Tag: beer bottle

  • ಕೋಲಾರ| ಕುಡಿಯಲು ಹಣ ನೀಡದ ಚಿಕ್ಕಮ್ಮ – ಬಿಯರ್ ಬಾಟಲಿಯಿಂದ ತಿವಿದು ಕೊಲೆ ಯತ್ನ

    ಕೋಲಾರ: ಕುಡಿಯಲು (Drinks) ಹಣ ನೀಡದ ಹಿನ್ನೆಲೆ ಯುವಕ ತನ್ನ ಚಿಕ್ಕಮ್ಮನಿಗೆ (Aunt) ಬಿಯರ್ ಬಾಟಲಿಯಿಂದ ತಿವಿದು ಹತ್ಯೆ ಮಾಡಲು ಯತ್ನಿಸಿದ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ದಾಸೇಗೌಡನೂರು ಬಳಿ ನಡೆದಿದೆ.

    ಗರುಡ ಕೆಂಪನಹಳ್ಳಿ ಗ್ರಾಮದ ಅನಸೂಯ (35) ಹಲ್ಲೆಗೊಳಗಾದ ಮಹಿಳೆ. ಇದೆ ಗ್ರಾಮದ ಆನಂದ್ (26) ಕೊಲೆಗೆ ಯತ್ನಿಸಿದ ಯುವಕ. ಕೆಲಸಕ್ಕೆ ತೆರಳಿದ್ದ ವೇಳೆ ಕುಡಿತಕ್ಕೆ ಹಣ ನೀಡುವಂತೆ ಯುವಕ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಾಗ ಬಿಯರ್ ಬಾಟಲಿಯಿಂದ ಚುಚ್ವಿ ಕೊಲೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ಮೈಸೂರಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ಖಾತೆ ಮಾಡಿಸಲು ಲಂಚ ಕೇಳ್ತಾರೆ – ಯತೀಂದ್ರ ಆರೋಪ

    ಗಾಯಾಳು ಮಹಿಳೆ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಆನಂದನನ್ನು ಕಾಮಸಮುದ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಅವರೇ ತುಘಲಕ್ ದರ್ಬಾರಿಗೆ ಇತಿಮಿತಿ ಇರಲಿ: ವಿಜಯೇಂದ್ರ

  • ಶಾಲೆ ಮುಂದೆ ಬಿಯರ್ ಬಾಟ್ಲಿ ಎಸೆದಿದ್ದನ್ನು ಪ್ರಶ್ನಿಸಿದಕ್ಕೆ ಯುವಕನ ಕೊಲೆ

    ಶಾಲೆ ಮುಂದೆ ಬಿಯರ್ ಬಾಟ್ಲಿ ಎಸೆದಿದ್ದನ್ನು ಪ್ರಶ್ನಿಸಿದಕ್ಕೆ ಯುವಕನ ಕೊಲೆ

    ಮಂಗಳೂರು: ಶಾಲೆಯ (School) ಮುಂದೆ ಬಿಯರ್ ಬಾಟಲಿಯನ್ನು (Beer Bottle) ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ಉಳ್ಳಾಲದ (Ullala) ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ನಡೆದಿದೆ.

    ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿಯ ನಿವಾಸಿ ವರುಣ್ ಗಟ್ಟಿ (28) ಕೊಲೆಯಾದ ಯುವಕ. ಬುಧವಾರ ತಡರಾತ್ರಿ ದುಷ್ಕರ್ಮಿಗಳಾದ ಸೂರಜ್ ಮತ್ತು ರವಿರಾಜ್ ಶಾಲೆ ಎದುರು ಇದ್ದ ಕಟ್ಟೆಯೊಂದರಲ್ಲಿ ಕುಳಿತು ಬಿಯರ್ ಕುಡಿದಿದ್ದಾರೆ. ನಂತರ ಬಾಟಲಿಯನ್ನು ರಸ್ತೆಗೆ ಎಸೆದಿದ್ದಾರೆ. ಇದನ್ನು ಕಂಡ ವರುಣ್ ಹಾಗೂ ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

    ಇದರಿಂದ ರೊಚ್ಚಿಗೆದ್ದ ಸೂರಜ್ ಹಾಗೂ ರವಿರಾಜ್ ವರುಣ್ ಹಾಗೂ ಅಕ್ಷಯ್ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಜಗಳ ಅತಿರೇಕಕ್ಕೆ ಹೋಗಿ ಆರೋಪಿಗಳು ಹರಿತವಾದ ಆಯುಧದಿಂದ ವರುಣ್ ಬೆನ್ನಿಗೆ ಇರಿದಿದ್ದಾರೆ. ಇದನ್ನೂ ಓದಿ: ಬಿಎಂಟಿಸಿಗೆ ಗೃಹಿಣಿ ಬಲಿ – ಬಸ್ ಚಾಲಕ, ನಿರ್ವಾಹಕ ಎಸ್ಕೇಪ್

    ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವರುಣ್ ಅದೇ ಸ್ಥಿತಿಯಲ್ಲಿ ತನ್ನ ಮನೆ ಕಡೆ ನಡೆದುಕೊಂಡೇ ಹೋಗಿದ್ದಾನೆ. ಆತ ನಡೆದ ದಾರಿಯುದ್ದಕ್ಕೂ ರಕ್ತ ಹರಿದಿದೆ. ತಕ್ಷಣ ವರುಣ್ ಕುಟುಂಬಸ್ಥರು ಆತನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

    ಅದೇ ಸಾರಸ್ವತ ಕಾಲೋನಿ ನಿವಾಸಿಗಳಾಗಿರುವ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ. ಮೃತ ವರುಣ್ ಮಂಗಳೂರು ಮೂಡಾದ ಕಮಿಷನರ್ ವಾಹನ ಚಾಲಕನಾಗಿದ್ದ. ಇದೀಗ ವರುಣ್ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ ಪೇದೆ ಅಯ್ಯಪ್ಪ ಮಾಲೆ ಧರಿಸಿ ಪತ್ತೆ

  • ಬಿಯರ್ ಬಾಟ್ಲಿಯಿಂದ ಹಲ್ಲೆ- ಉಬರ್ ಚಾಲಕಿಯ ಕುತ್ತಿಗೆಗೆ 10 ಸ್ಟಿಚ್!

    ಬಿಯರ್ ಬಾಟ್ಲಿಯಿಂದ ಹಲ್ಲೆ- ಉಬರ್ ಚಾಲಕಿಯ ಕುತ್ತಿಗೆಗೆ 10 ಸ್ಟಿಚ್!

    ನವದೆಹಲಿ: ಇಬ್ಬರು ದರೋಡೆಕೋರರು ಉಬರ್ ಚಾಲಕಿ (Uber Driver) ಯ ಕುತ್ತಿಗೆಗೆ ಬಿಯರ್ ಬಾಟ್ಲಿಯಿಂದ ಹಲ್ಲೆಗೈದ ಘಟನೆ ನವದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಪ್ರಿಯಾಂಕಾ ದೇವಿ (30) ಹಲ್ಲೆಗೊಳಗಾದ ಉಬರ್ ಡ್ರೈವರ್. ಜನವರಿ 9ರಂದು ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದಲ್ಲಿ ಈಕೆಯ ಮೇಲೆ ದಾಳಿಯಾಗಿದೆ.

    ಘಟನೆ ನಡೆದ ತಕ್ಷಣವೇ ನನ್ನ ವಾಹನದಲ್ಲಿರುವ ಪ್ಯಾನಿಕ್ ಬಟನ್ ಒತ್ತಿದ್ದೇನೆ. ಆದರೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಪ್ರಿಯಾಂಕಾ (Priyanka Devi) ಬೇಸರ ವ್ಯಕ್ತಪಡಿಸಿದ್ದಾರೆ.

    ಸೋಮವಾರ ನಸುಕಿನ ಜಾವ 2.45ರ ಸುಮಾರಿಗೆ ಪ್ರಯಾಣಿಕರನ್ನು ಪಿಕಪ್ ಮಾಡಲೆಂದು ತೆರಳಿದೆ. ಸ್ಥಳಕ್ಕೆ ತೆರಳಿದಾಗ ಇಬ್ಬರು ನನ್ನ ಬಳಿ ಬಂದು ಮೊಬೈಲ್ ಫೋನ್, ಹಣ ಹಾಗೂ ಹಣ ಕೊಡುವಂತೆ ಪೀಡಿಸಿದ್ದಾರೆ. ಆದರೆ ಕೊಡಲು ನಿರಾಕರಿಸಿದಾಗ ನನ್ನ ಸ್ವಿಫ್ಟ್ ಡಿಸೈರ್ ಕಾರಿನ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ ಓರ್ವ ಕೀ ನನ್ನ ಕೈಯಿಂದ ಎಳೆದುಕೊಂಡರೆ ಮತ್ತೊಬ್ಬ ಬಿಯರ್ ಬಾಟ್ಲಿಯಿಂದ ನನ್ನ ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ. ನನ್ನ ಕುತ್ತಿಗೆಯಿಂದ ರಕ್ತ ಸುರಿಯಲು ಆರಂಭಿಸಿತ್ತು. ಈ ವೇಳೆ ನಾನು ಜೋರಾಗಿ ಕಿರುಚಿಕೊಂಡಿದ್ದರಿಂದ ಜನ ಸ್ಥಳಕ್ಕಾಗಮಿಸಿದರು. ಕೂಡಲೇ ಆರೋಪಿಗಳು ಪರಾರಿಯಾದರು ಎಂದು ಪ್ರಿಯಾಂಕ ಅಳಲು ತೋಡಿಕೊಂಡಿದ್ದಾರೆ.

