ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ (Belagavi Session) ಈ ಬಾರಿ ಸರ್ಕಾರವನ್ನ ಸಮರ್ಥವಾಗಿ ಎದುರಿಸಿ ಕಟ್ಟಿ ಹಾಕಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ತಿಳಿಸಿದರು.
ಬೆಳಗಾವಿ ಅಧಿವೇಶನ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿ ಬಿಜೆಪಿ ಒಗ್ಗಟ್ಟಿನಿಂದ ಸರ್ಕಾರದ ವಿರುದ್ಧ ಹೋರಾಟ ಮಾಡಿದೆ. ಈ ಬಾರಿ 5 ದಿನ ಮಾತ್ರ ನಮಗೆ ಚರ್ಚೆಗೆ ಅವಕಾಶ ಸಿಕ್ತು. ಅದರಲ್ಲಿ ವಕ್ಫ್, ಬಾಣಂತಿಯರ ಸಾವು, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಸರ್ಕಾರದ ವಿರುದ್ಧ ಪ್ರಬಲವಾಗಿ ಹೋರಾಟ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ವಿರುದ್ಧ ಸಂಚು: ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಸಿಟಿ ರವಿ
ವಕ್ಫ್ ಬೋರ್ಡ್ ವಿಚಾರವಾಗಿ ನಮ್ಮ ಹೋರಾಟದ ಫಲವಾಗಿ ಸರ್ಕಾರ ನ್ಯಾಯಾಂಗ ತನಿಖೆ ಮಾಡಿದೆ. ಬಾಣಂತಿಯರ ಸಾವು ವಿಚಾರದಲ್ಲೂ ನ್ಯಾಯಾಂಗ ತನಿಖೆ ಮಾಡಲು ಒಪ್ಪಿದ್ದು, ಇದು ನಮ್ಮ ಹೋರಾಟದ ಫಲ ಎಂದರು.
ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. 30 ಕ್ಕೂ ಹೆಚ್ಚು ಶಾಸಕರು ಚರ್ಚೆ ಮಾಡಿದ್ದಾರೆ. ನಮ್ಮ ಶಾಸಕರು ಒಂದಲ್ಲ ಒಂದು ವಿಚಾರದಲ್ಲಿ ಮಾತಾಡೋ ವ್ಯವಸ್ಥೆ ಮಾಡಿದ್ದೇನೆ. ನಮ್ಮ ಎಲ್ಲಾ ಶಾಸಕರಿಗೆ ಮಾತಾಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಉತ್ತರ ಕರ್ನಾಟಕ ಚರ್ಚೆ ಬಗ್ಗೆ ನೀಲನಕ್ಷೆ ಇರಬೇಕು ಅಂತ ಸರ್ಕಾರಕ್ಕೆ ಹೇಳಿದ್ದೇವೆಂದರು. ಸಿಎಂ ಸಂತೆ ಭಾಷಣ ಬಿಟ್ಟ ಘೋಷಣೆ ಮಾಡಿದ ಕಾರ್ಯಕ್ರಮ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಆ ಬಣ ಈ ಬಣ ಎನ್ನದೇ ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರು
– ಅಕ್ರಮ ವಾಸಿಗಳ ಪತ್ತೆಗೆ ಪ್ರತಿ ಜಿಲ್ಲೆಯಲ್ಲೂ ಟಾಸ್ಕ್‌ಫೋರ್ಸ್
ಬೆಳಗಾವಿ: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ (Pakistan) ಮತ್ತು ಬಾಂಗ್ಲಾ ಪ್ರಜೆಗಳ ಅಂಕಿ ಅಂಶವನ್ನು ಸರ್ಕಾರ ಬಿಡುಗಡೆ ಮಾಡಿದೆ. ಬೆಂಗಳೂರು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಜನ ಪಾಕಿಸ್ತಾನ ಮತ್ತು 159 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೇ 115 ಜನ ಬಾಂಗ್ಲಾದೇಶಿಗರು ನಕಲಿ ದಾಖಲೆಗಳ ಮೂಲಕ ವಾಸವಿರುವುದು ಕಂಡುಬಂದಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ತಿಳಿಸಿದರು.
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಜನ ಪಾಕಿಸ್ತಾನ, 159 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನ (Bangladesh cityzen) ವಶಕ್ಕೆ ಪಡೆಯಲಾಗಿದೆ. ಅಲ್ಲದೇ 115 ಜನ ಬಾಂಗ್ಲಾದೇಶಿಯರು ನಕಲಿ ದಾಖಲೆಗಳ ಮೂಲಕ ವಾಸವಿರುವುದು ಕಂಡುಬಂದಿದೆ. ಅದಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ಘಟಕ ಸ್ಥಾಪನೆ ಮಾಡಲಾಗಿದೆ. ಅಕ್ರಮವಾಗಿ ಬರೋದು ಇದೇನೂ ಹೊಸದಲ್ಲ ಲಕ್ಷಾಂತರ ಜನ ಭಾರತಕ್ಕೆ ಬರ್ತಿದ್ದಾರೆ. ಅವರನ್ನ ತಡೆಗಟ್ಟುವ ಕೆಲಸ ಸೈನಿಕರು ಬಾರ್ಡರ್‌ನಲ್ಲಿ ಮಾಡ್ತಿದ್ದಾರೆ. ಆದರೂ ನುಸುಳಿಕೊಂಡು ಹೇಗೆ ಭಾರತಕ್ಕೆ ಬರ್ತಾರೆ ಅನ್ನೋದು ಪ್ರಶ್ನೆಯಾಗಿದೆ. ಇದನ್ನ ತಡೆಗಟ್ಟುವ ಕೆಲಸ ಪ್ರತಿ ವರ್ಷ ನಾವು ಇದರ ಪರಿಶೀಲನೆ ಮಾಡ್ತೀವಿ. ಅಕ್ರಮವಾಗಿ ಇರೋರನ್ನ ಗಡಿಪಾರು ಮಾಡೋ ಕೆಲಸ ಮಾಡ್ತಿದ್ದೇವೆ ಎಂದು ತಿಳಿಸಿದರು.
