Tag: Beijing

  • ಕಾಲಡಿಯಲ್ಲೇ ಪ್ರಪಾತ- ಗ್ಲಾಸ್ ಸೇತುವೆ ಮೇಲೆ ನಡೆಯಲು ಬೇಕು ಗಟ್ಟಿ ಗುಂಡಿಗೆ

    ಕಾಲಡಿಯಲ್ಲೇ ಪ್ರಪಾತ- ಗ್ಲಾಸ್ ಸೇತುವೆ ಮೇಲೆ ನಡೆಯಲು ಬೇಕು ಗಟ್ಟಿ ಗುಂಡಿಗೆ

    ಬೀಜಿಂಗ್: ಚೀನಾದ ಹುವಾಕ್ಸಿ ವಲ್ರ್ಡ್ ಅಡ್ವೆಂಚರ್ ಪಾರ್ಕ್ ನಲ್ಲಿ ಜಗತ್ತಿನ ಅತಿ ಉದ್ದದ ಗಾಜಿನ ಸೇತುವೆ ಉದ್ಘಾಟನೆಗೊಂಡಿದೆ. ಆದರೆ ಈ ಸೇತುವೆ ಮೇಲೆ ನಡೆಯಲು ನಿಜಕ್ಕೂ ಗಟ್ಟಿ ಗುಂಡಿಗೆ ಇರಲೇಬೇಕು.

    ಹೌದು. ಹುವಾಕ್ಸಿ ವಲ್ರ್ಡ್ ಅಡ್ವೆಂಚರ್ ಪಾರ್ಕ್ ನಲ್ಲಿ ಗಾಜಿನ ಸೇತುವೆ ಮೇಲೆ ನಡೆಯುವವರಿಗೆ ಕಾಲಿನ ಅಡಿಯಲ್ಲೇ ಪ್ರಪಾತ ಕಾಣಿಸುತ್ತದೆ. ಈ ಸೇತುವೆ ಗಾಜಿನಿಂದ ನಿರ್ಮಿತವಾಗಿದ್ದು, ಇದರ ಮೇಲೆ ನಡೆಯಲು ನಿಜಕ್ಕೂ ಗಟ್ಟಿ ಗುಂಡಿಗೆ ಇರಬೇಕು. ಯಾಕೆಂದರೆ ಇದರ ಮೇಲೆ ಹೋಗುವಾಗ ಯಾವಾಗ ಗಾಜು ಒಡೆಯುತ್ತದೋ ಎಂದು ಹೆದರಿ ಸಾಗುವ ಮಂದಿಯೇ ಹೆಚ್ಚು. ಈ ಸೇತುವೆ ಮೇಲೆ ಹೋಗುವುದೆಂದರೇ ಒಂದು ರೀತಿ ಸಾಹಸ ಎಂದರೆ ತಪ್ಪಾಗಲ್ಲ.

    ಭೂಮಿಯಿಂದ ಸುಮಾರು 100 ಮೀಟರ್ ಎತ್ತರದಲ್ಲಿ ಬರೋಬ್ಬರಿ 518 ಮೀಟರ್ ಉದ್ದದ ಈ ಗ್ಲಾಸ್ ಬ್ರಿಡ್ಜ್ ನಿರ್ಮಿಸಲಾಗಿದೆ. ಇದಕ್ಕೆ 3.5 ಸೆಂ.ಮೀ. ದಪ್ಪದ ಗಾಜು ಬಳಸಲಾಗಿದ್ದು, 4.7 ಟನ್‍ಗಳಷ್ಟು ತೂಕವನ್ನು ತಡೆಯಬಲ್ಲ ಸಾಮಥ್ರ್ಯವನ್ನು ಸೇತುವೆ ಹೊಂದಿದೆ. ಅಲ್ಲದೆ ಸೇತುವೆ ಮೇಲೆ ಒಮ್ಮೆಗೆ 2,600 ಮಂದಿ ನಿಲ್ಲಬಹುದು.

    ಈ ಸೇತುವೆಯ ಇನ್ನೊಂದು ವಿಶೇಷತೆ ಏನೆಂದರೆ, ಇದಕ್ಕೆ ಅಳವಡಿಸಿರುವ ವಿಶೇಷ ಸೌಂಡ್ ಹಾಗೂ ವಿಶ್ಯುವಲ್ ಎಫೆಕ್ಟ್. ಹೌದು. ಈ ಸೇತುವೆ ಮೇಲೆ ನಡೆಯುತ್ತಿದ್ದಾಗ ಗಾಜು ಒಡೆಯುತ್ತಿರುವ ಹಾಗೆ, ಬಿರುಕು ಬಿಡುವ ಹಾಗೆ ವಿಶ್ಯುವಲ್ ಎಫೆಕ್ಟ್ ಕಾಣಸಿಗುತ್ತದೆ. ಅದಕ್ಕೆ ತಕ್ಕಂತೆ ಗಾಜು ಒಡೆಯುತ್ತಿರುವ ಸದ್ದನ್ನು ಕೂಡ ಹಾಕಲಾಗಿದೆ. ಹೀಗಾಗಿ ಮೊದಲೇ ಗಾಜಿನ ಮೇಲೆ ನಡೆಯಲು ಹೆದರುವ ಮಂದಿಗೆ ಈ ಎಫೆಕ್ಟ್‍ಗಳು ಒಂದು ಕ್ಷಣ ಮೈ ಝಲ್ ಎನಿಸುವಂತೆ ಮಾಡುತ್ತದೆ.