    ಬಿಯರ್ ಬಾಟ್ಲಿಯಿಂದ ಹಲ್ಲೆಗೈದ ಪರಿಣಾಮ ನನ್ನ ಕುತ್ತಿಗೆಗೆ 10 ಸ್ಟಿಚ್ ಹಾಕಿದೆ. ಆರೋಪಿಗಳು ನನ್ನಲ್ಲಿದ್ದ ಸುಮಾರು 2 ಸಾವಿರ ರೂ.ಯೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಲಿಂಡರ್‌ ಸ್ಫೋಟಿಸಿ 4 ಮಕ್ಕಳು ಸೇರಿ ಒಂದೇ ಕುಟುಂಬದ 6 ಮಂದಿ ಸಾವು

    ola_ube

    ಇತ್ತ ಪೊಲೀಸರಿಗೂ ವಿಷಯ ತಿಳಿಸಲಾಯಿತು. ಆದರೆ ಪೊಲೀಸರು ಸ್ಥಳಕ್ಕೆ ಬರಲು 30 ನಿಮಿಷಗಳನ್ನು ತೆಗದುಕೊಂಡರು. ಅವರು ಸ್ಥಳಕ್ಕೆ ಬಂದ ಬಳಿಕ ಅಂಬುಲೆನ್ಸ್‍ಗೆ ಕರೆ ಮಾಡಿದರು. ಅದಾಗಲೇ ನನ್ನ ಬಳಿಯಿದ್ದ ಬಟ್ಟೆಯಿಂದ ರಕ್ತ ಸುರಿಯದಂತೆ ನನ್ನ ಕುತ್ತಿಗೆಯನ್ನು ಕಟ್ಟಿದ್ದೆ. ನಾನು ಮೂರ್ಛೆ ಹೋಗಲಿದ್ದೆ ಆದರೆ ನಾನು ಜಾಗೃತನಾಗಿರಬೇಕಾಗಿತ್ತು. ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ಎಂದು ವಿವರಿಸಿದ್ದಾರೆ.

    uber cab

    ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸವಾಗಿರುವ ದೇವಿ ಎಂಟು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಅವರು ಕ್ಯಾಬ್‍ಗಳನ್ನು ಓಡಿಸಲು ಪ್ರಾರಂಭಿಸುವ ಮೊದಲು, ಮನೆಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಮಹಿಳಾ ಕ್ಯಾಬ್ ಚಾಲಕರು ಎದುರಿಸುತ್ತಿರುವ ದೈನಂದಿನ ಸವಾಲುಗಳು ಮತ್ತು ದೈನಂದಿನ ಲೈಂಗಿಕತೆಯ ಬಗ್ಗೆ ಅವರು ಹೇಳಿದರು, ” ನಾನು ಮಹಿಳಾ ಚಾಲಕಿಯಾಗಿದ್ದರಿಂದ ಕೆಲವೊಮ್ಮೆ ಜನರು ಕ್ಯಾಬ್ ಬುಕ್ಕಿಂಗ್ ಅನ್ನು ರದ್ದುಗೊಳಿಸುತ್ತಾರೆ. ಇತರರು ನಾನು ನಿಧಾನವಾಗಿ ಚಾಲನೆ ಮಾಡುತ್ತಿದ್ದೇನೆ ಎಂದು ವಾದಿಸುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ದೇವಿ ಅವರ ಪ್ರಕಾರ, ಪ್ರಸ್ತುತ ದೆಹಲಿಯಲ್ಲಿ ಸುಮಾರು 60-70 ಮಹಿಳಾ ಉಬರ್ ಮತ್ತು ಓಲಾ ಚಾಲಕರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ಪೊಲೀಸ್‍ಗೆ ಬಿಯರ್ ಬಾಟಲ್‍ನಲ್ಲಿ ಹೊಡೆದ ಯುವಕ

    ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ಪೊಲೀಸ್‍ಗೆ ಬಿಯರ್ ಬಾಟಲ್‍ನಲ್ಲಿ ಹೊಡೆದ ಯುವಕ

    ಪುಣೆ: ಟ್ರಾಫಿಕ್ (Traffic) ಕ್ಲಿಯರ್ ಮಾಡುತ್ತಿದ್ದ ಟ್ರಾಫಿಕ್ ಪೊಲೀಸ್ (Traffic Police) ಒಬ್ಬರಿಗೆ ಯುವಕನೋರ್ವ ಬಿಯರ್ ಬಾಟಲ್‍ನಲ್ಲಿ (Beer Bottle) ಹೊಡೆದು ಹಲ್ಲೆ ನಡೆಸಿರುವ ಘಟನೆ ಪಿಂಪ್ರಿ-ಚಿಂಚ್‍ವಾಡ್‍ನ ಕಾಲೆವಾಡಿ ಪ್ರದೇಶದಲ್ಲಿ ನಡೆದಿದೆ.

