Tag: Beetroot

  • ಫಟಾಫಟ್ ಅಂತ ಮಾಡಿ ಆರೋಗ್ಯಕರ ಬೀಟ್ರೂಟ್ ರಾಯಿತಾ

    ಫಟಾಫಟ್ ಅಂತ ಮಾಡಿ ಆರೋಗ್ಯಕರ ಬೀಟ್ರೂಟ್ ರಾಯಿತಾ

    ರೋಗ್ಯಕರ ತರಕಾರಿಗಳ ಪಟ್ಟಿಯಲ್ಲಿ ಬೀಟ್ರೂಟ್ ಅಗ್ರ ಸ್ಥಾನದಲ್ಲಿ ಬರುತ್ತದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಬೀಟ್ರೂಟ್ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಕೂಡ. ನಾವಿಂದು ಹೇಳಿಕೊಡುತ್ತಿರುವ ರೆಸಿಪಿ ಬೀಟ್ರೂಟ್ ರಾಯಿತಾ (Beetroot Raita) ಡಯಟ್ ಮಾಡುವಂತಹವರಿಗೆ ಒಂದು ಪರ್ಫೆಕ್ಟ್ ಆಯ್ಕೆಯಾಗಿದೆ. ಫಟಾಫಟ್ ಅಂತ ಮಾಡಬಹುದಾದ ಆರೋಗ್ಯಕರ ಬೀಟ್ರೂಟ್ ರಾಯಿತಾ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ತುರಿದ ಬೀಟ್ರೂಟ್ – ಅರ್ಧ
    ಮೊಸರು – 2 ಕಪ್
    ಕಪ್ಪು ಉಪ್ಪು – ಅರ್ಧ ಟೀಸ್ಪೂನ್
    ಚಾಟ್ ಮಸಾಲಾ – 1 ಟೀಸ್ಪೂನ್
    ಹಾಲು – ಅರ್ಧ ಕಪ್
    ಹುರಿದ ಜೀರಿಗೆ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಹುಳಿ, ಸಿಹಿ ಖಾರ ರುಚಿಯ ಅನನಾಸು ರಸಂ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ದೊಡ್ಡ ಬೌಲ್‌ನಲ್ಲಿ ಮೊಸರು ಮತ್ತು ಹಾಲು ಹಾಕಿ ಮೃದುವಾದ ಸ್ಥಿರತೆ ಬರುವಂತೆ ಚೆನ್ನಾಗಿ ಮಿಕ್ಸ್‌ ಮಾಡಿ.
    * ಅದಕ್ಕೆ ತುರಿದ ಬೀಟ್ರೂಟ್, ಕೊತ್ತಂಬರಿ ಸೊಪ್ಪು, ಉಪ್ಪು, ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ.
    * ಇದೀಗ ಬೀಟ್ರೂಟ್ ರಾಯಿತಾ ತಯಾರಾಗಿದ್ದು, ಅನ್ನದೊಂದಿಗೆ ಸವಿಯಿರಿ.
    * ಡಯಟ್‌ನಲ್ಲಿರುವವರು ಇದನ್ನು ಹಾಗೆಯೂ ಸೆವಿಯಬಹುದು. ಇದನ್ನೂ ಓದಿ: ಸಖತ್ ಟೇಸ್ಟಿ ಕರಿಬೇವು ಸೊಪ್ಪಿನ ಚಟ್ನಿ ರೆಸಿಪಿ

