ಎರಡು ತಿಂಗಳ ನಂತರ ಬೆಳಗಾವಿಗೆ ಬಂದು ಮಾಸಾಬಿ ಜೊತೆಗೆ ಬಸವರಾಜ್ ವಾಸ ಮಾಡತೊಡಗಿದ್ದ. ಬುಧವಾರ ರಾತ್ರಿ ವಾಣಿಶ್ರೀ ಕೈಯಲ್ಲಿ ಜೋಡಿಗಳು ಸಿಕ್ಕಿಬಿದ್ದಿದ್ದಾರೆ.
ಮಾಸಾಬಿಯನ್ನು ಪ್ರಶ್ನೆ ಮಾಡಿದ್ದಕ್ಕೆ ವಾಣಿಶ್ರೀ ಮೇಲೆ ಹಲ್ಲೆಯಾಗಿದೆ. ಹಲ್ಲೆಯಾಗುತ್ತಿದ್ದಂತೆ ಪರಸ್ಪರ ಜುಟ್ಟು ಹಿಡಿದುಕೊಂಡು ವಾಣಿಶ್ರೀ ಮತ್ತು ಮಾಸಾಬಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ.
ಪತಿ ಬಸವರಾಜ್ ನಿಂದಲೂ ವಾಣಿಶ್ರೀಯ ಮೇಲೆ ಹಲ್ಲೆ ನಡೆದಿದೆ. ನಡು ರಸ್ತೆಯಲ್ಲಿ ಹೊಡೆದಾಡಿಕೊಳ್ಳುತ್ತಿರುವುದನ್ನು ನೋಡಿ ಸ್ಥಳೀಯರು ಮೂವರ ಜಗಳವನ್ನು ಬಿಡಿಸಿ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಹೊಡೆದಾಡುವ ವಿಡಿಯೋ ಈಗ ಹರಿದಾಡುತ್ತಿದೆ.
ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಇಬ್ಬರು ಬಿಜೆಪಿ ಸದಸ್ಯರು ಸದಸ್ಯತ್ವ ರದ್ದುಗೊಳಿಸಲಾಗಿದೆ.
ಬಿಜೆಪಿ ಶಾಸಕ ಅಭಯ ಪಾಟೀಲ್ ಆಪ್ತ ಸದಸ್ಯರ ಸದಸ್ಯತ್ವ ರದ್ದು ಮಾಡಲಾಗಿದೆ. ಸದಸ್ಯತ್ವ ರದ್ದು ಮಾಡಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ವಾರ್ಡ್ ನಂಬರ್ 41 ರ ಸದಸ್ಯ ಮಂಗೇಶ್ ಪವಾರ್, ವಾರ್ಡ್ ನಂಬರ್ 23ರ ಸದಸ್ಯ ಜಯಂತ್ ಜಾಧವ ಸದಸ್ಯತ್ವ ರದ್ದಾಗಿದೆ.
ಲೋಕೋಪಯೋಗಿ ಇಲಾಖೆಯ ತಿನಿಸುಕಟ್ಟೆಯಲ್ಲಿ ಪತ್ನಿಯರ ಹೆಸರಿನಲ್ಲಿ ಬಿಜೆಪಿ ಸದಸ್ಯರು ಮಳಿಗೆ ಪಡೆದಿದ್ದರು. ಪತ್ನಿ ನೀತಾ ಹೆಸರಿನಲ್ಲಿ ಮಂಗೇಶ್ ಪವಾರ, ಪತ್ನಿ ಸೋನಾಲಿ ಹೆಸರಿನಲ್ಲಿ ಜಯಂತ್ ಜಾಧವ ಮಳಿಗೆ ಪಡೆದಿದ್ದರು.
ತಮ್ಮ ಪ್ರಭಾವ ಬೀರಿ ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದಾರೆಂದು ಸುಜೀತ್ ಮುಳಗುಂದ ದೂರು ನೀಡಿದ್ದರು. ಈ ದೂರು ಆಧರಿಸಿ ಸುದೀರ್ಘ ವಿಚಾರಣೆ ನಡೆಸಿ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಪಡೆಸಲಾಗಿದೆ. ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.
