Tag: belagavi session

  • ಮತಾಂತರ ಕಾಯ್ದೆ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ: ಶೋಭಾ ಕರಂದ್ಲಾಜೆ

    ಮತಾಂತರ ಕಾಯ್ದೆ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ: ಶೋಭಾ ಕರಂದ್ಲಾಜೆ

    ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಕೃಷಿ ಇಲಾಖೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    Bommai

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಮತಾಂತರ ಕಾಯ್ದೆ ವಿಚಾರವಾಗಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಮಂಗಳೂರು ಆತ್ಮಹತ್ಯೆ, ಲವ್ ಜಿಹಾದಿ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ ವರ್ಗದ ಜನರನ್ನು ಅವರ ಬಡತನ, ಅನಾರೋಗ್ಯ ಸಂದರ್ಭ ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚನೆ ಮಾಡಬೇಕು ಎಂದರು. ಇದನ್ನೂ ಓದಿ: ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗೋದು ತಪ್ಪು : ಬೊಮ್ಮಾಯಿ

    ಸಾಮಾಜಿಕ ಅಸಮತೋಲನೆ ನಿರ್ಮಾಣ ಆಗಬಾರದು. ನಮ್ಮ ಬಡತನ ನಮ್ಮ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ನಾವು ಕೂಡ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗೋದಕ್ಕೆ ಸಾಧ್ಯವಾಗಿದೆ. ಇದಕ್ಕೆ ಜಾತಿ ಕಾರಣವೋ, ಆರೋಗ್ಯ ಕಾರಣವೋ, ಆರ್ಥಿಕ ಪರಿಸ್ಥಿತ ಕಾರಣವೋ, ಸಾಮಾಜಿಕ ಅಡತಡೆಗಳು ಕಾರಣವೋ ಎನ್ನುವುದನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು. ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಮತಾಂತರ ಕಾಯ್ದೆಗೆ ಕಾಂಗ್ರೆಸ್ ವಿರೋಧಿಸುತ್ತಿರುವ ವಿಚಾರ ಕುರಿತಂತೆ ಮಾತನಾಡಿದ ಅವರು, ನಾನು ಕೇಂದ್ರ ಸಚಿವೆಯಾಗಿ ಈ ಬಗ್ಗೆ ಹೆಚ್ಚು ಮಾತಾಡಲ್ಲ. ಆದರೆ, ನಾನೇ ಕಂಡಂತೆ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಬಾಂಗ್ಲಾ ದೇಶದಿಂದ ಬರುವ ಮಕ್ಕಳನ್ನು ಇಲ್ಲಿಗೆ ತಂದು ರಕ್ಷಣೆ ಮಾಡಲಾಗುತ್ತದೆ. ಅವರಿಗೆ ವೋಟರ್ ಐಡಿ ಕೊಟ್ಟು ಮುಂದೆ ಅವರನ್ನು ಮತದಾರರನ್ನಾ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಮಾನಸಿಕತೆ ಇರುವುದು ಕಾಂಗ್ರೆಸ್‍ನಲ್ಲಿ ಮಾತ್ರ. ಜಾತಿ ಹಾಗೂ ಧರ್ಮದ ಆಧಾರದಲ್ಲಿ ಪರ್ಮನೆಂಟ್ ಆಗಿ ಅಧಿಕಾರದಲ್ಲಿ ಇರಬಹುದು ಎನ್ನುವುದು ಕಾಂಗ್ರೆಸ್ ಮಾನಸಿಕತೆ. ಈ ಬಗ್ಗೆ ಡಿಕೆ ಶಿವಕುಮಾರ್ ಚರ್ಚೆ ಮಾಡದೇ ಇರುವುದು ಒಳ್ಳೆಯದು. ಅವರ ಪಕ್ಷ ನಿಂತಿದ್ದೆ ಇದೇ ಆಧಾರದಲ್ಲಿ. ಜಾತಿ, ಧರ್ಮ, ಒಂದು ವರ್ಗ ಓಲೈಸಿ ಅಧಿಕಾರ ಪಡೆಯುವುದು ಅಲ್ಲ ಎಂದು ಮೋದಿ ಅವರು ಎರಡು ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದ್ರು, ನಾವೇನಾದ್ರೂ ಮಾತಾಡಿದ್ವಾ: ಸಿ.ಎಂ ಇಬ್ರಾಹಿಂ

    ರಾವತ್ ಸಾವಿಗೆ ವಿಕೃತ ಮನಸ್ಸುಗಳ ಸಂಭ್ರಮಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದ ಸಿಡಿಎಸ್ ರಾವತ್ ಅವರು ನಿಧನರಾದ ಸಂದರ್ಭದಲ್ಲಿ ಕೆಲವು ವಿಕೃತ ಮನಸ್ಸುಗಳು ಸಂಭ್ರಮಿಸಿದ್ದಾರೆ. ಅವರು ವಿಕೃತ ಮನಸ್ಸುಗಳಲ್ಲ, ದೇಶದ್ರೋಹಿಗಳು. ಈ ಬಗ್ಗೆ ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥವರಿಗೆ ಕಠಿಣವಾದ ಶಿಕ್ಷೆಯನ್ನು ಕೊಡಬೇಕು ಅನ್ನುವುದು ನಮ್ಮೆಲ್ಲರ ಆಗ್ರಹ ಹಾಗೂ ದೇಶದ ಜನರ ಆಗ್ರಹವಾಗಿದೆ. ಇದರಲ್ಲೇನು ರಾಜಕೀಯವಿಲ್ಲ. ಕೆಲವರು ದೇಶಕ್ಕಾಗಿ ವಿರೋಧ ಮಾಡುವವರು ವಿರೋಧಿಗಳಾಗಿಯೇ ಇರುತ್ತಾರೆ. ಅಂತವರಿಗೆ ಪಕ್ಷ ಇಲ್ಲ, ಪಂಗಡ ಇಲ್ಲ, ಜಾತಿ ಇಲ್ಲ, ಪಂಥ ಇಲ್ಲ. ಅಂಥವರ ಮೇಲೆ ಉಗ್ರ ಕ್ರಮಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿದೆ ಎಂದು ಹೇಳಿದರು.

  • ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗೋದು ತಪ್ಪು : ಬೊಮ್ಮಾಯಿ

    ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗೋದು ತಪ್ಪು : ಬೊಮ್ಮಾಯಿ

    ಹುಬ್ಬಳ್ಳಿ: ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗುವುದು ತಪ್ಪು. ಮತಾಂತರ ಅನ್ನೋದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ನಗರದಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2 ವರ್ಷದ ನಂತರ ನಾಳೆ ಬೆಳಗಾವಿ ಅಧಿವೇಶನ ನಡೆಯುತ್ತಿದೆ. ಎಲ್ಲ ತಯಾರಿ ಮಾಡಿದ್ದೇವೆ. ಅಭಿವೃದ್ಧಿ ಪರವಾಗಿ, ಅರ್ಥಪೂರ್ಣವಾಗಿ ಚರ್ಚೆ ಆಗಬೇಕು. ಸಮಗ್ರ ಅಭಿವೃದ್ಧಿ ಚರ್ಚೆಗೆ ನಾವು ಸ್ವಾಗತ ಮಾಡುತ್ತೇವೆ ಎಂದರು. ಇದನ್ನೂ ಓದಿ: ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ

    ಮತಾಂತರ ಕಾಯ್ದೆ ವಿಚಾರ ಹಿನ್ನೆಲೆ ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ ಸೇರಿದಂತೆ ಸಿಖ್ ಧರ್ಮದವರು ಆತಂಕ ಪಡಬಾರದು. ಇವೆಲ್ಲ ಸಂವಿಧಾನವಾಗಿ ಇರುವ ಧರ್ಮಗಳು. ಅವರಿಗೆ, ಆ ಜನಾಂಗಕ್ಕೆ ಯಾವುದೇ ಆತಂಕ ಬೇಡ. ಅವರ ಪ್ರಾರ್ಥನೆ, ಅವರ ನಂಬಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಬಡತನಕ್ಕೆ, ಆಸೆ ಆಮಿಷಕ್ಕೆ ಮತಾಂತರ ಆಗುವುದು ತಪ್ಪು. ಈ ಕುರಿತಂತೆ ಬಹಳ ದೊಡ್ಡ ಚರ್ಚೆ ಆಗುತ್ತಿದ್ದು, ಕಾನೂನು ಇಲಾಖೆ ಪರಿಶೀಲನೆ ನಡೆಸುತ್ತಿದೆ ಹೇಳಿದರು.

    ಬೇರೆ ಬೇರೆ ರಾಜ್ಯಗಳಲ್ಲಿ ಈ ಬಗ್ಗೆ ಕಾನೂನು ಆಗಿದೆ. ಈ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ ಮಾಡಿ, ಕ್ಯಾಬಿನೆಟ್‍ಗೆ ಬರುತ್ತದೆ. ಕರುಡಿಗೆ ಒಪ್ಪಿಗೆ ಕೊಟ್ಟು, ಅದನ್ನು ನಾವು ಅಧಿವೇಶನದಲ್ಲಿ ತರುತ್ತೇವೆ. ಮತಾಂತರ ಅನ್ನೋದು ಸಮಾಜಕ್ಕೆ ಒಳ್ಳೆಯದಲ್ಲ, ಅದಕ್ಕೆ ಒಳಗಾಗಬಾರದು. ಮನೆತನ, ಕುಟುಂಬಕ್ಕೆ ಬಹಳ ದೊಡ್ಡ ಕಷ್ಟ ಆಗುತ್ತದೆ. ಆ ಎಲ್ಲ ಹಿನ್ನೆಲೆಯಲ್ಲಿ ಕಾನೂನು ತರಲು ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಡ್ಡನ ಅಡ್ಡಾದಲ್ಲಿ ಕಾಣಿಸಿಕೊಂಡ ವಾರ್ನರ್: ನೀನು ಚೆನ್ನಾಗಿದ್ದೀಯಾ ತಾನೇ ಎಂದು ಕಾಲೆಳೆದ ಕೊಹ್ಲಿ

    ಇದೇ ವೇಳೆ ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪ್ರಧಾನಿ ರಿಯಾಕ್ಟ್ ಮಾಡಿದ್ದಾರೆ. ಅದರ ವಿರುದ್ಧ ಕಾರ್ಯಾಚರಣೆ ಸಹ ಮಾಡಿದ್ದಾರೆ. ಆ ರೀತಿ ಅಲ್ಲಲ್ಲಿ ಘಟನೆಗಳು ಆಗಿವೆ. ತಾಂತ್ರಿಕ ಬಲದಿಂದ ಅವುಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿವೆ ಎಂದರು.

  • ಜನರ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ: ಆರ್. ಅಶೋಕ್

    ಜನರ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ: ಆರ್. ಅಶೋಕ್

    ಬೆಂಗಳೂರು: ಕರ್ನಾಟಕ ಜನರ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

    ನಗರದ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದುವರೆಗೂ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾಗಿಲ್ಲ. ಈಗಾಗಲೇ ಈ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಜನರು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜಾರಿ ಮಾಡುವುದಕ್ಕೆ ಚಿಂತನೆ ನಡೆಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

