Tag: belagavi District administration

  • ಮಹಾರಾಷ್ಟ್ರದಿಂದ ಜನರು ಕಳ್ಳ ಮಾರ್ಗಗಳ ಮೂಲಕ ರಾಜ್ಯಕ್ಕೆ ಪ್ರವೇಶ

    ಮಹಾರಾಷ್ಟ್ರದಿಂದ ಜನರು ಕಳ್ಳ ಮಾರ್ಗಗಳ ಮೂಲಕ ರಾಜ್ಯಕ್ಕೆ ಪ್ರವೇಶ

    ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಕಡ್ಡಾಯ ಸೇರಿದಂತೆ ಅನೇಕ ಕಠಿಣ ನಿಯಮಗಳನ್ನ ಜಾರಿ ಮಾಡಿದೆ. ಆದರೂ ಜನರು ಕಳ್ಳ ಮಾರ್ಗಗಳ ಮೂಲಕ ರಾಜ್ಯಕ್ಕೆ ಪ್ರವೇಶ ಮಾಡುತ್ತಿದ್ದಾರೆ.

    ದಿನದಿಂದ ದಿನಕ್ಕೆ ಮಹಾರಾಷ್ಟ್ರದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಆರ್‍ಟಿಪಿಸಿಆರ್ ಕಡ್ಡಾಯ ಸೇರಿದಂತೆ ಅನೇಕ ಕಠಿಣ ನಿಯಮಗಳನ್ನ ಜಾರಿ ಮಾಡಿದೆ. ಆದರೆ ಸರಕಾರದ ಈ ಆದೇಶ ಇನ್ನೂ ಕಾಗದಕ್ಕೆ ಮಾತ್ರ ಸಿಮೀತವಾಗಿದೆ. ಇದನ್ನೂ ಓದಿ: ಎಲ್ಲಾ ಸಿಬ್ಬಂದಿಗೂ ಕೊರೊನಾ – ಬ್ಯಾಂಕ್ ಸೀಲ್‌ಡೌನ್

    ರಾಜ್ಯದಲ್ಲಿ ಕೊರೊನಾ ಮಹಾಮಾರಿ ರಣಕೇಕೆ ಹಾಕುತ್ತಿದ್ದರು ನಗರದ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಮಹಾರಾಷ್ಟ್ರದಿಂದ ಜನರು ಕಳ್ಳ ಮಾರ್ಗಗಳ ಮೂಲಕ ರಾಜ್ಯಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮಕ್ಕೆ ಸಂಪರ್ಕಿಸುವ ಮಹಾರಾಷ್ಟ್ರದ ನಾಗನೂರು ಗ್ರಾಮದ ಕಳ್ಳ ಮಾರ್ಗದ ಮೂಲಕ ಜನ ಬರುತ್ತಿದ್ದಾರೆ. ಇದನ್ನೂ ಓದಿ: ಉತ್ತುಂಗದಲ್ಲಿರುವ ಕೋವಿಡ್‌ ಸೋಂಕು: ಮೂರನೇ ಅಲೆ ಶೀಘ್ರವೇ ಅಂತ್ಯ?

    ಜನರು ಯಾವುದೇ ವರದಿ ಇಲ್ಲದೇ ಬೈಕ್‍ಗಳ ಮೂಲಕ ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ. ಕಳ್ಳ ಮಾರ್ಗಗಳ ಮೂಲಕ ಜನ ಪ್ರಯಾಣ ಮಾಡುತ್ತಿದ್ದರು ಈ ಬಗ್ಗೆ ಬೆಳಗಾವಿ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬೆಳಗಾವಿ ಜಿಲ್ಲಾಡಳಿತ ಇಂಥ ಕಳ್ಳ ಮಾರ್ಗಗಳಿಗೆ ಕಡಿವಾಣ ಹಾಕಬೇಕಿದೆ.