Tag: beguru

  • ಬೇಗೂರಲ್ಲಿ ನಡೆದಿದ್ದ ತಾಯಿ-ಮಗಳ ಕೊಲೆ ಆರೋಪಿ ಬಳ್ಳಾರಿಯಲ್ಲಿ ಅರೆಸ್ಟ್!

    ಬೇಗೂರಲ್ಲಿ ನಡೆದಿದ್ದ ತಾಯಿ-ಮಗಳ ಕೊಲೆ ಆರೋಪಿ ಬಳ್ಳಾರಿಯಲ್ಲಿ ಅರೆಸ್ಟ್!

    ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯ ಬೇಗೂರಲ್ಲಿ ನಡೆದಿದ್ದ ತಾಯಿ-ಮಗಳ ಕೊಲೆ ಕೇಸ್‍ನ ಆರೋಪಿ ಪ್ರಶಾಂತ್‍ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

    ಫೇಸ್‍ಬುಕ್‍ನಲ್ಲಿ ಪರಿಚಯ ಆಗಿದ್ದ ಚಂದ್ರಕಲಾ ವೀಡಿಯೋವೊಂದನ್ನು ಬ್ಲ್ಯಾಕ್‍ಮೇಲ್ ಮಾಡಿದ್ದೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಫೇಸ್‍ಬುಕ್‍ನಲ್ಲಿ ಪ್ರಶಾಂತ್‍ಗೂ ಚಂದ್ರಕಲಾಗೂ ಪರಿಚಯ ಆಗಿತ್ತು. ಮನೆಗೆ ಬರುವಂತೆ ಪ್ರಶಾಂತ್‍ಗೆ ಚಂದ್ರಕಲಾ ಒತ್ತಾಯಿಸ್ತಿದ್ಳು. ಹೀಗಾಗಿ ಚಂದ್ರಕಲಾ ನೋಡಲು ಬಳ್ಳಾರಿಯಿಂದ ಬಂದಿದ್ದ. ಇದನ್ನೂ ಓದಿ: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಇನ್ನೆರಡು ದಿನ ಜೈಲೇ ಗತಿ

    ಆ ದಿನ ಚಂದ್ರಕಲಾ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ವೇಳೆ ಅಂಗಿ ಹಾಕದೇ ಪಂಚೆಯಲ್ಲೇ ಮಲಗಿದ್ದ. ಇದರ ವೀಡಿಯೋವನ್ನು ಚಂದ್ರಕಲಾ ರೆಕಾರ್ಡ್ ಮಾಡಿ ಹಣ ಕೊಡುವಂತೆ ಇಲ್ಲವಾದ್ರೆ ಫೇಸ್‍ಬುಕ್‍ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಳು. ಆಗ ಇಬ್ಬರ ನಡುವೆಯೂ ಗಲಾಟೆ ಆಗಿದೆ. ಈ ವೇಳೆ ಆಕೆಯ ನಾಲ್ಕು ವರ್ಷದ ಮಗಳು ಅಡ್ಡಬಂದಿದ್ಳು. ಮಗಳನ್ನು ತಳ್ಳಿದ್ದರಿಂದ ಕೋಪಗೊಂಡ ಚಂದ್ರಕಲಾ ಚಾಕು ತಂದ್ಳು. ಅದೇ ಚಾಕುವಿನಿಂದ ಪ್ರಶಾಂತ್ ಚಂದ್ರಕಲಾ ಮತ್ತು ಆಕೆಯ ಮಗುವನ್ನು ಕೊಲೆ ಮಾಡಿ ಪರಾರಿ ಆಗಿದ್ದನು.

    ಸದ್ಯ ಪ್ರಶಾಂತ್‍ನನ್ನು ಬೇಗೂರು ಪೊಲೀಸರು ಬಳ್ಳಾರಿಯಲ್ಲಿ ಅರೆಸ್ಟ್ ಮಾಡಿ ಕರೆತಂದಿದ್ದಾರೆ.