    ರಾಜ್ಯದಲ್ಲಿ ಲಾಕ್‍ಡೌನ್ ವಿಚಾರದ ಬಗ್ಗೆ ಮಾತನಾಡಿದ ಅವರು, ಸದ್ಯಕ್ಕೆ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ. ಆದರೆ ನಾವು ಮಾನಿಟರಿ ಮಾಡುತ್ತಿದ್ದೇವೆ. ವಿಶೇಷವಾಗಿ ಕೇರಳ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಆದರೆ ಸದ್ಯಕ್ಕಂತೂ ಎಲ್ಲಿಯೂ ಈ ರೀತಿಯ ಹೊಸ ತಳಿ ಪತ್ತೆಯಾಗಿಲ್ಲ. ಒಂದು ವೇಳೆ ಮುಂದೆ ಒಮಿಕ್ರಾನ್ ಪತ್ತೆಯಾದರೆ ಖಚಿತವಾಗಿ ರಾಜ್ಯದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದ ಜನರ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ, ಆ ದೃಷ್ಟಿಯಿಂದ ಎಲ್ಲಾ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯ ವಿಪತ್ತು ನಿರ್ವಹಣೆಯ ಉಪಾಧ್ಯಕ್ಷರಾಗಿ ನಮಗೆ ಆ ಜವಬ್ದಾರಿ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2 ಡೋಸ್ ಪಡೆದವರಿಗೆ ಚಿಕಿತ್ಸೆ – ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಕಡಿತಗೊಳಿಸಿ

    ಇದೇ ವೇಳೆ ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ನಿಗದಿ ಪಡಿಸಿದ ದಿನಾಂಕದಂದೇ ಬೆಳಗಾವಿ ಅಧಿವೇಶನ ನಡೆಯಲಿದೆ. ಈಗಾಗಲೇ 2 ವರ್ಷಗಳಿಂದ ಬೆಳಗಾವಿ ಅಧಿವೇಶನವನ್ನು ಮುಂದೂಡುತ್ತಾ ಬಂದಿದ್ದೇವೆ. ಈಗ ಇದ್ದಕ್ಕಿದ್ದಂತೆ ಅಧಿವೇಶನ ರದ್ದು ಮಾಡಿದ್ರೆ, ಅಲ್ಲಿನ ಜನರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ. ಜನರು ಕೂಡ ಭಯ ಭೀತರಾಗುತ್ತಾರೆ. ಆದರಿಂದ ಇದು ಒಳ್ಳೆಯ ಸಂದೇಶ ಅಲ್ಲ. ಅಧಿವೇಶನ ಅಲ್ಲಿ ನಡೆಸಲೇಬೇಕಾಗಿದೆ. ಅದಕ್ಕಾಗಿ ಈ ಬಾರಿ ಅಲ್ಲಿ ಅಧಿವೇಶನ ನಡೆಸುತ್ತೇವೆ. ಕೋವಿಡ್ ಸೂತ್ರ ತೆಗೆದುಕೊಂಡು ಅಧಿವೇಶನ ಸುಸೂತ್ರವಾಗಿ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

  • ಕೈ ಶಾಸಕಾಂಗ ಸಭೆಗೆ ಚಕ್ಕರ್ ಹಾಕಿದ್ದ ಜಾರಕಿಹೊಳಿ ಬಿಜೆಪಿ ನಾಯಕರ ಔತಣಕೂಟದಲ್ಲಿ ಹಾಜರ್!

    ಕೈ ಶಾಸಕಾಂಗ ಸಭೆಗೆ ಚಕ್ಕರ್ ಹಾಕಿದ್ದ ಜಾರಕಿಹೊಳಿ ಬಿಜೆಪಿ ನಾಯಕರ ಔತಣಕೂಟದಲ್ಲಿ ಹಾಜರ್!

    ಬೆಳಗಾವಿ: ಕಾಂಗ್ರೆಸ್‍ನಲ್ಲಿ ಕ್ಷಣಕ್ಷಣಕ್ಕೂ ಬಂಡಾಯ ಬಾವುಟ ಹಾರಿಸುತ್ತಲೇ ಇರುವ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರ ರಾತ್ರಿಯ ಊಟದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡಿದ್ದಾರೆ.

    ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಶಾಸಕಾಂಗ ಪಕ್ಷದ ಸಭೆಗೂ ಬಾರದೇ, ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಗೂ ಬಾರದೇ ಚಕ್ಕರ್ ಹೊಡೆದಿದ್ದ ಜಾರಕಿಹೊಳಿ ಯಡಿಯೂರಪ್ಪ ಪಕ್ಕದಲ್ಲೇ ಕುಳಿತು ರಾತ್ರಿಯ ಭೋಜನ ಸವಿದರು.

    ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಳ್ಳದ ರಮೇಶ್ ಜಾರಕಿಹೊಳಿ ಬಿಜೆಪಿ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಆಯೋಜಿಸಿದ್ದ ಡಿನ್ನರ್ ನಲ್ಲಿ ಯಡಿಯೂರಪ್ಪ, ಕತ್ತಿ ಜೊತೆ ಒಂದೇ ಟೇಬಲ್‍ನಲ್ಲಿ ಕುಳಿತು ಚರ್ಚೆ ಮಾಡಿದ್ದಾರೆ.

    ಸಂಪುಟ ವಿಸ್ತರಣೆಯೇ? ವಿಸರ್ಜನೆಯೋ ಎನ್ನುವುದು ಡಿಸೆಂಬರ್ 22ರಂದು ತಿಳಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಮತ್ತು ಸಚಿವ ಸ್ಥಾನ ಸಂಬಂಧ ಕಾಂಗ್ರೆಸ್‍ನಲ್ಲಿ ತೀವ್ರಗೊಂಡಿರುವ ಅಸಮಾಧಾನದ ಹೊತ್ತಲ್ಲೇ ರಮೇಶ್ ಅವರ ನಡೆಯಿಂದ ಮಹತ್ವ ಹೆಚ್ಚಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸದನದಲ್ಲಿ ಕದ್ದು ಮುಚ್ಚಿ ಯುವತಿ ಫೋಟೋ ನೋಡಿದ ಮಾಜಿ ಸಚಿವ ಎನ್ ಮಹೇಶ್!

    ಸದನದಲ್ಲಿ ಕದ್ದು ಮುಚ್ಚಿ ಯುವತಿ ಫೋಟೋ ನೋಡಿದ ಮಾಜಿ ಸಚಿವ ಎನ್ ಮಹೇಶ್!

