Tag: belagavi

  • ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ – ಜಾರಕಿಹೊಳಿ ಕುಟುಂಬದ ಎರಡನೇ ಪೀಳಿಗೆ ಎಂಟ್ರಿ

    ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ – ಜಾರಕಿಹೊಳಿ ಕುಟುಂಬದ ಎರಡನೇ ಪೀಳಿಗೆ ಎಂಟ್ರಿ

    – ಜಾರಕಿಹೊಳಿ ಗುಂಪಿಗೆ ಆರಂಭಿಕ ಮೇಲುಗೈ
    – 6 ತಾಲೂಕಿನಲ್ಲಿ ಅವಿರೋಧ ಆಯ್ಕೆ

    ಬೆಳಗಾವಿ: ಜಿಲ್ಲೆಯಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ (DCC Bank) ಶನಿವಾರ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದೆ. 16 ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣಾ ಕಣದಲ್ಲಿ ಘಟಾನುಘಟಿ ನಾಯಕರೇ ಅಖಾಡಕ್ಕೆ ಇಳಿದಿದ್ದಾರೆ. ಆರಂಭದ ಹಂತದಲ್ಲೇ ಜಾರಕಿಹೊಳಿ ಬ್ರದರ್ಸ್ (Jarkiholi Brothers) ಗುಂಪು ಮೆಲುಗೈ ಸಾಧಿಸಿದೆ.

    ಅ.19 ರಂದು ನಡೆಯಲಿರುವ ಮತದಾನಕ್ಕೆ ಈ ವರೆಗೂ ಒಟ್ಟು 64 ನಾಮಪತ್ರ ಸಲ್ಲಿಕೆಯಾಗಿವೆ. ಈ ಪೈಕಿ ಆರು ತಾಲೂಕಿನಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದು ಆರಂಭದಲ್ಲೇ ಜಾರಕಿಹೊಳಿ ಗುಂಪು ಮೇಲುಗೈ ಸಾಧಿಸಿದೆ.

    ಹಾಲಿ, ಮಾಜಿ ಶಾಸಕರು ಸೇರಿದಂತೆ ಮಾಜಿ ಸಂಸದರು ಕೂಡ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಅದರಲ್ಲೂ ಈಗಾಗಲೇ ಜಾರಕಿಹೊಳಿ ಬ್ರದರ್ಸ್ 13 ಜನರ ತಂಡವನ್ನು ಸಿದ್ಧಪಡಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಥಣಿ, ಕಾಗವಾಡ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಬೇರೆ ಕಡೆಗಳಲ್ಲಿ ತಮ್ಮವರನ್ನು ಅಖಾಡಕ್ಕಿಳಿಸಿದ್ದಾರೆ.

    ರಮೇಶ್ ಕತ್ತಿ (Ramesh Katti) ಮತ್ತು ಲಕ್ಷ್ಮಣ ಸವದಿ (Laksham savdi) ನಡೆ ಇನ್ನೂ ನಿಗೂಢವಾಗಿದ್ದು ಜಾರಕಿಹೊಳಿ ಸಹೋದರರಿಗೆ ಶಾಕ್ ಕೊಡಲು ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ. ಸದ್ಯ ಆರಂಭಿಕ ಹಂತದಲ್ಲಿ ಜಾರಕಿಹೊಳಿ ಬ್ರದರ್ಸ್ ಮೇಲುಗೈ ಸಾಧಿಸಿದ್ದು ಆರು ತಾಲೂಕಿನ ಪೈಕಿ ಐದು ಜಾರಕಿಹೊಳಿ ಬ್ರದರ್ಸ್ ಗುಂಪಿನವರು ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:  DCC Bank Election| ಮೇಲೆ ಕುಳಿತವನು ಆಟ ಆಡಿಸ್ತಾನೆ, ನಾವೆಲ್ಲ ಗೊಂಬೆಗಳು: ಲಕ್ಷ್ಮಣ ಸವದಿ

     

    ಅವಿರೋಧ ಆಯ್ಕೆ: ಗೋಕಾಕ್‌ನಿಂದ ಶಾಸಕ ರಮೇಶ್‌ ಜಾರಕಿಹೊಳಿ ಪುತ್ರ ಅಮರನಾಥ್ ಜಾರಕಿಹೊಳಿ, ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಬೆಳಗಾವಿ ತಾಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯರಗಟ್ಟಿಯಿಂದ ವಿಶ್ವಾಸ್ ವೈದ್ಯ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಮೂಡಲಗಿ ನೀಲಕಂಠ ಜಾರಕಿಹೊಳಿ ಗುಂಪಿನಲ್ಲಿದ್ದವರು ಅವಿರೋಧ ಆಯ್ಕೆಯಾದರೆ ಇತ್ತ ಯಾವುದೇ ಗುಂಪಿನಲ್ಲಿ ಗುರುತಿಸಿಕೊಳ್ಳದೇ ಚಿಕ್ಕೋಡಿಯಿಂದ ನಾಮಪತ್ರ ಸಲ್ಲಿಸಿದ್ದ ಶಾಸಕ ಗಣೇಶ್ ಹುಕ್ಕೇರಿ ಕೂಡ ಆಯ್ಕೆಯಾಗಿದ್ದಾರೆ.