    ಟ್ರಾಫಿಕ್ ಪೊಲೀಸ್ ರಮೇಶ್ ಜಾಧವ್ (52) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಟ್ರಾಫಿಕ್ ಕ್ಲಿಯರ್ ಆಗಿಲ್ಲ ಎಂದು ಸಿಟ್ಟಿಗೆದ್ದ ವೈಭವ್ ಗಾಯಕ್ವಾಡ್ (19) ಎಂಬಾತ ಬಿಯರ್ ಬಾಟಲ್‍ನಿಂದ ರಮೇಶ್ ಜಾಧವ್ ತಲೆಗೆ ಹಲ್ಲೆ ನಡೆಸಿದ್ದಾನೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ ಜಾಧವ್, ರಹತ್ನಿ ಚೌಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ಥಳದಲ್ಲಿ ಹೆಚ್ಚಿನ ವಾಹನ ದಟ್ಟಣೆ ಇತ್ತು. ಇದನ್ನು ನಿಯಂತ್ರಿಸಲು ಜಾಧವ್ ಚಿಂಚ್‍ವಾಡ್‍ನಿಂದ ಬರುವ ವಾಹನಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟು ತಪ್‍ಕೀರ್ ಚೌಕ್‍ನಿಂದ ಎಂಎಂ ಚೌಕ್‍ಗೆ ಬರುತ್ತಿದ್ದ ಸಂಚಾರವನ್ನು ನಿಲ್ಲಿಸಿದರು. ಈ ವೇಳೆ ಗಾಯಕ್ವಾಡ್ ಈ ಬಗ್ಗೆ ಪ್ರಶ್ನಿಸಿ ಬೈದಿದ್ದಾನೆ. ಬಳಿಕ ತನ್ನ ಬಳಿ ಇದ್ದ ಬಿಯರ್ ಬಾಟಲ್‍ನಿಂದ ಜಾಧವ್ ತಲೆಗೆ ಹೊಡೆದಿದ್ದಾನೆ.

    ಬಳಿಕ ರಕ್ತಸ್ರಾವದಿಂದ ಕೆಳಕ್ಕೆ ಬಿದ್ದ ಜಾಧವ್ ಬಳಿ ಯಾರು ಕೂಡ ಬರಬಾರದು ಎಂದು ಸ್ಥಳದಲ್ಲಿದ್ದವರಿಗೆ ಗಾಯಕ್ವಾಡ್ ಬೆದರಿಕೆ ಹಾಕಿದ್ದು ಕೊನೆಗೆ ಸ್ಥಳಕ್ಕೆ ಬಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಡಲೇ ಜಾಧವ್‍ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾರ್‌ನಲ್ಲಿ ಝಳಪಿಸಿದ ಲಾಂಗ್-ಮಚ್ಚು: ಕುಡಿಯಲು ಬಂದವರಿಂದ ಏಕಾಏಕಿ ಅಟ್ಯಾಕ್

    ಬಾರ್‌ನಲ್ಲಿ ಝಳಪಿಸಿದ ಲಾಂಗ್-ಮಚ್ಚು: ಕುಡಿಯಲು ಬಂದವರಿಂದ ಏಕಾಏಕಿ ಅಟ್ಯಾಕ್

    ಬೆಂಗಳೂರು: ಬಾರ್ (Bar) ಗೆ ನುಗ್ಗಿದ ಗ್ಯಾಂಗ್ ಮತ್ತು ಕುಡಿಯುತ್ತಾ ಕುಳಿತಿದ್ದ ಗ್ಯಾಂಗ್ ನಡುವೆ ಲಾಂಗ್ ಮತ್ತು ಬಿಯರ್ (Beer) ಬಾಟ್ಲಿಯಿಂದ ಮಾರಾಮಾರಿ ನಡೆದಿರೊ ಘಟನೆ ಬೆಂಗಳೂರಿನ ಲಗ್ಗೆರೆಯ ಸನ್ ರೈಸ್ ಬಾರ್ ನಲ್ಲಿ ನಡೆದಿದೆ.

    ಮೂರು ದಿನಗಳ ಹಿಂದೆ ಲಗ್ಗೆರೆಯ ಸನ್ ರೈಸ್ ಬಾರ್ ಗೆ ನುಗ್ಗಿದ ಇಬ್ಬರು ಪುಂಡರು ಚೀಲದಿಂದ ಲಾಂಗ್ ಹೊರತೆಗೆದಿದ್ದಾರೆ. ಕುಡಿಯುತ್ತಾ ಕುಳಿತಿದ್ದ ರೌಡಿಶೀಟರ್ ಐಕಾನ್ ರಾಜು ಮತ್ತು ಆತನ ಸ್ನೇಹಿತನ ಮೇಲೆ ಲಾಂಗ್ ನಿಂದ ಅಟ್ಯಾಕ್ ಮಾಡಿದ್ದಾರೆ. ಅಟ್ಯಾಕ್ ಗೆ ಮೊಂಡು ಧೈರ್ಯ ತೋರಿರೋ ಐಕಾನ್ ರಾಜು, ಹಾಗು ಸ್ನೇಹಿತ ಬಿಯರ್ ಬಾಟ್ಲಿಯಿಂದ ಹೊಡೆದು ಎದುರಾಳಿ ಗ್ಯಾಂಗ್ ಹಿಮ್ಮೆಟ್ಟಿಸಿದ್ದಾರೆ.