    ಇತ್ತೀಚಿಗಷ್ಟೇ ಈ ಅದ್ಬುತ ಗಾಜಿನ ಸೇತುವೆಯ ಏರಿಯಲ್ ವಿಡಿಯೋ ಒಂದನ್ನು ಮಾಡಲಾಗಿದೆ. ಈ ವಿಡಿಯೋದಲ್ಲಿ ಕೆಲವರು ವಿಶೇಷ ಸೇತುವೆಯ ಸುಂದರ ಪಯಣವನ್ನು ಆನಂದಿಸುತ್ತ ಸಾಗುತ್ತಿದ್ದರೆ, ಇನ್ನೂ ಕೆಲವರು ಎಲ್ಲಿ ಗಾಜು ಒಡೆದು ಅನಾಹುತವಾಗುತ್ತೋ ಎಂದು ಭಯದಿಂದ ಸಾಗುತ್ತಿರುವ ದೃಶ್ಯಗಳು ಸೆರೆಯಾಗಿದೆ. ಮನಮೋಹಕ ನಿಸರ್ಗ ಸೌಂದರ್ಯದ ನಡುವೆ ಈ ಗಾಜಿನ ಸೇತುವೆ ಮೇಲೆ ನಡೆಯುವ ಖುಷಿಯೇ ಬೇರೆ ಎಂದು ಇಲ್ಲಿಗೆ ಬರುವ ಪ್ರವಾಸಿಗರು ಹೇಳುತ್ತಾರೆ.

  • ಫೋನ್ ಗಿಫ್ಟ್ ನೀಡದ್ದಕ್ಕೆ ಸಾರ್ವಜನಿಕರ ಮುಂದೆ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ

    ಫೋನ್ ಗಿಫ್ಟ್ ನೀಡದ್ದಕ್ಕೆ ಸಾರ್ವಜನಿಕರ ಮುಂದೆ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ

    ಬೀಜಿಂಗ್: ತನಗೆ ಸ್ಮಾರ್ಟ್‍ಫೋನ್ ಗಿಫ್ಟ್ ನೀಡಿಲ್ಲ ಎಂದು ಪ್ರೇಯಸಿ ಸಾರ್ವಜನಿಕರ ಮುಂದುಗಡೆಯೇ ತನ್ನ ಪ್ರಿಯಕರನಿಗೆ 52 ಬಾರಿ ಕಪಾಳಮೋಕ್ಷ ಮಾಡಿದ ಘಟನೆ ಚೀನಾದ ದಜಾವ್‍ನಲ್ಲಿ ನಡೆದಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.

    ಯುವತಿ ಕಪಾಳಮೋಕ್ಷ ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದಾರೆ. ಯುವತಿ ಕಪಾಳಕ್ಕೆ ಹೊಡೆಯುವಾಗ ಯುವಕ ಆಕೆಯನ್ನು ತಡೆಯಲಿಲ್ಲ ಹಾಗೂ ಹೊಡೆತದಿಂದ ತಪ್ಪಿಸಿಕೊಳ್ಳಲು ಕೂಡ ಪ್ರಯತ್ನಿಸಲಿಲ್ಲ.

    ಸ್ಥಳದಲ್ಲಿದ್ದ ಸಾರ್ವಜನಿಕರು ಯುವತಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಯುವತಿ ಯಾರ ಮಾತನ್ನು ಕೇಳದೆ ತನ್ನ ಪ್ರಿಯಕರನಿಗೆ ನಿರಂತರವಾಗಿ ಕೆನ್ನೆಗೆ ಹೊಡೆದಿದ್ದಾಳೆ.

  • ಕಸ್ಟಮ್ಸ್ ಅಧಿಕಾರಿಗಳಿಂದ 1 ಸಾವಿರ ಇರುವೆ ಸೀಜ್!

    ಕಸ್ಟಮ್ಸ್ ಅಧಿಕಾರಿಗಳಿಂದ 1 ಸಾವಿರ ಇರುವೆ ಸೀಜ್!

    ಬೀಜಿಂಗ್: ಅಕ್ರಮವಾಗಿ ಸಾಗಾಟ ಮಾಡುವ ಹಣ, ಬಂಗಾರ, ಡ್ರಗ್ಸ್ ಹೀಗೆ ಇತರೆ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡುವುದು ನಿಮಗೆ ಗೊತ್ತೆ ಇದೆ. ಈಗ ಚೀನಾದಲ್ಲಿ 1 ಸಾವಿರ ಇರುವೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

    ಇರುವೆಗಳನ್ನ ಸೀಜ್ ಮಾಡಿದ್ದಾರಾ ಅಂತ ಅಚ್ಚರಿಯಾದರೂ ಇದು ನಿಜ. ಕೋರಿಯರ್ ಮೂಲಕ ಸಾಗಾಣೆಯಾಗುತ್ತಿದ್ದ ಪಾರ್ಸೆಲ್‍ವೊಂದನ್ನು ಸೀಜ್ ಮಾಡಿದ್ದ ಕಸ್ಟಮ್ ಅಧಿಕಾರಿಗಳಿಗೆ ಅದನ್ನು ತೆರೆದಾಗ ಅದರಲ್ಲಿದ್ದ ಇರುವೆಗಳನ್ನು ನೋಡಿ ಶಾಕ್ ಆಗಿದ್ದಾರೆ.

