Tag: Beijing

  • ಲವ್ ಮ್ಯಾರೇಜ್ ಫಿಕ್ಸ್ ಆಗಿದ್ರೂ ಬಾವನೊಂದಿಗೆ ಸೆಕ್ಸ್ – ಮಂಟಪದಲ್ಲೇ ವರನಿಂದ ವಿಡಿಯೋ ಪ್ಲೇ

    ಲವ್ ಮ್ಯಾರೇಜ್ ಫಿಕ್ಸ್ ಆಗಿದ್ರೂ ಬಾವನೊಂದಿಗೆ ಸೆಕ್ಸ್ – ಮಂಟಪದಲ್ಲೇ ವರನಿಂದ ವಿಡಿಯೋ ಪ್ಲೇ

    -ಬೆಡ್‍ರೂಮಿನಲ್ಲಿ ಕ್ಯಾಮೆರಾ ಇರೋದನ್ನೇ ಮರೆತ ವಧು

    ಬೀಜಿಂಗ್: ಪ್ರೀತಿಸಿದ ಹುಡುಗನ ಜೊತೆ ಮದುವೆ ನಿಶ್ಚಯವಾಗಿದ್ದರೂ ಸ್ವಂತ ಬಾವನೊಂದಿಗೆ ವಧು ಲೈಂಗಿಕ ಸಂಬಂಧ ಇಟ್ಟಕೊಂಡಿದ್ದಳು. ಇದನ್ನು ತಿಳಿದು ವರ ಮದುವೆಯ ಮಂಟಪದಲ್ಲಿಯೇ ಅವರಿಬ್ಬರ ಸೆಕ್ಸ್ ವಿಡಿಯೋವನ್ನು ಬಹಿರಂಗಪಡಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.

    ಚೀನಾದ ಫೂಜಿಯಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಧು ವೇದಿಕೆ ಮೇಲೆ ಬಂದು ನಿಲ್ಲುತ್ತಾಳೆ. ಅಷ್ಟರಲ್ಲಿ ಬಾವನೊಂದಿಗೆ ಸೆಕ್ಸ್ ಮಾಡಿರುವ ವಿಡಿಯೋವನ್ನು ವರ ಮಂಟಪದಲ್ಲಿಯೇ ಪ್ಲೇ ಮಾಡಿದ್ದಾನೆ. ಆಗ ವರ “ನನಗೆ ಗೊತ್ತಿಲ್ಲ ಎಂದು ಭಾವಿಸಿದ್ದೀಯಾ”ಎಂದು ಆಕ್ರೋಶದಿಂದ ಹೇಳಿದ್ದಾನೆ. ನಂತರ ವಧು ತನ್ನ ಕೈಯಲ್ಲಿದ್ದ ಹೂಗುಚ್ಛವನ್ನು ಎಸೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ವರ ಮತ್ತು ವಧು ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಕಳೆದ ಆರು ತಿಂಗಳು ಹಿಂದೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರ ತಮ್ಮ ಭವಿಷ್ಯ ಚೆನ್ನಾಗಿರಲಿ ಎಂದು ಮನೆಯೊಂದನ್ನು ಕಟ್ಟಿಸಿದ್ದನು. ಅಲ್ಲದೇ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾವನ್ನು ಕೂಡ ಫಿಕ್ಸ್ ಮಾಡಿಸಿದ್ದನು.

    ಇತ್ತ ವಧು ತನ್ನ ಗರ್ಭಿಣಿ ಸಹೋದರಿಯ ಪತಿಯೊಂದಿಗೆ ಸಂಬಂಧ ಹೊಂದಿದ್ದಳು. ಸಹೋದರಿ ಮನೆಯಲ್ಲಿ ಇಲ್ಲದಿದ್ದಾಗ ಮನೆಗೆ ಹೋಗಿ ಬಾವನೊಂದಿಗೆ ಸೆಕ್ಸ್ ಹೊಂದುತ್ತಿದ್ದಳು. ಆದರೆ ಒಂದು ದಿನ ತನ್ನ ಪ್ರಿಯತಮ ಕಟ್ಟಿಸಿದ್ದ ಮನೆಗೆ ಕರೆದುಕೊಂಡು ಬಂದು ಬಾವನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ. ಇದು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

    ವಿಡಿಯೋ ನೋಡಿದ ವರ ತಾಳ್ಮೆ ಕಳೆದುಕೊಳ್ಳದೇ ಸುಮ್ಮನಿದ್ದ. ಆದರೆ ಮದುವೆಯ ಮಂಟಪದಲ್ಲಿಯೇ ಆ ವಿಡಿಯೋ ರಿಲೀಸ್ ಮಾಡಿ ವಧು ಮತ್ತು ಬಾವನ ಸಂಬಂಧವನ್ನು ಬಹಿರಂಗಪಡಿಸಿದ್ದಾನೆ. ಇದನ್ನು ನೋಡಿದ ಸಂಬಂಧಿಕರು ಶಾಕ್ ಆಗಿದ್ದಾರೆ. ಕೊನೆಗ ವರ ಮದುವೆ ಕ್ಯಾನ್ಸಲ್ ಮಾಡಿ ಅಲ್ಲಿಂದ ಹೋಗಿದ್ದಾನೆ.

  • ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ಅನುಗುಣವಾಗಿ ಕುರಾನ್ ಅಧ್ಯಾಯವನ್ನೇ ಬದಲಿಸಲು ಮುಂದಾದ ಚೀನಾ

    ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ಅನುಗುಣವಾಗಿ ಕುರಾನ್ ಅಧ್ಯಾಯವನ್ನೇ ಬದಲಿಸಲು ಮುಂದಾದ ಚೀನಾ

    ಬೀಜಿಂಗ್: ಚೀನಾದ ಝಿಂಜಿಯಾಂಗ್ ಪ್ರಾಂತ್ಯದಲ್ಲಿ ನೆಲೆಸಿರುವ ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುವ ಆರೋಪದ ಮಧ್ಯೆ ಚೀನಾ ಸರ್ಕಾರ ಧರ್ಮ ಗ್ರಂಥಗಳಾದ ಕುರಾನ್ ಮತ್ತು ಬೈಬಲಿನ ಕೆಲ ಅಧ್ಯಾಯಗಳನ್ನು ಪುನರ್ ರಚಿಸಲು ಮುಂದಾಗಿದೆ.