ಇನ್ನೂ ಆಫ್ರಿಕಾದಿಂದ ಬಂದು ಡ್ರಗ್ಸ್ ಮಾರಾಟ ಮಾಡೋ ಕೆಲಸ ಆಗ್ತಿದೆ. ಸ್ಟೂಡೆಂಟ್ ವೀಸಾದಲ್ಲಿ ಬಂದು ಡ್ರಗ್ ದಂಧೆ ಮಾಡ್ತಾರೆ. ಈ ರೀತಿ ಅಕ್ರಮವಾಗಿ ಬಂದು ನೆಲೆಸಿರುವವರ ಪತ್ತೆಗೆ ಪ್ರತಿ ಜಿಲ್ಲೆಯಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ನಿರಂತರವಾಗಿ ಅನಧಿಕೃತವಾಗಿ ಬಂದಿರುವ ವಿದೇಶಿ ಪ್ರಜೆಗಳನ್ನ ಪತ್ತೆಹಚ್ಚುವ ಕೆಲಸ ಮಾಡ್ತಿದ್ದೇವೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ನುಡಿ ಜಾತ್ರೆ – ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ
ಬೆಳಗಾವಿ: ಸರ್ಕಾರದಿಂದಲೇ ಮಾಜಿ ಸೈನಿಕರಿಗೆ ನಿವೇಶನ ಕೊಡಲು ಜವಾನ್ ಸಮ್ಮಾನ್ ಲೇಔಟ್‌ಗಳನ್ನ (Jawan Samman Layout) ಸರ್ಕಾರ ನಿರ್ಮಾಣ ಮಾಡಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮಂಜೇಗೌಡ ಸೈನಿಕರಿಗೆ ಭೂಮಿ ನೀಡದ ವಿಚಾರ ಪ್ರಸ್ತಾಪ ಮಾಡಿದ್ರು. ರಾಜ್ಯ ಸರ್ಕಾರ ಮಾಜಿ ಸೈನಿಕರಿಗೆ ಭೂಮಿ ಮಂಜೂರು ಮಾಡಿಲ್ಲ. ದೇಶ ಕಾಯೋ ಸೈನಿಕನಿಗೆ (Soldier) ಜಮೀನು ಕೊಡದೇ ಹೋದ್ರೆ ಹೇಗೆ? ನಮಗೆ ರಕ್ಷಣೆ ಕೊಡೋ ಸೈನಿಕನಿಗೆ ಭೂಮಿ ಕೊಟ್ಟಿಲ್ಲ ಅಂತ ಸರ್ಕಾರದ ವಿರುದ್ಧ ಅಕ್ರೋಶ ಹೊರ ಹಾಕಿದ್ರು. ಇದನ್ನೂ ಓದಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ – ʻನುಡಿ ಜಾತ್ರೆಯ ಸ್ವರ ಯಾತ್ರೆʼ
ಇದಕ್ಕೆ ಸಚಿವ ಕೃಷ್ಣಬೈರೇಗೌಡ ಉತ್ತರ ನೀಡಿ, ರಾಜ್ಯದಲ್ಲಿ ಒಟ್ಟು 2,317 ಮಾಜಿ ಸೈನಿಕರು ಇದ್ದಾರೆ. 16,065 ಅರ್ಜಿ ಭೂ ಮಂಜೂರಾತಿಗಾಗಿ ಬಂದಿದೆ. ಇದರಲ್ಲಿ 6,783 ಅರ್ಜಿ ವಿಲೇವಾರಿ ಮಾಡಲಾಗಿದೆ. 9,282 ಅರ್ಜಿಗಳು ಬಾಕಿ ಇವೆ ಅಂತ ಮಾಹಿತಿ ನೀಡಿದ್ರು. ಇದನ್ನೂ ಓದಿ: ದೇಶಿಯ ಕುರಿ ತಳಿ ಸಂರಕ್ಷಣೆ ಮಾಡಲು ವಿಶೇಷ ಅನುದಾನ ಕೊಡಿ – ಯತೀಂದ್ರ ಸಿದ್ದರಾಮಯ್ಯ
ಮಾಜಿ ಸೈನಿಕರಿಗೆ ಜಮೀನು ಕೊಡಲು ನಮ್ಮ ಬಳಿ ಜಾಗ ಇಲ್ಲ. ಬಡವರಿಗೆ ನಿವೇಶನ ಕೊಡೋಕು ನಮ್ಮ ಬಳಿ ಜಾಗ ಇಲ್ಲ. ಪ್ರಜಾ ಸೌಧ ಕಟ್ಟಲು ಜಾಗ ಇಲ್ಲ. ಹೀಗಾಗಿ ಭೂಮಿ ಬದಲಿಗೆ ಮಾಜಿ ಸೈನಿಕರಿಗೆ ಸೈಟ್ ಕೊಡೋಕೆ ತೀರ್ಮಾನ ಮಾಡಿದ್ದೇವೆ. ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಜವಾನ್ ಸಮ್ಮಾನ್ ಅಂತ ಲೇಔಟ್ ನಿರ್ಮಾಣ ಮಾಡಿ ಮಾಜಿ ಸೈನಿಕರಿಗೆ ಭೂಮಿ ಬದಲಾಗಿ ಸೈಟ್ ಕೊಡುವ ವ್ಯವಸ್ಥೆ ಮಾಡ್ತೀವಿ. ಆದಷ್ಟು ಬೇಗ ಲೇಔಟ್ ನಿರ್ಮಾಣ ಕಾರ್ಯ ಶುರು ಮಾಡಲು ಡಿಸಿಗಳಿಗೆ ಸೂಚನೆ ಕೊಡ್ತೀನಿ ಅಂತ ತಿಳಿಸಿದರು. ಇದನ್ನೂ ಓದಿ: ವಕ್ಫ್ ವಿಚಾರದಲ್ಲಿ ರಕ್ಷಿಸಲು ಕಾಂಗ್ರೆಸ್ ನಾಯಕರು ವಿಜಯೇಂದ್ರ ಸಂಬಂಧಿಗಳೇ?: ಎಂಪಿ ರೇಣುಕಾಚಾರ್ಯ
ಬೆಳಗಾವಿ: ಅಧಿವೇಶನ (Session) ಆರಂಭವಾದಾಗಿನಿಂದ ಸದನದ ನಿಯಮ ಏನೂ ಇಲ್ಲ. ಯರದ್ದೋ ಅಣತಿಯಂತೆ ಸ್ಪೀಕರ್ ಯುಟಿ ಖಾದರ್ (UT Khader) ಸದನ ನಡೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಅಶೋಕ್ ಆರೋಪಿಸಿದ್ದಾರೆ.