ಬೆಳಗಾವಿ: ಗ್ರಾಮ ಪಂಚಾಯತ್‌ನಲ್ಲಿ ಭ್ರಷ್ಟಾಚಾರ (Corruption) ಆರೋಪ ಹಿನ್ನೆಲೆಯಲ್ಲಿ ಸದಸ್ಯರು ಪಂಚಾಯತ್ (Village Panchayat) ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂ. ಪಿಡಿಓ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ದ 19 ಸದಸ್ಯರು ಪಂಚಾಯತ್ ಸದಸ್ಯರು ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿ ಮಾಡದೇ ಬಿಲ್ ತೆಗೆದು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಚಾಕೊಲೇಟ್ ಆಸೆ ತೋರಿಸಿ 11ರ ಬಾಲಕಿ ಮೇಲೆ ಅತ್ಯಾಚಾರ
ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾದರು. ಒಟ್ಟು 30 ಸದಸ್ಯ ಬಲ ಹೊಂದಿರುವ ಪಂಚಾಯತಿಗೆ ಕೆಲ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಮುಂದಾದ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಆದರೆ ಗ್ರಾಮದ 19 ಸದಸ್ಯರು ಮಾತ್ರ ಸಭೆಗೆ ಆಗಮಿಸಿದ್ದರು. ಅವಿಶ್ವಾಸಕ್ಕೆ ಕನಿಷ್ಠ 20 ಸದಸ್ಯರು ಬೇಕಾದ ಹಿನ್ನಲೆ ಓರ್ವ ಸದಸ್ಯ ಸಂಖ್ಯೆ ಕಡಿಮೆಯಾಗಿ ಅವಿಶ್ವಾಸ ನಿರ್ಣಯ ವಿಫಲವಾಯಿತು.
ಬೆಳಗಾವಿ: ಪ್ರಯಾಗ್‌ರಾಜ್ ಕಾಲ್ತುಳಿತದಲ್ಲಿ (Prayagraj Stampede) ಬೆಳಗಾವಿ ಮೂಲದ ನಾಲ್ವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ನಡೆಸದೇ ಡೆತ್ ಸರ್ಟಿಫಿಕೇಟ್ (Death Certificate) ನೀಡಿದ ಯುಪಿ ಸರ್ಕಾರ ಎನ್ನುವ ಪ್ರಶ್ನೆ ಮೂಡಿದೆ.
ಬೆಳಗಾವಿಯ ಮೃತ ನಾಲ್ವರ ಡೆತ್ ಸರ್ಟಿಫಿಕೇಟ್ ಲಭ್ಯವಾಗಿದೆ. ಬೆಳಗಾವಿಯ ಅರುಣ್ ಕೋಪರ್ಡೆ, ಮಹಾದೇವಿ, ಜ್ಯೋತಿ, ಮೇಘಾ ಮೃತಪಟ್ಟಿದ್ದರು.ಮೃತರ ಸಂಬಂಧಿಗಳ ವಾಟ್ಸಪ್ ಗೆ ಡೆತ್ ಸರ್ಟಿಫಿಕೇಟ್ ಬಂದಿದೆ.
ಸೆಂಟ್ರಲ್ ಹಾಸ್ಪಿಟಲ್ ಪ್ರಯಾಗ್‌ರಾಜ್ ಮಹಾಕುಂಭ ಹೆಸರಿನಲ್ಲಿ ಸರ್ಟಿಫಿಕೇಟ್ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸದೇ ಡೆತ್ ಸರ್ಟಿಫಿಕೇಟ್ ನೀಡಿತಾ ಯುಪಿ ಸರ್ಕಾರ ಎನ್ನುವ ಪ್ರಶ್ನೆ ಮೂಡಿದೆ.
ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. 4 ಜನರ ಮರಣೋತ್ತರ ಪರೀಕ್ಷೆ ನಡೆಸಿ ಬಳಿಮ ಶವ ಹಸ್ತಾಂತರವನ್ನ ಬೆಳಗಾವಿ ಜಿಲ್ಲಾಡಳಿತ ಮಾಡಿತ್ತು.