     

    ಶನಿವಾರ ಮಧ್ಯಾಹ್ನ ಮೂರು ಗಂಟೆಯವರೆಗೂ ಕಾದು ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಶಾಸಕ ವಿಶ್ವಾಸ್ ವೈದ್ಯ, ನೀಲಕಂಠ, ಗಣೇಶ್ ಹುಕ್ಕೇರಿ ಬೆಂಬಲಿಗರು ಗುಲಾಲ್ ಹಚ್ಚಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜಾರಕಿಹೊಳಿ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.

    ಒಂದು ಕಡೆ ಜಾರಕಿಹೊಳಿ ಬ್ರದರ್ಸ್ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸಿದರೂ ಠಕ್ಕರ್ ಕೊಡಲು ಲಕ್ಷ್ಮಣ ಸವದಿ ಹಾಗೂ ರಮೇಶ್ ಕತ್ತಿ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರೆ. ಹೇಗಾದರೂ ಮಾಡಿ ಅಧ್ಯಕ್ಷಗಾದಿ ಹಿಡಿಯಬೇಕು ತಮ್ಮ ಹಿಡಿತದಲ್ಲಿ ಡಿಸಿಸಿ ಬ್ಯಾಂಕ್ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಪ್ಲ್ಯಾನ್ ಮಾಡ್ತಿದ್ದು ಅ.19ರ ವರೆಗೂ ಕಾದು ನೋಡಿ ಅಂತಿದ್ದಾರೆ.

    ಇದೇ ಮೊದಲ ಬಾರಿಗೆ ಅಣ್ತಮ್ಮಂದಿರು ತಾವು ಸ್ಪರ್ಧೆ ಮಾಡುವುದನ್ನ ಬಿಟ್ಟು ತಮ್ಮ ಕುಡಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದು ಈ ಮೂಲಕ ಜಾರಕಿಹೊಳಿ ಮನೆತನದ ಎರಡನೇ ಪೀಳಿಗೆ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದೆ. ಈ ಕುರಿತು ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ತಾವು ಎಳೆದುಕೊಂಡು ಹೋಗುತ್ತಿರುವ ತೇರನ್ನು ಮಕ್ಕಳು ಎಳೆಯಬೇಕು ಜನರ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ಚುನಾವಣೆಗೆ ನಿಲ್ಲಿಸಿದ್ದಾಗಿ ಹೇಳಿದ್ದಾರೆ.

    ತಾನು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎನ್ನುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಎಂಟ್ರಿಯಾಗಿದ್ದಾರೆ. ಸಹಕಾರಿ ಸಂಘಗಳ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ದು ಜಾರಕಿಹೊಳಿ ಸಹೋದರರ ಮತ್ತೊಂದು ದಾಳ ಅಂತಾ ಹೇಳಲಾಗುತ್ತಿದ್ದು ಬಾಲಚಂದ್ರ ಜಾರಕಿಹೊಳಿ ಕೂಡ ರಾಜಕಾರಣದಲ್ಲಿ ಎಲ್ಲವೂ ಮಾಡಬೇಕು ಅಂತಾ ಹೇಳಿದ್ದಾರೆ.

    ಒಟ್ಟಿನಲ್ಲಿ ಸಾಕಷ್ಟು ಜಿದ್ದಾಜಿದ್ದಿಗೆ ಕಾರಣವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಅಕ್ಟೋಬರ್ 19ರಂದು ಮತದಾನ ನಡೆಯಲಿದ್ದು ಈಗಾಗಲೇ ಆರು ತಾಲೂಕಿನಲ್ಲಿ ಯಾವುದೇ ನಾಮ ಪತ್ರ ಸಲ್ಲಿಕೆಯಾಗದ ಹಿನ್ನೆಲೆ ಅವಿರೋಧ ಆಯ್ಕೆ ಖಚಿತವಾಗಿದ್ದು ಅಧಿಕೃತ ಘೋಷಣೆ ಒಂದೇ ಬಾಕಿ ಇದೆ. ಇತ್ತ ಜಾರಕಿಹೊಳಿ ಬ್ರದರ್ಸ್ ಕಡೆಯಿಂದ ಡಿಸಿಸಿ ಬ್ಯಾಂಕ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಲಿಂಗಾಯತ ಅಸ್ತ್ರ ಪ್ರಯೋಗ ಆಗಿದ್ದು ಇದರಿಂದ ತಮ್ಮ ಗುಂಪು ಗೆದ್ದರೆ ಲಿಂಗಾಯತರೇ ಅಧ್ಯಕ್ಷ ಅಂತಾ ಬಾಲಚಂದ್ರ ಹೇಳಿದ್ದು ಮತ್ತಷ್ಟು ರೋಚಕತೆ ಹೆಚ್ಚಿಸಿದೆ.

  • ಬೆಳಗಾವಿ| ಹೆಂಡತಿ ಕೊಂದು ಬೆಡ್ ಕೆಳಗೆ ಬಚ್ಚಿಟ್ಟು ಪಾಪಿ ಪತಿ ಪರಾರಿ

    ಬೆಳಗಾವಿ| ಹೆಂಡತಿ ಕೊಂದು ಬೆಡ್ ಕೆಳಗೆ ಬಚ್ಚಿಟ್ಟು ಪಾಪಿ ಪತಿ ಪರಾರಿ

    ಬೆಳಗಾವಿ: ಹೆಂಡತಿಯನ್ನು ಕೊಂದು ಬೆಡ್ ಕೆಳಗೆ ಹೆಣ ಅಡಗಿಸಿಟ್ಟು ಪಾಪಿ ಪತಿ ಪರಾರಿಯಾಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿಯಲ್ಲಿ ನಡೆದಿದೆ.

