Tag: Belagavi Controversy

  • ಅಂಬೇಡ್ಕರ್‌ಗೆ ಅಪಮಾನ – ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ ಬಳಿದು ಆಕ್ರೋಶ

    ಅಂಬೇಡ್ಕರ್‌ಗೆ ಅಪಮಾನ – ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ ಬಳಿದು ಆಕ್ರೋಶ

    ಬೆಳಗಾವಿ: ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್‌ ಪಾಟೀಲ್‌ (Chandrakant Patil) ಮುಖಕ್ಕೆ ಕಪ್ಪು ಮಸಿ ಬಳಿದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಿನ್ನೆ ಸಂಜೆ ನಡೆದಿದೆ.

    ಡಾ.ಬಿ.ಆರ್.ಅಂಬೇಡ್ಕರ್ (Ambedkar), ಮಹಾತ್ಮ ಜ್ಯೋತಿಬಾ ಫುಲೆ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ (Maharashtra) ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್ ಪಾಟೀಲ್‌ (Chandrakant Patil) ಮುಖಕ್ಕೆ ಕಪ್ಪು ಮಸಿ ಬಳಿಯಲಾಗಿದೆ. ಮಹಾರಾಷ್ಟ್ರದ ಪುಣೆಯ ಕಾರ್ಯಕರ್ತರೊಬ್ಬರ ಮನೆಗೆ ತೆರಳಿ ಹೊರಬರುತ್ತಿದ್ದಂತೆ ವ್ಯಕ್ತಿಯೊಬ್ಬ ಬೆಂಗಾವಲು ವಾಹನವನ್ನೂ ಲೆಕ್ಕಿಸದೇ ಮುಖಕ್ಕೆ ಮಸಿ ಎರಚಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದ ವ್ಯಕ್ತಿಯನ್ನು ಪುಣೆ ಮಹಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಚಂದ್ರಕಾಂತ್ ಪಾಟೀಲ್‌, `ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಫುಲೆ ಭಿಕ್ಷಾಟನೆ ಮಾಡಿ ಶಾಲೆಗಳನ್ನು ಕಟ್ಟಿಸಿದ್ದರು’ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ತಮ್ಮ ಹೇಳಿಕೆಗೆ ಚಂದ್ರಕಾಂತ್ ಕ್ಷಮೆಯಾಚಿಸಿದ್ದರು. ಇದನ್ನೂ ಓದಿ: ವೋಟ್ ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ: ಶಾಸಕ ಪ್ರೀತಂಗೌಡ

    ಘಟನೆ ಬಳಿಕ `ಈ ರೀತಿ ಘಟನೆಗಳಿಗೆ ನಾನು ಹೆದರಲ್ಲ, ಪೊಲೀಸ್ ಭದ್ರತೆ ಇಲ್ಲದೇ ಬರ್ತೀನಿ. ಧಮ್ ಇದ್ರೆ ನನ್ನ ಎದುರಿಗೆ ಬನ್ನಿ. ಇದು ನಮ್ಮ ಸಂಸ್ಕೃತಿ ಅಲ್ಲ. ಇದನ್ನ ಮಹಾರಾಷ್ಟ್ರ ಸರ್ಕಾರ ಸಹಿಸಲ್ಲ. ನಾನು ಪೊಲೀಸರ ಮೇಲೆ ದೂಷಿಸಲ್ಲ. ನಾನು ಹೆದರಲ್ಲ, ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಈ ರೀತಿಯ ಘಟನೆ ಡಾ.ಬಿ.ಆರ್.ಅಂಬೇಡ್ಕರ್‌ಗೆ ಮಾಡಿದ ಅಪಮಾನ’ ಎಂದು ಉದ್ಧಟತನ ಮೆರೆದಿದ್ದರು.

