Tag: belagavi bus conductor

  • ಮರಾಠಿ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ – ಇಂದು ಬೆಳಗಾವಿಗೆ ರಾಮಲಿಂಗಾ ರೆಡ್ಡಿ ಭೇಟಿ

    ಮರಾಠಿ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ – ಇಂದು ಬೆಳಗಾವಿಗೆ ರಾಮಲಿಂಗಾ ರೆಡ್ಡಿ ಭೇಟಿ

    – ಮಂಗಳವಾರ ಘಟನೆ ಖಂಡಿಸಿ ಕರವೇ ಪ್ರತಿಭಟನೆ

    ಬೆಳಗಾವಿ: ಕನ್ನಡ ಮಾತಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಪೋಕ್ಸೋ ಕೇಸ್ ದಾಖಲಿಸಿರುವ ಘಟನೆ ಈಗ ಎರಡು ರಾಜ್ಯಗಳ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಈ ಹಿನ್ನೆಲೆ ಇಂದು ಬೆಳಗಾವಿಗೆ (Belagavi) ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಘಟನೆಯ ಮಾಹಿತಿ ಪಡೆಯಲಿದ್ದಾರೆ.

    ಸದಾ ಗಡಿ ಹಾಗೂ ಭಾಷೆ ವಿಚಾರದಲ್ಲಿ ಒಂದಿಲ್ಲೊಂದು ಕಿರಿಕ್ ಮಾಡುತ್ತಿದ್ದ ಎಂಇಎಸ್ ಹಾಗೂ ಮರಾಠಿ ಪುಂಡರು ಕನ್ನಡ ಮಾತಾಡು ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಟಿಕೆಟ್ ಕೊಡುವ ವಿಚಾರಕ್ಕೆ ಶುರುವಾದ ಜಗಳ ಈಗ ಕರ್ನಾಟಕ, ಮಹಾರಾಷ್ಟ್ರ ಎರಡೂ ರಾಜ್ಯದ ನಡುವಿನ ಶಾಂತಿಗೆ ಭಂಗ ತರುತ್ತಿದೆ. ಕರ್ನಾಟಕದಲ್ಲಿ ಮಹಾರಾಷ್ಟ್ರ ಬಸ್ಸುಗಳಿಗೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಹೀಗಾಗಿ ಕರ್ನಾಟಕದಿಂದ ಹೊರಡುವ ಬಸ್ಸುಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಉದಯಗಿರಿ ಗಲಭೆ ಕಿಚ್ಚು – ಇಂದು ಮಧ್ಯರಾತ್ರಿವರೆಗೆ ಮೈಸೂರಿನಲ್ಲಿ ನಿಷೇಧಾಜ್ಞೆ

    ಇಂದು ಬೆಳಗಾವಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಘಟನೆಯ ಕುರಿತು ಮಾಹಿತಿ ಪಡೆಯಲಿದ್ದಾರೆ. ಕಂಡ್ಟಕರ್ ಮೇಲೆ ಹಾಕಲಾದ ಪ್ರಕರಣ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಇದನ್ನೂ ಓದಿ: ಪಾಕ್‌ ತಂಡದ ನಸೀಮ್‌ ಷಾ ಶೂ ಲೇಸ್‌ ಕಟ್ಟಿದ ಕಿಂಗ್‌ ಕೊಹ್ಲಿ – ವಿರಾಟ್‌ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್‌

    ಇನ್ನು ಮಂಗಳವಾರ ಬೆಳಗಾವಿಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಸಹ ಆಗಮಿಸುತ್ತಿದ್ದಾರೆ. ಕನ್ನಡ ಮಾತಾಡು ಎಂದು ಹೇಳಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ನಾರಾಯಣಗೌಡ ಚಲೋ ಪಂಥಬಾಳೆಕುಂದ್ರಿ ಕರೆ ನೀಡಿದ್ದಾರೆ. ಬೆಳಗಾವಿಯಿಂದ ಪಂಥಬಾಳೆಕುಂದ್ರಿಗೆ ಪ್ರತಿಭಟನಾ ರ‍್ಯಾಲಿ ಆಯೋಜನೆ ಮಾಡಿದ್ದು, ಕಂಡೆಕ್ಟರ್ ಮೇಲೆ ನೆಡದ ಹಲ್ಲೆಯನ್ನು ಖಂಡಿಸಿದ್ದಾರೆ. ಅಲ್ಲದೆ ನಾರಾಯಣಗೌಡ ಬರುತ್ತಿರುವ ಹಿನ್ನೆಲೆ ನೂರಾರು ಕಾರ್ಯಕರ್ತರು ಮಂಗಳವಾರದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಶಹಬ್ಬಾಶ್ ಹುಡುಗ್ರಾ: ಪಾಕ್‌ ವಿರುದ್ಧ ಗೆದ್ದ ಟೀಂ ಇಂಡಿಯಾಗೆ ಡಿಕೆಶಿ ಅಭಿನಂದನೆ