    ಕಳೆದ ಮೂರು ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದ್ದು, ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಗಂಡ ಪರಾರಿಯಾಗಿದ್ದಾನೆ. ಊರಿಗೆ ಹೋಗಿದ್ದ ಅತ್ತೆ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸಾಕ್ಷಿ ಆಕಾಶ್ ಕಂಬಾರ (20) ಕೊಲೆಯಾದ ದುರ್ದೈವಿ. ಆಕಾಶ್ ಕಂಬಾರ್ ಕೊಲೆ ಮಾಡಿ ಪರಾರಿಯಾಗಿರುವ ಪಾಪಿ ಪತಿ. ಸಾಕ್ಷಿ ಹಾಗೂ ಆಕಾಶ್ ಇಬ್ಬರು ಕಳೆದ 5 ತಿಂಗಳ ಹಿಂದೆ ಮದುವೆಯಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಕೊಲೆ ಯಾಕಾಗಿ ಆಯ್ತು ಎನ್ನುವುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಈವರೆಗೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣವೂ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವು

    ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವು

    ಬೆಳಗಾವಿ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಹೃದಯಾಘಾತದಿಂದ (Heartattack) ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಗೋಕಾಕ (Gokaka) ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದಿದೆ.

    ತಮ್ಮ ಸತೀಶ್ ಬಾಗನ್ನವರ (16), ಅಣ್ಣ ಬಸವರಾಜ್ ಬಾಗನ್ನವರ (24) ಮೃತ ದುರ್ದೈವಿಗಳು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸತೀಶ್ ಶನಿವಾರ ಮುಂಜಾನೆ ಅನಾರೋಗ್ಯದಿಂದ ಮೃತಪಟ್ಟಿದ್ದ. ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಬಸವರಾಜ್ ಅಲ್ಲೇ ಕುಸಿದು ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯನ ಗುಂಡಿಕ್ಕಿ ಹತ್ಯೆ

    ತುಂಬು ಗರ್ಭಿಣಿಯಾಗಿದ್ದ ಬಸವರಾಜ್ ಪತ್ನಿ ಪವಿತ್ರಾ, ಪತಿಯ ಸಾವಿನ ಸುದ್ದಿ ತಿಳಿದು ಕುಸಿದ್ದಿದ್ದರು. ತಕ್ಷಣವೇ ಆಕೆಯನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಇದೀಗ ಮನೆಗೆ ಆಧಾರವಾಗಿದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

  • ಬೆಳಗಾವಿ | ಕಲ್ಲು ತೂರಾಟಕ್ಕೆ ಹಿಂದೂ ಯುವಕರ ಕೌಂಟರ್ – `ಐ ಲವ್ ಶ್ರೀರಾಮ್‌’ ಫಲಕ ಅಳವಡಿಕೆ

    ಬೆಳಗಾವಿ | ಕಲ್ಲು ತೂರಾಟಕ್ಕೆ ಹಿಂದೂ ಯುವಕರ ಕೌಂಟರ್ – `ಐ ಲವ್ ಶ್ರೀರಾಮ್‌’ ಫಲಕ ಅಳವಡಿಕೆ

    ಬೆಳಗಾವಿ: ‘ಐ ಲವ್ ಮುಹಮ್ಮದ್’ ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ್ದಕ್ಕೆ ನಡೆದಿದ್ದ ಕಲ್ಲು ತರಾಟಕ್ಕೆ ಇದೀಗ ಹಿಂದೂ ಯುವಕರ ಕೌಂಟರ್ ಕೊಟ್ಟು,`ಐ ಲವ್ ಶ್ರೀರಾಮ್‌’ (I Love Shriram) ಫಲಕ ಅಳವಡಿಸಿದ್ದಾರೆ.

    ಶುಕ್ರವಾರ (ಅ.9) ರಾತ್ರಿ ಬೆಳಗಾವಿಯ ಖಡಕ್ ಗಲ್ಲಿಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದರು. ಇದೀಗ ಹಿಂದೂ ಯುವಕರು `ಐ ಲವ್ ಶ್ರೀರಾಮ್‌’ ಫಲಕ ಅಳವಡಿಸುವ ಮೂಲಕ ಕೌಂಟರ್ ಕೊಟ್ಟಿದ್ದಾರೆ.ಇದನ್ನೂ ಓದಿ: ಬೆಳಗಾವಿ | ‘ಐ ಲವ್ ಮುಹಮ್ಮದ್’ ಘೋಷಣೆ ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ – 50 ಮಂದಿ ವಿರುದ್ಧ FIR

