Tag: Beijing

  • 3 ತಿಂಗ್ಳಲ್ಲಿ 4,000ಕ್ಕೂ ಅಧಿಕ ಪೋರ್ನ್ ವೆಬ್‍ಸೈಟ್ ಸ್ಥಗಿತಗೊಳಿಸಿದ ಚೀನಾ!

    3 ತಿಂಗ್ಳಲ್ಲಿ 4,000ಕ್ಕೂ ಅಧಿಕ ಪೋರ್ನ್ ವೆಬ್‍ಸೈಟ್ ಸ್ಥಗಿತಗೊಳಿಸಿದ ಚೀನಾ!

    ಬೀಜಿಂಗ್: ಕೇವಲ ಮೂರು ತಿಂಗಳ ಅವಧಿಯಲ್ಲಿ ಚೀನಾ ಸರ್ಕಾರ ಅಶ್ಲೀಲ ವೆಬ್‍ಸೈಟ್ ಹಾಗೂ ಯುವಜನತೆಯ ಮನಸ್ಸಿನ ಮೇಲೆ ಪರಿಣಾಮ ಬೀರುವ ಸುಮಾರು 4,000 ಕ್ಕೂ ಅಧಿಕ ವೆಬ್‍ಸೈಟ್‍ಗಳನ್ನು ಸ್ಥಗಿತಗೊಳಿಸಿದೆ.

    ಮಾಧ್ಯಮಗಳ ಮಾಹಿತಿಗಳ ಪ್ರಕಾರ ಚೀನಾ ಸರ್ಕಾರ ಆನ್‍ಲೈನ್ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಿದ್ದು, ಇದರಲ್ಲಿ ಅಂತರ್ಜಾಲದಲ್ಲಿ ಕಂಡುಬರುವ ನಿಯಮಬಾಹಿರ ಹಾಗೂ ಅಶ್ಲೀಲ ವೆಬ್‍ಸೈಟ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ. ಇದಲ್ಲದೇ ಚೀನಾ ಸರ್ಕಾರವು ಆನ್‍ಲೈನ್ ಸ್ವಚ್ಛತಾ ಆಂದೋಲನದ ಮೂಲಕ ಅಶ್ಲೀಲ ದೃಶ್ಯ ಹಾಗೂ ಸಾಹಿತ್ಯ ಪ್ರಕಟಿಸುವ ಎಲ್ಲ ರೀತಿಯ ವೆಬ್‍ಸೈಟ್‍ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ.

    ಚೀನಾವು ಕಳೆದ ಮೇ ತಿಂಗಳಿನಿಂದ ಈ ಆಂದೋಲನಕ್ಕೆ ಕರೆ ನೀಡಿದ್ದು, ಇಲ್ಲಿಯವರೆಗೆ ಒಟ್ಟು 4,000 ಕ್ಕೂ ಅಧಿಕ ಪೋರ್ನ್ ಸೈಟ್ ಸೇರಿದಂತೆ ಇತರೆ ವೆಬ್‍ಸೈಟ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಆಂದೋಲನಕ್ಕೂ ಮುನ್ನ ಚೀನಾ ಸರ್ಕಾರ ಸುಮಾರು 1,47,000 ದತ್ತಾಂಶಗಳ ಮಾದರಿಗಳನ್ನು ಪರಶೀಲನೆ ನಡೆಸಿದೆ. ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿವೆ.

    ಕೇವಲ ಅಶ್ಲೀಲತೆಯನ್ನು ಪ್ರಕಟಿಸುವ ವೆಬ್‍ಸೈಟ್‍ಗಳು ಮಾತ್ರವಲ್ಲದೇ ಯುವಜನತೆಯನ್ನು ತಪ್ಪು ದಾರಿಗೆಳೆಯುವ ಇತರೆ 230 ಕ್ಕೂ ಅಧಿಕ ಸಂಸ್ಥೆಗಳಿಗೆ ಸಂಬಂಧಪಟ್ಟ ವೆಬ್‍ಸೈಟ್‍ಗಳನ್ನು ಸಹ ಕಿತ್ತುಹಾಕಿದೆ. ಇವುಗಳಲ್ಲಿ ಆನ್‍ಲೈನ್ ಕಾದಂಬರಿಗಳು, ಕಥೆಗಳು, ಪ್ರಚೋದನಾಕಾರಿ ಮತ್ತು ಅಶ್ಲೀಲ ಭಾಷಣದ ವಿಡಿಯೋಗಳು ವೆಬ್‍ಸೈಟ್‍ಗಳು ಸಹ ಸೇರಿವೆ. ಅಲ್ಲದೇ ಮುಂಬರುವ ದಿನಗಳಲ್ಲಿ ಮತ್ತಷ್ಟೂ ಕಠಿಣ ನಿಯಮಗಳನ್ನು ರೂಪಿಸುವುದಾಗಿ ಚೀನಾ ಸರ್ಕಾರ ಎಚ್ಚರಿಕೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕಾರಿಗೆ ಡಿಕ್ಕಿಯಾಗಿ ಟ್ರಕ್ ಗೆ ಸಿಲುಕಿ ತಲೆ ಮೇಲೆ ಚಕ್ರ ಹರಿದ್ರೂ ಮಹಿಳೆ ಬಚಾವ್!

