳೆಯ ಅಪ್ರಾಪ್ತೆ ಮಗಳನ್ನು ತನ್ನ ಮಗನ ಜೊತೆ ಮದ್ವೆ ಮಾಡಿಸಿದ್ಳು!

    ಬೆಳಗಾವಿ:  ಕೊಟ್ಟ ಸಾಲಕ್ಕೆ ಸರಿಯಾಗಿ ಬಡ್ಡಿ (Interest) ಕಟ್ಟದ್ದಕ್ಕೆ ಸಾಲ ಪಡೆದ ಮಹಿಳೆಯ ಮಗಳನ್ನು ಮಗನ (Son)  ಜೊತೆ ಮದುವೆ ಮಾಡಿಸಿದ ಘಟನೆ ಬೆಳಗಾವಿಯಲ್ಲಿ (Belagavi) ನಗರ ವ್ಯಾಪ್ತಿಯ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    50 ಸಾವಿರ ರೂ. ಹಣಕ್ಕೆ ಸರಿಯಾಗಿ ಬಡ್ಡಿ ಕಟ್ಟದೇ ಇದ್ದಾಗ ಹೆತ್ತಮ್ಮನ ಕಿವಿಯೋಲೆಯನ್ನೂ ಸಹ ಕಸಿದಿರುವ ಕಿರಾತಕಿ ಕಡೆಗೆ ಸಾಲ ಪಡೆದವಳ ಅಪ್ರಾಪ್ತೆಯನ್ನು ತನ್ನ ಮಗನ ಜೊತೆ ಮದುವೆ (Marriage) ಮಾಡಿಸಿದ್ದಾಳೆ.

     

    ಮದುವೆಯಾದ ವ್ಯಕ್ತಿ ತನ್ನ ಜೊತೆ ಬಲವಂತದ ದೈಹಿಕ‌ ಸಂಪರ್ಕ ಬೆಳೆಸಿದ್ದಾನೆ ಎಂದು ಆರೋಪಿಸಿ ಅಪ್ರಾಪ್ತೆ ದೂರಿದ್ದಾಳೆ. ಅನ್ಯಾಯಕ್ಕೊಳಗಾಗಿರುವ ಅಪ್ರಾಪ್ತೆ ತನಗೆ ನ್ಯಾಯ ಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾಳೆ. ಇದನ್ನೂ ಓದಿ: ಒಬಿಸಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ಕೊಕ್ಕೆ?- ವಿದ್ಯಾರ್ಥಿವೇತನ ಬಾರದೇ ವಿದ್ಯಾರ್ಥಿಗಳು ಪರದಾಟ

    ಬಲವಂತದ ಮದುವೆ ಮಾಡಿಸಿದ ಅತ್ತೆ, ಮಾವ ಹಾಗೂ ಬಲವಂತದ ದೈಹಿಕ ಸಂಪರ್ಕ ಸಾಧಿಸಿದ ಗಂಡನ ವಿರುದ್ಧ ಟಿಳಕವಾಡಿ ಪೊಲೀಸ್‌ ಠಾಣೆಯನ್ನು ದೂರು ದಾಖಲಿಸಿದ್ದಾಳೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣಸೌಧದಲ್ಲಿ ಮಾಧ್ಯಮಗಳಿಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯೆ ನೀಡಿ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಜ.17 ರಂದು ಖುದ್ದು ಅಪ್ರಾಪ್ತೆ ದೂರು ನೀಡಿದ್ದಾಳೆ. ಆಕೆಯ ತಾಯಿ ಮಾಡಿದ ಸಾಲಕ್ಕೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ದೂರಿದ್ದಾಳೆ.‌ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು ಸದ್ಯ ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಅಪ್ರಾಪ್ತೆ ಓದಬೇಕು ಎಂದು ಆಸೆ ಪಟ್ಟಿದ್ದಾಳೆ. ಆಕೆಯನ್ನು ಈಗ ರಕ್ಷಿಸಲಾಗಿದೆ. ಅಪ್ರಾಪ್ತೆಯ ಜೊತೆಗೆ ನಾವೂ ಸಹ ಮಾತನಾಡಿದ್ದೇವೆ. ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