    ಈಗಾಗಲೇ ಈ ಘಟನೆ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 50 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, 11 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಏನಿದು ಪ್ರಕರಣ?
    ಮಾಬುಸುಬಾನಿ ದರ್ಗಾದ ಉರುಸ್ ವೇಳೆ ‘ಐ ಲವ್ ಮುಹಮ್ಮದ್’ ಘೋಷಣೆ ಕೂಗಿದ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದೆ. ಪ್ರಶ್ನೆ ಮಾಡಿದ ಸ್ಥಳೀಯ ಹಿಂದೂ ನಿವಾಸಿಗಳ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿ ವರ್ಷ ಶನಿವಾರ ಕೂಟ, ಜಾಲ್ಗಾರ ಗಲ್ಲಿ ಮಾರ್ಗದ ಮೂಲಕ ದರ್ಗಾಗೆ ಮೆರವಣಿಗೆ ಹೋಗುತ್ತಿತ್ತು. ಈ ವರ್ಷ ಅನುಮತಿ ಇಲ್ಲದೆಯೂ ಸಹ ಖಡಕ್ ಗಲ್ಲಿಗೆ ಮೆರವಣಿಗೆ ಎಂಟ್ರಿಯಾಗಿದೆ ಎನ್ನಲಾಗಿದೆ. ಮೆರವಣಿಗೆ ವೇಳೆ `ಐ ಲವ್ ಮುಹಮ್ಮದ್’ ಎಂಬ ಘೋಷಣೆ ಕೂಗಿದ್ದಲ್ಲದೇ ಯಾವಾಗಲೂ ಬಾರದ ಮೆರವಣಿಗೆ ಈಗ ಯಾಕೆ ಬಂದಿದೆ? ತಮ್ಮ ಏರಿಯಾಗೆ ಬಂದು ಘೋಷಣೆ ಕೂಗಿದ್ದು ಯಾಕೆ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ ನಡೆದಿದೆ. ಬಳಿಕ ತಲ್ವಾರ್ ಕೂಡ ಪ್ರದರ್ಶನ ಮಾಡಿ ಗೂಂಡಾವರ್ತನೆ ತೋರಲಾಗಿದೆ.

    ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೆರವಣಿಗೆಯನ್ನು ಸ್ಥಳದಿಂದ ಕಳುಹಿಸಿದ್ದಾರೆ. ಏಕಾಏಕಿ ಮೆರವಣಿಗೆ ಬಂದವರು ಮತ್ತು ಕಲ್ಲು ತೂರಿದವರ ವಿರುದ್ಧ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮನಿ, ಇಬ್ಬರು ಡಿಸಿಪಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

  • ಬೆಳಗಾವಿ | ‘ಐ ಲವ್ ಮುಹಮ್ಮದ್’ ಘೋಷಣೆ ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ – 50 ಮಂದಿ ವಿರುದ್ಧ FIR

    ಬೆಳಗಾವಿ | ‘ಐ ಲವ್ ಮುಹಮ್ಮದ್’ ಘೋಷಣೆ ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ – 50 ಮಂದಿ ವಿರುದ್ಧ FIR

    ಬೆಳಗಾವಿ: ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವತ್ತು ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

    ಕಲ್ಲು ತೂರಾಟವಾಗುತ್ತಿದ್ದಂತೆ ಖಡಕ್ ಗಲ್ಲಿ ನಿವಾಸಿಗಳು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ 10 ಜನರ ಹೆಸರು ಉಲ್ಲೇಖಿಸಿ, ಒಟ್ಟು 50 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ: Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

    ತನಿಖೆಗಿಳಿದ ಪೊಲೀಸರು ಕೈಯಲ್ಲಿ ತಲ್ವಾರ್ ಹಿಡಿದು ಐ ಲವ್ ಮೊಹಮ್ಮದ್ ಸೇರಿ ಧಾರ್ಮಿಕ ಘೋಷಣೆ ಕೂಗಿದ್ದ ಗುಂಪನ್ನು ಹೆಡೆಮುರಿ ಕಟ್ಟಿದ್ದಾರೆ. ಈಗಾಗಲೇ 11 ಜನರನ್ನು ವಶಕ್ಕೆ ಪಡೆದಿದ್ದಾರೆ.

    ಏನಿದು ಪ್ರಕರಣ?
    ಮಾಬುಸುಬಾನಿ ದರ್ಗಾದ ಉರುಸ್ ವೇಳೆ ‘ಐ ಲವ್ ಮುಹಮ್ಮದ್’ ಘೋಷಣೆ ಕೂಗಿದ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದೆ. ಪ್ರಶ್ನೆ ಮಾಡಿದ ಸ್ಥಳೀಯ ಹಿಂದೂ ನಿವಾಸಿಗಳ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿ ವರ್ಷ ಶನಿವಾರ ಕೂಟ, ಜಾಲ್ಗಾರ ಗಲ್ಲಿ ಮಾರ್ಗದ ಮೂಲಕ ದರ್ಗಾಗೆ ಮೆರವಣಿಗೆ ಹೋಗುತ್ತಿತ್ತು. ಈ ವರ್ಷ ಅನುಮತಿ ಇಲ್ಲದೆಯೂ ಸಹ ಖಡಕ್ ಗಲ್ಲಿಗೆ ಮೆರವಣಿಗೆ ಎಂಟ್ರಿಯಾಗಿದೆ ಎನ್ನಲಾಗಿದೆ. ಮೆರವಣಿಗೆ ವೇಳೆ `ಐ ಲವ್ ಮುಹಮ್ಮದ್’ ಎಂಬ ಘೋಷಣೆ ಕೂಗಿದ್ದಲ್ಲದೇ ಯಾವಾಗಲೂ ಬಾರದ ಮೆರವಣಿಗೆ ಈಗ ಯಾಕೆ ಬಂದಿದೆ? ತಮ್ಮ ಏರಿಯಾಗೆ ಬಂದು ಘೋಷಣೆ ಕೂಗಿದ್ದು ಯಾಕೆ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ ನಡೆದಿದೆ. ಬಳಿಕ ತಲ್ವಾರ್ ಕೂಡ ಪ್ರದರ್ಶನ ಮಾಡಿ ಗೂಂಡಾವರ್ತನೆ ತೋರಲಾಗಿದೆ.

    ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೆರವಣಿಗೆಯನ್ನು ಸ್ಥಳದಿಂದ ಕಳುಹಿಸಿದ್ದಾರೆ. ಏಕಾಏಕಿ ಮೆರವಣಿಗೆ ಬಂದವರು ಮತ್ತು ಕಲ್ಲು ತೂರಿದವರ ವಿರುದ್ಧ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮನಿ, ಇಬ್ಬರು ಡಿಸಿಪಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ:ಅಮೆರಿಕ ಧ್ವಜ ಸುಟ್ಟರೆ ತಕ್ಷಣ ಬಂಧನ, 1 ವರ್ಷ ಜೈಲು ಶಿಕ್ಷೆ: ಡೊನಾಲ್ಡ್‌ ಟ್ರಂಪ್‌ ಆದೇಶ

  • Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

    Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

    ಬೆಳಗಾವಿ: ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ (I Love Muhammad) ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮುಸ್ಲಿಂ ಯುವಕರು ಕಲ್ಲು ತೂರಾಟ (Stone Pelting) ನಡೆಸಿದ ಘಟನೆ ಬೆಳಗಾವಿ (Belagavi) ನಗರದ ಖಡಕ್ ಗಲ್ಲಿಯಲ್ಲಿ (Khadak Galli) ನಡೆದಿದೆ.

    ಮಾಬುಸುಬಾನಿ ದರ್ಗಾದ ಉರುಸ್ ವೇಳೆ ‘ಐ ಲವ್ ಮುಹಮ್ಮದ್’ ಘೋಷಣೆ ಕೂಗಿದ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದೆ. ಪ್ರಶ್ನೆ ಮಾಡಿದ ಸ್ಥಳೀಯ ಹಿಂದೂ ನಿವಾಸಿಗಳ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿ ವರ್ಷ ಶನಿವಾರ ಕೂಟ, ಜಾಲ್ಗಾರ ಗಲ್ಲಿ ಮಾರ್ಗದ ಮೂಲಕ ದರ್ಗಾಗೆ ಮೆರವಣಿಗೆ ಹೋಗುತ್ತಿತ್ತು. ಈ ವರ್ಷ ಅನುಮತಿ ಇಲ್ಲದೆಯೂ ಸಹ ಖಡಕ್ ಗಲ್ಲಿಗೆ ಮೆರವಣಿಗೆ ಎಂಟ್ರಿಯಾಗಿದೆ ಎನ್ನಲಾಗಿದೆ. ಮೆರವಣಿಗೆ ವೇಳೆ ‘ ಐ ಲವ್ ಮುಹಮ್ಮದ್’ ಎಂಬ ಘೋಷಣೆ ಕೂಗಿದ್ದಲ್ಲದೇ ಯಾವಾಗಲೂ ಬಾರದ ಮೆರವಣಿಗೆ ಈಗ ಯಾಕೆ ಬಂದಿದೆ? ತಮ್ಮ ಏರಿಯಾಗೆ ಬಂದು ಘೋಷಣೆ ಕೂಗಿದ್ದು ಯಾಕೆ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ ನಡೆದಿದೆ. ಬಳಿಕ ತಲ್ವಾರ್ ಕೂಡ ಪ್ರದರ್ಶನ ಮಾಡಿ ಗೂಂಡಾವರ್ತನೆ ತೋರಲಾಗಿದೆ. ಇದನ್ನೂ ಓದಿ: ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ಒಪ್ಪಿಗೆ

    ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೆರವಣಿಗೆಯನ್ನು ಸ್ಥಳದಿಂದ ಕಳುಹಿಸಿದ್ದಾರೆ. ಏಕಾಏಕಿ ಮೆರವಣಿಗೆ ಬಂದವರು ಮತ್ತು ಕಲ್ಲು ತೂರಿದವರ ವಿರುದ್ಧ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ನಾರಾಯಣ ಭರಮನಿ, ಇಬ್ಬರು ಡಿಸಿಪಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅ.9ರಂದು ಹಾಸನಾಂಬ ದೇಗುಲ ಓಪನ್ – ಭಕ್ತರ ದರ್ಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

    ಇನ್ನು ಪ್ರಕರಣ ಸಂಬಂಧ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಭೇಟಿ ನೀಡಿ ಸ್ಥಳೀಯರು, ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಡಕ್ ಗಲ್ಲಿಯಲ್ಲಿ ಎರಡು ಕೋಮಿನ ಜನರ ನಡುವೆ ಘರ್ಷಣೆ ನಡೆದಿದೆ. ಒಂದು ಧಾರ್ಮಿಕ ಕಾರ್ಯಕ್ರಮ ಇತ್ತು. ಒಂದು ರೂಟ್ ಫಿಕ್ಸ್ ಇದೆ, ಅದನ್ನ ಬಿಟ್ಟು ಬೇರೆ ರೂಟ್‌ನಲ್ಲಿ ಬಂದಿದ್ದಾರೆ. ಇದನ್ನ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಘರ್ಷಣೆ ಆಗಿದೆ. ಸ್ಥಳೀಯರು ಕಲ್ಲು ತೂರಾಟ ಆಗಿದೆ ಅಂತಾ ಕೇಸ್ ಕೊಟ್ಟಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಯಾರಿಗೂ ಗಾಯ ಆಗಿಲ್ಲ, ಎರಡು ಕೋಮಿನ ಹಿರಿಯರು ಕೂಡಲೇ ಸರಿಪಡೆಸಿದ್ದಾರೆ. ಓರಿಜನಲ್ ರೂಟ್ ಬಿಟ್ಟು ಬಂದು ತಪ್ಪಾಗಿದೆ. ‘ಐ ಲವ್ ಮುಹಮ್ಮದ್’ ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿಂತೆ ಮಹಾನಗರ ಪಾಲಿಕೆ ಅವರಿಗೆ ಹೇಳುತ್ತೇವೆ. ಅನುಮತಿ ಪಡೆದು ಬ್ಯಾನರ್ ಹಾಕಲು ಸೂಚನೆ ನೀಡುತ್ತೇವೆ ಎಂದು ತಿಳಿಸಿದರು. ಘಟನೆ ಸಂಬಂಧ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಲಬುರಗಿಗೂ ಕಾಲಿಟ್ಟ ಐ ಲವ್ ಮೊಹಮ್ಮದ್ ಬ್ಯಾನರ್ ವಿವಾದ: ಹಿಂದೂ ಸಂಘಟನೆಗಳಿಂದ ಆಕ್ರೋಶ