    ಅಕ್ರಮವಾಗಿ ಕೋರಿಯರ್ ಮೂಲಕ ಬ್ರಿಟನ್‍ನಿಂದ ಚೀನಾಗೆ ಈ ಇರುವೆಗಳನ್ನು ಕಳುಹಿಸಲಾಗಿತ್ತು. ಈ ಇರುವೆಗಳು ವಿಲಕ್ಷಣ ಸಾಕುಪ್ರಾಣಿಗಳ ಪಟ್ಟಿಗೆ ಸೇರಿದರಿಂದ ಕಸ್ಟಮ್ಸ್ ಅಧಿಕಾರಿಗಳು ತಕ್ಷಣ ಪಾರ್ಸಲ್‍ನಲ್ಲಿದ್ದ ಒಂದು ಸಾವಿರ ಇರುವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇದರಲ್ಲಿ 37 ಕೆಂಪು ಮತ್ತು ಕಪ್ಪು ಬಣ್ಣದ ರಾಣಿ ಇರುವೆಗಳು ಸೇರಿದಂತೆ ಇತರೆ ಇರುವೆಗಳು ಇವೆ. ಜೀವಂತ ಇರುವೆಗಳನ್ನು ಪಾರ್ಸೆಲ್ ಮೂಲಕ ಸಾಗಾಟ ಮಾಡುವುದು ಚೀನಾದಲ್ಲಿ ನಿಷೇಧಿಸಲಾಗಿದ್ದು, ಸ್ಥಳೀಯವಲ್ಲದ ಇಂಥಹ ಇರುವೆಗಳ ಸಾಗಾಟ ನಮ್ಮ ಪರಿಸರಕ್ಕೆ ಹಾನಿ ತಂದೊಡ್ಡುತ್ತವೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

    ಅಲ್ಲದೆ ಇತ್ತೀಚೆಗೆ ಇ-ಕಾಮರ್ಸ್ ಹಾಗೂ ಆನ್‍ಲೈನ್ ಮೂಲಕ ಚೀನಾಕ್ಕೆ ಇಂತಹ ಹಾವುಗಳು, ಹಲ್ಲಿಗಳು ಹಾಗೂ ವಿವಿಧ ರೀತಿಯ ಕೀಟಗಳ ಅಕ್ರಮ ಸಾಗಾಟ ಹೆಚ್ಚಾಗಿದ್ದು, ದೇಶದಲ್ಲಿ ವಿದೇಶಿ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಳ್ಳಸಾಗಣೆಗಾಗಿ ಇ-ಕಾಮರ್ಸ್ ಬಳಕೆ ಆಗುತ್ತಿರುವುದು ಚೀನಾ ಸರ್ಕಾರಕ್ಕೆ ತಲೆನೋವು ತಂದೊಡ್ಡಿದೆ.

  • 10 ರೂಪಾಯಿಗಾಗಿ ಹೋಟೆಲ್‍ನಲ್ಲಿ 2 ವರ್ಷದ ಮಗುವನ್ನೇ ಅಡವಿಟ್ಟ ತಂದೆ!

    10 ರೂಪಾಯಿಗಾಗಿ ಹೋಟೆಲ್‍ನಲ್ಲಿ 2 ವರ್ಷದ ಮಗುವನ್ನೇ ಅಡವಿಟ್ಟ ತಂದೆ!

    ಬೀಜಿಂಗ್: ಹೋಟೆಲ್‍ನಲ್ಲಿ ಬಿಲ್ ಕಟ್ಟಲು 10 ರೂ. ಕಡಿಮೆಯಾಗಿದಕ್ಕೆ ತಂದೆಯೊಬ್ಬ ತನ್ನ 2 ವರ್ಷದ ಮಗುವನ್ನೇ ಅಡವಿಟ್ಟ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವ್ಯಕ್ತಿಯೊಬ್ಬ ಹೋಟೆಲ್‍ನಲ್ಲಿ ಊಟ ಮಾಡಿದ್ದ ಬಿಲ್ 62 ರೂ. ಆಗಿತ್ತು. ಆದ್ರೆ ಹಣ ಕಟ್ಟುವಾಗ 10 ರೂ. ಕಡಿಮೆಯಾಗಿದೆ. ಆಗ ತಂದೆ ತನ್ನ 2 ವರ್ಷದ ಮಗಳನ್ನೇ ಅಡವಿಡಲು ನಿರ್ಧರಿಸಿದ್ದಾನೆ. ಅಲ್ಲದೆ ಮರುದಿನ ಬಂದು ಹಣ ನೀಡಿ ಮಗಳನ್ನು ಕರೆದುಕೊಂಡು ಹೋಗುವುದಾಗಿ ಹೋಟೆಲ್ ಸಿಬ್ಬಂದಿ ಬಳಿ ಹೇಳಿದ್ದಾನೆ.

    ಈ ತಂದೆ ತನ್ನ ಮಗಳನ್ನು ಅಡವಿಟ್ಟ ದೃಶ್ಯವು ಹೋಟೆಲ್‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಅಡವಿಟ್ಟು ತಂದೆ ಹೋಟೆಲ್‍ನಿಂದ ಹೊರಹೋಗುತ್ತಿದ್ದಾಗ ಮಗು ಅಪ್ಪನ ಬಳಿ ಅಳುತ್ತ ಓಡಿ ಬಂದರೂ, ತಂದೆ ಮತ್ತೆ ಮಗಳನ್ನು ಹೋಟೆಲ್‍ನೊಳಗೆ ಬಿಟ್ಟು ಹೋಗಿದ್ದಾನೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆದರೆ, ಹೋಟೆಲ್ ಅವರು ಮಗುವಿಗೆ ಆಹಾರ ಹಾಗು ಒಂದು ಬಾಟಲ್ ಸೋಯಾ ಹಾಲು ನೀಡಿ ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಆದ್ರೆ ಮರುದಿನ ತಂದೆ ಮಗುವನ್ನು ಕರೆದುಕೊಂಡು ಹೋಗಲು ಬಂದಿಲ್ಲ. ಆದ್ದರಿಂದ ಹೋಟೆಲ್ ಅವರು ಮಗುವನ್ನು ಪೊಲೀಸರಿಗೆ ಒಪ್ಪಿಸಿ, ನಡೆದ ವಿಷಯವನ್ನು ತಿಳಿಸಿದ್ದಾರೆ. ಬಳಿಕ ತಂದೆಯನ್ನು ಪತ್ತೆ ಹಚ್ಚಿ ಮಗುವನ್ನು ಆತನಿಗೆ ನೀಡಿ ಬುದ್ಧಿ ಮಾತು ಹೇಳಿ ಪೊಲೀಸರು ಕಳುಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    https://www.youtube.com/watch?time_continue=30&v=bRDucsbLZvQ