    ಸಚಿವ ಚಂದ್ರಕಾಂತ್ ಪಾಟೀಲ ಇತ್ತೀಚೆಗೆ ಡಿಸೆಂಬರ್ 6 ರಂದು ನಾವು ಬೆಳಗಾವಿಗೆ ಹೋಗಿಯೇ ತೀರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಸವಾಲು ಹಾಕಿ ಉದ್ಧಟತನ ಪ್ರದರ್ಶಿಸಿದ್ದರು. ಇದನ್ನೂ ಓದಿ: ಪ್ರಸಾದ್ ಬಿದ್ದಪ್ಪ ಪುತ್ರಿ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ

    ಕರ್ನಾಟಕ ಸರ್ಕಾರಕ್ಕೆ ನಾನು ಹೇಳಬಯಸುತ್ತೇನೆ, ನಾವು ಯಾವುದೇ ಸಂಘರ್ಷ ಮಾಡಲು ಬರುತ್ತಿಲ್ಲ. 865 ಮರಾಠಿ ಭಾಷಿಕ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಏನು ಸೌಲಭ್ಯ ನೀಡಬಹುದು ಎಂಬ ಬಗ್ಗೆ ಚರ್ಚಿಸಲು ತೆರಳುತ್ತಿದ್ದೇನೆ. 865 ಹಳ್ಳಿಗಳು ಸಮಾಧಾನದಿಂದ ಇವೆ ಎಂದರೆ ಅದರ ಲಾಭ ನಿಮಗೆ ಇದೆ. ಕರ್ನಾಟಕ ಸರ್ಕಾರದ ನಾಗರಿಕರಿಗೆ ನೀವು ಸೌಲಭ್ಯ ನೀಡಲೇಬೇಕಾಗುತ್ತದೆ. ಆದ್ರೆ 865 ಮರಾಠಿ ಭಾಷಿಕ ಜನರನ್ನು ಮಹಾರಾಷ್ಟ್ರದ ನಾಗರಿಕರೆಂದು ನಾವು ಸೌಲಭ್ಯ ನೀಡುತ್ತೇವೆ. ಯಾವುದೇ ನಿಷೇಧ ಹೇರಿದರೂ ನಾನು ನಿಲ್ಲುವ ಮನುಷ್ಯನಲ್ಲ. ನನಗೆ ನೀವು ಧಮ್ಕಿ ಹಾಕಬೇಡಿ. ನಾವು ಎಚ್ಚರಿಕೆ ನೀಡಲು ಹೋಗುತ್ತಿದ್ದೇವೆ ಎಂದು ಅವರಿಗೆ ಅನಿಸುತ್ತಿದೆ. ಆದ್ರೆ, ನಾವು ಸಮನ್ವಯದಿಂದ ಜನರ ಮನಸ್ಥಿತಿ ತಿಳಿದು ಅವರಿಗೆ ಮಹಾರಾಷ್ಟ್ರ ಸರ್ಕಾರದ ನಿಲುವು ತಿಳಿಸಲು ತೆರಳುತ್ತಿದ್ದೇವೆ ಎಂದು ಗುಡುಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿ – ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಪುನರಾರಂಭ

    ಬೆಳಗಾವಿ – ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಪುನರಾರಂಭ

    ಬೆಳಗಾವಿ: ಕಳೆದ ಎರಡು ದಿನಗಳಿಂದ ಬಂದ್ ಆಗಿದ್ದ ಬೆಳಗಾವಿ-ಮಹಾರಾಷ್ಟ್ರ (Belagavi – Maharashtra) ನಡುವೆ ಬಸ್ (Bus) ಸಂಚಾರ ಪುನರಾರಂಭಗೊಂಡಿದೆ.

    ಎಂದಿನಂತೆ ಬಸ್‌ಗಳು ಓಡಾಡುತ್ತಿದ್ದು, ಕೊಲ್ಲಾಪುರಕ್ಕೆ ತೆರಳುವ ಬಸ್‌ಗಳು ನಗರದ ಹೊರವಲಯಗಳವರೆಗೆ ಮಾತ್ರ ಸಂಚಾರ ಮಾಡಲಿದ್ದು ಕೊಲ್ಲಾಪುರ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ (National Highway) ಮೇಲೆ ಪ್ರಯಾಣಿಕರ ಇಳಿಸಿ ವಾಪಸ್ ಕರ್ನಾಟಕಕ್ಕೆ ಬರಲಿವೆ. ಬೆಳಗಾವಿ (Belagavi) ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ನಿತ್ಯ 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಮಾಡುತ್ತಿದ್ದು ಅದರಲ್ಲಿ ಪ್ರಮುಖವಾಗಿ ಬೆಳಗಾವಿ, ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ ವಿಭಾಗಗಳಿಂದ ಸಂಚರಿಸುತ್ತವೆ. ಇದನ್ನೂ ಓದಿ: ಪಿಜಿ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಟಾರ್ಚರ್ – ಸೆಕ್ಸ್ ಆಫರ್‌ ಕೊಟ್ಟು ಖೆಡ್ಡಾಕ್ಕೆ ಬೀಳಿಸಿದ ಖಾಕಿ

