Tag: Beijing

  • 7 ವರ್ಷದಲ್ಲೇ 8 ಪ್ಯಾಕ್ ಬಾಡಿ ಬೆಳೆಸಿದ ಬಾಲಕ!

    7 ವರ್ಷದಲ್ಲೇ 8 ಪ್ಯಾಕ್ ಬಾಡಿ ಬೆಳೆಸಿದ ಬಾಲಕ!

    ಬೀಜಿಂಗ್: ಯುವ ಜನತೆ ಜಿಮ್‍ಗೆ ಹೋಗಿ ಬಾಡಿ ಬಿಲ್ಡಿಂಗ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಚೀನಾದ 7 ವರ್ಷದ ಬಾಲಕ 8 ಪ್ಯಾಕ್ ಬಾಡಿ ಬೆಳೆಸಿ ಎಲ್ಲರನ್ನೂ ನಾಚಿಸುವ ಮೂಲಕ ಸುದ್ದಿಯಾಗಿದ್ದಾನೆ.

    ಹೌದು, ಚೀನಾದ ಏಳು ವರ್ಷದ ಬಾಲಕ ಚೆನ್ ಯಿ 8 ಪ್ಯಾಕ್‍ಗಳನ್ನು ಮಾಡಿ ಎಲ್ಲರ ತಲೆ ತಿರುಗುವ ಹಾಗೆ ಮಾಡಿದ್ದಾನೆ. ಜಿಮ್ ಸಾಧನೆಯ ಜೊತೆ ಜಿಮ್ನಾಸ್ಟಿಕ್‍ನಲ್ಲಿ ಆರು ಜಿನ್ನದ ಪದಕಗಳನ್ನು ಗೆದ್ದಿದ್ದಾನೆ. ಅಷ್ಟೇ ಅಲ್ಲದೇ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಬಹುಮಾನವನ್ನು ಗೆದ್ದಿದ್ದಾನೆ.

    ಚಿಕ್ಕ ವಯಸ್ಸಿನಲ್ಲಿ ತುಂಬಾ ಗಟ್ಟಿಮುಟ್ಟಾಗಿದ್ದೆ. ಈ ರೀತಿಯ ದೇಹವನ್ನು ಹೊಂದಿ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಗೆಲ್ಲಬೇಕು ಎನ್ನುವ ಕನಸನ್ನು ಕಂಡಿದ್ದೆ. ಈಗ ನನಗೆ ಸಂತೋಷವಾಗಿದೆ ಎಂದು ಚೆನ್ ಯಿ ತನ್ನ ಸಾಧನೆಯ ಬಗ್ಗೆ ಹೇಳಿಕೊಂಡಿದ್ದಾನೆ.

     

  • ಜಗತ್ತಿನ ಮೊದಲ ಫಾರೆಸ್ಟ್ ಸಿಟಿ ನಿರ್ಮಾಣಕ್ಕೆ ಕೈ ಹಾಕಿದ ಚೀನಾ

    ಜಗತ್ತಿನ ಮೊದಲ ಫಾರೆಸ್ಟ್ ಸಿಟಿ ನಿರ್ಮಾಣಕ್ಕೆ ಕೈ ಹಾಕಿದ ಚೀನಾ

    ಬೀಜಿಂಗ್: ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರದ್ದು ಏನಾದರೊಂದು ಹೊಸದೊಂದು ಇದ್ದೆ ಇರುತ್ತೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.

    ಹೌದು. ಚೀನಾದಲ್ಲಿ ಕಾಂಕ್ರೀಟ್ ಕಟ್ಟಡ, ಕೈಗಾರಿಕೆಗಳು ಹೆಚ್ಚಾಗಿ ಮಾಲಿನ್ಯ ಜಾಸ್ತಿಯಾಗುತ್ತಿದೆ. ಹೀಗಾಗಿ ವಿಶ್ವದ ಮೊದಲ ಫಾರೆಸ್ಟ್ ಸಿಟಿಯ ನಿರ್ಮಾಣಕ್ಕೆ ಚೀನಾ ಕೈ ಹಾಕಿದ್ದು ಕಾಮಗಾರಿಗಳು ಆರಂಭಗೊಂಡಿದೆ.

    ಗುವಾಂಗ್ಕ್ಸಿ ಪ್ರಾಂತ್ಯದ ಲಿಝೌನಲ್ಲಿ ಫಾರೆಸ್ಟ್ ಸಿಟಿ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 30,000 ಜನರು ಇಲ್ಲಿ ವಾಸವಾಗುವಂತೆ ಈ ಸಿಟಿ ನಿರ್ಮಾಣವಾಗಲಿದೆ.

    ವಿಶೇಷತೆ ಏನು?
    100ಕ್ಕೂ ಅಧಿಕ ಜಾತಿಯ ಒಟ್ಟು 10 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಇಲ್ಲಿ ನೆಡಲು ಉದ್ದೇಶಿಸಲಾಗಿದೆ. ಈ ಎಲ್ಲ ಸಸಿಗಳು ಒಟ್ಟು 10,000 ಟನ್‍ಗಳಷ್ಟು ಇಂಗಾಲದ ಡೈ ಆಕ್ಸೈಡ್ ಮತ್ತು 57 ಟನ್ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಭವಿಷ್ಯದಲ್ಲಿ ವಾರ್ಷಿಕವಾಗಿ ಈ 10 ಲಕ್ಷ ಮರಗಳಿಂದ ಸುಮಾರು 900 ಟನ್‍ಗಳಷ್ಟು ಆಮ್ಲಜನಕ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಈ ಫಾರೆಸ್ಟ್ ಸಿಟಿಯಲ್ಲಿ ನಿರ್ಮಾಣವಾಗುವ ಮನೆಯಲ್ಲಿಯೂ ಮರಗಳನ್ನೂ ಬೆಳೆಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಈ ಸಿಟಿಯಲ್ಲಿ ವೇಗವಾಗಿ ಓಡುವ ರೈಲು, ಕಾರುಗಳು ಎಲ್ಲವೂ ಇರುತ್ತೆ. ಈ ನಗರದಲ್ಲಿ ವಿದ್ಯುತ್‍ಗೆ ಸೋಲಾರ್ ಶಕ್ತಿ ಬಳಕೆಯಾದರೆ ಜನರು ಎಲೆಕ್ಟ್ರಿಕ್ ಕಾರುಗಳನ್ನು ಬಳಸಲಿದ್ದಾರೆ.

    ಒಟ್ಟಿನಲ್ಲಿ 175 ಹೆಕ್ಟೇರ್ ಪ್ರದೇಶದಲ್ಲಿ ಈ ಫಾರೆಸ್ಟ್ ಸಿಟಿಯನ್ನು ನಿರ್ಮಾಣವಾಗುತ್ತಿದ್ದು, ಈ ಯೋಜನೆ 2020ಕ್ಕೆ ಪೂರ್ಣಗೊಳ್ಳಲಿದೆ. ಪೂರ್ಣಗೊಂಡ ಬಳಿಕ ವಿಶ್ವದ ಮೊದಲ ಹಸಿರು ನಗರವನ್ನು ನಿರ್ಮಿಸಿದ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಲಿದೆ.

    https://youtu.be/nHq9yQOb1eQ