    ಕಮ್ಯೂನಿಸ್ಟ್ ಸರ್ಕಾರ ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ಧರ್ಮಗ್ರಂಥಗಳಲ್ಲಿ ಪ್ರಸ್ತಾಪಗೊಂಡಿರುವ ಅಂಶಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಪಕ್ಷ ಪರಿಷ್ಕೃತ ಆವೃತ್ತಿಗಳಲ್ಲಿ ಪಕ್ಷದ ಸಿದ್ಧಾಂತಗಳಿಗೆ ವಿರುದ್ಧದ ಅಂಶಗಳು ಇರುವುದಿಲ್ಲ ಎಂದು ಹೇಳಿದೆ. ಅಲ್ಲದೇ ಈ ಬದಲಾವಣೆಗಳನ್ನು ಸಮಯದ ಪ್ರಗತಿಗೆ ಅನುಗುಣವಾಗಿ ವಿಷಯಗಳನ್ನು ಗುರಿಯಾಗಿಸಿ ಸಮಗ್ರ ಮೌಲ್ಯಮಾಪನ ಮಾಡುವ ಯೋಜನೆಯ ಭಾಗ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ಅಂತಾರಾಷ್ಟ್ರಿಯ ಮಾನವಹಕ್ಕುಗಳ ಸಂಸ್ಥೆಯೂ ಕೂಡ ಚೀನಾ ಸರ್ಕಾರವನ್ನು ಝಿಂಜಿಯಾಂಗ್ ಸೇರಿದಂತೆ ಕ್ಸಿನ್‍ಜಿಯಾಂಗ್ ಪ್ರದೇಶದ ಮುಸ್ಲಿಂರ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯ ಸೇರಿದಂತೆ ಬಂಧನಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡುತಿತ್ತು. ಈ ಎಲ್ಲಾ ಬೆಳವಣಿಗೆಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ನೀಡಿದ ವರದಿಯ ಬಳಿಕ ನಡೆದಿದ್ದು, ಸುಮಾರು 20 ಲಕ್ಷ ಮಂದಿ ಮುಸ್ಲಿಮರನ್ನು ಭಯೋತ್ಪಾದನಾ ನಿಗ್ರಹ ಅಭಿಯಾನದಡಿ ಅಕ್ರಮ ಬಂಧನದಲ್ಲಿರಿಸಲಾಗಿದೆ ಎಂದು ತನ್ನ ವರದಿಯಲ್ಲಿ ಪ್ರಸ್ತಾಪ ಮಾಡಿತ್ತು.

    ಚೀನಾ ಸರ್ಕಾರ ವೃತ್ತಿಪರ ತರಬೇತಿ ಕೇಂದ್ರಗಳ ಹೆಸರಿನಲ್ಲಿ ಸರಿಸುಮಾರು 10 ಲಕ್ಷ ಉಯಿಘರ್ ಮುಸ್ಲಿಮರು ಹಾಗೂ ಇತರೆ ಮುಸ್ಲಿಮರನ್ನು ಬಂಧಿಸಿದೆ. ಆದರೆ ವಿಶ್ವಕ್ಕೆ ಚೀನಾ ಸರ್ಕಾರ ಮಾತ್ರ ಈ ಕೇಂದ್ರಗಳಲ್ಲಿ ಪ್ರಜೆಗಳಿಗೆ ವಿಶೇಷ ಹಾಗೂ ಮೂಲಭೂತ ಕೌಶಲ್ಯಗಳ ತರಬೇತಿ ನೀಡಿ ಅವರ ಚಿಂತನೆಯನ್ನು ಬದಲಿಸುತ್ತೇವೆ ಎಂದು ಹೇಳುತ್ತಿದೆ.

    ಚೀನಾ ಸರ್ಕಾರ ಈ ನಡೆಯನ್ನು ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಉಗ್ರಗಾಮಿ ನೀತಿಯ ದೌರ್ಜನ್ಯದ ಒಂದು ಭಾಗವಾಗಿದೆ ಎಂದಿವೆ. ಅಲ್ಲದೇ ಮುಸ್ಲಿಮರನ್ನು ಬಂಧಿಸುವುದು ಮಾತ್ರವಲ್ಲದೇ ತರಬೇತಿ ಕೇಂದ್ರಗಳಲ್ಲಿ ಜನಿಸುವ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ನಮೂದಿಸುವುದು ನಿಷೇಧಿಸುತ್ತಿದೆ. ಅಲ್ಲಿನ ಮಂದಿಗೆ ಕ್ರೂರ ಚಿತ್ರಹಿಂಸೆಯನ್ನು ನೀಡುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ.

    2014ರಿಂದಲೂ ಚೀನಾ ಇಂತಹ ಪುನರ್ ವಸತಿ ಕೇಂದ್ರಗಳನ್ನು ತೆರೆದಿತ್ತು. ಈ ವೇಳೆ ತನ್ನ ನಡೆಗೆ ಸಮರ್ಥನೆ ನೀಡಿದ್ದ ಚೀನಾ ಧಾರ್ಮಿಕ ಭಯೋತ್ಪಾದನೆ ಮತ್ತು ಪ್ರತ್ಯೇಕತವಾದ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಎಂದಿತ್ತು.

  • ಚೆಕಪ್‍ಗಾಗಿ ನಿಂತು ಸುಸ್ತಾದ ಗರ್ಭಿಣಿ ಪತ್ನಿಗೆ ಕುರ್ಚಿಯಾದ ಪತಿ: ವಿಡಿಯೋ

    ಚೆಕಪ್‍ಗಾಗಿ ನಿಂತು ಸುಸ್ತಾದ ಗರ್ಭಿಣಿ ಪತ್ನಿಗೆ ಕುರ್ಚಿಯಾದ ಪತಿ: ವಿಡಿಯೋ

    ಬೀಜಿಂಗ್: ಚೆಕಪ್‍ಗಾಗಿ ನಿಂತು ಸುಸ್ತಾದ ಗರ್ಭಿಣಿ ಪತ್ನಿಗೆ ಪತಿಯೊಬ್ಬರು ಕುರ್ಚಿಯಾದ ಅಪರೂಪದ ಸಂಗತಿಯೊಂದು ಚೀನಾದಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

    ಪತಿ ತನ್ನ ಗರ್ಭಿಣಿ ಪತ್ನಿ ಜೊತೆ ಚೆಕಪ್‍ಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರ ಬಳಿ ಹೋಗಲು ತಮ್ಮ ಸರದಿ ಬರುವವರೆಗೂ ಇಬ್ಬರು ಹೊರಗೆ ಕಾಯುತ್ತಾ ನಿಂತಿದ್ದಾರೆ. ಈ ವೇಳೆ ಮಹಿಳೆ ನಿಂತು ನಿಂತು ಸುಸ್ತಾಗಿದ್ದರು. ಅಲ್ಲದೆ ಅವರ ಕಾಲು ಸೆಳೆಯುತ್ತಿತ್ತು.