  • ಡೆಸ್ಕ್‌ಟಾಪ್ ಕ್ಯಾಮೆರಾ ಆಫ್ ಮಾಡಲು ಮರೆತ ಪತಿ – ಪತ್ನಿಯ ಸೆಕ್ಸ್ ವಿಡಿಯೋ ರೆಕಾರ್ಡ್

    ಡೆಸ್ಕ್‌ಟಾಪ್ ಕ್ಯಾಮೆರಾ ಆಫ್ ಮಾಡಲು ಮರೆತ ಪತಿ – ಪತ್ನಿಯ ಸೆಕ್ಸ್ ವಿಡಿಯೋ ರೆಕಾರ್ಡ್

    – ವಿಡಿಯೋ ಆಧಾರದಲ್ಲಿ ಪತ್ನಿಗೆ ವಿಚ್ಛೇದನ

    ಬೀಜಿಂಗ್: ಪತಿ ತನ್ನ ಕಂಪ್ಯೂಟರ್ ಡೆಸ್ಕ್‌ಟಾಪ್ ಕ್ಯಾಮೆರಾ ಆಫ್ ಮಾಡಲು ಮರೆತಿದ್ದು, ಅದರಲ್ಲಿ ಆತನ ಪತ್ನಿಯ ಸೆಕ್ಸ್ ವಿಡಿಯೋ ರೆಕಾರ್ಡ್ ಆದ ಘಟನೆ ಚೀನಾದ ಮುಂಡಾನ್‍ಜಿಹಾಂಗ್‍ನಲ್ಲಿ ನಡೆದಿದೆ.

    ಯಂಗ್ ಡೆಸ್ಕ್‌ಟಾಪ್ ಕ್ಯಾಮೆರಾ ಆಫ್ ಮಾಡಲು ಮರೆತ ಪತಿ. ಯಂಗ್ ತನ್ನ ಡೆಸ್ಕ್‌ಟಾಪ್ ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ನೋಡಿ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಬಳಿಕ ವೇಶ್ಯಾವಾಟಿಕೆ ವ್ಯವಹಾರ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಕಾನೂನು ಬದ್ಧವಾಗಿ ಈಗ ವಿಚ್ಛೇದನ ಪಡೆದುಕೊಂಡಿದ್ದಾನೆ.

    ಆ ದಿನ ನನ್ನ ಕಂಪ್ಯೂಟರ್ ಕ್ಯಾಮೆರಾ ಕೆಟ್ಟು ಹೋಗಿತ್ತು. ಹಾಗಾಗಿ ನಾನು ಅದನ್ನು ಆಫ್ ಮಾಡಿರಲಿಲ್ಲ. ಆದರೆ ಆ ಕ್ಯಾಮೆರಾ ವರ್ಕ್ ಆಗುತ್ತಿತ್ತು. ನನ್ನ ಪತ್ನಿ ಹಾಗೂ ನನ್ನ ಆತ್ಮೀಯ ಗೆಳೆಯ ಅಶ್ಲೀಲವಾಗಿ ವರ್ತಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಇಬ್ಬರು ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಯಂಗ್ ಹೇಳಿದ್ದಾನೆ.

    ನನ್ನ ಪತ್ನಿ ಹಾಗೂ ನನ್ನ ಗೆಳೆಯ ನಡುವೆ ಅನೈತಿಕ ಸಂಬಂಧ ಇದೆ. ಲಿಯೂ ನನ್ನ ಒಳ್ಳೆಯ ಸ್ನೇಹಿತ ಹಾಗೂ ನನ್ನ ಮನೆಗೆ ಆಗಾಗ ಬರುತ್ತಿದನು . ನನ್ನ ಮನೆಗೆ ಬಂದ ವೇಳೆ ಆತನಿಗೆ ನನ್ನ ಪತ್ನಿಯ ಪರಿಚಯವಾಗಿದೆ. ಬಳಿಕ ನನ್ನ ಪತ್ನಿ ಲಿಯೂ ಜೊತೆ ಕೆಲಸ ಮಾಡಲು ಶುರು ಮಾಡಿದ್ದಳು ಎಂದು ಯಂಗ್ ಆರೋಪಿಸಿದ್ದಾನೆ.

    ಪತಿಯ ಆರೋಪವನ್ನು ಪತ್ನಿ ತಳ್ಳಿ ಹಾಕಿದ್ದಾಳೆ. ಈ ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ದೃಶ್ಯ ಒಂದು ದುರ್ಘಟನೆ  ಎಂದು ಯಂಗ್ ಪತ್ನಿ ತಿಳಿಸಿದ್ದಾಳೆ.

    ನಮ್ಮಿಬ್ಬರ ಮದುವೆಯಾಗಿ 20 ವರ್ಷವಾಗಿದೆ. ಈ ವಿಡಿಯೋದಿಂದ ನನ್ನ ಜೀವನ ಹಾಳಾಗಿ ಹೋಗಿದೆ ಎಂದು ಯಂಗ್ ಆರೋಪಿಸಿದ್ದಾನೆ. ಅಲ್ಲದೆ ಕ್ಯಾಮೆರಾದಲ್ಲಿ ಸೆರೆಯಾಗಿರುವ ಪತ್ನಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾನೆ.