ಸುವರ್ಣ ಸೌಧದಲ್ಲಿ ಮಾತನಾಡಿದ ಅವರು ಸ್ಪೀಕರ್ ಕಾಂಗ್ರೆಸ್ ಶಾಸಕರಿಗೆ ಸ್ಚೇಚ್ಛಾಚಾರ ಬಿಟ್ಟಿದ್ದಾರೆ. ನಿಯಮದಲ್ಲಿ ವಕ್ಫ್ ಬೋರ್ಡ್ ಸಂಬಂಧ ನಿಲುವಳಿ ಸೂಚನೆ ಕೊಡಲಾಗಿದೆ. ನಾಲ್ಕು ದಿನ ಆಗಿದ್ದು ಉದ್ದೇಶಪೂರ್ವಕವಾಗಿ ಆಡಳಿತ ಪಕ್ಷಕ್ಕೆ ಈ ರೀತಿ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರೇ ಗಲಾಟೆ ಮಾಡುತ್ತಿದ್ದಾರೆ. ಶಾಸಕರಿಗೆ ಸರಿಯಾಗಿ ಹಣ ಕೊಡುತ್ತಿಲ್ಲ. ಆ ಕೋಪನ್ನು ಸದನದ ಮೇಲೆ ತೋರಿಸುತ್ತಿದ್ದಾರೆ. ಈ ಕಾರಣಕ್ಕೆ ನಾವು ಸದನದಿಂದ ಹೊರ ನಡೆದಿದ್ದೇವೆ ಎಂದು ದೂರಿದರು. ಇದನ್ನೂ ಓದಿ:ಕೇರಳ ಮಾದರಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹೆಚ್ಚಳ ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ
ಸ್ಫೀಕರ್ ಆಡಳಿತ ಪಕ್ಷ ಸದಸ್ಯರ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಸದನದಲ್ಲಿ ಕುಳಿತು ಏನು ಪ್ರಯೋಜನ? ವಕ್ಫ್ ಸಂಬಂಧ ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ನಿಯಮದ ಪ್ರಕಾರ ಮಾಡಲಿ, ವಕ್ಫ್ ಸಂಬಂಧ ಚರ್ಚೆಗೆ ಅವಕಾಶ ಕೊಟ್ಟ ಮೇಲೆ ಮುನಿರತ್ನ ಸಂಬಂಧ ಚರ್ಚೆಗೆ ಅವಕಾಶ ನೀಡಲಿ. ವಕ್ಫ್ ಬೋರ್ಡ್, ಬಾಣಂತಿ ವಿಚಾರ ಚರ್ಚೆಗೆ ಬರಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಸೋಮವಾರದಿಂದ ಸದನ ನಡೆದಿದೆ. ಯಾವುದೇ ನಿಯಮಗಳಂತೆ ಸದನ ನಡೆಯುತ್ತಿಲ್ಲ. ಇಂದು ಅಜೆಂಡಾದಲ್ಲಿ ವಕ್ಫ್ ವಿಚಾರ ಇದೆ. ನಾನು ಸೋಮವಾರ ಚರ್ಚೆಗೆ ಕೊಟ್ಟಿದ್ದೆ ಪ್ರಶ್ನೋತ್ತರ ಆಗುತ್ತಲೇ ನಿಲುವಳಿಗೆ ಕೊಡ್ತಾರೆ. ಹಿರಿಯರ ಚಿತಾವಣೆಯಂತೆ ಸದನ ನಡೆದಿದೆ. ಬೇಕೆಂದೇ ಸದನ ನಡೆಯದಂತೆ ತಡೆಯುತ್ತಿದ್ದಾರೆ. ಸದನದ ಸಮಯವನ್ನು ಹಾಳುಮಾಡ್ತಿದ್ದಾರೆ. ಅದಕ್ಕೆ ನಾವು ಸಭಾತ್ಯಾಗ ಮಾಡಿದ್ದೇವೆ ಎಂದರು.
ಸ್ಪೀಕರ್ ಮಾತಿಗೆ ಶಾಸಕರು ಬೆಲೆ ಕೊಡ್ತಿಲ್ಲ.ಅವರಿಗೆ ಸದನವನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ. ರೈತರು ಇಂದು ಸಾಯುತ್ತಿದ್ದಾರೆ. ಬಾಣಂತಿಯರ ಸಾವು ನಡೆದಿದ್ದು ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ನಾನು 26 ವರ್ಷಗಳಿಂದ ಸದನದಲ್ಲಿ ಇದ್ದೇನೆ ಇಂತಹ ಸನ್ನಿವೇಶ ನೋಡಿಲ್ಲ ಎಂದರು.