     

  • ಯಾರಿಗೂ ನೋಟಿಸ್ ಕೊಡಲ್ಲ: ಸುರ್ಜೇವಾಲ ಸ್ಪಷ್ಟನೆ

    ಯಾರಿಗೂ ನೋಟಿಸ್ ಕೊಡಲ್ಲ: ಸುರ್ಜೇವಾಲ ಸ್ಪಷ್ಟನೆ

    ಬೆಳಗಾವಿ: ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಸ್ಪಷ್ಟಪಡಿಸಿದ್ದಾರೆ.

    ಬೆಳಗಾವಿಯ (Belagavi) ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ವದಂತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಯಾರಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ. ಬಿಜೆಪಿ ಪ್ರಾಯೋಜಿತ ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸವಿಡಬೇಡಿ ಎಂದಿದ್ದಾರೆ.

    ಈ ವದಂತಿಗಳನ್ನೆಲ್ಲ ಯಾರು ಹಬ್ಬಿಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇನ್ನೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ವಿಚಾರವಾಗಿ, ಅಧ್ಯಕ್ಷರ ಬದಲಾವಣೆ ಆಗುತ್ತಿದ್ರೆ ಇಲ್ಲೇಕೆ ಬರುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

    ಈ ಮೂಲಕ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ವಿಚಾರ ಸೇರಿದಂತೆ, ಸಿಎಂ ಸೀಟಿನ ಬಗ್ಗೆ ಮಾತಾಡುತ್ತಿದ್ದ ಸಚಿವರಿಗೆ ನೋಟಿಸ್ ನೀಡುವ ವದಂತಿಗೆ ತೆರೆ ಎಳೆದಿದ್ದಾರೆ.

  • ಲಕ್ಷ್ಮಿ ಹೆಬ್ಬಾಳ್ಕರ್, ಸಿಟಿ ರವಿ ಗಲಾಟೆ ಪ್ರಕರಣ – ಸಿಐಡಿ ಮುಂದೆ ಸಾಕ್ಷ್ಯ ನುಡಿದ ಎಂಎಲ್‌ಸಿ ಉಮಾಶ್ರೀ

    ಲಕ್ಷ್ಮಿ ಹೆಬ್ಬಾಳ್ಕರ್, ಸಿಟಿ ರವಿ ಗಲಾಟೆ ಪ್ರಕರಣ – ಸಿಐಡಿ ಮುಂದೆ ಸಾಕ್ಷ್ಯ ನುಡಿದ ಎಂಎಲ್‌ಸಿ ಉಮಾಶ್ರೀ

    ಬೆಂಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹಾಗೂ ಸಿ.ಟಿ ರವಿ (CT Ravi) ಮಧ್ಯೆ ಬೆಳಗಾವಿ ಅಧಿವೇಶನದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮುಂದೆ ಎಂಎಲ್‌ಸಿ ಉಮಾಶ್ರೀ (Umashree) ಸಾಕ್ಷ್ಯ ನುಡಿದಿದ್ದಾರೆ.

    ಗಲಾಟೆ ಸಂದರ್ಭದಲ್ಲಿ ಉಮಾಶ್ರೀ ಸದನದ ಒಳಗೆ ಇದ್ದರು. ಹೀಗಾಗಿ ಇಂದು (ಜ.16) ಉಮಾಶ್ರೀ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಎಟಿಎಂ ಹಣ ದರೋಡೆ ಪ್ರಕರಣ – ಇಬ್ಬರು ದರೋಡೆಕೋರರು ಹೈದರಾಬಾದ್‌ನಲ್ಲಿ ಅಂದರ್‌?

    ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯಗೆ (Yathindra Siddaramaiah) ಸಿಐಡಿ ನೋಟಿಸ್ ನೀಡಲಾಗಿದೆ. ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ (Belagavi Winter Session) ನಡೆದ ಗಲಾಟೆ ಸಂದರ್ಭದಲ್ಲಿ ಸದನದ ಒಳಗೆ ಯತೀಂದ್ರ ಸಿದ್ದರಾಮಯ್ಯ ಇದ್ದರು ಅನ್ನೋ ಕಾರಣಕ್ಕೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಚಿತ್ರವಿಚಿತ್ರ ಸನ್ನಿವೇಶ – 9 ವರ್ಷದಿಂದ ಸಾಧು ತಲೆಯ ಮೇಲೆ ಕುಳಿತ ಪಾರಿವಾಳ!

    ಸಿಐಡಿ (CID) ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ತಿಳಿಸಿದ್ದಾರೆ. ಇನ್ನೂ ಯತೀಂದ್ರ ಅವರ ಜೊತೆಗೆ ಎಂಎಲ್‌ಸಿ ಡಿಬಿ ಶ್ರೀನಿವಾಸ್ ಅವರು ಇದ್ದ ಕಾರಣಕ್ಕಾಗಿ ಅವರಿಗೂ ಕೂಡ ನೋಟಿಸ್ ನೀಡಿ, ಶುಕ್ರವಾರ (ಜ.17) ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ ಕೇಸ್‌ – 1 ಕೋಟಿಗೆ ಬೇಡಿಕೆಯಿಟ್ಟಿದ್ದ ಹಂತಕನ ಫೋಟೋ ಬಹಿರಂಗ

  • 2ನೇ ಹೆಂಡ್ತಿ ಬಿಟ್ಟು ತನ್ನ ಬಳಿಯೇ ಇರುವಂತೆ ಒತ್ತಾಯ – ಮೊದಲ ಹೆಂಡ್ತಿಯನ್ನೇ ಹತ್ಯೆಗೈದ ಗಂಡ

    2ನೇ ಹೆಂಡ್ತಿ ಬಿಟ್ಟು ತನ್ನ ಬಳಿಯೇ ಇರುವಂತೆ ಒತ್ತಾಯ – ಮೊದಲ ಹೆಂಡ್ತಿಯನ್ನೇ ಹತ್ಯೆಗೈದ ಗಂಡ

    ಬೆಳಗಾವಿ: 2ನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡ್ತಿಯನ್ನ ಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ.

    ಶಮಾ ರಿಯಾಜ್ ಪಠಾಣ್(25) ಕೊಲೆಯಾದ ಮೊದಲ ಹೆಂಡತಿ, ರಿಯಾಜ್ ಪಠಾಣ್(30) ಕೊಲೆ ಮಾಡಿದ ಪಾಪಿ ಗಂಡ. ಎರಡನೇ ಹೆಂಡತಿ ಫರ್ಜಾನಾ ಪಠಾಣ್ ಮಾತು ಕೇಳಿ, ಶಮಾ ಮಲಗಿದ್ದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – 8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ

    10 ವರ್ಷಗಳ ಹಿಂದೆ ಶಮಾಳೊಂದಿಗೆ ರಿಯಾಜ್‌ ಮದುವೆಯಾಗಿದ್ದ (Marriage). ಒಂದೂವರೆ ವರ್ಷದ ಹಿಂದೆ ಫರ್ಜಾನಾ ಜೊತೆಗೆ 2ನೇ ಮದುವೆಯಾಗಿದ್ದ. ಮೂರು ದಿನ ಮೊದಲ ಹೆಂಡತಿ, 4 ದಿನ 2ನೇ ಹೆಂಡತಿ ಮನೆಯಲ್ಲಿರುತ್ತಿದ್ದ. ಆದ್ರೆ ಶಮಾ 2ನೇ ಹೆಂಡತಿಯನ್ನು (Wife) ಬಿಟ್ಟು ತನ್ನ ಬಳಿಯೇ ಇರುವಂತೆ ಪದೇ ಪದೇ ಪೀಡಿಸುತ್ತಿದ್ದಳು. ಇದಕ್ಕೆ ಗಂಡ ಒಪ್ಪದೇ ಇದ್ದಿದ್ದಕ್ಕೆ ಶಮಾ ಮೇಂಟೆನೆನ್ಸ್‌ ಕೇಸ್‌ ಹಾಕುವುದಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ತಿರುಪತಿ ಕಾಲ್ತುಳಿತ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ – ಮಹಡಿಯಿಂದ ಬಿದ್ದು ಬಾಲಕ ಸಾವು