    ಯಾವ ರೀತಿಯ ಅಟ್ಯಾಕ್ ನಡೆದಿದೆ ಅಂದ್ರೆ ಮೈ ಝುಮ್ಮೆನ್ನುತ್ತೆ. ಆ ಕಡೆಯಿಂದ ಮಚ್ಚಿನ ದಾಳಿಯಾದ್ರೆ ಇವರಿಗೆ ಬಿಯರ್ ಬಾಟ್ಲಿಗಳೇ ಆಯುಧ. ಕೊನೆಗೆ ಹೊಡೆಯಲು ಬಂದವರ ಲಾಂಗ್ ಕಸಿದು ಓಡಿಸಿದ್ದಾರೆ. ಅಸಲಿಗೆ ಈ ಅಟ್ಯಾಕ್ ಗೆ ಕ್ರಿಕೆಟ್ ಬೆಟ್ಟಿಂಗ್ (Cricket Betting) ಕಾರಣ ಎನ್ನಲಾಗ್ತಿದೆ. ಇದನ್ನೂ ಓದಿ: ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ಬೆಟ್ಟಿಂಗ್ ಡೀಲ್ ವಿಚಾರವಾಗಿ ಅರುಣ್ ಎನ್ನುವ ವ್ಯಕ್ತಿಯನ್ನ ಹುಡುಕಿಕೊಂಡು ಬಂದಿದ್ದ ಗ್ಯಾಂಗ್ ಗೆ ಅರುಣ್ ಸಹೋದರ ಐಕಾನ್ ರಾಜು ಕಂಡಿದ್ದಾನೆ. ಆಗ ಅಟ್ಯಾಕ್ ನಡೆಸಿದ್ದಾರೆ. ಹೀಗೆಲ್ಲಾ ಪುಡಿ ರೌಡಿಗಳು ಮಚ್ಚು ಹಿಡ್ಕೊಂಡು ಗಲಾಟೆ ಮಾಡ್ತಿದ್ರೆ, ನಮ್ಮ ಪೊಲೀಸ್ರು ನಿದ್ದೆ ಮಾಡ್ತಿದ್ದಂತೆ ಕಾಣ್ತಿದೆ.

    Live Tv
    [brid partner=56869869 player=32851 video=960834 autoplay=true]

  • 250 ರೂ. ಹಣ ಕೊಡದಿದ್ದಕ್ಕೆ ಬಿಯರ್ ಬಾಟಲ್‍ನಿಂದ ತಲೆಗೆ ಹೊಡೆದು ಕೊಲೆ

    250 ರೂ. ಹಣ ಕೊಡದಿದ್ದಕ್ಕೆ ಬಿಯರ್ ಬಾಟಲ್‍ನಿಂದ ತಲೆಗೆ ಹೊಡೆದು ಕೊಲೆ

    ಬೆಳಗಾವಿ: ವೈಭವ ನಗರದ ಸತ್ಯಸಾಯಿ ಕಾಲೋನಿಯಲ್ಲಿ ಕೇವಲ 250 ರೂ.ಗಾಗಿ ವ್ಯಕ್ತಿಯನ್ನು ಬಿಯರ್ ಬಾಟಲ್ ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.

    ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರಾಯಿ ತರಲು ಕೊಟ್ಟಿದ್ದ ಹಣದಲ್ಲಿ ಉಳಿದ ಚಿಲ್ಲರೆ ಹಣ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ. ವೈಭವ ನಗರದ ಸತ್ಯ ಸಾಯಿ ಕಾಲೋನಿ ನಿವಾಸಿ ಮಹಮ್ಮದ್ ದಿಲಾಪುಕಾರ ಶೇಖ್ (27) ಕೊಲೆಗೀಡಾಗಿದ ವ್ಯಕ್ತಿ. ಇದೇ ಕಾಲೋನಿಯ ಉಸ್ಮಾನ್ ಲಾಲ್‍ಸಾಬ್ ಶೇಖ್ ಕೊಲೆ ಮಾಡಿದ ಆರೋಪಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾವು ಹಿಂದೂ ಪರ-ವಿರೋಧವೂ ಅಲ್ಲ, ಮುಸಲ್ಮಾನ್, ಕ್ರಿಶ್ಚಿಯನ್ ಪರ-ವಿರೋಧವೂ ಅಲ್ಲ: ಸಿದ್ದರಾಮಯ್ಯ

    ಸತ್ಯಸಾಯಿ ಕಾಲೋನಿಯಲ್ಲಿ ಉಸ್ಮಾನ್, ಮಹ್ಮದ್‍ನಿಗೆ 500 ರೂ. ಹಣ ಕೊಟ್ಟು ಸಾರಾಯಿ ತೆಗದುಕೊಂಡು ಬರುವಂತೆ ಹೇಳಿದ್ದಾನೆ. ಆಗ ಮಹಮ್ಮದ್ 250 ರೂ. ಕೊಟ್ಟು ಸಾರಾಯಿ ತಂದಿದ್ದಾನೆ. ಉಳಿದ 250 ರೂ. ಚಿಲ್ಲರೆ ಹಣವನ್ನು ಉಸ್ಮಾನನಿಗೆ ಹಿಂದಿರುಗಿಸದಿದ್ದಾಗ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳವಾಗಿದೆ. ಬಿಯರ್ ಬಾಟಲಿಯಿಂದ ಮಹಮ್ಮದ್‍ನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: `ಕೆಜಿಎಫ್ 2′ ಸಕ್ಸಸ್ ಅಲೆಗೆ ಬೆದರಿದ ಬಾಲಿವುಡ್: ಚಿತ್ರರಂಗಕ್ಕೆ ಮತ್ತೆ ಶಕ್ತಿ ತುಂಬಲು ಶಾರುಖ್ ಖಾನ್ ಪ್ಲ್ಯಾನ್‌

