Tag: belagavi Partition

  • ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಮತ್ತೆ ಉಮೇಶ ಕತ್ತಿ ಒತ್ತಾಯ

    ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಮತ್ತೆ ಉಮೇಶ ಕತ್ತಿ ಒತ್ತಾಯ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆ ವಿಭಜನೆ ಮಾಡುವಂತೆ ಆಹಾರ ಹಾಗೂ ಅರಣ್ಯ ಇಲಾಖೆ ಸಚಿವ ಉಮೇಶ ಕತ್ತಿ ಒತ್ತಾಯಿಸಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋಕಾಕ್ ಬಿಟ್ಟು ಚಿಕ್ಕೋಡಿ ಹಾಗೂ ಬೈಲಹೊಂಗಲ ಜಿಲ್ಲೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ಮೂರು ಭಾಗಗಳಲ್ಲಿ ವಿಭಜನೆ ಆಗಬೇಕಾಗಿದೆ. ಹೀಗಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಇರುವ ಚಿಕ್ಕೋಡಿ ಹಾಗೂ ಬೈಲಹೊಂಗಲ ತಾಲೂಕುಗಳನ್ನು ಜಿಲ್ಲೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಬಳಿ ನಿಯೋಗದೊಂದಿಗೆ ತೆರಳಿ ಭೇಟಿ ಆಗಲಿದ್ದೇನೆ ಎಂದು ತಿಳಿಸಿದ್ದಾರೆ.

    ಅಥಣಿ, ರಾಯಬಾಗ, ಕುಡಚಿ, ಕಾಗವಾಡ, ನಿಪ್ಪಾಣಿ, ಚಿಕ್ಕೋಡಿ ವಿಧಾನಸಭಾ ಕ್ಷೇತ್ರಗಳು ಸೇರಿ ಚಿಕ್ಕೋಡಿ ಜಿಲ್ಲೆ, ಗೋಕಾಕ, ಸವದತ್ತಿ, ಕಿತ್ತೂರು, ರಾಮದುರ್ಗ, ಬೈಲಹೊಂಗಲ, ಅರಭಾಂವಿ ಸೇರಿ ಬೈಲಹೊಂಗಲ ಜಿಲ್ಲೆ, ಹುಕ್ಕೇರಿ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪೂರ, ಯಮಕನಮರಡಿ ಸೇರಿ ಬೆಳಗಾವಿ ಜಿಲ್ಲೆ ಮಾಡಬೇಕು ಎಂದರು. ಇದನ್ನೂ ಓದಿ: ಸೌಹಾರ್ದತೆ ಕೆಡಿಸುವ ಕೆಲಸ ಬಿಜೆಪಿಗೆ ತಿರುಗುಬಾಣ ಆಗುತ್ತೆ: ಸಿದ್ದರಾಮಯ್ಯ

    ಈ ಕುರಿತು ಶೀಘ್ರದಲ್ಲೇ ಸಿಎಂ ಭೇಟಿ ಆಗಿ ಮನವಿ ಮಾಡುತ್ತೇನೆ. ಗೋಕಾಕ್ ಜಿಲ್ಲೆ ಮಾಡುವಂತೆ ಹಲವು ದಿನಗಳಿಂದ ಹೋರಾಟ ನಡೆದಿತ್ತು. ಈ ಹಿಂದೆ ಗೋಕಾಕ್ ಜಿಲ್ಲೆ ಮಾಡುವ ಭರವಸೆಯನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ನೀಡಿದ್ದರು. ಹೀಗಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಶಾಕ್ ನೀಡಲು ಸಚಿವ ಉಮೇಶ ಕತ್ತಿ ಮುಂದಾಗಿದ್ದಾರೆ. ಸದ್ಯ ಜಿಲ್ಲಾ ಹೋರಾಟದಲ್ಲಿ ಕತ್ತಿ ಮತ್ತು ಜಾರಕಿಹೊಳಿ ನಡುವೆ ಫೈಟ್ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದನ್ನೂ ಓದಿ: ನಸುಕಿನಲ್ಲಿ ಸುಪ್ರಭಾತ, ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ, ಇಂದಿನದಲ್ಲ: ಕುಮಾರಸ್ವಾಮಿ