    ಕಾರಿಗೆ ಡಿಕ್ಕಿಯಾಗಿ ಟ್ರಕ್ ಗೆ ಸಿಲುಕಿ ತಲೆ ಮೇಲೆ ಚಕ್ರ ಹರಿದ್ರೂ ಮಹಿಳೆ ಬಚಾವ್!

    – ಹೆಲ್ಮೆಟ್ ಹಾಕಿದ್ದರಿಂದ ಪಾರಾದ್ರು

    ಬೀಜಿಂಗ್: ಅಪಘಾತದ ವೇಳೆ ಹೆಚ್ಚಿನ ಬೈಕ್ ಸವಾರರು ಹೆಲ್ಮೆಟ್ ಇಲ್ಲದೇ ಪ್ರಾಣ ಕಳೆದುಕೊಳ್ಳುವುದು ಜಾಸ್ತಿ. ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಹೆಲ್ಮೆಟ್ ಹಾಕಿದ್ದರಿಂದ ಬದುಕುಳಿದಿದ್ದಾರೆ.

    ಝೂ, ಬೈಕ್ ಸವಾರೆಯಾಗಿದ್ದು, ಈಕೆ ತನ್ನ ಬೈಕ್ ನಲ್ಲಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಪಕ್ಕದಲ್ಲಿ ಹೋಗುತ್ತಿದ್ದ ಟ್ರಕ್‍ಗೆ ಸಿಲುಕಿ ಚಕ್ರ ತಲೆ ಮೇಲೆ ಹರಿದಿದೆ. ಆದರೆ ಅದೃಷ್ಟವಶಾತ್ ಮಹಿಳೆ ಹೆಲ್ಮೆಟ್ ಹಾಕಿದ್ದರಿಂದ ಯಾವುದೇ ಅಪಾಯವಿಲ್ಲದೇ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಅಪಘಾತದ ಭಯಾನಕ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಹಿಳೆ ಬೈಕ್ ನಲ್ಲಿ ವೇಗವಾಗಿ ಕಾರಿನ ಪಕ್ಕದಲ್ಲೇ ಬಂದಿದ್ದು, ಈ ವೇಳೆ ಕಾರಿನಲ್ಲಿದ್ದ ಪ್ರಯಾಣಿಕ ಹಿಂದೆ ಬೈಕ್ ಬರುವುದನ್ನು ಗಮನಿಸದೆ ಕಾರ್ ಬಾಗಿಲು ಓಪನ್ ಮಾಡುತ್ತಾರೆ. ಈ ವೇಳೆ ಕಾರಿನ ಬಾಗಿಲಿಗೆ ಬೈಕ್ ಡಿಕ್ಕಿಯಾಗಿದೆ. ಅಲ್ಲದೇ ಮಹಿಳೆಯ ಪಕ್ಕದಲ್ಲಿ ಚಲಿಸುತ್ತಿದ್ದ ಟ್ರಕ್ ಚಕ್ರದಡಿ ಹಾರಿ ಬೀಳುತ್ತಾರೆ. ಈ ವೇಳೆ ಟ್ರಕ್ ಚಕ್ರ ಹೆಲ್ಮೆಟ್ ಹಾಕಿದ್ದ ಝೂ ತಲೆ ಮೇಲೆ ಹರಿದು ಹೋಗುತ್ತದೆ. ಆದರೆ ಅದೃಷ್ಟವಶಾತ್ ಝೂಗೆ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹಲವು ಬಾರಿ ಪ್ರಯಾಣಿಕರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿ ಅಪಘಾತದ ವೇಳೆ ತಮ್ಮ ಪ್ರಾಣ ಕಳೆದುಕೊಂಡಿದ್ದು, ಹೆಲ್ಮೆಟ್ ಹಾಕಿ ಬೈಕ್ ಚಾಲನೆ ಮಾಡುವುದರಿಂದ ಅಪಘಾತದಿಂದ ಉಂಟಾಗುವ ಭಾರೀ ನಷ್ಟವನ್ನು ತಡೆಯಬಹುದಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್: ವಿಡಿಯೋ ವೈರಲ್

    ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್: ವಿಡಿಯೋ ವೈರಲ್

    ಬೀಜಿಂಗ್: ಮನೆಯಲ್ಲಿ ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್ ಆದ ಘಟನೆಯೊಂದು ಚೀನಾದಲ್ಲಿ ನಡೆದಿದೆ.

    ಮನೆಯೊಳಗೆ ಎಲೆಕ್ಟ್ರಿಕ್ ಸ್ಕೂಟರೊಂದು ಚಾರ್ಜ್‌ಗೆ ಇಟ್ಟಿದ್ದರು. ಆ ಸ್ಕೂಟರ್ ಬ್ಲಾಸ್ಟ್ ಆಗುವ ಮೊದಲು ಹೊಗೆ ಕಾಣಿಸಿಕೊಂಡಿದೆ. ಈ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯಲ್ಲಿ ತಂದೆ, ಮಗಳು ಹಾಗೂ ನಾಯಿ ಅಲ್ಲಿಂದ ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಈ ಘಟನೆ ಚೀನಾದ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಈ ಘಟನೆ ಭಾನುವಾರ ಸಂಜೆ ಸುಮಾರು 5.30ಕ್ಕೆ ನಡೆದಿದೆ. ಸದ್ಯ ಈ ಎಲೆಕ್ಟ್ರಿಕ್ ಸ್ಕೂಟರ್ ಬ್ಲಾಸ್ಟ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ವಿಡಿಯೋದಲ್ಲಿ ತಂದೆ, ಮಗಳು ಹಾಗೂ ನಾಯಿ ಸ್ಕೂಟರ್ ಬಳಿ ಇದ್ದರು. ಆಗ ಚಾರ್ಜ್ ಹಾಕಿದ ಸ್ಕೂಟರ್ ನಿಂದ ಜೋರಾಗಿ ಶಬ್ಧವೊಂದು ಕೇಳಿಸಿದೆ. ತಂದೆ ಶಬ್ಧ ಏನೆಂದು ನೋಡಲು ಹೋದಾಗ ಸ್ಕೂಟರ್ ನಿಂದ ಹೊಗೆ ಬರುತ್ತಿತ್ತು. ಅದನ್ನು ಕಂಡ ತಂದೆ ತನ್ನ ಮಗಳು ಹಾಗೂ ನಾಯಿಯನ್ನು ಕರೆದುಕೊಂಡು ಓಡಿ ಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡರು.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಹಾನಿ ಆಗಿಲ್ಲ. ಪೊಲೀಸರು ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

  • ಬೆನ್ನು ನೋವು, ಜ್ವರ ಅಂತ ಆಸ್ಪತ್ರೆಗೆ ಹೋದ್ರೆ ಕಿಡ್ನಿಯಲ್ಲಿ ಬರೋಬ್ಬರಿ 3 ಸಾವಿರ ಕಲ್ಲು ಪತ್ತೆ

    ಬೆನ್ನು ನೋವು, ಜ್ವರ ಅಂತ ಆಸ್ಪತ್ರೆಗೆ ಹೋದ್ರೆ ಕಿಡ್ನಿಯಲ್ಲಿ ಬರೋಬ್ಬರಿ 3 ಸಾವಿರ ಕಲ್ಲು ಪತ್ತೆ

    ಬೀಜಿಂಗ್: ಇತ್ತೀಚೆಗೆ 56 ವರ್ಷದ ಮಹಿಳೆಯೊಬ್ಬಳು ಬೆನ್ನು ನೋವು ಮತ್ತು ಜ್ವರ ಎಂದು ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಅವರ ಮೂತ್ರಪಿಂಡದಲ್ಲಿ 3 ಸಾವಿರ ಕಲ್ಲುಗಳು ಪತ್ತೆಯಾಗಿದ್ದು, ವೈದ್ಯರೇ ಅಚ್ಚರಿಪಟ್ಟಿದ್ದಾರೆ.