    ಲಿಯೂ ಕುಡಿದ ನಶೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಇದು ಕೇವಲ ಒಂದು ಬಾರಿ ಆಗಿದ್ದು. ನನ್ನ ಪತಿ ನನ್ನ ಮೇಲೆ ದ್ವೇಷ ತೀರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾನೆ. ನನ್ನ ವಿಡಿಯೋವನ್ನು ಡೆಸ್ಕ್‌ಟಾಪ್ ಕ್ಯಾಮೆರಾ ಅಲ್ಲ ಯಾವುದೋ ಸೀಕ್ರೆಟ್ ಕ್ಯಾಮೆರಾದಿಂದ ಸೆರೆ ಹಿಡಿಯಲಾಗಿದೆ ಎಂದು ಪತ್ನಿ ತಿಳಿಸಿದ್ದಾಳೆ.

  • ಮದ್ವೆ ಮನೆಯಲ್ಲಿ ಮಾಜಿ ಪ್ರಿಯಕರನ ಕಾಲು ಹಿಡಿದು ಗೋಳಾಡಿ ಯುವತಿಯಿಂದ ಹೈಡ್ರಾಮಾ – ವಿಡಿಯೋ

    ಮದ್ವೆ ಮನೆಯಲ್ಲಿ ಮಾಜಿ ಪ್ರಿಯಕರನ ಕಾಲು ಹಿಡಿದು ಗೋಳಾಡಿ ಯುವತಿಯಿಂದ ಹೈಡ್ರಾಮಾ – ವಿಡಿಯೋ

    ಬೀಜಿಂಗ್: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆಗೆ ವಧುವಿನ ರೀತಿ ಬಂದು, ಆತನ ಕಾಲು ಹಿಡಿದು ಗೋಳಾಡಿ ಹೈಡ್ರಾಮಾ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಚೀನಾದ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆಗೆ ಬಂದು ಹೈಡ್ರಾಮಾ ಮಾಡಿದ್ದಾಳೆ. ಮದುವೆಯ ಶುಭಕಾರ್ಯ ನಡೆಯುತ್ತಿದ್ದ ವೇಳೆ ವಧು-ವರರು ನಿಂತಿದ್ದ ವೇದಿಕೆಯಲ್ಲೇ ರಂಪಾಟ ಮಾಡಿದ್ದಾಳೆ. ತನ್ನ ಮಾಜಿ ಪ್ರಿಯಕರ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳುವುದನ್ನು ಸಹಿಸಲಾಗದೇ ಯುವತಿ ಈ ರೀತಿ ಮಾಡಿದ್ದಾಳೆ. ತಾನೂ ಕೂಡ ಮದುಮಗಳ ರೀತಿ ರೆಡಿಯಾಗಿ ಬಂದಿದ್ದ ಯುವತಿ, ಮದುವೆ ಸಮಾರಂಭದಲ್ಲಿ ಎಲ್ಲರ ಮುಂದೆಯೇ ಪ್ರಿಯಕರನ ಕಾಲು ಹಿಡಿದು ತಪ್ಪಾಯ್ತು ಕ್ಷಮಿಸು, ನನ್ನನ್ನೇ ಮದುವೆಯಾಗು ಎಂದು ಗೋಳಾಡಿದ್ದಾಳೆ.

    ಈ ವೇಳೆ ವಧು ಕೋಪಗೊಂಡು ವೇದಿಕೆಯಿಂದ ಹೋಗಿದ್ದಕ್ಕೆ, ಯುವಕನು ಕೂಡ ಆಕೆಯ ಹಿಂದೆಯೇ ಸಮಾಧಾನ ಪಡಿಸಲು ಹೋಗಿದ್ದಾನೆ. ತನ್ನ ಮಾಜಿ ಪ್ರೇಯಸಿಯ ಗೋಳಾಟಕ್ಕೆ ಕ್ಯಾರೆ ಅನ್ನದೆ ಯುವಕ ಹೋಗಿದ್ದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಲೈಕ್ ಕೊಟ್ಟಿದ್ದಾರೆ.

    https://www.youtube.com/watch?v=YeofeaxiN1c#action=share

  • ಚೀನಾದಲ್ಲಿ ಪತ್ತೆಯಾಯ್ತು 2,500 ವರ್ಷ ಹಿಂದಿನ ಮೊಟ್ಟೆಗಳು!

    ಚೀನಾದಲ್ಲಿ ಪತ್ತೆಯಾಯ್ತು 2,500 ವರ್ಷ ಹಿಂದಿನ ಮೊಟ್ಟೆಗಳು!

    ಬೀಜಿಂಗ್: ಪುರಾತತ್ವ ಶಾಸ್ತ್ರಜ್ಞರ ತಂಡವೊಂದು ಪೂರ್ವ ಚೀನಾದ ಶಾಂಗ್‍ಕ್ಸಿಂಗ್ ನಗರದಲ್ಲಿ ಸುಮಾರು 2,500 ವರ್ಷಗಳ ಹಿಂದಿನ ಮಣ್ಣಿನ ಮಡಿಕೆಯೊಳಗೆ ಇರಿಸಿದ ಸುಮಾರು 20 ಮೊಟ್ಟೆಗಳನ್ನು ಪತ್ತೆ ಮಾಡಿದ್ದಾರೆ.