  • ಸೌಂಡ್ ಕಡಿಮೆ ಮಾಡಲು ಹೇಳಿದ ಕಾನ್‍ಸ್ಟೇಬಲ್- ಬಿಯರ್ ಬಾಟ್ಲಿಯಲ್ಲಿ ಹೊಡೆದು ಎಸ್ಕೇಪ್

    ಸೌಂಡ್ ಕಡಿಮೆ ಮಾಡಲು ಹೇಳಿದ ಕಾನ್‍ಸ್ಟೇಬಲ್- ಬಿಯರ್ ಬಾಟ್ಲಿಯಲ್ಲಿ ಹೊಡೆದು ಎಸ್ಕೇಪ್

    ನವದೆಹಲಿ: ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿರುವ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ, ದೆಹಲಿ ಪೊಲೀಸ್ ಮೇಲೆ ಬಿಯರ್ ಬಾಟ್ಲಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ನಡೆದಿದ್ದೇನು?: ಉತ್ತರ ದೆಹಲಿಯ ಗುಲಾಬಿ ಬಾಗ್ ಪ್ರದೇಶದಲ್ಲಿ ಕಾರಿನಲ್ಲಿ ಮೂವರು ಜೋರಾಗಿ ಸೌಂಡ್ ಇಟ್ಟು ಹಾಡು ಕೇಳುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಯೊಬ್ಬರು ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದಾರೆ. ಕಾರಿನಲ್ಲಿದ್ದವರು ಗಸ್ತು ತೀರುಗುತ್ತಿದ್ದ ಸಿಬ್ಬಂದಿಯನ್ನು ನಿಂದಿಸಲು ಪ್ರಾರಂಭಿಸಿದರು. ಪೊಲೀಸ್ ಕಾರಿನ ಸಂಖ್ಯೆಯನ್ನು ನಮೂದಿಸಿದರು. ತಮ್ಮ ಕಾರಿನ ನಂಬರ್ ನೋಟ್ ಆಗಿರುವುದನ್ನು ಅರಿತುಕೊಂಡ ಆರೋಪಿಗಳು ಮತ್ತೊಮ್ಮೆ ಯು-ಟರ್ನ್ ತೆಗೆದುಕೊಂಡು ಕಾರನ್ನು ಗಸ್ತು ತಿರುಗುತ್ತಿದ್ದ ಸಿಬ್ಬಂದಿಯತ್ತ ವೇಗವಾಗಿ ಚಲಾಯಿಸಿ ಕಾನ್‍ಸ್ಟೇಬಲ್‌ಗೆ ಡಿಕ್ಕಿ ಹೊಡೆಯಲು ಯತ್ನಿಸಿದರು ಆದರೆ ಎಚ್ಚೆತ್ತ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಾರಿನಲ್ಲಿದ್ದ ಮೂವರು ಕೈಯಲ್ಲಿ ಬಿಯರ್ ಬಾಟಲಿಗಳನ್ನು ಹಿಡಿದಿದ್ದರು. ಕಾರಿನಲ್ಲಿದ್ದವರಲ್ಲಿ ಒಬ್ಬನು ಬಿಯರ್ ಬಾಟಲಿಯಿಂದ ಕಾನ್‍ಸ್ಟೆಬಲ್ ಪ್ರದೀಪ್ ಅವರ ತಲೆಗೆ ಹೊಡೆದಿದ್ದಾನೆ. ತಕ್ಷಣವೇ ಮೂವರು ಎಸ್ಕೇಪ್ ಆಗಿದ್ದಾರೆ. ನಂತರ ಕಾನ್‍ಸ್ಟೇಬಲ್ ಪ್ರದೀಪ್ ಅವರನ್ನು ಚಿಕಿತ್ಸೆಗಾಗಿ ಗುಲಾಬಿ ಬಾಗ್‍ನ ಎನ್‍ಕೆಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ಪ್ರತ್ಯಕ್ಷದರ್ಶಿಯೊಬ್ಬರು ಕಾರು ಚಾಲಕನನ್ನು ಅಶೋಕ್ ಅಲಿಯಾಸ್ ಅಶು ಎಂದು ಗುರುತಿಸಿದ್ದಾರೆ. ಚಾಲಕನ ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿ ಯಶು ಚೌಹಾನ್ ಇಬ್ಬರೂ ದೆಹಲಿಯ ಸರಾಯ್ ರೋಹಿಲ್ಲಾದ ಪದಮ್ ನಗರದ ನಿವಾಸಿಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನ್‍ಸ್ಟೇಬಲ್ ಪ್ರದೀಪ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಘಟನೆಯ ನಂತರ ಅಶೋಕ್ (22), ಯಶ್ ಪ್ರತಾಪ್ ಸಿಂಗ್ (22) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾರ್ ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಕತ್ತುಸೀಳಿ ತೋಟದ ಬಳಿಯೇ ವ್ಯಕ್ತಿ ಕೊಲೆ- ಅಕ್ಕಪಕ್ಕ ಬಿದ್ದಿದ್ದವು ಬಿಯರ್ ಬಾಟ್ಲಿಗಳು