ಬೆಂಗಳೂರು: ಅತಿಥಿ ಶಿಕ್ಷಕರು (Guest Teachers) ಮತ್ತು ಉಪನ್ಯಾಸಕರ ಸಂಭಾವನೆ ಹೆಚ್ಚಳ ಮಾಡುವ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚೆ ಮಾಡೋದಾಗಿ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಪ್ರಶ್ನೆ ಕೇಳಿದ್ರು. ರಾಜ್ಯದ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಸೂಕ್ತ ಸಂಭಾವನೆ ಸಿಗುತ್ತಿಲ್ಲ. ಮಾಸಿಕ ಸಂಭಾವನೆ ಹೆಚ್ಚು ಮಾಡಬೇಕು. ಅತಿಥಿ ಶಿಕ್ಷಕರಿಗೆ ಮತ್ತು ಉಪಸ್ಯಾಕರಿಗೆ ಗ್ರೂಪ್-ಡಿ ಸಿಬ್ಬಂದಿ, ಸೆಕ್ಯುರಿಟಿಗಳಿಗೆ ಸಿಗೋ ಸಂಬಳ ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ಸಂಬಳ ಜಾಸ್ತಿ ಮಾಡಬೇಕು ಅಂತ ಒತ್ತಾಯ ಮಾಡಿದ್ರು.
ಈಗಾಗಲೇ ಆರ್ಥಿಕ ಇಲಾಖೆಗೆ ಮನವಿ ಮಾಡಿದ್ವಿ. ಆದ್ರೆ ಅವರು ಕಡತ ವಾಪಸ್ ಕಳಿಸಿದ್ದಾರೆ. ಮತ್ತೊಮ್ಮೆ ನಾನು ಆರ್ಥಿಕ ಇಲಾಖೆಗೆ ಮನವಿ ಮಾಡ್ತೀನಿ. ಅತಿಥಿ ಶಿಕ್ಷಕರಿಗೆ ವೇತನ ಹೆಚ್ಚಳ ಆಗಬೇಕು. ಆರ್ಥಿಕ ಇಲಾಖೆ ಜೊತೆ ಮಾತಾಡಿ ವೇತನ ಹೆಚ್ಚಳ ಮಾಡೋ ಬಗ್ಗೆ ಕ್ರಮವಹಿಸುತ್ತೇವೆ ಎಂದರು. ಇದನ್ನೂ ಓದಿ: ಬೆಳಗಾವಿ| ವಿಧಾನಸಭೆ ಸಭಾಧ್ಯಕ್ಷರಿಗೆ ನೂತನ ಪೀಠ – ವಿಶೇಷತೆ ವಿವರಿಸಿದ ಯು.ಟಿ.ಖಾದರ್
ಬೆಂಗಳೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿರೋ ವಿಚಾರ ವಿಧಾನ ಪರಿಷತ್ ನಲ್ಲಿ ಇಂದು ಪ್ರಸ್ತಾಪ ಆಯ್ತು. ಶುಲ್ಕ ಏರಿಕೆಯನ್ನ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ (TA Saravana) ಪ್ರಶ್ನೆ ಕೇಳಿದ್ರು. ಈ ಸರ್ಕಾರ, ಸಿಎಂ ಅವರು ಯಾವುದಕ್ಕೂ ಜಗ್ಗಲ್ಲ, ಬಗ್ಗೊಲ್ಲ ಅಂತಾರೆ. ಸರ್ಕಾರಿ ಆಸ್ಪತ್ರೆಗಳಿಗೆ (Government Hospital) ಜನ ದುಡ್ಡು ಇಲ್ಲ ಅಂತ ಹೋಗೋದು. ಈಗ ಆಸ್ಪತ್ರೆಗಳ ಶುಲ್ಕ 3 ಪಟ್ಟು ಹಣ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿಗಳನ್ನ ಕೊಡ್ತಿದ್ದೀರಾ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ ಈ ಸರ್ಕಾರ. ಬಡವರಿಗೆ ಮಾತ್ರ ಹಣ ಜಾಸ್ತಿ ಮಾಡಿದ್ದೀರಾ? ಸರ್ಕಾರಿ ಆಸ್ಪತ್ರೆಯಲ್ಲಿ ಇರೋ VIP ಕೊಠಡಿಗೆ ಶುಲ್ಕ ಜಾಸ್ತಿ ಮಾಡಿಲ್ಲ. ಕೂಡಲೇ ಆಸ್ಪತ್ರೆಗಳ ದರ ಹೆಚ್ಚಳ ಮಾಡಿರೋ ಆದೇಶ ವಾಪಸ್ ತೆಗೆದುಕೊಳ್ಳಿ ಅಂತ ಶರವಣ ಆಗ್ರಹ ಮಾಡಿದ್ರು. ಇದನ್ನೂ ಓದಿ: ಎರಡೂವರೆ ತಿಂಗಳಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಪದೋನ್ನತಿ: ಮಧು ಬಂಗಾರಪ್ಪ
ಇದಕ್ಕೆ ಸಚಿವ ಶರಣು ಪ್ರಕಾಶ್ ಪಾಟೀಲ್ (Sharanu Prakash Patil) ಉತ್ತರ ನೀಡಿ, 2 ಪಟ್ಟು 3 ಪಟ್ಟು ನಾನು ಶುಲ್ಕವನ್ನು ಹೆಚ್ಚಳ ಮಾಡಿಲ್ಲ. 20% ಮಾತ್ರ ಶುಲ್ಕ ಪರಿಷ್ಕರಣೆ ಮಾಡಿದ್ದೇವೆ. ಶುಲ್ಕ ಹೆಚ್ಚಳ ಮಾಡಿರೋದು ಸತ್ಯ. ಆದ್ರೆ ಇದು ಸರ್ಕಾರದ ಮಟ್ಟದಲ್ಲಿ ಮಾಡಿಲ್ಲ. ಸಂಸ್ಥೆ ಮಟ್ಟದಲ್ಲಿ ಜಾಸ್ತಿ ಆಗಿದೆ. 3 ವರ್ಷಕ್ಕೆ ಪರಿಷ್ಕರಣೆ ಆಗಬೇಕಿತ್ತು. ಕೋವಿಡ್ ಹಿನ್ನಲೆಯಲ್ಲಿ ಆಗಿರಲಿಲ್ಲ ಈಗ 6 ವರ್ಷಗಳ ನಂತರ ಜಾಸ್ತಿ ಮಾಡಿದ್ದೇವೆ ಎಂದರು. ಶುಲ್ಕ ಹೆಚ್ಚಳದಿಂದ ಬಡವರಿಗೆ ಸಮಸ್ಯೆ ಆಗಿಲ್ಲ ಅಂತ ಸರ್ಕಾರಿ ಆಸ್ಪತ್ರೆಗಳ ಶುಲ್ಕ ಸಮರ್ಥನೆ ಮಾಡಿಕೊಂಡ್ರು. ಇದನ್ನೂ ಓದಿ: ಬಿಜೆಪಿಯವ್ರು ಮುಸ್ಲಿಂ ಮೀಸಲಾತಿ ಹಿಂಪಡೆದು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಿದ್ರು: ಸಿಎಂ