    ಈ ಘಟನೆ ಚೀನಾದ ಜಿಯಾಂಗ್ಸು ಪ್ರಾಂತ್ಯದ ಚಾಂಗ್ಝೌದಲ್ಲಿನ ವುಜಿನ್ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆಯ ಹೆಸರು ಜಾಂಗ್ ಎಂದು ತಿಳಿದು ಬಂದಿದೆ. ಇವರು ಕಳೆದ ವಾರ ನಿರಂತರ ಬೆನ್ನುನೋವಿದೆ ಎಂದು ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ಹೇಳಿಕೊಂಡಿದ್ದರು.

    ವೈದ್ಯರು ಮಹಿಳೆಯನ್ನು ಪರೀಕ್ಷೆ ಮಾಡಿದ್ದಾರೆ. ನಂತರ ಮಹಿಳೆಯ ಬಲಭಾಗದಲ್ಲಿರುವ ಮೂತ್ರಪಿಂಡದ ತುಂಬಾ ಕಲ್ಲುಗಳಿರುವುದು ಪತ್ತೆಯಾಗಿದೆ. ಬಳಿಕ ವೈದ್ಯರು ಮಹಿಳೆಗೆ ಆಪರೇಷನ್ ಮಾಡಿ ಕಿಡ್ನಿಯಲ್ಲಿದ್ದ ಕಲ್ಲುಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಆಪರೇಷನ್ ಮಾಡಿ ತೆಗೆದ ಕಲ್ಲುಗಳನ್ನು ಎಣಿಸಲು ವೈದ್ಯರು ಸುಮಾರು ಒಂದು ಗಂಟೆ ಸಮಯವನ್ನು ತೆಗೆದುಕೊಂಡಿದ್ದಾರೆ. ಮಹಿಳೆಯ ದೇಹದಲ್ಲಿ ಒಟ್ಟು 2,980 ಕಿಡ್ನಿ ಸ್ಟೋನ್ ಗಳು ಪತ್ತೆಯಾಗಿವೆ.

    ಮಹಾರಾಷ್ಟ್ರ ಧನರಾಜ್ ವಾಡಿಲೆಯಲ್ಲಿ ರೋಗಿಯೊಬ್ಬರ ಕಿಡ್ನಿಯಲ್ಲಿ ಬರೋಬ್ಬರಿ 1,72,155 ಕಲ್ಲುಗಳನ್ನು ತೆಗೆಯಲಾಗಿದ್ದು, ಗಿನ್ನಿಸ್ ದಾಖಲೆ ನಿರ್ಮಾಣವಾಗಿದೆ.

  • ಕ್ಸಿಯೋಮಿ ಎಂಐ 6 ಪ್ರೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಕ್ಸಿಯೋಮಿ ಎಂಐ 6 ಪ್ರೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಬೀಜಿಂಗ್: ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ತನ್ನ ನೂತನ 6 ಪ್ರೋ ಫೋನನ್ನು ಬಿಡುಗಡೆಗೊಳಿಸಿದೆ.

    ರೆಡ್‍ಮೀ 6 ಪ್ರೋ ಫೋನ್‍ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 5ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+5ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ರೆಡ್, ಗೋಲ್ಡ್, ರೋಸ್ ಗೋಲ್ಡ್ , ಬ್ಲೂ ಹಾಗೂ  ಬ್ಲಾಕ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ. ಜೂನ್ 26ರಿಂದ ಚೀನಾ ಆನ್‍ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿರಲಿದೆ. ಭಾರತದಲ್ಲಿ ಈ ಫೋನ್ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

    ಬೆಲೆ ಎಷ್ಟು?
    3ಜಿಬಿ RAM/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 999 (ಅಂದಾಜು 10,400 ರೂ.), 4ಜಿಬಿ RAM/34ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,199 (ಅಂದಾಜು 12,500 ರೂ.) ಹಾಗೂ 4ಜಿಬಿ RAM/64ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,299 (ಅಂದಾಜು 13,500 ರೂ.) ಬೆಲೆ ನಿಗದಿ ಮಾಡಿದೆ.