    ಕರ್ನಾಟಕ ಬಸ್‌ಗಳಿಗೆ (Karnataka Bus) ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದ ಮರಾಠಿ ಪುಂಡರು ಮತ್ತು ಶಿವಸೇನೆ, ಎಂಇಎಸ್, ಸ್ವರಾಜ್ಯ ಸಂಘಟನೆ ಸೇರಿ ವಿವಿಧ ಸಂಘಟನೆಗಳ ಪುಂಡಾಟಿಕೆ ಹಿನ್ನೆಲೆ ಎರಡು ದಿನಗಳಿಂದ ಮಹಾರಾಷ್ಟ್ರಕ್ಕೆ (Maharashtra) ತೆರಳುವ ಬಸ್‌ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಎರಡು ದಿನಗಳ ಬಳಿಕ ಇಂದಿನಿಂದ ಮತ್ತೆ ಬಸ್‌ಗಳ ಸಂಚಾರ ಪುನಾರಂಭ ಮಾಡಲಾಗಿದ್ದು ಪರಿಸ್ಥಿತಿ ಅವಲೋಕಿಸಿ ಹಂತ-ಹಂತವಾಗಿ ಬಸ್‌ಗಳ ಸಂಚಾರ ಆರಂಭ ಮಾಡಲಾಗುತ್ತದೆ. ಇದನ್ನೂ ಓದಿ: ಬುರ್ಕಾ ಧರಿಸಿ ಐಟಂ ಸಾಂಗ್‌ಗೆ ಸ್ಟೆಪ್ – ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳು ಅಮಾನತು

    ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಸಂಚಾರ ಆರಂಭಿಸಿದರೂ ಎಂಎಸ್‌ಆರ್‌ಟಿಸಿ (MSRTC) ಮಹಾರಾಷ್ಟ್ರ ಸಾರಿಗೆ ಇಲಾಖೆ ಬಸ್ ಗಳನ್ನು ಪ್ರಾರಂಭಿಸಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಹೆಸರು ದೇವರ ಹೆಸರಿನಿಂದ ಬಂದಿದೆ, ಟೀಕಿಸಿದ್ರೆ ಹುಷಾರ್: ಎಂ.ಬಿ ಪಾಟೀಲ್

    ಸಿದ್ದರಾಮಯ್ಯ ಹೆಸರು ದೇವರ ಹೆಸರಿನಿಂದ ಬಂದಿದೆ, ಟೀಕಿಸಿದ್ರೆ ಹುಷಾರ್: ಎಂ.ಬಿ ಪಾಟೀಲ್

    ಬೆಂಗಳೂರು: ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) `ಕಾಂಗ್ರೆಸ್‌ನ ಸಿದ್ರಾಮುಲ್ಲಾ ಖಾನ್ (ಸಿದ್ದರಾಮಯ್ಯ) ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತವೆ’ ಎನ್ನುವ ಹೇಳಿಕೆಗೆ ಕಾಂಗ್ರೆಸ್‌ನಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಎಂ.ಬಿ ಪಾಟೀಲ್ (MB Patil), ಸಿದ್ರಾಮುಲ್ಲಾ ಖಾನ್ ಹೇಳಿಕೆ ಸರಿಯಲ್ಲ. ನಾವೂ ಪ್ರತಿಭಟನೆ ಪ್ರಾರಂಭಿಸಿದ್ರೆ, ಸಿ.ಟಿ ರವಿ (CT Ravi) ಹೊರಗೆ ಬರಲು ಸಾಧ್ಯವಾಗೋದಿಲ್ಲ. ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜಕೀಯವಾಗಿ ಮಾತನಾಡಿ, ಆದ್ರೆ ಈ ತರಹದ ಮಾತುಗಳು ಬೇಡ. ಸಿದ್ದರಾಮೇಶ್ವರ ಎಂಬ ದೇವರ ಹೆಸರಿನಿಂದ ಸಿದ್ದರಾಮಯ್ಯ ಹೆಸರು ಬಂದಿದೆ. ಇದನ್ನು ಇಲ್ಲಿಗೇ ನಿಲ್ಲಿಸಿದ್ರೆ ಸರಿ. ಇಲ್ಲದಿದ್ದರೆ ಮತ್ತಷ್ಟು ವಿಕೋಪಕ್ಕೆ ಹೋಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ತಮಿಳಿನತ್ತ ಹೊಂಬಾಳೆ ಫಿಲ್ಮ್ಸ್:ಕೀರ್ತಿ ಸುರೇಶ್ ನಟನೆಯ `ರಘುತಥಾ’ ಚಿತ್ರ ನಿರ್ಮಾಣಕ್ಕೆ ಸಾಥ್