    ಚೀನಾದ ಶಾಂಗ್‍ಕ್ಸಿಂಗ್ ನಗರದಲ್ಲಿ ನ್ಯನ್ಜಿಂಗ್ ಪುರಾತತ್ವ ಸಂಸ್ಥೆ ಹಾಗೂ ಲಿಯಾಂಗ್ ಮ್ಯೂಸಿಯಂನ ತಜ್ಞರ ತಂಡ ಉತ್ಖನನ ಮಾಡಿ ಸಂಶೋದನೆ ನಡೆಸುತ್ತಿದ್ದರು. ಈ ವೇಳೆ ಮೊಟ್ಟೆಗಳು ಪತ್ತೆಯಾಗಿದೆ. ತಜ್ಞರ ಪ್ರಕಾರ ಸುಮಾರು 2,500 ವರ್ಷಗಳ ಹಿಂದೆಯಿದ್ದ ಮಾನವರು ಈ ಮೊಟ್ಟೆಗಳನ್ನು ಮಡಿಕೆಯಲ್ಲಿ ಕೂಡಿಟ್ಟು ಮಣ್ಣಿನೊಳಗೆ ಹೂತಿಟ್ಟಿದ್ದರು. ಮಡಿಕೆಯಲ್ಲಿ ಕ್ಯಾಲ್ಶಿಯಮ್ ಅಂಶ ಅಧಿಕವಾಗಿದ್ದ ಕಾರಣಕ್ಕೆ ಈ ಮೊಟ್ಟೆಗಳು ಒಡೆಯದೇ, ಮೊಟ್ಟೆಗಳ ಮೇಲಿನ ಪದರ ಹಸಿರು ಮತ್ತು ನೀಲಿ ಬಣ್ಣಕ್ಕೆ ತಿರುಗಿದೆ ಎಂದು ತಿಳಿಸಿದ್ದಾರೆ.

    ಹಿಂದಿನ ಕಾಲದಲ್ಲಿ ಮನುಷ್ಯ ಸಾವನ್ನಪ್ಪಿದರೇ ಆತನಿಗೆ ಸಂಬಂಧ ಪಟ್ಟ ವಸ್ತುಗಳನ್ನು ಮಣ್ಣಿನಲ್ಲಿ ಹೂತಿಡುತ್ತಿದ್ದರು. ಹಾಗೆಯೇ ಮೊಟ್ಟೆಗಳು ಪತ್ತೆಯಾದ ಸ್ಥಳದ ಮಾಲೀಕ ಸತ್ತ ನಂತರ ಆತನ ಆತ್ಮ ಮತ್ತೆ ಕಾಡಬಾರದು ಎಂಬ ಕಾರಣಕ್ಕೆ ಆತ ಬಳಕೆ ಮಾಡುತ್ತಿದ್ದ ವಸ್ತುಗಳ ಸಮೇತ ಆತನನ್ನು ಹೂಳಿರಬಹುದು ಎಂದು ಉತ್ಖನನ ನಡೆಸಿದ ತಜ್ಞರು ಊಹಿಸಿದ್ದಾರೆ. ಅಲ್ಲದೆ ಈ ಸ್ಥಳದಲ್ಲಿ ದೊರಕಿರುವ ಮೊಟ್ಟೆ ಹಾಗೂ ಇತರೇ ಪುರಾತನ ವಸ್ತುಗಳನ್ನು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳುಹಿಸಲಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

  • ತನ್ನ ಆಸೆ ಪೂರೈಸಿಕೊಳ್ಳಲು ಟೆರೇಸ್ ಮೇಲಿಂದ ಹಣದ ಮಳೆ ಸುರಿಸಿದ..!

    ತನ್ನ ಆಸೆ ಪೂರೈಸಿಕೊಳ್ಳಲು ಟೆರೇಸ್ ಮೇಲಿಂದ ಹಣದ ಮಳೆ ಸುರಿಸಿದ..!

    ಬೀಜಿಂಗ್: ಯುವಕನೊಬ್ಬ ತನ್ನ ಆಸೆ ಪೂರೈಸಿಕೊಳ್ಳಲು ಲಕ್ಷಾಂತರ ರೂ. ಹಣವನ್ನು ಟೆರೇಸ್ ಮೇಲಿಂದ ಎಸೆದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕ ಜೈಲು ಪಾಲಾಗಿದ್ದಾನೆ.

    ಜಗತ್ತಿನಲ್ಲಿ ದುಡ್ಡು ಸಂಪಾದಿಸಲು ಜನರು ಎಷ್ಟೆಲ್ಲ ಕಷ್ಟ ಪಡುತ್ತಾರೆ. ಆದ್ರೆ ಚೀನಾದ ಹಾಂಗ್‍ಕಾಂಗ್ ಮೂಲದ ವಾಂಗ್ ಚಿಂಗ್(24) ತನ್ನ ಆಸೆಯನ್ನು ತೀರಿಸಿಕೊಳ್ಳಲು ಸಿನಿಮೀಯ ರೀತಿ, ಅಂದಾಜು 18 ಲಕ್ಷ ರೂ. ಹಣವನ್ನು ಟೆರೇಸ್ ಮೇಲಿನಿಂದ ಎಸೆದಿದ್ದಾನೆ. ಈ ದುಡ್ಡಿನ ಸುರಿಮಳೆ ನೋಡಲು ಸ್ಥಳದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಅಲ್ಲದೆ ಈ ದೃಶ್ಯವನ್ನು ತನ್ನ ಫೇಸ್‍ಬುಕ್ ಖಾತೆಯಿಂದ ವಾಂಗ್ ಲೈವ್ ವಿಡಿಯೋ ಕೂಡ ಮಾಡಿ ಜನರ ಕಣ್ಣಲ್ಲಿ ಹೀರೋ ಆಗಿದ್ದಾನೆ.

