Tag: belagavi farmers

  • ಕಟ್ಟಡದ ಟೆರೇಸ್ ಮೇಲಿಂದ ಗ್ಯಾಲರಿಗೆ ಹಗ್ಗ ಕಟ್ಟಿ ನೇಣು ಬಿಗಿದು ವೃದ್ಧ ಆತ್ಮಹತ್ಯೆ

    ಕಟ್ಟಡದ ಟೆರೇಸ್ ಮೇಲಿಂದ ಗ್ಯಾಲರಿಗೆ ಹಗ್ಗ ಕಟ್ಟಿ ನೇಣು ಬಿಗಿದು ವೃದ್ಧ ಆತ್ಮಹತ್ಯೆ

    ಬೆಳಗಾವಿ: ವೃದ್ಧನೊಬ್ಬ ಟೆರೇಸ್ ಮೇಲೆ ಹತ್ತಿ ಗ್ಯಾಲರಿಗೆ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಶಾಹುನಗರದಲ್ಲಿ ನಡೆದಿದೆ.

    ಶಿವಾಜಿ ಬಿರ್ಜೆ(65) ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಈತ ನಗರದ ಶಾಹುನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಖಾಸಗಿ ಕಾಲೇಜಿನ ಹಾಸ್ಟೆಲ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಶಿವಾಜಿ ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಆದರೆ ಇಂದು ಟೆರೇಸ್ ಮೇಲೆ ಹತ್ತಿ ಗ್ಯಾಲರಿಗೆ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡ ವೃದ್ಧನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಮೇಲಿಂದ ಬಿದ್ದ ಯುವಕ!

    ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಕಟ್ಟಡದ ಮೇಲೆ ಶವ ನೇತಾಡುವುದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: 45,000 ಸಾವಿರ ಬದಲಿಗೆ 1.42 ಕೋಟಿ ಸ್ಯಾಲರಿ ಹಾಕಿದ ಕಂಪನಿ – ಹಣ ಜೊತೆ ಉದ್ಯೋಗಿ ಎಸ್ಕೇಪ್

    Live Tv

  • ಕೈಮುಗಿದು ಮನವಿ ಮಾಡಿದ್ದೇವೆಯೇ ಹೊರತು, ರೈತರ ಮೇಲೆ ದೌರ್ಜನ್ಯ ಮಾಡಿಲ್ಲ: ಬೆಳಗಾವಿ ಡಿಸಿ

    ಕೈಮುಗಿದು ಮನವಿ ಮಾಡಿದ್ದೇವೆಯೇ ಹೊರತು, ರೈತರ ಮೇಲೆ ದೌರ್ಜನ್ಯ ಮಾಡಿಲ್ಲ: ಬೆಳಗಾವಿ ಡಿಸಿ

    ಬೆಳಗಾವಿ: ರೈತರ ವಿರೋಧದ ನಡುವೆಯೂ ನಡೆದ ಮಚ್ಚೆ – ಹಲಗಾ ಬೈಪಾಸ್ ರಸ್ತೆ ಕಾಮಗಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ರೈತರ ಮನವೊಲಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ನಾನು ರೈತರಿಗೆ ಕೈಮುಗಿದು ಕೇಳಿದ್ದೇನೆಯೇ ಹೊರತು ಯಾರ ಮೇಲೂ ದೌರ್ಜನ್ಯ ಮಾಡಿಲ್ಲ ಎಂದು ಹೇಳಿದ್ದಾರೆ.

    ಜಿಲ್ಲಾಡಳಿತ ಮತ್ತು ಸರ್ಕಾರ ಯಾವಾಗಲೂ ರೈತರ ಜೊತೆಗಿದೆ. ಅಭಿವೃದ್ಧಿಗೆ ಕೈಜೋಡಿಸಬೇಕು. ಯಾರಿಗಾದರೂ ರೈತರಿಗೆ ತೊಂದರೆಯಾಗಿದ್ದರೆ ಜಿಲ್ಲಾಡಳಿತ ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಡಿಸಿ ಮನವಿ ಮಾಡಿದರು. ಇದನ್ನೂ ಓದಿ: ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ ರಕ್ಷಿಸಿದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

    ರೈತರ ವಿರೋಧದ ನಡುವೆಯೂ ಮಚ್ಚೆ-ಹಲಗಾ ಬೈಪಾಸ್‌ ರಸ್ತೆ ಕಾಮಗಾರಿಗೆ ಜಿಲ್ಲಾಡಳಿತ ಮುಂದಾಗಿತ್ತು. ರೈತರನ್ನು ನಿಯಂತ್ರಿಸಲು ನೂರಾರು ಸಂಖ್ಯೆಯಲ್ಲಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿತ್ತು. ಈ ವೇಳೆ ರೈತರು ಕಾಮಗಾರಿ ವಿರೋಧಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಆಗ ರೈತರನ್ನು ಪೊಲೀಸರು ಬಂಧಿಸಲು ಮುಂದಾದರು. ಇದನ್ನೂ ಓದಿ: ಬಿಟ್‍ಕಾಯಿನ್ ಬಗ್ಗೆ ಸುಳ್ಳಿನ ಪ್ರಚಾರ, ಬೇಜವಾಬ್ದಾರಿ ಹೇಳಿಕೆ ನೀಡಿದ್ರೆ ದೂರು: ಟೆಂಗಿನಕಾಯಿ ಮಹೇಶ್