  • ಹಾಲ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಅಂದ್ರು: ಭಾಗ್ಯ ರೇಖಾ ಅಳಿಯ ಕಣ್ಣೀರು

    ಹಾಲ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಅಂದ್ರು: ಭಾಗ್ಯ ರೇಖಾ ಅಳಿಯ ಕಣ್ಣೀರು

    ಬೆಂಗಳೂರು: ಹಾಲ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಅಂತ ಕರೆದ್ರು. ಆದರೆ ಅವರನ್ನು ನನಗೆ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಅಗ್ನಿ ಅವಘಡದಲ್ಲಿ ಸಜೀವ ದಹನವಾಗಿರುವ ಭಾಗ್ಯ ರೇಖಾ ಅವರ ಅಳಿಯ ಸಂದೀಪ್ ಕಣ್ಣೀರು ಹಾಕಿದ್ದಾರೆ.

    ಘಟನೆ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಾಲ್ ನಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ನನಗೆ ಫೋನ್ ಮಾಡಿ, ಹಾಲ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಾರಪ್ಪ ಅಂತ ಕರೆದ್ರು. ಕರೆ ಬಂದ ಕೂಡಲೇ ನಾನು ಓಡಿ ಹೋದೆ. ಹೀಗೆ ಓಡಿ ಹೋದಾಗಿ ಬಾಗಿಲು ತೆರೆದ ತಕ್ಷಣ ನಮ್ಮ ಮೇಲೂ ಬೆಂಕಿ ಬಂತು ಎಂದರು. ಪಕ್ಕದಲ್ಲೇ ನಮ್ಮ ಫ್ಲ್ಯಾಟ್ ಇದ್ದು, ದುರಂತದ ವೇಳೆ ನಾನು ಕೂಡ ಫ್ಲ್ಯಾಟ್ ನಲ್ಲೇ ಇದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರಿನಿಂದಲ್ಲ- ಯುಪಿಎಸ್, ಮೊಬೈಲ್ ಚಾರ್ಜರ್ ಬಗ್ಗೆ ಶಂಕೆ

    ಇತ್ತ ಆಗ್ನೇಯ ವಲಯ ಡಿಸಿಪಿ ಶ್ರೀನಾಥ್ ಜೋಶಿ ಮಾತನಾಡಿ, ಅಪಾರ್ಟ್ ಮೆಂಟ್ ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಸ್ಫೋಟ ಕಾರಣವಲ್ಲ. ಯಾವುದೋ ವಸ್ತುವಿನಿಂದ ಮೊದಲು ಬೆಂಕಿ ಹೊತ್ತಿಕೊಂಡಿರಬಹುದು. ನಂತರ ಮನೆಯಲ್ಲಿ ಉಳಿದ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಬೆಂಕಿ ಹಬ್ಬಿದೆ. ಆ ಬಳಿಕ ಮನೆಯ ಎಲ್ಲಾ ಕಡೆ ಬೆಂಕಿ ಹಬ್ಬಿದೆ. ಇಂದು ಘಟನಾ ಸ್ಥಳಕ್ಕೆ ಎಲೆಕ್ಟ್ರಿಕಲ್ ಎಂಜಿನಿಯರ್ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಅಲ್ಲದೆ ಎಫ್‍ಎಸ್‍ಎಲ್ ತಂಡದಿಂದಲೂ ಫ್ಲ್ಯಾಟ್ ಗೆ ಭೇಟಿ ಕೊಡಲಿದ್ದಾರೆ. ಇದನ್ನೂ ಓದಿ: ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲ ಮಾದಪ್ಪನ ದರ್ಶನ- ಭಕ್ತರ ಆಕ್ರೋಶ