    ರೆಡ್‍ಮಿ 6 ಪ್ರೋ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 149.33 X 71.68 X 8.75ಮಿ.ಮೀ., 178 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.84 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(2280X1080 ಪಿಕ್ಸೆಲ್, 19:9 ಅನುಪಾತ 432ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಎಂಎಸ್‍ಎಂ 8953 ಸ್ನ್ಯಾಪ್ ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್ 2.0 ಗೀಗಾಹಟ್ರ್ಸ್-ಕಾರ್ಟೆಕ್ಸ್-ಎ53ಸಿಪಿಯು, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎಂಐ 10 ಆವೃತ್ತಿ ಅಪ್‍ಡೇಟೆಡ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ,3ಜಿಬಿ RAM/32 ಜಿಬಿ, 4ಜಿಬಿ RAM/32 ಜಿಬಿ ಹಾಗೂ 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ:
    ಮುಂಭಾಗ 5ಎಂಪಿ, ಸಾಪ್ಟ್ ಟೋನ್ ಸೇಲ್ಪಿ ಲೈಟ್ ವಿತ್ ಆಟೋ ಪೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+5ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಪ್ಯೂಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್.

    ಇತರೆ ಪ್ಯೂಚರ್ ಗಳು: ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 4000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ, ಹಾಗೂ 5ವೋಟ್ಸ್ ನ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

  • ಆಟೋದಲ್ಲಿಯೇ ಕಾರನ್ನ ಹೊತ್ತೊಯ್ದ!- ವಿಡಿಯೋ ವೈರಲ್

    ಆಟೋದಲ್ಲಿಯೇ ಕಾರನ್ನ ಹೊತ್ತೊಯ್ದ!- ವಿಡಿಯೋ ವೈರಲ್

    ಬೀಜಿಂಗ್: ನೋ ಪಾರ್ಕಿಂಗ್ ಕಡೆ ವಾಹನವನ್ನು ನಿಲ್ಲಿಸಿದ್ರೆ ಪೊಲೀಸರು ಬಂದು ಹೊತ್ತುಕೊಂಡು ಹೋಗುವುದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಆಟೋದಲ್ಲಿ ಕಾರ್ ಹೊತ್ತೊಯ್ದ ವಿಚಿತ್ರ ಘಟನೆಯೊಂದು ನಡೆದಿದೆ.

    ಈ ಘಟನೆ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಕಪ್ಪು ಸೆಡಾನ್ ಕಾರನ್ನು ಆಟೋದ ಮೇಲಿಟ್ಟು ಹೆದ್ದಾರಿಯಲ್ಲಿಯೇ ಸಂಚರಿಸಿದ್ದಾನೆ.

    ಆಟೋಗಿಂತ ಕಾರ್ ಹತ್ತು ಪಟ್ಟು ಭಾರವಾಗಿತ್ತು. ಈ ಘಟನೆ ಅಪಾಯಕಾರಿಯಾಗಿದ್ದು, ರಸ್ತೆಯಲ್ಲಿ ಓಡಾಡುವವರಿಗೂ ಪ್ರಾಣ ಹಾನಿಯನ್ನು ಉಂಟು ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    ಆಟೋ ಚಾಲಕ ಈ ರೀತಿ ಆಟೋ ಮೇಲೆ ಕಾರನ್ನ ಇಟ್ಟು ಚಲಾಯಿಸಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಆದ್ದರಿಂದ ಆತನಿಗೆ 1300 ಯುವಾನ್ (13,624 ರೂ.) ದಂಡವನ್ನು ವಿಧಿಸಲಾಗಿದೆ. ಆದರೆ ಚಾಲಕ ಯಾಕೆ ಈ ರೀತಿಯಾಗಿ ಮಾಡಿದ್ದಾನೆ ಎಂದು ವರದಯಾಗಿಲ್ಲ.

  • ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಬಾಲಕಿಯಿಂದ ಹೋಂವರ್ಕ್: ವೈರಲ್ ವಿಡಿಯೋ

    ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಬಾಲಕಿಯಿಂದ ಹೋಂವರ್ಕ್: ವೈರಲ್ ವಿಡಿಯೋ

    ಬೀಜಿಂಗ್: ಬಾಲಕಿಯೊಬ್ಬಳು ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ತನ್ನ ಹೋಂವರ್ಕ್ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ.