    ವಿಡಿಯೋದಲ್ಲಿ ಮೊದಲು ವಾಂಗ್ ಹಣ ತುಂಬಿದ್ದ ದುಬಾರಿ ಕಾರೊಂದರಲ್ಲಿ ಬಂದು, ಬಳಿಕ ಹಣವನ್ನು ಮನೆಯ ಟೆರೇಸ್ ಮೇಲಿಂದ ಎಸೆದು ಹೀರೋ ರೆಂಜಲ್ಲಿ ಪೋಸ್ ನೀಡಿದ್ದಾನೆ. ಈ ದೃಶ್ಯವನ್ನು ನೋಡಲು ಸ್ಥಳದಲ್ಲಿ ಬಹುತೇಕ ಜನರು ಸೇರಿದ್ದರಿಂದ ಕೆಲವು ಸಮಯದ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಆದರಿಂದ ತನ್ನ ವಿಚಿತ್ರ ಆಸೆ ತೀರಿಸಿಕೊಳ್ಳಲು ಹಾಗೂ ಜನರ ಮುಂದೆ ತನ್ನ ಹಣವನ್ನು ಪ್ರದರ್ಶಿಸಲು ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾನೆ ಅಂತ ವಾಂಗ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ನಂತರ ಪೊಲೀಸರು ವಾಂಗ್‍ನನ್ನು ವಿಚಾರಣೆ ಮಾಡಿದ್ದಾರೆ. ಆಗ ಕೆಲದಿನಗಳ ಹಿಂದೆ ವಾಂಗ್ ಟೆರೇಸ್ ಮೇಲಿಂದ ಹಣ ಎಸೆದು ಬಡ ಜನರಿಗೆ ಸಹಾಯ ಮಾಡಿ ಹೀರೋ ಆದ ಹಾಗೆ ಕನಸು ಕಂಡಿದ್ದನಂತೆ. ಆದರಿಂದ ಬಡ ಜನರಿಗೆ ಸಹಾಯ ಮಾಡಲು ಈ ರೀತಿ ಹಣ ಎಸೆದೆ ಎಂದು ಪೊಲೀಸರಿಗೆ ಹೇಳಿದ್ದಾನೆ. ವಿಚಾರಣೆ ವೇಳೆ ಆತ ಎಷ್ಟು ಹಣ ಎಸೆದಿದ್ದಾನೆ ಅಂತ ಪೊಲೀಸರ ಬಳಿ ಬಾಯ್ಬಿಟ್ಟಿಲ್ಲ. ಆದ್ರೆ ಸ್ಥಳಿಯ ಮಾಧ್ಯಮಗಳು ಮಾತ್ರ ವಾಂಗ್ ಸುಮಾರು 18 ಲಕ್ಷ ರೂಪಾಯಿಕ್ಕಿಂತ ಹೆಚ್ಚು ಹಣವನ್ನೇ ತನ್ನ ಕಾರಲ್ಲಿ ತಂದಿದ್ದ ಎಂದು ವರದಿ ಮಾಡಿದೆ.

    ಒಂದೆಡೆ ಜನರಿಗೆ ಸಹಾಯ ಮಾಡಲು ವಾಂಗ್ ಹಣ ಎಸೆದಿದ್ದಾನೆ ಅಂತ ಹೇಳಿದರೆ, ಇನ್ನೊಂದೆಡೆ ಸ್ಥಳೀಯರು ಆತ ಸುಮ್ಮನೆ ಪಬ್ಲಿಸಿಟಿಗೆ ಈ ರೀತಿ ಕೆಲಸವನ್ನು ಮಾಡುತ್ತಿರುತ್ತಾನೆ ಅಂತ ಹೇಳುತ್ತಾರೆ. ಅದೇನೆ ಆಗ್ಲಿ ಕೊನೆಗೆ ಆಸೆ ಪೂರೈಸಿಕೊಳ್ಳಲು ಹೋಗಿ ಯುವಕ ಜೈಲು ಸೇರಿದ್ದಂತೂ ವಿಪರ್ಯಾಸ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ಯುಸಿ ರಸ್ತೆಯ ದೊಡ್ಡ ಸ್ಕ್ರೀನ್‍ನಲ್ಲಿ 90 ನಿಮಿಷ ಪ್ರಸಾರವಾಯ್ತು ಪೋರ್ನ್ ವಿಡಿಯೋ

    ಬ್ಯುಸಿ ರಸ್ತೆಯ ದೊಡ್ಡ ಸ್ಕ್ರೀನ್‍ನಲ್ಲಿ 90 ನಿಮಿಷ ಪ್ರಸಾರವಾಯ್ತು ಪೋರ್ನ್ ವಿಡಿಯೋ

    ಬೀಜಿಂಗ್: ರಸ್ತೆಯಲ್ಲಿರುವ ದೊಡ್ಡ ಎಲೆಕ್ಟ್ರಾನಿಕ್ ಫಲಕದಲ್ಲಿ 90 ನಿಮಿಷ ಪೋರ್ನ್ ವಿಡಿಯೋ ಪ್ರಸಾರವಾದ ಘಟನೆಯೊಂದು ಚೀನಾದ ಜಿಯಾಂಗ್ಸು ನಗರದ ಲಿಯಾಂಗ್‍ನಲ್ಲಿ ನಡೆದಿದೆ.