    ಬೆಳಗಾವಿ: ರಾಜ್ಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಿದ್ದ ವಿಧಾನಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಮಹಿಳೆಯರ ಫೋಟೊ ನೋಡುವ ಖಯಾಲಿ ಮುಂದುವರೆದಿದೆ.

    ಸೋಮವಾರ ಸುವರ್ಣಸೌಧದಲ್ಲಿ ಸದನ ಆರಂಭ ಆಗುವ ವೇಳೆ ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ, ಬಿಎಸ್‍ಪಿ ಶಾಸಕರಾಗಿರುವ ಎನ್ ಮಹೇಶ್ ಅವರು ಮಹಿಳೆಯ ಫೋಟೋ ನೋಡುವುದರಲ್ಲಿ ತಲ್ಲಿನರಾಗಿದ್ದರು. ಈ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಸದನದಲ್ಲಿ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂಬ ಚರ್ಚೆ ಆರಂಭವಾಗಿದೆ.

    ಇಂದು ಬೆಳಗ್ಗೆ ಸ್ಪೀಕರ್ ಅವರು ಸದನ ಆರಂಭ ಮಾಡಲು ಬೆಲ್ ಮಾಡಲು ಸೂಚನೆ ನೀಡುವ ಮುನ್ನ ಘಟನೆ ನಡೆದಿದ್ದು, ಈ ವೇಳೆ ಹಾಜರಿದ್ದ ಎನ್.ಮಹೇಶ್ ಅವರು ಕದ್ದುಮುಚ್ಚಿ ವಾಟ್ಸಾಪ್ ನಲ್ಲಿ ಮಹಿಳೆಯರ ಫೋಟೋ ವೀಕ್ಷಣೆ ಮಾಡಿದ್ದು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರು ಅವಧಿಯಲ್ಲಿ ಕೆಲ ಶಾಸಕರು ವಿಡಿಯೋಗಳನ್ನು ನೋಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಈ ಬಳಿಕ ಸದನದಲ್ಲಿ ಮೊಬೈಲ್ ತೆಗೆದುಕೊಂಡು ಹೋಗದಂತೆ ನಿಯಮ ರೂಪಿಸಿ, ಮೊಬೈಲ್ ಈಡಲು ಪ್ರತ್ಯೇಕ ನಿಯಮ ರೂಪಿಸಿದ್ದರು. ಆದರೂ ಮಹೇಶ್ ಅವರು ಮೊಬೈಲ್‍ನೊಂದಿಗೆ ತೆರಳಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ.

    ಈ ಕುರಿತು ಮಾಜಿ ಸಚಿವ ಮಹೇಶ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಚಿವರು ಮೊಬೈಲಿನಲ್ಲಿ ಕಾಣಿಕೊಂಡ ಯುವತಿ ಯಾರು? ಸದನದಲ್ಲಿ ಯುವತಿಯ ಫೋಟೋ ನೋಡಿದ್ದು ಯಾಕೆ ಎನ್ನುವುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕಿದೆ. ಅಂದಹಾಗೇ ಸಾಮಾನ್ಯವಾಗಿ ಮೊಬೈಲ್ ಬಳಕೆ ಮಾಡದ ಸಚಿವರು ತಮ್ಮನ್ನ ಯಾರು ನೋಡಿದ್ದಾರೆ ಎಂಬುವುದನ್ನು ಗಮನಿಸಿ ಬಳಿಕ ಫೋಟೋ ನೋಡಿದ್ದು ದೃಶ್ಯಗಳಲ್ಲಿ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್ ಟಾಯ್ಲೆಟ್ ಹೆಸ್ರಲ್ಲಿ ಅರ್ಧ ಕೋಟಿ ಗುಳುಂ!

    ಮೊಬೈಲ್ ಟಾಯ್ಲೆಟ್ ಹೆಸ್ರಲ್ಲಿ ಅರ್ಧ ಕೋಟಿ ಗುಳುಂ!

    ಬೆಂಗಳೂರು: ಮೊಬೈಲ್ ಟಾಯ್ಲೆಟ್ ಹೆಸರಲ್ಲಿ ಅಧಿಕಾರಿಗಳು ಅರ್ಧ ಕೋಟಿ ಗುಳುಂ ಮಾಡಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರೈತರ ಹೋರಾಟಕ್ಕೆ ಒದಗಿಸಲಾಗಿದ್ದ ಮೊಬೈಲ್ ಟಾಯ್ಲೆಟ್ ನಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. 2016ರ ನವೆಂಬರ್ 21ರಿಂದ ಡಿಸೆಂಬರ್ 3ರವರೆಗೆ ಒಟ್ಟು 12 ದಿನ ಬೆಳಗಾವಿಯಲ್ಲಿ ಅಧಿವೇಶನ ನಡೆದಿತ್ತು. ಅಧಿವೇಶನದ ಹೊರಗೆ ರೈತರು ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರಿಗೆ 100 ಮೊಬೈಲ್ ಶೌಚಾಲಯ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಬಿಲ್ ಮಾಡಿಸಿದ್ದಾರೆ. ಅಂದು ವಿಧಾನಸಭೆ ಸಚಿವಾಲಯ ಬೆಸ್ಟ್ ಸ್ಯಾನಿಟೇಶನ್ & ಪಂಪರ್ಸ್ ನಿಂದ ಮೊಬೈಲ್ ಟಾಯ್ಲೆಟ್ ಗಳನ್ನು ಬಾಡಿಗೆಗೆ ಪಡೆದುಕೊಂಡಿತ್ತು.