    ಪತ್ನಿಯ ಸ್ಥಿತಿ ನೋಡಿ ಪತಿ ಅಲ್ಲಿ ಕುಳಿತಿದ್ದ ಜನರಿಗೆ ಸೀಟು ಬಿಟ್ಟು ಕೊಡುವಂತೆ ಕೇಳಿದ್ದಾರೆ. ಆದರೆ ಯಾರು ಸಹ ಸೀಟು ಬಿಟ್ಟು ಕೊಡಲು ಮುಂದಾಗಲಿಲ್ಲ. ಬಳಿಕ ಪತಿ ತನ್ನ ಭುಜದ ಮೇಲೆ ಪತ್ನಿಯನ್ನು ಕೂರಿಸಿಕೊಳ್ಳುವ ಮೂಲಕ ಕುರ್ಚಿ ಆಗಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ವಿಶ್ವದ ಅತ್ಯಂತ ಪ್ರೀತಿಯ ಪತಿ ಎಂದು ವ್ಯಕ್ತಿಯನ್ನು ಹೊಗಳುತ್ತಿದ್ದಾರೆ. ಇದನ್ನೂ ಓದಿ: ಪತ್ನಿಗಾಗಿ ಪತಿ ವಿಮಾನದಲ್ಲಿ 6 ಗಂಟೆ ನಿಂತ್ಕೊಂಡೇ ಪ್ರಯಾಣಿಸಿದ 

    ವರದಿಗಳ ಪ್ರಕಾರ, ಈ ವಿಡಿಯೋವನ್ನು ಈಶಾನ್ಯ ಚೀನಾದ ಹೈಲಾಂಗ್‍ಜಿಯಾಂಗ್ ನಗರದ ಹಿಯಾಂಗ್‍ನ ಪೊಲೀಸರು ಭಾನುವಾರ ಡೋಯಿನ್ ಎಂಬ ಕಿರು ವಿಡಿಯೋ ಆ್ಯಪ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ 70 ಲಕ್ಷ ಲೈಕ್ಸ್ ದೊರೆತಿದೆ. ಈ ದೃಶ್ಯ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲಿ, ಮಹಿಳೆ ನಿಂತು ಸುಸ್ತಾಗಿದ್ದಾರೆ. ಈ ವೇಳೆ ಅಲ್ಲಿದ ಜನರು ಕುರ್ಚಿ ಮೇಲೆ ಕುಳಿತುಕೊಂಡು ಮೊಬೈಲ್ ಬಳಸುತ್ತಿದ್ದರು. ಆದರೆ ಯಾರು ಸಹ ತಮ್ಮ ಸೀಟನ್ನು ಮಹಿಳೆಗೆ ಬಿಟ್ಟು ಕೊಡಲಿಲ್ಲ. ತನ್ನ ಪತ್ನಿಯ ಸ್ಥಿತಿಯನ್ನು ನೋಡುವುದಕ್ಕೆ ಆಗದೇ ಪತಿ ಅವರನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡರು

  • ಯುವತಿ ಆಸೆ ಪೂರೈಸಲು ಹೋಗಿ ಪೈಲಟ್ ಅಮಾನತು

    ಯುವತಿ ಆಸೆ ಪೂರೈಸಲು ಹೋಗಿ ಪೈಲಟ್ ಅಮಾನತು

    ಬೀಜಿಂಗ್: ಯುವತಿಯೊಬ್ಬಳ ಆಸೆ ಪೂರೈಸಲು ಹೋಗಿ ಪೈಲಟ್ ಓರ್ವ ಅಮಾನತುಗೊಂಡ ಘಟನೆ ಚೀನಾದಲ್ಲಿ ನಡೆದಿದೆ. ಯುವತಿ ಆಸೆಯಿಂದ ಈಗ ಪೈಲಟ್ ಕೆಲಸ ಕಳೆದುಕೊಂಡಿದ್ದಾನೆ.

    ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಆದರೆ ಬೇರೆಯವರ ಆಸೆ ಪೂರೈಸಲು ಹೋಗಿ ಸಾಕಷ್ಟು ಮಂದಿ ತಮ್ಮ ಬದುಕನ್ನು ಹಾಳು ಮಾಡಿಕೊಂಡ ಪ್ರಕರಣ ಕೂಡ ಇದೆ. ಹೀಗೆ ಚೈನಿಸ್ ಪೈಲಟ್ ಓರ್ವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಆಸೆ ತೀರಿಸಲು ಹೋಗಿ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಯುವತಿಯೊಬ್ಬಳು ನನಗೆ ಪೈಲಟ್ ಸೀಟ್‌ನಲ್ಲಿ ಕುಳಿತುಕೊಳ್ಳಬೇಕೆಂಬ ಆಸೆ ಇದೆ. ದಯವಿಟ್ಟು ಒಮ್ಮೆ ಅವಕಾಶ ಮಾಡಿಕೊಡಿ ಎಂದು ಪೈಲಟ್ ಬಳಿ ಕೇಳಿಕೊಂಡಿದ್ದಳು. ಯುವತಿ ಮನವಿಗೆ ಪೈಲಟ್ ಮನಸೋತು ಆಕೆಗೆ ವಿಮಾನದ ಕಾಕ್‌ಪಿಟ್‌ನಲ್ಲಿ ಬರಲು ಅವಕಾಶ ಕೊಟ್ಟಿದ್ದಲ್ಲದೆ, ಅಲ್ಲಿ ಪೈಲಟ್ ಸೀಟ್‌ನಲ್ಲಿ ಆಕೆ ಕುಳಿತ ಫೋಟೋವನ್ನು ಕ್ಲಿಕ್ಕಿಸಿದ್ದ.