  • ನವೆಂಬರ್-ಡಿಸೆಂಬರ್ ಒಳಗೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್.ಅಶೋಕ್ ಭವಿಷ್ಯ

    ನವೆಂಬರ್-ಡಿಸೆಂಬರ್ ಒಳಗೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್.ಅಶೋಕ್ ಭವಿಷ್ಯ

    ಬೆಳಗಾವಿ: ನವೆಂಬರ್-ಡಿಸೆಂಬರ್ ಒಳಗೆ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಭವಿಷ್ಯ ನುಡಿದಿದ್ದಾರೆ.

    ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಬರ್, ಡಿಸೆಂಬರ್ ತಿಂಗಳಲ್ಲಿ ಕಾಂತ್ರಿ ಅಂತ ಹೇಳಿ ಒಬ್ಬರು ಸಚಿವರು ಈಗ ಮನೆಗೆ ಹೋಗಿದ್ದಾರೆ‌. ಒಪ್ಪಂದ ಆಗಿರೋದು ನಿಜ. ಈಗ ಜಗಳ ಆರಂಭವಾಗಿದೆ‌ ಎಂದು ಲೇವಡಿ ಮಾಡಿದ್ದಾರೆ.

    ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಡಿಕೆಶಿ ಹಠ ಬಿಡ್ತಿಲ್ಲ. ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದ್ರೆ ನಾವೇನೂ ಸರ್ಕಾರ ಮಾಡಲ್ಲ. ನಾವು ಚುನಾವಣೆಗೆ ಹೋಗಲು ಸಿದ್ಧರಿದ್ದೇವೆ‌ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ

    ಕಾಂಗ್ರೆಸ್ ಶಾಸಕರೇ ಅನುದಾನ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಹಳ್ಳ ಇಲ್ಲದೇ ರಸ್ತೆ ತೋರಿಸಿದ್ರೆ ಬಹುಮಾನ ಕೊಡಬಹುದು ಎಂದು ಸಿದ್ದರಾಮಯ್ಯ ಸರ್ಕಾರದ ವಿದುದ್ಧ ವ್ಯಂಗ್ಯವಾಡಿದ್ದಾರೆ.

    ಮಳೆ ಹಾನಿ ಮತ್ತು ಬೆಳೆ ಹಾನಿ ವೀಕ್ಷಣೆಗೆ ಬಂದ ಬಿಜೆಪಿ ನಿಯೋಗ ಅತಿವೃಷ್ಟಿಯಿಂದ ಹಾಳಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವ ಕೆಲಸ ಮಾಡಿತು. ಬೆಳಗಾವಿಯಲ್ಲಿ ಬಿಜೆಪಿ ನಾಯಕರಿಂದ ಅತಿವೃಷ್ಟಿ ಪ್ರದೇಶ ವೀಕ್ಷಣೆ ಮಾಡಲಾಯ್ತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಎಂಎಲ್ಸಿಗಳಾದ ಸಿಟಿ ರವಿ, ಎನ್ ರವಿಕುಮಾರ್, ಸಂಸದ ರಮೇಶ್ ಜಿಗಜಿಣಗಿ ನೇತೃತ್ವದ ತಂಡದಿಂದ ಪರಿಶೀಲನೆ ಮಾಡಲಾಯ್ತು.

    ಈರಣ್ಣಗೌಡ ಮೀಸಿಪಾಟೀಲ್ ಎಂಬವರ ಜಮೀನಿಗೆ ಆಗಮಿಸಿದ ನಿಯೋಗ ಗದ್ದೆಯಲ್ಲಿ ಹಾಳಾದ ಗಜ್ಜರಿ ಬೆಳೆ ಹಾನಿ ಕುರಿತು ರೈತರಿಂದ ಮಾಹಿತಿಯನ್ನು ಪಡೆಯಿತು. ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ನಾಯಕರಿಗೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ‌ ಸಾಥ್ ನೀಡಿದರು. ರೈತರ ಜಮೀನಿಗೆ ಭೇಟಿ ನೀಡಿದರೂ ಸಹ ಪರಿಸ್ಥಿತಿ ಅವಲೋಕಿಸದೆ ರಮೇಶ್ ಜಾರಕಿಹೊಳಿ‌ ತೆರಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಆಧುನಿಕ ರಾವಣ, ಶೀಘ್ರವೇ ಅವರ ಲಂಕಾದಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ: ಕಾಂಗ್ರೆಸ್‌ ನಾಯಕ