    ಬಾಲಕಿ ತಂದೆ ಕಾರನ್ನು ಚಲಾಯಿಸುತ್ತಿದ್ದರು. ಬಾಲಕಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಪುಸ್ತಕವನ್ನು ಇಟ್ಟುಕೊಂಡು ತನ್ನ ಹೋಂವರ್ಕ್ ಮಾಡಿದ್ದಾಳೆ.

    ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ದೇಹವನ್ನು ಹೊರ ಹಾಕಿ ಕಾರಿನ ರೂಫ್ ಅನ್ನು ಡೆಸ್ಕ್ ರೀತಿ ಮಾಡಿಕೊಂಡು ಅದರ ಮೇಲೆ ತನ್ನ ಪುಸ್ತಕವನ್ನು ಇಟ್ಟುಕೊಂಡು ಬಾಲಕಿ ತನ್ನ ಹೋಂವರ್ಕ್ ಮಾಡಿದ್ದಾಳೆ. ಬಾಲಕಿ ಹೋಂವರ್ಕ್ ಮಾಡುತ್ತಿರುವುದನ್ನು ನೋಡಿದ ಜನರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

    ಬಾಲಕಿಯ ತಂದೆ ಕಾರು ಚಲಾಯಿಸುತ್ತಾ ಪಕ್ಕದ ಸೀಟಿನಲ್ಲಿ ಇದ್ದ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದರು. ಆಗ ಅವರು ತನ್ನ ಮಗಳು ಕಾರಿನ ಕಿಟಕಿಯ ತುದಿಯಲ್ಲಿ ಕುಳಿತಿರುವುದನ್ನು ಗಮನಿಸಿದ್ದರು. ಆಗ ತಂದೆ ತಕ್ಷಣ ತನ್ನ ಮಗಳನ್ನು ಒಳಗೆ ಎಳೆದಿದ್ದಾರೆ.

    ಆಕೆ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಹೋಂವರ್ಕ್ ಮಾಡುತ್ತಿರುವುದ್ದನ್ನು ನಾನು ಗಮನಿಸಲಿಲ್ಲ. ಇದಾದ ಬಳಿಕ ಈ ರೀತಿ ಮತ್ತೆ ಮಾಡಬಾರದು ಎಂದು ನನ್ನ ಮಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಬಾಲಕಿಯ ತಂದೆ ಮಿ. ಚೇಂಗ್ ತಿಳಿಸಿದ್ದಾರೆ.

    ಸದ್ಯ ಬಾಲಕಿಯ ತಂದೆಯ ಡ್ರೈವಿಂಗ್ ಲೈಸೆನ್ಸ್ ಅಮಾನತುಗಳಿಸಲಾಗಿದ್ದು, ಕಂಪನಿ ಮಿ. ಚೇಂಗ್‍ನನ್ನು ಮತ್ತೆ ಟ್ಯಾಕ್ಸಿ ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.  ಇದನ್ನೂ ಓದಿ: ಚಲಿಸುತ್ತಿದ ಸ್ಕೂಟಿ ಹಿಂಬದಿಯಲ್ಲಿ ಕೂತು ಹೋಂವರ್ಕ್ ಮಾಡಿದ ಬಾಲಕ- ವಿಡಿಯೋ ವೈರಲ್

  • ಬ್ಯುಸಿ ಹೈವೇ ಮಧ್ಯೆ ಕಾರು ನಿಲ್ಲಿಸಿದ ಡ್ರೈವರ್: ನಿಯಂತ್ರಣ ತಪ್ಪಿ ಉರುಳಿ ಬಿತ್ತು ಲಾರಿ – ವೈರಲ್ ವಿಡಿಯೋ ನೋಡಿ

    ಬ್ಯುಸಿ ಹೈವೇ ಮಧ್ಯೆ ಕಾರು ನಿಲ್ಲಿಸಿದ ಡ್ರೈವರ್: ನಿಯಂತ್ರಣ ತಪ್ಪಿ ಉರುಳಿ ಬಿತ್ತು ಲಾರಿ – ವೈರಲ್ ವಿಡಿಯೋ ನೋಡಿ

    ಬೀಜಿಂಗ್: ಸದಾ ಬ್ಯುಸಿಯಾಗಿ ವಾಹನಗಳು ಒಡಾಡುವ ಹೈವೇಯೊಂದರಲ್ಲಿ ಚಾಲಕನೊಬ್ಬ ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿರುವ ಘಟನೆ ಚೀನಾದ ಶಾಂಗ್ ಹೈವಿಸ್ಟ್ ಹೈವೇನಲ್ಲಿ ನಡೆದಿದೆ.