  • ದಿಢೀರ್ ಅಂತ ಮಾಡ್ಬೋದು ಆರೋಗ್ಯಕರ ಬೀಟ್ರೂಟ್ ದೋಸಾ

    ದಿಢೀರ್ ಅಂತ ಮಾಡ್ಬೋದು ಆರೋಗ್ಯಕರ ಬೀಟ್ರೂಟ್ ದೋಸಾ

    ರೋಗ್ಯಕರ ಉಪಹಾರದ ರೆಸಿಪಿ ಹುಡುಕುತ್ತಿರುವವರಿಗೆ ಇಲ್ಲಿದೆ ದಿಢೀರ್ ಅಂತ ಮಾಡಬಹುದಾದ ಬೀಟ್ರೂಟ್ ದೋಸಾ. ಬೆಳಗ್ಗಿನ ತಿಂಡಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡ ಬೀಟ್ರೂಟ್ ದೋಸಾ ಅಷ್ಟೇ ರುಚಿಕರವೂ ಆಗಿದೆ. ಗೃಹಿಣಿಯರಿಗೆ ಅರ್ಜೆಂಟ್ ಆಗಿ ಹಾಗೂ ಸ್ಪೆಷಲ್ ಆಗಿ ಮಾಡಬೇಕಾದ ಉಪಹಾರಗಳ ಪಟ್ಟಿಯಲ್ಲಿ ಇದನ್ನೂ ಸೇರಿಸಬಹುದು.

    ಬೇಕಾಗುವ ಪದಾರ್ಥಗಳು:
    * ಹೆಚ್ಚಿದ ಬೀಟ್ರೂಟ್ – ಅರ್ಧ ಕಪ್
    * ಅಕ್ಕಿ ಹಿಟ್ಟು – 1 ಕಪ್
    * ರವೆ – ಅರ್ಧ ಕಪ್
    * ಉಪ್ಪು – ರುಚಿಗೆ ತಕ್ಕಷ್ಟು
    * ನೀರು – 3 ಕಪ್
    * ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
    * ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
    * ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    * ಕತ್ತರಿಸಿದ ಕರಿಬೇವಿನ ಎಳೆಗಳು – ಸ್ವಲ್ಪ
    * ಜೀರಿಗೆ – 1 ಟೀಸ್ಪೂನ್
    * ನೀರು – ಹಿಟ್ಟಿಗೆ
    * ಎಣ್ಣೆ – ಹುರಿಯಲು

    ಮಾಡುವ ವಿಧಾನ:
    * ಮೊದಲಿಗೆ ಮಿಕ್ಸರ್ ಜಾರ್‌ನಲ್ಲಿ ಬೀಟ್ರೂಟ್ ಮತ್ತು ಅರ್ಧ ಕಪ್ ನೀರನ್ನು ತೆಗೆದುಕೊಳ್ಳಿ. ನಯವಾಗಿ ರುಬ್ಬಿ.
    * ಬೀಟ್ರೂಟ್ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಅಕ್ಕಿ ಹಿಟ್ಟು, ರವೆ, ಉಪ್ಪು, 3 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕೆಲವು ಕರಿಬೇವಿನ ಎಲೆಗಳು ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * 10 ನಿಮಿಷ ವಿಶ್ರಾಂತಿ ನೀಡಿ, ಬಳಿಕ ಅಗತ್ಯವಿದ್ದರೆ ನೀರನ್ನು ಸೇರಿಸಿ, ಹಿಟ್ಟನ್ನು ಸರಿಹೊಂದಿಸಬಹುದು.
    * ಪ್ಯಾನ್ ಅನ್ನು ಬಿಸಿಗಿಟ್ಟು, ಕಾದ ಬಳಿಕ ಹಿಟ್ಟನ್ನು ಹರಡಿ, 1 ಟೀಸ್ಪೂನ್ ಎಣ್ಣೆ ಹಾಕಿ, 2 ನಿಮಿಷ ಬಿಡಿ.
    * ಗರಿಗರಿಯಾದ ಬೀಟ್ರೂಟ್ ದೋಸೆಯನ್ನು ಪ್ಲೇಟ್‌ಗೆ ಹಾಕಿ, ನಿಮಗಿಷ್ಟದ ಚಟ್ನಿಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ನಟಿಯ ಬೀಟ್‍ರೂಟ್ ಮೈಮಾಟ ನೋಡಿ ಕೆಂಪಾದವು ನೆಟ್ಟಿಗರ ಕಣ್ಣು