  • ಪ್ರಮುಖ ವೃತ್ತಗಳಿಗೆ ಸಿಗ್ನಲ್‌ ಅಳವಡಿಸೋದು ಯಾವಾಗ? – ಚಿಕ್ಕೋಡಿಯಲ್ಲಿ ಟ್ರಾಫಿಕ್ ಕಾಟ, ಜನರ ಪರದಾಟ

    ಪ್ರಮುಖ ವೃತ್ತಗಳಿಗೆ ಸಿಗ್ನಲ್‌ ಅಳವಡಿಸೋದು ಯಾವಾಗ? – ಚಿಕ್ಕೋಡಿಯಲ್ಲಿ ಟ್ರಾಫಿಕ್ ಕಾಟ, ಜನರ ಪರದಾಟ

    ಬೆಳಗಾವಿ: ಹೊಸ ಜಿಲ್ಲೆ ಘೋಷಣೆ ತವಕದಲ್ಲಿರುವ ಚಿಕ್ಕೋಡಿಯ (Chkkodi) ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ (Traffic Signal) ಅಳವಡಿಸದೇ ಇರುವುದು ಅವಘಡಗಳಿಗೆ (Accident) ಕಾರಣವಾಗುತ್ತಿದೆ. ಅಡ್ಡಾದಿಡ್ಡಿಯಾಗಿ ಓಡಾಡುವುದರಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ.

    ಚಿಕ್ಕೋಡಿ ಪಟ್ಟಣದಲ್ಲಿ ಅಂದಾಜು 50 ಸಾವಿರ ಜನಸಂಖ್ಯೆ ಇದೆ. ಬಹುತೇಕ ಎಲ್ಲ ಇಲಾಖಾ ಕಚೇರಿಗಳಿವೆ. ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಶಾಲಾ-ಕಾಲೇಜುಗಳಿರುವುದರಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಾರೆ. ಆದರೆ, ಇಲ್ಲಿನ ಸಂಚಾರ ದಟ್ಟಣೆ, ರಸ್ತೆ ನಿಯಮ ಮಿರಿ ಓಡಾಡುವ ವಾಹನಗಳಿಂದ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟುವುದೇ ಸವಾಲಾಗಿದೆ.

    ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಪಘಾತದ ಅಪಾಯ ಹೆಚ್ಚಾಗಿದೆ. ಗೋಟೂರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ, ನಿಪ್ಪಾಣಿ-ಮಹಾಲಿಂಗಪುರ ರಾಜ್ಯ ಹೆದ್ದಾರಿ ಕೂಡುವ ವೃತ್ತ ಇದಾಗಿದ್ದು, ಸಂಚಾರ ದಟಣೆ ಮಿತಿಮೀರುತ್ತಿದೆ. ಈ ವೃತ್ತದ ಬಳಿ ಪ್ರಮುಖ ಕಚೇರಿಗಳು, ಆಸ್ಪತ್ರೆ, ಅಂಚೆ ಕಚೇರಿ ಇರುವುದರಿಂದ ಜನರ ಓಡಾಟವೂ ಹೆಚ್ಚಾಗಿರುತ್ತದೆ.ಟ್ರಾಫಿಕ್ ಸಿಗ್ನಲ್ ಇಲ್ಲದ್ದರಿಂದ ನಿತ್ಯವೂ ಇಲ್ಲಿ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ.  ಇದನ್ನೂ ಓದಿ:  ಇದನ್ನೂ ಓದಿ: ಎನ್‌ಕೌಂಟರ್ ಭೀತಿ ಏಕಕಾಲಕ್ಕೆ 103 ನಕ್ಸಲರ ಶರಣಾಗತಿ

    ಬಸವೇಶ್ವರ ವೃತ್ತ ಮಾತ್ರವಲ್ಲದೆ ಇಂದಿರಾ ನಗರ ವೃತ್ತ, ಬಸ್ ನಿಲ್ದಾಣ ವೃತ್ತ, ಅಂಕಲಿಕೂಟ್, ಶಿಂಧಿಕೂಟ್ ವೃತ್ತಗಳಲ್ಲಿ ಸಂಚಾರ ದೀಪಗಳನ್ನು ಅಳವಡಿಸದ ಕಾರಣ ಸಂಚಾರ ನಿಮಯ ಮಿರಿ ವಾಹನಗಳು ಓಡಾಡುತ್ತಿದ್ದು, ಪಾದಚಾರಿಗಳಿಗೆ ಸುರಕ್ಷತೆ ಇಲ್ಲದಂತಾಗಿದೆ.