    ಒಟ್ಟಿನಲ್ಲಿ ಬೇಗೂರು ಅಪಾರ್ಟ್ ಮೆಂಟ್ ನಲ್ಲಿ ನಡೆದ ಅಗ್ನಿ ಅವಘಡಕ್ಕೆ ತಾಯಿ- ಮಗಳು ಬಲಿಯಾಗಿದ್ದಾರೆ. ಫ್ಲ್ಯಾಟ್ ನಲ್ಲಿ ಗ್ರಿಲ್ ಅಳವಡಿಸಿದ್ದರಿಂದ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ತಾಯಿ- ಮಗಳು ಹೊರಬರಲು ಸಾಧ್ಯವಾಗದೆ ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾದರು. ಇದೀಗ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ನೆರವೇರಿಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

  • ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರಿನಿಂದಲ್ಲ- ಯುಪಿಎಸ್, ಮೊಬೈಲ್ ಚಾರ್ಜರ್ ಬಗ್ಗೆ ಶಂಕೆ

    ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರಿನಿಂದಲ್ಲ- ಯುಪಿಎಸ್, ಮೊಬೈಲ್ ಚಾರ್ಜರ್ ಬಗ್ಗೆ ಶಂಕೆ

    – ಬಿಬಿಎಂಪಿ, ಮನೆ ಮಾಲೀಕರ ನಿರ್ಲಕ್ಷ್ಯ

    ಬೆಂಗಳೂರು: ದೇವರಚಿಕ್ಕನಹಳ್ಳಿ ಅಪಾರ್ಟ್‍ಮೆಂಟ್ ಅಗ್ನಿ ಅವಘಡಕ್ಕೆ ಕಾರಣ ನಿಗೂಢವಾಗಿದ್ದು, ತಾಯಿ-ಮಗಳದ್ದು ಅಸಹಜ ಸಾವು ಎಂದು ಬೇಗೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಅಪಾರ್ಟ್‍ಮೆಂಟ್‍ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಭೀಮ್‍ಸೇನ್ ರಾವ್ ಅವರು ಈ ಅಪಾರ್ಟ್ ಮೆಂಟ್ ಅನ್ನು 2018ರಲ್ಲಿ ಖರೀದಿಸಿದ್ದಾರೆ. ಇದೀಗ ಈ ಅಪಾರ್ಟ್ ಮೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಸಜೀವ ದಹನವಾಗಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಗ್ಯಾಸ್‍ನಿಂದ ಬೆಂಕಿ ಹೊತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಯುಪಿಎಸ್, ಮೊಬೈಲ್ ಚಾರ್ಜಿಂಗ್, ದೇವರ ಮನೆಯ ದೀಪದ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ. ಯಾಕೆಂದರೆ ಮನೆಯಲ್ಲಿದ್ದ ಎರಡೂ ಸಿಲಿಂಡರ್ ಕೂಡ ಸೇಫ್ ಆಗಿವೆ. ಹೀಗಾಗಿ ಎಲೆಕ್ಟ್ರಾನಿಕ್ ಐಟಂ ಬ್ಲಾಸ್ಟ್ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ಬೆಂಕಿ ದುರ್ಘಟನೆಗೆ ಕಾರಣ ನಿಗೂಢ – ಘಟನೆ ಬಗ್ಗೆ ಕಂಪ್ಲೆಂಟ್ ಕೊಟ್ಟ ಮನೆ ಮಾಲೀಕ