    ಯಾವುದೇ ಕಾರಣಕ್ಕೂ ಫಲವತ್ತಾದ ಜಮೀನನ್ನು ಕಾಮಗಾರಿಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಇದೇ ವೇಳೆ ಪ್ರತಿಭಟನಾನಿರತ ರೈತ, ಕುಡುಗೋಲಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಲು ಮುಂದಾದರು. ಅಲ್ಲದೇ ಮತ್ತೊಬ್ಬ ರೈತ, ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ಘಟನೆ ಗುರುವಾರ ನಡೆದಿತ್ತು. ವಿರೋಧದ ಗಂಭೀರತೆ ಅರಿತ ಜಿಲ್ಲಾಡಳಿತ ಈಗ ರೈತರ ಮನವೊಲಿಸಲು ಮುಂದಾಗಿದೆ.

  • ರೈತರ ಮೇಲೆ ಪೊಲೀಸ್ ದೌರ್ಜನ್ಯ – ಮಹಿಳೆ ಸೀರೆ ಹರಿದುಹಾಕಿದ ಖಾಕಿ

    ರೈತರ ಮೇಲೆ ಪೊಲೀಸ್ ದೌರ್ಜನ್ಯ – ಮಹಿಳೆ ಸೀರೆ ಹರಿದುಹಾಕಿದ ಖಾಕಿ

    – ಬೆಳಗಾವಿಯಲ್ಲಿ ಭೂ ಸ್ವಾಧೀನ ವಿರುದ್ಧ ಹೋರಾಟ
    – ಬೆಂಕಿ ಹಚ್ಚಿಕೊಂಡ ರೈತ

    ಬೆಳಗಾವಿ: ಇಲ್ಲಿನ ಮಚ್ಚೆ-ಹಲಗಾ ಬೈಪಾಸ್‌ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಪೊಲೀಸರು ದಬ್ಬಾಳಿಕೆ ನಡೆಸಿರುವ ಘಟನೆ ನಡೆದಿದೆ.

    ರೈತರ ವಿರೋಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಕಾಮಗಾರಿ ಆರಂಭಿಸಲು ಮುಂದಾಗಿದೆ. ಕಾಮಗಾರಿಗೆ ಸರ್ವೆ ಆದ ಜಮೀನು ಬಿಟ್ಟು ಬೇರೆ ಜಮೀನು ತೆಗೆದುಕೊಂಡಿದ್ದಾರೆಂದು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಫಲವತ್ತಾದ ಜಮೀನು ಬಿಟ್ಟುಕೊಡುವುದಿಲ್ಲ ಎಂದು ರೈತರ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

    ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪೊಲೀಸರ ವಿರುದ್ಧ ರೈತರು, ಮಹಿಳೆಯರು ಆಕ್ರೋಶ ಹೊರಹಾಕಿದರು. ಕಂಕುಳಲ್ಲಿ ಹಸುಗೂಸನ್ನು ಕರೆದುಕೊಂಡು ಬಂದು ರೈತ ಮಹಿಳೆ ಕಣ್ಣೀರು ಹಾಕಿದರು. ಆದರೂ ಪೊಲೀಸರು, ಎರಡು ಪ್ರತ್ಯೇಕ ವಾಹನದಲ್ಲಿ ರೈತರನ್ನು ವಶಕ್ಕೆ ಪಡೆದರು. ಪೊಲೀಸರ ದಬ್ಬಾಳಿಕೆ ವಿರುದ್ಧ ರೈತರು ಕಿಡಿಕಾರಿದರು.

    ಪೊಲೀಸರ ಮುಂದೆಯೇ ಕುಡಗೋಲಿನಿಂದ ಕೊಯ್ದುಕೊಂಡು ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ರೈತನ ಕೈಯಿಂದ ಕುಡಗೋಲು ಕಸಿದುಕೊಳ್ಳಲು ಪೊಲೀಸರು ಹರಸಾಹಸ ಪಟ್ಟರು. ಇತ್ತ ರಸ್ತೆ ಕಾಮಗಾರಿ ವಿರೋಧಿಸಿ ರೈತರ ಪುತ್ರರೊಬ್ಬರು ಮರ ಏರಿ ಕುಳಿತು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ವಿವಾಹ ಮುಗಿಸಿ ವಾಪಸ್ಸಾಗುತ್ತಿದ್ದ ನವಜೋಡಿಗಳಿದ್ದ ವಾಹನ ಪಲ್ಟಿ!

    ಜಮೀನು ಮಾಲೀಕ ಆಕಾಶ್ ಅನಗೋಳಕರ ಅವರು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ರೈತರು ಪೊಲೀಸರ ವಿರುದ್ಧ ತಿರುಗಿ ಬಿದ್ದರು.