    ಕತ್ತುಸೀಳಿ ತೋಟದ ಬಳಿಯೇ ವ್ಯಕ್ತಿ ಕೊಲೆ- ಅಕ್ಕಪಕ್ಕ ಬಿದ್ದಿದ್ದವು ಬಿಯರ್ ಬಾಟ್ಲಿಗಳು

    ಹಾಸನ: ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಜಲೇಂದ್ರ (31) ಕೊಲೆಯಾದ ವ್ಯಕ್ತಿ. ಜೆಸಿಬಿ ಆಪರೇಟರ್ ಆಗಿದ್ದ ಜಲೇಂದ್ರ, ನಿನ್ನೆ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದವನು ವಾಪಸ್ ಬಂದಿರಲಿಲ್ಲ. ಇಂದು ಬೆಳಗ್ಗೆ ಜಲೇಂದ್ರ ಸಹೋದರ ಡೈರಿಗೆ ಹಾಲು ಹಾಕಿ ಜಮೀನಿನ ಬಳಿ ಹೋದಾಗ ಹೊಲದ ಬಳಿ ಶವ ಪತ್ತೆಯಾಗಿದೆ.

    ಶವದ ಪಕ್ಕದಲ್ಲಿ ಬಿದ್ದಿರುವ ಬಿಯರ್ ಬಾಟಲ್‍ಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾರೋ ಮೊದಲು ಇದೇ ಜಾಗದಲ್ಲಿ ಎಣ್ಣೆ ಪಾರ್ಟಿ ಮಾಡಿರಬಹುದು. ಆ ನಂತರ ಜಲೇಂದ್ರನ ಕೊಲೆ ಮಾಡಿರಬಹುದು ಎಂದು ಅನುಮಾನ ಮೂಡುತ್ತಿದೆ.

    ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಕ್ಕಳನ್ನು ಕಾಡುತ್ತಿದೆ ವೈರಲ್ ಫೀವರ್: ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ

  • ರಾತ್ರಿ ವೇಳೆ ಹೆಂಡತಿ ಜೊತೆ ವಾಕ್ ಹೋದವ ಆಸ್ಪತ್ರೆಯಲ್ಲಿ ಶವವಾದ

    ರಾತ್ರಿ ವೇಳೆ ಹೆಂಡತಿ ಜೊತೆ ವಾಕ್ ಹೋದವ ಆಸ್ಪತ್ರೆಯಲ್ಲಿ ಶವವಾದ

    – ಬಿಯರ್ ಬಾಟಲ್, ಇಟ್ಟಿಗೆಯಿಂದು ಹೊಡೆದು ಕೊಂದ್ರು

    ಚಂಡೀಗಢ: ರಾತ್ರಿ ವೇಳೆ ಪತ್ನಿ ಹಾಗೂ ತಂದೆಯ ಜೊತೆ ಮನೆಯ ಹೊರಗೆ ವಾಕ್ ಹೋದವ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಶವವಾದ ಘಟನೆ ಪಂಜಾಬ್‍ನ ಪಾಟಿಯಾಲ ಜಿಲ್ಲೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ಯುವಕನನ್ನು ಬಿಹಾರ ಮೂಲದ ಮಿಥುನ್ ಪಾಟೀಲ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಪಟಿಯಾಲ ಜಿಲ್ಲೆಯ ಶಂಕರ್‍ಪುರ ಗ್ರಾಮದ ಜಗಮೋಹನ್ ಸಿಂಗ್ ಮತ್ತು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಭೂಪಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳು ಘಟನೆಯ ನಂತರ ಪರಾರಿಯಾಗಿದ್ದಾರೆ.