    ಬಿಜೆಪಿಯವರಿಗೆ ಯಾವಾಗಲೂ ಅಭ್ಯಾಸ ಆಗಿಬಿಟ್ಟಿದೆ. ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್ ನಲ್ಲಿ ಇರಲಿಲ್ವಾ ಅಂತಾರೆ. ವಿರೋಧ ಪಕ್ಷದಲ್ಲಿ ಇದ್ದವರು ಅವರು, ಆಗ ಯಾಕೆ ಸುಮ್ಮನೆ ಇದ್ದರು? ರೌಡಿಗಳ ವಿಷಯ ಬಂದಾಗ ರೌಡಿಗಳನ್ನು ಸೇರಿಸಿಕೊಂಡಿದ್ದಾರೆ, ರೌಡಿಗಳಿಗೆ (Rowdy Sheeter) ಟಿಕೇಟ್ ಕೊಡುವ ವಿಚಾರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಅನ್ನೋ ಮಾಹಿತಿ ಇದೆ. ಮಾಡೋದೆಲ್ಲ ಮಾಡಿ ಕಾಂಗ್ರೆಸ್ ಮೇಲೆ ಆರೋಪ ಮಾಡೋದು ಅವರಿಗೆ ಹ್ಯಾಬಿಟ್ ಆಗಿಬಿಟ್ಟಿದೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ರಾಮುಲು ಗೈರು- ಮುರಿದು ಬಿತ್ತಾ ದಶಕಗಳ ಗೆಳೆತನದ ನಂಟು..?

    ಡಿಕೆಶಿ, ನಲಪಾಡ್ ಮೇಲೆ ತನಿಖೆ ಆಗುತ್ತೆ:
    ಡಿ.ಕೆ.ಶಿವಕುಮಾರ್ (DK Shivakumar) ಮೇಲೆ ಆರೋಪಗಳಿದ್ದರೆ ತನಿಖೆ ನಡೆಯುತ್ತೆ, ಹಾಗೆಯೇ ನಲಪಾಡ್ ಮೇಲೆ ರೌಡಿಶೀಟ್ ಇದ್ದರೆ, ತನಿಖೆ ಆಗುತ್ತದೆ. ಅದ್ರೆ ಕೆಪಿಸಿಸಿ (KPCC) ಅಧ್ಯಕ್ಷರನ್ನ ಕೊತ್ವಾಲ್ ಶಿಷ್ಯ ಅನ್ನೋದು ಸರಿಯಲ್ಲ ಎಂದು ಹೇಳಿದ್ದಾರೆ.

    ಬೆಳಗಾವಿ ಗಡಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಸರ್ವ ಪಕ್ಷ ಸಭೆ ಕರೆಯಬೇಕಿತ್ತು ಕರೆದಿಲ್ಲ. ಮಹಾರಾಷ್ಟ್ರ ರಾಜಕೀಯ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಅದನ್ನು ಡೈವರ್ಟ್ ಮಾಡಲು ಗಡಿ ಕ್ಯಾತೆ ತೆಗೆದಿದ್ದಾರೆ. ಜತ್, ಅಕ್ಕಲಕೋಟೆ, ಸೊಲ್ಲಾಪುರದಲ್ಲಿ ಎಲ್ಲ ಕನ್ನಡಿಗರಿದ್ದಾರೆ. ಹಾಗಾದ್ರೆ ಇವೆಲ್ಲವೂ ಕರ್ನಾಟಕಕ್ಕೆ ಸೇರಬೇಕಾಗುತ್ತದೆ ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಡಿ ವಿವಾದ: ಹೋರಾಟ ಅನ್ನೋದೇ ಆದ್ರೆ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಬರುತ್ತೆ – ಶಿವರಾಜಕುಮಾರ್