    ಈ ಮಧ್ಯೆ ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಎಂಇಎಸ್ ಮುಖಂಡ ಶುಭಂ ಶಳಕೆ ವಿರುದ್ಧ ದೂರು ದಾಖಲಾಗಿದೆ. ಕನ್ನಡಿಗರನ್ನು ಕೆರಳಿಸುವ ಭಾಷಾ ವೈಷಮ್ಯ ಹರಡುವ ಶಾಂತಿಗೆ ಭಂಗ ತರುವ ಕಲಂಗಳಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟಿನಲ್ಲಿ ಶಾಂತವಾಗಿದ್ದ ಬೆಳಗಾವಿ ಈಗ ಬಸ್ ಕಂಡಕ್ಟರ್ ಮೇಲಿನ ಹಲ್ಲೆಯಿಂದಾಗಿ ಮತ್ತೆ ಧಗಧಗಿಸುತ್ತಿದೆ. ಇದನ್ನೂ ಓದಿ: ಮಂತ್ರಾಲಯಕ್ಕೆ ಶಿವಣ್ಣ ಭೇಟಿ – ರಾಯರ ವೃಂದಾವನಕ್ಕೆ ವಿಶೇಷ ಪೂಜೆ

  • ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಆಭರಣಗಳನ್ನು ಪ್ರಯಾಣಿಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್!

    ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಆಭರಣಗಳನ್ನು ಪ್ರಯಾಣಿಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್!

    ಬೆಳಗಾವಿ: ಪ್ರಯಾಣಿಕರೊಬ್ಬರು ಬಸ್‍ನಲ್ಲಿ ಬಿಟ್ಟು ಹೋಗಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಹಿಂದಿರುಗಿಸುವ ಮೂಲಕ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಪ್ರಾಮಾಣಿಕತೆ ಮೆರೆದಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿಯಿಂದ ಜಮಖಂಡಿಗೆ ಸಂಪರ್ಕ ಕಲ್ಪಿಸುವ ಬಸ್ಸಿನಲ್ಲಿ ರಡ್ಡರಹಟ್ಟಿ ಗ್ರಾಮದ ಮಹಿಳೆ ಜಮಖಂಡಿಯಿಂದ ಅಥಣಿಗೆ ಬರುವಾಗ ಬಸ್ಸಿನಲ್ಲಿ ಬಂಗಾರ ಇದ್ದ ಕೈಚೀಲ ಮರೆತು ಹೋಗಿದ್ದರು. ಇದನ್ನು ಕಂಡಕ್ಟರಾದ ಪ್ರಶಾಂತ್ ಕಟಗೇರಿ ಗಮನಿಸಿ ಘಟಕದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಎಮ್ಮೆ ಹಾಲು ಕೊಡ್ತಿಲ್ಲ, ಯಾರೋ ಮಾಟ ಮಾಡ್ಸಿದ್ದಾರೆಂದು ಪೊಲೀಸ್‌ ಠಾಣೆಗೆ ದೂರು ನೀಡಿದ ರೈತ!

    15 ಗ್ರಾಮ ಚಿನ್ನ ಮತ್ತು 10 ಗ್ರಾಮ ಬೆಳ್ಳಿ ಆಭರಣ ಕಳೆದುಕೊಂಡಿದ್ದ ಮಹಿಳೆಗೆ ಘಟಕದ ವ್ಯವಸ್ಥಾಪಕ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಶಾಂತ್ ಕಟಗೇರಿ ಆಭರಣಗಳನ್ನು ಹಸ್ತಾಂತರಿಸಿದರು. ಇದನ್ನೂ ಓದಿ: 1.50 ಕೋಟಿ ರೂ. ಮೋಸ – ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ FIR

    ಅಥಣಿ ಕೆಎಸ್‍ಆರ್‍ಟಿಸಿ ಘಟಕದ ಹಿರಿಯ ಅಧಿಕಾರಿಗಳಿಂದ ಪ್ರಶಾಂತ್ ಕಟಗೇರಿ ಪ್ರಾಮಾಣಿಕತೆ ಕಾರ್ಯಕ್ಕೆ ಅವರನ್ನು ಸನ್ಮಾನಿಸಲಾಯಿತು. ಕಂಡಕ್ಟರ್ ಕಾರ್ಯಕ್ಕೆ ಅಥಣಿ ಜನತೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.