– ನಿದ್ದೆ ಮಂಪರಿನಲ್ಲಿದ್ದ ಅಧಿಕಾರಿಗಳಿಗೆ `ಲೋಕಾ’ ರೇಡ್ ಬಿಸಿ
ಬೆಂಗಳೂರು/ಬೆಳಗಾವಿ/ಚಿತ್ರದುರ್ಗ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಹಿನ್ನೆಲೆ ಶುಕ್ರವಾರ (ಇಂದು) ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಮನೆ ಬಾಗಿಲು ಬಡಿದಿದ್ದರು. ಇನ್ನೂ ನಿದ್ದೆ ಮಂಪರಿನಲ್ಲಿದ್ದ ಭ್ರಷ್ಟ ಕುಳಗಳಿಗೆ ಶಾಕ್ ಕೊಟ್ಟಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ 7 ಕಡೆಗಳಲ್ಲಿ ಲೋಕಾಯುಕ್ತ ದಾಳಿ (Lokayukta Raid) ನಡೆಸಲಾಯ್ತು. ಬೆಂಗಳೂರಿನಲ್ಲಿ (Bengaluru) ಎರಡು ಕಡೆ, ಬೆಳಗಾವಿಯಲ್ಲಿ (Belagavi) ಎರಡು ಕಡೆ, ಚಿತ್ರದುರ್ಗ, ರಾಯಚೂರು ಮತ್ತು ಬಾಗಕೋಟೆಯಲ್ಲಿ ತಲಾ ಒಂದು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದೆ. ಒಟ್ಟು 7 ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಎಲ್ಲೆಲ್ಲಿ ದಾಳಿ? ಮಾಧವರಾವ್, ಬಿಬಿಎಂಪಿ ಎಇಇ ಸ್ಥಳ – ಬೆಂಗಳೂರು
ಬೆಂಗಳೂರಿನಲ್ಲಿ ಬಿಬಿಎಂಪಿ ಹೆಬ್ಬಾಳ ವ್ಯಾಪ್ತಿಯ ಇಂಜಿನಿಯರಿಂಗ್ ವಿಭಾಗದ ಎಇಇ ಮಾಧವ ರಾವ್‌ಗೆ ಲೋಕಾ ಬಿಸಿ ತಟ್ಟಿದೆ. ವಿದ್ಯಾರಣ್ಯಪುರಂನ ಎಂಎಸ್ ಪಾಳ್ಯದಲ್ಲಿರುವ ಮಾಧವ್ ರಾವ್‌ರ ಐಷಾರಾಮಿ ಮನೆ ನಿವಾಸದ ಮೇಲೆ ದಾಳಿ ನಡೆದಿದ್ದು.. ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇನ್ನು ಮಾಧವ ರಾವ್ ನಿವಾಸದ ಮೇಲಿನ ದಾಳಿ ಬಗ್ಗೆ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಕೆಲವೊಂದು ಮಾಹಿತಿ ತಿಳಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮಾಧವ ರಾವ್ ಮೇಲೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಇತ್ತು. ಅಲ್ಲದೇ ಬೀದರ್ ವರ್ಕ್ ಆರ್ಡರ್ ಸಂಬಂಧ ಕೆಲವೊಂದು ದಾಖಲೆಗಳು ಸಿಕ್ಕಿವೆ. ಸಂಜೆ ವೇಳೆ ಎಲ್ಲ ದಾಖಲೆಗಳ ಖಚಿತ ಮಾಹಿತಿ ಸಿಗಲಿದೆ ಎಂದ್ರು.
ರಮೇಶ್, ಜಿ.ಪಂ ಉಪ ಕಾರ್ಯದರ್ಶಿ ಸ್ಥಳ – ಬೆಂಗಳೂರು
ಇನ್ನೂ ಬೆಂಗಳೂರಿನಲ್ಲಿ ಮತ್ತೊಬ್ಬ ಭ್ರಷ್ಟ ಅಧಿಕಾರಿ ಮೇಲೆ ಲೋಕಾ ದಾಳಿ ನಡೆದಿದೆ. ನಾಗರಬಾವಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಅಧಿಕಾರಿ ರಮೇಶ್ ನಿವಾಸದ ಮೇಲಿನ ದಾಳಿ ಬಗ್ಗೆ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಮಾಹಿತಿ ಪಡೆದುಕೊಂಡ್ರು. ಬಳಿಕ ಪ್ರತಿಕ್ರಿಯಿಸಿದ ಎಸ್‌ಪಿ ವಂಶಿಕೃಷ್ಣ, ಟಿಕೆ ರಮೇಶ್‌ಗೆ ಸಂಬಂಧಿಸಿದ 4 ಕಡೆ ದಾಳಿಯಾಗಿದೆ. ಹುಲಿಯೂರು ದುರ್ಗ ತೋಟದ ಮನೆ, ಕಚೇರಿ, ಮನೆ, ಸ್ಕೂಲ್‌ನಲ್ಲೂ ಪರಿಶೀಲನೆ ಮಾಡಲಾಗ್ತಿದೆ. ಆದಾಯಕ್ಕಿಂತ ಜಾಸ್ತಿ ಹಣ ಸಂಪಾದನೆ ಸಂಬಂಧ ಎಫ್‌ಐಆರ್ ದಾಖಲಿಸಿ ಶೋಧನೆ ಮಾಡಲಾಗುತ್ತಿದೆ. ಪ್ರತಿಯೊಂದು ಜಾಗದಲ್ಲೂ ಒಂದೊಂದು ಟೀಂ ಪರಿಶೀಲನೆ ಮಾಡ್ತಿದ್ದು, ಒಟ್ಟು 9 ತಂಡಗಳು ಬೇರೆ ಬೇರೆ ಸ್ಥಳದಲ್ಲಿ ಶೋಧ ನಡೆಸುತ್ತಿದೆ ಎಂದ್ರು.
ಸಚಿನ್ ಮಂಡೇದ್, ಬೆಳಗಾವಿ ಪ್ರಭಾರಿ ಸಬ್ ರಿಜಿಸ್ಟಾçರ್ ಸ್ಥಳ – ಬೆಳಗಾವಿ
ಇನ್ನೂ ಬೆಳಗಾವಿಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ಬೆಳಗಾವಿ ಪ್ರಭಾರಿ ಸಬ್ ರಿಜಿಸ್ಟ್ರಾರ್ ಸಚಿನ್ ಮಂಡೇದ್‌ಗೆ ಸೇರಿದ ಬೆಳಗಾವಿ ನಗರದ ಅನಗೋಳದಲ್ಲಿರುವ ನಿವಾಸ, ಕಚೇರಿ ಸೇರಿ ಒಟ್ಟು ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಸಂಜಯ್, ಹಾರೂಗೇರಿ ಪಶುವೈದ್ಯ ಸ್ಥಳ – ಬೆಳಗಾವಿ
ಮತ್ತೊಂದ್ಕಡೆ ಹಾರೂಗೇರಿ ಪಶುವೈದ್ಯ ಸಂಜಯ್‌ಗೆ ಸೇರಿದ ಮನೆ ಮೇಲೂ ದಾಳಿ ನಡೆಸಲಾಗಿದೆ. ಅದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು.. ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಶಶಿಧರ್, ಬಿಸಿಎಂ ವಿಸ್ತರಣಾಧಿಕಾರಿ ಸ್ಥಳ – ಚಿತ್ರದುರ್ಗ