    ಅಧಿವೇಶನದ ವೇಳೆ ಮೂರು ಮತ್ತೊಂದು ಎಂಬಂತೆ ಕೆಲವು ಟಾಯ್ಲೆಟ್‍ಗಳನ್ನು ಮಾತ್ರ ಅಳವಡಿಸಲಾಗಿತ್ತು. ಆದರೆ ಅಧಿಕಾರಿಗಳು 100 ಶೌಚಾಲಯಗಳಿಗೆ 51 ಲಕ್ಷದ 5 ಸಾವಿರದ 310 ರೂಪಾಯಿಯ ಬಿಲ್ ಮಾಡಿಸಿದ್ದಾರೆ. ಸ್ವಂತಕ್ಕೆ ಖರೀದಿ ಮಾಡಿದ್ರೆ ಅದೇ ಹಣದಲ್ಲಿ 50 ರಿಂದ 60 ಟಾಯ್ಲೆಟ್‍ಗಳು ಬರುತ್ತಿದ್ದವು. ಆರ್‍ಟಿಐ ಅರ್ಜಿ ಹಾಕಿದ್ರೆ ವಿಧಾನಸಭೆ ಸಚಿವಾಲಯ ಒಂದು ವರ್ಷದವರೆಗೂ ಸತಾಯಿಸಿದೆ. ಕೊನೆಗೆ ಮಾಹಿತಿ ಆಯೋಗದಿಂದ ದಂಡ ಕಟ್ಟುವ ಎಚ್ಚರಿಕೆ ನೀಡಿದ ಮೇಲೆ ಮಾಹಿತಿ ನೀಡಿದೆ ಎಂದು ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಹೇಳಿದ್ದಾರೆ.

    ಒಂದು ಮೊಬೈಲ್ ಟಾಯ್ಲೆಟ್ ಗೆ 1,300 ರೂಪಾಯಿ ಮಾತ್ರ ಎಂಬುವುದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ತಿಳಿದು ಬಂದಿದೆ. ಆದ್ರೆ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಬಿಲ್ ಮಾಡಿದ್ದು ಒಂದು ಮೊಬೈಲ್ ಟಾಯ್ಲೆಟ್‍ಗೆ 2,350 ರೂಪಾಯಿ. ನಮಗೂ 20 ಟಾಯ್ಲೆಟ್ ಬೇಕು ಅಂತ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ‘ಬೆಸ್ಟ್ ಸ್ಯಾನಿಟೇಶನ್ & ಪಂಪರ್ಸ್’ ಒಂದು ಟಾಯ್ಲೆಟ್‍ಗೆ 1,300 ರೂ. ಎಂದು ಒಪ್ಪಿಕೊಂಡಿದೆ.

    ರಿಯಾಲಿಟಿ ಚೆಕ್:
    ಪಬ್ಲಿಕ್ ಟಿವಿ: ಹಲೋ
    ಬೆಸ್ಟ್ ಸ್ಯಾನಿಟೇಶನ್: ಹೇಳಿ ಸರ್
    ಪಬ್ಲಿಕ್ ಟಿವಿ: ಬೆಸ್ಟ್ ಸ್ಯಾನಿಟೇಶನ್ ಅಂಡ್ ಪಂಪರ್ಸ್ ಅಲ್ವಾ..?
    ಬೆಸ್ಟ್ ಸ್ಯಾನಿಟೇಶನ್: ಹೌದು ಸರ್
    ಪಬ್ಲಿಕ್ ಟಿವಿ: ಎಷ್ಟು ಚಾರ್ಜ್ ಮಾಡ್ತೀರಾ ಮೇಡಂ ನಮ್ದು ಒಂದ್ ಪ್ರೋಗ್ರಾಂಗೆ ಇಪ್ಪತ್ತು ಟಾಯ್ಲೆಟ್ ಬೇಕಿತ್ತು. ಇಲ್ಲೆ ಬೆಂಗಳೂರಲ್ಲೇ
    ಬೆಸ್ಟ್ ಸ್ಯಾನಿಟೇಶನ್: ಸರ್ ಪ್ರೋಗ್ರಾಂ ಇರೋದು ಯಾವಾಗ?

    ಪಬ್ಲಿಕ್ ಟಿವಿ: ನೆಕ್ಸ್ಟ್ ಮಂತ್ ಇರೋದು ಮೇಡಂ. ಆಗಸ್ಟ್ 17
    ಬೆಸ್ಟ್ ಸ್ಯಾನಿಟೇಶನ್: ಎಷ್ಟು ಯುನಿಟ್, ಎಲ್ಲಿ ಲೊಕೇಶನ್..?
    ಪಬ್ಲಿಕ್ ಟಿವಿ: ಪ್ಯಾಲೇಸ್ ಗ್ರೌಂಡ್ ಮೇಡಂ.. ಎಷ್ಟಾಗತ್ತೆ ಒಂದಕ್ಕೆ, ಪರ್ ಡೇ ಲೆಕ್ಕ ತಾನೇ ನಿಮ್ದು. 2 ಡೇಸ್ ಬೇಕಿತ್ತು.
    ಬೆಸ್ಟ್ ಸ್ಯಾನಿಟೇಶನ್: ಒಂದು ನಿಮಿಷ ಸರ್
    ಬೆಸ್ಟ್ ಸ್ಯಾನಿಟೇಶನ್: ಹಲೋ..
    ಪಬ್ಲಿಕ್ ಟಿವಿ: ಹಲೋ..
    ಬೆಸ್ಟ್ ಸ್ಯಾನಿಟೇಶನ್: ಹಾ ಸರ್ ಹೇಳಿ..
    ಪಬ್ಲಿಕ್ ಟಿವಿ: ಎಷ್ಟಾಗತ್ತೆ ಸರ್ ನಮ್ಗೆ ಎರಡು ದಿನಕ್ಕೆ ಬೇಕಿತ್ತು ಯುನಿಟ್.