    ಘಟನೆ ನಡೆದಾಗ ಸ್ಥಳದಲ್ಲೇ ಇದ್ದ ಮಿಥುನ್ ತಂದೆ ಮಾತನಾಡಿ, ನಾನು, ನನ್ನ ಮಗ ಮತ್ತು ಆತನ ಪತ್ನಿ ಊಟದ ನಂತರ ಸುಮಾರು 12 ಗಂಟೆಗೆ, ಗುರುದ್ವಾರದ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದೇವೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು, ಈ ಸಮಯದಲ್ಲಿ ಹುಡುಗಿಯ ಜೊತೆ ಇಲ್ಲಿ ಏನೂ ಮಾಡುತ್ತಿದ್ದೀರಾ ಎಂದು ಪ್ರಶ್ನೇ ಮಾಡಿದರು. ಆಗ ಮಿಥುನ್ ಆಕೆ ನನ್ನ ಪತ್ನಿ ಎಂದು ಹೇಳಿದ. ಆಗ ವಾಗ್ವಾದ ನಡೆದು ಓರ್ವ ಮಿಥುನ್‍ಗೆ ಬಾಟಲಿಯಲ್ಲಿ ಹೊಡೆದ ನಂತರ ಇಬ್ಬರು ಸೇರಿ ಕಲ್ಲು ಇಟ್ಟಿಗೆಯಿಂದ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ, ಮಿಥುನ್ ತನ್ನ ತಂದೆ ಮತ್ತು ಪತ್ನಿಯ ಜೊತೆಗೆ ಪಾಟಿಯಾಲದ ಕಾರ್ಖಾನೆ ಪ್ರದೇಶದಲ್ಲಿ ವಾಸವಿದ್ದ ಎನ್ನಲಾಗಿದೆ. ಜೊತೆಗೆ ಆತನನ್ನು ಬಿಯರ್ ಬಾಟಲ್, ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಿಥುನ್ ಅನ್ನು ಸರ್ಕಾರಿ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

    ಈ ಸಂಬಂಧ ಗ್ರೇನ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಇನ್ಸ್ ಸ್ಪೆಕ್ಟರ್ ಗುರ್ನಮ್ ಸಿಂಗ್, ಹಲ್ಲೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ಅವರು ಘಟನೆಯ ನಂತರ ಪರಾರಿಯಾಗಿದ್ದು, ಅವರನ್ನು ಶೀಘ್ರದಲ್ಲೇ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಹಲ್ಲೆಗೈದು ದರೋಡೆ ಮಾಡ್ತಿದ್ದ ಬಿಯರ್ ಬಾಟಲ್ ಶೂರರು ಅರೆಸ್ಟ್

    ಹಲ್ಲೆಗೈದು ದರೋಡೆ ಮಾಡ್ತಿದ್ದ ಬಿಯರ್ ಬಾಟಲ್ ಶೂರರು ಅರೆಸ್ಟ್

    ಬೆಂಗಳೂರು: ತಡ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ವ್ಯಕ್ತಿಯ ಮೇಲೆ ಬಿಯರ್ ಬಾಟಲ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ ಬಾಟಲ್ ಶೂರರನ್ನ ವಿವೇಕ ನಗರ ಪೊಲೀಸರು ಬಂಧಿಸಿದ್ದಾರೆ.

    ಕಮಲ್, ಚಂದ್ರಬಾಬು ಮತ್ತು ಒಬ್ಬ ಬಾಲಪರಾಧಿ ಸೇರಿ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬ್ಲಾಕ್ ಪಲ್ಸರ್ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಮಾರ್ಚ್ 5 ರಂದು ವಿವೇಕ್ ನಗರ ಮುಖ್ಯ ರಸ್ತೆಯಲ್ಲಿ ಹೋಟೆಲ್ ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಹೋಗುತ್ತಿದ್ದ ಸುಶಾಂತ್ ಮೇಲೆ ಆರೋಪಿಗಳು ಕಂಠಪೂರ್ತಿ ಕುಡಿದು ಬಂದು ಏಕಾಏಕಿ ಅಟ್ಯಾಕ್ ಮಾಡಿದ್ದಾರೆ.

    ಸುಶಾಂತ್ ಮೇಲೆ ಹಲ್ಲೆ ಮಾಡಿ ಕೈಯಲ್ಲಿದ್ದ ಬಿಯರ್ ಬಾಟಲ್ ನಿಂದ ತಲೆಗೆ ಹೊಡೆದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಸುಶಾಂತ್ ಹೋಗುತ್ತಿದ್ದ ಸೈಕಲ್‍ನಿಂದ ಆತನ ಮೇಲೆಯೇ ಹಲ್ಲೆ ಮಾಡಿ ಅವನ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ನಗದನ್ನು ದೋಚಿಕೊಂಡು ಹೋಗಿರುತ್ತಾರೆ. ಘಟನೆ ಸಂಬಂಧ ಸುಶಾಂತ್ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಲ್ಲೆ ಮಾಡಿದ್ದ ಸ್ಥಳದಲ್ಲಿಯ ಸಿಸಿಟಿವಿ ವಿಡಿಯೋ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ತಡರಾತ್ರಿಯ ತನಕ ಕುಡಿದು ನಂತರ ಫೀಲ್ಡಿಗೆ ಇಳಿಯುತ್ತಿದ್ದರು. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಹೋಗುವರ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿದ್ದರು. ಸಿಕ್ಕ ಹಣದಲ್ಲಿ ಕುಡಿದು ತಿಂದು ಮೋಜು ಮಸ್ತಿ ಮಾಡುತ್ತಿದ್ದರು.