    ಸುಗಮ ಸಂಚಾರಕ್ಕೆ ನೆರವಾಗಲು ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಪಟ್ಟಣದಲ್ಲಿ 2023ರಲ್ಲಿ ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆ ಆರಂಭಿಸಲಾಗಿದೆ. 31 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟಾದರೂ ಸಂಚಾರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ ಹಲವು ಅಪಘಾತಗಳು ಘಟಿಸಿದ್ದು, ಸಾಕಷ್ಟು ಸಾವು-ನೋವು ಸಂಭವಿಸಿವೆ. 2023ರಲ್ಲಿ 75, 2024 ರಲ್ಲಿ 76, 2025 ಸೆ.14ರ ವರೆಗೆ 49 ಅಪಘಾತಗಳು ನಡೆದಿದ್ದು, 2023 ರಲ್ಲಿ 34, 2024ರಲ್ಲಿ 20 ,2025 ರಲ್ಲಿ 14 ಜನ ಮೃತಪಟ್ಟಿದ್ದಾರೆ. ಒಟ್ಟಾರೆ 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

  • ಸತೀಶ್‌ ಜಾರಕಿಹೊಳಿಗೆ ಮುಖಭಂಗ – 15ಕ್ಕೆ 15 ಕ್ಷೇತ್ರ ಗೆದ್ದ ಕತ್ತಿ ಬಣ

    ಸತೀಶ್‌ ಜಾರಕಿಹೊಳಿಗೆ ಮುಖಭಂಗ – 15ಕ್ಕೆ 15 ಕ್ಷೇತ್ರ ಗೆದ್ದ ಕತ್ತಿ ಬಣ

    ಬೆಳಗಾವಿ: ಹುಕ್ಕೇರಿ (Hukeeri)  ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ್ ಕತ್ತಿ (Ramesh Katti) ಬಣ ಇತಿಹಾಸ ನಿರ್ಮಿಸಿದೆ. ಒಟ್ಟು 15 ಜನ ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ 15ಕ್ಕೆ 15 ಕ್ಷೇತ್ರಗಳನ್ನ  ರಮೇಶ್ ಕತ್ತಿ ಬಣ ಗೆದ್ದು ಬೀಗಿದೆ.

    ಕಳೆದ ಒಂದು ತಿಂಗಳಿನಿಂದ ಹುಕ್ಕೇರಿಯಲ್ಲೇಬಿಟ್ಟಿದ್ದ ಸತೀಶ್ ಜಾರಕಿಹೊಳಿ (Satish Jarkiholi) ಕುಟುಂಬಕ್ಕೆ ಭಾರಿ ಮುಖಭಂಗವಾಗಿದೆ. ಹುಕ್ಕೇರಿ ಪಟ್ಟಣದ ಬಾಪೂಜಿ ಕಾಲೇಜು ಬಳಿ ಕತ್ತಿ ಬೆಂಬಲಿಗರು ಸತೀಶ್ ಜಾರಕಿಹೊಳಿ ಬೆಂಬಗಲಿಗರು ಪ್ರಯಾಣಿಸುತ್ತಿದ್ದ ಕಾರಿಗೆ ಕಲ್ಲು ಹೊಡೆದಿದ್ದಾರೆ ಎಂದ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:  ಮತ್ತೆ ಹೊಸ ನಾಟಕ- ಕಪ್‌ ನೀಡಲು ಹೊಸ ಷರತ್ತು ಮುಂದಿಟ್ಟ ನಖ್ವಿ

     

    ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ನೇತೃತ್ವದ ಪುನಶ್ಚೇತನ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸಿದೆ. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶಾಸಕ ಬಾಬಾ ಸಾಹೇಬ್ ಪಾಟೀಲ್, ವಿಠ್ಠಲ ಹಲಗೇಕರ್ ನೇತೃತ್ವದ ಪ್ಯಾನೆಲ್‌ನಿಂದ ಸ್ಫರ್ಧಿಸಿದ್ದ 12ಕ್ಕೂ ಹೆಚ್ಚು ಸದಸ್ಯರು ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಮದ್ದೂರು ಕಲ್ಲು ತೂರಾಟಕ್ಕೆ ಟ್ವಿಸ್ಟ್ ಟಾರ್ಗೆಟ್ ಮಾಡಿದ್ದೇ ಒಂದು, ಕಲ್ಲು ತೂರಿದ್ದೇ ಮತ್ತೊಂದು ಗಣೇಶನ ಮೇಲೆ

    ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾರ್ಖಾನೆಯ ಎದುರು ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

  • ಬಾಲಕಿಯ ರೇಪ್‌ ಮಾಡಿ ಕೊಲೆ – ಕಾಮುಕನಿಗೆ ಗಲ್ಲು ಶಿಕ್ಷೆ

    ಬಾಲಕಿಯ ರೇಪ್‌ ಮಾಡಿ ಕೊಲೆ – ಕಾಮುಕನಿಗೆ ಗಲ್ಲು ಶಿಕ್ಷೆ

    ಬೆಳಗಾವಿ: 8 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ (Rape and Murder) ಮಾಡಿದ್ದ ಆರೋಪಿಗೆ ಗಲ್ಲು ಶಿಕ್ಷೆ (Death Penalty)ಪ್ರಕಟ ಮಾಡಿ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯ (POCSO Court) ಆದೇಶಿಸಿದೆ.

    ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ರಾವಸಾಹೇಬ ಮಿರ್ಜಿಗೆ ಗಲ್ಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. 2019 ಸೆಪ್ಟೆಂಬರ್ 10 ರಂದು ಬೆಳಗಾವಿ ಜಿಲ್ಲೆಯ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಗೆ ಚಾಕಲೇಟ್ ಆಮಿಷ ತೋರಿಸಿ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆಗೈದು ಬಾವಿಗೆ ಎಸೆದಿದ್ದ. ಇದನ್ನೂ ಓದಿ:  ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

    ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿ ನ್ಯಾಯಾಧೀಶರಾದ ಸಿ.ಎಮ್ ಪುಷ್ಪಲತಾ ಅವರು ಶಿಕ್ಷೆ ಪ್ರಕಟಿಸಿದ್ದಾರೆ.