    ಬೆಸ್ಟ್ ಸ್ಯಾನಿಟೇಶನ್: ಎಷ್ಟು ಟಾಯ್ಲೆಟ್ ಬೇಕಿದೆ
    ಪಬ್ಲಿಕ್ ಟಿವಿ: ನಮ್ಗೆ 20 ಬೇಕು ಸರ್
    ಬೆಸ್ಟ್ ಸ್ಯಾನಿಟೇಶನ್: ಇಂಡಿಯನ್ನಾ ವೆಸ್ಟ್ರನ್ ಆ..?
    ಪಬ್ಲಿಕ್ ಟಿವಿ: ಇಂಡಿಯನ್… ಇಂಡಿಯನ್..
    ಬೆಸ್ಟ್ ಸ್ಯಾನಿಟೇಶನ್: ಇಂಡಿಯನ್ನಾ.. ಏನ್ ಸರ್ ಪರ್ಪಸ್ಸು
    ಪಬ್ಲಿಕ್ ಟಿವಿ: ಒಂದ್ ಪ್ರೋಗ್ರಾಂ ಇತ್ತು ಎಕ್ಸಿಬಿಷನ್ ಶೋಸ ಹಾಗಾಗಿ
    ಬೆಸ್ಟ್ ಸ್ಯಾನಿಟೇಶನ್: ಡೇಟ್ ಸರ್..

    ಪಬ್ಲಿಕ್ ಟಿವಿ: ಆಗಸ್ಟ್ 17 ಪ್ಯಾಲೇಸ್ ಗ್ರೌಂಡ್ ಸರ್
    ಬೆಸ್ಟ್ ಸ್ಯಾನಿಟೇಶನ್: 17, 18 ಎರಡು ದಿನಾನ
    ಪಬ್ಲಿಕ್ ಟಿವಿ: ಹೌದು ಹೌದು..
    ಬೆಸ್ಟ್ ಸ್ಯಾನಿಟೇಶನ್: ಓಕೆ. ಯಾವ್ ತರದ್ದು ಬೇಕು ಸರ್.. ಕನೆಕ್ಷನ್ ಕೊಡೋದಾ..? ಅಥವಾ ಕೆಮಿಕಲ್ ಟಾಯ್ಲೆಟ್ಸ್ ಬೇಕಾ..?
    ಪಬ್ಲಿಕ್ ಟಿವಿ: ಕೆಮಿಕಲ್ ಟಾಯ್ಲೆಟ್..
    ಬೆಸ್ಟ್ ಸ್ಯಾನಿಟೇಶನ್: ಮಾಡ್ಬೋದು ಸರ್ ಏನ್ ತೊಂದರೆ ಇಲ್ಲ.
    ಪಬ್ಲಿಕ್ ಟಿವಿ: ಎಷ್ಟು ಪರ್ ಡೇ..
    ಬೆಸ್ಟ್ ಸ್ಯಾನಿಟೇಶನ್: ಪರ್ ಡೇ, ಪರ್ ಟಾಯ್ಲೆಟ್ ನಾವು 1300 ಚಾರ್ಜ್ ಮಾಡ್ತೀವಿ.
    ಪಬ್ಲಿಕ್ ಟಿವಿ: ಒಂದ್ ದಿನಕ್ಕೆ

    ಬೆಸ್ಟ್ ಸ್ಯಾನಿಟೇಶನ್: ಪರ್ ಡೇ ಪರ್ ಯುನಿಟ್ ಪ್ಲಸ್ ಟ್ರಾನ್ಸ್ ಪೋರ್ಟೆಷನ್, ಟ್ಯಾಕ್ಸ್ ಎಕ್ಸ್ ಟ್ರಾ ಆಗುತ್ತೆ.
    ಪಬ್ಲಿಕ್ ಟಿವಿ: ಓಕೆ ಓವರಾಲ್ ಸೇರಿ ಹೇಳಿ ಎಷ್ಟು ಆಗಬಹುದು. ಒಂದ್ ದಿನಕ್ಕೆ ಎಷ್ಟು ಆಗತ್ತೆ. ಟ್ರಾನ್ಸ್ ಪೋರ್ಟೇನ್, ಟ್ಯಾಕ್ಸ್ ಎಲ್ಲಾ ಸೇರಿ.
    ಬೆಸ್ಟ್ ಸ್ಯಾನಿಟೇಶನ್: ಒಂದ್ 10 ನಿಮಿಷ ನಿಮ್ಗೆ ಲೆಕ್ಕ ಮಾಡಿ ಹೇಳ್ಳಾ ಸರ್.
    ಪಬ್ಲಿಕ್ ಟಿವಿ: ಆಯ್ತು ಸರ್ ಆಯ್ತು..
    [ಹತ್ತು ನಿಮಿಷಗಳ ನಂತರ]
    ಪಬ್ಲಿಕ್ ಟಿವಿ: ಹಲೋ..
    ಬೆಸ್ಟ್ ಸ್ಯಾನಿಟೇಶನ್: ಕಿರಣ್ ಸರ್ ಅದು ಕಾಸ್ಟಿಂಗ್ ನಿಮಗೆ ಎಸ್‍ಎಂಎಸ್ ಮಾಡಿದಿನಿ ಈಗ
    ಪಬ್ಲಿಕ್ ಟಿವಿ: ಎಸ್‍ಎಂಎಸ್ ಮಾಡಿದಿರ..
    ಬೆಸ್ಟ್ ಸ್ಯಾನಿಟೇಶನ್: ಹೌದು ಸರ್..

    ಪಬ್ಲಿಕ್ ಟಿವಿ: ನೀವು ಒಂದರದ್ದು ಮಾಡಿದಿರಾ ಇಲ್ಲ ಓವರಾಲ್ ಟೋಟಲ್ 20ರದ್ದು ಮಾಡಿದಿರಾ.?
    ಬೆಸ್ಟ್ ಸ್ಯಾನಿಟೇಶನ್: ಟೋಟಲ್ 20 ಮಾಡಿದಿನಿ
    ಪಬ್ಲಿಕ್ ಟಿವಿ: ಎಷ್ಟಾಗತ್ತೆ ಸರ್
    ಬೆಸ್ಟ್ ಸ್ಯಾನಿಟೇಶನ್: ಒಟ್ಟು 68,000 ಚಿಲ್ಲರೆ ಬರುತ್ತೆ.
    ಪಬ್ಲಿಕ್ ಟಿವಿ: ಅಂದ್ರೆ ಒಂದಕ್ಕೆ ನಮಗೆ 1300 ಪ್ಲಸ್ ಟ್ರಾನ್ಸ್ ಪೋರ್ಟೇಷನ್ನು..
    ಬೆಸ್ಟ್ ಸ್ಯಾನಿಟೇಶನ್: ಅದೇ ಟಾಯ್ಲೆಟ್ ಕಾಸ್ಟ್, ಟ್ರಾನ್ಸ್ ಪೋರ್ಟೇಷನ್ನು, ಟ್ಯಾಕ್ಸ್ ಮೂರು ಸೇರಿ ಅಷ್ಟು ಬರುತ್ತೆ.