    ಅಷ್ಟೇ ಅಲ್ಲದೆ ಪೈಲಟ್ ಸೀಟಿನಲ್ಲಿ ಕುಳಿತ ಫೋಟೋವನ್ನು ಯುವತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು. ನನಗೆ ಈ ಅದ್ಭುತ ಅವಕಾಶ ಒದಗಿಸಿಕೊಟ್ಟ ಕ್ಯಾಪ್ಟನ್‌ಗೆ ಧನ್ಯವಾದಗಳು ಎಂದು ಕ್ಯಾಪ್ಷನ್ ಕೂಡ ಬರೆದಿದ್ದಳು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಫೋಟೋ ವೈರಲ್ ಆಗುತ್ತಿದ್ದಂತೆ ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಂಡಳಿ ಗಮನಕ್ಕೆ ಈ ವಿಚಾರ ತಿಳಿದಿದೆ. ಕಾಕ್‌ಪಿಟ್‌ನಲ್ಲಿ ಪ್ರಯಾಣಿಕರಿಗೆ ಪ್ರವೇಶವಿಲ್ಲದಿದ್ದರೂ ಪೈಲಟ್ ಅವಕಾಶ ಕೊಟ್ಟಿದ್ದಾರೆ. ಇದರಿಂದ ವಿಮಾನದ ಪ್ರಯಾಣಿಕರ ಸುರಕ್ಷತೆ, ವಿಮಾನ ಸಂಸ್ಥೆಯ ಮೇಲಿನ ನಂಬಿಕೆ ಹಾಳಾಗುತ್ತದೆ ಎಂದು ಕೋಪಗೊಂಡ ಅಧಿಕಾರಿಗಳು ಆ ಪೈಲಟ್‌ನನ್ನೇ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದ್ದಾರೆ.

    ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಂಡಳಿ ನಿಯಮದ ಪ್ರಕಾರ, ಪ್ರಯಾಣಿಕರು ಕಾಕ್‌ಪಿಟ್‌ನೊಳಗೆ ಪ್ರವೇಶ ಮಾಡುವಂತಿಲ್ಲ. ವಿಶೇಷ ಅನುಮತಿ ಇದ್ದರೆ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಪ್ರಯಾಣಿಕರಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಆದರೆ, ನಿಯಮ ಉಲ್ಲಂಘಿಸಿ ಯುವತಿಯನ್ನು ಒಳಗೆ ಬಿಟ್ಟಿದ್ದಲ್ಲದೆ, ಪೈಲಟ್ ಸೀಟಿನಲ್ಲಿ ಕುಳಿತು ಫೋಟೋ ತೆಗಿಸಿಕೊಳ್ಳಲು ಅವಕಾಶ ನೀಡಿದ್ದು ತಪ್ಪು. ಹೀಗಾಗಿ ತಪ್ಪು ಮಾಡಿದ ಪೈಲಟ್ ಜೊತೆಗೆ ಆತನಿಗೆ ಸಹಕರಿಸಿದ ಇತರೆ ಸಿಬ್ಬಂದಿಯನ್ನೂ ಅಧಿಕಾರಿಗಳು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.

  • ನದಿಯಲ್ಲಿ ತೇಲುತ್ತಿದ್ದ ಕಟ್ಟಡ ನೋಡಿ ದಂಗಾದ ನೆಟ್ಟಿಗರು- ವಿಡಿಯೋ ವೈರಲ್

    ನದಿಯಲ್ಲಿ ತೇಲುತ್ತಿದ್ದ ಕಟ್ಟಡ ನೋಡಿ ದಂಗಾದ ನೆಟ್ಟಿಗರು- ವಿಡಿಯೋ ವೈರಲ್

    ಬೀಜಿಂಗ್: ನದಿಯಲ್ಲಿ ಕಟ್ಟಡವೊಂದು ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ದೃಶ್ಯವನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.

    ಮೊದಲು ವಿಡಿಯೋ ನೋಡಿದಾಗ ಜನರು ಪ್ರವಾಹಕ್ಕೆ ಕಟ್ಟಡ ತೇಲುತ್ತಿದೆಯೇನೊ ಎಂದು ಅಂದುಕೊಂಡಿದ್ದರು. ಬಳಿಕ ವಿಡಿಯೋದ ನಿಜ ಸಂಗತಿ ತಿಳಿದು ಅಚ್ಚರಿ ಪಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಐದು ಮಹಡಿಯ ಕಟ್ಟಡ ತೇಲುತ್ತಿರುವ ವಿಡಿಯೋದ ತುಣುಕೊಂದನ್ನು ನೋಡಿ ನಾನಾ ರೀತಿ ಕಮೆಂಟ್ ಮಾಡಿ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಈ ದೃಶ್ಯ ಕಂಡು ಬಂದಿದ್ದು ಚೀನಾದಲ್ಲಿ. ಅಲ್ಲಿನ ಯಾಂಗ್ಟ್‍ಜೆ ನದಿಯಲ್ಲಿ ಬಹುಮಹಡಿ ಕಟ್ಟಡ ತೇಲುತ್ತಿರುವ ದೃಶ್ಯವನ್ನು 2018ರ ನವೆಂಬರ್ ನಲ್ಲಿ ಸಾರ್ವಜನಿಕರೊಬ್ಬರು ಸೆರೆಹಿಡಿದಿದ್ದರು. ನಿಜಾಂಶ ಏನೆಂದರೆ ನದಿಯಲ್ಲಿ ತೇಲುತ್ತಿದ್ದ ಕಟ್ಟಡವು ಒಂದು ಫ್ಲೋಟಿಂಗ್ ರೆಸ್ಟೋರೆಂಟ್ ಆಗಿದ್ದು, ಕಾರಣಾಂತರದಿಂದ ಅದನ್ನು ಒಂದು ಕಡೆಯಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಈ ವೇಳೆ ದೂರದಿಂದ ಕಟ್ಟಡವನ್ನು ನದಿಯಲ್ಲಿ ನೋಡಿದವರು ಅದು ತೇಲುತ್ತಿದೆ ಎಂದು ಶಾಕ್ ಆಗಿದ್ದರು.

    ಆದರೆ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಸ್ಥಳೀಯರೊಬ್ಬರು ಇತ್ತೀಚಿಗೆ ಹಂಚಿಕೊಂಡಿದ್ದಾರೆ. ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿಬಿಟ್ಟಿದೆ.

  • ಫೇಸ್ ಆ್ಯಪ್ ಮೂಲಕ 18 ವರ್ಷಗಳ ನಂತ್ರ ಪೋಷಕರಿಗೆ ಸಿಕ್ಕ ಯುವಕ

    ಫೇಸ್ ಆ್ಯಪ್ ಮೂಲಕ 18 ವರ್ಷಗಳ ನಂತ್ರ ಪೋಷಕರಿಗೆ ಸಿಕ್ಕ ಯುವಕ

    ಬೀಜಿಂಗ್: ಮೂರು ವರ್ಷದಲ್ಲಿ ಕಿಡ್ನಾಪ್ ಆಗಿದ್ದ ಬಾಲಕ ಫೇಸ್ ಆ್ಯಪ್ ಮೂಲಕ 18 ವರ್ಷಗಳ ನಂತರ ಪೋಷಕರಿಗೆ ಸಿಕ್ಕಿದ ಘಟನೆ ಚೀನಾದಲ್ಲಿ ನಡೆದಿದೆ.

    ಯು ವೈಫಾಂಗ್ (21) ಮೂರು ವರ್ಷದ ಮಗುವಿದ್ದಾಗ ಕಿಡ್ನಾಪ್ ಆಗಿದ್ದನು. ಬಳಿಕ ಆತನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಯು ವೈಫಾಂಗ್‍ನನ್ನು ಹುಡುಕಲು ಫೇಸ್ ಆ್ಯಪ್ ತಂತ್ರಜ್ಞಾನ ಬಳಸಿ ಪತ್ತೆ ಹಚ್ಚಿದ್ದಾರೆ.

    ಪೊಲೀಸರು ಯು ವೈಫಾಂಗ್ ಈಗ ಹೇಗಿರುತ್ತಾನೆ ಎಂದು ಕಂಡು ಹಿಡಿಯಲು ಫೇಸ್ ಆ್ಯಪ್ ತಂತ್ರಜ್ಞಾನವನ್ನು ಬಳಸಿದ್ದರು. ಯು ವೈಫಾಂಗ್ ಮುಖಕ್ಕೆ ಸಾವಿರ ಮಂದಿಯ ಡೇಟಾಬೇಸ್ ಹೋಲಿಕೆ ಆಗಿದೆ. ದಕ್ಷಿಣ ಚೀನಾದ ಗಾವಾಂಗ್‍ಡಾಂಗ್ ಪ್ರಾಂತ್ಯದ ಕೋಲ್ಡ್-ಕೇಸ್ ತನಿಖಾಧಿಕಾರಿಗಳು ಕಾಣೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಅಸ್ತಿತ್ವದಲ್ಲಿರುವ ಮುಖ ಗುರುತಿಸಲು ಅಲ್ ತಂತ್ರಜ್ಞಾನವನ್ನು ಬಳಸಿದ್ದಾರೆ.

    ನಾವು ಆತನನ್ನು ಹುಡುಕಿದ್ದಾಗ ಆತ ತಾನು ಕಿಡ್ನಾಪ್ ಆಗಿದೆ ಎಂದು ನಂಬಲೇ ಇಲ್ಲ. ಬಳಿಕ ಆತನ ಡಿಎನ್‍ಎ ಪರೀಕ್ಷೆ ಮಾಡಿಸಲಾಯಿತು. ಡಿಎನ್‍ಎ ವರದಿ ಆತನ ಪೋಷಕರ ವರದಿಗೆ ಮ್ಯಾಚ್ ಆಗುತ್ತಿತ್ತು. ಯು ವೈಫಾಂಗ್‍ನನ್ನು ಲೀ ಎಂಬವರು ದತ್ತು ಪಡೆದುಕೊಂಡಿದ್ದರು. ಬಳಿಕ 2001ರಲ್ಲಿ ಅವರು ಕೆಲಸ ಮಾಡುತ್ತಿದ್ದ ಸೈಟ್ ಬಳಿ ಕಾಣೆಯಾಗಿದ್ದರು. ಈ ಬಗ್ಗೆ ಯು ವೈಫಾಂಗ್ ಪೋಷಕರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.

    ಯು ವೈಫಾಂಗ್ ಕಾಣೆಯಾಗಿದ್ದಾಗ ಅವರ ಪೋಷಕರು ಯು ಕ್ಸಿಂಗ್ವಾನ್ ಹಾಗೂ ರೊಂಗ್ ಮುಹುವಾನ್ ಅಕ್ಕಪಕ್ಕದ ಊರಿನಲ್ಲಿ ಆತನನ್ನು ಹುಡುಕಿದ್ದರು. ಆದರೆ ಯು ವೈಫಾಂಗ್ ಸಿಕ್ಕಿರಲಿಲ್ಲ. ಈಗ ಬರೋಬ್ಬರಿ 18 ವರ್ಷದ ನಂತರ ಆತ ತನ್ನ ಪೋಷಕರ ಬಳಿ ಸೇರಿದ್ದಾನೆ.

  • ತನ್ನ ಮೊಟ್ಟೆಯನ್ನು ಉಳಿಸಿಕೊಳ್ಳಲು ಟ್ರ್ಯಾಕ್ಟರ್ ನಿಲ್ಲಿಸಿದ ಹಕ್ಕಿ: ವಿಡಿಯೋ

    ತನ್ನ ಮೊಟ್ಟೆಯನ್ನು ಉಳಿಸಿಕೊಳ್ಳಲು ಟ್ರ್ಯಾಕ್ಟರ್ ನಿಲ್ಲಿಸಿದ ಹಕ್ಕಿ: ವಿಡಿಯೋ

    ಬೀಜಿಂಗ್: ತಾಯಿ ಹಕ್ಕಿಯೊಂದು ತನ್ನ ಮೊಟ್ಟೆಯನ್ನು ಉಳಿಸಿಕೊಳ್ಳಲು ಟ್ರ್ಯಾಕ್ಟರ್ ನಿಲ್ಲಿಸಿದ ಅಪರೂಪದ ದೃಶ್ಯ ಚೀನಾದಲ್ಲಿ ನಡೆದಿದೆ.

    ಹಕ್ಕಿ ಟ್ರ್ಯಾಕ್ಟರ್ ನಿಲ್ಲಿಸಿದ ಮನಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಡೆದಿದ್ದೇನು?
    ವ್ಯಕ್ತಿ ಟ್ರ್ಯಾಕ್ಟರಿನಲ್ಲಿ ತನ್ನ ಜಮೀನಿಗೆ ಹೋಗುತ್ತಿದ್ದನು. ಈ ವೇಳೆ ದಾರಿ ಮಧ್ಯೆ ತಾಯಿ ಹಕ್ಕಿ ತನ್ನ ರೆಕ್ಕೆಯನ್ನು ಬಿಚ್ಚಿ ಟ್ರ್ಯಾಕ್ಟರ್ ಅನ್ನು ನಿಲ್ಲಿಸಲು ಪ್ರಯತ್ನಿಸಿದೆ. ಹಕ್ಕಿಯನ್ನು ನೋಡಿದ ಚಾಲಕ ತಕ್ಷಣ ಟ್ರ್ಯಾಕ್ಟರ್ ನಿಲ್ಲಿಸಿ ಹಕ್ಕಿ ಬಳಿ ಬಂದಿದ್ದಾನೆ. ಬಳಿಕ ತನ್ನ ಬಳಿಯಿದ್ದ ನೀರಿನ ಬಾಟಲಿಯನ್ನು ಹಕ್ಕಿಯ ಹತ್ತಿರ ಇಟ್ಟಿದ್ದಾನೆ.

    ಚಾಲಕ ಟ್ರ್ಯಾಕ್ಟರ್ ನಿಲ್ಲಿಸುವ ಮೂಲಕ ಹಕ್ಕಿ ಇನ್ನೂ ಜನಿಸದ ಮರಿಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ. ತಾಯಂದಿರು ತಮ್ಮ ಮಕ್ಕಳನ್ನು ಜನಿಸುವ ಮೊದಲೇ ಪ್ರೀತಿಸುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

    ಈ ವಿಡಿಯೋವನ್ನು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‍ವರ್ಕ್ (ಸಿಟಿಜಿಎನ್) ಬುಧವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿಕೊಂಡಿದೆ. ಅಲ್ಲದೆ ತಾಯಿ ಹಕ್ಕಿ ತನ್ನ ಮೊಟ್ಟೆಗಳನ್ನು ರಕ್ಷಿಸಲು ಟ್ರ್ಯಾಕ್ಟರ್ ನಿಲ್ಲಿಸಿದೆ ಎಂದು ಬರೆದು ಟ್ವೀಟ್ ಮಾಡಿದೆ.

    ಈ ಮನಕಲಕುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದುವರೆಗೂ 30 ಸಾವಿರಕ್ಕೂ ಹೆಚ್ಚು ವ್ಯೂ ಬಂದಿದ್ದು, 1,200ಕ್ಕೂ ಹೆಚ್ಚೂ ಲೈಕ್ಸ್ ಬಂದಿದೆ. ಅಲ್ಲದೆ ಈ ವಿಡಿಯೋ ನೋಡಿ ಹಲವರು ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ.

  • 3 ವರ್ಷದಿಂದ ಸ್ನೇಹಿತನನ್ನು ಹೊತ್ಕೊಂಡು ಶಾಲೆಗೆ ಹೋಗ್ತಿರುವ ಗೆಳೆಯ

    3 ವರ್ಷದಿಂದ ಸ್ನೇಹಿತನನ್ನು ಹೊತ್ಕೊಂಡು ಶಾಲೆಗೆ ಹೋಗ್ತಿರುವ ಗೆಳೆಯ

    ಬೀಜಿಂಗ್: 3 ವರ್ಷದಿಂದ ಬಾಲಕನೊಬ್ಬ ತನ್ನ ಅನಾರೋಗ್ಯ ಗೆಳೆಯನನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಕರೆದುಕೊಂಡು ಹೋಗುತ್ತಿರುವ ಸುದ್ದಿವೊಂದು ಚೀನಾದಲ್ಲಿ ಬೆಳಕಿಗೆ ಬಂದಿದ್ದು, ಈಗ ವೈರಲ್ ಆಗುತ್ತಿದೆ.

    ಕ್ಸು (Xu) ಹಾಗೂ ಜಾಂಗ್ (Zhaang) ಇಬ್ಬರು ಆತ್ಮೀಯ ಗೆಳೆಯರಾಗಿದ್ದು, 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಜಾಂಗ್ ಗೆ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಆತನ ಗೆಳೆಯ ಕ್ಸು 3 ವರ್ಷದಿಂದ ತನ್ನ ಸ್ನೇಹಿತನನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾನೆ.

    ಜಾಂಗ್ ನಾಲ್ಕು ವರ್ಷವಿದ್ದಾಗ ರ‍್ಯಾಗ್ ಡಾಲ್ ಕಾಯಿಲೆಗೆ ತುತ್ತಾಗಿದ್ದನು. ಈ ಕಾಯಿಲೆ ಇದ್ದರೆ ನಡೆದಾಡಲು ಸಮಸ್ಯೆ ಆಗುತ್ತದೆ. ಜಾಂಗ್ ಗೆ ಈ ಕಾಯಿಲೆ ಇದ್ದ ಕಾರಣ ಆತನ ಗೆಳೆಯ ಕ್ಸುನನ್ನು ದಿನನಿತ್ಯ ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದನು.

    ನನ್ನ ಸ್ನೇಹಿತನಿಗೆ ಸಹಾಯ ಮಾಡುವುದಕ್ಕೆ ನನಗೆ ಯಾವುದೇ ಸಮಸ್ಯೆ ಇಲ್ಲ. ನಾನು 40 ಕೆಜಿ ತೂಕ ಇದ್ದೇನೆ ಹಾಗೂ ನನ್ನ ಸ್ನೇಹಿತ ಜಾಂಗ್ 25 ಕೆಜಿ ತೂಕ ಇದ್ದಾನೆ. ಹಾಗಾಗಿ ನನಗೆ ಯಾವುದೇ ತೊಂದರೆ ಇಲ್ಲ ಎಂದು ಎಂದು ಕ್ಸು ಹೇಳಿದ್ದಾನೆ.

    ಅಲ್ಲದೆ ನಾವಿಬ್ಬರು ಆತ್ಮೀಯ ಸ್ನೇಹಿತರು. ನಾವು ಒಟ್ಟಿಗೆ ಕೂತು ಓದುತ್ತೇವೆ. ನಾವು ಒಟ್ಟಿಗೆ ಮಾತನಾಡುತ್ತೇವೆ ಹಾಗೂ ಜೊತೆಯಲ್ಲೇ ಆಟವಾಡುತ್ತೇವೆ ಎಂದು ಕ್ಸು ತನ್ನ ಗೆಳೆಯನದ ಬಗ್ಗೆ ಮಾತನಾಡಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪ್ರೇಯಸಿಯ ಖುಷಿಗಾಗಿ ಚಾಟ್‍ಬಾಟ್ ಸೃಷ್ಟಿಸಿದ ಟೆಕ್ಕಿ

    ಪ್ರೇಯಸಿಯ ಖುಷಿಗಾಗಿ ಚಾಟ್‍ಬಾಟ್ ಸೃಷ್ಟಿಸಿದ ಟೆಕ್ಕಿ

    ಬೀಜಿಂಗ್: ಪ್ರಿಯಕರ ತನ್ನ ಮೆಸೇಜ್‍ಗೆ ರಿಪ್ಲೈ ಮಾಡುತ್ತಿಲ್ಲ, ತನಗೆ ಸಮಯ ಕೊಡುತ್ತಿಲ್ಲ ಎಂದು ಅನೇಕ ಹುಡುಗಿಯರು ಬೇಸರ ಮಾಡಿಕೊಳ್ಳುತ್ತಾರೆ. ಇದಕ್ಕೆ ಪರಿಹಾರ ಎಂಬಂತೆ ಸದಾ ಪ್ರೇಯಸಿಯನ್ನು ಸಂತೋಷದಿಂದ ಇಟ್ಟುಕೊಳ್ಳಲು ಚೈನೀಸ್ ಸಾಫ್ಟ್ ವೇರ್ ಎಂಜಿನಿಯರ್ ಬ್ರಿಲಿಯಂಟ್ ಉಪಾಯ ಕಂಡು ಹಿಡಿದಿದ್ದಾರೆ.

    ಲಿ ಕೈಕ್ಸಿಯಾಂಗ್ ಕೆಲಸದ ಬ್ಯುಸಿ ಇರುವ ವೇಳೆ ಗೆಳೆತಿಯ ಜೊತೆ ಚಾಟ್ ಮಾಡಲು ಚಾಟ್‍ಬಾಟ್ ಅನ್ನು ಸಾಫ್ಟ್ ವೇರ್ ಎಂಜಿನಿಯರ್ ಕಂಡು ಹಿಡಿದಿದ್ದಾನೆ. ಈ ರೋಬೋಟ್ “ಬೇಬಿ ಇದು ನಮ್ಮ 618ನೇ ಭೇಟಿಯಾಗಿದ್ದು, ನೀನು ಸುಂದರ ಬಿಸಿಲನ್ನು ಎಂಜಾಯ್ ಮಾಡುತ್ತಿದ್ದೀಯಾ ಎಂದು ಭಾವಿಸಿದ್ದೇನೆ” ಎಂದು ಇದೇ ರೀತಿ ಅನೇಕ ರೀತಿಯ ರೊಮ್ಯಾಂಟಿಕ್ ಆಗಿ ಸಂದೇಶ ಕಳುಹಿಸುತ್ತದೆ.

    ಲಿ ಕೈಕ್ಸಿಯಾಂಗ್ ತನ್ನ ಕೆಲಸದ ಒತ್ತಡದಿಂದ ಪ್ರೇಯಸಿಯ ಮೆಸೇಜ್‍ಗಳನ್ನು ಕಡೆಗಣಿಸುತ್ತಿದ್ದೇನೆ, ಜೊತೆಗೆ ಆಕೆಗೆ ಸಮಯವನ್ನು ಕೊಡಲು ಸಾಧ್ಯವಾಗುತಿಲ್ಲ ಎಂಬುದು ಅರ್ಥ ಆಗಿದೆ. ಇದರಿಂದ ಪ್ರಿಯಕರ ತನ್ನ ಪ್ರೇಯಿಸಿಗೆ ಪ್ರತಿಕ್ರಿಯಿಸಲು ಚಾಟ್‍ಬಾಟ್ ಡಿಸೈನ್ ಮಾಡಲು ನಿರ್ಧರಿಸಿದ್ದನು.

    ಅದರಂತೆಯೇ ಪ್ರಿಯಕರ ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್ ವೀಬೊ ಮೂಲಕ ಚಾಟ್‍ಬಾಟ್ ಸೃಷ್ಟಿಸಿದ್ದನು. ಈ ಚಾಟ್‍ಬಾಟ್ ಲಿ ಕೈಕ್ಸಿಯಾಂಗ್ ಕೆಲಸದ ವೇಳೆ ಬ್ಯುಸಿ ಇದ್ದಾಗ ಪ್ರೇಯಸಿಯ ಜೊತೆ 300ಕ್ಕೂ ಹೆಚ್ಚು ಬಾರಿ ಚಾಟ್ ಮಾಡಿದೆ ಎಂದು ವರದಿ ಮಾಡಿದೆ.

    ಹೀಗೆ ಮೆಸೇಜ್ ಮಾಡುತ್ತಿದ್ದಂತೆ ಆ ಮೆಸೇಜ್‍ಗಳಲ್ಲಿ ಏನೋ ದೋಷವಿದೆ ಎಂಬ ಅನುಮಾನ ಪ್ರೇಯಸಿಗೆ ಬಂದಿದೆ. ಪ್ರಿಯಕರ ಸಹಜವಾಗಿ ತಡವಾಗಿ ರಿಪ್ಲೈ ಮಾಡುತ್ತಿದ್ದನು. ಆದರೆ ಇತ್ತೀಚೆಗೆ ಬಹು ಬೇಗ ಉತ್ತರಿಸುತ್ತಿದ್ದಾನೆ. (How can I respond when there’s no problem?) ಸಮಸ್ಯೆಯೇ ಇಲ್ಲದಿದ್ದಾಗ ನಾನು ಹೇಗೆ ಸ್ಪಂದಿಸಲಿ ಎಂದು ಒಂದು ಮೆಸೇಜ್ ಹೋಗಿದೆ.

    ಇದೀಗ ಲಿ ಕೈಕ್ಸಿಯಾಂಗ್ ವೀಬೋ ಖಾತೆ ಡಿಲೀಟ್ ಆಗಿದೆ. ಆದರೆ ಆತ ಪ್ರೇಯಸಿ ಮಾಡಿದ ಚಾಟ್‍ನ ಸ್ಕ್ರೀನ್‍ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

  • 2 ಕೋಟಿ ಮೌಲ್ಯದ ಕಾರಿನ ಇಂಧನಕ್ಕಾಗಿ ಕೋಳಿ, ಬಾತುಕೋಳಿ ಕಳ್ಳತನ

    2 ಕೋಟಿ ಮೌಲ್ಯದ ಕಾರಿನ ಇಂಧನಕ್ಕಾಗಿ ಕೋಳಿ, ಬಾತುಕೋಳಿ ಕಳ್ಳತನ

    ಬೀಜಿಂಗ್: ಚೀನಾದ ಶ್ರೀಮಂತ ರೈತನೊಬ್ಬ ತನ್ನ ಬಿಎಂಡಬ್ಲ್ಯೂ ಕಾರಿಗೆ ಇಂಧನ ಹಾಕಿಸಲು ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನು. ಇದೀಗ ಕಾರಿನ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ 50 ವರ್ಷದವನಾಗಿದ್ದು, ಈತ ಸಿಚುವಾನ್ ಪ್ರಾಂತ್ಯದ ಲಿನ್ಸುಯಿ ಪ್ರದೇಶದ ಅನೇಕ ಗ್ರಾಮಗಳಲ್ಲಿ ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನು. ಲಿನ್ಸುಯಿ ಪೊಲೀಸರು ಈ ಕುರಿತು ತನಿಖೆ ಮಾಡಿದ್ದು, ಆಗ ಆರೋಪಿ ವಿಲ್ಲಾದಲ್ಲಿ ವಾಸಿಸುತ್ತಿದ್ದು ಶ್ರೀಮಂತ ರೈತನಾಗಿದ್ದನು. ಜೊತೆಗೆ 2 ಕೋಟಿ ಮೌಲ್ಯದ ಐಷಾರಾಮಿ ಬಿಎಂಡಬ್ಲ್ಯೂ ಕಾರಿನ ಮಾಲೀಕನಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

    ಆರೋಪಿಗೆ ಕಾರು ಖರೀದಿಸಿದ ಬಳಿಕ ಆರ್ಥಿಕ ತೊಂದರೆ ಎದುರಾಗಿದೆ. ಕೊನೆಗೆ ಸಣ್ಣ-ಪುಟ್ಟ ಅಪರಾಧಗಳನ್ನು ಮಾಡುತ್ತಿದ್ದನು. ಇತ್ತ ತನ್ನ ಕಾರಿಗೆ ಇಂಧನ ಹಾಕಿಸಲು ಹಣ ಇರಲಿಲ್ಲ. ಕೊನೆಗೆ ಆತ ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯಲು ಆರಂಭಿಸಿದ್ದಾನೆ. ಆರೋಪಿ ಏಪ್ರಿಲ್‍ನಿಂದ ಕೋಳಿ ಕದಿಯುತ್ತಿದ್ದು, ಬೈಕಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಲಿನ್ಸುಯಿ ಗ್ರಾಮಸ್ಥರು ಸತತವಾಗಿ ತಮ್ಮ ಮನೆಯಲ್ಲಿ ಕೋಳಿ ಕಳ್ಳತನವಾಗುತ್ತಿರುವುದರಿಂದ ಕಂಗಾಲಾಗಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೋಳಿ ಕಳವಿನ ಬಗ್ಗೆ ತನಿಖೆ ಮಾಡಲು ಶುರು ಮಾಡಿದ್ದಾರೆ. ಆ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದರಲ್ಲಿ ಆರೋಪಿ ಮೋಟಾರ್ ಬೈಕ್ ಮೇಲೆ ಬಂದು ಕೋಳಿ ಕದ್ದು ಹೋಗುತ್ತಿರುವುದು ಸೆರೆಯಾಗಿತ್ತು. ಈ ಬಗ್ಗೆ ಪ್ರಶ್ನೆ ಮಾಡಲು ನಾವು ಬಿಎಂಡಬ್ಲ್ಯೂ ಕಾರಿನಲ್ಲಿ ಹೋಗುತ್ತಿದ್ದ ಆತನನ್ನು ಚೇಸ್ ಮಾಡಿದೆವು. ಆದರೆ ಕಾರು ವೇಗವಾಗಿ ಹೋಗುವುದರಿಂದ ಆತ ನಮ್ಮಿಂದ ತಪ್ಪಿಸಿಕೊಂಡಿದ್ದನು. ಆದರೂ ಬೆಂಬಿಡದೆ ಆತನನ್ನು ಚೇಸ್ ಮಾಡಿ ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಜಾಂಗ್ ಹುವಾ ಹೇಳಿದ್ದಾರೆ.


    ಆರೋಪಿ ಮನೆಯಲ್ಲಿ ಕದಿಯಲು ಬಳಸುತ್ತಿದ್ದ ಬೈಕ್ ಹಾಗೂ ಕೋಳಿ, ಬಾತುಕೋಳಿಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ಪಡಿಸಿಕೊಂಡಿದ್ದಾರೆ. ಬಂಧನದ ನಂತರ ಆರೋಪಿ ಕಾರಿಗೆ ಇಂಧನ ತುಂಬಲು ಈ ಕೃತ್ಯ ಎಸಗುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.