    ಗಡಿ ವಿವಾದ: ಹೋರಾಟ ಅನ್ನೋದೇ ಆದ್ರೆ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಬರುತ್ತೆ – ಶಿವರಾಜಕುಮಾರ್

    ರಾಯಚೂರು: ಗಡಿ ವಿವಾದವನ್ನ (Belagavi Controvarsy) ಯಾರೂ ದೊಡ್ಡದು ಮಾಡಬಾರದು, ಅಂತಹ ಸಮಯ ಬಂದ್ರೆ ಕನ್ನಡ ಸಿನಿಮಾ ರಂಗ (Kannada Film Industry) ಒಗ್ಗಟ್ಟಾಗಿ ಬರುತ್ತೆ. ಹೋರಾಟ ಅನ್ನೋದಾದ್ರೆ ಎಲ್ಲ ನಟರು ಬರುತ್ತಾರೆ ಎಂದು ನಟ ಶಿವರಾಜ್ ಕುಮಾರ್ (Shivaraj kumar) ಹೇಳಿದ್ದಾರೆ.

    ಮಂತ್ರಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್ (Shivaraj Kumar), ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಕುರಿತ ಆ ವಿಚಾರ ನನಗೆ ಅಷ್ಟಾಗಿ ಗೊತ್ತಿಲ್ಲ. ನಾವು ಎಲ್ಲಿದ್ದೇವೆ? ಯಾವ ಜಾಗದಲ್ಲಿದ್ದೇವೆ ಅದಕ್ಕೆ ಮೊದಲು ಎಲ್ಲರೂ ಗೌರವ ಕೊಡಬೇಕು. ಯಾರು ಏನೇ ಹೇಳಿದ್ರೂ ನಾವು ಒಗ್ಗಟ್ಟಾಗಿರಬೇಕು. ಯಾರೇ ಆದ್ರೂ ಎಲ್ಲರನ್ನೂ ವೆಲ್ ಕಂ ಮಾಡೋಣ. ಅಗತ್ಯ ಬಂದಾಗ ನಾವು ಸೋದರ ಮನೋಭಾವದಿಂದ ಇರಬೇಕು ಅಂತ ನಟ ಡಾ.ಶಿವರಾಜ್ ಕುಮಾರ್ ಸಲಹೆ ನೀಡಿದ್ದಾರೆ.

    ನಿನ್ನೆಯಷ್ಟೇ ಗಡಿ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬೊಮ್ಮಾಯಿ (Basavaraj Bommai), ವಿಶ್ವದ ಹಾಗೂ ದೇಶದ ಯಾವುದೇ ಮೂಲೆಯಲ್ಲಿದ್ದರೂ ಕನ್ನಡಿಗರನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕದ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಗಡಿ ಜಿಲ್ಲೆಗಳ 1,800 ಗ್ರಾಪಂ ಅಭಿವೃದ್ಧಿಗೆ ವಿಶೇಷ ಯೋಜನೆ – ಬೊಮ್ಮಾಯಿ ಭರವಸೆ

    ಅಲ್ಲದೇ ತಮಿಳುನಾಡು, ಕೇರಳ ಗಡಿ ಭಾಗದಲ್ಲಿರುವ ಜಿಲ್ಲೆಗಳ 1,800 ಗ್ರಾಮ ಪಂಚಾಯತಿ ಅಭಿವೃದ್ಧಿ, ಗಡಿ ಭಾಗದಲ್ಲಿ ಕನ್ನಡ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದರು. ಇದನ್ನೂ ಓದಿ: ಕೇಸರಿ ಶಲ್ಯ ಹಾಕಿಕೊಂಡು ಸಿ.ಟಿ ರವಿ ಮನೆಗೆ ಮುತ್ತಿಗೆಗೆ ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು

    Live Tv
    [brid partner=56869869 player=32851 video=960834 autoplay=true]