Tag: belagavi

  • ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ – ಶಿವಸೇನೆ ಪುಂಡರಿಂದ ಚಾಲಕರಿಗೆ ಧಮ್ಕಿ

    ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ – ಶಿವಸೇನೆ ಪುಂಡರಿಂದ ಚಾಲಕರಿಗೆ ಧಮ್ಕಿ

    ಬೆಳಗಾವಿ: ಕನ್ನಡ ಮಾತಾಡು ಎಂದಿದಕ್ಕೆ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಇದೀಗ ಭಾಷಾ ವೈಷಮ್ಯಕ್ಕೆ ಕಾರಣವಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ (Maharashtra) ಸಂಚರಿಸುವ ಬಸ್‌ಗಳನ್ನು (Karnatak Bus) ಅಲ್ಲಿನ ಮರಾಠಿ ಪುಂಡರು ಟಾರ್ಗೆಟ್ ಮಾಡುತ್ತಿದ್ದು ಉದ್ಧವ್ ಠಾಕ್ರೆ ಬಣದ ಶಿವಸೇನೆ (Shiv Sena) ಪುಂಡರು ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿದಿದ್ದಾರೆ.

    ಪುಣೆಯ ಸ್ವಾರಗೇಟ್‌ ಬಳಿ ಪುಂಡಾಟಿಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಫೆ.22 ರಂದು ರಾತ್ರಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಗೂಂಡಾ ವರ್ತನೆ ತೋರಿದ್ದಾರೆ. ನಡು ರಸ್ತೆಯಲ್ಲಿಯೇ ಬಲವಂತವಾಗಿ ಬಸ್ ನಿಲ್ಲಿಸಿ ಮಸಿ ಬಳಿದಿದ್ದಾರೆ. ಇದನ್ನೂ ಓದಿ: ಮರಾಠಿ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ – ಇಂದು ಬೆಳಗಾವಿಗೆ ರಾಮಲಿಂಗಾ ರೆಡ್ಡಿ ಭೇಟಿ

    ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕಕ್ಕೆ ಸೇರಿದ ಬಸ್‌ಗಳಿಗೆ ಮಸಿ ಬಳಿಯಲಾಗಿದೆ. ಬಸ್ ಮೇಲಿದ್ದ ಕನ್ನಡ ಅಕ್ಷರಗಳಿಗೆ ಮಸಿ ಬಳಿಯಲಾಗಿದೆ. ‌ಮುಂಬೈ ಇಳಕಲ್ ಮರಾಠಿ ಬರುತ್ತಾ ಎಂದು ಕೇಳಿ ಬರಲ್ಲ ಎಂದಿದ್ದಕ್ಕೆ ಬಸ್ ಬೋರ್ಡ್ ಒಡೆದು ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ

    ಕರ್ನಾಟಕದಲ್ಲಿ ಮರಾಠಿಗರಿಗೆ ತೊಂದರೆ ಕೊಟ್ಟರೆ ಹೀಗೆ ಒಡೆದು ಹಾಕ್ತಿವಿ ಎಂದು ಧಮ್ಕಿ ಕೊಟ್ಟಿದ್ದಾರೆ. ಠಾಕ್ರೆ ಬಣದ ಆಟಾಟೋಪಕ್ಕೆ ಮಹಾರಾಷ್ಟ್ರದಲ್ಲಿ ಬ್ರೇಕ್ ಇಲ್ಲದಂತಾಗಿದೆ. ಸಧ್ಯ ಮಹಾರಾಷ್ಟ್ರದಲ್ಲಿ ಠಾಕ್ರೆ ಬಣದ ಗೂಂಡಾವರ್ತನೆ ಮಿತಿಮೀರಿದೆ. ಇದನ್ನೂ ಓದಿ:  ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ

    https://youtu.be/9aRZwimkiN0?si=1pIJY_bEtIdzMSF8

    ಇನ್ನೂ ಮಂಗಳವಾರ ಬೆಳಗಾವಿಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಸಹ ಆಗಮಿಸುತ್ತಿದ್ದಾರೆ. ಕನ್ನಡ ಮಾತಾಡು ಎಂದು ಹೇಳಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ನಾರಾಯಣಗೌಡ ಚಲೋ ಪಂಥಬಾಳೆಕುಂದ್ರಿ ಕರೆ ನೀಡಿದ್ದಾರೆ. ಬೆಳಗಾವಿಯಿಂದ ಪಂಥಬಾಳೆಕುಂದ್ರಿಗೆ ಪ್ರತಿಭಟನಾ ರ‍್ಯಾಲಿ ಆಯೋಜನೆ ಮಾಡಿದ್ದು, ಕಂಡೆಕ್ಟರ್ ಮೇಲೆ ನೆಡದ ಹಲ್ಲೆಯನ್ನು ಖಂಡಿಸಿದ್ದಾರೆ. ಅಲ್ಲದೆ ನಾರಾಯಣಗೌಡ ಬರುತ್ತಿರುವ ಹಿನ್ನೆಲೆ ನೂರಾರು ಕಾರ್ಯಕರ್ತರು ಮಂಗಳವಾರದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ

    ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ

    ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh 2025) ಮುಕ್ತಾಯಗೊಳ್ಳಲು ಇನ್ನೆರಡು ದಿನಗಳಷ್ಟೇ ಬಾಕಿಯಿದೆ. ಈ ಹಿನ್ನೆಲೆ ಪುಣ್ಯಸ್ನಾನಕ್ಕೆ (Holy Bath) ತೆರಳುತ್ತಿದ್ದ ಬೆಳಗಾವಿ ಗೋಕಾಕ್‌ ನಗರದ 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮಧ್ಯ ಪ್ರದೇಶದ (Madhya Pradesh) ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಬೆಳಗಿನ ಜಾವ ಕ್ರೂಸರ್‌ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. 7 ಮಂದಿ ಕನ್ನಡಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ – ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

    ಕಳೆದ ಎರಡು ದಿನಗಳ ಹಿಂದೆ ಗೋಕಾಕ್‌ ನಗರದಿಂದ 10 ಮಂದಿ ಕ್ರೂಸರ್‌ನಲ್ಲಿ ಮಹಾ ಕುಂಭಮೇಳಕ್ಕೆ ಹೊರಟಿದ್ದರು. ಇಂದು ಮುಂಜಾನೆ ಮಧ್ಯಪ್ರದೇಶ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ

    https://youtu.be/9aRZwimkiN0?si=1pIJY_bEtIdzMSF8

  • ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಕೇವಲ 20 ಸೀಟು ಬರುತ್ತದೆ – ಗೋವಿಂದ ಕಾರಜೋಳ

    ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಕೇವಲ 20 ಸೀಟು ಬರುತ್ತದೆ – ಗೋವಿಂದ ಕಾರಜೋಳ

    – ಮೂರು ತಿಂಗಳಿಂದ `ಗೃಹಲಕ್ಷ್ಮಿ’ ಬಂದಿಲ್ಲ ಎಂದ ಸಂಸದ

    ಬೆಳಗಾವಿ: ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಕೇವಲ 20 ಸೀಟು ಬರುತ್ತದೆ ಎಂದು ಸಂಸದ ಗೋವಿಂದ ಕಾರಜೋಳ (Govind Karjol) ಭವಿಷ್ಯ ನುಡಿದಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬಂದು ಎರಡು ವರ್ಷ ಆಯ್ತು. ಭಂಡತದನದಿಂದ ಐದು ಗ್ಯಾರಂಟಿ ಕೊಡುತ್ತೇವೆ ಎಂದಿದ್ದರು. ಆದರೆ ಈಗ ಗ್ಯಾರಂಟಿ ಹಣವನ್ನೂ ಕೊಡ್ತಿಲ್ಲ. ಗೃಹಲಕ್ಷ್ಮಿ ಹಣ ಮೂರು ತಿಂಗಳಿಂದ ಖಾತೆಗೆ ಜಮೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಭಾರತ, ಚೀನಾಕ್ಕೆ ಸುಂಕ ವಿಧಿಸುತ್ತೇವೆ – ಪುನರುಚ್ಚರಿಸಿದ ಟ್ರಂಪ್‌

    ಯಾವ ಗ್ಯಾರಂಟಿಯೂ ಸ್ಮಾರ್ಟ್ ಇಲ್ಲ, ಬೋಗಸ್ ಹೇಳಿ ವೋಟ್ ಹಾಕಿಸಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಜನರಿಗೆ ಮೋಸ ಮಾಡುತ್ತಿದ್ದಾರೆ. ಕಳೆದ ಬಾರಿ ಬಜೆಟ್ ಮಂಡನೆ ಮಾಡಿದ್ದರ ಪೈಕಿ ಒಂದೂವರೆ ಲಕ್ಷ ಕೋಟಿ ಹಣ ಬಾಕಿ ಇದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಆರೋಪಿಸಿದರು.

    ರಾಜ್ಯದಲ್ಲಿ ದಿನನಿತ್ಯ ಕೊಲೆ ಸುಲಿಗೆ ಆಗುತ್ತಿವೆ. ಬೇರೆ ರಾಜ್ಯದವರು ಬಂದು ಕಳ್ಳತನ ಮಾಡ್ತಿದ್ದಾರೆ. ಜನರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ. ಪುಂಡರ ಹಾವಳಿ ಜಾಸ್ತಿ ಆಗಿದೆ. ಸರ್ಕಾರದ ಹಿಡಿತ ತಪ್ಪಿ ಹೋಗಿದ್ದು, ಸಿದ್ದರಾಮಯ್ಯ ಎಲ್ಲದರಲ್ಲೂ ವಿಫಲರಾಗಿದ್ದಾರೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅತಿ ಹೆಚ್ಚು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ. ಇದೇನಾ ಇವರು ನುಡಿದಂತೆ ನಡೆದಿದ್ದು? ನಾಡಿನ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಕಾಳಜಿಯಿಲ್ಲ. ಅಭಿವೃದ್ಧಿ ಸಂಪೂರ್ಣವಾಗಿ ಶೂನ್ಯವಾಗಿದೆ. ನಾಡಿನ ಜನ ಸಂಕಷ್ಟದಲ್ಲಿದ್ದು, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೂಡಲೇ ಇವರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಬೇಕು ಎಂದು ಹರಿಹಾಯ್ದರು.

    ಪಾರ್ಟಿ ಅಧ್ಯಕ್ಷ ಡಿಸಿಎಂಗೆ ಕಿರೀಟ ಇದೆಯಾ ಎಂದು ರಾಜಣ್ಣ ಕೇಳುತ್ತಿದ್ದಾರೆ. ನಾಲ್ಕು ಗುಂಪಾಗಿ ಅಧಿಕಾರಕ್ಕಾಗಿ ರಣ ಹದ್ದುಗಳ ರೀತಿ ಕಚ್ಚಾಡುತ್ತಿದ್ದಾರೆ. ದಲಿತ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಹೌದು ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಮಾಡಲು ಅವಕಾಶ ಇದೆ. ಖರ್ಗೆ ಅವರು ಯಾರನ್ನಾದರೂ ಮಾಡಲಿ, ದಲಿತ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ಪರಮೇಶ್ವರ್, ಮುನಿಯಪ್ಪ ಅವರನ್ನು ಮಾಡಬೇಕು. ಇಲ್ಲವಾದರೆ ಖರ್ಗೆ ಅವರೇ ದಲಿತ ಸಿಎಂ ಆಗಲಿ ಎಂದು ಅಭಿಪ್ರಾಯಪಟ್ಟರು.ಇದನ್ನೂ ಓದಿ: ದೆಹಲಿ ವಿಶ್ವವಿದ್ಯಾಲಯದಿಂದ ಸಂಗಪ್ಪ ವಗ್ಗರ್‌ಗೆ ಡಾಕ್ಟರೇಟ್ ಪದವಿ

  • ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರ ಪುಂಡಾಟ

    ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರ ಪುಂಡಾಟ

    ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಶಿವಸೇನೆ (Shiv Sena) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರ ಪುಂಡಾಟ ಮುಂದುವರೆದಿದೆ.

    ಮಹಾರಾಷ್ಟ್ರದ ಪುಣೆಯ ಸ್ವಾರಗೇಟ್‌ ನಲ್ಲಿ KSRTC ಅಂಬಾರಿ ಬಸ್ ಮೇಲೆ ಕಪ್ಪು ಮಸಿ ಬಳಿದು ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ಜಯ ಮಹಾರಾಷ್ಟ್ರ ಮರಾಠ ಮಾನುಸ ಎಂದು ಬರಹ ಬರೆದು ಪುಂಡಾಟ ಮೆರೆದಿದ್ದಾರೆ‌.

    ನಿನ್ನೆ ಪುಣೆಗೆ ತೆರಳಿದ್ದ ಬಸ್, ವಾಪಸ್ ಬರುವಾಗ ಮಸಿ ಬಳೆದು ಪುಂಡಾಟ ಮೆರೆದಿದ್ದಾರೆ‌‌. ಇನ್ನೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮಹಾರಾಷ್ಟ್ರ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸುವಂತೆ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ ಸರನಾಯಿ ಆದೇಶಿಸಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಹಲ್ಲೆ – ಈಗ ನಿರ್ವಾಹಕನ ಮೇಲೆಯೇ ಪೋಕ್ಸೋ ಕೇಸ್‌ ದಾಖಲು