    ಪಬ್ಲಿಕ್ ಟಿವಿ: ಒಂದು ಸಿಂಗಲ್ ಯುನಿಟ್‍ಗೆ ಎಷ್ಟಾಗತ್ತೆ ಅಲ್ಲಿಗೆ
    ಬೆಸ್ಟ್ ಸ್ಯಾನಿಟೇಶನ್: ಅಲ್ಲಿಗೆ 1700 ಹತ್ರತ್ತ ಆಗುತ್ತೆ ಇನ್ಕ್ಲೂಡಿಂಗ್ ಟ್ಯಾಕ್ಸ್, ಟ್ರಾನ್ಸ್ ಪೋರ್ಟೇಷನ್ ಕಾಸ್ಟ್ ಎಲ್ಲಾ..
    ಪಬ್ಲಿಕ್ ಟಿವಿ: ಸಿಂಗಲ್ ಯುನಿಟ್‍ಗೆ..?
    ಬೆಸ್ಟ್ ಸ್ಯಾನಿಟೇಶನ್: ಹೌದು ಸರ್..
    ಪಬ್ಲಿಕ್ ಟಿವಿ: ಓಕೆ ಸರ್ ಓಕೆ.. ನಿಮ್ಮ ಓನರ್ ಯಾರು ಸರ್..
    ಬೆಸ್ಟ್ ಸ್ಯಾನಿಟೇಶನ್: ನಮ್ ಓನರ್ ಸಿಗಲ್ಲ ಬೇಕಾದ್ರೆ ನಾನೇ ಬರ್ತಿನಿ.
    ಪಬ್ಲಿಕ್ ಟಿವಿ: ಹೌದಾ..
    ಬೆಸ್ಟ್ ಸ್ಯಾನಿಟೇಶನ್: ಎಲ್ಲಿಗೆ ಬರಬೇಕು ಹೇಳಿ ಸರ್..

    ಪಬ್ಲಿಕ್ ಟಿವಿ: ಯಾರು ಓನರ್ ಯಾರು.?
    ಬೆಸ್ಟ್ ಸ್ಯಾನಿಟೇಶನ್: ಓನರ್ ಆಶಾ ಅಂತ
    ಪಬ್ಲಿಕ್ ಟಿವಿ: ಹೌದಾ..?
    ಬೆಸ್ಟ್ ಸ್ಯಾನಿಟೇಶನ್: ಹೂಂ
    ಪಬ್ಲಿಕ್ ಟಿವಿ: ಅವ್ರ ಹತ್ರ ಮಾತಾಡ್ಬೇಕಿತ್ತು. ಮಾತಾಡಿದ್ರೆ ಚೆನ್ನಾಗಿತ್ತು..
    ಬೆಸ್ಟ್ ಸ್ಯಾನಿಟೇಶನ್: ಕರೆಕ್ಟ್ ಸರ್.. ಏನ್ ಬೇಕ್ ಹೇಳಿ ನಾವ್ ಮಾಡಿಕೊಡ್ತಿವಿ.
    ಪಬ್ಲಿಕ್ ಟಿವಿ: ನಮ್ದು ಬೇರೆ ಬೇರೆ ಪ್ರೋಗ್ರಾಂ ನಡೀತದೆ. ವರ್ಷಕ್ಕೆ ಒಂದಷ್ಟು ಪ್ರೋಗ್ರಾಂ ಮಾಡ್ತೀವಿ ಆರ್ಗನೈಸಿಂಗ್ ಕಂಪೆನಿ ಅಲ್ವಾ..? ಸೋ ಹಂಗಾಗಿ..
    ಬೆಸ್ಟ್ ಸ್ಯಾನಿಟೇಶನ್: ನಿಮ್ದು ವಿಸಿಟಿಂಗ್ ಕಾರ್ಡ್ ವಾಟ್ಸಾಪ್ ಮಾಡಿ ಸರ್ ಬಂದು ಭೇಟಿ ಮಾಡ್ತೀನಿ.

    https://youtu.be/wTO0zpXsyoU

  • ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

    ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

    ಬೆಳಗಾವಿ: ವೈದ್ಯರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆ(ಕೆಪಿಎಂಇ) ವಿಧಾನಸಭೆಯಲ್ಲಿ ಮಂಡನೆಯಾಗಿದೆ.

    ಖಾಸಗಿ ವೈದ್ಯರ ಮುಷ್ಕರದಿಂದ 60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹಠ ಸಾಧಿಸಿ ಕೊನೆಗೂ ಮಂಡಿಸಿದ್ದಾರೆ.

    ಮಸೂದೆಯಲ್ಲಿರುವ ಪ್ರಮುಖ ಅಂಶಗಳು:
    ಮೂಲ ಮಸೂದೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟರೆ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಅಂಶವಿದೆ ಎಂದು ಹೇಳಲಾಗಿತ್ತು. ಆದರೆ ಮಂಡನೆಯಾಗಿರುವ ಮಸೂದೆಯಲ್ಲಿ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪವನ್ನು ಕೈಬಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಕಡ್ಡಾಯವಾಗಿ ಪ್ರದರ್ಶಿಸಬೇಕು, ಸರ್ಕಾರಿ ಯೋಜನೆಯಡಿ ನೀಡುವ ಚಿಕಿತ್ಸೆಗಳಿಗೆ ಸರ್ಕಾರವೇ ದರ ನಿಗದಿ ಪಡಿಸಬೇಕು ಎನ್ನುವ ಅಂಶವಿದೆ.