ಬೆಂಗಳೂರು: ಬಾಂಗ್ಲಾದೇಶದವರಿಗೂ ರಾಜ್ಯದಲ್ಲಿ BPL ಕಾರ್ಡ್ ಕೊಡಲಾಗಿದೆ ಅಂತ ಬಿಜೆಪಿ ಸದಸ್ಯ ಸಿಟಿ ರವಿ (CT Ravi) ಆರೋಪ ಮಾಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸದಸ್ಯರು ರೇಷನ್ ಕಾರ್ಡ್ (Ration Card) ಗೊಂದಲದ ಬಗ್ಗೆ ಪ್ರಶ್ನೆ ಕೇಳಿದ್ರು. ಈ ವೇಳೆ ಬಾಂಗ್ಲಾದೇಶದವರಿಗೂ ಬಿಪಿಎಲ್ ಕಾರ್ಡ್ ಕೊಡಲಾಗಿದೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ
ಜೆಡಿಎಸ್ ಸದಸ್ಯ ಜವರಾಯಿಗೌಡ ಮಾತಾಡಿ, ರಾಜ್ಯದಲ್ಲಿ 40 ಲಕ್ಷ ಬೋಗಸ್ ಕಾರ್ಡ್ ಇದೆ ಅಂತ ಹೇಳಲಾಗ್ತಿದೆ. ಈ ಬೋಗಸ್ ಕಾರ್ಡ್ ಕೊಟ್ಟ ಅಧಿಕಾರಗಳ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಾಂಗ್ರೆಸ್ ನ ಐವಾನ್ ಡಿಸೋಜಾ, BPL ಕಾರ್ಡ್ ರದ್ದು ಮಾಡೋಕೆ ಇರೋ ಮಾನದಂಡ ಸರಿಯಿಲ್ಲ. ಜೀವನೋಪಾಯಕ್ಕಾಗಿ ಸ್ವಂತ ವಾಹನ ಇರೋ ಅಂಶ ಪ್ರಸ್ತಾಪ ಮಾಡಿರೋದು ಸರಿಯಲ್ಲ. ಈ ಮಾನದಂಡ ಸರಿ ಮಾಡಬೇಕು ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿ.ಟಿ ರವಿ, 5 ಕೋಟಿಗೂ ಹೆಚ್ಚು ಜನ ರೇಷನ್ ಪಡೆಯುತ್ತಿದ್ದಾರೆ. ಅಷ್ಟೊಂದು ಬಡವರು ರಾಜ್ಯದಲ್ಲಿ ಇದ್ದಾರಾ? ಹಾಗಾದರೆ ಕರ್ನಾಟಕ ಸಂವೃದ್ಧಿ ಹೇಗೆ ಆಗುತ್ತದೆ? ಕಾಳಸಂತೆಗೆ ಅಕ್ಕಿ ಹೇಗೆ ಬರ್ತಿದೆ? ಇದಕ್ಕೆ ನಾವೇ ದಾರಿ ಮಾಡಿಕೊಟ್ಟಂತೆ ಕಾಣ್ತಿದೆ. ಇದನ್ನ ನಿಯಂತ್ರಣ ಮಾಡಲು ಸರ್ಕಾರದ ಕ್ರಮ ಏನು? ಅಂತ ಪ್ರಶ್ನೆ ಮಾಡಿದ್ರು.
ಬಳಿಕ ಜೆಡಿಎಸ್ ಶರವಣ ಮಾತಾಡಿ, ಸರ್ಕಾರ ಯಾರಿಗೆ ಕಾರ್ಡ್ ರದ್ದು ಮಾಡುತ್ತದೆ ಅಂತ ಸ್ಪಷ್ಟಪಡಿಸಬೇಕು. ಯಾವುದು ನಿಯಮ ಅಂತ ಸ್ಪಷ್ಟವಾಗಿ ಹೇಳಿಕೆ. ಬೆಂಗಳೂರಿನಲ್ಲಿ ಪಡಿತರ ಅಂಗಡಿಯವರು ಜನರಿಂದ ಒಂದು ಕಾರ್ಡ್‌ಗೆ 20 ರೂ. ವಸೂಲಿ ಮಾಡ್ತಿದ್ದಾರೆ. ಇದಕ್ಕೆ ಸರ್ಕಾರದ ಅನುಮತಿ ಇದೆಯಾ? ಬಡವರಿಗೆ ಕೊಟ್ಟ ಅಕ್ಕಿ ಉಳಿದ ಮೇಲೆ ಖಾಸಗಿ ಅವರಿಗೆ ಮಾರಾಟ ಮಾಡಲಾಗ್ತಿದೆ. ಇಂತಹವರ ವಿರುದ್ಧ ಸರ್ಕಾರದ ಕ್ರಮ ಏನು ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: 9 ಕಂಪನಿಗಳಿಗೆ ನೀಡಿರೋ 5,150 ಎಕ್ರೆ ಗುತ್ತಿಗೆ ಅರಣ್ಯ ಭೂಮಿ ವಶಕ್ಕೆ ಕ್ರಮ: ಈಶ್ವರ್ ಖಂಡ್ರೆ
ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ಅರ್ಹರೆ ಇಲ್ಲದ 13 ಲಕ್ಷ ಕಾರ್ಡ್ ಪರಿಷ್ಕರಣೆ ಮಾಡೋಕೆ ಹೋದೆ. ಇದರಲ್ಲಿ 3,35,463 ಅನರ್ಹರು ಅಂತ ಬಂತು. ಒಂದು ಕಾರ್ಡ್ ರದ್ದಾದ್ರೆ ಟಿವಿಗೆ ಹೋಗ್ತಾರೆ. ಎಲ್ಲ ಪಕ್ಷದವರು ಸಹಕಾರ ಕೊಟ್ರೆ 3 ತಿಂಗಳಲ್ಲಿ ಎಲ್ಲವೂ ಸರಿ ಮಾಡ್ತೀನಿ. ನಾನು ಸರಿ ಮಾಡಲು ಹೋದಾಗ ಟಿವಿಯಲ್ಲಿ ಸುದ್ದಿ ಆಯ್ತು. ಆ ಮೇಲೆ ನಾನು ಕಾರ್ಡ್ ರದ್ದು ಮಾಡೋದು ಪ್ರಕ್ರಿಯೆ ಬಿಟ್ಟೆ. 20% ಕಾರ್ಡ್ ಅಹರ್ತೆ ಇಲ್ಲದೆ ಇರೋರಿಗೆ ಕಾರ್ಡ್ ಇದೆ. ಇದನ್ನ ಪರಿಷ್ಕರಣೆ ಮಾಡಬೇಕು ಎಂದರು.
ರೇಷನ್ ಕಾರ್ಡ್ ಅಂಗಡಿಯಲ್ಲಿ 20 ರೂ. ತೆಗೆದುಕೊಳ್ಳೋ ಹಾಗೆ ಇಲ್ಲ. ಸರ್ಕಾರ ಯಾವುದೇ ಹಣ ಸಂಗ್ರಹ ಮಾಡುತ್ತಿಲ್ಲ. ಯಾರಾದ್ರು ದೂರು ಕೊಟ್ರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಸಚಿವರ ಮಾತಿಗೆ ಬಿಜೆಪಿ ಸದಸ್ಯ ಸಿಟಿ ರವಿ ವಿರೋಧ ವ್ಯಕ್ತಪಡಿಸಿದರು. ಕೂಲಿ ಮಾಡೋರ ಕಾರ್ಡ್ ರದ್ದು ಮಾಡಿದರೆ ನಾವು ಟಿವಿಗೆ ಹೋಗ್ತೀವಿ. ಅರ್ಹತೆ ಇಲ್ಲದೇ ಇದ್ದೋರ ಕಾರ್ಡ್ ರದ್ದು ಮಾಡಿ. ಯಾರಿಗೆ ಹೆದರುತ್ತಿದ್ದೀರಾ? ಬಾಂಗ್ಲಾದೇಶದವರಿಗೆಲ್ಲ ಇಲ್ಲಿ Bpl ಕಾರ್ಡ್ ಕೊಟ್ಟಿದ್ದಾರೆ ಅದನ್ನ ರದ್ದು ಮಾಡಿ. ಬಾಂಗ್ಲಾದೇಶದವರಿಗೂ ಇಲ್ಲಿ ಕಾರ್ಡ್ ಕೊಟ್ಟಿದ್ದಾರೆ ಅಂತ ಆರೋಪ ಮಾಡಿದ್ರು.
ಸಚಿವ ಪ್ರಿಯಾಂಕ್ ಖರ್ಗೆ ಸಿಟಿ ರವಿ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ಬಾಂಗ್ಲಾದೇಶದಿಂದ ಇಲ್ಲಿ ಒಳಗೆ ಬರಲಿ ಬಿಟ್ಟಿದ್ದು ಯಾರು ಎಂದ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ರು. ಈ ವೇಳೆ ಸಿಟಿ ರವಿ-ಪ್ರಿಯಾಂಕ್ ಖರ್ಗೆ ನಡುವೆ ಮಾತಿನ ಚಕಮಕಿ ನಡೀತು. ಸಭಾಪತಿಗಳು ಮಧ್ಯೆ ಪ್ರವೇಶ ಮಾಡಿ ವಾತಾವರಣ ತಿಳಿ ಮಾಡಿದ್ರು. ಇದನ್ನೂ ಓದಿ: ಬಿಜೆಪಿಯವ್ರು ಮುಸ್ಲಿಂ ಮೀಸಲಾತಿ ಹಿಂಪಡೆದು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಿದ್ರು: ಸಿಎಂ
ಬೆಳಗಾವಿ/ಬೆಂಗಳೂರು: ಬಿಜೆಪಿಯವ್ರು (BJP) ಈ ಹಿಂದೆ ಅಧಿಕಾರದಲ್ಲಿದ್ದಾಗ ಮುಸ್ಲಿಂ ಸಮುದಾಯದ (Muslim Community) ಶೇ.4ರಷ್ಟು ಮೀಸಲಾತಿ ವಾಪಸ್ ಪಡೆದು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳಿಗೆ ಹಂಚಿಕೆ ಮಾಡಿದ್ರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಬೆಳಗಾವಿ ಚಳಿಗಾಲ ಅಧಿವೇಶನದ (Belagavi Winter Session)ಮೊದಲ ದಿನ ಸದನದಲ್ಲಿ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಕುರಿತು ಸಿಎಂ ಮಾತನಾಡಿದರು. ಪಂಚಮಸಾಲಿ (Panchamasali) ಸಮುದಾಯದ 2ಎ ಮೀಸಲಾತಿ ವಿಚಾರವಾಗಿ ಹಿಂದಿನ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್ ಹಾಗೂ ನ್ಯಾಯಾಲಯದ ಆದೇಶವನ್ನು ಸದನದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗಾವಿ| ವಿಧಾನಸಭೆ ಸಭಾಧ್ಯಕ್ಷರಿಗೆ ನೂತನ ಪೀಠ – ವಿಶೇಷತೆ ವಿವರಿಸಿದ ಯು.ಟಿ.ಖಾದರ್
ಪಂಚಮಸಾಲಿಗಳನ್ನು 2ಎ ಸೇರಿಸಲು ಬಹಳ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಪಂಚಮಸಾಲಿಗಳು ಮೀಸಲಾತಿ ಕೇಳಲು ನಾನು ಅಡ್ಡಿಯಾಗಿಲ್ಲ ಎಂದರು. ಈ ವೇಳೆ ಸ್ಪಷ್ಟನೆ ನೀಡಿದ ಗೃಹ ಸಚಿವರು 5,000 ಟ್ರ‍್ಯಾಕ್ಟರ್‌ಗಳನ್ನು ತರಲು ಮುಂದಾಗಿದ್ದಾರೆ. ಹಾಗಾಗಿ ಲಾ ಅಂಡ್ ಆರ್ಡರ್ ಸಮಸ್ಯೆ ಆಗುತ್ತೆ ಅಂತ ಅನುಮತಿ ಕೊಡಲಿಲ್ಲ. ನಂತರ ಜನ ಬರ್ತಾರೆ ವಾಹನಗಳಲ್ಲಿ ಅಂದ್ರು, ಜನ ಬರೋ ವಾಹನಗಳಿಗೂ ನಾವು ಮಿತಿ ಹಾಕಿದ್ದೇವೆ. ಪ್ರತಿಭಟನೆ ಮಾಡಲು ಅಡ್ಡಿ ಇಲ್ಲ, ಆದ್ರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಷ್ಟೇ ಎಂದು ಗೃಹಸಚಿವರು ತಿಳಿಸಿದ್ರು. ಇದನ್ನೂ ಓದಿ: ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ
ಬಳಿಕ ಮಾತು ಮುಂದುವರಿಸಿದ ಸಿಎ, ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಎಂದು ವಿಂಗಡಸಲಾಗಿದೆ. ವೀರಶೈವ ಲಿಂಗಾಯಿತ ಹಾಗೂ ಪಂಚಮಸಾಲಿ ಜಾತಿಗಳು 3ಬಿ ಅಡಿ ಮೀಸಲಾತಿ ಪಡೆಯುತ್ತಿವೆ. ಪಂಚಮಸಾಲಿಗಳನ್ನು 2ಎ ಸೇರಿಸಲು ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಮುಂದೆ ಮೀಸಲಾತಿ ವಿಚಾರವನ್ನು ಮಂಡಿಸುವಂತೆ ಪಂಚಮಸಾಲಿ ಹೋರಟಗಾರರಿಗೆ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: 9 ಕಂಪನಿಗಳಿಗೆ ನೀಡಿರೋ 5,150 ಎಕ್ರೆ ಗುತ್ತಿಗೆ ಅರಣ್ಯ ಭೂಮಿ ವಶಕ್ಕೆ ಕ್ರಮ: ಈಶ್ವರ್ ಖಂಡ್ರೆ
ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪಂಚಮಸಾಲಿಗಳನ್ನು 2ಎ ಸೇರಿಸಿಲ್ಲ ಬದಲಾಗಿ, ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, 3ಎ ಹಾಗೂ 3ಬಿ ಗೆ ತಲಾ ಶೇ.2 ರಂತೆ ಮೀಸಲಾತಿ ಹಂಚಿಕೆ ಮಾಡಿತ್ತು. ಇದನ್ನು ಆಕ್ಷೇಪಿಸಿ ಮುಸ್ಲಿಮರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಮರ ಮೀಸಲಾತಿ ರದ್ದುಪಡಿಸುವುದಿಲ್ಲ. ಯತಾಸ್ಥಿತಿ ಮುಂದುವರಿಸಿಕೊಂಡು ಹೋಗುವುದಾಗಿ ಅಫಿಡವಿಡ್ ಸಲ್ಲಿಸಿದೆ. ಇದರ ಆಧಾರದ ಮೇಲೆ ಕೋರ್ಟ್ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಇದರ ಪ್ರತಿಯನ್ನು ನಾಳೆಯೇ ಸದನದ ಮುಂದೆ ಮಂಡಿಸುತ್ತೇನೆ ಎಂದು ಹೇಳಿದರು.
– 9 ಕಂಪನಿಗಳಿಂದ ಒಟ್ಟು 1,492.18 ಕೋಟಿ ರೂ. ಬಡ್ಡಿ, ದಂಡ ಬಾಕಿ
ಬೆಂಗಳೂರು: ಬ್ರಿಟಿಷರ ಕಾಲದಲ್ಲಿ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 9 ಕಂಪನಿಗಳಿಗೆ ಬ್ರಿಟಿಷರ ಕಾಲದಲ್ಲಿ ಗುತ್ತಿಗೆ ನೀಡಲಾಗಿರುವ ಸುಮಾರು 5,150 ಎಕರೆ ಅರಣ್ಯ ಭೂಮಿಯ(Forest Land) ಮರು ವಶಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕುಶಾಲಪ್ಪ (Kushalappa) ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರ ನೀಡಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಮರ್ಕೆರಾ ರಬ್ಬರ್ ಕಂಪನಿ (1074 ಎಕರೆ), ನೀಲಾಂಬುರ್ ರಬ್ಬರ್ ಕಂಪನಿಗೆ (713.03 ಎಕರೆ), ಥಾಮ್ಸನ್ ರಬ್ಬರ್ ಕಂಪನಿ (625 ಎಕರೆ), ಪೋರ್ಟ್ ಲ್ಯಾಂಡ್ ರಬ್ಬರ್ ಕಂಪನಿ (1289.29 ಎಕರೆ), ಟಾಟಾ ಕಾಫಿ ಲಿ. (923.378 ಎಕರೆ), ಗೈನ್ ಲೋರೆನ್ ಪ್ಲಾಂಟೇಷನ್ (279.748 ಎಕರೆ), ಚಾಮರಾಜನಗರ ಜಿಲ್ಲೆಯ ಎಮರಾಲ್ಡ್ ಹೆವೆನ್ ಎಸ್ಟೇಟ್, ಬೇಡಗುಳಿ (37.25 ಎಕರೆ), ಬಿಳಿಗಿರಿ ರಂಗನ ಎಸ್ಟೇಟ್, ಬೇಡಗುಳಿ (25 ಎಕರೆ), ನೀಲಗಿರಿ ಪ್ಲಾಂಟೇಷನ್ ಲಿ. ಹೊನ್ನಮೇಟಿ 184 ಎಕರೆ ಸೇರಿ ಒಟ್ಟು 5150 ಎಕರೆ ಜಮೀನನ್ನು ಗುತ್ತಿಗೆ ನೀಡಲಾಗಿದೆ ಎಂದು ವಿವರಿಸಿದರು.
ಈ ಕಂಪನಿಗಳು ಹಲವು ದಶಕಗಳಿಂದ ಗುತ್ತಿಗೆ ಹಣವನ್ನೂ ಪಾವತಿಸಿರುವುದಿಲ್ಲ. ಈ 9 ಕಂಪನಿಗಳಿಂದ ಇಲಾಖೆಗೆ ಬಡ್ಡಿ ಮತ್ತು ದಂಡ ಸೇರಿ ಒಟ್ಟು 1492.18 ಕೋಟಿ ರೂ. ಬರಬೇಕಿದೆ ಎಂದೂ ತಿಳಿಸಿದರು. ಕಂಪನಿಗಳು ತಮಗೆ 999 ವರ್ಷಗಳಿಗೆ ಲೀಸ್ ನೀಡಲಾಗಿತ್ತು ಎಂದು ಕಂಪನಿಗಳು ವಾದಿಸುತ್ತಿದ್ದವು. 2012ರಲ್ಲಿ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿ ಈ ಗುತ್ತಿಗೆ ಅವಧಿಯನ್ನು 99 ವರ್ಷಕ್ಕೆ ತಗ್ಗಿಸಿದ್ದು, ಅವಧಿ ಮುಗಿದ ಗುತ್ತಿಗೆ ಅರಣ್ಯ ಭೂಮಿಯ ಮರು ವಶಕ್ಕೆ ನೋಟಿಸ್ ನೀಡಿತ್ತು. ಆ ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದು, ಪ್ರಸ್ತುತ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇದೇ ಡಿ.12ರಂದು ವಿಚಾರಣೆಗೆ ಬರಲಿದೆ ಎಂದೂ ಮಾಹಿತಿ ನೀಡಿದರು.
ತಾವು ಸಚಿವರಾದ ಬಳಿಕ ಗುತ್ತಿಗೆ ಅರಣ್ಯ ಭೂಮಿಯ ಮರು ವಶಕ್ಕೆ ಪಡೆಯಲು 5 ಜನ ಸದಸ್ಯರ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಪಡೆಯು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ, ದಾಖಲೆಗಳನ್ನು ಒಗ್ಗೂಡಿಸಿ ಭೂಮಿ ಮರಳಿ ಪಡೆಯಲು ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ
ವಿವಿಧ ಉದ್ದೇಶಗಳಿಗೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಿರುವ ಪ್ರಕರಣಗಳ ಪರಿಶೀಲನೆ, ಗೇಣಿ ವಸೂಲಾತಿ, ಅರಣ್ಯ ಪ್ರದೇಶವನ್ನು ಇಲಾಖೆಗೆ ಹಿಂಪಡೆಯುವ ಬಗ್ಗೆ ಕಾರ್ಯಪಡೆ ಅಧ್ಯಕ್ಷರು ಮತ್ತು ಸದಸ್ಯರು ಹಲವು ಸಭೆ ನಡೆಸಿ, ಆದ್ಯತೆಯ ಆಧಾರದಲ್ಲಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲು ಶ್ರಮಿಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಗ್ರಾಪಂ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿ ಅನರ್ಹ ರೇಷನ್ ಕಾರ್ಡ್ ರದ್ದು: ಮುನಿಯಪ್ಪ
ಬೆಳಗಾವಿ: ಮುಡಾ ಅಕ್ರಮದ (MUDA Scam) ಬಗ್ಗೆ ಜಾರಿ ನಿರ್ದೇಶನಾಲಯ (ED) ಲೋಕಾಯುಕ್ತಕ್ಕೆ ಬರೆದ ಪತ್ರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಗರಂ ಆಗಿದ್ದಾರೆ.
ಇಡಿ ಪತ್ರದ ಬಳಿಕ ಮಾಧ್ಯಮಗಳ ಕೈಗೆ ಸಿಗದೇ ನಾಪತ್ತೆಯಾಗಿದ್ದ ಬೈರತಿ ಸುರೇಶ್ ಇಂದು ಬೆಳಗಾವಿ ಅಧಿವೇಶನದಲ್ಲಿ ಪಬ್ಲಿಕ್ ಟಿವಿಗೆ ಸಿಕ್ಕಿದರು.
ಇಡಿ ಪತ್ರದ ಬಗ್ಗೆ ಕೇಳಿದ್ದಕ್ಕೆ, ಎಲ್ಲವೂ ಸುಳ್ಳು. ನನ್ನ ವಿರುದ್ಧ ವರದಿ ಕೊಟ್ಟಿಲ್ಲ. ಯಾವ ಅಧಿಕಾರಿ 144 ಫೈಲ್ ತಗೆದುಕೊಂಡು ಹೋಗಿದ್ದಾರೆ? ನಾನು ಅಲ್ಲಿಗೆ ಹೋಗಿದ್ದೆ ಅಂತ ಯಾರು ಹೇಳಿದ್ದಾರೆ? ಮುಡಾ ಅಕ್ರಮದಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿ ಕೆಂಡಾಮಂಡಲವಾದರು.
ಇದೇ ವೇಳೆ ಯಾರು ಯಾವುದೇ ಪತ್ರ ಬರೆದಿಲ್ಲ. ಅಧಿಕೃತವಾಗಿ ಇಡಿ ಪತ್ರ ಬರೆದಿದ್ಯಾ? ಪತ್ರ ಎಲ್ಲವೂ ಮಾಧ್ಯಮ ಸೃಷ್ಟಿ ಎಂದು ಹೇಳಿ ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದರು.