ಚೀನಾ: ವೇಗವಾಗಿ ಹರಡುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಚೀನಾ (China) ಕೈಗಾರಿಕಾ ಕೇಂದ್ರದಲ್ಲಿ ಲಾಕ್‍ಡೌನ್ (Lockdown) ವಿಧಿಸಿದೆ. 9 ಮಿಲಿಯನ್ (90ಲಕ್ಷ) ನಿವಾಸಿಗಳು ಮನೆಯೊಳಗೆ ಇರಲು ಸೂಚನೆ ನೀಡಲಾಗಿದೆ.
ಹೊರಡಿಸಿದ ಆದೇಶಗಳ ಪ್ರಕಾರ, ಈಶಾನ್ಯ ಕೈಗಾರಿಕಾ ಕೇಂದ್ರವಾದ ಚಾಂಗ್‍ಚುನ್‍ನಲ್ಲಿ 9 ಮಿಲಿಯನ್ ನಿವಾಸಿಗಳಿಗೆ ಲಾಕ್‍ಡೌನ್ ವಿಧಿಸಿದೆ. ನಿವಾಸಿಗಳು ತಮ್ಮ ಮನೆಯಿಂದ ಹೊರಗೆ ಬರುವಂತಿಲ್ಲ. ಕೆಲವು ಅನಿವಾರ್ಯತೆಯಿಂದಾಗಿ ಮನೆಯಿಂದ ಹೊರಗೆ ಬರುವವರು ಮೂರು ಸುತ್ತಿನ ಸಾಮೂಹಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ನಗರ ಅಧಿಕಾರಿಗಳು ಈಗಾಲೇ ಎಲ್ಲಾ ವ್ಯವಹಾರ, ಸಾರಿಗೆ ಸಂಪರ್ಕಗಳನ್ನು ಸಹ ಸ್ಥಗಿತಗೊಳಿಸಿದ್ದಾರೆ.
ಡೋಜೀನ್ ನಗರಗಳಲ್ಲಿ ಪ್ರತಿದಿನ 1,000ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಸುಮಾರು 2 ವರ್ಷಗಳ ನಂತರ ಈಚೆಗೆ ಅತಿ ಹೆಚ್ಚು ಹೊಸ ಪ್ರಕರಣಗಳು ಒಂದೇ ದಿನದಲ್ಲಿ ಏರಿಕೆಯಾಗಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ
ಒಂದು ಅಥವಾ ಹೆಚ್ಚಿನ ಪ್ರಕರಣಗಳು ವರದಿಯಾದ ಯಾವುದೇ ಸಮುದಾಯ ಅಥವಾ ನಗರದಲ್ಲಿ ಲಾಕ್‍ಡೌನ್ ಹೇರುವುದಾಗಿ ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಜಿಲಿನ್ ನಗರದಲ್ಲಿ ಚೀನಾದ ಅಧಿಕಾರಿಗಳು ಈಗಾಗಲೇ ಭಾಗಶಃ ಲಾಕ್‍ಡೌನ್‍ನ್ನು ವಿಧಿಸಿದ್ದಾರೆ. ಅಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇತರ ನಗರಗಳೊಂದಿಗೆ ಪ್ರಯಾಣ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇಂದು ಜಿಲಿನ್ ನಗರದಲ್ಲಿ 93 ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗಕ್ಕೆ ಚೀನಾದ ಶೂನ್ಯ ಸಹಿಷ್ಣುತೆ ವಿಧಾನದ ಅಡಿಯಲ್ಲಿ ಈ ಕ್ರಮಗಳನ್ನು ನಿರ್ದಿಷ್ಟಪಡಿಸಲಾಗಿದೆ.
Qi Fabao, a PLA regiment commander who sustained head injury while fighting bravely in the #Galwan Valley border skirmish with #India, is a torchbearer during Wed’s #Beijing2022 Winter Olympic Torch Relay. pic.twitter.com/aWtWTDsVKF
ಪೀಪಲ್ಸ್ ಲಿಬರೇಶನ್ ಆರ್ಮಿ ರೆಜಿಮೆಂಟ್ ಕಮಾಂಡರ್ ಕೀ ಫಾಬಾವೊ(Qi Fabao) ಚಳಿಗಾಲದ ಒಲಿಂಪಿಕ್ಸ್ ಜ್ಯೋತಿ ಹಿಡಿದಿದ್ದಾರೆ. 2020ರ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಭಾಗಿಯಾಗಿದ್ದ ಕೀ ಫಾಬಾವೋ ತಲೆಗೆ ಗಂಭೀರ ಗಾಯವಾಗಿತ್ತು. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು
ಜ್ಯೋತಿ ಹಿಡಿದ ಕ್ವಿ ಫಾಬಾವೊರನ್ನು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೀರೋ ಎಂದು ಬಣ್ಣಿಸಿದೆ. ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಜ್ಯೋತಿಯನ್ನು 1,200 ಮಂದಿ ಹಿಡಿದು ಸಾಗಲಿದ್ದಾರೆ.
It's shameful that #Beijing chose a torchbearer for the #Olympics2022 who's part of the military command that attacked #India in 2020 and is implementing #genocide against the #Uyghurs. The U.S. will cont. to support #Uyghur freedoms & the sovereignty of India.
— Senate Foreign Relations Committee Chairman (@SenateForeign) February 3, 2022
ಅಮೆರಿಕ ಕಿಡಿ:
ಅಮೆರಿಕದ ವಿದೇಶಿ ಸಂಬಂಧಗಳ ಸಮಿತಿಯ ಶ್ರೇಯಾಂಕದ ಸದಸ್ಯ ಜಿಮ್ ರಿಶ್ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪ್ರಸ್ತಾಪಿಸಿ ಕಿಡಿ ಕಾರಿದ್ದಾರೆ. 2020 ರಲ್ಲಿ ಭಾರತದ ಮೇಲೆ ದಾಳಿ ಮಾಡಿದ ಮಿಲಿಟರಿ ಕಮಾಂಡ್‌ನ ಭಾಗವಾಗಿರುವ ವ್ಯಕ್ತಿಯನ್ನು ಬೀಜಿಂಗ್ ಒಲಿಂಪಿಕ್ಸ್ ಜ್ಯೋತಿ ಹಿಡಿಯಲು ಆಯ್ಕೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಉಯಿಘರ್ ಸ್ವಾತಂತ್ರ್ಯ ಮತ್ತು ಭಾರತದ ಸಾರ್ವಭೌಮತ್ವವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಬರೆದಿದ್ದಾರೆ.
ಬೀಜಿಂಗ್: 33 ವರ್ಷಗಳ ನಂತರ ತನ್ನ ನೆನಪಿನ ಶಕ್ತಿಯಿಂದ ಹುಟ್ಟೂರಿನ ನಕ್ಷೆಯನ್ನು ಬಿಡಿಸಿ ಮತ್ತೆ ತನ್ನ ತಾಯಿಯ ಮಡಿಲನ್ನು ಮಗ ಸೇರಿದ ಭಾವನಾತ್ಮಕ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಹಳ್ಳಿಯಿಂದ ಅಪಹರಣಕ್ಕೊಳಗಾದ ಲಿ ಜಿಂಗ್‍ವೀ, 33 ವರ್ಷಗಳ ನಂತರ ತನ್ನ ನೆನಪಿನ ಶಕ್ತಿಯಿಂದ ನಕ್ಷೆಯನ್ನು ಬಿಡಿಸಿದ್ದಾರೆ. ಅದು ಅಲ್ಲದೇ ಇವರಿಗೆ ಪೊಲೀಸರು ಸಹಾಯ ಮಾಡಿದ್ದು, ನಕ್ಷೆಯ ಸಹಾಯದಿಂದ 33 ವರ್ಷದ ನಂತರ ತನ್ನ ತಾಯಿಯನ್ನು ಮತ್ತೆ ಸೇರಿದ್ದಾರೆ. ಇದನ್ನೂ ಓದಿ: ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸಬೇಕು: ಎಂ.ವೆಂಕಯ್ಯ ನಾಯ್ಡು
ಪ್ರಸ್ತುತ ಲಿ ಜಿಂಗ್‍ವೀ ಬಿಡಿಸಿದ್ದ ತನ್ನ ಹಳ್ಳಿಯ ನಕ್ಷೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಈಗ ಅದು ಸಖತ್ ವೈರಲ್ ಆಗುತ್ತಿದೆ.
ಏನಿದು ಘಟನೆ?
1989ರಲ್ಲಿ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಮಕ್ಕಳನ್ನು ಅಪಹರಿಸಿದಾಗ ಆ ಕಳ್ಳಸಾಗಣೆಯಲ್ಲಿ ಲಿ ಜಿಂಗ್‍ವೀ ಸಹ ಇದ್ದರು. ಆಗ ಅವರಿಗೆ ಕೇವಲ ನಾಲ್ಕು ವರ್ಷ. ಈಗ ಅವರಿಗೆ 37 ವರ್ಷವಾಗಿದೆ. ಆದರೂ, ತನ್ನ ಹಳ್ಳಿಯನ್ನು ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಅದು ಅಲ್ಲದೇ ತನ್ನ ಹುಟ್ಟೂರಿನ ನಕ್ಷೆಯನ್ನು ಬರೆದು ಅದನ್ನು ಬಳಸಿಕೊಂಡು ತನ್ನ ಸ್ವತ ಕುಟುಂಬವನ್ನು ಸೇರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಲಿ ಜಿಂಗ್‍ವೀ, ನನ್ನನ್ನು ಆಟಿಕೆ ತೋರಿಸಿ ಕಳ್ಳರು ಅಪಹರಿಸಿದರು. ನಂತರ ಇಲ್ಲಿಂದ 1,000 ಮೈಲುಗಳಷ್ಟು ದೂರದಲ್ಲಿದ್ದ ಇನ್ನೊಂದು ಕುಟುಂಬಕ್ಕೆ ಮಾರಿದರು. ಆದರೆ ಪ್ರತಿದಿನ ನಾನು ನನ್ನ ಮನೆಯನ್ನು ನೆನಪಿಸಿಕೊಳ್ಳುತ್ತಿದ್ದೆ. ನನ್ನ ಊರನ್ನು ನೋಡಬೇಕು ಎಂದು ಪ್ರತಿಬಾರಿಯೂ ಆಲೋಚಿಸುತ್ತಿದೆ. ನಂತರ ತುಂಬಾ ಆಲೋಚಿಸಿ ಈ ನಕ್ಷೆಯನ್ನು ಬಿಡಿಸಿದೆ ಎಂದು ವಿವರಿಸಿದರು.
ಡಿಸೆಂಬರ್‌ನಲ್ಲಿ, ಲಿ ಜಿಂಗ್‍ವೀ ಅವರು ತಾವು ಬಿಡಿಸಿದ ನಕ್ಷೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದರು. ಲಿ ಜಿಂಗ್‍ವೀ ಅವರು ಆ ವೇಳೆ ಅಪಹರಣಕ್ಕೊಳಗಾದ ಮಕ್ಕಳ ಬಗ್ಗೆ ವಿಚಾರಿಸಿದರು. ಅವರನ್ನು ತನ್ನ ಕುಟುಂಬ ಹುಡುಕುವಂತೆ ಸಹಾಯಕ್ಕಾಗಿ ಮನವಿ ಮಾಡಿದರು.
ಈ ವೇಳೆ ಲಿ ಜಿಂಗ್‍ವೀ ಅವರ ಸಹಾಯಕ್ಕೆ ಪೊಲೀಸರು ಬಂದಿದ್ದು, ತನಿಖೆಯನ್ನು ಪ್ರಾರಂಭಿಸಿದರು. ಅಂತಿಮ ಫಲವೆಂಬಂತೆ ಅವರಿಗೆ ತನ್ನ ಊರು ಮತ್ತು ತಾಯಿ ಸಿಕ್ಕಿದ್ದಾರೆ. ಈ ಭಾವನಾತ್ಮಕ ದೃಶ್ಯವನ್ನ ಸೆರೆಹಿಡಿಯಲಾಗಿದ್ದು, ಈ ವೀಡಿಯೋದಲ್ಲಿ ತಾಯಿಯನ್ನು ನೋಡಿದ ಲಿ ಜಿಂಗ್‍ವೀ ಅಳುತ್ತ ನೆಲಕ್ಕೆ ಬಿಳುತ್ತಾರೆ. ನಂತರ ಆತನ ತಾಯಿ ಕೊನೆಗೂ ನನ್ನ ಮಗನನ್ನು ನಾನು ನೋಡಿದೆ ಎಂದು ದುಃಖಿತರಾಗಿದ್ದಾರೆ. ಇದನ್ನೂ ಓದಿ: ಗಂಗಾಕಲ್ಯಾಣ ಯೋಜನೆಯಲ್ಲಿ ಸಾವಿರಾರು ಕೋಟಿ ಅಕ್ರಮ
ಪ್ರಸ್ತುತ ಲಿ ಜಿಂಗ್‍ವೀ ಅವರು ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ. ಈಗ ಆ ಮಕ್ಕಳಿಗೆ ಇವರು ನಕ್ಷೆಯಲ್ಲಿ ತನ್ನ ಹುಟ್ಟೂರು ಹಿಂದೆ ಹೇಗಿತ್ತು ಎಂದು ತೋರಿಸಿದರು. ತನ್ನನ್ನು ಖರೀದಿಸಿದ ಕುಟುಂಬದ ವಿರುದ್ಧ ಕ್ರಮ ತೆಗದುಕೊಳ್ಳಲು ಹಿಂದೇಟು ಹಾಕಿದ ಅವರು, ಅವರು ನನಗೆ ಜೀವನ ಮೌಲ್ಯವನ್ನು, ಮನುಷ್ಯತ್ವವನ್ನು ಕಲಿಸಿದ್ದಾರೆ ಎಂದು ಹೇಳಿದ್ದಾರೆ.
ಚೀನಾದಲ್ಲಿ ಕಳ್ಳಸಾಗಣೆ ಮತ್ತು ಮಕ್ಕಳ ಅಪಹರಣವು ಗಂಭೀರ ಸಮಸ್ಯೆಯಾಗಿದ್ದು, ಹಿಂದೆ ಪ್ರತಿ ಕುಟುಂಬಕ್ಕೆ ಮಕ್ಕಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರಲಾಗಿತ್ತು. ಅದು ಅಲ್ಲದೇ ಹುಡುಗರಿಗೆ ಸಾಂಪ್ರದಾಯಿಕವಾಗಿ ಆದ್ಯತೆ ಹೆಚ್ಚಿತ್ತು. ಈ ಕಾರಣಕ್ಕೆ ಮಕ್ಕಳ ವ್ಯಾಪಾರ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬೀಜಿಂಗ್: ಐ ಪೋನ್ ಆರ್ಡ್‍ರ್ ಮಾಡಿದ್ದ ಮಹಿಳೆಯ ಮನೆಗೆ ಬಂದು ತಲುಪಿದ್ದು ಮಾತ್ರ ರುಚಿಯಾದ ಆ್ಯಪಲ್ ಪ್ಲೇವರ್ ಮೊಸರಿನ ಪ್ಯಾಕೆಟ್ ಆಗಿದೆ. ಇಂತಹ ಒಂದು ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ.
ಲಿಯು ಎಂಬ ಮಹಿಳೆ ಒಂದು ಆನ್‍ಲೈನ್ ವೆಬ್ ಸೈಟ್ ಮೂಲಕವಾಗಿ ಐಫೋನ್ 12 ಮ್ಯಾಕ್ಸ್ ಪ್ರೋ ಖರೀದಿಸಲು ಆರ್ಡರ್ ಮಾಡಿದ್ದಾರೆ. ಇದಕ್ಕಾಗಿಯೇ 1,09,600 ರೂಪಾಯಿ ಹಣವನ್ನು ಪಾವತಿ ಮಾಡಿದ್ದಾರೆ. ಆದರೆ ಮಹಿಳೆಗೆ ಫೋನ್ ಬಂದಿದೆ ಎಂಬ ಖುಷಿಯಲ್ಲಿ ಬಾಕ್ಸ್ ತೆರೆದು ನೋಡಿದಾಗ ಮೊಸರು ಪ್ಯಾಕ್ ಇರುವುದು ಪತ್ತೆಯಾಗಿದೆ. ಈ ಸುದ್ದಿ ಚೀನಾದಾದ್ಯಂತ ಹಬ್ಬಿತ್ತು. ಘಟನೆ ಕುರಿತಾಗಿ ಮಾಹಿತಿ ಪಡೆದ ಪೊಲೀಸರು ಲಂಗ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈತ ಕೊರಿಯರ್ ತಲುಪಿಸುವ ವೇಳೆ ಆ್ಯಪಲ್ ಫೋನ್ ಇರುವುದನ್ನು ತಿಳಿದುಕೊಂಡು ಫೋನ್ ಎಗರಿಸಿದ್ದಾನೆ. ಈತ ತಾತ್ಕಾಲಿಕವಾಗಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಈ ಕುರಿತಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೀಜಿಂಗ್: ವ್ಯಕ್ತಿಯೊಬ್ಬ ನಿಜವಾದ ಮಹಿಳೆಯೊಂದಿಗೆ ಡೇಟ್ ಮಾಡುವುದಕ್ಕಿಂತ ಸೆಕ್ಸ್ ಡಾಲ್ ಜೊತೆ ಇರುವುದು ಉತ್ತಮ ಎಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಇದೀಗ ಆತ ನಿಶ್ಚಿತಾರ್ಥ ಮಾಡಿಕೊಂಡ ಸೆಕ್ಸ್ ಡಾಲ್ ಹಾಗೂ ಅವರ ಬೇಬಿ ಡಾಲ್ ಜೊತೆ ಹಾಂಕಾಂಗ್‍ನಲ್ಲಿ ವಾಸವಾಗಿದ್ದಾನೆ.
ಕ್ಸಿ ಟಿಯನ್‍ರಾಂಗ್(35) ಎಂಬಾತ ಮೋಚಿ ಎಂಬ ಗೊಂಬೆಯೊಂದಿಗೆ ಈ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಅಲ್ಲದೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಆತನ ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು.
ಇಲ್ಲಿಯವರೆಗೆ ನಾನು ಡಾಲನ್ನು ಚುಂಬಿಸಿಲ್ಲ ಎಂದು ಹೇಳಿದ್ದಾನೆ. ಯಾಕೆ ಚುಂಬಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ಚುಂಬಿಸಿದರೆ ಆಕೆಯ ಸೂಕ್ಷ್ಮವಾದ ತ್ವಚೆಗೆ ಎಲ್ಲಿ ಹಾನಿಯಾಗಬಹುದು ಎಂಬ ಉತ್ತರವನ್ನು ನೀಡಿದ್ದಾನೆ.
ಹಾಂಕಾಂಗ್‍ನಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಇರುತ್ತಿದ್ದ ಗೊಂಬೆಗಳ ವೀಕ್ಷಿಸುತ್ತಿದ್ದ ಕ್ಸಿ ಕಳೆದ 10 ವರ್ಷಗಳಿಂದ ಅದರ ಮೇಲೆ ಆಕರ್ಷಣೆಗೆ ಒಳಗಾಗಿದ್ದಾನೆ. ಆಗ ಒಂದು ಗೊಂಬೆಯ ಬೆಲೆ 80,000 ಯುವಾನ್(ಅಂದಾಜು 9.7 ಲಕ್ಷ) ಇತ್ತು. ಆದರೆ ಆ ಸಮಯದಲ್ಲಿ ದುಡ್ಡು ಇರದ ಕಾರಣ ಖರೀದಿಸಲು ಸಾಧ್ಯವಾಗಿರಲಿಲ್ಲ.
2019ರಲ್ಲಿ ಸಿಲಿಕೋನ್ ಡಾಲ್ ಇಂಟರ್‍ನೆಟ್‍ನಲ್ಲಿ ಮಾರಾಟಕ್ಕೆ ಇರುವುದನ್ನು ನೋಡಿ 1,0000 ಯುವಾನ್(11.34 ಲಕ್ಷ) ನೀಡಿ ಆನ್‍ಲೈನ್ ನಲ್ಲಿ ಆರ್ಡರ್ ಮಾಡಿ ಚೀನಾದಿಂದ ತರಿಸಿಕೊಂಡಿರುದಾಗಿ ತಿಳಿಸಿದ್ದಾನೆ. ಕ್ಸಿ ಟಿಯನ್‍ರಾಂಗ್ ರಾತ್ರಿ ಮಲಗಿರುವ ವೇಳೆ ಮೋಚಿ ಕುರ್ಚಿ ಮೇಲೆ ಕುಳಿತಿರುತ್ತಾಳೆ. ಅಲ್ಲದೆ ನಾನು ಆಕೆಯನ್ನು ಒದ್ದೆ ಬಟ್ಟೆಯಿಂದ ಸ್ನಾನ ಮಾಡಿಸಿ ಟಾಲ್ಕಮ್ ಪೌಡರ್ ಹಾಕುತ್ತೇನೆ ಎಂದು ತಿಳಿಸಿದ್ದಾನೆ.
ಈ ಮೊದಲು ನನಗೆ ಗರ್ಲ್‍ಫ್ರೆಂಡ್ ಇದ್ದಳು. ಆದರೆ ನಾನು ಮೋಚಿಯನ್ನು ಗೌರವಿಸುತ್ತೇನೆ. ನನ್ನ ಗಮನ ಈಗ ಏನಿದ್ದರೂ ಮೋಚಿ ಮೇಲೆ ಮಾತ್ರ. ಇಲ್ಲಿಯವರೆಗೂ ನಾನು ಮೋಚಿಯೊಂದಿಗೆ ಲೈಂಗಿಕ ಸಂಬಂಧವನ್ನು ಕೂಡ ಹೊಂದಿಲ್ಲ. ಹಿಂದೆ ನನ್ನ ಗರ್ಲ್ ಫ್ರೆಂಡ್ ಯಾವಾಗಲೂ ನನಗೆ ಏನಾದರೂ ಕೊಡಿಸುವಂತೆ ಪೀಡಿಸುತ್ತಿದ್ದಳು. ಇಲ್ಲಿಯವರೆಗೂ ಮೋಚಿ ಮಾತ್ರ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾನೆ.
ನನ್ನ ಹಳೆಯ ಗೆಳತಿ ಮೊಬೈಲ್‍ನನ್ನು ನೋಡುತ್ತಾ ನನ್ನ ಮೇಲೆ ಗಮನ ನೀಡುತ್ತಿರಲಿಲ್ಲ. ಆದರೆ ಮೋಚಿ ಹಾಗೇ ಮಾಡುವುದಿಲ್ಲ. ಅವಳ ಎಲ್ಲ ಗಮನವನ್ನು ನನ್ನ ಮೇಲೆ ಹರಿಸುತ್ತಾಳೆ. ಹಾಗಾಗಿ ನಿಜವಾದ ಮಹಿಳೆಗಿಂತ ಸೆಕ್ಸ್ ಡಾಲ್ ಜೊತೆ ಡೇಟ್ ಮಾಡುವುದು ಉತ್ತಮ ಎಂದು ಹೇಳಿದ್ದಾನೆ. ಮೋಚಿಗೆ ಮುದ್ದಾದ ಬಟ್ಟೆ ತೊಡಿಸಿ ಫೋಟೋವನ್ನು ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾನೆ.
ಬೀಜಿಂಗ್: ಎಲ್ಲರಿಗೂ ತಿಳಿದಿರುವಂತೆ ವಿಮಾನಯಾನವು ದುಬಾರಿ ಸಾರಿಗೆ ವ್ಯವಸ್ಥೆಯಾಗಿದೆ. ವಿಮಾನ ಸಂಸ್ಥೆಯು ತನ್ನದೇ ಆದ ನಿಯಮ ಮತ್ತು ನಿಬಂಧನೆಗಳನ್ನು ಹೊಂದಿರುತ್ತದೆ. ಉದಾಹರಣೆ ಪ್ರಯಾಣಿಕರು ತೆಗೆದುಕೊಂಡು ಹೋಗುವ ಲಗೇಜ್‍ಗಳ ಮಿತಿ ಇಷ್ಟೇ ಇರಬೇಕು ಎಂಬ ನಿಯಮವಿರುತ್ತದೆ. ಲಗೇಜ್ ಮಿತಿಮೀರಿದರೆ ಯಾವುದೇ ಪ್ರಯಾಣಿಕರಾದರು ಸಹ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಹೆಚ್ಚಿನ ಶುಲ್ಕ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಹೋಗಿ ನಾಲ್ವರು ಪ್ರಯಾಣಿಕರು ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ.
ಇತ್ತೀಚೆಗೆ 4 ಮಂದಿ ಪ್ರಯಾಣಿಕರು 30 ಕೆಜಿ ಕಿತ್ತಳೆ ಹಣ್ಣಿನ ಡಬ್ಬಗಳ ಲಗೇಜ್‍ಗೆ ಹೆಚ್ಚು ಹಣ ಪಾವತಿಸಬೇಕೆಂದು 30 ಕೆಜಿ ಹಣ್ಣನ್ನು 30 ನಿಮಿಷದಲ್ಲಿ ತಿಂದಿರುವ ಘಟನೆ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್‍ನಲ್ಲಿರುವ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನ ನಿಲ್ದಾಣಕ್ಕೆ 30 ಕೆಜಿ ಕಿತ್ತಳೆ ಹಣ್ಣನ್ನು ತೆಗೆದುಕೊಂಡು ಹೋಗಿದ್ದ ವಾಂಗ್ ಮತ್ತು ಆತನ ಸಹೋದ್ಯೋಗಿಗಳು ಕಿತ್ತಳೆ ಹಣ್ಣಿನ ಹೆಚ್ಚುವರಿ ಲಗೇಜ್‍ಗೆ 300 ಯುವಾನ್(3,384 ರೂ) ಶುಲ್ಕ ಪಾವತಿಸಬೇಕೆಂದು ಕಿತ್ತಳೆ ಹಣ್ಣುಗಳನ್ನು ತಿನ್ನಲು ನಿರ್ಧರಿಸಿ, ಕೇವಲ 30 ನಿಮಿಷಗಳಲ್ಲಿ ವಿಮಾನ ನಿಲ್ದಾಣದಲ್ಲಿಯೇ ಎಲ್ಲಾ ಕಿತ್ತಳೆ ಹಣ್ಣುಗಳನ್ನು ತಿಂದು ಖಾಲಿ ಮಾಡಿದ್ದಾರೆ.
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ಒಂದೇ ಬಾರಿಗೆ ಅಧಿಕ ಹಣ್ಣುಗಳನ್ನು ತಿಂದ ಪರಿಣಾಮ ಇದೀಗ 4 ಮಂದಿ ಕೂಡ ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಆ ನಾಲ್ವರ ಮೂರ್ಖತನವನ್ನು ನೋಡಿ ವ್ಯಂಗ್ಯ ಮಾಡುತ್ತಿದ್ದಾರೆ.
ಬೀಜಿಂಗ್: ಹಸಿವು ನೀಗಿಸಿದ ಮಹಿಳೆಗೆ ಬೀದಿ ನಾಯಿಯೊಂದು ಕಣ್ಣಂಚಲಿ ಕಣ್ಣೀರು ಹಾಕುತ್ತಾ ಕೃತಜ್ಞತೆಯನ್ನು ಸಲ್ಲಿಸಿರುವ ವಿಡಿಯೋ ವೈರಲ್ ಆಗಿದೆ. ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಜಿಂಗ್ ನಗರದಲ್ಲಿ ಮನಮಿಡಿಯುವ ಘಟನೆ ನಡೆದಿದೆ.
ನಿಯತ್ತಿಗೆ ಇನ್ನೊಂದು ಹೆಸರೆ ನಾಯಿ ಎನ್ನುವುದು ವಾಡಿಕೆ. ಈ ವಿಡಿಯೋವನ್ನು ನೋಡಿದ ಮೇಲೆ ಇದು ನಿಜ ಎನ್ನಿಸುತ್ತದೆ. ಬೀದಿಯಲ್ಲಿರುವ ನಾಯಿ ತನ್ನ ಹಸಿವನ್ನು ನೀಗಿಸಿದ ಮಹಿಳೆಗೆ ಆನಂದಭಾಷ್ಪದ ಮೂಲಕವಾಗಿ ಕೃತಜ್ಞತೆ ಸಲ್ಲಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ ಪಾರ್ಕಿಂಗ್ ಮಾಡಲು ತೆರಳಿದ ಮಹಿಳೆಯೊಬ್ಬರಿಗೆ ಬೀದಿ ನಾಯಿಯೊಂದು ಕಂಡಿದೆ. ನಾಲಿಗೆಯನ್ನು ಹೊರಚಾಚುತ್ತಾ ಆಹಾರಕ್ಕಾಗಿ ಹುಡುಕುತ್ತಾ ಹಸಿವಿನಿಂದ ಬಳಲುತ್ತಿದ್ದ ಶ್ವಾನ, ಮಹಿಳೆಯ ಬಳಿ ಓಡಿ ಬಂದಿದೆ. ತನ್ನ ಕಾಲುಗಳನ್ನು ಮೇಲಕ್ಕೆ ಎತ್ತಿ ಬಾಲ ಅಲ್ಲಾಡಿಸುತ್ತಾ ಇರುವುದನ್ನು ಗಮನಿಸಿದ ಮಹಿಳೆ, ಅದಕ್ಕೆ ಬಿಸ್ಕೆಟ್‍ಗಳನ್ನು ಹಾಕಿದ್ದಾರೆ. ನಾಯಿ ಬಿಸ್ಕೆಟ್ ತಿನ್ನಲು ಪ್ರಾರಂಭಿಸಿದೆ. ನಂತರ ಶ್ವಾನ ಕಣ್ಣೀರು ಹಾಕುತ್ತಾ ಹಸಿದ ಹೊಟ್ಟೆಯನ್ನು ತುಂಬಿಸಿದ ಮಹಿಳೆಗೆ ಧನ್ಯವಾದ ಹೇಳಿದೆ.
ಮರುದಿನವು ಅಲ್ಲೇ ಇದ್ದ ಶ್ವಾನ, ಮಹಿಳೆ ಬರುವುದನ್ನೇ ಕಾಯುತ್ತಾ ಕುಳಿತಿತ್ತು. ಮಹಿಳೆಯ ಕಾರು ನೋಡುತ್ತಿದ್ದಂತೆ ಓಡಿಬಂದಿದೆ. ಕಣ್ಣಲ್ಲಿ ನೀರು ತುಂಬಿಕೊಂಡು ಬಿಸ್ಕೆಟ್ ತಿನ್ನುತ್ತಾ ಮಹಿಳೆಗೆ ಧನ್ಯವಾದ ಹೇಳಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಸಿವಿನಿಂದ ಬಳಲುವ ನಾಯಿ ಕಂಡರೆ ಏನನ್ನಾದರೂ ತಿನ್ನಲು ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
– ಕುಟುಂಬಸ್ಥರ ಮುಂದೆಯೇ ಮಹಿಳೆಯ ಮೇಲೆ ಹಲ್ಲೆ
– 2 ವಾರಗಳಿಂದ ಆಸ್ಪತ್ರೆಯಲ್ಲಿ ಸಾವು, ಬದುಕಿನ ಮಧ್ಯೆ ಹೋರಾಟ
ಬೀಜಿಂಗ್: ಚೀನಾದ ಸೋಶಿಯಲ್ ಮಿಡಿಯಾದ ಸ್ಟಾರ್ ಲೈವ್ ಶೋ ಮಾಡುವಾಗಲೇ ಆಕೆಯ ಮೇಲೆ ಮಾಜಿ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.
ಲಾಮು ಮೃತ ಮಹಿಳೆ. ಈ ಘಟನೆ ಸೆಪ್ಟೆಂಬರ್‌ನಲ್ಲಿ ನಡೆದಿದೆ. ಲಾಮು ವಿಡಿಯೋ ಬ್ಲಾಗರ್ ಆಗಿದ್ದು, ಲೈವ್ ಶೋ ಮಾಡುವಾಗ ಆಕೆ ಮಾಜಿ ಪತಿ ಟ್ಯಾಂಗ್ ಏಕಾಏಕಿ ಮನೆಗೆ ನುಗ್ಗಿದ್ದನು. ನಂತರ ಆಕೆಯ ಕುಟುಂಬ ಸದಸ್ಯರ ಮುಂದೆ ಹಲ್ಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು ಎಂದು ವರದಿಯಾಗಿದೆ.
ಹಲ್ಲೆಯಿಂದ ಲಾಮು ಶೇ.90 ರಷ್ಟು ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಎರಡು ವಾರಗಳಿಂದ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಲಾಮು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮೃತ ಲಾಮು ಮಾಜಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಯಾವ ಉದ್ದೇಶದಿಂದ ಈ ರೀತಿ ಮಾಡಿದ್ದಾನೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.
ಮೃತ ಲಾಮು ಕೌಟುಂಬಿಕ ಕಲಹದಿಂದ ಬೇಸತ್ತು ಪತಿಯಿಂದ ವಿಚ್ಛೇದನವನ್ನು ಪಡೆದುಕೊಂಡಿದ್ದಳು. ಹೀಗಾಗಿ ಪತ್ನಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಲಾಮು ಮಾಜಿ ಪತಿ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಲಾಮು ಜನಪ್ರಿಯ ಟಿಬೆಟಿಯನ್ ವಿಡಿಯೋ ಬ್ಲಾಗರ್ ಆಗಿದ್ದು, ಆಕೆ ಪಶ್ಚಿಮ ಚೀನಾದ ಸಿಚುವಾನ್ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಕುಟುಂಬದವರ ಜೊತೆ ವಾಸಿಸುತ್ತಿದ್ದಳು. ಟಿಕ್‍ಟಾಕ್ ಮಾದರಿಯ ಚೀನೀ ಆವೃತ್ತಿಯಾದ ಡೌಯಿನ್‍ನಲ್ಲಿ ಲಾಮು ಖಾತೆಯನ್ನು ಹೊಂದಿದ್ದಳು. ಅದರಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಲಾಮು 7,82,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಳು.
ಲಾಮು ಸೆಪ್ಟೆಂಬರ್ 14 ರಂದು ಕೊನೆಯ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಳು. ಆದರೆ ಮಾಜಿ ಪತಿಯಿಂದಲೇ ಹತ್ಯೆಯಾಗಿದ್ದಾಳೆ. ಈ ಬಗ್ಗೆ ತಿಳಿದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಲಾಮುವಿನ ಮಾಜಿ ಪತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಾಹಿಸಿದ್ದಾರೆ.
ಬೀಜಿಂಗ್: ಕೋವಿಡ್ 19 ಉಗಮಸ್ಥಾನ ಚೀನಾದಲ್ಲಿ ಈಗ ಸೋಂಕಿನ ಎರಡನೇ ಅಲೆ ಆರಂಭವಾಗಿದೆ. ಏಪ್ರಿಲ್ ನಂತರ ಮೊದಲ ಬಾರಿಗೆ 24 ಗಂಟೆಯಲ್ಲಿ 57 ಪ್ರಕರಣಗಳು ವರದಿಯಾಗಿದೆ.
57 ಹೊಸ ಪ್ರಕರಣಗಳ ಪೈಕಿ 37 ಪ್ರಕರಣಗಳು ಚೀನಾದಲ್ಲೇ ವರದಿಯಾಗಿದ್ದು, 20 ಪ್ರಕರಣಗಳು ವಿದೇಶಗಳಿಂದ ಆಗಮಿಸಿದ್ದ ಚೀನೀಯರದ್ದು ಎಂದು ಚೀನಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ರಾಜಧಾನಿ ಬೀಜಿಂಗ್‌ನಲ್ಲಿ 36 ಪ್ರಕರಣಗಳು ಬೆಳಕಿಗೆ ಬಂದಿದೆ. ಮೀನು ಮತ್ತು ತರಕಾರಿಗೆ ಹೆಸರಾಗಿರುವ ಬೀಜಿಂಗ್‌ನ ಜಿನ್ ಫಾದಿ ಹೋಲ್ ಸೇಲ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಹೊಸ ಸೋಂಕು ಪ್ರಕರಣಗಳನ್ನು ಕಂಡುಬಂದ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮಾಡಲಾಗಿದೆ.
ಮಾರುಕಟ್ಟೆಗೆ ಭೇಟಿ ನೀಡಿದ್ದ ಇಬ್ಬರಲ್ಲಿ ಇತ್ತೀಚಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ 517 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ 45 ಮಂದಿಗೆ ಪಾಸಿಟಿವ್ ಬಂದಿದೆ. ಈ 45 ಮಂದಿಯಲ್ಲಿ ಯಾರಿಗೂ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
276 ಎಕ್ರೆ ಪ್ರದೇಶದಲ್ಲಿ ಈ ಮಾರುಕಟ್ಟೆ ವ್ಯಾಪಿಸಿದ್ದು ಅಧಿಕಾರಿಗಳು ಈ ಮಾರುಕಟ್ಟೆಗೆ ಭೇಟಿ ನೀಡಿದ ಎಲ್ಲರೂ ಪರೀಕ್ಷೆಗೆ ಒಳಪಡಬೇಕು ಎಂದು ಸೂಚಿಸಿದ್ದಾರೆ. ಈ ಮಾರುಕಟ್ಟೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದು, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ಸರ್ಕಾರ ಮುಂದಾಗಿದೆ.
ತರಕಾರಿ ಮತ್ತು ಮಾಂಸ ಎಲ್ಲ ಒಂದೇ ಕಡೆಯಲ್ಲಿ ಸಿಗು ಕಾರಣ ಪ್ರತಿನಿತ್ಯ 50 ಸಾವಿರ ಜನ, ವಾರಾಂತ್ಯದಲ್ಲಿ 2 ಲಕ್ಷ ಜನ ಈ ಮಾರುಕಟ್ಟೆಗೆ ಭೇಟಿ ನೀಡುತ್ತಾರೆ. ಜಿನ್ ಫಾದಿ ಮಾರುಕಟ್ಟೆಯಿಂದಲೇ ಬೀಜಿಂಗ್ ನಗರಕ್ಕೆ ಶೇ.80 ರಷ್ಟು ತರಕಾರಿ ಮತ್ತು ಮಾಂಸ ಸರಬರಾಜು ಆಗುತ್ತಿದೆ.
ಈ ಪ್ರದೇಶ ಸಮೀಪದಲ್ಲಿದ್ದ 9 ಶಿಶು ವಿಹಾರಗಳು ಹಾಗೂ ಶಾಲೆಗಳನ್ನು ಮುಚ್ಚಲಾಗಿದ್ದು, ಲಾಕ್‌ಡೌನ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಕಳೆದ ಡಿಸೆಂಬರ್ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಈ ಸೋಂಕು ವಿಶ್ವಾದ್ಯಂತ ಹರಡಿದ್ದು, ಒಟ್ಟು 77.86 ಲಕ್ಷ ಮಂದಿಗೆ ಕೋವಿಡ್ 19 ಬಂದಿದೆ. ಇಲ್ಲಿಯವರೆಗೆ 4.30 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಚೀನಾದಲ್ಲಿ 84 ಸಾವಿರ ಮಂದಿಗೆ ಸೋಂಕು ಬಂದಿದ್ದು, 4,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಬೀಜಿಂಗ್: ಪ್ರೇಯಸಿಯೊಬ್ಬಳು ತನಗೆ ಕೈಕೊಟ್ಟ ಪ್ರಿಯತಮನಿಗೆ ಒಂದು ಟನ್ ಈರುಳ್ಳಿ ಕಳುಹಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.
ಯುವತಿ ತನ್ನ ಗೆಳೆಯ ಮೋಸ ಮಾಡಿದ್ದರಿಂದ ನೊಂದು ಆತನಿಗೆ ಒಂದು ಟನ್ ಈರುಳ್ಳಿ ಕಳುಹಿಸುವ ಮೂಲಕ ಶಿಕ್ಷೆ ನೀಡಲು ನಿರ್ಧರಿಸಿದ್ದಳು. ಅದರಂತೆಯೇ ಆಕೆ ಪ್ರಿಯತಮನ ಮನೆಗೆ ಒಂದು ಟನ್ ಈರುಳ್ಳಿ ಕಳುಹಿಸಿದ್ದಾಳೆ. ಯುವತಿ ಪ್ರಿಯತಮನಿಂದ ಬೇರೆಯಾದಾಗ ತುಂಬಾ ಕಣ್ಣೀರು ಹಾಕಿದ್ದಳು. ಹೀಗಾಗಿ ಆತನೂ ಕೂಡ ಕಣ್ಣೀರು ಹಾಕಬೇಕೆಂಬ ಉದ್ದೇಶದಿಂದ ಆತನಿಗೆ ಈರುಳ್ಳಿಯನ್ನು ಕಳುಹಿಸಿದ್ದಾಳೆ.
ಲವ್ ಬ್ರೇಕಪ್ ಆದ ಒಂದು ವರ್ಷದಿಂದ ಯುವತಿ, ಪ್ರಿಯತಮನನ್ನು ನೋಡುತ್ತಿದ್ದಳು. ಅದರಲ್ಲೂ ಇಬ್ಬರ ಸಂಬಂಧ ಮುರಿದ ನಂತರ ತನ್ನ ಮಾಜಿ ಗೆಳೆಯ ಕಣ್ಣೀರು ಹಾಕಲಿಲ್ಲ ಎಂದು ತಿಳಿದ ನಂತರ ಯುವತಿ ಕೋಪಗೊಂಡು ಮೂರು ದಿನ ಅತ್ತಿದ್ದಾಳೆ. ನಂತರ ಒಂದು ಟನ್ ಈರುಳ್ಳಿಯನ್ನು ಅವನ ಮನೆ ಬಾಗಿಲಿಗೆ ತಲುಪಿಸಿದ್ದಾಳೆ. ಜೊತೆಗೆ “ನಾನು ಮೂರು ದಿನ ಅತ್ತಿದ್ದೇನೆ. ಈಗ ಅದು ನಿನ್ನ ಸರದಿ..” ಎಂಬ ಸಂದೇಶವನ್ನು ಕೂಡ ರವಾನಿಸಿದ್ದಾಳೆ.
ಚೀನಾದ ಶಾಂಡೊಂಗ್‍ನ ಜಿಬೊದಲ್ಲಿರುವ ವಸತಿ ಕಾಂಪೌಂಡ್‍ನಲ್ಲಿ ಒಂದು ಟನ್ ಈರುಳ್ಳಿಯನ್ನು ಕಾಣಬಹುದು. ಯುವತಿ, ಯುವಕನ್ನು ಭೇಟಿ ಮಾಡದಂತೆ ಮತ್ತು ಆತನ ಮನೆಯ ಮುಂಭಾಗದ ಬಾಗಿಲಲ್ಲಿ ಈರುಳ್ಳಿಯನ್ನು ಸುರಿದು ಬರುವಂತೆ ಡೆಲಿವರಿ ಮಾಡುವವರಿಗೆ ಸೂಚಿಸಿದ್ದಳು. ತನ್ನಂತೆ ಪ್ರಿಯತಮ ಕೂಡ ಕಣ್ಣೀರು ಹಾಕಬೇಕೆಂದು ಆಕೆ ಈರುಳ್ಳಿ ಕಳುಹಿಸಿದ್ದಾಳೆ.