    ಸಿಬ್ಬಂದಿಯೊಬ್ಬ ರಾತ್ರಿ ವೇಳೆ ಎಲೆಕ್ಟ್ರಾನಿಕ್ ಸ್ಕ್ರೀನ್ ಆಫ್ ಆಗಿರುತ್ತದೆ ಎಂದು ತಿಳಿದು ತನ್ನ ಕಂಪ್ಯೂಟರ್ ನಲ್ಲಿ ಪೋರ್ನ್ ವಿಡಿಯೋ ವೀಕ್ಷಿಸಿದ್ದಾನೆ. ಆದರೆ ಆ ಕಂಪ್ಯೂಟರ್ ಹೊರಗೆ ರಸ್ತೆಯಲ್ಲಿದ್ದ ಎಲೆಕ್ಟ್ರಾನಿಕ್ ಸ್ಕ್ರೀನ್‍ಗೆ ಸಂಪರ್ಕಿಸುವ ಕನೆಕ್ಷನ್ ಆಫ್ ಆಗದ ಕಾರಣ 90 ನಿಮಿಷಗಳ ಕಾಲ ನೀಲಿ ಚಿತ್ರ ಸ್ಕ್ರೀನ್ ಮೇಲೆ ಪ್ರಸಾರವಾಗಿದೆ.

    ಪೋರ್ನ್ ವಿಡಿಯೋ ಎಲೆಕ್ಟ್ರಾನಿಕ್ ಸ್ಕ್ರೀನ್ ಮೇಲೆ ಪ್ರಸಾರವಾಗುತ್ತಿದ್ದಂತೆ ಅಲ್ಲಿ ಓಡಾಡುತ್ತಿದ್ದ ಜನರು ಒಂದು ಕ್ಷಣ ಅಚ್ಚರಿಪಟ್ಟರು. ಮತ್ತೆ ಕೆಲವರು ಪ್ರಸಾರವಾಗುತ್ತಿದ್ದ ಪೋರ್ನ್ ವಿಡಿಯೋವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ.

    ಸ್ಕ್ರೀನ್‍ನಲ್ಲಿ ಪೋರ್ನ್ ವಿಡಿಯೋ ಪ್ರಸಾರವಾಗುತ್ತಿರುವುದನ್ನು ನೋಡಿದ ಸಹದ್ಯೋಗಿ ಆ ವ್ಯಕ್ತಿಗೆ ಕೂಡಲೇ ಈ ವಿಡಿಯೋ ಪ್ರಸಾರ ಮಾಡುವುದನ್ನು ನಿಲ್ಲಿಸು ಎಂದು ಹೇಳಿದ್ದಾನೆ. ಆಗ ಸಿಬ್ಬಂದಿ ಆ ವಿಡಿಯೋ ಪ್ರಸಾರ ಮಾಡುವುದನ್ನು ನಿಲ್ಲಿಸಿದ್ದಾನೆ. ಈ ಘಟನೆ ಈಗ ಚೀನಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉದ್ಘಾಟನೆಗೆ ಸಿದ್ಧಗೊಂಡಿದೆ ಜಗತ್ತಿನ ಉದ್ದದ ಸಮುದ್ರ ಸೇತುವೆ

    ಉದ್ಘಾಟನೆಗೆ ಸಿದ್ಧಗೊಂಡಿದೆ ಜಗತ್ತಿನ ಉದ್ದದ ಸಮುದ್ರ ಸೇತುವೆ

    ಬೀಜಿಂಗ್: ಚೀನಾ-ಹಾಂಕಾಂಗ್ ಮಧ್ಯೆ ಸೇತುವೆಯೊಂದು ನಿರ್ಮಾಣವಾಗಿದ್ದು ಈಗ ಜಗತ್ತಿನಲ್ಲಿಯೇ ಅತೀ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    2009ರಲ್ಲಿ ಆರಂಭವಾಗಿದ್ದ ಈ ಸೇತುವೆಯ ನಿರ್ಮಾಣ ಕಾರ್ಯ ಮುಕ್ತಾಯವಾಗಿದ್ದು, ಬರೋಬ್ಬರಿ 55 ಕಿಲೋ ಮೀಟರ್ ಉದ್ದವಿರುವ ಈ ಸೇತುವೆ ಅಕ್ಟೋಬರ್ 24 ರಂದು ಉದ್ಘಾಟನೆಯಾಗಲಿದೆ. ಚೀನಾ ಝಹೈನಿಂದ ಹಾಂಕಾಂಗ್ ನ ಮಕಾವೋಗೆ ಪ್ರಯಾಣ ಮಾಡಲು ಕೇವಲ 30 ನಿಮಿಷ ಸಾಗುತ್ತದೆ. ಇದಕ್ಕೂ ಮೊದಲು ಎರಡು ನಗರಗಳ ನಡುವೆ ಪ್ರಯಾಣಿಸಲು 3 ಗಂಟೆ ಬೇಕಾಗಿತ್ತು.

    ಆರಂಭದಲ್ಲಿ ಸೇತುವೆಯನ್ನು ನೇರವಾಗಿ ಹಾಂಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಬಹುದು ಎಂದು ಚಿಂತಿಸಿದ ಹಾಂಕಾಂಗ್ ಯೋಜನೆಯ ಪ್ಲಾನ್ ಬದಲಿಸಲು ತಿಳಿಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿದೆ.

    ಈ ಸೇತುವೆ ನಿರ್ಮಾಣಕ್ಕೆ ಚೀನಾ 9.83 ಲಕ್ಷ ಕೋಟಿ ರೂ. ಹಣ ವೆಚ್ಚಮಾಡಿದೆ. ಸೇತುವೆ ಮೇಲೆ ಪ್ರಯಾಣ ಮಾಡಲು ಟೋಲ್ ದರ ನಿಗದಿ ಮಾಡಲಾಗಿದೆ. 2030ರ ವೇಳೆಗೆ ಪ್ರತಿದಿನ ಸೇತುವೆಯಲ್ಲಿ 29,100 ವಾಹನಗಳು ಚಲಿಸಬಹುದು ಎಂದು ಅಂದಾಜಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv