Tag: Belagavi Rural

  • ಸಿಎಂ ಸಿದ್ದರಾಮಯ್ಯರಿಂದ ಎಎಸ್‌ಪಿಗೆ ಅಪಮಾನ – ಬಿಜೆಪಿಯಿಂದ ರಾಜಕೀಯಕ್ಕೆ ಭರಮನಿ ಎಂಟ್ರಿ?

    ಸಿಎಂ ಸಿದ್ದರಾಮಯ್ಯರಿಂದ ಎಎಸ್‌ಪಿಗೆ ಅಪಮಾನ – ಬಿಜೆಪಿಯಿಂದ ರಾಜಕೀಯಕ್ಕೆ ಭರಮನಿ ಎಂಟ್ರಿ?

    – ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಯಲು ಪ್ಲ್ಯಾನ್?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದ ಅಪಮಾನಕ್ಕೆ ಒಳಗಾದ ಎಎಸ್‌ಪಿ ನಾರಾಯಣ ಭರಮನಿ (Narayan Barmani) ಸ್ವಯಂ ನಿವೃತ್ತಿಗೆ ಮುಂದಾಗಿದ್ದು, ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ವೇದಿಕೆ ಮೇಲೆಯೇ ಸಿಎಂ ಅವರಿಂದ ಅವಮಾನಕ್ಕೊಳಗಾದ ಎಎಸ್‌ಪಿ ಭರಮನಿಯವರ ಸ್ವಯಂ ನಿವೃತ್ತಿಯ ರಾಜೀನಾಮೆ ಪತ್ರ ಹಿಂಪಡೆಯಲು ಇನ್ನೊಂದೇ ದಿನ ಬಾಕಿ ಇದೆ. ಇದೇ ತಿಂಗಳ 6 ರಂದು (ಭಾನುವಾರ) ರಾಜೀನಾಮೆ ಪತ್ರ ಹಿಂಪಡೆಯದಿದ್ದಲ್ಲಿ ರಾಜೀನಾಮೆ ಅಂಗೀಕರಿಸುವಂತೆ ಗೃಹ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಸರ್ಕಾರದಿಂದ ಮತ್ತೊಂದು ಯಡವಟ್ಟು ನಡೆ – ಎಎಸ್‌ಪಿ ಬರಮಣ್ಣಿ ಸ್ವಯಂ ನಿವೃತ್ತಿ ಅಂಗೀಕಾರಕ್ಕೆ ಸೂಚನೆ

    ಆದರೆ, ಈವರೆಗೆ ಎಎಸ್‌ಪಿ ರಾಜೀನಾಮೆ ಹಿಂಪಡೆಯದೆ ಇರೋದು ನಿವೃತ್ತಿ ಬಳಿಕ ರಾಜಕೀಯ ಎಂಟ್ರಿಗೆ ವೇದಿಕೆ ರೆಡಿ ಮಾಡಿಕೊಳ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

    ಭರಮನಿ ಅವರು ನಿವೃತ್ತಿ ಬಳಿಕ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಿಆರ್‌ಎಸ್ ಹಿಂದೆ ಚುನಾವಣೆಗೆ ನಿಲ್ಲುವ ಯೋಜನೆ ಇದೆ. ಬಿಜೆಪಿಯಿಂದ ಎಲೆಕ್ಷನ್‌ಗೆ ನಿಂತುಕೊಳ್ಳಲು ವಿಆರ್‌ಎಸ್ ಅಸ್ತ್ರ ಪ್ರಯೋಗಿಸಿದ್ದಾರಾ? ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ಅಪಮಾನ – ಸ್ವಯಂ ನಿವೃತ್ತಿಗೆ ಮುಂದಾದ ಎಎಸ್‌ಪಿ ಬರಮಣ್ಣಿ

    ಬೆಳಗಾವಿಯಲ್ಲೇ ಹೆಚ್ಚು ಅವಧಿ ಸರ್ವಿಸ್ ಮಾಡಿ ಭರಮನಿ ಅವರು ಹೆಸರು ಮಾಡಿದ್ದಾರೆ. ಜನರ ಜೊತೆ ಒಳ್ಳೆ ಒಡನಾಟ ಇಟ್ಟುಕೊಂಡಿದ್ದಾರೆ. ಹೀಗಾಗಿ, ಬೆಳಗಾವಿ ಗ್ರಾಮೀಣ ಅಥವಾ ಬೆಳಗಾವಿಯ ಯಾವುದಾದರು ಕ್ಷೇತ್ರದಿಂದ ಎಲೆಕ್ಷನ್ ಸ್ಪರ್ಧೆಯ ಪ್ಲಾನ್ ನಡೆದಿದೆ ಎನ್ನಲಾಗುತ್ತಿದೆ.

    ಈಗಲೇ ರಾಜೀನಾಮೆ ಅಂಗೀಕಾರವಾದರೆ, ಇನ್ನೂ ಎರಡೂವರೆ ವರ್ಷ ಸಮಯವಿದೆ. ಈ ಅವಧಿಯಲ್ಲಿ ಕ್ಷೇತ್ರದಲ್ಲಿ ನೆಲೆ ಗಟ್ಟಿ ಮಾಡಿಕೊಳ್ಳುವ ಪ್ಲಾನ್ ನಡೆದಿದೆ. ಹೀಗಾಗಿಯೇ ನಾರಾಯಣ ಭರಮನಿ ವಿಆರ್‌ಎಸ್ ಪತ್ರ ಹಿಂಪಡೆಯಲು ಸುತಾರಾಂ ಒಪ್ತಿಲ್ಲ ಎಂಬಂತೆ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ವೇದಿಕೆಯಲ್ಲೇ ಎಎಸ್‌ಪಿ ಮೇಲೆ ಕೈಎತ್ತಿದ ಸಿಎಂ – ಬೆಳಗಾವಿ ʻಕೈʼ ಸಮಾವೇಶದ ವೇಳೆ ಹೈಡ್ರಾಮಾ

  • ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ `ನಯಾ ಫೇಸ್’ ಗೇಮ್- BJP ಹೈಕಮಾಂಡ್ ನಡೆ ಏನು?

    ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ `ನಯಾ ಫೇಸ್’ ಗೇಮ್- BJP ಹೈಕಮಾಂಡ್ ನಡೆ ಏನು?

    ಬೆಂಗಳೂರು/ಬೆಳಗಾವಿ: ನನ್ನದೊಂದು, ಇನ್ನೊಂದು.. ಎರಡು ಕ್ಷೇತ್ರಗಳಲ್ಲಿ ನಂದೇ ಆಟ. ಮರ್ಯಾದೆಯೂ ಹೋಯ್ತು.. ಅಧಿಕಾರ ಹೋಯ್ತು.. ಆದ್ರೀಗ ನಾನು ಗೆಲ್ಲಬೇಕು. ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕ್ಷೇತ್ರದಲ್ಲಿ ನಾನು ಹೇಳಿದವರಿಗೆ ಟಿಕೆಟ್ ಕೊಡಬೇಕೆಂಬ ಹಠಕ್ಕೆ ಬಿದ್ದಂತೆ ರಮೇಶ್ ಜಾರಕಿಹೊಳಿ (Ramesh Jarkiholi) ನಡೆ ಇದೆ.

    ನನ್ನ ಈ ಒಂದು ಮಾತಿಗಾದ್ರೂ ಬೆಲೆ ಕೊಡಿ ಅಂತಾ ರಮೇಶ್ ಜಾರಕಿಹೊಳಿ ಮನವಿ ಮಾಡಿರುವ ಬಗ್ಗೆ ಬಿಜೆಪಿ (BJP) ವೇದಿಕೆಯಲ್ಲಿ ಚರ್ಚೆ ಆಗ್ತಿದೆ. ಹಾಗಾದ್ರೆ ಬೆಳಗಾವಿ (Belagavi) ಗ್ರಾಮೀಣದಲ್ಲಿ ರಮೇಶ್ ಆಟ ಹೇಗೆ ನಡೆಯತ್ತಾ? ಏನಿದೆ ಪ್ಲ್ಯಾನ್? ಎಂಬ ಕುತೂಹಲ ಗರಿಗೆದರಿದೆ. ಇದನ್ನೂ ಓದಿ: OTP ಕೊಟ್ರೆ ರೇಷ್ಮೆ ಸೀರೆ ಗಿಫ್ಟ್ – ಮಹಿಳಾ ಮತದಾರರ ಓಲೈಕೆಗೆ ಹೊಸ ತಂತ್ರ

    ಅಂದಹಾಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೋಟೆಯಲ್ಲಿ ರಮೇಶ್ ಜಾರಕಿಹೊಳಿ ನಯಾ ಫೇಸ್ ಗೇಮ್ ಶುರು ಮಾಡಿದ್ದಾರಂತೆ. ಪದೇ ಪದೇ ಸೋತವರಿಗೆ ಟಿಕೆಟ್ ಕೊಡುವುದು ಬೇಡ, ಹೊಸ ಫೇಸ್‌ಗೆ ಟಿಕೆಟ್ ಕೊಡಿ. ನಾನು ಹೇಳಿದ ಹೊಸ ಫೇಸ್‌ಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಜವಬ್ದಾರಿ ನನ್ನದು ಎಂದು ಮನವಿ ಮಾಡಿದ್ದಾರೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ರಾಜ್ಯದ ರಾಷ್ಟ್ರೀಯ ನಾಯಕರೊಬ್ಬರ ಮುಂದೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿಚಾರದಲ್ಲಿ ಹೊಸ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಸ್ತೆ ಅಗೆದ್ರೆ ಎಂಜಿನಿಯರ್‌ಗಳ ಸಂಬಳ ಕಟ್- ಚುನಾವಣೆ ಹೊತ್ತಲ್ಲೇ BBMP ಖಡಕ್ ಆದೇಶ

    ಬಿಜೆಪಿ ವರಿಷ್ಠರಿಂದ ಸದ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ ಎನ್ನಲಾಗಿದೆ. ಆದಾದ ಬಳಿಕವೇ ರಮೇಶ್ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಬ್ಬರಿಸಿದ್ರು. ವೈಯುಕ್ತಿಕ ಪ್ರತಿಷ್ಠೆಯ ಫೈಟ್‌ಗೆ ವೇದಿಕೆ ಆಗಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡ ರಂಗೇರುತ್ತಿದ್ದು, ಬಿಜೆಪಿಯಲ್ಲಿ ಕಳೆದ ಬಾರಿ ಸೋತಿದ್ದ ಸಂಜಯ್ ಪಾಟೀಲ್‌ಗೆ ಟಿಕೆಟ್ ಕೊಡ್ತಾರೋ? ಅಥವಾ ಹೊಸ ಫೇಸ್ ಹುಡುಕಾಟವೋ? ಎಂಬ ಕುತೂಹಲ ಮನೆ ಮಾಡಿದೆ. ರಮೇಶ್ ಜಾರಕಿಹೊಳಿ ಮಾತಿಗೆ ಹೈಕಮಾಂಡ್ ಮಣೆ ಹಾಕಿದ್ರೆ ರಾಜ್ಯದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಸ್ಟಾರ್ ವಾರ್ ರಿವೇಂಜ್ ಕ್ಷೇತ್ರ ಆಗುತ್ತೆ ಅನ್ನೋದಂತೂ ಪಕ್ಕಾ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k