    ಎರಡು ಕಡೆ ಪರಿಸ್ಥಿತಿ ಸರಿ ಆಗುವವರೆಗೆ ಬಸ್ ಸಂಚಾರ ಸ್ಥಗಿತ ಮಾಡುವಂತೆ ಆದೇಶ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿ: ಮರಾಠಿ ಬರಲ್ಲ.. ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ

  • ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಹಲ್ಲೆ – ಈಗ ನಿರ್ವಾಹಕನ ಮೇಲೆಯೇ ಪೋಕ್ಸೋ ಕೇಸ್‌ ದಾಖಲು

    ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಹಲ್ಲೆ – ಈಗ ನಿರ್ವಾಹಕನ ಮೇಲೆಯೇ ಪೋಕ್ಸೋ ಕೇಸ್‌ ದಾಖಲು

    ಬೆಂಗಳೂರು: ಕನ್ನಡದಲ್ಲಿ (Kannada) ಮಾತನಾಡು ಎಂದಿದ್ದಕ್ಕೆ ನಿರ್ವಾಹಕನ (Conductor) ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಈಗ ನಿರ್ವಾಹಕ ಮಹಾದೇವ್‌ ಹುಕ್ಕೇರಿ ಮೇಲೆ ಪೋಕ್ಸೋ ಪ್ರಕರಣ (POCSO Case) ದಾಖಲಾಗಿದೆ.

    ಬಸ್‌ನಲ್ಲೇ ಕೆಟ್ಟ ದೃಷ್ಟಿಯಿಂದ ನೋಡಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

    ಕನ್ನಡ ಮಾತನಾಡಿ ಎಂದಿದ್ದಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಮಹಾದೇವ್‌ ಆರೋಪಿಸಿದ್ದರು. ಆ ದೂರನ್ನಾಧರಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

    ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ಇಂದು ನಸುಕಿನ ಜಾವ 2:30ರ ವೇಳೆಗೆ ಬಾಲಕಿಯಿಂದ ದೂರು ದಾಖಲಾಗಿದೆ. ಪೋಕ್ಸೋ ಬಗ್ಗೆ ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲೂ ಪ್ರಸ್ತಾಪವೇ ಆಗಿಲ್ಲ. ಆದರೆ ನಿರ್ವಾಹಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಾತ್ರೋರಾತ್ರಿ ಪೋಕ್ಸೋ ಪ್ರಕರಣ ದಾಖಲಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ತುಂಬಿದ್ದ ಬಸ್‌ನಲ್ಲಿ ಬಾಲಕಿಯನ್ನ ಕೆಟ್ಟ ದೃಷ್ಟಿಯಿಂದ ನೋಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.

    ಪೋಕ್ಸೋ ಪ್ರಕರಣ ದಾಖಲಾದ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಮಹಾದೇವ್‌ ಅವರು, ನನಗೆ ದೂರು ನೀಡಿದ ಹುಡುಗಿಯಷ್ಟು ಪ್ರಾಯದ ಮಗಳಿದ್ದಾಳೆ. ಪ್ರಕರಣದ ದಿಕ್ಕು ತಪ್ಪಿಸಲು ನನ್ನ ಮೇಲೆ ಸುಳ್ಳು ಕೇಸ್‌ ದಾಖಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

     

    ಏನಿದು ಘಟನೆ?
    ಬೆಳಗಾವಿ-ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‌ನಲ್ಲಿ ಟಿಕೆಟ್‌ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ್ದ ಮಹಾದೇವ್‌, ಬಿಕೆ ಬಾಳೇಕುಂದ್ರಿಗೆ ಸಿಬಿಟಿಯಿಂದ ಯುವಕ ಮತ್ತು ಯುವತಿ ಬಸ್ ಹತ್ತಿದ್ದರು. ಯುವತಿ ಎರಡು ಫ್ರೀ ಟಿಕೆಟ್‌ ಎಂದು ಹೇಳಿ ಟಿಕೆಟ್‌ ಪಡೆದಳು. ಯುವಕ ಟಿಕೆಟ್‌ ಪಡೆದಿರಲಿಲ್ಲ. ಈ ವಿಚಾರಕ್ಕೆ ನಾನು ಪ್ರಶ್ನೆ ಮಾಡಿದ್ದೆ. ನೀವು ಟಿಕೆಟ್​ ಪಡೆಯುವಾಗ ಸರಿಯಾಗಿ ಹೇಳಿ ತೆಗೆದುಕೊಳ್ಳಬೇಕು ಎಂದು ಆಕೆ ತಿಳಿ ಹೇಳಿದ್ದೆ. ಈ ಸಂದರ್ಭದಲ್ಲಿ ಆಕೆ ಮರಾಠಿಯಲ್ಲಿ ಮಾತಾಡು, ಮರಾಠಿ ಕಲಿತುಕೊಳ್ಳಬೇಕು ಎಂದು ನನಗೆ ಮರಾಠಿಯಲ್ಲೇ ಬೈದಳು. ಮುಂದೆ ಬಾಳೇಕುಂದ್ರಿ ಕೆಎಚ್ ಬರುತ್ತಿದ್ದಂತೆ ಅವರ ಕಡೆಯ 20 ಜನರು ನನ್ನ ಮೇಲೆ ಹಲ್ಲೆ ಮಾಡಲು ಬಂದರು. ತಲೆ, ಮೈ, ಕೈಗೂ ಹೊಡೆದಿದ್ದಾರೆ ಎಂದು ತಿಳಿಸಿದರು.

  • ಹೆಬ್ಬಾಳ್ಕರ್‌ ಅಪಘಾತ ಕೇಸ್‌ – ಗುದ್ದಿ ಪರಾರಿಯಾದ ಕ್ಯಾಂಟರ್‌ಗಾಗಿ ತೀವ್ರ ಹುಡುಕಾಟ

    ಹೆಬ್ಬಾಳ್ಕರ್‌ ಅಪಘಾತ ಕೇಸ್‌ – ಗುದ್ದಿ ಪರಾರಿಯಾದ ಕ್ಯಾಂಟರ್‌ಗಾಗಿ ತೀವ್ರ ಹುಡುಕಾಟ

    ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಕಾರು ಅಪಘಾತ ಪ್ರಕರಣಕ್ಕೆ (Accident Case) ಹೊಸ ಟ್ವಿಸ್ಟ್‌ ಸಿಕ್ಕಿದ್ದು ಹಿಟ್ ಆಂಡ್‌ ರನ್ (Hit and Run) ಮಾಡಿ ಪರಾರಿಯಾದ ಹೊರರಾಜ್ಯದ ಕ್ಯಾಂಟರ್ (Canter) ವಾಹನಕ್ಕಾಗಿ ಹುಡುಕಾಟ ತೀವ್ರಗೊಂಡಿದೆ.

    ಪಂಜಾಬ್ ಅಥವಾ ಹರಿಯಾದ ಕ್ಯಾಂಟರ್‌ ಎನ್ನುವ ಪ್ರಾಥಮಿಕ ಮಾಹಿತಿ ಬೆಳಗಾವಿ ಪೊಲೀಸರಿಗೆ (Belagavi Police) ಸಿಕ್ಕಿದೆ. ಪೊಲೀಸರು 60 ಕ್ಯಾಂಟರ್ ವಾಹನಗಳ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.

    ಹಿರೇಬಾಗೇವಾಡಿ ಟೋಲ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ವಿಡಿಯೋ ಆಧಾರಿಸಿ ಪೊಲೀಸರು ಈಗಾಗಲೇ 30 ಕ್ಯಾಂಟರ್ ವಾಹನಗಳನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಇದನ್ನೂ ಓದಿ: ಪುರುಷರಿಗೆ ಮೀಸಲಿರುವ ಸೀಟ್‌ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ – ಮೈಸೂರು KSRTC ಸೂಚನೆ

    ಆ ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಪ್ರತಿ ಕ್ಯಾಂಟರ್‌ ಮೇಲೆ ನಿಗಾ ವಹಿಸಿ ತನಿಖೆ ನಡೆಸಲಾಗುತ್ತದೆ ಎಂದು ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ್‌ ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

    ಜ.14ರ ಮುಂಜಾನೆ ಬೆಂಗಳೂರಿನಿಂದ ಬೆಳಗಾವಿಗೆ ಹಿಂತಿರುಗುತ್ತಿದ್ದಾಗ ಹೆಬ್ಬಾಳ್ಕರ್‌ ಕಾರು ಅಪಘಾತವಾಗಿತ್ತು. ಕಾರಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗನ್ ಮ್ಯಾನ್ ಈರಪ್ಪ ಹುಣಶಿಕಟ್ಟಿ ಮತ್ತು ಚಾಲಕ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ 5 ಗಂಟೆಗೆ ಅಂಬಡಗಟ್ಟಿ ಕ್ರಾಸ್ ಬಳಿ ಒಂದು ಕಂಟೇನರ್ ಟ್ರಕ್ ಬಲಗಡೆಯಿಂದ ಎಡಗಡೆಗೆ ಬಂದಿದೆ. ಈ ವೇಳೆ ಇವರ ಕಾರಿನ ಬಲಭಾಗಕ್ಕೆ ತಾಗಿದೆ.  ಮುಂದೆ ಆಗಲಿದ್ದ ಹೆಚ್ಚಿನ ಅನಾಹುತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ, ಸರ್ವೀಸ್ ರಸ್ತೆಗಿಳಿದು ಕಾರು ಮರಕ್ಕೆ ಗುದ್ದಿತ್ತು.

     

  • ಹಿಂಡಲಗಾ ಜೈಲಿನ ಜಾಮರ್‌ನಿಂದ ಮೊಬೈಲ್‌ ನೆಟ್‌ವರ್ಕ್‌ ಜಾಮ್‌ – ಕಾಲ್‌ಗೆ ಪರದಾಡುತ್ತಿದ್ದಾರೆ ಜನ

    ಹಿಂಡಲಗಾ ಜೈಲಿನ ಜಾಮರ್‌ನಿಂದ ಮೊಬೈಲ್‌ ನೆಟ್‌ವರ್ಕ್‌ ಜಾಮ್‌ – ಕಾಲ್‌ಗೆ ಪರದಾಡುತ್ತಿದ್ದಾರೆ ಜನ

    ಬೆಳಗಾವಿ: 2ಜಿ ಜಾಮರ್‌ ಬದಲಾಯಿಸಿ ಹಿಂಡಲಗಾ ಜೈಲಿನಲ್ಲಿ (Hindalga Jail) 5ಜಿ ಜಾಮರ್‌ (Jammer) ಅಳವಡಿಸಿದ್ದರಿಂದ ಸಮೀಪದ ಗ್ರಾಮಸ್ಥರಿಗೆ ಈಗ ಸಮಸ್ಯೆಯಾಗುತ್ತಿದೆ.

    ಜಾಮರ್ ಅಳವಡಿಕೆಯಿಂದ ಜೈಲು ಪಕ್ಕದ ಹಳ್ಳಿಗಳಾದ ವಿಜಯನಗರ, ಗಣೇಶಪುರ,ಬೆನಕನಹಳ್ಳಿ ಸೇರಿದಂತೆ ಹಿಂಡಲಗಾ ಗ್ರಾಮಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ.‌

    ಸರ್ಕಾರಿ ಕಚೇರಿಗಳಲ್ಲಿ ನೆಟ್‌ವರ್ಕ್‌ ಸಿಗದೇ ಸರ್ವರ್ ಡೌನ್ ಆಗುತ್ತಿದೆ. ಪರೀಕ್ಷಾ ಸಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೂ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.‌

    ಜೈಲಿನಲ್ಲಿ ಖೈದಿಗಳ ಮೊಬೈಲ್‌ ಬಳಕೆಗೆ ಬ್ರೇಕ್ ಹಾಕಬೇಕು ಎನ್ನುವ ನಿಟ್ಟಿನಲ್ಲಿ ಜೈಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಆದರೆ ಇದರಿಂದ ಖೈದಿಗಳಿಗಿಂತ ಹೊರಗಿರುವ ಜನಸಾಮಾನ್ಯರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಇದನ್ನೂ ಓದಿ: ಜಮೀನಿಗೆ ಬಂದ ಜೀವಂತ ಮೊಸಳೆ ಸೆರೆ – ಜೆಸ್ಕಾಂ ಕಚೇರಿ ಬಳಿ ತಂದು ರೈತರ ಪ್ರತಿಭಟನೆ

    ಕೇದ್ರ ಸಚಿವ ನಿತಿನ್ ಗಡ್ಕರಿಗೆ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಖೈದಿಯೋರ್ವ ಜೀವ ಬೆದರಿಕೆ ಹಾಕಿದ್ದ. ಇದನ್ನು ಮನಗಂಡು ಜೈಲಧಿಕಾರಿಗಳು ಜಾಮರ್ ಅಳವಡಿಕೆಗೆ ಕ್ರಮ ಕೈಗೊಂಡಿದ್ದಾರೆ.

    ಅಳವಡಿಕೆಯಾಗಿರುವ ಜಾಮರ್‌ ಫ್ರಿಕ್ವೆನ್ಸಿ ಕಡಿಮೆ ಮಾಡಿ ಎಂದು ಜೈಲಾಧಿಕಾರಿಗಳಿಗೆ ಜನಸಾಮಾನ್ಯರು ಮನವಿ ಮಾಡಿದ್ದಾರೆ.

     

  • ಬೆಮುಲ್‌ನಿಂದ ಬೆಳಗಾವಿ ರೈತರಿಗೆ ಗುಡ್‌ನ್ಯೂಸ್‌ – ಹಸು, ಎಮ್ಮೆ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ

    ಬೆಮುಲ್‌ನಿಂದ ಬೆಳಗಾವಿ ರೈತರಿಗೆ ಗುಡ್‌ನ್ಯೂಸ್‌ – ಹಸು, ಎಮ್ಮೆ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ

    ಬೆಳಗಾವಿ: ಜಿಲ್ಲೆಯ ರೈತರಿಗೆ ಬೆಮುಲ್ ಗುಡ್ ನ್ಯೂಸ್ ನೀಡಿದೆ. ಹಾಲಿನ ಪ್ರೋತ್ಸಾಹ ಧನ ಪರಿಷ್ಕ್ರತ ದರವನ್ನು ಬೆಮುಲ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ.

    ಎಮ್ಮೆ‌ ಹಾಲಿಗೆ 3.40 ರೂ., ಹಸು ಹಾಲಿಗೆ ರೂ. ಪ್ರೋತ್ಸಾಹ ಹೆಚ್ಚಳ ಮಾಡಲಾಗಿದೆ. ಗೋಕಾಕ್‌ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈ ಕುರಿತು ತೀರ್ಮಾನ ಪ್ರಕಟಿಸಿದ್ದಾರೆ.

    ದರ ಪರಿಷ್ಕರಣೆಯಿಂದ ಪ್ರಸಕ್ತ ಎಮ್ಮೆ ಹಾಲಿನ ದರ ಪ್ರತಿ ಲೀಟರ್‌ಗೆ 41.60 ರೂ. ಇದ್ದು ಈಗ 3.49 ರೂ., 5 ರೂ. ಪ್ರೋತ್ಸಾಹ ದನ ಸೇರಿ ಒಟ್ಟು 50 ರೂ. ರೈತರಿಗೆ ಸಿಗಲಿದೆ. ಅದರಂತೆ ಹಸು ಹಾಲಿನ ದರ ಪ್ರತಿ ಲೀಟರ್‌ಗೆ 29.10 ರೂ. ಇದ್ದು ಈಗ 1 ರೂ. ಮತ್ತು 5 ರೂ. ಪ್ರೋತ್ಸಾಹ ದನ ಸೇರಿ 35 ರೂ. ಸಿಗಲಿದೆ ಎಂದು ಹೇಳಿದ್ದಾರೆ.

    ರೈತರಿಗೆ 10 ದಿನಗಳಲ್ಲಿ ಬಿಲ್ ಪಾವತಿ ಮಾಡಲಾಗುತ್ತಿದೆ.‌ ಇದರಿಂದ ರೈತರಿಗೂ ಗ್ರಾಹಕರಿಗೂ ಅನುಕೂಲವಾಗಲಿದೆ.‌ ಕಳೆದ ವರ್ಷ 68 ಲಕ್ಷ ರೂ. ನಿವ್ವಳ ಲಾಭ ಜಿಲ್ಲಾ‌ ಹಾಲು ಒಕ್ಕೂಟಕ್ಕೆ ಆಗಿತ್ತು. ಪ್ರಸಕ್ತ ಮಾರ್ಚ್ ಅಂತ್ಯದವರೆಗೆ ಲಾಭ ತರಲು ಕೆಲಸ ಮಾಡಲಾಗುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

  • ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕ, ಕಾಂಗ್ರೆಸ್‌ ನಾಯಕನ ಬರ್ಬರ ಹತ್ಯೆ, ಆರೋಪಿ ಅರೆಸ್ಟ್‌

    ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕ, ಕಾಂಗ್ರೆಸ್‌ ನಾಯಕನ ಬರ್ಬರ ಹತ್ಯೆ, ಆರೋಪಿ ಅರೆಸ್ಟ್‌

    ಬೆಳಗಾವಿ: ಗೋವಾದ (Goa)  ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೋ ಮಾಮಲೇದಾರ್‌ (68) ಅವರನ್ನು ಕೊಲೆ ಮಾಡಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಅಟೋ ಚಾಲಕ ಆರೋಪಿ ಸುಭಾಶ್‌ ನಗರ ನಿವಾಸಿ ಮುಜಾಹಿನ್‌ನನ್ನು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಆರೋಪಿ ಸುಭಾಶ್‌ ನಗರ ನಿವಾಸಿ ಮುಜಾಹಿನ್‌
    ಆರೋಪಿ ಸುಭಾಶ್‌ ನಗರ ನಿವಾಸಿ ಮುಜಾಹಿನ್‌

    ಆಗಿದ್ದೇನು?
    ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ಖಡಬಝರ್ ಲಾಡ್ಜ್‌ ಬಳಿ ಆಟೋಗೆ ಲಾವೋ ಮಾಮಲೇದಾರ್‌ (Lavoo Mamledar) ಕಾರು ಟಚ್ ಆಗಿದೆ. ಈ ವಿಚಾರಕ್ಕೆ ಆಟೋ ಚಾಲಕ ಜಗಳಕ್ಕೆ ಇಳಿದಿದ್ದಾನೆ. ನಂತರ ಆಟೋ ಚಾಲಕ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ.  ಬಳಿಕ ಲಾವೋ ಮಾಮಲೇದಾರ್ ಅವರು ಶ್ರೀನಿವಾಸ ಲಾಡ್ಜ್ ಬಳಿ ಬಂದು ನಿಂತಿದ್ದಾಗ ಆಟೋ ಚಾಲಕ ಅಲ್ಲೂ ಜಗಳ ಆರಂಭಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಲಾವೋ ಮಾಮಲೇದಾರ್ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾನೆ.


    ಈ ವೇಳೆ ಅಲ್ಲಿದ್ದ ಜನ ಮತ್ತು ಲಾಡ್ಜ್‌ ಸಿಬ್ಬಂದಿ ಸೇರಿ ಜಗಳವನ್ನು ನಿಲ್ಲಿಸಿದ್ದಾರೆ. ಗಂಭೀರವಾಗಿ ಪೆಟ್ಟು ತಿಂದಿದ್ದ ಲಾವೋ ಮಾಮಲೇದಾರ್‌ ಲಾಡ್ಜ್‌ನ ಮೆಟ್ಟಿಲು ಹತ್ತುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈಗ ಲಾವೋ ಮಾಮಲೇದಾರ್ ಮೃತ ದೇಹವನ್ನು ಬೆಳಗಾವಿ ಬೀಮ್ಸ್‌ಗೆ ರವಾನೆ ಮಾಡಲಾಗಿದೆ.

    ಗೋಮಾಂತಕ ಪಕ್ಷದಿಂದ 2012 ರಲ್ಲಿ ಚುನಾಯಿತರಾಗಿದ್ದ ಲಾವೋ ಜಯಗಳಿಸಿದ್ದರು.  ಮಾಮಲೇದಾರ್‌ ಸಾವಿಗೆ ಗೋವಾ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ  ಕಂಬನಿ ಮಿಡಿದಿದೆ.

  • ಆಕಸ್ಮಿಕವಾಗಿ ಸಿಡಿದ ಗುಂಡು – ಬೆಳಗಾವಿಯ ಯೋಧ ಚೆನ್ನೈನಲ್ಲಿ ಸಾವು

    ಆಕಸ್ಮಿಕವಾಗಿ ಸಿಡಿದ ಗುಂಡು – ಬೆಳಗಾವಿಯ ಯೋಧ ಚೆನ್ನೈನಲ್ಲಿ ಸಾವು

    ಬೆಳಗಾವಿ: ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ನೌಕಾಪಡೆಯ (Indian Navy) ಯೋಧ ಸಾವಿಗೀಡಾದ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ.

    ಮೃತ ಯೋಧನನ್ನು ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿಯ ಕಲ್ಲೋಳಿ ಗ್ರಾಮದ ಪ್ರವೀಣ್ ಸುಭಾಷ್ ಖಾನಗೌಡರ ಎಂದು ಗುರುತಿಸಲಾಗಿದೆ. ಅವರು ಚೆನ್ನೈನ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದ ವೇಳೆ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದು, ಗುಂಡು ಅವರ ತಲೆಗೆ ತಗುಲಿ ಸಾವನ್ನಪ್ಪಿದ್ದಾರೆ.

    ಸಾಯುವುದಕ್ಕೂ ಒಂದು ಗಂಟೆಗೆ ಮುನ್ನ ತಾಯಿಯ ಜೊತೆ ಅವರು ಮಾತನಾಡಿದ್ದರು. ಇನ್ನೂ 2020ರ ಫೆ.12 ರಂದು ನೌಕಾಪಡೆಗೆ ಸೇರಿದ್ದರು. ಕಾಕತಾಳಿಯ ಎಂಬಂತೆ ಅದೇ ದಿನ ಅವರು ಇಹಲೋಕ ತ್ಯಜಿಸಿದ್ದಾರೆ.

    ಕಲ್ಲೋಳಿಗೆ ಪಾರ್ಥಿವ ಶರೀರ ತಲುಪಿದ್ದು, ಗ್ರಾಮದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು (ಫೆ.14) ಸಕಲ ಸರ್ಕಾರಿ ಗೌರವಗಳೊಂದಿಗೆ ಪಂಚಾಯ್ತಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.