    ಬೆಂಕಿ ಬಿದ್ದ ಬಳಿಕ ಪತಿ ಭೀಮಸೇನ್‍ರಿಗೆ ಪತ್ನಿ ಭಾಗ್ಯ ರೇಖಾ ಕರೆ ಮಾಡಿದ್ದಾರೆ. ಒಳಗೆ ಬೆಂಕಿ ಬಿದ್ದಿದೆ ಬೇಗ ಬನ್ನಿ ಅಂತ ಕೂಗಿಕೊಂಡಿದ್ದಾರೆ. ಇತ್ತ ಅಪಾರ್ಟ್‍ಮೆಂಟ್‍ಗೆ ಇಂದು 2 ತನಿಖಾ ತಂಡಗಳು ಭೇಟಿ ನೀಡಲಿವೆ. ಎಫ್‍ಎಸ್‍ಎಲ್, ಎಲೆಕ್ಟ್ರಿಕಲ್ ಎಂಜಿನಿಯರ್ ತಂಡದಿಂದ ಪರಿಶೀಲನೆ ನಡೆಯಲಿದೆ. ಬೆಂಕಿಯ ಕಾರಣ ತಿಳಿಯಲು ತಂಡ ಪರಿಶೀಲನೆ ನಡೆಸಲಿದೆ. ಮತ್ತೊಂದೆಡೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಕೂಡ ಈ ಬಗ್ಗೆ ತನಿಖೆ ನಡೆಸಲಿದ್ದಾರೆ.  ಇದನ್ನೂ ಓದಿ: ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಲ್ಯಾಂಡ್ – ಇಂದು ಬೆಂಕಿಗೆ ಬಲಿ

    ಮಾಲೀಕರ ನಿರ್ಲಕ್ಷ್ಯ..?
    ಅಗ್ನಿ ದುರಂತಕ್ಕೆ ಬಿಬಿಎಂಪಿ, ಅಪಾರ್ಟ್ ಮೆಂಟ್ ಮಾಲೀಕರ ನಿರ್ಲಕ್ಷ್ಯವೇ ಕಾರಣ ಅಂತ ಹೇಳಲಾಗುತ್ತಿದೆ. ಅಪಾರ್ಟ್ ಮೆಂಟ್‍ನಲ್ಲಿ ರೂಲ್ಸ್ ಫಾಲೋನೇ ಆಗಿಲ್ಲ. ಹೀಗಾಗಿ ಈ ಇಬ್ಬರ ನಿರ್ಲಕ್ಷ್ಯದಿಂದ ಎರಡು ಜೀವಗಳು ಸಜೀವ ದಹನವಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಅಪಾರ್ಟ್ ಮೆಂಟ್‍ನಲ್ಲಿ ಜನರನ್ನು ಎಚ್ಚರಿಸುವ ಸೈರನ್ ವ್ಯವಸ್ಥೆ ಇಲ್ಲ. ಬೆಂಕಿ, ಹೊಗೆ ನಂದಿಸಲು ವಾಟರ್ ಲೈನ್ ವ್ಯವಸ್ಥೆ ಇಲ್ಲ. ಪ್ರತಿ ಅಂತಸ್ತಿನಲ್ಲಿ ರಾಸಾಯನಿಕ ಮಿಶ್ರಿತ ಬೆಂಕಿ ನಂದಿಸುವ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇಲ್ಲ. ಅಪಾರ್ಟ್‍ಮೆಂಟ್ ಅಕ್ಕಪಕ್ಕ ಟ್ರಾನ್ಸ್ ಫಾರ್ಮರ್ ಇರಬಾರದು. ಆದರೆ ಅಪಾರ್ಟ್‍ಮೆಂಟ್ ಕಾಂಪೌಂಡ್ ಒಳಗೇ ಟ್ರಾನ್ಸ್ ಫಾರ್ಮರ್ ಇದೆ. ಇದ್ಯಾವುದನ್ನೂ ಬಿಬಿಎಂಪಿ ಪರಿಶೀಲನೆ ಮಾಡಿಯೇ ಇಲ್ಲ ಎಂದು ಹೇಳಲಾಗುತ್ತಿದೆ.

    ಒಟ್ಟಿನಲ್ಲಿ ಅಗ್ನಿ ಅವಘಢ ಸಂಭಿಸಿದ ಪರಿಣಾಮ ನೋಡ ನೋಡುತ್ತಿದ್ದಂತೆಯೇ ತಾಯಿ-ಮಗಳು ಸಜೀವ ದಹನಾಗಿದ್ದಾರೆ. ಇಂದು ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ನೆರವೇರಿಸಿ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ.

  • ಬೆಂಕಿ ದುರ್ಘಟನೆಗೆ ಕಾರಣ ನಿಗೂಢ – ಘಟನೆ ಬಗ್ಗೆ ಕಂಪ್ಲೆಂಟ್ ಕೊಟ್ಟ ಮನೆ ಮಾಲೀಕ

    ಬೆಂಕಿ ದುರ್ಘಟನೆಗೆ ಕಾರಣ ನಿಗೂಢ – ಘಟನೆ ಬಗ್ಗೆ ಕಂಪ್ಲೆಂಟ್ ಕೊಟ್ಟ ಮನೆ ಮಾಲೀಕ

    ಬೆಂಗಳೂರು: ಸಿಲಿಕಾನ್ ಸಿಟಿಯ ಬೇಗೂರು ಬಳಿಯ ಅಪಾರ್ಟ್ ಮೆಂಟ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ತಾಯಿ-ಮಗಳು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ದೂರು ದಾಖಲಿಸಿದ್ದಾರೆ.

    ನಿನ್ನೆ ರಾತ್ರಿಯೇ ಮನೆ ಮಾಲೀಕ ಭೀಮಸೇನ್ ರಾವ್ ಹಾಗೂ ಅಳಿಯ ಸಂದೀಪ್ ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಜೊತೆಗೆ ಪತ್ನಿ ಹಾಗೂ ತಾಯಿ ಸಾವನ್ನಪ್ಪಿದ್ದಾರೆ. ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಂಕಿಗೆ ಕಾರಣ ಹುಡುಕಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಅನ್ವಯ ಅಗ್ನಿ ಅಪಘಾತ ಹಾಗೂ ಅಸಹಜ ಸಾವು ಎಂದು ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.

    ಘಟನೆ ಬಗ್ಗೆ ಆಶ್ರಿತ್ ಆಸ್ಪೈರ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಮಾತನಾಡಿ, ಎಷ್ಟೇ ಒದ್ದಾಡಿದರೂ ಕೂಡ ಇಬ್ಬರನ್ನು ಉಳಿಸಲು ಸಾಧ್ಯವಾಗಿಲ್ಲ. ಮನೆಯಲ್ಲಿ ನಾಲ್ಕು ಜನ ವಾಸ ಇದ್ದರು. ಮೊಮ್ಮಗನನ್ನು ನಾವೇ ಹೊರಗಡೆ ಕರೆದುಕೊಂಡು ಬಂದೆವು. ಕೆಲಸಕ್ಕೆ ಹೋಗಿದ್ದ ಮನೆಯ ಯಜಮಾನ ನಂತರ ಬಂದಿದ್ದಾರೆ. ಮನೆಯಲ್ಲಿ ಅಜ್ಜಿ, ಮಹಿಳೆ, ಮಗು ಮನೆಯಲ್ಲಿ ಇದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಲ್ಯಾಂಡ್ – ಇಂದು ಬೆಂಕಿಗೆ ಬಲಿ

    ಈ ಸಂಬಂಧ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ರಾಮಕೃಷ್ಣ ಪ್ರತಿಕ್ರಿಯಿಸಿ, ಘಟನೆಯಿಂದ 2 ಪ್ಲ್ಯಾಟ್ ಗಳಿಗೆ ತುಂಬಾ ಹಾನಿಯಾಗಿದೆ. ಮನೆಯಲ್ಲಿದ್ದ 2 ಸಿಲಿಂಡರ್‍ಗಳಿಗೆ ಯಾವುದೇ ಹಾನಿಯಾಗಿಲ್ಲ. ಬೆಂಕಿ ಯಾವ ರೀತಿ ಹೊತ್ತಿಕೊಂಡಿದೆ ಎನ್ನುವುದು ಬೆಳಕಿಗೆ ಬರಬೇಕಿದೆ. ಅಪಾರ್ಟ್‍ಮೆಂಟ್ ನಲ್ಲಿ 72 ಫ್ಲ್ಯಾಟ್ ಇದೆ ಎಂದು ತಿಳಿಸಿದ್ದಾರೆ.