    ಶಮಾ ತನ್ನ ವಿರುದ್ಧ ಕೇಸ್‌ ಹಾಕೋದಕ್ಕೆ ಪ್ಲ್ಯಾನ್‌ ಮಾಡಿದ್ದ ವಿಚಾರ ತಿಳಿದ ರಿಯಾಜ್‌ 2ನೇ ಹೆಂಡತಿಗೂ ಹೇಳಿದ್ದಾನೆ. ಬಳಿಕ ಫರ್ಜಾನಾ ಮಾತು ಕೇಳಿ ಶಮಾಳನ್ನ ಕೊಂದೇಬಿಟ್ಟಿದ್ದಾನೆ. ಕೊಲೆ ಮಾಡಿದ ಬಳಿಕ ಮೊದಲ ಹೆಂಡತಿ ಮಗ ಹಾಗೂ 2ನೇ ಹೆಂಡತಿಯನ್ನ ಕರೆದುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Saif Ali Khan Stabbed| ಮನೆಯ ಕೆಲಸದಾಕೆಯ ಜೊತೆ ದಾಳಿಕೋರನಿಗೆ ಇತ್ತಾ ಸಂಬಂಧ? 

  • ಹೆಬ್ಬಾಳ್ಕರ್‌ ಬೆನ್ನುಹುರಿಗೆ ಪೆಟ್ಟಾಗಿದ್ದು, ಚಿಕಿತ್ಸೆ ಮುಂದುವರಿದಿದೆ: ಡಾ. ರವಿ ಪಾಟೀಲ್‌

    ಹೆಬ್ಬಾಳ್ಕರ್‌ ಬೆನ್ನುಹುರಿಗೆ ಪೆಟ್ಟಾಗಿದ್ದು, ಚಿಕಿತ್ಸೆ ಮುಂದುವರಿದಿದೆ: ಡಾ. ರವಿ ಪಾಟೀಲ್‌

    ಬೆಳಗಾವಿ:  ಇನ್ನೂ ಮೂರು ದಿನ ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ.

    ಕಾರು ಅಪಘಾತದಿಂದ (Car Accident) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವರ ಆರೋಗ್ಯ ತಪಾಸಣೆ ಬಳಿಕ ಡಾ.ರವಿ ಪಾಟೀಲ್ ಪ್ರತಿಕ್ರಿಯಿಸಿ, 24 ಗಂಟೆಯಲ್ಲಿ ಹೆಬ್ಬಾಳ್ಕರ್‌ ಆರೋಗ್ಯ ಚೆನ್ನಾಗಿ ಚೇತರಿಕೆ ಕಂಡಿದೆ. ಸಚಿವರ ಬೆನ್ನುಹುರಿ ಪೆಟ್ಟಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದರು.

    ವೈದ್ಯರು ಹೇಳಿದ್ದೇನು?
    ಹೆಬ್ಬಾಳ್ಕರ್‌ ಮತ್ತು ಸಹೋದರ ಚನ್ನರಾಜ್ ಇಬ್ಬರೂ ಔಟ್ ಆಫ್ ಡೇಂಜರ್ ಇದ್ದಾರೆ. ಅವರ ಗನ್ ಮ್ಯಾನ್, ಕಾರ್‌ ಚಾಲಕ ಸಹ ಆರೋಗ್ಯವಾಗಿದ್ದಾರೆ. ಸಚಿವರು ಒಂದು ವಾರ ವಿಶ್ರಾಂತಿ ಪಡೆಯಬೇಕು. ಚನ್ನರಾಜ್ ಅವರಿಗೂ ವಿಶ್ರಾಂತಿ ಪಡೆಯಲು ಸೂಚಿಸಿದ್ದೇವೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಕೇಸ್ – ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ದೂರು