    ನಟಿಯ ಬೀಟ್‍ರೂಟ್ ಮೈಮಾಟ ನೋಡಿ ಕೆಂಪಾದವು ನೆಟ್ಟಿಗರ ಕಣ್ಣು

    ನವದೆಹಲಿ: ಬಾಲಿವುಟ್ ನಟಿ, ಡ್ಯಾನ್ಸರ್ ಎಲಿ ಅವ್ರಾಮ್ ಮುಖ, ಕೈ-ಕಾಲು ಸೇರಿ ಈಡೀ ದೇಹಕ್ಕೆ ಬೀಟ್‍ರೂಟ್ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    29 ವರ್ಷದ ನಟಿ ಎಲಿ ಅವ್ರಾಮ್‍ಗೆ ಚರ್ಮದ ಚಿಕಿತ್ಸೆಗಾಗಿ ಮೈತುಂಬ ಬೀಟ್‍ರೂಟ್ ಜ್ಯೂಸ್ ಅನ್ನು ಹಚ್ಚಿಕೊಳ್ಳಲು ಅವರ ಮನೆಯ ಸಹಾಯಕಿ ಸಲಹೆ ನೀಡಿದ್ದಳು. ಇದರಿಂದಾಗಿ ಮೈತುಂಬ ಬೀಟ್‍ರೂಟ್ ಜ್ಯೂನ್ ಅನ್ನು ಹಚ್ಚಿಕೊಂಡ ನಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಬಿಕಿನಿಯಲ್ಲಿರುವ ಫೋಟೋಗಳನ್ನು ತಮ್ಮನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಎಲಿ ಅವ್ರಾಮ್, ‘ಇದು ಬೀಟ್‍ರೂಟ್ ಅಂಗಡಿ’ ಎಂದು ಶೀರ್ಷಿಕೆ ಹಾಕಿದ್ದಾರೆ. ಜೊತೆಗೆ “ಬೀಟ್‍ರೂಟ್‍ನ ಪ್ರೀತಿಗಾಗಿ. ಇದು ಮನೆಯಲ್ಲಿ ನನ್ನ ಸಹಾಯಕಿ ಉಷಾ ಕಲ್ಪನೆ. ಈ ಅಲಂಕಾರ ನೋಡಿ ಅವಳು ನನ್ನನ್ನು ಅನ್ಯಲೋಕದವಳು ಎಂದು ಕರೆದಳು” ಎಂದು ಬರೆದುಕೊಂಡಿದ್ದಾರೆ.

    ಎಲಿ ಅವ್ರಾಮ್ ಫೋಟೋಗಳಿಗೆ 99 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಕೆಲ ನೆಟ್ಟಿಗರು ತಮ್ಮದೇ ರೀತಿಯಲ್ಲಿ  ಕಮೆಂಟ್ ಮಾಡಿದ್ದಾರೆ.

    ಡ್ಯಾನ್ಸಿಂಗ್ ಕೌಶಲ್ಯದಲ್ಲಿ ಸಖತ್ ಹೆಸರು ಮಾಡಿರುವ ಎಲಿ ಅವ್ರಾಮ್ ಅನೇಕ ಸಿನಿಮಾ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಸಲ್ಮಾನ್ ಖಾನ್ ನಿರೂಪಿಸಿದ ರಿಯಾಲಿಟಿ ಟಿವಿ ಶೋ ಬಿಗ್‍ಬಾಸ್‍ನ ಏಳನೇ ಆವೃತ್ತಿಯಲ್ಲಿ ಎಲಿ ಅವ್ರಾಮ್ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಝಲಕ್ ದಿಕ್ಲಾ ಜಾ ಸೀಸನ್ 7ರ ಸ್ಪರ್ಧಿಯೂ ಆಗಿದ್ದಾರೆ. ಕಳೆದ ವರ್ಷ, ಅವರು ಟೈಪ್ ರೈಟರ್ ಮತ್ತು ಇನ್‍ಸೈಡ್ ಎಡ್ಜ್-2 ನಂತಹ ವೆಬ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

    https://www.instagram.com/p/CAz1kmMggFm/?utm_source=ig_embed