ಇನ್ನು ಚಿತ್ರದುರ್ಗದ ಬಿಸಿಎಂ ಇಲಾಖೆ ವ್ಯವಸ್ಥಾಪಕ ಶಶಿಧರ್ ಮನೆ ಮೇಲೆ ಲೋಕಾಯಕ್ತ ದಿಢೀರ್ ದಾಳಿ ನಡೆಸಿದ್ದಾರೆ. ಅಪಾರ ಆಸ್ತಿ ಗಳಿಕೆ ಮತ್ತು ಲಂಚದ ಆರೋಪ ಕೇಳಿ ಬಂದ ಹಿನ್ನೆಲೆ ಹೊಳಲ್ಕೆರೆ ತಾಲ್ಲೂಕಿನ ಕಡ್ಲೆಪ್ಪನಹಟ್ಟಿ ಗ್ರಾಮದಲ್ಲಿನ ಶಶಿಧರ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಹಾಗು ಡಿವೈಎಸ್‌ಪಿ ಮೃತ್ಯುಂಜಯ ನೇತೃತ್ವದಲ್ಲಿ ಏಕಕಾಲದಲ್ಲಿ ನಾಲ್ಕು ಕಡೆ ರೇಡ್ ಮಾಡಲಾಗಿದೆ. ಈ ವೇಳೆ ಕಡ್ಲೆಪ್ಪನಹಟ್ಟಿ ಗ್ರಾಮದಲ್ಲಿರುವ ತೋಟದ ಮನೆ, ಹೊಸದುರ್ಗ ಪಟ್ಟಣದಲ್ಲಿನ ಸಹೋದರನಿಗೆ ಸೇರಿದ ಎಸ್ ಆರ್ ಎಂಟರ್‌ಪ್ರೈಸಸ್ ಮಳಿಗೆ, ಹೊಸದುರ್ಗದ ವಿದ್ಯಾನಗರದಲ್ಲಿರುವ ಬಾಡಿಗೆ ಮನೆ ಹಾಗು ಶಶಿಧರ್ ಕರ್ತವ್ಯ ನಿರ್ವಹಿಸುವ ಬಿಸಿಎಂ ಕಚೇರಿಯ ಕೊಠಡಿ ಮೇಲೂ ಲೋಕಾಯಕ್ತರು ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಹಿರೇಮಠ್, ಹೂಲಗೇರಿ ಗ್ರಾ.ಪಂ ಪಿಡಿಓ ಸ್ಥಳ – ಬಾಗಲಕೋಟೆ
ಅಕ್ರಮ ಆಸ್ತಿ ಗಳಿಕೆ ದೂರು ಹಿನ್ನೆಲೆ ಹೂಲಗೇರಿ ಗ್ರಾಪಂ ಪಿಡಿಓ ಹಿರೇಮಠ್‌ಗೆ ಲೋಕಾ ಬಿಸಿ ಮುಟ್ಟಿಸಿದೆ. ಬಾಗಲಕೋಟೆಯ ವಿದ್ಯಾಗಿರಿಯ 22ನೇ ಕ್ರಾಸ್‌ನಲ್ಲಿರುವ ಮನೆ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿದ್ದು.. ದಾಖಲೆಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ.
ನರಸಿಂಗ್‌ರಾವ್ ಗುಜ್ಜರ್, ಜಿ.ಪಂ ಲೆಕ್ಕಪತ್ರ ಸಹಾಯಕ ಅಧಿಕಾರಿ ಸ್ಥಳ – ರಾಯಚೂರು
ರಾಯಚೂರು ಜಿಲ್ಲಾ ಪಂಚಾಯ್ತಿ ಲೆಕ್ಕಪತ್ರ ಸಹಾಯಕ ಅಧಿಕಾರಿ ನರಸಿಂಗ್ ರಾವ್ ಗುಜ್ಜರ್ ಮನೆ ಹಾಗೂ ಜಿಲ್ಲಾ ಪಂಚಾಯ್ತಿ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ರಾಯಚೂರು ನಗರದ ದೇವರ ಕಾಲೋನಿಯಲ್ಲಿನ ಮನೆ ಮೇಲೆ ರಾಯಚೂರು ಹಾಗೂ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ರೇಡ್ ನಡೆದಿದ್ದು.. ದಾಖಲೆಗಳ ಪರಿಶೀಲನೆ ನಡೆದಿದೆ.
ಕಾಲ್ತುಳಿದಲ್ಲಿ ಮೃತಪಟ್ಟ ಬೆಳಗಾವಿಯ ಅರುಣ್ ಕೋಪರ್ಡೆ, ಮಹಾದೇವಿ ಬಾವನೂರ ಮೃತದೇಹಗಳನ್ನು ಇಂದು ದೆಹಲಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಜಿಲ್ಲಾಡಳಿತಕ್ಕೆ ಮೃತದೇಹಗಳನ್ನು ಹಸ್ತಾಂತರಿಸಿದ ನಂತರ ಅಂತಿಮ ನಮನ ಸಲ್ಲಿಸಲಾಯಿತು. ಸಂಸದ ಜಗದೀಶ್ ಶೆಟ್ಟರ್, ಶಾಸಕ ಅಭಯ್ ಪಾಟೀಲ್, ಆಸೀಫ್ ಸೇಠ್, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸಹ ಅಂತಿಮ ನಮನ ಸಲ್ಲಿಸಿದರು. ಅನೇಕ ಬಿಜೆಪಿ ಕಾರ್ಯಕರ್ತರು ಪಾರ್ಥೀವ ಶರೀರಕ್ಕೆ ಮಾಲಾರ್ಪಣೆ ಮಾಡಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
– ನೂಕುನುಗ್ಗಲಲ್ಲಿ ಜನ ನಮ್ಮನ್ನು ಬೀಳಿಸಿ ತುಳಿದು ಓಡಿದರು – ಕಾಪಾಡಿ.. ಕಾಪಾಡಿ ಅಂತ ಕೂಗಿಕೊಂಡರೂ ಯಾರೂ ಕೇಳಿಲಿಲ್ಲ
ಬೆಳಗಾವಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ದುರಂತ ಘಟನೆ ಬಗ್ಗೆ ಮೃತ ಅರುಣ್ ಕೋಪರ್ಡೆ ಅವರ ಪತ್ನಿ ಕಾಂಚನಾ ಅವರು ಮಾತನಾಡಿದ್ದಾರೆ. ನೂಕುನುಗ್ಗಲಲ್ಲಿ ಜನ ನಮ್ಮನ್ನು ಬೀಳಿಸಿ ತುಳಿದುಕೊಂಡು ಹೋದರು. ‘ಕಾಪಾಡಿ.. ಕಾಪಾಡಿ..’ ಅಂತ ಕೂಗಿಕೊಂಡರೂ ಯಾರೂ ಕೇಳಲಿಲ್ಲ ಎಂದು ದುರಂತ ನೆನೆದು ಕಣ್ಣೀರಿಟ್ಟಿದ್ದಾರೆ.
ಕಾಲ್ತುಳಿತದಿಂದ ಬಚಾವ್ ಆಗಿ ಬೆಳಗಾವಿಗೆ ಆಗಮಿಸಿದ ಮೃತ ಅರುಣ್ ಕೋಪರ್ಡೆ ಪತ್ನಿ ಕಾಂಚನಾ ಅವರು ‘ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ್ದಾರೆ.
ಜ.25 ಕ್ಕೆ ನಾವು ಹೋಗಿದ್ದೆವು. 28 ಕ್ಕೆ ಪ್ರಯಾಗ್‌ರಾಜ್ ತಲುಪಿದೆವು. ಪುಣ್ಯಸ್ನಾನಕ್ಕೆ ಹೋದಾಗ ಏಕಾಏಕಿ ಗದ್ದಲ ಪ್ರಾರಂಭವಾಯಿತು. ನಾನು ಮತ್ತು ನನ್ನ ಪತಿ ಕೈ ಕೈ ಹಿಡಿದುಕೊಂಡು ಹೋಗುತ್ತಿದ್ದೆವು. ನೂಕು ನುಗ್ಗಲಿನಲ್ಲಿ ಪತಿ ನನ್ನ ಕೈ ಬಿಟ್ಟರು. ನಾನೊಂದು ಕಡೆ ಅವರೊಂದು ಕಡೆಯಾದೆವು. ನೋಡ ನೋಡುತ್ತಿದ್ದಂತೆ ನೂಕು ನುಗ್ಗಲು ಜಾಸ್ತಿಯಾಗಿ ಅವರು ಕೆಳಗೆ ಬಿದ್ದರು.