    ಸದ್ಯ ಈ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣ ವರ್ಲ್ಡ್ ವರ್ಸ್ಟ್ ಡ್ರೈವರ್ ಎಂಬ ಹಣೆ ಪಟ್ಟಿ ಹೊಂದಿಗೆ ವೈರಲ್ ಆಗಿದೆ. ಈ ಘಟನೆ ಏಪ್ರಿಲ್ 10 ರಂದು ನಡೆದಿದ್ದು, ವೇಗವಾಗಿ ವಾಹನಗಳು ಚಾಲಿಸುತ್ತಿದ್ದ ವೇಳೆ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿ ನಡುರಸ್ತೆಯಲ್ಲೇ ಕಾರು ನಿಲ್ಲಿಸಿದ್ದಾನೆ. ಈ ವೇಳೆ ಕಾರಿನ ಹಿಂದೆ ಬರುತ್ತಿದ್ದ ಕಂಟೈನರ್ ಲಾರಿ ಚಾಲಕ ಕಾರಿನೊಂದಿಗೆ ಅಪಘಾತ ತಪ್ಪಿಸಲು ಯತ್ನಿಸಿದ್ದಾನೆ. ಪರಿಣಾಮವಾಗಿ ಕಂಟೈನರ್ ಲಾರಿ ಪಲ್ಟಿಯಾಗಿದೆ. ಕಂಟೈನರ್ ಪಲ್ಟಿಯಾಗುತ್ತಿದ್ದಂತೆ ಮತ್ತೊಬ್ಬ ಲಾರಿ ಚಾಲಕ ಮುನ್ನೆಚ್ಚರಿಕೆ ವಹಿಸಿ ತನ್ನ ವಾಹನ ನಿಲ್ಲಿಸಿದ್ದಾನೆ. ಬಳಿಕ ಕಾರು ಚಾಲಕ ಹೈವೇಯ ಮತ್ತೊಂದು ದಾರಿ ಬಳಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 2.2 ಲಕ್ಷ ಬಾರಿ ಜನರು ನೋಡಿದ್ದು, 3 ಸಾವಿರ ಜನರು ವಿಡಿಯೋವನ್ನು ಶೇರ್ ಮಾಡಿದ್ದಾರೆ. 4,200 ಮಂದಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.facebook.com/shanghaiist/videos/10156824030896030/

  • ವಿಡಿಯೋ: 10 ಸೆಕೆಂಡ್ ನಲ್ಲಿ 15 ಅಂತಸ್ತಿನ ಕಟ್ಟಡ ನೆಲಸಮ!

    ವಿಡಿಯೋ: 10 ಸೆಕೆಂಡ್ ನಲ್ಲಿ 15 ಅಂತಸ್ತಿನ ಕಟ್ಟಡ ನೆಲಸಮ!

    ಬೀಜಿಂಗ್: 15 ಅಂತಸ್ತಿನ ಕಟ್ಟಡವನ್ನು ಕೇವಲ 10 ಸೆಕೆಂಡ್ ಗಳಲ್ಲಿ ನೆಲಸಮ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕಳೆದ ಕೆಲ ದಿನಗಳ ಹಿಂದೆ ಚೀನಾದ ಚೆಂಗ್ಡು ನಗರದಲ್ಲಿ 20 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ವಸ್ತು ಪ್ರದರ್ಶನ ಕಟ್ಟಡವನ್ನು ಸ್ಫೋಟಕ ಬಳಸಿ ಕೆಡವಲಾಗಿದೆ. ಕೇವಲ 10 ಸೆಕೆಂಡ್ ಗಳಲ್ಲಿ ನಡೆದ ಈ ಪ್ರಕ್ರಿಯೆಯಿಂದಾಗಿ ಕ್ಷಣ ಮಾತ್ರದಲ್ಲಿ ಸುತ್ತಲಿನ ಪ್ರದೇಶವ ಸಂಪೂರ್ಣ ದೂಳಿನಿಂದ ಆವೃತ್ತವಾಗಿತ್ತು.

    ಈ ದೃಶ್ಯಗಳನ್ನು ಸ್ಥಳೀಯ ವ್ಯಕ್ತಿ ತನ್ನ ಮೊಬೈಲ್ ನಲ್ಲಿ ಸೆರೆಡಿದಿದ್ದಾನೆ. ಕಟ್ಟಡ ನೆಲಸಮವಾದ ಬಳಿಕ ದೂಳಿನ ಪ್ರಮಾಣ ಕಡಿಮೆ ಮಾಡಲು ಕಾರ್ಮಿಕರು ಕಟ್ಟಡದ ಅವಶೇಷಗಳ ಮೇಲೆ ನೀರು ಸುರಿದಿದ್ದಾರೆ. ಸ್ಫೋಟಕ ಬಳಸಿ ಕಟ್ಟಡ ನೆಲ ಸಮ ಮಾಡುವ ವೇಳೆ ಹೊಗೆ ನಿರೋಧಕ ಫಿರಂಗಿಗಳನ್ನು ಬಳಕೆ ಮಾಡಲಾಗಿದೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ವಿಡಿಯೋ: ಚಲಿಸುತ್ತಿದ್ದ ಬಸ್ ಮೇಲೆ ಬಿತ್ತು ಕಟ್ಟಡದ ಪಿಲ್ಲರ್!

    ವಿಡಿಯೋ: ಚಲಿಸುತ್ತಿದ್ದ ಬಸ್ ಮೇಲೆ ಬಿತ್ತು ಕಟ್ಟಡದ ಪಿಲ್ಲರ್!

    ಬೀಜಿಂಗ್: ಬದಲಾಗುತ್ತಿರುವ ಹವಾಮಾನದ ಪರಿಣಾಮ ಚೀನಾದಲ್ಲೀಗ ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ. ಪ್ರಕೃತಿಯ ಈ ವೈಪರಿತ್ಯದಿಂದ ನಗರದಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಕಟ್ಟಡದ ಪಿಲ್ಲರ್ ಬಿದ್ದು, ಬಸ್ ನಜ್ಜುಗುಜ್ಜಾದ ಘಟನೆ ಸೋಮವಾರ ನಡೆದಿದೆ.

    ಭಾನುವಾರದಂದು ಚೀನಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದು ಸಿಬ್ಬಂದಿಗಳನ್ನು ಮುಜುಗರಕ್ಕೀಡು ಮಾಡಿತ್ತು. ಇದಾದ ಬಳಿಕ ಶಾಂಘೈನ ರಸ್ತೆಯೊಂದರಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಕಟ್ಟಡದ ಪಿಲ್ಲರ್ ಬಿದ್ದು, ಬಸ್ ನಜ್ಜುಗುಜ್ಜಾಗಿದೆ. ಸಿಸಿಟಿವಿಯಲ್ಲಿ ಇದರ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ವಿಡಿಯೋದಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಇದ್ದಕ್ಕಿದ್ದಂತೆ ಕಟ್ಟಡದ ಅಲಂಕಾರಿಕ ಪಿಲ್ಲರ್ ಬಿದ್ದ ಪರಿಣಾಮ ಬಸ್‍ನ ಅರ್ಧ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಬಸ್ ಒಳಗಡೆ ಕುಳಿತ್ತಿದ್ದ ಯಾವ ಪ್ರಯಾಣಿಕರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ ಒಳಗಡೆ ಇದ್ದ ಸಿಸಿಟಿವಿಯಲ್ಲಿ ಕೂಡ ಘಟನೆಯ ದೃಶ್ಯ ಸೆರೆಯಾಗಿದ್ದು, ಪಿಲ್ಲರ್ ಎಷ್ಟು ರಭಸವಾಗಿ ಬಿದ್ದಿದೆ ಎಂಬುದನ್ನ ಕಾಣಬಹುದು. ಈ ವಿಡಿಯೋವನ್ನ ಇಲ್ಲಿನ ಮಾಧ್ಯಮವೊಂದು ಫೇಸ್‍ಬುಕ್ ಪೇಜ್‍ನಲ್ಲಿ ಶೇರ್ ಮಾಡಿದ್ದು, ನೋಡುಗರನ್ನ ಆಶ್ಚರ್ಯಚಕಿತರನ್ನಾಗಿಸಿದೆ.