    ಮಂಗಳವಾರ ಎಂಆರ್‌ಐ, ಎಕ್ಸ್‌ರೇ ತೆಗೆಸಿ ತಪಾಸಣೆ ಮಾಡಿದ್ದೇವೆ. ಇಂದು ಅವರ ಅವರ ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಸಚಿವರಿಗೆ ಹೈಪ್ರೋಟಿನ್ ಆಹಾರ ಸೇವಿಸಲು ಸಲಹೆ ಕೊಟ್ಟಿದ್ದೇವೆ. ಪನ್ನೀರ್‌, ಡ್ರೈ ಫ್ರೂಟ್ಸ್‌ ತೆಗೆದುಕೊಳ್ಳಲು ಹೇಳಿದ್ದೇವೆ.

     

  • ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಕೇಸ್ – ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ದೂರು

    ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಕೇಸ್ – ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ದೂರು

    – ಹಿಟ್‌ & ರನ್‌ ಕೇಸ್‌ ದಾಖಲು

    ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಾರು ಅಪಘಾತ ಪ್ರಕರಣದಲ್ಲಿ ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ದೂರು ದಾಖಲಿಸಲಾಗಿದೆ. ಸರ್ಕಾರಿ ಕಾರು ಡ್ರೈವರ್‌, ಹಿಟ್ & ರನ್ ಕೇಸ್ ದಾಖಲಿಸಿದ್ದಾರೆ.

    ಓವರ್‌ಟೇಕ್ ಮಾಡುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಆಯ್ತಾ ಎಂದು ಪ್ರಶ್ನೆ ಮೂಡಿದೆ. ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಿನ್ನೆ ಬೆಳಗ್ಗೆ 5 ಗಂಟೆಗೆ ಕಾರು ಅಪಘಾತ ಸಂಭವಿಸಿತ್ತು.

    ದೂರಿನಲ್ಲಿ ಏನಿದೆ?
    ನಾನು ಸಚಿವರ ಸರ್ಕಾರಿ ಕಾರು ಏಂ01 ಉಂ977 ಚಲಾಯಿಸುತ್ತಿದ್ದೆ. ಕಾರಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಸಚಿವರ ಅಂಗರಕ್ಷಕ ಈರಪ್ಪ ಹುಣಶಿಕಟ್ಟಿ ಇದ್ದರು. ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದೆವು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 48ರ ಮೇಲಿದ್ದೆವು. ನಮ್ಮ ಮುಂದೆ ಲೈನ್ 1 ರಲ್ಲಿ ಹೋಗುತ್ತಿದ್ದ ಕಂಟೇನರ್ ಟ್ರಕ್ ಚಾಲಕ ಯಾವುದೇ ಮುನ್ಸೂಚನೆ ಕೊಡದೇ ಎಡಬದಿಗೆ ಬಂದ. ಆಗ ಎಡಬದಿಗೆ ತೆಗೆದುಕೊಂಡರೂ ಟ್ರಕ್ ಚಾಲಕ ಕಾರಿನ ಬಲ ಬದಿಗೆ ತಾಗಿಸಿದ.

    ಕಾರು ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ, ಗಂಭೀರ ಗಾಯಗಳಾಗಿವೆ. ಅಪಘಾತ ಮಾಡಿ ವಾಹನ ನಿಲ್ಲಿಸದೇ ಲಾರಿ ಡ್ರೈವರ್ ಹೋಗಿದ್ದಾನೆ ಎಂದು ದೂರು ದಾಖಲಿಸಲಾಗಿದೆ.

    ಎಫ್‌ಐಆರ್‌ನಲ್ಲಿ ಎಲ್ಲಿಯೂ ನಾಯಿಗಳು ಅಡ್ಡ ಬಂದ ವಿಚಾರವನ್ನ ಡ್ರೈವರ್‌ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಕೇಸ್ ದಾಖಲಿಸಿ ಕಿತ್ತೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್‌, ಸಹೋದರ ಶೀಘ್ರ ಗುಣಮುಖರಾಗಲಿ: ಸಿ.ಟಿ.ರವಿ ಪ್ರಾರ್ಥನೆ

    ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್‌, ಸಹೋದರ ಶೀಘ್ರ ಗುಣಮುಖರಾಗಲಿ: ಸಿ.ಟಿ.ರವಿ ಪ್ರಾರ್ಥನೆ

    ಬೆಂಗಳೂರು: ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಅವರು ಶೀಘ್ರ ಗುಣಮುಖರಾಗಿ ಎಂದು ಎಂಎಲ್‌ಸಿ ಸಿ.ಟಿ.ರವಿ (C.T.Ravi) ಪ್ರಾರ್ಥಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ಇಂದು ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಶೀಘ್ರ ಗುಣಮುಖರಾಗಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುವೆ ಎಂದಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರಾದ ಸಚಿವೆ

    ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಸಂಭವಿಸಿದ ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಸಹೋದರ ಚನ್ನರಾಜ ಹಟ್ಟಿಹೊಳಿ ಗಾಯಗೊಂಡಿದ್ದಾರೆ. ಇಬ್ಬರಿಗೂ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈಚೆಗೆ ನಡೆದ ವಿಧಾನಮಂಡಲ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಎಂಎಲ್‌ಸಿ ಸಿ.ಟಿ.ರವಿ ನಡುವೆ ರಾಜಕೀಯ ಘರ್ಷಣೆಯಾಗಿತ್ತು. ಸದನದಲ್ಲೇ ಸಚಿವೆಯನ್ನು ಅಸಾಂವಿಧಾನಿಕ ಪದ ಬಳಸಿ ನಿಂದಿಸಿದ ಆರೋಪ ಸಿ.ಟಿ.ರವಿ ಅವರ ಮೇಲಿತ್ತು. ಇದು ಎರಡೂ ಪಕ್ಷಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ತನ್ನ ಮೇಲೆ ಅವಾಚ್ಯ ಪದ ಬಳಕೆ ಮಾಡಲಾಗಿದೆ ಎಂದು ಸಚಿವೆ ಕಣ್ಣೀರಿಟ್ಟಿದ್ದರು. ಇದನ್ನೂ ಓದಿ: ಕಾರು ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಬೆನ್ನುಮೂಳೆ ಮುರಿತ – ಸಚಿವೆ ಆರೋಗ್ಯದ ಬಗ್ಗೆ ವೈದ್ಯರು ಹೇಳೋದೇನು?

    ಘಟನೆ ನಡೆದ ದಿನ ಪೊಲೀಸರು ಸಿ.ಟಿ.ರವಿ ಅವರನ್ನು ಬಂಧಿಸಿದ್ದರು. ಆ ದಿನ ರಾತ್ರಿ ಹಲವು ನಾಟಕೀಯ ಬೆಳವಣಿಗೆ ನಡೆದವು. ಮಾರನೇ ದಿನ ಕೋರ್ಟ್‌ನಲ್ಲಿ ಬಿಜೆಪಿ ನಾಯಕನಿಗೆ ಜಾಮೀನು ಸಿಕ್ಕಿತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಸಂದರ್ಶನವೊಂದರಲ್ಲಿ ಸಿ.ಟಿ.ರವಿ, ‘ಅಕ್ಕ ನಾನು ಹೃದಯದಿಂದ ಕೆಟ್ಟವನಲ್ಲ’ ಎಂದು ತಿಳಿಸಿದ್ದರು.