ಸುಮಾರು ಐವತ್ತರಿಂದ ಅರವತ್ತು ಜನ ನಮ್ಮ ಮೇಲೆ ಬಿದ್ದರು. ನೂಕುನುಗ್ಗಲಲ್ಲಿ ಜನ ನಮ್ಮನ್ನು ಬೀಳಿಸಿ ತುಳಿದುಕೊಂಡು ಓಡಿದರು. ಕಾಪಾಡಿ.. ಕಾಪಾಡಿ ಅಂತ ಕೂಗಿಕೊಂಡರೂ ಯಾರೂ ಕೇಳಿಲಿಲ್ಲ. ಕೊನೆಗೆ ಎದ್ದು ನೋಡಿದಾಗ ಯಾರೋ ನನಗೆ ನೀರು ಕುಡಿಸಿದರು. ನನ್ನ ಪತಿ ಮಲಗಿದಂತೆಯೇ ಇದ್ದರು. ಅವರನ್ನು ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಯಿತು. ಆದರೆ, ಪತಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಕಾಂಚನಾ ದುಃಖಿಸಿದರು.
ಬೆಳಗಾವಿ: ಮಹಾ ಕುಂಭಮೇಳದಲ್ಲಿ (Maha KumbhMela) ಪಾಲ್ಗೊಂಡು ವಾಪಸ್ ಆಗುತ್ತಿದ್ದ ವೇಳೆ, ಬೆಳಗಾವಿಯ (Belagavi) ವ್ಯಕ್ತಿಯೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ.
ಮೃತರನ್ನು ಬೆಳಗಾವಿಯ ದೇಶಪಾಂಡೆ ಗಲ್ಲಿಯ ನಿವಾಸಿ ರವಿ ಜಟಾರ (61) ಎಂದು ಗುರುತಿಸಲಾಗಿದೆ. ಪ್ರಯಾಗ್‍ರಾಜ್‍ನಿಂದ ವಾಪಸ್ ಆಗುತ್ತಿದ್ದಾಗ ಅವರಿಗೆ ಮಾರ್ಗಮಧ್ಯೆಯೇ ಹೃದಯಾಘಾತವಾಗಿದೆ. ವಾಹನದಲ್ಲೇ ಅವರು ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಸಾವಿಗೀಡಾಗಿದ್ದರು. ಈಗ ಹೃದಯಾಘಾತದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಜಿಲ್ಲೆಯಿಂದ ಯಾತ್ರೆಗೆ ತೆರಳಿದ್ದವರಲ್ಲಿ ಐವರು ಸಾವಿಗೀಡಾದಂತಾಗಿದೆ.
ಬೆಳಗಾವಿ: ಪ್ರಯಾಗ್‍ರಾಜ್‍ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವಡಗಾವಿಯ ಮೇಘಾ ಹತ್ತರವಾಟ ಹಾಗೂ ಜ್ಯೋತಿ ಹತ್ತರವಾಟ ಅವರ ಮನೆಯ ಶ್ವಾನ ಆಹಾರ ತೊರೆದು ಬೇಸರದಲ್ಲಿ ಕುಳಿತಿದೆ.
ಪ್ರಯಾಗರಾಜ್‍ಗೆ ಹೋದಾಗಿಂದಲೂ ಶ್ವಾನ ಸನ್ನಿ ಸಪ್ಪೆಯಾಗಿ ಕುಳಿತಿದೆ. ಅವರು ಕುಂಭಮೇಳಕ್ಕೆ ತೆರಳಿದ ದಿನ ಸಹ ಶ್ವಾನ ಆಹಾರ ತ್ಯಜಿಸಿತ್ತು. ಈ ಮೂಲಕ ಶ್ವಾನ ದುರಂತದ ಮುನ್ಸೂಚನೆ ನೀಡಿತ್ತು ಎಂದು ಮೃತ ಮೇಘಾಳ ಸಹೋದರಿ ಮಾನಸಿ ದುಃಖ ಹೊರ ಹಾಕಿದ್ದಾರೆ.
ಮೇಘಾಳ ಹಠಕ್ಕಾಗಿ ಪ್ರಯಾಗರಾಜ್ ಕಳಿಸುವಂತಾಯಿತು. ಶ್ವಾನದ ಮುನ್ಸೂಚನೆ ಬಗ್ಗೆ ಇದ್ದರೂ ನಾವು ನಿರ್ಲಕ್ಷ್ಯ ಮಾಡಿದೆವು ಎಂದು ಮೇಘಾಳ ತಂದೆ ದೀಪಕ ಹತ್ತರವಾಟ ದುಃಖ ಹೊರಹಾಕಿದ್ದಾರೆ.