    ನಿಗದಿಯಾಗಿರುವ ದರ, ವೆಚ್ಚದ ಪಟ್ಟಿಯನ್ನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೆಬ್‍ಸೈಟ್‍ನಲ್ಲಿ ಪ್ರದರ್ಶಿಸಬೇಕು. ನಿಗದಿತ ಅವಧಿಯೊಳಗೆ ಹೆಚ್ಚಿಗೆ ಕಾಯಿಸದೇ ರೋಗಿಗಳೊಂದಿಗೆ ಸಮಾಲೋಚನೆ ಮಾಡಬೇಕು. ಸಮಾಲೋಚನಾ ಕೊಠಡಿಗೆ ರೋಗಿಯ ಸಂಬಂಧಿ ಅಥವಾ ಸ್ನೇಹಿತರಿಗೆ ಅವಕಾಶ ನೀಡಬೇಕು ಎನ್ನುವ ಅಂಶಗಳು ಮಸೂದೆಯಲ್ಲಿದೆ.

    ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕುಂದುಕೊರತೆ ದೂರು ಪ್ರಾಧಿಕಾರ ರಚನೆಯಾಗಲಿದ್ದು, ಈ ಸಮಿತಿಯಲ್ಲಿ ಡಿಎಚ್‍ಓ, ಜಿಲ್ಲಾ ಆಯುಷ್ ಅಧಿಕಾರಿ, ಐಎಂಎ ಓರ್ವ ಪ್ರತಿನಿಧಿ, ಜಿಲ್ಲಾಮಟ್ಟದ ಮಹಿಳಾ ಪ್ರತಿನಿಧಿ ಇರುತ್ತಾರೆ. ದೂರು ಪ್ರಾಧಿಕಾರದಲ್ಲಿ ವಾದಿಸಲು ಅವಕಾಶ ನೀಡಲಾಗಿದ್ದು, ಆರೋಪಿತ ವೈದ್ಯರು ಅಥವಾ ಸಂಸ್ಥೆ ವಕೀಲರನ್ನು ನೇಮಿಸಿಕೊಳ್ಳಬಹುದು. ತುರ್ತು ಚಿಕಿತ್ಸಾ ಸಮಯದಲ್ಲಿ ಮುಂಗಡ ಹಣಕ್ಕೆ ರೋಗಿಗಳ ಸಂಬಂಧಿಕರಿಗೆ ಒತ್ತಾಯಿಸುವಂತಿಲ್ಲ. ಅಷ್ಟೇ ಅಲ್ಲದೇ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರೆ ಶವ ನೀಡದೇ ಬಾಕಿ ಹಣಕ್ಕೆ ಒತ್ತಾಯಿಸಬಾರದು ಎನ್ನುವ ಅಂಶಗಳಿವೆ.

    ಮೂಲ ಮಸೂದೆಯಲ್ಲಿ ಆಸ್ಪತ್ರೆಯಲ್ಲಿ ನೀಡಲಾಗುವ ಎಲ್ಲ ಚಿಕಿತ್ಸೆಗಳಿಗೆ ಆಸ್ಪತ್ರೆಗಳು ಎಷ್ಟು ದರವನ್ನು ವಿಧಿಸಬೇಕು ಎನ್ನುವ ಅಂಶವನ್ನು ಸರ್ಕಾರವೇ ನಿಗದಿ ಪಡಿಸಲಿದೆ. ಸರ್ಕಾರ ನಿಗದಿಪಡಿಸಿದ ಪಟ್ಟಿಯನ್ನು ಆಸ್ಪತ್ರೆಗಳು ಪ್ರದರ್ಶಿಸಬೇಕು ಮತ್ತು ಅಷ್ಟೇ ದರವನ್ನು ಪಡೆಯಬೇಕು ಎನ್ನುವ ಅಂಶವಿತ್ತು. ಆದರೆ ವೈದ್ಯರ ಜೊತೆಗೆ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ನಡೆಸಿದ ಸಂಧಾನ ಸಭೆಯ ಬಳಿಕ ಈ ಅಂಶಗಳನ್ನು ಕೈಬಿಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

  • ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವಿದ್ಯಾರ್ಥಿಯ ಕೈಗೆ ಏಟು ಕೊಟ್ಟ ಸಚಿವ ಡಿಕೆಶಿ

    ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವಿದ್ಯಾರ್ಥಿಯ ಕೈಗೆ ಏಟು ಕೊಟ್ಟ ಸಚಿವ ಡಿಕೆಶಿ

    ಬೆಳಗಾವಿ: ಸೆಲ್ಫಿ ಕ್ಲಿಕ್ಕಿಸಲು ಬಂದಿದ್ದ ವಿದ್ಯಾರ್ಥಿಯೊಬ್ಬನಿಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಏಟು ಕೊಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

    ನಗರದ ಶೇಖ್ ಹೋಮಿಯೋಪತಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಹಕ್ಕು ದಿನಾಚರಣೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆ  ಮಾತನಾಡುತ್ತಿದ್ದರು.

    ಈ ವೇಳೆ ವಿದ್ಯಾರ್ಥಿಯೊಬ್ಬ ಹಿಂದಿನಿಂದ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾನೆ. ಇದನ್ನು ನೋಡಿದ ಡಿಕೆ ಶಿವಕುಮಾರ್ ಸಿಟ್ಟಾಗಿ ಆತನ ಕೈಗೆ ಹೊಡೆದಿದ್ದಾರೆ. ಕೂಡಲೇ ವಿದ್ಯಾರ್ಥಿ ಆ ಸ್ಥಳದಿಂದ ಓಡಿ ಹೋಗಿದ್ದಾನೆ.

    https://youtu.be/uJyAgNhH1MQ