ಮೇಘಾ ಹಠ ಹಿಡಿದು ಪ್ರಯಾಗರಾಜ್‍ಗೆ ಹೋಗಿದ್ದಳು. ಅವಳೊಟ್ಟಿಗೆ ತಾಯಿಯನ್ನು ಕಳಿಸಿ ಇಬ್ಬರನ್ನ ಕಳೆದುಕೊಳ್ಳುವಂತಾಯಿತು ಎಂದು ಅವರ ಅಜ್ಜಿ ಕಣ್ಣೀರಿಟ್ಟಿದ್ದಾರೆ.
ಬೆಳಗಾವಿ: ಮಹಾ ಕುಂಭಮೇಳದ (Maha Kumbh Mela) ಮೌನಿ ಅಮಾವಾಸ್ಯೆ ಪ್ರಯುಕ್ತ ಜನಪ್ರವಾಹ ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ (Stampede) ಮೃತಪಟ್ಟ ನಾಲ್ವರ ಶವ ಇಂದು ಸಂಜೆ ವಿಮಾನದ ಮೂಲಕ ಬೆಳಗಾವಿಗೆ (Belagavi) ಬರಲಿದೆ.
ಪ್ರಯಾಗ್‌ರಾಜ್‌ನಿಂದ (Prayagraj) ಬುಧವಾರ ರಾತ್ರಿಯೇ ಅಂಬುಲೆನ್ಸ್ ಮೂಲಕ ಶವಗಳು ಹೊರಟಿದ್ದು ಬೆಳಗ್ಗೆ ದೆಹಲಿ ತಲುಪಲಿದೆ. ಮಧ್ಯಾಹ್ನ 3:30ಕ್ಕೆ ದೆಹಲಿಯಿಂದ (Delhi) ಹೊರಟ ವಿಮಾನ ಸಂಜೆ 5:30ಕ್ಕೆ ಬೆಳಗಾವಿಗೆ ಬರಲಿದೆ.
ಬೆಳಗಾವಿ ಡಿಸಿ ಮೊಹಮ್ಮದ್ ಅವರು ಶವ ಸುಗಮವಾಗಿ ನಗರಕ್ಕೆ ಬರಲು ಇಬ್ಬರು ವಿಶೇಷ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದಾರೆ.
ಕಾಲ್ತುಳಿತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅರುಣ್ ಪತ್ನಿಯೂ ಗಾಯಗೊಂಡಿದ್ದಾರೆ.
ಬೆಳಗ್ಗೆಯಿಂದ ಜ್ಯೋತಿ-ಮೇಘಾ ಫೋನ್ ರಿಸೀವ್ ಮಾಡದ ಕಾರಣ ಕುಟುಂಬಸ್ಥರು ಆತಂಕದಲ್ಲಿದ್ದರು. ಬುಧವಾರ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಸಾವಿನ ಸುದ್ದಿ ಬಂದೆರಗಿದೆ. ಈ ಬೆನ್ನಲ್ಲೇ ಶೆಟ್ಟಿಗಲ್ಲಿಯ ಅರುಣ್, ಶಿವಾಜಿನಗರ ಮಹಾದೇವಿ ಸಾವಿನ ಸುದ್ದಿಯೂ ಹೊರಬಿತ್ತು.
ಪ್ರಯಾಗ್‌ರಾಜ್ ದುರಂತದಲ್ಲಿ ಸಿಲುಕಿರಬಹುದಾದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅಧಿಕಾರಿಗಳ ತಂಡವನ್ನು ಕುಂಭಮೇಳಕ್ಕೆ ಕಳಿಸಿ ಸಹಾಯವಾಣಿ ಶುರುಮಾಡಿದೆ. 080-22340676ಗೆ ಕರೆ ಮಾಡಿ ನಾಪತ್ತೆಯಾದವರ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದಾಗಿದೆ.